Rahul Gandhi: ರಾಹುಲ್‌ ಗಾಂಧಿಗೆ ಹೊಸ ಪಾಸ್‌ಪೋರ್ಟ್;‌ ಸೋಮವಾರ ಅಮೆರಿಕಕ್ಕೆ ಹಾರಲಿರುವ ಕಾಂಗ್ರೆಸ್‌ ನಾಯಕ - Vistara News

ದೇಶ

Rahul Gandhi: ರಾಹುಲ್‌ ಗಾಂಧಿಗೆ ಹೊಸ ಪಾಸ್‌ಪೋರ್ಟ್;‌ ಸೋಮವಾರ ಅಮೆರಿಕಕ್ಕೆ ಹಾರಲಿರುವ ಕಾಂಗ್ರೆಸ್‌ ನಾಯಕ

Rahul Gandhi: ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ರಾಹುಲ್‌ ಗಾಂಧಿ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದಾಗಿದೆ. ಹಾಗಾಗಿ, ಅವರಿಗೀಗ ಸಾಮಾನ್ಯ ಪಾಸ್‌ಪೋರ್ಟ್‌ ನೀಡಲಾಗಿದೆ.

VISTARANEWS.COM


on

Rahul Gandhi Gets Passport
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್‌ ಸಿಕ್ಕಿದ್ದು, ಅವರು ಸೋಮವಾರದಿಂದ (May 29) ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾರಣ ಅವರು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಹಾಗಾಗಿ, ಅವರು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ಅನ್ನು ಹಿಂದಿರುಗಿಸಿದ್ದಾರೆ. ಈಗ ಅವರಿಗೆ ಮೂರು ವರ್ಷದ ಅವಧಿಗೆ ಸಾಮಾನ್ಯ ಪಾಸ್‌ಪೋರ್ಟ್‌ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿದ ಕಾರಣ 10 ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್‌ ಪಡೆಯಲು ಅನುಮತಿ ನೀಡುವಂತೆ ರಾಹುಲ್ ಗಾಂಧಿ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರಣೆ ನಡೆಸುತ್ತಿರುವ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಆದರೆ, ಖಾಸಗಿ ದೂರು ದಾಖಲಿಸಿರುವ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ರಾಹುಲ್ ಗಾಂಧಿಗೆ ಪಾಸ್‌ಪೋರ್ಟ್ ನೀಡಲು ವಿರೋಧ ವ್ಯಕ್ತಪಡಸಿದ್ದರು.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು, ರಾಹುಲ್‌ ಗಾಂಧಿ ಅವರಿಗೆ 10 ವರ್ಷಗಳ ಬದಲಿಗೆ ಮೂರು ವರ್ಷಕ್ಕೆ ಸಾಮಾನ್ಯ ಪಾಸ್‌ಪೋರ್ಟ್‌ ಪಡೆಯಲು ಅನುಮತಿ ನೀಡಿದೆ. ಅದರಂತೆ, ರಾಹುಲ್‌ ಗಾಂಧಿ ಅವರಿಗೆ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್‌ ಸಿಕ್ಕಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಹಣ ವರ್ಗಾವಣೆ ಮತ್ತು ಹಣ ದುರುಪಯೋಗವನ್ನು ಒಳಗೊಂಡ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ, ರಾಹುಲ್ ಗಾಂಧಿ ಅವರು ಪಾಸ್‌ಪೋರ್ಟ್‌ ಪಡೆಯಲು ನ್ಯಾಯಾಲಯವು ಅನುಮತಿ ನೀಡುವುದು ಅಗತ್ಯವಾಗಿತ್ತು.

ರಾಹುಲ್ ಗಾಂಧಿ ಅವರು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೋರ್ಟ್ ತಿಳಿಸಿತ್ತು. ಆದರೆ, ರಾಹುಲ್ ಗಾಂಧಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಎನ್‌ಒಸಿ ನೀಡಲು ಸ್ವಾಮಿ ವಿರೋಧ ವ್ಯಕ್ತಡಿಸಿದ್ದರು. ಆದರೂ ನ್ಯಾಯಾಲಯ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್‌ ನೀಡಿದೆ.

ಇದನ್ನೂ ಓದಿ: Diplomatic passport : ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌, ರಾಹುಲ್‌ ಗಾಂಧಿ ಹಿಂತಿರುಗಿಸಿದ್ದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ

Lok Sabha Election: ಎನ್‌ಡಿಎ, ಬಿಹಾರದಲ್ಲಿ ಎಲ್‌ಜೆಪಿ (ರಾಮ್‌ವಿಲಾಸ್) ಗಾಗಿ ಐದು ಲೋಕಸಭಾ ಸ್ಥಾನಗಳನ್ನು ನೀಡಿದೆ. ಇದರಿಂದ ಅವರ ಚಿಕ್ಕಪ್ಪ ಪರಾಸ್‌ ಸಿಟ್ಟಿಗೆದ್ದಿದ್ದಾರೆ.

VISTARANEWS.COM


on

Pashupati Kumar Paras
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ (Lok Sabha Election) ಮುನ್ನ ಲೋಕಜನ ಶಕ್ತಿ ಪಕ್ಷ (ರಾಮ್‌ವಿಲಾಸ್‌) (Lok Janshakti party- Ram Vilas) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಅವರೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿರುವುದರಿಂದ ಸಿಟ್ಟಿಗೆದ್ದಿರುವ ಚಿರಾಗ್‌ ಚಿಕ್ಕಪ್ಪ ಹಾಗೂ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ (Pashupati Kumar Paras) ಮಂಗಳವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

“ಎನ್‌ಡಿಎ ಮಿತ್ರಪಕ್ಷಗಳನ್ನು ಘೋಷಿಸಲಾಗಿದೆ. ನಾನು ಪ್ರಧಾನಿಗೆ ಕೃತಜ್ಞನಾಗಿದ್ದೇನೆ. ನನ್ನ ಪಕ್ಷ ಮತ್ತು ನಾನು ಅನ್ಯಾಯಕ್ಕೆ ಒಳಗಾಗಿದ್ದೇವೆ. ಹಾಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪರಾಸ್ ಹೇಳಿದ್ದಾರೆ.

ಪರಾಸ್‌ ಅವರು ಚಿರಾಗ್‌ ಪಾಸ್ವಾನ್‌ ಅವರ ಚಿಕ್ಕಪ್ಪ ಆಗಿದ್ದು, ಅವರ ಪ್ರತಿಸ್ಪರ್ಧಿ ಬಣದ ನಾಯಕನಾಗಿದ್ದಾರೆ. 2021ರಲ್ಲಿ ಎಲ್‌ಜೆಪಿ ಅದರ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಬಿಹಾರದಲ್ಲಿ ವಿಭಜನೆಯಾಯಿತು. ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪರಾಸ್ ಅವರು ಪಕ್ಷದಲ್ಲಿ ಪ್ರಾಬಲ್ಯ ಹೊಂದಿದ್ದು, ಐವರು ಸಂಸದರನ್ನು ತಮ್ಮೊಂದಿಗೆ ಕರೆದುಕೊಂಡರು. ಪಾಸ್ವಾನ್ ಅವರ ಮಗ ಚಿರಾಗ್ ಪ್ರತ್ಯೇಕ ಪಕ್ಷವನ್ನು (ಲೋಕಜನ ಶಕ್ತಿ ಪಕ್ಷ- ರಾಮ್‌ವಿಲಾಸ್‌) ರಚಿಸಬೇಕಾಗಿ ಬಂದಿತ್ತು.

ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ, ಚಿರಾಗ್‌ ಅವರ ವಯಸ್ಸು ಮತ್ತು ರಾಜ್ಯದಲ್ಲಿ ಅವರ ಆಕ್ರಮಣಕಾರಿ ಬೆಳವಣಿಗೆಯನ್ನು ಕಂಡಿದ್ದು, ಅವರನ್ನು ಬಿಹಾರ ರಾಜಕೀಯದ ದೀರ್ಘಾವಧಿಯ ಆಟಗಾರನಾಗಿ ಗುರುತಿಸಿದೆ. ರ್ಯಾಲಿಗಳಲ್ಲಿ ದೊಡ್ಡ ಜನಸಮೂಹವನ್ನು ಸೆಳೆಯುವ ಚಿರಾಗ್ ಪಾಸ್ವಾನ್ ಅವರ ಸಾಮರ್ಥ್ಯವನ್ನು ಗ್ರಹಿಸಿದ ಎನ್‌ಡಿಎ, ಬಿಹಾರದಲ್ಲಿ ಎಲ್‌ಜೆಪಿ (ರಾಮ್‌ವಿಲಾಸ್) ಗಾಗಿ ಐದು ಲೋಕಸಭಾ ಸ್ಥಾನಗಳನ್ನು ಹಂಚಿತು. ದಿವಂಗತ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ವಾರಸುದಾರರು ಚಿರಾಗ್‌ ಎಂದು ಬಿಜೆಪಿ ಈ ನಡೆಯ ಮೂಲಕ ಒತ್ತಿಹೇಳಿದಂತಾಗಿದೆ.

ಇದರಿಂದ ರೊಚ್ಚಿಗೆದ್ದಿರುವ ಪಾರಸ್ ಅವರು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದರು. ಅಲ್ಲಿ ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಯಿತು. “ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವಾಗ ನಮ್ಮ ಪಕ್ಷಕ್ಕೆ ಸರಿಯಾದ ಗೌರವ ನೀಡಿಲ್ಲ. ಈಗ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಂತ್ರರಾಗಿದ್ದೇವೆ” ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಸೋಮವಾರದ ಸಭೆಯಲ್ಲಿ ಪರಾಸ್ ಅವರಲ್ಲದೆ, ಸಂಸದರಾದ ಪ್ರಿನ್ಸ್ ರಾಜ್ (ಸಮಸ್ತಿಪುರ), ಚಂದನ್ ಸಿಂಗ್ (ನವಾಡ), ಮತ್ತು ಮಾಜಿ ಸಂಸದ ಸೂರಜ್‌ಭಾನ್ ಸಿಂಗ್ ಉಪಸ್ಥಿತರಿದ್ದರು. ಬಿಹಾರದಲ್ಲಿ ಆಪ್ ಮಹಾ ಮೈತ್ರಿಕೂಟದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆದಿದೆ. ವರದಿಗಳ ಪ್ರಕಾರ, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್) ಗೆ ಹಂಚಿಕೆಯಾಗಿರುವ ಹಾಜಿಪುರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಪರಾಸ್ ತಿಳಿಸಿದ್ದಾರೆ.

ಸೀಟು ಹಂಚಿಕೆಯಾದ ನಂತರ ಚಿರಾಗ್ ಪಾಸ್ವಾನ್ ಶಿಬಿರ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಪರಾಸ್ ನೇತೃತ್ವದ ಪ್ರತಿಸ್ಪರ್ಧಿ ಬಣವನ್ನು ಬಿಜೆಪಿ ನಿರ್ಲಕ್ಷಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಸಂತೋಷಗೊಂಡರು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ; ಯಾವ ಸಮೀಕ್ಷೆ, ಎಷ್ಟು ಸೀಟು?

Continue Reading

ದೇಶ

PM Narendra Modi: ಮೋದಿಗೆ ಥ್ಯಾಂಕ್ಸ್‌ ಹೇಳಿದ ಬಲ್ಗೇರಿಯಾ ಅಧ್ಯಕ್ಷ, ಮೋದಿ ಉತ್ತರ ಹೀಗಿತ್ತು

PM Narendra Modi: ಕಳೆದ ವರ್ಷ ಡಿಸೆಂಬರ್ 14ರಂದು ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಎಂವಿ ರುಯೆನ್ ಅನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ರಕ್ಷಿಸಿತು.

VISTARANEWS.COM


on

narendra modi rumen radev
Koo

ಹೊಸದಿಲ್ಲಿ: ತಮ್ಮ ದೇಶದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಗೆ (Indian Navy) ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಬಲ್ಗೇರಿಯಾದ ಅಧ್ಯಕ್ಷ (Bulgarian President) ರುಮೆನ್ ರಾದೇವ್ (Rumen Radev) ಅವರು ಧನ್ಯವಾದ ಸಲ್ಲಿಸಿದ್ದಾರೆ. “ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರಯಾನ ಸ್ವಾತಂತ್ರ್ಯವನ್ನು ರಕ್ಷಿಸಲು, ಕಡಲ್ಗಳ್ಳತನ (Piracy) ಮತ್ತು ಭಯೋತ್ಪಾದನೆಯನ್ನು (terrorism) ಎದುರಿಸಲು ಭಾರತ ಬದ್ಧವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದಾರೆ.

ರುಮೆನ್ ರಾದೇವ್ ಅವರು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. “ಏಳು ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆಯ ಕೆಚ್ಚೆದೆಯ ಕಾರ್ಯಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು” ಎಂದು ಅವರು ಟ್ವೀಟ್‌ ಮಾಡಿದ್ದರು.

ತಮ್ಮ ಪ್ರತ್ಯುತ್ತರದಲ್ಲಿ, ಮೋದಿ ಅವರು, ““ಏಳು ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತವಾಗಿರುವುದು ಮತ್ತು ಶೀಘ್ರದಲ್ಲೇ ಮನೆಗೆ ಮರಳುತ್ತಿರುವುದು ನಮಗೆ ಸಂತೋಷ ತಂದಿದೆ. ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ” ಎಂದಿದ್ದಾರೆ.

ಅಪಹರಣಕ್ಕೊಳಗಾದ ಎಂವಿ ರುಯೆನ್ ಹಡಗನ್ನು ಯಶಸ್ವಿಯಾಗಿ ರಕ್ಷಿಸಿದ್ದಕ್ಕಾಗಿ ಭಾರತ, ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಬಲ್ಗೇರಿಯಾದ ಉಪಪ್ರಧಾನಿ ಭಾನುವಾರ ಧನ್ಯವಾದಗಳನ್ನು ಅರ್ಪಿಸಿದ್ದರು. “ಅಪಹರಣಕ್ಕೊಳಗಾದ ನೌಕೆ ರೂಯೆನ್‌, 7 ಬಲ್ಗೇರಿಯನ್ ಪ್ರಜೆಗಳು ಸೇರಿದಂತೆ ಸಿಬ್ಬಂದಿಯನ್ನು ರಕ್ಷಿಸಲು ಯಶಸ್ವಿ ಕಾರ್ಯಾಚರಣೆಗಾಗಿ ಭಾರತೀತ ನೌಕಾಪಡೆಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಸಿಬ್ಬಂದಿಯ ಜೀವಗಳನ್ನು ರಕ್ಷಿಸಲು ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಬಲ್ಗೇರಿಯನ್ ಸಚಿವ ಮರಿಯಾ ಗೇಬ್ರಿಯಲ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಸ್ನೇಹಿತರು ಇರುವುದೇ ಇದಕ್ಕಾಗಿ” ಎಂದು ಜೈಶಂಕರ್ ಉತ್ತರಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 14ರಂದು ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಎಂವಿ ರುಯೆನ್ ಅನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ರಕ್ಷಿಸಿತು. 35 ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿದೆ. ಬಲ್ಗೇರಿಯಾ ಮಾಲೀಕತ್ವದ MV ರುಯೆನ್‌ನ ಅಪಹರಣ, 2017ರಿಂದ ಸೊಮಾಲಿ ಕಡಲ್ಗಳ್ಳರು ಸರಕು ಹಡಗನ್ನು ಹತ್ತಿದ ಮೊದಲ ನಿದರ್ಶನ. ಎಲ್ಲಾ ಸಿಬ್ಬಂದಿಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಭಾರತೀಯ ನೌಕಾಪಡೆ ಕಾರ್ಯಾಚರಣೆ

ಐಎನ್‌ಎಸ್ ಕೋಲ್ಕತ್ತಾ ಕಾರ್ಯಾಚರಣೆಯನ್ನು ಮುನ್ನಡೆಸಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ನೌಕಾಪಡೆಯು ತನ್ನ P-8I ಕಡಲ ಗಸ್ತು ವಿಮಾನವನ್ನು, ಮುಂಚೂಣಿ ಹಡಗುಗಳಾದ INS ಕೋಲ್ಕತ್ತಾ ಮತ್ತು INS ಸುಭದ್ರ ಮತ್ತು ಎತ್ತರದ ದೀರ್ಘ-ಸಹಿಷ್ಣುತೆ (HALE) ಮಾನವರಹಿತ ವೈಮಾನಿಕ ವಾಹನವನ್ನು ಬಳಸಿಕೊಂಡಿತು. ಭಾರತೀಯ ವಾಯುಪಡೆಯ C-17 ವಿಮಾನವು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ʼಆಪರೇಷನ್ ಸಂಕಲ್ಪ್’ ಅನ್ನು ಬೆಂಬಲಿಸಿತು.

40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ, INS ಕೋಲ್ಕತ್ತಾ ಭಾರತೀಯ ಕರಾವಳಿಯಿಂದ ಸುಮಾರು 2600 ಕಿಮೀ ದೂರದಲ್ಲಿ ಕಡಲ್ಗಳ್ಳರ ದಾಳಿಗೆ ಒಳಗಾಗಿದ್ದ MV ರುಯೆನ್ ಅನ್ನು ತಡೆಹಿಡಿಯಿತು. ವ್ಯಾಪಾರಿ ಹಡಗನ್ನು ಡಿಸೆಂಬರ್ 2023ರಲ್ಲಿ ಹೈಜಾಕ್ ಮಾಡಲಾಗಿತ್ತು. ಇಲ್ಲಿಯವರೆಗೂ ಸೊಮಾಲಿಯನ್ ಕಡಲ್ಗಳ್ಳರ ನಿಯಂತ್ರಣದಲ್ಲಿತ್ತು. ಡಿಸೆಂಬರ್‌ನಲ್ಲಿ ಯೆಮೆನ್‌ನ ಸೊಕೊಟ್ರಾ ದ್ವೀಪದಿಂದ ಪೂರ್ವಕ್ಕೆ 380 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸೊಮಾಲಿ ಕಡಲ್ಗಳ್ಳರು ಅದನ್ನು ವಶಪಡಿಸಿಕೊಂಡಿದ್ದರು. ನಂತರ MV ರುಯೆನ್ ಮತ್ತು ಅದರ 17 ಸಿಬ್ಬಂದಿಯನ್ನು ಸೊಮಾಲಿಯಾದ ಅರೆ ಸ್ವಾಯತ್ತ ರಾಜ್ಯವಾದ ಪಂಟ್‌ಲ್ಯಾಂಡ್‌ಗೆ ಕರೆದೊಯ್ದರು.

ಇದನ್ನೂ ಓದಿ: Ship Hijacked: ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್;‌ ನೌಕಾಪಡೆ ಕಟ್ಟೆಚ್ಚರ

Continue Reading

ದೇಶ

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

ನೂತನ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ ದೆಹಲಿಯು(delhi pollution) ಅತ್ಯಂತ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ.

VISTARANEWS.COM


on

Delhi
Koo

ನವದೆಹಲಿ: ನೂತನ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ(World Air Quality) ಬಿಹಾರದ ಬೇಗುಸರಾಯ್(Bihars Begusarai) ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್(polluted metropolitan) ಪ್ರದೇಶವಾಗಿ ಮತ್ತು ದೆಹಲಿಯು(delhi pollution) ಅತ್ಯಂತ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ.

ನೂತನ ವರದಿಯ ಪ್ರಕಾರ ಭಾರತ ಪ್ರತಿ ಕ್ಯೂಬಿಕ್​ ಮೀಟರ್‌ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ 134 ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 2022ರಲ್ಲಿ, ಪ್ರತಿ ಕ್ಯೂಬಿಲ್​ ಮೀಟರ್‌ಗೆ ಸರಾಸರಿ 53.3 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಭಾರತವು ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು.

ಇದನ್ನೂ ಓದಿ Air pollution: ದಿಲ್ಲಿ ಮಾತ್ರವಲ್ಲ, ಭಾರತದ ಇನ್ನೂ ಎರಡು ನಗರಗಳ ವಾಯು ವಿಶ್ವದಲ್ಲೇ ಅತಿ ಕಳಪೆ

ಸದ್ಯ ಸ್ವಿಸ್ ಸಂಸ್ಥೆ IQAir ವಿಶ್ವ ವಾಯು ಗುಣಮಟ್ಟ 2023ರ ವರದಿ ಪ್ರಕಾರ ಬಾಂಗ್ಲಾದೇಶ (ಪ್ರತಿ ಕ್ಯೂಬಿಕ್​​ ಮೀಟರ್‌ಗೆ 79.9 ಮೈಕ್ರೋಗ್ರಾಂ) ಮತ್ತು ಪಾಕಿಸ್ತಾನ (ಪ್ರತಿ ಕ್ಯೂಬಿಲ್​ ಮೀಟರ್‌ಗೆ 73.7 ಮೈಕ್ರೋಗ್ರಾಂಗಳು) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಭಾರತ ಮೂರನೇ ಸ್ಥಾನ ಪಡೆದಿದಿದೆ. ಇದೇ ದಿಲ್ಲಿಯಲ್ಲಿ ಇದೇ ರೀತಿಯ ವಾಯುವಾಲಿನ್ಯ ಮುಂದುವರಿದೆ. ಭಾರತವೂ ಕೂಡ ಅಗ್ರಸ್ಥಾನ ಪಡೆಯುವ ದಿನಗಳು ಹೆಚ್ಚು ದೂರ ಇಲ್ಲ ಎನ್ನಲಡ್ಡಿಯಿಲ್ಲ.

ಬಿಹಾರದ ಬೇಗುಸರಾಯ್ ಪ್ರತಿ ಘನ(ಕ್ಯೂಬಿಲ್​) ಮೀಟರ್‌ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ಅಚ್ಚರಿ ಎಂದರೆ 2022ರ ವರದಿಯಲ್ಲಿ ಈ ನಗರ ಕಾಣಿಸಿಕೊಂಡಿರಲಿಲ್ಲ. ದೆಹಲಿಯ PM2.5 ಮಟ್ಟವು 2022 ರಲ್ಲಿ ಘನ ಮೀಟರ್‌ಗೆ 89.1 ಮೈಕ್ರೋಗ್ರಾಂನಿಂದ 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಿಗೆ ಹದಗೆಟ್ಟಿದೆ. 2022ರಲ್ಲಿ ದಿಲ್ಲಿ ಏಷ್ಯಾದ ಕಲುಷಿತ ನಗರದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಕಾಣಿಸಿಕೊಂಡಿದೆ.

ಸೊನ್ನೆ ಮತ್ತು 50 ರ ನಡುವಿನ AQI ಉತ್ತಮ, 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, 401 ಮತ್ತು 450 ತೀವ್ರ ಮತ್ತು 450 ಕ್ಕಿಂತ ಹೆಚ್ಚು ತೀವ್ರ ಎಂದು ಪರಿಗಣಿಸಲಾಗುತ್ತದೆ.

Continue Reading

ದೇಶ

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ(Gaza Hospital) ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ ವೇಳೆ 20 ಪ್ಯಾಲೆಸ್ತೀನ್(Israel Palestine War) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

VISTARANEWS.COM


on

Israeli Forces
Koo

ಟೆಲ್ ಅವೀವ್: ಹಮಾಸ್(Hamas) ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ(Gaza Hospital) ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿದ ವೇಳೆ 20 ಪ್ಯಾಲೆಸ್ತೀನ್(Israel Palestine War) ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.

ಯುದ್ಧ ಟ್ಯಾಂಕರ್‌ಗಳು, ಫಿರಂಗಿಗಳೊಂದಿಗೆ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲ್‌ ಪಡೆಗಳು, ಗುಂಡಿನ ದಾಳಿ ನಡೆಸಿವೆ ಎಂದು ಆಸ್ಪತ್ರೆಯೊಳಗೆ ಆಶ್ರಯ ಪಡೆದಿರುವವರು ಹೇಳಿದ್ದಾರೆ. ಸೇನಾ ಪಡೆಗಳು ಕಟ್ಟಡಗಳ ಮೇಲೆಯೂ ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿವೆ ಎಂದಿದ್ದಾರೆ.

“ಕಾರ್ಯಾಚರಣೆಯ ಸಮಯದಲ್ಲಿ ನಾವು 200 ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದೇವೆ ಮತ್ತು ಅವರು ಪ್ರಸ್ತುತ ತನಿಖೆಯಲ್ಲಿದ್ದಾರೆ. ಆಸ್ಪತ್ರೆಯ ಸಂಕೀರ್ಣದಲ್ಲಿ 20 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದೇವೆ” ಎಂದು ಇಸ್ರೇಲ್‌ನ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್-ಶಿಫಾ ಆಸ್ಪತ್ರೆಯ ಕೆಳಭಾಗದಲ್ಲಿ ಹಲವು ಸೌಕರ್ಯಗಳೊಂದಿಗೆ ಹಮಾಸ್ ಬಂಡುಕೋರರು ಕಮಾಂಡಿಂಗ್‌ ಸೆಂಟರ್ ಹೊಂದಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್‌ ಪಡೆಯು, ವ್ಯಾಪಕ ದಾಳಿ ನಡೆಸುವ ಮೂಲಕ ಬಂಡುಕೋರರ ಅಡಗುದಾಣವನ್ನು ಕಳೆದ ನವೆಂಬರ್‌ನಲ್ಲೇ ನಾಶಪಡಿಸಿತ್ತು. ದಾಳಿಯ ವೇಳೆ ಬಂಡುಕೋರರು ಹೊಂದಿದ್ದ ಬಂಕರ್‌, ಶಸ್ತ್ರಾಸ್ತ್ರಗಳು ಹಾಗೂ ಸುರಂಗ ಮಾರ್ಗದ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಆಸ್ಪತ್ರೆಯು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಆದರೆ ಈ ಬಾರಿ ದಾಳಿ ನಡೆಸಿ 20ಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆಗೈದಿದೆ.

ಇದನ್ನೂ ಓದಿ Israel Palestine War: ಜೀವಕ್ಕೆ ಕುತ್ತಾದ ನೆರವಿನ ತುತ್ತು: ವಿಮಾನದಿಂದ ಎಸೆದ ಪ್ಯಾಕ್‌ 5 ಜನರನ್ನು ಕೊಂದಿತು

ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಫಾಯ್ಕ್ ಅಲ್-ಮಭೌಹ್ ಕೂಡ ಸೇರಿದ್ದಾರೆ. ಅವರು ಹಮಾಸ್ ಆಂತರಿಕ ಭದ್ರತಾ ಸಂಸ್ಥೆಯಲ್ಲಿ ವಿಶೇಷ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ಗಾಜಾ ಪೋಲೀಸ್ ಮೂಲವು ಅವರ ಸಾವನ್ನು ದೃಢಪಡಿಸಿದೆ.

“ಉತ್ತರ ಗಾಜಾದ ಅಲ್-ಶಿಫಾ ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ನಾವು ಭಯಭೀತರಾಗಿದ್ದೇವೆ. ಆಸ್ಪತ್ರೆಗಳು ಎಂದಿಗೂ ಯುದ್ಧಭೂಮಿಯಾಗಬಾರದು” ಎಂದು ಡಬ್ಲ್ಯುಹೆಚ್ ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಮಾಡಿದ ದಾಳಿಗೆ ಇದುವರೆಗೆ 1,400 ಜನ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ಪ್ರತಿದಾಳಿಗೆ 21,500 ಮಂದಿ ಹತರಾಗಿದ್ದಾರೆ.‌

Continue Reading
Advertisement
Virat Kohli's new look
ಕ್ರೀಡೆ3 mins ago

Virat Kohli: ಧೋನಿಯ ಹೇರ್‌ಸ್ಟೈಲ್‌ ಕಾಪಿ ಮಾಡಿದ ವಿರಾಟ್​ ಕೊಹ್ಲಿ

Nagarthpet protest by BJP
ಬೆಂಗಳೂರು8 mins ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

viral video
ಕ್ರೀಡೆ40 mins ago

Imad Wasim: ಡ್ರೆಸ್ಸಿಂಗ್‌ ರೂಮ್​ನಲ್ಲೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಪಾಕ್​ ಆಟಗಾರ

Pashupati Kumar Paras
ಪ್ರಮುಖ ಸುದ್ದಿ40 mins ago

Lok Sabha Election: ಚಿರಾಗ್‌ಗೆ ಮಣೆ ಹಾಕಿದ ಎನ್‌ಡಿಎ, ಸಿಟ್ಟಿಗೆದ್ದ ಕೇಂದ್ರ ಸಚಿವ ಪಶುಪತಿ ಕುಮಾರ್‌ ಪರಾಸ್‌ ರಾಜೀನಾಮೆ

Water crisis Youth climbs mobile tower in Vijayapura
ವಿಜಯಪುರ59 mins ago

Water Crisis: ವಿಜಯಪುರದ ಗ್ರಾಮದಲ್ಲಿ ಕುಡಿಯುವ ನೀರಿಲ್ಲವೆಂದು ಮೊಬೈಲ್‌ ಟವರ್‌ ಏರಿದ ಯುವಕ!

Priyamani donate mechanical elephant
ಸಿನಿಮಾ60 mins ago

Actress Priyamani: ಕೇರಳದ ದೇವಾಲಯವೊಂದಕ್ಕೆ `ಯಾಂತ್ರಿಕ ಆನೆ’ ಉಡುಗೊರೆ ಕೊಟ್ಟ ಪ್ರಿಯಾಮಣಿ!

Murder Case Haveri newsMurder Case Haveri news
ಹಾವೇರಿ1 hour ago

Murder Case : ತನ್ನನ್ನು ಮದುವೆಯಾಗಲು ನಿರಾಕರಿಸಿದ ಸೊಸೆಯನ್ನೇ ಕೊಂದ ಮಾವ!

Illicit relationship Murder Case
ಕ್ರೈಂ1 hour ago

Illicit Relationship : ವಿಜಯಪುರದಲ್ಲಿ ಜೋಡಿ ಕೊಲೆ; ಅಕ್ರಮ ಸಂಬಂಧಕ್ಕಾಗಿ ನಡೆಯಿತಾ ಹತ್ಯೆ?

gold in hand
ಚಿನ್ನದ ದರ1 hour ago

Gold Rate Today: ಬಿಸಿಲಿನಂತೆ ಏರತೊಡಗಿದೆ ಚಿನ್ನದ ಬೆಲೆ ! ಇಂದು ಎಷ್ಟಿದೆ ನೋಡಿ

rohit sharma
ಕ್ರೀಡೆ1 hour ago

IPL 2024: ರೋಹಿತ್ ಬ್ಯಾಟಿಂಗ್​​ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು8 mins ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು19 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌