Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ - Vistara News

ದೇಶ

Naatu Naatu: ನಾಟು ನಾಟು ಹಾಡಿಗೆ ದೆಹಲಿಯಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿ ಡಾನ್ಸ್, ಮೋದಿ ಶ್ಲಾಘನೆ

Naatu Naatu: ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೆ ದೆಹಲಿಯ ಚಾಂದನಿ ಚೌಕ್‌ನಲ್ಲಿ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

VISTARANEWS.COM


on

Narendra Modi praises German Embassy staff's dance to Naatu Naatu in Delhi's Chandni Chowk
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು (Naatu Naatu) ಹಾಡು ಈಗ ವಿಶ್ವವಿಖ್ಯಾತಿ ಪಡೆದಿದೆ. ಜಗತ್ತಿನಾದ್ಯಂತ ಖ್ಯಾತನಾಮರು, ನಾಗರಿಕರು ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಅದರಲ್ಲೂ, ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಬಂದ ಬಳಿಕವಂತೂ ಹಾಡು, ನೃತ್ಯವು ಮತ್ತಷ್ಟು ಖ್ಯಾತಿ ಪಡೆದಿದೆ. ಇದರ ಭಾಗವಾಗಿಯೇ, ದೆಹಲಿಯಲ್ಲಿರುವ ಜರ್ಮನಿ ರಾಯಭಾರ ಕಚೇರಿಯ ಸಿಬ್ಬಂದಿಯು ರಾಷ್ಟ್ರ ರಾಜಧಾನಿಯ ಚಾಂದಿನಿ ಚೌಕ್‌ನಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಿದ್ದಾರೆ. ಹಾಗೆಯೇ, ಇದನ್ನು ಮೋದಿ ಕೊಂಡಾಡಿದ್ದಾರೆ.

ಜರ್ಮನಿ ರಾಯಭಾರ ಕಚೇರಿಯ ಸಿಬ್ಬಂದಿಯು ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೊಗೆ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಭಾರತದ ವಿವಿಧತೆ ಹಾಗೂ ಅಭಿರುಚಿಗಳಿಗೆ ಇದು ದ್ಯೋತಕ” ಎಂಬುದಾಗಿ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಜರ್ಮನಿ ರಾಯಭಾರಿ ಡಾಕ್ಟರ್‌ ಫಿಲಿಪ್‌ ಆಕರ್‌ಮ್ಯಾನ್‌ ಅವರು ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಮೋದಿ ಶ್ಲಾಘನೆಯ ಟ್ವೀಟ್‌

“ಜರ್ಮನಿಯವರಿಗೆ ನೃತ್ಯ ಮಾಡಲು ಬರುವುದಿಲ್ಲವೇ? ನಾನು ಹಾಗೂ ಇಂಡೋ-ಜರ್ಮನ್‌ ತಂಡವು ನಾಟು ನಾಟು ಹಾಡಿಗೆ ಡಾನ್ಸ್‌ ಮಾಡುವ ಮೂಲಕ ಸಂತಸ ಹಂಚಿಕೊಂಡೆವು. ನಾವು ಹಾಡಿನ ರೀತಿಯೇ ಹೆಜ್ಜೆ ಹಾಕದಿದ್ದರೂ, ಕುಣಿದು ಕುಪ್ಪಳಿಸಿದ್ದು ಖುಷಿಯಾಯಿತು. ನಮಗೆ ಸ್ಫೂರ್ತಿ ತುಂಬಿದ್ದಕ್ಕೆ ಭಾರತದಲ್ಲಿರುವ ಕೊರಿಯಾ ರಾಯಭಾರ ಕಚೇರಿಯ ಸಿಬ್ಬಂದಿಗೆ ಧನ್ಯವಾದಗಳು” ಎಂದು ಫಿಲಿಪ್‌ ಆಕರ್‌ಮ್ಯಾನ್‌ ಸಂತಸ ಹಂಚಿಕೊಂಡಿದ್ದಾರೆ.

ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರಾ ಅವರೂ ಜರ್ಮನಿ ರಾಯಭಾರ ಕಚೇರಿ ಸಿಬ್ಬಂದಿಯ ನೃತ್ಯವನ್ನು ಕೊಂಡಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವರದಿಯೊಂದರ ಪ್ರಕಾರ ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ ಬಂದ ಬಳಿಕ ಗೂಗಲ್‌ ಸರ್ಚ್‌ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಜಪಾನ್‌ನ ಕ್ಯಾಸಿನೋ ಗೈಡ್‌ ವರದಿಯ ಪ್ರಕಾರ, ಆಸ್ಕರ್‌ ಪ್ರಶಸ್ತಿ ಬಂದ ಬೆನ್ನಲ್ಲೇ ಗೂಗಲ್‌ನಲ್ಲಿ ನಾಟು ನಾಟು ಹಾಡನ್ನು ಸರ್ಚ್‌ ಮಾಡಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬರೋಬ್ಬರಿ ಶೇ.1105 ಏರಿಕೆ ದಾಖಲೆಯಾಗಿದೆಯಂತೆ. ಹಾಗೆಯೇ ಟಿಕ್‌ಟಾಕ್‌ನಲ್ಲೂ 52.6 ಮಿಲಿಯನ್‌ ಜನರು ಈ ಹಾಡಿನ ವಿಡಿಯೊ ವೀಕ್ಷಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಬಾಚಿಕೊಂಡಿದ್ದ ನಾಟು ನಾಟು ಹಾಡು ಮಾ.12ರಂದು ಆಸ್ಕರ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಟು ನಾಟು ಹಾಡಿಗೆ ಈ ಪ್ರಶಸ್ತಿ ಬಂದಿರುವ ಬಗ್ಗೆ ಬಾಲಿವುಡ್‌ ಸೇರಿ ಭಾರತೀಯ ಚಿತ್ರರಂಗ ಸೇರಿ ಜಗತ್ತಿನ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ. ವಿದೇಶಿ ಗಣ್ಯರು ಕೂಡ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೊಗಳು ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿವೆ.

ಇದನ್ನೂ ಓದಿ: Naatu Naatu: ನಾಟು ನಾಟು ಹಾಡನ್ನು ಗೂಗಲ್‌ನಲ್ಲಿ ಹುಡುಕಿದವರ ಸಂಖ್ಯೆಯಲ್ಲಿ ಶೇ.1105 ಏರಿಕೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಮತ್ತೆ ಮತಪತ್ರಗಳ ‘ಶಿಲಾಯುಗ’ಕ್ಕೆ ಹೋಗಲಾಗದು! ಆಧಾರರಹಿತವಾಗಿ ಮತಯಂತ್ರ ದೂಷಣೆ ಸರಿಯಲ್ಲ

ಇವಿಎಂಗಳನ್ನು ತಿದ್ದುವ, ತಿರುಚುವ ಕೆಲಸ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂಬುದನ್ನು ತಜ್ಞರು ಸಾಕಷ್ಟು ಸಲ ಹೇಳಿದ್ದಾರೆ. ಸ್ವತಃ ಚುನಾವಣಾ ಆಯೋಗವೇ, ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸುವಂತೆ ಮುಕ್ತ ಸವಾಲು ಎಸೆದಿತ್ತು. ಆದರೆ ಆರೋಪ ಮಾಡುತ್ತಿರುವ ಯಾರೂ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಲಿಲ್ಲ. ಅಂದರೆ ಈ ಆರೋಪ ಮಾಡುತ್ತಿರುವವರಿಗೇ ತಮ್ಮ ಮಾತುಗಳ ಮೇಲೆ ನಂಬಿಕೆಯಿಲ್ಲ.

VISTARANEWS.COM


on

EVM
Koo

“ಇವಿಎಂಗಳನ್ನು ತಿರುಚದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 180 ಸೀಟುಗಳು ಕೂಡ ಬರುವುದಿಲ್ಲ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. “ಯಾವ ಆಧಾರದ ಬಿಜೆಪಿ ನಾಯಕರು 400 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಾರೆ? ಅವರೇನು ಜ್ಯೋತಿಷಿಗಳೇ? ಇದಕ್ಕೂ ಮೊದಲು ಬಿಜೆಪಿಯೇನು 400 ಕ್ಷೇತ್ರ ಗೆದ್ದಿಲ್ಲ. ಈಗ ಹೇಗೆ ಇಷ್ಟೊಂದು ವಿಶ್ವಾಸ ಬರುತ್ತದೆ? ದೇಶದಲ್ಲಿ ಮತಯಂತ್ರಗಳನ್ನು ತಿರುಚದೆ ಚುನಾವಣೆ ನಡೆದರೆ ಬಿಜೆಪಿಗೆ 180 ಸೀಟುಗಳು ಕೂಡ ಬರಲ್ಲ” ಎಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ತಿಂಗಳಷ್ಟೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೂ ಇವಿಎಂಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. “ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಲೋಕಸಭೆ ಇರಲಿ, ಯಾವುದೇ ರಾಜ್ಯಗಳ ವಿಧಾನಸಭೆ ಚುನಾವಣೆ ಇರಲಿ, ಪ್ರತಿ ಬಾರಿ ಚುನಾವಣೆ ಘೋಷಣೆಯಾದಾಗಲೂ ವಿದ್ಯುನ್ಮಾನ ಮತಯಂತ್ರಗಳನ್ನು (EVM) ತಿರುಚಲಾಗುತ್ತದೆ ಎಂಬುದಾಗಿ ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಆರೋಪಿಸುತ್ತವೆ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಂದ ಬಳಿಕ ಮತ ಎಣಿಕೆ ಪ್ರಕ್ರಿಯೆ ಸುಗಮಗೊಂಡಿದೆ. ಆದರೆ, ತಂತ್ರಜ್ಞಾನವನ್ನು ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳೆದ 10 ವರ್ಷಗಳಿಂದಲೂ ವಿಪಕ್ಷಗಳು ಆರೋಪಿಸುತ್ತಿವೆ. ಇವಿಎಂ ಬದಲು ಹಳೆಯ ಬ್ಯಾಲಟ್ ಬಾಕ್ಸ್ ಮತದಾನ ಪದ್ಧತಿಯನ್ನೇ ವಾಪಸ್ ತರಬೇಕೆಂಬ ಒತ್ತಾಯಗಳು ಇವೆ.

ಇತ್ತೀಚೆಗೆ, ಇವಿಎಂ ಮೆಷೀನ್​ನಲ್ಲಿ ಹಾಕಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್​ಗಳ (VVPAT) ಮೂಲಕ ಪರಿಶೀಲನೆ ನಡೆಸುವಂತಹ ವ್ಯವಸ್ಥೆ ಆಗಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಗಳು ಸಲ್ಲಿಕೆ ಆಗಿದ್ದವು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, ಹಿಂದಿನ ಬ್ಯಾಲಟ್ ವೋಟಿಂಗ್ ವಿಧಾನದ ಲೋಪವನ್ನು ಎತ್ತಿ ತೋರಿಸಿದೆ. “ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂದು ನಮಗೆಲ್ಲಾ ಗೊತ್ತಿದೆ. ನಿಮಗೆ ಅದು ಮರೆತುಹೋಗಿರಬಹುದು, ಆದರೆ, ನಾವು ಮರೆತಿಲ್ಲ,’ ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜೀವ್ ಖನ್ನ ಹೇಳಿದ್ದಾರೆ. ಯುರೋಪ್‌ನಲ್ಲಿ ಇರುವ ವ್ಯವಸ್ಥೆ ಭಾರತಕ್ಕೆ ಸರಿಹೊಂದಬೇಕಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಭಾರತದ ಜನಸಂಖ್ಯೆಗೂ, ಬ್ಯಾಲೆಟ್ ಪೇಪರ್ ಜಾರಿಯಲ್ಲಿರುವ ದೇಶಗಳ ಜನಸಂಖ್ಯೆಗೂ ಅಜಗಜಾಂತರ. ಇಲ್ಲಿ ಮತ್ತೆ ಮತಪತ್ರದ ವ್ಯವಸ್ಥೆ ಜಾರಿಗೆ ತಂದರೆ ನಾವು ಶಿಲಾಯುಗಕ್ಕೆ ಮರಳಿದಂತೆಯೇ ಸರಿ. ಮತಗಳನ್ನು ಎಣಿಸಲು ವಾರಗಳೇ ಬೇಕಾಗಬಹುದು. ಪ್ರಸ್ತುತ ವ್ಯವಸ್ಥೆಯಲ್ಲಿ ಅರ್ಧ ದಿನದಲ್ಲಿ ಇಡೀ ದೇಶದ ಫಲಿತಾಂಶ ತಿಳಿಯುತ್ತದೆ. ಮತಪತ್ರಗಳನ್ನು ಮುದ್ರಿಸುವ, ಸಂಗ್ರಹಿಸುವ, ಅವುಗಳನ್ನು ಸಾಗಿಸುವ, ರಕ್ಷಿಸುವ ಕೆಲಸ ಬಹಳ ಜಟಿಲ ಹಾಗೂ ತ್ರಾಸದಾಯಕ. ನ್ಯಾಯಾಲಯ ಹೇಳಿದಂತೆ, ಮತಪೆಟ್ಟಿಗೆಗಳ ಯುಗದಲ್ಲಿ ಮತಗಟ್ಟೆಗಳ ಲೂಟಿ ಹಾಗೂ ಅಕ್ರಮವೂ ವ್ಯಾಪಕವಾಗಿತ್ತು. ಇವಿಎಂಗಳಿಂದಾಗಿ ಅದೆಲ್ಲಕ್ಕೂ ತಡೆ ಬಿದ್ದಿದೆ. ಲಕ್ಷಾಂತರ ಮಂದಿಯ ಸಮಯ, ಶ್ರಮ, ಹಣಕಾಸು ಎಲ್ಲವನ್ನೂ ಇವು ಉಳಿಸಿವೆ.

ಇವಿಎಂಗಳನ್ನು ತಿದ್ದುವ, ತಿರುಚುವ ಕೆಲಸ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂಬುದನ್ನು ತಜ್ಞರು ಸಾಕಷ್ಟು ಸಲ ಹೇಳಿದ್ದಾರೆ. ಸ್ವತಃ ಚುನಾವಣಾ ಆಯೋಗವೇ, ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸುವಂತೆ ಮುಕ್ತ ಸವಾಲು ಎಸೆದಿತ್ತು. ಆದರೆ ಆರೋಪ ಮಾಡುತ್ತಿರುವ ಯಾರೂ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಲಿಲ್ಲ. ಅಂದರೆ ಈ ಆರೋಪ ಮಾಡುತ್ತಿರುವವರಿಗೇ ತಮ್ಮ ಮಾತುಗಳ ಮೇಲೆ ನಂಬಿಕೆಯಿಲ್ಲ. ಚುನಾವಣೆ ಹತ್ತಿರ ಬಂದಾಗ, ಸೋಲುವ ಲಕ್ಷಣಗಳು ಕಂಡುಬಂದಾಗ, ಸೋತಾಗಲೆಲ್ಲ ಇವಿಎಂಗಳನ್ನು ದೂರುವುದು ಹೇಡಿತನದ ಲಕ್ಷಣ. ಅದು ಪ್ರಧಾನಿ ಮೋದಿಯವರೇ ಹೇಳಿದಂತೆ ” ಕುಣಿಯಲಾರದವರು ನೆಲ ಡೊಂಕು” ಅಂದಂತೆ.

ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

Continue Reading

ದೇಶ

DD News Logo: ರಾಮನವಮಿ ದಿನವೇ ಡಿಡಿ ನ್ಯೂಸ್‌ ಲೋಗೊ ಕೇಸರಿಮಯ; ತೀವ್ರವಾಯ್ತು ಚರ್ಚೆ!

DD News Logo: ಡಿಡಿ ನ್ಯೂಸ್‌ನ ಲೋಗೊವನ್ನು ಬದಲಾಯಿಸಲಾಗಿದೆ. ಕೆಂಪು ಬಣ್ಣದ ಬದಲು ಕೇಸರಿ ಬಣ್ಣದ ಲೋಗೊವನ್ನು ಡಿಡಿ ನ್ಯೂಸ್‌ ಚಾನೆಲ್‌ ಅನಾವರಣಗೊಳಿಸಿದೆ. ಹೊಸ ಲೋಗೊ ಬದಲಾಯಿಸುತ್ತಲೇ ಫೇಸ್‌ಬುಕ್‌, ಎಕ್ಸ್‌ ಸೇರಿ ಎಲ್ಲ ಜಾಲತಾಣಗಳಲ್ಲೂ ಹೊಸ ಲೋಗೊ ಕಾಣಿಸಿಕೊಂಡಿದೆ. ಜನರು ಕೂಡ ಹೊಸ ಲೋಗೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

DD News Logo
Koo

ನವದೆಹಲಿ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಸರ್ಕಾರವು ಶಾಲೆಗಳಿಗೆ ಕೇಸರಿ ಬಣ್ಣ ಬಳಿಸಿದಾಗ, ಹೊಸ ಸಂಸತ್‌ ಭವನದ ಆಸನಗಳು ಕೇಸರಿಮಯವಾಗಿದ್ದಾಗ ಟೀಕೆ, ಪರ-ವಿರೋಧ ಚರ್ಚೆಗಳು ನಡೆದಿದ್ದವು. ಈಗ ರಾಮನವಮಿ (Ram Navami) ದಿನವೇ ಕೇಂದ್ರ ಸರ್ಕಾರಿ ಪ್ರಾಯೋಜಿತ ಡಿಡಿ ನ್ಯೂಸ್‌ ಚಾನೆಲ್‌ನ (DD News Logo) ಲೋಗೊವನ್ನು ಕೇಸರಿಮಯವನ್ನಾಗಿ ಮಾಡಲಾಗಿದೆ. ಹೊಸ ಲೋಗೊ ಬಿಡುಗಡೆಯಾದ ಬೆನ್ನಲ್ಲೇ ಈಗ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

“ನಮ್ಮ ಮೌಲ್ಯಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುತ್ತಲೇ ನಿಮ್ಮೆದುರು ಹೊಸ ಅವತಾರದೊಂದಿಗೆ ಬಂದಿದ್ದೇವೆ. ಎಂದಿನಂತೆ ಸುದ್ದಿಯ ಪಯಣಕ್ಕೆ ನೀವೂ ಸಜ್ಜಾಗಿ. ಹೊಸ ಡಿಡಿ ನ್ಯೂಸ್‌ನ ಅನುಭವವನ್ನೂ ನೀವೂ ಪಡೆಯಿರಿ. ವೇಗಕ್ಕಿಂತ ನಿಖರತೆಗೆ, ಪ್ರಸ್ತಾಪಗಳಿಗಿಂತ ವಾಸ್ತವಾಂಶಗಳಿಗೆ, ಸೂಕ್ಷ್ಮತೆಯ ಬಣ್ಣಕ್ಕಿಂತ ಸತ್ಯದ ಕಡೆಗೆ ನಾವಿದ್ದೇವೆ ಎಂಬುದನ್ನು ಧೈರ್ಯವಾಗಿ ಹೇಳುತ್ತೇವೆ. ಡಿಡಿ ನ್ಯೂಸ್-ಸತ್ಯದ ಭರವಸೆ” ಎಂಬುದಾಗಿ ಡಿಡಿ ನ್ಯೂಸ್‌ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹೊಸ ಲೋಗೊ ಕುರಿತು ವಿಡಿಯೊ ಸಮೇತ ಪೋಸ್ಟ್‌ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ಡಿಡಿ ನ್ಯೂಸ್‌ ಲೋಗೊ ಕೆಂಪು ಬಣ್ಣದಿಂದ ಕೂಡಿತ್ತು. ಆದರೀಗ, ಆ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಡಿಡಿ ನ್ಯೂಸ್‌ ಲೋಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೆಂಪು ಬಣ್ಣವನ್ನು ಮಾತ್ರ ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಹೊಸ ಲೋಗೊ ಬದಲಾಯಿಸುತ್ತಲೇ ಫೇಸ್‌ಬುಕ್‌, ಎಕ್ಸ್‌ ಸೇರಿ ಎಲ್ಲ ಜಾಲತಾಣಗಳಲ್ಲೂ ಹೊಸ ಲೋಗೊ ಕಾಣಿಸಿಕೊಂಡಿದೆ. ಜನರು ಕೂಡ ಹೊಸ ಲೋಗೊವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಪರ-ವಿರೋಧ ಚರ್ಚೆ

ಡಿಡಿ ನ್ಯೂಸ್‌ ಚಾನೆಲ್‌ನ ಲೋಗೊ ಬದಲಾಯಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. “ಹೊಸದಾದ, ಅದ್ಭುತ ಲೋಗೊದೊಂದಿಗೆ ಡಿಡಿ ನ್ಯೂಸ್‌ ಬಂದಿದೆ. ನಮ್ಮ ವಿಶ್ವಾಸ ಗಳಿಸಿರುವ ಡಿಡಿ ನ್ಯೂಸ್‌ ಇನ್ನಷ್ಟು ಏಳಿಗೆ ಹೊಂದಲಿ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಗದ್ದಲದ ಸುದ್ದಿ ಜಗತ್ತಿನಲ್ಲಿ ವಾಸ್ತವ ತಿಳಿಸುವ ಡಿಡಿ ನ್ಯೂಸ್‌ ಹೊಸ ಲೋಗೊ, ಹೊಸ ಅವತಾರದ ಕುರಿತು ಉತ್ಸುಕನಾಗಿದ್ದೇನೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು, “ಇದು ಕೂಡ ಗೋದಿ ಮೀಡಿಯಾ”, “ಸರ್ಕಾರದ ಸುದ್ದಿ ಚಾನೆಲ್‌ಗೂ ಏಕೆ ಕೇಸರಿ ಬಣ್ಣ” ಎಂಬುದಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Modi Letter: ಸಾಮಾನ್ಯ ಎಲೆಕ್ಷನ್‌ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!

Continue Reading

ಕ್ರೀಡೆ

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Times Influential list 2024: ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, 2014ರಲ್ಲಿ ಮೈಕ್ರೋಸಾಫ್ಟ್ ನ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

VISTARANEWS.COM


on

Times Influential list 2024
Koo

ನ್ಯೂಯಾರ್ಕ್: ಟೈಮ್ ಮ್ಯಾಗಜೀನ್‌ನ ಈ ವರ್ಷದ 100 ಪ್ರಭಾವಿ(Times Influential list 2024) ವ್ಯಕ್ತಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಅಚ್ಚರಿ ಎಂಬಂತೆ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ಗಂಭೀರ ಆರೋಪ ಮಾಡಿ ಕುಸ್ತಿಗೆ ವಿದಾಯ ಹೇಳಿದ್ದ ಒಲಿಂಪಿಯನ್​ ಕುಸ್ತಿಪಟು ಸಾಕ್ಷಿ ಮಲಿಕ್(Sakshi Malik) ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಜತೆಗೆ, ಬಾಲಿವುಡ್ ನಟಿ ಆಲಿಯಾ ಭಟ್(Alia Bhatt)​, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ(Satya Nadella) ಕೂಡ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಸಾಕ್ಷಿ ಮಲಿಕ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಕುಸ್ತಿ ಫೆಡರೇಷನ್​ಗೆ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ 31 ವರ್ಷದ ಸಾಕ್ಷಿ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಒಲಿಂಪಿಕ್ ಅರ್ಹತಾ ಪಂದ್ಯಗಳಿಗಾಗಿ ನಡೆದಿದ್ದ ರಾಷ್ಟ್ರೀಯ ಟ್ರಯಲ್ಸ್‌ನಿಂದಲೂ ಹೊರಗುಳಿದಿದ್ದರು.

ಇದನ್ನೂ ಓದಿ Sakshi Malik: ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಟೂರ್ನಿಯಲ್ಲಿ ಸ್ಪರ್ಧಿಸಬೇಡಿ: ಸಾಕ್ಷಿ ಮಲಿಕ್

ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ ಆಗಿ ನೇಮಕಗೊಂಡಿದ್ದರು. ನಾದೆಲ್ಲಾ ಅವರು ಮೈಕ್ರೋಸಾಫ್ಟ್ ಪ್ರವೇಶಿಸಿದ ನಂತರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಮತ್ತೆ ವಹಿವಾಟು ಚೇತರಿಸಿಕೊಂಡಿತ್ತು. ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, ಕರ್ನಾಟಕದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದರು. ಹಾಗೆಯೇ ಎಂಎಸ್‌ ಅನ್ನು ಸ್ಟಾನ್‌ಫೋರ್ಡ್‌ ಮತ್ತು ಎಂಬಿಎ ಅನ್ನು ವಾರ್ಟನ್‌ನಲ್ಲಿ ಮುಗಿಸಿದ್ದಾರೆ. 2014ರಲ್ಲಿ ಮೈಕ್ರೋಸಾಫ್ಟ್ ನ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

Continue Reading

ದೇಶ

Terrorist Attack: ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನನ್ನು ಹತ್ಯೆಗೈದ ಉಗ್ರರು; ತಿಂಗಳಲ್ಲಿ 2ನೇ ದಾಳಿ

Terrorist Attack: ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರೊಬ್ಬರನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಏಪ್ರಿಲ್‌ ತಿಂಗಳಲ್ಲಿಯೇ ಉಗ್ರರು ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.

VISTARANEWS.COM


on

Terrorist Attack
Koo

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡುವುದನ್ನು ಉಗ್ರರು ಮುಂದುವರಿಸಿದ್ದಾರೆ. ಅನಂತನಾಗ್‌ (Anantnag) ಜಿಲ್ಲೆಯ ಜಬ್ಲಿಪೋರಾ ಗ್ರಾಮದ ಬಳಿ ವಲಸೆ ಕಾರ್ಮಿಕರೊಬ್ಬರನ್ನು (Migrant Worker) ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ (Terrorist Attack) ನಡೆಸಿದ್ದಾರೆ. ಗುಂಡಿನ ದಾಳಿಗೆ ಬಿಹಾರ ಮೂಲದ ರಾಜಾ ಶಾಹ್‌ ಎಂಬುವರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯ ಬೆನ್ನಲ್ಲೇ ಭದ್ರತಾ ಸಿಬ್ಬಂದಿಯು ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.

ಬಿಹಾರ ಮೂಲದ ರಾಜಾ ಶಾಹ್‌ ಅವರು ಕೆಲಸಕ್ಕೆಂದು ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ್ದರು. ಇವರು ಜಬ್ಲಿಪೋರಾ ಗ್ರಾಮದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಉಗ್ರರು ಇವರ ಮೇಲೆ ಗುಂಡಿನ ದಾಳಿ ಮಾಡಿದ್ದು, ಇಡೀ ಕುಟುಂಬವೀಗ ದುಃಖತಪ್ತವಾಗಿದೆ. ರಾಜಾ ಶಾಹ್‌ ಅವರ ಹೊಟ್ಟೆ ಹಾಗೂ ಕುತ್ತಿಗೆಗೆ ಎರಡು ಗುಂಡು ತಗುಲಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಾಳಿ ಖಂಡಿಸಿದ ಗುಲಾಂ ನಬಿ

ಬಿಹಾರ ಮೂಲದ ರಾಜಾ ಶಾಹ್‌ ಎಂಬ ವಲಸೆ ಕಾರ್ಮಿಕನ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಗಾಯಗೊಂಡವರು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಕಣಿವೆಯಲ್ಲಿ ಇಂತಹ ಉಗ್ರ ಕೃತ್ಯಗಳು ನಿಲ್ಲಬೇಕು. ಕಾಶ್ಮೀರದ ಜನರಿಗೆ ಶಾಂತಿ ಬೇಕಾಗಿದೆ. ಆದರೆ, ಉಗ್ರರಿಗೆ ಶಾಂತಿ ನೆಲೆಸುವುದು ಬೇಕಾಗಿಲ್ಲ. ಇಂತಹ ಕೃತ್ಯಗಳ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದಕರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿದ್ದರು. ಉಗ್ರರ ಗುಂಡಿನ ದಾಳಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ ದಿಲ್​ರಂಜಿತ್​ ಸಿಂಗ್ ಎಂಬುವರು ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರ ಜಿಲ್ಲೆಯ ಹೆರ್ಪೊರಾ ಪ್ರದೇಶದಲ್ಲಿ ರಾತ್ರಿ ಗುಂಡಿನ ದಾಳಿ ನಡೆದಿತ್ತು. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಮಿಕರ ರಕ್ಷಣೆ ಮಾಡಿದ್ದರು.

ಇದನ್ನೂ ಓದಿ: Boat Capsize: ಕಾಶ್ಮೀರದಲ್ಲಿ ಮುಳುಗಿದ ದೋಣಿ; ನಾಲ್ವರು ಶಾಲಾ ಮಕ್ಕಳು ಜಲಸಮಾಧಿ

Continue Reading
Advertisement
jai shree ram assault case
ಕ್ರೈಂ13 mins ago

Jai Shree Ram slogan: ರಾಮಭಕ್ತರ ಮೇಲೆ ಹಲ್ಲೆ ಮಾಡಿದ 4 ಮಂದಿಯ ಬಂಧನ, ಇಂದು ಬಿಜೆಪಿ ಪ್ರತಿಭಟನೆ

Karnataka Weather
ಕರ್ನಾಟಕ59 mins ago

Karnataka Weather: ಇಂದು ದಕ್ಷಿಣ ಕನ್ನಡ, ಬೆಳಗಾವಿ ಸೇರಿ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಮಳೆ!

EVM
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಮತ್ತೆ ಮತಪತ್ರಗಳ ‘ಶಿಲಾಯುಗ’ಕ್ಕೆ ಹೋಗಲಾಗದು! ಆಧಾರರಹಿತವಾಗಿ ಮತಯಂತ್ರ ದೂಷಣೆ ಸರಿಯಲ್ಲ

Baking Powder
ಆಹಾರ/ಅಡುಗೆ1 hour ago

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಇದರ ಹಿನ್ನೆಲೆ ಗೊತ್ತಿರಲಿ

daily horoscope predictions for April 18 2024
ಭವಿಷ್ಯ2 hours ago

Dina Bhavishya : ಈ ರಾಶಿಯವರು ಇಂದು ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ ಇದೆ!

DD News Logo
ದೇಶ7 hours ago

DD News Logo: ರಾಮನವಮಿ ದಿನವೇ ಡಿಡಿ ನ್ಯೂಸ್‌ ಲೋಗೊ ಕೇಸರಿಮಯ; ತೀವ್ರವಾಯ್ತು ಚರ್ಚೆ!

Jai Shree Ram slogan
ಪ್ರಮುಖ ಸುದ್ದಿ8 hours ago

Jai Shree Ram slogan: ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ

Union Minister Pralhad Joshi election campaign in Hubli
ಹುಬ್ಬಳ್ಳಿ8 hours ago

Lok Sabha Election 2024: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಸ್ವಚ್ಛ ಆಡಳಿತ: ಪ್ರಲ್ಹಾದ್‌ ಜೋಶಿ

Times Influential list 2024
ಕ್ರೀಡೆ8 hours ago

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Terrorist Attack
ದೇಶ9 hours ago

Terrorist Attack: ಕಾಶ್ಮೀರದಲ್ಲಿ ಬಿಹಾರದ ಕಾರ್ಮಿಕನನ್ನು ಹತ್ಯೆಗೈದ ಉಗ್ರರು; ತಿಂಗಳಲ್ಲಿ 2ನೇ ದಾಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20243 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌