Pulwama Attack: ಸರ್ಕಾರದ ತಪ್ಪಿನಿಂದಲೇ ಪುಲ್ವಾಮಾ ದಾಳಿ! ರಾಹುಲ್ ಗಾಂಧಿಗೆ ಸಂದರ್ಶನ ನೀಡಿದ ಸತ್ಯಪಾಲ್ ಮಲಿಕ್ - Vistara News

ದೇಶ

Pulwama Attack: ಸರ್ಕಾರದ ತಪ್ಪಿನಿಂದಲೇ ಪುಲ್ವಾಮಾ ದಾಳಿ! ರಾಹುಲ್ ಗಾಂಧಿಗೆ ಸಂದರ್ಶನ ನೀಡಿದ ಸತ್ಯಪಾಲ್ ಮಲಿಕ್

Pulwma Attack: 2019ರ ಫೆಬ್ರವರಿ 14ರಂದು ಸಂಭವಿಸಿದ ಪುಲ್ವಾಮಾ ಆತ್ಮಹತ್ಯಾ ಉಗ್ರ ಕೃತ್ಯದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು.

VISTARANEWS.COM


on

Pulwama attack is the fault of the government, Satya Pal Malik Says to Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪುಲ್ವಾಮಾ ದಾಳಿ(Pulwama Attack), ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ (Jammu and Kashmir), ಅದಾನಿ (Adani Group) ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik) ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿಶೇಷ ಎಂದರೆ, ಈ ಸಂದರ್ಶನವನ್ನು ಯಾವುದೇ ಪತ್ರಕರ್ತ ಮಾಡಿಲ್ಲ. ಬದಲಿಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರೇ ಸಂದರ್ಶನ ನಡೆಸಿದ್ದಾರೆ. ರಾಹುಲ್ ಗಾಂಧಿ ಪತ್ರಕರ್ತರಾಗಿಯೂ ಬದಲಾಗಿದ್ದಾರೆ! ಪುಲ್ವಾಮಾ ದಾಳಿ ಕುರಿತು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದ ಮಾಹಿತಿಯನ್ನು ಸತ್ಯಪಾಲ್ ಪಾಲ್ ಮಲಿಕ್ ಅವರು ರಾಹುಲ್ ಗಾಂಧಿ ಅವರಿಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದ್ದಾರೆ.

”ನಮ್ಮ ತಪ್ಪಿನಿಂದಾಗಿಯೇ ಪುಲ್ವಾಮಾ ದಾಳಿ ನಡೆಯಿತು. ತಪ್ಪಿನ ಬಗ್ಗೆಯೂ ಎಲ್ಲಿಯೂ ಮಾತನಾಡದಂತೆ ನನಗೆ ತಿಳಿಸಲಾಯಿತು. ಬಹುಶಃ ತನಿಖೆಯ ಕಾರಣಕ್ಕೆ ಹೀಗೆ ಹೇಳಿಬೇಕೆಂದು ನಾನು ಅಂದುಕೊಂಡಿದ್ದೆ. ಆದರೆ, ಯಾವ ತನಿಖೆಯೂ ನಡೆಯಲಿಲ್ಲ. ಆ ದಾಳಿಯನ್ನು ಚುನಾವಣೆಯ ಉದ್ದೇಶಕ್ಕೆ ಬಳಸಿಕೊಳ್ಳಲಾಯಿತು. ದಾಳಿ ನಡೆದ ಮೂರನೇ ದಿನಕ್ಕೆ ಭಾಷಣ ಮಾಡಿದ ಪ್ರಧಾನಿ ಮೋದಿ, ದಾಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು,” ಎಂದು ಸತ್ಯಪಾಲ್ ಮಲಿಕ್ ಮತ್ತೊಮ್ಮೆ ಹೇಳಿದ್ದಾರೆ.

ಪುಲ್ವಾಮಾ ದಾಳಿ ಯಾಕಾಗಿ ನಡೆಯಿತು. ಅವರು(ಸಿಆರ್‌ಪಿಎಫ್) ಐದು ವಿಮಾನಗಳನ್ನು ಕೇಳಿದ್ದರು. ಒಂದೊಮ್ಮೆ ನನಗೆ ಕೇಳಿದ್ದರೆ ನಾನು ಕೊಡುತ್ತಿದ್ದೆ. ಹಿಮದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ವಿಮಾನ ಒದಗಿಸಿದ್ದೇನೆ ನಾನು. ದಿಲ್ಲಿಯಿಂದ ಬಾಡಿಗೆ ಮೂಲಕ ವಿಮಾನಗಳನ್ನು ಪಡೆದುಕೊಳ್ಳುವುದು ತುಂಬ ಸುಲಭವಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಅರ್ಜಿ ಗೃಹ ಸಚಿವಾಲಯದಲ್ಲಿ ನಾಲ್ಕು ತಿಂಗಳವರೆಗೆ ಧೂಳು ಹಿಡಿದಿತ್ತು. ಬಳಿಕ, ಅರ್ಜಿಯನ್ನು ತಿರಸ್ಕರಿಸಲಾಯಿತು. ಅನಿವಾರ್ಯವಾಗಿ ಸಿಆರ್‌ಪಿಎಫ್ ಸಿಬ್ಬಂದಿ, ಅಸುರಕ್ಷಿತವಾಗಿರುವ ರಸ್ತೆ ಮಾರ್ಗ ಮೂಲಕ ಬರಬೇಕಾಯಿತು ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಸತ್ಯಪಾಲ್ ಜತೆಗಿನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿರುವ ರಾಹುಲ್ ಗಾಂಧಿ ಅವರು, ”ಈ ಸಂದರ್ಶನವು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮಧ್ಯೆ ಸ್ಪರ್ಧೆಗೆ ಕಾರಣವಾಗುತ್ತಾ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಿಂದ ಸ್ಫೋಟಕಗಳನ್ನು ಕಳುಹಿಸಲಾಗಿತ್ತು ಮತ್ತು ಈ ಸ್ಪೋಟಕಗಳನ್ನು ತುಂಬಿದ್ದ ವಾಹನ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಸಂಚರಿಸುತ್ತಲೇ ಇತ್ತು. ಆ ವಾಹನದ ಚಾಲಕ ಮತ್ತು ಮಾಲೀಕನಿಗೆ ಭಯೋತ್ಪಾದನೆಯ ನಂಟಿತ್ತು. ಅವರನ್ನು ಈ ಹಿಂದೆ ಅನೇಕ ಬಾರಿ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಹಾಗಿದ್ದೂ, ಅವರು ಗುಪ್ತಚರ ಸಂಸ್ಥೆಗಳ ನಿಗಾದ ವ್ಯಾಪ್ತಿಯಲ್ಲೇ ಇರಲಿಲ್ಲ ಎಂದು ಸತ್ಯಪಾಲ್ ಮಲಿಕ್ ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: Amit Shah: ಪುಲ್ವಾಮಾ ದಾಳಿ ಬಗ್ಗೆ ಸತ್ಯಪಾಲ್ ಮಲಿಕ್​ ಹೇಳಿದ್ದು ನಿಜವೇ ಆಗಿದ್ದರೆ..; ಅಮಿತ್​ ಶಾ ಕೇಳಿದ ಪ್ರಶ್ನೆ ಏನು?

ನನ್ನನ್ನು ರೂಮಿನಲ್ಲಿ ಕೂಡಿ ಹಾಕಿದರು!

ನಾನು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋದಾಗ, ಪ್ರಧಾನಿ ಮೋದಿ ಇದ್ದಾರೆಂಬ ಕಾರಣಕ್ಕೆ ಏರ್‌ಪೋರ್ಟ್ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಿದರು. ಆಗ ನನಗೆ ಇದೊಂದು ಕಾರ್ಯಕ್ರಮವೇ ಅನ್ನಿಸಲಾರಂಭಿಸಿತು. ರೂಮಿನಿಂದ ಹೊರ ಬಂದು ಶ್ರದ್ಧಾಂಜಲಿ ಸಲ್ಲಿಸಲು ಭಾರೀ ಕಷ್ಟಪಟ್ಟೆ. ಇದೊಂದು ಅಗೌರವದ ನಡುವಳಿಕೆಯಾಗಿತ್ತು ಎಂದು ರಾಹುಲ್ ಗಾಂಧಿ ಅವರು ಇದೇ ವೇಳೆ ಹೇಳಿದರು.

ಅದಾನಿ ಬಗ್ಗೆ ಸತ್ಯಪಾಲ್ ಮಲಿಕ್ ಅವರು, ಎಂಎಸ್‌ಪಿ ಕುರಿತು ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂಬ ಸಂಗತಿಯನ್ನು ರಾಹುಲ್ ಗಾಂಧಿ ಅವರೊಂದಿಗೆ ಹಂಚಿಕೊಂಡರು. ಅದಾನಿ ಬೃಹತ್ ಗೋಡೌನ್‌ಗಳನ್ನು ನಿರ್ಮಿಸಿದ್ದಾರೆ, ಬೆಳೆಗಳನ್ನು ಖರೀದಿಸಿದ್ದಾರೆ. ಮುಂದಿನ ವರ್ಷ, ಅವುಗಳ ಬೆಲೆಗಳು ಹೆಚ್ಚಾಗುತ್ತವೆ ಮತ್ತು ಅದಾನಿ, ಆಗ ಖರೀದಿಸದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾನೆ. ಒಂದೊಮ್ಮೆ ಎಂಎಸ್‌ಪಿ ಜಾರಿಗೊಳಿಸಿದರೆ, ಒಬ್ಬ ರೈತನೂ ತನ್ನ ಉತ್ಪನ್ನಗಳನ್ನು ಅದಾನಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುವುದಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

Harsh Vardhan: ಕೇಂದ್ರದ ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರ ಹೆಸರು ಇರಲಿಲ್ಲ. ಇದರ ಬೆನ್ನಲ್ಲೇ ನಿವೃತ್ತಿ ಘೋಷಿಸಿದ್ದಾರೆ.

VISTARANEWS.COM


on

Harsh Vardhan
Koo

ನವದೆಹಲಿ: ಬಿಜೆಪಿ ಹಿರಿಯ ನಾಯಕ, ದೆಹಲಿ ಸಂಸದ ಡಾ. ಹರ್ಷವರ್ಧನ್‌ (Harsh Vardhan) ಅವರು ರಾಜಕೀಯವನ್ನೇ ತೊರೆದಿದ್ದಾರೆ. ಬಿಜೆಪಿಯು ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಡಾ. ಹರ್ಷವರ್ಧನ್‌ ಅವರ ಕ್ಷೇತ್ರವಾದ ದೆಹಲಿ ಚಾಂದಿನಿ ಚೌಕ್‌ ಲೋಕಸಭೆ ಕ್ಷೇತ್ರದಲ್ಲಿ ಪ್ರವೀಣ್‌ ಖಂಡೇಲ್ವಾಲ್‌ (Praveen Khandelwal) ಅವರಿಗೆ ಪಕ್ಷವು ಟಿಕೆಟ್‌ ನೀಡಿದೆ. ಇದರ ಬೆನ್ನಲ್ಲೇ, ಹರ್ಷವರ್ಧನ್‌ ಅವರು ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

“ನಾನು ಕಳೆದ 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ಐದು ವಿಧಾನಸಭೆ ಹಾಗೂ ಎರಡು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಹಾಗೆಯೇ, ಪಕ್ಷ ವಹಿಸಿದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ. ಈಗ ನಾನು ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ. ನಾನು ಮತ್ತೆ ನನ್ನ ಮೂಲ ಉದ್ಯೋಗವಾದ ವೈದ್ಯ ವೃತ್ತಿಗೆ ಮರಳುತ್ತೇನೆ. ದೆಹಲಿ ಆರೋಗ್ಯ ಸಚಿವ ಹಾಗೂ ಕೇಂದ್ರ ಆರೋಗ್ಯ ಸಚಿವನಾಗಿ ನಾನು ನಿರ್ವಹಿಸಿದ ಕೆಲಸವು ತೃಪ್ತಿ ತಂದಿದೆ. ಇದುವರೆಗೆ ನನಗೆ ಅವಕಾಶ ಕೊಟ್ಟ ಬಿಜೆಪಿ ಹಿರಿಯ ನಾಯಕರು, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಹರ್ಷವರ್ಧನ್‌ ಅವರು ಪೋಸ್ಟ್‌ ಮಾಡಿದ್ದಾರೆ. ಬಿಜೆಪಿಯ ಗೌತಮ್‌ ಗಂಭೀರ್‌ ಹಾಗೂ ಜಯಂತ್‌ ಸಿನ್ಹಾ ಅವರು ಕೂಡ ಈಗಾಗಲೇ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಖನೌ, ಸ್ಮೃತಿ ಇರಾನಿ ಅವರು ಅಮೇಥಿಯಿಂದ, ಕಿರಣ್‌ ರಿಜಿಜು ಅರುಣಾಚಲ ಪಶ್ಚಿಮ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ, ಕೇರಳದ ಪಥಣಂತಿಟ್ಟದಿಂದ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ, ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿರುವನಂತಪುರಂನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

ಉತ್ತರ ಪ್ರದೇಶದ ಮಥುರಾದಿಂದ ಹೇಮಾಮಾಲಿನಿ, ಉನ್ನಾವೋದಿಂದ ಸಾಕ್ಷಿ ಮಹಾರಾಜ್‌, ತೆಲಂಗಾಣದ ಕರೀಂ ನಗರದಿಂದ ಬಂಡಿ ಸಂಜೀವ್‌ ಕುಮಾರ್‌, ಸಿಕಂದರಾಬಾದ್‌ ಜಿ. ಕಿಶನ್‌ ರೆಡ್ಡಿ ಅವರಿಗೂ ಬಿಜೆಪಿ ಹೈಕಮಾಂಡ್‌ ಮಣೆ ಹಾಕಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ವಿದಿಶಾದಿಂದ ಟಿಕೆಟ್‌ ನೀಡಲಾಗಿದೆ. ಇನ್ನುಳಿದಂತೆ ದೆಹಲಿ ಉತ್ತರ ಮನೋಜ್‌ ತಿವಾರಿ ಅವರು ಕಣಕ್ಕಿಳಿದಿದ್ದಾರೆ. ಉತ್ತರ ಗೋವಾದಿಂದ ಶ್ರೀಪಾದ್‌ ನಾಯಕ್‌ ಅವರು ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

BJP candidate list : ಪವನ್ ಸಿಂಗ್ ಬಂಗಾಳಿ ಮಹಿಳೆಯರ ಬಗ್ಗೆ ಅನುಚಿತ ಪದಗಳನ್ನು ಬಳಸಿದ್ದಾರೆ ಎಂಬ ಆರೋಪಗಳಿವೆ.

VISTARANEWS.COM


on

Pawan Singh
Koo

ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಬಿಜೆಪಿ ಲೋಕಸಭಾ ಟಿಕೆಟ್ ಪಡೆದ (BJP candidate list) ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು ಉಮೇದುವಾರಿಕೆಯ ಅವಕಾಶವನ್ನು ತಿರಸ್ಕರಿಸಿದ್ದಾಎರ. ಕೆಲವು ‘ಕಾರಣಗಳಿಂದಾಗಿ’ ಈ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖ ರಾಜಕೀಯ ವ್ಯಕ್ತಿಗಳ ಹೆಸರುಗಳಿವೆ.

“ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಪಕ್ಷವು ನನ್ನನ್ನು ನಂಬಿತು ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್​ನಿಂದ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ ಕೆಲವು ಕಾರಣಗಳಿಂದಾಗಿ ನಾನು ಅಸನ್ಸೋಲ್​ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ” ಎಂದು ಪವನ್ ಸಿಂಗ್ ಹೇಳಿಕೊಂಡಿದ್ದಾರೆ.

ಹೊರಗುಳಿಯಲು ಕಾರಣವೇನು?

ವರದಿಯ ಪ್ರಕಾರ, ಪವನ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಅರಾಹ್ ಸ್ಥಾನದಿಂದ ಬಿಜೆಪಿ ಟಿಕೆಟ್​ ಬಯಸಿದ್ದರು. ಬಿಹಾರದ ಅರಾಹ್ ಅವರಿಗೆ ಸುರಕ್ಷಿತ ಸ್ಥಾನವಾಗಿದೆ. ಯಾಕೆಂದರೆ ಅದು ಬಿಜೆಪಿಯ ಭದ್ರಕೋಟೆಯಾಗಿದೆ. 2019 ರ ಚುನಾವಣೆಯಲ್ಲಿ ಆರ್.ಕೆ.ಸಿಂಗ್ ಮೂಲಕ ಕೇಸರಿ ಪಕ್ಷವು ಈ ಸ್ಥಾನವನ್ನು ಗೆದ್ದಿತ್ತು.

ಸಿಂಗ್ ಅವರು ಅಸನ್ಸೋಲ್ ಟಿಕೆಟ್ ನಿರಾಕರಿಸಲು ಮತ್ತೊಂದು ಕಾರಣವೆಂದರೆ ಬಿಹಾರ ಮೂಲದ ಮತ್ತು ಈ ಹಿಂದೆ ಬಿಜೆಪಿ ಸಂಸದರಾಗಿದ್ದ ಶತ್ರುಘ್ನ ಸಿನ್ಹಾ. ಹಿರಿಯ ನಟ ಸಿನ್ಹಾ ಅವರು ಪವನ್ ಸಿಂಗ್ ಅವರಿಗೆ ಮನರಂಜನಾ ಉದ್ಯಮದಲ್ಲಿ ತಂದೆಯಂತೆ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಪವನ್​ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಂಗ್ ಅವರಿಗೆ ಸಹಾಯ ಮಾಡಿದ್ದರು.

ಅಸನ್ಸೋಲ್​ನಿಂದ ಬಿಜೆಪಿ ಟಿಕೆಟ್ ನಿರಾಕರಿಸುವುದು ಸೂಕ್ತವೆಂದು ಪವನ್ ಸಿಂಗ್ ಭಾವಿಸಿದ್ದಾರೆ. ಈಗ, ಬಿಜೆಪಿ ಸಿಂಗ್ ಅವರನ್ನು ಬೇರೆ ಯಾವುದೇ ಸ್ಥಾನದಿಂದ ಕಣಕ್ಕಿಳಿಸುತ್ತದೆಯೇ ಅಥವಾ ಪಟ್ಟಿಯಿಂದ ಕೈಬಿಡುತ್ತದೆಯೇ ಎಂದು ನೋಡಬೇಕಾಗಿದೆ.

ಇದನ್ನೂ ಓದಿ : BJP Candidates List : ಬಿಜೆಪಿಯ ಈ ನಾಲ್ವರು ವಿವಾದಾತ್ಮಕ ಸಂಸದರಿಗೆ ಈ ಬಾರಿ ಟಿಕೆಟಿಲ್ಲ!

ವಿವಾದವಾಗಿತ್ತು

38 ವರ್ಷದ ಭೋಜಪುರಿ ಗಾಯಕನಿಗೆ ಟಿಕೆಟ್ ನೀಡಿರುವುದು ಭಾರಿ ವಿವಾದವನ್ನು ಹುಟ್ಟುಹಾಕಿತು. ಅವರ ಸಂಗೀತದಲ್ಲಿ ಬಂಗಾಳಿ ಮಹಿಳೆಯರ ಬಗ್ಗೆ ಅನುಚಿತ ಉಲ್ಲೇಖಗಳಿವೆ ಎಂಬ ಆರೋಪಗಳನ್ನು ಮುನ್ನೆಲೆಗೆ ತರಲಾಗಿದೆ.

ಏತನ್ಮಧ್ಯೆ, ಜಾರ್ಖಂಡ್​ನ ಹಜಾರಿಬಾಗ್ ಜಯಂತ್ ಸಿನ್ಹಾ ಮತ್ತು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ನಂತರ ಮುಂಬರುವ ಲೋಕಸಭಾ ಚುನಾವಣೆಯಿಂದ ಹೊರಗುಳಿದ ಮೂರನೇ ಬಿಜೆಪಿ ನಾಯಕ ಪವನ್ ಸಿಂಗ್.

Continue Reading

ಪ್ರಮುಖ ಸುದ್ದಿ

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Accident News : ರಾಬಿಜ್​ ಮಿಂಜ್​ ಅವರನ್ನು ಗುಜರಾತ್​ ಟೈಟಲ್ಸ್​ ಮುಂದಿನ ಆವೃತ್ತಿಯ ಐಪಿಎಲ್​ಗಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

VISTARANEWS.COM


on

Robin Minz
Koo

ನವದೆಹಲಿ: ಐಪಿಎಲ್ 2024 ರ ಹರಾಜಿನಲ್ಲಿ ಸುದ್ದಿಯಾಗಿದ್ದ ಜಾರ್ಖಂಡ್​​ನ ಭರವಸೆಯ ಬುಡಕಟ್ಟು ಸಮುದಾಯದ ಕ್ರಿಕೆಟಿಗ ರಾಬಿನ್ ಮಿನ್ಜ್ ಅಪಘಾತಕ್ಕೊಳಗಾಗಿದ್ದಾರೆ (Accident News) ಎಂದು ಅವರ ತಂದೆ ಭಾನುವಾರ ತಿಳಿಸಿದ್ದಾರೆ. ಐಪಿಎಲ್​​ನ ಮಾಜಿ ಚಾಂಪಿಯನ್ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 21 ವರ್ಷದ ಮಿನ್ಜ್​ ಅವರನ್ನು 3.60 ಕೋಟಿ ರೂ.ಗೆ ಖರೀದಿಸಿದೆ. ವರದಿಯ ಪ್ರಕಾರ, ದೊಡ್ಡ ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಮಿನ್ಜ್​, ಕವಾಸಕಿ ಸೂಪರ್ ಬೈಕ್ ಸವಾರಿ ಮಾಡುತ್ತಿದ್ದಾಗ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡಿದ್ದಾರೆ. ತಂದೆ ಫ್ರಾನ್ಸಿಸ್ ಮಿನ್ಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ರಾಬಿನ್ ಹೋಗುತತಿದ್ದ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಗಂಭೀರ ಗಾಯವಾಗಿಲ್ಲ. ಫ್ರಾನ್ಸಿಸ್ ಹೇಳಿದ್ದಾರೆ.

ವರದಿಯ ಪ್ರಕಾರ, ಅಪಘಾತದಿಂದಾಗಿ ಬೈಕಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಎಡಗೈ ಬ್ಯಾಟ್ಸ್ಮನ್ ಬಲ ಮೊಣಕಾಲಿಗೆ ಗಾಯಗಳಾಗಿವೆ. ದೊಡ್ಡ ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಮಿನ್ಜ್ ಎಡಗೈ ಬ್ಯಾಟರ್​ ಮತ್ತು ಎಂಎಸ್ ಧೋನಿಯ ನಿಷ್ಠಾವಂತ ಅಭಿಮಾನಿ. ಅವರ ಕ್ರಿಕೆಟ್ ಪ್ರಯಾಣವನ್ನು ಅನುಭವಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ರೂಪಿಸಿದ್ದಾರೆ. ಅವರೇ ಭಾರತದ ಮಾಜಿ ನಾಯಕ ಧೋನಿಗೆ ಕೋಚಿಂಗ್​ ನೀಡಿದವರು.

ಮೂಲತಃ ಜಾರ್ಖಂಡ್​ನ ಗುಮ್ಲಾ ಜಿಲ್ಲೆಯವರಾದ ಮಿನ್ಜ್, ಯುನೈಟೆಡ್ ಕಿಂಗ್​ಡಮ್​ನಲ್ಲಿ ತರಬೇತಿಪಡೆದುಕೊಂಡಿದ್ದಾರೆ. ಪ್ರಸ್ತುತ ಜಾರ್ಖಂಡ್ ರಾಜಧಾನಿ ರಾಂಚಿಯ ನಾಮ್ಕುಮ್ ಪ್ರದೇಶದಲ್ಲಿ ವಾಸಿಸುತ್ತಿರುವ ಮಿಂಜ್, ರಣಜಿ ಟ್ರೋಫಿಯಲ್ಲಿ ಇನ್ನೂ ರಾಜ್ಯವನ್ನು ಪ್ರತಿನಿಧಿಸದಿದ್ದರೂ, ಜಾರ್ಖಂಡ್​ನ ಅಂಡರ್ 19 ಮತ್ತು ಅಂಡರ್ 25 ತಂಡಗಳ ಭಾಗವಾಗಿದ್ದಾರೆ.

ಇದನ್ನೂ ಓದಿ : WTC Ranking : ಭಾರತ ತಂಡವೀಗ ನಂಬರ್​ 1

ಅವರ ತಂದೆ ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದು, ಈಗ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಿನ್ಜ್​ಗೆ ಇಬ್ಬರು ಸಹೋದರಿಯರು ಇದ್ದಾರೆ.

ಮುಂಬೈ ಇಂಡಿಯನ್ಸ್ , ಲಕ್ನೋ ಸೂಪರ್ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ ವಿವಿಧ ಫ್ರಾಂಚೈಸಿಗಳೊಂದಿಗೆ ಮಿಂಚ್​ ಟ್ರಯಲ್ಸ್​ಗೆ ಒಳಗಾಗಿದ್ದರು. ಐಪಿಎಲ್ 2023 ಹರಾಜಿನಲ್ಲಿ ಮಾರಾಟವಾಗದಿದ್ದರೂ, ಮಿನ್ಜ್ ಹಾಲಿ ಆವೃತ್ತಿಯಲ್ಲಿ ಗಮನಾರ್ಹ ವೇತನವನ್ನು ಪಡೆದರು.

Continue Reading

ದೇಶ

Encounter In Kanker: ಛತ್ತೀಸ್‌ಗಢದಲ್ಲಿ ಮಾವೋವಾದಿಗಳೊಂದಿಗೆ ಎನ್‌ಕೌಂಟರ್‌; ಕಾನ್ಸ್‌ಟೇಬಲ್‌ ಹುತಾತ್ಮ

Encounter In Kanker: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್‌ ಹುತಾತ್ಮರಾಗಿದ್ದಾರೆ. ಜತೆಗೆ ಮಾವೋವಾದಿಯೊಬ್ಬ ಸಾವೀಗಿಡಾಗಿದ್ದಾನೆ.

VISTARANEWS.COM


on

Encounter In Kanker
Koo

ನವದೆಹಲಿ: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ (Encounter In Kanker)ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಮತ್ತು ಮಾವೋವಾದಿ (Maoist) ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಡೂರ್ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದರು.

ಹಿಡೂರ್ ಅರಣ್ಯದಲ್ಲಿ ಮಾವೋವಾದಿಗಳ ಅಡಗಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿ ವಿವರಿಸಿದರು. ರಾಜ್ಯ ಪೊಲೀಸ್ ಘಟಕ ಬಸ್ತಾರ್ ಫೈಟರ್ಸ್‌ಗೆ ಸೇರಿದ ಕಾನ್ಸ್‌ಟೇಬಲ್‌ ರಮೇಶ್ ಕುರೇತಿ ಅವರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಸ್ಥಳದಿಂದ ಮಾವೋವಾದಿಯ ಶವ ಮತ್ತು ಎಕೆ -47 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಮಾವೋವಾದಿಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ವಿಶೇಷ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್‌ಗೆ ಸೇರಿದ ಇಬ್ಬರು ಸೇರಿದಂತೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಮೂವರು ಸಿಬ್ಬಂದಿ ಮೃತಪಟ್ಟ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. 2021ರಲ್ಲಿ ಇಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ 23 ಸೈನಿಕರು ಹುತಾತ್ಮರಾಗಿದ್ದರು.

ಇದನ್ನೂ ಓದಿ: ಛತ್ತೀಸ್​ಗಢ್​​ನಲ್ಲಿ ಮತ್ತೆ ನಕ್ಸಲರ ಕ್ರೌರ್ಯ; ಬೆಟ್ಟದ ಬುಡದಲ್ಲಿ ಐಇಡಿ ಸ್ಫೋಟ, ಸಿಆರ್​ಪಿಎಫ್​​ನ ಇಬ್ಬರು ಯೋಧರಿಗೆ ಗಾಯ

Continue Reading
Advertisement
Shreyanka Patil
ಕ್ರೀಡೆ6 mins ago

WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

Viral video us
ವೈರಲ್ ನ್ಯೂಸ್12 mins ago

Viral Video: ಥೂ ಅಸಹ್ಯ! ಹಣಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಶಾಲಾ ನಿರ್ವಾಹಕರು

Harsh Vardhan
ಪ್ರಮುಖ ಸುದ್ದಿ14 mins ago

Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

Shehbaz Shariff
ಪ್ರಮುಖ ಸುದ್ದಿ31 mins ago

Pakistan Prime Minster : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

Nathan Lyon
ಕ್ರೀಡೆ41 mins ago

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

Murder Case Son kills Mother
ಕ್ರೈಂ42 mins ago

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case _ Shootout
ಉಡುಪಿ52 mins ago

Murder Case : ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

Pawan Singh
ಪ್ರಮುಖ ಸುದ್ದಿ60 mins ago

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Mother attack to child
ಬೆಂಗಳೂರು1 hour ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Robin Minz
ಪ್ರಮುಖ ಸುದ್ದಿ2 hours ago

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ11 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು22 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌