Lead Congress | ನೀವೇ ಪಕ್ಷ ಮುನ್ನಡೆಸಿ, ವಿದೇಶಕ್ಕೆ ತೆರಳುವ ಮುನ್ನ ಸೋನಿಯಾ ಹೀಗೆ ಹೇಳಿದ್ದು ಯಾರಿಗೆ? - Vistara News

ದೇಶ

Lead Congress | ನೀವೇ ಪಕ್ಷ ಮುನ್ನಡೆಸಿ, ವಿದೇಶಕ್ಕೆ ತೆರಳುವ ಮುನ್ನ ಸೋನಿಯಾ ಹೀಗೆ ಹೇಳಿದ್ದು ಯಾರಿಗೆ?

ಸೋನಿಯಾ ಗಾಂಧಿ ಅವರು ಮೆಡಿಕಲ್‌ ಚೆಕಪ್‌ಗಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದು, “ನನ್ನ ಅನುಪಸ್ಥಿತಿಯಲ್ಲಿ ನೀವೇ ಪಕ್ಷವನ್ನು ಮುನ್ನಡೆಸಿ” (Lead Congress) ಎಂಬುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Sonia Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಾಲು ಸಾಲು ಚುನಾವಣೆಗಳಿಗೆ ಕಾಂಗ್ರೆಸ್‌ ಸಿದ್ಧವಾಗುತ್ತಿದೆ. ಸೆ.೪ರಂದು ಬೆಲೆಯೇರಿಕೆ ವಿರುದ್ಧ “ಮೆಹಂಗಾಯಿ ಪರ್‌ ಹಲ್ಲಾ ಬೋಲ್‌” (ಬೆಲೆಯೇರಿಕೆ ವಿರುದ್ಧ ಧ್ವನಿಯೆತ್ತಿ) ಹಾಗೂ ಸೆ.೨೭ರಿಂದ “ಭಾರತ್‌ ಜೋಡೊ” ಅಭಿಯಾನ ಕೈಗೊಳ್ಳುತ್ತಿದೆ. ಇನ್ನು ಸೆ.೨೧ರಂದು ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಘೋಷಣೆ ಮಾಡಲಾಗುತ್ತದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ಮೆಡಿಕಲ್‌ ಚೆಕಪ್‌ಗಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದು, “ನನ್ನ ಅನುಪಸ್ಥಿತಿಯಲ್ಲಿ ನೀವೇ ಪಕ್ಷವನ್ನು ಮುನ್ನಡೆಸಿ” (Lead Congress) ಎಂಬುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸೋನಿಯಾ ಗಾಂಧಿ ಜತೆ ಪುತ್ರ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಅವರೂ ವಿದೇಶಕ್ಕೆ ತೆರಳುತ್ತಿರುವ ಕಾರಣ ಅಭಿಯಾನಗಳಿಗೆ ಸಿದ್ಧತೆ, ಪಕ್ಷದ ಉಸ್ತುವಾರಿ, ಉಳಿದ ಮುಖಂಡರಿಗೆ ಸಲಹೆ-ಸೂಚನೆ ನೀಡಲು ಗಾಂಧಿ ಕುಟುಂಬದ ಯಾರೂ ಇರದಂತಾಗುತ್ತದೆ. ಹಾಗಾಗಿ, ಅಶೋಕ್‌ ಗೆಹ್ಲೋಟ್‌ ಅವರಿಗೆ ಉಸ್ತುವಾರಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಅಶೋಕ್‌ ಗೆಹ್ಲೋಟ್‌ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕಾಂಗ್ರೆಸ್‌ ನೂತನ ಅಧ್ಯಕ್ಷರ ಆಯ್ಕೆ ಕುತೂಹಲ ಕೆರಳಿದ್ದು, ರಾಹುಲ್‌ ಗಾಂಧಿ ಅವರು ಮತ್ತೆ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸುತ್ತಿರುವ ಕಾರಣ ಹಲವು ನಾಯಕರ ಹೆಸರುಗಳು ಕೇಳಿ ಬರುತ್ತಿವೆ. ವಿವಿಧ ನಾಯಕರ ಹೆಸರುಗಳಲ್ಲಿ ಅಶೋಕ್‌ ಗೆಹ್ಲೋಟ್‌ ಅವರ ಹೆಸರೂ ಮುನ್ನಲೆಗೆ ಬಂದಿದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ನನ್ನ ಅನುಪಸ್ಥಿತಿಯಲ್ಲಿ ನೀವೇ ಪಕ್ಷವನ್ನು ಮುನ್ನಡೆಸಿ ಎಂದು ಹೇಳಿರುವುದು ಮುಂದೆ ಗೆಹ್ಲೋಟ್‌ ಅವರೇ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತಿಗೆ ಪುಷ್ಟಿ ಬಂದಂತಾಗಿದೆ.

ಇದನ್ನೂ ಓದಿ | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗಸ್ಟ್ 21ರಿಂದ; ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಮೌನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Odisha Assembly Result 2024: ಅಸೆಂಬ್ಲಿ ಎಲೆಕ್ಷನ್‌; ಮತ ಎಣಿಕೆ ಶುರು-ಒಡಿಶಾದಲ್ಲಿ ಮತ್ತೆ ಗದ್ದುಗೆ ಏರುತ್ತಾ ಬಿಜೆಡಿ?

Odisha Assembly Result 2024:ಈ ಬಾರಿ ಮೂರನೇ ಎರಡು ಭಾಗದಷ್ಟು ಅಂದರೆ ಒಟ್ಟು 147 ಕ್ಷೇತ್ರಗಳಲ್ಲಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರುವುದಾಗಿ ಬಿಜೆಡಿ ಹೇಳಿದೆ. ಈ ಬಾರಿ ಮತ್ತ ಚುನಾಯಿತರಾದರೆ ಸಿಎಂ ನವೀನ್‌ ಪಟ್ನಾಯಕ್‌ ಆರನೇ ಬಾರಿ ಒಡಿಶಾ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆ ಮೂಲಕ ಇಡೀ ದೇಶದಲ್ಲಿ ಇಷ್ಟು ಸುದೀರ್ಘ ಆಡಳಿತ ನಡೆಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

VISTARANEWS.COM


on

Odisha Assembly Result 2024
Koo

ಪಾಟ್ನಾ: ಲೋಕಸಭಾ ಚುನಾವಣೆ(Lok Sabha Election 2024)ಯಷ್ಟೇ ಒಡಿಶಾ ವಿಧಾನಸಭೆ ಚುನಾವಣೆಯೂ ಎಲ್ಲರ ಗಮನ ಸೆಳೆದಿದೆ. ಇಂದು ಒಡಿಶಾ ವಿಧಾನಸಭೆ ಚುನಾವಣೆ ಚುನಾವಣೆಯ ಫಲಿತಾಂಶ(Odisha Assembly Result 2024)ವೂ ಹೊರಬೀಳಲಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಿದೆ. ಮತ ಎಣಿಕೆ ಬಿರುಸಿನಿಂದ ಸಾಗಿದ್ದು ಈಗಾಗಲೇ ಅಧಿಕಾರದಲ್ಲಿರುವ ಬಿಜೆಡಿ ಮತ್ತೆ ಗದ್ದುಗೆ ಏರುತ್ತದೆಯೋ ಅಥವಾ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಲೆ ಒಡಿಶಾದಲ್ಲೂ ಬೀಸಿದೆಯೋ ಎಂಬುದು ಇನ್ನೇನು ಕೆಲವೇ ಕ್ಷಣದಲ್ಲಿ ತಿಳಿಯಲಿದೆ.

ಈ ಬಾರಿ ಮೂರನೇ ಎರಡು ಭಾಗದಷ್ಟು ಅಂದರೆ ಒಟ್ಟು 147 ಕ್ಷೇತ್ರಗಳಲ್ಲಿ 110 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರುವುದಾಗಿ ಬಿಜೆಡಿ ಹೇಳಿದೆ. ಈ ಬಾರಿ ಮತ್ತ ಚುನಾಯಿತರಾದರೆ ಸಿಎಂ ನವೀನ್‌ ಪಟ್ನಾಯಕ್‌ ಆರನೇ ಬಾರಿ ಒಡಿಶಾ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆ ಮೂಲಕ ಇಡೀ ದೇಶದಲ್ಲಿ ಇಷ್ಟು ಸುದೀರ್ಘ ಆಡಳಿತ ನಡೆಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈಗಾಗಲೇ ಕಳೆದ 24ವರ್ಷಗಳಿಂದ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಟ್ನಾಯಕ್‌ ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ, ಸಿಕ್ಕಿಂ ಸಿಎಂ ಪವನ್‌ ಕುಮಾರ್‌ ಚಾರ್ಮ್ಲಿಂಗ್‌ ಅವರ ದಾಖಲೆಯನ್ನೂ ಇವರ ಮುರಿಯಲಿದ್ದಾರೆ.

ಎಕ್ಸಿಟ್‌ ಪೋಲ್‌ ಹೇಳೋದೇನು?

ಎಕ್ಸಿಟ್‌ ಪೋಲ್‌ ರಿಸಲ್ಟ್‌ ಪ್ರಕಾರ ಬಿಜೆಡಿ ಈಬಾರಿ 62-80 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್‌ 5 ರಿಂದ 8 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಲೋಕಸಭಾ ಎಲೆಕ್ಷನ್‌ ರಿಸಲ್ಟ್‌ಗೆ ಬಂದರೆ ಬಿಜೆಪಿ ಒಡಿಶಾದಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಡಿ ಕೇವಲ 0-2 ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್‌ 0-1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಕಣದಲ್ಲಿರುವ ಪ್ರಮುಖರು

ನವೀನ್ ಪಟ್ನಾಯಕ್: ಪುನರಾಯ್ಕೆಯಾದರೆ, 24 ವರ್ಷಗಳಿಂದ ಒಡಿಶಾ ಸಿಎಂ ಪಾತ್ರದಲ್ಲಿದ್ದು, ಆರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಸಿಕ್ಕಿಂನ ಮಾಜಿ ಸಿಎಂ ಪವನ್ ಕುಮಾರ್ ಚಾಮ್ಲಿಂಗ್ ಅವರ ದಾಖಲೆಯನ್ನು ಮೀರಿಸಿ ಭಾರತದ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಬಹುದು. 77 ವರ್ಷ ವಯಸ್ಸಿನ ಬಿಜೆಡಿ ಮುಖ್ಯಸ್ಥ, ದಿವಂಗತ ಬಿಜು ಪಟ್ನಾಯಕ್ ಅವರ ಪುತ್ರ, ಅವರು 50 ವರ್ಷ ವಯಸ್ಸಿನವರೆಗೆ ರಾಜಕೀಯದಲ್ಲಿ ಯಾವುದೇ ಅನುಭವವನ್ನು ಹೊಂದಿರಲಿಲ್ಲ.

ಅಂಜನಿ ಸೊರೆನ್: ಎಲ್ಲಾ ವೈಯಕ್ತಿಕ ಹಿನ್ನಡೆಗಳ ನಡುವೆಯೂ ಒಡಿಶಾದಲ್ಲಿ ಜೆಎಂಎಂ ಧ್ವಜವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿರುವ ಅಂಜನಿ ಸೊರೆನ್, ಜೆಎಂಎಂ ಕುಲಪತಿ ಶಿಬು ಸೊರೆನ್ ಅವರ ಪುತ್ರಿ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸಹೋದರಿ. ಅವರು JMM ಅನ್ನು ಜಾರ್ಖಂಡ್‌ನ ಹೊರಗೆ ಪ್ರಸ್ತುತಪಡಿಸಲು ಏಕಾಂಗಿ ಹೋರಾಟವನ್ನು ನಡೆಸುತ್ತಿದ್ದಾರೆ.

ದಿಲೀಪ್ ಟಿರ್ಕಿ: ಬಿಜೆಡಿ ಅಭ್ಯರ್ಥಿ, ಪ್ರಸ್ತುತ ಹಾಕಿ ಇಂಡಿಯಾ ಅಧ್ಯಕ್ಷರಾಗಿರುವ ದಿಲೀಪ್‌ ಟಿರ್ಕಿ ಅವರು ತಮ್ಮ ಸಾಲಕ್ಕೆ ಹಲವು ಪ್ರಥಮಗಳನ್ನು ಹೊಂದಿದ್ದಾರೆ. ಇವರು ಬುಡಕಟ್ಟು ಸಮುದಾಯದಿಂದ ಮೊದಲ ಭಾರತೀಯ ಹಾಕಿ ನಾಯಕ. 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.

ಜುಯಲ್ ಓರಮ್: 1999 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವನ್ನು ವಿಭಜಿಸಿದ ನಂತರ ಜುಯಲ್ ಓರಂ ಭಾರತದ ಮೊದಲ ಬುಡಕಟ್ಟು ವ್ಯವಹಾರಗಳ ಸಚಿವರಾಗಿದ್ದರು. ಶ್ರೀ ಓರಂ ಅವರು ಅತ್ಯಂತ ಹಿರಿಯ ಬಿಜೆಪಿ ಸಂಸದರಾಗಿದ್ದಾರೆ, ಅವರು ಒಡಿಶಾವನ್ನು ಲೋಕಸಭೆಯಲ್ಲಿ ಐದು ಬಾರಿ ಪ್ರತಿನಿಧಿಸಿದ್ದಾರೆ.

ಇದನ್ನೂ ಓದಿ:Lok Sabha Election Result 2024: ಮುನ್ನಡೆಯಲ್ಲೇ ಮ್ಯಾಜಿಕ್‌ ನಂಬರ್‌ ದಾಟಿದ ಎನ್‌ಡಿಎ; ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ

Continue Reading

ಪ್ರಮುಖ ಸುದ್ದಿ

Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್‌ ಸ್ಫೋಟ, ಐವರಿಗೆ ಗಾಯ

Election Results 2024: ಮತ ಎಣಿಕೆಗೆ ಸ್ವಲ್ಪ ಮುಂಚಿತವಾಗಿ, ದಕ್ಷಿಣ 24 ಪರಗಣಗಳ ಭಂಗಾರ್‌ನ ಚಲ್ತಾಬೇರಿಯಾದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Crude Bomb west bengal election results 2024
Koo

ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮತ ಎಣಿಕೆ (vote counting) ಆರಂಭಕ್ಕೆ ಮುನ್ನವೇ ಕಚ್ಚಾ ಬಾಂಬ್‌ ಸ್ಫೋಟಿಸಿ ಐವರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಲ ರಾಜ್ಯ, ಲೋಕಸಭೆ ಚುನಾವಣೆ (Election Results 2024) ಮತದಾನದ (lok sabha election 2024) ಸಂದರ್ಭದಲ್ಲಿಯೂ ಹಿಂಸಾಚಾರಕ್ಕೆ (violence) ಸಾಕ್ಷಿಯಾಗಿತ್ತು.

ಮತ ಎಣಿಕೆಗೆ ಸ್ವಲ್ಪ ಮುಂಚಿತವಾಗಿ, ದಕ್ಷಿಣ 24 ಪರಗಣಗಳ ಭಂಗಾರ್‌ನ ಚಲ್ತಾಬೇರಿಯಾದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದೆ. ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಒಬ್ಬ ವ್ಯಕ್ತಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ನ ಪಂಚಾಯತ್ ಸದಸ್ಯ ಎಂದು ವರದಿಯಾಗಿದೆ.

ಹೇಗಿದೆ ರಾಜ್ಯದ ಪರಿಸ್ಥಿತಿ?

ಪಶ್ಚಿಮ ಬಂಗಾಳವು ಆಡಳಿತಾರೂಢ ಟಿಎಂಸಿ, ಪ್ರತಿಪಕ್ಷ ಬಿಜೆಪಿ ಮತ್ತು ಇಂಡಿಯಾ ಬ್ಲಾಕ್‌ನ ಭಾಗವಾಗಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಿಪಿಐ(ಎಂ) ನಡುವೆ ಹೆಚ್ಚಿನ ಸ್ಥಾನಗಳಲ್ಲಿ ತ್ರಿಕೋನ ಹೋರಾಟವನ್ನು ಕಂಡಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು ಕೇವಲ ಎರಡು ಸ್ಥಾನಗಳಿಂದ 18ಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಇಲ್ಲಿ ಎಡದಿಂದ ಬಲಕ್ಕೆ ಗಮನಾರ್ಹವಾದ ರಾಜಕೀಯ ಬದಲಾವಣೆಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ರಾಜ್ಯದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಿಲ್ಲ.

ಸಂದೇಶಖಾಲಿ ಹಗರಣ ಈ ಚುನಾವಣೆಯಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ಇದೀಗ ಅಮಾನತುಗೊಂಡಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಭೂಹಗರಣದ ಆರೋಪಗಳು ಭಾರಿ ವಿವಾದ ಎಬ್ಬಿಸಿದ್ದವು. ರಾಜ್ಯದ ಹಲವಾರು ಸ್ಥಾನಗಳಲ್ಲಿ, ವಿಶೇಷವಾಗಿ ಕೋಲ್ಕತ್ತಾ ಉತ್ತರ, ಅಸನ್ಸೋಲ್, ಬ್ಯಾರಕ್‌ಪೋರ್, ಮೇದಿನಿಪುರ್, ಡಾರ್ಜಿಲಿಂಗ್, ಜಾದವ್‌ಪುರ್ ಮತ್ತು ಬಸಿರ್‌ಹತ್‌ನಲ್ಲಿ ಬಲಿಷ್ಠ ಅಭ್ಯರ್ಥಿಗಳು ಹೊಯ್ದಾಡಿದ್ದಾರೆ.

ರಾಜ್ಯವು ಏಪ್ರಿಲ್ 19 ಮತ್ತು ಜೂನ್ 1ರ ನಡುವೆ ಏಳು ಹಂತಗಳಲ್ಲಿ ಮತದಾನ ಮಾಡಿದೆ. ಪಶ್ಚಿಮ ಬಂಗಾಳವು ಸಾರ್ವತ್ರಿಕ ಚುನಾವಣೆಗಳ ಎಲ್ಲಾ ಏಳು ಹಂತಗಳಲ್ಲಿ ಮತದಾನ ಮಾಡಿದ್ದು, ಹೆಚ್ಚಿನ ಶೇಕಡಾವಾರು ಮತದಾನ ದಾಖಲಿಸಿದೆ.

ಎಕ್ಸಿಟ್‌ ಪೋಲ್‌ಗಳು ಏನೆಂದಿವೆ?

ಇಲ್ಲಿ ಎಕ್ಸಿಟ್‌ ಪೋಲ್‌ಗಳು ಹೇಳಿರುವಂತೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಟಕ್ಕರ್‌ ನೀಡಲು ಸಿದ್ಧವಾಗಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳವನ್ನು ಬಿಜೆಪಿ ತಲ್ಲಣಗೊಳಿಸಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಎನ್‌ಡಿಟಿವಿ-ಜನ್ ಕಿ ಬಾತ್ ಎಕ್ಸಿಟ್ ಪೋಲ್ ಕೇಸರಿ ಪಕ್ಷಕ್ಕೆ 21ರಿಂದ 26 ಸ್ಥಾನಗಳು ಮತ್ತು ತೃಣಮೂಲ ಕಾಂಗ್ರೆಸ್‌ಗೆ 16-18 ಸ್ಥಾನಗಳನ್ನು ಭವಿಷ್ಯ ನುಡಿದಿದೆ. ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ ಕೂಡ ಬಿಜೆಪಿಗೆ 21 ಮತ್ತು ತೃಣಮೂಲ ಕಾಂಗ್ರೆಸ್‌ಗೆ 19 ಸ್ಥಾನಗಳನ್ನು ನೀಡಿದರೆ, ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಬಿಜೆಪಿಗೆ 21 ರಿಂದ 25 ಸ್ಥಾನಗಳನ್ನು ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ 16 ರಿಂದ 20 ಸ್ಥಾನಗಳು ಬರಬಹುದೆಂದು ಅದು ಭವಿಷ್ಯ ನುಡಿದಿದೆ.

ಇದನ್ನೂ ಓದಿ: Election Results 2024: ಮತ ಎಣಿಕೆ ಆರಂಭ: ಮೋದಿಯಿಂದ ರಾಹುಲ್‌ ಗಾಂಧಿವರೆಗೆ; ಇವರೇ ನೋಡಿ ದೇಶದ ಗಮನ ಸೆಳೆದ ಅಭ್ಯರ್ಥಿಗಳು

Continue Reading

ದೇಶ

Lok Sabha Election Result 2024: ಮುನ್ನಡೆಯಲ್ಲೇ ಮ್ಯಾಜಿಕ್‌ ನಂಬರ್‌ ದಾಟಿದ ಎನ್‌ಡಿಎ; ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ

Lok Sabha Election Result 2024: ಲೋಕಸಭೆ ಸಮರದ ಮತಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿಯೇ ಕರ್ನಾಟಕ ಹಾಗೂ ದೇಶದಲ್ಲಿ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಮುನ್ನಡೆ ಸಾಧಿಸಿದೆ. ಅತ್ತ, ದೇಶದ ಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪರ್ಧೆಯೊಡ್ಡುವ ಲಕ್ಷಣಗಳು ಗೋಚರಿಸಿವೆ.

VISTARANEWS.COM


on

Lok Sabha Election Result 2024
Koo

ನವದೆಹಲಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ ಮತಎಣಿಕೆ (Lok Sabha Election Result 2024) ಆರಂಭವಾಗಿದ್ದು, ಎನ್‌ಡಿಎ ಮೈತ್ರಿಕೂಟವು (NDA) ಆರಂಭದಲ್ಲಿಯೇ ಭರ್ಜರಿ ಮುನ್ನಡೆ ಸಾಧಿಸಿದೆ. ಎನ್‌ಡಿಎಯು 260ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮುನ್ನಡೆಯಲ್ಲಿಯೇ ಮ್ಯಾಜಿಕ್‌ ನಂಬರ್‌ (272) ದಾಟಿದೆ. ಅತ್ತ, ಇಂಡಿಯಾ ಒಕ್ಕೂಟವೂ (India Bloc) ಎನ್‌ಡಿಎಗೆ ಸ್ಪರ್ಧೆಯೊಡ್ಡುತ್ತಿದ್ದು, 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುತೇಕ ಕೇಂದ್ರಗಳಲ್ಲಿ ಅಂಚೆ ಮತಗಳ ಎಣಿಕೆ ಮುಗಿದಿದ್ದು, ಇವಿಎಂ ಮತಗಳ ಎಣಿಕೆ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ನರೇಂದ್ರ ಮೋದಿ ಅವರ ಅಲೆ, ಕಳೆದ 10 ವರ್ಷಗಳ ಅಭಿವೃದ್ಧಿ ಕೆಲಸಗಳು, ರಾಮಮಂದಿರ, 370ನೇ ವಿಧಿ ರದ್ದು ಸೇರಿ ಹಲವು ಪ್ರಮುಖ ತೀರ್ಮಾನಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಚುನಾವಣೆ ಎದುರಿಸಿದೆ. ಅದರಲ್ಲೂ, ಮೋದಿ ಅವರು 200ಕ್ಕೂ ಅಧಿಕ ಸಮಾವೇಶಗಳ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು ಕೂಡ ಇದಕ್ಕೆ ಶ್ರಮಿಸಿದ್ದಾರೆ. ಹಾಗಾಗಿ, ಬಿಜೆಪಿಯು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯು ಕನಸು ಕಾಣುತ್ತಿದೆ.

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್‌ ಮುಂದಾಳತ್ವದಲ್ಲಿ ಇಂಡಿಯಾ ಒಕ್ಕೂಟವನ್ನು ರಚಿಸಿ, ಪ್ರತಿಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿವೆ. ಮತಗಟ್ಟೆ ಸಮೀಕ್ಷೆಗಳ ವರದಿಗಳ ಆಚೆಯೂ ಅಚ್ಚರಿಯ ಫಲಿತಾಂಶವನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ನಿರೀಕ್ಷಿಸುತ್ತಿವೆ. ಹಾಗೊಂದು ವೇಳೆ, ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಹೊಡೆದರೆ, ಇಂಡಿಯಾ ಮೈತ್ರಿಕೂಟವು ಮುನ್ನಡೆ ಸಾಧಿಸಲಿದೆ. ಆದರೆ, ಆರಂಭಿಕ ಹಂತದ ಮತಎಣಿಕೆ ಪ್ರಕಾರ, ಎನ್‌ಡಿಎ ಬಾರಿ ಮುನ್ನಡೆ ಸಾಧಿಸಿದೆ.

ಸಮೀಕ್ಷೆಗಳು ಹೇಳಿದ್ದೇನು?

ಎಲ್ಲ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 543 ಕ್ಷೇತ್ರಗಳ ಪೈಕಿ 355-380 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2019ರ ಲೋಕಸಭೆ ಚುನಾವಣೆ ಫಲಿತಾಂಶವೇ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ. 2019ರಲ್ಲಿ ಎನ್‌ಡಿಎ ಮೈತ್ರಿಕೂಟವು 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಜಯ ಕಂಡಿತ್ತು.

ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟವು ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ 125-165 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಒಟ್ಟು ಸಾರವಾಗಿದೆ. ಇದರೊಂದಿಗೆ ಇಂಡಿಯಾ ಒಕ್ಕೂಟವು ಮ್ಯಾಜಿಕ್‌ ನಂಬರ್‌ (272) ಬಿಡಿ, 200 ಕ್ಷೇತ್ರಗಳನ್ನೂ ತಲುಪುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದರೊಂದಿಗೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಸತತ ಮೂರನೇ ಬಾರಿಯೂ ಹಿನ್ನಡೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Lok Sabha Election Result 2024 Live: ಮತ ಎಣಿಕೆ ಆರಂಭ; ರಾಜ್ಯದ 13 ಕ್ಷೇತ್ರಗಳಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ

Continue Reading

Lok Sabha Election 2024

Election Results 2024: ಮತ ಎಣಿಕೆ ಆರಂಭ: ಮೋದಿಯಿಂದ ರಾಹುಲ್‌ ಗಾಂಧಿವರೆಗೆ; ಇವರೇ ನೋಡಿ ದೇಶದ ಗಮನ ಸೆಳೆದ ಅಭ್ಯರ್ಥಿಗಳು

Election Results 2024: ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಕೆಲವು ಕ್ಷೇತ್ರಗಳು ಪ್ರಭಾವಿ ಅಭ್ಯರ್ಥಿಗಳ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದೆ. ಅಂತಹ ಕ್ಷೇತ್ರಗಳ ಸಂಕ್ಷಿಪ್ತ ವಿವರ ಇಲ್ಲಿದೆ.

VISTARANEWS.COM


on

Election Results 2024
Koo

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ (Election Results 2024)ದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಕೆಲವು ಕ್ಷೇತ್ರಗಳು ಪ್ರಭಾವಿ ಅಭ್ಯರ್ಥಿಗಳ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದೆ. ಅಂತಹ ಕ್ಷೇತ್ರಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ವಾರಣಾಸಿ: ನರೇಂದ್ರ ಮೋದಿ VS ಅಜಯ್‌ ರಾಯ್‌

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಸತತ ಮೂರನೇ ಬಾರಿ ಕಣಕ್ಕಿಳಿದಿದ್ದಾರೆ. 2014ರಲ್ಲಿ ಮೋದಿ ಅವರು ಆಮ್‌ ಆದ್ಮಿ ಪಾರ್ಟಿಯ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಸೋಲಿಸಿದ್ದರು. 2019ರಲ್ಲಿ ಸಮಾಜವಾದಿ ಪಾರ್ಟಿಯ ಶಾಲಿನಿ ಯಾದವ್‌ ವಿರುದ್ಧ ಜಯ ಗಳಿಸಿದ್ದರು. ಇನ್ನು ಕಾಂಗ್ರೆಸ್‌ನಿಂದ ಸತತ ಮೂರನೇ ಬಾರಿಯೂ ಇಲ್ಲಿ ಅಜಯ್‌ ರಾಯ್‌ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ವಾರಣಾಸಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರ ಕ್ಷೇತ್ರವಾಗಿತ್ತು.

ವಯನಾಡು: ರಾಹುಲ್‌ ಗಾಂಧಿ VS ಆ್ಯನಿ ರಾಜ

ಕೇರಳದ ವಯನಾಡು ದೇಶದ ಗಮನ ಸೆಳೆದ ಇನ್ನೊಂದು ಕ್ಷೇತ್ರ. ಇಲ್ಲಿ ಎರಡನೇ ಅವಧಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಪಿಐ ನಾಯಕಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಅವರನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಐ ಎರಡೂ ʼಇಂಡಿಯಾʼ ಮೈತ್ರಿಕೂಟದ ಸದಸ್ಯರಾಗಿರುವುದರಿಂದ ಈ ಸ್ಪರ್ಧೆಯು ಸಾರ್ವಜನಿಕ ಆಸಕ್ತಿಯನ್ನು ಕೆರಳಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಅಮೇಥಿ: ಸ್ಮೃತಿ ಇರಾನಿ VS ಕಿಶೋರ್‌ ಲಾಲ್‌ ಶರ್ಮಾ

2019ರಲ್ಲಿ ಉತ್ತರಪ್ರದೇಶದ ಅಮೇಥಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಜಯ ಗಳಿಸಿ ಇತಿಹಾಸ ಬರೆದಿದ್ದರು. ಈ ಬಾರಿಯೂ ಸ್ಮೃತಿ ಇರಾನಿ ಇಲ್ಲಿಂದಲೇ ಕಣಕ್ಕಿಳಿದಿದ್ದು, ರಾಹುಲ್‌ ಗಾಂಧಿ ಬದಲು ಕಾಂಗ್ರೆಸ್‌ನಿಂದ ಕಿಶೋರ್‌ ಲಾಲ್‌ ಶರ್ಮಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 25 ವರ್ಷಗಳಲ್ಲಿ ಮೊದಲ ಬಾರಿಗೆ ಇಲ್ಲಿ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿಲ್ಲ ಎನ್ನುವುದು ವಿಶೇಷ.

ತಿರುವನಂತಪುರಂ: ರಾಜೀವ್‌ ಚಂದ್ರಶೇಖರ್‌ VS ಶಶಿ ತರೂರ್‌

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆ ಇದೆ. ಇಲ್ಲಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ಶಶಿ ತರೂರರ್‌ ಸ್ಪರ್ಧಿಸುತ್ತಿದ್ದಾರೆ. ಶಶಿ ತರೂರ್‌ ಅವರಿಗೆ ಇದು ನಾಲ್ಕನೇ ಸ್ಪರ್ಧೆ.

ಬಹರಾಂಪುರ: ಅಧೀರ್ ರಂಜನ್ ಚೌಧರಿ VS ಯೂಸುಫ್ ಪಠಾಣ್

ಪಶ್ಚಿಮ ಬಂಗಾಳದ ಬಹರಾಂಪುರ ಕ್ಷೇತ್ರ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸ್ಪರ್ಧೆಯಿಂದ ಸಾರ್ವಜನಿಕರ ಗಮನ ಸೆಳೆದಿದೆ. ಅವರು ತೃಣಮೂಲ ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ ಕಾಂಗ್ರೆಸ್‌ನಿಂದ ಅಧಿರ್‌ ರಂಜನ್‌ ಚೌಧರಿ ಸ್ಪರ್ಧಿಸುತ್ತಿದ್ದಾರೆ.

ನವ ದೆಹಲಿ: ಬಾನ್ಸುರಿ ಸ್ವರಾಜ್‌ VS ಸೋಮನಾಥ್‌ ಭಾರ್ತಿ

ಹೊಸ ದಿಲ್ಲಿಯ ಕ್ಷೇತ್ರದಿಂದ ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಆಮ್‌ ಆದ್ಮಿ ಪಾರ್ಟಿಯ ಸೋಮನಾಥ್‌ ಭಾರ್ತಿ ಸವಾಲೊಡ್ಡಿದ್ದಾರೆ. ಈ ಕ್ಷೇತ್ರದ ಎರಡು ಬಾರಿಯ ಸಂಸದೆ ಮತ್ತು ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಬದಲಾಯಿಸಿ ಬಿಜೆಪಿ ಬಾನ್ಸುರಿ ಸ್ವರಾಜ್ ಅವರಿಗೆ ಟಿಕೆಟ್‌ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ, ಈ ಹೈ ಪ್ರೊಫೈಲ್ ಕ್ಷೇತ್ರದಲ್ಲಿನ ಸ್ಪರ್ಧೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಶಿವಮೊಗ್ಗ: ಬಿ.ವೈ.ರಾಘವೇಂದ್ರ VS ಕೆ.ಎಸ್‌.ಈಶ್ವರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಬಿಜೆಪಿಯಿಂದ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 2.23 ಲಕ್ಷ ಮತಗಳ ಅಂತರದಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2014ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಬಾರಿ ಜಯ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: Lok Sabha Election 2024:ಮತ ಎಣಿಕೆ ಮೊದಲೇ ಕಾಂಗ್ರೆಸ್ ನಾಯಕರಿಂದ ಮತಯಂತ್ರ ದೂಷಣೆ ಆರಂಭ!

Continue Reading
Advertisement
Odisha Assembly Result 2024
ದೇಶ7 mins ago

Odisha Assembly Result 2024: ಅಸೆಂಬ್ಲಿ ಎಲೆಕ್ಷನ್‌; ಮತ ಎಣಿಕೆ ಶುರು-ಒಡಿಶಾದಲ್ಲಿ ಮತ್ತೆ ಗದ್ದುಗೆ ಏರುತ್ತಾ ಬಿಜೆಡಿ?

election results 2024 Lok Sabha Election 2024 Bengaluru Rural Lok Sabha constituency is the most sensitive Election Commission deploys paramilitary forces
Lok Sabha Election 202413 mins ago

Election results 2024: ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ಭರ್ಜರಿ ಮುನ್ನಡೆ

Varun Dhawan Natasha Dalal welcome baby girl
ಬಾಲಿವುಡ್39 mins ago

Varun Dhawan: ಹೆಣ್ಣು ಮಗುವಿಗೆ ತಂದೆಯಾದ ಬಾಲಿವುಡ್ ನಟ ವರುಣ್ ಧವನ್

Crude Bomb west bengal election results 2024
ಪ್ರಮುಖ ಸುದ್ದಿ51 mins ago

Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್‌ ಸ್ಫೋಟ, ಐವರಿಗೆ ಗಾಯ

Lok Sabha Election Result 2024
ದೇಶ54 mins ago

Lok Sabha Election Result 2024: ಮುನ್ನಡೆಯಲ್ಲೇ ಮ್ಯಾಜಿಕ್‌ ನಂಬರ್‌ ದಾಟಿದ ಎನ್‌ಡಿಎ; ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ

Election Results 2024
Lok Sabha Election 202455 mins ago

Election Results 2024: ಮತ ಎಣಿಕೆ ಆರಂಭ: ಮೋದಿಯಿಂದ ರಾಹುಲ್‌ ಗಾಂಧಿವರೆಗೆ; ಇವರೇ ನೋಡಿ ದೇಶದ ಗಮನ ಸೆಳೆದ ಅಭ್ಯರ್ಥಿಗಳು

Election Results 2024
ಪ್ರಮುಖ ಸುದ್ದಿ1 hour ago

Election Results 2024 : ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ; ಇವಿಎಂಗಳಲ್ಲಿದ್ದ ಪಕ್ಷಗಳ ಭವಿಷ್ಯ ಬಹಿರಂಗ

Lok Sabha Election 2024
ದೇಶ1 hour ago

Election Result 2024: ಮತ ಎಣಿಕೆ ಮೊದಲೇ ಕಾಂಗ್ರೆಸ್ ನಾಯಕರಿಂದ ಮತಯಂತ್ರ ದೂಷಣೆ ಆರಂಭ!

Lok Sabha Election Results 2024
ಪ್ರಮುಖ ಸುದ್ದಿ1 hour ago

Election Results 2024: ರಾಜ್ಯದ 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಕೌಂಡ್ ಡೌನ್

Election Results 2024 modi face 400 par
ಪ್ರಮುಖ ಸುದ್ದಿ2 hours ago

Election Results 2024: ಎನ್‌ಡಿಎ 400 ಸ್ಥಾನ ತಲುಪಲು ಈ ರಾಜ್ಯಗಳೇ ಹೆದ್ದಾರಿ! ಸಮೀಕ್ಷೆಗಳು ಹೇಳಿದ್ದೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ18 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ18 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು7 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌