Ayodhya Ram Mandir: ರಾಮ ಅಯೋಧ್ಯೆಗೆ ಮರಳಿ ಬರುವ ಸಂತಸದ ಹಾಡು ಸೋನು ನಿಗಮ್ ಧ್ವನಿಯಲ್ಲಿ! - Vistara News

ದೇಶ

Ayodhya Ram Mandir: ರಾಮ ಅಯೋಧ್ಯೆಗೆ ಮರಳಿ ಬರುವ ಸಂತಸದ ಹಾಡು ಸೋನು ನಿಗಮ್ ಧ್ವನಿಯಲ್ಲಿ!

Ayodhya Ram Mandir: ಈ ವಿಡಿಯೊದಲ್ಲಿ ಅಯೋಧ್ಯೆಯ ಡ್ರೋನ್ ಶಾಟ್‌ಗಳು ಮತ್ತು ದೇವಾಲಯವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ಕೂಡ ಇದೆ.

VISTARANEWS.COM


on

Sonu Nigam Shri Ram Lalla Out
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಗೂ ಮುನ್ನ “ಶ್ರೀ ರಾಮ್ ಲಲ್ಲಾ” ಹೆಸರಿನ ಭಜನೆಯನ್ನು ದೂರದರ್ಶನ ಚಾನೆಲ್‌ ಜನವರಿ 18ರಂದು ಬಿಡುಗಡೆ ಮಾಡಿದೆ. ಈ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ.

ಈ ವಿಡಿಯೊದಲ್ಲಿ ಅಯೋಧ್ಯೆಯ ಡ್ರೋನ್ ಶಾಟ್‌ಗಳು ಮತ್ತು ದೇವಾಲಯವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ಕೂಡ ಇದೆ. ʻಶ್ರೀ ರಾಮ್ ಲಲ್ಲಾ” ಹಾಡು ಸೋನು ನಿಗಮ್ ಅವರ ಧ್ವನಿಯಲ್ಲಿ ಮೂಡಿಬಂದಿದೆ. ಭಗವಾನ್ ರಾಮನು ಅಯೋಧ್ಯೆಗೆ ಮರಳಿ ಬರುವ ಸಂತೋಷದ ಕುರಿತಾಗಿದೆ ಈ ಹಾಡು.

ʻಈ ವಿಶೇಷ ಹಾಡು ಸಂಗೀತದ ಅಪ್ಪುಗೆಯಂತಿದೆʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಸೋನು ನಿಗಮ್ ಭಜನ್ ಹಾಡಿದ್ದರೆ, ಸಾಹಿತ್ಯವನ್ನು ಮುಕುಲ್ ವರ್ಮಾ ಮತ್ತು ಅಮಿತಾಭ್‌ ಎಸ್ ವರ್ಮಾ ಬರೆದಿದ್ದಾರೆ. ಅಮಿತಾಭ್‌ ಎಸ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir: ರಾಮ ಮಂದಿರದ 2000 ಅಡಿ ಆಳದಲ್ಲಿರುತ್ತೆ ಟೈಮ್‌ ಕ್ಯಾಪ್ಸೂಲ್!‌ ಏನಿದರ ವಿಶೇಷತೆ?

1,500ಕ್ಕೂ ಹೆಚ್ಚು ಕಾರ್ಯಕ್ರಮಗಳು ನಿಗದಿ

ದೆಹಲಿಯಲ್ಲಿ ಪ್ರಾಣ ಪ್ರತಿಷ್ಠೆ ದಿನ 1,500ಕ್ಕೂ ಕಾರ್ಯಕ್ರಮಗಳು ನಿಗದಿಯಾಗಿವೆ. ದೇಗುಲಗಳು, ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿವೆ ಎಂದು ಛೇಂಬರ್‌ ಆಫ್‌ ಟ್ರೇಡ್‌ ಆ್ಯಂಡ್‌ ಇಂಡಸ್ಟ್ರಿಯ (CTI) ಅಧ್ಯಕ್ಷ ಬ್ರಿಜೇಶ್‌ ಗೋಯಲ್‌ ತಿಳಿಸಿದ್ದಾರೆ. “‘ಸುಂದರ್ ಕಾಂಡ್’ ಮತ್ತು ‘ಧಾರ್ಮಿಕ್ ಪತ್’ ಪ್ರದರ್ಶಿಸುವ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ” ಎಂದು ಗೋಯಲ್ ಹೇಳಿದ್ದಾರೆ.

ಪ್ರತಿಷ್ಠಾಪನಾ ಸಮಾರಂಭ ಮತ್ತು ವಿವಾಹ ಋತು ಏಕಕಾಲಕ್ಕೆ ನಡೆಯುತ್ತಿರುವುದು ಕೂಡ ಬ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಲು ಇನ್ನೊಂದು ಕಾರಣ. ಇದು ಎಷ್ಟರ ಮಟ್ಟಿಗೆ ಎಂದರೆ ಸಾಮರ್ಥ್ಯಕ್ಕಿಂತ ಅಧಿಕ ಬುಕ್ಕಿಂಗ್‌ ನಡೆಯುತ್ತಿದೆ. ಬ್ಯಾಂಡ್‌ ಗ್ರೂಪ್‌ಗಳು ಬೇಡಿಕೆ ಈಡೇರಿಸಲು ಹೈರಾಣಾಗಿವೆ ಎಂದು ಮೂಲಗಳು ತಿಳಿಸಿವೆ.

“ಈ ವರ್ಷ ‘ರಾಮ್ ಭಾರತ್‌ʼ ಕೈಗೊಂಡ ಕಾರಣ ಡೋಲು, ಬ್ಯಾಂಡ್‌ಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ವೃದ್ಧಿಸಿದೆ. ಬೇಡಿಕೆ ಪೂರೈಸಲು ನಾವು ಈಗ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಕೆಲಸ ಪ್ರಾರಂಭಿಸುತ್ತಿದ್ದೇವೆ. ಸಣ್ಣ ಮತ್ತು ದೊಡ್ಡ ಬ್ಯಾಂಡ್‌ಗಳೂ ವ್ಯಾಪಕ ತಯಾರಿ ನಡೆಸುತ್ತಿವೆ” ಎಂದು ಜೀಯಾ ಬ್ಯಾಂಡ್ ಮಾಲಕ ಸತ್ಯ ಅನಿಲ್ ತಡಾನಿ ಹೇಳಿದ್ದಾರೆ.

ಪ್ರಾಣ ಪ್ರತಿಷ್ಠಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿರುವ ಹಿನ್ನೆಲೆಯಲ್ಲಿ ಮದುವೆಯ ಹಾಡುಗಳನ್ನು ಹಾಡುತ್ತಿದ್ದ ಬ್ಯಾಂಡ್ ಸದಸ್ಯರು ಈಗ ಭಗವಾನ್ ರಾಮನಿಗೆ ಸಮರ್ಪಿತವಾದ ಭಕ್ತಿಗೀತೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

“ನಾವು ದಿನವಿಡೀ ವಿಶೇಷ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದೇವೆ. ಆರತಿ ಸಮಯದಲ್ಲಿ ಜನಪ್ರಿಯ ಭಜನೆ ‘ರಾಮ್ ಆಯೆಂಗೆ ತೋ ಜ್ಞಾನ ಸಜೌಂಗಿ’ ಮತ್ತು ವಿಶೇಷ ಧೋಲ್ ಬೀಟ್‌ಗಳನ್ನು ನುಡಿಸಲು ತಯಾರಿ ನಡೆಸುತ್ತಿದ್ದೇವೆ” ಎಂದು ಬ್ಯಾಂಡ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ. ಅಂದು ಬ್ಯಾಂಡ್‌ ಸದಸ್ಯರು ಕೇಸರಿ ಬಣ್ಣದ ವಿಶೇಷ ಸಮವಸ್ತ್ರ ಧರಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Terrorists Killed:ಭಾರತೀಯ ಸೇನೆಯ ಭರ್ಜರಿ ಬೇಟೆ- ನಾಲ್ವರು ಉಗ್ರರು ಮಟ್ಯಾಶ್‌!

Terrorists Killed:ಗಡಿ ನಿಯಂತ್ರಣ ರೇಖೆ(LOC) ದಾಟಿ ಒಳನುಸುಳಲು ಯತ್ನಿಸಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಸದೆಬಡೆದಿದೆ. ಉತ್ತರ ಕಾಶ್ಮೀರದ ಕುಪ್ವಾರಾದಲ ತಂಗ್ದಾರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟೀ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಹೇಳಿದೆ.

VISTARANEWS.COM


on

Terrorists Killed
Koo

ಬಾರಾಮುಲ್ಲಾ: ಲೋಕಸಭಾ ಚುನಾವಣೆ(Lok Sabha Election 2024)ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಗಡಿ ನಿಯಂತ್ರಣ ರೇಖೆ(LOC) ದಾಟಿ ಒಳನುಸುಳಲು ಯತ್ನಿಸಿದ್ದ ನಾಲ್ವರು ಉಗ್ರರನ್ನು(Terrorists Killed) ಭಾರತೀಯ ಸೇನೆ(Indian Army) ಸದೆಬಡೆದಿದೆ. ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ ತಂಗ್ದಾರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟೀ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಹೇಳಿದೆ.

ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರ ಮೇಲೂ ಸೇನೆ ಪ್ರತಿದಾಳಿ ನಡೆಸಿದೆ. ಪಾಕ್‌ ಆಕ್ರಮಿತ ಕಾಶ್ಮೀರ(PoK)ಬಳಿ ಇರುವ ಗಡಿ ನಿಯಂತ್ರಣ ರೇಖೆ ಬಳಿ ನಾಲ್ವರು ಉಗ್ರರ ಮೃತದೇಹ ಸಿಕ್ಕಿದೆ. ಇನ್ನು ಅಮ್ರೋಹಿ, ತಂಗ್ದಾರ್‌ ಪ್ರದೇಶಗಳಲ್ಲಿ ಸೇನೆ ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಎರಡು ಪಿಸ್ತೂಲ್‌, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

ಪಾಕಿಸ್ತಾನಿ ಒಳನುಸುಳುಕೋರ ಅರೆಸ್ಟ್‌

ಮತ್ತೊಂದೆಡೆ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿರು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮೂಲಕ ಒಳನುಸುಳುಕೋರನನ್ನು ಅರೆಸ್ಟ್‌ ಮಾಡಲಾಗಿದೆ. ಬಂಧಿತನನ್ನು ಜಹೀರ್‌ ಖಾನ್‌ ಎಂದು ಗುರುತಿಸಲಾಗಿದೆ. ಕರಾಚಿ ಮೂಲದ ಜಹೀರ್‌ ಖಾನ್‌, ದೇಶದ ಗಡಿಯೊಳಗೆ ಪ್ರವೇಶಿಸಿದ್ದ. ಈತ ಅನುಮಾನಾಸ್ಪದವಾಗಿ ಓದಾಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾರಾಮುಲ್ಲಾ ಚುನಾವಣೆ

ಮೇ20ರಂದು ಬಾರಾಮುಲ್ಲಾದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಈಬಾರಿ ಅತಿ ಹೆಚ್ಚು ಮತದಾನ ಆಗುವ ಮೂಲಕ ಶ್ರೀನಗರದ ದಾಖಲೆ ಮುರಿಯುವ ನಿರೀಕ್ಷೆ ಇದೆ. ಬಾರಾಮುಲ್ಲಾ ಕ್ಷೇತ್ರ ಒಟ್ಟು 16 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ದ್ ಲೋನ್, ಪಿಡಿಪಿ ನಾಯಕ ಮತ್ತು ರೈತ ರಾಜ್ಯಸಭಾ ಸಂಸದ ಮೀರ್ ಫಯಾಜ್, ಮತ್ತು ರೈತ ಮುಲಾ ಶೇಖ್ ಅಬ್ದುಲ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಈ ಬಾರಿ ಬಾರಾಮುಲ್ಲಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ:Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ಕೋಟ್ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಭಾರತೀಯ ವಾಯುಪಡೆ(IAF)ಯ ಬೆಂಗಾವಲು ಪಡೆಯ ಎರಡು ವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು.

Continue Reading

ದೇಶ

Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

Bomb threat: ದಿಲ್ಲಿಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್‌ ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಅಧಿಕೃತ ಮಾಹಿತಿ ಪ್ರಕಾರ ಬೆಳಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್‌ ಆಫ್‌ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿದೆ ಎನ್ನಲಾಗಿದೆ.

VISTARANEWS.COM


on

Bomb threat
Koo

ನವದೆಹಲಿ: ಶಾಲೆ, ಆಸ್ಪತ್ರೆಗಳಿಗೆ ಹುಸಿ ಬಾಂಬ್‌(Bomb threat) ಕರೆ ಬಂದಿರುವ ಬೆನ್ನಲ್ಲೇ ಏರ್‌ ಇಂಡಿಯಾ ವಿಮಾನ(Air India)ಕ್ಕೂ ಬಾಂಬ್‌ ಬೆದರಿಕೆ ಬಂದಿದೆ. ದಿಲ್ಲಿ(Delhi)ಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್‌ ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಅಧಿಕೃತ ಮಾಹಿತಿ ಪ್ರಕಾರ ಬೆಳಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್‌ ಆಫ್‌ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿದೆ ಎನ್ನಲಾಗಿದೆ.

ಘಟನೆ ವರದಿಯಾಗುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಇಳಿಸಲಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಗೆ ಮಾಹಿತಿ ನೀಡಲಾಗಿದೆ. CISF ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಪ್ರಯಾಣಿಕರನ್ನು ವಡೋದರಾಕ್ಕೆ ಮತ್ತೊಂದು ವಿಮಾನದಲ್ಲಿ ಕಳುಹಿಸಲಾಗಿದೆ. ವಿಮಾನದಲ್ಲಿ ಇದುವರೆಗೂ ಯಾವುದೇ ಬಾಂಬ್‌ ಅಥವಾ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಇದು ಕೂಡ ಒಂದು ಹುಸಿ ಬಾಂಬ್‌ ಕರೆ ಎನ್ನಲಾಗಿದೆ.

ನಿನ್ನೆಯಷ್ಟೇ ದೆಹಲಿ, ಬೆಂಗಳೂರು, ಚೆನ್ನೈ, ಅಹಮದಾಬಾದ್‌ ಶಾಲೆಗಳ ನಂತರ ಇದೀಗ ಕಾನ್ಪುರ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಕಾನ್ಪುರದ ಸುಮಾರು 10 ಶಾಲೆಗಳು ಬುಧವಾರ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ. ಇಮೇಲ್‌ ಮೂಲಕ ಈ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌, ಅಹಮದಾಬಾದ್‌ ಶಾಲೆಗಳಿಗೆ ಬಂದ ರಷ್ಯಾದ ಅದೇ ಸರ್ವರ್‌ಗೆ ಲಿಂಕ್ ಮಾಡಲಾದ ಇಮೇಲ್ ಮೂಲಕ ಕಾನ್ಪುರ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿ ತಿಳಿಸಿದೆ. ಸದ್ಯಕ್ಕೆ ಶಾಲೆಗಳಿಂದ ಎಲ್ಲರನ್ನೂ ತೆರವು ಮಾಡಲಾಗಿದ್ದು, ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆಗೆ ನಡೆಸುತ್ತಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸುಮಾರು ಎರಡು ವಾರಗಳ ಅಂತರದಲ್ಲಿ ದೇಶದ ವಿವಿಧ ನಗರಗಳಿಗೆ ಈ ರೀತಿಯ ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ದೆಹಲಿ, ನೋಯ್ಡಾ, ಲಕ್ನೋ, ಅಹಮದಾಬಾದ್‌ ಬಳಿಕ ಈ ಪಟ್ಟಿಗೆ ಇದೀಗ ಕಾನ್ಪುರ ಕೂಡ ಸೇರಿಕೊಂಡಿದೆ. ಇದು ಆರಂಭವಾಗಿದ್ದು ಮೇ 1ರಿಂದ. ಅಂದು ದೆಹಲಿ, ನೋಯ್ಡಾ ಮತ್ತು ಲಕ್ನೋದ ಸುಮಾರು 100 ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು. ಭೀಕರ ಸ್ಫೋಟ ನಡೆಸುವುದಾಗಿ ಎಚ್ಚರಿಸಲಾಗಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಇದು ಹುಸಿ ಕರೆ ಎನ್ನುವುದು ಸಾಬೀತಾಗಿತ್ತು.

ಇದನ್ನೂ ಓದಿ:Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

ಮೇ 6ರಂದು ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕವೇ ಬೆದರಿಕೆ ಬಂದಿತ್ತು. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದವು. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡು ಬಂದಿರಲಿಲ್ಲ. ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

Continue Reading

ದೇಶ

Success Story: ರಾಧಾಮಣಿ ಅಮ್ಮಂಗೆ ವಯಸ್ಸು ಕೇವಲ ನಂಬರ್‌ ಅಷ್ಟೇ; 73 ವರ್ಷದ ಇವರ ಬಳಿ ಇದೆ ಬರೋಬ್ಬರಿ 11 ವಾಹನಗಳ ಲೈಸನ್ಸ್‌

Success Story: ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವ ಮಾತಿದೆ. ಕೇರಳದ ಕೊಚ್ಚಿಯ ರಾಧಾಮಣಿ ಅಮ್ಮ ಎನ್ನುವ 73 ವರ್ಷದ ಅಪರೂಪದ ಸಾಧಕಿಯ ವಿಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ. 73 ವರ್ಷದ ಇವರ ಬಳಿ 11 ವಾಹನಗಳ ಲೈಸನ್ಸ್‌ ಇದೆ. ಈ ಸಾಧನೆ ಮಾಡಿದ ದೇಶದ ಏಕೈಕ ಮಹಿಳೆ ಎನ್ನುವ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಡ್ರೈವಿಂಗ್‌ ಸ್ಕೂಲ್‌ ನಡೆಸುತ್ತಿರುವ ಇವರ ಯಶೋಗಾಥೆಯ ಪರಿಚಯ ಇಲ್ಲಿದೆ.

VISTARANEWS.COM


on

Success Story
Koo

ತಿರುವನಂತಪುರಂ: ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವ ಮಾತು ಬಹುಶಃ ಇವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ವಯಸ್ಸು ಕೇವಲ ಸಂಖ್ಯೆಯಷ್ಟೇ. ಅದಕ್ಕೂ ಮನಸ್ಸಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದಕ್ಕೂ ಇವರು ದೃಷ್ಟಾಂತವಾಗಿ ನಿಲ್ಲುತ್ತಾರೆ. ಹೌದು ನಾವೀಗ ಹೇಳ ಹೊರಟಿರುವುದು ಅಪರೂಪದ ಸಾಧಕಿಯೊಬ್ಬರ ಬಗ್ಗೆ. ಕೇರಳದ ಕೊಚ್ಚಿಯ ರಾಧಾಮಣಿ ಅಮ್ಮ (Radhamani Amma) ಎನ್ನುವ 73 ವರ್ಷದ ಅಪರೂಪದ ಸಾಧಕಿಯ ಬಗ್ಗೆ. ಇವರು 11 ವಾಹನಗಳ ಲೈಸನ್ಸ್‌ ಹೊಂದಿರುವ ದೇಶದ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ. ಕ್ರೇನ್, ಜೆಸಿಬಿ, ರೋಡ್ ರೋಲರ್ ಸೇರಿದಂತೆ ಹಲವು ವಾಹನಗಳನ್ನು ಓಡಿಸುವ ಇವರು ಯುವ ಜನತೆಗೆ ಸ್ಫೂರ್ತಿ ಎನಿಸಿಕೊಂಡಿದ್ದಾರೆ (Success Story).

ರಾಧಾಮಣಿ ಅಮ್ಮ ಅವರ ಊರು ಕೊಚ್ಚಿಯ ಥೊಪ್ಪಂಪ್ಪಾಡಿ. 1981ರಲ್ಲಿ ಮೊದಲ ಬಾರಿ ಡ್ರೈವಿಂಗ್‌ ಕಲಿತ ಅವರು ಬಳಿಕ ಹಿಂದುರುಗಿ ನೋಡಲೇ ಇಲ್ಲ. ಸಾಧಾರಣವಾಗಿ ಮಹಿಳೆಯರು ಲಘು ವಾಹನ ಓಡಿಸುತ್ತಾರೆ. ಆದರೆ ಇವರು ಘನ ವಾಹನ ಚಾಲನೆಗೂ ಸೈ ಎನಿಸಿಕೊಂಡಿದ್ದಾರೆ. ಚಾಲನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಅವರ ಯಶೋಗಾಥೆಯ ವಿವರ ಇಲ್ಲಿದೆ.

ರಾಧಾಮಣಿ ಅಮ್ಮ ಅವರ ಬಳಿ ಲಾರಿ, ಬಸ್‌, ಜೆಸಿಬಿ, ಟ್ರೇಲರ್‌, ಕ್ರೇನ್‌, ಟ್ರ್ಯಾಕ್ಟರ್‌, ಫೋರ್ಕ್‌ ಲಿಫ್ಟ್‌, ರೋಡ್‌ ರೋಲರ್‌, ದ್ವಿಚಕ್ರ ವಾಹನ, ಅಗೆಯುವ ಯಂತ್ರಗಳು ಸೇರಿದಂತೆ ವಿವಿಧ ವಾಹನ ಚಾಲನಾ ಪರವಾನಗಿ ಇದೆ. ಹಲವು ಮಹಿಳೆಯರಿಗೆ ಶಿಕ್ಷಕಿಯಾಗಿ, ಮಾರ್ಗದರ್ಶಿಯಾಗಿ, ತಾಯಿಯಾಗಿ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ಸ್ಫೂರ್ತಿಯಾಗಿದ್ದಾರೆ.

ಯಶೋಗಾಥೆ

ರಾಧಾಮಣಿ ಅವರ ಸಾಧನೆಗೆ ಮುನ್ನುಡಿ ಆರಂಭವಾದದ್ದು 80ರ ದಶಕದಲ್ಲಿ. ತಮ್ಮ ಪತಿ ಲಾಲನ್‌ ಸಹಾಯದಿಂದ ಡ್ರೈವಿಂಗ್‌ ಕಲಿತ ಅವರು 1981ರಲ್ಲಿ ಸ್ಟೇರಿಂಗ್‌ ಹಿಡಿದರು. 1970ರಲ್ಲಿ ಲಾಲನ್‌ ಕೊಚ್ಚಿಯಲ್ಲಿ A-Z ಎನ್ನುವ ಡ್ರೈವಿಂಗ್‌ ತರಬೇತಿ ಶಾಲೆ ಆರಂಭಿಸಿದ್ದರು. ಅವರ ಮರಣಾನಂತರ 2004ರಿಂದ ಈ ತರಬೇತಿ ಕೇಂದ್ರವನ್ನು ರಾಧಾಮಣಿ ಅಮ್ಮ ಮತ್ತು ಅವರ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ವಿಶೇಷ ಎಂದರೆ ಕೇರಳದಲ್ಲಿ ಭಾರೀ ವಾಹನಗಳಿಗೆ ಚಾಲನಾ ಪರವಾನಗಿ ಪಡೆಯಲು ಯಾವುದೇ ತರಬೇತಿ ಸಂಸ್ಥೆಗಳು ಇಲ್ಲದ ಸಮಯದಲ್ಲಿ, ಕಾನೂನು ಹೋರಾಟದ ಮೂಲಕ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು.

ʼʼಆರಂಭದಲ್ಲಿ ನಾನು ನಾಲ್ಕು ಚಕ್ರದ ವಾಹನ ಚಾಲನಾ ತರಬೇತಿ ಪಡೆದುಕೊಂಡೆ. ಡ್ರೈವಿಂಗ್‌ ಸ್ಕೂಲ್‌ ಆರಂಭಿಸಿದ ಬಳಿಕ ಘನ ವಾಹನ ಚಾಲನಾ ತರಬೇತಿ ನೀಡಲು ನಾನು ಮತ್ತು ಪತಿ ನಿರ್ಧರಿಸಿದ್ದೆವು. ಅದರಂತೆ ಘನ ವಾಹನ ಚಾಲನೆಯನ್ನೂ ಕಲಿತುಕೊಂಡೆ. ಕೇರಳದಲ್ಲಿ ಹೆವಿ ಡ್ರೈವಿಂಗ್ ಶಾಲೆಯನ್ನು ತೆರೆದ ಮೊದಲ ವ್ಯಕ್ತಿ ನಾನುʼʼ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರಾಧಾಮಣಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಹಿಂದೆ ಹೀಗಿರಲಿಲ್ಲ

ʼʼಈಗೆಲ್ಲ ಮಹಿಳೆಯರು ವಾಹನ ಓಡಿಸುವುದು ಸಾಮಾನ್ಯ ಎಂಬಂತಾಗಿದೆ. ಆದರೆ ನಾಲ್ಕು ದಶಕಗಳ ಹಿಂದೆ, ನಾನು ಡ್ರೈವಿಂಗ್‌ ಕಲಿಯುವಾಗ ಪರಿಸ್ಥಿತಿ ಹೀಗಿರಲಿಲ್ಲ. ನಾನು ಕಾರು ಓಡಿಸುವಾಗ ನೆರೆಹೊರೆಯವೆಲ್ಲ ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು. ಕೆಲವರು ತಮಾಷೆ ಮಾಡುತ್ತಿದ್ದರು. ಆದರೆ ಇದ್ಯಾವುದರ ಬಗ್ಗೆಯೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಅದೆಷ್ಟೋ ಮಹಿಳೆಯರಿಗೆ ನನ್ನ ಸಾಧನೆ ಸ್ಫೂರ್ತಿಯಾಗಿದೆ ಎನ್ನುವುದನ್ನು ತಿಳಿದಾಗ ಸಂತಸವಾಗುತ್ತದೆʼʼ ಎನ್ನುತ್ತಾರೆ ರಾಧಾಮಣಿ.

ಇದನ್ನೂ ಓದಿ: Success Story: ಕಸದಲ್ಲಿಯೂ ಕಂಪು ಹರಡುವವರು!; ಬಾಡಿದ ಹೂ ಇಲ್ಲಿ ಮತ್ತೆ ದೇವರ ಪೂಜೆಗೆ ಸಿದ್ಧ

ಜೆಸಿಬಿ ಚಾಲನೆ ಅತ್ಯಂತ ಸವಾಲು

ಇಷ್ಟು ವಾಹನಗಳ ಪೈಕಿ ಜೆಸಿಬಿ ಚಾಲನೆಯೇ ಅತ್ಯಂತ ಕಷ್ಟವಾದುದು ಎನ್ನುವುದು ಅವರ ಅಭಿಪ್ರಾಯ. ʼʼಈಗ ಡ್ರೈವಿಂಗ್‌ ಕ್ಷೇತ್ರದಲ್ಲಿ ಮಹಿಳೆಯರಿಗೆ ಅನೇಕ ಅವಕಾಶಗಳಿವೆ. ಅನೇಕರು ಈಗ ವಾಹನ ಕಲಿಕೆಗೆ ಮುಂದೆ ಬರುತ್ತಿದ್ದಾರೆ. ಜತೆಗೆ ಟ್ಯಾಂಕರ್‌ನಂತಹ ಘನ ವಾಹನಗಳನ್ನು ಮಹಿಳೆಯರೂ ಓಡಿಸುತ್ತಿದ್ದಾರೆ ಎನ್ನುವುದು ಕೇಳುವಾಗ ಖುಷಿಯಾಗುತ್ತಿದೆʼʼ ಎಂದು ರಾಧಾಮಣಿ ಅಮ್ಮ ಹೇಳುತ್ತಾರೆ. ಒಟ್ಟಿನಲ್ಲಿ ಅವರ ಈ ಸಾಹಸಗಾಥೆ ಎಲ್ಲರಿಗೂ ಸ್ಫೂರ್ತಿ. ನನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತವರಿಗೆ ಮಾದರಿ.

Continue Reading

ದೇಶ

Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

Swati Maliwal:ಆಮ್ ಆದ್ಮಿ ಪಕ್ಷದ(AAP) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ ಎದುರಿಸುತ್ತಿರುವ ವಿಭವ್‌ ಕುಮಾರ್‌ ಇದೀಗ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜೊತೆ ಕಾಣಿಸಿಕೊಂಡಿದ್ದಾನೆ. ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕೇಜ್ರಿವಾಲ್‌ ಜೊತೆ ವಿಭವ್‌ ಕುಮಾರ್‌ ಕೂಡ ಕಾಣಿಸಿಕೊಂಡಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ಬಿಜೆಪಿ ನಾಯಕರು ಸೇರಿದಂತೆ ಅನೇಕ ಕಿಡಿ ಕಾರಿದ್ದಾರೆ.

VISTARANEWS.COM


on

Swati maliwal
Koo

ಲಕ್ನೋ: ಆಮ್ ಆದ್ಮಿ ಪಕ್ಷದ(AAP) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್(Swati Maliwal) ಮೇಲೆ ಹಲ್ಲೆ ಆರೋಪ ಎದುರಿಸುತ್ತಿರುವ ವಿಭವ್‌ ಕುಮಾರ್‌(Bibhav Kumar) ಇದೀಗ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌(Arvind Kejriwal) ಜೊತೆ ಕಾಣಿಸಿಕೊಂಡಿದ್ದಾನೆ. ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕೇಜ್ರಿವಾಲ್‌ ಜೊತೆ ವಿಭವ್‌ ಕುಮಾರ್‌ ಕೂಡ ಕಾಣಿಸಿಕೊಂಡಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ಬಿಜೆಪಿ ನಾಯಕರು ಸೇರಿದಂತೆ ಅನೇಕ ಕಿಡಿ ಕಾರಿದ್ದಾರೆ.

ಬುಧವಾರ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸಭೆಯಲ್ಲಿ ಭಾಗಿಯಾಗಲೆಂದು ಲಕ್ನೋಗೆ ಆಗಮಿಸಿದ್ದ ಕೇಜ್ರಿವಾಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆಗ ಅವರ ಜೊತೆಗೆ ವಿಭವ್‌ ಕುಮಾರ್‌ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಸ್ವಾಮಿ ಮೇಲೆ ಹಲ್ಲೆ ನಡೆದು ಎರಡು ಮೂರು ದಿನಗಳು ಕಳೆದಿದೆ ಅಷ್ಟೇ. ಅಷ್ಟರೊಳಗೆ ಕೇಜ್ರಿವಾಲ್‌ ಜೊತೆಗೆ ಕಾಣಿಸಿಕೊಂಡಿರುವುದು ಎಲ್ಲರ ಆಕ್ರೋಶಕ್ಕೆ ಕಾಣವಾಗಿದೆ.

ಬಿಜೆಪಿ ಕಿಡಿ:

ಕೇಜ್ರಿವಾಲ್‌ ಜೊತೆ ವಿಭವ್‌ ಕುಮಾರ್‌ ಕಾಣಿಸಿಕೊಂಡಿರುವುದಕ್ಕೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಬಿಜೆಪಿ ನಾಯಕ ತಾಜಿಂದರ್‌ ಬಗ್ಗಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಸ್ವಾತಿ ಮಲಿವಾಲ್‌ ಜೊತೆಗೆ ಅನುಚಿತವಾಗಿ ವರ್ತಿಸಿರುವ ವೈಭವ್‌ ಕುಮಾರ್‌ನನ್ನು ಶಿಕ್ಷೆಯಾಗಿಲ್ಲ. ವೈಭವ್‌ಗೆ ಶಿಕ್ಷಿ ವಿಧಿಸಲಾಗುತ್ತದೆ ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಹೇಳಿದ್ದಾರೆ. ಆದರೆ ಮಾತ್ರ ಸಿಎಂ ಜೊತೆಗೇ ಇಡೀ ದೇಶ ಸುತ್ತುತ್ತಿದ್ದಾನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣದ ಕುರಿತು ವರದಿಗಾರರು ಅರವಿಂದ್ ಕೇಜ್ರಿವಾಲ್‌ಗೆ ಪ್ರಶ್ನೆಗಳನ್ನು ಕೇಳಿದಾಗ, ಕೇಜ್ರಿವಾಲ್ ಯಾವುದೇ ಉತ್ತರವನ್ನು ನೀಡದೇ, ಮೈಕ್‌ ಅನ್ನು ಅಖಿಲೇಶ್‌ ಯಾದವ್‌ರತ್ತ ತಿರುಗಿಸಿದ ಘಟನೆಯೂ ನಡೆದಿದೆ. ಮೈಕ್‌ ಪಡೆದ ಅಖಿಲೇಶ್‌ ಅದಕ್ಕಿಂತಲೂ ಮುಖ್ಯವಾದ ವಿಚಾರ ಬೇರೆ ಇದೆ ಎಂದು ಹೇಳುವ ಮೂಲಕ ವಿಷಯಾಂತರ ಮಾಡಿದ್ದಾರೆ. ಈ ವಿಡಿಯೋವನ್ನು ಕೂಡ ತಾಜಿಂದ್‌ ಬಗ್ಗಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Kannada New Movie: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’ ಚಿತ್ರೀಕರಣ ಮುಕ್ತಾಯ

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ತಮ್ಮ ಮೇಲೆ ಸಿಎಂ ನಿವಾಸದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ್ ವಿರುದ್ಧ ಅವರು ಈ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ವಾತಿ ಮಲಿವಾಲ್ ಅವರ ಘಟನೆಯ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಅವರು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ನಂತರ ಹೇಳಿದ್ದರು.ಸಿಎಂ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಸ್ವಾತಿ ಮಲಿವಾಲ್ ಬಂದಿದ್ದರು ಡ್ರಾಯಿಂಗ್ ರೂಮಿನಲ್ಲಿ ಕಾಯುತ್ತಿದ್ದಳು. ಆಗ ವಿಭವ್ ಕುಮಾರ್ ಅಲ್ಲಿಗೆ ಆಗಮಿಸಿ ಸ್ವಾತಿ ಮಲಿವಾಲ್ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

Continue Reading
Advertisement
Terrorists Killed
ದೇಶ2 mins ago

Terrorists Killed:ಭಾರತೀಯ ಸೇನೆಯ ಭರ್ಜರಿ ಬೇಟೆ- ನಾಲ್ವರು ಉಗ್ರರು ಮಟ್ಯಾಶ್‌!

Startup Investment
ವಾಣಿಜ್ಯ5 mins ago

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Virat Kohli
ಕ್ರೀಡೆ10 mins ago

Virat Kohli: ನಿವೃತ್ತಿಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಿರಾಟ್​ ಕೊಹ್ಲಿ; ಅಭಿಮಾನಿಗಳಿಗೆ ಆತಂಕ

Bhavani Singh pankaj shivanna couple expecting-their first child
ಕಿರುತೆರೆ19 mins ago

Bhavani Singh: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಸುಬ್ಬಲಕ್ಷ್ಮಿ ಸಂಸಾರʼ ಧಾರಾವಾಹಿ ನಟ!

ರಾಜಕೀಯ34 mins ago

HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

Bomb threat
ದೇಶ44 mins ago

Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

sunil chhetri
ಕ್ರೀಡೆ55 mins ago

Sunil Chhetri: ಮೈ ಬ್ರದರ್, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಚೆಟ್ರಿಗೆ ಶುಭ ಹಾರೈಸಿದ ಗೆಳೆಯ ವಿರಾಟ್​ ಕೊಹ್ಲಿ

Success Story
ದೇಶ1 hour ago

Success Story: ರಾಧಾಮಣಿ ಅಮ್ಮಂಗೆ ವಯಸ್ಸು ಕೇವಲ ನಂಬರ್‌ ಅಷ್ಟೇ; 73 ವರ್ಷದ ಇವರ ಬಳಿ ಇದೆ ಬರೋಬ್ಬರಿ 11 ವಾಹನಗಳ ಲೈಸನ್ಸ್‌

Kiccha Sudeep Max Cinema shooting completed
ಸ್ಯಾಂಡಲ್ ವುಡ್1 hour ago

Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

gold rate today priyamani
ಚಿನ್ನದ ದರ1 hour ago

Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌