ಚುನಾವಣೆ ಪವಿತ್ರವಾದುದು, ಧಕ್ಕೆ ಆಗಬಾರದು; ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚಿಸಿದ್ದೇಕೆ? - Vistara News

ದೇಶ

ಚುನಾವಣೆ ಪವಿತ್ರವಾದುದು, ಧಕ್ಕೆ ಆಗಬಾರದು; ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚಿಸಿದ್ದೇಕೆ?

VVPAT Verification: ಇವಿಎಂ ಮತಗಳಿಗೂ, ವಿವಿಪ್ಯಾಟ್‌ ಮತಗಳಿಗೂ ಸಂಪೂರ್ಣವಾಗಿ ತಾಳೆ ಮಾಡಬೇಕು ಎಂಬುದಾಗಿ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ತಾಳೆ ಹಾಕುವ ಪ್ರಕ್ರಿಯೆ ವಿವರಿಸುವಂತೆ ಚುನಾವಣೆ ಆಯೋಗಕ್ಕೆ ಸೂಚಿಸಿದೆ. ಅಷ್ಟೇ ಅಲ್ಲ, ಅರ್ಜಿಯ ವಿಚಾರಣೆ ವೇಳೆ, ಚುನಾವಣೆ ಪ್ರಕ್ರಿಯೆಯು ತುಂಬ ಪವಿತ್ರವಾದುದು ಎಂದು ಕೂಡ ಹೇಳಿದೆ.

VISTARANEWS.COM


on

Supreme Court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಮನೆ ಮನೆ ಪ್ರಚಾರ ಶುರುವಾಗಿದೆ. ಇದರ ಬೆನ್ನಲ್ಲೇ, “ಇದು ಚುನಾವಣೆ ಪ್ರಕ್ರಿಯೆ. ತುಂಬ ಪವಿತ್ರವಾಗಿರಬೇಕು. ಯಾರಿಗೂ ಕೂಡ ಅವರ ನಿರೀಕ್ಷೆಯಂತೆ, ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಭಾವನೆ ಬರಕೂಡದು” ಎಂಬುದಾಗಿ ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ (Supreme Court) ತಿಳಿಸಿದೆ. ಇವಿಎಂ ಹಾಗೂ ವಿವಿಪ್ಯಾಟ್‌ಗಳ ಸಂಪೂರ್ಣ (EVM-VVPAT Verification) ತಾಳೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೀಗೆ ಸ್ಪಷ್ಟಪಡಿಸಿದೆ.

ಇವಿಎಂ-ವಿವಿಪ್ಯಾಟ್‌ಗಳ ತಾಳೆ ಕೋರಿ ಅರ್ಜಿ ಸಲ್ಲಿಸಿದವರ ಪರ ವಕೀಲ ನಿಜಾಂ ಪಾಶಾ ವಾದ ಮಂಡಿಸಿದರು. “ಇವಿಎಂ ಹಾಗೂ ವಿವಿಪ್ಯಾಟ್‌ಗಳ ಶೇ.100ರಷ್ಟು ತಾಳೆ ಮಾಡಬೇಕು. ಅಷ್ಟೇ ಅಲ್ಲ, ಮತದಾನ ಮಾಡಿದ ಬಳಿಕ ಮತದಾರನು ವಿವಿಪ್ಯಾಟ್‌ ಸ್ಲಿಪ್‌ಅನ್ನು ಬ್ಯಾಲೆಟ್‌ ಬಾಕ್ಸ್‌ನಲ್ಲಿ ಠೇವಣಿ ಮಾಡುವಂತೆ ಆದೇಶಿಸಬೇಕು” ಎಂಬುದಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, “ಈ ಪ್ರಕ್ರಿಯೆ ಅನುಸರಿಸಿದರೆ ಮತದಾರನ ಗೌಪ್ಯತೆಗೆ ಧಕ್ಕೆ ಬರುವುದಿಲ್ಲವೇ” ಎಂದು ಪ್ರಶ್ನಿಸಿತು. ಆಗ ಪಾಶಾ, “ಮತದಾರನ ಖಾಸಗಿತನವು ಮತದಾರನ ಹಕ್ಕುಗಳನ್ನು ಕಸಿಯುವಂತಿರಬಾರದು” ಎಂದರು. ಬಳಿಕ ಇವಿಎಂ ಹಾಗೂ ವಿವಿಪ್ಯಾಟ್‌ಗಳ ತಾಳೆ ಪ್ರಕ್ರಿಯೆ ಕುರಿತು ವಿವರಣೆ ನೀಡಬೇಕು ಎಂದು ನ್ಯಾಯಾಲಯವು ಪ್ರಕ್ರಿಯೆ ಆಯೋಗಕ್ಕೆ ಸೂಚಿಸಿತು.

ಚುನಾವಣೆ ಆಯೋಗದ ವಾದವೇನು?

“ಇವಿಎಂಗಳಿಗೂ, ವಿವಿಪ್ಯಾಟ್‌ಗೂ ತಾಳೆಯಾಗುತ್ತದೆ. ಒಮ್ಮೆಯೂ ಏರುಪೇರಾಗಿಲ್ಲ” ಎಂದು ಚುನಾವಣೆ ಆಯೋಗವು ತಿಳಿಸಿತು. ಆಗ ನ್ಯಾಯಾಲಯವು, “ಡೇಟಾ ವಿಶ್ಲೇಷಣೆ ಮಾಡೋಣ. ವೈಯಕ್ತಿಕ ಪೂರ್ವಗ್ರಹಗಳಿಂದ ಅಲ್ಲ. ಇದುವರೆಗೆ ಏರುಪೇರು ಆಗೇ ಇಲ್ಲ ಎಂದಾದರೆ, ಡೇಟಾ ಮಾಹಿತಿ ನೀಡಲಿ” ಎಂದು ಸ್ಪಷ್ಟಪಡಿಸಿತು. ಹಾಗೆಯೇ, “5 ಸಾವಿರದಿಂದ 7,500 ಪೇಪರ್‌ ಸ್ಲಿಪ್‌ಗಳ ಜತೆ ತಾಳೆ ಮಾಡಬೇಕು ಎಂದಿದೆ. ಇದಕ್ಕಾಗಿ 5 ಗಂಟೆ ಏಕೆ ಬೇಕು” ಎಂದು ಕೋರ್ಟ್‌ ಪ್ರಶ್ನಿಸಿತು. “ಸಣ್ಣ ಸ್ಲಿಪ್‌ಗಳು ಇರುತ್ತವೆ. ಒಂದಕ್ಕೊಂದು ಅಂಟಿಕೊಂಡಿರುತ್ತವೆ” ಎಂದು ಆಯೋಗವು ಸ್ಪಷ್ಟನೆ ನೀಡಿತ. “ಸ್ಲಿಪ್‌ಗಳ ಬದಲು ಬಾರ್‌ಕೋಡ್‌ಗಳನ್ನು ಬಳಸಬಹುದೇ” ಎಂಬುದಾಗಿ ಕೋರ್ಟ್‌ ಪ್ರಶ್ನಿಸಿತು. ಆಗ ಚುನಾವಣೆ ಆಯೋಗವು, “ಈ ಚುನಾವಣೆಯಲ್ಲಿ ಸಾಧ್ಯವಿಲ್ಲ” ಎಂದು ತಿಳಿಸಿತು. “ಭವಿಷ್ಯದಲ್ಲಾದರೂ ಮಾಡಬಹುದಲ್ಲ” ಎಂಬುದಾಗಿ ಕೋರ್ಟ್‌ ಹೇಳಿತು.

ಚುನಾವಣೆ ಮತಯಂತ್ರಗಳ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸೇರಿ ಹಲವು ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. “ಇವಿಎಂಗಳನ್ನು ತಿರುಚದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 180 ಸೀಟುಗಳನ್ನು ಕೂಡ ಬರುವುದಿಲ್ಲ” ಎಂಬುದಾಗಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ಇದರ ಬೆನ್ನಲ್ಲೇ, ಇವಿಎಂ ಹಾಗೂ ವಿವಿಪ್ಯಾಟ್‌ಗಳ ತಾಳೆ ಕುರಿತು ವಿವರಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿರುವುದು ಪ್ರಾಮುಖ್ಯತೆ ಪಡೆದಿದೆ.

ಇವಿಎಂ-ವಿವಿಪ್ಯಾಟ್‌ ತಾಳೆ ಹೇಗೆ?

ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗವು ಮತಯಂತ್ರಗಳ ಜತೆಗೆ ವಿವಿಪ್ಯಾಟ್‌ಗಳನ್ನೂ (ವೋಟರ್‌ ವೇರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್)‌ ಇರಿಸುತ್ತದೆ. ಮತಎಣಿಕೆ ಮಾಡುವಾಗ ಇವಿಎಂನಲ್ಲಿ ದಾಖಲಾದ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಐದು ಇವಿಎಂಗಳನ್ನು ಆಯ್ಕೆ ಮಾಡಿಕೊಂಡು, ನಂತರ ಇವಿಎಂಗಳ ಜತೆ ತಾಳೆ ಮಾಡುವ ವಿಧಾನ ಇದೆ. ಆದರೆ, ಎಲ್ಲ ಇವಿಎಂಗಳ ಜತೆ ತಾಳೆ ಹಾಕಬೇಕು ಎಂಬುದು ಅರ್ಜಿದಾರರ ವಾದವಾಗಿದೆ.

ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Mallikarjuna Kharge: ಶಿವ, ಶ್ರೀರಾಮನ ಬಗ್ಗೆ ಖರ್ಗೆ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ

Mallikarjuna Kharge:ಛತ್ತೀಸ್‌ಗಡದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಭಗವಾನ್‌ ಶಿವನ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಛತ್ತೀಸ್‌ಗಡದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶಿವಕುಮಾರ್‌ ದಹಾರಿಯಾ ಪರ ಪ್ರಚಾರದ ವೇಳೆ ಶಿವಕುಮಾರ್‌ ಅವರನ್ನು ಭಗವಾನ್‌ ಶಿವನಿಗೆ ಹೋಲಿಸಿ ಹೇಳಿಕೆಯೊಂದನ್ನು ನೀಡಿದ್ದಾರೆ.

VISTARANEWS.COM


on

Mallikarjuna Kharge
Koo

ಛತ್ತೀಸ್‌ಗಡ: ಚುನಾವಣಾ ಪ್ರಚಾರ(Lok sabha Election 2024)ದಲ್ಲಿ ವಿವಾದಾತ್ಮಕ ಹೇಳಿಕೆಗಳು, ಆ ಹೇಳಿಕೆ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಈ ಎಐಸಿಸಿ ಅಧ್ಯಕ್ಷ(AICC President) ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಭಾಷಣದ ಭರದಲ್ಲಿ ನೀಡಿರುವ ಹೇಳಿಕೆಯೊಂದು ವಿವಾದಕ್ಕೀಡಾಗಿದೆ. ಛತ್ತೀಸ್‌ಗಡದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಭಗವಾನ್‌ ಶಿವನ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಛತ್ತೀಸ್‌ಗಡದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶಿವಕುಮಾರ್‌ ದಹಾರಿಯಾ ಪರ ಪ್ರಚಾರದ ವೇಳೆ ಶಿವಕುಮಾರ್‌ ಅವರನ್ನು ಭಗವಾನ್‌ ಶಿವನಿಗೆ ಹೋಲಿಸಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ್‌ ಅವರು ಸಾಕ್ಷತ್‌ ಶಿವನಂತೆ. ಅವರು ಬಹಳ ಸುಲಭವಾಗಿ ರಾಮ(ಬಿಜೆಪಿ)ನ ಜೊತೆ ಸ್ಪರ್ಧೆಗಿಳಿಯಬಹುದು. ನನ್ನ ಹೆಸರು ಕೂಡ ಮಲ್ಲಿಕಾರ್ಜುನ. ಅಂದರೆ ಶಿವ ಎಂದರ್ಥ. ನಾನು ಕೂಡ ಶಿವನೇ ಆಂಧ‍್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ಎಂಬ ಹೆಸರಿನಲ್ಲಿ ಜ್ಯೋತಿರ್ಲಿಂಗ ಇದೆ ಎಂದು ಹೇಳಿದ್ದರು.

ಬಿಜೆಪಿ ತಿರುಗೇಟು

ಖರ್ಗೆ ಹೇಳಿಕೆಗೆ ವೈರಲ್‌ ಆಗುತ್ತಿದ್ದಂತೆ ಇದೇ ವಿಚಾರವನ್ನು ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ. ಛತ್ತೀಸ್‌ಗಡದ ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ ರಾಮನನ್ನು ತಮ್ಮ ಶತ್ರು ಎಂದು ಭಾವಿಸಿದೆ ಎಂಬುದನ್ನು ಖರ್ಗೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೆ ಸ್ವತಃ ಶಿವನೇ ಶ್ರೀರಾಮನನ್ನು ತನ್ನ ದೇವರು ಎಂದು ಭಾವಿಸಿದ್ದ ಎಂಬುದು ಕಾಂಗ್ರೆಸಿಗರಿಗೆ ತಿಳಿದಿಲ್ಲ. ಕಾಂಗ್ರೆಸ್‌ ಪಕ್ಷ ಶ್ರೀರಾಮನ ಅಸ್ತಿತ್ವವನ್ನು ಆಗಾಗ ಪ್ರಶ್ನಿಸುತ್ತಲೇ ಬಂದಿದೆ. ಇದೇ ಖರ್ಗೆಯ ಪುತ್ರ ಪ್ರಿಯಾಂಕ್‌ ಖರ್ಗೆ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿದ್ದರು. ಅಲ್ಲದೇ ಸನಾತನ ಧರ್ಮವನ್ನು ನಾಶ ಮಾಡುವುದಾಗಿ ಹೇಳಿಕೆ ನೀಡಿದ್ದವರಿಗೆ ಬೆಂಬಲ ಸೂಚಿಸಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್‌ ಇದೀಗ ಸಂಕಷ್ಟ ಎದುರಿಸುತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: Karnataka Weather: ಇಂದು ಚಿಕ್ಕಮಗಳೂರು, ಕೊಡಗು, ಮೈಸೂರು ಸೇರಿ ವಿವಿಧೆಡೆ ಮಳೆ ಮುನ್ಸೂಚನೆ

ಶ್ರೀರಾಮನ ಬಗ್ಗೆ ಸಚಿವ ಕೆ. ರಾಜಣ್ಣ ಕೂಡ ಕೆಲವು ತಿಂಗಳ ಹಿಂದೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ದೇಗುಲ ಟೂರಿಂಗ್ ಟಾಕೀಸ್‌, ಎರಡು ಗೊಂಬೆ ಇಟ್ಟು ರಾಮ, ರಾಮ ಅಂತಿದ್ರು ಎಂದು ರಾಜಣ್ಣ ಹೇಳಿದ್ದರು. ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆಎನ್ ರಾಜಣ್ಣ, ನಮ್ಮೂರಗಳಲ್ಲಿ ಸುಮಾರು ನೂರಾರು ವರ್ಷ ಇತಿಹಾಸ ಇರೋ ಶ್ರೀರಾಮ ದೇವಸ್ಥಾನಗಳಿವೆ. ಹೆಚ್ಚು ಪಾವಿತ್ರತ್ಯತೆ ಇರೋ ದೇವಸ್ಥಾನಗಳು ನಮ್ಮೂರುಗಳಲ್ಲಿವೆ ಎಂದು ಹೇಳಿದ್ದಾರೆ. ಚುನಾವಣೆಗೋಸ್ಕರ ಒಂದು ದೇವಸ್ಥಾನ ಕಟ್ಟಿ ಜನರಿಗೆ ಮೋಸ ಮಾಡುತ್ತಿದ್ದಾರೆ. ನಾನು ಶ್ರೀರಾಮ ಭಕ್ತ. ಅಂದು ನಾನು ಸಹ ಆ ಘಟನೆ ನಡೆದಾಗ ಅಯೋಧ್ಯೆಗೆ ಹೋಗಿದ್ದೆ. ಒಂದು ಟೆಂಟ್​​ನಲ್ಲಿ ಎರಡು ಗೊಂಬೆ ಇರಿಸಿ ಇವನೇ ಶ್ರೀರಾಮ ಅಂತ ಹೇಳ್ತಿದ್ರು ಎಂದು ಹೇಳಿಕೆ ನೀಡಿದ್ದರು.

Continue Reading

ಉದ್ಯೋಗ

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

Job Alert: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ 36 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 20. ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ (Neyveli Lignite Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NLC Recruitment 2024). ಸುಮಾರು 36 ಎಕ್ಸಿಕ್ಯೂಟಿವ್‌ ಹುದ್ದೆಗಳಿದ್ದು, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌-ಆಪರೇಷನ್‌: 24 ಮತ್ತು ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌: 12 ಹುದ್ದೆಗಳಿವೆ.
ಎಕ್ಸಿಕ್ಯೂಟಿವ್‌-ಆಪರೇಷನ್‌ ಹುದ್ದೆಗೆ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌ ಹುದ್ದೆಗೆ ಸಿವಿಲ್/ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

Neyveli Lignite Corporation Limited recruitment ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 63 ವರ್ಷ. ಅರ್ಜಿ ಶುಲ್ಕವಾಗಿ ಮಾಜಿ ಯೋಧರು / ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರು 354 ರೂ. ಮತ್ತು ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ವಿಭಾಗದವರು 854 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ಮಾರ್ಗ ಅನುಸರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ. ಒಂದು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಆಯ್ಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು ನೊಂದಾಯಿಸಿ.
  • NLC Executive Apply Online ಆಯ್ಕೆ ಕ್ಲಿಕ್‌ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ. ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳು

  • ಫೋಟೊ ಹೈ ಕ್ವಾಲಿಟಿಯಲ್ಲಿದ್ದು, 2023ರ ಅಕ್ಟೋಬರ್‌ 1ರ ಬಳಿಕ ತೆಗೆದಿರಬೇಕು.
  • ಅತ್ಯುತ್ತಮ ಕ್ಲಾಲಿಟಿಯ ಅಭ್ಯರ್ಥಿಯ ಸಹಿಯ ಫೋಟೊ.
  • ಹುಟ್ಟಿದ ದಿನಾಂಕವನ್ನು ಖಾತರಿಪಡಿಸುವ ದಾಖಲೆ.
  • ಎಸ್ಸೆಸ್ಸೆಲ್ಸಿ / ಶೈಕ್ಷಣಿಕ ಪ್ರಮಾಣ ಪತ್ರ.
  • ಆಧಾರ್‌ ಕಾರ್ಡ್‌ನ ಪ್ರತಿ.
  • ಜಾತಿ ಸರ್ಟಿಫಿಕೆಟ್‌.
  • ಮಾಜಿ ಯೋಧರಾಗಿದ್ದರೆ ಅದರ ದಾಖಲೆ.
  • ಫೋಟೊ ಮತ್ತು ಸಹಿಯ ಫೋಟೊ JPEG ಫಾರ್ಮಾಟ್‌ನಲ್ಲಿರಬೇಕು.
  • ದಾಖಲೆಗಳು, ಡಾಕ್ಯುಮೆಂಟ್‌ JPEG ಅಥವಾ PDF ಫಾರ್ಮಾಟ್‌ನಲ್ಲಿರುವುದು ಕಡ್ಡಾಯ.

ಅಪೂರ್ಣ ಅಪ್ಲಿಕೇಷನ್‌ ತಿರಸ್ಕೃರಿಸಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಭರ್ತಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

‌Bomb Threat: ಬಾಂಬ್‌ ಬೆದರಿಕೆ ಇಮೇಲ್ ಮೂಲ ಪತ್ತೆ, ದಿಲ್ಲಿಯ 100ಕ್ಕೂ ಅಧಿಕ ಶಾಲೆ ಕ್ಲೋಸ್

Bomb threat: ಇಂದು ಮುಂಜಾನೆ ದಿಲ್ಲಿಯ 100ಕ್ಕೂ ಅಧಿಕ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಕೂಡಲೇ ಮಕ್ಕಳನ್ನು ತೆರವುಗೊಳಿಸಿ ಮನೆಗೆ ಕಳಿಸಲಾಗಿತ್ತು. ಆತಂಕಿತರಾದ ಇತರ ಶಾಲೆಗಳವರೂ ಮಕ್ಕಳನ್ನು ತರಗತಿಗಳಿಂದ ಮರಳಿ ಕಳಿಸಿದ್ದರು. ಇದೀಗ ಇಮೇಲ್‌ ಮೂಲ ಪತ್ತೆಹಚ್ಚಲಾಗಿದೆ.

VISTARANEWS.COM


on

bomb threat delhi ncr schools
Koo

ಹೊಸದಿಲ್ಲಿ: ದೆಹಲಿ (New Delhi) ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಸುಮಾರು 100 ಶಾಲೆಗಳಿಗೆ (Schools) ಕಳುಹಿಸಲಾದ ಬಾಂಬ್ ಬೆದರಿಕೆ (Bomb Threat) ಇಮೇಲ್‌ಗಳ ಮೂಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಶಾಲೆಗಳು ಬಾಂಬ್‌ ಬೆದರಿಕೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ಮರಳಿ ಮನೆಗೆ ಕಳುಹಿಸಿವೆ.

“ದೆಹಲಿ ಪೊಲೀಸರು ಇಮೇಲ್‌ಗಳ (Email threat) ಮೂಲವನ್ನು ಪತ್ತೆಹಚ್ಚಿದ್ದಾರೆ. ಪೊಲೀಸರು ಜಾಗರೂಕರಾಗಿದ್ದಾರೆ, ಲೀಡ್‌ಗಳನ್ನು ಪಡೆಯುತ್ತಿದ್ದಾರೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ದೆಹಲಿಯ ನಾಗರಿಕರಿಗೆ ಭರವಸೆ ನೀಡುತ್ತಿದ್ದೇನೆ” ಎಂದು ಹೊಸದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಹೇಳಿದ್ದಾರೆ.

ಇಂದು ಮುಂಜಾನೆ ದಿಲ್ಲಿಯ 100ಕ್ಕೂ ಅಧಿಕ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿತ್ತು. ಕೂಡಲೇ ಮಕ್ಕಳನ್ನು ತೆರವುಗೊಳಿಸಿ ಮನೆಗೆ ಕಳಿಸಲಾಗಿತ್ತು. ಆತಂಕಿತರಾದ ಇತರ ಶಾಲೆಗಳವರೂ ಮಕ್ಕಳನ್ನು ತರಗತಿಗಳಿಂದ ಮರಳಿ ಕಳಿಸಿದ್ದರು.

ವಿದೇಶಿ ಸರ್ವರ್‌ಗಳ ಮೂಲಕ ಡೇಟಾವನ್ನು ರೂಟ್ ಮಾಡುವ ಮತ್ತು ದಾರಿ ತಪ್ಪಿಸುವ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಅನ್ನು ಬಳಸಿಕೊಂಡು ಇಮೇಲ್‌ನ ಮೂಲವನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸ್ವಲ್ಪ ಸಮಯ ತೆಗೆದುಕೊಂಡರು. ವಿಪಿಎನ್ ಟ್ರಾಫಿಕ್ ಅನ್ನು ಹಿಂತೆಗೆದುಕೊಂಡ ನಂತರ ಮತ್ತು ಇಮೇಲ್‌ನ ಮೂಲವನ್ನು ಕಂಡುಹಿಡಿದ ನಂತರ ಪೊಲೀಸರು ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು- ಅನನ್ಯ ಐಡೆಂಟಿಫೈಯರ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸ್ ವಿಶೇಷ ಸೆಲ್‌ ಈ ಕುರಿತು ತನಿಖೆ ಪ್ರಾರಂಭಿಸಿದೆ. ಶೋಧದ ಸಂದರ್ಭದಲ್ಲಿ ಯಾವುದೇ ಶಾಲೆಯಲ್ಲಿ ಅನುಮಾನಾಸ್ಪದವಾದುದು ಏನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಎಲ್ಲಾ ಶಾಲೆಗಳನ್ನು ಪರಿಶೀಲಿಸಿದ್ದೇವೆ ಮತ್ತು ಏನೂ ಕಂಡುಬಂದಿಲ್ಲ; ಭಯಪಡುವ ಅಗತ್ಯವಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿ ಕುಮಾರ್ ಮಹ್ಲಾ ಹೇಳಿದ್ದಾರೆ.

ಎಲ್‌ಜಿ ಸಕ್ಸೇನಾ ಅವರು ದೆಹಲಿ ಪೊಲೀಸ್ ಮುಖ್ಯಸ್ಥರಿಂದ ವಿವರವಾದ ತನಿಖೆಯನ್ನು ಕೋರಿದ್ದಾರೆ. ರಾಜಧಾನಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ನಂತರ ಸಕ್ಸೇನಾ ಅವರು ಉತ್ತರ ದೆಹಲಿಯ ಮಾಡೆಲ್ ಟೌನ್‌ನಲ್ಲಿರುವ ಡಿಎವಿ ಶಾಲೆಗೆ ಭೇಟಿ ನೀಡಿದರು.

“… ಪೋಷಕರು ಭಯಪಡಬೇಡಿ. ಶಾಲೆಗಳು ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತದೊಂದಿಗೆ ಸಹಕರಿಸಬೇಕೆಂದು ನಾನು ವಿನಂತಿಸುತ್ತೇನೆ. ದುಷ್ಕರ್ಮಿಗಳು ಮತ್ತು ಅಪರಾಧಿಗಳನ್ನು ಬಿಡಲಾಗುವುದಿಲ್ಲ” ಎಂದು ಸಕ್ಸೇನಾ ಹೇಳಿದ್ದಾರೆ. ಬೆಳಗಿನ ಜಾವ 4.15ರ ಸುಮಾರಿಗೆ ಬಾಂಬ್‌ ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

“ಮುಂಜಾನೆ 4:15ರ ಸುಮಾರಿಗೆ ಹಲವಾರು ಶಾಲೆಗಳಿಗೆ ಒಂದೇ ಇಮೇಲ್ ಕಳುಹಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು. ನಾವು ಕ್ರಮ ಕೈಗೊಂಡಿದ್ದೇವೆ. ಶಾಲೆಗಳನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಎಲ್ಲಾ ಶಾಲೆಗಳಲ್ಲಿ ತಪಾಸಣೆ ನಡೆಯುತ್ತಿದೆ. ನಮ್ಮ ತಾಂತ್ರಿಕ ವಿಭಾಗವು ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯ ಮೂಲಕ ಇದೊಂದು ಸಾಮೂಹಿಕ ಇಮೇಲ್ ಎಂದು ಕಂಡುಬಂದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ರೋಹಿತ್ ಮೀನಾ ತಿಳಿಸಿದ್ದಾರೆ.

ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿರುವುದರಿಂದ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು. “ಬಾಂಬ್ ಬಗ್ಗೆ ನಮಗೆ ಇಮೇಲ್ ಬಂದಿದೆ. ನಮ್ಮಲ್ಲಿ ವಿದ್ಯಾರ್ಥಿಗಳಿರುವುದರಿಂದ ನಾವು ರಿಸ್ಕ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪೊಲೀಸರಿಗೆ, ಪೋಷಕರಿಗೆ ತಿಳಿಸಲಾಗಿದೆ ಮತ್ತು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ” ಎಂದು ದೆಹಲಿ ಪಬ್ಲಿಕ್ ಸ್ಕೂಲ್ ನೋಯ್ಡಾದ ಪ್ರಾಂಶುಪಾಲರಾದ ಕಾಮಿನಿ ಭಾಸಿನ್ ಹೇಳಿದರು.

ಇದನ್ನೂ ಓದಿ: Bomb Threat: ದಿಲ್ಲಿಯ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ, ಮಕ್ಕಳ ತೆರವು

Continue Reading

ದೇಶ

LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್‌; ಎಲ್‌ಪಿಜಿ ಬೆಲೆ 19 ರೂ. ಇಳಿಕೆ

LPG Price Cut: ಮೇ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 19 ರೂ. ಕಡಿಮೆ ಮಾಡಿವೆ. ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 19 ರೂ. ಕಡಿತಗೊಂಡು 1825.50 ರೂ.ಗೆ ತಲುಪಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ.

VISTARANEWS.COM


on

LPG Price Cut
Koo

ನವದೆಹಲಿ: ಮೇ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 19 ರೂ. ಕಡಿಮೆ ಮಾಡಿವೆ (LPG Price Cut). ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 19 ರೂ. ಕಡಿತಗೊಂಡು 1,825.50 ರೂ.ಗೆ ತಲುಪಿದೆ.

ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1,745.50 ರೂ. ಆಗಿದೆ. ಹಿಂದೆ 1,764.50 ರೂ. ಆಗಿತ್ತು. ಮುಂಬೈಯಲ್ಲಿಯೂ 19 ರೂ. ಇಳಿಕೆಯಾಗಿದ್ದು ಹೊಸ ಬೆಲೆಯನ್ನು 1,698.50 ರೂ.ಗೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ 1,911 ರೂ., ಕೋಲ್ಕತ್ತಾದಲ್ಲಿ 20 ರೂ.ಗಳ ಕಡಿತದ ನಂತರ 1,859 ರೂ. ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ.

ಜಾಗತಿಕ ತೈಲ ಬೆಲೆಗಳು ಇತ್ತೀಚೆಗೆ ಕುಸಿದ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ. ಅಮೆರಿಕದಲ್ಲಿ ಕಚ್ಚಾ ದಾಸ್ತಾನುಗಳ ಏರಿಕೆ ಮತ್ತು ಅಸ್ಥಿರ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಭಾವ್ಯ ಕದನ ವಿರಾಮ ಒಪ್ಪಂದದ ಸುತ್ತ ಹೆಚ್ಚುತ್ತಿರುವ ಆಶಾವಾದದ ಕಾರಣದಿಂದ ಜಾಗತಿಕ ತೈಲ ಬೆಲೆಗಳು ಕುಸಿಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ಎಲ್‌ಪಿಜಿ ಬೆಲೆಗಳ ಕಡಿತವು ಈ ಸಿಲಿಂಡರ್‌ಗಳನ್ನೇ ಅವಲಂಬಿಸಿರುವ ವ್ಯವಹಾರಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಯ ಪ್ರವೃತ್ತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ದೇಶಾದ್ಯಂತದ ಗ್ರಾಹಕರಿಗೆ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಹೊಂದಾಣಿಕೆಗಳನ್ನು ಮಾಡುವುದಾಗಿ ಒಎಂಸಿಗಳು ಭರವಸೆ ನೀಡಿವೆ.

ಗೃಹಬಳಕೆಯ ಸಿಲಿಂಡರ್‌ ಬೆಲೆ ಯಥಾಸ್ಥಿತಿ

ಈ ಮಧ್ಯೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ 805.50 ರೂ. ಇದೆ.

ಇದನ್ನೂ ಓದಿ: LPG Aadhaar Link: ಎಲ್‌ಪಿಜಿ ಕನೆಕ್ಷನ್‌ಗೆ ಆಧಾರ್ ಲಿಂಕ್ ಮಾಡಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ತೈಲ ಮಾರುಕಟ್ಟೆ ಕಂಪನಿಗಳು ಹಿಂದಿನ ಘೋಷಣೆಯನ್ನು ಮಾರ್ಚ್ 1ರಂದು ಮಾಡಿದ್ದು, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿದ್ದವು. ಆ ಸಮಯದಲ್ಲಿ, OMCಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ₹25ರಷ್ಟು ಹೆಚ್ಚಿಸಿದ್ದವು.

Continue Reading
Advertisement
Hassan Pen Drive Case POCSO case registered against Prajwal Revanna
ಕ್ರೈಂ26 mins ago

Hassan Pen Drive Case: ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗುತ್ತಾ ಪೋಕ್ಸೋ ಕೇಸ್‌; ಬಾಲಕಿ ಉಲ್ಟಾ ಹೊಡೆದರೆ?

Ambedkar Statue MP Umesh Jadhav Unwell
ಕಲಬುರಗಿ27 mins ago

Ambedkar Statue: ತಲೆ ತಿರುಗಿ ಬಿದ್ದ ಕಲಬುರಗಿ ಸಂಸದ ಉಮೇಶ್ ಜಾಧವ್

Manvita Kamath marriage with arun Pics are here
ಸ್ಯಾಂಡಲ್ ವುಡ್37 mins ago

Manvita Kamath: ಅರುಣ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ʼಟಗರು ಪುಟ್ಟಿʼ

Mallikarjuna Kharge
ರಾಜಕೀಯ44 mins ago

Mallikarjuna Kharge: ಶಿವ, ಶ್ರೀರಾಮನ ಬಗ್ಗೆ ಖರ್ಗೆ ವಿವಾದಾತ್ಮಕ ಹೇಳಿಕೆ; ಬಿಜೆಪಿ ಕಿಡಿ

Job Alert
ಉದ್ಯೋಗ52 mins ago

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

bomb threat delhi ncr schools
ಪ್ರಮುಖ ಸುದ್ದಿ52 mins ago

‌Bomb Threat: ಬಾಂಬ್‌ ಬೆದರಿಕೆ ಇಮೇಲ್ ಮೂಲ ಪತ್ತೆ, ದಿಲ್ಲಿಯ 100ಕ್ಕೂ ಅಧಿಕ ಶಾಲೆ ಕ್ಲೋಸ್

prajwal revanna actress swara bhasker angry government silence on prajwal revanna
ರಾಜಕೀಯ57 mins ago

Prajwal Revanna: ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ; ಮೋದಿ ವಿರುದ್ಧ ನಟಿಯ ಆಕ್ರೋಶ!

Hassan Pen Drive Case Victims reluctance to sit investigation and Suicide threat if he is disturbed by trial
ಕ್ರೈಂ59 mins ago

Hassan Pen Drive Case: SIT ತನಿಖೆಗೆ ಸಂತ್ರಸ್ತೆಯರ ಹಿಂದೇಟು; ವಿಚಾರಣೆ ಅಂತ ತೊಂದರೆ ಕೊಟ್ಟರೆ ಸೂಸೈಡ್‌ ಬೆದರಿಕೆ!

Koppala ZP CEO Rahul Ratnam Pandeya Spoke in Progress review meeting at kanakagiri
ಕೊಪ್ಪಳ1 hour ago

Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ

LPG Price Cut
ದೇಶ1 hour ago

LPG Price Cut: ತಿಂಗಳ ಆರಂಭದಲ್ಲೇ ಗುಡ್‌ನ್ಯೂಸ್‌; ಎಲ್‌ಪಿಜಿ ಬೆಲೆ 19 ರೂ. ಇಳಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌