Accident In Chhattisgarh: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ, ಏಳು ಶಾಲಾ ಮಕ್ಕಳ ಸಾವು - Vistara News

ದೇಶ

Accident In Chhattisgarh: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ, ಏಳು ಶಾಲಾ ಮಕ್ಕಳ ಸಾವು

Accident In Chhattisgarh: ಮಕ್ಕಳಿದ್ದ ಆಟೋಗೆ ಟ್ರಕ್‌ ಗುದ್ದಿದ ಕಾರಣ ಆಟೋ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸುತ್ತಲೇ ಟ್ರಕ್‌ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

VISTARANEWS.COM


on

Chhattisgarh Accident
ಟ್ರಕ್‌ ಗುದ್ದಿದ ರಭಸಕ್ಕೆ ನಜ್ಜುಗುಜ್ಜಾದ ಆಟೋ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯ್‌ಪುರ: ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Accident In Chhattisgarh) ಸಂಭವಿಸಿದ್ದು, ಏಳು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಕೊರೇರ್‌ ಚಿಲ್ಹಾಟಿ ಚೌಕ್‌ನಲ್ಲಿ ಚಲಿಸುತ್ತಿದ್ದ ಆಟೋಗೆ ಟ್ರಕ್‌ ಡಿಕ್ಕಿಯಾಗಿದ್ದು, ಆಟೋದಲ್ಲಿದ್ದ ಐವರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎಂಟು ಶಾಲಾ ಮಕ್ಕಳನ್ನು ಕೂರಿಸಿಕೊಂಡು ಅವರ ಮನೆಗೆ ಹೊರಟ ವೇಳೆ ಟ್ರಕ್‌ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ಅಷ್ಟೇ ಅಲ್ಲ, ಆಟೋದ ಕೆಲ ಭಾಗಗಳು ರಸ್ತೆ ತುಂಬ ಚೆಲ್ಲಾಡಿವೆ. ಅಪಘಾತದ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರು ಮಕ್ಕಳು ಹಾಗೂ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಮಗು ಹಾಗೂ ಆಟೋ ಚಾಲಕನ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Soldier died : ಊರಿನ ಜಾತ್ರೆಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್‌ ಅಪಘಾತದಲ್ಲಿ ಮೃತ್ಯು, ಎಲ್ಲೆಡೆ ಕಂಬನಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Driving Licence New Rules: ಡ್ರೈವಿಂಗ್‌ ಲೈಸೆನ್ಸ್‌; ಜೂನ್‌ 1ರಿಂದ ಹೊಸ ರೂಲ್ಸ್‌!

Driving Licence New Rules: ಚಾಲನಾ ಪರವಾನಗಿ ಪಡೆಯಲು ಸರ್ಕಾರ ನಿಯಮಾವಳಿಗಳನ್ನು ಬದಲಾಯಿಸಿದೆ. ಈ ನಿಯಮ ಸಮರ್ಪಕವಾಗಿ ಜಾರಿಗೆ ಬಂದರೆ ಪ್ರಾದೇಶಿಕ ಸಾರಿಗೆ ಕಚೇರಿಗೇ ಹೋಗಿ ಚಾಲನಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಚಾಲನಾ ತರಬೇತಿ ಸಂಸ್ಥೆಗಳಿಗೆ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅಂತಿಮವಾಗಿ ಪ್ರಮಾಣಪತ್ರ ನೀಡುವ ನಿಯಂತ್ರಣ ಸಾರಿಗೆ ಇಲಾಖೆಗೇ ಇರುತ್ತದೆ.

VISTARANEWS.COM


on

By

Driving Licence New Rules
Koo

ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಬೇಕಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಂದಲೂ ಚಾಲನಾ ಪರವಾನಗಿ (Driving Licence New Rules) ಪಡೆಯಬಹುದಾಗಿದೆ. ಸರ್ಕಾರವು ಚಾಲನಾ ಪರವಾನಗಿ ಪಡೆಯುವ ನಿಯಮವನ್ನು (New Rules) ಬದಲಾಯಿಸಿದ್ದು, ಜೂನ್ 1ರಿಂದ ಇದು ಜಾರಿಗೆ ಬರಲಿದೆ. ಮೊದಲು ಇದು ಆಯ್ದ ನಗರಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿಯಾಗಲಿದೆ.

ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಸುಮಾರು 9,00,000 ಹಳೆಯ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವುದೂ ಹೊಸ ನಿಯಮಾವಳಿಯ ಗುರಿಗಳಲ್ಲಿ ಒಂದಾಗಿದೆ.

ಅತೀ ವೇಗದ ಚಾಲನೆಗೆ ದಂಡ 1000ರಿಂದ 2000 ರೂ. ಏರಿಕೆ, ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 25,000 ರೂ. ದಂಡ ತೆರಬೇಕಾಗುತ್ತದೆ. ವಾಹನದ ಮಾಲೀಕರ ಡ್ರೈವಿಂಗ್ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಮತ್ತು ಅಪ್ರಾಪ್ತರು 25 ವರ್ಷ ವಯಸ್ಸಿನವರೆಗೆ ಪರವಾನಗಿ ಪಡೆಯಲು ಸಾಧ್ಯವಾಗುವುದಿಲ್ಲ.

ರಸ್ತೆಗಳು ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ಚಾಲನಾ ಪರವಾನಗಿಗೆ ಅಗತ್ಯವಿರುವ ದಾಖಲಾತಿಗಳನ್ನು ನವೀಕರಿಸಿದೆ. ಹೊಸ ನಿಯಮಗಳು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಚಾಲಕರ ಅವಶ್ಯಕತೆಗಳಿಗೆ ಸ್ಪಂದಿಸುವಂತಿದೆ. ಈ ಬದಲಾವಣೆಯು ಆರ್‌ಟಿಒಗಳಲ್ಲಿ ದೈಹಿಕ ಪರೀಕ್ಷೆಗಳ ಅಗತ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದೆ.

ತರಬೇತಿ ನೀಡುವವರಿಗೆ ಹೊಸ ನಿಯಮಗಳು ಏನೇನು?

ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಕನಿಷ್ಠ 1 ಎಕರೆ ಭೂಮಿಯನ್ನು ಹೊಂದಿರಬೇಕು. 4 ಚಕ್ರ ವಾಹನಗಳ ಚಾಲನಾ ಕೇಂದ್ರಗಳಲ್ಲಿ ಹೆಚ್ಚುವರಿ 2 ಎಕರೆ ಭೂಮಿ ಅಗತ್ಯವಿದೆ. ಡ್ರೈವಿಂಗ್ ತರಬೇತಿ ಕೇಂದ್ರವು ಸೂಕ್ತವಾದ ಪರೀಕ್ಷಾ ಸೌಲಭ್ಯಕ್ಕೆ ಪ್ರವೇಶವನ್ನು ಹೊಂದಿರಬೇಕು.

ತರಬೇತುದಾರರು ಕನಿಷ್ಠ ಹೈಸ್ಕೂಲ್ ಡಿಪ್ಲೊಮಾ ಅಥವಾ ತತ್ಸಮಾನ ಶಿಕ್ಷಣವನ್ನು ಹೊಂದಿರಬೇಕು. ಹೆಚ್ಚುವರಿಯಾಗಿ, ಅವರು ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ತರಬೇತುದಾರರು ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಮೂಲಭೂತ ಅಂಶಗಳನ್ನು ತಿಳಿದಿರಬೇಕು.

ಕನಿಷ್ಠ 29 ಗಂಟೆಗಳ ತರಬೇತಿಯೊಂದಿಗೆ ಲಘು ವಾಹನ ತರಬೇತಿಯನ್ನು 4 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ತರಬೇತಿಯನ್ನು ಕನಿಷ್ಠ ಎರಡು ವಿಭಾಗಗಳಾಗಿ ವಿಂಗಡಿಸಬೇಕು: ಥಿಯರಿ ಮತ್ತು ಪ್ರಾಯೋಗಿಕ. ಥಿಯರಿ ಘಟಕವು 8 ಗಂಟೆಗಳನ್ನು ಒಳಗೊಳ್ಳಬೇಕು. ಆದರೆ ಪ್ರಾಯೋಗಿಕ ಘಟಕವು 21 ಗಂಟೆಗಳ ಕಾಲ ವ್ಯಾಪಿಸಬೇಕು.

ಭಾರೀ ಮೋಟಾರು ವಾಹನಗಳಿಗೆ 8 ಗಂಟೆಗಳ ಬೋಧನೆ ಮತ್ತು 31 ಗಂಟೆಗಳ ಪ್ರಾಯೋಗಿಕ ತಯಾರಿಯನ್ನು ಒಳಗೊಂಡ 38 ಗಂಟೆಗಳ ತರಬೇತಿ ಇರುತ್ತದೆ. ಈ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಬೇಕು.

ಈ ನಿಯಮಾವಳಿಗಳು ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಲಘು ಮತ್ತು ಭಾರೀ ವಾಹನಗಳ ಚಾಲಕರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಸೂಕ್ತ ತಯಾರಿಯನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.


ಶುಲ್ಕ ಎಷ್ಟಿದೆ?

ವಿವಿಧ ರೀತಿಯ ಚಾಲನಾ ಪರವಾನಿಗೆಗಳ ಸರ್ಕಾರಿ ಶುಲ್ಕ ಈ ಕೆಳಗಿನಂತಿರುತ್ತದೆ.
ಕಲಿಕಾ ಪರವಾನಿಗೆಗೆ 200 ರೂ., ಕಲಿಕಾ ಪರವಾನಗಿ ನವೀಕರಣಕ್ಕೆ 200 ರೂ., ಅಂತಾರಾಷ್ಟ್ರೀಯ ಪರವಾನಿಗೆಗೆ 1,000 ರೂ., ಶಾಶ್ವತ ಪರವಾನಗಿಗೆ 200 ರೂ.

ಅರ್ಜಿ ಸಲ್ಲಿಸುವ ವಿಧಾನ

ಚಾಲಕ ಪರವಾನಗಿಗೆ ಅರ್ಜಿ ಸಲ್ಲಿಸಲು https://parivahan.gov.in ಪೋರ್ಟಲ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ ಒಮ್ಮೆ “ಚಾಲನಾ ಪರವಾನಗಿ ಅನ್ವಯಿಸು” ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಕ್ಲಿಕ್ ಮಾಡಿ. ಇದು ಅರ್ಜಿ ನಮೂನೆಯನ್ನು ತೆರೆಯುತ್ತದೆ. ಅಗತ್ಯವಿದ್ದರೆ ನೀವು ಅದನ್ನು ಮುದ್ರಿಸಲು ಆಯ್ಕೆ ಮಾಡಬಹುದು.

ಇದನ್ನೂ ಓದಿ: Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

Continue Reading

ದೇಶ

Ebrahim Raisi: ಇಬ್ರಾಹಿಂ ರೈಸಿ ನಿಧನದಿಂದ ಭಾರತದಲ್ಲಿ ಚಿನ್ನ, ಪೆಟ್ರೋಲ್‌ ಬೆಲೆ ಏರಿಕೆ? ಹೀಗಿದೆ ವಿಶ್ವ ಮಾರುಕಟ್ಟೆ ಸ್ಥಿತಿ-ಗತಿ

Ebrahim Raisi: ಇಬ್ರಾಹಿಂ ರೈಸಿ ಅವರ ನಿಧನದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಂತೂ ಹೆಚ್ಚಿನ ಆತಂಕ ಎದುರಾಗಿದೆ. ಜಾಗತಿಕ ರಾಜಕೀಯ ಹಾಗೂ ಹಣಕಾಸು ಸ್ಥಿತಿಯ ಮೇಲೆ ಇಬ್ರಾಹಿಂ ರೈಸಿ ಸಾವು ಪರಿಣಾಮ ಬೀರಿದೆ. ಇಬ್ರಾಹಿಂ ರೈಸಿ ನಿಧನದಿಂದಾಗಿ ಪ್ರಮುಖ ತೈಲೋತ್ಪಾದಿತ ದೇಶಗಳ ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭಾರತದಲ್ಲೂ ಬೆಲೆಯೇರಿಕೆ ನಿಶ್ಚಿತ ಎಂದು ಹೇಳಲಾಗುತ್ತಿದೆ.

VISTARANEWS.COM


on

Ebrahim Raisi
Koo

ಟೆಹ್ರಾನ್:‌ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ (ಮೇ 19) ಅಜರ್‌ಬೈಜಾನ್‌ನ (Azerbaijan) ಗುಡ್ಡಗಾಡು ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದಾರೆ. ಹಂಗಾಮಿ ಅಧ್ಯಕ್ಷರನ್ನಾಗಿ ಮೊಹಮ್ಮದ್‌ ಮೊಖ್‌ಬೈರ್‌ (Mohammad Mokhber) ಅವರನ್ನು ನೇಮಿಸಲಾಗಿದೆ. ಇಬ್ರಾಹಿಂ ರೈಸಿ (Ebrahim Raisi) ನಿಧನದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 5 ದಿನ ಶೋಕಾಚರಣೆ ಘೋಷಿಸಲಾಗಿದೆ. ಭಾರತದಲ್ಲೂ ಒಂದು ದಿನ ಶೋಕಾರಣೆ ಘೋಷಿಸಲಾಗಿದೆ. ಇಬ್ರಾಹಿಂ ರೈಸಿ ನಿಧನದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಹೌದು, ಇರಾನ್‌ ಅಧ್ಯಕ್ಷರ ನಿಧನದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಬಂಗಾರದ ಬೆಲೆ ಜಾಸ್ತಿಯಾಗಿದೆ. ಕೆಲವೇ ದಿನಗಳಲ್ಲಿ ತೈಲ ಹಾಗೂ ಷೇರು ಮಾರುಕಟ್ಟೆ ಮೇಲೆಯೂ ಇದರ ಪರಿಣಾಮ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಚಿನ್ನದ ಬೆಲೆ ಶೇ.1ರಷ್ಟು ಏರಿಕೆ

ಇಬ್ರಾಹಿಂ ರೈಸಿ ನಿಧನದ ಬೆನ್ನಲ್ಲೇ ಚಿನ್ನದ ಬೆಲೆಯು ಶೇ.1ರಷ್ಟು ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್‌ಗೆ (Ounce) (ಒಂದು ಔನ್ಸ್‌ ಎಂದರೆ 28.3 ಗ್ರಾಂ) 2,438.44 ಡಾಲರ್‌ ಆಗಿದೆ. ಬೆಳ್ಳಿಯ ಬೆಲೆಯೂ ಕಳೆದ 11 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕವಾಗಿ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾದರೆ, ಖಂಡಿತವಾಗಿಯೂ ಭಾರತದಲ್ಲಿ ಚಿನ್ನದ ಬೆಲೆಯೇರಿಕೆ ಆಗಲಿದೆ. ಈಗಾಗಲೇ ಭಾರತದಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಈಗ ಮತ್ತಷ್ಟು ಏರಿಕೆಯಾಗುವ ಭೀತಿ ಉಂಟಾಗಿದೆ.

ತೈಲ ಮಾರುಕಟ್ಟೆ ಗತಿ ಏನು?

ಇಬ್ರಾಹಿಂ ರೈಸಿ ಅವರ ನಿಧನದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಂತೂ ಹೆಚ್ಚಿನ ಆತಂಕ ಎದುರಾಗಿದೆ. ಜಾಗತಿಕ ರಾಜಕೀಯ ಹಾಗೂ ಹಣಕಾಸು ಸ್ಥಿತಿಯ ಮೇಲೆ ಇಬ್ರಾಹಿಂ ರೈಸಿ ಸಾವು ಪರಿಣಾಮ ಬೀರಿದೆ. ಇಬ್ರಾಹಿಂ ರೈಸಿ ನಿಧನದಿಂದಾಗಿ ಪ್ರಮುಖ ತೈಲೋತ್ಪಾದಿತ ದೇಶಗಳ ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಸೌದಿ ಅರೇಬಿಯಾ ದೊರೆಯು ಜಪಾನ್‌ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇರಾನ್‌ನಲ್ಲಿಯೂ ಅಧ್ಯಕ್ಷರ ಬದಲಾವಣೆಯಿಂದಾಗಿ ತೈಲದ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ.

crude oil

ಹೀಗೆ, ತೈಲ ಉತ್ಪಾದಿಸುವ ದೇಶಗಳಲ್ಲಿ ರಾಜಕೀಯ ಸ್ಥಿತ್ಯಂತರಗಳ ಬದಲಾವಣೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲದ ಬೆಲೆಯು ಏರಿಕೆಯಾಗಲಿದೆ. ಇನ್ನು ಉತ್ಪಾದನೆ ಕಡಿಮೆಯಾಗಿ, ಬೇಡಿಕೆ ಜಾಸ್ತಿಯಾದರೆ ಕಚ್ಚಾತೈಲದ ಬೆಲೆಯು ಗಗನಕ್ಕೇರಲಿದೆ. ಇದರಿಂದ ಸಹಜವಾಗಿಯೇ ಭಾರತದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಇನ್ನಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿನ್ನ, ಇಂಧನದ ಜತೆಗೆ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

Continue Reading

ದೇಶ

Lok Sabha Election: 5ನೇ ಹಂತದಲ್ಲಿ ಕೇವಲ ಶೇ.57.5ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

Lok Sabha Election: ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಪಶ್ಚಿಮ ಬಂಗಾಳದ ಕೆಲವೆಡೆ ಮಾತ್ರ ಗಲಾಟೆ ನಡೆದಿವೆ ಎಂದು ತಿಳಿದುಬಂದಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನವು ಸೋಮವಾರ (ಮೇ 20) ಶಾಂತಿಯುತವಾಗಿ ನಡೆದಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಶೇ.57.5ರಷ್ಟು ಮತದಾನ ದಾಖಲಾಗಿದೆ. ಕಳೆದ ನಾಲ್ಕು ಹಂತದ ಮತದಾನದ ವೇಳೆ ಹೆಚ್ಚಿನ ಮತದಾನ ದಾಖಲಾಗಿತ್ತು. ಆದರೆ, ಐದನೇ ಹಂತದಲ್ಲಿ ಮತದಾನ ಪ್ರಮಾಣ ಭಾರಿ ಇಳಿಕೆಯಾಗಿದೆ. ಈ ಕುರಿತು ಚುನಾವಣೆ ಆಯೋಗ ಅಂಕಿ-ಅಂಶ ಬಿಡುಗಡೆ ಮಾಡಿದಾಗಲೇ ನಿಖರ ಮಾಹಿತಿ ಲಭ್ಯವಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಹೆಚ್ಚು

ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸುದ್ದಿಯಾಗಿದ್ದರೂ ಶೇ.73ರಷ್ಟು ಮತದಾನ ದಾಖಲಾಗಿದೆ. ಇನ್ನು ಲಡಾಕ್‌ನಲ್ಲಿ ಶೇ.67.15, ಜಾರ್ಖಂಡ್‌ನಲ್ಲಿ ಶೇ.61.90ರಷ್ಟು ಮತದಾನ ನಡೆದಿದೆ. ಇನ್ನು ಮಹಾರಾಷ್ಟ್ರದಲ್ಲಿ ಕೇವಲ ಶೇ.48.66ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲಿ ಕನಿಷ್ಠ ಮತದಾನ ದಾಖಲಾಗಿತ್ತು.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ.

ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿತ್ತು. ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಐದನೇ ಹಂತದ ಮತದಾನದೊಂದಿಗೆ ದೇಶಾದ್ಯಂತ ಇದುವರೆಗೆ ಒಟ್ಟು 428 ಕ್ಷೇತ್ರಗಳಲ್ಲಿ ಚುನಾವಣೆ ನಡೆದಂತಾಗಿದೆ. ಉಳಿದ ಕ್ಷೇತ್ರಗಳಲ್ಲಿ ಐದು ಹಾಗೂ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್‌ 1ರಂದು ಚುನಾವಣೆ ಮುಗಿಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯೂ ನಡೆದಿದ್ದು, ಜೂನ್‌ 4ರಂದೇ ಫಲಿತಾಂಶ ತಿಳಿಯಲಿದೆ.

ಇದನ್ನೂ ಓದಿ: Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

Continue Reading

ವಿದೇಶ

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಇರಾನ್ ಅಧ್ಯಕ್ಷರ ಸಾವು ವಿಶ್ವದಲ್ಲೇ ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಮಾಡಿದೆ. ವಿಮಾನ, ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ರಾಜಕೀಯ ನಾಯಕರ ಸಾವು ಇದೇ ಮೊದಲಲ್ಲ. ವಿಶ್ವದ ಹತ್ತು ಪ್ರಮುಖ ನಾಯಕರು ಈ ರೀತಿಯ ದುರಂತದಲ್ಲಿ ಮೃತಪಟ್ಟಿದ್ದಾರೆ.

VISTARANEWS.COM


on

By

Air Crashes
Koo

ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ (Ebrahim Raisi) ಅವರು ಭಾನುವಾರ ರಾತ್ರಿ ದೇಶದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ (Air Crashes) ಸಾವನ್ನಪ್ಪಿದ್ದಾರೆ. ರೈಸಿ ಅವರ ದಣಿವರಿಯದ ಸ್ಫೂರ್ತಿಯ ಸೇವೆಯ ಮಾರ್ಗದಲ್ಲಿ ಮುಂದುವರಿಯುವುದಾಗಿ ಇರಾನ್‌ ಆಡಳಿತ ರಾಷ್ಟ್ರದ ಜನರಿಗೆ ಭರವಸೆ ನೀಡಿದೆ. ವಿಮಾನ ದುರಂತಗಳಲ್ಲಿ ರಾಜಕೀಯ ನಾಯಕರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಬೇರೆಬೇರೆ ರಾಷ್ಟ್ರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.


ಸ್ವೀಡನ್ ಪ್ರಧಾನಿ ಅರ್ವಿಡ್ ಲಿಂಡ್‌ಮನ್ (1936)

ಸ್ವೀಡನ್‌ನ ಹಿಂದಿನ ಅಡ್ಮಿರಲ್ ಮತ್ತು ಎರಡು ಬಾರಿ ಸ್ವೀಡನ್‌ನ ಪ್ರಧಾನಮಂತ್ರಿ ಆಗಿದ್ದ ಸಾಲೋಮನ್ ಅರ್ವಿಡ್ ಅಚಾಟೆಸ್ ಲಿಂಡ್‌ಮನ್ ಪ್ರಭಾವಿ ಸಂಪ್ರದಾಯವಾದಿ ರಾಜಕಾರಣಿಯಾಗಿದ್ದರು. 1936ರ ಡಿಸೆಂಬರ್ 9ರಂದು ಲಿಂಡ್‌ಮನ್ ಅವರು ಪ್ರಯಾಣಿಸುತ್ತಿದ್ದ ಡಗ್ಲಾಸ್ ಡಿಸಿ-2 ಯುನೈಟೆಡ್ ಕಿಂಗ್‌ಡಂನ ಕ್ರೊಯ್ಡಾನ್ ವಿಮಾನವು ನಿಲ್ದಾಣದ ಬಳಿ ದಟ್ಟವಾದ ಮಂಜಿನಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಮನೆಗಳಿಗೆ ಅಪ್ಪಳಿಸಿದಾಗ ಮೃತಪಟ್ಟರು.

ಫಿಲಿಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ (1957)

ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರು ತಮ್ಮ ಬಲವಾದ ಭ್ರಷ್ಟಾಚಾರ ವಿರೋಧಿ ನಿಲುವು ಮತ್ತು ಜನಪ್ರಿಯ ಕಾರ್ಯಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಧ್ಯಕ್ಷತೆಯು 1957ರ ಮಾರ್ಚ್ 17ರಂದು ಥಟ್ಟನೆ ಕೊನೆಗೊಂಡಿತು. “ಮೌಂಟ್ ಪಿನಾಟುಬೊ” ಎಂದು ಕರೆಯಲ್ಪಡುವ ಅವರ ಸಿ-47 ವಿಮಾನವು ಸೆಬು ನಗರದ ಮನುಂಗಲ್ ಪರ್ವತಕ್ಕೆ ಅಪ್ಪಳಿಸಿತು. ಆಗ ಮ್ಯಾಗ್ಸೆಸೆ ಮೃತಪಟ್ಟರು. 25 ಪ್ರಯಾಣಿಕರ ಪೈಕಿ ಒಬ್ಬರು ಮಾತ್ರ ಬದುಕುಳಿದಿದ್ದರು.


ಬ್ರೆಜಿಲ್ ಅಧ್ಯಕ್ಷ ನೆರೆಯು ರಾಮೋಸ್ (1958)

ಬ್ರೆಜಿಲ್‌ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು 1958ರ ಜೂನ್ 16ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಮೃತಪಟ್ಟರು.

ಇರಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆರಿಫ್ (1966)

ಇರಾಕ್‌ನ ಎರಡನೇ ಅಧ್ಯಕ್ಷರಾದ ಅಬ್ದುಲ್ ಸಲಾಂ ಆರಿಫ್ ರಾಜಪ್ರಭುತ್ವವನ್ನು ಉರುಳಿಸಿದ 1958ರ ಕ್ರಾಂತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 1966ರ ಏಪ್ರಿಲ್ 13ರಂದು ಆರಿಫ್ ಅವರ ಇರಾಕಿ ಏರ್ ಫೋರ್ಸ್ ವಿಮಾನ, ಡಿ ಹ್ಯಾವಿಲ್ಯಾಂಡ್ ಡಿಹೆಚ್ 104 ಡೋವ್, ಬಸ್ರಾ ಬಳಿ ಅಪಘಾತಕ್ಕೀಡಾದಾಗ ನಿಧನರಾದರು. ಅವರ ಸಹೋದರ ಅಬ್ದುಲ್ ರಹಮಾನ್ ಆರಿಫ್ ಅವರ ಅನಂತರ ಅಧ್ಯಕ್ಷರಾದರು.


ಬ್ರೆಜಿಲ್ ಅಧ್ಯಕ್ಷ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ (1967)

ಬ್ರೆಜಿಲ್‌ನ 26ನೇ ಅಧ್ಯಕ್ಷ ಮತ್ತು ಮಾಜಿ ಮಿಲಿಟರಿ ಸರ್ವಾಧಿಕಾರದ ಪ್ರಮುಖ ವ್ಯಕ್ತಿಯಾಗಿದ್ದ ಹಂಬರ್ಟೊ ಡಿ ಅಲೆಂಕಾರ್ ಕ್ಯಾಸ್ಟೆಲೊ ಬ್ರಾಂಕೊ 1967ರ ಜುಲೈ 18ರಂದು ನಿಧನರಾದರು. ಅವರ ಅಧ್ಯಕ್ಷೀಯ ಅವಧಿ ಮುಗಿದ ಸ್ವಲ್ಪ ಸಮಯದ ಅನಂತರ ಕ್ಯಾಸ್ಟೆಲೊ ಬ್ರಾಂಕೋ ಅವರ ಪೈಪರ್ ಪಿಎ -23 ಅಜ್ಟೆಕ್ ವಿಮಾನ ಬ್ರೆಜಿಲಿಯನ್ ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತು. ಅವರ ಸಾವು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ (1980)

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ ತಾವು ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣವನ್ನು ಕಳೆದುಕೊಂಡು ದುರಂತ ಸಾವು ಕಂಡರು.


ಲೆಬನಾನ್ ಪ್ರಧಾನಿ ರಶೀದ್ ಕರಾಮಿ (1987)

ಲೆಬನಾನ್‌ನ ಅತಿ ಹೆಚ್ಚು ಬಾರಿ ಚುನಾಯಿತರಾದ ಪ್ರಧಾನಮಂತ್ರಿ ರಶೀದ್ ಕರಾಮಿ ಅವರು ಲೆಬನಾನಿನ ಅಂತರ್ಯುದ್ಧದ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1987ರ ಜೂನ್ 1ರಂದು, ಬೈರುತ್‌ಗೆ ಹೋಗುವ ಮಾರ್ಗದಲ್ಲಿ ಅವರ ಹೆಲಿಕಾಪ್ಟರ್‌ನಲ್ಲಿ ಬಾಂಬ್ ಸ್ಫೋಟಗೊಂಡು ಕರಾಮಿ ಕೊಲ್ಲಲ್ಪಟ್ಟರು.

ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ (1988)

ಪಾಕಿಸ್ತಾನದ ಆರನೇ ಅಧ್ಯಕ್ಷರಾದ ಜನರಲ್ ಮುಹಮ್ಮದ್ ಜಿಯಾ-ಉಲ್-ಹಕ್ ಅವರು 1988ರ ಆಗಸ್ಟ್ 17ರಂದು ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಸಿ-130 ಹರ್ಕ್ಯುಲಸ್ ವಿಮಾನವು ಬಹವಾಲ್‌ಪುರದಿಂದ ಟೇಕಾಫ್ ಆದ ಸ್ವಲ್ಪ ಸಮಯದ ಅನಂತರ ಅಪಘಾತಕ್ಕೀಡಾಯಿತು. ಅಪಘಾತದ ಕಾರಣವು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?


ಕಾಂಗ್ರೆಸ್‌ ನಾಯಕ ಮಾಧವರಾವ್ ಸಿಂಧಿಯಾ (2001)

ಮಾಧವರಾವ್ ಸಿಂಧಿಯಾ ಭಾರತದ ಪ್ರಮುಖ ರಾಜಕಾರಣಿ ಮತ್ತು ಕಾಂಗ್ರೆಸ್ ನಾಯಕರಾಗಿದ್ದರು. 2001ರ ಸೆಪ್ಟೆಂಬರ್ 30ರಂದು ವಿಮಾನ ಅಪಘಾತದಲ್ಲಿ ದಾರುಣ ಅಂತ್ಯ ಕಂಡರು. ಉತ್ತರ ಪ್ರದೇಶದ ಮೈನ್‌ಪುರಿ ಬಳಿ ಅವರ ಖಾಸಗಿ ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ 90 ಗಾಳಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಘಾತ ಸಂಭವಿಸಿತ್ತು.

ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (2024)

ಚಿಲಿಯ ಮಾಜಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿಮೆರಾ ಅವರು ಫೆಬ್ರವರಿ 2024ರಲ್ಲಿ ನಿಧನರಾದರು. ಪಿನೆರಾ ಅವರ ಹೆಲಿಕಾಪ್ಟರ್ ದಕ್ಷಿಣ ಚಿಲಿಯ ಸರೋವರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ಅವರು ಪ್ರಾಣ ಕಳೆದುಕೊಂಡರು. ಅವರು ಸತತ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ ಎಸ್‌ ರಾಜಶೇಖರ್‌ ರೆಡ್ಡಿ ಅವರೂ ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದರು.

Continue Reading
Advertisement
Driving Licence New Rules
ದೇಶ1 min ago

Driving Licence New Rules: ಡ್ರೈವಿಂಗ್‌ ಲೈಸೆನ್ಸ್‌; ಜೂನ್‌ 1ರಿಂದ ಹೊಸ ರೂಲ್ಸ್‌!

2nd PUC Exam 2 Result tomorrow
ಶಿಕ್ಷಣ4 mins ago

2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ನಾಳೆ; ಸಿಇಟಿ ಫಲಿತಾಂಶ ಯಾವಾಗ?

Compound Wall Collapse
ಕರ್ನಾಟಕ16 mins ago

Compound Wall Collapse: ಹಾಜಬ್ಬರ ಶಾಲೆ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ದಾರುಣ ಸಾವು

T20 World Cup 2024
ಕ್ರೀಡೆ20 mins ago

T20 World Cup 2024: ಇಂಡೋ-ಪಾಕ್​ ಮಿನಿ ವಿಶ್ವಕಪ್​ ಸಮರ ನಡೆಯುವ ಸ್ಟೇಡಿಯಂನ ವಿಡಿಯೊ ವೈರಲ್​

Ebrahim Raisi
ದೇಶ46 mins ago

Ebrahim Raisi: ಇಬ್ರಾಹಿಂ ರೈಸಿ ನಿಧನದಿಂದ ಭಾರತದಲ್ಲಿ ಚಿನ್ನ, ಪೆಟ್ರೋಲ್‌ ಬೆಲೆ ಏರಿಕೆ? ಹೀಗಿದೆ ವಿಶ್ವ ಮಾರುಕಟ್ಟೆ ಸ್ಥಿತಿ-ಗತಿ

Hit And Run Case
ಕರ್ನಾಟಕ50 mins ago

Hit And Run Case: ಕೂಡ್ಲಿಗಿಯಲ್ಲಿ ಹಿಟ್ ಆ್ಯಂಡ್ ರನ್; ಬೈಕ್‌ಗೆ ಲಾರಿ ಡಿಕ್ಕಿಯಾಗಿ ಯುವತಿ ಸಾವು

IPL 2024
ಕ್ರೀಡೆ2 hours ago

IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

Cannes Star Fashion
ಫ್ಯಾಷನ್2 hours ago

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Reservation in outsourcing
ಪ್ರಮುಖ ಸುದ್ದಿ2 hours ago

Reservation in Outsourcing: ಇನ್ನು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ; ಸಿದ್ದರಾಮಯ್ಯ ಸರ್ಕಾರದ ಮಹತ್ವದ ಆದೇಶ

Karnataka weather Forecast
ಮಳೆ2 hours ago

Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌