Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ - Vistara News

ದೇಶ

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

Rajastan Elections 2023: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಹೊಸ್ತಿಲಿನಲ್ಲಿದೆ. ಈ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.

VISTARANEWS.COM


on

Rajastan Elections: 10 reasons for BJP Win
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajastan Elections 2023) ಆಡಳಿತಾರೂಢ ಕಾಂಗ್ರೆಸ್‌ನ್ನು ಮಣಿಸಿ (Antiincumbency to Congress) ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. 199 ಕ್ಷೇತ್ರಗಳ ಪೈಕಿ ಬಿಜೆಪಿ 120ರಷ್ಟು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ಗೆ ದೊಡ್ಡ ಠಕ್ಕರ್‌ ಕೊಟ್ಟಿದೆ. ಚುನಾವಣೆಯ ಅಖಾಡಕ್ಕಿಳಿದ ಸಂದರ್ಭದಲ್ಲಿ ಬಿಜೆಪಿ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ರಾಜ್ಯ ಬಿಜೆಪಿಯ ಮುಂಚೂಣಿ ನಾಯಕಿ ವಸುಂಧರಾ ರಾಜೇ ಅವರು ಮುನಿಸಿಕೊಂಡಿದ್ದರು. ರಾಜ್ಯದ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರವಿರಲಿಲ್ಲ. ಇನ್ನೊಂದು ಕಡೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Ashok Gehlot) ಮತ್ತು ಯುವ ನಾಯಕ ಸಚಿನ್‌ ಪೈಲಟ್‌ ಅವರು ರಾಜ್ಯದಲ್ಲಿ ಪ್ರಬಲ ಕಾಂಗ್ರೆಸ್‌ ನಾಯಕರಾಗಿ ಹೊರಹೊಮ್ಮಿದ್ದರು. ಇಷ್ಟೆಲ್ಲದರ ನಡುವೆಯೇ ಬಿಜೆಪಿ ರಾಜಸ್ಥಾನದಲ್ಲಿ ಕಮಾಲ್‌ (BJP set to win Rajastan ಮಾಡಿದೆ. ಹಾಗಿದ್ದರೆ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿರುವ ಕಾರಣಗಳು ಏನು? ಇಲ್ಲಿದೆ ವಿವರ.

1. ರಾಜಸ್ಥಾನದಲ್ಲಿ ‌ ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಬದಲಾವಣೆಯ ಸಂಪ್ರದಾಯ ಕಳೆದ ಮೂವತ್ತ ಮೂರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ಮುಂದುವರಿದಿದೆ.

2. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ. ಉತ್ತರ ಭಾರತದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಜೋರಾಗಿದೆ. ಗುಜರಾತ್‌ ಚುನಾವಣೆಯನ್ನು ಸ್ವತಃ ಮೋದಿ ಅವರೇ ಮುಂದೆ ನಿಂತು ನಿಭಾಯಿಸಿದ್ದರು. ಈಗ ರಾಜಸ್ಥಾನಕ್ಕೂ ಅದರ ಪ್ರಭಾವ ತಟ್ಟಿದೆ.

3. ಚುನಾವಣಾ ಉಸ್ತುವಾರಿ ಪ್ರಹ್ಲಾದ್‌ ಜೋಶಿ ಅವರ ಟಿಕೆಟ್‌ ಹಂಚಿಕೆ ಪ್ಲ್ಯಾನಿಂಗ್‌
ಈ ಬಾರಿ ರಾಜಸ್ಥಾನದಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ್ದವರು ಕೇಂದ್ರ ಸಚಿವರಾಗಿರುವ ಪ್ರಹ್ಲಾದ್‌ ಜೋಶಿ. ಟಿಕೆಟ್‌ ಹಂಚಿಕೆ ವೇಳೆ ಒಂದೊಂದು ಕ್ಷೇತ್ರಕ್ಕೆ 10ರಷ್ಟು ಆಕಾಂಕ್ಷಿಗಳಿದ್ದರು. ಅವರೆಲ್ಲರನ್ನೂ ಸಮಾಧಾನ ಮಾಡಿ ಟಿಕೆಟ್‌ ಹಂಚಿಕೆ ಮಾಡಲಾಗಿತ್ತು. ಆಕಾಂಕ್ಷಿಗಳು ಕೂಡಾ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವಂತೆ ಮನವೊಲಿಸಲಾಗಿತ್ತು. ಆ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಲಾಗಿತ್ತು.

4. ಯಾರೇ ಅಭ್ಯರ್ಥಿಯಾದರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂಬ ಖಡಕ್‌ ಸೂಚನೆಯನ್ನು ನೀಡಲಾಗಿತ್ತು. ಅದನ್ನು ಪಾಲಿಸಲಾಗಿದೆ. ಒಂದು ಹಂತದಲ್ಲಿ ವಸುಂಧರಾ ರಾಜೇ ಅವರನ್ನು ಕಡೆಗಣಿಸಲಾಗಿದೆ ಎಂಬ ಸೂಚನೆ ಇತ್ತು. ಆದರೆ, ಕೊನೆಯ ಹಂತದಲ್ಲಿ ಅವರನ್ನು ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ.

5. ಕಾಂಗ್ರೆಸ್‌ ನೀಡಿದ ಗ್ಯಾರಂಟಿಗಳಿಗೆ ಠಕ್ಕರ್‌ ನೀಡಲು ಬಿಜೆಪಿ ಕೂಡಾ ಐದು ಪ್ರತ್ಯಾಸ್ತ್ರಗಳನ್ನು ಬಳಕೆ ಮಾಡಿತ್ತು. ಅದರಲ್ಲೂ ಮುಖ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಭರವಸೆ ನೀಡಲಾಗಿತ್ತು. ಗ್ಯಾಸ್ ಬೆಲೆ ಇಳಿಕೆ ಭರವಸೆ ಕೂಡಾ ಕೆಲಸ ಮಾಡಿದೆ.

6. ಮಹಿಳೆಯರ ಸುರಕ್ಷತೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ಸ್ಥಾಪನೆ ಮಾಡಿದ್ದು ಮಹಿಳೆಯರಲ್ಲಿ ಭರವಸೆ ಮೂಡಿಸಿತ್ತು. ಜತೆಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್‌ ಸ್ಥಾಪಿಸಿ 18 ವರ್ಷ ಆದಾಗ 2 ಲಕ್ಷ ರೂ. ದೊರೆಯುವಂತೆ ಮಾಡುವ ಯೋಜನೆ ಆರಂಭ ಫಲ ನೀಡಿದೆ.

7. ಹಲವು ಕೇಂದ್ರ ಸಚಿವರು ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ ಮತ್ತು ಕೆಲವು ಉಸ್ತುವಾರಿ ವಹಿಸಿದ್ದಾರೆ. ಈ ಮೂಲಕ ಬದಲಿ ನಾಯಕತ್ವದ ಮುನ್ಸೂಚನೆ ದೊರೆತಿತ್ತು.

ಇದನ್ನೂ ಓದಿ: Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

8. ಕಾಂಗ್ರೆಸ್‌ಗೆ ಎದುರಾಗಿದ್ದ ಆಡಳಿತ ವಿರೋಧಿ ಅಲೆಯನ್ನು, ಕಾಂಗ್ರೆಸ್‌ ಪಕ್ಷದ ಒಳ ಜಗಳವನ್ನು ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದು ಬಿಜೆಪಿಗೆ ಲಾಭವಾಗಿದೆ.

9. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಚಿನ್‌ ಪೈಲಟ್‌ ಅವರು ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಗುಜ್ಜರ್‌ ಸಮುದಾಯ ಕಾಂಗ್ರೆಸ್‌ ನ್ನು ಬೆಂಬಲಿಸಿತ್ತು. ಈ ಬಾರಿ‌ ಅವರನ್ನು ಬಿಜೆಪಿಗೆ ಮತ್ತೆ ಸೆಳೆಯಲು ಸಾಧ್ಯವಾಗಿರುವುದು ಪ್ಲಸ್‌ ಪಾಯಿಟ್‌.

10. 2018ರ ಚುನಾವಣೆಯಲ್ಲಿ ರಜಪೂತ ಸಮುದಾಯ ಬಿಜೆಪಿ ಮೇಲೆ ಸಿಟ್ಟುಗೊಂಡಿತ್ತು. ಆದರೆ, ಬಿಜೆಪಿ ಸಾವಧಾನದಿಂದ ಸಮಸ್ಯೆಯನ್ನು ಬಗೆಹರಿಸಿಕೊಂಡು ಅವರನ್ನು ಮನವೊಲಿಸಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Chandrayaan 3: ಇತಿಹಾಸ ಸೃಷ್ಟಿಸಿ ಚಂದ್ರನ ಮಡಿಲಲ್ಲಿ ಮಲಗಿದ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್; ಇಲ್ಲಿವೆ Photos

Chandrayaan 3: ಚಂದಿರ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿರುವ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ಗಳು ಹಾಯಾಗಿ ಮಲಗಿರುವ ಫೋಟೊಗಳು ಲಭ್ಯವಾಗಿವೆ. ಈ ಫೋಟೊಗಳು ಈಗ ವೈರಲ್‌ ಕೂಡ ಆಗಿವೆ. ಸಂಶೋಧಕ ಚಂಧ್ರ ತುಂಗತುರ್ತಿ ಅವರು ಫೋಟೊಗಳನ್ನು ಸೆರೆ ಹಿಡಿದಿದ್ದು, ಲ್ಯಾಂಡರ್‌ ಹಾಗೂ ರೋವರ್‌ ಅಕ್ಕಪಕ್ಕದಲ್ಲೇ ಇವೆ.

VISTARANEWS.COM


on

Chandrayaan 3
Koo

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಚಂದ್ರಯಾನ 3 ಮಿಷನ್‌ಅನ್ನು (Chandrayaan 3) ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅದರಲ್ಲೂ, ಚಂದ್ರನ ದಕ್ಷಿಣ ಧ್ರುವದಲ್ಲಿ ಮಿಷನ್‌ಅನ್ನು ಸಾಫ್ಟ್‌ ಲ್ಯಾಂಡ್‌ ಮಾಡಿದ ಜಗತ್ತಿನ ಮೊದಲ ದೇಶ ಎನಿಸಿದೆ. ಇದಾದ ಬಳಿಕ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಛಾಪು ಮೂಡಿಸಿದೆ. ಇದರ ಬೆನ್ನಲ್ಲೇ, ಚಂದ್ರಯಾನ 3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ (Vikram Lander) ಹಾಗೂ ಪ್ರಜ್ಞಾನ್‌ ರೋವರ್‌ಗಳು ಚಂದಿರನ ಅಂಗಳದಲ್ಲಿ ಹಾಯಾಗಿ ಮಲಗಿರುವ ಹೊಸ ಫೋಟೊಗಳನ್ನು ಇಸ್ರೋ ಬಿಡುಗಡೆಗೊಳಿಸಿದೆ.

2024ರ ಮಾರ್ಚ್‌ 15ರಂದೇ ಸಂಶೋಧಕ ಚಂಧ್ರ ತುಂಗತುರ್ತಿ ಅವರು ಫೋಟೊಗಳನ್ನು ಸೆರೆ ಹಿಡಿದಿದ್ದು, ಅವುಗಳನ್ನು ಪರಿಶೀಲಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಒಂದು ಪಿಕ್ಸೆಲ್‌ಗೆ 17 ಸೆಂಟಿಮೀಟರ್‌ನಂತೆ ಸುಮಾರು 65 ಕಿಲೋಮೀಟರ್‌ ದೂರದಿಂದ ಚಂದಿರನ ಅಂಗಳದಲ್ಲಿ ಲ್ಯಾಂಡರ್‌ ಹಾಗೂ ರೋವರ್‌ ಮಲಗಿರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಈ ಫೋಟೊಗಳು ಈಗ ವೈರಲ್‌ ಆಗಿವೆ.

2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಆದ ಜಗತ್ತಿನ ಮೊದಲ ಮಿಷನ್‌ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿತು.

ಅಷ್ಟೇ ಅಲ್ಲ, ಚಂದ್ರಯಾನ 3 ಮಿಷನ್‌ ಲ್ಯಾಂಡ್‌ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಮಾರ್ಚ್‌ 19ರಂದು ಅನುಮತಿ ನೀಡಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್‌ ಎನಿಸಿದೆ.

2023ರ ಜುಲೈ 14ರಂದು ಚಂದ್ರಯಾನ 3 ಮಿಷನ್‌ ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇದ್ದವು. ಇನ್ನೇನು ಉಡಾವಣೆ ಮಾಡಬೇಕು ಎನ್ನುವಷ್ಟರಲ್ಲಿಯೇ ಚಂದ್ರಯಾನ 3 ರಾಕೆಟ್‌ ಸಾಗುವ ಮಾರ್ಗದಲ್ಲಿ ಬಾಹ್ಯಾಕಾಶ ತ್ಯಾಜ್ಯವೊಂದು ಇಸ್ರೋ ವಿಜ್ಞಾನಿಗಳಿಗೆ ಕಾಣಿಸಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಉಡಾವಣೆ ಮಾಡಬೇಕಿದೆ. ಉಡಾವಣೆ ಮಾಡಿದರೆ ಬಾಹ್ಯಾಕಾಶ ತ್ಯಾಜ್ಯಕ್ಕೆ ಚಂದ್ರಯಾನ 3 ರಾಕೆಟ್‌ ಡಿಕ್ಕಿಯಾಗಿ, ಇಡೀ ಮಿಷನ್‌ ಹಾಳಾಗುತ್ತಿತ್ತು.

ಚಂದ್ರಯಾನ 3 ಉಡಾವಣೆ ಮಾಡಲೇಬೇಕಿತ್ತು. ಹಾಗಾಗಿ, ಇಸ್ರೋ ವಿಜ್ಞಾನಿಗಳು ಚಾಣಾಕ್ಷತನ ಮೆರೆದರು. ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು 4 ಸೆಕೆಂಡ್‌ ವಿಳಂಬ ಮಾಡಿದರು. ಇದೇ ಅವಧಿಯಲ್ಲಿ ಬಾಹ್ಯಾಕಾಶ ತ್ಯಾಜ್ಯವು ಚಂದ್ರಯಾನ 3 ಮಿಷನ್‌ ಮಾರ್ಗದಿಂದ ಬೇರೆಡೆ ವಾಲಿತು. ಆಗ, ವಿಜ್ಞಾನಿಗಳು ಯಶಸ್ವಯಾಗಿ ಚಂದ್ರಯಾನ 3 ಮಿಷನ್‌ಅನ್ನು ಉಡಾವಣೆ ಮಾಡಿದರು. ನಿಗದಿತ ಸಮಯಕ್ಕೆ ಉಡಾವಣೆ ಮಾಡಿದ್ದರೆ ಇಡೀ ಮಿಷನ್‌ ವಿಫಲವಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Continue Reading

ದೇಶ

Vote Jihad: ವೋಟ್‌ ಜಿಹಾದ್‌ಗೆ ಕರೆ ನೀಡಿದ್ದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಕನ್ನಡಿ ಎಂದ ಮೋದಿ

Vote Jihad: ಗುಜರಾತ್‌ನ ಆನಂದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಭಾರತದಲ್ಲಿ 2014ಕ್ಕಿಂತ ಹಿಂದೆ ಇದ್ದಂತಹ ದುರ್ಬಲ ಸರ್ಕಾರವೇ ಇರಲೆಂದು ಪಾಕಿಸ್ತಾನ ಬಯಸುತ್ತದೆ ಎಂದು ಕುಟುಕಿದರು.

VISTARANEWS.COM


on

Vote Jihad
Koo

ಗಾಂಧಿನಗರ: ಕಾಂಗ್ರೆಸ್‌ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ಅವರ ಸಹೋದರ ಸೊಸೆ, ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ (Maria Alam) ಅವರು ವೋಟ್‌ ಜಿಹಾದ್‌ಗೆ ಕರೆ ನೀಡಿರುವುದು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಮಾರಿಯಾ ಆಲಂ ವಿರುದ್ಧ ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಇದರ ಬೆನ್ನಲ್ಲೇ, ವೋಟ್‌ ಜಿಹಾದ್‌ ಹೇಳಿಕೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ವೋಟ್‌ ಜಿಹಾದ್‌ಗೆ (Vote Jihad) ಕರೆ ನೀಡಿರುವುದು ಇಂಡಿಯಾ ಒಕ್ಕೂಟದ ಮನಸ್ಥಿತಿಗೆ ಹಿಡಿದ ಕೈಗನ್ನಡಿ” ಎಂದು ಮೋದಿ ಟೀಕಿಸಿದ್ದಾರೆ.

“ಮುಸ್ಲಿಮರೆಲ್ಲರೂ ವೋಟ್‌ ಜಿಹಾದ್‌ ಕೈಗೊಳ್ಳಬೇಕು. ಮದರಸಾದಲ್ಲಿ ಅಲ್ಲ, ಉನ್ನತ ಶಿಕ್ಷಣ ಪಡೆದವರೇ ಇಂತಹ ಹೇಳಿಕೆ ನೀಡಿದ್ದಾರೆ. ಮುಸ್ಲಿಮರೆಲ್ಲರೂ ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ಗೆಲ್ಲಿಸಬೇಕು ಎಂಬುದಾಗಿ ಅವರು ಕರೆ ನೀಡುತ್ತಿದ್ದಾರೆ. ಇವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದಾರೆ. ಇದು ಇಂಡಿಯಾ ಒಕ್ಕೂಟದ ನಾಯಕರ ಮನಸ್ಥಿತಿಯಾಗಿದೆ” ಎಂದು ಗುಜರಾತ್‌ನ ಆನಂದ್‌ ನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ ನಡೆಸಿದರು.

“ಇದೇ ವೇಳೆ ಪ್ರಧಾನಿ ಮೋದಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವೋಟ್‌ ಜಿಹಾದ್‌ ಘೋಷಣೆ ವಿಚಾರವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. “ನಾವು ಲವ್‌ ಜಿಹಾದ್‌ ಮತ್ತು ಭೂ ಜಿಹಾದ್‌ ಕೇಳಿದ್ದೇವೆ. ಇದೀಗ ಮೊದಲ ಬಾರಿಗೆ ವೋಟ್‌ ಜಿಹಾದ್‌ ಬಗ್ಗೆ ಕೇಳುತ್ತಿದ್ದೇವೆ. ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ವೋಟ್‌ ಜಿಹಾದ್‌ ಮಾಡುವಂತೆ ಕರೆ ಕೊಡಲಾಗುತ್ತಿದೆ. ಇದು ಪ್ರತಿಪಕ್ಷಗಳ ನಿಜವಾದ ಮುಖ. ತಮ್ಮ ಮೈತ್ರಿ ಸರ್ಕಾರಗಳು ಅಧಿಕಾರದದಲ್ಲಿರುವ ರಾಜ್ಯಗಳಲ್ಲಿ ಮುಸ್ಲಿಮರಿಗೆ ವಾಮಮಾರ್ಗದಲ್ಲಿ ಮೀಸಲಾತಿ ಘೋಷಿಸುವುದೇ ಕಾಂಗ್ರೆಸ್‌ನ ಪ್ರಮುಖ ಗುರಿ. ಹಾಗೆ ಇಲ್ಲದಿದ್ದರೆ ಕಾಂಗ್ರೆಸ್‌ ಲಿಖಿತ ರೂಪದಲ್ಲಿ ಬರೆದುಕೊಡಲಿ” ಎಂದು ಸವಾಲೆಸದರು.

ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಬೇಕಾದರೆ ಭಾರತದಲ್ಲಿ ದುರ್ಬಲ ಸರ್ಕಾರ ಇರಬೇಕು. ಈ ಹಿಂದೆ ಇದ್ದ ದುರ್ಬಲ ಸರ್ಕಾರದ ಕಾರಣದಿಂದಾಗಿಯೇ ಪಾಕಿಸ್ತಾನಕ್ಕೆ ಮುಂಬೈ ಭಯೋತ್ಪಾದಕಾ ದಾಳಿ ನಡೆಸಲು ಸಾಧ್ಯವಾಗಿತ್ತು. ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಪಾಕಿಸ್ತಾನದ ಫಾಲೋವರ್‌ನಂತೆ ವರ್ತಿಸುತ್ತಿದೆ. ಹೀಗಾಗಿಯೇ ಇಲ್ಲಿ ಕಾಂಗ್ರೆಸ್‌ ಅಧಃಪತನ ಆಗುತ್ತಿದ್ದರೆ ಅಲ್ಲಿ ಪಾಕಿಸ್ತಾನ ಕಣ್ಣೀರುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಇವತ್ತು ನಾನು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುತ್ತೇವೆ ಎಂಬ ಗ್ಯಾರಂಟಿಯನ್ನು ಕೊಡುತ್ತಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Maria Alam Khan: “ಜಿಹಾದ್‌ಗಾಗಿ ಮತ ನೀಡಿ..”ಮಾಜಿ ಕೇಂದ್ರ ಸಚಿವರ ಸೊಸೆಯಿಂದ ಭಾರೀ ಎಡವಟ್ಟು

Continue Reading

ಕ್ರೈಂ

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

2005 ಮತ್ತು 2024ರ ನಡುವೆ, ಐಐಟಿ ಮದ್ರಾಸ್‌ನಲ್ಲಿ ಅತಿ ಹೆಚ್ಚು ಸಾವುಗಳು 26, ನಂತರ ಐಐಟಿ ಕಾನ್ಪುರದಲ್ಲಿ 18, ಐಐಟಿ ಖರಗ್‌ಪುರದಲ್ಲಿ 13 ಮತ್ತು ಐಐಟಿ ಬಾಂಬೆಯಲ್ಲಿ 10 ಸಾವುಗಳು ದಾಖಲಾಗಿವೆ. ಈ ವರ್ಷ ಇದುವರೆಗೆ ಐದು ಸಾವುಗಳು ದಾಖಲಾಗಿವೆ.

VISTARANEWS.COM


on

students self harming
Koo

ಮುಂಬಯಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ – IIT) ಕನಿಷ್ಠ 115 ವಿದ್ಯಾರ್ಥಿಗಳು 2005ರಿಂದೀಚೆಗೆ ಆತ್ಮಹತ್ಯೆ (Students Self harming, students Suicide) ಮಾಡಿಕೊಂಡಿದ್ದಾರೆ ಎಂಬ ಕಳವಳಕಾರಿ ಅಂಶ ಬಯಲಾಗಿದೆ. ಇವುಗಳಲ್ಲಿ 98 ಸಾವುಗಳು ಕ್ಯಾಂಪಸ್‌ನಲ್ಲಿ ಆಗಿವೆ. 17 ಕ್ಯಾಂಪಸ್‌ನಿಂದ ಹೊರಗೆ ಆಗಿವೆ. 56 ಜನ ನೇಣು ಬಿಗಿದುಕೊಂಡಿದ್ದಾರೆ.

ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಮತ್ತು ಗ್ಲೋಬಲ್ ಐಐಟಿ ಅಲುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಸಿಂಗ್ ಅವರು ಕೇಳಿದ ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಯ ಮೂಲಕ ಸ್ವೀಕರಿಸಿದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಇದೇ ಫೆಬ್ರವರಿ 12, 2023ರಂದು ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ಮರಣ ಸಂಭವಿಸಿತ್ತು. ಇದು ಕಳೆದ 20 ವರ್ಷಗಳಲ್ಲಿ ದೇಶಾದ್ಯಂತ ಐಐಟಿಯನ್ನರ ಸಾವಿನ ಬಗ್ಗೆ ಮಾಹಿತಿ ಕೋರಿ RTI ಅರ್ಜಿಯನ್ನು ಸಲ್ಲಿಸಲು ಸಿಂಗ್ ಅವರನ್ನು ಪ್ರೇರೇಪಿಸಿತ್ತು. ಅಂಕಿಅಂಶಗಳ ಪ್ರಕಾರ, 2005 ಮತ್ತು 2024ರ ನಡುವೆ, ಐಐಟಿ ಮದ್ರಾಸ್‌ನಲ್ಲಿ ಅತಿ ಹೆಚ್ಚು ಸಾವುಗಳು 26, ನಂತರ ಐಐಟಿ ಕಾನ್ಪುರದಲ್ಲಿ 18, ಐಐಟಿ ಖರಗ್‌ಪುರದಲ್ಲಿ 13 ಮತ್ತು ಐಐಟಿ ಬಾಂಬೆಯಲ್ಲಿ 10 ಸಾವುಗಳು ದಾಖಲಾಗಿವೆ. ಈ ವರ್ಷ ಇದುವರೆಗೆ ಐದು ಸಾವುಗಳು ದಾಖಲಾಗಿವೆ.

“ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಇಲಾಖೆಯು ಆರಂಭದಲ್ಲಿ ನನ್ನ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಪ್ರತ್ಯೇಕ ಸಂಸ್ಥೆಗಳಿಗೆ ಪ್ರತ್ಯೇಕ ಆರ್‌ಟಿಐಗಳನ್ನು ಸಲ್ಲಿಸುವಂತೆ ಕೇಳಿತು. ಮನವಿಯ ನಂತರ, ಸಚಿವಾಲಯವು ಎಲ್ಲಾ ಐಐಟಿಗಳಿಗೆ ಡೇಟಾವನ್ನು ಹಂಚಿಕೊಳ್ಳಲು ಸೂಚಿಸಿತು” ಎಂದು ಸಿಂಗ್ ಹೇಳಿದರು.

ಆದಾಗ್ಯೂ, ಎಂಟು ತಿಂಗಳುಗಳಲ್ಲಿ, 23 ಐಐಟಿಗಳಲ್ಲಿ 13 ಮಾತ್ರ ಸಿಂಗ್ ಅವರೊಂದಿಗೆ ಡೇಟಾವನ್ನು ಹಂಚಿಕೊಂಡಿವೆ. “ನಾನು RTI ಪ್ರತಿಕ್ರಿಯೆಯಿಂದ ಕೆಲವು ಡೇಟಾವನ್ನು ಸ್ವೀಕರಿಸಿದ್ದೇನೆ. ಸಾರ್ವಜನಿಕ ಡೊಮೇನ್‌ನಲ್ಲಿನ ಅಧಿಕೃತ ಮೂಲಗಳಿಂದ ಕೆಲ ಡೇಟಾವನ್ನು ಸಂಗ್ರಹಿಸಿದ್ದೇನೆ. ಇದರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಅಂಕಿಅಂಶಗಳು ಮತ್ತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಗಳು ಸೇರಿವೆ” ಎಂದಿದ್ದಾರೆ ಸಿಂಗ್.

ಕಳೆದ ವರ್ಷ ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ. ಐಐಟಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡವನ್ನು ನಿಭಾಯಿಸಲು ಗಂಭೀರ ಕ್ರಮಗಳಿಗೆ ಕರೆ ನೀಡಿರುವ ಸಿಂಗ್, “ದೇಶದ ಪ್ರಮುಖ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿರುವ ಒತ್ತಡವನ್ನು ಎತ್ತಿ ತೋರಿಸಬೇಕಿದೆ. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪೋಷಕರಿಗೆ ಒತ್ತಡ ಕಡಿಮೆ ಮಾಡಲು ಐಐಟಿ ಶಿಕ್ಷಣವನ್ನು ಸುಧಾರಿಸುವ ತುರ್ತು ಅವಶ್ಯಕತೆಯಿದೆ” ಎಂದಿದ್ದಾರೆ.

ಸೋಲಂಕಿಯವರ ಮರಣದ ನಂತರ ವಿವಿಧ ಐಐಟಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ, 61% ಪ್ರತಿಸ್ಪಂದಕರು ವಿದ್ಯಾರ್ಥಿಗಳ ಸಾವುಗಳು ಶೈಕ್ಷಣಿಕ ಒತ್ತಡದ ಕಾರಣ ಎಂದು ನಂಬಿದ್ದರು. ಇದರ ನಂತರ ಉದ್ಯೋಗದ ಅಭದ್ರತೆ (12%), ಕೌಟುಂಬಿಕ ಸಮಸ್ಯೆಗಳು (10%) ಮತ್ತು ಕಿರುಕುಳ (6%). ಹನ್ನೊಂದು ಪ್ರತಿಶತ ವಿದ್ಯಾರ್ಥಿಗಳು ‘ಇತರ ಕಾರಣಗಳು’ ಅಂಕಣವನ್ನು ಟಿಕ್ ಮಾಡಿದ್ದಾರೆ.

ಸೋಲಂಕಿಯವರ ಮರಣದ ನಂತರ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ದೈಹಿಕ ಸಾಮರ್ಥ್ಯ ಮತ್ತು ಕ್ರೀಡೆಗಳನ್ನು ಉತ್ತೇಜಿಸಲು ಮತ್ತು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಆರೋಗ್ಯ, ಕಲ್ಯಾಣ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಲಹೆಗಳನ್ನು ನೀಡಿತು. ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಮಾನಸಿಕ ಬೆಂಬಲವನ್ನು ಒದಗಿಸಲು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭಿಸಲಾದ ಮನೋದರ್ಪಣ್ ಎಂಬ ಭಾರತ ಸರ್ಕಾರದ ಉಪಕ್ರಮವೂ ಇದೆ.

ಪ್ರಿವೆಂಟಿವ್ ಕ್ಯಾಂಪಸ್ ಕ್ರಮಗಳಲ್ಲಿ IIT-ಬಾಂಬೆ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಒಂದು ವಿಷಯವನ್ನು ಕೈಬಿಟ್ಟಿತು. ಕಳೆದ ವರ್ಷ ಸೋಲಂಕಿ ಆತ್ಮಹತ್ಯೆಯ ನಂತರ ನಡೆದ IIT-ಬಾಂಬೆ ಸೆನೆಟ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕ್ರಮವು ಫ್ರೆಶರ್‌ಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾಂಪಸ್ ಜೀವನಕ್ಕೆ ಹೊಂದಿಕೊಳ್ಳಲು ಅವರಿಗೆ ಹೆಚ್ಚಿನ ವಿರಾಮ ಸಮಯವನ್ನು ನೀಡುತ್ತದೆ ಎಂದು ಐಐಟಿ-ಬಾಂಬೆ ಅಧಿಕಾರಿಗಳು ತಿಳಿಸಿದ್ದಾರೆ.

ಕಠಿಣ ಸ್ಪರ್ಧೆಯಲ್ಲಿ ಯಶಸ್ವಿಯಾದ ನಂತರ ವಿದ್ಯಾರ್ಥಿಗಳು ಐಐಟಿಗಳಲ್ಲಿ ತಮ್ಮ ಸ್ಥಾನವನ್ನು ಗಳಿಸಿರುತ್ತಾರೆ. ಆದರೆ ಅದರ ನಂತರ ಗಮನಾರ್ಹ ಸಾಂಸ್ಥಿಕ ಮತ್ತು ಸಾಮಾಜಿಕ ಒತ್ತಡಗಳನ್ನು ಎದುರಿಸುತ್ತಾರೆ. ಅವರು ಬಡ ಅಥವಾ ಶ್ರೀಮಂತ ಹಿನ್ನೆಲೆಯಿಂದ ಬಂದವರಾಗಿದ್ದರೂ, ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮಾಜಿಕ ಒತ್ತಡವನ್ನು ಎದುರಿಸುತ್ತಾರೆ. ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುವ ಸಾಂಸ್ಥಿಕ ಮತ್ತು ಸಾಮಾಜಿಕ ಹಂತಗಳಲ್ಲಿ ನಾವು ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Kota Suicides: ನೇಣು ಹಾಕಿಕೊಂಡರೆ ಕಿತ್ತು ಬರೋ ಫ್ಯಾನು, ಅಲಾರಾಂ ಸೌಂಡ್‌! ಆತ್ಮಹತ್ಯೆ ತಡೆಗೆ ಸೂಪರ್ ಐಡಿಯಾ

Continue Reading

ದೇಶ

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Supreme Court: ಕೇಂದ್ರೀಯ ತನಿಖಾ ದಳ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಸಿಬಿಐ ರಾಜ್ಯ ಸರ್ಕಾರದ ಯಾವುದೇ ಅನುಮತಿ ಪಡೆಯದೇ ಅನೇಕ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

VISTARANEWS.COM


on

supreme court
Koo

ನವದೆಹಲಿ: ಕೇಂದ್ರೀಯ ತನಿಖಾ ದಳ(CBI) ಕೇಂದ್ರ ಸರ್ಕಾರ(Union Government)ದ ನಿಯಂತ್ರಣದಲ್ಲಿ ಇಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್‌(Supreme Court)ಗೆ ಸ್ಪಷ್ಟಪಡಿಸಿದೆ. ಸಿಬಿಐ ರಾಜ್ಯ ಸರ್ಕಾರದ ಯಾವುದೇ ಅನುಮತಿ ಪಡೆಯದೇ ಅನೇಕ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ(West Bengal) ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರದ ಪರ ವಕಾಲತ್ತು ವಹಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾತ್‌ ಮೆಹ್ತಾ, ಸರ್ಕಾರ ಯಾವುದೇ ಕೇಸ್‌ ದಾಖಲಿಸಿಲ್ಲ. ಆದರೆ ಸಿಬಿಐ ಕೇಸ್‌ ದಾಖಲಿಸಿ ವಿಚಾರಣೆ ನಡೆಸುತ್ತಿದೆ. ಸಿಬಿಐ ಸರ್ಕಾರದ ಅಧೀನದಲ್ಲಿಲ್ಲ ಎಂದು ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ಸಂದೀಪ್‌ ಮೆಹ್ತಾ ಇದ್ದ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಸಂವಿಧಾನದ 131ನೇ ವಿಧಿಯಡಿಯಲ್ಲಿ ಪಶ್ಚಿಮ ಬಂಗಾಳ ಈ ಮೊಕದ್ದಮೆ ಹೂಡಿದ್ದು, ರಾಜ್ಯದಲ್ಲಿ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡದೇ ಇದ್ದರೂ ಸಿಬಿಐ ತನ್ನ ತನಿಖೆ, ಎಫ್‌ಐಆರ್‌ ದಾಖಲು ಮಾಡುವುದನ್ನು ಮುಂದುವರೆಸಿದೆ. ಬಿಜೆಪಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಿಬಿಐಯನ್ನು ರಾಜಕೀಯವಾಗಿ ದುರ್ಬಳಕೆ ಮಾಡುತ್ತಿದೆ. ತಮ್ಮ ವಿರೋಧಿಗಳ ಮೇಲೆ ದಾಳಿ ನಡೆಸಿ, ಸುಳ್ಳು ಪ್ರಕರಣಗಳನ್ನು ದಾಖಲಿಸುವಂತೆ ಕೇಂದ್ರ ಸರ್ಕಾರ ಸಿಬಿಐಗೆ ಸೂಚನೆ ನೀಡುತ್ತಿದೆ. ವಿರೋಧಿಗಳನ್ನು ಹತ್ತಿಕ್ಕಲು ಸರ್ಕಾರ ಸಿಬಿಐಯನ್ನು ಬಳಸಿಕೊಳ್ಳುತ್ತಿದೆ ಎಂದು ತೃಣಮೂಲ ಕಾಂಗ್ರೆಸ್‌ ಸರ್ಕಾರ ತನ್ನ ದೂರಿನಲ್ಲಿ ಆರೋಪಿಸಿತ್ತು. ಸಿಬಿಐ ರಾಜಕೀಯ ಪಕ್ಷಗಳ ಕೈಗೊಂಬೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಹೀಗಾಗಿ 2013ರಲ್ಲಿ ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಸುಪ್ರೀಂಕೋರ್ಟ್‌, ಸಿಬಿಐಯನ್ನು ಪಂಜರದಲ್ಲಿರುವ ಗಿಣಿ ಎಂದು ಕರೆದಿತ್ತು.

ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಕೆಲವು ದಿನಗಳ ಹಿಂದೆ ಶೋಧ ನಡೆಸಿದ ಸಿಬಿಐ ಪೊಲೀಸ್‌ ಸೇವಾ ರಿವಾಲ್ವರ್‌, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಶಪಡಿಸಿಕೊಂಡಿತ್ತು. ಇವನ್ನು ಶಹಜಹಾನ್‌ ಶೇಖ್‌ನ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿದ ಸಿಬಿಐ ಪೊಲೀಸ್‌ ಸೇವಾ ರಿವಾಲ್ವರ್‌, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಶಪಡಿಸಿಕೊಂಡಿತ್ತು. ಇವನ್ನು ಶಹಜಹಾನ್‌ ಶೇಖ್‌ನ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶೋಧದಲ್ಲಿ ವೇಳೆ ಸಿಬಿಐ, ಬಾಂಬ್‌ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ, ಕೇಂದ್ರ ಅರೆಸೇನಾ ಪಡೆ, ಪಶ್ಚಿಮ ಬಂಗಾಳ ಪೊಲೀಸರು ಭಾಗವಹಿಸಿದ್ದರು.

ಇದನ್ನೂ ಓದಿ:Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

ಇ.ಡಿ ತಂಡವು ಕಳೆದುಕೊಂಡಿದ್ದ ಕೆಲವು ವಸ್ತುಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಸಂದೇಶ್‌ಖಾಲಿಯಲ್ಲಿ ಶೇಖ್‌ನ ಸಹಚರರ ನಿವಾಸದಲ್ಲಿ ಬಚ್ಚಿಡಲಾಗಿದೆ ಎನ್ನುವ ಮಾಹಿತಿ ಮೇರೆಗೆ ಸಿಬಿಐ ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದವು. ಶಸ್ತ್ರಾಸ್ತ್ರಗಳ ಪೈಕಿ ವಿದೇಶಿ ನಿರ್ಮಿತ ಬಂದೂಕುಗಳೂ ಇದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯ ಮಾಲೀಕನನ್ನು ಅಬು ತಾಲೇಜ್‌ ಮೊಲ್ಲಾಹ್‌ ಎಂದು ಗುರುತಿಸಲಾಗಿದೆ.

Continue Reading
Advertisement
Murder case in Bengaluru
ಬೆಂಗಳೂರು4 mins ago

Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

Prajwal Revanna Case Locked up as Prajwal arrives at Bengaluru airport
ಹಾಸನ5 mins ago

Prajwal Revanna Case: ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಜ್ವಲ್‌ ಬರುತ್ತಿದ್ದಂತೆ ಲಾಕ್‌! ಏನಿದು SIT ಸೂಚನೆ?

Andre Russell
ಕ್ರಿಕೆಟ್17 mins ago

Andre Russell : ಬ್ರಾವೊ ರೀತಿಯಲ್ಲೇ ಬಾಲಿವುಡ್​ಗೆ ಎಂಟ್ರಿ ಪಡೆದ ಆ್ಯಂಡ್ರೆ ರಸೆಲ್​

Jolly LLB 3
ಸಿನಿಮಾ18 mins ago

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Davanagere lok sabha constituency bjp candidate gayatri siddeshwar election campaign in harapanahalli
ರಾಜಕೀಯ20 mins ago

Lok Sabha Election: ಹರಪನಹಳ್ಳಿಯಲ್ಲಿ ರೋಡ್‌ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

MLC Chalavadi Narayanaswamy latest Statement in Hubballi
ಹುಬ್ಬಳ್ಳಿ21 mins ago

Lok Sabha Election: ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ: ಛಲವಾದಿ ನಾರಾಯಣಸ್ವಾಮಿ

Mega Shetty
ಫ್ಯಾಷನ್30 mins ago

Mega Shetty: ದಾವಣಿ-ಲಂಗದಲ್ಲಿ ನಟಿ ಮೇಘಾ ಶೆಟ್ಟಿಯಂತೆ ನೀವೂ ಕಾಣಬೇಕೆ? ಈ ಟಿಪ್ಸ್ ಪಾಲಿಸಿ!

six seats of Karnataka Legislative Council Elections to be held on June 3
ಕರ್ನಾಟಕ32 mins ago

Karnataka legislative council: ವಿಧಾನ ಪರಿಷತ್‌ನ 6 ಕ್ಷೇತ್ರಗಳಿಗೆ ಜೂ.3 ಎಲೆಕ್ಷನ್;‌ ಜೂ. 6ಕ್ಕೆ ಫಲಿತಾಂಶ

Deepika Padukone
ಬಾಲಿವುಡ್34 mins ago

Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

Sania Mirza
ಕ್ರೀಡೆ42 mins ago

Sania Mirza: ಹೇಳಲು ತುಂಬಾ ಇದೆ, ಆದರೂ ಮೌನವಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌