Photo Gallery | ಆಕರ್ಷಕ ಹೊಸ ಸಂಸತ್‌ ಭವನ! ಗಮನ ಸೆಳೆಯುತ್ತಿವೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಚಿತ್ರಗಳು - Vistara News

ದೇಶ

Photo Gallery | ಆಕರ್ಷಕ ಹೊಸ ಸಂಸತ್‌ ಭವನ! ಗಮನ ಸೆಳೆಯುತ್ತಿವೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಚಿತ್ರಗಳು

ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್‌ ಭವನದ ಫೋಟೋಗಳನ್ನು (Photo Gallery) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ಹೊಸ ಸಂಸತ್ ಭವನದ ಕಾಮಗಾರಿ ತ್ವರಿತ ರೀತಿಯಲ್ಲಿ ನಡೆಯುತ್ತಿದೆ. ಇದೇ ಮಾರ್ಚ್ ತಿಂಗಳಲ್ಲಿ ಹೊಸ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದೆ. ಈ ಬಾರಿಯ ಬಜೆಟ್ ಅನ್ನು ಸಹ ಇದೇ ಸಂಸತ್ ಭವನದಲ್ಲಿ ಮಂಡಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಹೊಸ ಸಂಸತ್ ಭವನದ ಕೆಲವು ಫೋಟೋಗಳನ್ನು (Photo Gallery) ಹಂಚಿಕೊಂಡಿದೆ. ಅದನ್ನೊಮ್ಮೆ ಕಣ್ಣು ಹಾಯಿಸೋಣ.

ಈ ಸಂಸತ್‌ ಭವನದಲ್ಲಿ ದೊಡ್ಡ ದೊಡ್ಡ ಸಭಾಂಗಣಗಳು, ಗ್ರಂಥಾಲಯ, ವಾಹನ ನಿಲುಗಡೆ ಸ್ಥಳ, ಸಮಿತಿ ಕೊಠಡಿಗಳು ಸೇರಿ ಹಲವು ರೀತಿಯ ಸೌಲಭ್ಯಗಳಿರಲಿವೆ.

ಈಗಿನ ಮತ್ತು ನೂತನ ಸಂಸತ್‌ ಭವನದ ನಡುವಿನ ವ್ಯತ್ಯಾಸ.

ಹೊಸ ಸಂಸತ್ ಭವನದ ವಿನ್ಯಾಸ.

ಸಭಾಂಗಣಗಳು ಮತ್ತು ಕಚೇರಿ ಕೊಠಡಿಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿವೆ.

ಟಾಟಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಸಂಸ್ಥೆಯು ಹೊಸ ಸಂಸತ್‌ ಭವನವನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿದೆ.

ಬೃಹತ್ ಸಭಾ ಕೊಠಡಿ

ಹೊಸ ಸಂಸತ್ ಭವನದ ವಿನ್ಯಾಸ.

ಮನಮೋಹಕ ಒಳಾಂಗಣ.

ಆಧುನಿಕ ಶೈಲಿಯಲ್ಲಿ ರೂಪಿತಗೊಂಡ ಮನಮೋಹಕ ಹೊಸ ಸಂಸತ್ ಭವನದ ಒಳಾಂಗಣ ದೃಶ್ಯ.

ಸಂಸತ್ ಭವನದ ಉಪಾಹಾರ ಕೊಠಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Juice Jacking : ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್​ ಚಾರ್ಚರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Juice Jacking: ‘ಜ್ಯೂಸ್ ಜಾಕಿಂಗ್​’ ಎಂದು ಕರೆಯುವ ಹ್ಯಾಕಿಂಗ್ ಮಾದರಿ ಮೂಲಕ ಡೇಟಾ ಸುರಕ್ಷತಾ ಬೆದರಿಕೆಗಳು ಹೆಚ್ಚಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಯುಎಸ್​ಸಿಬಿ ಚಾರ್ಚರ್​ಗಳ ಮೂಲಕ ಮೊಬೈಲ್ ಮತ್ತು ಲ್ಯಾಪ್​ಟಾಪ್ ಚಾರ್ಜ್ ಮಾಡದಂತೆ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಸೂಚನೆ ನೀಡಿದೆ. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸುವ ಮೂಲಕ ಅಥವಾ ಅವರ ಹಾರ್ಡ್​ವೇರ್​ ಬದಲಾಯಿಸುವ ಮೂಲಕ ಮಾಹಿತಿ ಕದಿಯುತ್ತಾರೆ. ಬ್ಯಾಂಕ್​ ಸೇರಿದಂತೆ ಎಲ್ಲ ಡೇಟಾವನ್ನು ಕದಿಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.

VISTARANEWS.COM


on

Juce Jacking
Koo

ಬೆಂಗಳೂರು: ವ್ಯಕ್ತಿಗಳು ತಮ್ಮ ಫೋನ್​​ನ ಬ್ಯಾಟರಿ ಕಡಿಮೆಯಾದಾಗ ಚಾರ್ಜಿಂಗ್ ಪೋರ್ಟ್​ಗಳೊಂದಿಗೆ ಸಮೀಪದ ಕಾಫಿ ಶಾಪ್​ಗಳು, ಮಾಲ್​ಗಳು ಸೇರಿದಂತೆ ನಾನಾ ಕಡೆ ಹೋಗಿ ಕುಳಿತು ಚಾರ್ಚ್ ಮಾಡಲು ಯತ್ನಿಸುತ್ತಾರೆ. ಆದರೆ, ಇದು ಅತ್ಯಂತ ಅಪಾಯಕಾರಿ ನಡೆ ಎಂಬುದನ್ನು ವರ್ಷಗಳ ಹಿಂದಿನಿಂದಲೇ ಹೇಳುತ್ತಾ ಬರಲಾಗುತ್ತಿದೆ. ಆದಾಗ್ಯೂ ಜನರ ಹವ್ಯಾಸ ಕಡಿಮೆಯಾಗದಿರುವ ಕಾರಣ ಸರ್ಕಾರ ಪದೇ ಪದೆ ಎಚ್ಚರಿಕೆ ನೀಡುತ್ತಿದೆ. ಇದು ನಿಮ್ಮ ಮಾಹಿತಿಯನ್ನು ಕದಿಯಲು ಸೈಬರ್ ಕಳ್ಳರಿಗೆ ಅವಕಾಶ ಕೊಟ್ಟ (Juice Jacking) ಹಾಗೆ ಎಂದು ಹೇಳಲಾಗುತ್ತದೆ. ಅಂತೆಯೇ ಇದೀಗ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಹೊಸ ಸೂಚನೆ (Juice Jacking) ನೀಡಿದ್ದು ಈ ರೀತಿಯ ಸಾಮಾನ್ಯ ಅಭ್ಯಾಸಗಳು ಸೈಬರ್ ವಂಚನೆಗೆ ಬಲಿಯಾಗುವಂತೆ ಮಾಡಬಹುದು ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) kUw ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಸಾರ್ವಜನಿಕ ಚಾರ್ಜರ್​ಗಳ ಮೂಲಕ ತಮ್ಮ ಎಲೆಕ್ಟ್ರಾನಿಕ್​ ಸಾಧನಗಳನ್ನು ಚಾರ್ಜ್ ಮಾಡದಂತೆ ಸಲಹೆ ನೀಡಿತ್ತು. “ಜ್ಯೂಸ್ ಜಾಕಿಂಗ್” (Juice Jacking) ಸೈಬರ್ ದಾಳಿಯಿಂದ ಉಂಟಾಗುವ ಭದ್ರತಾ ಸುರಕ್ಷತೆಯ ಆತಂಕದ ಕಾರಣಕ್ಕೆ ಈ ಎಲ್ಲ ಸಂಸ್ಥೆಗಳು ಎಚ್ಚರಿಕೆಗಳನ್ನು ನೀಡುತ್ತಿವೆ.

ಜ್ಯೂಸ್ ಜಾಕಿಂಗ್ ಎಂದರೇನು?

“ಜ್ಯೂಸ್ ಜಾಕಿಂಗ್” ಎಂಬ ಪದವನ್ನು ಮೊದಲು 2011 ರಲ್ಲಿ ಸೈಬರ್ ಭದ್ರತಾ ತಜ್ಞ ಬ್ರಿಯಾನ್ ಕ್ರೆಬ್ ರಚಿಸಿದ್ದಾರೆ. ಇದು ಒಂದು ರೀತಿಯ ಸೈಬರ್ ದಾಳಿಯಾಗಿದ್ದು. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸಿ ಮಾಹಿತಿ ಕದಿಯುವ ಮಾದರಿ ಇದು. ಯಾರಿಗೂ ಗೊತ್ತಿಲ್ಲದೇ ಇಲ್ಲಿ ಲಿಂಕ್ ಮಾಡಿದ ಸಾಧನಗಳಿಂದ ಡೇಟಾವನ್ನು ಕದಿಯಲಾಗುತ್ತದೆ.

ಪ್ರಮುಖವಾಗಿ ವಿಳಾಸಗಳು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಪಾಸ್ವರ್ಡ್​ಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್​ಗಳು ಪಡೆಯುತ್ತಾರೆ. ಮಾಲ್ ಗಳು, ಹೋಟೆಲ್ ಗಳು, ಕೆಫೆಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದಾಳಿಗಳು ಸುಲಭವಾಗಿ ನಡೆಯುತ್ತವೆ.

ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಕಿಯೋಸ್ಕ್​ನ ಪರದೆಯ ಮೇಲೆ ಉಚಿತ ಸೆಲ್ ಫೋನ್ ಚಾರ್ಜಿಂಗ್ ಸ್ಟೇಷನ್ ಎಂದು ಬರೆದಿರುತ್ತದೆ. ಆದರೆ ಗ್ರಾಹಕರು ತಮ್ಮ ಫೋನ್​ಗಳನ್ನು ಪ್ಲಗ್ ಇನ್ ಮಾಡಿದ ತಕ್ಷಣ ಮಾಲ್ವೇರ್​ಗಳನ್ನು ಅಪ್​ಲೋಡ್ ಮಾಡಿ ಮಾಹಿತಿ ಕದಿಯುತ್ತಾರೆ.

ಇದು ಹೇಗೆ ಕೆಲಸ ಮಾಡುತ್ತದೆ?

ಮಾಹಿತಿಯೇ ಇರುವುದಿಲ್ಲ: ಇಂಥ ಚಾರ್ಜಿಂಗ್ ಪಾಯಿಂಟ್​ಗಳ ಮೂಲಕ ಜನರನ್ನು ಸುಲಭವಾಗಿ ವಂಚಿಸಬಹುದು. ಯಾಕೆಂದರೆ ಇಲ್ಲಿಗೆ ಚಾರ್ಜ್ ಮಾಡಲು ಬರುವವರಿಗೆ ಸಣ್ಣ ಅರಿವು ಕೂಡ ಇರುವುದಿಲ್ಲ. ಅವರೆಲ್ಲರಿಗೆ ಮಾಹಿತಿ ಕದ್ದರೂ ಗೊತ್ತಾಗುವುದಿಲ್ಲ.

ಡೇಟಾ ಕಳ್ಳತನ: ಹ್ಯಾಕರ್​ಗಳ ಮೋಸಕ್ಕೆ ಬಲಿಯಾಗುವ ಬಳಕೆದಾರರು ತಮ್ಮ ಸಾಧನವನ್ನು ಹ್ಯಾಕ್ ಮಾಡಿದ ಚಾರ್ಜಿಂಗ್ ಸಂಪರ್ಕಕ್ಕೆ ಸಂಪರ್ಕಿಸಿದ ತಕ್ಷಣ ದುರುದ್ದೇಶಪೂರಿತ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಸಂಪರ್ಕಿತ ಸಾಧನಕ್ಕೆ ಲೋಡ್ ಆಗುತ್ತದೆ. ಅದರ ಮೂಲಕ ಕಾಲಕಾಲಕ್ಕೆ ಮಾಹಿತಿ ಕದಿಯಬಹುದು.

ಮಾಲ್ವೇರ್ ಇಂಜೆಕ್ಷನ್: ಕೆಲವು ಹಗರಣಗಳಲ್ಲಿ, ವ್ಯಕ್ತಿಯ ಫೋನ್ ಅಥವಾ ಟ್ಯಾಬ್ಲೆಟ್ ಮಾಲ್ವೇರ್​ಗಳಿಂದ ತುಂಬಿಕೊಳ್ಳುತ್ತದೆ. ಅಂಥ ಸಾಧನಗಳ ಮಾಹಿತಿ ಸೋರಿಕೆಯಾಗುವ ಜತೆಗೆ ಬಳಕೆ ಮಾಡಲಾಗದ ಸ್ಥಿತಿಗೆ ಬರುತ್ತದೆ.

ನೀವು ಏನು ಮಾಡಬಹುದು?

ಜ್ಯೂಸ್-ಜಾಕಿಂಗ್ ಹಗರಣಕ್ಕೆ ಬಲಿಯಾಗದಂತೆ ರಕ್ಷಿಸಲು ನೀವು ಇನ್ನೂ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬಹುದು. “ಯುಎಸ್​ಬಿ ಕಾಂಡೋಮ್​ಗಳು ” ಎಂದೂ ಕರೆಯಲ್ಪಡುವ ಯುಎಸ್​ಬಿ ಡೇಟಾ ಬ್ಲಾಕರ್​ಗಳನ್ನು ಬಳಸಬೇಕು. ಅವು ಸಣ್ಣ ಅಡಾಪ್ಟರ್​ಗಳು. ಅವು ಡೇಟಾದ ಹರಿವನ್ನು ತಡೆಗಟ್ಟುವ ಜತೆಗೆ ಚಾರ್ಜಿಂಗ್​ಗೆ ಮಾತ್ರ ಅವಕಾಶ ಕೊಡತ್ತದೆ. ಚಾರ್ಜಿಂಗ್ ಮಾಡುವಾಗ ಯಾವುದೇ ಡೇಟಾ ವಿನಿಮಯವನ್ನು ಸಾಧ್ಯವಿಲ್ಲ.

ಸಿಇಆರ್​ಟಿ ಎಚ್ಚರಿಕೆಯೇನು?

  • ಸೈಬರ್ ಅಪರಾಧಿಗಳು ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್ ಗಳು ಮತ್ತು ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ದುರುದ್ದೇಶಪೂರಿತ ಚಟುವಟಿಕೆಗಳಿಗೆ ಬಳಸಬಹುದು.
  • ಅಂತಹ ಸೋಂಕಿತ ಯುಎಸ್ ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನವನ್ನು ಚಾರ್ಜ್ ಮಾಡಿದರೆ, ನೀವು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗೆ ಬಲಿಯಾಗಬಹುದು.

ಉತ್ತಮ ಅಭ್ಯಾಸಗಳು

  • ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಅಥವಾ ಪೋರ್ಟಬಲ್ ವಾಲ್ ಚಾರ್ಜರ್ ಗಳಿಗೆ ಪ್ಲಗ್ ಮಾಡುವ ಮೊದಲು ಎರಡು ಬಾರಿ ಯೋಚಿಸಿ.
  • ನಿಮ್ಮ ಮೊಬೈಲ್ ಸಾಧನವನ್ನು ಚಾರ್ಜ್ ಮಾಡಲು ಎಲೆಕ್ಟ್ರಿಕಲ್ ವಾಲ್ ಔಟ್ ಲೆಟ್ ಬಳಸಿ.
  • ನಿಮ್ಮ ಸ್ವಂತ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್ ಅನ್ನು ಒಯ್ಯಲು ಪ್ರಯತ್ನಿಸಿ.
  • ನಿಮ್ಮ ಮೊಬೈಲ್ ಸಾಧನವನ್ನು ಲಾಕ್ ಮಾಡಿ ಮತ್ತು ಸಂಪರ್ಕಿತ ಸಾಧನದೊಂದಿಗೆ ಜೋಡಿಸುವುದನ್ನು ನಿಷ್ಕ್ರಿಯಗೊಳಿಸಿ.
  • ನಿಮ್ಮ ಫೋನ್ ಸ್ವಿಚ್ ಆಫ್ ಸ್ಥಿತಿಯಲ್ಲಿದ್ದಾಗ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಿ.
    ಸೈಬರ್ ವಂಚನೆ ಘಟನೆಯನ್ನು https://www.cybercrime.gov.in ಗಂಟೆಗೆ ವರದಿ ಮಾಡಿ ಅಥವಾ 1930 ಗೆ ಕರೆ ಮಾಡಿ
    ಭದ್ರತೆ ನಮ್ಮ ಮೊದಲ ಆದ್ಯತೆ
    ಹೆಚ್ಚಿನ ಸುರಕ್ಷತಾ ಸಲಹೆಗಳಿಗಾಗಿ ಭೇಟಿ ನೀಡಿ: https://www.cert-in.org.in ಮತ್ತು https://www.csk.gov.in
Continue Reading

ಪ್ರಮುಖ ಸುದ್ದಿ

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು Income Tax: ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.

VISTARANEWS.COM


on

income Tax - how to save tax
Koo

ಬೆಂಗಳೂರು: 2023-24ರ ಹಣಕಾಸು ವರ್ಷವು ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ. ಇದೇ ವೇಳೆ ಆದಾಯ ತೆರಿಗೆ (Income Tax) ಕಟ್ಟುವವರಿಗೆ ಹಣಕಾಸು ವರ್ಷದಲ್ಲಿ ತಮ್ಮ ಟ್ಯಾಕ್ಸ್​ಗಳನ್ನು (Tax Savings) ಉಳಿಸಲು ಕೊನೆಯ ಅವಕಾಶ ಇದು. ಆದರೆ ಸಾಕಷ್ಟು ಮಂದಿ ಕೊನೆಯ ಕ್ಷಣದ ಅವಸರದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಈ ಬಾರಿ ಆ ರೀತಿ ಮಾಡಬೇಡಿ. ಮಾರ್ಚ್ 31ರ ಗಡುವು ಹತ್ತಿರದಲ್ಲಿರುವುದರಿಂದ ಏನು ಮಾಡಬೇಕು ಎಂಬುದನ್ನು ಪರಿಣತರ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಮಾರ್ಚ್ 31ರಿಂದ ಕೇವಲ ಒಂದೆರಡು ದಿನಗಳು ಮಾತ್ರ ಇರುವುದರಿಂದ ಹೂಡಿಕೆ ಸಲಹೆಗಾರರು, ತೆರಿಗೆ ಸಲಹೆಗಾರರು ಮತ್ತು ತೆರಿಗೆದಾರರು ಬ್ಯುಸಿಯಾಗಿರುತ್ತಾರೆ. ಹೀಗಾಗಿ ತೆರಿಗೆ ಲಾಭವನ್ನು ಪಡೆಯಲು ತೆರಿಗೆ ಉಳಿತಾಯ ಹೂಡಿಕೆಗಳಲ್ಲಿ ಹಣವನ್ನು ಹೂಡಿಕೆ ಮಾಡಲೇಬೇಕು ಎಂದು ಹೇಳುತ್ತಾರೆ.

ಆದಾಯ ತೆರಿಗೆ ಕಾಯ್ದೆ, 1961, ಪಿಪಿಎಫ್, ಎಲ್ಐಸಿ ಪ್ರೀಮಿಯಂಗಳು, ಫಿಕ್ಸೆಡ್​ ಡೆಪಾಸಿಟ್​ಗಳು, ಇಎಲ್ಎಸ್ಎಸ್, ಯುಲಿಪ್, ಎನ್ಎಸ್ಸಿ ಮುಂತಾದ ನಿರ್ದಿಷ್ಟ ಸೆಕ್ಯುರಿಟಿಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು ಎಂದು ರೌಟೆ ಹೇಳುತ್ತಾರೆ.

ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.

ತೆರಿಗೆ ಉಳಿತಾಯ ಅನುಕೂಲ ನೀಡುವ ಸ್ಥಿರ ಠೇವಣಿಗಳು ಕಡಿಮೆ ಬಡ್ಡಿದರವನ್ನು ನೀಡುತ್ತವೆ. ಆದರೆ ಇದು ಸುಮಾರು 5 ವರ್ಷಗಳವರೆಗೆ ಲಾಕ್-ಇನ್ ಹೊಂದಿರುತ್ತವೆ. ಹೀಗಾಗಿ, ಸರಿಯಾದ ಆಯ್ಕೆಯನ್ನು ಮಾಡಲು ಮತ್ತು ನಿಮ್ಮ ಪ್ರಯೋಜನಗಳನ್ನು ಉತ್ತಮಗೊಳಿಸಲು ನಿರ್ದಿಷ್ಟ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ತೆರಿಗೆ ಉಳಿತಾಯವನ್ನು ಹೆಚ್ಚಿಸಲು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು

ಸೆಕ್ಷನ್ 80 ಸಿ ನಿರ್ಲಕ್ಷಿಸುವುದು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ತೆರಿಗೆ ಉಳಿತಾಯ ಹೂಡಿಕೆಗಳಿಗೆ ಇಎಲ್ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಎನ್ಎಸ್ಸಿ (ನ್ಯಾಷನಲ್ ಸೇವಿಂಗ್ಸ್​ ಸರ್ಟಿಫೀಕೇಟ್​) ಮುಂತಾದ ವಿವಿಧ ಮಾರ್ಗಗಳಿವೆ. ಅನೇಕ ತೆರಿಗೆದಾರರು ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ 1.5 ಲಕ್ಷ ರೂ.ಗಳ ಸಂಪೂರ್ಣ ಮಿತಿಯನ್ನು ಬಳಸಿಕೊಳ್ಳಲು ವಿಫಲರಾಗುತ್ತಾರೆ. ಎಲ್ಲಾ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿ ಮತ್ತು ಈ ವಿಭಾಗದ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡುವಂಥ ಹೂಡಿಕೆ ಮಾಡಿ.

ಇದನ್ನೂ ಓದಿ : LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

ಅಪೂರ್ಣ ದಾಖಲೆಗಳು: ತೆರಿಗೆ ಉಳಿತಾಯ ಹೂಡಿಕೆಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ಹೂಡಿಕೆ ರಸೀದಿಗಳು, ಪ್ರೀಮಿಯಂ ಪಾವತಿ ಪ್ರಮಾಣಪತ್ರಗಳು, ಸಾಲ ಪ್ರಮಾಣಪತ್ರಗಳು ಇತ್ಯಾದಿಗಳು ಸೇರಿಕೊಂಡಿವೆ. ಅಪೂರ್ಣ ದಾಖಲೆಗಳು ತೆರಿಗೆ ಕಡಿತದ ಅವಕಾಶ ಸಿಗದಂತೆ ಮಾಡಬಹುದು. ಹೀಗಾಗಿ ನಿಮ್ಮ ಹೂಡಿಕೆಗಳು ಮತ್ತು ಕಡಿತಗಳ ದಾಖಲೆಗಳನ್ನು ಇರಿಸಿಕೊಳ್ಳಿ. ಯಾಕೆಂದರೆ ನಿಮ್ಮ ತೆರಿಗೆ ಫೈಲಿಂಗ್ ಗಳನ್ನು ಪರಿಶೀಲಿಸಲು ಐಟಿ ಇಲಾಖೆ ದಾಖಲೆಗಳ ಮರುಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

ತೆರಿಗೆ ಯೋಜನೆಗಳನ್ನು ನಿರ್ಲಕ್ಷಿಸುವುದು: ಸೆಕ್ಷನ್ 80 ಸಿ ಹೊರತುಪಡಿಸಿ, ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾದ 80 ಡಿ (ಆರೋಗ್ಯ ವಿಮಾ ಪ್ರೀಮಿಯಂ), 80 ಇ (ಶಿಕ್ಷಣ ಸಾಲದ ಬಡ್ಡಿ) ಮತ್ತು 80 ಜಿ (ನಿರ್ದಿಷ್ಟ ನಿಧಿಗಳಿಗೆ ದೇಣಿಗೆ) ನಂತಹ ಇತರ ವಿಭಾಗಗಳಿವೆ. ಈ ಲಾಭವನ್ನು ನಿರ್ಲಕ್ಷಿಸುವುದರಿಂದ ತೆರಿಗೆ ಉಳಿಸುವ ಅವಕಾಶಗಳನ್ನು ಕಳೆದುಕೊಳ್ಳಬಹುದು.

ದೀರ್ಘಾವಧಿಯ ಹಣಕಾಸು ಗುರಿಯ ನಿರ್ಲಕ್ಷ್ಯ: ತೆರಿಗೆ ಉಳಿತಾಯ ಹೂಡಿಕೆಗಳು ನಿಮ್ಮ ದೀರ್ಘಾವಧಿಯ ಹಣಕಾಸು ಉದ್ದೇಶಗಳಿಗೆ ಹೊಂದಿಕೆಯಾಗಬೇಕು. ತೆರಿಗೆ ಲಾಭ ಪಡೆಯುವ ಉದ್ದೇಶದಿಂದ ಮಾತ್ರ ಹೂಡಿಕೆ ಮಾಡಿದರೆ ಅದು ನಿಮ್ಮ ಹಣಕಾಸಿನ ಅಗತ್ಯಕ್ಕೆ ಅದು ಹೊಂದಿಕೆಯಾಗದೇ ಹೋದರೆ ಅದರಿಂದ ಹೆಚ್ಚಿನ ಲಾಭವು ಸಿಗುವುದಿಲ್ಲ.

Continue Reading

Lok Sabha Election 2024

Lok Sabha Election: ಬಿಹಾರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಸೀಟು ಹಂಚಿಕೆ; ಯಾರಿಗೆ ಎಷ್ಟು ಕ್ಷೇತ್ರ?

Lok Sabha Election: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಸೀಟು ಹಂಚಿಕೆ ಮಾಡಿಕೊಂಡಿವೆ. ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳು ಎಂಬ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Rahul Gandhi And Tejashwi Yadav
Koo

ಪಟನಾ: ಲೋಕಸಭೆ ಚುನಾವಣೆಗೆ (Lok Sabha Election) ಇಂಡಿಯಾ ಒಕ್ಕೂಟವೂ (India Bloc) ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಥವಾ ಮಹಾಘಟಬಂಧನದ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡಿವೆ. ಆರ್‌ಜೆಡಿಯು (RJD) 26 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇನ್ನು ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಎಡ ಪಕ್ಷವು ಐದು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಇದರೊಂದಿಗೆ ಇಂಡಿಯಾ ಒಕ್ಕೂಟದಲ್ಲಿ ಬಿಹಾರದಲ್ಲಿ ಒಮ್ಮತ ಮೂಡಿದಂತಾಗಿದೆ.

ಕಿಶನ್‌ ಗಂಜ್‌ ಹಾಗೂ ಪಟನಾ ಸಾಹಿಬ್‌ ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿವೆ. ಪೂರ್ಣಿಯಾ ಹಾಗೂ ಕಟಿಹಾರ್‌ನಲ್ಲಿ ಜೆಡಿಯು ಗೆಲುವು ಸಾಧಿಸಿದ್ದು, ಪೂರ್ಣಿಯಾದಲ್ಲಿ ಆರ್‌ಜೆಡಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮೊದಲು ಪೂರ್ಣಿಯಾ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ರಾಜ್ಯಸಭೆ ಸದಸ್ಯೆ ರಂಜೀತ್‌ ರಂಜನ್‌ ಅವರ ಪತಿ ಪಪ್ಪು ಯಾದವ್‌ ಅವರು ಇಲ್ಲಿ ಸ್ಪರ್ಧಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಪಪ್ಪು ಯಾದವ್‌ ಕೂಡ ಟಿಕೆಟ್‌ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಬಿಹಾರದಲ್ಲಿ ಲೋಕ ಸಭಾ ಚುನಾವಣೆಗೆ ಎನ್​ಡಿಎ ಬಣದ ಸೀಟು ಹಂಚಿಕೆ ಒಪ್ಪಂದ ನಡೆದಿದೆ. ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಪ್ರಕಟಿಸಿದ್ದಾರೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 17, ಜೆಡಿಯು 16, ಎಲ್​ಜೆಪಿ (ರಾಮ್ ವಿಲಾಸ್) 5, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ತಲಾ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ತಾವ್ಡೆ ಎಎನ್ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

ಬಿಹಾರದ ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಲಿದೆ

  1. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್): ವೈಶಾಲಿ, ಹಾಜಿಪುರ, ಸಮಸ್ತಿಪುರ, ಖಗರಿಯಾ ಮತ್ತು ಜಮುಯಿ ಕ್ಷೇತ್ರಗಳಲ್ಲಿ ಎಲ್ಜೆಪಿ (ರಾಮ್ ವಿಲಾಸ್) ಸ್ಪರ್ಧಿಸಲಿದೆ.
  2. ಹಿಂದೂಸ್ತಾನಿ ಅವಾಮ್ ಮೋರ್ಚಾ ಗಯಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ
  3. ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಕರಕಾಟ್ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

LIC Offices: ಮಾರ್ಚ್‌ 30 ಹಾಗೂ 31ರಂದು ಬ್ಯಾಂಕ್‌ಗಳು ಮಾತ್ರವಲ್ಲ ಭಾರತೀಯ ಜೀವ ವಿಮಾ ನಿಗಮದ ಕಚೇರಿಗಳು ಕಾರ್ಯನಿರ್ವಹಿಸಲಿವೆ.

VISTARANEWS.COM


on

LIC
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನವು ಭಾನುವಾರವೇ ಇರುವುದರಿಂದ ಬ್ಯಾಂಕ್‌ಗಳು (Banks) ಶನಿವಾರ ಹಾಗೂ ಭಾನುವಾರವೂ (ಮಾರ್ಚ್‌ 30, 31) ಕಾರ್ಯನಿರ್ವಹಿಸಲಿವೆ. ಬ್ಯಾಂಕ್‌ಗಳು ಮಾತ್ರವಲ್ಲ, ಭಾರತೀಯ ಜೀವ ವಿಮಾನ ನಿಗಮದ (LIC Offices) ಕಚೇರಿಗಳು ಕೂಡ ಶನಿವಾರ ಹಾಗೂ ಭಾನುವಾರ ಕಾರ್ಯನಿರ್ವಹಿಸಲಿವೆ. ಮಾರ್ಚ್‌ 30 ಹಾಗೂ 31 ಪ್ರಸಕ್ತ ಹಣಕಾಸು ವರ್ಷದ (Fiscal Year) ಕೊನೆಯ ದಿನಗಳಾಗಿರುವ ಕಾರಣ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ವೀಕೆಂಡ್‌ನಲ್ಲೂ ಎಲ್‌ಐಸಿ ಕಚೇರಿಗಳು ಕಾರ್ಯನಿರ್ವಹಿಸಲಿವೆ.

ವಿತ್ತೀಯ ವರ್ಷದ ಕೊನೆಯ ಎರಡು ದಿನಗಳಂದು ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ಕಾರ್ಯನಿರ್ವಹಿಸಲಿವೆ. ಹಣಕಾಸು ಚಟುವಟಿಕೆಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗಳು ಕೂಡ ತೆರೆದಿರಲಿವೆ. ಎಲ್‌ಐಸಿ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ಎಲ್‌ಐಸಿಯೇ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Job Alert: ಎಸ್‌ವಿಸಿ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಏ. 9ರೊಳಗೆ ಅರ್ಜಿ ಸಲ್ಲಿಸಿ

2023-24ರ ಹಣಕಾಸು ವರ್ಷದ (ಎಫ್​ಎ) ಕೊನೆಯ ದಿನ ಭಾನುವಾರ ಬರುವುದರಿಂದ ಈ ಸೂಚನೆ ಬಂದಿದೆ. ಅಧಿಕೃತ ಹೇಳಿಕೆಯಲ್ಲಿ, “2023-24ರ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿಗಳಿಗೆ ಸಂಬಂಧಿಸಿದ ಎಲ್ಲ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31, 2024 ರಂದು (ಭಾನುವಾರ) ಸರ್ಕಾರಿ ರಸೀದಿಗಳು ಮತ್ತು ಪಾವತಿಗಳನ್ನು ವ್ಯವಹರಿಸುವ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ವಹಿವಾಟುಗಳಿಗೆ ತೆರೆದಿಡಲು ಭಾರತ ಸರ್ಕಾರ ವಿನಂತಿಸಿದೆ” ಎಂದು ಆರ್​​ಬಿಐ ಹೇಳಿದೆ.

ಆರ್‌ಬಿಐನ ಏಜೆನ್ಸಿ ಬ್ಯಾಂಕುಗಳಾಗಿ ಪಟ್ಟಿ ಮಾಡಲಾದ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (ಪಿಎಸ್​ಬಿ) ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸೇರಿವೆ. ಅಂತೆಯೇ, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಲಿಮಿಟೆಡ್​ನಂತ ಖಾಸಗಿ ಬ್ಯಾಂಕುಗಳು ಏಜೆನ್ಸಿ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

ವಾರಾಂತ್ಯದಲ್ಲಿ ತೆರೆದಿರುವ ಬ್ಯಾಂಕ್​ಗಳ ವಿವರ ಇಲ್ಲಿದೆ

  • ಬ್ಯಾಂಕ್ ಆಫ್ ಬರೋಡಾ
  • ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ಆಫ್ ಮಹಾರಾಷ್ಟ್ರ
  • ಕೆನರಾ ಬ್ಯಾಂಕ್
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಇಂಡಿಯನ್ ಬ್ಯಾಂಕ್
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಯುಕೋ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Juce Jacking
ಪ್ರಮುಖ ಸುದ್ದಿ10 mins ago

Juice Jacking : ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್​ ಚಾರ್ಚರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Lok Sabha Election 2024
ಕರ್ನಾಟಕ33 mins ago

Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ

Summer Nail Colours Trend
ಫ್ಯಾಷನ್54 mins ago

Summer Nail Colours Trend: ಸಮ್ಮರ್‌ ಸೀಸನ್‌ನಲ್ಲಿ ಬದಲಾಯ್ತು ನೇಲ್‌ ಕಲರ್ಸ್‌ ಟ್ರೆಂಡ್‌

Lok Sabha Election 2024 and BJP files complaint with Election Commission against Yathindra for calling Amit Shah a rowdy and also CM Siddaramaiah in this Photo
Lok Sabha Election 202459 mins ago

Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Board Exam
ಬೆಂಗಳೂರು1 hour ago

Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

income Tax - how to save tax
ಪ್ರಮುಖ ಸುದ್ದಿ1 hour ago

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

Utthana Essay Competition 2023
ಕರ್ನಾಟಕ2 hours ago

Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

Lok Sabha Election 2024 R Ashok attack on Yathindra Siddaramaiah for he says Amit Shah is Rowdy and goonda
Lok Sabha Election 20242 hours ago

Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

Kodagu University
ಕೊಡಗು2 hours ago

Kodagu University : ಉದ್ಯೋಗ ಸೃಷ್ಟಿ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಪ್ರೊ.ಅಶೋಕ್ ಸಂಗಪ್ಪ

Alia Bhatt wore diamond jewellery
ಸಿನಿಮಾ2 hours ago

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌