Kashmir Children: ಸಂಘರ್ಷಪೀಡಿತ ವಲಯದ ಮಕ್ಕಳ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟ ವಿಶ್ವಸಂಸ್ಥೆ - Vistara News

ದೇಶ

Kashmir Children: ಸಂಘರ್ಷಪೀಡಿತ ವಲಯದ ಮಕ್ಕಳ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟ ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಈ ಕುರಿತು ಪ್ರಕಟಣೆ ನೀಡಿದ್ದಾರೆ. “ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು” ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ ಭಾರತವನ್ನು 2023ರಲ್ಲಿ ವರದಿಯಿಂದ ತೆಗೆದುಹಾಕಲಾಗಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

VISTARANEWS.COM


on

kashmir children
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸ ದಿಲ್ಲಿ: ಭಾರತದಲ್ಲಿ, ಮುಖ್ಯವಾಗಿ ಜಮ್ಮು- ಕಾಶ್ಮೀರದಲ್ಲಿ ಮಕ್ಕಳ ಸುರಕ್ಷತೆಯ ಸ್ಥಿತಿಗತಿ (kashmir children) ಉತ್ತಮವಾಗಿರುವ ಹಿನ್ನೆಲೆಯಲ್ಲಿ, ದೇಶದ ಹೆಸರನ್ನು ವಿಶ್ವಸಂಸ್ಥೆಯ ʼಮಕ್ಕಳು ಮತ್ತು ಸಶಸ್ತ್ರ ಸಂಘರ್ಷʼ (children and armed conflict) ಪಟ್ಟಿಯಿಂದ (UN Report) ಕೈಬಿಡಲಾಗಿದೆ. ಕಳೆದ 12 ವರ್ಷಗಳಿಂದ ಈ ಪಟ್ಟಿಯಲ್ಲಿ ಭಾರತದ ಹೆಸರಿತ್ತು.

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಈ ಕುರಿತು ಪ್ರಕಟಣೆ ನೀಡಿದ್ದಾರೆ. “ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು” ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ ಭಾರತವನ್ನು 2023ರಲ್ಲಿ ವರದಿಯಿಂದ ತೆಗೆದುಹಾಕಲಾಗಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳು ಹಾಗೂ ಭಯೋತ್ಪಾದಕರ ಸಂಘರ್ಷದ ಹಿನ್ನೆಲೆಯಲ್ಲಿ ʼಮಕ್ಕಳು ಮತ್ತು ಸಶಸ್ತ್ರ ಸಂಘರ್ಷʼ ಪಟ್ಟಿಯಲ್ಲಿ 2010ರಲ್ಲಿ ಭಾರತವನ್ನು ಸೇರಿಸಲಾಗಿತ್ತು. ಬುರ್ಕಿನಾ ಫಾಸೊ, ಕ್ಯಾಮರೂನ್, ಲೇಕ್ ಚಾಡ್ ಬೇಸಿನ್‌, ನೈಜೀರಿಯಾ, ಪಾಕಿಸ್ತಾನ ಮತ್ತು ಫಿಲಿಪ್ಪೀನ್ಸ್‌ ದೇಶಗಳ ಹೆಸರು ಈ ಪಟ್ಟಿಯಲ್ಲಿದೆ.

2019ರ ಬಳಿಕ ತೆಗೆದುಕೊಳ್ಳಲಾದ ವಿವಿಧ ನೀತಿಗಳು ಮತ್ತು ಸಾಂಸ್ಥಿಕ ಬದಲಾವಣೆಗಳ ಕಾರಣದಿಂದ ಇದು ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಮಕ್ಕಳ ರಕ್ಷಣೆ ವಿಷಯಗಳ ಕುರಿತು ಸಹಕಾರ ಮತ್ತು ಸಹಯೋಗಕ್ಕಾಗಿ ಮಾರ್ಗಸೂಚಿಯನ್ನು ಸಚಿವಾಲಯವು ಅಭಿವೃದ್ಧಿಪಡಿಸಿದೆ.

ಇದು ಭಾರತದ ದೊಡ್ಡ ಸಾಧನೆ. 12 ವರ್ಷಗಳ ಅವಧಿಯ ನಂತರ ಈ ಪಟ್ಟಿಯಿಂದ ನಮ್ಮ ಹೆಸರನ್ನು ತೆಗೆದುಹಾಕಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಮಕ್ಕಳ ಸುರಕ್ಷತೆ ಇರಲಿಲ್ಲ. ಬಾಲಾಪರಾಧ ಕಾಯಿದೆಯನ್ನು ಜಾರಿಗೆ ತರಲಾಗಿರಲಿಲ್ಲ. ಅಲ್ಲಿನ ಬಾಲಾಪರಾಧಿಗಳ ಮನೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇಂದು ಮಕ್ಕಳ ಕಲ್ಯಾಣ ಸಮಿತಿಗಳು, ಬಾಲ ನ್ಯಾಯ ಮಂಡಲಿಗಳು, ಮಕ್ಕಳ ಆರೈಕೆ ಮನೆಗಳಂತಹ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗಿದೆ ಎಂದು ಡಬ್ಲ್ಯುಸಿಡಿ ಕಾರ್ಯದರ್ಶಿ ಇಂದೇವರ್ ಪಾಂಡೆ ಹೇಳಿದ್ದಾರೆ.

ವಿಶ್ವಸಂಸ್ಥೆ ಸೂಚಿಸಿದ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಕ್ಕಳ ರಕ್ಷಣೆಯ ಕುರಿತು ಭದ್ರತಾ ಪಡೆಗಳಿಗೆ ತರಬೇತಿ ನೀಡಲಾಗಿದೆ. ಪೆಲೆಟ್ ಗನ್ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. JJ ಕಾಯಿದೆ ಮತ್ತು POCSO ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ ಪಾಂಡೆ.

ಭಾರತ ಸರ್ಕಾರ ಈ ಅಮಾನುಷ ಪಟ್ಟಿಯಿಂದ ನಮ್ಮ ದೇಶದ ಹೆಸರನ್ನು ಹೊರಗಿಡುವ ಪ್ರಯತ್ನಗಳಲ್ಲಿ ಸತತವಾಗಿ ತೊಡಗಿಸಿಕೊಂಡಿತ್ತು. 2021ರ ನವೆಂಬರ್‌ನಲ್ಲಿ ನಡೆದ ಅಂತತ್‌ ಸಚಿವಾಲಯ ಸಭೆಯ ನಂತರ ಸೆಕ್ರೆಟರಿ ಜನರಲ್ (SRSG) ರ ವಿಶೇಷ ಪ್ರತಿನಿಧಿಯೊಂದಿಗೆ ಭಾರತ ಸರ್ಕಾರದ ಮಾತುಕತೆ ಕ್ಷಿಪ್ರಗೊಂಡಿತು. ಈ ವಿಷಯದಲ್ಲಿ ಆದ್ಯತೆಗಳನ್ನು ಗುರುತಿಸುವುದು, ಮಕ್ಕಳ ರಕ್ಷಣೆಯನ್ನು ಹೆಚ್ಚಿಸಲು ಮಧ್ಯಸ್ಥಿಕೆಗಳು, ಮಕ್ಕಳ ರಕ್ಷಣೆಗಾಗಿ ಸಹಕಾರದ ಕ್ಷೇತ್ರಗಳನ್ನು ಗುರುತಿಸಲು ವಿಶ್ವಸಂಸ್ಥೆ ಜತೆಗೆ ಸಚಿವಾಲಯ ವಿಭಾಗ, ತಾಂತ್ರಿಕ ಮಟ್ಟದ ಸಭೆಗಳನ್ನು ನಡೆಸಲು ಜಂಟಿ ತಾಂತ್ರಿಕ ಸಮಿತಿ ರಚಿಸಲಾಯಿತು. SRSG ಕಚೇರಿಯ ತಾಂತ್ರಿಕ ತಂಡ ಜುಲೈ 27-29, 2022ರಂದು ಭಾರತಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಕುರಿತು ನವೆಂಬರ್ 2022ರಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾರ್ಯಾಗಾರ ನಡೆಸಲಾಯಿತು.

ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲಾಪರಾಧಿ ನ್ಯಾಯ ಮಂಡಳಿಗಳಂತಹ ಶಾಸನಬದ್ಧ ಸಂಸ್ಥೆಗಳು ಈಗ ಇಲ್ಲಿ ಕಾರ್ಯಾಚರಿಸುತ್ತಿವೆ. ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 2023ರಲ್ಲಿ ಭಾರತವನ್ನು ವರದಿಯಿಂದ ತೆಗೆದುಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಐವರು ಭಯೋತ್ಪಾದಕರ ಹತ್ಯೆಗೈದ ಸೆಕ್ಯುರಿಟಿ ಫೋರ್ಸ್​​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

K Kavitha: ಬಿಆರ್‌ಎಸ್‌ ನಾಯಕಿ ಕವಿತಾ ಬಂಧನ ಜುಲೈ 3ರವರೆಗೆ ವಿಸ್ತರಣೆ; ಸಾಕ್ಷ್ಯ ನಾಶದ ಆರೋಪ

K Kavitha: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಭಾರತ ರಾಷ್ಟ್ರ ಸಮಿತಿ ನಾಯಕಿ, ವಿಧಾನ ಪರಿಷತ್‌ ಸದಸ್ಯೆ ಕೆ. ಕವಿತಾ ವಿರುದ್ಧ ಜಾರಿ ನಿರ್ದೇಶನಾಲಯ ಸೋಮವಾರ ಆರೋಪ ಪಟ್ಟಿ ಸಲ್ಲಿಸಿದೆ. ಕವಿತಾ ಅವರು ಸುಮಾರು 292.8 ಕೋಟಿ ರೂ. ಮೌಲ್ಯದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದೆ. ಜತೆಗೆ ಈ ಹಗರಣದಲ್ಲಿ 1,100 ಕೋಟಿ ರೂ.ಗಿಂತ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದೂ ತಿಳಿಸಿದೆ.

VISTARANEWS.COM


on

K Kavitha
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ಬಂಧನದಲ್ಲಿರುವ ಭಾರತ ರಾಷ್ಟ್ರ ಸಮಿತಿ (BRS) ನಾಯಕಿ, ವಿಧಾನ ಪರಿಷತ್‌ ಸದಸ್ಯೆ (MLC) ಕೆ. ಕವಿತಾ (K Kavitha) ವಿರುದ್ಧ ಜಾರಿ ನಿರ್ದೇಶನಾಲಯ (Enforcement Directorate) ಸೋಮವಾರ ಆರೋಪ ಪಟ್ಟಿ ಸಲ್ಲಿಸಿದೆ. ಕವಿತಾ ಅವರು ಸುಮಾರು 292.8 ಕೋಟಿ ರೂ. ಮೌಲ್ಯದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದೆ. ಜತೆಗೆ ಈ ಹಗರಣದಲ್ಲಿ ಒಟ್ಟು 1,100 ಕೋಟಿ ರೂ.ಗಿಂತ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದೂ ತಿಳಿಸಿದೆ.

ದೆಹಲಿ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ ಕಾವೇರಿ ಬೆವೇಜಾ ಅವರ ಮುಂದೆ ಪೂರಕ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ್ದು, ಕವಿತಾ ಅವರ ನ್ಯಾಯಾಂಗ ಬಂಧನವನ್ನು ಜುಲೈ 3ರವರೆಗೆ ವಿಸ್ತರಿಸಲಾಗಿದೆ. ಜತೆಗೆ ಪ್ರಿನ್ಸ್, ದಾಮೋದರ್ ಮತ್ತು ಅರವಿಂದ್ ಸಿಂಗ್ ಎಂಬ ಮೂವರು ಸಹ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಇಲ್ಲಿಯ ತನಕ ನಡೆದ ತನಿಖೆಯ ಪ್ರಕಾರ ಒಟ್ಟು 1,100 ಕೋಟಿ ರೂ. ಮೊತ್ತದ ಹಗರಣ ನಡೆದಿರುವುದು ಕಂಡು ಬಂದಿದೆ. ಕವಿತಾ, ಚಂಪ್ರೀತ್ ಸಿಂಗ್, ಪ್ರಿನ್ಸ್ ಕುಮಾರ್, ದಾಮೋದರ್ ಶರ್ಮಾ ಮತ್ತು ಅರವಿಂದ್ ಸಿಂಗ್ ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. ಈ ಪೈಕಿ ಕವಿತಾ ಅವರು 292.8 ಕೋಟಿ ರೂ.ಗಳ ಪಿಒಸಿ (Money generated and laundered in crime)ಯಲ್ಲಿ ಭಾಗಿಯಾಗಿದ್ದಾರೆ. 100 ಕೋಟಿ ರೂ.ಗಳ ಕಿಕ್‌ಬ್ಯಾಕ್‌ ಅನ್ನು ಎಎಪಿ ನಾಯಕರಿಗೆ ನೀಡಲಾಗಿದೆ. ಮಾತ್ರವಲ್ಲ ಕವಿತಾ ಅವರು ಮೊಬೈಲ್‌ನಲ್ಲಿದ್ದ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ ಎಂದೂ ದೂರಲಾಗಿದೆ.

ಆರೋಪಿ ವಿಜಯ್ ನಾಯರ್ (ಎಎಪಿಯ ಉನ್ನತ ನಾಯಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ) ಮೂಲಕ ಕವಿತಾ ಅವರು ಸೌತ್ ಗ್ರೂಪ್ ಸದಸ್ಯರು ಮತ್ತು ಎಎಪಿ ನಾಯಕರೊಂದಿಗೆ ಸೇರಿ 100 ಕೋಟಿ ರೂ.ಗಳನ್ನು ಪಾವತಿಸಲು ಮತ್ತು ಅನಗತ್ಯ ಪ್ರಯೋಜನಗಳನ್ನು ಪಡೆಯಲು ಸಂಚು ರೂಪಿಸಿದ್ದರು ಎಂದು ವಿವರಿಸಲಾಗಿದೆ.

ಪ್ರಕರಣದ ಹಿನ್ನೆಲೆ

ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ನಾಲ್ಕು ತಾಸು ಪರಿಶೀಲನೆ ನಡೆಸಿದ ಇ.ಡಿ ಅಧಿಕಾರಿಗಳು ಮಾರ್ಚ್‌ 15 ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿದೆ. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೀಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ ಹಾಗೂ ಸಿಬಿಐ ಅಧಿಕಾರಿಗಳು ಕೆ. ಕವಿತಾ ಅವರನ್ನು ವಿಚಾರಣೆ ನಡೆಸಿದೆ.

ಇದನ್ನೂ ಓದಿ: Liquor Policy Case : ಆಪ್​ ನಾಯಕರಿಗೆ ಕವಿತಾ 100 ಕೋಟಿ ಲಂಚ ಕೊಟ್ಟಿದ್ದು ಹೌದು; ಇಡಿ ಮಾಹಿತಿ

ಸೌತ್‌ ಗ್ರೂಪ್‌ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ. 

Continue Reading

ದೇಶ

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಪ್ರತಿಕ್ಷಣದ ಮಾಹಿತಿ

Lok Sabha Election Result 2024 Live: ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಲಿದೆ. ಮತಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 543 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 272 ಮ್ಯಾಜಿಕ್‌ ನಂಬರ್‌ ಆಗಿದೆ. ನರೇಂದ್ರ ಮೋದಿ ಹ್ಯಾಟ್ರಿಕ್‌ ಬಾರಿಸುವರೋ ಇಲ್ಲವೇ ಇಂಡಿಯಾ ಒಕ್ಕೂಟ ಮುನ್ನಡೆ ಪಡೆಯುವುದೋ ಎಂಬ ಚರ್ಚೆ, ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.

VISTARANEWS.COM


on

Lok Sabha Election Result 2024 Live
Koo

ನವದೆಹಲಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ (Lok Sabha Election Result 2024 Live) ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ (ಜೂನ್‌ 4) ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಪ್ರತಿಕ್ಷಣದ ಮಾಹಿತಿಯು ಇಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Continue Reading

ಉದ್ಯೋಗ

Job Alert: ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ; ದ್ವಿತೀಯ ಪಿಯು ಪಾಸಾದವರೂ ಅರ್ಜಿ ಸಲ್ಲಿಸಿ

Job Alert: 304 ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್‌ ಏರ್‌ ಫೋರ್ಸ್‌ ಅರ್ಜಿ ಆಹ್ವಾನಿಸಿದೆ (Indian Air Force Recruitment 2024). ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 28.

VISTARANEWS.COM


on

Job Alert
Koo

ನವದೆಹಲಿ: ಭಾರತೀಯ ವಾಯುಪಡೆ (Indian Air Force)ಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಸು ಬಹುತೇಕರಲ್ಲಿರುತ್ತದೆ. ಇದೀಗ ಅಂತಹ ಕನಸು ನನಸಾಗುವ ಸಮಯ ಬಂದಿದೆ. 304 ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್‌ ಏರ್‌ ಫೋರ್ಸ್‌ ಅರ್ಜಿ ಆಹ್ವಾನಿಸಿದೆ (Indian Air Force Recruitment 2024). ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್‌ 28 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಫ್ಲೈಯಿಂಗ್: 29, ಗ್ರೌಂಡ್ ಡ್ಯೂಟಿ (ಟೆಕ್ನಿಕಲ್): 156, ಗ್ರೌಂಡ್ ಡ್ಯೂಟಿ (ನಾನ್‌ ಟೆಕ್ನಿಕಲ್): 119 ಮತ್ತು ಫ್ಲೈಯಿಂಗ್: ಎನ್‌ಸಿಸಿ ಸ್ಪೆಷಲ್‌ ಎಂಟ್ರಿ ಸ್ಕೀಮ್‌ ಅಡಿಯಲ್ಲಿ ಶೇ. 10ರಷ್ಟು ಹುದ್ದೆಗಳಿವೆ.
ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ತೇರ್ಡೆಯಾಗಿರಬೇಕು.
ಗ್ರೌಂಡ್ ಡ್ಯೂಟಿ (ನಾನ್‌ ಟೆಕ್ನಿಕಲ್) ಹುದ್ದೆಗಳಿಗೆ: ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ಓದಿ, ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ

ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌ (Air Force Common Admission Test)ಗೆ ಅರ್ಜಿ ಸಲ್ಲಿಸುವ ಮುನ್ನ ವಯೋಮಿತಿಯನ್ನು ಗಮನಿಸಿ. ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 24 ವರ್ಷ. ಗ್ರೌಂಡ್‌ ಡ್ಯೂಟಿ (ಟೆಕ್ನಿಕಲ್‌ / ನಾನ್‌ ಟೆಕ್ನಿಕಲ್‌) ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವರ್ಷ 20 ವರ್ಷ ಮತ್ತು ಗರಿಷ್ಠ ವಯಸ್ಸು 26 ವರ್ಷ.

ಅರ್ಜಿ ಶುಲ್ಕ

ಎಎಫ್‌ಸಿಎಟಿ ಪ್ರವೇಶ ಶುಲ್ಕ 550 ರೂ. ಇನ್ನು ಎನ್‌ಸಿಸಿ ಸ್ಪೆಷಲ್‌ ಎಂಟ್ರಿ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಇದಕ್ಕಾಗಿ ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್, ಇ-ಚಲನ್‌ ಬಳಸಬಹುದು.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಒಟ್ಟು 300 ಅಂಕಗಳಿಗೆ ನಡೆಯಲಿದೆ. 100 ಪ್ರಶ್ನೆಗಳು ಇರಲಿದ್ದು, ಎರಡು ಗಂಟೆ ಅವಧಿಯನ್ನು ಹೊಂದಿದೆ. ಲಿಖಿತ ಪರೀಕ್ಷೆ ಜನರಲ್‌ ಅವರ್ನೆಸ್‌, ವರ್ಬಲ್‌ ಎಬಿಲಿಟಿ, ನ್ಯುಮೆರಿಕಲ್‌ ಎಬಿಲಿಟಿ ಮತ್ತು ರೀಸನಿಂಗ್‌ & ಮಿಲಿಟರಿ ಅಪ್ಟಿಟ್ಯೂಡ್‌ ಟೆಸ್ಟ್‌ ಅನ್ನು ಒಳಗೊಂಡಿದೆ.

Indian Air Force Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು, ಅಗತ್ಯ ಮಾಹಿತಿಗಳನ್ನು ನೀಡಿ ಹೆಸರು ನೋಂದಾಯಿಸಿ.
  • ನಂತರ ತೆರೆದುಕೊಳ್ಳುವ ಹೊಸ ಪುಟದಲ್ಲಿರುವ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ Sumbit ಬಟನ್‌ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಯುಪಿಎಸ್‌ಸಿಯಿಂದ 312 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

Continue Reading

ವೈರಲ್ ನ್ಯೂಸ್

Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

Viral News: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲಾ ದರೋಡೆ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಆರಾಮ ಮತ್ತು ತಂಪಾಗಿಸುವ ಎಸಿ ಗಾಳಿಯ ಅಡಿಯಲ್ಲಿ ನಿದ್ದೆಗೆ ಜಾರಿದ್ದು, ಪೊಲೀಸರು ಬಂದ ಬಳಿಕವೇ ಆತನಿಗೆ ಎಚ್ಚರವಾಯಿತು!

VISTARANEWS.COM


on

By

Viral News
Koo

ಲಕ್ನೋ: ಸರ್ಕಾರಿ ನೌಕರನೊಬ್ಬನ (government employee) ಮನೆಗೆ (house) ದರೋಡೆ ಮಾಡಲು ಬಂದ ಕಳ್ಳನೊಬ್ಬ (burglars) ಕೂಲಿಂಗ್ ಎಸಿ ಪ್ರಭಾವದಿಂದ ನಿದ್ದೆಗೆ ಜಾರಿದ ಘಟನೆ ಲಕ್ನೋದಲ್ಲಿ (Lucknow) ನಡೆದಿದ್ದು, ಪೊಲೀಸರು ಬಂದ ಬಳಿಕವೇ ಆತನಿಗೆ ಎಚ್ಚರವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral News) ಆಗಿದೆ.

ಕಳ್ಳತನದ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಮನೆಗೆ ಬಂದಾಗ ಬಹಳಷ್ಟು ವಸ್ತುಗಳನ್ನು ಕಳ್ಳರು ಕದ್ದೊಯ್ದಿರುವುದು ತಿಳಿದು ಬಂದಿದೆ. ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾಗ ಆರಾಮವಾಗಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಂಡು ಅವರು ಬೆಚ್ಚಿಬಿದ್ದರು. ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಅವನೂ ಗಾಬರಿಗೊಂಡಿದ್ದಾನೆ. ಬಳಿಕ ಪೊಲೀಸರಿಗೆ ಸಂಪೂರ್ಣ ಕಥೆಯನ್ನು ವಿವರಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದರು.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ಕೈಗೆ ಸಿಕ್ಕಿದ್ದನ್ನೆಲ್ಲಾ ದರೋಡೆ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಆರಾಮ ಮತ್ತು ತಂಪಾಗಿಸುವ ಎಸಿ ಗಾಳಿಯ ಅಡಿಯಲ್ಲಿ ನಿದ್ದೆಗೆ ಜಾರಿದನು. ಇತರ ದರೋಡೆಕೋರರ ಜೊತೆಯಲ್ಲಿ ಮನೆಗೆ ಪ್ರವೇಶಿಸಿದ ಈತ ಗಾಢವಾದ ನಿದ್ರೆಯಿಂದ ಎಚ್ಚರವಾಗಲೇ ಇಲ್ಲ. ಹೀಗಾಗಿ ಇತರರು ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ವಾರಣಾಸಿಯಲ್ಲಿ ನಿಯೋಜನೆಗೊಂಡಿರುವ ಸರ್ಕಾರಿ ನೌಕರನಿಗೆ ಸೇರಿದ ಇಂದಿರಾನಗರದ ಸೆಕ್ಟರ್ 20ರ ಮನೆಗೆ ಕಳ್ಳರ ತಂಡ ನುಗ್ಗಿದೆ. ಕಳ್ಳರು ಈ ಮನೆಯಿಂದ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೋಗಿದ್ದಾರೆ. ರೂಮಿನಲ್ಲಿದ್ದ ಎಸಿಯ ಕೆಳಗೆ ಕಳ್ಳ ಮಲಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾನೆ. ಆದರೆ ಯಾವುದೋ ನಶೆಯಲ್ಲಿದ್ದ ಈತ ಇನ್ವರ್ಟರ್ ಎತ್ತಲು ಹೋಗಿದ್ದಾನೆ. ಆದರೆ ಅದಕ್ಕೂ ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ. ಕೋಣೆಯಲ್ಲಿದ್ದ ಎಸಿ ಸ್ವಿಚ್ ಆನ್ ಮಾಡಿ ಅಲ್ಲೇ ಗಟ್ಟಿಯಾಗಿ ನಿದ್ದೆಗೆ ಜಾರಿದ್ದಾನೆ.


ಇತರ ಕಳ್ಳರು ಆತನನ್ನು ಎಬ್ಬಿಸಲು ಪ್ರಯತ್ನಿಸಿದರೂ ಆತ ಎದ್ದೇಳಲಿಲ್ಲ. ಬೆಳಗ್ಗೆ ಮನೆಯ ಗೇಟ್ ತೆರೆದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರಾಮವಾಗಿ ಮಲಗಿರುವ ಕಳ್ಳನನ್ನು ನೋಡಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Rupert Murdoch: ಮಾಧ್ಯಮ ಲೋಕದ ದೊರೆಗೆ ಐದನೇ ಮದುವೆ; 93ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೂಪರ್ಟ್ ಮುರ್ಡೋಕ್

ಪೊಲೀಸರು ಮನೆಗೆ ಬಂದ ಬಳಿಕ ಕಳ್ಳರು ಬಹಳಷ್ಟು ವಸ್ತುಗಳನ್ನು ಕದ್ದೊಯ್ದಿರುವುದು ತಿಳಿದುಬಂದಿದೆ.
ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಆತ ಗಾಬರಿಯಾಗಿದ್ದಾನೆ. ಬಳಿಕ ಆತ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ವಿವರಿಸಿದ್ದು, ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಇತರ ಕಳ್ಳರನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Advertisement
First PU Class Commencement Programme at Vishwadarshana College
ಉತ್ತರ ಕನ್ನಡ25 mins ago

Uttara Kannada News: ವಿಶ್ವದರ್ಶನ ಕಾಲೇಜಿನಲ್ಲಿ ಪ್ರಥಮ ಪಿಯು ತರಗತಿ ಪ್ರಾರಂಭೋತ್ಸವ

Job News
ಉದ್ಯೋಗ27 mins ago

Job News: ಗುಡ್‌ನ್ಯೂಸ್‌; 35 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದಿಂದ ಅನುಮತಿ

Road Accident
ಕರ್ನಾಟಕ1 hour ago

Road Accident: ಕೊಲ್ಹಾಪುರದಲ್ಲಿ ಭೀಕರ ಅಪಘಾತ; ಬೈಕ್‌ಗಳಿಗೆ ಕಾರು ಡಿಕ್ಕಿಯಾಗಿ ಪಲ್ಟಿ, ಮೂವರ ದುರ್ಮರಣ

T20 World Cup 2024
ಕ್ರೀಡೆ1 hour ago

T20 World Cup 2024: ದೂರದರ್ಶನದಲ್ಲಿಯೂ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್​ ಪಂದ್ಯಾವಳಿ

Uttara Kannada Lok Sabha Constituency
ಉತ್ತರ ಕನ್ನಡ1 hour ago

Uttara Kannada Lok Sabha Constituency: ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಜಯಭೇರಿ?

Dr. K Sudhakar
ಕರ್ನಾಟಕ2 hours ago

Dr. K Sudhakar: ರಾಜ್ಯ ಸರ್ಕಾರದ ಚಿಹ್ನೆ ದುರ್ಬಳಕೆ; ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್

Rave Party
ಕರ್ನಾಟಕ2 hours ago

Rave Party: ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ

K Kavitha
ದೇಶ2 hours ago

K Kavitha: ಬಿಆರ್‌ಎಸ್‌ ನಾಯಕಿ ಕವಿತಾ ಬಂಧನ ಜುಲೈ 3ರವರೆಗೆ ವಿಸ್ತರಣೆ; ಸಾಕ್ಷ್ಯ ನಾಶದ ಆರೋಪ

MS Dhoni Europe Trip
ಕ್ರೀಡೆ2 hours ago

MS Dhoni Europe Trip: ಐಪಿಎಲ್​ ಮುಗಿಸಿ ಕುಟುಂಬದ ಜತೆ ಯುರೋಪ್​ಗೆ ಪ್ರವಾಸ ಹೋದ ಧೋನಿ

Lok Sabha Election Result 2024 Live
ದೇಶ3 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಪ್ರತಿಕ್ಷಣದ ಮಾಹಿತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ8 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು7 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌