Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕವಾಗಿದ್ದ ಟೈಗರ್ ಹಿಲ್; 19 ವರ್ಷದ ಯೋಧನ ರೋಚಕ ಸಾಹಸ! - Vistara News

ದೇಶ

Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕವಾಗಿದ್ದ ಟೈಗರ್ ಹಿಲ್; 19 ವರ್ಷದ ಯೋಧನ ರೋಚಕ ಸಾಹಸ!

ಕಾರ್ಗಿಲ್ ಯುದ್ಧದಲ್ಲಿ (kargil Vijay diwas 2024) ನಿರ್ಣಾಯಕ ಪ್ರದೇಶಗಳಲ್ಲಿ ಒಂದಾದ ಟೈಗರ್ ಹಿಲ್ ಅನ್ನು ಸಾಕಷ್ಟು ಹೋರಾಟದ ಬಳಿಕ ಭಾರತೀಯ ಸೇನೆ ಮರಳಿ ವಶಕ್ಕೆ ಪಡೆದುಕೊಂಡಿತು. ಈ ಹೋರಾಟದಲ್ಲಿ ಹಲವಾರು ಸೈನಿಕರು ಸಾವನ್ನಪ್ಪಿದ್ದರು. ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್ ಪ್ರಮುಖ ಭಾಗವಾಗಲು ಹಲವು ಕಾರಣಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Kargil Vijay Diwas 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾರ್ಗಿಲ್ ಯುದ್ಧದಲ್ಲಿ (kargil war) ಹಲವು ನಿರ್ಣಾಯಕ ಪ್ರದೇಶಗಳಲ್ಲಿ, ನೆಲೆಗಳಲ್ಲಿ ಭಾರತೀಯ ಸೇನೆ (Indian army) ಪಾಕಿಸ್ತಾನದ (pakistan army) ವಿರುದ್ಧ ಗೆಲುವು ಸಾಧಿಸಿತ್ತು. ಅಂತಹ ಒಂದು ಮಹತ್ವದ ಪ್ರದೇಶ ಟೈಗರ್ ಹಿಲ್ (tiger hill war) . ಇದು ಭಾರತದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಆಚರಿಸಲಾಗುತ್ತದೆ.

ಟೈಗರ್ ಹಿಲ್ ಯಾಕೆ ನಿರ್ಣಾಯಕ?

ಟೈಗರ್ ಹಿಲ್ ಅಥವಾ ಪಾಯಿಂಟ್ 5062 ಕಾರ್ಗಿಲ್ ಯುದ್ಧದ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಸ್ಥಳವಾಗಿದೆ. ಟೈಗರ್ ಹಿಲ್ ಲಡಾಖ್‌ನ ದ್ರಾಸ್-ಕಾರ್ಗಿಲ್ ಪ್ರದೇಶದಲ್ಲಿನ ಒಂದು ಪರ್ವತವಾಗಿದೆ. ಇದು ಈ ಪ್ರದೇಶದ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ. 1999ರ ಭಾರತ- ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ಅತ್ಯಂತ ವಿಶಿಷ್ಟವಾದ ಯುದ್ಧ ವಲಯವಾಗಿತ್ತು.

Kargil Vijay Diwas 2024
Kargil Vijay Diwas 2024


ಟೈಗರ್ ಹಿಲ್‌ನ ಮಹತ್ವವೇನು?

ಟೈಗರ್ ಹಿಲ್ ಇಡೀ ಪ್ರದೇಶದಲ್ಲಿ ಅತಿ ಎತ್ತರದ ಬೆಟ್ಟವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 1ಡಿ ಆಗಿದ್ದು, ಶ್ರೀನಗರದಿಂದ ಕಾರ್ಗಿಲ್ ಅನ್ನು ಸಂಪರ್ಕಿಸುತ್ತದೆ. ಕಾರ್ಗಿಲ್ ವಲಯದ ಪ್ರಮುಖ ಸರಬರಾಜು ಮಾರ್ಗವಾಗಿ ಗುರುತಿಸಿಕೊಂಡಿದೆ. ಟೈಗರ್ ಹಿಲ್‌ನ ತುದಿಯಲ್ಲಿರುವ ಯಾವುದೇ ಶತ್ರು ಭಾರತೀಯ ಸೇನೆಯ ಚಲನವಲನ ಮತ್ತು ಶಸ್ತ್ರಾಸ್ತ್ರ ಪೂರೈಕೆಯ ಮೇಲೆ ನೇರ ದೃಷ್ಟಿಯನ್ನು ಇಡಲು ಸಾಧ್ಯವಾಗುತ್ತದೆ.

ಯೋಗೇಂದ್ರ ಯಾದವ್

ಟೈಗರ್ ಹಿಲ್ ವಶಕ್ಕಾಗಿ ನಡೆದ ಹೋರಾಟ ಹೇಗಿತ್ತು?

ಪಾಕಿಸ್ತಾನಿ ಸೇನೆಯು ಜಮ್ಮು ಮತ್ತು ಕಾಶ್ಮೀರದ ಭಾರತದ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿತ್ತು. ಆಯಕಟ್ಟಿನ ಪ್ರದೇಶವಾದ ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡಿತ್ತು. ಎತ್ತರದ ಸ್ಥಳದಲ್ಲಿ ಪಾಕ್‌ ಸೈನಿಕರು ಬಂಕರ್‌ ಸ್ಥಾಪಿಸಿಕೊಂಡು ಬೀಡು ಬಿಟ್ಟಿದ್ದರು. ಅಲ್ಲಿಂದ ಅವರನ್ನು ಓಡಿಸುವುದು ಭಾರತೀಯ ಸೇನೆಗೆ ಭಾರಿ ಸವಾಲಾಗಿತ್ತು. ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ಗೆ ಈ ಪ್ರದೇಶವನ್ನು ಮರಳಿ ವಶ ಪಡಿಸಿಕೊಳ್ಳುವ ಟಾಸ್ಕ್‌ ನೀಡಲಾಯಿತು. ದೊಡ್ಡ ಹೋರಾಟ ನಡೆಸಿದ ಬಳಿಕವೂ ಮೊದಲ ಹಂತದಲ್ಲಿ ಸಿಖ್‌ ರೆಜಿಮೆಂಟ್‌ ವಿಫಲವಾಯಿತು. ಆದರೆ ಪಟ್ಟು ಬಿಡದ ಭಾರತೀಯ ಸೇನೆ ಭೂಪ್ರದೇಶವನ್ನು ಮರಳಿ ಪಡೆಯಲು ಸತತ ಪ್ರಯತ್ನಗಳನ್ನು ನಡೆಸಿತು.

ಕಾರ್ಗಿಲ್- ದ್ರಾಸ್ ಪ್ರಾಂತ್ಯದಲ್ಲಿ ಟೈಗರ್ ಹಿಲ್ ಪ್ರಮುಖವಾಗಿತ್ತು. ಇದನ್ನು ಏರಿ ಕುಳಿತಿದ್ದ ಪಾಕಿಗಳನ್ನು ಹಿಮ್ಮೆಟ್ಟಿಸದೆ ವಿಜಯ ಪೂರ್ಣವಾಗಲು ಸಾಧ್ಯವಿರಲಿಲ್ಲ. ಇದು ಭಾರತದ ಕಡೆಯಿಂದ ಏರಲು ತುಂಬಾ ಕಠಿಣವಾದ ಮೈ ಹೊಂದಿದೆ. ಎತ್ತರದಲ್ಲಿ ಪಾಕ್ ಸೈನಿಕರು ಕುಳಿತಿದ್ದು, ಕೆಳಗಿನಿಂದ ಬರುತ್ತಿದ್ದ ಭಾರತೀಯ ಸೈನಿಕರನ್ನು ಸುಲಭವಾಗಿ ಸಾಯಿಸುತ್ತಿದ್ದರು. ಇಲ್ಲಿಂದ ಅವರಿಗೆ ಭಾರತದ ಹೆದ್ದಾರಿ ಎನ್‌ಎಚ್1ಎ ಕಾಣಿಸುತ್ತಿತ್ತು. ಅಲ್ಲಿಂದಲೇ ಹೆದ್ದಾರಿಯ ಮೇಲೆ ಬಾಂಬ್ ಸುರಿಮಳೆಯನ್ನೂ ಸುರಿಸಿ, ಭಾರತೀಯ ಸೇನೆಯ ವಾಹನಗಳು ಓಡಾಡಲಾಗದಂತೆ ಮಾಡಿಬಿಟ್ಟಿದ್ದರು. ಇದನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು. ಜುಲೈ 1ರ ಹೊತ್ತಿಗೆ ಟೈಗರ್ ಹಿಲ್‌ನ ಅಕ್ಕಪಕ್ಕದ ಬೆಟ್ಟಗಳನ್ನು 8 ಸಿಖ್ ರೆಜಿಮೆಂಟ್ ವಶಪಡಿಸಿಕೊಂಡಿತ್ತು. ಟೈಗರ್ ಹಿಲ್ ಅನ್ನು ಕೆಳಗಿನಿಂದ ಏರಲು 18 ಗ್ರೆನೆಡಿಯರ‍್ಸ್ ಪಡೆ ಸಜ್ಜಾಯಿತು. ಡಿ ಕಂಪನಿ ಮತ್ತು ಘಾತಕ್ ಪ್ಲಟೂನ್‌ಗಳ ಕ್ಯಾಪ್ಟನ್ ಸಚಿನ್ ನಿಂಬಾಳ್ಕರ್ ಮತ್ತು ಲೆ.ಬಲವಾನ್ ಸಿಂಗ್ ಅವರು ವೈರಿಗಳಿಗೆ ಆಶ್ಚರ್ಯವಾಗುವಂತೆ, ಕಡಿದಾದ ಶಿಖರದ ಕಡೆಯಿಂದ ಏರಿ, ಗುಂಡಿನ ದಾಳಿ ಆರಂಭಿಸಿದರು.

ಇನ್ನೊಂದು ಕಡೆಯಿಂದ 8 ಸಿಖ್ ರೆಜಿಮೆಂಟ್ ಗುಂಡಿನ ದಾಳಿ ನಡೆಸಿತು. ಬೆಟ್ಟದ ಕಡಿದಾದ ಮೈಯಿಂದ ಹವಿಲ್ದಾರ್ ಮದನ್‌ಲಾಲ್ ಎಂಬ ಧೀರಯೋಧ ತನ್ನ ಪರ್ವತಾರೋಹಿ ಕೌಶಲ್ಯವನ್ನೆಲ್ಲ ಬಳಸಿ ಕಣ್ಣುಕುಕ್ಕುವ ಕಗ್ಗತ್ತಲಿನಲ್ಲಿ ರಾತ್ರಿಯಿಡೀ ಬೆಟ್ಟವೇರಿದ. ಮುಂಜಾನೆ ಶತ್ರುಗಳ ಮೇಲೆ ಇದಕ್ಕಿದ್ದಂತೆ ಎರಗಿದ. ದಿಕ್ಕು ತೋಚದಂತಾದ ವೈರಿಗಳು ಭಯಭೀತರಾಗಿ ಕಾಲಿಗೆ ಬುದ್ಧಿ ಹೇಳಿದರು; ಇಲ್ಲವೇ ಭಾರತೀಯ ಸೈನಿಕರ ಕೈಯಲ್ಲಿ ಹತರಾದರು. ಈ ಯುದ್ಧದಲ್ಲಿ ಗಾಯಗೊಂಡ ಮದನ್‌ಲಾಲ್ ಹುತಾತ್ಮನಾದ. ಯೋಧ ಯೋಗೇಂದ್ರ ಯಾದವ್ ಏಕಾಂಗಿಯಾಗಿ ಹೋರಾಡುತ್ತಾ ಹತ್ತಾರು ಪಾಕ್‌ ಯೋಧರನ್ನು ಕೊಂದರು. 18 ಗ್ರೆನೆಡಿಯರ್ಸ್‌ ನಿರಂತರವಾಗಿ ಶೆಲ್ ದಾಳಿಗಳನ್ನು ನಡೆಸುತ್ತ ವೈರಿಗಳ ದಿಕ್ಕೆಡಿಸಿದರು. ಟೈಗರ್ ಹಿಲ್ ವಿಜಯ ನಿರ್ಣಾಯಕವಾಗಿತ್ತು. ಈ ಎತ್ತರದ ಬೆಟ್ಟವನ್ನು ಗೆದ್ದ ಬಳಿಕ ಉಳಿದ ಬೆಟ್ಟಗಳನ್ನು ಗೆಲ್ಲಲು ಸುಲಭವಾಯಿತು.

Kargil Vijay Diwas 2024
Kargil Vijay Diwas 2024


ಅಂತಿಮವಾಗಿ 1999ರ ಜುಲೈ 3ರಂದು ಸಂಜೆ 5.15ಕ್ಕೆ ಟೈಗರ್ ಹಿಲ್ ಅನ್ನು ಪುನಃ ವಶಪಡಿಸಿಕೊಳ್ಳುವ ಅಂತಿಮ ಪ್ರಯತ್ನ ಪ್ರಾರಂಭವಾಯಿತು. ಈ ಯುದ್ಧ ಹಲವಾರು ದಿನಗಳವರೆಗೆ ನಡೆಯಿತು. ಸಿಖ್ ರೆಜಿಮೆಂಟ್, ನಾಗಾ ರೆಜಿಮೆಂಟ್ ಗ್ರೆನೇಡಿಯರ್ಸ್ ಮತ್ತು ಘಾತಕ್ ಪ್ಲಟೂನ್‌ನೊಂದಿಗೆ ಒಟ್ಟುಗೂಡಿ ಇಡೀ ಬೆಟ್ಟವನ್ನು ಸುತ್ತುವರಿಯಲಾಯಿತು. ಬೆಟ್ಟದ 1000 ಅಡಿ ಎತ್ತರವನ್ನು ಏರಿ ಬೆಟ್ಟದ ತುದಿಯಲ್ಲಿದ್ದ ಶತ್ರುಗಳ ಮೇಲೆ ಭಾರೀ ಫಿರಂಗಿ ದಾಳಿ ನಡೆಸಲಾಯಿತು. ಹಲವಾರು ದಿನಗಳ ಹೋರಾಟದ ಬಳಿಕ ಭಾರತೀಯ ಸೇನೆಯು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿತು.

ಇದನ್ನೂ ಓದಿ : Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

ಕಾರ್ಗಿಲ್ ಯುದ್ಧದ ಸಮಯದಲ್ಲಿ ಟೈಗರ್ ಹಿಲ್ ಅನ್ನು ಪುನಃ ವಶಪಡಿಸಿಕೊಳ್ಳಲು ಪ್ರಮುಖ ಕಾರಣರಾದ ಗ್ರೇನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. 19ನೇ ವಯಸ್ಸಿನಲ್ಲಿ ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ ಯೋಗೇಂದ್ರ ಸಿಂಗ್. ಮಹತ್ವದ ಸಂಗತಿ ಎಂದರೆ ಯೋಗೇಂದ್ರ ಯಾದವ್‌ಗೆ ಈ ಹೋರಾಟದಲ್ಲಿ 18 ಗುಂಡುಗಳು ಬಿದ್ದಿದ್ದವು! ಅವರು ಬದುಕುಳಿದಿದ್ದೇ ಪವಾಡ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

NEET UG 2024: ಕೊನೆಗೂ ನೀಟ್‌ ಫೈನಲ್ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆ, ಇಲ್ಲಿದೆ ಪಟ್ಟಿ

NEET UG 2024: ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ಆರೋಪ ಕೇಳಿಬಂದ ಕಾರಣ ಸುಪ್ರೀಂ ಕೋರ್ಟ್‌ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೆ ಮರು ಪರೀಕ್ಷೆ ಬೇಡ ಎಂದಿದ್ದ ನ್ಯಾಯಾಲಯವು, ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಅದರಂತೆ, ಈಗ ಪರಿಷ್ಕೃತ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶ ಹೇಗೆ ನೋಡುವುದು ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

NEET UG 2024
Koo

ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court) ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಶುಕ್ರವಾರ (ಜುಲೈ 26) ನೀಟ್‌ ಯುಜಿ 2024 (NEET UG 2024) ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಕೊನೆಗೂ ಪ್ರಕಟಿಸಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಮೇ 5ರಂದು ನಡೆದಿದ್ದ ನೀಟ್‌ ಯುಜಿ ಪರೀಕ್ಷೆಯ ಫಲಿತಾಂಶವು ಜೂನ್‌ 4ರಂದು ಪ್ರಕಟವಾಗಿತ್ತು. ಆದರೆ, ಇದಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ಆರೋಪ ಕೇಳಿಬಂದ ಕಾರಣ ಸುಪ್ರೀಂ ಕೋರ್ಟ್‌ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೆ ಮರು ಪರೀಕ್ಷೆ ಬೇಡ ಎಂದಿದ್ದ ನ್ಯಾಯಾಲಯವು, ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಅದರಂತೆ, ಈಗ ಪರಿಷ್ಕೃತ ಫಲಿತಾಂಶ ಪ್ರಕಟವಾಗಿದೆ. ನೀಟ್‌ ಕೌನ್ಸೆಲಿಂಗ್‌ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಪರಿಷ್ಕೃತ ಫಲಿತಾಂಶದ ಬಳಿಕ ದೇಶದ ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ. ಜೂನ್‌ 4ರಂದು ಪ್ರಕಟವಾದ ಫಲಿತಾಂಶದಲ್ಲಿ 67 ಮಂದಿ ಟಾಪ್‌ ಎನಿಸಿದ್ದರು. ಮೃದುಲ್‌ ಮಾನ್ಯ ಆನಂದ್‌, ಆಯುಷ್‌ ನೌಗ್ರೈಯಾ, ಮಜೀನ್‌ ಮಂಜೂರ್‌, ಪ್ರಚಿತಾ, ಸೌರವ್‌, ದಿವ್ಯಾಂಶ್‌, ಗನ್ಮಯ್‌ ಗಾರ್ಗ್‌, ಅರ್ಘ್ಯದೀಪ್‌ ದತ್ತ, ಶುಭಂ ಸೇನ್‌ಗುಪ್ತಾ, ಆರ್ಯನ್‌ ಯಾದವ್‌, ಪಾಲಾಂಶ ಅಗರ್ವಾಲ್‌, ರಜನೀಶ್‌ ಪಿ., ಶ್ರೀನಂದ್‌ ಶಮೀಲ್, ಮಾನೆ ನೇಹಾ ಕುಲದೀಪ್‌, ತೈಜಸ್‌ ಸಿಂಗ್‌ ಹಾಗೂ ದೇವೇಶ್‌ ಜೋಶಿ ಅವರು ಈ ಬಾರಿ ಟಾಪ್‌ ಬಂದಿದ್ದಾರೆ.

ನೀಟ್‌ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ

  • ನೀಟ್‌ ಅಧಿಕೃತ ವೆಬ್‌ಸೈಟ್‌ exams.nta.ac.in. ಗೆ ಭೇಟಿ ನೀಡಿ
  • NEET UG 2024 revised result ಎಂಬ ನೋಟಿಫಿಕೇಶನ್‌ ಮೇಲೆ ಕ್ಲಿಕ್‌ ಮಾಡಿ
  • ಇದಾದ ಬಳಿಕ ಹೊಸ ವಿಂಡೋ ಓಪನ್‌ ಆಗಲಿದ್ದು, ಲಾಗಿನ್‌ ಮಾಹಿತಿ ಸೇರಿ ಹಲವು ಮಾಹಿತಿ ಒದಗಿಸಿ
  • ಆಗ ನಿಮ್ಮ ಸ್ಕ್ರೀನ್‌ ಮೇಲೆ ನೀಟ್‌ ಯುಜಿ ಫಲಿತಾಂಶ ಗೋಚರವಾಗಲಿದೆ
  • ಭವಿಷ್ಯದ ರೆಫರೆನ್ಸ್‌ಗಳಿಗಾಗಿ ನೀಟ್‌ ಪರೀಕ್ಷೆಯ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಿ

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Assembly session: ನೀಟ್ ಪರೀಕ್ಷೆ ರದ್ದು, ಒನ್ ನೇಷನ್-ಒನ್ ಎಲೆಕ್ಷನ್ ವಿರುದ್ಧ ನಿರ್ಣಯ; ಉಭಯ ಸದನಗಳಲ್ಲೂ ಅಂಗೀಕಾರ

Continue Reading

Latest

Viral News: ಊಟದ ಪಾರ್ಸೆಲ್‌‌ನಲ್ಲಿ ಉಪ್ಪಿನಕಾಯಿ ಹಾಕಲು ಮರೆತ ಹೋಟೆಲ್‌‌; 35,000 ರೂ. ದಂಡ ಹಾಕಿದ ಕೋರ್ಟ್‌!

Viral News: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿಯ ಆರೋಗಸ್ವಾಮಿ ಎಂಬ ವ್ಯಕ್ತಿ ತನ್ನ ಸಂಬಂಧಿಯ ಪುಣ್ಯತಿಥಿಯಂದು ವೃದ್ಧಾಶ್ರಮಕ್ಕೆ ನೀಡಲು ಆಹಾರ ಪ್ಯಾಕೆಟ್‌ಗಳನ್ನು ಪಾರ್ಸೆಲ್‌ಗಳಾಗಿ ಖರೀದಿಸಿದ್ದರು. ಇದಕ್ಕಾಗಿ ಅವರು ವಿಲ್ಲುಪುರಂನ ಬಾಲಮುರುಗನ್ ರೆಸ್ಟೋರೆಂಟ್‌ಗೆ ಹೋಗಿ 25 ಊಟದ ಪ್ಯಾಕ್‌ಗಳನ್ನು ಆರ್ಡರ್ ಮಾಡಿದ್ದರು. ಆದರೆ ವಿಲ್ಲುಪುರಂ ಹೋಟೆಲ್ ನೀಡಿದ ಊಟದಲ್ಲಿ ಉಪ್ಪಿನಕಾಯಿ ಇರಲಿಲ್ಲ. ಹಾಗಾಗಿ ಆರೋಗ್ಯಸ್ವಾಮಿ ಗ್ರಾಹಕರ ಕೋರ್ಟ್‌ ಮೊರೆ ಹೋಗಿದ್ದರು.

VISTARANEWS.COM


on

Viral News
Koo

ವಿಲ್ಲುಪುರಂ: ಬಹಳಷ್ಟು ಜನ ಈಗ ಹೋಟೆಲ್‍ಗಳಿಂದ ಊಟದ ಪಾರ್ಸೆಲ್‍ಗಳನ್ನು ಖರೀದಿಸುತ್ತಾರೆ. ಆದರೆ ಅವರಲ್ಲಿ ಎಲ್ಲಾ ಪಲ್ಯಗಳನ್ನು ಸೇರಿಸಲಾಗಿದೆಯೇ ಎಂದು ಕೆಲವೇ ಜನ ಮಾತ್ರ ಪರಿಶೀಲಿಸುತ್ತಾರೆ. ಒಂದು ವೇಳೆ ಆ ಊಟ ಚೆನ್ನಾಗಿಲ್ಲದಿದ್ದರೆ ಅಥವಾ ಅದರಲ್ಲಿ ಯಾವುದಾದರೂ ಪದಾರ್ಥವನ್ನು ಸೇರಿಸಿಲ್ಲವಾದರೆ ಅದಕ್ಕೆ ಹೋಟೆಲ್ ಕೆಲಸಗಾರರನ್ನು ಅಥವಾ ಮಾಲೀಕರನ್ನು ಬೈಯುತ್ತಾರೆ. ಆದರೆ ಖರೀದಿಸಿದ ಊಟದ ಪಾರ್ಸೆಲ್‍ನಲ್ಲಿ ಉಪ್ಪಿನಕಾಯಿ ಹಾಕದ ಕಾರಣ ಹೋಟೆಲ್ ಮಾಲೀಕರು ಗ್ರಾಹಕರಿಗೆ 35,000 ರೂ.ಗಳ ದಂಡವನ್ನು ಪಾವತಿಸಬೇಕಾದ ಘಟನೆ ಮಾತ್ರ ವಿರಳ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಲುದರೆಡ್ಡಿಯ ಆರೋಗಸ್ವಾಮಿ ಎಂಬ ವ್ಯಕ್ತಿ ವಿಲ್ಲುಪುರಂ ಹೋಟೆಲ್ ನೀಡಿದ ಊಟದಲ್ಲಿ ಉಪ್ಪಿನಕಾಯಿ ಇಲ್ಲವೆಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆತನಿಗೆ 35,000 ರೂ. ದಂಡ ತೆರಬೇಕಾಗಿದೆ. ಈ ಘಟನೆ ನವೆಂಬರ್ 28, 2022ರಂದು ನಡೆದಿತ್ತು. ಆರೋಗಸ್ವಾಮಿ ತನ್ನ ಸಂಬಂಧಿಯ ಪುಣ್ಯತಿಥಿಯಂದು ವೃದ್ಧಾಶ್ರಮಕ್ಕೆ ನೀಡಲು ಆಹಾರ ಪ್ಯಾಕೆಟ್‍ಗಳನ್ನು ಪಾರ್ಸೆಲ್‍ಗಳಾಗಿ ಖರೀದಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ವಿಲ್ಲುಪುರಂನ ಬಾಲಮುರುಗನ್ ರೆಸ್ಟೋರೆಂಟ್‍ಗೆ ತೆರಳಿ ಊಟದ ದರ ವಿಚಾರಿಸಿದ್ದರು. ಹೋಟೆಲ್ ಮಾಲೀಕರು ಊಟಕ್ಕೆ 70 ರೂಪಾಯಿ, ಪ್ರತಿ ಪಾರ್ಸೆಲ್ ಊಟಕ್ಕೆ 80 ರೂಪಾಯಿ ಎಂದು ಮಾಹಿತಿ ನೀಡಿದ್ದರು. ಪಾರ್ಸೆಲ್‍ನಲ್ಲಿ 11 ರೀತಿಯ ಭಕ್ಷ್ಯಗಳು ಇರುತ್ತವೆ ಎಂದೂ ಅವರಿಗೆ ತಿಳಿಸಲಾಯಿತು.

ಅದರಂತೆ 25 ಊಟದ ಪ್ಯಾಕ್‍ಗಳನ್ನು ಆರ್ಡರ್ ಮಾಡಿದ್ದರು. 2000 ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದರು. ಅದರಂತೆ ಮರುದಿನ, ಪಾರ್ಸೆಲ್ ಅನ್ನು ಸಹ ತಲುಪಿಸಲಾಯಿತು. ಬಿಲ್ ಕೇಳಿದಾಗ, ಅಂಗಡಿಯವರು ಅದನ್ನು ಕಾಗದದಲ್ಲಿ ಬರೆದು ನೀಡಿದರು. ಆದರೆ ವೃದ್ಧಾಶ್ರಮದಲ್ಲಿ ಪಾರ್ಸೆಲ್‍ಗಳನ್ನು ತಲುಪಿಸುವಾಗ, ಊಟದಲ್ಲಿ ಉಪ್ಪಿನಕಾಯಿ ಇಲ್ಲ ಎಂದು ಅವರಿಗೆ ತಿಳಿಯಿತು. ಆರೋಗಸ್ವಾಮಿ ತಕ್ಷಣ ಹೋಟೆಲ್‍ಗೆ ಬಂದು ವಿಚಾರಿಸಿದರು.

ಉಪ್ಪಿನಕಾಯಿಯನ್ನು ಪಾರ್ಸೆಲ್‍ನಿಂದ ಕೈಬಿಡಲಾಗಿದೆ ಎನ್ನುವುದನ್ನು ಹೋಟೆಲ್ ಮಾಲೀಕರು ಒಪ್ಪಿಕೊಂಡರು. ಆಗ ಆರೋಗಸ್ವಾಮಿ 25 ಪ್ಯಾಕೆಟ್ ಉಪ್ಪಿನಕಾಯಿಯ ಬೆಲೆಯನ್ನು ಮರುಪಾವತಿಸಲು ಕೇಳಿದರು. ಆದರೆ ಹೋಟೆಲ್ ಮಾಲೀಕರು ಪಾವತಿಸಲು ನಿರಾಕರಿಸಿದರು. ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆರೋಗಸ್ವಾಮಿ ವಿಲ್ಲುಪುರಂ ಜಿಲ್ಲಾ ಗ್ರಾಹಕರ ಕುಂದುಕೊರತೆ ಸಮಿತಿಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಅಧ್ಯಕ್ಷ ಸತೀಶ್ ಕುಮಾರ್, ಸದಸ್ಯರಾದ ಮೀರಾ ಮೊಯಿಟೀನ್ ಮತ್ತು ಅಮಲಾ, ಪಾರ್ಸೆಲ್ ಆಗಿ ಖರೀದಿಸಿದ ಊಟದಲ್ಲಿ ಉಪ್ಪಿನಕಾಯಿ ಇಲ್ಲದಿರುವುದು ಹೋಟೆಲ್ ಸೇವೆಯಲ್ಲಾದ ಕೊರತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಅದಕ್ಕಾಗಿ ಪರಿಹಾರವಾಗಿ 30,000 ರೂ., ವ್ಯಾಜ್ಯ ವೆಚ್ಚಕ್ಕಾಗಿ 5,000 ರೂ., ಉಪ್ಪಿನಕಾಯಿಗೆ 25 ರೂ. ಪರಿಹಾರದ ಮೊತ್ತವನ್ನು ಪಾವತಿಸಲು ಹೋಟೆಲ್ ಮಾಲೀಕರಿಗೆ ಆದೇಶಿಸಿದ್ದಾರೆ. ಮತ್ತು ಅದನ್ನು ಪಾವತಿಸಲು 45 ದಿನಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: ಸಿಂಧೂರ ಹಚ್ಚುವಾಗ ಕುಸಿದುಬಿದ್ದ ವಧು; ಎದ್ದೂಬಿದ್ದು ಓಡಿದ ವರ!

ಇದನ್ನು ಪಾವತಿಸದಿದ್ದರೆ, ತಿಂಗಳಿಗೆ ಶೇಕಡಾ 9ರಷ್ಟು ಹೆಚ್ಚುವರಿ ಬಡ್ಡಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ಕುಂದುಕೊರತೆ ಸಮಿತಿ ಎಚ್ಚರಿಸಿದೆ. ಈ ಆರೋಗಸ್ವಾಮಿ ಅವರು ಗ್ರಾಹಕರ ಕಲ್ಯಾಣ ಸಂಘದ ರಾಜ್ಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

Continue Reading

ದೇಶ

Kargil Vijay Diwas 2024: ಹುತಾತ್ಮರಾಗುವ ಮುನ್ನ ಕಾರ್ಗಿಲ್‌ ಹೀರೊ ಕ್ಯಾ. ವಿಕ್ರಮ್‌ ಬಾತ್ರಾ ಆಡಿದ್ದ ಈ ಮಾತುಗಳು ಸ್ಫೂರ್ತಿದಾಯಕ!

ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರರು ತಮ್ಮ ಮಾತುಗಳಿಂದಲೇ ಇತರರರಿಗೆ ಪ್ರೇರಣೆ ನೀಡುತ್ತಿದ್ದರು. ಅವರ ಸ್ಫೂರ್ತಿದಾಯಕ ಮಾತುಗಳು ನಮ್ಮೊಳಗೂ ದೇಶ ಭಕ್ತಿ ಜಾಗೃತಿಯನ್ನು ಹೆಚ್ಚಿಸಬಹುದು. ಕಾರ್ಗಿಲ್ ವಿಜಯ್ ದಿವಸ್‌ನ (Kargil Vijay Diwas 2024) ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ದೇಶಭಕ್ತಿಯನ್ನು ನೆನಪಿಸುವ ಕೆಲವು ಸಾಲುಗಳು ಇಲ್ಲಿವೆ.

VISTARANEWS.COM


on

By

Kargil Vijay Diwas 2024
Koo

ಒಂದು ಹಂತದ ಯುದ್ಧ ಗೆದ್ದು ಮತ್ತೊಂದು ಹಂತದ ಯುದ್ಧಕ್ಕೆ ಹೋಗುವಾಗ ʼಯೇ ದಿಲ್ ಮಾಂಗೇ ಮೋರ್ʼ ಎಂದು ಡೈಲಾಗ್‌ ಹೊಡೆದಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ (Captain Vikram Batra) ಅವರ ನುಡಿಗಳು ಇಂದಿಗೂ ದೇಶ ಭಕ್ತರ ಮನದಲ್ಲಿ ಅನುರಣಿಸುತ್ತಿದೆ. ಕಾರ್ಗಿಲ್ ವಿಜಯ್ ದಿವಸ್‌ನ (Kargil Vijay Diwas 2024) ಈ ಸಂದರ್ಭದಲ್ಲಿ ಇಂತಹ ವೀರ ಘೋಷಗಳು (army leader) ಮತ್ತೆ ಮತ್ತೆ ನೆನಪಾಗುತ್ತವೆ.

ಯೇ ದಿಲ್ ಮಾಂಗೇ ಮೋರ್…ಎನ್ನುವುದು ಕೇವಲ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಆಡಿದ ಮಾತುಗಳು ಮಾತ್ರ ಆಗಿರಲಿಲ್ಲ. ಅದು ಎಲ್ಲ ಅಡೆತಡೆಗಳನ್ನು ಎದುರಿಸಿ ಪಾಕಿಸ್ತಾನದ ಸೇನೆಯ ವಿರುದ್ಧ ಜಯ ಗಳಿಸಲು ಅವರ ಅಚಲವಾದ ಇಚ್ಛೆಯನ್ನು ಬಿಂಬಿಸಿತ್ತು. ಇದು ಉಳಿದ ಸೈನಿಕರಿಗೆ ಸ್ಫೂರ್ತಿಯ ಸೆಲೆಯಾಯಿತು.

ಕ್ಯಾಪ್ಟನ್ ಬಾತ್ರಾ ಅವರ ಹೇಳಿಕೆಗಳು ಇಂದಿಗೂ ಅನೇಕ ಭಾರತೀಯರು ದೇಶಕ್ಕಾಗಿ ತಮ್ಮ ಶೌರ್ಯ, ಬದ್ಧತೆ ಮತ್ತು ಎಂದಿಗೂ ಬಿಟ್ಟುಕೊಡದ ಮನಸ್ಥಿತಿಯನ್ನು ತೋರಿಸಲು ಪ್ರೇರೇಪಿಸುತ್ತಿದೆ. ಕಾರ್ಗಿಲ್ ವಿಜಯ್ ದಿವಸ್‌ನ ಈ ಸಂದರ್ಭದಲ್ಲಿ ದೇಶ ಪ್ರೇಮ ನಮ್ಮಲ್ಲೂ ಜಾಗೃತಗೊಳಿಸುವ ಕೆಲವು ಪ್ರೇರಕ ಮಾತುಗಳು ಇಲ್ಲಿವೆ. ಇದನ್ನು ಪ್ರತಿಯೊಬ್ಬರೂ ಓದಲೇಬೇಕು.

Kargil Vijay Diwas 2024
Kargil Vijay Diwas 2024


ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಅಮರ ನುಡಿಗಳು

ಕಾರ್ಗಿಲ್ ಯುದ್ಧದ ಸನ್ನಿವೇಶದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಹೇಳಿರುವ ಸ್ಫೂರ್ತಿದಾಯಕ ಮಾತುಗಳು ಇಂತಿವೆ:

  • – ನಾನು ಖಂಡಿತ ಮರಳಿ ಬರುತ್ತೇನೆ. ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ. ಅಥವಾ ನಾನು ಅದರಲ್ಲಿ ಸುತ್ತಿಕೊಂಡು ಬರುತ್ತೇನೆ. ಆದರೆ ನಾನು ಹಿಂತಿರುಗುವುದು ಮಾತ್ರ ಖಚಿತ!
  • – ಯೇ ದಿಲ್‌ ಮಾಂಗೇ ಮೋರ್‌!
  • – ನಮ್ಮ ದೇಶದ ಧ್ವಜವನ್ನು ಕಾಪಾಡುವುದು ನಮಗೆ ಜೀವಕ್ಕಿಂತ ಹೆಚ್ಚು. ಸೈನಿಕರ ಕೊನೆಯ ಉಸಿರು ಇರುವವರೆಗೂ ಅದು ಹಾರುತ್ತದೆ. ನಾನು ನನ್ನ ಸಮವಸ್ತ್ರಕ್ಕೆ ಮಾತ್ರ ಅಂಟಿಕೊಂಡಿಲ್ಲ. ನನ್ನ ರಾಷ್ಟ್ರದ ಗೌರವಕ್ಕೂ ಅಂಟಿಕೊಂಡಿದ್ದೇನೆ.
  • – ನಾವು ಗೆಲ್ಲಲು ಹೋರಾಡುತ್ತೇವೆ. ಹೋರಾಡಿ ಗೆಲ್ಲುತ್ತೇವೆ. ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ.
  • – ಸ್ವಯಂಸೇವಕನ ಹೃದಯಕ್ಕಿಂತ ಬಲವಾದದ್ದು ಯಾವುದೂ ಇಲ್ಲ.
Kargil Vijay Diwas 2024
Kargil Vijay Diwas 2024


ಕಾರ್ಗಿಲ್‌ ಸಮರ ಸೇನಾನಿಗಳು ಹೇಳಿದ್ದ ಮಾತುಗಳಿವು:

ಶತ್ರುಗಳು ನಮ್ಮಿಂದ ಕೇವಲ 50 ಗಜಗಳಷ್ಟು ದೂರದಲ್ಲಿದ್ದಾರೆ. ಅವರು ಬೆಂಕಿ ಉಗುಳುತ್ತಿದ್ದಾರೆ. ಆದರೆ ಒಂದೊಂದು ಇಂಚೂ ಹಿಂತೆಗೆದುಕೊಳ್ಳದೆ ಬಿಡುವುದಿಲ್ಲ. ಕೊನೆಯವರೆಗೂ ಹೋರಾಡುತ್ತೇವೆ.
– ಮೇಜರ್ ಸೋಮನಾಥ ಶರ್ಮಾ

ಇದನ್ನೂ ಓದಿ: Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

ಶತ್ರುಗಳು ಎಷ್ಟೇ ಜೋರಾಗಿ ದಾಳಿ ಮಾಡಲಿ. ನಾನು ನನ್ನ ಟ್ಯಾಂಕ್ ಬಿಟ್ಟು ಕದಲುವುದಿಲ್ಲ. ನನ್ನ ಗನ್ ಇನ್ನೂ ಕೆಲಸ ಮಾಡುತ್ತಿದೆ. ಕಿಡಿಗೇಡಿಗಳನ್ನು ನಾನು ಬಲಿ ಪಡೆಯುತ್ತೇನೆ.

– ಲೆಫ್ಟಿನೆಂಟ್ ಅರುಣ್ ಖೇತರ್ ಪಾಲ್

ಏನೂ ಮಾಡದೇ ಬದುಕುವುದಕ್ಕಿಂತ ಏನಾದರೂ ಸಾಧಿಸಿ ಸಾಯುವುದೇ ಮೇಲು.

– ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ

Continue Reading

ದೇಶ

Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Narendra Modi: ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್‌ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಾಕಿಸ್ತಾನ ಸೈನಿಕರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಮಾರ್ಗದರ್ಶನ, ನೆರವು ನೀಡುತ್ತಿದೆ ಎಂಬ ಚಿತ್ರಗಳು ಲಭ್ಯವಾದ ಬೆನ್ನಲ್ಲೇ ಮೋದಿ ಎಚ್ಚರಿಕೆ ನೀಡಿದ್ದರು.

VISTARANEWS.COM


on

Narendra Modi
Koo

ನವದೆಹಲಿ: ಭಯೋತ್ಪಾದನೆಯನ್ನು ನಿಗ್ರಹಿಸುವ ಬದಲು, ಉಗ್ರರಿಗೆ ಆಶ್ರಯ ನೀಡದ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್‌ ವಿಜಯ ದಿವಸದಂದೇ (Kargil Vijay Diwas 2024) ಎಚ್ಚರಿಕೆ ನೀಡಿದ ಬೆನ್ನಲ್ಲೇ ನೆರೆ ರಾಷ್ಟ್ರವು ಥಂಡಾ ಹೊಡೆದಿದೆ. ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ ಬಳಿಕ ಪಾಕಿಸ್ತಾನ ಸೇನೆಯು ಗಲಿಬಿಲಿಗೊಂಡಿದ್ದು, ಗಡಿಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿದೆ.

ಹೌದು, ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್‌ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಾಕಿಸ್ತಾನ ಸೈನಿಕರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಮಾರ್ಗದರ್ಶನ, ನೆರವು ನೀಡುತ್ತಿದೆ ಎಂಬ ಚಿತ್ರಗಳು ಲಭ್ಯವಾದ ಬೆನ್ನಲ್ಲೇ ಮೋದಿ ಎಚ್ಚರಿಕೆ ನೀಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಪಾಕಿಸ್ತಾನ ಸೈನಿಕರು ಗಡಿಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೋದಿ ಎಚ್ಚರಿಕೆ ಏನಾಗಿತ್ತು?

ಕಾರ್ಗಿಲ್‌ ವಿಜಯ ದಿವಸ(Kargil Vijay Diwas 2024)ಕ್ಕೆ ಜುಲೈ 26ಕ್ಕೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ದಿ ಬಾರದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.

ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇನ್ನು ಇದೇ ವೇಳ ಅಗ್ನಿಪಥ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಭಾರತದ ವಿರುದ್ಧ ಪಾಕಿಸ್ತಾನವು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಅದರಲ್ಲೂ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಬಾಲಾಕೋಟ್‌ ದಾಳಿ ನಡೆಸಿದೆ. ಹಾಗೆಯೇ, ಪಾಕಿಸ್ತಾನವು ಉಗ್ರ ಪೋಷಣೆಯ ರಾಷ್ಟ್ರವಾಗಿದೆ ಎಂಬುದಾಗಿ ಜಾಗತಿಕ ವೇದಿಕೆಯಲ್ಲಿ ಭಾರತವು ಪ್ರತಿಪಾದಿಸಿದೆ.

ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್‌ ಯುದ್ಧಭೂಮಿಗೆ ಅಂದೇ ಕಾಲಿಟ್ಟಿದ್ರು ಮೋದಿ- ಹಳೆಯ ಫೊಟೋ ವೈರಲ್‌

Continue Reading
Advertisement
NEET UG 2024
ದೇಶ6 mins ago

NEET UG 2024: ಕೊನೆಗೂ ನೀಟ್‌ ಫೈನಲ್ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆ, ಇಲ್ಲಿದೆ ಪಟ್ಟಿ

Viral News
Latest11 mins ago

Viral News: ಊಟದ ಪಾರ್ಸೆಲ್‌‌ನಲ್ಲಿ ಉಪ್ಪಿನಕಾಯಿ ಹಾಕಲು ಮರೆತ ಹೋಟೆಲ್‌‌; 35,000 ರೂ. ದಂಡ ಹಾಕಿದ ಕೋರ್ಟ್‌!

B.S.Yediyurappa
ಕರ್ನಾಟಕ17 mins ago

B.S.Yediyurappa: ಯಡಿಯೂರಪ್ಪಗೆ ಮತ್ತೆ ಬಿಗ್‌ ರಿಲೀಫ್‌; ಪೋಕ್ಸೊ ಕೇಸ್‌ನಲ್ಲಿ ಬಂಧಿಸದಂತೆ ಹೈಕೋರ್ಟ್‌ ಸೂಚನೆ

On the occasion of Friendship Day Wonderla announced a buy one ticket get another ticket free offer
ಬೆಂಗಳೂರು22 mins ago

Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

Kargil Vijay Diwas Silver Jubilee Programme at ITI Central School Bengaluru
ಬೆಂಗಳೂರು24 mins ago

Kargil Vijay Diwas: ಬೆಂಗಳೂರಿನ ಐಟಿಐ ಸೆಂಟ್ರಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ

FDCI & ICW 2024
ಫ್ಯಾಷನ್25 mins ago

FDCI & ICW 2024: ಇಂಡಿಯಾ ಕೌಚರ್‌ ವೀಕ್‌ನ 2ನೇ ದಿನ ಹೆಜ್ಜೆ ಹಾಕಿದ ಜಾಕ್ವೆಲೀನ್‌ ಫರ್ನಾಂಡಿಸ್‌

karnataka Weather Forecast
ಮಳೆ29 mins ago

Karnataka Weather : ಧಾರಾಕಾರ ಮಳೆ ಹಿನ್ನೆಲೆ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ

Kargil Vijay Diwas 2024
ದೇಶ30 mins ago

Kargil Vijay Diwas 2024: ಹುತಾತ್ಮರಾಗುವ ಮುನ್ನ ಕಾರ್ಗಿಲ್‌ ಹೀರೊ ಕ್ಯಾ. ವಿಕ್ರಮ್‌ ಬಾತ್ರಾ ಆಡಿದ್ದ ಈ ಮಾತುಗಳು ಸ್ಫೂರ್ತಿದಾಯಕ!

Venkatesh Iyer
ಪ್ರಮುಖ ಸುದ್ದಿ32 mins ago

Venkatesh Iyer : ಟೀಮ್ ಇಂಡಿಯಾದಿಂದ ನಿರ್ಲಕ್ಷ್ಯ, ಹೊಸ ತಂಡ ಸೇರಿದ ವೆಂಕಟೇಶ್ ಅಯ್ಯರ್​

Narendra Modi
ದೇಶ45 mins ago

Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ1 hour ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ4 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ1 day ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್1 day ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ1 day ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ1 day ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌