Delhi Liquor policy case: ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನ - Vistara News

ದೇಶ

Delhi Liquor policy case: ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನ

Delhi Liquor policy case: ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

VISTARANEWS.COM


on

Sisodia sent to judicial custody till March 20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದಿಲ್ಲಿ ಲಿಕ್ಕರ್ ಪಾಲಿಸಿ ಹಗರಣ (Delhi Liquor policy case:) ಸಂಬಂಧ ಬಂಧಿತರಾಗಿರುವ ದಿಲ್ಲಿ ಮಾಜಿ ಸಿಎಂ, ಆಮ್ ಆದ್ಮಿ ಪಾರ್ಟಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಸಿಬಿಐ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಸಿಸೋಡಿಯಾ ಅವರನ್ನು ಫೆ.26ರಂದು ಸಿಬಿಐ ಬಂಧಿಸಿತ್ತು.

ಬಂಧನದ ಬೆನ್ನಲ್ಲೇ ಮನೀಶ್ ಸಿಸೋಡಿಯಾ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಸಿಸೋಡಿಯಾ ಅರ್ಜಿಯನ್ನು ನಿರಾಕರಿಸಿದ ಕೋರ್ಟ್, ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬರುವ ಅಗತ್ಯವಿಲ್ಲ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿಕೊಳ್ಳಬಹುದು ಎಂದು ಹೇಳಿತ್ತು. ಅಂತಿಮವಾಗಿ ಸಿಸೋಡಿಯಾ ಸಿಬಿಐ ಕೋರ್ಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತೂ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಅರವಿಂದ್​ ಕೇಜ್ರಿವಾಲ್​ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ: ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಾರಿಂದ ಗಂಭೀರ ಆರೋಪ

ಸಿಬಿಐ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗಿದೆ. ಹಾಗಿದ್ದೂ, ಕೇಳಿರುವ ಪ್ರಶ್ನೆಗಳನ್ನೇ ಕೇಳಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಈ ಹಿಂದಿನ ವಿಚಾರಣೆಯಲ್ಲಿ ಸಿಸೋಡಿಯಾ ಅವರು ಸಿಬಿಐ ವಿರುದ್ಧ ಆರೋಪ ಮಾಡಿದ್ದರು. ಬಳಿಕ, ನ್ಯಾಯಾಲಯವು ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳದಂತೆ ಹೇಳಿತ್ತು. ಅಲ್ಲದೇ, ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿತ್ತು. ಈಗ ಕಸ್ಟಡಿ ಅವಧಿ ಮುಗಿದ ಕಾರಣ ಮತ್ತೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹಾಗೆಯೇ, ಜಾಮೀನು ಅರ್ಜಿ ವಿಚಾರಣೆಯು ಮಾರ್ಚ್ 10ಕ್ಕೆ ನಡೆಯಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Yogi Adityanath:”ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್‌ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ

Yogi Adityanath:ಬೀಫ್‌ ಸೇವನೆಗೆ ಪ್ರೋತ್ಸಾಹ ಕೊಡುವುದೇ ಇಂಡಿಯಾ ಒಕ್ಕೂಟದ ಪ್ರಮುಖ ಉದ್ದೇಶ. ಗೋವನ್ನು ತಾಯಿ ಎಂಬಂತೆ ಪೂಜಿಸುವ ಹಿಂದೂಗಳು ಬೀಫ್‌ ಸೇವನೆಯನ್ನು ಬಲವಾಗಿ ವಿರೋಧಿಸುತ್ತಾರೆ. ಆದರೆ ಕಾಂಗ್ರೆಸ್‌ ಮಾತ್ರ ಈ ವಿಚಾರದಲ್ಲಿ ಮುಸ್ಲಿಮರಿಗೆ ವಿನಾಯಿತಿಯನ್ನು ಕೊಡುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.

VISTARANEWS.COM


on

By

Lok Sabha Election 2024
Koo

ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ ದೇಶಾದ್ಯಂತ ಬೀಫ್‌ ಸೇವನೆ ಹಕ್ಕನ್ನು ನೀಡುವುದೇ ಅದರ ಪ್ರಮುಖ ಗುರಿಯಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ (Yogi Adityanath) ಆರೋಪಿಸಿದ್ದಾರೆ. ಲಕ್ನೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ(Congress Manifesto)ಗೆ ಬಗ್ಗೆ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಅವ್ರು, ಬೀಫ್‌ ಸೇವನೆಗೆ(Beef consumption) ಪ್ರೋತ್ಸಾಹ ಕೊಡುವುದೇ ಇಂಡಿಯಾ ಒಕ್ಕೂಟದ(INDIA) ಪ್ರಮುಖ ಉದ್ದೇಶ. ಗೋವನ್ನು ತಾಯಿ ಎಂಬಂತೆ ಪೂಜಿಸುವ ಹಿಂದೂಗಳು ಬೀಫ್‌ ಸೇವನೆಯನ್ನು ಬಲವಾಗಿ ವಿರೋಧಿಸುತ್ತಾರೆ. ಆದರೆ ಕಾಂಗ್ರೆಸ್‌ ಮಾತ್ರ ಈ ವಿಚಾರದಲ್ಲಿ ಮುಸ್ಲಿಮರಿಗೆ ವಿನಾಯಿತಿಯನ್ನು ಕೊಡುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.

ಶುಕ್ರವಾರ ನಡೆದ ಚುನಾವಣಾ ಪ್ರಚಾರದಲ್ಲೂ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದ ಯೋಗಿ, ಅಲ್ಪಸಂಖ್ಯಾತರಿಗೆ ಬೀಫ್‌ ಸೇವನೆಯ ಹಕ್ಕನ್ನು ನೀಡಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಗಮನಾರ್ಹ ವಿಚಾರ ಅಂದರೆ, ಉತ್ತರಪ್ರದೇಶದಲ್ಲಿ ಈಗಾಗಲೇ ಗೋಹತ್ಯೆ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಗೋವುಗಳ ಮೇಲೆ ಹಿಂಸಾಕೃತ್ಯಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ₹ 3 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.

ಯೋಗಿ ಆದಿತ್ಯನಾಥ್ ಅವರು, ದೇಶದ ಮೇಲೆ ಶರಿಯಾ ಕಾನೂನನ್ನು ಹೇರಲು ಕಾಂಗ್ರೆಸ್ ಬಯಸಿದೆ ಎಂದು ಹೇಳಿದ್ದರು. “ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ದೇಶಕ್ಕೆ ದ್ರೋಹ ಬಗೆದಿವೆ. ಮತ್ತೊಮ್ಮೆ ತಮ್ಮ ಸುಳ್ಳು ಪ್ರಣಾಳಿಕೆಯೊಂದಿಗೆ ನಿಮ್ಮ ಬಳಿಗೆ ಬಂದಿವೆ. ನೀವು ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ನೋಡಿದರೆ, ಅವರು ಸರ್ಕಾರ ರಚಿಸಿದರೆ ಶರಿಯಾ ಕಾನೂನನ್ನು ಜಾರಿಗೆ ತರಲು ಉದ್ದೇಶಿಸಿರುವುದು ಗೊತ್ತಾಗುತ್ತದೆ” ಎಂದು ಯೋಗಿ ಆರೋಪಿಸಿದ್ದರು.

ಉತ್ತರ ಪ್ರದೇಶ ಸರ್ಕಾರವು 2020 ರಲ್ಲಿ ಗೋಹತ್ಯೆ ಕುರಿತು ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಮೂಲಕ ಕಾನೂನನ್ನು ರೂಪಿಸಿತು. ಗೋಹತ್ಯೆ ತಡೆ (ತಿದ್ದುಪಡಿ) ಕಾಯಿದೆ 2020 ರ ಮೂಲಕ, ಗೋ ಹತ್ಯೆ ಮತ್ತು ಗೋವುಗಳ ಅಕ್ರಮ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತಹ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಲಾಯಿತು. ಈ ಹೊಸ ಕಾನೂನಿನ ಪ್ರಕಾರ ಹಸುಗಳ ಕಳ್ಳಸಾಗಣಿಕೆ ಪ್ರಕರಣಗಳಲ್ಲಿ ಪುನರಾವರ್ತಿತ ಅಪರಾಧಿಗಳಿಗೆ ಶಿಕ್ಷೆಯನ್ನು ದ್ವಿಗುಣಗೊಳಿಸಬಹುದು ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಸ್ತರಿಸಬಹುದು.

ಇದನ್ನೂ ಓದಿ: Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ

ತಿದ್ದುಪಡಿ ಮಾಡಲಾದ ಕಾನೂನಿನ ಪ್ರಕಾರ, ಕಳ್ಳಸಾಗಣೆ ಮಾಡುತ್ತಿದ್ದ ಹಸು ಕಂಡುಬಂದರೆ, ಒಂದು ವರ್ಷದವರೆಗೆ ಅದರ ನಿರ್ವಹಣೆಗೆ ತಗಲುವ ವೆಚ್ಚವನ್ನು ಆರೋಪಿಯಿಂದ ವಸೂಲಿ ಮಾಡಲಾಗುತ್ತದೆ. ಹಸುಗಳು ಅಥವಾ ಅವುಗಳ ಮಾಂಸವನ್ನು ಸಾಗಿಸುವ ವಾಹನಗಳು, ಅವುಗಳ ಮಾಲೀಕರು ಅಥವಾ ಚಾಲಕರ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಹಿಂದಿನ ಕಾನೂನಿಗೆ ಸ್ಪಷ್ಟತೆ ಇರಲಿಲ್ಲ. ತಿದ್ದುಪಡಿ ಮಾಡಲಾದ ಕಾನೂನಿನ ಅಡಿಯಲ್ಲಿ, ಅವರನ್ನು ಸಹ ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಚಾಲಕ ಮತ್ತು ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಅವರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ಎಲ್ಲಾ ಅಪರಾಧಗಳು ಜಾಮೀನು ರಹಿತವಾಗಿರುತ್ತದೆ.

Continue Reading

ದೇಶ

Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ

Narendra Modi: ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್‌ 27) ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ. ಕುಂದಾ ನಗರಿಯಲ್ಲಿಯೇ ಐಟಿಸಿ ವೆಲ್​ಕಮ್​ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿತ್ತು.

VISTARANEWS.COM


on

Narendra modi
Koo

ಬೆಂಗಳೂರು: ಕರ್ನಾಟಕದ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಉತ್ತರ ಕರ್ನಾಟಕ ಪ್ರದೇಶದ 14 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಒತ್ತು ಕೊಡುತ್ತಿವೆ. ಪಕ್ಷಗಳ ಬಹುತೇಕ ನಾಯಕರು ಉತ್ತರ ಕರ್ನಾಟಕದಲ್ಲಿಯೇ ಬೀಡುಬಿಟ್ಟಿದ್ದಾರೆ. ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಈ ಹಿನ್ನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಭಾನುವಾರ (ಏಪ್ರಿಲ್‌ 28) ಹಾಗೂ ಸೋಮವಾರ (ಏಪ್ರಿಲ್‌ 29) ರಾಜ್ಯದಲ್ಲಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.

ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್‌ 27) ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ. ಕುಂದಾ ನಗರಿಯಲ್ಲಿಯೇ ಐಟಿಸಿ ವೆಲ್​ಕಮ್​ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿತ್ತು. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರಿಗೆ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಡಲಾತ್ತು.

ಏಪ್ರಿಲ್‌ 28ರಂದು ಎಲ್ಲೆಲ್ಲಿ ರ‍್ಯಾಲಿ?

ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.

ಇದನ್ನೂ ಓದಿ: Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

ಏಪ್ರಿಲ್‌ 29ರಂದು ಒಂದೇ ಸಮಾವೇಶ

ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್‌ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್‌ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ.

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಹಲವು ಸಾಮಗ್ರಿಗಳಲ್ಲಿ ಕೀಟನಾಶಕಗಳ ಅಂಶ ನಿಗದಿತ ಮಿತಿ ಮೀರಿದೆ ಎಂದು ಕಾರಣ ನೀಡಿ ತಿರಸ್ಕರಿಸಲಾಗಿದೆ. ಅಮೆರಿಕದಲ್ಲಿ ನಮ್ಮ ಬಾಸ್ಮತಿ ಅಕ್ಕಿ, ಪಾಲಿಶ್ಡ್‌ ಅಕ್ಕಿ, ಬೆಂಡೆಕಾಯಿ ಹಾಗೂ ಕ್ಯಾಪ್ಸಿಕಂ, ಯುರೋಪಿನಲ್ಲಿ ಬಾಸ್ಮತಿ ಅಕ್ಕಿ, ಜಪಾನ್‌ನಲ್ಲಿ ಸಿಗಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಎತೋಕ್ಸಿಕ್ವಿನ್‌, ಆಕ್ಸಿಟೆಟ್ರಾಸೈಕ್ಲಿನ್‌, ಸಲ್ಫೈಟ್‌, ನೈಟ್ರೋಫರಾನ್‌, ಕ್ಲೋರಾಂಫೆನಿಕಾಲ್‌ ಮುಂತಾದ ಕೀಟನಾಶಕ ಅಂಶಗಳ ಕಾರಣದಿಂದ ತಿರಸ್ಕರಿಸಲಾಗಿತ್ತು. ಇದು ಆತಂಕಕಾರಿ

VISTARANEWS.COM


on

Vistara Editorial
Koo

ಭಾರತದಲ್ಲಿ ತಯಾರಾಗುವ ಒಟ್ಟು 527 ಆಹಾರ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ (Ethylene oxide) ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಹೇಳಿದ್ದಾರೆ. 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ. ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿದೆಯಂತೆ. ಇದರ ಬೆನ್ನಲ್ಲೇ ಎರಡು ಕಂಪನಿಗಳ ಉತ್ಪನ್ನಗಳನ್ನು ಈಗಾಗಲೇ ಹಾಂಗ್ ಕಾಂಗ್ (Hong Kong) ಮತ್ತು ಸಿಂಗಾಪುರ (Singapore)ದಲ್ಲಿ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಅಪಾಯಕಾರಿ ಕೆಮಿಕಲ್‌ಗಳು ಕಂಡು ಬಂದಿವೆ. ಇದು ಭಾರತದ ರಫ್ತು ವಲಯದ ಮಟ್ಟಿಗೆ ಆತಂಕಕಾರಿ ಸಂಗತಿ.

ಹೀಗಾಗುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಹಲವು ಸಾಮಗ್ರಿಗಳಲ್ಲಿ ಕೀಟನಾಶಕಗಳ ಅಂಶ ನಿಗದಿತ ಮಿತಿಯನ್ನು ಮೀರಿದೆ ಎಂದು ಕಾರಣ ನೀಡಿ ತಿರಸ್ಕರಿಸಲಾಗಿದೆ. ಅಮೆರಿಕದಲ್ಲಿ ನಮ್ಮ ಬಾಸ್ಮತಿ ಅಕ್ಕಿ, ಪಾಲಿಶ್ಡ್‌ ಅಕ್ಕಿ, ಬೆಂಡೆಕಾಯಿ ಹಾಗೂ ಕ್ಯಾಪ್ಸಿಕಂ, ಯುರೋಪಿನಲ್ಲಿ ಬಾಸ್ಮತಿ ಅಕ್ಕಿ, ಜಪಾನ್‌ನಲ್ಲಿ ಸಿಗಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಎತೋಕ್ಸಿಕ್ವಿನ್‌, ಆಕ್ಸಿಟೆಟ್ರಾಸೈಕ್ಲಿನ್‌, ಸಲ್ಫೈಟ್‌, ನೈಟ್ರೋಫರಾನ್‌, ಕ್ಲೋರಾಂಫೆನಿಕಾಲ್‌ ಮುಂತಾದ ಕೀಟನಾಶಕ ಅಂಶಗಳ ಕಾರಣದಿಂದ ತಿರಸ್ಕರಿಸಲಾಗಿತ್ತು. ಅಮೆರಿಕದಲ್ಲಿ ಭಾರತದ ಮಾವು, ಜರ್ಮನಿಯಲ್ಲಿ ಭಾರತದ ಡಾರ್ಜಲಿಂಗ್‌ ಟೀ, ಯುಎಇಯಲ್ಲಿ ನಮ್ಮ ಮಾವು ಹಾಗೂ ತರಕಾರಿ ತಿರಸ್ಕಾರಕ್ಕೊಳಗಾಗಿದ್ದವು. ಇದೀಗ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅತಿಯಾಗಿ ಕಂಡುಬಂದಿದೆ. ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಹೆಚ್ಚಿದೆ. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲೂ ಪತ್ತೆಯಾಗಿತ್ತು. ಇದರಿಂದ ಆಫ್ರಿಕಾದ ಕೆಲವು ದೇಶಗಳಲ್ಲಿ ಸಾವಿಗೆ ಕಾರಣವಾಗಿತ್ತು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

ಇದಕ್ಕೆ ಕಾರಣ, ನಮ್ಮವರು ಬೆಳೆಯುವ ಬೆಳೆಗೆ ಬಳಸುವ ಕೀಟನಾಶಕ ಹಾಗೂ ರಸಗೊಬ್ಬರದ ಪ್ರಮಾಣದಲ್ಲಿ ಲಂಗುಲಗಾಮೇ ಇಲ್ಲದಿರುವುದು. ಕೀಟನಾಶಕಗಳು ಹಾಗೂ ರಸಗೊಬ್ಬರಗಳಿಗೆ ಅತಿ ಭಾರೀ ಪ್ರಮಾಣದಲ್ಲಿ ಸಬ್ಸಿಡಿಯನ್ನು ಕೊಡುವ ದೇಶವೂ ನಮ್ಮದೇ. ಹೀಗಾಗಿ ಇವು ಅತ್ಯಂತ ಅಗ್ಗವಾಗಿ ಸಿಗುತ್ತವೆ. ಅಮೆರಿಕ ಬಹಳಷ್ಟು ಸಾರಿ ನಮ್ಮಲ್ಲಿ ನೀಡಲಾಗುತ್ತಿರುವ ರಸಗೊಬ್ಬರ ಸಬ್ಸಿಡಿಯ ಬಗ್ಗೆ ತಗಾದೆ ಎತ್ತಿದೆ. ಇದರಲ್ಲಿ ಅಮೆರಿಕದ ಹಿತಾಸಕ್ತಿಯೂ ಇದೆ ಎನ್ನೋಣ. ಆದರೆ ಅಮೆರಿಕದ ಆಕ್ಷೇಪದಲ್ಲಿ ಸತ್ಯವೂ ಇದೆ. ಅಮೆರಿಕ, ಮುಂದುವರಿದ ಯುರೋಪ್ ದೇಶಗಳು, ಸಿಂಗಾಪುರ ಮುಂತಾದೆಡೆಗಳಲ್ಲಿ ಆಹಾರ ವಸ್ತುಗಳ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮ ಮೀರಿದ ಉತ್ಪನ್ನಗಳನ್ನು ಅವು ಸ್ವೀಕರಿಸುವುದಿಲ್ಲ. ಹೀಗಾಗಿ ರಫ್ತಿನ ಮಟ್ಟಿಗೆ ನಾವೂ ಕಠಿಣ ನಿಯಮಗಳನ್ನು ಪಾಲಿಸಬೇಕಾದುದು ಅತ್ಯವಶ್ಯಕ.

ದೇಶದಿಂದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿನ ಪ್ರಾಮುಖ್ಯತೆ ಹಾಗೂ ಅದರ ಗುಣಮಟ್ಟ ಕಾಪಾಡಿಕೊಳ್ಳಬೇಕಾದ ಅಗತ್ಯ ಅರಿತುಕೊಂಡ ಕೇಂದ್ರ ಸರ್ಕಾರ 1986ರಲ್ಲಿ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವನ್ನು (APEDA) ಸ್ಥಾಪಿಸಿತು. ರಫ್ತು ಮಾಡಬೇಕಾದ ಸರಕುಗಳ ಕಡ್ಡಾಯ ಗುಣಮಟ್ಟದ ನಿಯಂತ್ರಣ ಮತ್ತು ಪೂರ್ವ-ರವಾನೆ ತಪಾಸಣೆಯ ಉದ್ದೇಶಕ್ಕಾಗಿ ರಫ್ತು (ಗುಣಮಟ್ಟ ನಿಯಂತ್ರಣ ಮತ್ತು ತಪಾಸಣೆ) ಕಾಯಿದೆ, 1963ರ ಸೆಕ್ಷನ್ 3ರ ಅಡಿಯಲ್ಲಿ ಭಾರತ ಸರ್ಕಾರದಿಂದ ರಫ್ತು ಪರಿಶೀಲನಾ ಮಂಡಳಿ (EIC) ಅನ್ನು ಸ್ಥಾಪಿಸಲಾಯಿತು. ಇದು 1000ಕ್ಕೂ ಹೆಚ್ಚು ಸರಕುಗಳನ್ನು ತಪಾಸಿಸುತ್ತದೆ. ಆಹಾರ ಮತ್ತು ಕೃಷಿ, ಮೀನುಗಾರಿಕೆ, ಖನಿಜಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ರಬ್ಬರ್ ಉತ್ಪನ್ನಗಳು, ಸೆರಾಮಿಕ್ ಉತ್ಪನ್ನಗಳು, ಕೀಟನಾಶಕಗಳು, ಲಘು ಎಂಜಿನಿಯರಿಂಗ್, ಉಕ್ಕಿನ ಉತ್ಪನ್ನಗಳು, ಸೆಣಬು ಉತ್ಪನ್ನಗಳು, ತೆಂಗಿನಕಾಯಿ ಉತ್ಪನ್ನಗಳು, ಪಾದರಕ್ಷೆಗಳು ಇವನ್ನೆಲ್ಲ ಪರಿಶೀಲಿಸುತ್ತದೆ. ಇದಕ್ಕಾಗಿಯೇ ದೊಡ್ಡ ಸಂಖ್ಯೆಯ ಲ್ಯಾಬ್‌ಗಳಿವೆ. ಹೀಗಿದ್ದರೂ ಕಣ್ತಪ್ಪಿಸಿ ವಿಷಕಾರಕ ಅಂಶಗಳಿರುವ ಉತ್ಪನ್ನಗಳು ವಿದೇಶಕ್ಕೆ ಹೋಗುತ್ತವೆ ಎಂದರೇನರ್ಥ?

ಸದ್ಯ ಈ ತಪಾಸಣೆಯನ್ನು ಬಿಗಿ ಮಾಡಬೇಕಿದೆ. ವಿಷಕಾರಕ ಅಂಶಗಳನ್ನು ಹೊಂದಿರುವ ಉತ್ಪನ್ನಗಳನ್ನು ಹಿಂದೆಗೆದುಕೊಳ್ಳುವ, ಪರೀಕ್ಷಿಸುವ, ದೇಶಕ್ಕೆ ಕೆಟ್ಟ ಹೆಸರು ತರುವ ಉತ್ಪನ್ನಗಳ ನಿರ್ಬಂಧಕ್ಕೆ ಕಠಿಣ ಕ್ರಮ ಆಗಬೇಕಿದೆ. ಯಾಕೆಂದರೆ ಇದು ಭಾರತದ ಘನತೆಯನ್ನು ಜಾಗತಿಕವಾಗಿ ಉಳಿಸುವ ಅಥವಾ ನಾಶಮಾಡುವ ಸಂಗತಿಯಾಗಿದೆ.

Continue Reading

ದೇಶ

CBI Raid: ಸಂದೇಶ್‌ಖಾಲಿ ಟಿಎಂಸಿ ನಾಯಕನ ಆಪ್ತನ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರದ ಮೂಲ ಪತ್ತೆ

CBI Raid: ಸಿಬಿಐ ಮತ್ತು ಎನ್ಎಸ್‌ಜಿ ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಗುಂಡುಗಳು ಮತ್ತು ಕಾರ್ಟ್ರಿಜನ್‌ನ ಮೂಲ ಅಂಗಡಿಯನ್ನು ಕೋಲ್ಕತ್ತಾದಲ್ಲಿ ಪತ್ತೆಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿವಿಧ ಮದ್ದುಗುಂಡುಗಳಲ್ಲದೆ, ಅಮಾನತುಗೊಂಡ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್‌ನ ಆಪ್ತ ಸಹಾಯಕ ಮತ್ತು ಸಂಬಂಧಿಯ ನಿವಾಸದಲ್ಲಿ ಹಲವು ವಿದೇಶಿ ಮತ್ತು ಭಾರತ ನಿರ್ಮಿತ ಬಂದೂಕುಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

VISTARANEWS.COM


on

CBI Raid
Koo

ಕೋಲ್ಕತ್ತಾ: ಸಿಬಿಐ ಮತ್ತು ಎನ್ಎಸ್‌ಜಿ ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ(Sandeshkhali)ಯಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಗುಂಡುಗಳು ಮತ್ತು ಕಾರ್ಟ್ರಿಜನ್‌ನ ಮೂಲ ಅಂಗಡಿಯನ್ನು ಕೋಲ್ಕತ್ತಾದಲ್ಲಿ ಪತ್ತೆಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ (CBI Raid). ವಿವಿಧ ಮದ್ದುಗುಂಡುಗಳಲ್ಲದೆ, ಅಮಾನತುಗೊಂಡ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್‌ (Sheikh Shahjahan)ನ ಆಪ್ತ ಸಹಾಯಕ ಮತ್ತು ಸಂಬಂಧಿಯ ನಿವಾಸದಲ್ಲಿ ಹಲವು ವಿದೇಶಿ ಮತ್ತು ಭಾರತ ನಿರ್ಮಿತ ಬಂದೂಕುಗಳು ಮತ್ತು ಸ್ಫೋಟಕಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ವೇಳೆ ಸಿಬಿಐ ಮದ್ದುಗುಂಡು ಅಂಗಡಿಯ ಒಂದೆರಡು ಖರೀದಿ ಬಿಲ್‌ ಸೇರಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದು ತನಿಖೆಯಲ್ಲಿ ಪ್ರಧಾನ ಪಾತ್ರವಹಿಸಿತ್ತು ಮತ್ತು ಕೋಲ್ಕತ್ತಾದಲ್ಲಿನ ಈ ಅಂಗಡಿಯನ್ನು ಗುರುತಿಸಲು ನೆರವಾಯಿತು. ಬಿಲ್‌ ಮೇಲೆ ಖರೀದಿದಾರ ಶಹಜಹಾನ್‌ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಸ್ತುಗಳನ್ನು ಖರೀದಿಸಲು ಮದ್ದುಗುಂಡು ಅಂಗಡಿಗೆ ಯಾರು ಹೋಗಿದ್ದರು ಎನ್ನುವುದನ್ನು ಕಂಡುಹಿಡಿಯಲು ಸಿಬಿಐ ಈಗ ಪ್ರಯತ್ನಿಸುತ್ತಿದೆ.

ಶುಕ್ರವಾರ ನಡೆದ ಪರಿಶೋಧನೆ ವೇಳೆ ದೇಶೀಯ ನಿರ್ಮಿತ ಬಾಂಬ್‌ಗಳು ಎಂದು ಶಂಕಿಸಲಾದ ಕೆಲವು ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ) ತಂಡಗಳು ನಿರ್ವಹಿಸುತ್ತಿವೆ ಮತ್ತು ವಿಲೇವಾರಿ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಸಂದೇಶ್‌ಖಾಲಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಅನೇಕ ದಾಳಿಗಳನ್ನು ನಡೆಸಿದೆ.

ಸಂದೇಶ್‌ಖಾಲಿಯಲ್ಲಿ ನಡೆದ ಭೂ ಕಬಳಿಕೆ ಮತ್ತು ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಐದು ಮಂದಿ ಮತ್ತು ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಏನಿದು ಘಟನೆ?

ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿದ ಸಿಬಿಐ ಪೊಲೀಸ್‌ ಸೇವಾ ರಿವಾಲ್ವರ್‌, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಶಪಡಿಸಿಕೊಂಡಿತ್ತು. ಇವನ್ನು ಶಹಜಹಾನ್‌ ಶೇಖ್‌ನ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂದೇಶ್‌ಖಾಲಿಯ ಎರಡು ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿದ ಸಿಬಿಐ ಪೊಲೀಸ್‌ ಸೇವಾ ರಿವಾಲ್ವರ್‌, ವಿದೇಶಿ ನಿರ್ಮಿತ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಶಪಡಿಸಿಕೊಂಡಿತ್ತು. ಇವನ್ನು ಶಹಜಹಾನ್‌ ಶೇಖ್‌ನ ಸಹಚರನಿಗೆ ಸಂಬಂಧಿಸಿದ ಸ್ಥಳಗಳಿಂದ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶೋಧದಲ್ಲಿ ವೇಳೆ ಸಿಬಿಐ, ಬಾಂಬ್‌ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ, ಕೇಂದ್ರ ಅರೆಸೇನಾ ಪಡೆ, ಪಶ್ಚಿಮ ಬಂಗಾಳ ಪೊಲೀಸರು ಭಾಗವಹಿಸಿದ್ದರು.

ಇ.ಡಿ ತಂಡವು ಕಳೆದುಕೊಂಡಿದ್ದ ಕೆಲವು ವಸ್ತುಗಳು ಮತ್ತು ಇತರ ಪ್ರಮುಖ ವಸ್ತುಗಳನ್ನು ಸಂದೇಶ್‌ಖಾಲಿಯಲ್ಲಿ ಶೇಖ್‌ನ ಸಹಚರರ ನಿವಾಸದಲ್ಲಿ ಬಚ್ಚಿಡಲಾಗಿದೆ ಎನ್ನುವ ಮಾಹಿತಿ ಮೇರೆಗೆ ಸಿಬಿಐ ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದವು. ಶಸ್ತ್ರಾಸ್ತ್ರಗಳ ಪೈಕಿ ವಿದೇಶಿ ನಿರ್ಮಿತ ಬಂದೂಕುಗಳೂ ಇದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯ ಮಾಲೀಕನನ್ನು ಅಬು ತಾಲೇಜ್‌ ಮೊಲ್ಲಾಹ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Sandeshkhali Violence: ಸಂದೇಶ್‌ಖಾಲಿ ಪ್ರಕರಣ ಆರೋಪಿ ಶಹಜಹಾನ್‌ ಕೊನೆಗೂ ಸಿಬಿಐ ಕೈಗೆ

ಸಹಾಯವಾಣಿ

ಶಹಜಹಾನ್‌ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸಂದೇಶ್‌ಖಾಲಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಭೂಮಿ ಮಾಲೀಕರಿಗಾಗಿ ಪ್ರತ್ಯೇಕ ಸಹಾಯವಾಣಿ ಮತ್ತು ಇಮೇಲ್‌ ವಿಳಾಸ ಆರಂಭಿಸಿದೆ. ಇದರ ಮೂಲಕ ಸಂತ್ರಸ್ತರು ತಮಗಾದ ಅನ್ಯಾಯ ಹೇಳಿಕೊಳ್ಳಬಹುದಾಗಿದೆ. ಅವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಸಿಬಿಐ ಭರವಸೆ ನೀಡಿದೆ.

Continue Reading
Advertisement
Lok Sabha Election 2024
ರಾಜಕೀಯ31 mins ago

Yogi Adityanath:”ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರಿಗೆ ಬೀಫ್‌ ಸೇವನೆ ಹಕ್ಕು”- ಮತ್ತೆ ಗುಡುಗಿದ ಯೋಗಿ

Drinks for Summer
ಆರೋಗ್ಯ2 hours ago

Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Fire Accident
ಪ್ರಮುಖ ಸುದ್ದಿ2 hours ago

Fire Accident : ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

karnataka weather forecast
ಮಳೆ2 hours ago

Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

Narendra modi
ದೇಶ2 hours ago

Narendra Modi : ಇಂದು, ನಾಳೆ ರಾಜ್ಯದಲ್ಲಿ ಮೋದಿಯಿಂದ ಅಬ್ಬರದ ಪ್ರಚಾರ; ಬಹಿರಂಗ ಭಾಷಣದ ವಿವರ ಇಲ್ಲಿದೆ

Summer Food Tips
ಆರೋಗ್ಯ3 hours ago

Summer Food Tips: ಬೇಸಿಗೆಯಲ್ಲಿ ಈ 8 ಆಹಾರಗಳಿಂದ ದೂರ ಇರಿ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Swiggy fined
ಬೆಂಗಳೂರು9 hours ago

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Vistara Editorial
ಪ್ರಮುಖ ಸುದ್ದಿ9 hours ago

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕರ್ನಾಟಕ9 hours ago

Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 202416 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ21 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ3 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ3 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಟ್ರೆಂಡಿಂಗ್‌