Inspiring Story : ಕಾಲುಗಳಲ್ಲಿ ಸ್ವಾಧೀನ ಇಲ್ಲದಿದ್ದರೂ ಸಾಧನೆಗೆ ಕೊರತೆಯಿಲ್ಲ: ಶೆರಿನ್‌ ಶಹಾನ್ ಸ್ಫೂರ್ತಿ ಕಥೆ Vistara News
Connect with us

ದೇಶ

Inspiring Story : ಕಾಲುಗಳಲ್ಲಿ ಸ್ವಾಧೀನ ಇಲ್ಲದಿದ್ದರೂ ಸಾಧನೆಗೆ ಕೊರತೆಯಿಲ್ಲ: ಶೆರಿನ್‌ ಶಹಾನ್ ಸ್ಫೂರ್ತಿ ಕಥೆ

ಕೇರಳದ ವಯನಾಡಿನ ಶಯಾನಾ ಕಾಲುಗಳಲ್ಲಿ ಸ್ವಾಧೀನ ಇಲ್ಲದಿದ್ದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿ (Inspiring Story) ತೋರಿಸಿದ್ದಾರೆ.

VISTARANEWS.COM


on

Koo

ತಿರುವನಂತಪುರಂ: ಎಷ್ಟೋ ಬಾರಿ ಜೀವನದಲ್ಲಿ ಎಲ್ಲವೂ ಇದ್ದರೂ ನಿರುತ್ಸಾಹ ಕಾಡುತ್ತಿರುತ್ತದೆಯಲ್ಲವೇ. ಎಲ್ಲ ಸರಿಯಾಗಿಯೇ ಇದ್ದರೂ ಏನನ್ನೂ ಮಾಡುವ ಹುರುಪಿಲ್ಲದೆ ಸುಮ್ಮನೆ ಕುಳಿತುಬಿಟ್ಟಿರುತ್ತೇವೆ. ಆದರೆ ಕೇರಳದ ಶೆರಿನ್‌ ಶಹಾನ್ ಹಾಗಲ್ಲ. ಬದುಕು ಕಟ್ಟಿಕೊಳ್ಳಬೇಕು ಎನ್ನುವ ಸಮಯದಲ್ಲಿ ಕಾಲುಗಳು ಸ್ವಾಧೀನವನ್ನೇ ಕಳೆದುಕೊಂಡರೂ ಲೆಕ್ಕಿಸದ ಆಕೆ ಇದೀಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕುಟುಂಬಕ್ಕೇ ಕೀರ್ತಿ (Inspiring Story) ತಂದುಕೊಟ್ಟಿದ್ದಾಳೆ.

ಕೇರಳದ ವಯನಾಡಿನ ಕಂಬಲಕ್ಕಾಡಿನ ಮುಸ್ಲಿಂ ಕುಟುಂಬವದು. ಶರಿನ್ ಮನೆಯ ನಾಲ್ಕನೆಯ ಹೆಣ್ಣು ಮಗಳು. ಆಕೆಯ ಇಬ್ಬರು ಅಕ್ಕಂದಿರು ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದರೆ, ಒಬ್ಬಳು ಮಾತ್ರ ಪದವಿ ಮುಗಿಸಿ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ತಂದೆ 2015ರಲ್ಲೇ ತೀರಿಕೊಂಡಿದ್ದರು. 2017ರಲ್ಲಿ ಪದವಿ ಮುಗಿಸಿ ತನ್ನ ಮನೆಯ ಟೆರೇಸ್‌ ಮೇಲಿದ್ದಾಗ ಅಲ್ಲಿಂದ ಬಿದ್ದು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು.

ಇದನ್ನೂ ಓದಿ: Viral Photo : ನಾಯಿಗಳ ಗ್ರೂಪ್‌ ಫೋಟೋ! ಇದು ಮತ್ತಾರಿಂದಲೂ ಸಾಧ್ಯವಾಗದ ಕೆಲಸ

ಶಯಾನಾ ಸರಿ ಸುಮಾರು ಒಂದೂವರೆ ವರ್ಷ ಬೆಡ್‌ರೆಸ್ಟ್‌ನಲ್ಲೇ ಕಳೆದಿದ್ದರು. ಆಗ ಅವರಿಗೆ ಜೀವನವೇ ಕಮರಿ ಹೋದಂತೆ ಭಾಸವಾಗಿತ್ತಂತೆ. ಆದರೆ ತನಗೆ ತಾನೇ ಆತ್ಮಸ್ಥೈರ್ಯ ತುಂಬಿಕೊಂಡ ಶಯಾನಾ ವೀಲ್‌ಚೇರ್‌ ಹತ್ತಿ ವಿದ್ಯಾಭ್ಯಾಸ ಆರಂಭಿಸಿದರು. ಯುಜಿಸಿ-ನೆಟ್‌ ಪರೀಕ್ಷೆ ಬರೆದು ಅದರಲ್ಲಿ ಪಾಸ್‌ ಆದ ಮೇಲೆ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾದರು.

ನಂತರ ಅವರು 2020ರಲ್ಲಿ ತಿರುವನಂತಪುರಂನಲ್ಲಿ ಐಎಎಸ್‌ ಅಕಾಡೆಮಿಯೊಂದನ್ನು ಸೇರಿಕೊಂಡರು. ಡಾ.ಜಾಬಿನ್‌ ಕೊಟ್ಟಾರಂ ಅವರ ಆ ಅಕಾಡೆಮಿಯಲ್ಲಿ ವಿಕಲಾಂಗರಿಗೆಂದೇ ಬಟರ್‌ಫ್ಲೈ ಹೆಸರಿನ ಹೊಸದೊಂದು ಕಾರ್ಯಕ್ರಮ ನಡೆಸಿ ಅವರನ್ನು ಐಎಎಸ್‌ ಪರೀಕ್ಷೆ ಸಿದ್ಧಗೊಳಿಸಲಾಯಿತು. ಆ ಕಾರ್ಯಕ್ರಮದಲ್ಲಿದ್ದ 25 ಜನರಲ್ಲಿ ಕೊನೆಯದಾಗಿ ಸೇರಿಕೊಂಡವರು ಶಯಾನಾ. ಆದರೆ ಅವರಲ್ಲಿ ಮೊದಲನೆಯದಾಗಿ ಯುಪಿಎಸ್‌ಸಿ ತೇರ್ಗಡೆಯಾದವರು ಅವರೇ.

ಜೀವನದಲ್ಲಿ ಕಷ್ಟಗಳು ಬಂದವು. ಆದರೆ ಅವೆಲ್ಲವನ್ನೂ ಮೀರಿ ಏನಾದರೂ ಸಾಧಿಸಬೇಕು ಎಂದು ಹಠ ಹಿಡಿದೆ. ನಮ್ಮ ಊರಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವರಿಗೆ ಎಷ್ಟರ ಮಟ್ಟಿಗೆ ಗೌರವ ಸಿಗುತ್ತದೆ ಎನ್ನುವುದನ್ನು ನೋಡಿದ್ದೆ. ಅದು ನನಗೂ ಬೇಕೆನ್ನುವ ಬಯಕೆಯಿಂದ ಪ್ರಯತ್ನಿಸಿ ಇದು ಸಾಧಿಸಿದ್ದೇನೆ ಎನ್ನುತ್ತಾರೆ ಶಯಾನ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ದೇಶ

Odisha Train Accident : ಅವಘಡದಲ್ಲಿ ಮೃತಪಟ್ಟವರನ್ನು ಗುರುತಿಸಲು ಭಾರತೀಯ ರೈಲ್ವೆ ಮನವಿ

ಒಡಿಶಾ ಸರ್ಕಾರದ ಬೆಂಬಲದೊಂದಿಗೆ, ಮೃತರ ಫೋಟೋಗಳು, ಆಸ್ಪತ್ರೆಗಳಲ್ಲಿ ದಾಖಲಾದವರು ಮತ್ತು ಅಪರಿಚಿತ ಶವಗಳ ವಿವರಗಳ ಲಿಂಕ್​ಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ

VISTARANEWS.COM


on

Indian Railways help desk
Koo

ನವ ದೆಹಲಿ: ಒಡಿಶಾದ ಬಹನಾಗದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟಿರುವ ತಮ್ಮ ಸಂಬಂಧಿಕರನ್ನು ಹುಡುಕುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ಒಡಿಶಾ ಸರ್ಕಾರದ ಸಹಯೋಗದೊಂದಿಗೆ ವ್ಯವಸ್ಥೆ ಕಲ್ಪಿಸಿದೆ. ಇದೇ ವೇಳೆ ರೈಲ್ವೆ ಅಧಿಕಾರಿಗಳು ಮೃತರ ಸಂಬಂಧಿಕರನ್ನು ಪತ್ತೆಹಚ್ಚಲು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆ 139 ಮತ್ತು ಭುವನೇಶ್ವರ ನಗರಪಾಲಿಕೆ ಸಹಾಯವಾಣಿ ಸಂಖ್ಯೆ -18003450061/1929ಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

ಒಡಿಶಾ ಸರ್ಕಾರದ ಬೆಂಬಲದೊಂದಿಗೆ, ಮೃತರ ಫೋಟೋಗಳು, ಆಸ್ಪತ್ರೆಗಳಿಗೆ ದಾಖಲಾದವರು ಮತ್ತು ಅಪರಿಚಿತ ಶವಗಳ ಕುರಿತ ಮಾಹಿತಿ ಲಭ್ಯವಾಗುವಂತೆ ಮಾಡಲಾಗಿದೆ. ಮೃತರ ಫೋಟೋಗಳು, ಆಸ್ಪತ್ರೆಗೆ ದಾಖಲಾದ ಪ್ರಯಾಣಿಕರ ಪಟ್ಟಿಗಳು ಮತ್ತು ಪೀಡಿತ ಪ್ರಯಾಣಿಕರ ಕುಟುಂಬಗಳು, ಸ್ನೇಹಿತರು ಮತ್ತು ಹಿತೈಷಿಗಳು ಹಾಗೂ ಅಪರಿಚಿತ ಶವಗಳ ಮಾಹಿತಿಯನ್ನು ಈ ಲಿಂಕ್​ನಲ್ಲಿ ನೀಡಲಾಗಿದೆ.

ರೈಲ್ವೆ ಸಹಾಯವಾಣಿ ಸಂಖ್ಯೆ 139ರ ಮೂಲಕ ಪ್ರಯಾಣಿಕರ ಕುಟುಂಬಗಳು ಮತ್ತು ಸಂಬಂಧಿಕರರನ್ನು ಸಂಪರ್ಕಿಸಬಹುದು. ಹಿರಿಯ ರೈಲ್ವೆ ಅಧಿಕಾರಿಗಳು ಸಹಾಯವಾಣಿಯನ್ನು ನಿರ್ವಹಿಸುತ್ತಿದ್ದಾರೆ.

ಭುವನೇಶ್ವರದ ಮುನ್ಸಿಪಲ್ ಕಮಿಷನರ್ ಕಚೇರಿಯ ಅಧಿಕಾರಿಗಳು ಮತ್ತು ವಾಹನಗಳ ಸಹಾಯದಿಂದ ಜನರನ್ನು ಅಗತ್ಯಕ್ಕೆ ತಕ್ಕಂತೆ ಆಸ್ಪತ್ರೆಗಳು ಅಥವಾ ಶವಾಗಾರಗಳಿಗೆ ಕಳುಹಿಸುವುದಕ್ಕೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ಟಿಕೆಟ್​ ರಹಿತರಿಗೆ ಪರಿಹಾರ

ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ (Odisha Train Accident) ಸಿಲುಕಿರುವ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಿದ್ದ ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. “ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದರೂ ಅವರಿಗೆ ಪರಿಹಾರ ನೀಡಲಾಗುವುದು” ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

ಅದೇ ರೀತಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗಳಲ್ಲಿ ದಾಖಲಾದ ಪ್ರತಿಯೊಬ್ಬ ಗಾಯಾಳುವಿಗೆ ತಮ್ಮ ಸಂಬಂಧಿಕರು ಅಥವಾ ಆಪ್ತರನ್ನು ಪತ್ತೆ ಹಚ್ಚುವುದಕ್ಕೆ ನೆರವಾಲು ಸ್ಕೌಟ್ ಅಥವಾ ಗೈಡ್ಸ್​​ ನೆರವು ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆ 139 ಲಭ್ಯವಿದೆ. ಈ ಸಂಪರ್ಕ ಸಂಖ್ಯೆ ಮೂಲಕ ಹಿರಿಯ ರೈಲ್ವೆ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ. ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರ್ಮಾ ಇದೇ ವೇಳೆ ಮಾಹಿತಿ ನೀಡಿದ್ದಾರೆ.

Continue Reading

ದೇಶ

ಬೆತ್ತಲೆಯಾಗುವುದು ಯಾವಾಗಲೂ ಅಶ್ಲೀಲವಲ್ಲ: ಬೆತ್ತಲಾದ 33 ವರ್ಷದ ಮಹಿಳೆಗೆ ಕೇರಳ ಹೈಕೋರ್ಟ್​​ನಿಂದ ರಿಲೀಫ್​

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರೆಹಾನಾ ಫಾತಿಮಾ ಪೋಕ್ಸೊ, ಬಾಲನ್ಯಾಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು.

VISTARANEWS.COM


on

Rehena Fathima
Koo

ಕೊಚ್ಚಿ: ಬೆತ್ತಲೆಯಾದ ದೇಹ ಎಲ್ಲ ಸಂದರ್ಭದಲ್ಲೂ ಅಶ್ಲೀಲತೆ ಎನಿಸಿಕೊಳ್ಳುವುದಿಲ್ಲ. ವ್ಯಕ್ತಿಯೊಬ್ಬರಿಗೆ ಅವರ ದೇಹದ ಮೇಲಿನ ಹಕ್ಕನ್ನು ಲಿಂಗದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಮಾಡಿದ್ದಕ್ಕಾಗಿ ಬೆದರಿಸಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಪ್ರತ್ಯೇಕಿಸಲಾಗುತ್ತದೆ ಮತ್ತು ಹಿಂಸಿಸಲಾಗುತ್ತದೆ ಎಂದು ಪೋಕ್ಸೊ ಪ್ರಕರಣದಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆಯರೊಬ್ಬರನ್ನು ಖುಲಾಸೆಗೊಳಿಸುವಾಗ ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ರೆಹಾನಾ ಫಾತಿಮಾ ಎಂಬ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತನ್ನ ಅಪ್ರಾಪ್ತ ಮಕ್ಕಳ ಜತೆ ಅರೆನಗ್ನರಾಗಿ ಪೋಸ್ ನೀಡುವ ವೀಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಪೋಕ್ಸೊ, ಬಾಲಾಪರಾಧಿ ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗಳ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು. ಈ ವಿಚಾರಣೆ ನಡೆಸಿ ರೆಹೆನಾ ಅವರನ್ನು ಆರೋಪಮುಕ್ತಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 33 ವರ್ಷದ ಸಾಮಾಜಿಕ ಕಾರ್ಯಕರ್ತೆ ತನ್ನ ಲೈಂಗಿಕ ತೃಪ್ತಿಗಾಗಿ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಊಹಿಸಲು ಕೂಡ ಯಾರಿಗೂ ಸಾಧ್ಯವಿಲ್ಲ ಎಂದು ಹೈಕೋರ್ಟ್​​ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತನ್ನ ಮಕ್ಕಳಿಗೆ ಬಣ್ಣ ಹಚ್ಚಲು ಕ್ಯಾನ್ವಾಸ್ ಆಗಿ ತನ್ನ ದೇಹವನ್ನು ಬಳಸಲು ಮಾತ್ರ ಅವರು ಅನುಮತಿ ನೀಡಿದ್ದಾರೆ. ಹೀಗಾಗಿ ಅದರು ಲೈಂಗಿಕತೆಗೆ ಸಂಬಂಧಿಸಿದ ಆರೋಪವೇ ಅಲ್ಲ ಎಂದು ಕೋರ್ಟ್​ ಹೇಳಿದ ಕೋರ್ಟ್​​​ ರೆಹೆನಾ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದೆ.

ತನ್ನ ದೇಹದ ಬಗ್ಗೆ ಸ್ವಾಯತ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯ ಹಕ್ಕು ಹಾಗೂ ಸಮಾನತೆ ಮತ್ತು ಖಾಸಗಿತನದ ಮೂಲಭೂತ ಹಕ್ಕಿನ ಭಾಗವಾಗಿದೆ. ಇದು ಸಂವಿಧಾನದ 21 ನೇ ವಿಧಿಯಿಂದ ಖಾತರಿಪಡಿಸಿದ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಕೋರ್ಟ್​ ಹೇಳಿದೆ.

ಸ್ತ್ರೀಯ ದೇಹದ ಮೇಲ್ಬಾಗ ಅಶ್ಲೀಲ್ವೇ?

ಸ್ತ್ರೀಯ ದೇಹದ ಮೇಲ್ಬಾ ನಗ್ನ ಮೇಲ್ಭಾಗವನ್ನು ಎಲ್ಲಾ ಸಂದರ್ಭಗಳಲ್ಲಿ ಲೈಂಗಿಕತೆಯ ವ್ಯಾಪ್ತಿಗೆ ಸೇರಿಸುತ್ತೇವೆ. ಆದರೆ ನಗ್ನ ಪುರುಷ ಮೇಲ್ಭಾಗವನ್ನು ಆ ರೀತಿ ಭಾವಿಸುವುದಿಲ್ಲ. ಇದು ಸಮಾಜದ ಪೂರ್ವನಿಯೋಜಿತ ದೃಷ್ಟಿಕೋನ. ಹೀಗಾಗಿ ನನ್ನ ಮೇಲಿರುವ ಬಾಡಿ ಪೇಂಟಿಂಗ್ ಆರೋಪ ಒಂದು ರಾಜಕೀಯ ಹೇಳಿಕೆಯಾಗಿದೆ ಎಂದು ರೆಹೆನಾ ಫಾತಿಮಾ ಕೋರ್ಟ್​​ ಮುಂದೆ ವಾದಿಸಿದ್ದರು.

ಆಕೆಯ ವಾದವನ್ನು ಒಪ್ಪಿದ ನ್ಯಾಯಮೂರ್ತಿ ಎಡಪ್ಪಗತ್, ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರ ಬಿಡಿಸಿದರೆ ಅದನ್ನು ಅನುಕರಿಸಿದ ಲೈಂಗಿಕ ಕ್ರಿಯೆ ಎಂದು ನಿರೂಪಿಸಲಾಗುವುದಿಲ್ಲ. ಲೈಂಗಿಕ ತೃಪ್ತಿಯ ಉದ್ದೇಶಕ್ಕಾಗಿ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ನಿರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಲೆಯ ಅಭಿವ್ಯಕ್ತಿಯನ್ನು ಅನುಕರಿಸಿದ ಲೈಂಗಿಕ ಕ್ರಿಯೆಯಲ್ಲಿ ಮಗುವಿನ ಬಳಕೆ ಎಂದು ಕರೆಯುವುದು ಕಠಿಣ. ಇಲ್ಲಿ ಮಕ್ಕಳನ್ನು ಅಶ್ಲೀಲತೆಗೆ ಬಳಸಲಾಗಿದೆ ಎಂದು ತೋರಿಸಲು ಏನೂ ಇಲ್ಲ. ವೀಡಿಯೊದಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ಪುರುಷನಾಗಿರಲಿ ಅಥವಾ ಮಹಿಳೆಯ ನಗ್ನ ದೇಹದ ಮೇಲೆ ಚಿತ್ರ ಬಿಡಿಸುವುದು ಲೈಂಗಿಕ ಕೃತ್ಯ ಎಂದು ಹೇಳಲಾಗುವುದಿಲ್ಲ ಎಂದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಅರ್ಜಿದಾರರು ತಮ್ಮ ದೇಹ ಮತ್ತು ಜೀವನದ ಬಗ್ಗೆ ಆಯ್ಕೆಗಳನ್ನು ಮಾಡಿದ್ದಕ್ಕಾಗಿ ಅವರನ್ನು ಬೆದರಿಸಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಪ್ರತ್ಯೇಕಿಸಲಾಗುತ್ತದೆ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನ್ಯಾಯಾಲಯ ವಿಷಾಧ ವ್ಯಕ್ತಪಡಿಸಿದರು.

ಮಹಿಳಾ ನಗ್ನತೆಯನ್ನು ನಿಷೇಧವೆಂದು ಪರಿಗಣಿಸುವ ಕೆಲವರು ಇದ್ದಾರೆ. ಅವನ್ನು ಕಾಮಪ್ರಚೋದಕ ಉದ್ದೇಶಗಳಿಗಾಗಿ ಮಾತ್ರ ಎಂದು ಪರಿಗಣಿಸುತ್ತಾರೆ. ಆದರೆ, ಫಾತಿಮಾ ಪ್ರಸಾರ ಮಾಡಿದ ವೀಡಿಯೊದ ಹಿಂದಿನ ಉದ್ದೇಶವು ಸಮಾಜದಲ್ಲಿ ಚಾಲ್ತಿಯಲ್ಲಿರುವ ಈ ದ್ವಂದ್ವ ಮಾನದಂಡವನ್ನು ಬಹಿರಂಗಪಡಿಸುವುದಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

Continue Reading

ಕ್ರಿಕೆಟ್

ತಾಯಿ, ಮಗಳ ಜೀವ ತೆಗೆಯಿತು ಐಪಿಎಲ್ ಲಕ್ನೊ ತಂಡದ ಹೋರ್ಡಿಂಗ್

ಚಲಿಸುತ್ತಿದ್ದ ಕಾರಿನ ಮೇಲೆ ಹೋರ್ಡಿಂಗ್​ ಬಿದ್ದ ಕಾರಣ ತಾಯಿ, ಮಗಳು ಮೃತಪಟ್ಟಿದ್ದರೆ ಚಾಲಕ ಗಾಯಗೊಂಡಿದ್ದಾರೆ.

VISTARANEWS.COM


on

Ekana Stadium
Koo

ಲಖನೌ: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ (ಎಕಾನಾ) ಕ್ರಿಕೆಟ್ ಸ್ಟೇಡಿಯಂ ಬಳಿ ಸೋಮವಾರ ಭಾರಿ ಬಿರುಗಾಳಿಯ ಸಮಯದಲ್ಲಿ ದೊಡ್ಡ ಹೋರ್ಡಿಂಗ್ ಬಿದ್ದು ಕಾರು ನಜ್ಜುಗುಜ್ಜಾದ ಪರಿಣಾಮ ತಾಯಿ, ಮಗಳು ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾರೆ. ತಾಯಿ-ಮಗಳು ಇಬ್ಬರನ್ನೂ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದರೂ ಆಗಲೇ ಅವರಿಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ಘೋಷಿಸಿದ್ದಾರೆ.

ಗಾಜಿಪುರ ಪೊಲೀಸ್ ಠಾಣೆ ಪ್ರದೇಶದ ಇಂದಿರಾ ನಗರ ಕಾಲೋನಿ ನಿವಾಸಿಗಳಾದ ಪ್ರೀತಿ ಜಗ್ಗಿ (38) ಮತ್ತು ಅವರ ಮಗಳು ಏಂಜೆಲ್ (15) ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ವಾಹನದ ಮೇಲೆ ಜಾಹೀರಾತು ಫಲಕ ಬಿದ್ದಿದೆ ಎಂದು ಗೋಸಾಯ್​​ಗಂಜ್ ಸಹಾಯಕ ಪೊಲೀಸ್ ಆಯುಕ್ತ (ಎಎಸ್ಪಿ) ಅಮಿತ್ ಕುಮಾವತ್ ಮಾಹಿತಿ ನೀಡಿದ್ದಾರೆ.

ಅವರು ತಮ್ಮ ಚಾಲಕ ಸರ್ತಾಜ್ (28) ಅವರೊಂದಿಗೆ ಮಾಲ್ಗೆ ಪ್ರದೇಶಕ್ಕೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕ್ರೀಡಾಂಗಣದ ಗೇಟ್ ಸಂಖ್ಯೆ 2 ರ ಮುಂಭಾಗದ ಜಾಹೀರಾತು ಫಲಕವು ಅವರ ವಾಹನದ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು. ಸರ್ತಾಜ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Odisha Train Accident: ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ‘ಪ್ರೇಮ ಕವನಗಳು’ ಅನಾಥ!

ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವವೀಡಿಯೊದಲ್ಲಿ, ಜಾಹೀರಾತು ಫಲಕದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಚಾಲಕ ಸಹಾಯಕ್ಕಾಗಿ ತೀವ್ರವಾಗಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು. ಚಂಡಮಾರುತದ ಪರಿಣಾಮವಾಗಿ ಬೃಹತ್ ಬೋರ್ಡ್ ಕುಸಿದಿದೆ ಎಂದು ಹೇಳಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಪೊಲೀಸರು ಘಟನಾ ಸ್ಥಳದಲ್ಲಿ ಹಾಜರಿದ್ದರು. ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸ್ಕಾರ್ಪಿಯೋ ಎಸ್ ಯುವಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ತಕ್ಷಣದಲ್ಲೇ ಒಳಗೆ ಸಿಲುಕಿದ್ದವರನ್ನು ಹೊರಗೆ ಎಳೆಯಲು ಸಾಧ್ಯವಾಗಿರಲಿಲ್ಲ. ಕ್ರೇನ್ ಸಹಾಯದಿಂದ ಬಿದ್ದ ಜಾಹೀರಾತು ಫಲಕವನ್ನು ತೆಗೆದು ಹಾಕಿ ಅವರನ್ನು ಹೊರಗೆಳೆಯಲಾಗಿದೆ.

ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದ ಹೋರ್ಡಿಂಗ್​ ಇದಾಗಿದೆ. ಈ ಕ್ರೀಡಾಂಗಣವು 2018ರಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿದ್ದು ಅಲ್ಲಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಐಪಿಎಲ್​ನ ಲಕ್ನೊ ಸೂಪರ್​ ಜೈಂಟ್ಸ್​ ತಂಡದ ತವರ ಸ್ಟೇಡಿಯಮ್​ ಇದಾಗಿದೆ.

Continue Reading

ದೇಶ

72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

72 Hoorain: ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ನಿರ್ದೇಶನದ 72 ಹೂರೇ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿವೆ.

VISTARANEWS.COM


on

Edited by

72 Hoorain bollywood film is ready to release in India
Koo

ನವದೆಹಲಿ: ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ (The Kashmir Files), ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇಸ್ಲಾಮಿಕ್ ತೀವ್ರವಾದದ ಕತೆಯನ್ನು ಹೊಂದಿರುವ 72 ಹೂರೇ(72 Hoorain) ಚಿತ್ರದ ಟೀಸರ್ ಲಾಂಚ್ ಆಗಿದ್ದು, ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದ್ದಂತೆ ನೆಟ್ಟಿಗರು, ಮುಸ್ಲಿಮ್ ಮತ್ತು ಇಸ್ಲಾಮ್‌ಗೆ ಅವಮಾನ ಮಾಡುವ ಪ್ರಾಪಗ್ಯಾಂಡ ಚಿತ್ರ ಎಂದು ಟೀಕಿಸಿದ್ದಾರೆ.

ಇತ್ತೀಚೆಗಷ್ಟೇ 72 ಹೂರೇ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಆಗಲೂ ಟ್ವಿಟರ್‌ನಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದ್ದವು. ಭಾರತದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳ ನಡೆಯುತ್ತಿವೆ ಎಂದು ಟೀಕೆ ವ್ಯಕ್ತವಾಗಿತ್ತು.

ಚಿತ್ರದ ಟೀಸರ್‌ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಸೇರಿದಂತೆ ಇತರ ಚಿತ್ರಗಳನ್ನು ಮತ್ತು ಯಾಕೂಬ್ ಮೆಮನ್‌ನ ಮಿಶ್ರಿತ ಫೋಟೋವನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಟೀಸರ್‌ನಲ್ಲಿ ಕಾಣುವ ಅಂಶಗಳು ಖಂಡಿತವಾಗಿಯೂ, ಈ ಸಿನಿಮಾ ಕೂಡ ಮುಸ್ಲಿಮರು ಸುತ್ತ ಸುತ್ತದೆ ಎಂಬುದು ವೇದ್ಯವಾಗುತ್ತದೆ. ಉಗ್ರರಾದ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಅವರನ್ನು ಹೋಲುವರವನ್ನು ಹೈಲೆಟ್ ಮಾಡಲಾಗಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: The Kerala Story : ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೆಂಡ ಕಾರಿದ ಹಿರಿಯ ನಟ ನಾಸಿರುದ್ದೀನ್‌ ಶಾ

72 ಹೂರೇ ಚಿತ್ರದ ಟ್ರೈಲರ್ ಅನ್ನು ಸಹ ನಿರ್ದೇಶಕರಾಗಿರುವ ಅಶೋಕ್ ಪಂಡಿತ್ ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ಇವರು ಕಾಶ್ಮೀರ ಪಂಡತ್ ಕೂಡ ಹೌದು. ನಮ್ಮ ಚಿತ್ರ 72 Hoorain ಸಿನಿಮಾದ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುವ ಭರವಸೆಯಂತೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಭಯೋತ್ಪಾದಕರ ಮಾರ್ಗದರ್ಶಕರು ಭರವಸೆ ನೀಡಿದಂತೆ 72 ಕನ್ಯೆಯರನ್ನು ಭೇಟಿಯಾಗುವ ಬದಲು ನೀವು ಕ್ರೂರವಾಗಿ ಸಾಯುತ್ತಿದ್ದರೆ? ನನ್ನ ಮುಂಬರುವ ಚಿತ್ರ 72 ಹೂರೇ ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಚಿತ್ರವು 7 ಜುಲೈ 2023 ರಂದು ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

72 ಹೂರೇ ಚಿತ್ರದ ಟೀಸರ್

Continue Reading
Advertisement
Transport Minister Ramalinga reddy
ಕರ್ನಾಟಕ46 mins ago

Ramalinga Reddy: 4 ಸಾರಿಗೆ ನಿಗಮಗಳ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ನೇಮಕ

DCM DK Shivakumar
ಕರ್ನಾಟಕ2 hours ago

Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು

Indian Railways help desk
ದೇಶ2 hours ago

Odisha Train Accident : ಅವಘಡದಲ್ಲಿ ಮೃತಪಟ್ಟವರನ್ನು ಗುರುತಿಸಲು ಭಾರತೀಯ ರೈಲ್ವೆ ಮನವಿ

Water tap
ಕರ್ನಾಟಕ3 hours ago

Koppal News: ಕನಕಗಿರಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Rehena Fathima
ದೇಶ3 hours ago

ಬೆತ್ತಲೆಯಾಗುವುದು ಯಾವಾಗಲೂ ಅಶ್ಲೀಲವಲ್ಲ: ಬೆತ್ತಲಾದ 33 ವರ್ಷದ ಮಹಿಳೆಗೆ ಕೇರಳ ಹೈಕೋರ್ಟ್​​ನಿಂದ ರಿಲೀಫ್​

A sapling was planted on the banks of Tunga in Shivamogga
ಕರ್ನಾಟಕ3 hours ago

World Environment Day: ಶಿವಮೊಗ್ಗದಲ್ಲಿ ಸಹಸ್ರ ವೃಕ್ಷಾರೋಪಣ; ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ

Ashwini Vaishnav
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ರೈಲು ದುರಂತ ಬಳಿಕ ಪರಿಹಾರ ಕಾರ್ಯ; ರೈಲ್ವೆ ಸಚಿವರ ನಡೆ ಅನುಕರಣೀಯ

World Environment Day celebration at Shirsi veda health centere
ಉತ್ತರ ಕನ್ನಡ4 hours ago

Uttara Kannada News: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

Ekana Stadium
ಕ್ರಿಕೆಟ್4 hours ago

ತಾಯಿ, ಮಗಳ ಜೀವ ತೆಗೆಯಿತು ಐಪಿಎಲ್ ಲಕ್ನೊ ತಂಡದ ಹೋರ್ಡಿಂಗ್

Bike Accident in Charmadi Ghat
ಕರ್ನಾಟಕ4 hours ago

Bike Accident: ಚಾರ್ಮಾಡಿ ಘಾಟ್‌ನಲ್ಲಿ ಸಾರಿಗೆ ಬಸ್‌ ಚಕ್ರಕ್ಕೆ ಸಿಲುಕಿ ಸ್ಕೂಟರ್‌ ಸವಾರ ಸಾವು

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Chakravarthy Sulibele and MB Patil
ಕರ್ನಾಟಕ14 hours ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ14 hours ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ21 hours ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

Mangalore Moral Policing News
ಉಡುಪಿ2 days ago

Video: ನಮ್ಮ ನಿದ್ದೆಗೆಡಿಸಿದ್ದಾರೆ; ಮುಸ್ಲಿಮರೊಂದಿಗೆ ಬೀಚ್​​ಗೆ ಬಂದಿದ್ದ ಹುಡುಗಿಯರ ವಿರುದ್ಧ ನಿಂತ ಮಹಿಳೆಯರು

horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು!

South facing house vastu
ಭವಿಷ್ಯ3 days ago

Vastu Tips : ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆ ಕೂಡ ಶುಭವಂತೆ! ಹೌದೇ? ಏನೆನ್ನುತ್ತದೆ ವಾಸ್ತು ಶಾಸ್ತ್ರ?

jackfruit
ಕೃಷಿ3 days ago

Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!

Bus Driver
ಕರ್ನಾಟಕ3 days ago

Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ

horoscope today
ಪ್ರಮುಖ ಸುದ್ದಿ3 days ago

Horoscope Today : ಈ ಮೂರು ರಾಶಿಯವರಿಗೆ ಖರ್ಚು ಹೆಚ್ಚು; ಇಂದು ನಿಮ್ಮ ಭವಿಷ್ಯ ಹೀಗಿದೆ

Siddaramaiah
ಕರ್ನಾಟಕ3 days ago

Congress Guarantee : ಹೂ ಈಸ್‌ ಯುವರ್‌ ಯಜಮಾನಿ? ಸಿದ್ದರಾಮಯ್ಯ ಸುದ್ದಿಗೋಷ್ಠಿಯ ತಮಾಷೆ ಪ್ರಸಂಗಗಳು ಇಲ್ಲಿವೆ!

ಟ್ರೆಂಡಿಂಗ್‌

error: Content is protected !!