Foreign Secretary: ಕೇರಳಕ್ಕಾಗಿ 'ವಿದೇಶಾಂಗ ಕಾರ್ಯದರ್ಶಿ'ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ - Vistara News

ದೇಶ

Foreign Secretary: ಕೇರಳಕ್ಕಾಗಿ ‘ವಿದೇಶಾಂಗ ಕಾರ್ಯದರ್ಶಿ’ಯನ್ನು ನೇಮಿಸಿದ ಪಿಣರಾಯಿ; ಭುಗಿಲೆದ್ದ ವಿವಾದ

Foreign Secretary: ರಾಜ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇರಳ ಬಿಜೆಪಿ ಘಟಕವು ಖಂಡಿಸಿದೆ. “ರಾಜ್ಯದಲ್ಲಿ ಐಎಎಸ್‌ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಅಧಿಕಾರದ ಆಕ್ರಮಣ ಮಾಡಿದ್ದಾರೆ” ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Foreign Secretary
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುವನಂತಪುರಂ: ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಾರ್ಯದರ್ಶಿ ಇದ್ದಾರೆ. ಭಾರತ ಸೇರಿ ಹಲವು ದೇಶಗಳಲ್ಲಿ ವಿದೇಶಾಂಗ ಕಾರ್ಯದರ್ಶಿ (Foreign Secretary) ಇರುತ್ತಾರೆ. ಭಾರತದಲ್ಲಿ ಯಾವ ರಾಜ್ಯದಲ್ಲೂ ವಿದೇಶಾಂಗ ಕಾರ್ಯದರ್ಶಿ ಎಂಬ ಹುದ್ದೆ ಇಲ್ಲ. ಆದರೆ, ಕೇರಳದ ಪಿಣರಾಯಿ ವಿಜಯನ್‌ (Pinarayi Vijayan) ನೇತೃತ್ವದ ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿ ಕೆ. ವಾಸುಕಿ (IAS Officer K. Vasuki) ಅವರನ್ನು ”ಕೇರಳದ ವಿದೇಶಾಂಗ ಕಾರ್ಯದರ್ಶಿ” ಎಂಬುದಾಗಿ ನೇಮಕ ಮಾಡಿದೆ. ಇದು ಈಗ ಭಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿದೆ.

ಕೆ. ವಾಸುಕಿ ಅವರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. “ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ರಾಜ್ಯದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕೇರಳಕ್ಕೆ ಸಂಬಂಧಿಸಿದ ವಿದೇಶಾಂಗ ಚಟುವಟಿಕೆಗಳ ಕುರಿತು ಇವರು ಕಾರ್ಯನಿರ್ವಹಿಸಲಿದ್ದಾರೆ. ದೆಹಲಿಯಲ್ಲಿರುವ ಕೇರಳ ಹೌಸ್‌ ಸ್ಥಾನಿಕ ಕಮಿಷನರ್‌ ಅವರು ವಾಸುಕಿ ಅವರಿಗೆ ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ವಿದೇಶದಲ್ಲಿರುವ ರಾಯಭಾರ ಕಚೇರಿಗಳು, ರಾಜತಾಂತ್ರಿಕ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಲು ನೆರವಾಗಲಿದ್ದಾರೆ” ಎಂದು ಜುಲೈ 15ರಂದೇ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಆಕ್ರೋಶ

ರಾಜ್ಯದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇರಳ ಬಿಜೆಪಿ ಘಟಕವು ಖಂಡಿಸಿದೆ. “ರಾಜ್ಯದಲ್ಲಿ ಐಎಎಸ್‌ ಅಧಿಕಾರಿಯನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಅಧಿಕಾರದ ಆಕ್ರಮಣ ಮಾಡಿದ್ದಾರೆ. ಅಷ್ಟೇ ಅಲ್ಲ, ಭಾರತ ಸಂವಿಧಾನದಲ್ಲಿ ಕೇಂದ್ರ ಪಟ್ಟಿಗೆ ನೀಡಿರುವುದನ್ನು ಅವರು ಉಲ್ಲಂಘಿಸಿದ್ದಾರೆ. ವಿದೇಶಾಂಗ ಸಚಿವಾಲಯದಲ್ಲಿ ಮಧ್ಯಪ್ರವೇಶಿಸಲು ಕೇರಳಕ್ಕೆ ಯಾವುದೇ ಅಧಿಕಾರ ಇಲ್ಲ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಶಿ ತರೂರ್‌ ಹೇಳಿದ್ದೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ, ತಿರುವನಂತಪುರಂ ಸಂಸದ ಶಶಿ ತರೂರ್‌ ಅವರು ಪ್ರತಿಕ್ರಿಯಿಸಿದ್ದಾರೆ. “ವಿದೇಶಾಂಗ ವ್ಯವಹಾರಗಳನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ ಹಾಗೂ ಯಾವುದೇ ರಾಜ್ಯ ಸರ್ಕಾರಕ್ಕೆ ಇದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕುಗಳಿಲ್ಲ. ಆದರೆ, ರಾಜ್ಯ ಸರ್ಕಾರವು ವಿದೇಶದಲ್ಲಿರುವ ತನ್ನ ರಾಜ್ಯದ ನಾಗರಿಕರ ರಕ್ಷಣೆಗೆ ಕಾಳಜಿ ತೋರಬಹುದಾಗಿದೆ. ಹಾಗೆಯೇ, ಕೆ. ವಾಸುಕಿ ಅವರು ಸ್ವತಂತ್ರವಾಗಿ ಯಾವುದೇ ದೇಶದ ಜತೆ ಕಾರ್ಯನಿರ್ವಹಿಸುವ ಅಧಿಕಾರ ಹೊಂದಿಲ್ಲ. ಭಾರತ ಸರ್ಕಾರದ ಅಂಗಸಂಸ್ಥೆಗಳ ಮೂಲಕವೇ ಅವರು ನಿರ್ವಹಿಸಿದ್ದಾರೆ” ಎಂದು ರಾಜ್ಯದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಸ್ತುತ, ವಿಕ್ರಮ್‌ ಮಿಸ್ರಿ ಅವರು ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ: Kerala Gold Smuggling Case: ನಾನು ಸುಮ್ಮನಿರಲು 30 ಕೋಟಿ ರೂ. ಆಫರ್‌; ಪಿಣರಾಯಿ ವಿರುದ್ಧ ಸ್ವಪ್ನಾ ಆರೋಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Samsung Galaxy: ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ವಾಚ್ ಅಲ್ಟ್ರಾ, ಬಡ್ಸ್ 3 ಸರಣಿ ಬಿಡುಗಡೆ

Samsung Galaxy: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಬಡ್ಸ್3, ಗ್ಯಾಲಕ್ಸಿ ಬಡ್ಸ್3 ಪ್ರೊ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರೀ ಆರ್ಡರ್ ಮಾಡುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

VISTARANEWS.COM


on

Samsung Launches Galaxy Watch 7 Galaxy Watch Ultra Buds 3 Series
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಬಡ್ಸ್3, ಗ್ಯಾಲಕ್ಸಿ ಬಡ್ಸ್3 ಪ್ರೊ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರೀ ಆರ್ಡರ್ ಮಾಡುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು (Samsung Galaxy) ಘೋಷಿಸಿದೆ.

ಗ್ಯಾಲಕ್ಸಿ ವಾಚ್ 7 ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್‌ಗಳು ಗ್ಯಾಲಕ್ಸಿ ಎಐ ಆಧರಿತವಾದ ಧರಿಸಬಹುದಾದ ಸಾಧನಗಳಾಗಿದ್ದು, ಪ್ರತಿಯೊಬ್ಬರಿಗೂ ಆರೋಗ್ಯ ಕಾಳಜಿ ವಹಿಸಲು ವಿನ್ಯಾಸಗೊಳಿಸಲಾದ ಸಾಧನಗಳಾಗಿವೆ.

ಗ್ಯಾಲಕ್ಸಿ ವಾಚ್ ಅಲ್ಟ್ರಾ – ಗ್ಯಾಲಕ್ಸಿ ವಾಚ್ ಉತ್ಪನ್ನಗಳ ಶ್ರೇಣಿಗೆ ಹೊಸತಾದ ಮತ್ತು ಅತ್ಯಂತ ಶಕ್ತಿಯುತ ಸೇರ್ಪಡೆಯಾಗಿದೆ. ಅಪಾರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವುಳ್ಳ ಈ ವಾಚ್ ಅತ್ಯುತ್ತಮ ಫಿಟ್‌ನೆಸ್ ಅನುಭವಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಈ ಮೂಲಕ ಹೆಚ್ಚು ಫಿಟ್‌ನೆಸ್ ಸಾಧನೆ ಮಾಡಲು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Lakshmi Hebbalkar: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿ ಆಯ್ಕೆ; ಜು.22ಕ್ಕೆ ಚಾಲನೆ

ಹೆಚ್ಚು ರಕ್ಷಣೆ ಒದಗಿಸಲು ಮತ್ತು ಹೆಚ್ಚು ಚಂದ ಕಾಣಿಸುವಂತೆ ಮಾಡಲು ವಾಚ್ ಅಲ್ಟ್ರಾದಲ್ಲಿ ಹೊಸ ಕುಶನ್ ವಿನ್ಯಾಸ ನೀಡಲಾಗಿದೆ. ಇದು ಟೈಟಾನಿಯಂ ಗ್ರೇಡ್ 4 ಫ್ರೇಮ್ ಮತ್ತು 10 ಎಟಿಎಂ ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯ ಹೊಂದಿದೆ. ಹಾಗಾಗಿ ಸಮುದ್ರದಲ್ಲಿ ಈಜಬಹುದಾದ ಮತ್ತು ಯಾವುದೇ ಪರಿಸರದಲ್ಲಿ ಸೈಕ್ಲಿಂಗ್ ಮಾಡಬಹುದಾದ ಸೌಕರ್ಯ ಒದಗಿಸುತ್ತಿದೆ ಮತ್ತು ಸುಧಾರಿತ ಫಿಟ್‌ನೆಸ್ ಅನುಭವವನ್ನು ನೀಡುತ್ತದೆ.

ಹೊಸದಾಗಿ ಕ್ವಿಕ್ ಬಟನ್‌ ಅನ್ನು ಸೇರಿಸಲಾಗಿದೆ. ಈ ಬಟನ್ ಅನ್ನು ಬಳಸಿ ನೀವು ತಕ್ಷಣವೇ ವರ್ಕೌಟ್‌ ಪ್ರಾರಂಭಿಸಬಹುದು ಮತ್ತು ನಿಯಂತ್ರಿಸಬಹುದು. ಜತೆಗೆ ನಿಮ್ಮ ಅಗತ್ಯಗಳಿಗೆ ಸರಿ ಹೊಂದುವಂತೆ ಇತರ ಕಾರ್ಯಗಳನ್ನು ಪ್ಲಾನ್ ಮಾಡಬಹುದು. ಹೆಚ್ಚುವರಿಯಾಗಿ ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷತೆಗಾಗಿ ನೀವು ಇದರಲ್ಲಿರುವ ಎಮರ್ಜೆನ್ಸಿ ಸೈರನ್ ಅನ್ನು ಬಳಸಬಹುದು.

ವ್ಯಾಯಾಮದ ನಂತರ ಗ್ಯಾಲಕ್ಸಿ ವಾಚ್ ಅಲ್ಟ್ರಾದಲ್ಲಿರುವ ವಾಚ್ ಫೇಸ್‌ನಲ್ಲಿ ಅವತ್ತಿನ ವ್ಯಾಯಾಮಗಳ ಅಂಕಿಅಂಶಗಳನ್ನು ಪರಿಶೀಲಿಸಬಹುದು. 3,000 ನಿಟ್‌ಗಳಷ್ಟು ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಗ್ಯಾಲಕ್ಸಿ ವಾಚ್ ಅಲ್ಟ್ರಾ ಅತ್ಯಂತ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ಸುಲಭವಾಗಿ ಓದುವ ಸಾಮರ್ಥ್ಯ ಹೊಂದಿದೆ.

ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್ ಗ್ಯಾಲಕ್ಸಿ ವಾಚ್ ಶ್ರೇಣಿಯಲ್ಲಿಯೇ ದೀರ್ಘವಾದ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಗ್ರಾಹಕರು ದೀರ್ಘ ಕಾಲ ಸಾಹಸ ಕ್ರೀಡೆಗಳನ್ನು ಆಡಲು ಅನುವು ಮಾಡಿಕೊಡುತ್ತದೆ. ಈ ವಾಚ್ 100 ಗಂಟೆಗಳವರೆಗಿನ ಪವರ್ ಸೇವಿಂಗ್ ಆಯ್ಕೆ ಒದಗಿಸುತ್ತದೆ ಮತ್ತು 48 ಗಂಟೆಗಳವರೆಗಿನ ಎಕ್ಸರ್ಸೈಸ್ ಪವರ್ ಸೇವಿಂಗ್ ಸೌಲಭ್ಯ ನೀಡುತ್ತದೆ.

ಗ್ಯಾಲಕ್ಸಿ ವಾಚ್ ಅಲ್ಟ್ರಾ ಟೈಟಾನಿಯಂ ಗ್ರೇ, ಟೈಟಾನಿಯಂ ವೈಟ್ ಮತ್ತು ಟೈಟಾನಿಯಂ ಸಿಲ್ವರ್‌ ಬಣ್ಣದಲ್ಲಿ ದೊರೆಯುತ್ತದೆ. 47 ಎಂಎಂ ಗಾತ್ರದಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ 3ಎನ್ಎಂ ಚಿಪ್‌ಸೆಟ್‌ ಹೊಂದಿದೆ.

ಗ್ಯಾಲಕ್ಸಿ ವಾಚ್7 ನಲ್ಲಿ ನೀವು 100ಕ್ಕೂ ಹೆಚ್ಚು ವರ್ಕ್‌ಔಟ್‌ಗಳನ್ನು ಕರೆಕ್ಟಾಗಿ ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ವ್ಯಾಯಾಮದ ದಿನಚರಿ ಜತೆಗೆ ವಿವಿಧ ವ್ಯಾಯಾಮಗಳನ್ನು ಸಂಯೋಜಿಸುವ ಮೂಲಕ ಹೊಸ ದಿನಚರಿಯನ್ನು ಪ್ಲಾನ್ ಮಾಡಬಹುದು. ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಮತ್ತು ರಕ್ತದೊತ್ತಡ (ಬಿಪಿ) ಮೇಲ್ವಿಚಾರಣೆ ಮಾಡಬಹುದಾಗಿರುವುದು ವಿಶೇಷ. ಈ ಮೂಲಕ ಗ್ರಾಹಕರು ತಮ್ಮ ಹೃದಯದ ಆರೋಗ್ಯದ ಕುರಿತು ವಿಸ್ತೃತ ತಿಳುವಳಿಕೆಯನ್ನು ಪಡೆಯಬಹುದು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ

ಗ್ಯಾಲಕ್ಸಿ ವಾಚ್7, ವಾಚ್ ಅಲ್ಟ್ರಾ, ಬಡ್ಸ್ 3 ಸರಣಿಯ ಪ್ರಿ ಬುಕ್ ಆಫರ್‌ಗಳು

ಗ್ಯಾಲಕ್ಸಿ ವಾಚ್7 ಅನ್ನು ಪ್ರೀ ಬುಕ್ ಮಾಡುವ ಗ್ರಾಹಕರು ರೂ. 8000 ಮೌಲ್ಯದ ಬಹು-ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ರೂ. 8000 ಮೌಲ್ಯದ ಬೋನಸ್ ಅನ್ನು ಅಪ್‌ಗ್ರೇಡ್ ಆಗಿ ಪಡೆಯುತ್ತಾರೆ. ಗ್ಯಾಲಕ್ಸಿ ವಾಚ್ ಅಲ್ಟ್ರಾ ಅನ್ನು ಮುಂಚಿತವಾಗಿ ಬುಕ್ ಮಾಡುವ ಗ್ರಾಹಕರು ರೂ. 10000 ಮೌಲ್ಯದ ಬಹು- ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ರೂ. 10000 ಮೌಲ್ಯದ ಬೋನಸ್ ಅನ್ನು ಹೊಂದುತ್ತಾರೆ ಎಂದು ತಿಳಿಸಿದೆ.

Continue Reading

ದೇಶ

NEET UG 2024: ನೀಟ್‌ ಪ್ರಶ್ನೆಪತ್ರಿಕೆ ಟ್ರಂಕ್‌ ಕದ್ದ ಮತ್ತೊಬ್ಬ ಕಿಂಗ್‌ಪಿನ್‌ ಸೇರಿ ಮೂವರನ್ನು ಬಂಧಿಸಿದ ಸಿಬಿಐ!

NEET UG 2024: ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಮೂವರು ಆರೋಪಿಗಳನ್ನು ಕುಮಾರ ಮಂಗಳಂ ಬಿಷ್ಣೋಯಿ, ದೀಪೇಂದ್ರ ಕುಮಾರ್‌ ಹಾಗೂ ಶಶಿಕುಮಾರ್‌ ಪಾಸ್ವಾನ್‌ ಎಂದು ಗುರುತಿಸಲಾಗಿದೆ. ಇವರಲ್ಲಿ ಶಶಿಕುಮಾರ್‌ ಪಾಸ್ವಾನ್‌ ಬಿ.ಟೆಕ್‌ ಓದಿದ್ದು, ಪ್ರಕರಣದ ಪ್ರಮುಖ ಕಿಂಗ್‌ಪಿನ್‌ಗಳಲ್ಲಿ ಒಬ್ಬನಾಗಿದ್ದಾನೆ.

VISTARANEWS.COM


on

NEET UG 2024
Koo

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಕ್ಷೇತ್ರವಾರು ಫಲಿತಾಂಶ ಪ್ರಕಟಿಸಲಾಗಿದೆ. ಇದರ ಮಧ್ಯೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಹತ್ವದ ಮುನ್ನಡೆ ಸಾಧಿಸಿದ್ದು, ನೀಟ್‌ ಪ್ರಶ್ನೆಪತ್ರಿಕೆ (NEET UG 2024 Paper Leak) ಸೋರಿಕೆ ಪ್ರಕರಣದ ಮತ್ತೊಬ್ಬ ಕಿಂಗ್‌ಪಿನ್‌ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಮೂವರು ಆರೋಪಿಗಳನ್ನು ಕುಮಾರ ಮಂಗಳಂ ಬಿಷ್ಣೋಯಿ, ದೀಪೇಂದ್ರ ಕುಮಾರ್‌ ಹಾಗೂ ಶಶಿಕುಮಾರ್‌ ಪಾಸ್ವಾನ್‌ ಎಂದು ಗುರುತಿಸಲಾಗಿದೆ. ಇವರಲ್ಲಿ ಶಶಿಕುಮಾರ್‌ ಪಾಸ್ವಾನ್‌ ಬಿ.ಟೆಕ್‌ ಓದಿದ್ದು, ಪ್ರಕರಣದ ಪ್ರಮುಖ ಕಿಂಗ್‌ಪಿನ್‌ಗಳಲ್ಲಿ ಒಬ್ಬನಾಗಿದ್ದಾನೆ. ಈತನು ಪಂಕಜ್‌ ಎಂಬ ಮತ್ತೊಬ್ಬ ಆರೋಪಿಯ ಜತೆಗೂಡಿ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನೀಟ್‌ ಪ್ರಶ್ನೆಪತ್ರಿಕೆಯ ಟ್ರಂಕ್‌ಗಳನ್ನು ಕದ್ದಿದ್ದರು ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸಿಬಿಐ ಅಧಿಕಾರಿಗಳು 21 ಆರೋಪಿಗಳನ್ನು ಬಂಧಿಸಿದ್ದಾರೆ.

NEET UG 2024

ಅಕ್ರಮಕ್ಕೆ ಸಂಬಂಧಿಸಿದಂತೆ ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್‌ನ ನಾಲ್ಕು ವಿದ್ಯಾರ್ಥಿಗಳನ್ನು ಕೇಂದ್ರೀಯ ತನಿಖಾ ದಳ (CBI) ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಮತ್ತು ರಾಜು ಸಿಂಗ್ ಅವರನ್ನು ಪಟನಾ ಮತ್ತು ಹಜಾರಿಬಾಗ್ (ಜಾರ್ಖಂಡ್)ನಿಂದ ಅರೆಸ್ಟ್‌ ಮಾಡಲಾಗಿತ್ತು. ಇದಕ್ಕೂ ಮೊದಲು ಪ್ರಕರಣ ರೂವಾರಿ ಎಂದೇ ಹೇಳಲಾಗುತ್ತಿರುವ ರಾಕೇಶ್‌ ರಂಜನ್‌ ಅಲಿಯಾಸ್‌ ರಾಕಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ಇದನ್ನೂ ಓದಿ: NEET UG 2024 Result: ಕ್ಷೇತ್ರವಾರು ನೀಟ್‌ ಪರೀಕ್ಷಾ ಫಲಿತಾಂಶ ಪ್ರಕಟ

Continue Reading

ದೇಶ

Chenab Bridge: ಐಫೆಲ್ ಟವರ್‌ಗಿಂತ ಎತ್ತರದ ಚೆನಾಬ್ ಸೇತುವೆ ಆಗಸ್ಟ್ 15ರಂದು ಉದ್ಘಾಟನೆಗೆ ಸಜ್ಜು!

ಭಾರತೀಯ ರೈಲ್ವೇ ಎಂಜಿನಿಯರ್‌ಗಳ ಕೌಶಲ ಚೆನಾಬ್ ಸೇತುವೆಯಲ್ಲಿ (Chenab Bridge) ಎದ್ದು ಕಾಣುತ್ತಿದೆ. ಐಫಲ್ ಟವರ್‌ಗಿಂತಲೂ ಎತ್ತರದಲ್ಲಿರುವ ಈ ಸೇತುವೆ ಜಮ್ಮು ಮತ್ತು ಕಾಶ್ಮೀರದ ಸೊಬಗನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹಲವಾರು ವಿಶೇಷತೆಗಳನ್ನು ಹೊಂದಿರುವ ಉಧಂಪುರ್ ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಜಾಲವನ್ನು(UdhampurSrinagar-Baramulla Rail Link) ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಭಾರತೀಯ ರೈಲ್ವೇ ತಿಳಿಸಿದೆ.

VISTARANEWS.COM


on

By

UdhampurSrinagar-Baramulla Rail Link
Koo

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ (Udhampur Srinagar-Baramulla Rail Link) ಜಮ್ಮು ಮತ್ತು ಕಾಶ್ಮೀರದಲ್ಲಿ (jammu and kashmir) ಭಾರತೀಯ ರೈಲ್ವೇ (Indian Railways) ನಿರ್ಮಿಸಿರುವ ಚೆನಾಬ್ ಸೇತುವೆ (Chenab Bridge) ಆಗಸ್ಟ್ 15ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಜಮ್ಮು ಕಾಶ್ಮೀರದಲ್ಲಿ ಸಂಪರ್ಕವನ್ನು ಸುಧಾರಿಸಲು ಭಾರತೀಯ ರೈಲ್ವೇಯು ಚೆನಾಬ್ ಸೇತುವೆಯ ಮೇಲೆ ರೈಲು ಕಾರ್ಯಾಚರಣೆಯನ್ನು ಸ್ವಾತಂತ್ರ್ಯ ದಿನದಂದು (independence day) ಪ್ರಾರಂಭಿಸಲಿದೆ.

ಪ್ರಾರಂಭದಲ್ಲಿ ರೈಲು ಸೇವೆಗಳು ಜಮ್ಮುವಿನ ರಿಯಾಸಿಯಿಂದ ಕಾಶ್ಮೀರದ ಸಂಗಲ್ದಾನ್‌ವರೆಗೆ ಸಂಚರಿಸಲಿದ್ದು, ಬಳಿಕ ಈ ಸೇವೆಗಳನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು.

UdhampurSrinagar-Baramulla Rail Link


ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಉಧಂಪುರ್ ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (UdhampurSrinagar-Baramulla Rail Link) ಯೋಜನೆಯನ್ನು ಸಂಪರ್ಕಿಸುವ ಉದ್ದೇಶದಿಂದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಯೋಜನೆಯ ಒಂದು ಭಾಗವಾಗಿದೆ. ಉಧಂಪುರ್ ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಜಾಲದ (USBRL) ಒಟ್ಟು ಉದ್ದ 272 ಕಿ.ಮೀ.ಗಳಾಗಿದೆ.


ಹೊಸದಾಗಿ ನಿರ್ಮಿಸಲಾದ ಚೆನಾಬ್ ಸೇತುವೆಯ ಮೇಲೆ ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕವಾಗಿ ರೈಲು ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಸೇತುವೆ ಮೇಲೆ ಆಗಸ್ಟ್ 15ರಿಂದ ರೈಲುಗಳ ಓಡಾಟ ನಡೆಸಲಿದ್ದು, ಪ್ರಯಾಣಿಕರು ಪ್ರಯಾಣ ನಡೆಸಬಹುದಾಗಿದೆ.

UdhampurSrinagar-Baramulla Rail Link


ಚೆನಾಬ್ ಸೇತುವೆಯ ಮೇಲೆ ರೈಲುಗಳ ಸಂಚಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದೇಶದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ.


ಯುಎಸ್‌ಬಿಆರ್‌ಎಲ್ ಯೋಜನೆ ಹೇಗಿದೆ?

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆ ಪೂರ್ಣಗೊಂಡ ಅನಂತರ ಈ ಯೋಜನೆಯಡಿಯಲ್ಲಿ ಸಂಪೂರ್ಣ ರೈಲು ಜಾಲವು ಬಾರಾಮುಲ್ಲಾದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಧಮ್‌ಪುರದವರೆಗೆ ವಿಸ್ತರಿಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೈಲು ಜಾಲವನ್ನು ನಿರ್ಮಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಎಲ್ಲಾ ಹವಾಮಾನದ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ.

ಸಂಪೂರ್ಣ ವ್ಯವಸ್ಥೆಯಲ್ಲಿ ರೈಲ್ವೇ ಅತ್ಯಂತ ಸುರಕ್ಷತಾ ಕ್ರಮಗಳಿಗೆ ಗಮನ ನೀಡಿದೆ. ಸಂಪೂರ್ಣ ಜಾಲವು ಸಿಸಿಟಿವಿ ಮಾನಿಟರಿಂಗ್, ಸುಧಾರಿತ ಸುರಂಗ ಸುರಕ್ಷತೆ ತಂತ್ರಜ್ಞಾನ ಮತ್ತು ಹವಾನಿಯಂತ್ರಿತ ವ್ಯವಸ್ಥೆಗಳೊಂದಿಗೆ ಸುಸಜ್ಜಿತಗೊಂಡಿದೆ.

UdhampurSrinagar-Baramulla Rail Link


ಈ ಜಾಲವು ಹಲವಾರು ಸುರಂಗಗಳು ಮತ್ತು ಸೇತುವೆಗಳ ಮೂಲಕ ಹಾದುಹೋಗುತ್ತದೆ. ಇದು ಪ್ರಯಾಣಿಕರಿಗೆ ಜಮ್ಮು ಮತ್ತು ಕಾಶ್ಮೀರದ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ. ಈಗಾಗಲೇ ಯೋಜನೆಯು ಪೂರ್ಣಗೊಳ್ಳಬೇಕಿತ್ತು. ಆದರೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಯೋಜನೆ ಪೂರ್ಣಗೊಳ್ಳಲು ಹೆಚ್ಚು ಕಾಲಾವಕಾಶ ಬೇಕಾಯಿತು. ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಭಾರತೀಯ ರೈಲ್ವೇಯು ಸರಕಾರಕ್ಕೆ ಭರವಸೆ ನೀಡಿದೆ.

ಇದನ್ನೂ ಓದಿ: Doda Encounter: ಜಮ್ಮು ದಾಳಿ ಹಿಂದೆ ಇದ್ಯಾ ಪಾಕ್‌ ಮಾಜಿ ಸೈನಿಕರ ಕೈವಾಡ? ಉಗ್ರರಿಗಿದ್ಯಾ ಸೇನಾ ತರಬೇತಿ?

ಐಫೆಲ್ ಟವರ್‌ಗಿಂತ ಎತ್ತರದಲ್ಲಿದೆ!

ಭಾರತೀಯ ರೈಲ್ವೇಯ ಎಂಜಿನಿಯರ್‌ಗಳ ಕೌಶಲ ಚೆನಾಬ್ ಸೇತುವೆ ನಿರ್ಮಾಣದಲ್ಲಿ ಎದ್ದು ಕಾಣುತ್ತಿದೆ. ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. 359 ಮೀಟರ್ ಎತ್ತರದ ಸೇತುವೆಯು ಅತಿ ಹೆಚ್ಚು ತೀವ್ರತೆಯ ಭೂಕಂಪನ ಶಕ್ತಿಗಳನ್ನು ತಡೆದುಕೊಳ್ಳಬಲ್ಲದು.

Continue Reading

ವೈರಲ್ ನ್ಯೂಸ್

Viral News: ವಾಷಿಂಗ್ ಮೆಷಿನ್‌ನಿಂದ ಬಟ್ಟೆ ಎಂದು ಎಳೆದಾಗ ಬಂದಿದ್ದು ನಾಗರ ಹಾವು!

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು. ಕೇರಳದ ಕಣ್ಣೂರಿನಲ್ಲಿ ಇಂತಹ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಕಣ್ಣೂರು: ವಾಷಿಂಗ್ ಮೆಷಿನ್ (cobra in washing machine) ಒಳಗೆ ಬಟ್ಟೆ ತುಂಡು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿ ಅದನ್ನು ತೆಗೆಯಲು ಹೋದವನಿಗೆ ಅದರಲ್ಲಿ ಇರುವುದು ಬಟ್ಟೆ ತುಂಡಲ್ಲ ನಾಗರ ಹಾವಿನ ಮರಿ (baby cobra) ಎಂದು ತಿಳಿದು ಶಾಕ್ ಆಗಿದೆ. ಕೂಡಲೇ ವಾಷಿಂಗ್ ಮೆಷಿನ್ ಒಳಗೆ ಹಾಕಿದ್ದ ತನ್ನ ಕೈ ಹಿಂದಕ್ಕೆ ತೆಗೆದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.

ಹಾವುಗಳು ಎಲ್ಲಿ ಅವಿತಿರುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಮನೆಯೊಳಗೆ ಬಂದು ಮನೆ ಮಂದಿಯೆಲ್ಲ ಆತಂಕಗೊಳ್ಳುವಂತೆ ಮಾಡುತ್ತವೆ. ಹಾವುಗಳ ಕಡಿತ ಅಪಾಯಕಾರಿ ಆಗಿರುವುದರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಉತ್ತಮ. ನಮಗೆ ತಿಳಿಯದಂತೆ ಮನೆಯೊಳಗೆ ಬರುವ ಹಾವುಗಳು ತಮಗೆ ಸುರಕ್ಷಿತವೆನಿಸುವ ಜಾಗದಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇವು ಕೆಲವೊಮ್ಮೆ ಅಪಾಯ ತಂದೊಡ್ಡಬಹುದು.

ಕೇರಳದ ಕಣ್ಣೂರಿನಲ್ಲಿ (kerala kannur) ಈಗ ಇಂತಹ ಒಂದು ಘಟನೆ ನಡೆದಿದೆ. ವಾಷಿಂಗ್ ಮೆಷಿನ್ ನೊಳಗೆ ಅವಿತಿದ್ದ ನಾಗರಹಾವೊಂದು ಮನೆ ಮಂದಿಯೆಲ್ಲ ಬೆಚ್ಚಿ ಬೀಳುವಂತೆ ಮಾಡಿದೆ.

Viral News


ಕೇರಳದ ಕಣ್ಣೂರಿನಲ್ಲಿ ವಾಷಿಂಗ್ ಮೆಷಿನ್ ರಿಪೇರಿ ಮಾಡುತ್ತಿದ್ದ ತಂತ್ರಜ್ಞ ಜನಾರ್ದನನ್ ಕಡಂಬೇರಿ ಅವರು ಬಹುತೇಕ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಿಪೇರಿ ಬಳಿಕ ವಾಷಿಂಗ್ ಮೆಷಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಎಂದು ನೋಡಲು ವಾಷಿಂಗ್ ಮೆಷಿನ್ ಒಳಗೆ ಇಣುಕಿ ನೋಡಿದ್ದಾರೆ. ಅದರೊಳಗೆ ಬಟ್ಟೆಯ ತುಂಡಿನಂತೆ ಇರುವುದನ್ನು ಗಮನಿಸಿ ಅದನ್ನು ಹೊರತೆಗೆಯಲು ಯಂತ್ರದೊಳಗೆ ಕೈ ಹಾಕಿದರು. ಆದರೆ ಅದು ಬಟ್ಟೆಯ ತುಂಡಲ್ಲ ನಾಗರ ಹಾವಿನ ಮರಿ ಎಂದು ತಿಳಿದು ಕಡಂಬೇರಿಯವರು ಯಂತ್ರದಿಂದ ತನ್ನ ಕೈಯನ್ನು ಬೇಗನೆ ಹೊರತೆಗೆದರು. ಇದರಿಂದಾಗಿ ಹಾವು ಕಡಿತದಿಂದ ಸ್ವಲ್ಪದರಲ್ಲೇ ಪಾರಾದರು. ಅನಂತರ ಅವರು ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Viral Video: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ

ಕೆಲವು ದಿನಗಳಿಂದ ಮಷಿನ್ ಕೆಲಸ ಮಾಡುತ್ತಿಲ್ಲ, ಮುಚ್ಚಳವನ್ನು ಮುಚ್ಚಿ ದಿನಗಟ್ಟಲೆ ಇಡಲಾಗಿದೆ. ಹಾವು ಯಂತ್ರದೊಳಗೆ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

Continue Reading
Advertisement
Samsung Launches Galaxy Watch 7 Galaxy Watch Ultra Buds 3 Series
ವಾಣಿಜ್ಯ33 mins ago

Samsung Galaxy: ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ವಾಚ್ ಅಲ್ಟ್ರಾ, ಬಡ್ಸ್ 3 ಸರಣಿ ಬಿಡುಗಡೆ

Smriti Mandhana
ಕ್ರೀಡೆ49 mins ago

Smriti Mandhana : ಶ್ರೀಲಂಕಾದ ಅಂಗವಿಕಲ ಕ್ರಿಕೆಟ್​ ಅಭಿಮಾನಿಗೆ ಮೊಬೈಲ್ ಕೊಟ್ಟ ಸ್ಮೃತಿ ಮಂದಾನಾ

One Day Information Programme on Banking Examination at Shivamogga
ಶಿವಮೊಗ್ಗ56 mins ago

Shivamogga News: ಬ್ಯಾಂಕುಗಳಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಕ್ಷೀಣ: ಎಂ.ಎನ್. ನಾಗರಾಜ್ ಆತಂಕ

Paris Olympics 2024
ಕ್ರೀಡೆ1 hour ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ

Union Minister Pralhad Joshi slams the state Congress government
ಕರ್ನಾಟಕ1 hour ago

Pralhad joshi: ಕಾಂಗ್ರೆಸಿಗರಿಗೆ ರಾಮನ ಹೆಸರೆಂದರೆ ಅಲರ್ಜಿ; ಪ್ರಲ್ಹಾದ್‌ ಜೋಶಿ ವಾಗ್ದಾಳಿ

Talent is not the property of any caste community says CM Siddaramaiah
ಕರ್ನಾಟಕ2 hours ago

CM Siddaramaiah: ಪ್ರತಿಭೆ ಯಾವುದೇ ಒಂದು ಜಾತಿ-ಸಮುದಾಯದ ಸ್ವತ್ತಲ್ಲ: ಸಿಎಂ ಸಿದ್ದರಾಮಯ್ಯ

250 Anganwadis selected to start pre primary school says Minister Lakshmi Hebbalkar
ಕರ್ನಾಟಕ2 hours ago

Lakshmi Hebbalkar: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿ ಆಯ್ಕೆ; ಜು.22ಕ್ಕೆ ಚಾಲನೆ

NEET UG 2024
ದೇಶ2 hours ago

NEET UG 2024: ನೀಟ್‌ ಪ್ರಶ್ನೆಪತ್ರಿಕೆ ಟ್ರಂಕ್‌ ಕದ್ದ ಮತ್ತೊಬ್ಬ ಕಿಂಗ್‌ಪಿನ್‌ ಸೇರಿ ಮೂವರನ್ನು ಬಂಧಿಸಿದ ಸಿಬಿಐ!

Cauvery Dispute
ಕರ್ನಾಟಕ2 hours ago

Cauvery Dispute: 2-3 ದಿನದಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿ; ಕೆರೆಗಳನ್ನು ತುಂಬಿಸಲು ಕ್ರಮ ಎಂದ ಡಿಕೆಶಿ

Royal Enfield Guerrilla 450
ಆಟೋಮೊಬೈಲ್2 hours ago

Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ11 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌