ITR FILING 2021-22 | ಇವತ್ತೇ ಕೊನೆಯ ದಿನ, ಹಾಗಿದ್ರೆ ಇವತ್ತೂ ಫೈಲಿಂಗ್‌ ಮಾಡದಿದ್ದರೆ ಏನಾಗ್ತದೆ? Vistara News
Connect with us

ದೇಶ

ITR FILING 2021-22 | ಇವತ್ತೇ ಕೊನೆಯ ದಿನ, ಹಾಗಿದ್ರೆ ಇವತ್ತೂ ಫೈಲಿಂಗ್‌ ಮಾಡದಿದ್ದರೆ ಏನಾಗ್ತದೆ?

ಇವತ್ತು ಜುಲೈ 31. ಸರಕಾರ ಹೇಳಿರುವ ಪ್ರಕಾರ, ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಇವತ್ತೇ ಲಾಸ್ಟ್‌ ಡೇಟ್‌. ಅದು ಸರಿ, ಒಂದು ವೇಳೆ ಇವತ್ತೂ ಸಲ್ಲಿಸಲು ಆಗಿಲ್ಲ ಅಂತಿಟ್ಟುಕೊಳ್ಳೋಣ.. ಏನಾಗುತ್ತದೆ..? ಈ ವರದಿ ಓದಿ.

VISTARANEWS.COM


on

ITR
Koo

ನವ ದೆಹಲಿ: ೨೦೨೧-೨೨ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ ೩೧ ಕೊನೆ ದಿನ ಎಂದು ಸಾರಿ ಸಾರಿ ಹೇಳಲಾಗಿದೆ. ಯಾವುದೇ ಕಾರಣಕ್ಕೂ ಈ ಬಾರಿ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಕೊನೆಯ ಕ್ಷಣದಲ್ಲಾದರೂ ವಿಸ್ತರಣೆ ಆದೀತು ಎಂದು ಕಾಯುವವರ ಸಂಖ್ಯೆ ಕಡಿಮೆ ಏನಿಲ್ಲ.

೨೦೨೦-೨೧ನೇ ಸಾಲಿನಲ್ಲಿ ಡಿಸೆಂಬರ್‌ ೩೧ರವರೆಗೆ ವಿಸ್ತರಿತ ಗಡುವಿನಲ್ಲಿ ಒಟ್ಟು ೫.೮೯ ಕೋಟಿ ರೂ. ರಿಟರ್ನ್ಸ್‌ ಸಲ್ಲಿಕೆಯಾಗಿತ್ತು. ಈ ಸಾಲಿನಲ್ಲಿ ಜುಲೈ ೩೦ಕ್ಕೆ ಐದು ಕೋಟಿ ಸಲ್ಲಿಕೆಯಾಗಿವೆ. ಕೊನೆಯ ದಿನವಾದ ಭಾನುವಾರದ ಭರಾಟೆ ಇನ್ನೂ ಜೋರಾಗಿದ್ದು ಮಧ್ಯಾಹ್ನದ ಹೊತ್ತಿಗೆ ೧೯ ಮಂದಿ ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಸಲ್ಲಿಸದೆ ಹೋದರೆ ಏನಾಗುತ್ತದೆ?
ಜುಲೈ ೩೧ರ ಗಡುವಿನೊಳಗೆ ಅದಾಯ ತೆರಿಗೆ ಐಟಿಆರ್‌ ಸಲ್ಲಿಸದೆ ಹೋದರೆ ದೊಡ್ಡ ಸಮಸ್ಯೆ ಏನೂ ಆಗುವುದಿಲ್ಲ. ಈ ವರ್ಷದ ಡಿಸೆಂಬರ್‌ ೩೧ರವರೆಗೂ ಐಟಿಆರ್‌ ಸಲ್ಲಿಸಲು ಅವಕಾಶವಿದೆ. ಆದರೆ, ೫೦೦೦ ರೂ. ದಂಡ ವಿಧಿಸಲಾಗುತ್ತದೆ. ಈ ದಂಡದ ಮೊತ್ತ ಐದು ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಮಾತ್ರ ಅನ್ವಯ. ಒಂದು ವೇಳೆ ಒಟ್ಟು ಆದಾಯ ಐದು ಲಕ್ಷಕ್ಕಿಂತ ಕಡಿಮೆ ಇದ್ದರೆ ಒಂದು ಸಾವಿರ ರೂ. ದಂಡ ಪಾವತಿಸಿ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಐಟಿಆರ್‌ ಸಲ್ಲಿಸಬಹುದು. ಆದಾಯ ತೆರಿಗೆ ಕಾಯಿದೆ ೧೯೬೧ರ ಪ್ರಕಾರ ವಿಳಂಬ ಶುಲ್ಕ (ಲೇಟ್‌ ಫೀ) ಪಾವತಿಸಿ ಐಟಿಆರ್‌ ಫೈಲಿಂಗ್‌ ಮಾಡುವುದಕ್ಕೆ ಅವಕಾಶವಿದೆ.

ಕೆಲವು ಅನನುಕೂಲಗಳೂ ಇವೆ!
ಹಾಗಂತ ಲೇಟ್‌ ಫೀ ಜತೆ ಐಟಿಆರ್‌ ಫೈಲ್‌ ಮಾಡುವುದರಿಂದ ಕೆಲವೊಂದು ಅನನುಕೂಲಗಳೂ ಇವೆ.
೧. ಒಬ್ಬ ವ್ಯಕ್ತಿ ಅಂತಿಮ ಗಡು ಮೀರಿದ ಬಳಿಕ ದಂಡ ಶುಲ್ಕರೊಂದಿಗೆ ಐಟಿಆರ್‌ ಫೈಲ್‌ ಮಾಡಿದರೆ ಅವನಿಗೆ ಕೆಲವೊಂದು ವಿಚಾರಗಳಲ್ಲಿ ನಷ್ಟವನ್ನು ಫಾರ್ವರ್ಡ್‌ ಮಾಡಲು ಅವಕಾಶವಿಲ್ಲ. ಉದಾಹರಣೆಗೆ, ಇತರ ಆದಾಯ ಮೂಲಗಳನ್ನು ಸೇರಿಸುವಂತಿಲ್ಲ, ಕ್ಯಾಪಿಟಲ್‌ ಗೇನ್ಸ್‌ನಿಂದ ಬಂದಿರುವ ಲಾಭವನ್ನು ತೋರಿಸುವಂತಿಲ್ಲ, ಉದ್ಯಮ ಮತ್ತು ವೃತ್ತಿಯಿಂದ ಬಂದಿರುವ ಇತರ ಆದಾಯ ಉಲ್ಲೇಖಿಸುವಂತಿಲ್ಲ. ಆದರೆ, ಮನೆ ಮತ್ತಿತರ ಆಸ್ತಿಗಳಿಂದ ಬಂದಿರುವ ಆದಾಯವನ್ನು ತೋರಿಸಲು ಯಾವುದೇ ಅಡ್ಡಿಯಿಲ್ಲ.

೨. ಒಂದು ವೇಳೆ ಆದಾಯ ತೆರಿಗೆ ರಿಫಂಡ್‌ ಬರುವುದಿದ್ದರೆ ಅದು ಐಟಿಆರ್‌ ಫೈಲಿಂಗ್‌ ಆಗಿ ಪರಿಶೀಲನೆ ಆದ ಮೇಲಷ್ಟೇ ಬರುತ್ತದೆ. ಅದಕ್ಕಿಂತ ಮೊದಲು ಪಾವತಿಸಿದರೆ ತಕ್ಷಣವೇ ಬರುತ್ತದೆ.

೩. ಆದಾಯ ತೆರಿಗೆ ರಿಫಂಡ್‌ ಮಾಡುವಾಗ ವಿಳಂಬವಾದರೆ ಇಲಾಖೆ ಗ್ರಾಹಕನಿಗೆ ಪ್ರತಿ ತಿಂಗಳು ೦.೫% ಬಡ್ಡಿಯನ್ನು ನೀಡುತ್ತದೆ. ಈ ಅನುಕೂಲ ಅಂತಿಮ ಗಡು ಮೀರಿ ಪಾವತಿ ಮಾಡುವವನಿಗೆ ಇರುವುದಿಲ್ಲ.

೪. ವಿಳಂಬವಾಗಿ ಐಟಿಆರ್‌ ಫೈಲಿಂಗ್‌ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆಗ ನಿಮಗೆ ಬರಬೇಕಾದ ರಿಫಂಡ್‌ನಲ್ಲಿ ೫೦೦೦ ರೂ. ದಂಡ ಶುಲ್ಕವನ್ನು ಮುರಿದುಕೊಳ್ಳಲಾಗುತ್ತದೆ. ಒಂದು ವೇಳೆ ರಿಫಂಡ್‌ ಮೊತ್ತ ೫೦೦೦ ರೂ.ಗಿಂತ ಕಡಿಮೆ ಇದ್ದರೆ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ. ಇದು ತಿಂಗಳಿಗೆ ೧% ಇರುತ್ತದೆ.

ಡಿಸೆಂಬರ್‌ ೩೧ಕ್ಕೂ ಪಾವತಿಸದಿದ್ದರೆ!?
ಇನ್ನೂ ಒಂದು ಸಾಧ್ಯತೆಯನ್ನು ಪರಿಶೀಲಿಸುವುದಾದರೆ, ಒಂದು ವೇಳೆ ಡಿಸೆಂಬರ್‌ ೩೧ರ ಗಡುವಿಗೂ ಆದಾಯ ತೆರಿಗೆ ರಿಟರ್ನ್ಸ್‌ ಫೈಲಿಂಗ್‌ ಮಾಡದೆ ಹೋದರೆ ಏನಾಗುತ್ತದೆ? ಆ ಬಳಿಕ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದರಿಂದ ಒಂದು ವರ್ಷದ ಐಟಿಆರ್‌ ದಾಖಲೆಯೇ ಸಿಗುವುದಿಲ್ಲ. ಹಾಗಿರುವಾಗ ಯಾವುದಾದರೂ ಲೋನ್‌ ಮಾಡಬೇಕು, ಮನೆ ಕಟ್ಟಬೇಕು ಎಂದಾದರೆ ಕಷ್ಟವಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆಯೇ ನಿಮ್ಮ ಐಟಿಆರ್‌ ಫೈಲ್‌ ಆಗಿಲ್ಲ ಎಂದು ನೋಟಿಸ್‌ ಕಳುಹಿಸುವುದೂ ಉಂಟು. ಆಗ ಒಂದು ಛಾನ್ಸ್‌ ಉಳಿದಿರುತ್ತದೆ!

ಇದನ್ನೂ ಓದಿ| ITR Filing 2021-22| ಜುಲೈ 31ರ ಗಡುವು ವಿಸ್ತರಣೆಗೆ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಒತ್ತಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ದೇಶ

NITI Aayog Meeting: ವಿಕಸಿತ ಭಾರತದ ಕನಸು ಬಿತ್ತಿದ ಮೋದಿ; 11 ಸಿಎಂಗಳು ಗೈರಾದರೂ ಪ್ರಧಾನಿ ಅಭಿವೃದ್ಧಿ ಮಂತ್ರ

NITI Aayog Meeting: ಮುಖ್ಯಮಂತ್ರಿಗಳ ಗೈರು ಹಾಜರಿಯ ಮಧ್ಯೆಯೇ ನೀತಿ ಆಯೋಗದ ಸಭೆಯಲ್ಲಿ ನರೇಂದ್ರ ಮೋದಿ ಅವರು ಅಭಿವೃದ್ಧಿಯ ಮಂತ್ರ ಪಠಿಸಿದರು. ವಿಕಸಿತ ಭಾರತದ ಕನಸು ಬಿತ್ತಿದರು.

VISTARANEWS.COM


on

Edited by

Narendra Modi Speech At NITI Aayog Meeting
Koo

ನವದೆಹಲಿ: ನೀತಿ ಆಯೋಗದ ಎಂಟನೇ ಗವರ್ನಿಂಗ್‌ ಸಮಿತಿ ಸಭೆ ನಡೆದಿದ್ದು, 11 ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಉಳಿದ ಸಿಎಂಗಳು ಹಾಜರಾಗಿದ್ದು, ಇದೇ ವೇಳೆ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತದ ಅಭಿವೃದ್ಧಿಯ ನಕ್ಷೆ ಹಾಕಿದ್ದಾರೆ. “ಎಲ್ಲರೂ ಒಗ್ಗೂಡಿ ವಿಕಸಿತ ಭಾರತದ (ಅಭಿವೃದ್ಧಿ ಹೊಂದಿದ ಭಾರತ) ಕನಸು ನನಸು ಮಾಡೋಣ” ಎಂದು ಹೇಳಿದ್ದಾರೆ.

“ಭಾರತವು ಏಳಿಗೆ ಹೊಂದುತ್ತಿದ್ದು, ಸರ್ವ ಕ್ಷೇತ್ರಗಳಲ್ಲಿ ನಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಒಕ್ಕೂಟದ ವ್ಯವಸ್ಥೆಯ ಬೇರುಗಳು ಇನ್ನಷ್ಟು ಬಲವಾಗಬೇಕು. ದೇಶದ ಜನರಿಗೆ ಸಕಲ ಮೂಲ ಸೌಕರ್ಯಗಳು ಸಿಗುವಂತಾಗಬೇಕು. ಜಲ ಸಂರಕ್ಷಣೆ, ಪರಿಸರ ರಕ್ಷಣೆ, ಆರ್ಥಿಕ ಶಿಸ್ತಿನಲ್ಲಿ ನಾವು ಇನ್ನಷ್ಟು ನೈಪುಣ್ಯ ಸಾಧಿಸಬೇಕು. ಜಾಗತಿಕ ಮಟ್ಟದ ಸ್ಪರ್ಧೆಗೆ ನಾವು ಇನ್ನಷ್ಟು ಮುಕ್ತವಾಗಬೇಕು. ಸಣ್ಣ ಕೈಗಾರಿಕೆಗಳು, ಎಂಎಸ್‌ಎಂಇಗಳ ಏಳಿಗೆಯಾಗಬೇಕು. ಇದರಿಂದ ಮಾತ್ರ ಭಾರತ ಏಳಿಗೆ ಹೊಂದಲು ಸಾಧ್ಯ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಹ ಮನೋಭಾವದೊಂದಿಗೆ 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣ ಮಾಡಬೇಕು” ಎಂದು ಕರೆ ನೀಡಿದರು.

ನೀತಿ ಆಯೋಗದ ಸಭೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ 100 ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್‌ ಗವರ್ನರ್‌ಗಳು, ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಾಗಿದೆ. ಎಂಎಸ್‌ಎಂಇ, ಮೂಲ ಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಾಭಿವೃದ್ಧಿ ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

ಗೈರಾದ ಸಿಎಂಗಳು ಯಾರು? ಏಕೆ?

ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಭೆಗೆ ಹಾಜರಾಗಿಲ್ಲ. ಇನ್ನು, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಕೂಡ ಗೈರಾಗಿದ್ದಾರೆ. ಕರ್ನಾಟಕದಲ್ಲಿ ಸಚಿವರ ಪ್ರಮಾಣವಚನ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.

ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಬೇರೆ ಕಾರ್ಯಕ್ರಮದಿಂದಾಗಿ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌, ಕೇಂದ್ರದ ಮೇಲಿನ ಅಸಮಾಧಾನದಿಂದಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್‌ ಕುಮಾರ್‌, ತೆಲಂಗಾಣದ ಕೆ.ಚಂದ್ರಶೇಖರ ರಾವ್‌ ಹಾಗೂ ಯಾವುದೇ ಕಾರಣ ನೀಡದೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.

ಇದನ್ನೂ ಓದಿ: NITI Aayog Meeting:‌ ಕೇಂದ್ರಕ್ಕೆ ಬಾಯ್ಕಾಟ್‌ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್

Continue Reading

ದೇಶ

New Parliament Building: ಸೆಂಗೋಲ್‌ ಎಂಬ ರಾಜದಂಡ ಸ್ವಾತಂತ್ರ್ಯದ ಸಂಕೇತ; ಪ್ರತಿಷ್ಠಾಪನೆಗೆ ಕಾರಣ ತಿಳಿಸಿದ ಮೋದಿ

New Parliament Building: ನೂತನ ಸಂಸತ್‌ ಭವನದಲ್ಲಿರುವ ಸ್ಪೀಕರ್‌ ಪೀಠದ ಬಳಿ ಚೋಳರ ಕಾಲದ ಸೆಂಗೋಲ್ಅನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದುವರೆಗೆ ಮ್ಯೂಸಿಯಂನಲ್ಲಿದ್ದ ಸೆಂಗೋಲ್‌ಅನ್ನು ನೂತನ ಸಂಸತ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

VISTARANEWS.COM


on

Edited by

Narendra Modi Speech On Sengol
Koo

ನವದೆಹಲಿ: ತಮಿಳುನಾಡಿನ ಧರ್ಮಾಪುರಂ ಹಾಗೂ ತಿರುವಾವದುತುರೈಂನ ಶೈವ ಪರಂಪರೆಯ ಅಧೀನಾಮ್‌ ಮಠದ ಸ್ವಾಮೀಜಿಗಳು ನರೇಂದ್ರ ಮೋದಿ ಅವರ ನಿವಾಸದಲ್ಲಿ ಸೆಂಗೋಲ್‌ಅನ್ನು (ರಾಜದಂಡ) ಅವರಿಗೆ ಹಸ್ತಾಂತರಿಸಿದ್ದಾರೆ. ಇದಾದ ಬಳಿಕ ಮಾತನಾಡಿದ ನರೇಂದ್ರ ಮೋದಿ, “ಸೆಂಗೋಲ್‌ ಎಂಬುದು ಕೇವಲ ಧರ್ಮದಂಡವಲ್ಲ. ಇದು ಸ್ವಾತಂತ್ರ್ಯದ ಸಂಕೇತ, ಗುಲಾಮಗಿರಿಯನ್ನು ಅಂತ್ಯಗೊಳಿಸಿದ ಸಂಕೇತ” ಎಂದು ಹೇಳಿದರು.

“ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭ ಬಂದಾಗ, ಅಧಿಕಾರದ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್‌ಅನ್ನು ಬಳಸಲಾಯಿತು. ತಮಿಳು ಪರಂಪರೆಯಲ್ಲಿ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್‌ಅನ್ನು ನೀಡಲಾಗುತ್ತದೆ. ಹಾಗೆಯೇ, ರಾಜಧರ್ಮ ಪಾಲನೆಯ ಜವಾಬ್ದಾರಿಯನ್ನೂ ಸೆಂಗೋಲ್‌ ತಿಳಿಸುತ್ತದೆ. 1947ರಲ್ಲಿ ಅಧಿಕಾರದ ಹಸ್ತಾಂತರದ ವೇಳೆ ಸೆಂಗೋಲ್‌ಅನ್ನು ನೀಡಿದ್ದು ಗುಲಾಮಗಿರಿಯ ಅಂತ್ಯದ ಸಂಕೇತವಾಗಿತ್ತು” ಎಂದು ಹೇಳಿದರು.

ಸೆಂಗೋಲ್‌ ಕುರಿತು ಮೋದಿ ಭಾಷಣದ ವಿಡಿಯೊ

“ಇಂತಹ ರಾಜದಂಡವನ್ನು ನಾವು ಸಂಸತ್ತಿನಲ್ಲಿ ಪ್ರತಿಷ್ಠಾಪಿಸುತ್ತಿದ್ದೇವೆ. ದೇಶದ ಜನರ ಏಳಿಗೆ, ರಾಜಧರ್ಮವನ್ನು ಪಾಲಿಸುವುದರ ದ್ಯೋತಕವಾಗಿ ಸಂಸತ್ತಿನಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಆದರೆ, ರಾಜದಂಡವನ್ನು ಪ್ರಯಾಗರಾಜ್‌ನ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ಆನಂದ ಭವನದಲ್ಲಿ ವಾಕಿಂಗ್‌ ಸ್ಟಿಕ್‌ (ಊರುಗೋಲು) ಎಂದು ಪ್ರದರ್ಶನಕ್ಕಾಗಿ ಇರಿಸಲಾಗಿತ್ತು. ಆದರೆ, ನಿಮ್ಮ ಈ ಸೇವಕ ಹಾಗೂ ನಮ್ಮ ಸರ್ಕಾರವು ಆನಂದ ಭವನದಿಂದ ಸೆಂಗೋಲ್‌ಅನ್ನು ತಂದಿದ್ದೇವೆ. ಸ್ವಾತಂತ್ರ್ಯದ ಮೊದಲ ಫಲದ ರೂಪದಲ್ಲಿರುವ ರಾಜದಂಡವನ್ನು ಸಂಸತ್ತಿನಲ್ಲಿ ಇರಿಸುತ್ತೇವೆ. ಪ್ರಜಾಪ್ರಭುತ್ವದ ಮಂದಿರದಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆಯಾಗುತ್ತಿರುವುದು ಸಂತಸ ತಂದಿದೆ. ನಮಗೆ ಇದು ಕರ್ತವ್ಯಪಥ ತೋರಿಸುತ್ತದೆ, ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುತ್ತದೆ. ಜನತಾ ಜನಾರ್ದನರ ಸೇವೆಗೆ ಸ್ಫೂರ್ತಿ ನೀಡುತ್ತದೆ” ಎಂದರು.

ಇದನ್ನೂ ಓದಿ: New Parliament Building: ಮೋದಿಗೆ ಸೆಂಗೋಲ್‌ ಹಸ್ತಾಂತರಿಸಿದ ಸ್ವಾಮೀಜಿಗಳು; ಭಾನುವಾರ ಸಂಸತ್‌ನಲ್ಲಿ ಪ್ರತಿಷ್ಠಾಪನೆ

“ತಮಿಳುನಾಡಿನ ಸಂಸ್ಕೃತಿ ಇಂದಿಗೂ ಸಮೃದ್ಧಿಯಾಗಿದೆ ಎಂದರೆ ಅದಕ್ಕೆ ಅಧೀನಮ್‌ ಸ್ವಾಮೀಜಿಗಳಂತಹ ಸಂತರ ಕೊಡುಗೆ ಇದೆ. ಇಂತಹ ಸಂಸ್ಥಾನಗಳಿಂದಲೇ ತಮಿಳುನಾಡಿನಲ್ಲಿ ಪರಂಪರೆ ಶ್ರೀಮಂತವಾಗಿದೆ” ಎಂದು ಬಣ್ಣಿಸಿದರು. ಪ್ರಧಾನಿ ಭಾಷಣಕ್ಕೂ ಮೊದಲು ಮೋದಿ ಅವರ ಹಣೆಗೆ ತಿಲಕ ಇಟ್ಟು, ಹಾರ ಹಾಕಿ, ಶಾಲು ಹೊದಿಸಿದ ಸ್ವಾಮೀಜಿಗಳು ಬಳಿಕ ಮೋದಿ ಅವರಿಗೆ ಸೆಂಗೋಲ್‌ಅನ್ನು ನೀಡಿದರು. ಮೋದಿ ಅವರು ರಾಜದಂಡಕ್ಕೆ ನಮಸ್ಕಾರ ಮಾಡಿದರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ವಿಶೇಷವೆಂದರೆ ಸಂಸತ್‌ ಭವನದಲ್ಲಿ ನಡೆಯಲಿರುವ ಉದ್ಘಾಟನೆ ಸಂಬಂಧಿತ ಪೂಜಾ ಕೈಂಕರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪುರೋಹಿತರಿಗೆ ನೀಡಲಾಗಿದೆ. ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕಾಗಿ ಶೃಂಗೇರಿಯ ಪುರೋಹಿತರ ತಂಡ ಆಗಲೇ ದಿಲ್ಲಿ ತಲುಪಿಸಿದ್ದು ಶನಿವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವನವನ್ನು ಉದ್ಘಾಟಿಸಲಿದ್ದು, ಅದಕ್ಕೆ ಸಂಬಂಧಿಸಿದ ಪೂಜೆಗಳನ್ನು ಶೃಂಗೇರಿಯ ವೇದಪಾರಂಗತ ಪುರೋಹಿತರಾದ ಸೀತಾರಾಮ ಶರ್ಮ, ಶ್ರೀರಾಮ ಶರ್ಮ ಹಾಗೂ ಲಕ್ಷ್ಮೀಶ ತಂತ್ರಿ ಅವರು ನೆರವೇರಿಸಲಿದ್ದಾರೆ.

Continue Reading

ದೇಶ

New Parliament Building: ರಾಜಸ್ಥಾನದ ಶಿಲೆ, ಮಹಾರಾಷ್ಟ್ರದ ತೇಗದ ಮರ; ವೈವಿಧ್ಯತೆಯಲ್ಲಿ ಏಕತೆಯ ಸಂಕೇತ ಈ ಸಂಸತ್‌ ಭವನ

New Parliament Building: ನೂತನ ಸಂಸತ್‌ ಭವನದ ನಿರ್ಮಾಣಕ್ಕೆ ದೇಶದ ಹತ್ತಾರು ಭಾಗಗಳಿಂದ ಶಿಲೆ, ಮರದ ತುಂಡು, ಮಾರ್ಬಲ್‌ಗಳನ್ನು ಬಳಸಲಾಗಿದೆ. ಹಾಗಾಗಿ, ಇದು ವೈವಿಧ್ಯತೆಯಲ್ಲಿ ಏಕತೆ ಸಾರುವ ಸಂಕೇತವೆನಿಸಿದೆ.

VISTARANEWS.COM


on

Edited by

New Parliament Building Structure
Koo

ನವದೆಹಲಿ: ದೇಶದ ಶಕ್ತಿಕೇಂದ್ರವಾಗಲಿರುವ ನೂತನ ಸಂಸತ್‌ ಭವನವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (May 28) ಉದ್ಘಾಟನೆ ನೆರವೇರಿಸಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಉತ್ತಮ ಆಸನ ವ್ಯವಸ್ಥೆ ಸೇರಿ ಸಕಲ ಸೌಕರ್ಯಗಳಿರುವ ನೂತನ ಸಂಸತ್‌ ಭವನದ ನಿರ್ಮಾಣಕ್ಕೆ ದೇಶದ ಹತ್ತಾರು ಭಾಗಗಳಿಂದ ಕಲ್ಲು, ಮಾರ್ಬಲ್‌ ಸೇರಿ ಹಲವು ವಸ್ತುಗಳನ್ನು ಬಳಸಲಾಗಿದೆ. ದೇಶದ ಮೂರ್ತರೂಪವಾಗಿ ಸಂಸತ್‌ ಭವನ ತಲೆ ಎತ್ತಿದ್ದು, ಇದಕ್ಕಾಗಿ ದೇಶದ ಯಾವ ಭಾಗದಿಂದ ಯಾವ ವಸ್ತುವನ್ನು ಬಳಸಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ.

ಸಂಸತ್‌ ಭವನಕ್ಕೆ ಯಾವ ಭಾಗದಿಂದ ಯಾವ ವಸ್ತು ಬಳಕೆ?

  1. ರಾಜಸ್ಥಾನದ ಸರ್ಮಥುರದಿಂದ ಕೆಂಪು ಹಾಗೂ ಬಿಳಿಯ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ನೂತನ ಸಂಸತ್‌ ಭವನ ನಿರ್ಮಿಸಲಾಗಿದೆ. ದೆಹಲಿಯಲ್ಲಿ ಕೆಂಪುಕೋಟೆ ಹಾಗೂ ಹುಮಾಯುನ್‌ ಸಮಾಧಿಯನ್ನು ಇದೇ ಶಿಲೆಗಳಿಂದ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ.
  2. ನೂತನ ಸಂಸತ್‌ ಭವನದ ನಿರ್ಮಾಣದ ವೇಳೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಹೆಚ್ಚಾಗಿ ಸಿಗುವ ತೇಗದ ಮರದ ತುಂಡುಗಳನ್ನು ಬಳಸಲಾಗಿವೆ. ಇವು ಕಟ್ಟಡದ ಅಂದ ಹೆಚ್ಚಿಸುವ ಜತೆಗೆ ದೀರ್ಘ ಬಾಳಿಕೆಗೆ ಹೆಸರಾಗಿವೆ.
  3. ಸಂಸತ್‌ ಭವನದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ರಾಜಸ್ಥಾನದ ಅಜ್ಮೇರ್‌ ಬಳಿಯ ಲಾಖದಿಂದ ಕೇಶರಿಯಾ ಹಸಿರು ಶಿಲೆ, ಕೆಂಪು ಗ್ರಾನೈಟ್‌ ಹಾಗೂ ಅಂಬಾಜಿಯಿಂದ ಬಿಳಿ ಅಮೃತಶಿಲೆಗಳನ್ನು ಬಳಸಲಾಗಿದೆ.
  4. ಸಂಸತ್‌ ಭವನದ ಒಳಗಡೆಯ ಪೀಠೋಪಕರಣಗಳನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಕೆತ್ತಲಾಗಿದೆ. ಇದರಿಂದ ಸಂಸತ್‌ ಭವನದ ಆಕರ್ಷಣೆ ಹೆಚ್ಚಾಗಿದೆ.
  5. ಲೋಕಸಭೆ ಹಾಗೂ ರಾಜ್ಯಸಭೆಯ ಸೀಲಿಂಗ್‌ಗಳಿಗೆ ಕೇಂದ್ರಾಡಳಿತ ಪ್ರದೇಶವಾದ ದಮನ್‌ ಮತ್ತು ದಿಯುನ ಉಕ್ಕಿನ ಉಪಕರಣಗಳನ್ನು ಬಳಸಲಾಗಿದೆ.
  6. ಕಟ್ಟಡದ ಅಂದವನ್ನು ಹೆಚ್ಚಿಸುವ, ಜಾಲಿ ಎಂದೇ ಖ್ಯಾತಿಯಾದ ಕಲ್ಲುಗಳನ್ನು ರಾಜಸ್ಥಾನದ ರಾಜನಗರ ಹಾಗೂ ಉತ್ತರ ಪ್ರದೇಶದ ನೊಯ್ಡಾದಿಂದ ತರಿಸಿ, ಬಳಸಲಾಗಿದೆ.
  7. ಲೋಕಸಭೆ ಹಾಗೂ ರಾಜ್ಯಸಭೆಯ ಗೋಡೆಗಳ ಮೇಲೆ ಅಶೋಕ ಚಕ್ರಗಳನ್ನು ಸುಂದರವಾಗಿ ಕೆತ್ತಿಸಲು ಮಹಾರಾಷ್ಟ್ರದ ಔರಂಗಾಬಾದ್‌ ಹಾಗೂ ರಾಜಸ್ಥಾನದ ಜೈಪುರದಿಂದ ಶಿಲೆಗಳನ್ನು ತರಿಸಲಾಗಿದೆ.
  8. ರಾಜಸ್ಥಾನದ ಅಬುರೋಡ್‌ (ನಗರ) ಹಾಗೂ ಉದಯಪುರದ ಕೌಶಲಯುತ ಶಿಲ್ಪಿಗಳು ರಾಜಸ್ಥಾನದ ಕೊಟ್ಪುಟಲಿ ಶಿಲೆಗಳನ್ನು ಸುಂದರವಾಗಿ ಕೆತ್ತಿದ್ದಾರೆ.
  9. ನಿರ್ಮಾಣ ಚಟುವಟಿಕೆಗಳಿಗಾಗಿ ಹರಿಯಾಣದ ಚರ್ಖಿ ದಾದ್ರಿಯಿಂದ ಎಂ-ಸ್ಯಾಂಡ್‌ಅನ್ನು ಬಳಸಲಾಗಿದೆ. ಎಂ-ಸ್ಯಾಂಡ್‌ಗೆ ಗುಣಮಟ್ಟದ ಕಾಂಕ್ರೀಟ್‌ಅನ್ನು ಮಿಕ್ಸ್‌ ಮಾಡಲಾಗಿದೆ.
  10. ಪರಿಸರ ಸ್ನೇಹಿ ಎನಿಸುವ ಇಟ್ಟಿಗೆಗಳನ್ನು ಹರಿಯಾಣ ಹಾಗೂ ಉತ್ತರ ಪ್ರದೇಶದಿಂದ ತರಿಸಿ ಬಳಸಲಾಗಿದೆ. ವಾಸ್ತುಶಿಲ್ಪಕ್ಕಾಗಿ ಗುಜರಾತ್‌ನ ಅಹ್ಮದಾಬಾದ್‌ನಿಂದ ಹಿತ್ತಾಳೆ ಉತ್ಪನ್ನಗಳನ್ನು ತರಿಸಲಾಗಿದೆ.

ಇದನ್ನೂ ಓದಿ: New Parliament Building: ನೂತನ ಸಂಸತ್‌ ಭವನದ ವೈಭವ ಹೇಗಿದೆ? ಇಲ್ಲಿದೆ ಅದ್ಭುತ ವಿಡಿಯೊ!

Continue Reading

ದೇಶ

New Parliament Building: ಮೋದಿಗೆ ಸೆಂಗೋಲ್‌ ಹಸ್ತಾಂತರಿಸಿದ ಸ್ವಾಮೀಜಿಗಳು; ಭಾನುವಾರ ಸಂಸತ್‌ನಲ್ಲಿ ಪ್ರತಿಷ್ಠಾಪನೆ

New Parliament Building: ತಮಿಳುನಾಡಿನ ಅಧೀನಾಮ್‌ ಮಠದ ಸ್ವಾಮೀಜಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಂಗೋಲ್‌ ಅಥವಾ ರಾಜದಂಡವನ್ನು ನೀಡಿದರು. ಭಾನುವಾರ ಮಧ್ಯಾಹ್ನ ಮೋದಿ ಅವರು ನೂತನ ಸಂಸತ್‌ ಭವನವನ್ನು ಉದ್ಘಾಟಿಸಲಿದ್ದಾರೆ.

VISTARANEWS.COM


on

Edited by

Adheenams handover the Sengol to Narendra Modi
Koo

ನವದೆಹಲಿ: ನೂತನ ಸಂಸತ್‌ ಭವನದ ಉದ್ಘಾಟನೆಗೆ (New Parliament Building) ಕ್ಷಣಗಣನೆ ಆರಂಭವಾಗಿದೆ. ಸಂಸದರು, ನಾಯಕರು, ಪ್ರತಿಪಕ್ಷಗಳ ನಾಯಕರು, ಕೇಂದ್ರ ಸಚಿವರು ಸೇರಿ ನೂರಾರು ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನವನ್ನು ಉದ್ಘಾಟಿಸಲಿದ್ದಾರೆ. ಇನ್ನು, ಸಂಸತ್‌ ಭವನದ ಉದ್ಘಾಟನೆ ಹಿನ್ನೆಲೆಯಲ್ಲಿ ಶನಿವಾರ ಸಂಜೆಯೇ ತಮಿಳುನಾಡಿನ ಶೈವ ಪರಂಪರೆಯ ಅಧೀನಾಮ್‌ ಮಠದ ಸ್ವಾಮೀಜಿಗಳು ನರೇಂದ್ರ ಮೋದಿ ಅವರಿಗೆ ಶಾಸ್ತ್ರೋಕ್ತವಾಗಿ ಸೆಂಗೋಲ್‌ ಅಥವಾ ರಾಜದಂಡವನ್ನು ಹಸ್ತಾಂತರಿಸಿದರು.

ನೂತನ ಸಂಸತ್‌ ಭವನದಲ್ಲಿರುವ ಸ್ಪೀಕರ್‌ ಪೀಠದ ಬಳಿ ಚೋಳರ ಕಾಲದ ಸೆಂಗೋಲ್ಅನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದುವರೆಗೆ ಮ್ಯೂಸಿಯಂನಲ್ಲಿದ್ದ ಸೆಂಗೋಲ್‌ಅನ್ನು ನೂತನ ಸಂಸತ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಹಾಗಾಗಿ, ತಮಿಳುನಾಡಿನ ಧರ್ಮಾಪುರಂ ಹಾಗೂ ತಿರುವಾವದುತುರೈಂನ ಶೈವ ಪರಂಪರೆಯ ಅಧೀನಾಮ್‌ ಮಠದ ಸ್ವಾಮೀಜಿಗಳು ನರೇಂದ್ರ ಮೋದಿ ಅವರ ನಿವಾಸದಲ್ಲಿ ಸೆಂಗೋಲ್‌ಅನ್ನು ಅವರಿಗೆ ಹಸ್ತಾಂತರಿಸಿದ್ದಾರೆ.

ಮೋದಿಗೆ ಸೆಂಗೋಲ್‌ ಹಸ್ತಾಂತರ

ಮೋದಿ ಅವರ ಹಣೆಗೆ ತಿಲಕ ಇಟ್ಟು, ಹಾರ ಹಾಕಿ, ಶಾಲು ಹೊದಿಸಿದ ಸ್ವಾಮೀಜಿಗಳು ಬಳಿಕ ಮೋದಿ ಅವರಿಗೆ ಸೆಂಗೋಲ್‌ಅನ್ನು ನೀಡಿದರು. ಮೋದಿ ಅವರು ರಾಜದಂಡಕ್ಕೆ ನಮಸ್ಕಾರ ಮಾಡಿದರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ: New Parliament Building : ನೂತನ ಸಂಸತ್‌ ಭವನ ಉದ್ಘಾಟನೆಗೆ ಶೃಂಗೇರಿ ಪುರೋಹಿತರು

ವಿಶೇಷವೆಂದರೆ ಸಂಸತ್‌ ಭವನದಲ್ಲಿ ನಡೆಯಲಿರುವ ಉದ್ಘಾಟನೆ ಸಂಬಂಧಿತ ಪೂಜಾ ಕೈಂಕರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪುರೋಹಿತರಿಗೆ ನೀಡಲಾಗಿದೆ. ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕಾಗಿ ಶೃಂಗೇರಿಯ ಪುರೋಹಿತರ ತಂಡ ಆಗಲೇ ದಿಲ್ಲಿ ತಲುಪಿಸಿದ್ದು ಶನಿವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವನವನ್ನು ಉದ್ಘಾಟಿಸಲಿದ್ದು, ಅದಕ್ಕೆ ಸಂಬಂಧಿಸಿದ ಪೂಜೆಗಳನ್ನು ಶೃಂಗೇರಿಯ ವೇದಪಾರಂಗತ ಪುರೋಹಿತರಾದ ಸೀತಾರಾಮ ಶರ್ಮ, ಶ್ರೀರಾಮ ಶರ್ಮ ಹಾಗೂ ಲಕ್ಷ್ಮೀಶ ತಂತ್ರಿ ಅವರು ನೆರವೇರಿಸಲಿದ್ದಾರೆ.

Continue Reading
Advertisement
horoscope today
ಪ್ರಮುಖ ಸುದ್ದಿ39 mins ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Bengalurus CBSE class 12 topper SS Akanksh felicitated
ಕರ್ನಾಟಕ5 hours ago

CBSE Exam Results: ಸಿಬಿಎಸ್‌ಸಿಯಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯ ಅಮೋಘ ಸಾಧನೆ

Siddaramaiah
ಕರ್ನಾಟಕ6 hours ago

Karnataka Cabinet Expansion: ಸರ್ಕಾರ ಟೇಕಾಫ್‌ ಆದ ಬೆನ್ನಲ್ಲೇ ಅಸಮಾಧಾನದ ಹೊಗೆ; ಖಾತೆ ಬದಲಿಸಿದ ಸಿದ್ದು

Government employees with CM Siddaramaiah
ಕರ್ನಾಟಕ6 hours ago

DA Hike: ಶೇ.4 ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ; ಸಿಎಂ ಸಿದ್ದರಾಮಯ್ಯಗೆ ಸರ್ಕಾರಿ ನೌಕರರ ಅಭಿನಂದನೆ

MLA N Ravikumar
ಕರ್ನಾಟಕ6 hours ago

New Parliament Building: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ನಾಚಿಕೆಗೇಡಿನ ಸಂಗತಿ: ಎನ್. ರವಿಕುಮಾರ್‌

Nissan Magnite Geza Special Edition
ಆಟೋಮೊಬೈಲ್6 hours ago

Nissan Magnite : ನಿಸ್ಸಾನ್​ ಮ್ಯಾಗ್ನೈಟ್ ಗೆಜಾ ಬೆಲೆ 7.39 ಲಕ್ಷ ರೂ.ಗಳಿಂದ ಆರಂಭ

vistara kathaspardhe prize distribution1
ಕರ್ನಾಟಕ6 hours ago

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ‌ ಚಂದ್ರಶೇಖರ್

BCCI MEETING
ಕ್ರಿಕೆಟ್6 hours ago

World Cup 2023 : ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ

Narendra Modi Speech At NITI Aayog Meeting
ದೇಶ6 hours ago

NITI Aayog Meeting: ವಿಕಸಿತ ಭಾರತದ ಕನಸು ಬಿತ್ತಿದ ಮೋದಿ; 11 ಸಿಎಂಗಳು ಗೈರಾದರೂ ಪ್ರಧಾನಿ ಅಭಿವೃದ್ಧಿ ಮಂತ್ರ

New parliament Building
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ನೂತನ ಸಂಸತ್ ಕಟ್ಟಡ ಪ್ರಜಾತಂತ್ರವನ್ನು ಮತ್ತಷ್ಟು ಮೆರೆಸಲಿ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

horoscope today
ಪ್ರಮುಖ ಸುದ್ದಿ39 mins ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Laxmi Hebbalkar oath taking as a minister
ಕರ್ನಾಟಕ12 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ1 day ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ4 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

ಟ್ರೆಂಡಿಂಗ್‌

error: Content is protected !!