ದೇಶ
New Parliament Building: ಸಂಸತ್ ಭವನದ ಉದ್ಘಾಟನೆ; ರಾಷ್ಟ್ರಪತಿಗೆ ಆಹ್ವಾನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
New Parliament Building: ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ರಾಷ್ಟ್ರಪತಿಯನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿ ದಿನವಾದ ಮೇ 28ರಂದು ನೂತನ ಸಂಸತ್ ಭವನದ (New Parliament Building) ಉದ್ಘಾಟನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಇದರ ಬೆನ್ನಲ್ಲೇ, ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸುಮಾರು 20 ಪಕ್ಷಗಳು ಉದ್ಘಾಟನೆ ಕಾರ್ಯಕ್ರಮವನ್ನೇ ಬಹಿಷ್ಕರಿಸಿವೆ. ಇದರ ಬೆನ್ನಲ್ಲೇ, ರಾಷ್ಟ್ರಪತಿ ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಅಡ್ವೊಕೇಟ್ ಸಿ.ಆರ್. ಜಯಾ ಸುಕಿನ್ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. “ಸಂವಿಧಾನದ 79ನೇ ವಿಧಿ ಪ್ರಕಾರ, ಸಂಸತ್ತಿನಲ್ಲಿ ಎರಡು ಸದನಗಳು ಇರಬೇಕು ಹಾಗೂ ಒಬ್ಬ ರಾಷ್ಟ್ರಪತಿ ಇರಬೇಕು ಎಂಬ ನಿಯಮವಿದೆ. ಆದರೆ, ಲೋಕಸಭೆ ಸಚಿವಾಲಯ ಹಾಗೂ ಕೇಂದ್ರ ಸರ್ಕಾರವು 79ನೇ ವಿಧಿಯನ್ನು ಉಲ್ಲಂಘಿಸಿವೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು 20 ಪ್ರತಿಪಕ್ಷಗಳು ನಿರ್ಧರಿಸಿದ್ದರೆ, 17 ಪಕ್ಷಗಳು ಬೆಂಬಲಿಸಿವೆ. ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುತ್ತಿರುವುದರಿಂದಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೇಪಥ್ಯಕ್ಕೆ ಸರಿಸಿದಂತಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಕಾಂಗ್ರೆಸ್ ನೇತೃತ್ವದಲ್ಲಿ 20 ಪ್ರತಿಪಕ್ಷಗಳ ಒಕ್ಕೂಟವು ಆರೋಪಿಸಿವೆ.
ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ಕಾಂಗ್ರೆಸ್ ನೇತೃತ್ವದ 19 ವಿರೋಧ ಪಕ್ಷಗಳ ನಿರ್ಧಾರವನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬುಧವಾರ ಖಂಡಿಸಿದೆ. “ಈ ಕೃತ್ಯ ಕೇವಲ ಅಗೌರವವಲ್ಲ; ಇದು ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಘೋರವಾದ ಅವಮಾನವಾಗಿದೆʼʼ ಎಂದು ಎನ್‌ಡಿಎ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್ ಭವನ? ಇಲ್ಲಿದೆ ನೋಡಿ ವಿಡಿಯೊ
ಕಂಗೊಳಿಸಲಿದೆ ರಾಜದಂಡ
ಹೊಸದಾಗಿ ನಿರ್ಮಾಣವಾದ ಸಂಸತ್ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್)ವನ್ನು ಕೂಡ ಇಡಲಾಗುತ್ತದೆ. ʼ‘ಸೆಂಗೋಲ್ ಅಂದರೆ ರಾಜದಂಡ ಎಂಬುದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ವಿವರಿಸಿದ್ದಾರೆ.
ದೇಶ
72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ
72 Hoorain: ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ನಿರ್ದೇಶನದ 72 ಹೂರೇ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿವೆ.
ನವದೆಹಲಿ: ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ (The Kashmir Files), ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇಸ್ಲಾಮಿಕ್ ತೀವ್ರವಾದದ ಕತೆಯನ್ನು ಹೊಂದಿರುವ 72 ಹೂರೇ(72 Hoorain) ಚಿತ್ರದ ಟೀಸರ್ ಲಾಂಚ್ ಆಗಿದ್ದು, ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದ್ದಂತೆ ನೆಟ್ಟಿಗರು, ಮುಸ್ಲಿಮ್ ಮತ್ತು ಇಸ್ಲಾಮ್‌ಗೆ ಅವಮಾನ ಮಾಡುವ ಪ್ರಾಪಗ್ಯಾಂಡ ಚಿತ್ರ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ 72 ಹೂರೇ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಆಗಲೂ ಟ್ವಿಟರ್‌ನಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದ್ದವು. ಭಾರತದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳ ನಡೆಯುತ್ತಿವೆ ಎಂದು ಟೀಕೆ ವ್ಯಕ್ತವಾಗಿತ್ತು.
ಚಿತ್ರದ ಟೀಸರ್‌ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಸೇರಿದಂತೆ ಇತರ ಚಿತ್ರಗಳನ್ನು ಮತ್ತು ಯಾಕೂಬ್ ಮೆಮನ್‌ನ ಮಿಶ್ರಿತ ಫೋಟೋವನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಟೀಸರ್‌ನಲ್ಲಿ ಕಾಣುವ ಅಂಶಗಳು ಖಂಡಿತವಾಗಿಯೂ, ಈ ಸಿನಿಮಾ ಕೂಡ ಮುಸ್ಲಿಮರು ಸುತ್ತ ಸುತ್ತದೆ ಎಂಬುದು ವೇದ್ಯವಾಗುತ್ತದೆ. ಉಗ್ರರಾದ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಅವರನ್ನು ಹೋಲುವರವನ್ನು ಹೈಲೆಟ್ ಮಾಡಲಾಗಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: The Kerala Story : ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೆಂಡ ಕಾರಿದ ಹಿರಿಯ ನಟ ನಾಸಿರುದ್ದೀನ್ ಶಾ
72 ಹೂರೇ ಚಿತ್ರದ ಟ್ರೈಲರ್ ಅನ್ನು ಸಹ ನಿರ್ದೇಶಕರಾಗಿರುವ ಅಶೋಕ್ ಪಂಡಿತ್ ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ಇವರು ಕಾಶ್ಮೀರ ಪಂಡತ್ ಕೂಡ ಹೌದು. ನಮ್ಮ ಚಿತ್ರ 72 Hoorain ಸಿನಿಮಾದ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುವ ಭರವಸೆಯಂತೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಭಯೋತ್ಪಾದಕರ ಮಾರ್ಗದರ್ಶಕರು ಭರವಸೆ ನೀಡಿದಂತೆ 72 ಕನ್ಯೆಯರನ್ನು ಭೇಟಿಯಾಗುವ ಬದಲು ನೀವು ಕ್ರೂರವಾಗಿ ಸಾಯುತ್ತಿದ್ದರೆ? ನನ್ನ ಮುಂಬರುವ ಚಿತ್ರ 72 ಹೂರೇ ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಚಿತ್ರವು 7 ಜುಲೈ 2023 ರಂದು ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
72 ಹೂರೇ ಚಿತ್ರದ ಟೀಸರ್
ದೇಶ
Monsoon Forecast 2023 : ಹವಾಮಾನ ಇಲಾಖೆ VS ಸ್ಕೈಮೆಟ್; ಹೇಗಿರಲಿದೆ ಈ ಬಾರಿಯ ಮುಂಗಾರು ಮಳೆ?
Monsoon Forecast 2023: ಭಾರತದಲ್ಲಿ ಹವಾಮಾನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಾದ ಸ್ಕೈಮೆಟ್ ಹವಾಮಾನ ವರದಿ ನೀಡುತ್ತವೆ. ಎರಡೂ ವರದಿಗಳಲ್ಲಿ ಯಾವುದು ನಿಖರ ಎಂಬುದರ ಮಾಹಿತಿ ಹೀಗಿದೆ.
ಬೆಂಗಳೂರು: ನಿರೀಕ್ಷಿಸಿದಂತೆಯೇ ಈ ಬಾರಿ ಮುಂಗಾರು ಆಗಮನ ವಿಳಂಬವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ ಭಾನುವಾರವೇ (June 4) ಕೇರಳಕ್ಕೆ ಮುಂಗಾರು ಪ್ರವೇಶವಾಗಬೇಕಿತ್ತು. ಆದರೆ, ಇನ್ನೂ ಮೂರ್ನಾಲ್ಕು ದಿನ ಮುಂಗಾರು ಪ್ರವೇಶವಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹಾಗೆ ನೋಡಿದರೆ, ನೈಋತ್ಯ ಮುಂಗಾರು ಜೂನ್ 3ರಂದೇ ಲಕ್ಷದ್ವೀಪವನ್ನು ಪ್ರವೇಶಿಸಿದೆ. ಆದರೂ, ಕೇರಳ ಪ್ರವೇಶಿಸಿ, ನಂತರ ದೇಶಾದ್ಯಂತ ಮುಂಗಾರು ಮಳೆಯಾಗುವುದು ವಿಳಂಬವಾಗಿದೆ. ಇದರಿಂದಾಗಿ, ಹವಾಮಾನ ಇಲಾಖೆಯ ಅಂದಾಜು ಏರುಪೇರಾಗಿದೆ. ಹಾಗೆ ನೋಡಿದರೆ, ಭಾರತದಲ್ಲಿ ಸರ್ಕಾರದ ಹವಾಮಾನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಾದ ಸ್ಕೈಮೆಟ್ ವೆದರ್ ಸಂಸ್ಥೆಗಳು ಮುಂಗಾರು ಮಳೆ ಸೇರಿ ವಿವಿಧ ರೀತಿಯಲ್ಲಿ ಹವಾಮಾನ ವರದಿ ನೀಡುತ್ತವೆ. ಹಾಗಾದರೆ, ದೇಶದಲ್ಲಿ ಯಾವ ಸಂಸ್ಥೆಯ ಹವಾಮಾನ ವರದಿ ನಿಜವಾಗುತ್ತದೆ? ಹವಾಮಾನ ಇಲಾಖೆ ಹಾಗೂ ಸ್ಕೈಮೆಟ್ ವೆದರ್ ಸಂಸ್ಥೆಗಳಲ್ಲಿ ಯಾವ ಸಂಸ್ಥೆಯ ವರದಿ ನಿಖರವಾಗಿರುತ್ತದೆ ಅಥವಾ ವಾಸ್ತವಕ್ಕೆ ಹತ್ತಿರವಾಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಕಳೆದ ವರ್ಷದಂತೆ ಈ ಬಾರಿಯೂ ನಿಜವಾಗದ ಐಎಂಡಿ ವರದಿ
ಭಾರತಕ್ಕೆ ಮಾನ್ಸೂನ್ ಪ್ರವೇಶದ ಕುರಿತು ಹವಾಮಾನ ಇಲಾಖೆ ನೀಡಿದ ವರದಿಯು ನಿಜವಾಗಿರಲಿಲ್ಲ. ಕಳೆದ ಬಾರಿ ಮೇ 27ರಂದೇ ಮುಂಗಾರು ಆಗಮನವಾಗುತ್ತದೆ ಎಂದು ಐಎಂಡಿ ವರದಿ ನೀಡಿತ್ತು. ಆದರೆ, ವರದಿಯಲ್ಲಿ ಉಲ್ಲೇಖಿಸಿದ ದಿನಾಂಕಕ್ಕಿಂತ ಎರಡು ದಿನ ನಂತರ ಅಂದರೆ, ಮೇ 29ರಂದು ಮುಂಗಾರು ಪ್ರವೇಶವಾಗಿತ್ತು. ಈ ಬಾರಿಯೂ ಜೂನ್ 4ಕ್ಕೆ ಪ್ರವೇಶವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಜೂನ್ 4ರಂದು ಮುಂಗಾರು ಪ್ರವೇಶ ಆಗಿಲ್ಲ.
ಇದನ್ನೂ ಓದಿ: Weather Report: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಭಾರಿ ವರುಣ; ಬೆಂಗಳೂರಲ್ಲಿ ಮಳೆ ಹೇಗೆ?
ಸ್ಕೈಮೆಟ್ ವರದಿ ಹೇಳಿದ್ದೇನು?
ದೇಶದಲ್ಲಿ ಈ ಬಾರಿ ಜೂನ್ 7ರಂದು ಮುಂಗಾರು ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಹೇಳಿತ್ತು. ಜೂನ್ 7ರ ನಂತರದ ಮೂರು ದಿನ ಅಥವಾ ಅದಕ್ಕಿಂತ ಮೂರು ದಿನ ಮೊದಲು ಮುಂಗಾರು ಪ್ರವೇಶಿಸುತ್ತದೆ ಎಂದು ಹೇಳಿತ್ತು. ಈಗ ಜೂನ್ 7 ಅಥವಾ 8ರಂದು ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯೇ ಹೇಳಿದೆ. ಹಾಗಾಗಿ, ಜೂನ್ 7ರಂದು ಮುಂಗಾರು ಪ್ರವೇಶಿಸಿದರೆ ಸ್ಕೈಮೆಟ್ ವರದಿಯೇ ನಿಜವಾಗಲಿದೆ.
ಭಾರತದಲ್ಲಿ ಈ ಬಾರಿ ವಾಡಿಕೆಯಷ್ಟು ಎಂದರೆ, ಶೇ.96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದ ದೇಶದ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಆದರೆ, ಸ್ಕೈಮೆಟ್ ವರದಿಯು ಜೂನ್‌ನಲ್ಲಿ ದೇಶಾದ್ಯಂತ ವಾಡಿಕೆಯಷ್ಟು ಮಳೆಯಾಗುವುದಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ಯಾವ ಸಂಸ್ಥೆಯ ಹವಾಮಾನ ವರದಿ ನಿಜವಾಗಲಿದೆ ಎಂಬ ಕುತೂಹಲ ಮೂಡಿದೆ.
ಕರ್ನಾಟಕ
ಇನ್ನು ಬೆಂಗಳೂರಿನಿಂದ ಚೆನ್ನೈಗೆ ಎರಡೇ ಗಂಟೆ ಸಾಕು, ಶೀಘ್ರ ಮೈಸೂರು-ಬೆಂಗಳೂರಿಗೂ ಬರಲಿದೆ ಬುಲೆಟ್ ಟ್ರೈನ್!
ಬೆಂಗಳೂರು-ಚೆನ್ನೈ ನಡುವೆ ಸಂಚರಿಸಲು ಈಗ ಕನಿಷ್ಠ ನಾಲ್ಕುವರೆ ಗಂಟೆಯಿಂದ ಆರೂವರೆ ಗಂಟೆ ಬೇಕು. ಆದರೆ, ಸೆಮಿ ಹೈ ಸ್ಪೀಡ್ ಗೇಜ್ ಮಾರ್ಗ ಸಿದ್ಧವಾದರೆ ಕೇವಲ ಎರಡೇ ಗಂಟೆ ಸಾಕು!
ನವದೆಹಲಿ: ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಚೆನ್ನೈ (Chennai) ಮತ್ತು ಬೆಂಗಳೂರು (Bengaluru) ಮಧ್ಯೆ ರೈಲಿನಲ್ಲಿ (Train) ಸಂಚರಿಸಲು ಈಗ ಕನಿಷ್ಠ 4 .30 ಗಂಟೆಯಿಂದ 6.30 ಗಂಟೆ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಉಭಯ ನಗರಗಳ ನಡುವಿನ ರೈಲು ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ! ಹೌದು, ಭಾರತೀಯ ರೈಲ್ವೆ ಇಲಾಖೆಯು ಹೊಸ ಸೆಮಿ ಹೈಸ್ಪೀಡ್ ಬ್ರಾಡ್ ಗೇಜ್ ಮಾರ್ಗ (semi-high-speed broad gauge line) ಹಾಕಲಿದೆ. ಹಾಗಾಗಿ, ಪ್ರಯಾಣದ ಅವಧಿ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಮನೀ ಕಂಟ್ರೋಲ್ ವರದಿ ಮಾಡಿದೆ.
ದಕ್ಷಿಣ ರೈಲ್ವೆಯು ಎರಡು ನಗರಗಳ ನಡುವೆ ಹೊಸ ಸೆಮಿ-ಹೈ-ಸ್ಪೀಡ್ ಬ್ರಾಡ್ ಗೇಜ್ ಮಾರ್ಗಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆಗೆ (FLS) ಟೆಂಡರ್ ಕರೆದಿದೆ. ಉದ್ದೇಶಿತ ಮಾರ್ಗದ ವಿನ್ಯಾಸದ ವೇಗವು ಪ್ರತಿ ಗಂಟೆಗೆ 220 ಕಿ.ಮೀ ಹಾಗೂ ಕಾರ್ಯಾಚರಣೆಯ ವೇಗವು ಪ್ರತಿ ಗಂಟೆಗೆ 200 ಕಿ.ಮೀ. ಇರಲಿದೆ. ಸಮೀಕ್ಷೆ ಕೈಗೊಳ್ಳಲು ರೈಲ್ವೆ ಇಲಾಖೆಯು ಈಗಾಗಲೇ 8.3 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಚೆನ್ನೈ ಸೆಂಟ್ರಲ್ ನಡುವಿನ ಮಾರ್ಗವನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಅಂದಾಜು 350 ಕಿ.ಮೀ ಇರಲಿದೆ.
ಆಯ್ದ ಸಂಸ್ಥೆಯು ವೈಮಾನಿಕ ಲಿಡಾರ್ (LiDAR) ಸಮೀಕ್ಷೆಯನ್ನು ನಡೆಸುವುದು, ವಿವರವಾದ ಅಂತಿಮ ಜೋಡಣೆಯನ್ನು ಅಭಿವೃದ್ಧಿಪಡಿಸುವುದು, ಸಂಚಾರ ಅಧ್ಯಯನವನ್ನು ಕೈಗೊಳ್ಳುವುದು, ವಿವರವಾದ ಯೋಜನೆಗಳು ಮತ್ತು ಅಂದಾಜುಗಳನ್ನು ಸಿದ್ಧಪಡಿಸುವುದು ಮತ್ತು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮೂರು ತಿಂಗಳಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಸ್ತಾವಿತ ಕಾರ್ಯಾಚರಣೆಯ ವೇಗವು ಪ್ರತಿ ಗಂಟೆಗೆ 200 ಕಿ.ಮೀಟರ್ ಆಗಿದ್ದರೆ, ಸರಾಸರಿ ವೇಗವು ನಿಲುಗಡೆಗಳ ಸಂಖ್ಯೆ ಮತ್ತು ಜೋಡಣೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಮಾರ್ಗವನ್ನು 180 ಕಿಮೀ ವೇಗದಲ್ಲಿ ಓಡಲು ಅನುಕೂಹಲವಾಗುವಂತೆ ಮಾಡಲಾಗುತ್ತದೆ. ಸೂಕ್ತವಲ್ಲದ ಟ್ರ್ಯಾಕ್‌ಗಳ ಕಾರಣದಿಂದಾಗಿ ವಂದೇ ಭಾರತ್ ರೈಲುಗಳು ಪ್ರತಿಗಂಟೆಗೆ ಗರಿಷ್ಠ ವೇಗವ 130 ಕಿ.ಮೀ.ಗೆ ಸಿಮೀತವಾಗಿವೆ. ಆದಾಗ್ಯೂ, ಹೊಸ ಸೆಮಿ-ಹೈ-ಸ್ಪೀಡ್ ರೈಲು ಬ್ರಾಡ್ ಗೇಜ್ ಮಾರ್ಗದೊಂದಿಗೆ, ವಂದೇ ಭಾರತ್ ರೈಲುಗಳನ್ನು ಸಹ ಪೂರ್ಣ ಸಾಮರ್ಥ್ಯದಲ್ಲಿ ಓಡಿಸಬಹುದಾಗಿದೆ ಎನ್ನುತ್ತಿದ್ದಾರೆ ತಜ್ಞರು.
ಈ ಮಧ್ಯೆ, ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿ(NHSRCL) ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಕುರಿತು ಚಿಂತನೆ ಮಾಡುತ್ತಿದೆ. ಅಂದರೆ, ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆ ಬುಲೆಟ್ ಟ್ರೈನ್ ಓಡಿಸುವ ಸಾಧ್ಯತೆಗಳಿವೆ. ಈ ಬುಲೆಟ್ ಟ್ರೈನ್ ಗರಿಷ್ಠ ವೇಗವು ಗಂಟೆಗೆ 350 ಕಿ.ಮೀ ಇರಲಿದೆ. ಕಾರ್ಯಾಚರಣೆಯ ವೇಗವು 320 ಕಿ.ಮೀ ಇದ್ದರೆ, ಸರಾಸರಿ ವೇಗವು 250 ಕಿ.ಮೀ. ಇರಲಿದೆ.
ಈ ಸುದ್ದಿಯನ್ನೂ ಓದಿ: Vande Bharat Express : ಬೆಂಗಳೂರು-ಧಾರವಾಡ ನಡುವೆ ಜುಲೈನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ, ಇಲ್ಲಿದೆ ಡಿಟೇಲ್ಸ್
ಈ ಯೋಜನೆಯು ಆರು ಹೊಸ ಹೈಸ್ಪೀಡ್ ರೈಲು (ಎಚ್‌ಎಸ್‌ಆರ್) ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿದೆ. ಹೀಗಿದ್ದಾಗ್ಯೂ, ಮೈಸೂರು-ಬೆಂಗಳೂರು-ಚೆನ್ನೈ ಕಾರಿಡಾರ್‌ಗೆ ಪೂರ್ವಸಿದ್ಧತಾ ಕೆಲಸ ಮಾತ್ರ ಪ್ರಾರಂಭವಾಗಿದೆ ಎಂಬುದನ್ನು ಗಮನಿಸಬೇಕು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ಎಲೆಕ್ಷನ್
Modi Magic: ಬರೀ ಮೋದಿ ಹೆಸರಿಗೆ ವೋಟ್ ಬರಲ್ಲ! ಬಿಜೆಪಿಗೆ ಆರೆಸ್ಸೆಸ್ ಮುಖವಾಣಿ ಪತ್ರಿಕೆಯಿಂದ ಫುಲ್ ಕ್ಲಾಸ್
Modi Magic: ಕರ್ನಾಟಕ ಚುನಾವಣೆ ಸೋತ ಬೆನ್ನಲ್ಲೇ ಆರೆಸ್ಸೆಸ್ ಚಿಂತಕರ ಚಾವಡಿ ಹೊಸ ನಿಟ್ಟಿನಲ್ಲಿ ಯೋಚಿಸುತ್ತಿರುವಂತಿದೆ. ಕೇವಲ ಮೋದಿ, ಹಿಂದುತ್ವದಿಂದಲೇ ಮತ ಬರುವುದಿಲ್ಲಎಂದು ಬಿಜೆಪಿಗೆ ಎಚ್ಚರಿಸಿದೆ.
ಮುಂಬೈ, ಮಹಾರಾಷ್ಟ್ರ: ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ಬಿಜೆಪಿಯ ಥಿಂಕ್ ಟ್ಯಾಂಕ್‌ನಲ್ಲಿ ಪರ್ಯಾಯ ಯೋಚನೆಗೆ ಕಾರಣವಾಗಿದೆಯೇ? ಹೌದು, ಇಂಥದೊಂದು ಅನುಮಾನ ಬರಲು ಕಾರಣವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮುಖವಾಣಿಯಾಗಿರುವ ಆರ್ಗೈನಸರ್ (Organizer) ವಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಚುನಾವಣೆ ಗೆಲ್ಲಲು ಮೋದಿ (Modi Magic) ನಾಮಬಲ, ಹಿಂದುತ್ವವು (hindutva) ಪ್ರತಿಬಾರಿಯೂ ಕೆಲಸ ಮಾಡುವುದಿಲ್ಲ ಎಂದು ಕಟುವಾಗಿ ಟೀಕಿಸಿದೆ.
ಕರ್ನಾಟಕದಲ್ಲಿನ ಹೀನಾಯ ಸೋಲು ಮತ್ತು ಮುಂಬರುವ 2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ವರದಿಯು ಮಹತ್ವ ಪಡೆದುಕೊಂಡಿದೆ. ಬಿಜೆಪಿಯ ಎಲ್ಲ ಚುನಾವಣೆಗಳನ್ನು ಮೋದಿ ಮ್ಯಾಜಿಕ್‌ನಿಂದಲೇ ನಡೆಯುತ್ತದೆ ಎಂದು ಭಾವಿಸುತ್ತದೆ. ಆದರೆ, ಈಗ ಮೋದಿ ಮ್ಯಾಜಿಕ್ ನಡೆಯುತ್ತಿಲ್ಲ ಎಂಬುದು ಸಾಬೀತಾಗಿದೆ ಎಂಬ ರೀತಿಯಲ್ಲಿ ಆರೆಸ್ಸೆಸ್ ಮುಖವಾಣಿ ವರದಿಯನ್ನು ಪ್ರಕಟಿಸಿದೆ. ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಪ್ರಭಾವಿ ನಾಯಕತ್ವ ಅಗತ್ಯವಾಗಿದೆ. ಪ್ರಾದೇಶಿಕವಾಗಿ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಾದೇಶಿಕ ಮಟ್ಟದಲ್ಲಿ ಪ್ರಬಲ ನಾಯಕತ್ವ ಮತ್ತು ಪರಿಣಾಮಕಾರಿ ಪ್ರಯತ್ನವಿಲ್ಲದೇ, ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತು ಹಿಂದುತ್ವವು ಸೈದ್ಧಾಂತಿಕ ವಿಷಯಗಳು ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿ ಹೊರಬಂದಿವೆ. ಆದರೆ 2024 ರ ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಒಳ್ಳೆಯ ಹಾದಿಯಂತೂ ಅಲ್ಲ. ಹಾಗಾಗಿ, ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿಗೆ ಇದು ಸರಿಯಾದ ಸಮಯ ಎಂದು ಅದು ಹೇಳಿದೆ.
ಕರ್ನಾಟಕದ ಚುನಾವಣೆಯಲ್ಲಿ ಭ್ರಷ್ಟಾಚಾರವು ಪ್ರಮುಖ ವಿಷಯವಾಗಿತ್ತು. ಮೋದಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Jagadish Shettar: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿಯೇ ಸೋತಿದೆ: ಜಗದೀಶ್ ಶೆಟ್ಟರ್
ಕರ್ನಾಟಕ ಚುನಾವಣೆಯಲ್ಲಿ ಆಡಳಿತ ಪಕ್ಷವು (ಬಿಜೆಪಿ) ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳೊಂದಿಗೆ ಮತದಾರರನ್ನು ಹುರಿದುಂಬಿಸಲು ಅತ್ಯುತ್ತಮವಾಗಿ ಪ್ರಯತ್ನಿಸಿತು. ಆದರೆ, ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ತನ್ನ ದಾಳಿ ಉರುಳಿಸಿತು. ಹಾಗಾಗಿ, ಅತಿ ಹೆಚ್ಚು ಮತದಾನವಾದ ಈ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಈ ಹಿಂದಿನ ಮತ ಪ್ರಮಾಣವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಇದರಿಂದ ಹೀನಾಯವಾಗಿ ಸೋತಿತು. ಹಾಲಿ ಸಚಿವರ ವಿರುದ್ಧದ ಆಡಳಿತ ವಿರೋಧಿ ನಿಲುವು ಬಿಜೆಪಿಗೆ ಮುಳುವಾಯಿತು ಎಂದು ಆರ್ಗನೈಸರ್ ಹೇಳಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ20 hours ago
Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ
-
ಕರ್ನಾಟಕ21 hours ago
Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್
-
ಕರ್ನಾಟಕ20 hours ago
Shivamogga News: ಶಿಕಾರಿಪುರದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚ್ಯಾವಶೇಷಗಳು ಪತ್ತೆ
-
ಕರ್ನಾಟಕ13 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ11 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕ್ರಿಕೆಟ್24 hours ago
Team India : ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ಭಾರತಕ್ಕೆ ಅಫಘಾನಿಸ್ತಾನ ಕ್ರಿಕೆಟ್ ತಂಡದ ಪ್ರವಾಸ ರದ್ದು!
-
ದೇಶ24 hours ago
Bihar Bridge Collapse: ರೈಲು ದುರಂತ ಬೆನ್ನಲ್ಲೇ ಬಿಹಾರದಲ್ಲಿ ಸೇತುವೆ ಕುಸಿತ; 1,700 ಕೋಟಿ ರೂ. ಗಂಗಾ ನದಿ ಪಾಲು