Sonali Phogat Death | ಮರಣೋತ್ತರ ವರದಿ ಬೆನ್ನಲ್ಲೇ ಸೋನಾಲಿ ಫೋಗಟ್‌ ಅವರ ಇಬ್ಬರು ಆಪ್ತರ ಬಂಧನ - Vistara News

ದೇಶ

Sonali Phogat Death | ಮರಣೋತ್ತರ ವರದಿ ಬೆನ್ನಲ್ಲೇ ಸೋನಾಲಿ ಫೋಗಟ್‌ ಅವರ ಇಬ್ಬರು ಆಪ್ತರ ಬಂಧನ

ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್‌ (Sonali Phogat Death) ಅವರ ಮರಣೋತ್ತರ ವರದಿ ಲಭ್ಯವಾದ ಬೆನ್ನಲ್ಲೇ ನಾಯಕಿಯ ಇಬ್ಬರು ಆಪ್ತರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಫೋಗಟ್‌ ಅವರ ಸಹೊದರ ನೀಡಿದ ದೂರಿನ ಅನ್ವಯ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

VISTARANEWS.COM


on

Sonali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಣಜಿ: ಗೋವಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್‌ (Sonali Phogat Death) ಅವರ ಮರಣೋತ್ತರ ವರದಿ ಲಭ್ಯವಾದ ಬೆನ್ನಲ್ಲೇ ನಾಯಕಿಯ ಇಬ್ಬರು ಆಪ್ತರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಹೃದಯಾಘಾತದಿಂದ ಸೋನಾಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಪೋಸ್ಟ್‌ಮಾರ್ಟಮ್‌ ವರದಿ ಪ್ರಕಾರ ಅವರ ಮೈಮೇಲೆ ಗಾಯಗಳು ಇರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಅವರ ಆಪ್ತರನ್ನು ಬಂಧಿಸಲಾಗಿದೆ.

ಸುಧೀರ್‌ ಸಾಗ್ವನ್‌ ಹಾಗೂ ಸುಖವಿಂದರ್‌ ವಾಸಿ ಬಂಧಿತ ಆರೋಪಿಗಳಾಗಿದ್ದಾರೆ. ಫೋಗಟ್‌ ಸಾವಿನ ಪ್ರಕರಣದಲ್ಲಿ ಇವರನ್ನು ಆರೋಪಿಗಳನ್ನಾಗಿಸಲಾಗಿದೆ. ಫೋಗಟ್‌ ಅವರ ಸಹೋದರ ರಿಂಕು ಧಾಕಾ ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ಆಗಸ್ಟ್‌ ೨೨ರಂದು ಫೋಗಟ್‌ ಅವರು ಗೋವಾದಲ್ಲಿದ್ದಾಗ ಸಾಗ್ವನ್‌ ಹಾಗೂ ಸುಖವಿಂದರ್‌ ಅವರ ಜತೆಗಿದ್ದರು. ಹಾಗಾಗಿ ಇವರ ಮೇಲೆ ಶಂಕೆ ವ್ಯಕ್ತವಾಗಿದೆ.

ಆಗಸ್ಟ್‌ ೨೩ರಂದು ಬೆಳಗ್ಗೆ ಗೋವಾದಲ್ಲಿ ಸೋನಾಲಿ ಫೋಗಟ್‌ ಮೃತಪಟ್ಟಿದ್ದರು. ಉತ್ತರ ಗೋವಾದ ಅಂಜುನಾದಲ್ಲಿರುವ ಆಸ್ಪತ್ರೆ ವೈದ್ಯರು ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ, ಮರಣೋತ್ತರ ವರದಿ ಬಳಿಕ ಇವರ ದೇಹದ ಮೇಲೆ ಗಾಯಗಳಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೊದಲು ಟಿಕ್‌ಟಾಕ್‌ ವಿಡಿಯೊಗಳಿಂದ ಖ್ಯಾತಿ ಗಳಿಸಿದ ಅವರು ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದರು. ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ | ಸೋನಾಲಿ ಫೋಗಟ್​ ಮೈಮೇಲೆ ಇವೆ ಗಾಯಗಳು; ಬಾಡಿಗಾರ್ಡ್​, ಪಿಎ ವಿರುದ್ಧ ಕೇಸ್​ ದಾಖಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

Indian Armed Forces: ಜನರಲ್‌ ದ್ವಿವೇದಿ ಅವರ ರೋಲ್‌ ನಂಬರ್‌ 931 ಹಾಗೂ ಅಡ್ಮಿರಲ್‌ ತ್ರಿಪಾಠಿ ಅವರು ರೋಲ್‌ ನಂಬರ್‌ 938. ಶಾಲಾ ದಿನಗಳಿಂದಲೇ ಇವರಿಬ್ಬರೂ ಸ್ನೇಹಿತರಾಗಿದ್ದು, ಇಬ್ಬರೂ ಜೊತೆಯಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದಾದ ಬಳಿಕ ಇಬ್ಬರೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

VISTARANEWS.COM


on

Indian Armed Forces
Koo

ಹೊಸದಿಲ್ಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ತರಗತಿಯಲ್ಲಿ ಓದಿದ್ದ ಇಬ್ಬರು ಭಾರತೀಯ ಸೇನೆ(Indian Army) ಮತ್ತು ನೌಕಾಪಡೆ(Navy)ಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ(Indian Armed Forces). ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ(Upendra Dwivedi) ಹಾಗೂ ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ(Dinesh Tripati) ನೇಮಕಗೊಂಡಿದ್ದಾರೆ. ಇವರಿಬ್ಬರೂ 70ರ ದಶಕದಲ್ಲಿ ಮಧ್ಯಪ್ರದೇಶದ ರೇವಾ ಸೈನಿಕ ಶಾಲೆಯಲ್ಲಿ 5A ತರಗತಿಯಲ್ಲಿ ಜೊತೆಯಲ್ಲಿ ಓದಿದ್ದರು.

ಇವರಿಬ್ಬರೂ ಶಾಲಾ ದಿನಗಳಿಂದ ಬಹಳ ಬಾಂದವ್ಯದಿಂದ ಇದ್ದರು. ಜನರಲ್‌ ದ್ವಿವೇದಿ ಅವರ ರೋಲ್‌ ನಂಬರ್‌ 931 ಹಾಗೂ ಅಡ್ಮಿರಲ್‌ ತ್ರಿಪಾಠಿ ಅವರು ರೋಲ್‌ ನಂಬರ್‌ 938. ಶಾಲಾ ದಿನಗಳಿಂದಲೇ ಇವರಿಬ್ಬರೂ ಸ್ನೇಹಿತರಾಗಿದ್ದು, ಇಬ್ಬರೂ ಜೊತೆಯಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದಾದ ಬಳಿಕ ಇಬ್ಬರೂ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

ರಕ್ಷಣಾ ಸಚಿವರ ಅಧಿಕೃತ ವಕ್ತಾರ ಎ ಭರತ್ ಭೂಷಣ್ ಬಾಬು ಅವರು ಎಕ್ಸ್ ಪೋಸ್ಟ್‌ನಲ್ಲಿ, “ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದೇ ಶಾಲೆಯ ವಿದ್ಯಾರ್ಥಿಗಳು ನೌಕಾಪಡೆ ಮತ್ತು ಸೇನಾ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಅದ್ಭುತ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. 50 ವರ್ಷಗಳ ನಂತರ ಜೊತೆಯಾಗಿ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಎರಡು ತಿಂಗಳ ಅಂತರದಲ್ಲಿ ಇಬ್ಬರು ಸಹಪಾಠಿಗಳ ನೇಮಕಾತಿಗಳು ಒಂದೇ ಸಮಯದಲ್ಲಿ ಬಂದಿವೆ. ಅಡ್ಮಿರಲ್ ಅವರು ಮೇ 1 ರಂದು ಭಾರತೀಯ ನೌಕಾಪಡೆಯ ಕಮಾಂಡ್ ಅನ್ನು ವಹಿಸಿಕೊಂಡರು, ಲೆಫ್ಟಿನೆಂಟ್ ಜನರಲ್ ದ್ವಿವೇದಿ ಇಂದು (ಜೂನ್ 30) ತಮ್ಮ ಹೊಸ ನೇಮಕಾತಿಯನ್ನು ವಹಿಸಿಕೊಳ್ಳಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಯಾರು?

ಜುಲೈ 1, 1964 ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ನೇಮಕಗೊಂಡರು. ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ್ದು, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು ಉತ್ತರ ಸೇನಾ ಕಮಾಂಡರ್ ಆಗಿ ಸುದೀರ್ಘ ಅಧಿಕಾರಾವಧಿಯನ್ನು ಹೊಂದಿದ್ದರು, ಅಲ್ಲಿ ಅವರು ಪೂರ್ವ ಲಡಾಖ್‌ನಲ್ಲಿನ ಎಲ್‌ಎಸಿಯಲ್ಲಿನ ಮಿಲಿಟರಿ ಸ್ಟ್ಯಾಂಡ್‌ಫ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ದೀರ್ಘಾವಧಿಯ ಮಾನ್ಯತೆ ಹೊಂದಿದ್ದಾರೆ.

ಅವರು ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು US ಆರ್ಮಿ ವಾರ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ ಮತ್ತು DSSC ವೆಲ್ಲಿಂಗ್‌ಟನ್ ಮತ್ತು ಆರ್ಮಿ ವಾರ್ ಕಾಲೇಜ್, Mhow ನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ. ಅಧಿಕಾರಿಯು ಡಿಫೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂ ಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

ಅಡ್ಮಿರಲ್ ದಿನೇಶ್ ತ್ರಿಪಾಠಿ ಯಾರು?

1985 ರಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲ್ಪಟ್ಟ ಅಡ್ಮಿರಲ್ ತ್ರಿಪಾಠಿ, ವಿವಿಧ ನಿರ್ಣಾಯಕ ಕಾರ್ಯಯೋಜನೆಗಳಲ್ಲಿ ಸೇವೆ ಸಲ್ಲಿಸಿದ, ಸುಮಾರು 40 ವರ್ಷಗಳ ಅನುಭವ ಇರುವ ಹಿರಿಯ ಅಧಿಕಾರಿ. ಅವರು ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ವೆಸ್ಟರ್ನ್ ನೇವಲ್ ಕಮಾಂಡ್ ಮತ್ತು ಕೇರಳದ ಎಝಿಮಲದಲ್ಲಿರುವ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ಮುಂತಾದ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಅನುಭವಸ್ಥರು. ಅವರ ವೃತ್ತಿಜೀವನದುದ್ದಕ್ಕೂ, ಅವರು ಐಎನ್‌ಎಸ್ ವಿನಾಶ್, ಕಿರ್ಚ್ ಮತ್ತು ತ್ರಿಶೂಲ್ ಸೇರಿದಂತೆ ಹಲವಾರು ನೌಕಾ ಹಡಗುಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Continue Reading

ಸಿನಿಮಾ

Actress Tamanna Bhatia: ಬೆಂಗಳೂರಿನ ಶಾಲೆಯಲ್ಲಿ ನಟಿ ತಮನ್ನಾ ಭಾಟಿಯಾ ಬಗ್ಗೆ ಪಾಠ; ಪೋಷಕರ ಆಕ್ಷೇಪ

Actress Tamanna Bhatia: ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ʼಸಿಂಧಿ ಹೈಸ್ಕೂಲ್’ನಲ್ಲಿನ ಪಠ್ಯದಲ್ಲಿ ಸೇರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಸಿಂಧಿ ಮಹನೀಯರ ಕುರಿತು ಸೇರಿಸಲಾದ ಅಧ್ಯಾಯದಲ್ಲಿ ತಮನ್ನಾ ಭಾಟಿಯಾ ಕುರಿತ ವಿವರವೂ ಇದೆ.

VISTARANEWS.COM


on

tamanna bhatia gold
Koo

ಬೆಂಗಳೂರು: ನಟಿ ತಮನ್ನಾ ಭಾಟಿಯಾ (Actress Tamanna Bhatia) ಬಗ್ಗೆ ಬೆಂಗಳೂರಿನ ಸಿಂಧಿ ಶಾಲೆಯೊಂದರಲ್ಲಿ (Sindhi School) ಪಠ್ಯವೊಂದನ್ನು (Text) ಸೇರಿಸಲಾಗಿದೆ. ಪೋಷಕರು ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದು, ಈಕೆಯ ಬಗ್ಗೆ ಮಕ್ಕಳು ʼಹೆಚ್ಚಿನ ಅಧ್ಯಯನʼಕ್ಕೆ ಇಂಟರ್‌ನೆಟ್‌ (Internet) ಮೊರೆ ಹೋದರೆ ಗತಿಯೇನು?ʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ, ಇತ್ತೀಚೆಗೆ ವೆಬ್‌ಸಿರೀಸ್‌ನಲ್ಲಿ ಬೋಲ್ಡ್ ದೃಶ್ಯಗಳ ಮೂಲಕ ಸುದ್ದಿಯಾಗಿದ್ದ ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ʼಸಿಂಧಿ ಹೈಸ್ಕೂಲ್’ನಲ್ಲಿನ ಪಠ್ಯದಲ್ಲಿ ಸೇರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಸಿಂಧಿ ಮಹನೀಯರ ಕುರಿತು ಸೇರಿಸಲಾದ ಅಧ್ಯಾಯದಲ್ಲಿ ತಮನ್ನಾ ಭಾಟಿಯಾ ಕುರಿತ ವಿವರವೂ ಇದೆ.

ಇದಕ್ಕೆ ಇಲ್ಲಿ ಓದುತ್ತಿರುವ ಏಳನೇ ತರಗತಿ ಮಕ್ಕಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಅವರೆಲ್ಲ ದೂರು ದಾಖಲಿಸಿದ್ದಾರೆ. ಅಧ್ಯಾಯ ಸೇರ್ಪಡೆ ಕುರಿತು ಪೋಷಕರು ಶಾಲೆಯ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ, ʼಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್’ ಸಂಪರ್ಕಿಸುವಂತೆ ತಿಳಿಸಿದೆ ಎಂದು ತಿಳಿದು ಬಂದಿದೆ.

ಹೆಬ್ಬಾಳದ ಸಿಂಧಿ ಶಾಲೆಯಲ್ಲಿ 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಈ ಸಮುದಾಯದ ಬಗ್ಗೆ ಪಾಠ ಒಳಗೊಂಡಿದೆ. ಅದರಲ್ಲಿ ಒಂದು ಅಧ್ಯಾಯವು ದೇಶದ ವಿಭಜನೆಯ ನಂತರದ ಜೀವನ, ಸಿಂಧ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ, 1947ರಿಂದ 1962 ಕುರಿತಾದ ಅಂಶಗಳು ಇವೆ. ಭಾಷಾ ಅಲ್ಪಸಂಖ್ಯಾತರಾದ ಸಿಂಧಿ ಸಮುದಾಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವಕಾಶ ಮಾಡಿಕೊಡಲಾಗಿದೆ.

ಸಿಂಧಿ ಸಮುದಾಯದ ನಟ ರಣವೀರ್ ಸಿಂಗ್ (Actor Ranveer Singh) ಅವರಂತಹ ಸಮುದಾಯದ ಪ್ರಮುಖ ಮತ್ತು ಯಶಸ್ವಿ ಸದಸ್ಯರನ್ನು ಅಧ್ಯಾಯದಲ್ಲಿ ಸೇರಿಸಿದರೆ ಯಾವುದೇ ವಿರೋಧ ಇಲ್ಲ. ಆದರೆ ತಮನ್ನಾಗೆ ಸಂಬಂಧಿಸಿದ ವಿಷಯ ಸೇರ್ಪಡೆ ಸರಿಯಲ್ಲ ಎಂದು ಪೋಷಕರು ಹೇಳಿದರು.

ಸ್ವಾತಂತ್ರ್ಯಾ ನಂತರದ ಭಾರತೀಯರ ಜನಜೀವನ ಆಧ್ಯಾಯದಲ್ಲಿ ತಮನ್ನಾ ಭಾಟಿಯಾ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಅವರು ಹಸಿ ಬಿಸಿ, ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾರೆ. ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಮಕ್ಕಳಿಗೆ ಆದರ್ಶವಾಗಬೇಕೇ?. ಇದು ಸರಿಯಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಮತ್ತೊಂದು ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಪೋಷಕರು ನಮ್ಮ ಆಕ್ಷೇಪಣೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ನಟಿಯ ಅಧ್ಯಾಯ ಒಳಗೊಂಡಿದೆ. ಇದನ್ನು ವಿರೋಧಿಸಿದರೆ, ತಮ್ಮ ವಾರ್ಡ್‌ಗಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಶಾಲಾ ಆಡಳಿತ ಮಂಡಳಿ ಬೆದರಿಕೆ ನೀಡುತ್ತಿದೆ ಎಂದು ಪೋಷಕರು ಆರೋಪಿಸಿದರು.

ಸಿಂಧಿ ಸಮುದಾಯದ ಹಿರಿಯ ಕಲಾವಿದರ ಕುರಿತ ಅಧ್ಯಾಯಗಳ ಬೋಧನೆ ಬಗ್ಗೆ ಸಮಸ್ಯೆ ಇಲ್ಲ. ಆದರೆ ತಮನ್ನಾ ಭಾಟಿಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಿದರೆ ಅರೆಬರೆ ಬಟ್ಟೆಯ, ಅಸೂಕ್ತವಾದ ವಿಷಯ ಕಾಣಿಸುತ್ತದೆ. ಹೀಗಾಗಿ ಇವರ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದು ಸೂಕ್ತ ಅಲ್ಲ ಎಂದು ಪೋಷಕರು ಆಡಳಿತ ಮಂಡಳಿಗೆ, ಸಂಬಂಧಿಸಿದ ಇಲಾಖೆಗೆ ದೂರಿದ್ದಾರೆ.

ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Continue Reading

Latest

Railway Rules: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

Railway Rules: ರೈಲಿನ ಪ್ರಯಾಣ ಆರಾಮದಾಯಕವಾಗಿರುತ್ತದೆ. ಇನ್ನು ಖರ್ಚು ಕೂಡ ಕಡಿಮೆ ಎನ್ನಬಹುದು. ಮಕ್ಕಳು, ವಯಸ್ಸಾದವರಿಗೆ ಈ ರೈಲಿನ ಪ್ರಯಾಣ ಉತ್ತಮವಾಗಿರುತ್ತದೆ. ಆದರೆ ಪ್ರತಿಯೊಬ್ಬ ರೈಲ್ವೆ ಪ್ರಯಾಣಿಕರು ತಿಳಿದುಕೊಳ್ಳಬೇಕಾದ 7 ಪ್ರಮುಖ ಭಾರತೀಯ ರೈಲ್ವೆ ನಿಯಮಗಳು ಇಲ್ಲಿವೆ. ಈ ನಿಯಮಗಳ ಬಗ್ಗೆ ಅರಿವಿದ್ದರೆ ಇನ್ಮುಂದೆ ಖುಷಿಯಾಗಿ ರೈಲಿನ ಪ್ರಯಾಣವನ್ನು ಎಂಜಾಯ್ ಮಾಡಬಹುದು.ಆ ನಿಯಮಗಳು ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Railway Rules
Koo

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಯಾಕೆಂದರೆ ಅಲ್ಲಿ ನಿಮಗೆ ಪ್ರಯಾಣದ ವೇಳೆ ವಾಂತಿ, ತಲೆ ಸುತ್ತುವುದು, ಶೌಚಾಲಯದಂತಹ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಮತ್ತು ಇದರ ದರ ಕೂಡ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ನಿಮಗೆ ಇಡೀ ಭಾರತವನ್ನು ಅನ್ವೇಷಣೆ ಮಾಡಲು ಭಾರತೀಯ ರೈಲ್ವೆ ಒಂದು ಅತ್ಯುತ್ತಮ ಮಾರ್ಗವಾಗಿದೆ. ಭಾರತೀಯ ರೈಲ್ವೆ 7,000ಕ್ಕೂ ಹೆಚ್ಚು ನಿಲ್ದಾಣಗಳು ಮತ್ತು ಪ್ರತಿದಿನ 23 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಈ ಸಂಸ್ಥೆ ಪ್ರಯಾಣಿಕರಿಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹಾಕುತ್ತದೆ. ಹಾಗಾಗಿ ಪ್ರತಿಯೊಬ್ಬ ಪ್ರಯಾಣಿಕರು ತಿಳಿದುಕೊಳ್ಳಬೇಕಾದ 7 ಪ್ರಮುಖ ಭಾರತೀಯ ರೈಲ್ವೆ ನಿಯಮಗಳು(Railway Rules) ಇಲ್ಲಿವೆ:

ಟಿಕೆಟ್ ಬುಕಿಂಗ್:

ರೈಲಿನಲ್ಲಿ ಪ್ರಯಾಣಿಸುವಾಗ ಎಲ್ಲಾ ಪ್ರಯಾಣಿಕರು ತಮ್ಮ ಟಿಕೆಟ್ ಮರೆಯದೆ ಕೊಂಡೊಯ್ಯಬೇಕು. ಟಿಕೆಟ್‌ಗಳನ್ನು ಆನ್‌ಲೈನ್‌, ರೈಲ್ವೆ ನಿಲ್ದಾಣಗಳಲ್ಲಿ ಅಥವಾ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಕಾಯ್ದಿರಿಸಬಹುದು. ಟಿಕೆಟ್ ಇಲ್ಲದೆ ಪ್ರಯಾಣಿಸುವುದು ದಂಡ ಮತ್ತು ಶಿಕ್ಷೆಗೆ ಕಾರಣವಾಗುತ್ತದೆ.

ಲಗೇಜ್:

ಪ್ರಯಾಣಿಕರು ತಮ್ಮೊಂದಿಗೆ ಸಾಮಾನುಗಳನ್ನು ಲಗೇಜ್‌ನಲ್ಲಿ ಕೊಂಡೊಯ್ಯಲು ಅವಕಾಶವಿದೆ, ಆದರೆ ತೂಕವು ಅನುಮತಿಸಲಾದ ತೂಕದ ಮಿತಿಯನ್ನು ಮೀರಬಾರದು. ಫಸ್ಟ್ ಎಸಿ ಮತ್ತು 2ನೇ ಎಸಿಗೆ 40 ಕೆಜಿ, 3ನೇ ಎಸಿ ಮತ್ತು ಚೇರ್ ಕಾರ್ ಗೆ 35 ಕೆಜಿ, ಸ್ಲೀಪರ್ ಕ್ಲಾಸ್ ಗೆ 15 ಕೆಜಿ ಲಗೇಜ್ ಸಾಗಿಸಲು ಮಿತಿ ಇದೆ. ಪ್ರಯಾಣಿಕರು ಯಾವುದೇ ಅಪಾಯಕಾರಿ ಸರಕುಗಳನ್ನು ಸಾಗಿಸಲು ಅನುಮತಿ ಇಲ್ಲ.

ಮದ್ಯಪಾನ:

ರೈಲಿನಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ. ರೈಲಿನಲ್ಲಿ ಆಲ್ಕೋಹಾಲ್ ಸೇವನೆಯನ್ನು ನಿಷೇಧಿಸಲಾಗಿದೆ. ಮದ್ಯ ಸೇವಿಸಿ ಸಿಕ್ಕಿ ಬಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಧೂಮಪಾನ:

ರೈಲುಗಳು, ಪ್ಲಾಟ್ ಫಾರ್ಮ್‌ಗಳು ಮತ್ತು ನಿಲ್ದಾಣದ ಆವರಣದಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಆಹಾರ:

ಪ್ರಯಾಣಿಕರು ತಮ್ಮದೇ ಆದ ಆಹಾರವನ್ನು ತೆಗೆದುಕೊಂಡು ಹೋಗಬಹುದು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳಿಂದ ಆಹಾರವನ್ನು ಖರೀದಿಸಬಹುದು.

ರದ್ದತಿ ಮತ್ತು ಮರುಪಾವತಿ:

ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ, ಅವರು ಅದನ್ನು ರೈಲು ನಿರ್ಗಮನ ಸಮಯದ ಮೊದಲು ಮಾಡಬೇಕು. ಮತ್ತು ಭಾರತೀಯ ರೈಲ್ವೆಯ ರದ್ದತಿ ನೀತಿಯ ಪ್ರಕಾರ ಮರುಪಾವತಿ ನೀಡಲಾಗುವುದು.

ಸುರಕ್ಷತೆ:

ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ಅವರೇ ಕಾಳಜಿ ವಹಿಸಬೇಕು ಮತ್ತು ಪ್ರಯಾಣಿಸುವಾಗ ಅಮೂಲ್ಯವಾದ ವಸ್ತುಗಳನ್ನು ಒಯ್ಯುವುದನ್ನು ತಪ್ಪಿಸಬೇಕು. ಈ ವಿಚಾರದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ವಾದಗಳು ಅಥವಾ ಜಗಳಗಳಲ್ಲಿ ತೊಡಗುವುದನ್ನು ತಪ್ಪಿಸಬೇಕು.

ಪ್ರಶ್ನೆ-ಉತ್ತರಗಳು:

  • ಪ್ರಶ್ನೆ 1: ಭಾರತೀಯ ರೈಲ್ವೆಯಲ್ಲಿ ನಾನು ರೈಲು ಟಿಕೆಟ್ ಗಳನ್ನು ಹೇಗೆ ಕಾಯ್ದಿರಿಸಬಹುದು?
  • ನೀವು ಭಾರತೀಯ ರೈಲ್ವೆಯಲ್ಲಿ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಅದಕ್ಕಾಗಿ ಐಆರ್‌ಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ವಿವಿಧ ರೈಲ್ವೆ ನಿಲ್ದಾಣಗಳಲ್ಲಿನ ರೈಲ್ವೆ ಮೀಸಲಾತಿ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯಬಹುದು.
  • ಪ್ರಶ್ನೆ 2: ನಾನು ಭಾರತೀಯ ರೈಲ್ವೆಯಲ್ಲಿ ಆಹಾರವನ್ನು ಸಾಗಿಸಬಹುದೇ?
  • ಎ 2: ಹೌದು, ನೀವು ನಿಮ್ಮ ಮನೆಯಲ್ಲಿ ತಯಾರಿಸಿದ ಆಹಾರವನ್ನು ಒಯ್ಯಬಹುದು ಅಥವಾ ಪ್ಯಾಂಟ್ರಿ ಕಾರು ಅಥವಾ ಪ್ಲಾಟ್ ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳಿಂದ ಆಹಾರವನ್ನು ಖರೀದಿಸಬಹುದು.
Continue Reading

Latest

Stop Drinking: ಗಂಡನ ಕುಡಿತ ನಿಲ್ಲಿಸಬೇಕೆ? ಹಾಗಾದ್ರೆ ಬಿಜೆಪಿ ಸಚಿವರೊಬ್ಬರ ಈ ಟಿಪ್ಸ್‌ ಟ್ರೈ ಮಾಡಿ ನೋಡಿ!

Stop Drinking ಪುರುಷರ ಕುಡಿತದ ಅಭ್ಯಾಸವನ್ನು ನಿಗ್ರಹಿಸಲು ಮಹಿಳೆಯರಿಗೆ ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಬಿಜೆಪಿ ನಾಯಕ ನಾರಾಯಣ್ ಸಿಂಗ್ ಕುಶ್ವಾಹ ಸಲಹೆಯೊಂದನ್ನು ನೀಡಿದ್ದಾರೆ. ಹೊರಗೆಲ್ಲೊ ಕುಡಿಯುವ ಬದಲು ಆಲ್ಕೋಹಾಲ್ ಅನ್ನು ಮನೆಗೆ ತಂದು ನಿಮ್ಮ ಮುಂದೆ ಕುಡಿಯಲು ಗಂಡನಿಗೆ ತಿಳಿಸಿ. ಅವರು ತಮ್ಮ ಕುಟುಂಬಗಳ ಮುಂದೆ ಕುಡಿದರೆ, ಅವರ ಆಲ್ಕೋಹಾಲ್ ಸೇವನೆ ಕ್ರಮೇಣ ಕಡಿಮೆಯಾಗುತ್ತದೆ, ಮತ್ತು ಕೊನೆಯಲ್ಲಿ ಅವರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಅವರು ತಮ್ಮ ಹೆಂಡತಿ ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ ಎಂದಿದ್ದಾರೆ.

VISTARANEWS.COM


on

Stop Drinking
Koo

ಕುಡಿತ ತಮ್ಮ ಜೀವನದ ಜೊತೆಗೆ ನಮ್ಮ ಕುಟುಂಬದವರ ಜೀವನವನ್ನು ಹಾಳು ಮಾಡುತ್ತದೆ ಎಂದು ತಿಳಿದರೂ ಕೂಡ ಹಲವು ಗಂಡಸರು ಕುಡಿತದ ದಾಸರಾಗಿದ್ದಾರೆ. ಕುಡುಕ ಗಂಡನಿಂದ ಕಿರುಕುಳಕ್ಕೆ ಒಳಗಾಗುವಂತಹ ಮಹಿಳೆಯರು ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ. ಹಾಗಾಗಿ ಇಂತಹ ಕುಡುಕ ಗಂಡನನ್ನು ಸರಿಮಾಡುವುದು ಹೇಗೆ, ಅವರ ಕುಡಿತ ನಿಲ್ಲಿಸುವುದು ಹೇಗೇ (Stop Drinking) ಎಂದು ಒದ್ದಾಡುತ್ತಿರುವ ಮಹಿಳೆಯರಿಗೆ ಮಧ್ಯಪ್ರದೇಶದ ಸಚಿವರೊಬ್ಬರು ಸಲಹೆ ನೀಡಿದ್ದಾರೆ.

ಮಾದಕ ದ್ರವ್ಯ ಮತ್ತು ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭೋಪಾಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಬಿಜೆಪಿ ನಾಯಕ ನಾರಾಯಣ್ ಸಿಂಗ್ ಕುಶ್ವಾಹ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಪುರುಷರ ಕುಡಿತದ ಅಭ್ಯಾಸವನ್ನು ನಿಗ್ರಹಿಸಲು ಮಹಿಳೆಯರಿಗೆ ಅಸಾಮಾನ್ಯ ವಿಧಾನವೊಂದನ್ನು ತಿಳಿಸಿದ್ದಾರೆ. ಅದೇನೆಂದರೆ ಮಹಿಳೆಯರು ತಮ್ಮ ಗಂಡಂದಿರಿಗೆ ಮನೆಯಲ್ಲಿ ಕುಡಿಯಲು ಹೇಳಬೇಕಂತೆ. ಯಾಕೆಂದರೆ ಪುರುಷರು ತಮ್ಮ ಹೆಂಡತಿ ಮತ್ತು ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

“ತಾಯಂದಿರು ಮತ್ತು ಸಹೋದರಿಯರು ತಮ್ಮ ಗಂಡಂದಿರು ಕುಡಿಯುವುದನ್ನು ನಿಲ್ಲಿಸಬೇಕೆಂದು ಬಯಸಿದರೆ, ಮೊದಲು ಹೊರಗೆ ಕುಡಿಯಬೇಡಿ ಎಂದು ಹೇಳಿ. ಆಲ್ಕೋಹಾಲ್ ಅನ್ನು ಮನೆಗೆ ತಂದು ನಿಮ್ಮ ಮುಂದೆ ಕುಡಿಯಲು ಅವರಿಗೆ ತಿಳಿಸಿ. ಅವರು ತಮ್ಮ ಕುಟುಂಬಗಳ ಮುಂದೆ ಕುಡಿದರೆ, ಅವರ ಸೇವನೆ ಕ್ರಮೇಣ ಕಡಿಮೆಯಾಗುತ್ತದೆ, ಮತ್ತು ಕೊನೆಯಲ್ಲಿ ಅವರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಅವರು ತಮ್ಮ ಹೆಂಡತಿ ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ. ಅಲ್ಲದೆ, ಅವರ ಉದಾಹರಣೆಯನ್ನು ಅನುಸರಿಸುವ ಮೂಲಕ ಅವರ ಮಕ್ಕಳು ಕುಡಿಯಲು ಪ್ರಾರಂಭಿಸಬಹುದು ಎಂದು ಅವರಿಗೆ ನೆನಪಿಸಿ. ಈ ವಿಧಾನವು ಪ್ರಾಯೋಗಿಕವಾಗಿದೆ, ಮತ್ತು ಗಂಡಂದಿರು ಕುಡಿತವನ್ನು ತ್ಯಜಿಸುತ್ತಾರೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

ಆದರೆ ಸಚಿವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಕಾಂಗ್ರೆಸ್, ಅವರ ಮಾತನ್ನು ಟೀಕಿಸಿದೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಮುಖೇಶ್ ನಾಯಕ್, “ಸಚಿವರ ಉದ್ದೇಶ ಸರಿಯಾಗಿದೆ, ಆದರೆ ಅದನ್ನು ತಿಳಿಸುವ ಅವರ ವಿಧಾನ ತಪ್ಪು. ಮನೆಯಲ್ಲಿ ಮದ್ಯಪಾನ ಮಾಡುವುದರಿಂದ ಮನೆಯಲ್ಲಿ ಸಂಘರ್ಷ ಮತ್ತು ಕೌಟುಂಬಿಕ ಹಿಂಸಾಚಾರ ಶುರುವಾಗಬಹುದು. ಅವರು ಜನರಿಗೆ ಕುಡಿಯದಂತೆ ಸಲಹೆ ನೀಡಬೇಕಿತ್ತು” ಎಂದು ಸಚಿವರ ಹೇಳಿಕೆಯನ್ನು ಟೀಕಿಸಿದ್ದಾರೆ.

Continue Reading
Advertisement
Shawarma
ಕರ್ನಾಟಕ4 mins ago

Shawarma: ನಾನ್‌ವೆಜ್ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌; ಶೀಘ್ರದಲ್ಲೇ ರಾಜ್ಯದಲ್ಲಿ ಶವರ್ಮಾ ಬ್ಯಾನ್ ?

ಕ್ರೀಡೆ22 mins ago

MS Dhoni Instagram Post: ಭಾರತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಚ್ಚರಿಯ ಪೋಸ್ಟ್ ಮಾಡಿದ ಧೋನಿ

ಟಾಲಿವುಡ್23 mins ago

Kalki 2898 AD: ಮೂರನೇ ದಿನ ಭರ್ಜರಿ ಗಳಿಕೆ ಕಂಡ ‘ಕಲ್ಕಿ 2898 ಎಡಿ’ ಸಿನಿಮಾ ! 

Indian Armed Forces
ದೇಶ24 mins ago

Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

Road Accident
ಕ್ರೈಂ51 mins ago

Road Accident: ಕೂಡ್ಲಿಗಿಯಲ್ಲಿ ಮತ್ತೊಂದು ರಸ್ತೆ ಅಪಘಾತ; ಇಬ್ಬರ ಸಾವು

Virat Kohli (
ಕ್ರೀಡೆ53 mins ago

Virat Kohli: ಗೆಲುವಿನ ಬಳಿಕ ಪಂಜಾಬಿ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ ವಿರಾಟ್​ ಕೊಹ್ಲಿ

T20 World Cup 2024 Celebrities Celebrates India ICC Cricket
ಕ್ರಿಕೆಟ್54 mins ago

T20 World Cup 2024: ಸುದೀಪ್‌ ಸೇರಿದಂತೆ ಸೌತ್‌ ,ಬಾಲಿವುಡ್‌ ತಾರೆಯರು ವಿಶ್ವಕಪ್​ ಗೆಲುವನ್ನು  ಸಂಭ್ರಮಿಸಿದ್ದು ಹೀಗೆ!

T20 World Cup 2024 Netizen Thanking Darshan For India World Cup Win
ಸ್ಯಾಂಡಲ್ ವುಡ್1 hour ago

T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

Rohit Sharma
ಕ್ರೀಡೆ1 hour ago

Rohit Sharma: ಗೆಲುವಿನ ಸವಿ ನೆನಪಿಗಾಗಿ ಪಿಚ್​ನ ಮಣ್ಣು ತಿಂದ ರೋಹಿತ್​; ವಿಡಿಯೊ ವೈರಲ್​

swim benefits
ಆರೋಗ್ಯ2 hours ago

Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ17 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ23 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌