PM Narendra Modi: ದೇಶಕ್ಕೆ ಒಂದೇ ಸಂವಿಧಾನ ಕನಸು ಸಾಕಾರ! ಇದು 17ನೇ ಲೋಕಸಭೆಯ ಹೆಗ್ಗಳಿಕೆ - Vistara News

ದೇಶ

PM Narendra Modi: ದೇಶಕ್ಕೆ ಒಂದೇ ಸಂವಿಧಾನ ಕನಸು ಸಾಕಾರ! ಇದು 17ನೇ ಲೋಕಸಭೆಯ ಹೆಗ್ಗಳಿಕೆ

PM Narendra Modi: 17ನೇ ಲೋಕಸಭೆ ಕೊನೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸತ್ತಿನ ಸಾಧನೆಗಳನ್ನು ಪಟ್ಟಿ ಮಾಡಿದರು.

VISTARANEWS.COM


on

PM Narendra Modi hails Ram mandir and Indirect attacks on Congress
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ನವದೆಹಲಿ: 17ನೇ ಲೋಕಸಭೆಯ (17th Lok Sabha) ಕೊನೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಎಲ್ಲ ಸಂಸದರು (MPs) ಹಾಗೂ ಸ್ಪೀಕರ್ (Lok Sabha Speaker) ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಅವಧಿಯಲ್ಲಿ ಕೊರೊನಾ ಮಹಾ ಮಾರಿಯ ಮಧ್ಯೆಯೂ ಸದನವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು ಎಂದು ಸ್ಪೀಕರ್ ಅವರನ್ನು ಹಾಡಿ ಹೊಗಳಿದರು. ಅಲ್ಲದೇ, 17ನೇ ಲೋಕಸಭೆಯು ಅನೇಕ ಮಹತ್ವದ ಕಾನೂನುಗಳನ್ನು ಜಾರಿಗೆ ತಂದಿದೆ, ಅನೇಕ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಈ ಪೈಕಿ, ದೇಶಕ್ಕೆ ಒಂದೇ ಸಂವಿಧಾನ ಇರಬೇಕು (Single Constitution) ಎಂಬ ಬಹು ಪೀಳಿಗೆಯ ನಿರೀಕ್ಷೆಯನ್ನು ಸಾಬೀತು ಮಾಡಲಾಯಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಮಾಡುವ ಬಹು ಮುಖ್ಯ ನಿರ್ಣಯವನ್ನು ಈ ಲೋಕಸಭೆ ಕೈಗೊಂಡಿದೆ ಎಂದು ಮೋದಿ ಅವರು ಹೇಳಿದರು.

ಸಂಸದ ನಿಧಿ ಬಿಟ್ಟು ಕೊಟ್ಟ ಸದಸ್ಯರು

ಕೊರೊನಾ ಸಮಯದಲ್ಲಿ ಸಂಸದರು ತಮ್ಮ ನಿಧಿಯನ್ನು ಬಿಟ್ಟುಕೊಡುವಂತೆ ವಿನಂತಿ ಮಾಡಲಾಯಿತು. ಎಲ್ಲ ಸಂಸದರು ಸಂಸದ ನಿಧಿಯನ್ನು ಬಿಟ್ಟುಕೊಟ್ಟರು. ದೇಶವಾಸಿಗಳಿಗೆ ಸಕಾರಾತ್ಮಕ ಸಂದೇಶ ಸಾರಲು ಸಂಸದರು ತಮ್ಮ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲು ನಿರ್ಣಯ ಮಾಡಿದರು. ಇದರಿಂದ ದೇಶಕ್ಕೆ ವಿಶ್ವಾಸವಾಯಿತು. ನಾವು ಎಲ್ಲರೂ ಮಾಧ್ಯಮಗಳಲ್ಲಿ ಬೈಗಳು ತಿಂದಿದ್ದೇವೆ. ಕ್ಯಾಂಟೀನ್‌ನಲ್ಲಿ ದರವನ್ನು ಏರಿಸಿದರು. ಇದಕ್ಕೆ ಸಂಸದರು ಯಾವುದೇ ವಿರೋಧ ವ್ಯಕ್ತ ಮಾಡಲಿಲ್ಲ ಎಂದು ಹೇಳಿದರು.

ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ ಇಲ್ಲಿದೆ

ಸ್ವತಂತ್ರ ಭಾರತದ ಮೊದಲ ಕ್ಷಣವನ್ನು ನೆನಪಿಡಲು ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅವರನ್ನು ಪ್ರತಿಷ್ಠಾಪಿಸಲಾಯಿತು. ಇದು ನಿಮ್ಮ(ಸ್ಪೀಕರ್) ನೇತೃತ್ವದಲ್ಲಿ ನಡೆಯಿತು. ಮುಂಬರುವ ಪೀಳಿಗೆಗೆ ಇದು ಪ್ರೇರಣೆ ನೀಡಲಿದೆ ಎಂದು ಹೇಳಿದರು.

ಭಾರತಕ್ಕೆ ಜಿ20 ಅಧ್ಯಕ್ಷತೆಯ ಅವಕಾಶ

ಜಿ20 ಅಧ್ಯಕ್ಷತೆಯು ಭಾರತಕ್ಕೆ ದೊರೆಯಿತು. ಭಾರತಕ್ಕೆ ಬಹಳ ಸಮ್ಮಾನ ದೊರೆಯಿತು. ಎಲ್ಲ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ವಿಶ್ವದ ಮುಂದೆ ಭಾರತದ ಸಾಮರ್ಥ್ಯವನ್ನು, ತಮ್ಮ ರಾಜ್ಯದ ಗುರುತನ್ನು ಪ್ರಸ್ತುತಪಡಿಸಿದರು. ಅನೇಕ ದೇಶಗಳ ಸ್ಪೀಕರ್ ಅವರು ಇಲ್ಲಿಗೆ ಬಂದರು, ದೇಶದ ಮಹಾನ್ ಪರಂಪರೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀವು ಸ್ಪೀಕರ್ ಸಮಾವೇಶದ ಮುಂದೆ ತೆರೆದಿಟ್ಟಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.

ಪೇಪರ್ ಲೆಸ್ ಸಂಸತ್

ಸಂಸತ್ ಲೈಬ್ರರಿಯನ್ನು ಯಾರು ಬಳಸುತ್ತಾರೋ ಗೊತ್ತಿಲ್ಲ. ನೀವು ಅದರ ಬಾಗಿಲನ್ನು ಸಾಮಾನ್ಯ ವ್ಯಕ್ತಿಗೆ ತೆರಿದಿರಿ. ದೊಡ್ಡ ಕೆಲಸವನ್ನು ಮಾಡಿದ್ದೀರಿ. ನಿಮಗೆ ಅಭಿನಂದನೆ. ಪೇಪರ್ ಲೆಸ್ ಪಾರ್ಲಿಮೆಂಟ್ ಮಾಡಿದ್ದೀರಿ. ನೀವು ಆಧುನಿಕ ತಂತ್ರಜ್ಞಾವನ್ನು ಬಳಸಿದ್ದೀರಿ. ಆರಂಭದಲ್ಲಿ ಕೆಲವರಿಗೆ ತೊಂದರೆಯಾಯಿತು. ಆದರೆ, ಈಗ ಎಲ್ಲರೂ ಅದಕ್ಕೆ ಹೊಂದಾಣಿಕೆಯಾಗುತ್ತಿದ್ದಾರೆ. ಇದು ನಿಮ್ಮ ಅತ್ಯುತ್ತಮ ಕೆಲಸವಾಗಿದೆ. ಸಂಸದರು ಮತ್ತು ನಿಮ್ಮ ಪ್ರಯತ್ನದಿಂದಾಗಿ 17ನೇ ಲೋಕಸಭೆ ಉತ್ಪಾದಕತೆಯು ಶೇ.90ರಷ್ಟಿದೆ. ನಾವು ಸಂಕಲ್ಪದೊಂದಿಗೆ 18ನೇ ಲೋಕಸಭೆಯನ್ನು ಆರಂಭಿಸೋಣ. ಶೇ.100ರಷ್ಟು ಉತ್ಪಾದಕತೆಯನ್ನು ನಿರೀಕ್ಷಿಸೋಣ. ಈ ಎಲ್ಲ ಯಶಸ್ಸಿಗೆ ಸಂಸದರು, ಸಂಸದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಅವರು ಹೇಳಿದರು.

ಬದಲಾವಣೆಯತ್ತ ದೇಶ

75 ವರ್ಷದ ಬಳಿಕ ನಮ್ಮ ಸದನವು ಮಹತ್ವದ ಕೆಲಸಗಳಿಗೆ ನೇತೃತ್ವವನ್ನು ವಹಿಸಿದೆ. ಅಮೃತಕಾಲವನ್ನು ದೇಶವನ್ನು ಸಂಭ್ರಮಿಸಿದೆ. ಇದರಲ್ಲಿ ಸಂಸತ್ ಮತ್ತು ಸಂಸದರ ದೊಡ್ಡ ಪಾತ್ರವಿದೆ. ಸಂವಿಧಾನ ಜಾರಿಯಾಗಿರುವ 75 ವರ್ಷವಾಗಿದೆ. ಇದು ಕೂಡ ಈ ಸದನದ ಗೌರವವಾಗಿದೆ. ಈ ಅವಧಿಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. 21ನೇ ಶತಮಾನವು ಭಾರತದ್ದಾಗಿದೆ. ದೊಡ್ಡ ಬದಲಾವಣೆಯತ್ತ ದೇಶ ಮುಂದುವರಿಯುತ್ತಿದೆ. ಇದರಲ್ಲಿ ಸದನದ ಎಲ್ಲರೂ ಮಾರ್ಗದರ್ಶ ಮಾಡಿದ್ದಾರೆ. ನಮ್ಮ ಅನೇಕ ಪೀಳಿಗೆಯು ನಿರೀಕ್ಷಿಸಿದ್ದ ಅನೇಕ ಕೆಲಸವು ಈ 17ನೇ ಲೋಕಸಭೆಯು ಮಾಡಿದೆ.

ಒಂದೇ ಸಂವಿಧಾನ ನಿರೀಕ್ಷೆ ಈಡೇರಿತು

ಅನೇಕ ಪೀಳಿಗೆಯು ಒಂದು ಸಂವಿಧಾನವನ್ನು ಎದುರು ನೋಡುತ್ತಿತ್ತು. ಈ ಸದನವು ವಿಧಿ 370 ರದ್ದು ಮಾಡಿ, ಸಂವಿಧಾನದ ಪೂರ್ಣ ಪ್ರಮಾಣವನ್ನು ಪ್ರಕಟಿಸಿತು. ಸಂವಿಧಾನದ ನಿರ್ಮಾಣ ಮಾಡಿದ ವ್ಯಕ್ತಿಗಳ ಆತ್ಮವು ನನಗೆ ಖಂಡಿತ ಆಶೀರ್ವಾದ ನೀಡುತ್ತವೆ ಎಂದು ಹೇಳಿದರು. ಕಾಶ್ಮೀರ ಜನರನ್ನು ಸಾಮಾಜಿಕ ನ್ಯಾಯದಿಂದ ವಂಚಿತ ಮಾಡಲಾಗಿತ್ತು. ಅವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿದ್ದೇವೆ. ಆತಂಕವಾದ ದೇಶದ ಮೇಲೆ ಹಲ್ಲೆ ಮಾಡುತ್ತಿತ್ತು. ದೇಶದ ಅನೇಕ ವೀರ, ಧೈರ್ಯವಂತರು ಬಲಿಯಾಗುತ್ತಿದ್ದರು. ಈ ಸದನವು ಭಯೋತ್ಪಾದನೆ ವಿರುದ್ಧ ಕಾನೂನು ಮಾಡಿದೆ. ಇದಿರಂದ ಉಗ್ರ ಚಟುವಟಿಕೆಗೆ ಕಡಿಮೆಯಾಗಿದೆ. ಭಾರತವನ್ನು ಉಗ್ರ ಮುಕ್ತ ಮಾಡುವ ದಿನಗಳು ದೂರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಾರಿ ಶಕ್ತಿ ವಂದನ್ ಅಧಿನಿಯಮ್, ತ್ರಿವಳಿ ತಲಾಕ್

ಹೊಸ ಸಂಸತ್ ಪ್ರಾರಂಭವು ಭಾರತದ ಮೂಲಭೂತವು ಸಂಕಲ್ಪದೊಂದಿಗೆ ನಡೆಯಿತು. ನಾರಿಶಕ್ತಿ ವಂದನ್ ಅಧಿನಿಯಮ ಮೂಲಕವೇ ಆರಂಭವಾಯಿತು. ಹೊಸ ಸಂಸತ್ತಿನ ಬಗ್ಗೆ ಮಾತು ಬಂದಾಗ, ಮಹಿಳಾ ಮೀಸಲು ಬಗ್ಗೆ ಪ್ರಸ್ತಾಪ ಆಗೇ ಆಗುತ್ತದೆ. ಮುಂಬರುವ ದಿನಗಳಲ್ಲಿ ಈ ಸದನದಲ್ಲಿ ನಮ್ಮ ಸಹೋದರಿಯರು, ತಾಯಿಂದರ ಇಲ್ಲಿ ಇರಲಿದ್ದಾರೆ ಎಂದು ಹೇಳಿದರು. ತ್ರಿವಳಿ ತಲಾಕ್‌ನಿಂದ ನಮ್ಮ ಮುಸ್ಲಿಮ್ ಮಹಿಳೆಯರು ಸಂಕಟಪಡುತ್ತಿದ್ದರು. ತ್ರಿವಳಿ ತಲಾಖ್ ನಿಷೇಧವನ್ನು ಈ 17ನೇ ಲೋಕಸಭೆ ಕೈಗೊಂಡಿದೆ. ಇದರೊಂದಿಗೆ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ಮುಂದಿನ 25 ವರ್ಷದಲ್ಲಿ ವಿಕಸಿತ ಭಾರತ

ಮುಂದಿನ 25 ವರ್ಷಗಳು ಮಹತ್ವದ್ದಾಗಿವೆ. ರಾಜಕಾರಣದ ನಡುವೆ ದೇಶದ ನಿರೀಕ್ಷೆ, ಸಂಕಲ್ಪ, ಕನಸುಗಳಿವೆ. ದೇಶವು ತನ್ನ ಉದ್ದೇಶಿತ ಗುರಿಯನ್ನು ಈಡೇರಿಸಿಕೊಳ್ಳಲಿದೆ. ಗಾಂಧಿ ಅವರು ದಂಡಿ ಸತ್ಯಾಗ್ರಹ ಮಾಡಿದ್ದರು. ಆದರೆ, ಇದರ ಪರಿಣಾಮ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅದು ಚಿಕ್ಕ ಘಟನೆಯಾದರೂ, 1947ರಲ್ಲಿ ಅದು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೇತನವನ್ನು ನೀಡಿತು. ಅದೇ ರೀತಿ, ಈಗ ಕೈಗೊಂಡ ನಿರ್ಣಯಗಳು 25 ವರ್ಷದಲ್ಲಿ ನಾವು ವಿಕಸಿತ ಭಾರತವನ್ನು ನೋಡಲು ನೆರವು ನೀಡಲಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ‘ಇಂಥ ಅವಕಾಶ ಮತ್ತೆ ಸಿಗಲಾರದು….’ ಖರ್ಗೆ ಕಾಲೆಳೆದ ಪ್ರಧಾನಿ ನರೇಂದ್ರ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್‌ ಪ್ರದಗ್ರಹಣ

VISTARANEWS.COM


on

ಕೇರಳಂ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್‌ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್‌ ಅವರು ಪ್ರಮಾಣ ವಚನ ಬೋಧಿಸಿದರು. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ವಿ.ಡಿ. ಸತೀಶನ್‌ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

10 ವರ್ಷಗಳ ನಂತರ ಯುಡಿಎಫ್‌ ಸರ್ಕಾರ ಅಧಿಕಾರ ಸ್ವೀಕಾರದೊಂದಿಗೆ ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

Continue Reading

Latest

ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿ.ಡಿ. ಸತೀಶನ್ ಪ್ರಮಾಣವಚನ

VISTARANEWS.COM


on

ತಿರುವನಂತಪುರಂ: ಕೇರಳಂ ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಡಿ. ಸತೀಶನ್‌ ಅವರು ನಾಳೆ ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಿರುವನಂತಪುರಂನ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲರು, ಸತೀಶನ್ ಅವರಿಗೆ ಪ್ರಮಾಣ ವಚನ ಭೋದಿಸಲಿದ್ದಾರೆ. ಇದೇ ವೇಳೆ ಹೊಸ ಸಚಿವ ಸಂಪುಟದ ಸದಸ್ಯರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಈ ಬಾರಿ 21 ಸದಸ್ಯರ ಸಚಿವ ಸಂಪುಟ ರಚನೆಗೆ ಯುಡಿಎಫ್‌ ಸಿದ್ಧತೆ ನಡೆಸಿದೆ. ಈಗಾಗಲೇ ಈ ಕುರಿತು ಮಿತ್ರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿರುವ ಕಾಂಗ್ರೆಸ್‌, ಕ್ಯಾಬಿನೆಟ್‌ ರಚನೆಯ ಕಸರತ್ತು ನಡೆಸುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಕ್ಯಾಬಿನೆಟ್‌ನಲ್ಲಿ ಮುಸ್ಲಿಂ ಲೀಗ್‌ಗೆ ಐದು ಸ್ಥಾನಗಳು ಲಭಿಸಬಹುದು ಎನ್ನಲಾಗಿದೆ.

ಪ್ರಮಾಣವಚನ ಸಮಾರಂಭಕ್ಕೆ ರಾಜಕೀಯ ನಾಯಕರು, ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ.

Continue Reading

Latest

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

VISTARANEWS.COM


on

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ₹3 ರೂಪಾಯಿಗಳನ್ನು ಹೆಚ್ಚಿಸಿವೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದ್ದು, ವಾಹನ ಸವಾರರು ಅಕ್ಷರಶಃ ಕಂಗಾಲಾಗಿದ್ದಾರೆ. ಅಮೆರಿಕ-ಇರಾನ್​ ಯುದ್ಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಡೀಸೆಲ್, ಪೆಟ್ರೋಲ್ ದುಬಾರಿಯಾಗಿದೆ. ಕಳೆದ ಒಂದು ವರ್ಷದಲ್ಲಿ ಮೊದಲ ಸಲ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ರೂ. 94.77 ರಿಂದ ರೂ. 97.77ಕ್ಕೆ ಏರಿಕೆಯಾದರೆ, ಡೀಸೆಲ್ ದರ ರೂ.89.67 ರಿಂದ ರೂ.90.67ಕ್ಕೆ ಹೆಚ್ಚಳವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 102.84 ರೂಪಾಯಿ ಇತ್ತು. ದರ ಏರಿಕೆ ಬೆನ್ನಲ್ಲೇ ಪೆಟ್ರೋಲ್ 106.17 ರೂಪಾಯಿಗೆ ತಲುಪಿದೆ. ನಿನ್ನೆ 90.99 ರೂಪಾಯಿ ಇದ್ದ ಡೀಸೆಲ್ ಬೆಲೆ ಇಂದಿನಿಂದ 94.10 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 3.14 ರೂಪಾಯಿ ಹೆಚ್ಚಳ ಆಗಿದೆ.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

VISTARANEWS.COM


on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದೀದಿ ಭದ್ರಕೋಟೆಯನ್ನು ಧೂಳೀಪಟಗೈದು ಅಧಿಕಾರಕ್ಕೇರಿದ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆರೋಗ್ಯವಂತ ಜಾನುವಾರುಗಳ ಹತ್ಯೆ ಮಾಡಿದರೆ ಶಿಕ್ಷೆ ನೀಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಪಶುವೈದ್ಯರು ನೀಡುವ ಫಿಟ್‌ನೆಸ್‌‍ ಪ್ರಮಾಣಪತ್ರವಿಲ್ಲದೆ ಹಸು, ಹೋರಿ, ಎಮ್ಮೆ ಮತ್ತು ಕರು ಸೇರಿ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಹಸು 14 ವರ್ಷ ಮೇಲ್ಪಟ್ಟಿದ್ದು, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಯೋಗ್ಯವಿಲ್ಲದಿದ್ದರೆ ಅಥವಾ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೆ ಮಾತ್ರ ಸ್ಥಳೀಯ ನಾಗರಿಕ ಅಧಿಕಾರಿಗಳು ಅಥವಾ ಪಶುವೈದ್ಯರು ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡಬಹುದಾಗಿದೆ.
ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ನಡೆಸುವ ಯಾವುದೇ ಪರಿಶೀಲನೆಯನ್ನು ವ್ಯಕ್ತಿಗಳು ತಡೆಯುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಗಳಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Continue Reading
Advertisement
galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌