BJP Executive : ವಂಶಪಾರಂಪರ್ಯ ರಾಜಕೀಯದ ಅಧಃಪತನ ಗಮನಿಸಲು ಮುಖಂಡರಿಗೆ ಮೋದಿ ಕರೆ - Vistara News

ದೇಶ

BJP Executive : ವಂಶಪಾರಂಪರ್ಯ ರಾಜಕೀಯದ ಅಧಃಪತನ ಗಮನಿಸಲು ಮುಖಂಡರಿಗೆ ಮೋದಿ ಕರೆ

ವಂಶ ಪಾರಂಪರ್ಯ ರಾಜಕೀಯದ ಅಧಃಪತನವನ್ನು ನೋಡಿ ಪಾಠ ಕಲಿಯುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (BJP national executive meeting ) ತಮ್ಮ ಪಕ್ಷದ ಮುಖಂಡರಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಕರೆ ಕೊಟ್ಟಿದ್ದಾರೆ.

VISTARANEWS.COM


on

BJP executive
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ದೇಶವನ್ನು ದಶಕಗಳಷ್ಟು ಕಾಲ ಆಳಿರುವ ಪಕ್ಷಗಳು ತಮ್ಮ ವಂಶ ಪಾರಂಪರ್ಯ ನೀತಿ ಹಾಗೂ ಅಧಿಕಾರದ ಆಸೆಯಿಂದಾಗಿ ಅಧಃಪತನ ಕಾಣುತ್ತಿವೆ. ಆ ಪಕ್ಷಗಳು ಮಾಡಿರುವ ತಪ್ಪುಗಳನ್ನು ನೋಡಿ ಕಲಿಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹಿರಿಯ ಮುಖಂಡರಿಗೆ (BJP executive) ಕಿವಿ ಮಾತು ಹೇಳಿದ್ದಾರೆ.

ಹೈದಾರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿ, ಅಧಿಕಾರದ ಆಸೆಗಾಗಿ ವಂಶಪಾರಂಪರ್ಯವನ್ನೇ ನೆಚ್ಚಿಕೊಂಡಿದ್ದ ಪಕ್ಷಗಳು ನಿರ್ನಾಮದ ಹಾದಿಯಲ್ಲಿವೆ. ಅವರನ್ನು ನೋಡಿ ಬಿಜೆಪಿ ನಾಯಕರು ಪಾಠ ಕಲಿಯಬೇಕು,ʼʼ ಎಂದು ಯಾವುದೇ ಪಕ್ಷದ ಹೆಸರು ಸೂಚಿಸದೇ ಅವರು ಭಾಷಣದ ಪ್ರಮುಖಾಂಶವನ್ನು ವ್ಯಕ್ತಪಡಿಸಿದರು.

“ದೇಶದಲ್ಲಿ ಸಾಕಷ್ಟು ಪಕ್ಷಗಳು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅಂಥ ಪಕ್ಷಗಳನ್ನು ನೋಡಿ ನಗುವುದು ಅಥವಾ ಲೇವಡಿ ಮಾಡುವುದರ ಬದಲಾಗಿ ಅವರು ಮಾಡುತ್ತಿರುವ ಪ್ರಮಾದಗಳನ್ನು ಗಮನಿಸಬೇಕು ಹಾಗೂ ಅವುಗಳನ್ನು ನಾವು ಮಾಡಬಾರದು,ʼʼ ಎಂದು ಮೋದಿಯವರು ಕರೆ ಕೊಟ್ಟರು.

“ಭಾರತೀಯ ಜನತಾ ಪಾರ್ಟಿ ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯ ವೃದ್ಧಿಸಿಕೊಂಡು ಸಾಗುತ್ತಿದೆ. ಇದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ,ʼʼ ಎಂದು ಹೇಳಿದ ಪ್ರಧಾನಿ ಮೋದಿ ಅವರು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿರುವ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಶಹಬ್ಬಾಸ್‌ಗಿರಿ ಕೊಟ್ಟರು.

ಹೈದರಾಬಾದ್‌ ಅಲ್ಲ, ಭಾಗ್ಯನಗರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರುʼʼಮುತ್ತುಗಳ ನಗರʼ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್‌ನ ಹೆಸರು ಬದಲಾವಣೆಯ ಪ್ರಸ್ತಾಪವೊಂದನ್ನು ಕಾರ್ಯಕಾರಿಣಿಯಲ್ಲಿ ಪರೋಕ್ಷವಾಗಿ ಮುಂದಿಟ್ಟರು.

“ಸರ್ದಾರ್‌ ವಲ್ಲಭ್‌ಭಾಯ್‌ ಪಟೇಲ್‌ ಅವರು “ಒಂದೇ ಭಾರತ” ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿರುವ ಭಾಗ್ಯ ನಗರದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ. ಹೀಗಾಗಿ ಬಿಜೆಪಿ ನಾಯಕರೆಲ್ಲರೂ ಸೇರಿ ಶ್ರೇಷ್ಠ ಭಾರತವನ್ನು ಮಾಡಲು ಶ್ರಮಿಸಬೇಕು,ʼʼ ಎಂದು ಹೇಳಿದರು.

ʼಏಕ ಭಾರತʼ ಎಂಬಪರಿಕಲ್ಪನೆ ಹುಟ್ಟುಹಾಕಿದ ಸರ್ದಾರ್‌ ವಲ್ಲಭ್‌ಭಾಯ್‌ ಪಟೇಲ್‌ ಅವರು ಸೂಚಿಸಿದ ʼಭಾಗ್ಯನಗರʼ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಬಿಜೆಪಿ ಮುಂದುವರಿಯಬೇಕಾಗಿದೆ,ʼʼ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಈ ಮೂಲಕ ಅವರು ನಾನಾ ಕಾರಣಗಳಿಗೋಸ್ಕರ ಭಾರತೀಯತೆ ಕಳೆದುಕೊಂಡಿದ್ದ ರಾಷ್ಟ್ರದ ಪ್ರಮುಖ ನಗರಗಳಿಗೆ ಮರು ನಾಮಕರಣ ಮಾಡುವ ಕೇಂದ್ರ ಸರಕಾರದ ಮಹತ್ವದ ಯೋಜನೆಯನ್ನು ಬಿಜೆಪಿಯ ಹಿರಿಯ ನಾಯಕರನ್ನೊಳಗೊಂಡ ಸಭೆಯಲ್ಲಿ ಪುನರುಚ್ಚರಿಸಿದರು.

ಸ್ನೇಹ ಭಾರತ್‌ ಆಯೋಜಿಸಿ

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ʼಸ್ನೇಹ ಯಾತ್ರೆ ʼ ಆರಂಭಿಸುವಂತೆ ಬಿಜೆಪಿ ಮುಖಂಡರಿಗೆ ಕರೆ ಕೊಟ್ಟರು. ಈ ಯಾತ್ರೆಯ ಮೂಲಕ ದೇಶದ ಎಲ್ಲ ವರ್ಗದ ಜನರನ್ನು ತಲುಪುವಂತೆ ಅವರು ಕರೆಕೊಟ್ಟರು.

ತೆಲಂಗಾಣ, ಕೇರಳ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷಗಳು ಸೈದ್ಧಾಂತಿಕ ಅಸಹಿಷ್ಣುತೆ ಪ್ರದರ್ಶಿಸುತ್ತಿವೆ. ಅಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಹೋರಾಡುತ್ತಿದ್ದಾರೆ,ʼʼ ಎಂದು ಇದೇ ವೇಳೆ ಅವರು ನುಡಿದರು.

ಇದನ್ನೂ ಓದಿ: BJP Executive | ದೇಶ ಬಲಿಷ್ಠವಾಗಲು ಬಿಜೆಪಿ ಇನ್ನೂ 30 ವರ್ಷ ಅಧಿಕಾರದಲ್ಲಿರಬೇಕೆಂದ ಅಮಿತ್‌ ಶಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

VISTARANEWS.COM


on

Narendra Modi
Koo

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಆಗಲಿದ್ದಾರೆ. ಇಂದು ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟದ ಸಭೆ ನಡೆದು, ಅಲ್ಲಿ ಮೋದಿಯವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಜೂನ್‌ 9ರಂದು ಕೆಲವು ಸಚಿವರೊಂದಿಗೆ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೈತ್ರಿಕೂಟದ ಎಲ್ಲ ಸದಸ್ಯರ ಬೆಂಬಲ ಇರುವುದರಿಂದ, ನೂತನ ಸರಕಾರ ರಚನೆ ಕಷ್ಟವಾಗಲಾರದು. ಹತ್ತು ವರ್ಷಗಳ ಅನುಭವವೂ ಮೋದಿಯವರ ಬೆನ್ನಿಗೆ ಇದೆ. ಆದ್ದರಿಂದ ಕೇಂದ್ರ ಸರಕಾರ ರಚನೆಯ ಬಗ್ಗೆ ಅವರಿಗೆ ಯಾರೂ ಕಿವಿಮಾತು ಹೇಳುವುದು ಬೇಕಿಲ್ಲ. ಆದರೆ ಮೈತ್ರಿಧರ್ಮದ ಪಾಲನೆ ಮಾಡಿಕೊಂಡು ಈ ಬಾರಿ ಸರಕಾರ ಮುನ್ನಡೆಸುವುದು ಬಿಜೆಪಿಗೆ ಹಗ್ಗದ ಮೇಲಿನ ನಡಿಗೆಯೇ ಆಗಲಿದೆ.

ಎನ್‌ಡಿಎ ಸಭೆಯಲ್ಲಿ ಮೋದಿಯವರು ಭವಿಷ್ಯದ ಹಲವು ಮುನ್ನೋಟದ ನುಡಿಗಳನ್ನು ಆಡಿದ್ದಾರೆ. ದೇಶದ ಜಿಡಿಪಿಯನ್ನು ಇನ್ನಷ್ಟು ಹೆಚ್ಚಿಸುವುದು, ಯುವಜನತೆಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು, ಮಹಿಳೆಯರ ಸಬಲೀಕರಣ, ಹಳ್ಳಿಗಳಿಗೆ ಆರೋಗ್ಯಸೇವೆ ಮತ್ತು ಡಿಜಿಟಲ್‌ ಇಂಡಿಯಾದ ವಿಸ್ತರಣೆ, ಫಲಾನುಭವಿ ಯೋಜನೆಗಳ ವಿಸ್ತರಣೆಯ ಮೂಲಕ ವಿಕಸಿತ ಭಾರತದ ಸಾಕ್ಷಾತ್ಕಾರ, ರೈತರ ಸಬಲೀಕರಣ- ಇತ್ಯಾದಿಗಳು ಈ ಭಾಷಣದಲ್ಲಿ ಸ್ಥಾನ ಪಡೆದಿದ್ದವು. ಮೂಲಸೌಕರ್ಯದಂಥ ವಿಚಾರಗಳಲ್ಲಿ ಮೋದಿ ಸರಕಾರ ದೇಶದ ಬಹಳಷ್ಟು ಹಳ್ಳಿಗಳನ್ನೂ ನಗರಗಳನ್ನೂ ತಲುಪಿದೆ. ವಂದೇಮಾತರಂ ರೈಲುಗಳೂ ಎಕ್ಸ್‌ಪ್ರೆಸ್‌ವೇಗಳೂ ಗ್ರಾಮಸಡಕ್‌ ಯೋಜನೆಗಳೂ ಇದಕ್ಕೆ ಉದಾಹರಣೆ. ಜೈಶಂಕರ್‌, ನಿತಿನ್‌ ಗಡ್ಕರಿ ಮೊದಲಾದ ಮೋದಿ ಎರಡನೇ ಅವಧಿಯ ಸಚಿವರು ಅದ್ಭುತ ಅನ್ನಿಸುವಂಥ ಕಾರ್ಯವೈಖರಿಯನ್ನೇ ಮೆರೆದಿದ್ದಾರೆ. ಇಂಥ ಕರ್ತವ್ಯನಿಷ್ಠರನ್ನು ಮುಂದಿನ ಅವಧಿಗೂ ಮುಂದುವರಿಸಬೇಕಿದೆ. ಆಗ ಮಾತ್ರ ಅವರು ಕೈಗೊಂಡ ಕೆಲಸಗಳು ತಾರ್ಕಿಕ ಅಂತ್ಯ ಕಾಣಬಹುದು.

ಜಾಗತಿಕವಾಗಿ ಎರಡು ಯುದ್ಧಗಳು ನಡೆಯುತ್ತಿರುವ ಈ ಪ್ರಕ್ಷುಬ್ಧ ಅವಧಿಯಲ್ಲಿ ಮೂರನೇ ಬಾರಿಗೆ ಒಂದು ಸರಕಾರ ಆಯ್ಕೆಯಾಗುವುದು ಅಸಾಧಾರಣ ಸಾಧನೆ. ಜಾಗತಿಕ ಅನಿಶ್ಚಿತತೆ ಇರುವ ಸಮಯದಲ್ಲಿ ನಮ್ಮ ದೇಶದ ಜನತೆ ನಿರಂತರತೆ, ಸ್ಥಿರತೆ ಬಯಸಿದ್ದಾರೆ. ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪುನರಾಗಮನವನ್ನು ವಿಶ್ವ ನಾಯಕರು ಸ್ವಾಗತಿಸಿದ್ದಾರೆ. 121ಕ್ಕೂ ಹೆಚ್ಚು ವಿಶ್ವ ನಾಯಕರು ಅವರನ್ನು ಅಭಿನಂದಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತಹ ವಿಶ್ವ ನಾಯಕರು ಮೋದಿಯವರ ಪುನರಾಗಮನವನ್ನು ಸ್ವಾಗತಿಸಿದ್ದು, ಇವರೊಂದಿಗೆ ಮೋದಿ ವೈಯಕ್ತಿಕ ಸಂಬಂಧವನ್ನೂ ಆತ್ಮೀಯವಾಗಿ ಕಾಪಾಡಿಕೊಂಡಿರುವುದು ಉಲ್ಲೇಖನೀಯ.

ಇನ್ನು ಮೈತ್ರಿಕೂಟದಲ್ಲಿರುವ ಇಬ್ಬರು ಬಲಿಷ್ಠ ಪ್ರಾದೇಶಿಕ ನಾಯಕರಾದ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರೊಂದಿಗಿನ ಸಂಬಂಧ. ಇದು ಎನ್‌ಡಿಎಗೆ ಈ ಅವಧಿಯಲ್ಲಿ ಮುಖ್ಯವಾದುದು. ಇಬ್ಬರಿಗೂ ಬಹುತೇಕ ಮೋದಿಯವರಷ್ಟೇ ವಯಸ್ಸು ಆಗಿದೆ. ಇಬ್ಬರೂ ಮಾಗಿದ ರಾಜಕಾರಣಿಗಳು; ಅನವಶ್ಯಕ ರಿಸ್ಕ್‌ ತೆಗೆದುಕೊಳ್ಳುವವರಲ್ಲ. ಈ ಸಲದ ಫಲಿತಾಂಶ ಅವರಿಗೂ ಹಲವು ಪಾಠ ಕಲಿಸಿದೆ. ಬಿಹಾರ ಹಾಗೂ ಆಂಧ್ರಪ್ರದೇಶಗಳಲ್ಲೂ ಬಿಜೆಪಿ ಸಾಕಷ್ಟು ವಿಸ್ತರಿಸಿದೆ; ಈ ಪಕ್ಷಗಳಿಗೆ ಸಮಾನವಾಗಿಯೇ ಸ್ಥಾನಬಲ ಹೆಚ್ಚಿಸಿಕೊಂಡಿದೆ. ಈ ನಾಯಕರಿಗೆ ತಮ್ಮ ರಾಜ್ಯದ ಸಂಬಂಧವನ್ನು ಕೇಂದ್ರದೊಡನೆ ಕಾಪಾಡಿಕೊಂಡು, ರಾಜ್ಯದಲ್ಲೂ ಬೆಲೆ ಭದ್ರಪಡಿಸಿಕೊಂಡು ಉಳಿಯುವ ಹಂಬಲವಿದೆ. ಇಬ್ಬರೂ ಕೇಂದ್ರದಲ್ಲೂ ಸಾಕಷ್ಟು ಅಧಿಕಾರ ಅನುಭವಿಸಿದವರೇ. ಹೀಗಾಗಿ ಒಂದೆರಡು ಸಚಿವ ಸ್ಥಾನಗಳಿಗಾಗಿ ಚೌಕಾಸಿ ಮಾಡಿದರೂ, ಸಂಬಂಧ ಹರಿದುಕೊಳ್ಳುವಷ್ಟರ ಮಟ್ಟಿಗೆ ಯಾರೂ ಹೋಗುವವರಲ್ಲ. ಕರ್ನಾಟಕದ ಜೆಡಿಎಸ್‌ ಕೂಡ ಎರಡು ಸ್ಥಾನಗಳನ್ನು ಹೊಂದಿದ್ದು, ಒಂದು ಸಚಿವ ಸ್ಥಾನವನ್ನಂತೂ ಪಡೆಯುವುದು ಶಕ್ಯವಿದೆ.

ಹೀಗಾಗಿ, ಈ ಬಾರಿಯೂ ಮೋದಿಯವರಿಂದ ನಾವು ಸುಸ್ಥಿರ ಸರಕಾರವನ್ನು ನಿರೀಕ್ಷಿಸಬಹುದು ಎನ್ನಬಹುದು. ಮೋದಿಯವರಲ್ಲಿ ಈ ವಯಸ್ಸಿನಲ್ಲೂ ದೇಶವನ್ನು ಮುನ್ನಡೆಸಬಲ್ಲ ಛಲ, ಒಳನೋಟ, ಮುತ್ಸದ್ಧಿತನ, ಜಾಣ್ಮೆ ಎಲ್ಲ ಇವೆ. ಆಂತರಿಕ ಹಾಗೂ ಬಾಹ್ಯ ನಾಯಕರ ಗೆಳೆತನವೂ ಇದೆ. ಆಧುನಿಕತೆಯನ್ನು ಬರಮಾಡಿಕೊಳ್ಳುವ ನಾಯಕತ್ವವೂ ಇದೆ. ಒಬ್ಬ ನಾಯಕನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬೇಕಿಲ್ಲ. ಮೋದಿ ಸರಕಾರ ಭಾನುವಾರದ ಪ್ರಮಾಣ ವಚನದ ದಿನದಿಂದಲೇ ತನ್ನ ʼವಿಕಸಿತ ಭಾರತʼದ ಗುರಿಯತ್ತ ಮುನ್ನುಗ್ಗಲಿ.

ಇದನ್ನೂ ಓದಿ: Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Continue Reading

ದೇಶ

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

ಛತ್ತೀಸ್‌ಗಢದ ನಾರಾಯಣಪುರದಲ್ಲಿ ಶುಕ್ರವಾರ (ಜೂನ್‌ 6) ಏಳು ನಕ್ಸಲರನ್ನು ಭದ್ರತಾ ಸಿಬ್ಬಂದಿಯು ಹೊಡೆದುರುಳಿಸಿದ್ದಾರೆ. ಇನ್ನು ಕಾರ್ಯಾಚರಣೆಯ ವೇಳೆ ಮೂವರು ಯೋಧರಿಗೆ ಗಾಯಗಳಾಗಿವೆ. ಭದ್ರತಾ ಸಿಬ್ಬಂದಿ ಮೇಲೆ ಮಾವೋವಾದಿಗಳು ಕೂಡ ಗುಂಡಿನ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

VISTARANEWS.COM


on

Naxals
Koo

ರಾಯ್‌ಪುರ: ಛತ್ತೀಸ್‌ಗಢ, ತೆಲಂಗಾಣ ಗಡಿ ಸೇರಿ ಹಲವೆಡೆ ಭದ್ರತಾ ಸಿಬ್ಬಂದಿಯು ಮಾವೋವಾದಿಗಳ ವಿರುದ್ಧ ಸಮರ ಸಾರಿದ್ದಾರೆ. ನಕ್ಸಲರು ಅಡಗಿರುವ ಕುರಿತು ಸಣ್ಣ ಮಾಹಿತಿ ಸಿಕ್ಕರೂ ಸಾಕು, ಕಾರ್ಯಾಚರಣೆ ಮೂಲಕ ಅವರನ್ನು ಹೊಡೆದುರುಳಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಛತ್ತೀಸ್‌ಗಢದ (Chhattisgarh) ನಾರಾಯಣಪುರದಲ್ಲಿ ಶುಕ್ರವಾರ (ಜೂನ್‌ 6) ಏಳು ನಕ್ಸಲರನ್ನು (Naxalites) ಭದ್ರತಾ ಸಿಬ್ಬಂದಿಯು (Security Forces) ಹೊಡೆದುರುಳಿಸಿದ್ದಾರೆ. ಇನ್ನು ಕಾರ್ಯಾಚರಣೆಯ ವೇಳೆ ಮೂವರು ಯೋಧರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಓರ್ಛಾ ಪ್ರದೇಶದ ಗೋಬೆಲ್‌ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಕುರಿತು ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಿಲ್ಲಾ ಮೀಸಲು ದಳ, ಐಟಿಬಿಪಿ ಸಿಬ್ಬಂದಿಯು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ವೇಳೆ, ಭದ್ರತಾ ಸಿಬ್ಬಂದಿ ಮೇಲೆ ಮಾವೋವಾದಿಗಳು ಕೂಡ ಗುಂಡಿನ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಏಳೂ ನಕ್ಸಲರ ಶವಗಳನ್ನು ಪತ್ತೆಹಚ್ಚಲಾಗಿದ್ದು, ಭಾರಿ ಪ್ರಮಾಣಧ ಶಸ್ತ್ರಾಸ್ತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

Kerala Police And Naxals Firing

6 ತಿಂಗಳಲ್ಲಿ 114 ನಕ್ಸಲರ ಖತಂ

ಪ್ರಸಕ್ತ ವರ್ಷದಲ್ಲಿ ಭದ್ರತಾ ಸಿಬ್ಬಂದಿಯು ನಕ್ಸಲರ ವಿರುದ್ಧ ಭಾರಿ ಸಮರ ಸಾರಿದ್ದಾರೆ. ಶುಕ್ರವಾರ ಹತ್ಯೆಗೈದ 12 ನಕ್ಸಲರು ಸೇರಿ ಪ್ರಸಕ್ತ ವರ್ಷದ ಆರು ತಿಂಗಳಲ್ಲಿ 114 ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದಾರೆ. 2023ರಲ್ಲಿ ಭದ್ರತಾ ಸಿಬ್ಬಂದಿಯು 22 ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಿದ್ದರು. ಲೋಕಸಭೆ ಚುನಾವಣೆಗೆ ವೇಳೆಯೇ ತೆಲಂಗಾಣ ಗಡಿ ಹಾಗೂ ಛತ್ತೀಸ್‌ಗಢದ ಸುಕ್ಮಾ, ಬಿಜಾಪುರ ಸೇರಿ ಹಲವೆಡೆ ಮಾವೋವಾದಿಗಳ ಉಪಟಳ ಜಾಸ್ತಿ ಇರುತ್ತದೆ. ಹಾಗಾಗಿ, ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮೇ ‌13ರಂದು ಮಹಾರಾಷ್ಟ್ರದಲ್ಲಿ ಮೂವರು ಮಾವೋವಾದಿಗಳನ್ನು ಭದ್ರತಾ ಸಿಬ್ಬಂದಿಯು ಹತ್ಯೆ ಮಾಡಿದ್ದರು. ಗಡ್ಚಿರೋಲಿ ಜಿಲ್ಲೆಯ ಕಟ್ರಂಗಟ್ಟ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವ ಕುರಿತು ಗುಪ್ತಚರ ಮೂಲಗಳಿಂದ ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಕೈಗೊಂಡಿದ್ದರು. ಭಾರಿ ಪ್ರಮಾಣದ ದಾಳಿ, ಅಕ್ರಮ ಚಟುವಟಿಕೆಗೆ ಯೋಜನೆ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಲೇ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದರು.

ಇದನ್ನೂ ಓದಿ: Terrorists Killed: ಸೇನೆಯ ಭರ್ಜರಿ ಬೇಟೆ; ಎಲೆಕ್ಷನ್‌ ಹಾಳುಗೆಡವಲು ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

Continue Reading

ದೇಶ

Chandrababu Naidu: 5 ದಿನದಲ್ಲಿ 870 ಕೋಟಿ ರೂ. ಗಳಿಸಿದ ‘ಕಿಂಗ್‌ ಮೇಕರ್’‌ ಚಂದ್ರಬಾಬು ನಾಯ್ಡು; ಹೇಗಂತೀರಾ?

Chandrababu Naidu: ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದ್ದಾರೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯುವ 1,319 ಕೋಟಿ ರೂ.ನಿಂದ 2,190 ಕೋಟಿ ರೂ.ಗೆ ಏರಿಕೆಯಾಗಿದೆ. ಹೆರಿಟೇಜ್‌ ಫುಡ್ಸ್‌ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಷೇರುಗಳ ಪ್ರಮಾಣವು ಶೇ.35.7ರಷ್ಟಿದೆ.

VISTARANEWS.COM


on

Chandrababu Naidu
Koo

ನವದೆಹಲಿ: ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು (Chandrababu Naidu) ಅವರ ಅದೃಷ್ಟವು ಖುಲಾಯಿಸಿದೆ. ಆಂಧ್ರಪ್ರದೇಶದ (Andhra Pradesh) 175 ವಿಧಾನಸಭೆ ಕ್ಷೇತ್ರಗಳ ಪೈಕಿಯು ಟಿಡಿಪಿ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನು, ಲೋಕಸಭೆಯ 25 ಕ್ಷೇತ್ರಗಳ ಪೈಕಿ 16ರಲ್ಲಿ ಗೆಲುವು ಸಾಧಿಸಿದ್ದು, ಕೇಂದ್ರದಲ್ಲೂ ಕಿಂಗ್‌ ಮೇಕರ್‌ ಆಗಿದ್ದಾರೆ. ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡು ಅವರ ಕುಟುಂಬವು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದೆ. ಅಧಿಕಾರ, ಹಣ, ಗೌರವ, ಹುದ್ದೆ… ಹೀಗೆ ಒಂದೇ ವಾರದಲ್ಲಿ ಚಂದ್ರಬಾಬು ನಾಯ್ಡು ಅದೃಷ್ಟವು ಸಕಲ ರೀತಿಯಲ್ಲಿ ಬದಲಾಗಿದೆ.

ಹೌದು, ಚಂದ್ರಬಾಬು ನಾಯ್ಡು ಅವರ ಪಕ್ಷವು ಐತಿಹಾಸಿಕ ಗೆಲುವು ದಾಖಲಿಸಿದ ಕಾರಣ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಡೆತನದ ಹೆರಿಟೇಟ್‌ ಫುಡ್ಸ್‌ (Heritage Foods) ಕಂಪನಿಯ ಷೇರುಗಳ ಮೌಲ್ಯವು ಚುನಾವಣೆ ಫಲಿತಾಂಶದ ಬಳಿಕ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರು ಕಳೆದ 5 ದಿನಗಳಲ್ಲಿಯೇ 870 ಕೋಟಿ ರೂ. ಗಳಿಸಿದ್ದಾರೆ. ಇದರೊಂದಿಗೆ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯುವ 1,319 ಕೋಟಿ ರೂ.ನಿಂದ 2,190 ಕೋಟಿ ರೂ.ಗೆ ಏರಿಕೆಯಾಗಿದೆ.

ನಾಯ್ಡು ಕುಟುಂಬ

ನಾಯ್ಡು ಕುಟುಂಬದ ಪಾಲೆಷ್ಟು?

ಹೆರಿಟೇಜ್‌ ಫುಡ್ಸ್‌ ಕಂಪನಿಯಲ್ಲಿ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಷೇರುಗಳ ಪ್ರಮಾಣವು ಶೇ.35.7ರಷ್ಟಿದೆ. ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಶೇ.24.37, ಪುತ್ರ ಲೋಕೇಶ್‌ ಶೇ.10.82ರಷ್ಟು ಹಾಗೂ ಸೊಸೆ ಬ್ರಹ್ಮಿಣಿ 0.46ರಷ್ಟು ಷೇರುಗಳನ್ನು ಹೊಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಮೊಮ್ಮಗ ದೇವಾಂಶ್‌ ಕೂಡ ಡೇರಿ ಕಂಪನಿಯಲ್ಲಿ 0.06ರಷ್ಟು ಷೇರುಗಳನ್ನು ಹೊಂದಿದ್ದಾನೆ.

ಹೆರಿಟೇಜ್‌ ಫುಡ್ಸ್‌ ಕಂಪನಿಯನ್ನು 1992ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಡೇರಿ ಉತ್ಪನ್ನಗಳ ಪೂರೈಕೆಗೆ ಹೆಸರುವಾಸಿಯಾಗಿದೆ. ಹಾಲು, ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್‌, ಇಮ್ಯುನಿಟಿ ಮಿಲ್ಕ್‌ ಸೇರಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ದೇಶದ 11 ರಾಜ್ಯಗಳಲ್ಲಿ ಸುಮಾರು 1.5 ಕೋಟಿ ಮನೆಗಳಲ್ಲಿ ಹೆರಿಟೇಜ್‌ ಫುಡ್ಸ್‌ ಕಂಪನಿಯ ಉತ್ಪನ್ನಗಳನ್ನು ಬಳಸಲಾಗುತ್ತದೆ.

ಇದರ ಮಾರುಕಟ್ಟೆ ಬಂಡವಾಳ ಮೊತ್ತವು ಸುಮಾರು 3,700 ಕೋಟಿ ರೂ.ನಿಂದ 6,136 ಕೋಟಿ ರೂ.ಗೆ ಏರಿಕೆಯಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಕಂಪನಿಯ ಷೇರುಗಳ ಮೌಲ್ಯದಲ್ಲಿ ಶೇ.55ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರೂ ಬಂಪರ್‌ ಲಾಭ ಗಳಿಸಿದ್ದಾರೆ. ಜೂನ್‌ 7ರಂದು ಹೆರಿಟೇಜ್‌ ಫುಡ್ಸ್‌ನ ಒಂದು ಷೇರಿನ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಿದ್ದು, ಒಂದು ಷೇರಿನ ಮೌಲ್ಯವು 661 ರೂ. ಆಗಿದೆ. ಜೂನ್‌ 3ರಂದು ಒಂದು ಷೇರಿನ ಬೆಲೆ 424 ರೂ. ಇತ್ತು.

ಇದನ್ನೂ ಓದಿ: Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

Continue Reading

ದೇಶ

Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Narendra Modi: ನರೇಂದ್ರ ಮೋದಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವ ಸಂಸದರು ಯಾರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನು, ನರೇಂದ್ರ ಮೋದಿ ಮಾತ್ರವಲ್ಲ, ಎನ್‌ಡಿಎ ಮೈತ್ರಿಕೂಟದ ಹಲವು ಸದಸ್ಯರು ಕೂಡ ರಾಷ್ಟ್ರಪತಿ ಅವರನ್ನು ಭೇಟಿಯಾದರು. ಬಿಹಾರ ಸಿಎಂ ನಿತೀಶ್‌ ಕುಮಾರ್‌, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ಇದ್ದರು.

VISTARANEWS.COM


on

Narendra Modi
Koo

ನವದೆಹಲಿ: ನರೇಂದ್ರ ಮೋದಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು, ಇದಕ್ಕೆ ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳು ಸಮ್ಮತಿ ಸೂಚಿಸಿವೆ. ಇದಾದ ಬಳಿಕ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ, ಸರ್ಕಾರ ರಚನೆ ಕುರಿತು ಹಕ್ಕು ಮಂಡಿಸಿದ್ದಾರೆ. ಇನ್ನು, ಜೂನ್‌ 9ರಂದು (ಭಾನುವಾರ) ಸಂಜೆ 7.15ಕ್ಕೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ (Oath) ಸ್ವೀಕರಿಸಲಿದ್ದಾರೆ.

ಹೌದು, ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ. “ನರೇಂದ್ರ ಮೋದಿ ಅವರು ಪ್ರಧಾನಿಯಾಗಿ, ಹಲವು ಸಂಸದರು ಸಚಿವರಾಗಿ ಜೂನ್‌ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ” ಎಂದು ರಾಷ್ಟ್ರಪತಿಯವರ ಕಚೇರಿಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ನರೇಂದ್ರ ಮೋದಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವ ಸಂಸದರು ಯಾರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನು, ನರೇಂದ್ರ ಮೋದಿ ಮಾತ್ರವಲ್ಲ, ಎನ್‌ಡಿಎ ಮೈತ್ರಿಕೂಟದ ಹಲವು ಸದಸ್ಯರು ಕೂಡ ರಾಷ್ಟ್ರಪತಿ ಅವರನ್ನು ಭೇಟಿಯಾದರು. ಬಿಹಾರ ಸಿಎಂ ನಿತೀಶ್‌ ಕುಮಾರ್‌, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನೂತನ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಸೇರಿ ಹಲವು ನಾಯಕರು ಇದ್ದರು.

ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಮುನ್ನ ನಡೆದ ಎನ್‌ಡಿಎ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ನಿತೀಶ್‌ ಕುಮಾರ್‌ ಅವರು ಹೊಗಳಿದರು. “ಮುಂದಿನ ಸಲವೂ ನೀವೇ ಸ್ಪರ್ಧೆಗೆ ನಿಂತರೆ, ಈಗ ಅಲ್ಲಲ್ಲಿ ಗೆಲುವು ಸಾಧಿಸಿರುವ ಇಂಡಿಯಾ ಒಕ್ಕೂಟದ ಯಾವೊಬ್ಬರೂ ಗೆಲ್ಲುವುದಿಲ್ಲ. ಎಲ್ಲರೂ ನಿಮ್ಮೆದುರು ಸೋತು ಹೋಗುತ್ತಾರೆ. ಅವರು ಎಂದಿಗೂ ದೇಶಕ್ಕಾಗಿ ಕೆಲಸ ಮಾಡಿಲ್ಲ. ಅವರಿಂದ ದೇಶಕ್ಕೆ ಯಾವ ಸೇವೆಯೂ ಸಿಕ್ಕಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ದೇಶ ಏಳಿಗೆ ಹೊಂದುತ್ತಿದೆ” ಎಂಬುದಾಗಿ ನಿತೀಶ್‌ ಕುಮಾರ್‌ ಹೇಳಿದರು. ಆಗ ನರೇಂದ್ರ ಮೋದಿ ಅವರು ಗಹಗಹಿಸಿ ನಕ್ಕರು. ಸಭೆಯಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.

ಇದನ್ನೂ ಓದಿ: Nitish Kumar: ಮುಂದಿನ ಸಲ ನಿಮ್ಮೆದುರು ಪ್ರತಿಪಕ್ಷಗಳ ಎಲ್ಲರಿಗೂ ಸೋಲು; ನಿತೀಶ್‌ ಮಾತಿಗೆ ನಕ್ಕ ಮೋದಿ!

Continue Reading
Advertisement
Narendra Modi
ಸಂಪಾದಕೀಯ3 mins ago

ವಿಸ್ತಾರ ಸಂಪಾದಕೀಯ: ಮೋದಿ ಮೂರನೇ ಅವಧಿ, ಆಗಲಿ ಇನ್ನಷ್ಟು ವಿಕಾಸದ ಬುನಾದಿ

T20 World Cup
ಪ್ರಮುಖ ಸುದ್ದಿ3 mins ago

T20 World Cup : ಪಾಕಿಸ್ತಾನ ತಂಡದ ಅಮೆರಿಕ ವಿರುದ್ಧ ಸೋತಿದ್ದು ಐಎಮ್​ಎಫ್​ ನೀಡುವ 80 ಕೋಟಿ ಸಾಲಕ್ಕಾಗಿ!

Naxals
ದೇಶ8 mins ago

ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಹತ್ಯೆ, ಮೂವರು ಯೋಧರಿಗೆ ಗಾಯ

Gas leak
ಪ್ರಮುಖ ಸುದ್ದಿ37 mins ago

Gas Leakage : ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

soraba BJP Mandala president prakash talakaalukoppa pressmeet
ಶಿವಮೊಗ್ಗ41 mins ago

Shivamogga News: ಸೊರಬದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತ ಆರೋಪ

Chandrababu Naidu
ದೇಶ41 mins ago

Chandrababu Naidu: 5 ದಿನದಲ್ಲಿ 870 ಕೋಟಿ ರೂ. ಗಳಿಸಿದ ‘ಕಿಂಗ್‌ ಮೇಕರ್’‌ ಚಂದ್ರಬಾಬು ನಾಯ್ಡು; ಹೇಗಂತೀರಾ?

Shreyas Iyer
ಕ್ರೀಡೆ2 hours ago

Shreyas Iyer : ಬಿಸಿಸಿಐ ಕೇಂದ್ರ ಗುತ್ತಿಗೆ ತಪ್ಪಿದ ಕುರಿತು ಮಾತನಾಡಿದ ಶ್ರೇಯಸ್ ಅಯ್ಯರ್​; ಏನಂದ್ರು ಅವರು?

assault case
ಕ್ರೈಂ2 hours ago

Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ

Narendra Modi
ದೇಶ2 hours ago

Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ‌; ಹಲವು ಸಂಸದರಿಗೂ ಮಂತ್ರಿ ಭಾಗ್ಯ!

Niveditha Gowda
ಸಿನಿಮಾ2 hours ago

Niveditha Gowda : ಇನ್​ಸ್ಟಾಗ್ರಾಮ್​ನಲ್ಲಿ ಚಂದನ್ ಶೆಟ್ಟಿ ಅನ್​ಫಾಲೋ ಮಾಡಿದ ನಿವೇದಿತ ಗೌಡ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ5 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 hours ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ4 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು6 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌