Laal Singh Chaddha | ನಷ್ಟವಿಲ್ಲ ಎನ್ನುವ ನಿರ್ಮಾಪಕರು, ಸೋತಿದೆ ಎಂದ ಆಮಿರ್‌ ಆಪ್ತ, ಯಾವುದು ನಿಜ? - Vistara News

ದೇಶ

Laal Singh Chaddha | ನಷ್ಟವಿಲ್ಲ ಎನ್ನುವ ನಿರ್ಮಾಪಕರು, ಸೋತಿದೆ ಎಂದ ಆಮಿರ್‌ ಆಪ್ತ, ಯಾವುದು ನಿಜ?

ಲಾಲ್‌ ಸಿಂಗ್‌ ಚಡ್ಡಾ (Laal Singh Chaddha) ಸಿನಿಮಾ ಫ್ಲಾಪ್‌ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ನಷ್ಟದ ಪ್ರಶ್ನೆಯೇ ಇಲ್ಲ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ವಯಾಕಾಮ್‌ 18 ಸ್ಪಷ್ಟಪಡಿಸಿದೆ…

VISTARANEWS.COM


on

Laal Singh Chaddha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಬಾಲಿವುಡ್‌ ನಟ ಆಮಿರ್‌ ಖಾನ್‌ (Aamir Khan) ನಟಿಸಿರುವ ಲಾಲ್‌ ಸಿಂಗ್‌ ಚಡ್ಡಾ (Laal Singh Chaddha) ಸಿನಿಮಾದ ಲಾಭ-ನಷ್ಟದ ಕುರಿತು ಲೆಕ್ಕಾಚಾರ ಜೋರಾಗಿದೆ. ಸಿನಿಮಾ ಬಿಡುಗಡೆಯಾಗಿ ಒಂದು ವಾರವಾದರೂ ಬಾಕ್ಸ್‌ ಆಫಿಸ್‌ನಲ್ಲಿ ೫೦ ಕೋಟಿ ರೂ. ದಾಟದ ಕಾರಣ ಇದೊಂದು ಫ್ಲಾಪ್ ಸಿನಿಮಾ ಎಂದು ಎಲ್ಲರೂ ವಿಶ್ಲೇಷಿಸುತ್ತಿದ್ದಾರೆ. ನಷ್ಟ ಅನುಭವಿಸಿದ ಡಿಸ್ಟ್ರಿಬ್ಯೂಟರ್‌ಗಳಿಗೆ ಆಮಿರ್‌ ಖಾನ್‌ ಅವರೇ ಪರಿಹಾರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ಬೆನ್ನಲ್ಲೇ, “ನಮಗೇನೂ ನಷ್ಟವಾಗಿಲ್ಲ” ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೇಳಿದೆ. ಆದರೆ, ಹಣ ಗಳಿಕೆಯಲ್ಲಿ ಸಿನಿಮಾ ಹಿಂದುಳಿದ ಕಾರಣ ಆಮಿರ್‌ ಖಾನ್‌ ಹಾಗೂ ಅವರ ಕುಟುಂಬಕ್ಕೆ ಬೇಜಾರಾಗಿದೆ ಎಂದು ನಟನ ಆಪ್ತರೊಬ್ಬರು ತಿಳಿಸಿದ್ದಾರೆ. ಹಾಗಾಗಿ, ವಾಸ್ತವ ಏನು ಎಂಬ ಕುತೂಹಲ ಮೂಡಿದೆ.

ಆಮಿರ್‌ ಆಪ್ತ ಹೇಳುವುದೇನು?

“ಫಾರೆಸ್ಟ್‌ ಗಂಪ್‌ (Forrest Gump) ಸಿನಿಮಾವನ್ನು ಭಾರತೀಯ ವರ್ಷನ್‌ನಲ್ಲಿ ಅದ್ಭುತವಾಗಿ ಮೂಡಿಬರಲಿ ಎಂಬ ಕಾರಣಕ್ಕಾಗಿ ಆಮಿರ್‌ ಖಾನ್‌ ಅವಿರತ ಪರಿಶ್ರಮ ವಹಿಸಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೆ ಬಾಕ್ಸ್‌ ಆಫಿಸ್‌ನಲ್ಲಿ ಹಿನ್ನಡೆ ಅನುಭವಿಸಿರುವುದು ಅವರಿಗೆ ಬೇಸರ ತಂದಿದೆ” ಎಂದು ನಟನ ಆತ್ಮೀಯ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ನಿರ್ಮಾಪಕರ ಸ್ಪಷ್ಟನೆ ಏನು?

ಲಾಲ್‌ ಸಿಂಗ್‌ ಚಡ್ಡಾ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದೆ, ಇದರಿಂದ ಡಿಸ್ಟ್ರಿಬ್ಯೂಟರ್‌ಗಳು ಅಪಾರ ನಷ್ಟ ಅನುಭವಿಸಿದ್ದು, ಪರಿಹಾರ ನೀಡಬೇಕು ಎಂದು ನಿರ್ಮಾಣ ಸಂಸ್ಥೆಯಾದ ವಯಾಕಾಮ್‌ ೧೮ಗೆ (Viacom 18) ಒತ್ತಾಯಿಸುತ್ತಿದ್ದಾರೆ ಎಂಬ ಕುರಿತು ವರದಿಯಾದ ಕಾರಣ ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.

“ಬೇರೆ ಡಿಸ್ಟ್ರಿಬ್ಯೂಟರ್‌ಗಳು ಸಿನಿಮಾ ಡಿಸ್ಟ್ರಿಬ್ಯೂಟ್‌ ಮಾಡಿಲ್ಲ. ವಿ೧೮ ಸ್ಟುಡಿಯೋಸ್‌ನಿಂದ ಡಿಸ್ಟ್ರಿಬ್ಯೂಟ್‌ ಮಾಡಲಾಗಿದೆ. ಹಾಗಾಗಿ, ಯಾರೂ ಪರಿಹಾರ ಕೇಳುವ ಪ್ರಶ್ನೆಯೇ ಇಲ್ಲ. ಸಿನಿಮಾ ಈಗಲೂ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನಷ್ಟ ಅನುಭವಿಸುವ ಆತಂಕವಿಲ್ಲ ಹಾಗೂ ನಷ್ಟದ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಸಿಗುವ ಹಣ ಹಾಗೂ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವ ಕಾರಣ ನಿರ್ಮಾಣ ಸಂಸ್ಥೆಯು ಲಾಭದ ನಿರೀಕ್ಷೆಯಲ್ಲಿದೆ ಎಂಬ ವಿವರಣೆ ನೀಡಲಾಗಿದೆ.

ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಬಿಡುಗಡೆಗೆ ಮುನ್ನ ಹಾಗೂ ನಂತರ ಅದನ್ನು ಬಾಯ್ಕಾಟ್‌ ಮಾಡಬೇಕು, ನಿಷೇಧಿಸಬೇಕು ಎಂದು ಒತ್ತಾಯ ಕೇಳಿಬಂದಿದ್ದವು. ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಆದಾಗ್ಯೂ, ಸುಮಾರು ೧೮೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿ ಬಿಡುಗಡೆಯಾದ ಸಿನಿಮಾ ಒಂದು ವಾರವಾದರೂ ೫೦ ಕೋಟಿ ರೂ. ಕ್ಲಬ್‌ ಕೂಡ ಸೇರದಿರುವುದು ಆಮಿರ್‌ ಖಾನ್‌ ಅವರಿಗೆ ಉಂಟಾದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದುವರೆಗೆ ಗಳಿಸಿದ್ದೆಷ್ಟು?

ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ ಬಿಡುಗಡೆಯಾಗಿ ಐದು ದಿನ ಕಳೆದು ಆರನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ಐದು ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ ೪೬ ಕೋಟಿ ರೂ. ಎಂದು ತಿಳಿದುಬಂದಿದೆ. ಸಿನಿಮಾದ ಗಳಿಕೆ ಆಮೆಗತಿಯಲ್ಲಿರುವುದರಿಂದ ಮುಂದಿನ ವಾರವೇ ಥಿಯೇಟರ್‌ಗಳಿಂದ ತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ವಿಸ್ತಾರ Explainer | ಆಮಿರ್‌ ಖಾನ್‌ನ ಲಾಲ್‌ ಸಿಂಗ್‌ ಚಡ್ಡಾಗೆ ಬಾಯ್ಕಾಟ್‌ ಏಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

PM Narendra Modi: “ನನ್ನನ್ನು ದೇವರೇ ಭೂಮಿಗೆ ಕಳಿಸಿದ್ದಾನೆ..”; ಭಾರೀ ಸದ್ದು ಮಾಡ್ತಿದೆ ಪ್ರಧಾನಿ ಮೋದಿ ಈ ಹೇಳಿಕೆ

PM Narendra Modi: ಇತ್ತೀಚೆಗೆ ಪತ್ರಕರ್ತೆ ರುಬಿಕಾ ಲಿಯಾಖತ್‌ ಅವರ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಹೀಗೆ ಮಾತನಾಡುತ್ತಾ ನಾನು ಸಾಮಾನ್ಯರಂತೆ ಹುಟ್ಟಿಲ್ಲ. ದೇವರೇ ನನ್ನನ್ನು ಭೂಮಿಗೆ ಜನರ ಸೇವೆಗಾಗಿ ಕಳುಹಿಸಿದ್ದಾನೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅಲ್ಲದೇ ಇದೇ ಕಾರಣದಿಂದಾಗಿ ನನ್ನಲ್ಲಿ ಇಷ್ಟೊಂದು ಶಕ್ತಿ ಸಾಮರ್ಥ್ಯ ಇದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

VISTARANEWS.COM


on

PM Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024)ಯ ಗುಂಗಿನಲ್ಲಿರುವ ರಾಜಕೀಯ ಮುಖಂಡರು ಪರ ವಿರೋಧ ಹೇಳಿಕೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವುದು ಸಹಜ. ತಾವು ನೀಡಿರುವ ಹೇಳಿಕೆಗಳಿಂದಲೇ ಹಲವು ದಿನಗಳ ಕಾಲ ಟ್ರೋಲ್‌ ಆಗೋದು ಇದೆ. ಇದೀಗ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದ್ದು, ಹಲವರು ಹಲವು ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಮೋದಿ ಹೇಳಿದ್ದೇನು?

ಇತ್ತೀಚೆಗೆ ಪತ್ರಕರ್ತೆ ರುಬಿಕಾ ಲಿಯಾಖತ್‌ ಅವರ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಹೀಗೆ ಮಾತನಾಡುತ್ತಾ ನಾನು ಸಾಮಾನ್ಯರಂತೆ ಹುಟ್ಟಿಲ್ಲ. ದೇವರೇ ನನ್ನನ್ನು ಭೂಮಿಗೆ ಜನರ ಸೇವೆಗಾಗಿ ಕಳುಹಿಸಿದ್ದಾನೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅಲ್ಲದೇ ಇದೇ ಕಾರಣದಿಂದಾಗಿ ನನ್ನಲ್ಲಿ ಇಷ್ಟೊಂದು ಶಕ್ತಿ ಸಾಮರ್ಥ್ಯ ಇದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಸಂದರ್ಶನದ ನಡುವೆ ರುಬಿಕಾ ಅವರು ನಿಮಗೇ ಸುಸ್ತು ಅನ್ನೋದೇ ಆಗೋದಿಲ್ವಾ ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಆ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಎಲ್ಲರಂತೆ ಸಾಮಾನ್ಯವಾಗಿ ಹುಟ್ಟಿದ್ದೇನೆಂದು ಭಾವಿಸುವ ಬದಲಾಗಿ ದೇವರ ಕಾರ್ಯವನ್ನು ಪೂರೈಸಲು ಜನಿಸಿದ್ದೇನೆ ಎಂದು ಭಾವಿಸುತ್ತೇನೆ. ನನಗೆ ಗೊತ್ತಿಲ್ಲ ನಾನು ಅಂದುಕೊಂಡಿದ್ದೂ ತಪ್ಪು ಕಲ್ಪನೆಯೂ ಆಗಿರಬಹುದು. ಅಥವಾ ನನ್ನ ಹೇಳಿಕೆಗೆ ಟೀಕೆಯೂ ವ್ಯಕ್ತವಾಗಬಹುದು. ಆದರೆ ನಾನು ಯಾವಾಗಲೂ ಹಾಗೆಯೇ ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದಿರುವ ಈ ಸಂದರ್ಶನದ ಕ್ಲಿಪಿಂಗ್ಸ್‌ ಅನ್ನು ಸ್ವತಃ ರುಬಿಕಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಪ್ರಧಾನ ಮಂತ್ರಿಗಳೇ ನಿಮಗೆ ಆಯಾಸ ಆಗುವುದಿಲ್ಲವೇ” ಎಂದ್ ಕ್ಯಾಪ್ಶನ್‌ ಕೊಟ್ಟಿದ್ದಾರೆ. ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಲವರು ಹಲವು ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ರುಬಿಕಾ ಬದಲಾಗಿ ಬೇರೆ ಪತ್ರಕರ್ತರು ಆ ಜಾಗದಲ್ಲಿ ಇರುತ್ತಿದ್ದಾರೆ ಆ ರೀತಿ ಪ್ರಶ್ನೆ ಕೇಳುತ್ತಿರಲಿಲ್ಲ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಪ್ರಧಾನಿಗೆ ಆಯಾಸ ಹೇಗೆ ಆಗಲು ಸಾಧ್ಯ? ಅವರ ಬಳಿ ಕಾರು, ಬಂಗಲೆ ಆಳು-ಕಾಳು ಜೊತೆಗಿರುವಾಗ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ರುಬಿಕಾ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

ಮತ್ತೊಂದೆಡೆ ಒಡಿಶಾದಲ್ಲಿರುವ ಐತಿಹಾಸಿಕ ಪುರಿ ಜಗನ್ನಾಥನೇ ಪ್ರಧಾನಿ ನರೇಂದ್ರ ಮೋದಿ ಅವರ ಭಕ್ತ” ಎಂಬುದಾಗಿ ಬಿಜೆಪಿ ನಾಯಕ, ಪುರಿ ಅಭ್ಯರ್ಥಿ ಸಂಬಿತ್‌ ಪಾತ್ರಾ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿವಾದ ಉಂಟಾದ ಬೆನ್ನಲ್ಲೇ, ಸಂಬಿತ್‌ ಪಾತ್ರಾ ಅವರು ತಮ್ಮ ಹೇಳಿಕೆ ಕುರಿತಂತೆ ಕ್ಷಮೆ ಕೇಳಿದ್ದಾರೆ. ಹಾಗೆಯೇ, ಅಂತಹ ಹೇಳಿಕೆ ನೀಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಮೂರು ದಿನ ಉಪವಾಸ ಕೂಡ ಕೈಗೊಳ್ಳಲು ತೀರ್ಮಾನಿಸಿದ್ದರು.

Continue Reading

Lok Sabha Election 2024

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೊಮ್ಮೆ ಹಿನ್ನಡೆ; ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Hemant Soren: ಅಕ್ರಮವಾಗಿ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್‌ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಬುಧವಾರ (ಮೇ 22) ನಿರಾಕರಿಸಿದೆ.

VISTARANEWS.COM


on

Hemant Soren
Koo

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್‌ (Hemant Soren) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮತ್ತೊಮ್ಮೆ ಹಿನ್ನಡೆಯಾಗಿದೆ. ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಬುಧವಾರ (ಮೇ 22) ನಿರಾಕರಿಸಿದೆ. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೇಮಂತ್‌ ಸೊರೆನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಮಂತ್ ಸೊರೆನ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಇದರಿಂದ ಸೊರೆನ್‌ ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಕೋರ್ಟ್‌ ಮಂಗಳವಾರ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು. ಜಾರ್ಖಂಡ್‌ನಲ್ಲಿ ಮೇ 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದ್ದು, ಪ್ರಚಾರ ನಡೆಸಲು ಜಾಮೀನು ನೀಡಬೇಕೆಂದು ಕೋರಿ ಸೊರೆನ್‌ ಮನವಿ ಸಲ್ಲಿಸಿದ್ದರು.

ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಮೇ 10ರಂದು ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಹೀಗಾಗಿ ಇದೇ ಮಾದರಿಯಲ್ಲಿ ಸೊರೆನ್‌ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಅವರಿಗಿಂತ ಹೇಮಂತ್ ಸೊರೆನ್ ಅವರ ಪ್ರಕರಣವನ್ನು ಭಿನ್ನ ಎಂದಿರುವ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಮೇ 10ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದಾಗ, ಅವರು ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಕೋರಿರಲಿಲ್ಲ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅವರ ವಿರುದ್ಧ ಯಾವುದೇ ನ್ಯಾಯಾಂಗ ಆದೇಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: Hemant Soren: ಹೇಮಂತ್‌ ಸೊರೆನ್‌ ಬಂಧನಕ್ಕಿಲ್ಲ ತಡೆ, 5 ದಿನ ಕಸ್ಟಡಿಗೆ; ಚಂಪಯಿ ಪದಗ್ರಹಣ

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಈ ವರ್ಷದ ಜನವರಿ 31ರಂದು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು.

Continue Reading

ದೇಶ

Boat Capsizes: ಭೀಕರ ದೋಣಿ ದುರಂತ; ಪುಟ್ಟ ಮಕ್ಕಳು ಸೇರಿ 6 ಜನ ನೀರುಪಾಲು

Boat Capsizes:ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ (Boat) ಮುಗುಚಿ 6 ಮಂದಿ ನೀರು ಪಾಲಾಗಿದ್ದಾರೆ. ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ನೀರು ಪಾಲಾಗಿದ್ದಾರೆ. ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು, ಅವರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

VISTARANEWS.COM


on

Boat Capsizes
Koo

ಮಹಾರಾಷ್ಟ್ರ: ಭೀಕರ ಗಾಳಿಗೆ ದೋಣಿಯಿಂದು ಮಗುಚಿ(Boat Capsizes) ಬಿದ್ದಿದ್ದು, ದೋಣಿಯಲ್ಲಿದ್ದ ಆರು ಜನ ನೀರುಪಾಲಾಗಿರುವ ದಾರುಣ ಘಟನೆ ಮಹಾರಾಷ್ಟ್ರದ (Maharastra) ಪುಣೆಯಲ್ಲಿ ನಡೆದಿದೆ. ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದುರ್ಘಟನೆ ಸಂಭವಿಸಿದ್ದು, ಇಬ್ಬರು ಪುಟ್ಟ ಮಕ್ಕಳು ಸೇರಿ ಆರು ಮಂದಿ ಕಣ್ಮರೆ ಆಗಿದ್ದಾರೆ. ನೀರು ಪಾಲಾಗಿರುವ ಆರು ಮಂದಿಗಾಗಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.

ಘಟನೆ ವಿವರ:

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ (Boat) ಮುಗುಚಿ 6 ಮಂದಿ ನೀರು ಪಾಲಾಗಿದ್ದಾರೆ. ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ನೀರು ಪಾಲಾಗಿದ್ದಾರೆ. ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು, ಅವರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಆ ಇಬ್ಬರು ದುರ್ದೈವಿಗಳನ್ನು ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ ಎಂದು ಗುರುತಿಸಲಾಗಿದೆ. ನೀರುಪಾಲಾಗಿರುವವರ ಹುಡುಕಾಟಕ್ಕೆ ರಾಷ್ತ್ರೀಯ ವಿಪತ್ತು ನಿರ್ವಹಣಾ ದಳ (NDRF) ತಂಡದ ಸಿಬ್ಬಂದಿ ಆಗಮಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರಿಸಿದ್ದಾರೆ.

ಇನ್ನು ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ನೀರುಪಾಲಾಗಿರುವ ಆರು ಜನರು ಬದುಕಿರುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ. ಇದಾಗ್ಯೂ ಇದುವರೆಗೆ ಯಾರೊಬ್ಬರ ಶವ ಪತ್ತೆ ಆಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಸಮೀಪ ಸಮುದ್ರದ ಹಿನ್ನೀರಿನಲ್ಲೂ ಮೂರು ದಿನಗಳ ಹಿಂದೆ ಪ್ರವಾಸಿಗರ ಬೋಟ್ ಮಗುಚಿದ್ದು, 40 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಅಳಿವೆ ಸಂಗಮ ಸ್ಥಳದಿಂದ ತುಸು ದೂರದಲ್ಲಿ ಘಟನೆ (Tourist Boat Capsizes) ನಡೆದಿದ್ದು, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ರಕ್ಷಣಾ ತಂಡದಿಂದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಮೂಡಂಗಿಯ ಗಣೇಶ, ರಮೇಶ ಎಂಬುವವರ ಪ್ರವಾಸಿ ಬೋಟ್ ಮಗುಚಿದ್ದು, ದೋಣಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಂಡಿದ್ದರಿಂದ ಬೋಟ್ ಮಗುಚಿದೆ. ಸಕಾಲಕ್ಕೆ ಕರಾವಳಿ ಕಾವಲು ಪಡೆ ಆಗಮಿಸಿ ರಕ್ಷಣೆ ಮಾಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ.

ಇದನ್ನೂ ಓದಿ: Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

ಮತ್ತೊಂದೆಡೆ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುವಿನ ಉಬ್ಬರಬೈಲಿನಲ್ಲಿ ನಡೆದಿದೆ. ಮುಡ್ಡಾಯಿಗುಡ್ಡೆ ಹರೀಶ್ ಪೂಜಾರಿ (48), ಹೃತೇಶ್ ಪೂಜಾರಿ (18) ಮೃತಪಟ್ಟವರು. ಮೀನು ಹಿಡಿಯಲೆಂದು ಉಬ್ಬರಬೈಲು ಕೆರೆಗೆ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮೀನಿಗೆ ಬಲೆ‌ ಹಾಕುವಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರೂ ನೀರುಪಾಲಾಗಿದ್ದಾರೆ. ಕಾರ್ಕಳ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

ದೇಶ

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Prashant Kishor: ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆ ಏರುವುದು ಖಚಿತ. ಆದರೆ ಮೂರನೇ ಬಾರಿಯ ಆಡಳಿತದಲ್ಲಿ ಕನಿಷ್ಠ ನಾಲ್ಕು ಬದಲಾವಣೆಗಳನ್ನೂ ಪ್ರಧಾನಿ ಮೋದಿ ತಂದೇ ತರುತ್ತಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೋದಿ ಸರ್ಕಾರ, ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದ್ದಾರೆ.

VISTARANEWS.COM


on

Prashant Kishor
Koo

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ಫಲಿತಾಂಶದ ಬಗ್ಗೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಚುನಾವಣೆ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ (Prashant Kishor) ಅವರು ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ಮೂವನೆ ಅವಧಿ ಆಡಳಿತದ ಬಗ್ಗೆ ಮಾತನಾಡಿದ್ದಾರೆ. ಮೂರನೇ ಅವಧಿಯ ಮೋದಿ ಸರ್ಕಾರದಲ್ಲಿ ಒಟ್ಟು ನಾಲ್ಕು ಬದಲಾವಣೆಗಳಾಗಲಿವೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆ ಏರುವುದು ಖಚಿತ. ಆದರೆ ಮೂರನೇ ಬಾರಿಯ ಆಡಳಿತದಲ್ಲಿ ಕನಿಷ್ಠ ನಾಲ್ಕು ಬದಲಾವಣೆಗಳನ್ನೂ ಪ್ರಧಾನಿ ಮೋದಿ ತಂದೇ ತರುತ್ತಾರೆ. ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೋದಿ ಸರ್ಕಾರ, ರಚನಾತ್ಮಕ ಮತ್ತು ಕಾರ್ಯಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದ್ದಾರೆ.

ನನ್ನ ಊಹೆಯ ಪ್ರಕಾರ ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಬಹಳಷ್ಟು ಸದ್ದು ಮಾಡಲಿದೆ. ಕೇಂದ್ರದಲ್ಲಿ ಅಧಿಕಾರ ಮತ್ತು ಸಂಪನ್ಮೂಲ ಎರಡಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ರಾಜ್ಯಗಳ ಆರ್ಥಿಕ ಸ್ವಾವಲಂಬನೆಯನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತಂದರೂ ಅಚ್ಚರಿ ಇಲ್ಲ ಎಂದು ಹೇಳುವ ಮೂಲಕ ಶಾಕ್‌ ಕೊಟ್ಟಿದ್ದಾರೆ.

ಪ್ರಸ್ತುತ ಪೆಟ್ರೋಲ್‌, ಡೀಸೆಲ್‌, ATF ಮತ್ತು ನೈಸರ್ಗಿಕ ಅನಿಲಗಳು ಜಿಎಸ್‌ಟಿ ಅಡಿಯಲ್ಲಿ ಬರುತ್ತಿರಲಿಲ್ಲ. ಅವುಗಳಿಗೆ ವ್ಯಾಟ್‌, ಕೇಂದ್ರ ತೆರಿಗೆ ಮತ್ತು ಅಬಕಾರಿ ಟ್ಯಾಕ್ಸ್‌ ವಿಧಿಸಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿಯಲ್ಲಿ ತರಬೇಕೆಂಬುದು ಕೈಗಾರಿಕೆಗಳ ಬಹುದಿನದ ಬೇಡಿಕೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಾರಿ ಈ ಬೇಡಿಕೆ ಪೂರೈಸುವ ಸಾಧ್ಯತೆ ಇದ್ದು, ಇದರಿಂದ ರಾಜ್ಯ ಸರ್ಕಾರಗಳ ಆದಾಯಕ್ಕೆ ಬಹುದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದೂ ಅಲ್ಲದೇ ಈ ನೀತಿಯಿಂದ ಕೇಂದ್ರದ ಮೇಲೆ ರಾಜ್ಯ ಸರ್ಕಾರಗಳು ಇನ್ನು ಹೆಚ್ಚಾಗಿ ಅವಲಂಬನೆ ಆಗುವ ಸಾಧ್ಯತೆ ಇದೆ.

ಇನ್ನು ಕೇಂದ್ರವು ಸಂಪನ್ಮೂಲಗಳ ವಿಕೇಂದ್ರೀಕರಣವನ್ನು ವಿಳಂಬಗೊಳಿಸಬಹುದು ಮತ್ತು ರಾಜ್ಯಗಳ ಬಜೆಟ್ ಸಾಲವನ್ನು ಕಠಿಣಗೊಳಿಸಬಹುದು ಎಂದು ಕಿಶೋರ್ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಜಾಗತಿಕ ಮಟ್ಟದಲ್ಲಿ, ದೇಶಗಳೊಂದಿಗೆ ವ್ಯವಹರಿಸುವಾಗ ಭಾರತದ ದೃಢತೆ ಹೆಚ್ಚಾಗುತ್ತದೆ ಅವರು ಹೇಳಿದರು.

ನಿನ್ನೆ ಪತ್ರಕರ್ತೆ ಬರ್ಖಾ ದತ್‌ ಜೊತೆ ಮಾತನಾಡಿದ್ದ ಪ್ರಶಾಂತ್‌ ಕಿಶೋರ್‌, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಲೆ ಜನ ಸಿಟ್ಟಾಗಿದ್ದಾರೆ ಎಂಬುದು ಎಲ್ಲೂ ಕೇಳಿಲ್ಲ, ನೋಡಿಲ್ಲ. ಹಾಗಾಗಿ, ಅವರೇ ಪ್ರಧಾನಿಯಾಗುವುದು ನಿಶ್ಚಿತ ಎಂದಿದ್ದರು. ಅಲ್ಲದೇ ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಂತಹ ಅಲೆ ಇಲ್ಲ. ನರೇಂದ್ರ ಮೋದಿ ಅವರ ಬಗ್ಗೆ ಜನರಿಗೆ ಈಗಲೂ ವಿಶ್ವಾಸವಿದೆ. ಜನರು ಮೋದಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರಬಹುದು, ಒಂದಷ್ಟು ಭರವಸೆಗಳು ಈಡೇರಿದೆ ಇರಬಹುದು. ಆದರೆ, ಮೋದಿ ಜನರಿಗೆ ಖಂಡಿತವಾಗಿಯೂ ಸಿಟ್ಟಿಲ್ಲ ಎಂದಿದ್ದರು.

ಇದನ್ನೂ ಓದಿ:Drone Prathap: ಡಿಫರೆಂಟ್‌ ಆಗಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಡ್ರೋನ್ ಪ್ರತಾಪ್ ಪ್ಲ್ಯಾನ್‌: ವೋಟ್‌ ಹಾಕಿದ್ದು ಸಾರ್ಥಕ ಅಂದ್ರು ಫ್ಯಾನ್ಸ್‌!

ಇನ್ನು ಬಿಜೆಪಿ ಸ್ಪಷ್ಟ ಬಹುಮತ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼಈ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ಜತೆಗೆ ಸೀಟುಗಳ ಸಂಖ್ಯೆಯನ್ನೂ ವೃದ್ಧಿಸಿಕೊಳ್ಳಲಿದೆ. ಅದರಲ್ಲಿಯೂ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಜೆಪಿ ಇನ್ನಷ್ಟು ಶಕ್ತವಾಗಲಿದೆ. ಅಲ್ಲದೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿಯೂ ಸೀಟು ಹೆಚ್ಚಳವಾಗುವ ನಿರೀಕ್ಷೆ ಇದೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading
Advertisement
PM Narendra Modi
ದೇಶ13 mins ago

PM Narendra Modi: “ನನ್ನನ್ನು ದೇವರೇ ಭೂಮಿಗೆ ಕಳಿಸಿದ್ದಾನೆ..”; ಭಾರೀ ಸದ್ದು ಮಾಡ್ತಿದೆ ಪ್ರಧಾನಿ ಮೋದಿ ಈ ಹೇಳಿಕೆ

Prajwal Revanna Case JDS files complaint against Rahul Gandhi for Prajwal accused of mass rape of 400 women
ಕ್ರೈಂ20 mins ago

Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

gas leak deaths mysore
ಕ್ರೈಂ59 mins ago

Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

Rave party telugu actress Ashi Roy in party
South Cinema1 hour ago

Rave party: ರೇವ್ ಪಾರ್ಟಿಯ ಕುರಿತು ತೆಲುಗು ನಟಿ ಆಶಿ ರಾಯ್ ಸ್ಫೋಟಕ ಹೇಳಿಕೆ!

Hemant Soren
Lok Sabha Election 20241 hour ago

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೊಮ್ಮೆ ಹಿನ್ನಡೆ; ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

CM City Rounds Vijayanagar Canal Siddaramaiah warns to Chief engineer will be suspended if not resolved within this year
ಬೆಂಗಳೂರು1 hour ago

CM City Rounds: ವಿಜಯನಗರ ರಾಜಕಾಲುವೆ; ಈ ವರ್ಷದೊಳಗೆ ಪರಿಹರಿಸದಿದ್ದರೆ ಮುಖ್ಯ ಎಂಜಿನಿಯರ್‌ ಸಸ್ಪೆಂಡ್‌: ಸಿಎಂ ವಾರ್ನಿಂಗ್

Boat Capsizes
ದೇಶ2 hours ago

Boat Capsizes: ಭೀಕರ ದೋಣಿ ದುರಂತ; ಪುಟ್ಟ ಮಕ್ಕಳು ಸೇರಿ 6 ಜನ ನೀರುಪಾಲು

List of Movies Releasing From may 24
ಟಾಲಿವುಡ್2 hours ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ2 hours ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್2 hours ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ9 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌