No Confidence Motion: 2023ರಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು 2019ರಲ್ಲೇ ಊಹಿಸಿದ್ದರು ಮೋದಿ; ವಿಡಿಯೊ ವೈರಲ್ - Vistara News

ದೇಶ

No Confidence Motion: 2023ರಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು 2019ರಲ್ಲೇ ಊಹಿಸಿದ್ದರು ಮೋದಿ; ವಿಡಿಯೊ ವೈರಲ್

No Confidence Motion: 2023ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲೇ ಹೇಳಿದ್ದರು. ಈಗ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಹೊತ್ತಿನಲ್ಲಿ ಮೋದಿ ಹೇಳಿದ್ದ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Narendra Modi On No Confidence Motion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕಾಂಗ್ರೆಸ್‌ ಸೇರಿ ಹಲವು ಪ್ರತಿಪಕ್ಷಗಳು ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌ ಅವರು ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು (No Confidence Motion) ಮಂಡಿಸಲು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ. ಅಲ್ಲದೆ, ಅವಿಶ್ವಾಸ ನಿರ್ಣಯದ ಕುರಿತು ಶೀಘ್ರದಲ್ಲೇ ಚರ್ಚಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳು 2023ರಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವ ಕುರಿತು 2019ರಲ್ಲೇ ಊಹಿಸಿದ್ದು, ಆ ವಿಡಿಯೊ ಈಗ ವೈರಲ್‌ ಆಗಿದೆ.

ಹೌದು, ನರೇಂದ್ರ ಮೋದಿ ಅವರು 2019ರಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು. ತೀಕ್ಷ್ಣ ನುಡಿಗಳ ಮೂಲಕ ಪ್ರತಿಪಕ್ಷಗಳಿಗೆ ಕುಟುಕಿದ್ದರು. “2023ರಲ್ಲಿ ಕೂಡ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಸಿದ್ಧಪಡಿಸಲಿ. ಆಗಲೂ ನೀವು ಅವಿಶ್ವಾಸ ಗೊತ್ತುವಳಿ ಮಂಡಿಸುವಂತಾಗಲಿ ಎಂಬುದಾಗಿ ನಾನು ಶುಭ ಕೋರುತ್ತೇನೆ” ಎಂದು ಮೋದಿ ಹೇಳಿದ್ದರು. ಈಗ 2023ರಲ್ಲೇ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದು, ಮೋದಿ ಅವರು 4 ವರ್ಷದ ಹಿಂದೆ ಹೇಳಿದ ವಿಡಿಯೊ ಸದ್ದು ಮಾಡುತ್ತಿದೆ.

2019ರಲ್ಲಿ ಮೋದಿ ಹೇಳಿದ್ದಿಷ್ಟು

“ನೀವು 2023ರಲ್ಲೂ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಾಗಲಿ” ಎಂದು ನರೇಂದ್ರ ಮೋದಿ ಅವರು ಹೇಳುತ್ತಲೇ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. “ಇದು ಅಹಂಕಾರದ ಮಾತು” ಎಂದು ಖರ್ಗೆ ಕುಟುಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ಇದು ಸಮರ್ಪಣಾ ಮನೋಭಾವದ ಆತ್ಮವಿಶ್ವಾಸ ಆಗಿದೆಯೇ ಹೊರತು ಅಹಂಕಾರದ ಮಾತಲ್ಲ. ಅಹಂಕಾರ ಪ್ರದರ್ಶಿಸಿದ್ದಕ್ಕೆ ನೀವು (ಕಾಂಗ್ರೆಸ್) 400 ಸ್ಥಾನದಿಂದ 40 ಸ್ಥಾನಕ್ಕೆ ಇಳಿದಿದ್ದೀರಿ. ಸೇವಾ ಮನೋಭಾವದಿಂದ ನಾವು 2 ಸ್ಥಾನದಿಂದ ಬಂದು ಇಲ್ಲಿ ಕೂತಿದ್ದೇವೆ” ಎಂದು ಹೇಳಿದ್ದರು.

ಇದನ್ನೂ ಓದಿ: No Confidence Motion: ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಅಸ್ತು; ಸಂಖ್ಯಾಬಲ ಹೇಗಿದೆ? ಮುಂದೇನಾಗುತ್ತದೆ?

ಈಗ ಸಂಖ್ಯಾಬಲ ಹೇಗಿದೆ?

ಲೋಕಸಭೆಯ ಒಟ್ಟು ಸದಸ್ಯ ಬಲ 543 ಇದೆ. ಆರು ಸದಸ್ಯರ ಆಯ್ಕೆ ಬಾಕಿ ಇದ್ದು, ಸದ್ಯ 537 ಸದಸ್ಯರಿದ್ದಾರೆ. ಇವರಲ್ಲಿ ಬಿಜೆಪಿ ಒಂದೇ ಪಕ್ಷದ ಬಲವೇ 301 ಇದೆ. ಇನ್ನು ಎನ್‌ಡಿಎ ಮಿತ್ರಪಕ್ಷಗಳ ಬಲ ಸೇರಿ ಸಂಖ್ಯಾಬಲ 331 ಆಗುತ್ತದೆ. ಇನ್ನು ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದಲ್ಲಿ 142 ಸದಸ್ಯರಿದ್ದಾರೆ. ಆದಾಗ್ಯೂ, ಹಲವು ಪಕ್ಷಗಳ 33 ಸದಸ್ಯರು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅವರು ತಟಸ್ಥರಾಗಿದ್ದಾರೆ. ಹಾಗಾಗಿ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

Lok Sabha Election 2024: ಪಡಿಲ ಮಹಾದೇವ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ಭಾರಿ ಬೆಂಬಲಿಗರು ಸೇರಿದ್ದರು, ಜನ ವೇದಿಕೆ ಮೇಲೆ ಬರಲಿ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣ, ಗೊಂದಲದ ವಾತಾವರಣ ಉಂಟಾಗಿತ್ತು, ಸಮಾಧಾನದಿಂದ ಇರುವಂತೆ ರಾಹುಲ್ ಗಾಂಧಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒಟ್ಟಿನಲ್ಲಿ ಒಂದು ಕ್ಷಣಕ್ಕೆ ಕಾಲ್ತುಳಿತದಂತಹ ದುರ್ಘಟನೆ ಸಂಭವಿಸುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿತ್ತು.

VISTARANEWS.COM


on

Lok Sabha Election 2024
Koo

ಉತ್ತರಪ್ರದೇಶ: ಲೋಕಸಭೆ ಚುನಾವಣೆ(Lok Sabha Election 2024) ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಚುನಾವಣೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ರಾಜಕೀಯ ನಾಯಕರು ಒಂದರ ಮೇಲೊಂದರಂತೆ ರ್ಯಾಲಿ, ಸಾರ್ವಜನಿಕ ಸಭೆ ನಡೆಸುವ ಮೂಲಕ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ನಿನ್ನೆ ಉತ್ತರಪ್ರದೇಶ(Uttara Pradesh)ದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ಮತ್ತು ಅಖಿಲೇಶ್‌ ಯಾದವ್‌(Akhilesh Yadav) ಭಾಗಿಯಾಗಿದ್ದ ಚುನಾವಣಾ ರ್ಯಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಜನಸ್ತೋಮ ಸೇರಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಫುಲ್‌ಫುರದಲ್ಲಿ ಸ್ವತಃ ನಾಯಕರೇ ಆಘಾತಕ್ಕೀಡಾಗುವಂತಹ ರೀತಿಯಲ್ಲಿ ಜನ ಭಾಗಿಯಾಗಿದ್ದರು. ನೆರೆದಿರುವ ಜನರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಪಡಿಲ ಮಹಾದೇವ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ಭಾರಿ ಬೆಂಬಲಿಗರು ಸೇರಿದ್ದರು, ಜನ ವೇದಿಕೆ ಮೇಲೆ ಬರಲಿ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣ, ಗೊಂದಲದ ವಾತಾವರಣ ಉಂಟಾಗಿತ್ತು, ಸಮಾಧಾನದಿಂದ ಇರುವಂತೆ ರಾಹುಲ್ ಗಾಂಧಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒಟ್ಟಿನಲ್ಲಿ ಒಂದು ಕ್ಷಣಕ್ಕೆ ಕಾಲ್ತುಳಿತದಂತಹ ದುರ್ಘಟನೆ ಸಂಭವಿಸುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿತ್ತು.

ಭಾಷಣ ಮಾಡದೇ ವೇದಿಕೆಯಿಂದ ನಿರ್ಗಮಿಸಿದ ರಾಹುಲ್‌, ಅಖಿಲೇಶ್‌

ಭಾರೀ ಜನಸ್ತೋಮ ಕಂಡು ದಂಗಾಗಿದ್ದ ರಾಹುಲ್‌ ಮತ್ತು ಅಖಿಲೇಶ್‌ ವೇದಿಕೆಯಿಂದ ನಿರ್ಗಮಿಸುವುದೇ ಸೂಕ್ತ ಎಂದು ಭಾವಿಸಿದರು. ಉದ್ರಿಕ್ತ ಜನ ಬ್ಯಾರಿಕೇಟ್‌ಗಳನ್ನು ಮುರಿದು ಒಳಗೆ ಪ್ರವೇಶಿಸಿದ್ದರು. ಅಲ್ಲದೇ ಕಹಲವು ವೇದಿಕೆಗೆ ಹತ್ತಲೂ ಯತ್ನಿಸಿದ್ದರು. ಕೆಲವರು ವೇದಿಕೆ ಏರುವಲ್ಲಿ ಯಶಸ್ವಿ ಆಗಿದ್ದರು. ಕಾರ್ಯಕರ್ತರ ಈ ರೀತಿಯಾದ ಅನುಚಿತ ವರ್ತನೆಯಿಂದ ಕುಪಿತಗೊಂಡ ಇಬ್ಬರೂ ನಾಯಕರು ಏನೂ ಮಾತನಾಡಲಿಲ್ಲ. ತಾವು ಮಾಡಬೇಕಾಗಿದ್ದ ಭಾಷಣವನ್ನೂ ಮಾಡದೇ ಇಬ್ಬರೂ ನಾಯಕರು ವೇದಿಕೆಯಿಂದ ನಿರ್ಗಮಿಸಿ ಬಳಿಕ ಇಬ್ಬರೂ ನಾಯಕರು ಇಲ್ಲಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದರು.

ಗಲಾಟೆ ಎಷ್ಟು ದೊಡ್ಡದಾಗಿದೆ ಎಂದರೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಯಾವುದೇ ಭಾಷಣ ಮಾಡದೆ ಸ್ಥಳದಿಂದ ನಿರ್ಗಮಿಸಿದರು. ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಮತ್ತು ಅಖಿಲೇಶ್ ಜಂಟಿ ಸಾರ್ವಜನಿಕ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಅವರು ಪ್ರಯಾಗ್‌ರಾಜ್‌ನ ಪಕ್ಷದ ಅಭ್ಯರ್ಥಿ ಉಜ್ವಲ್ ರಾಮನ್‌ಸಿಂಗ್‌ಗೆ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದರು.

ಇದನ್ನೂ ಓದಿ:Janhvi Kapoor: 12ನೇ ವಯಸ್ಸಿನಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೊ ಅಪ್‌ಲೋಡ್‌ ಆಗಿತ್ತು ಎಂದ ಶ್ರೀದೇವಿ ಮಗಳು!

ಕಾಂಗ್ರೆಸ್-ಸಮಾಜವಾದಿ ಪಕ್ಷದ ಸಹಭಾಗಿತ್ವವನ್ನು ಬೆಂಬಲಿಸಲು ನಮ್ಮ ಸಾವಿರಾರು ಕಾರ್ಯಕರ್ತರು ಇಲ್ಲಿದ್ದಾರೆ. ಮತಗಟ್ಟೆಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ನಿಂತು ಇಲ್ಲಿನ ಅಭ್ಯರ್ಥಿಯನ್ನು 5 ಲಕ್ಷ ಮತಗಳಿಂದ ಗೆಲ್ಲಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ, ಇಲ್ಲಿ ನಮ್ಮ ಅಭ್ಯರ್ಥಿ ಉಜ್ವಲ್ ರಮಣ್‌ಸಿಂಗ್ ಇದ್ದಾರೆ, ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಿ ಎಂದಷ್ಟೇ ಹೇಳಿ ವೇದಿಕೆಯಿಂದ ನಿರ್ಗಮಿಸಿದರು.

Continue Reading

ದೇಶ

Murder Case: ತಾಜ್‌ ಮಹಲ್‌ ಸಮೀಪದಲ್ಲೇ ಘೋರ ಕೃತ್ಯ; ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

Murder Case: ತಾಜ್‌ ಮಹಲ್‌ ಸಮೀಪದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಅರೆನಗ್ನಾವಸ್ಥೆಯಲ್ಲಿ 22ವರ್ಷದ ಯುವತಿ ಮೃತದೇಹ ಪತ್ತೆಯಾಗಿದೆ. ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಬಂದವರು ಮೃತದೇಹ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

VISTARANEWS.COM


on

Murder case
Koo

ಉತ್ತರಪ್ರದೇಶ :ವಿಶ್ವ ವಿಖ್ಯಾತ ತಾಜ್‌ಮಹಲ್‌(Taj Mahal) ಸಮೀಪದಲ್ಲೇ ಇರುವ ಮಸೀದಿಯಲ್ಲಿ ಯುವತಿಯ ಮೃತದೇಹ(dead body) ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇಲ್ಲಿನ ನಾಗ್ಲಾ ಪೈಮಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಇದು ಕೊಲೆ(Murder Case) ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಂತಕನಿಗಾಗಿ ಬಲೆ ಬೀಸಿದ್ದಾರೆ.

ತಾಜ್‌ ಮಹಲ್‌ ಸಮೀಪದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಅರೆನಗ್ನಾವಸ್ಥೆಯಲ್ಲಿ 22ವರ್ಷದ ಯುವತಿ ಮೃತದೇಹ ಪತ್ತೆಯಾಗಿದೆ. ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಬಂದವರು ಮೃತದೇಹ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಕೊಲೆಗೈದು ಮಸೀದಿಯಲ್ಲಿ ತಂದು ಬಿಸಾಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನು ಹಂತಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇನ್ನು ಆ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತದೇಹದ ಗುರುತು ಪತ್ತೆಗೆ ಯತ್ನಿಸುತ್ತಿದ್ದಾರೆ.

ಮುಖವನ್ನು ಸಂಪೂರ್ಣವಾಗಿ ಜಜ್ಜಿದ್ದ ಹಂತಕ

ಇನ್ನು ಹಂತಕ ಮೃತ ದುರ್ದೈವಿಯ ಮುಖವನ್ನು ಸಂಪೂರ್ಣವಾಗಿ ಕಲ್ಲಿನಿಂದ ಜಜ್ಜಿ ಕ್ರೌರ್ಯ ಮೆರೆದಿದ್ದಾನೆ. ಇನ್ನು ಮೃತದೇಹದಲ್ಲಿ ಸೊಂಟದ ಕೆಲಭಾಗ ಧರಿಸುವ ಬಟ್ಟೆ ಕಣ್ಮರೆಯಾಗಿದೆ. ಬಹುಷಃ ಮೃತ ಯುವತಿಗೂ ಹಂತಕನಿಗೂ ಮೊದಲೇ ಪರಿಚಯ ಇದ್ದಿರಬೇಕು. ಇದರ ಲಾಭ ಪಡೆದು ಕಿರಾತಕ ಆಕೆಯನ್ನು ಇಲ್ಲಿಗೆ ಕರೆತಂದು ಈ ದುಷ್ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ:Viral News: ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

Continue Reading

ದೇಶ

Lok Sabha Election 2024: ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ವೋಟಿಂಗ್;‌ ವೈರಲಾಗ್ತಿದೆ ಶಾಕಿಂಗ್‌ ವಿಡಿಯೋ

Lok Sabha Election 2024:ಎರಡು ನಿಮಿಷಗಳ ಅವಧಿಯ ವೀಡಿಯೊದಲ್ಲಿ, ರಾಜನ್‌ ಸಿಂಗ್‌, ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರಿಗೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಕನಿಷ್ಠ 8 ಬಾರಿ ಮತ ಚಲಾಯಿಸುವುದನ್ನು ಕಾಣಬಹುದು. ರಜಪೂತ್ ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಎಆರ್ ಒ ಪ್ರತೀತ್ ತ್ರಿಪಾಠಿ ಅವರ ದೂರಿನ ಆಧಾರದ ಮೇಲೆ ನಯಾ ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

VISTARANEWS.COM


on

Lok sabha Election 2024
Koo

ಉತ್ತರ ಪ್ರದೇಶ: ಚುನಾವಣೆ(Lok Sabha Election 2024) ಬಂತೆಂದರೆ ಸಾಕು ಮತಯಂತ್ರ(EVMs)ಗಳ ಕಾರ್ಯಕ್ಷಮತೆ ಬಗ್ಗೆ ಆಗಾಗ ಅನುಮಾನಗಳು ಕೇಳಿ ಬರುವುದು ಸಾಮಾನ್ಯ. ಇದಕ್ಕೆ ಪೂರಕ ಎಂಬಂತೆ ಕೆಲವೊಮ್ಮೆ ಮತಯಂತ್ರಗಳ ಕ್ಷಮತೆ ಮೇಲೆ ಅನುಮಾನ ಹುಟ್ಟಿಸುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಹರಿದಾಡುತ್ತಿದ್ದು, ಮತಗಟ್ಟೆಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಒಬ್ಬನೇ ವ್ಯಕ್ತಿ ಹಲವು ಬಾರಿ ಮತಹಾಕಿದ್ದಾನೆ. ಈ ವಿಡಿಯೋ ವೈರಲ್‌(Viral Video) ಆಗುತ್ತಿದ್ದಂತೆ ಪೊಲೀಸರು ಆ ವ್ಯಕ್ತಿಯನ್ನು ಅರೆಸ್ಟ್‌ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಜನ್‌ ಸಿಂಗ್‌ ಎಂಬ ಯುವಕ ತಾನು ಮತ ಚಲಾಯಿಸುವ ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವಾರು ನಾಯಕರು ಎಕ್ಸ್‌ನಲ್ಲಿ ಹಂಚಿಕೊಂಡ ನಂತರ ಆರೋಪಿ ರಾಜನ್ ಸಿಂಗ್ ಎನ್ನುವಾತನನ್ನು ವಶಕ್ಕೆ ಪಡೆಯಲಾಗಿದೆ.

ಎರಡು ನಿಮಿಷಗಳ ಅವಧಿಯ ವೀಡಿಯೊದಲ್ಲಿ, ರಾಜನ್‌ ಸಿಂಗ್‌, ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರಿಗೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಕನಿಷ್ಠ 8 ಬಾರಿ ಮತ ಚಲಾಯಿಸುವುದನ್ನು ಕಾಣಬಹುದು. ರಜಪೂತ್ ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಎಆರ್ ಒ ಪ್ರತೀತ್ ತ್ರಿಪಾಠಿ ಅವರ ದೂರಿನ ಆಧಾರದ ಮೇಲೆ ನಯಾ ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನು ರಾಜನ್‌ ಸಿಂಗ್‌ ವಿರುದ್ಧ ಸೂಚನೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 171F (ಚುನಾವಣೆಗಳಿಗೆ ಸಂಬಂಧಿಸಿದ ಅಪರಾಧ), ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ), ಸೆಕ್ಷನ್ 128, 132, ಮತ್ತು 136 ಸೇರಿದಂತೆ ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ (ಮತದಾನದ ಗೌಪ್ಯತೆಯನ್ನು ಕಾಪಾಡುವುದು, ಚುನಾವಣೆಗಳಲ್ಲಿ ವಂಚನೆ ಮತ್ತು ಇತರ ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದೆ) ಮತ್ತು ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ಆಯೋಗ ಕೂಡ ಈ ವಿಷಯದ ಬಗ್ಗೆ ಗಮನಹರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಘಟನೆ ನಡೆದಾಗ ಮತಗಟ್ಟೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ:Lok Sabha Election 2024: 5ನೇ ಹಂತದ ಮತದಾನ; 49 ಕ್ಷೇತ್ರಗಳಲ್ಲಿ ವೋಟಿಂಗ್ ಶುರು

Continue Reading

ದೇಶ

Triple Talaq: ವಾಟ್ಸ್‌ಆ್ಯಪ್‌ ವಾಯ್ಸ್‌ ಮೆಸೇಜ್‌ನಲ್ಲಿ ತ್ರಿವಳಿ ತಲಾಕ್ ನೀಡಿದ ಪತಿ; ದೂರು ದಾಖಲು

Triple Talaq: ತೆಲಂಗಾಣದ ಭೂಪನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೆ.ಆರ್‌.ಕೆ. ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಅಬ್ದುಲ್ ಅತೀಖ್ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಮೂಲಕ ತ್ರಿವಳಿ ತಲಾಕ್‌ ನೀಡಿದ್ದ.

VISTARANEWS.COM


on

Triple Talaq
Koo

ಹೈದರಾಬಾದ್: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೆ ಈ ಬಗ್ಗೆ ಇನ್ನೂ ಕೆಲವರಿಗೆ ಅರಿವು ಮೂಡಿದಂತಿಲ್ಲ. ಅಂತಹ ಘಟನೆ ಮತ್ತೆ ಮತ್ತೆ ಘಟಿಸುತ್ತಲೇ ಇದೆ. ಅದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ತೆಲಂಗಾಣದ ಭೂಪನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೆ.ಆರ್‌.ಕೆ. ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಅಬ್ದುಲ್ ಅತೀಖ್ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಮೂಲಕ ತ್ರಿವಳಿ ತಲಾಕ್‌ ನೀಡಿದ್ದ.

ಘಟನೆಯ ವಿವರ

ಅದಿಲಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ. ಶ್ರೀನಿವಾಸ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼಅಬ್ದುಲ್ ಅತೀಖ್ 2017ರಲ್ಲಿ ಜಾಸ್ಮಿನ್‌ (28) ಎಂಬಾಕೆಯೊಂದಿವೆ ವಿವಾಹವಾಗಿದ್ದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸಿತು. ಆಗಾಗ ಪತಿ-ಪತ್ನಿ ಕಿತ್ತಾಡಿಕೊಳ್ಳುತ್ತಿದ್ದರು. ಇದು ತಾರಕ್ಕೆ ಹೋಗಿ ಕಳೆದ ವರ್ಷ ಜಾಸ್ಮಿನ್‌ ತಮ್ಮ ಪತಿಯ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದರುʼʼ ಎಂದು ಹೇಳಿದ್ದಾರೆ.

ʼʼಬಳಿಕ ಕೇಸ್‌ ಕೋರ್ಟ್‌ ಮೆಟ್ಟಿಲೇರಿತ್ತು. ಕುಟುಂಬ ನಿರ್ವಹಣೆಗೆ ಹಣ ನೀಡಬೇಕೆಂದು ಜಾಸ್ಮಿನ್‌ ಕೋರ್ಟ್‌ನಲ್ಲಿ ವಾದಿಸಿದ್ದರು. ಅದರಂತೆ ಕೋರ್ಟ್‌ ಪ್ರತಿ ತಿಂಗಳು ಜಾಸ್ಮಿನ್‌ಗೆ 7,200 ರೂ. ಪಾವತಿಸುವಂತೆ ಅಬ್ದುಲ್ ಅತೀಖ್‌ಗೆ ಸೂಚಿಸಿತ್ತು. ಆದರೆ ಅತೀಖ್‌ ಕೋರ್ಟ್‌ ಸೂಚನೆಯನ್ನೂ ಧಿಕ್ಕರಿಸಿದ್ದ. ಹಣವನ್ನೇ ನೀಡುತ್ತಿರಲಿಲ್ಲʼʼ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಮತ್ತೊಮ್ಮೆ ಜಾಸ್ಮಿನ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಆತ ಜಾಸ್ಮಿನ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳುಹಿಸಿ ತ್ರಿವಳಿ ತಲಾಕ್‌ ನೀಡಿದ್ದ. ಈ ಮೆಸೇಜ್ ಅನ್ನು ಜಾಸ್ಮೀನ್ ತಮ್ಮ ಕುಟುಂಬಸ್ಥರಿಗೆ ಶೇರ್ ಮಾಡಿದ್ದರು. ಅವರ ಸಲಹೆ ಮೇರೆಗೆ ಜಾಸ್ಮಿನ್ ಪೊಲೀಸರಿಗೆ ದೂರು ನೀಡಿದ್ದರು. ʼʼಈ ಹಿನ್ನೆಲೆಯಲ್ಲಿ ಅಬ್ದುಲ್ ಅತೀಖ್ ವಿರುದ್ಧ ದೂರು ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ಶ್ರೀನಿವಾಸ್ ವಿವರಿಸಿದ್ದಾರೆ.

ಇದನ್ನೂ ಓದಿ: Triple Talaq: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ದುರುಳ; ವರದಕ್ಷಿಣೆ ಆಸೆಗೆ ನೀಚ ಕೃತ್ಯ

ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌

ಕೆಲವು ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದ. 28 ವರ್ಷದ ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿವಳಿ ತಲಾಕ್‌ ನೀಡಿದ ಭೂಪ. ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ಸಮೀಪ ಈ ಘಟನೆ ನಡೆದಿತ್ತು. ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ರೈಲಿನಿಂದ ಇಳಿದು ತಲೆ ಮರೆಸಿಕೊಂಡಿದ್ದ. ಬಳಿಕ ಅಫ್ಸಾನಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

2019ರ ಜುಲೈಯಲ್ಲಿ ಸಂಸತ್ತು ಅಂಗೀಕರಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಪ್ರಕಾರ, ಮುಸ್ಲಿಮರಲ್ಲಿ ಚಾಲ್ತಿಯಲ್ಲಿದ್ದ ‘ತ್ರಿವಳಿ ತಲಾಖ್’ ಮೂಲಕ ತ್ವರಿತ ವಿಚ್ಛೇದನದ ನೀಡುವ ಕ್ರಮವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಘೋಷಿಸಲಾಗಿದೆ.

Continue Reading
Advertisement
Kannada New Movie Hondisi Bareyiri in youtube
ಸಿನಿಮಾ1 min ago

Kannada New Movie: ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದು ʻಹೊಂದಿಸಿ ಬರೆಯಿರಿʼ; ಆದರೆ ಇರಲಿದೆ ಬ್ಯಾಂಕ್ ಡಿಟೇಲ್ಸ್‌!

Prajwal should appear before SIT and face probe says Nikhil Kumaraswamy
ಕರ್ನಾಟಕ9 mins ago

Nikhil Kumaraswamy: ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್‌ ಕುಮಾರಸ್ವಾಮಿ

Karnataka Rain
ಮಳೆ12 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Survival Story
ವಿದೇಶ22 mins ago

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Lok Sabha Election 2024
ದೇಶ23 mins ago

Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ46 mins ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Prajwal Revanna Case Shivarame Gowdas Deve Gowda suicide statement says Nikhil Kumaraswamy
ರಾಜಕೀಯ49 mins ago

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

murder case in Belgavi
ಬೆಳಗಾವಿ1 hour ago

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

rave party telugu actress hema
ಕ್ರೈಂ1 hour ago

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

Payal Rajput Accuses Rakshana Producers Of Not Clearing Her Dues
ಟಾಲಿವುಡ್1 hour ago

Payal Rajput: ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ12 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ22 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ23 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌