Chai GPT: ಚಾಟ್‌ಜಿಪಿಟಿ ಕೇಳಿದ್ದೀರಿ, ಚಾಯ್‌ ಜಿಪಿಟಿ ಕೇಳಿದ್ದೀರಾ? ಹೌದು, ಇಲ್ಲಿ ಎಐ ಸಿಗಲ್ಲ, ಚಾಯ್‌ ಸಿಗತ್ತೆ! - Vistara News

ದೇಶ

Chai GPT: ಚಾಟ್‌ಜಿಪಿಟಿ ಕೇಳಿದ್ದೀರಿ, ಚಾಯ್‌ ಜಿಪಿಟಿ ಕೇಳಿದ್ದೀರಾ? ಹೌದು, ಇಲ್ಲಿ ಎಐ ಸಿಗಲ್ಲ, ಚಾಯ್‌ ಸಿಗತ್ತೆ!

Chai GPT: ಚಾಟ್‌ಜಿಪಿಟಿ ಎಂಬ ಚಾಟ್‌ಬಾಟ್‌ ಹೆಸರನ್ನೇ ಬಳಸಿಕೊಂಡು ವ್ಯಕ್ತಿಯೊಬ್ಬರು ತಮ್ಮ ಟೀ ಅಂಗಡಿಗೆ ಚಾಯ್‌ ಜಿಪಿಟಿ ಎಂದು ಹೆಸರಿಟ್ಟಿದ್ದಾರೆ. ಟೀ ಅಂಗಡಿಯ ಬೋರ್ಡಿನ ಫೋಟೊ ಈಗ ವೈರಲ್‌ ಆಗಿದೆ.

VISTARANEWS.COM


on

Chai GPT
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನಾವೀಗ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಬದುಕುತ್ತಿದ್ದೇವೆ. ಮಾನವ ಸಂಘಜೀವಿ ಎನ್ನುತ್ತಾರೆ. ಆದರೆ, ಸಂಘಜೀವಿ ಅಲ್ಲದವರೂ (ಇಂಟ್ರೋವರ್ಟ್‌ಗಳು) ಜಾಲತಾಣಗಳಲ್ಲಿ ಇದ್ದಾರೆ. ಹಾಗಾಗಿ, ಜಾಲತಾಣಗಳು ಎಲ್ಲರ ಬದುಕನ್ನೂ ಆವರಿಸಿವೆ. ಅದರಲ್ಲೂ, ಇತ್ತೀಚೆಗೆ ಬಂದ ಜಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ (AI) ಚಾಟ್‌ಬಾಟ್‌ ಜಗತ್ತಿನಾದ್ಯಂತ ಆವರಿಸಿದೆ. ಎಲ್ಲರೂ ಚಾಟ್‌ಜಿಪಿಟಿಯನ್ನು ಬಳಸಿ, ಐಟಿ ಕಂಪನಿಗಳಲ್ಲಿ ಇದರ ಸದುಪಯೋಗಪಡಿಸಿಕೊಳ್ಳುತ್ತಿದ್ದರೆ, ಇಲ್ಲೊಬ್ಬ ಟೀ ಅಂಗಡಿ ಮಾಲೀಕ ಚಾಜ್‌ಜಿಪಿಟಿ ಹೆಸರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ತನ್ನ ಟೀ ಅಂಗಡಿಗೆ ಚಾಯ್‌ಜಿಪಿಟಿ (Chai GPT) ಎಂಬ ಹೆಸರಿಟ್ಟಿದ್ದಾನೆ. ಈತನ ಚಹಾ ಅಂಗಡಿಯ ಫೋಟೊ ಈಗ ವೈರಲ್‌ ಆಗಿದೆ.

ಹೌದು, ವ್ಯಕ್ತಿಯೊಬ್ಬರು ತಮ್ಮ ಅಂಗಡಿಗೆ ಚಾಯ್‌ಜಿಪಿಟಿ ಎಂದು ಹೆಸರಿಟ್ಟಿದ್ದಾರೆ. ಆ ಹೆಸರಿನ ದೊಡ್ಡ ಬೋರ್ಡ್‌ ಒಂದನ್ನು ನೇತುಹಾಕಿದ್ದಾರೆ. ಸ್ವಾತಿ ಎಂಬುವವರು ಟ್ವಿಟರ್‌ನಲ್ಲಿ ಟೀ ಅಂಗಡಿಯ ಫೋಟೊ ಶೇರ್‌ ಮಾಡಿದ್ದು, ಇದು ವೈರಲ್‌ ಆಗಿದೆ. ಜನರು ಟೀ ಅಂಗಡಿ ಮಾಲೀಕನ ಸೃಜನಶೀಲತೆಗೆ ಮಾರುಹೋಗಿದ್ದಾರೆ. ಇನ್ನೂ ಒಂದಷ್ಟು ಜನ, ಈ ಟೀ ಅಂಗಡಿ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಂದಹಾಗೆ, ಟೀ ಅಂಗಡಿ ಮಾಲೀಕನ ಪ್ರಕಾರ, ಜಿಪಿಟಿ ಎಂದರೆ ‘ಜೆನ್ಯೂನ್ಲಿ ಪ್ಯೂರ್‌ ಟೀ’ ಎಂಬುದಾಗಿ. ಈ ಕ್ರಿಯೇಟಿವಿಟಿಗೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಾತಿ ಅವರು ಈ ಅಂಗಡಿ ಎಲ್ಲಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೂ, ಜನ ಟೀ ಅಂಗಡಿ ಎಲ್ಲಿದೆ ಎಂದು ಪ್ರಶ್ನೆ ಕೇಳಿದ್ದಾರೆ. ಹಾಗೆಯೇ, ತರಹೇವಾರಿಯಾಗಿ ಜನ ಪ್ರತಿಕ್ರಿಯೆ ನೀಡಿದ್ದಾರೆ. “ಇಂತಹ ಕೆಲಸವನ್ನು ಭಾರತದಲ್ಲಿ ಮಾತ್ರ ಸಾಧ್ಯ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral News : ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್‌ ವಿಡಿಯೊ

ಜೀವನದಲ್ಲಿ ಬೇಸರಗೊಂಡಂತಿರುವ ವ್ಯಕ್ತಿಯೊಬ್ಬರು, “ನಾನೂ ಜೀವನದಲ್ಲಿ ಹೀಗೆ ಏನಾದರೂ ಮಾಡಬೇಕು ಎಂದಿರುವೆ. ಆದರೆ, ಯಾವುದೂ ಆಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ, “ಭಾಯ್‌, ಇಲ್ಲಿ ಗೋಲ್‌ಗಪ್ಪಾ ಸೇರಿ ಎಲ್ಲ ಚಾಟ್ಸ್‌ ಸಿಗುತ್ತದೆಯೇ” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

PM Narendra Modi: ಮೋದಿಗೆ ಥ್ಯಾಂಕ್ಸ್‌ ಹೇಳಿದ ಬಲ್ಗೇರಿಯಾ ಅಧ್ಯಕ್ಷ, ಮೋದಿ ಉತ್ತರ ಹೀಗಿತ್ತು

PM Narendra Modi: ಕಳೆದ ವರ್ಷ ಡಿಸೆಂಬರ್ 14ರಂದು ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಎಂವಿ ರುಯೆನ್ ಅನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ರಕ್ಷಿಸಿತು.

VISTARANEWS.COM


on

narendra modi rumen radev
Koo

ಹೊಸದಿಲ್ಲಿ: ತಮ್ಮ ದೇಶದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಗೆ (Indian Navy) ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಬಲ್ಗೇರಿಯಾದ ಅಧ್ಯಕ್ಷ (Bulgarian President) ರುಮೆನ್ ರಾದೇವ್ (Rumen Radev) ಅವರು ಧನ್ಯವಾದ ಸಲ್ಲಿಸಿದ್ದಾರೆ. “ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರಯಾನ ಸ್ವಾತಂತ್ರ್ಯವನ್ನು ರಕ್ಷಿಸಲು, ಕಡಲ್ಗಳ್ಳತನ (Piracy) ಮತ್ತು ಭಯೋತ್ಪಾದನೆಯನ್ನು (terrorism) ಎದುರಿಸಲು ಭಾರತ ಬದ್ಧವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದಾರೆ.

ರುಮೆನ್ ರಾದೇವ್ ಅವರು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ಏಳು ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆಯ ಕೆಚ್ಚೆದೆಯ ಕಾರ್ಯಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು” ಎಂದು ಅವರು ಟ್ವೀಟ್‌ ಮಾಡಿದ್ದರು.

ತಮ್ಮ ಪ್ರತ್ಯುತ್ತರದಲ್ಲಿ, ಮೋದಿ ಅವರು, ““ಏಳು ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತವಾಗಿರುವುದು ಮತ್ತು ಶೀಘ್ರದಲ್ಲೇ ಮನೆಗೆ ಮರಳುತ್ತಿರುವುದು ನಮಗೆ ಸಂತೋಷ ತಂದಿದೆ. ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ” ಎಂದಿದ್ದಾರೆ.

ಅಪಹರಣಕ್ಕೊಳಗಾದ ಎಂವಿ ರುಯೆನ್ ಹಡಗನ್ನು ಯಶಸ್ವಿಯಾಗಿ ರಕ್ಷಿಸಿದ್ದಕ್ಕಾಗಿ ಭಾರತ, ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಬಲ್ಗೇರಿಯಾದ ಉಪಪ್ರಧಾನಿ ಭಾನುವಾರ ಧನ್ಯವಾದಗಳನ್ನು ಅರ್ಪಿಸಿದ್ದರು. “ಅಪಹರಣಕ್ಕೊಳಗಾದ ನೌಕೆ ರೂಯೆನ್‌, 7 ಬಲ್ಗೇರಿಯನ್ ಪ್ರಜೆಗಳು ಸೇರಿದಂತೆ ಸಿಬ್ಬಂದಿಯನ್ನು ರಕ್ಷಿಸಲು ಯಶಸ್ವಿ ಕಾರ್ಯಾಚರಣೆಗಾಗಿ ಭಾರತೀತ ನೌಕಾಪಡೆಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸಿಬ್ಬಂದಿಯ ಜೀವಗಳನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಬಲ್ಗೇರಿಯನ್ ಸಚಿವ ಮರಿಯಾ ಗೇಬ್ರಿಯಲ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಸ್ನೇಹಿತರು ಇರುವುದೇ ಇದಕ್ಕಾಗಿ” ಎಂದು ಜೈಶಂಕರ್ ಉತ್ತರಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 14ರಂದು ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಎಂವಿ ರುಯೆನ್ ಅನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ರಕ್ಷಿಸಿತು. 35 ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿದೆ. ಬಲ್ಗೇರಿಯಾ ಮಾಲೀಕತ್ವದ MV ರುಯೆನ್‌ನ ಅಪಹರಣ, 2017ರಿಂದ ಸೊಮಾಲಿ ಕಡಲ್ಗಳ್ಳರು ಸರಕು ಹಡಗನ್ನು ಹತ್ತಿದ ಮೊದಲ ನಿದರ್ಶನ. ಎಲ್ಲಾ ಸಿಬ್ಬಂದಿಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಭಾರತೀಯ ನೌಕಾಪಡೆ ಕಾರ್ಯಾಚರಣೆ

ಐಎನ್‌ಎಸ್ ಕೋಲ್ಕತ್ತಾ ಕಾರ್ಯಾಚರಣೆಯನ್ನು ಮುನ್ನಡೆಸಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ನೌಕಾಪಡೆಯು ತನ್ನ P-8I ಕಡಲ ಗಸ್ತು ವಿಮಾನವನ್ನು, ಮುಂಚೂಣಿ ಹಡಗುಗಳಾದ INS ಕೋಲ್ಕತ್ತಾ ಮತ್ತು INS ಸುಭದ್ರ ಮತ್ತು ಎತ್ತರದ ದೀರ್ಘ-ಸಹಿಷ್ಣುತೆ (HALE) ಮಾನವರಹಿತ ವೈಮಾನಿಕ ವಾಹನವನ್ನು ಬಳಸಿಕೊಂಡಿತು. ಭಾರತೀಯ ವಾಯುಪಡೆಯ C-17 ವಿಮಾನವು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ʼಆಪರೇಷನ್ ಸಂಕಲ್ಪ್’ ಅನ್ನು ಬೆಂಬಲಿಸಿತು.

40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ, INS ಕೋಲ್ಕತ್ತಾ ಭಾರತೀಯ ಕರಾವಳಿಯಿಂದ ಸುಮಾರು 2600 ಕಿಮೀ ದೂರದಲ್ಲಿ ಕಡಲ್ಗಳ್ಳರ ದಾಳಿಗೆ ಒಳಗಾಗಿದ್ದ MV ರುಯೆನ್ ಅನ್ನು ತಡೆಹಿಡಿಯಿತು. ವ್ಯಾಪಾರಿ ಹಡಗನ್ನು ಡಿಸೆಂಬರ್ 2023ರಲ್ಲಿ ಹೈಜಾಕ್ ಮಾಡಲಾಗಿತ್ತು. ಇಲ್ಲಿಯವರೆಗೂ ಸೊಮಾಲಿಯನ್ ಕಡಲ್ಗಳ್ಳರ ನಿಯಂತ್ರಣದಲ್ಲಿತ್ತು. ಡಿಸೆಂಬರ್‌ನಲ್ಲಿ ಯೆಮೆನ್‌ನ ಸೊಕೊಟ್ರಾ ದ್ವೀಪದಿಂದ ಪೂರ್ವಕ್ಕೆ 380 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸೊಮಾಲಿ ಕಡಲ್ಗಳ್ಳರು ಅದನ್ನು ವಶಪಡಿಸಿಕೊಂಡಿದ್ದರು. ನಂತರ MV ರುಯೆನ್ ಮತ್ತು ಅದರ 17 ಸಿಬ್ಬಂದಿಯನ್ನು ಸೊಮಾಲಿಯಾದ ಅರೆ ಸ್ವಾಯತ್ತ ರಾಜ್ಯವಾದ ಪಂಟ್‌ಲ್ಯಾಂಡ್‌ಗೆ ಕರೆದೊಯ್ದರು.

ಇದನ್ನೂ ಓದಿ: Ship Hijacked: ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್;‌ ನೌಕಾಪಡೆ ಕಟ್ಟೆಚ್ಚರ

Continue Reading

ದೇಶ

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

ನೂತನ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ ದೆಹಲಿಯು(delhi pollution) ಅತ್ಯಂತ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ.

VISTARANEWS.COM


on

Delhi
Koo

ನವದೆಹಲಿ: ನೂತನ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ(World Air Quality) ಬಿಹಾರದ ಬೇಗುಸರಾಯ್(Bihars Begusarai) ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್(polluted metropolitan) ಪ್ರದೇಶವಾಗಿ ಮತ್ತು ದೆಹಲಿಯು(delhi pollution) ಅತ್ಯಂತ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ.

ನೂತನ ವರದಿಯ ಪ್ರಕಾರ ಭಾರತ ಪ್ರತಿ ಕ್ಯೂಬಿಕ್​ ಮೀಟರ್‌ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ 134 ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 2022ರಲ್ಲಿ, ಪ್ರತಿ ಕ್ಯೂಬಿಲ್​ ಮೀಟರ್‌ಗೆ ಸರಾಸರಿ 53.3 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಭಾರತವು ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು.

ಇದನ್ನೂ ಓದಿ Air pollution: ದಿಲ್ಲಿ ಮಾತ್ರವಲ್ಲ, ಭಾರತದ ಇನ್ನೂ ಎರಡು ನಗರಗಳ ವಾಯು ವಿಶ್ವದಲ್ಲೇ ಅತಿ ಕಳಪೆ

ಸದ್ಯ ಸ್ವಿಸ್ ಸಂಸ್ಥೆ IQAir ವಿಶ್ವ ವಾಯು ಗುಣಮಟ್ಟ 2023ರ ವರದಿ ಪ್ರಕಾರ ಬಾಂಗ್ಲಾದೇಶ (ಪ್ರತಿ ಕ್ಯೂಬಿಕ್​​ ಮೀಟರ್‌ಗೆ 79.9 ಮೈಕ್ರೋಗ್ರಾಂ) ಮತ್ತು ಪಾಕಿಸ್ತಾನ (ಪ್ರತಿ ಕ್ಯೂಬಿಲ್​ ಮೀಟರ್‌ಗೆ 73.7 ಮೈಕ್ರೋಗ್ರಾಂಗಳು) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಭಾರತ ಮೂರನೇ ಸ್ಥಾನ ಪಡೆದಿದಿದೆ. ಇದೇ ದಿಲ್ಲಿಯಲ್ಲಿ ಇದೇ ರೀತಿಯ ವಾಯುವಾಲಿನ್ಯ ಮುಂದುವರಿದೆ. ಭಾರತವೂ ಕೂಡ ಅಗ್ರಸ್ಥಾನ ಪಡೆಯುವ ದಿನಗಳು ಹೆಚ್ಚು ದೂರ ಇಲ್ಲ ಎನ್ನಲಡ್ಡಿಯಿಲ್ಲ.

ಬಿಹಾರದ ಬೇಗುಸರಾಯ್ ಪ್ರತಿ ಘನ(ಕ್ಯೂಬಿಲ್​) ಮೀಟರ್‌ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ಅಚ್ಚರಿ ಎಂದರೆ 2022ರ ವರದಿಯಲ್ಲಿ ಈ ನಗರ ಕಾಣಿಸಿಕೊಂಡಿರಲಿಲ್ಲ. ದೆಹಲಿಯ PM2.5 ಮಟ್ಟವು 2022 ರಲ್ಲಿ ಘನ ಮೀಟರ್‌ಗೆ 89.1 ಮೈಕ್ರೋಗ್ರಾಂನಿಂದ 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಿಗೆ ಹದಗೆಟ್ಟಿದೆ. 2022ರಲ್ಲಿ ದಿಲ್ಲಿ ಏಷ್ಯಾದ ಕಲುಷಿತ ನಗರದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಕಾಣಿಸಿಕೊಂಡಿದೆ.

ಸೊನ್ನೆ ಮತ್ತು 50 ರ ನಡುವಿನ AQI ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, 401 ಮತ್ತು 450 ತೀವ್ರ ಮತ್ತು 450 ಕ್ಕಿಂತ ಹೆಚ್ಚು ತೀವ್ರ ಎಂದು ಪರಿಗಣಿಸಲಾಗುತ್ತದೆ.

Continue Reading

ದೇಶ

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ(Gaza Hospital) ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ ವೇಳೆ 20 ಪ್ಯಾಲೆಸ್ತೀನ್(Israel Palestine War) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

VISTARANEWS.COM


on

Israeli Forces
Koo

ಟೆಲ್ ಅವೀವ್: ಹಮಾಸ್(Hamas) ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ(Gaza Hospital) ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ ವೇಳೆ 20 ಪ್ಯಾಲೆಸ್ತೀನ್(Israel Palestine War) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳೊಂದಿಗೆ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲ್‌ ಪಡೆಗಳು, ಗುಂಡಿನ ದಾಳಿ ನಡೆಸಿವೆ ಎಂದು ಆಸ್ಪತ್ರೆಯೊಳಗೆ ಆಶ್ರಯ ಪಡೆದಿರುವವರು ಹೇಳಿದ್ದಾರೆ. ಸೇನಾ ಪಡೆಗಳು ಕಟ್ಟಡಗಳ ಮೇಲೆಯೂ ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿವೆ ಎಂದಿದ್ದಾರೆ.

“ಕಾರ್ಯಾಚರಣೆಯ ಸಮಯದಲ್ಲಿ ನಾವು 200 ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದೇವೆ ಮತ್ತು ಅವರು ಪ್ರಸ್ತುತ ತನಿಖೆಯಲ್ಲಿದ್ದಾರೆ. ಆಸ್ಪತ್ರೆಯ ಸಂಕೀರ್ಣದಲ್ಲಿ 20 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದೇವೆ” ಎಂದು ಇಸ್ರೇಲ್‌ನ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್-ಶಿಫಾ ಆಸ್ಪತ್ರೆಯ ಕೆಳಭಾಗದಲ್ಲಿ ಹಲವು ಸೌಕರ್ಯಗಳೊಂದಿಗೆ ಹಮಾಸ್ ಬಂಡುಕೋರರು ಕಮಾಂಡಿಂಗ್‌ ಸೆಂಟರ್ ಹೊಂದಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್‌ ಪಡೆಯು, ವ್ಯಾಪಕ ದಾಳಿ ನಡೆಸುವ ಮೂಲಕ ಬಂಡುಕೋರರ ಅಡಗುದಾಣವನ್ನು ಕಳೆದ ನವೆಂಬರ್‌ನಲ್ಲೇ ನಾಶಪಡಿಸಿತ್ತು. ದಾಳಿಯ ವೇಳೆ ಬಂಡುಕೋರರು ಹೊಂದಿದ್ದ ಬಂಕರ್‌, ಶಸ್ತ್ರಾಸ್ತ್ರಗಳು ಹಾಗೂ ಸುರಂಗ ಮಾರ್ಗದ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಆಸ್ಪತ್ರೆಯು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಆದರೆ ಈ ಬಾರಿ ದಾಳಿ ನಡೆಸಿ 20ಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆಗೈದಿದೆ.

ಇದನ್ನೂ ಓದಿ Israel Palestine War: ಜೀವಕ್ಕೆ ಕುತ್ತಾದ ನೆರವಿನ ತುತ್ತು: ವಿಮಾನದಿಂದ ಎಸೆದ ಪ್ಯಾಕ್‌ 5 ಜನರನ್ನು ಕೊಂದಿತು

ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಫಾಯ್ಕ್ ಅಲ್-ಮಭೌಹ್ ಕೂಡ ಸೇರಿದ್ದಾರೆ. ಅವರು ಹಮಾಸ್ ಆಂತರಿಕ ಭದ್ರತಾ ಸಂಸ್ಥೆಯಲ್ಲಿ ವಿಶೇಷ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ಗಾಜಾ ಪೋಲೀಸ್ ಮೂಲವು ಅವರ ಸಾವನ್ನು ದೃಢಪಡಿಸಿದೆ.

“ಉತ್ತರ ಗಾಜಾದ ಅಲ್-ಶಿಫಾ ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ನಾವು ಭಯಭೀತರಾಗಿದ್ದೇವೆ. ಆಸ್ಪತ್ರೆಗಳು ಎಂದಿಗೂ ಯುದ್ಧಭೂಮಿಯಾಗಬಾರದು” ಎಂದು ಡಬ್ಲ್ಯುಹೆಚ್ ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಮಾಡಿದ ದಾಳಿಗೆ ಇದುವರೆಗೆ 1,400 ಜನ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ಪ್ರತಿದಾಳಿಗೆ 21,500 ಮಂದಿ ಹತರಾಗಿದ್ದಾರೆ.‌

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಸತ್ಯಂ ಶಿವಂ ಸುಂದರಂ

ನನ್ನ ದೇಶ ನನ್ನ ದನಿ ಅಂಕಣ: ಶತಕೋಟಿ ಹಿಂದೂಗಳ ಪರಮೇಶ್ವರ ಇನ್ನೆಷ್ಟು ಕಾಯಬೇಕು? ಕಾದಿದ್ದು ಸಾಕು. ನಮಗೆ ಮುಕ್ತಿ ದಯಪಾಲಿಸುವ ಆ ಮುಕ್ತಿನಾಥನಿಗೆ ಇನ್ನಾದರೂ ವಿಮೋಚನೆಯಾಗಲಿ.

VISTARANEWS.COM


on

varanasi nandi
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ: ಭಾರತವನ್ನು ತುಂಡರಿಸಲಿಚ್ಛಿಸುವ ವಿಚ್ಛಿದ್ರಕಾರೀ ಶಕ್ತಿಗಳು ವಿಜೃಂಭಿಸುತ್ತಿವೆ! ಆಸುರೀ ಶಕ್ತಿಗಳೇ ಹಾಗೆ. ನಿಜ. ಅಬ್ಬರ ಜಾಸ್ತಿ. ಸನಾತನ ಧರ್ಮದ ಬಗೆಗೆ ಅಣು ಪ್ರಮಾಣದ ಅರಿವು ಇಲ್ಲದಿದ್ದರೂ, ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತ ಎಂಬುದು ಶತಪ್ರತಿಶತ ಅಬದ್ಧ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದ್ದರೂ, ದ್ರಾವಿಡ ಪಕ್ಷದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವವರು ನಾಲಿಗೆ ಹರಿಬಿಡುತ್ತಾರೆ. ಇನ್ನು ಕೆಲ “ಸಜ್ಜನರು” ಶ್ರೀರಾಮನ ಬಗೆಗೇ ವಿಷ ಕಾರುತ್ತಾರೆ.

ನಿಜ, ಇದು ಎಂದೆಂದಿಗೂ ಮುಗಿಯದ ಹೋರಾಟ. ಶ್ರೀರಾಮ ಜನ್ಮಭೂಮಿ ದೇವಾಲಯದ ಪುನರ್ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆಗಳು ಒಂದು ಹಂತಕ್ಕೆ ಬರುತ್ತಿದ್ದಂತೆ ಭಾರತ-ವಿರೋಧೀ ಶಕ್ತಿಗಳಿಗೆ ಸಹಿಸಲಾರದಂತಹ ಸಂಕಟ.

ಭಾರತವನ್ನು ಜೋಡಿಸುವ ಹೆಸರಿನಲ್ಲಿ, ಜನರನ್ನು ಒಂದುಗೂಡಿಸುವ ಬದಲು, ಕೆಲವರು ಇನ್ನಷ್ಟು ವಿಭಜನೆಗೆ ಸನ್ನಾಹ ಮಾಡುತ್ತಿದ್ದಾರೆ. ಇನ್ನು ಕೆಲವರು ಉತ್ತರ ಭಾರತ – ದಕ್ಷಿಣ ಭಾರತಗಳನ್ನು ಬೇರೆ ಬೇರೆ ಮಾಡಲು ಹವಣಿಸುತ್ತಿದ್ದಾರೆ. ಕರ್ನಾಟಕದ ಕುಡಿಯುವ ನೀರನ್ನೂ ತಮಿಳುನಾಡಿಗೆ ಹರಿಸಿದವರು, ದಕ್ಷಿಣ ಭಾರತವೇ ಪ್ರತ್ಯೇಕವಾಗಬೇಕು ಎನ್ನುತ್ತಾರೆ. ಕರ್ನಾಟಕದ ಹಣ ಉತ್ತರ ಭಾರತಕ್ಕೆ ಹೋಗುತ್ತಿದೆ, ಎಂದು ಗುರುಗುಟ್ಟುವವರು ತೆರಿಗೆಯನ್ನೇ ಕಟ್ಟದ ಸಮುದಾಯಗಳಿಗೆ ತೆರಿಗೆದಾರರ ಕೋಟಿಕೋಟಿ ಹಣವನ್ನು ಸುರಿಯುತ್ತಾರೆ. ದೇವಾಲಯಗಳ ಹಣ ಸೂರೆಮಾಡಿ, ಚರ್ಚು – ಮಸೀದಿಗಳಿಗೆ ಬಹಳ ದೊಡ್ಡ ಮೊತ್ತವನ್ನು ಹಂಚಿ ಮೆರೆಯುತ್ತಿದ್ದಾರೆ.

ಸೋಮನಾಥನ, ಶ್ರೀರಾಮನ ದೇವಾಲಯಗಳ ವಿಮೋಚನೆಯಾಗಲು ಏಳೆಂಟು ದಶಕಗಳೇ ಬೇಕಾದವು. ಇದೀಗ ಮಥುರೆ – ಕಾಶಿಗಳು ಕಾಯುತ್ತಿವೆ.

ಕಾಶಿಯನ್ನು ಧ್ವಂಸ ಮಾಡಿದವನು ಬರೀ ಔರಂಗಜೇಬನಷ್ಟೇ ಅಲ್ಲ. ವಿಗ್ರಹ ಭಂಜನೆಗೇ ಕುಖ್ಯಾತನಾದ ಇಸ್ಲಾಮೀ ದಾಳಿಕೋರ ಕುತ್ಬುದ್ದೀನ್ ಐಬಕ್, ಸಾಮಾನ್ಯ ಯುಗದ ೧೧೯೪ರಲ್ಲಿ ಇದೇ ಕಾಶಿ ವಿಶ್ವನಾಥನ ದೇವಾಲಯವನ್ನು ಧ್ವಂಸ ಮಾಡಿದ. ಆ ಕಾಲದ (ಸಮಕಾಲೀನ) ಮುಸ್ಲಿಂ ಇತಿಹಾಸಕಾರ ಹಸನ್ ನಿಜಾಮಿ ದಾಖಲಿಸಿರುವಂತೆ, ಒಂದು ಸಾವಿರ ದೇವಾಲಯಗಳನ್ನು ನಾಶ ಮಾಡಿ ಲೂಟಿ ಮಾಡಿದ ಐಶ್ವರ್ಯವನ್ನು, ಈ ಐಬಕ್ ಹದಿನೆಂಟು ಒಂಟೆಗಳ ಮೇಲೆ ಮುನ್ನೂರು ಆನೆಗಳ ಮೇಲೆ ಕೊಂಡೊಯ್ದ. ಅಷ್ಟೇ ಅಲ್ಲ, ಸುಪ್ರಸಿದ್ಧ ಸಾರನಾಥ್ ಸೇರಿದಂತೆ, ಅನೇಕ ಬೌದ್ಧ ದೇವಾಲಯಗಳನ್ನೂ ಧ್ವಂಸ ಮಾಡಿದ. ಇಂದು ಸಾರನಾಥದ ಎಲ್ಲೆಡೆ ಕಾಣುವ ಧ್ವಂಸಾವಶೇಷಗಳನ್ನು ನೋಡಿದರೆ, ಮನಸ್ಸು – ನಾಲಿಗೆ – ಹೃದಯಗಳು ಕಹಿಯಾಗಿಬಿಡುತ್ತವೆ.

vikram sampath

ಭಾರತೀಯರು ತಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸಿದವರಲ್ಲ. ಇಂದಿಗೂ ನಿಲ್ಲಿಸಬೇಕಿಲ್ಲ. ಸಾ|| ಯುಗದ ೧೨೧೨ರಲ್ಲಿ ಬಂಗಾಳದ ಸೇನ್ ವಂಶದ ರಾಜ ವಿಶ್ವರೂಪನು, ಕಾಶಿಗೆ ಬಂದು, ವಿಶ್ವನಾಥನ ದೇವಾಲಯದ ತಾಣದಲ್ಲಿಯೇ “ಈ ನಗರವು ವಿಶ್ವೇಶ್ವರನದು” ಎಂದು ಬರೆಸಿದ ಕಂಬವೊಂದನ್ನು ಸ್ಥಾಪಿಸಿದ. ಪೂರ್ವ ಭಾರತದ ರಾಜರೂ ದೇವಾಲಯ ಪುನರ್-ಸ್ಥಾಪನೆಯ ಈ ಹೋರಾಟದಲ್ಲಿ ಕೈಜೋಡಿಸಿದರು. ಗುಜರಾತ್ ಪ್ರಾಂತದ ವ್ಯಾಪಾರಿ ಸೇಠ್ ವಸ್ತುಪಾಲನು ೧೨೩೦ರಲ್ಲಿ ಒಂದು ಲಕ್ಷ ಸ್ವರ್ಣ ವರಹಗಳನ್ನು ಅರ್ಪಿಸಿ ಪುನರ್ನಿರ್ಮಾಣಕ್ಕೆ ಚಾಲನೆ ನೀಡಿದ. ಈ ನಿರ್ಮಾಣ ಕಾರ್ಯಕ್ಕೆ ಕನಿಷ್ಠ ನಲವತ್ತು ಐವತ್ತು ವರ್ಷಗಳು ಬೇಕಾದವು.

ಪೂರ್ವ-ಪಶ್ಚಿಮ, ಉತ್ತರ – ದಕ್ಷಿಣ ಎಂದು ಮತ್ತೆ ಮತ್ತೆ ನಮ್ಮ ದೇಶವನ್ನು ವಿಚ್ಛೇದಿಸುವ, ತುಂಡು ತುಂಡು ಮಾಡುವ ಉದ್ದೇಶದ ದೇಶದ್ರೋಹಿಗಳು ಈ ಎಲ್ಲ ಐತಿಹಾಸಿಕ ಸಂಗತಿಗಳನ್ನೂ ಅಧ್ಯಯನ ಮಾಡಬೇಕಿದೆ. ಜಾತಿ, ವರ್ಣ, ಪ್ರಾಂತ, ಭಾಷೆಗಳ ಮೇಲೆ ಜನರನ್ನು ಒಡೆದು ಆಳುವ ದುರ್ಬುದ್ಧಿಜೀವಿಗಳನ್ನು ನಮ್ಮ ಜನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ.

ಅದೊಂದು ದುರ್ಭರ ಕಾಲ. ಇಸ್ಲಾಮೀ ದುರಾಡಳಿತಕ್ಕೆ ಕಾಶಿಯ ಪ್ರಾಂತ್ಯ ಸಿಲುಕಿತ್ತು. ತಮ್ಮ ದೇಶದಲ್ಲಿಯೇ ಕಾಫಿರರೆನಿಸಿಕೊಂಡ ದೌರ್ಭಾಗ್ಯದ ಹಿಂದೂಗಳು ಅತ್ಯಂತ ಅವಮಾನಕಾರವಾದ ಜಿಜಿಯಾ ತೆರಿಗೆಯನ್ನು ತೆರಬೇಕಿತ್ತು. ಅದೂ ತುಂಬಾ ಹೀನಾಯವಾಗಿ. ಜಿಜಿಯಾ ಕಿತ್ತುಕೊಳ್ಳುವ ಲೂಟಿಕೋರನು ಕುದುರೆಯ ಮೇಲೆ ಕುಳಿತು ದರ್ಪದಿಂದ ವಸೂಲಿ ಮಾಡುತ್ತಿದ್ದ. ತೆರಿಗೆದಾರರು ದೈನ್ಯದಿಂದ ಬರಿಗಾಲಲ್ಲಿ ಹೋಗಿ, ಜೀಹುಜೂರ್ ಸಲ್ಲಿಸಿ ಜಿಜಿಯಾ ತೆರಬೇಕಿತ್ತು. ಆದರೇನು. ಹಿಂದೂಗಳ ಧರ್ಮಶ್ರದ್ಧೆ ಅನುಪಮವಾದುದು. ಕಾಶಿಯ ವಿಶ್ವನಾಥನ ದರ್ಶನ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ನಮ್ಮ ಕರ್ನಾಟಕದ ಹೊಯ್ಸಳರ ಮೂರನೆಯ ವೀರನರಸಿಂಹನು ಕಾಶಿಯ ಯಾತ್ರಿಕರು ಈ ತೆರಿಗೆ ಪಾವತಿಸಲು ನೆರವಾಗಲು, ಹೆಬ್ಬಾಳೆ ಎಂಬ ಗ್ರಾಮದ ಪೂರ್ಣ ಆದಾಯವನ್ನೇ ಮೀಸಲಾಗಿಟ್ಟಿದ್ದ. ಇತ್ತೀಚಿನ ಉತ್ಖನನದಲ್ಲಿ ವೀರನರಸಿಂಹನ ಶಿಲಾಶಾಸನವೊಂದು ಬೆಳಕಿಗೆ ಬಂದಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಪಕ್ಕದ ಆಂಧ್ರದ ತೆಲುಗು ಕವಿ ಶ್ರೀನಾಥನು ವಿಜಯನಗರದ ಆಸ್ಥಾನ ಕವಿ. ಅವನು ಕಾಶಿ ಖಂಡವನ್ನು ತೆಲುಗಿಗೆ ಅನುವಾದಿಸಿದ್ದಾನೆ. ಭಾಷೆಯ ಹೆಸರಿನಲ್ಲಿ ಭಾರತೀಯರನ್ನು ಒಡೆದು ಆಳುವ ದ್ರೋಹಿಗಳಿಗೆ, ಅವರ ಕೊರಳಪಟ್ಟಿ ಹಿಡಿದು ನಮ್ಮ ಜನ ಈ ಅಂಶವನ್ನು ತಿಳಿಸಬೇಕಿದೆ, ಪ್ರಶ್ನಿಸಬೇಕಿದೆ.

ಇಸ್ಲಾಮೀ ದಾಳಿಯ ಅಮಾನುಷ ಹೊಡೆತಕ್ಕೆ ಸಿಲುಕಿ ಕಾಶಿಯ ಅನೇಕ ವಿದ್ವಾಂಸರು – ಪಂಡಿತರು ದಕ್ಷಿಣ ಭಾರತದ ಅನೇಕ ಪ್ರಾಂತಗಳಿಗೆ ವಲಸೆ ಬಂದರು. ಭಟ್ಟ, ಶೇಷ, ಧರ್ಮಾಧಿಕಾರಿ ಮೊದಲಾದ ಉಪನಾಮಗಳ ಈ ವಿದ್ವಾಂಸರು, ಮತ್ತೆ ಕಾಶಿಗೆ ಹಿಂತಿರುಗಿ ಅಲ್ಲಿಯ ವಿದ್ವತ್-ಪುನರುತ್ಥಾನಕ್ಕೆ ಶ್ರಮಿಸಿದರು. ಕೆಲವು ಮೂರ್ಖರು ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕ ಮಾಡಲು ನಿರಾಕರಿಸಿದಾಗ, ಕಾಶಿಯಿಂದ ಬಂದ ಗಾಗಾ ಭಟ್ಟರು ಈ ಪಟ್ಟಾಭಿಷೇಕವನ್ನು ನಿರ್ವಹಿಸಿದುದು ಇತಿಹಾಸವೇ ಆಗಿದೆ. ವಿಶೇಷವೆಂದರೆ, ಅಂತಹ ವಲಸೆಯ ಋತ್ವಿಕರಾದ ದೀಕ್ಷಿತರೇ ಶ್ರೀರಾಮ ಜನ್ಮಭೂಮಿ ದೇವಾಲಯದ ಇತ್ತೀಚಿನ ಪ್ರಾಣಪ್ರತಿಷ್ಠೆಯ ಸೂತ್ರಧಾರರಾಗಿದ್ದುದು ಗಮನಿಸಬೇಕಾದುದು.

೧೪ನೆಯ ಶತಮಾನದಲ್ಲಿ ಜೌನಪುರದ ನವಾಬ ಮತ್ತೆ ಕಾಶಿಯ ದೇವಾಲಯವನ್ನು ಧ್ವಂಸ ಮಾಡಿದ. ಮತ್ತೆ ನಿರ್ಮಿಸಲ್ಪಟ್ಟ ದೇವಾಲಯವನ್ನು ಸಿಕಂದರ್ ಲೋಧಿಯು ನೆಲಸಮ ಮಾಡಿದ. ಯಾರಪ್ಪಾ, ಈ ಲೋಧಿ ಎನ್ನುವಿರೋ? ದೆಹಲಿಯಲ್ಲಿ ಲೋಧಿ ಎಸ್ಟೇಟ್, ಲೋಧಿ ರೋಡ್, ಲೋಧಿ ಕಾಲೋನಿ ಇತ್ಯಾದಿ ಇತ್ಯಾದಿ ಇವೆಯಲ್ಲಾ, ಆ ಲೋಧಿ ವಂಶದವನೇ ಈತ. ಭಾರತದ ರಾಜಧಾನಿಯಲ್ಲಿ ಅಕ್ಬರ್ ರೋಡ್, ಬಾಬರ್ ರೋಡ್, ಔರಂಗಜೇಬ್ ರೋಡ್, ಮೊದಲಾದವನ್ನು ಹೆಸರಿಸಿದವರು, ಹಾಗೆ ಹೆಸರಿಸಿ ಧನ್ಯರಾದವರು ಮತ್ತು ಬ್ರಿಟಿಷರಿಗೆ ಪ್ರೀತಿಪಾತ್ರರಾಗಿ ಅವರಿಂದ ಅಧಿಕಾರ ಹಸ್ತಾಂತರ ಪಡೆದವರೇ. ಇಂದು ಆ ದಾಳಿಕೋರರ ಹೆಸರುಗಳನ್ನು ಬದಲಾಯಿಸಬೇಕೆಂದರೆ ಅಡ್ಡಗಾಲು ಹಾಕುತ್ತಿರುವವರೂ ಈ ಬ್ರಿಟಿಷ್ ಪ್ರೀತಿಪಾತ್ರರ ವಂಶೀಕರೇ!

ಲೋಧಿಯ ಅನಂತರ ಹಿಂದೂಗಳು ಮತ್ತೆ ಕಾಶಿಯ ವಿಶ್ವನಾಥನ ದೇವಾಲಯದ ಮರು-ನಿರ್ಮಾಣಕ್ಕೆ, ನಾರಾಯಣ ಭಟ್ಟರ ನೇತೃತ್ವದಲ್ಲಿ ರಾಜಾ ತೋಡರಮಲ್ ಸಹಾಯ ಪಡೆದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ಸಂಕ್ರಮಣ ಕಾಲದಲ್ಲಿ ಹಿಂದೂಗಳ ಸಹಾಯ ನಿರೀಕ್ಷಿಸಿದ್ದ ಪರ್ಷಿಯನ್ನರು

ಔರಂಗಜೇಬನು ಇಸ್ಲಾಮಿನ ಕಡುನಿಷ್ಠ ಅನುಯಾಯಿ. ತನ್ನ ಮತಶ್ರದ್ಧೆಗೆ ಅನುಸಾರವಾಗಿ ಮಥುರೆ – ಕಾಶಿಗಳೂ ಸೇರಿದಂತೆ, ಅಕ್ಷರಶಃ ಸಾವಿರಾರು ದೇವಾಲಯಗಳನ್ನು ಧ್ವಂಸ ಮಾಡಿದ. ಆ ಅವಧಿಯಲ್ಲಿ ಮತ್ತು ಅನಂತರದಲ್ಲಿ ಅನೇಕ ಮರಾಠಾ ರಾಜರು, ಈ ಹಿಂದೂ ದೇವಾಲಯಗಳನ್ನು ಹಿಂಪಡೆಯಲು ಶ್ರಮಿಸಿದರೂ ಅದೇಕೋ ಸಾಧ್ಯವೇ ಆಗಲಿಲ್ಲ. ಮಲ್ಹಾರ್ ರಾವ್ ಹೋಳ್ಕರ್ ಸಹ ಕಾಶಿಯನ್ನು ಪಡೆಯಲು ಯತ್ನಿಸಿದರು. ಅದೂ ಸಾಧ್ಯವಾಗಲಿಲ್ಲ. ವಿಶೇಷವೆಂದರೆ, ಅವರ ಸೊಸೆ ಅಹಲ್ಯಾಬಾಯಿ ಹೋಳ್ಕರ್ ಅವರು ಮೂಲ ಕಾಶಿ ದೇವಾಲಯದ ಪಕ್ಕದಲ್ಲಿ ಹೊಸದೊಂದು ದೇವಾಲಯವನ್ನೇ ನಿರ್ಮಿಸಿದರು. ಅದೇ ಇಂದು ನಮ್ಮ ನಡುವೆ ಇರುವ ದೇವಾಲಯ. ಹಿಮಾಲಯದಿಂದ ಮೊದಲ್ಗೊಂಡು ನಮ್ಮ ಗೋಕರ್ಣವೂ ಸೇರಿದಂತೆ, ಇಡೀ ಭಾರತದಲ್ಲಿ ಅಹಲ್ಯಾಬಾಯಿ ಅವರು ಅನೇಕ ದೇವಾಲಯಗಳನ್ನು ನಿರ್ಮಿಸಿದರು, ಜೀರ್ಣೋದ್ಧಾರ ಮಾಡಿಸಿದರು. ಪ್ರತಿಕೂಲ ವಾತಾವರಣದಲ್ಲಿಯೂ ಅವರ ಈ ಸಾಹಸವು ಸನಾತನ ಧರ್ಮದ ಪುನರುತ್ಥಾನದ ಅಪೂರ್ವ ಘಟ್ಟವಾಗಿದೆ. ಕನ್ನಡ, ಮರಾಠೀ, ತೆಲುಗು, ತಮಿಳು ಎಂದೆಲ್ಲಾ ಭೇದ ಮಾಡಿ ಹೊಸ ಹೊಸ ವಿಚ್ಛಿದ್ರಕಾರೀ ಸಿದ್ಧಾಂತಗಳನ್ನು ಹೆಣೆಯುವ ದ್ರೋಹಿ ಅಕಾಡೆಮಿಷಿಯನ್ನರು ಈ ಸಂಗತಿಗಳನ್ನು ಅಪ್ಪಿತಪ್ಪಿ ಉಲ್ಲೇಖಿಸುವುದಿಲ್ಲ. ೧೮೩೫ರಲ್ಲಿ ಪಂಜಾಬಿನ ಸಿಂಹ, ಸಿಖ್ ದೊರೆ ರಣಜಿತ್ ಸಿಂಹರು ಕಾಶಿ ವಿಶ್ವನಾಥನ ಈ ದೇವಾಲಯದ ಗೋಪುರಕ್ಕೆ ಒಂದು ಟನ್ ತೂಕದ ಚಿನ್ನದ ತಗಡುಗಳನ್ನು ಹೊದಿಸುವ ಸೇವೆ ಸಲ್ಲಿಸಿದರು. ಹಿಂದೂಗಳ – ಸಿಖ್ಖರ ನಡುವೆ ಖಲಿಸ್ತಾನವನ್ನು ಹುಟ್ಟುಹಾಕಿದ ಬೆಳೆಸಿದ ದೇಶದ್ರೋಹಿಗಳಿಗೆ, ಜನರೇ ಈ ಅಂಶವನ್ನು ತಿಳಿಸಬೇಕಿದೆ.

ಶತಕೋಟಿ ಹಿಂದೂಗಳ ಪರಮೇಶ್ವರ ಇನ್ನೆಷ್ಟು ಕಾಯಬೇಕು? ಕಾದಿದ್ದು ಸಾಕು. ನಮಗೆ ಮುಕ್ತಿ ದಯಪಾಲಿಸುವ ಆ ಮುಕ್ತಿನಾಥನಿಗೆ ಇನ್ನಾದರೂ ವಿಮೋಚನೆಯಾಗಲಿ. ಶೀಘ್ರವಾಗಿ ನಂದಿಯ ಪ್ರತೀಕ್ಷೆಗೆ ಒಂದು ಸಕಾರಾತ್ಮಕ ಅಂತ್ಯ ದೊರೆಯಲಿ. ಸತ್ಯಂ ಶಿವಂ ಸುಂದರಂ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್

Continue Reading
Advertisement
Mukesh Khanna rejects Ranveer Singh as Shaktimaan
ಬಾಲಿವುಡ್9 mins ago

Mukesh Khanna: ʻಶಕ್ತಿಮಾನ್ʼ ಆಗುವ ಯೋಗ್ಯತೆ ರಣವೀರ್‌ಗೆ ಇಲ್ಲ ಎಂದ ಮಹಾಭಾರತದ ʻಭೀಷ್ಮʼ!

narendra modi rumen radev
ದೇಶ17 mins ago

PM Narendra Modi: ಮೋದಿಗೆ ಥ್ಯಾಂಕ್ಸ್‌ ಹೇಳಿದ ಬಲ್ಗೇರಿಯಾ ಅಧ್ಯಕ್ಷ, ಮೋದಿ ಉತ್ತರ ಹೀಗಿತ್ತು

Lok Sabha Election 2024 HD Kumaraswamy contest from Mandya and Congress candidate to be replaced
Lok Sabha Election 202418 mins ago

Lok Sabha Election 2024: ಮಂಡ್ಯದಿಂದ ಎಚ್‌ಡಿಕೆ ಕಣಕ್ಕೆ? ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಬದಲು?

Ravichandran Ashwin
ಕ್ರೀಡೆ19 mins ago

IPL 2024: ಆರ್​ಸಿಬಿ-ಚೆನ್ನೈ ಪಂದ್ಯದ ಟಿಕೆಟ್​ಗಾಗಿ ಸಹಾಯ ಕೋರಿದ ಸ್ಟಾರ್​ ಆಟಗಾರ ಅಶ್ವಿನ್

Explosives found near School in Bengaluru
ಬೆಂಗಳೂರು37 mins ago

Explosives Found : ಬೆಂಗಳೂರಿನ ಶಾಲೆ ಬಳಿ ಬೃಹತ್‌ ಪ್ರಮಾಣದ ಸ್ಫೋಟಕ ಪತ್ತೆ, ಮತ್ತೆ ಆತಂಕ

KL Rahul
ಕ್ರೀಡೆ51 mins ago

IPL 2024: ಐಪಿಎಲ್​ಗೆ ಕನ್ನಡಿಗ ರಾಹುಲ್‌ ಫಿಟ್‌; ಆದರೆ…

Pralhad Joshi Santhosh lad
ವೈರಲ್ ನ್ಯೂಸ್1 hour ago

Pralhad Joshi : ಸಂತೋಷ್‌ ಲಾಡ್‌ ದಿನಾ ಮೋದಿಗೆ ಬಯ್ಯೋದ್ಯಾಕೆ: ರಹಸ್ಯ ಬಿಚ್ಚಿಟ್ಟ ಜೋಶಿ!

hanuman chalisa case
ಪ್ರಮುಖ ಸುದ್ದಿ1 hour ago

ಹನುಮಾನ್‌ ಚಾಲೀಸಾ ಕೇಸ್:‌ ಐದು ಮಂದಿ ಬಂಧನ, ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

Delhi
ದೇಶ2 hours ago

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

Kannada New Movie Pavan Kumar Wadeyar New Movie
ಸ್ಯಾಂಡಲ್ ವುಡ್2 hours ago

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು17 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌