ವಿಸ್ತಾರ ಸಂಪಾದಕೀಯ | ಕರಾವಳಿಯಲ್ಲಿನ ಡ್ರಗ್ಸ್ ಜಾಲ ಮಟ್ಟ ಹಾಕಿ - Vistara News

ದೇಶ

ವಿಸ್ತಾರ ಸಂಪಾದಕೀಯ | ಕರಾವಳಿಯಲ್ಲಿನ ಡ್ರಗ್ಸ್ ಜಾಲ ಮಟ್ಟ ಹಾಕಿ

ಒಂದು ದೇಶದ ಯುವಜನತೆಯನ್ನು ಸರ್ವನಾಶ ಮಾಡಲು ಮದ್ದುಗುಂಡುಗಳು ಬೇಕಾಗಿಲ್ಲ; ಅವರಿಗೆ ಮಾದಕ ವಸ್ತುಗಳ ನಶೆ ಹತ್ತಿಸಿದರೆ ಸಾಕು ಎಂದು ಸ್ವಾಮಿ ವಿವೇಕಾನಂದರು ಹಿಂದೆಯೇ ಹೇಳಿದ್ದರು. ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತೊಗೆಯದಿದ್ದರೆ ಭಾರಿ ಅನಾಹುತ ಕಾದಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಟಕದ ಕರಾವಳಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮಂಗಳೂರು, ಮಣಿಪಾಲದ ಮೆಡಿಕಲ್‌ ಕಾಲೇಜುಗಳಲ್ಲಿ ಪತ್ತೆಯಾದ ಡ್ರಗ್ಸ್‌ ದಂಧೆ ಇನ್ನಷ್ಟು ಕಾಲೇಜುಗಳಿಗೆ ವಿಸ್ತರಣೆಯಾಗಿರುವುದು ಬಯಲಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ವೈದ್ಯರು, ವೈದ್ಯಕೀಯ, ಎಂಡಿ ವಿದ್ಯಾರ್ಥಿಗಳಿರುವುದು, ಇವರೆಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿ ತನ್ನ ಮಾಫಿಯಾವನ್ನು ಹರಡಿರುವುದು ತೀರಾ ಆತಂಕಕಾರಿ ಸಂಗತಿ.

ಈ ಡ್ರಗ್ಸ್‌ ಪೆಡ್ಲರ್‌ಗಳ ಜತೆಗೆ ವಿದ್ಯಾರ್ಥಿನಿಯರು ಸಂಬಂಧ ಹೊಂದಿರುವುದು, ಲಿವಿಂಗ್‌ ಟುಗೆದರ್‌ ವ್ಯಾಪಕವಾಗಿ ಹರಡಿರುವುದು ಮತ್ತು ಅದರಿಂದಲೇ ಮಾದಕ ದ್ರವ್ಯ ವ್ಯವಹಾರಕ್ಕೆ ಹೆಚ್ಚಿನ ಪೋಷಣೆ ಪಡೆದಿರುವುದು ಕೂಡ ಕಳವಳಕಾರಿ. ಇದನ್ನು ಮಟ್ಟ ಹಾಕುವುದರ ಜತೆಗೆ, ಬೇರು ಸಮೇತ ಕೀಳಬೇಕು ಎಂಬುದು ಕೂಡ ನಿಜ. ಈ ವಿಚಾರದಲ್ಲಿ ಪೊಲೀಸ್‌ ವ್ಯವಸ್ಥೆ ಕಠಿಣವಾಗಿ ವರ್ತಿಸಬೇಕಿದೆ.

ಕರಾವಳಿಯು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಮೆಡಿಕಲ್ ಎಂಜಿನಿಯರಿಂಗ್‌ ಮಾತ್ರವಲ್ಲ, ಇತರ ಉನ್ನತ ಶಿಕ್ಷಣ ವಿದ್ಯಾಸಂಸ್ಥೆಗಳು ಕೂಡ ಇಲ್ಲಿವೆ. ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ದೇಶಾದ್ಯಂತದಿಂದ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಾರೆ. ಹೀಗೆ ಬಂದವರು ಅದು ಹೇಗೋ ಡ್ರಗ್ಸ್‌ ಜಾಲದಲ್ಲಿ ಸಿಲುಕಿಕೊಂಡು, ಅದರಿಂದ ಹೊರಬರಲಾಗದೆ ಚಟದ ದಾಸರಾಗಿ ಜೀವನ ವ್ಯರ್ಥಗೊಳಿಸಿಕೊಳ್ಳುತ್ತಾರೆ. ಪೋಷಕರ ಕಡೆಯಿಂದ ಬರುವ ನಿಯಂತ್ರಣ ಇಲ್ಲದ ಹಣವೂ ಈ ಬೆಳವಣಿಗೆಗೆ ಒಂದು ಕಾರಣ. ಹೆತ್ತವರಿಂದ ದೂರವಿದ್ದುಕೊಂಡು ಯಾರೂ ಕೇಳುವವರಿಲ್ಲ ಎಂಬ ಅನಾಮಿಕತೆಯೂ ಈ ಕೀಳು ವ್ಯಸನಕ್ಕೆ ಇಂಬು ಕೊಡುತ್ತದೆ. ಪ್ರಭಾವಿಗಳ ಮಕ್ಕಳಾಗಿದ್ದರಂತೂ ಕೇಳುವುದೇ ಬೇಡ. ಈ ವ್ಯವಹಾರದಲ್ಲಿ ಅನ್ಯರಾಜ್ಯಗಳಿಂದ ಬಂದ ವಿದ್ಯಾರ್ಥಿಗಳ ಪಾಲೆಷ್ಟು, ಸ್ಥಳೀಯರ ಪಾಲೆಷ್ಟು ಎಂಬುದೂ ಪತ್ತೆಯಾಗಬೇಕು. ಸ್ಥಳೀಯ ಮಾಫಿಯಾಗಳ ಪಾತ್ರವಿಲ್ಲದೆ ಈ ವ್ಯವಹಾರ ನಡೆಯಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಶೀಲಿಸಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕದೇ ಹೋದರೆ ಇಡೀ ಕರಾವಳಿಯ ಜನಜೀವನದ ಮೇಲೆ ಇದು ಭಾರಿ ದುಷ್ಪರಿಣಾಮ ಬೀರಲಿದೆ.

ಹಿಮಾಚಲದ ಪಾರ್ವತಿ ಕಣಿವೆ ಮುಂತಾದ ಕಡೆಗಳಿಂದ ಬೆಳೆದ ಗಾಂಜಾ ಇಲ್ಲಿಗೆ ಬರುತ್ತಿದೆ ಎಂಬ ಗುಮಾನಿ ಇದೆ. ಆದರೆ ಇದಕ್ಕೆ ಇರಬಹುದಾದ ಅಂತಾರಾಷ್ಟ್ರೀಯ ಆಯಾಮದ ದಿಕ್ಕಿನಲ್ಲಿ ಕೂಡ ತನಿಖೆ ನಡೆಯಬೇಕು. ಗಾಂಜಾ, ಅಫೀಮು ಮುಂತಾದ ಮಾದಕ ದ್ರವ್ಯಗಳ ವ್ಯವಹಾರವನ್ನೇ ತಮ್ಮ ಆರ್ಥಿಕತೆಯ ಬೆನ್ನೆಲುಬಾಗಿಸಿಕೊಂಡಿರುವ ಪಾಕಿಸ್ತಾನ, ಅಫಘಾನಿಸ್ತಾನ ಮುಂತಾದ ದೇಶಗಳು ನಮ್ಮ ಅಕ್ಕಪಕ್ಕದಲ್ಲೇ ಇವೆ. ಅಫಘಾನಿಸ್ತಾನವಂತೂ ಇತ್ತೀಚೆಗೆ ಡ್ರಗ್ಸ್‌ ಹಣದಿಂದಲೇ ಬದುಕಿಕೊಂಡಿದೆ. ಅದನ್ನು ಗಡಿಯಲ್ಲಿ ನುಸುಳಿಸಿ ಒಳಸೇರಿಸಲು ಪಾಕಿಸ್ತಾನ ಸದಾ ಹೊಂಚು ಹಾಕುತ್ತಿದೆ. ಇದರ ಪರಿಣಾಮವಾಗಿಯೇ ಪಂಜಾಬ್‌ ಎಂಬ ಪಂಚನದಿಗಳ ಸುಂದರ ಕೃಷಿ ರಾಜ್ಯ ಇಂದು ಭಾರತದ ʼಮಾದಕ ದ್ರವ್ಯ ರಾಜಧಾನಿʼ ಎನಿಸಿಕೊಂಡಿದೆ. ಅಲ್ಲಿನ ಎರಡು ತಲೆಮಾರುಗಳು ಡ್ರಗ್ಸ್‌ ಚಟದಿಂದ ಸರ್ವನಾಶವಾಗಿವೆ. ಅಲ್ಲಿಂದ ಅದು ಹರಿಯಾಣ, ದಿಲ್ಲಿಗೂ ಹಬ್ಬಿದೆ. ಇಡೀ ದೇಶವನ್ನು ಅಸ್ಥಿರಗೊಳಿಸಲು ಇಂಥ ಒಂದು ಮಾದಕ ದ್ರವ್ಯ ಜಾಲ ಸಾಕಾಗುತ್ತದೆ.

ಎನ್‌ಸಿಬಿ ಮುಂತಾದ ತನಿಖಾ ಸಂಸ್ಥೆಗಳು ಡ್ರಗ್ಸ್‌ ಮಾಫಿಯಾ ವಿರುದ್ಧ ಕಾರ್ಯಾಚರಿಸುತ್ತಿದ್ದು, ಈ ವರ್ಷದ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಮಾದಕ ದ್ರವ್ಯಗಳನ್ನು ಗುಜರಾತ್‌ ಕರಾವಳಿಯಲ್ಲಿ ಪತ್ತೆ ಮಾಡಲಾಗಿದೆ. ಇದು ಡ್ರಗ್ಸ್‌ ಮಾಫಿಯಾದ ದೊಡ್ಡ ಜಾಲವಾಗಿದೆ ಎಂಬುದು ಗೊತ್ತಾಗಿದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಹೆಚ್ಚು ದೂರವಿಲ್ಲ. ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕುರಿತ 2022ರ ವಾರ್ಷಿಕ ವರದಿ (UN Office on Drugs and Crime’s World Drug Report 2022) ತಿಳಿಸಿದ ಪ್ರಕಾರ, ಭಾರತ ಜಗತ್ತಿನ ಅತಿ ದೊಡ್ಡ ಅಫೀಮು ಮಾರುಕಟ್ಟೆ. ಪಂಜಾಬ್‌, ಹಿಮಾಚಲ ಪ್ರದೇಶ, ಗುಜರಾತ್‌ಗಳು ಕ್ರಮವಾಗಿ ಇದರ ಪೂರೈಕೆಯಲ್ಲಿ 1, 2, 3ನೇ ಸ್ಥಾನದಲ್ಲಿವೆ. ಇಲ್ಲಿನ ವಿದ್ಯಾರ್ಥಿಗಳು ಕರ್ನಾಟಕ ಕರಾವಳಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಇವರೆಲ್ಲಾ ಡ್ರಗ್ಸ್‌ ಕಳ್ಳಸಾಗಣೆಗೆ ಸಾಂಪ್ರದಾಯಿಕ ಮಾದರಿಗಳ ಜತೆಗೆ ಡಾರ್ಕ್‌ನೆಟ್‌ ಮುಂತಾದ ಅಧುನಿಕ ತಂತ್ರಜ್ಞಾನಗಳನ್ನೂ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ.

ಒಂದು ದೇಶದ ಯುವಜನತೆಯನ್ನು ಸರ್ವನಾಶ ಮಾಡುವುದಕ್ಕೆ ಮದ್ದುಗುಂಡುಗಳು ಬೇಕಾಗಿಲ್ಲ; ಅವರಿಗೆ ಮಾದಕ ವಸ್ತುಗಳ ನಶೆ ಹತ್ತಿಸಿದರೆ ಸಾಕು ಎಂದು ಸ್ವಾಮಿ ವಿವೇಕಾನಂದರು ಹಿಂದೆಯೇ ಹೇಳಿದ್ದರು. ಇದು ಮೆಕ್ಸಿಕೋ, ಕೊಲಂಬಿಯಾ ಮುಂತಾದ ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಅಕ್ಷರಶಃ ನಡೆದಿರುವುದನ್ನು ನಾವು ಕಾಣಬಹುದು. ಅಲ್ಲಿನ ಯುವಜನತೆ ಗೊತ್ತು ಗುರಿ ಎಲ್ಲವನ್ನೂ ಕಳೆದುಕೊಂಡು, ಇಡೀ ಜಗತ್ತಿಗೆ ಡ್ರಗ್ಸ್‌ ತಲುಪಿಸುವುದು ಹಾಗೂ ತಾನೂ ಸೇವಿಸಿ ಹಾಳಾಗುವುದರಲ್ಲಿ ನಿರತವಾಗಿದೆ. ದಕ್ಷಿಣ ಆಫ್ರಿಕದ ಕೆಲ ದೇಶಗಳೂ ಅದೇ ಹಾದಿಯಲ್ಲಿವೆ. ಜಗತ್ತಿನ ಶೇ.80ರಷ್ಟು ಡ್ರಗ್ಸ್‌ ಈ ಕೆಲವೇ ದೇಶಗಳಿಂದ ಬರುತ್ತಿದೆ. ಕೆಲವೇ ದಶಕಗಳ ಹಿಂದೆ ಇವು ಹೀಗಿರಲಿಲ್ಲ. ಇಲ್ಲಿಗೆ ಬಂದ ವಸಾಹತುಶಾಹಿ ಶಕ್ತಿಗಳು ಮಾದಕ ದ್ರವ್ಯದ ರುಚಿ ಹತ್ತಿಸಿದವು. ಕಾಲಾನುಕ್ರಮದಲ್ಲಿ ಅವು ಹೀಗಾಗಿವೆ. ಅಂದರೆ ಒಂದು ದೇಶ ಡ್ರಗ್ಸ್‌ನಿಂದ ಹಾಳಾಗುವುದಕ್ಕೆ ತುಂಬಾ ವರ್ಷಗಳೇನೂ ಬೇಡ. ಡ್ರಗ್ಸ್‌ ಜತೆಗೆ ಭಯೋತ್ಪಾದನೆ ಮುಂತಾದ ಇತರ ವಿಕಾರಗಳೂ ಕೂಡ ಒಳನುಸುಳುತ್ತವೆ.

ಇದನ್ನು ಅರ್ಥಮಾಡಿಕೊಂಡು, ಮಾದಕ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಮಟ್ಟಹಾಕಬೇಕಿದೆ. ಯಾವುದೇ ಪ್ರಭಾವಿಗಳ ಒತ್ತಡಕ್ಕೂ ಮಣಿಯದೆ ಮಾಫಿಯಾವನ್ನು ತಡೆಗಟ್ಟಬೇಕು. ಕರಾವಳಿಯನ್ನು, ಆ ಮೂಲಕ ಕರ್ನಾಟಕವನ್ನು ರಕ್ಷಿಸಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಮತ್ತು ಪ್ರಜ್ಞಾವಂತ ಜನತೆ ಒಟ್ಟುಗೂಡಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ನಕ್ಸಲ್ ಮುಕ್ತ ಭಾರತ ಸನ್ನಿಹಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

NSUI: ದೆಹಲಿ ವಿವಿಯಲ್ಲಿ ಗಲಾಟೆ ಮಾಡಿ, ರಾಮನ ಮೂರ್ತಿ ಒಡೆದ ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ಸದಸ್ಯರು; ಭಾರಿ ವಿವಾದ!

NSUI: ಎಬಿವಿಪಿ ಆರೋಪವನ್ನು ಎನ್‌ಎಸ್‌ಯುಐ ಅಲ್ಲಗಳೆದಿದೆ. “ಎಬಿವಿಪಿ ಉಪಾಧ್ಯಕ್ಷ ಅಭಿ ದಹಿಯಾ ಹಾಗೂ ಅಧ್ಯಕ್ಷ ತುಷಾರ್‌ ದೇಢಾ ಅವರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂಬ ಸಂಗತಿಯನ್ನು ಎನ್‌ಎಸ್‌ಯುಐ ಬಯಲು ಮಾಡಿದೆ. ಇದರ ಸೇಡಿನ ಭಾಗವಾಗಿಯೇ ಎಬಿವಿಪಿ ಕಾರ್ಯಕರ್ತರು ವಿವಿಯಲ್ಲಿರುವ ಎನ್‌ಎಸ್‌ಯುಐ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ” ಎಂದು ಎನ್‌ಎಸ್‌ಯುಐ ತಿಳಿಸಿದೆ.

VISTARANEWS.COM


on

NSUI
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ಕಲಹ ಜೋರಾಗಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ (Delhi University) ಕಾಂಗ್ರೆಸ್‌ ವಿದ್ಯಾರ್ಥಿ ಘಟಕವಾದ ನ್ಯಾಷನಲ್‌ ಸ್ಟುಡೆಂಟ್ಸ್‌ ಯುನಿಯನ್‌ ಆಫ್‌ ಇಂಡಿಯಾ (NSUI) ಹಾಗೂ ಆರ್‌ಎಸ್‌ ವಿದ್ಯಾರ್ಥಿ ಘಟಕವಾದ ಎಬಿವಿಪಿ ಮಧ್ಯೆ ಗಲಾಟೆ ನಡೆದಿದೆ. ಅದರಲ್ಲೂ, ದೆಹಲಿ ವಿವಿಯಲ್ಲಿರುವ ದೆಹಲಿ ವಿವಿ ವಿದ್ಯಾರ್ಥಿಗಳ ಒಕ್ಕೂಟದ (DUSU) ಕಚೇರಿಗೆ ಎನ್‌ಎಸ್‌ಯುಐ ಘಟಕದ ಮುಖಂಡರು ದಾಳಿ ನಡೆಸಿದ್ದು, ಅಲ್ಲಿದ್ದ ರಾಮನ ಮೂರ್ತಿಯನ್ನು ಒಡೆದು ಹಾಕಿ, ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ. ಇದು ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅಭಿ ದಹಿಯಾ ಅವರು ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. “ಡಿಯುಎಸ್‌ಯು ಅಧ್ಯಕ್ಷ ತುಷಾರ್‌ ದೇಢಾ, ಕಾರ್ಯದರ್ಶಿ ಅಪರಾಜಿತಾ, ಜಂಟಿ ಕಾರ್ಯದರ್ಶಿ ಸಚಿನ್‌ ಬೈಸ್ಲಾ ಸೇರಿ ಹಲವರ ಕಚೇರಿಗೆ ಭಾನುವಾರ ಬೆಳಗ್ಗೆ ಎನ್‌ಎಸ್‌ಯುಐ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ದಾಳಿಕೋರರು ಮೊದಲು ಮದ್ಯಪಾನ ಮಾಡಿದ್ದಾರೆ. ಇದಾದ ಬಳಿಕ ಡಿಯುಎಸ್‌ಯು ಪದಾಧಿಕಾರಿಗಳ ಕಚೇರಿಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ” ಎಂದಿದ್ದಾರೆ.

ಅಭಿ ದಹಿಯಾ ಕಚೇರಿಯಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವ, ವಿವೇಕಾನಂದರ ಫೋಟೊವನ್ನು ವಿರೂಪಗೊಳಿಸಿರುವ, ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಕಚೇರಿಯಲ್ಲಿದ್ದ ಶ್ರೀರಾಮನ ಮೂರ್ತಿಯನ್ನು ಕೂಡ ಒಡೆದು ಹಾಕಲಾಗಿದೆ ಎಂಬುದಾಗಿ ಒಕ್ಕೂಟವು ಆರೋಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಕೂಡ ಆರೋಪ-ಪ್ರತ್ಯಾರೋಪಕ್ಕಿಳಿದಿದ್ದಾರೆ.

ಎಬಿವಿಪಿ ಆರೋಪವನ್ನು ಎನ್‌ಎಸ್‌ಯುಐ ಅಲ್ಲಗಳೆದಿದೆ. “ಎಬಿವಿಪಿ ಉಪಾಧ್ಯಕ್ಷ ಅಭಿ ದಹಿಯಾ ಹಾಗೂ ಅಧ್ಯಕ್ಷ ತುಷಾರ್‌ ದೇಢಾ ಅವರು ನಕಲಿ ಪದವಿಗಳನ್ನು ಹೊಂದಿದ್ದಾರೆ ಎಂಬ ಸಂಗತಿಯನ್ನು ಎನ್‌ಎಸ್‌ಯುಐ ಬಯಲು ಮಾಡಿದೆ. ಇದರ ಸೇಡಿನ ಭಾಗವಾಗಿಯೇ ಎಬಿವಿಪಿ ಕಾರ್ಯಕರ್ತರು ವಿವಿಯಲ್ಲಿರುವ ಎನ್‌ಎಸ್‌ಯುಐ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ” ಎಂದು ಎನ್‌ಎಸ್‌ಯುಐ ತಿಳಿಸಿದೆ. ಅಭಿ ದಹಿಯಾ ಅವರನ್ನು ಡಿಯುಎಸ್‌ಯು ಉಪಾಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಎನ್‌ಎಸ್‌ಯುಐ ಆಗ್ರಹಿಸಿದೆ. ಇದರ ಭಾಗವಾಗಿಯೇ, ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: JNU Election: ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿ ಚುನಾವಣೆಯಲ್ಲಿ ಎಡಪಕ್ಷಗಳ ಕ್ಲೀನ್‌ ಸ್ವೀಪ್

Continue Reading

ದೇಶ

ಅನಂತ್‌ ಅಂಬಾನಿ ಮದುವೆಯಲ್ಲಿ ಶಂಕರ್‌ ಮಹಾದೇವನ್‌, ಶ್ರೇಯಾ ಘೋಷಾಲ್ ಗಾಯನಕ್ಕೆ ಮನಸೋತ ಗಣ್ಯರು; Video ಇದೆ

Anant Ambani Wedding: ಶಂಕರ್‌ ಮಹಾದೇವನ್‌, ಸೋನು ನಿಗಮ್‌ ಹಾಗೂ ಶ್ರೇಯಾ ಘೋಷಾಲ್‌ ಅವರ ತಂಡವು ‘ರಾಮ ರಾಮ ಜಯ ರಾಜಾ ರಾಮ್‌’ ಹಾಡನ್ನು ಎಲ್ಲರೂ ತಲೆದೂಗುವಂತೆ ಹಾಡಿದರು. ಸಂಗೀತ ಕಾರ್ಯಕ್ರಮದಲ್ಲಿ ಈ ಹಾಡನ್ನು ಕೇಳಿದ ಎಲ್ಲ ಗಣ್ಯರೂ ಮೂಕವಿಸ್ಮಿತರಾದರು. ಎಲ್ಲರೂ ತಲೆದೂಗಿ, ಚಪ್ಪಾಳೆ ಬಾರಿಸಿ ಗಾಯನವನ್ನು ಆನಂದಿಸಿದರು. ಇವರ ಗಾಯನದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

VISTARANEWS.COM


on

Anant Ambani Wedding
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ- ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹವು ಶುಕ್ರವಾರ‌ (ಜುಲೈ 12) ಅದ್ಧೂರಿಯಾಗಿ ನಡೆದಿದೆ. ಶನಿವಾರ ಶುಭ ಆಶೀರ್ವಾದ ಕಾರ್ಯಕ್ರಮ ನಡೆದರೆ, ಇಂದು (ಜುಲೈ 14) ರಿಸೆಪ್ಶನ್‌ ಸಂಭ್ರಮ ನಡೆದಿದೆ. ಇನ್ನು ಶನಿವಾರ ನಡೆದ ಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಗಾಯಕರಾದ ಶಂಕರ್‌ ಮಹಾದೇವನ್‌, ಸೋನು ನಿಗಮ್‌ ಹಾಗೂ ಶ್ರೇಯಾ ಘೋಷಾಲ್‌ ಅವರ ತಂಡವು ‘ರಾಮ ರಾಮ ಜಯ ರಾಜಾ ರಾಮ್‌’ ಎಂಬ ಹಾಡನ್ನು ಹಾಡಿದ್ದು, ಇದು ಈಗ ಭಾರಿ ವೈರಲ್‌ ಆಗಿದೆ.

ಶಂಕರ್‌ ಮಹಾದೇವನ್‌, ಸೋನು ನಿಗಮ್‌ ಹಾಗೂ ಶ್ರೇಯಾ ಘೋಷಾಲ್‌ ಅವರ ತಂಡವು ‘ರಾಮ ರಾಮ ಜಯ ರಾಜಾ ರಾಮ್‌’ ಹಾಡನ್ನು ಎಲ್ಲರೂ ತಲೆದೂಗುವಂತೆ ಹಾಡಿದರು. ಸಂಗೀತ ಕಾರ್ಯಕ್ರಮದಲ್ಲಿ ಈ ಹಾಡನ್ನು ಕೇಳಿದ ಎಲ್ಲ ಗಣ್ಯರೂ ಮೂಕವಿಸ್ಮಿತರಾದರು. ಎಲ್ಲರೂ ತಲೆದೂಗಿ, ಚಪ್ಪಾಳೆ ಬಾರಿಸಿ ಗಾಯನವನ್ನು ಆನಂದಿಸಿದರು. ಅದರಲ್ಲೂ, ಶಂಕರ್‌ ಮಹಾದೇವನ್‌ ಅವರ ಗಾಯನಕ್ಕಂತೂ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತು. ಸಾಮಾಜಿಕ ಜಾಲತಾಣಗಳಲ್ಲಿ ಇವರ ಗಾಯನದ ವಿಡಿಯೊ ವೈರಲ್‌ ಆಗುತ್ತಲೇ ಜನರು ಕೂಡ ಶ್ಲಾಘಿಸಿದ್ದಾರೆ.

ಅಂಬಾನಿ ಮದುವೆಯಲ್ಲಿ ಗಾಯಕರು

ರಾಜಕಾರಣಿಗಳು ಕೂಡ ಭಾಗಿ

ಅನಂತ್‌ ಅಂಬಾನಿ ಮದುವೆಯಲ್ಲಿ ಸೆಲೆಬ್ರಿಟಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ರಾಜಕಾರಣಿಗಳು ಕೂಡ ಭಾಗಿಯಾದರು. ಟಿಎಂಸಿ ಪಕ್ಷದ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿವಾಹದಲ್ಲಿ ಭಾಗವಹಿಸಿದ್ದರು. ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ (ಶರದ್ ಪವಾರ್) ಹಿರಿಯ ನಾಯಕಿ ಸುಪ್ರಿಯಾ ಸುಳೆ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದ ಹಲವು ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಅಮಿತಾಭ್‌ ಬಚ್ಚನ್ ಅವರನ್ನು ಕಂಡೊಡನೆ ರಜನಿಕಾಂತ್‌ ಅವರು, ಬಚ್ಚನ್‌ ಅವರ ಪಾದಗಳಿಗೆ ನಮಸ್ಕರಿಸಲು ಮುಂದಾಗಿದ್ದರು. ಈ ವೇಳೆ ಅಮಿತಾಭ್‌ ಅವರು ಪಾದಗಳನ್ನು ಸ್ಪರ್ಶಿಸಲು ಬಿಡದೆ ಅಪ್ಪಿಕೊಂಡಿದ್ದಾರೆ.‌

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆದ ಪ್‌ನಲ್ಲಿ, ಇಬ್ಬರೂ ಪರಸ್ಪರ ಶುಭಾಶಯ ಕೋರಿದ್ದಾರೆ. ಅಮಿತಾಭ್ ಕೈ ಚಾಚುತ್ತಿದ್ದಂತೆ, ರಜನಿಕಾಂತ್ ಅವರು, ಬಚ್ಚನ್‌ ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು. ಅಮಿತಾಭ್ ಶೀಘ್ರವಾಗಿ ರಜನಿ ಅವರ ಕೈಗಳನ್ನು ಹಿಡಿದು ಬಳಿಕ ಅಪ್ಪಿಕೊಂಡರು. ಇಬ್ಬರೂ ಪರಸ್ಪರ ಕೈಕುಲುಕಿದರು. ಸ್ವಲ್ಪ ಸಮಯ ಮಾತನಾಡಿದರು. ಈ ಕಾರ್ಯಕ್ರಮಕ್ಕಾಗಿ ಅಮಿತಾಭ್‌ ಅವರು ಬಣ್ಣಬಣ್ಣದ ಶೇರ್ವಾನಿ ಮತ್ತು ಶಾಲು ಧರಿಸಿದ್ದರು. ರಜನಿಕಾಂತ್ ಅವರು ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Anant Ambani Wedding: ಅನಂತ್‌ ಅಂಬಾನಿ ಜೊತೆ ಬಾಬಾ ರಾಮ್‌ದೇವ್‌ ಭರ್ಜರಿ ಸ್ಟೆಪ್‌; ವಿಡಿಯೋ ನೋಡಿದ ನೆಟ್ಟಿಗರು ಫುಲ್‌ ಫಿದಾ

Continue Reading

ದೇಶ

Donald Trump Assassination Bid: “ಮೋದಿ ವಿರುದ್ಧದ ಹಿಂಸಾಚಾರಕ್ಕೆ ಬೆಂಬಲ”- ಟ್ರಂಪ್‌ ಮೇಲೆ ದಾಳಿ ಬೆನ್ನಲ್ಲೇ ರಾಹುಲ್‌ ವಿರುದ್ಧ ಬಿಜೆಪಿ ಕಿಡಿ

Donald Trump Assassination Bid:ಸದಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವ ಮತ್ತು ಪೋತ್ಸಾಹಿಸುವ ರಾಹುಲ್‌ ಗಾಂಧಿ ಮೂರನೇ ಬಾರಿ ಸೋಲುಂಡಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ಲೈ ಓವರ್‌ನ ಕೆಳಗೆ ಕೆಲಗಂಟೆಗಳ ಕಾಲ ತಡೆದ ಘಟನೆಯನ್ನು ಹೇಗೆ ಮರೆಯಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

VISTARANEWS.COM


on

Donald Trump Assassination Bid
Koo

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲೇ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump Assassination Bid) ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣವು ಜಗತ್ತಿನಾದ್ಯಂತ ಸುದ್ದಿಯಾಗಿದೆ. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರ ಹಳೆಯ ಹೇಳಿಕೆಯನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದೆ.

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಟ್ರಂಪ್‌ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಹಿಂಸಾಚಾರಕ್ಕೆ ಪ್ರೋತ್ಸಾಹಿಸಿ ಈ ಹೊಂದೆ ರಾಹುಲ್‌ ಗಾಂದಿ ನೀಡಿದ್ದ ಹೇಳಿಕೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ. “ಸದಾ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವ ಮತ್ತು ಪೋತ್ಸಾಹಿಸುವ ರಾಹುಲ್‌ ಗಾಂಧಿ ಮೂರನೇ ಬಾರಿ ಸೋಲುಂಡಿದ್ದಾರೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ಲೈ ಓವರ್‌ನ ಕೆಳಗೆ ಕೆಲಗಂಟೆಗಳ ಕಾಲ ತಡೆದ ಘಟನೆಯನ್ನು ಹೇಗೆ ಮರೆಯಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ರಾಹುಲ್‌ ಗಾಂಧಿ ತಮ್ಮ ವಿರೋಧಿಗಳ ವಿರುದ್ಧ ಒಂದೇ ರೀತಿಯಾದ ಭಾಷೆಯನ್ನು ಬಳಸುತ್ತಿದೆ. ಅಮೆರಿಕದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಅಭಿಯಾನ ಶುರು ಮಾಡಿದರೆ, ಭಾರತದಲ್ಲಿ ಪ್ರತಿಪಕ್ಷಗಳು ಸಂವಿಧಾನವನ್ನು ಕಾಪಾಡಿ ಎಂಬ ಅಭಿಯಾನ ನಡೆಸಿತ್ತು. ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಬಳಸುವಂತಹ ಪದ ಉದಾಹರಣೆಗೆ ಸರ್ವಾಧಿಕಾರಿ.. ಇಂತಹ ಪದಗಳನ್ನೇ ಜೋ ಬೈಡೆನ್‌ ಮತ್ತು ಅವರ ಬೆಂಬಲಿಗರು ಟ್ರಂಪ್‌ ವಿರುದ್ಧ ಬಳಸುತ್ತಿದ್ದಾರೆ ಎಂದು ಮಾಳವಿಯಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: Donald Trump: ಡೊನಾಲ್ಡ್‌ ಟ್ರಂಪ್‌ ಕಿವಿಗೆ ತಾಗಿದ್ದು ಬುಲೆಟ್‌ ಅಲ್ಲ? ಹಾಗಾದ್ರೆ ಏನದು? ಹುಸಿ ದಾಳಿಯ ಅನುಮಾನ ಏಕೆ?

Continue Reading

ದೇಶ

Narendra Modi: ನರೇಂದ್ರ ಮೋದಿಗೆ ಎಕ್ಸ್‌ ಜಾಲತಾಣದಲ್ಲಿ 10 ಕೋಟಿ ಫಾಲೋವರ್ಸ್;‌ ಜಗತ್ತಿನಲ್ಲೇ ನಂಬರ್‌ 1!

Narendra Modi: ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 3.81 ಕೋಟಿ, ದುಬೈನ ಶೇಖ್‌ ಮೊಹಮ್ಮದ್ 1.12 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಭಾರತದಲ್ಲಿ ಜನಪ್ರಿಯ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಾಗತಿಕವಾಗಿಯೂ ಖ್ಯಾತಿ ಹೊಂದಿದ್ದಾರೆ. ಅದರಲ್ಲೂ, ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಹೀಗೆ, ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳನ್ನು ಹೊಂದುವಲ್ಲಿ ಮೋದಿ ಅವರು ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಎಕ್ಸ್‌ (ಮೊದಲು Twitter) ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ (Modi Followers On X) ಸಂಖ್ಯೆ 100 ದಶಲಕ್ಷ ದಾಟಿದ್ದು (10 ಕೋಟಿ), ಜಗತ್ತಿನಲ್ಲೇ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ನಾಯಕ ಎನಿಸಿದ್ದಾರೆ.

ಹೌದು, ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 3.81 ಕೋಟಿ, ದುಬೈನ ಶೇಖ್‌ ಮೊಹಮ್ಮದ್ 1.12 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ನು ಪೋಪ್‌ ಫ್ರಾನ್ಸಿಸ್‌ ಅವರು 1.85 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಜಗತ್ತಿನ ಯಾವುದೇ ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಜಾಗತಿಕವಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳಿಗಿಂತ ಮೋದಿ ಅವರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.

ಭಾರತೀಯ ನಾಯಕರ ಫಾಲೋವರ್‌ಗಳು

ಜನಪ್ರಿಯತೆಯಲ್ಲೂ ಪ್ರಥಮ

ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯಲ್ಲಿಯೂ ಪ್ರಧಾನಿ ಮೋದಿ ಅವರು ನಂಬರ್‌ 1 ಆಗಿದ್ದಾರೆ. ಜನಪ್ರಿಯತೆಯ ಸಮೀಕ್ಷೆ ನಡೆಸಿ ಪಟ್ಟಿ ಮಾಡುವ ಸಂಸ್ಥೆ ಇಪ್ಸೋಸ್ ಇಂಡಿಯಾಬಸ್ (Ipsos IndiaBus) ಪ್ರಕಾರ, ಪ್ರಧಾನಿ ಮೋದಿ ಫೆಬ್ರವರಿ 2024ರಲ್ಲಿ ಶೇಕಡಾ 75ರಷ್ಟು ಅನುಮೋದನೆ ರೇಟಿಂಗ್ ಅನ್ನು ಸಾಧಿಸಿದ್ದಾರೆ. ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ಡೇಟಾದಲ್ಲಿ, ಪಿಎಂ ಮೋದಿ 65 ಪ್ರತಿಶತದಷ್ಟು ರೇಟಿಂಗ್ ಪಡೆದಿದ್ದರು. ಈ ಬಾರಿ ಅವರ ಅನುಮೋದನೆ ರೇಟಿಂಗ್ ಶೇಕಡಾ 10ರಷ್ಟು ಹೆಚ್ಚಾಗಿದೆ.

ಡಿಸೆಂಬರ್ 2022ರಿಂದ ಪಿಎಂ ಮೋದಿಯವರ ಅನುಮೋದನೆ ರೇಟಿಂಗ್ ಹೆಚ್ಚಾಗಿದೆ. 2022ರ ಡಿಸೆಂಬರ್‌ನಲ್ಲಿ ಪ್ರಧಾನಿಯ ರೇಟಿಂಗ್ ಶೇಕಡಾ 60ರಷ್ಟಿತ್ತು . ಫೆಬ್ರವರಿ 2023ರಲ್ಲಿ ರೇಟಿಂಗ್ ಶೇಕಡಾ 67ರಷ್ಟಿತ್ತು. ಸೆಪ್ಟೆಂಬರ್ 2023ರಲ್ಲಿ ಎರಡು ಪ್ರತಿಶತದಷ್ಟು ಕುಸಿದಿದೆ ಮತ್ತು 65 ಪ್ರತಿಶತದಷ್ಟು ರೇಟಿಂಗ್ ಪಡೆದಿದೆ. ಈಗ ಫೆಬ್ರವರಿ 2024ರಲ್ಲಿ ಮೋದಿ ರೇಟಿಂಗ್ ಮತ್ತೆ ಹೆಚ್ಚಾ ಗಿದೆ.

ಇದನ್ನೂ ಓದಿ: Narendra Modi: ಅನಂತ್‌ ಅಂಬಾನಿ ಮದುವೆಯಲ್ಲಿ ಮೋದಿ ಭಾಗಿ; ನೂತನ ದಂಪತಿಗೆ ಆಶೀರ್ವಾದ; Video ಇದೆ

Continue Reading
Advertisement
NSUI
ದೇಶ4 hours ago

NSUI: ದೆಹಲಿ ವಿವಿಯಲ್ಲಿ ಗಲಾಟೆ ಮಾಡಿ, ರಾಮನ ಮೂರ್ತಿ ಒಡೆದ ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ಸದಸ್ಯರು; ಭಾರಿ ವಿವಾದ!

Yashasvi Jaiswal
ಕ್ರಿಕೆಟ್4 hours ago

Yashasvi Jaiswal : ಇನಿಂಗ್ಸ್​​ನ ಮೊದಲ ಎಸೆತಕ್ಕ 13 ರನ್​, ವಿನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

MUDA Scam
ಕರ್ನಾಟಕ5 hours ago

MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

Hardik Pandya
ಕ್ರೀಡೆ5 hours ago

Hardik Pandya : ಪತ್ನಿ ಜತೆ ವಿಚ್ಛೇದನ ಸುದ್ದಿ ನಡುವೆ ರಷ್ಯನ್ ಮಾಡೆಲ್​ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ; ಯಾರವರು?

Anant Ambani Wedding
ದೇಶ5 hours ago

ಅನಂತ್‌ ಅಂಬಾನಿ ಮದುವೆಯಲ್ಲಿ ಶಂಕರ್‌ ಮಹಾದೇವನ್‌, ಶ್ರೇಯಾ ಘೋಷಾಲ್ ಗಾಯನಕ್ಕೆ ಮನಸೋತ ಗಣ್ಯರು; Video ಇದೆ

Carlos Alcaraz
ಪ್ರಮುಖ ಸುದ್ದಿ6 hours ago

Wimbledon 2024 : ಜೊಕೊವಿಕ್ ಮಣಿಸಿದ 2ನೇ ವಿಂಬಲ್ಡನ್​ ಟ್ರೋಫಿ ಗೆದ್ದ ಕಾರ್ಲೋಸ್ ಅಲ್ಕರಾಜ್

Appu Cup Season 2
ಕರ್ನಾಟಕ7 hours ago

Appu Cup Season 2: ಅಪ್ಪು ಕಪ್‌ ಸೀಸನ್‌ 2ಗೆ ವಿಧ್ಯುಕ್ತ ಚಾಲನೆ; ಅಶ್ವಿನಿ ಪುನೀತ್‌ ಟ್ರೋಫಿ ಅನಾವರಣ

Fidias Panayiotou
ಪ್ರಮುಖ ಸುದ್ದಿ7 hours ago

Fidias Panayiotou: ನಮ್ಮ ಮೆಟ್ರೊದೊಳಗೆ ಅಕ್ರಮವಾಗಿ ನುಸುಳಿದವನು ಈಗ ಯುರೋಪ್ ಸಂಸದನಾಗಿ ಆಯ್ಕೆ!

Team India
ಪ್ರಮುಖ ಸುದ್ದಿ7 hours ago

Team India : ಆಸ್ಟ್ರೇಲಿಯಾ ಪ್ರವಾಸಕ್ಕೆ 18 ಸದಸ್ಯರ ಭಾರತ ‘ಎ’ ಮಹಿಳಾ ತಂಡ ಪ್ರಕಟ

Self harming
ಕರ್ನಾಟಕ7 hours ago

Self Harming: ಪದವಿ ಪರೀಕ್ಷೆಯಲ್ಲಿ ಇಂಗ್ಲಿಷ್‌ ಸಬ್ಜೆಕ್ಟ್‌ ಫೇಲ್‌ ಆಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ12 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ15 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ17 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ1 day ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ6 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

ಟ್ರೆಂಡಿಂಗ್‌