PayPM | ನೋಟ್‌ ಬ್ಯಾನ್‌ ವರ್ಷಾಚರಣೆ ದಿನ ರಾಹುಲ್ ಗಾಂಧಿಯವರ ಪೇಪಿಎಂ ವಾಗ್ದಾಳಿ - Vistara News

ದೇಶ

PayPM | ನೋಟ್‌ ಬ್ಯಾನ್‌ ವರ್ಷಾಚರಣೆ ದಿನ ರಾಹುಲ್ ಗಾಂಧಿಯವರ ಪೇಪಿಎಂ ವಾಗ್ದಾಳಿ

ನೋಟು ಅಮಾನ್ಯತೆಯ ಆರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೇಪಿಎಂ (PayPM) ಹೆಸರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

paypm
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನೋಟು ಅಮಾನ್ಯತೆಯ 6ನೇ ವರ್ಷಾಚರಣೆಯ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಅವರು ಪೇಸಿಎಂ ಮಾದರಿಯಲ್ಲಿ ಪೇಪಿಎಂ (PayPM) ಪ್ರಧಾನಿ ಎಂಬ ಟೀಕಾಸ್ತ್ರವನ್ನು ಪ್ರಯೋಗಿಸಿದ್ದಾರೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಇತ್ತೀಚೆಗೆ, ಪೇಸಿಎಂ (PayCM) ಹೆಸರಿನಲ್ಲಿ ಡಿಜಿಟಲ್‌ ಅಭಿಯಾನ ನಡೆಸಿತ್ತು. ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ, ಕ್ಯೂ ಆರ್‌ ಕೋಡ್‌ ಹೊಂದಿರುವ ಪೋಸ್ಟರ್‌ಗಳನ್ನು ನಾನಾ ಕಡೆಗಳಲ್ಲಿ ಪ್ರದರ್ಶಿಸಿ ವಿನೂತನ ಬಗೆಯ ಅಭಿಯಾನ ನಡೆಸಲಾಗಿತ್ತು. ಇದು ಉಭಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

ಇದೀಗ ರಾಹುಲ್‌ ಗಾಂಧಿಯವರು 2016ರ ನವೆಂಬರ್‌ 8ರಂದು ಘೋಷಣೆಯಾದ ನೋಟು ಅಮಾನ್ಯತೆಯನ್ನು ಉಲ್ಲೇಖಿಸಿ, ಪೇಪಿಎಂ ಪದ ಬಳಸಿ, ವಾಗ್ದಾಳಿ ನಡೆಸಿದ್ದಾರೆ.

ನೋಟ್‌ ಬ್ಯಾನ್‌ ಎನ್ನುವುದು “ಪೇಪಿಎಂʼ ದುರುದ್ದೇಶಪೂರ್ವಕವಾಗಿ ಕೈಗೊಂಡಿರುವ ಕ್ರಮ. ಪ್ರಧಾನಿ ತನ್ನ 2-3 ಬಿಲಿಯನೇರ್‌ ಉದ್ಯಮಿ ಸ್ನೇಹಿತರ ಅನುಕೂಲಕ್ಕಾಗಿ ನೋಟ್‌ ಬ್ಯಾನ್‌ ಮಾಡಿದರು. ಇದರಿಂದ ಭಾರತದ ಎಕಾನಮಿಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮ ಸರ್ವ ನಾಶವಾಯಿತು ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ನಲ್ಲಿ ವೀಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಅದರಲ್ಲಿ ರಾಹುಲ್‌ ಗಾಂಧಿ ಅವರು ನೋಟು ಅಮಾನ್ಯತೆಯಿಂದ ಆರ್ಥಿಕತೆಗೆ ಅಪಾರ ಹಾನಿಯಾಗಿದೆ ಎಂದು ಬಣ್ಣಿಸಿದ್ದಾರೆ. ನಗದು ರಹಿತ ಆರ್ಥಿಕೆಯನ್ನಾಗಿಸುವಲ್ಲಿ ನೋಟ್‌ ಬ್ಯಾನ್‌ ವಿಫಲವಾಗಿದೆ. ಇದು ವ್ಯವಸ್ಥಿತ ಲೂಟಿಯಾಗಿದೆ. ಲಕ್ಷಾಂತರ ಉದ್ಯೋಗ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ನೋಟು ಅಮಾನ್ಯತೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌, ಅಮರ್ತ್ಯ ಸೇನ್‌ ಮೊದಲಾದವರ ಹೇಳಿಕೆಗಳನ್ನು ವೀಡಿಯೊ ಒಳಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Terrorist Attack: ಪೂಂಚ್​​ನಲ್ಲಿ ಭಯೋತ್ಪಾದಕರ ದಾಳಿ; ಓರ್ವ ಯೋಧ ಹುತಾತ್ಮ, ಐವರ ಸ್ಥಿತಿ ಗಂಭೀರ

Terrorist Attack:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದಾರೆ. ಗಾಯಗೊಂಡಿರು ಯೋಧರು ಜೀವಣ್ಮರಣ ಹೋರಾಟ ನಡೆಸುತ್ತಿದ್ದು, ಅವರನ್ನು ಉದಾಮ್‌ಪುರ ಆಸ್ಪತ್ರೆಗೆ ರವಾನಿಸಲಾಗಿದೆ

VISTARANEWS.COM


on

Terrorist attack
Koo

ನವದೆಹಲಿ: ಜಮ್ಮು ಮತ್ತು ಕಾಶ್ಮೀರ(Jammu-Kashmir)ದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ (Terrorist Attack) ಭಾರಿ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದಾರೆ. ಗಾಯಗೊಂಡಿರು ಯೋಧರು ಜೀವಣ್ಮರಣ ಹೋರಾಟ ನಡೆಸುತ್ತಿದ್ದು, ಅವರನ್ನು ಉದಾಮ್‌ಪುರ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ 6ಗಂಟೆ ಹೊತ್ತಿಗೆ ಜರಾನ್ವಲಿಯಿಂದ ವಾಯುನೆಲೆಗೆ ವಾಪಾಸಾಗುತ್ತಿದ್ದ ವೇಳೆ ಈ ದಾಳಿ ನಡೆದಿದ್ದು, ಈ ಬಗ್ಗೆ ಭಾರತೀಯ ವಾಯುಪಡೆ Xನಲ್ಲಿ ಅಧಿಕೃತ ಮಾಹಿತಿ ನೀಡಿದೆ. ಇನ್ನು AK ರೈಫಲ್ಸ್‌ ಹೊಂದಿದ್ದ ಉಗ್ರರು ಪಕ್ಕದಲ್ಲಿದ್ದ ಕಾಡಿಗೆ ಓಡಿ ಹೋಗಿರುವ ಸಾಧ್ಯತೆ ಹೆಚ್ಚಿದೆ. ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಈ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಶಹಸಿತಾರ್ ಬಳಿಯ ಸಾಮಾನ್ಯ ಪ್ರದೇಶದ ವಾಯುನೆಲೆಯೊಳಗೆ ವಾಹನಗಳನ್ನು ಸುರಕ್ಷಿತಗೊಳಿಸಲಾಗಿದೆ. ಈ ಬಗ್ಗೆ ಮತ್ತಷ್ಟು ತನಿಖೆ ಮುಂದುವರೆದಿದೆ ಎಂದು ಟ್ವೀಟ್‌ ಮಾಡಿದೆ.

ಇನ್ನು ಪೂಚ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಶುಕ್ರವಾರವೇ ಸೇನೆಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಅರೆ ಸೈನಿಕ ಪಡೆ ಮತ್ತು ಪೊಲೀಸರು ಅವರ ಪತ್ತೆಗೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನು ಈ ಆಪರೇಶನ್‌ನಲ್ಲಿ ಇದುವರೆಗೆ ಯಾರೂ ಅರೆಸ್ಟ್‌ ಆಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು‌ ಪೂಂಚ್‌ ಪ್ರದೇಶ ಅನಂತ್‌ನಾಗ್‌ – ರಜೌರಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತಿದ್ದು, ಇಲ್ಲಿ ಮೇ 25ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

ಎರಡು ವಾರದ ಹಿಂದೆ ಜಮ್ಮು-ಕಾಶ್ಮೀರ (Jammu and Kashmir)ದಲ್ಲಿ ಗುಂಡಿನ ಸದ್ದು ಮೊಳಗಿತ್ತು . ಭಯೋತ್ಪಾದಕನ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. (Terrorist Attack). ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಸರ್ಕಾರಿ ನೌಕರ ಮೊಹಮ್ಮದ್ ರಜಾಕ್ ಬಲಿಯಾಗಿದ್ದರು. ರಾಜೌರಿಯ ಶದ್ರಾ ಶರೀಫ್ ಪ್ರದೇಶದ ಮಸೀದಿಯಿಂದ ಹೊರಬಂದ ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ: Prajwal Revanna Case: ಕುಮಾರಸ್ವಾಮಿಯನ್ನು ಭೇಟಿಯಾಗಲು ಒಪ್ಪದ ಅಮಿತ್ ಶಾ; ಹೋಟೆಲ್‌ಗೆ ಬಂದು ವಾಪಸ್ ಹೋದ ಎಚ್ ಡಿ ಕೆ

40 ವರ್ಷದ ಮೊಹಮ್ಮದ್ ರಜಾಕ್ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮೃತ ರಝಾಕ್ ಅವರ ಸಹೋದರ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Paytm : ಪೇಟಿಎಂ ಸಿಒಒ ಭವೇಶ್ ಗುಪ್ತಾ ಏಕಾಏಕಿ ರಾಜೀನಾಮೆ

Paytm: ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ಕಂಪನಿಯು ವರ್ಗಾಯಿಸಿದೆ.

VISTARANEWS.COM


on

Paytm
Koo

ನವದೆಹಲಿ: ಪೇಟಿಎಂನ (Paytm) ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿಯ ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ. ನಾಯಕತ್ವ ಬದಲಾವಣೆಯ ಭಾಗವಾಗಿ, ಫಿನ್ಟೆಕ್ ಸಂಸ್ಥೆ ಪೇಟಿಎಂ ರಾಕೇಶ್ ಸಿಂಗ್ ಅವರನ್ನು ಪೇಟಿಎಂ ಮನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.

ಪೇಟಿಎಂ ಮನಿ ಮುಖ್ಯಸ್ಥರಾಗಿದ್ದ ವರುಣ್ ಶ್ರೀಧರ್ ಅವರನ್ನು ಮ್ಯೂಚುವಲ್ ಫಂಡ್ ಮತ್ತು ಇತರ ಸಂಪತ್ತು ನಿರ್ವಹಣಾ ಉತ್ಪನ್ನಗಳ ವಿತರಣೆಯಲ್ಲಿ ವ್ಯವಹರಿಸುವ ಪೇಟಿಎಂ ಸರ್ವೀಸಸ್ ನ ಸಿಇಒ ಆಗಿ ವರ್ಗಾಯಿಸಲಾಗಿದೆ.

ಪಾವತಿ ಮತ್ತು ಸಾಲ ನೀಡುವ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ವೈಯಕ್ತಿಕ ಕಾರಣಗಳಿಂದಾಗಿ ವೃತ್ತಿ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅವರು ಸಲಹಾ ಪಾತ್ರಕ್ಕೆ ಪರಿವರ್ತನೆಗೊಳ್ಳಲಿದ್ದು ವರ್ಷದ ಅಂತ್ಯದವರೆಗೆ ಪೇಟಿಎಂನ ಬೆಳವಣಿಗೆಯ ಉಪಕ್ರಮಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಕಂಪನಿಯ ನಿರ್ದೇಶಕರ ಮಂಡಳಿಯು ಮೇ 04, 2024 ರಂದು ನಡೆದ ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ಮೇ 04, 2024 ರ ಪತ್ರದ ಮೂಲಕ ಸಲ್ಲಿಸಿದ ರಾಜೀನಾಮೆಯನ್ನು ಪುರಸ್ಕರಿಸಿದೆ. ಮೇ 31, 2024 ರಂದು ವ್ಯವಹಾರದ ಸಮಯ ಮುಗಿಯುವುದರಿಂದ ಅವರನ್ನು ಕಂಪನಿಯ ಸೇವೆಗಳಿಂದ ಮುಕ್ತಗೊಳಿಸಲಾಗುವುದು ಎಂದು ಪೇಟಿಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೇಟಿಎಂ ಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಈ ಕುರತು ಪ್ರತಿಕ್ರಿಯಿಸಿ, ಭವೇಶ್ ಅವರ ಕೊಡುಗೆಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪಾವತಿಗಳು ಮತ್ತು ಸಾಲ ನೀಡುವಿಕೆಯ ಮೇಲೆ ನಮ್ಮ ಗಮನವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮತ್ತು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮ್ಮ ಪ್ರತಿಯೊಂದು ವ್ಯವಹಾರಗಳಲ್ಲಿ ನಾವು ಹೊಂದಿರುವ ಅನುಭವಿ ನಾಯಕರೊಂದಿಗೆ ನಾನು ಕೆಲಸ ಮುಂದುವರಿಸಲಿದ್ದೇವೆ ಎಂದು ಹೇಳಿದರು.

Continue Reading

ಪ್ರಮುಖ ಸುದ್ದಿ

Terrorist Attack : ಪೂಂಚ್​​ನಲ್ಲಿ ಭಯೋತ್ಪಾದಕರ ದಾಳಿ: ನಾಲ್ವರು ವಾಯುಪಡೆ ಸಿಬ್ಬಂದಿಗೆ ಗಾಯ

ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಈ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಶಹಸಿತಾರ್ ಬಳಿಯ ಸಾಮಾನ್ಯ ಪ್ರದೇಶದ ವಾಯುನೆಲೆಯೊಳಗೆ ವಾಹನಗಳನ್ನು ಸುರಕ್ಷಿತಗೊಳಿಸಲಾಗಿದೆ. ಸೇನಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.

VISTARANEWS.COM


on

Terrorist Attack
Koo

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ಭಾರಿ ಗುಂಡಿನ ದಾಳಿ ನಡೆಸಿದ (Terrorist Attack) ಪರಿಣಾಮ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶಕ್ಕೆ ಇನ್ನಷ್ಟು ಸೇನಾ ಪಡೆಯನ್ನು ಕಳುಹಿಸಲಾಗಿದ್ದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ.

ಕಳೆದ ವರ್ಷ ಸೇನೆಯ ಮೇಲೆ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾದ ಈ ಪ್ರದೇಶದಲ್ಲಿ ಈ ವರ್ಷ ಸಶಸ್ತ್ರ ಪಡೆಗಳ ಮೇಲೆ ನಡೆದ ಮೊದಲ ಪ್ರಮುಖ ದಾಳಿ ಇದಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ವಾಹನಗಳ ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಈ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಶಹಸಿತಾರ್ ಬಳಿಯ ಸಾಮಾನ್ಯ ಪ್ರದೇಶದ ವಾಯುನೆಲೆಯೊಳಗೆ ವಾಹನಗಳನ್ನು ಸುರಕ್ಷಿತಗೊಳಿಸಲಾಗಿದೆ. ಸೇನಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Lok Sabha Election : ಕಾಂಗ್ರೆಸ್​ ತೊರೆದ ಲವ್ಲಿ ಸೇರಿ ನಾಲ್ವರಿಂದ ಬಿಜೆಪಿ ಸೇರ್ಪಡೆ

ಈ ದಾಳಿಯಲ್ಲಿ ಯಾವುದೇ ಹಾನಿ ಅಥವಾ ಸಾವುನೋವು ವರದಿಯಾಗಿಲ್ಲ. ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಎರಡು ವಾರದ ಹಿಂದೆ ಉಗ್ರನ ದಾಳಿಗೆ ಸರ್ಕಾರಿ ನೌಕರ ಬಲಿಯಾಗಿದ್ದರು

ಎರಡು ವಾರದ ಹಿಂದೆ ಜಮ್ಮು-ಕಾಶ್ಮೀರ (Jammu and Kashmir)ದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿತ್ತು . ಭಯೋತ್ಪಾದಕನ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. (Terrorist Attack). ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ಸರ್ಕಾರಿ ನೌಕರ ಮೊಹಮ್ಮದ್ ರಜಾಕ್ ಬಲಿಯಾಗಿದ್ದರು. ರಾಜೌರಿಯ ಶದ್ರಾ ಶರೀಫ್ ಪ್ರದೇಶದ ಮಸೀದಿಯಿಂದ ಹೊರಬಂದ ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

40 ವರ್ಷದ ಮೊಹಮ್ಮದ್ ರಜಾಕ್ ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮೃತ ರಝಾಕ್ ಅವರ ಸಹೋದರ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Latest

Lok Sabha Election : ಕಾಂಗ್ರೆಸ್​ ತೊರೆದ ಲವ್ಲಿ ಸೇರಿ ನಾಲ್ವರಿಂದ ಬಿಜೆಪಿ ಸೇರ್ಪಡೆ

Lok Sabha Election: ಎಎಪಿ ಜೊತೆಗಿನ ಮೈತ್ರಿ ಮತ್ತು ಹೈಕಮಾಂಡ್ ಸ್ಥಳೀಯ ನಾಯಕತ್ವಕ್ಕಿಂತ ಹೊರಗಿನವರಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿ ಅವರೆಲ್ಲರೂ ಕಾಂಗ್ರೆಸ್ ತೊರೆದಿದ್ದರು. ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಮತ್ತು ಇತರ ಪಕ್ಷದ ವ್ಯವಹಾರಗಳಲ್ಲಿ ದೆಹಲಿ ಕಾಂಗ್ರೆಸ್ ಘಟಕವು ಬೇಸತ್ತಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕ ಸಭಾ ಚುನಾವಣೆಯ (Lok Sabha Election) ಮೈತ್ರಿ ವಿಚಾರದಲ್ಲಿ ಅಸಮಾಧಾನ ಹೊಂದಿದ್ದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಅರವಿಂದರ್ ಸಿಂಗ್ ಲವ್ಲಿ ಶನಿವಾರ ಭಾರತೀಯ ಜನತಾ ಪಕ್ಷ (BJP) ಸೇರಿದರು. ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ ಕುಮಾರ್ ಚೌಹಾಣ್, ನಸೀಬ್ ಸಿಂಗ್, ನೀರಜ್ ಬಸೋಯಾ ಮತ್ತು ಅಮಿತ್ ಮಲಿಕ್ ಸೇರಿದಂತೆ ಇತರ ನಾಲ್ವರು ಮಾಜಿ ಕಾಂಗ್ರೆಸ್ ನಾಯಕರು ಲವ್ಲಿ ಅವರೊಂದಿಗೆ ಪಕ್ಷಾಂತರಗೊಂಡರು.

ತಮಗೆ ಮತ್ತು ತಮ್ಮ ಸಹೋದ್ಯೋಗಿಗಳಿಗೆ ಬಿಜಪಿ ಸೇರಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಲವ್ಲಿ ಧನ್ಯವಾದ ಅರ್ಪಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ದೊಡ್ಡ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Lok Sabha Election : ಚುನಾವಣೆ ಖರ್ಚಿಗೆ ಹಣ ಕೊಡದ್ದಕ್ಕೆ ಟಿಕೆಟ್​ ವಾಪಸ್​ ಕೊಟ್ಟ ಕಾಂಗ್ರೆಸ್​ ಅಭ್ಯರ್ಥಿ!

ಬಿಜೆಪಿಯ ಬ್ರಾಂಡ್​ ಅಡಿಯಲ್ಲಿ ಮತ್ತು ಪ್ರಧಾನಿಯ ನಾಯಕತ್ವದಲ್ಲಿ ದೆಹಲಿಯ ಜನರಿಗಾಗಿ ಹೋರಾಡಲು ನಮಗೆ ಅವಕಾಶ ನೀಡಲಾಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ. “ನನಗೆ ಸಂಪೂರ್ಣ ಭರವಸೆ ಇದೆ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರವು ಭಾರಿ ಬಹುಮತದೊಂದಿಗೆ ರಚನೆಯಾಗುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮುಂಬರುವ ದಿನಗಳಲ್ಲಿ ದೆಹಲಿಯಲ್ಲೂ ಬಿಜೆಪಿಯ ಬಾವುಟ ಹಾರಾಡಲಿದೆ” ಎಂದು ಮಾಜಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಎಎಪಿ ಜೊತೆಗಿನ ಮೈತ್ರಿ ಮತ್ತು ಹೈಕಮಾಂಡ್ ಸ್ಥಳೀಯ ನಾಯಕತ್ವಕ್ಕಿಂತ ಹೊರಗಿನವರಿಗೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿ ಅವರೆಲ್ಲರೂ ಕಾಂಗ್ರೆಸ್ ತೊರೆದಿದ್ದರು. ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಮತ್ತು ಇತರ ಪಕ್ಷದ ವ್ಯವಹಾರಗಳಲ್ಲಿ ದೆಹಲಿ ಕಾಂಗ್ರೆಸ್ ಘಟಕವು ಬೇಸತ್ತಿದೆ.

ಕನ್ಹಯ್ಯ ಕುಮಾರ್ ಮತ್ತು ಉದಿತ್ ರಾಜ್ ಸೇರಿದಂತೆ ಅಭ್ಯರ್ಥಿಗಳ ಆಯ್ಕೆಯಿಂದ ಲವ್ಲಿ ಮತ್ತು ಇತರ ಕೆಲವು ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ದೆಹಲಿ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಲವ್ಲಿ ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ದೆಹಲಿಯ ಮಾಜಿ ಶಾಸಕರಾದ ನಸೀಬ್ ಸಿಂಗ್ ಮತ್ತು ನೀರಜ್ ಬಸೋಯಾ ಅವರಂತಹ ನಾಯಕರೂ ಪಕ್ಷ ತೊರೆದಿದ್ದಾರೆ.

Continue Reading
Advertisement
Tips To Prevent Curd
ಆಹಾರ/ಅಡುಗೆ4 mins ago

Tips To Prevent Curd: ಮೊಸರು ಹುಳಿಯಾಗದೇ ಇರಲು ಈ ಟಿಪ್ಸ್ ಪಾಲಿಸಿ

Terrorist attack
ದೇಶ23 mins ago

Terrorist Attack: ಪೂಂಚ್​​ನಲ್ಲಿ ಭಯೋತ್ಪಾದಕರ ದಾಳಿ; ಓರ್ವ ಯೋಧ ಹುತಾತ್ಮ, ಐವರ ಸ್ಥಿತಿ ಗಂಭೀರ

HD Revanna
ಕರ್ನಾಟಕ30 mins ago

HD Revanna: ತಡರಾತ್ರಿವರೆಗೂ ರೇವಣ್ಣರನ್ನು ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು

Prawal Revanna Case
ಕರ್ನಾಟಕ1 hour ago

Prajwal Revanna Case: ಕುಮಾರಸ್ವಾಮಿಯನ್ನು ಭೇಟಿಯಾಗಲು ಒಪ್ಪದ ಅಮಿತ್ ಶಾ; ಹೋಟೆಲ್‌ಗೆ ಬಂದು ವಾಪಸ್ ಹೋದ ಎಚ್ ಡಿ ಕೆ

Summer Health Tips
ಆರೋಗ್ಯ1 hour ago

Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

karnataka Weather Forecast
ಮಳೆ2 hours ago

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು; ಉಳಿದೆಡೆ ಗುಡುಗು ಸಹಿತ ಮಳೆ

Vistara Editorial
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ, ನಿಷ್ಪಕ್ಷಪಾತ ತನಿಖೆಯಾಗಲಿ

Drinking Water Before Meals
ಆರೋಗ್ಯ2 hours ago

Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

World Laughter Day
ಆರೋಗ್ಯ3 hours ago

World Laughter Day 2024: ಇಂದು ವಿಶ್ವ ನಗುವಿನ ದಿನ; ನಗುನಗುತ ಬಾಳೋಣ

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌