ದೇಶ
ಪಟನಾದಲ್ಲಿ ಜೂನ್ 12ರಂದು ನಡೆಯಬೇಕಿದ್ದ ವಿರೋಧ ಪಕ್ಷಗಳ ಸಭೆ ಮುಂದೂಡಿಕೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಭಾಗವಹಿಸಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಸಭೆಯನ್ನು ಮುಂದೂಡಲಾಗಿದೆ.
ನವ ದೆಹಲಿ: ಜೂನ್ 12ರಂದು ಬಿಹಾರದ ಪಟನಾಲದಲ್ಲಿ ಆಯೋಜನೆಗೊಂಡಿದ್ದ ವಿರೋಧ ಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಕೆಲವು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಭೆಗೆ ಬರಲು ಅಸಾಧ್ಯವಾಗಲಿರುವ ಕಾರಣ ಮುಂದೂಡಿಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಲಾಗಿದೆ. ಕೆಲವು ದಿನಗಳ ಬಳಿಕ ಸಭೆ ಆಯೋಜನೆಗೊಳ್ಳಲಿದ್ದು ಎಲ್ಲ ಮುಖಂಡರ ಲಭ್ಯತೆಯ ಬಳಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಜೂನ್ 12 ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಅಂದು ಅವರಿಬ್ಬರಿಗೆ ಬೇರೆ ಕಾರ್ಯಕ್ರಮಗಳು ನಿಗದಿಯಾಗಿರುವ ಕಾರಣ ಸಭೆಯನ್ನು ಮುಂದೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರು ಈಗ ಅಮೆರಿಕದಲ್ಲಿದ್ದಾರೆ. ಅವರು ಸಂಪರ್ಕದಲ್ಲಿ ಇಲ್ಲದ ಕಾರಣ ಯೋಜನೆಗಳಿಗೆ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ನಡುವೆ ಒಗ್ಗಟ್ಟನ್ನು ರೂಪಿಸಲು ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಎಡಪಕ್ಷಗಳ ಹೊರತಾಗಿ ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಪಕ್ಷದ ಮುಖಂಡರ ಸಭೆಯನ್ನು ನಡೆಸಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ : Congress Guarantee: ಮಹಿಳೆಯರೂ ಬಸ್ ಟಿಕೆಟ್ ಪಡೆಯಲೇಬೇಕು: ಟಿಕೆಟ್‌ನಲ್ಲೂ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್!
ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಎನ್ ಸಿಪಿಯ ಶರದ್ ಪವಾರ್ ಸೇರಿದಂತೆ ಅನೇಕ ಪಕ್ಷಗಳ ನಾಯಕರೊಂದಿಗೆ ಅವರು ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ.
ದೇಶ
Maharashtra News: ಮಹಾರಾಷ್ಟ್ರದ ಮತ್ತೊಂದು ಆಸ್ಪತ್ರೆಯಲ್ಲಿ 10 ರೋಗಿಗಳು ಮೃತ! ತನಿಖೆಗೆ ಮುಂದಾದ ಸರ್ಕಾರ
Maharashtra News: ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಮರಣ ಮೃದಂಗ ಬಾರಿಸುತ್ತಿರುವ ಮಧ್ಯೆಯೇ ಸಂಭಾಜಿನಗರದ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿರುವ ಪ್ರಕರಣಗಳು ವರದಿಯಾಗಿವೆ.
ಮುಂಬೈ: ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದ (Maharashtra) ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ರೋಗಿಗಳ ಸಾವು ವರದಿಯಾಗುತ್ತಿರುವ ಬೆನ್ನಲ್ಲೇ ಸಂಭಾಜಿನಗರದ ಘಾಟಿ ಆಸ್ಪತ್ರೆಯಲ್ಲಿ (Ghati Hospital) 24 ಗಂಟೆಯಲ್ಲಿ 10ಕ್ಕಿಂತ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ. ಈ ಹಿಂದೆ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ (Nanded Government hospital) 48 ಗಂಟೆಯಲ್ಲಿ ಶಿಶುಗಳು ಸೇರಿದಂತೆ 34 ರೋಗಿಗಳು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ತನಿಖೆಗೆ ಸಮಿತಿಯನ್ನು (Probe Committee) ರಚಿಸುವುದಾಗಿ ಘೋಷಣೆ ಮಾಡಿದೆ(Maharashtra News).
ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಜರಗುತ್ತಿರುವ ಘಟನೆಗಳು ಭಯಾನಕವಾಗಿವೆ. ಅದೇ ರೀತಿ ಘಾಟಿ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ 8 ರೋಗಿಗಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ನಾಂದೇಡ್ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಮೃತಪಟ್ಟಿದ್ದಾರೆಂಬ ವರ್ತಮಾನವಿದೆ. ಇದೆಲ್ಲವೂ ಭಯಾನಕವಾಗಿದೆ ಎಂದು ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಅವರು ಟ್ವೀಟ್ ಮಾಡಿದ್ದಾರೆ.
ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವು
ಮಹಾರಾಷ್ಟ್ರದ (Maharashtra) ನಾಂದೇಡ್ ಜಿಲ್ಲೆಯ (Nanded District) ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶು (Newborns) ಸೇರಿ 24 ರೋಗಿಗಳು ಮೃತಪಟ್ಟ ಘಟನೆಯು ಮಹಾರಾಷ್ಟ್ರದಲ್ಲಿ ಭಾರೀ ಆಕ್ರೋಶಕ್ಕೆಕಾರಣವಾಗಿತ್ತು. ಇದರ ಬೆನ್ನಲ್ಲೇ ಮತ್ತೆ 7 ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅವಘಡಕ್ಕೆ ಸರ್ಕಾರಿ ಆಸ್ಪತ್ರೆ ಎದುರಿಸುತ್ತಿರುವ ಸಿಬ್ಬಂದಿ ಹಾಗೂ ಔಷಧಗಳ ಕೊರತೆಯ ಕಾರಣ ಎಂದು ನಾಂದೇಡ್ ಶಂಕರ್ ರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯ ಡೀನ್ ಹೇಳಿದ್ದಾರೆ(Shankarrao Chavan Government Hospital Dean). ಮೃತಪಟ್ಟ 12 ವಯಸ್ಕರ ಪೈಕಿ ಹೆಚ್ಚಿನವರು ಹಾವು ಕಡಿತಕ್ಕೊಳಗಾದವರಿದ್ದಾರೆ ಎಂದು ಅವರು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Maharashtra: ಔಷಧ ಕೊರತೆ, ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶುಗಳು ಸೇರಿ 24 ರೋಗಿಗಳ ಸಾವು!
ಕಳೆದ 24 ಗಂಟೆಗಳಲ್ಲಿ ಆರು ಗಂಡು ಮತ್ತು ಆರು ಹೆಣ್ಣು ಶಿಶುಗಳು ಸಾವನ್ನಪ್ಪಿವೆ. ಹನ್ನೆರಡು ವಯಸ್ಕರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ, ಈ ಪೈಕಿ ಹೆಚ್ಚಿನವರು ಹಾವು ಕಡಿತದಿಂದ ಬಳಲುತ್ತಿದ್ದರು. ವಿವಿಧ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಆಸ್ಪತ್ರೆಯು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ಆಸ್ಪತ್ರೆಯ ಡೀನ್ ಹೇಳಿದ್ದರು.
ಈ ಆಸ್ಪತ್ರೆಯು ತೃತೀಯ ಹಂತದ ಆರೈಕೆ ಕೇಂದ್ರವಾಗಿದೆ. ಅಲ್ಲದೇ, 70ರಿಂದ 80 ಕಿ.ಮೀ ವ್ಯಾಪ್ತಿಯಲ್ಲಿನ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ. ಹಾಗಾಗಿ, ದೂರದ ಸ್ಥಳಗಳಿಂದ ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಹೀಗೆ, ರೋಗಿಗಳು ಸಂಖ್ಯೆ ಹೆಚ್ಚಳವಾದಾಗ ಅವರನ್ನು ಈ ಆಸ್ಪತ್ರೆಯಲ್ಲಿ ನಿರ್ವಹಣೆ ಮಾಡುವುದು ಕಷ್ಟ. ಆಗ ಸಮಸ್ಯೆಗಳು ಶುರುವಾಗುತ್ತವೆ ಎಂದು ಅವರು ತಿಳಿಸಿದ್ದಾರೆ. ಹಾಫ್ಕಿನ್ ಎಂಬ ಸಂಸ್ಥೆಯಿದ್ದು, ಇಲ್ಲಿಂದ ಔಷಧಿಗಳನ್ನು ಖರೀದಿಸಬೇಕು. ಆದರೆ ಈ ಸಂಸ್ಥೆಯಿಂದ ಔಷಧಗಳ ಖರೀದಿ ಸಾಧ್ಯವಾಗಿಲ್ಲ. ಆಗ ನಾವು ಸ್ಥಳೀಯವಾಗಿ ಔಷಧಗಳನ್ನು ಖರೀದಿಸಿ ರೋಗಿಗಳಿಗೆನೀಡಿದ್ದೇವೆ ಎಂದು ಡೀನ್ ಅವರು ತಿಳಿಸಿದ್ದರು.
ದೇಶ
Punjab Debt: 47,107 ಕೋಟಿ ರೂ. ಸಾಲದ ಪೈಕಿ ಅರ್ಧದಷ್ಟು ಬಡ್ಡಿ ಪಾವತಿಗೆ ಬಳಕೆ ಎಂದ ಪಂಜಾಬ್ ಸಿಎಂ
Punjab Debt: ಆಪ್ ಸರ್ಕಾರವು ಮಿತಿಮೀರಿ ಸಾಲ ಮಾಡುತ್ತಿದ್ದು, ಹಣದ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನವದೆಹಲಿ: ಪಂಜಾಬ್‌ನಲ್ಲಿ (Punjab) ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ (Aam Aadmi Party Government) ಸರ್ಕಾರವು, ಕಳೆದ ಒಂದೂವರೆ ವರ್ಷದಲ್ಲಿ ಮಾಡಿದ ಸಾಲದ ಪೈಕಿ ಅರ್ಧದಷ್ಟು ಹಣವನ್ನು ಬಡ್ಡಿಯನ್ನು ನೀಡಲು ಬಳಸುತ್ತಿರುವುದಾಗಿ ಹೇಳಿದೆ(Interest Payment). ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ (Punjab Governor) ಅವರು ಸಾಲದ ಮಾಹಿತಿಯನ್ನು ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೋರಿದ್ದರು(CM Bhagwant Mann). ಇದಾದ ಮಾರನೇ ದಿನವಾಗಿ ಮೂರು ಪುಟಗಳ ಮಾಹಿತಿಯನ್ನು ನೀಡಿರುವ ಸಿಎಂ ಭಗವಂತ್ ಮಾನ್ ಅವರು, ಕಳೆದ ಒಂದೂವರೆ ವರ್ಷದಲ್ಲಿ ಪಂಜಾಬ್ ಸರ್ಕಾರವು 47,107.6 ಕೋಟಿ ರೂ. ಸಾಲ ಮಾಡಿದೆ. ಈ ಪೈಕಿ ಅರ್ಧದಷ್ಟು ಹಣವನ್ನು ಬಡ್ಡಿ ಪಾವತಿಸಲು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
2022 ಏಪ್ರಿಲ್ 1ರಿಂದ 2023ರ ಆಗಸ್ಟ್ 31ರ ವರೆಗೆ ಪಂಜಾಬ್ ಸರ್ಕಾರವು 47,107 ಕೋಟಿ ರೂಪಾಯಿಯನ್ನು ಸಾಲ ಮಾಡಿದೆ. ಈ ಮೊತ್ತವು, ಮಾರುಕಟ್ಟೆ ಸಾಲ ಮಾತ್ರವಲ್ಲದೇ, ಭಾರತ ಸರ್ಕಾರದಿಂದ ಅನುಮತಿಸಲಾದ ಬಾಹ್ಯ ನೆರವಿನ ಯೋಜನೆಯ ಸಾಲಗಳು ಮತ್ತು ಬಂಡವಾಳ ಸ್ವತ್ತುಗಳ ಸೃಷ್ಟಿಗೆ ವಿಶೇಷ ನೆರವಿನ ಅಡಿಯಲ್ಲಿ ನಬಾರ್ಡ್‌ನಿಂದ ದೀರ್ಘಾವಧಿಯ ಸಾಲ ಕೂಡ ಸೇರಿದೆ. ಒಟ್ಟು ಸಾಲದ ಪೈಕಿ 32,447 ಕೋಟಿ ರೂಪಾಯಿ 2022-23ರ ಹಣಕಾಸು ವರ್ಷದಲ್ಲಿ ಸಾಲವನ್ನು ತೆಗೆದುಕೊಂಡಿದ್ದರೆ, 14,660 ಕೋಟಿ ರೂಪಾಯಿಯನ್ನು ಪ್ರಸಕ್ತ ಸಾಲಿನ ಏಪ್ರಿಲ್ 1 ಮತ್ತು ಆಗಸ್ಟ್ 31ರ ನಡುವೆ ಸಾಲ ಪಡೆಯಲಾಗಿದೆ. ಒಟ್ಟು ಸಾಲದ ಪೈಕಿ 27016 ಕೋಟಿ ರೂಪಾಯಿಯನ್ನು ಸರಕಾರಿ ಸಾಲದ ಬಡ್ಡಿ ಪಾವತಿಗಾಗಿ ಬಳಸಲಾಗುತ್ತಿದೆ ಎಂದು ರಾಜ್ಯಪಾಲರಿಗ ಬರೆದ ಪತ್ರದಲ್ಲಿ ಸಿಎಂ ಭಗವಂತ್ ಮಾನ್ ಅವರು ತಿಳಿಸಿದ್ದಾರೆ.
ಪಂಜಾಬ್ ರಾಜ್ಯಪಾಲ ಪುರೋಹಿತ್ ಅವರು ಸೆಪ್ಟೆಂಬರ್ 21ರಂದು ಪತ್ರ ಬರೆದು, ತನ್ನ ಅವಧಿಯಲ್ಲಿ ಆಪ್ ಮಾಡಿರುವ 50 ಸಾವಿರ ಕೋಟಿ ರೂ. ಸಾಲದ ಬಳಕೆಯ ಮಾಹಿತಿ ನೀಡುವಂತೆ ಕೋರಿದ್ದರು. ನಿಮ್ಮ ಆಡಳಿತದಲ್ಲಿ ಪಂಜಾಬ್ ಸಾಲದ ಮೊತ್ತವು 50 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಬೃಹತ್ ಮೊತ್ತ ಸಾಲದ ಬಳಕೆಯ ವಿವರಗಳನ್ನು ನನಗೆ ಒದಗಿಸಬಹುದು. ಇದರಿಂದ ಹಣವನ್ನು ಸರಿಯಾಗಿ ಬಳಸಲಾಗಿದೆ ಎಂದು ನಾನು ಪ್ರಧಾನಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Punjab CM | ದಿನಗೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪಂಜಾಬ್ ಸಿಎಂ ಭಗವಂತ್ ಮಾನ್ ಮನೆಗೆ ದಲಿತ ಕೃಷಿ ಕಾರ್ಮಿಕರ ಮುತ್ತಿಗೆ
ಆಪ್ ಸರ್ಕಾರವು ಬೃಹತ್ ಮೊತ್ತದ ಹಣ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಮತ್ತು ಬೇಜವಾಬ್ದಾರಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಆಪ್ ವಿರುದ್ಧ ಟೀಕೆ ಮಾಡಿತ್ತು. 2021-22ರ ಮುಕ್ತಾಯದ ಹೊತ್ತಿಗೆ ಪಂಜಾಬ್ ಸರ್ಕಾರವು 2.82 ಕೋಟಿ ರೂ. ಸಾಲ ಮಾಡಿತ್ತು. ಆ ಸಾಲದ ಮೊತ್ತವು 2022-23ರ ಹೊತ್ತಿಗೆ 3.12 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ದೇಶದ ಅತಿ ಹೆಚ್ಚು ಸಾಲ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಪಂಜಾಬ್ ಕೂಡ ಒಂದಾಗಿದೆ.
ದೇಶ
PM Narendra Modi: ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
PM Narendra Modi: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ಛತ್ತೀಸ್‌ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಜಗದಲ್‌ಪುರ, ಛತ್ತೀಸ್‌ಗಢ: ಜಾತಿ ಗಣತಿಯ (caste census) ಮೂಲಕ ಕಾಂಗ್ರೆಸ್ ಪಕ್ಷವು (Congress Party) ಹಿಂದೂಗಳಲ್ಲಿ ಒಡಕು ಮೂಡಿಸುತ್ತಿದೆ (Dividing Hindus) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ(Chhattisgarh Assembly Election) ನಡೆಯಲಿರುವ ಛತ್ತೀಸ್‌ಗಢ ಜಗದಲ್‌ಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಬಡವರು ಹೊಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ನಿನ್ನೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ಅವರು, ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಾತಿ ಗಣತಿಯ ಮೂಲಕ ಪ್ರತಿಪಕ್ಷಗಳು ದೇಶವನ್ನು ಒಡೆಯುವ ಸಂಚು ರೂಪಿಸಿವೆ ಎಂದು ಹೇಳಿದ್ದರು.
ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಹಕ್ಕು ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸ್‌ಗಢದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಇತಿಹಾಸವು ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಹೇಳಿದರು. ದೇಶದ ಅತಿದೊಡ್ಡ ಜನಸಂಖ್ಯೆ ಎಂದರೆ ಬಡವರು ಮಾತ್ರ. ಅವರಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷವು ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಸಮುದಾಯಕ್ಕೆ ಮೊದಲ ಹಕ್ಕು ಎಂದು ಹೇಳುತ್ತಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿದೆಯೇ ಎಂದು ವ್ಯಂಗ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ತಿವಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಗಿಫ್ಟ್ ನಿಮಗೂ ಬೇಕಾ? ಹಾಗಾದ್ರೆ, ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಿ
ಕಾಂಗ್ರೆಸ್ ಪಕ್ಷವು ದೇಶವನ್ನು ನಾಶ ಮಾಡುವ ಪಣ ತೊಟ್ಟಂತೆ ಕಾಣುತ್ತಿದೆ. ಹಿಂದೂಗಳನ್ನು ವಿಭಜಿಸಿ, ಸಮಾಜದಲ್ಲಿ ತಾರತಮ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು, ಬಡತನವನ್ನು ಬಿಟ್ಟು ದೇಶಕ್ಕೆ ಬೇರೇನೂ ಕೊಟ್ಟಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಈಗ ದೇಶವಿರೋಧಿಗಳ ಜತೆ ಸೇರಿಕೊಂಡಿದೆ. ದೇಶವನ್ನು ನಾಶ ಮಾಡಲು ಹೊರಟಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಮೂಲ ಕಾಂಗ್ರೆಸ್ ಜನರು ನಡೆಸುತ್ತಿಲ್ಲ. ಇದನ್ನೆಲ್ಲ ನೋಡಿದ ಕಾಂಗ್ರೆಸ್‌ನ ಹಿರಿಯ ನಾಯಕರು ಕೇಳಲೂ ಇಲ್ಲ, ಮಾತನಾಡುವ ಧೈರ್ಯವೂ ಇಲ್ಲ ಎಂದು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಈಗ ಕಾಂಗ್ರೆಸ್ ಅನ್ನು ಹೊರಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
Delhi Earthquake: ದೆಹಲಿಯ ಸುತ್ತಮುತ್ತ ಪ್ರಬಲ ಭೂಕಂಪ; ಮನೆಯಿಂದ ಓಡಿ ಬಂದ ಜನ!
Delhi Earthquake: ದೆಹಲಿ ಹಾಗೂ ರಾಷ್ಟ್ರ ರಾಜಧಾನಿಯ ಹಲವೆಡೆ ಮಂಗಳವಾರ ಮಧ್ಯಾಹ್ನ ಭೂಮಿ ಕಂಪಿಸಿದೆ. ಭೂಕಂಪನದ ಅನುಭವವಾಗುತ್ತಲೇ ಜನ ಆತಂಕದಲ್ಲಿ ಮನೆಯಿಂದ ಹೊರಗೆ ಬಂದು ನಿಂತ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡಿವೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NCR) ಹಲವೆಡೆ ಮಂಗಳವಾರ (ಅಕ್ಟೋಬರ್ 3) ಭೂಕಂಪ (Delhi Earthquake) ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 4.6ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Centre for Seismology) ಮಾಹಿತಿ ನೀಡಿದೆ.
ಮಧ್ಯಾಹ್ನ 2.20ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವು ದೇಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ತಿಳಿಸಿದೆ. ಭೂಮಿಯ ಮೇಲ್ಮೈನ 5 ಕಿಲೋಮೀಟರ್ ಕೆಳಗೆ ಭೂಮಿ ನಲುಗಿದೆ ಎಂದು ಮಾಹಿತಿ ನೀಡಿದೆ.
Earthquake of Magnitude:6.2, Occurred on 03-10-2023, 14:51:04 IST, Lat: 29.39 & Long: 81.23, Depth: 5 Km ,Location:Nepal for more information Download the BhooKamp App https://t.co/rBpZF2ctJG @ndmaindia @KirenRijiju @Indiametdept @Dr_Mishra1966 @Ravi_MoES pic.twitter.com/tOduckF0B9
— National Center for Seismology (@NCS_Earthquake) October 3, 2023
ಉತ್ತರಾಖಂಡದ ಡೆಹ್ರಾಡೂನ್, ಉತ್ತರ ಪ್ರದೇಶದ ನೊಯ್ಡಾ, ಹರಿಯಾಣ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಅಪಾರ್ಟ್‌ಮೆಂಟ್‌ಗಳು, ಮನೆಗಳು ಸೇರಿ ಹಲವೆಡೆ ಜನ ಕಟ್ಟಡದ ಹೊರಗೆ ಬಂದು ನಿಂತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
#WATCH | Uttarakhand | People rushed out of their buildings in Dehradun as strong tremors were felt in different parts of north India. Visuals from the Secretariat.
— ANI (@ANI) October 3, 2023
As per National Centre for Seismology, an earthquake with a magnitude of 6.2 on the Richter Scale hit Nepal at… pic.twitter.com/Cz7gczdMbr
ತೀವ್ರ ಪ್ರಮಾಣದಲ್ಲಿಯೇ ಭೂಕಂಪ ಸಂಭವಿಸಿದರೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ಹಾಗೆಯೇ, ದೊಡ್ಡ ದೊಡ್ಡ ಕಟ್ಟಡಗಳಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಭೂಕಂಪದ ಕುರಿತು ಸಾರ್ವಜನಿಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೆಲವರು ವಿಡಿಯೊಗಳನ್ನೇ ಶೇರ್ ಮಾಡಿದ್ದಾರೆ. ಮನೆಯಲ್ಲಿ ಫ್ಯಾನ್‌ಗಳು ಅಲುಗಾಡಿದ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
#WATCH | Earthquake tremors felt across Delhi-NCR. Visuals from Noida Sector 75 in Uttar Pradesh. pic.twitter.com/dABzrVoyVw
— ANI (@ANI) October 3, 2023
ಇದನ್ನೂ ಓದಿ: Google: ಭಾರತೀಯ ಬಳಕೆದಾರರಿಗೆ ಭೂಕಂಪ ಎಚ್ಚರಿಕೆ ಸಿಸ್ಟಮ್ ಫೀಚರ್ ಆರಂಭಿಸಿದ ಗೂಗಲ್
ಭೂಕಂಪ ಸಂಭವಿಸುತ್ತಲೇ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಎಚ್ಚರಿಸಿದರು. ಭೂಮಿಯ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಬರಬೇಕು. ಯಾರು ಕೂಡ ಎಲೆವೇಟರ್‌ಗಳನ್ನು ಬಳಸಬಾರದು. ಯಾವುದೇ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.
-
ದೇಶ20 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ15 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್22 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ23 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ದೇಶ21 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್23 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ10 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕ್ರೈಂ12 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?