ದೇಶ
Petrol Diesel Price: ಗ್ಯಾಸ್ ಬೆಲೆ ಇಳಿಕೆ ಖುಷಿಗೆ ಕತ್ತರಿ; ಶೀಘ್ರದಲ್ಲೇ ಏರಲಿದೆಯೇ ಪೆಟ್ರೋಲ್ ಬೆಲೆ?
Petrol Diesel Price: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನೇದಿನೆ ಏರಿಕೆಯಾಗುತ್ತಿದೆ. ಇದರಿಂದಾಗಿ ಭಾರತದ ತೈಲ ಕಂಪನಿಗಳಿಗೆ ನಷ್ಟವಾಗುತ್ತಿದೆ. ಹಾಗಾಗಿ, ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಅದಕ್ಕಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಭಾಗವಾಗಿಯೇ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು (Central Government) ಅಡುಗೆ ಅನಿಲ ಸಿಲಿಂಡರ್ (LPG Price Cut) ಬೆಲೆಯನ್ನು 200 ರೂ. ಇಳಿಸಿತ್ತು. ಬೆಲೆಯೇರಿಕೆಯ ಬಿಸಿಗೆ ತತ್ತರಿಸಿದ್ದ ಜನರಿಗೆ ಇದು ತುಸು ಅನುಕೂಲ ಆಗಿತ್ತು. ಆದರೆ, ಈ ಖುಷಿ ತುಂಬ ದಿನ ಇರುವ ಸಾಧ್ಯತೆ ಕಡಿಮೆ. ಏಕೆಂದರೆ, ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುವ (Petrol Diesel Price) ಸಾಧ್ಯತೆ ಇದೆ.
ಹೌದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೆಲ ತಿಂಗಳಿಂದ ಏರಿಕೆ ಕಂಡಿದೆ. ಇದರಿಂದಾಗಿ ಭಾರತದ ತೈಲ ಕಂಪನಿಗಳಿಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 95 ಡಾಲರ್ ಆಗಿರುವುದರಿಂದ ಭಾರತದಲ್ಲಿ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಶೀಘ್ರದಲ್ಲೇ ಏರಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರವು ಕಳೆದ ವರ್ಷದ ಮೇ ತಿಂಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿತ್ತು. ಆ ಮೂಲಕ ಜನರ ಹೊರೆಯನ್ನು ತುಸು ಕಡಿಮೆ ಮಾಡಿತ್ತು. ಇದರಿಂದಾಗಿ ಕಳೆದ ವರ್ಷದಿಂದಲೂ ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆಯು 100 ರೂ. ಅಥವಾ ಇದರ ಆಸುಪಾಸಿನಲ್ಲಿತ್ತು. ಆದರೆ, ಹಣದುಬ್ಬರದ ಏರಿಕೆಯಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rahul Gandhi: ಬೆಲೆ ಏರಿಕೆಯಿಂದಾಗಿ ಕಣ್ಣೀರು ಹಾಕಿದ್ದ ವ್ಯಕ್ತಿ ಜತೆ ರಾಹುಲ್ ಗಾಂಧಿ ಲಂಚ್!
21 ಸಾವಿರ ಕೋಟಿ ರೂ. ನಷ್ಟ
ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸಿದಾಗ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 85 ಡಾಲರ್ ಇತ್ತು. ಆದರೀಗ ಅದು 95 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಭಾರತದ ಸರ್ಕಾರಿ ಒಡೆತನದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೇರಿ ಹಲವು ಕಂಪನಿಗಳಿಗೆ 21 ಸಾವಿರ ಕೋಟಿ ರೂ. ನಷ್ಟವಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವುದು ತೈಲ ಕಂಪನಿಗಳಿಗೆ ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.
ಬೆಲೆಯೇರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯಾದರೆ ಆಕ್ರೋಶ ಹೆಚ್ಚಾಗಲಿದೆ. ಅದರಲ್ಲೂ, ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರವು ಬೆಲೆಯೇರಿಕೆಗೆ ಆಸ್ಪದ ಕೊಡುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.
ಕರ್ನಾಟಕ
Congress Politics : ಕೆ.ಎನ್. ರಾಜಣ್ಣಗೆ ಖಡಕ್ ವಾರ್ನಿಂಗ್ ಕೊಟ್ಟ ಸುರ್ಜೇವಾಲ!
Congress Politics : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಇದ್ದರೆ ರಾಜ್ಯ ಸರ್ಕಾರ ಪತನ ಆಗುತ್ತದೆ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾಗಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ನವ ದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಆದರೆ, ಪಕ್ಷದ ಆಂತರಿಕ ರಾಜಕೀಯ (Congress Politics) ಮಾತ್ರ ಹದಗೆಟ್ಟಿದೆ. ಒಬ್ಬರಾದ ಮೇಲೆ ಒಬ್ಬರು ಸರ್ಕಾರ ಹಾಗೂ ಸಚಿವರ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದು ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊದಲಿಗೆ ಸಚಿವರ ವಿರುದ್ಧವೇ ಭ್ರಷ್ಟಾಚಾರ, ವರ್ಗಾವಣೆ ದಂಧೆ ಬಗ್ಗೆ ಆರೋಪಿಸಿ ಹಿರಿಯ ಶಾಸಕರು ಪತ್ರ ಬರೆದಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಮಾತುಗಳನ್ನಾಡಿದ್ದರು. ಈಚೆಗೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡದೇ ಹೋದರೆ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಎಂದು ಸಚಿವ ಕೆ.ಎನ್. ರಾಜಣ್ಣ (Minister KN Rajanna) ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ (Karnataka Politics) ಗದ್ದಲವನ್ನು ಎಬ್ಬಿಸಿತ್ತು. ಪ್ರತಿಪಕ್ಷಗಳಿಗೆ ಆಹಾರವೂ ಆಗಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ(Congress state in-charge Randeep Singh Surjewala) ಅವರು ಕೆ.ಎನ್. ರಾಜಣ್ಣ ಸಹಿತ ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿಯೇ ವಾರ್ನಿಂಗ್ ನೀಡಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ಮೂರು ಡಿಸಿಎಂ ಸೃಷ್ಟಿ ಮಾಡಬೇಕು ಎಂಬ ಹೇಳಿಕೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಈಗಾಗಲೇ ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಸೂಚನೆ ಕೊಡುವ ಕೆಲಸವನ್ನು ಮಾಡಿದ್ದಾರೆ. ಕೆಲ ನಾಯಕರಿಂದ ಈ ರೀತಿಯ ಹೇಳಿಕೆ ಹೊರಬರುತ್ತಿದೆ. ನಾವು ಕರ್ನಾಟಕ ಸರ್ಕಾರದ ಯೋಜನೆ ಮತ್ತು ಮಾಡೆಲ್ ಬಗ್ಗೆ ಮಾತನಾಡಬೇಕು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಂತ್ರ ಮಾಡುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ವಾರ್ನಿಂಗ್ ಕೊಡುತ್ತಿದ್ದೇನೆ. ಈ ರೀತಿಯ ವಿಚಾರ ಪಕ್ಷದ ಒಳಗೆಯಾಗಲಿ, ಹೊರಗಡೆಯಾಗಲಿ ಹೇಳಿಕೆ ಕೊಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು.
ಮುಂದೆ ಹೇಳಿಕೆ ನೀಡದಂತೆ ಎಚ್ಚರಿಕೆ
ನಾನು ಈಗಾಗಲೇ ಇಂತಹ ಹೇಳಿಕೆ ಬಗ್ಗೆ ಕೆ.ಎನ್. ರಾಜಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ರೀತಿಯ ಹೇಳಿಕೆಯನ್ನು ಮುಂದೆ ನೀಡದಿರಲು ಸೂಚನೆ ನೀಡಿದ್ದೇನೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮಗಳಿಗೆ ತಿಳಿಸಿದರು.
ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೇವಾಲ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹಿಂದಿನಿಂದಲೇ ಹೇಳುತ್ತಿದ್ದೆ. ಅದು ಈಗ ಬಹಿರಂಗವಾಗಿ ಹೊರ ಬಂದಿದೆ. ಇದು ಅವಕಾಶವಾದಿ ಮೈತ್ರಿಯಾಗಿದೆ. ಸೋತ ಇಬ್ಬರಿಂದ ಮೈತ್ರಿಯಾಗಿದೆ. ಝಿರೊ ಪ್ಲಸ್ ಝಿರೊ ಮೈತ್ರಿ ಈಸ್ ಈಕ್ವಲ್ ಟು ಝಿರೊ ಎಂದು ಟಾಂಗ್ ನೀಡಿದರು.
ಹೊಸ ಮಾಡೆಲ್ ನಿರ್ಮಾಣ ಮಾಡಿದ ಕರ್ನಾಟಕ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ ಹೊಸ ಮಾಡೆಲ್ ಅನ್ನು ನಿರ್ಮಾಣವಾಗಿದೆ. ಇದು ಈಗ ದೇಶದ ಮಾಡೆಲ್ ಆಗಿ ಹೊರಹೊಮ್ಮಿದೆ. ನಮ್ಮ ಯೋಜನೆಗಳೆಲ್ಲವನ್ನೂ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳವರು ನಮ್ಮ ಯೋಜನೆಯನ್ನು ತಮ್ಮ ರಾಜ್ಯಗಳಲ್ಲಿ ತರುತ್ತಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಇದನ್ನೂ ಓದಿ: Cauvery water dispute : ದೇವೇಗೌಡರ ನೋಡಿ ಕಲಿಯಲು ಬಿಜೆಪಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ!
ಭವಿಷ್ಯವನ್ನಷ್ಟೇ ನೋಡುತ್ತೇವೆ
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿರುವ ವಿಚಾರದ ಬಗ್ಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ನಾವು ಹಿಂದಿನದರ ಬಗ್ಗೆ ನೋಡಲ್ಲ, ಭವಿಷ್ಯದ ಬಗ್ಗೆ ನೋಡುತೇವೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ದೇಶ
PM Narendra Modi: ಮಹಿಳಾ ಮೀಸಲು ಜಾರಿ ಮಾಡಿದ್ದು ಯಾರು? ಮಹಿಳೆಯರು ನೆನಪಿಟ್ಟುಕೊಳ್ಳಬೇಕು ಎಂದ ಮೋದಿ
PM Narendra Modi: ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈಗಿನಿಂದಲೇ ಪ್ರಚಾರ ಆರಂಭಿಸಿದ್ದಾರೆ.
ನವದೆಹಲಿ: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ (Rajasthan Assembly Election) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ಚುನಾವಣೆಯ ಕಹಳೆಯನ್ನು ಮೊಳಗಿಸಿದರು. ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿರುವ ಪರಿವರ್ತನ್ ಸಂಕಲ್ಪ್ ಮಹಾಸಭಾ (Parivartan Sankalp Mahasabha) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, ತಮ್ಮ ಭಾಷಣದಲ್ಲಿ ಸನಾತನ ಧರ್ಮ(Sanatan Dharma), ಇಂಡಿಯಾ ಕೂಟ(INDIA Bloc), ಚಂದ್ರಯಾನ-3 (Chandrayaan 3), ಜಿ20 ಶೃಂಗಸಭೆ(G20 Summit) ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ಮಾತನಾಡುತ್ತಲೇ, ”ಮಹಿಳಾ ಮೀಸಲು ವಿಧೇಯಕವನ್ನು ಯಾರು ಜಾರಿಗೆ (Women’s Reservation Bill) ತಂದರು” ಎಂದು ಪ್ರಶ್ನಿಸಿದರು. ಬಿಜೆಪಿ ಕಾರ್ಯಕರ್ತರು, ”ಮೋದಿ ಮೋದಿ ಮೋದಿ” ಎಂದು ಘೋಷಣೆ ಕೂಗಿದರು. ಆಗ ಮೋದಿ, ”ಇಲ್ಲ ನಿಮ್ಮ ಉತ್ತರ ತಪ್ಪು. ನಿಮ್ಮ ಒಂದು ವೋಟು ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೆ ತಂದಿದೆ” ಎಂದು ಹೇಳಿದರು.
ಕಾಂಗ್ರೆಸ್ ಮನಸ್ಸು ಮಾಡಿದ್ದರೆ 30 ವರ್ಷಗಳ ಹಿಂದೆಯೇ ಮಹಿಳಾ ಮೀಸಲು ವಿಧೇಯಕವನ್ನು ಜಾರಿಗೆ ತರುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಮೀಸಲು ಜಾರಿ ಮಾಡುವುದು ಬೇಕಾಗಿರಲಿಲ್ಲ. ಕಾಂಗ್ರೆಸ್ ಮತ್ತು ಘಮಂಡಿಯಾ ಒಕ್ಕೂಟವು ಮಹಿಳಾ ಮೀಸಲು ವಿರುದ್ಧವಿದೆ. ರಾಜಸ್ಥಾನದ ನನ್ನ ಸಹೋದರಿಯರೇ, ಈ ಸಂಗತಿಯನ್ನು ಯಾವಾಗಲೂ ನೆನಪಡಿ ಮತ್ತು ಎಚ್ಚರಿಕೆ ವಹಿಸಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ
शौर्य, स्वाभिमान और बलिदान की धरती राजस्थान आकर मैं सदैव गौरवान्वित महसूस करता हूं। जयपुर में ‘परिवर्तन संकल्प महासभा’ को संबोधित कर रहा हूं। https://t.co/x7loKuXBUR
— Narendra Modi (@narendramodi) September 25, 2023
ರಾಜಸ್ಥಾನದ ಸನಾತನ ಪರಂಪರೆಯನ್ನು ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಚುನಾವಣೆ ಮಾತ್ರವಲ್ಲ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟಕ್ಕೆ ರಾಜಸ್ಥಾನವು ಪಾಠ ಕಲಿಸಲಿದೆ. ಅವರು ಬೇರು ಸಮೇತ ಕಿತ್ತು ಬೀಳಲಿದ್ದಾರೆ ಎಂದು ಹೇಳಿದರು.
ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕಣರವನ್ನು ಉಲ್ಲೇಖಿಸಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ವಿರುದ್ಧ ಗೆಹ್ಲೋಟ್ ಸರ್ಕಾರವು ಕ್ರಮ ಕೈಗೊಂಡಿಲ್ಲ. ಆದರೆ, ಬಿಜೆಪಿಯು ಶೀಘ್ರವೇ ಆಡಳಿತಕ್ಕೆ ಬರತ್ತದೆ ಮತ್ತು ಯುವಕರ ತೊಂದರೆಯನ್ನು ಪರಿಹರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಎಲ್ಲ ಗ್ಯಾರಂಟಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ
ಒಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗ್ಯಾರಂಟಿ ಹೆಸರಿನಲ್ಲಿಯೇ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕಾರ್ಯಕರ್ತ ಮಹಾಕುಂಭದಲ್ಲಿ (Karyakarta Mahakumbh) ಪಾಲ್ಗೊಂಡ ಅವರು, “ದೇಶದಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲು ಮೋದಿಯೇ ಗ್ಯಾರಂಟಿ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Women’s Reservation Bill: ಅವಿರೋಧವಾಗಿ ‘ಮಹಿಳಾ ಮೀಸಲು ವಿಧೇಯಕ’ ಅಂಗೀಕರಿಸಿದ ರಾಜ್ಯಸಭೆ! ಇತಿಹಾಸ ಸೃಷ್ಟಿ
“ವರ್ಷಗಳವರೆಗೆ ದೇಶವನ್ನು ಆಳಿದ ಕಾಂಗ್ರೆಸ್‌ಗೆ ದೇಶಾದ್ಯಂತ ಶೌಚಾಲಯ ನಿರ್ಮಿಸಬೇಕು ಎಂಬ ಕನಿಷ್ಠ ಕಾಳಜಿಯೂ ಇರಲಿಲ್ಲ. ಮಹಿಳೆಯರಿಗೆ ಕನಿಷ್ಠ ಒಂದು ಬ್ಯಾಂಕ್ ಖಾತೆ ಇರಲಿಲ್ಲ. ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಲು, ಬ್ಯಾಂಕ್ ಖಾತೆ ತೆರೆಯಲು ಮೋದಿಯೇ ಬರಬೇಕಾಯಿತು. ಏಕೆಂದರೆ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ನಿಯತ್ತು ಇರಲಿಲ್ಲ” ಎಂದು ಹರಿಹಾಯ್ದರು. ಹಾಗೆಯೇ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ರಾಜ್ಯ, ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು. ಭಾಷಣದ ವೇಳೆ ಮೋದಿ ಅವರು ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ, ಸನಾತನ ಧರ್ಮ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. “ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿ, ಅಂಗೀಕಾರ ಪಡೆದಿದೆ. ಇದು ದೇಶದಲ್ಲಿಯೇ ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡ ಐತಿಹಾಸಿಕ ತೀರ್ಮಾನವಾಗಿದೆ. ಆದರೆ, ಕಳೆದ 30 ವರ್ಷದಿಂದ ಮಹಿಳಾ ಮೀಸಲಾತಿ ಭರವಸೆ ನೀಡಿತೇ ಹೊರತು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವು ಮಾತ್ರ ಮಹಿಳಾ ಸಬಲೀಕರಣದ ಗ್ಯಾರಂಟಿ ಜಾರಿಗೆ ತಂದಿದ್ದೇವೆ” ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗ
Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ
Indian Coast Guard: ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard)ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್ ಲೈನ್ ಮೂಲಕ ಸೆಪ್ಟಂಬರ್ 27ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.
ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard) ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನಾವಿಕ(General Duty) 260 ಮತ್ತು ನಾವಿಕ(Domestic Branch) 30 ಹುದ್ದೆಗಳಿವೆ. ಕಡಲ ತೀರದ ರಕ್ಷಣೆಯ ಮೂಲಕ ತಾಯಿ ನಾಡಿಗಾಗಿ ಸೇವೆ ಸಲ್ಲಿಸಲಿರುವ ಅಪೂರ್ವ ಅವಕಾಶ ಇದಾಗಿದೆ. ಈ ಹಿಂದೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8 ಕೊನೆಯ ದಿನ ಎಂದು ಹೇಳಲಾಗಿತ್ತಾದರೂ ಇದೀಗ ಸಮಯಾವಕಾಶವನ್ನು ಸೆಪ್ಟಂಬರ್ 27ರವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಹತೆ
ನಾವಿಕ(Domestic Branch) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Council of Boards of School Education (COBSE) ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು +2 ಕೋರ್ಸ್‌ನಲ್ಲಿ ಗಣಿತ ಮತ್ತು ಭೌತಶಾಸ್ತ್ರ ವನ್ನು ಓದಿದವರು ನಾವಿಕ(General Duty) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಪ್ರಕಟಣೆ ತಿಳಿಸಿದೆ. ತಮ್ಮ ಹುದ್ದೆಯ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರುವುದು ಕಡ್ಡಾಯ.
ವೇತನದ ವಿವರ
ನಾವಿಕ(General Duty)-21700-69,100 ರೂ., ನಾವಿಕ(Domestic Branch)-21700-69,100 ರೂ. ವೇತನ ನಿಗದಿ ಪಡಿಸಲಾಗಿದೆ. ಇದಲ್ಲದೆ ಕೋಸ್ಟ್ ಗಾರ್ಡ್ ತನ್ನ ಸದಸ್ಯರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಹಸಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಒದಗಿಸಲಿದೆ.
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯಸ್ಸಿನಲ್ಲಿ ರಿಯಾಯಿತಿ ಇದೆ. ಎಸ್.ಸಿ. ಮತ್ತು ಎಸ್.ಟಿ. ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಅನ್ವಯವಾಗಲಿದೆ.
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ವಿವಿಧ ಹಂತಗಳ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಆರಂಭದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು. ಅದರಲ್ಲಿ ಉತ್ತೀರ್ಣರಾದವರನ್ನು ಫಿಸಿಕಲ್ ಫಿಟ್ನೆಸ್ ಪರೀಕ್ಷೆಗೆ ಕರೆಯಲಾಗುತ್ತದೆ. ಇದರಲ್ಲಿ 1.6 ಕಿ.ಮೀ.ಯನ್ನು 7 ನಿಮಿಷಗಳಲ್ಲಿ ತಲುಪಬೇಕು ಮತ್ತು 20 ಸ್ಕ್ವಾಟ್ ಅಪ್ಸ್, 10 ಪುಶ್ ಅಪ್ ಮಾಡುವಂತಿರಬೇಕು. ಬಳಿಕ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕೊನೆಯ ಹಂತದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸಂಬಂಧಿತ ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಕ ಎಲ್ಲಾ ಮೂಲ ದಾಖಲೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಪಾವತಿಸಬೇಕು. ಎಸ್.ಸಿ. ಮತ್ತು ಎಸ್.ಟಿ. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ.
ಇದನ್ನೂ ಓದಿ: Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು
ಹೆಚ್ಚಿನ ಮಾಹಿತಿಗೆ ಇಂಡಿಯಾ ಕೋಸ್ಟ್ ಗಾರ್ಡ್ ವೆಬ್ ಸೈಟ್ ಕ್ಲಿಕ್ ಮಾಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ದೇಶ
AIADMK Quits NDA: ಬಿಜೆಪಿ ಜತೆಗೆ ಮೈತ್ರಿ ಇಲ್ಲ; ಎಐಎಡಿಎಂಕೆ ಅಧಿಕೃತ ಘೋಷಣೆ! ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ
AIADMK Quits NDA: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಕಾರಣಕ್ಕಾಗಿಯೇ ಬಿಜೆಪಿ ಜತೆಗಿನ ಮೈತ್ರಿಗೆ ಅಂತ್ಯ ಹಾಡಿದ್ದೇವೆ ಎಂದು ಎಐಎಡಿಎಂಕೆ ಹೇಳಿದೆ.
ಚೆನ್ನೈ, ತಮಿಳುನಾಡು: ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಭಾರತೀಯ ಜನತಾ ಪಾರ್ಟಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಸೋಮವಾರ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ(AIADMK Quits NDA). ಅಲ್ಲದೇ, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದೆ. ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈಯ (Tamil Nadu BJP President K Annamalai) ಅವರ ನಿರಂತರವಾಗಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ, ಎಂಜಿಆರ್ ಹಾಗೂ ಅಣ್ಣಾದೊರೈ ಜತೆಗೆ ಸಮಾಜ ಸುಧಾರಕ ಪೆರಿಯಾರ್ ವಿರುದ್ಧ ಅವಮಾನಕರ ಹೇಳಿಕೆಗಳನ್ನು ನೀಡುತ್ತಿದ್ದರು. ಇದೇ ಕಾರಣಕ್ಕಾಗಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಎನ್‌ಡಿಎದಿಂದ ಹೊರ ಬಂದಿರುವುದಾಗಿ ಪಕ್ಷವು ಹೇಳಿದೆ.
ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಎಐಎಡಿಎಂಕೆ ಸೋಮವಾರ ಸಭೆ ನಡೆಸಿತು. ಈ ಸಭೆಯಲ್ಲಿ ಅವವಿರೋಧವಾಗಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದ ಬಿಜೆಪಿ ನಾಯಕತ್ವವು ಪಕ್ಷದ ಪ್ರಧಾನ ಕಾರ್ಯದರ್ಶಿ ಇಪಿಎಸ್, ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಮಾಜಿ ಮುಖ್ಯಮಂತ್ರಿಗಳ ಅನಗತ್ಯವಾಗಿ ಟೀಕೆ ಮಾಡುತ್ತಾ ಬರುತ್ತಿದೆ. ಇದರಿಂದ ಬೇಸತ್ತು ಮೈತ್ರಿ ಮುರಿದುಕೊಳ್ಳುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಐಎಡಿಎಂಕೆ ಡೆಪ್ಯುಟಿ ಕೋಆರ್ಡಿನೇಟರ್ ಕೆ ಪಿ ಮುನುಸಾಮಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎನ್‍ಡಿಎದಿಂದ ಹೊರ ಬಂದಿರುವ ಎಐಎಡಿಎಂಕೆ ಪ್ರತಿಪಕ್ಷಗಳು ಕೂಟವಾದ ಇಂಡಿಯಾ ಅಲೈನ್ಸ್ ಭಾಗ ಕೂಡ ಆಗಿಲ್ಲ. ಹಾಗಾಗಿ, ಮುಂಬರುವ ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಘೋಷಿಸಿದೆ. ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಹದಗೆಟ್ಟ ಸಂಬಂಧಗಳ ಬಗ್ಗೆ ತಿಂಗಳುಗಳ ಊಹಾಪೋಹಗಳ ನಂತರ ಪಕ್ಷವು ಈ ಪ್ರಮುಖ ನಿರ್ಧಾರಕ್ಕೆ ಬಂದಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಎಐಎಡಿಎಂಕೆ ನಾಯಕರ ವಿರುದ್ಧ ಪದೇ ಪದೇ ಟೀಕೆಗಳ್ನು ಮಾಡಿದ್ದಾರೆ. ಅವರ ಈ ಟೀಕೆಗಳಿಗೆ ಬಿಜೆಪಿಯ ಉನ್ನತ ನಾಯಕತ್ವದ ಬೆಂಬಲ ಇದ್ದಂತೆ ಕಾಣುತ್ತಿತ್ತು.
ಬಿಜೆಪಿ ಅಧ್ಯಕ್ಷನಾಗಲು ಅಣ್ಣಾಮಲೈ ಅಯೋಗ್ಯ ಎಂದ ಎಐಎಡಿಎಂಕೆ ನಾಯಕ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Tamil Nadu BJP President K. Annamalai) ಅವರು ಮಾಡುತ್ತಿರುವ ಟೀಕೆಗಳಿಂದ ಬೇಸತ್ತಿರುವ ಎಐಎಡಿಎಂಕೆಯನ್ನು ಮೈತ್ರಿಯನ್ನು ಮುಂದುವರಿಸದಿರಲು ನಿರ್ಧರಿಸಿದೆ. ಈ ವಿಷಯವನ್ನು ಸ್ವತಃ ಎಐಎಡಿಎಂಕೆಯ ಹಿರಿಯ ನಾಯಕ ಡಿ ಜಯಕುಮಾರ್ ಅವರು ಒಂದು ವಾರದ ಹಿಂದೆ ತಿಳಿಸಿದ್ದರು.
ತಮಿಳುನಾಡಿನ ಹಿರಿಯ ನಾಯಕ ಅಣ್ಣಾದೊರೈ, ಸಮಾಜ ಸುಧಾರಕ ಪೆರಿಯಾರ್ ಮತ್ತು ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಅವರ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ನಾವು ಅವರ(ಬಿಜೆಪಿ) ಜತೆ ಹೋಗದಿರಲು ನಿರ್ಧರಿಸಿದ್ದೇವೆ. ಸದ್ಯಕ್ಕಂತೂ ಮೈತ್ರಿ ಖತಂ ಆಗಿದೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಯೋಚಿಸೋಣ ಎಂದು ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಅವರು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: BJP Politics : ನಾಗಲ್ಯಾಂಡ್, ಮೇಘಾಲಯ, ಪುದುಚೇರಿ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ! ಕರ್ನಾಟಕಕ್ಕೆ ಯಾವಾಗ?
ಅಣ್ಣಾಮಲೈ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಲು ಅಯೋಗ್ಯರಾಗಿದ್ದಾರೆ. ಅವರು ತಮ್ಮನ್ನ ತಾವು ಪ್ರೊಜೆಕ್ಟ್ ಮಾಡಿಕೊಳ್ಳಲು ತಮಿಳುನಾಡಿನ ಹಿರಿಯ ನಾಯಕರನ್ನು ಹೀಯಾಳಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಜಯಕುಮಾರ್ ಅವರು ಹೇಳಿದ್ದರು.
ಈ ಹಿಂದೆ, ಪಕ್ಷದ ಧೀಮಂತ ನಾಯಕಿ ಜಯಲಲಿತಾ ಅವರ ಕುರಿತು ಅಣ್ಣಾಮಲೈ ಅವರು ಟೀಕೆ ಮಾಡಿದ್ದರು. ಎಐಎಡಿಎಂಕೆ ಕುರಿತು ಟೀಕೆಗಳನ್ನು ಮಾಡದಂತೆ ಅಣ್ಣಾಮಲೈ ಅವರನ್ನು ನಿರ್ಬಂಧಿಸಬೇಕು ಎಂದು ಎಐಎಡಿಎಂಕೆ ನಾಯಕರು ಬಿಜೆಪಿಯ ಹಿರಿಯ ನಾಯಕರಿಗೆ ಕೋರಿದ್ದರು. ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಗಳನ್ನು ಹೀಯಾಳಿಸುವುದನ್ನು ಪಕ್ಷದ ಕಾರ್ಯಕರ್ತರು ಇನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಕ್ರಿಕೆಟ್22 hours ago
IND vs AUS: ಸರಣಿ ವಶಪಡಿಸಿಕೊಂಡ ಭಾರತ; ದ್ವಿತೀಯ ಪಂದ್ಯದಲ್ಲಿ 99 ರನ್ ಗೆಲುವು
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ6 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ದೇಶ21 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ದೇಶ20 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಕರ್ನಾಟಕ23 hours ago
Janata Darshan: ನಾಳೆ ರಾಜ್ಯಾದ್ಯಂತ ಏಕ ಕಾಲಕ್ಕೆ ʼಜನತಾ ದರ್ಶನʼ
-
ಕ್ರಿಕೆಟ್23 hours ago
IND vs AUS: ಅಯ್ಯರ್ ಬ್ಯಾಟಿಂಗ್ ಆವೇಶ ಕಂಡು ನಿಟ್ಟುಸಿರು ಬಿಟ್ಟ ಆಯ್ಕೆ ಸಮಿತಿ
-
ಅಂಕಣ6 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?