10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ - Vistara News

ದೇಶ

10 ರೂ.ಗಾಗಿ ಎಲ್ಲರ ಮುಂದೆ ಪ್ಯಾಂಟ್‌ ಬಿಚ್ಚಿ, ಆಟೋ ಡ್ರೈವರ್‌ ಮೇಲೆ ಮಂಗಳಮುಖಿ ಹಲ್ಲೆ; Video ಇಲ್ಲಿದೆ

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರೈಲುಗಳಲ್ಲಿ, ಬಸ್‌ ಸ್ಟ್ಯಾಂಡ್‌ಗಳು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮಂಗಳಮುಖಿಯರು (Transgenders) ಜನರಿಂದ 5-10 ರೂ. ಪಡೆಯುತ್ತಾರೆ. ಜನರೂ ಕರುಣೆ ತೋರಿಸಿ ಅವರಿಗೆ ಹಣ ನೀಡುತ್ತಾರೆ. ಕೆಲವೊಮ್ಮೆ ಕಾಡಿ-ಬೇಡಿ ಮಂಗಳಮುಖಿಯರು ಜನರಿಂದ ಹಣ ಪಡೆಯುತ್ತಾರೆ. ಇದರಿಂದ ಜಗಳಗಳೂ ನಡೆದಿರುವ ಉದಾಹರಣೆಗಳು ಇವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಮಂಗಳಮುಖಿಯೊಬ್ಬರು 10 ರೂ.ಗಾಗಿ ಎಲ್ಲರ ಮುಂದೆಯೇ ಪ್ಯಾಂಟ್‌ ಬಿಚ್ಚಿಕೊಂಡು, ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ವ್ಯಕ್ತಿಯು ಇ-ರಿಕ್ಷಾವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಈತನ ರಿಕ್ಷಾವನ್ನು ಮಂಗಳಮುಖಿ ಹತ್ತಿದ್ದಾರೆ. ಮಂಗಳಮುಖಿಯು ಇಳಿಯುವಾಗ ಎಂದಿನಂತೆ ಇ-ರಿಕ್ಷಾ ಚಾಲಕನು 10 ರೂ. ಬಾಡಿಗೆ ಕೊಡಿ ಎಂದಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆಯು ಆತನ ಜತೆ ಜಗಳಕ್ಕೆ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕೊಡುವುದಿಲ್ಲ ಎಂದು ಹೇಳುವ ಜತೆಗೆ ಬೈದಿದ್ದಾರೆ. ಇದಾದ ನಂತರ ಆಟೋ ಚಾಲಕನು ಕೂಡ ಗದರಿದ್ದಾನೆ. ಆಗ ಮಂಗಳಮುಖಿಯ ಕೋಪ ದ್ವಿಗುಣಗೊಂಡಿದೆ. ಕೂಡಲೇ ಆಟೋ ಚಾಲಕನ ಮೇಲೆ ದಾಳಿ ನಡೆಸಿದ್ದಾರೆ.‌ ಘಟನೆಯು ಎಲ್ಲಿ ನಡೆದಿದೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಇ-ರಿಕ್ಷಾದಿಂದ ಚಾಲಕನನ್ನು ಇಳಿಸಿ, ಆತನ ಕೊರಳಪಟ್ಟಿ ಹಿಡಿದು, ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಆಟೋ ಚಾಲಕನು ಕೂಡ ಮಂಗಳಮುಖಿಗೆ ಹೊಡೆದಿದ್ದಾನೆ. ಇದೇ ವೇಳೆ, ಮಂಗಳಮುಖಿಗೆ ಏನು ಅನಿಸಿತೋ ಏನೋ, ಕೂಡಲೇ ತಮ್ಮ ಪ್ಯಾಂಟ್‌ ಬಿಚ್ಚಿ, ಬೆತ್ತಲೆಯಾಗಿದ್ದಾರೆ. ಪ್ಯಾಂಟ್‌ ಬಿಚ್ಚಿ ಬೆತ್ತಲೆಯಾದ ಬಳಿಕವೂ ಅವರು ಮತ್ತೆ ಚಾಲಕನ ಮೇಳೆ ಹಲ್ಲೆ ನಡೆಸಿದ್ದಾರೆ. ಕೇವಲ 10 ರೂ.ಗಾಗಿ ಇಬ್ಬರೂ ರಸ್ತೆ ಮಧ್ಯೆ ಕಾದಾಡಿಕೊಂಡಿರುವ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.

ವಿಡಿಯೊ ವೈರಲ್‌ ಆಗುತ್ತಲೇ ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗಿವೆ. “ಆಟೋ ಚಾಲಕರು 10 ರೂ.ಗಾಗಿ ದುಡಿಯುತ್ತಾರೆ. ಮಂಗಳಮುಖಿಯರು ಅವರಿಗೆ ಬಾಡಿಗೆ ಕೊಡಬೇಕು. ಅವರು ಬೇಕಾದರೆ ಶ್ರೀಮಂತರ ಬಳಿ ಹಣ ಪಡೆಯಲಿ” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಮಂಗಳಮುಖಿಯರು ಕೆಲಸ ಮಾಡುತ್ತೇವೆ ಎಂದರೆ ಯಾರೂ ಕೆಲಸ ಕೊಡಲ್ಲ. ಅವರಿಗೆ ಮಾನವೀಯತೆ ಆಧಾರದ ಮೇಲೆ ಜನ ನೆರವು ನೀಡಬೇಕು” ಎಂಬುದಾಗಿ ಹೇಳಿದ್ದಾರೆ. ಹೀಗೆ ಪರ-ವಿರೋಧಗಳ ಚರ್ಚೆಯಾಗಿದೆ.

ಇದನ್ನೂ ಓದಿ: Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

puri jagannath rath yatra 2024: ಜಗನ್ನಾಥ ಪುರಿ ರಥ ಯಾತ್ರೆ 2024 (Puri Jagannath Yatra) ಆರಂಭವಾಗಿದೆ. ಪುರಿಯ ಭಗವಾನ್ ಜಗನ್ನಾಥನ ಗೌರವಾರ್ಥವಾಗಿ ನಡೆಯುವ ಈ ಯಾತ್ರಾ ಉತ್ಸವವು ಭಾರತದ (india) ಅತಿದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ಇದು ಭವ್ಯವಾದ ಪ್ರದರ್ಶನ, ಸಾಂಸ್ಕೃತಿಕ ಸಂಭ್ರಮ ಮತ್ತು ಅದ್ಭುತವಾದ ಆಚರಣೆಗಳಿಗೆ ಸಾಕ್ಷಿಯಾಗುತ್ತದೆ. ಈ ಕುರಿತ ಮಾಹಿತಿ ಇಲ್ಲಿ

VISTARANEWS.COM


on

By

Puri Jagannath Yatra
Koo

ಎಂದಿನಂತೆ 2024ರ (puri jagannath rath yatra 2024) ಒಡಿಶಾದ (odisha) ಜಗನ್ನಾಥ ಪುರಿ ರಥ ಯಾತ್ರೆ (Puri Jagannath Yatra) ಆರಂಭಗೊಂಡಿದೆ. ಪುರಿಯ ಭಗವಾನ್ ಜಗನ್ನಾಥನ ಗೌರವಾರ್ಥವಾಗಿ ನಡೆಯುವ ಈ ಯಾತ್ರಾ ಉತ್ಸವವು ಭಾರತದ (india) ಅತಿದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ಇದು ಭವ್ಯವಾದ ಪ್ರದರ್ಶನ, ಸಾಂಸ್ಕೃತಿಕ ಸಂಭ್ರಮ ಮತ್ತು ಅದ್ಭುತವಾದ ಆಚರಣೆಗಳಿಗೆ ಸಾಕ್ಷಿಯಾಗುತ್ತದೆ.

ಈ ವರ್ಷ ಜಗನ್ನಾಥ ಪುರಿ ರಥ ಯಾತ್ರೆಯ ಭವ್ಯ ರಥದ ಬಗ್ಗೆ ತಿಳಿದುಕೊಳ್ಳಬೇಕಾದ ಏಳು ಆಸಕ್ತಿದಾಯಕ ಸಂಗತಿಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

1. ವಿಭಿನ್ನ ರಥಗಳಲ್ಲಿ ಸವಾರಿ

ಜಗನ್ನಾಥ ದೇವಾಲಯದ ಮೂರು ದೇವರುಗಳಾದ ಜಗನ್ನಾಥ, ಬಲರಾಮ್ ಮತ್ತು ಸುಭದ್ರಾ ಮೂರು ವಿಭಿನ್ನ ರಥಗಳಲ್ಲಿ ಸವಾರಿ ಮಾಡುತ್ತಾರೆ. ಈ ಕಾರಣಕ್ಕಾಗಿ ರಥಯಾತ್ರೆಯನ್ನು ರಥೋತ್ಸವ ಎಂದು ಕರೆಯುತ್ತಾರೆ. ಅವರ ವಿಭಿನ್ನ ರಥಗಳನ್ನು ನಂದಿಘೋಷ, ತಾಳಧ್ವಜ ಮತ್ತು ದೇವದಳನ ಎಂದು ಕರೆಯಲಾಗುತ್ತದೆ. ಭಗವಾನ್ ಜಗನ್ನಾಥನ ನಂದಿಘೋಷ ರಥವು ಹದಿನೆಂಟು ಚಕ್ರಗಳನ್ನು ಹೊಂದಿದೆ. ಭಗವಾನ್ ಬಲರಾಮನ ತಾಳಧ್ವಜ ರಥವು ಹದಿನಾರು ಚಕ್ರಗಳನ್ನು ಹೊಂದಿದೆ ಮತ್ತು ಸುಭದ್ರೆಯ ಪದ್ಮಧ್ವಜ ರಥವು ಹದಿನಾಲ್ಕು ಚಕ್ರಗಳನ್ನು ಹೊಂದಿದೆ.


2. ದೇವಾಲಯದ ಇತಿಹಾಸ ಸಾರುವ ರಥ

ಭಗವಾನ್ ಜಗನ್ನಾಥ ಮತ್ತು ಇತರ ಎರಡು ದೇವತೆಗಳ ರಥಗಳ ಮೇಲ್ಭಾಗವನ್ನು ಈ ದೇವಾಲಯದ ನಿರ್ಮಾಣದ ಇತಿಹಾಸವನ್ನು ನೆನಪಿಸುತ್ತದೆ. ನೂರಾರು ಯಾತ್ರಿಕರು ಮತ್ತು ಭಕ್ತರು ರಥಗಳನ್ನು ಹಗ್ಗದಿಂದ ಎಳೆಯುತ್ತಾರೆ. ಉತ್ಸಾಹ ಮತ್ತು ಸಮರ್ಪಣೆಯ ಭಾವವನ್ನು ತೋರಿಸಿ ರೋಮಾಂಚಕ ಪ್ರದರ್ಶನವನ್ನು ಸೃಷ್ಟಿಸುತ್ತಾರೆ. ರಥದ ಮೇಲಾವರಣಗಳನ್ನು ತಯಾರಿಸಲು ಸುಮಾರು 1200 ಮೀಟರ್ ಬಟ್ಟೆಯನ್ನು ಬಳಸಲಾಗುತ್ತದೆ. ಇದಕ್ಕಾಗಿ 15 ದರ್ಜಿಗಳು ಒಟ್ಟಾಗಿ ಕೆಲಸ ಮಾಡುತ್ತಾರೆ.

3. ಪ್ರತಿ ವರ್ಷ ಹೊಸ ರಥ

ಪ್ರತಿ ವರ್ಷ ದೇವರ ರಥಗಳನ್ನು ಹೊಸದಾಗಿ ನಿರ್ಮಿಸಲಾಗುತ್ತದೆ ಎಂಬ ಅಂಶವು ರಥಯಾತ್ರೆಯ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದರಲ್ಲಿ ಬಳಸಲಾಗುವ ಹೊಸ ವಸ್ತುಗಳಲ್ಲಿ ಮರ ಕೂಡ ಒಂದಾಗಿದೆ. ಆದರೂ ರಥಗಳ ಪ್ರಕಾರ, ನಿರ್ಮಾಣ, ಶೈಲಿ ಮತ್ತು ಪ್ರಮಾಣಗಳು ಎಂದಿಗೂ ಬದಲಾಗುವುದಿಲ್ಲ. ವಿಶೇಷವೆಂದರೆ, ಪ್ರತಿ ರಥದ ಮುಂಭಾಗದಲ್ಲಿ ನಾಲ್ಕು ಮರದ ಕುದುರೆಗಳನ್ನು ಜೋಡಿಸಲಾಗುತ್ತದೆ.

4. ರಥ ಚಲಿಸಲು ಅಪಾರ ಶ್ರಮ ಬೇಕು

ಒಡಿಶಾ ರಥ ಯಾತ್ರಾ ಉತ್ಸವದಲ್ಲಿ ರಥಗಳನ್ನು ತಳ್ಳಲು ನೂರಾರು ಭಕ್ತರು ಸೇರುತ್ತಾರೆ. ಪ್ರಾರಂಭದಲ್ಲಿ ತೀವ್ರವಾದ ಒತ್ತಡ ಮತ್ತು ಎಳೆತದ ಹೊರತಾಗಿಯೂ ಭಗವಾನ್ ಜಗನ್ನಾಥನ ರಥವು ನಿಶ್ಚಲವಾಗಿರುತ್ತದೆ. ಹಲವಾರು ಗಂಟೆಗಳ ಶ್ರಮದ ಅನಂತರವೇ ರಥವು ಚಲಿಸಲು ಪ್ರಾರಂಭಿಸುತ್ತದೆ.

5. ದೇವರ ನೆಚ್ಚಿನ ಸಿಹಿತಿಂಡಿ

ಗುಂಡಿಚಾ ದೇವಸ್ಥಾನದಲ್ಲಿ ಒಂಬತ್ತು ದಿನಗಳನ್ನು ಕಳೆದ ಅನಂತರ, ಜಗನ್ನಾಥ ಮತ್ತು ಅವರ ಒಡಹುಟ್ಟಿದವರು ತಮ್ಮ ಸ್ವಂತ ಮನೆಗೆ ಮರಳುತ್ತಾರೆ. ಒಡಿಶಾದಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ಪೋಡಾ ಪಿತಾ ದೇವರ ನೆಚ್ಚಿನ ಸಿಹಿತಿಂಡಿಯಾಗಿದೆ. ಹಿಂದಿರುಗುವ ದಾರಿಯಲ್ಲಿ, ಅದನ್ನು ವಿತರಿಸಲಾಗುತ್ತದೆ.


6. ಪರಿಸರ ಜಾಗೃತಿ ಮೂಡಿಸಿದ ರಥ ಯಾತ್ರೆ

ಒಡಿಶಾ ರಥ ಯಾತ್ರಾ ಉತ್ಸವ 2007ರಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಇದು ಸಾಂಪ್ರದಾಯಿಕ ಆಚರಣೆಗಳಿಂದ ಭಿನ್ನವಾಗಿತ್ತು. ಪರಿಸರ ಜಾಗೃತಿ, ಅರಣ್ಯಗಳನ್ನು ರಕ್ಷಿಸುವ ಅಗತ್ಯತೆ ಸಾರಲಾಯಿತು. ಗಿಡಮೂಲಿಕೆಗಳ ಸಸ್ಯಗಳು ಮತ್ತು ಸಸಿಗಳನ್ನು ರಥಗಳ ಮೇಲಿರುವ ವಿಗ್ರಹಗಳ ಬದಲಿಗೆ ಇರಿಸಲಾಯಿತು. ಇದು ಭಾರತದ ಚೊಚ್ಚಲ ಹಸಿರು ರಥ ಯಾತ್ರೆ ಎಂದು ಪ್ರಸಿದ್ಧಿ ಪಡೆಯಿತು. ಅದರ ಅನಂತರ ಮರಗಳನ್ನು ನೆಡುವ ಸಂಪ್ರದಾಯ ಆಚರಣೆಯಲ್ಲಿದೆ.

ಇದನ್ನೂ ಓದಿ: Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

7. ವಾರ ಮೊದಲು ದೇವಸ್ಥಾನ ಬಂದ್‌

ಆಚರಣೆಯ ಒಂದು ವಾರದ ಮೊದಲು ಪುರಿ ಜಗನ್ನಾಥ ದೇವಾಲಯದ ಮುಖ್ಯ ಬಾಗಿಲನ್ನು ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಜಗನ್ನಾಥ ದೇವರಿಗೆ ತೀವ್ರ ಜ್ವರ ಉಂಟಾಗುತ್ತದೆ, ಈ ಅವಧಿಯಲ್ಲಿ ವಿಶ್ರಾಂತಿ ಪಡೆಯಬೇಕು., ಬಳಿಕ ಚಿಕ್ಕಮ್ಮನ ಮನೆಗೆ ದೇವರು ತೆರಳುತ್ತಾನೆ ಎನ್ನುವ ನಂಬಿಕೆ ಇದೆ. ಹೀಗಾಗಿ ಈ ಅವಧಿಯಲ್ಲಿ ಗರ್ಭಗುಡಿಯಲ್ಲಿ ದೇವರ ದರ್ಶನ ಇರುವುದಿಲ್ಲ.

Continue Reading

ದೇಶ

Viral News: ಶಾಕಿಂಗ್‌ ಘಟನೆ! ಬುದ್ದಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ

Viral News: ಅಸ್ಸಾಂನ ಶಿವಸಾಗರ್ ಜಿಲ್ಲೆಯ
ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದಿದ್ದಾನೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

VISTARANEWS.COM


on

Viral News
Koo

ಗುವಾಹಟಿ: ಈಗಿನ ಕಾಲ ಹೇಗಿದೆ ಅಂದ್ರೆ ಸಂಬಂಧಗಳು ನಿಧಾನವಾಗಿ ಮರೆಯಾಗಿ ಎಲ್ಲರೂ ಯಾಂತ್ರಿಕವಾಗಿ ಬದುಕುತ್ತಿರುವ ಹಂತಕ್ಕೆ ತಲುಪಿದ್ದೇವೆ. ಈ ಯಾಂತ್ರಿಕ ಜೀವನದಲ್ಲಿ ಅಪ್ಪ-ಅಮ್ಮ, ಗುರು-ಶಿಷ್ಯ ಹೀಗೆ ಇಂತಹ ಸಂಬಂಧಗಳ ಮೇಲೆ ಭಾವನಾತ್ಮಕ ಬಂಧವೇ ಇಲ್ಲದಂತಾಗಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ವಿದ್ಯೆ ಕಲಿಸಿದ ಗುರುವನ್ನೇ ವಿದ್ಯಾರ್ಥಿಯೊಬ್ಬ ಇರಿದು(Stabbed) ಕೊಂದಿದ್ದಾನೆ. ಬುದ್ದಿ ಹೇಳಿದ ಶಿಕ್ಷಕನಿಗೆ ತಿಳಿಗೇಡಿ ವಿದ್ಯಾರ್ಥಿ ಯಮನಾಗಿ ಎದುರುನಿಂತು ಪ್ರಾಣವನ್ನೇ ತೆಗೆದಿದ್ದಾನೆ(Viral News).

ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದಿದ್ದಾನೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಬೆಜವಾಡ ಅವರು ರಸಾಯನಶಾಸ್ತ್ರವನ್ನು ಕಲಿಸುತ್ತಿದ್ದರು. ಜೊತೆಗೆ ಖಾಸಗಿ ಒಡೆತನದ ಶಾಲೆಯಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ಸಹ ಹೊಂದಿದ್ದರು.ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಕೇಳಿದರು. ಇದ್ದಕ್ಕಿದ್ದಂತೆ ವಿದ್ಯಾರ್ಥಿ ಬೆಜವಾಡ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.

ಇನ್ನು ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಕೋಚಿಂಗ್‌ ಸೆಂಟರ್‌ನಲ್ಲಿ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ನೋಡಿದಾಗ ತರಗತಿಯಲ್ಲಿ ರಕ್ತದ ಮಡುವಿನಲ್ಲಿ ಶಿಕ್ಷಕ ಬಿದ್ದಿದ್ದರು. ಅಲ್ಲೇ ಚಾಕು ಕೂಡ ಇತ್ತು. ಶಿಕ್ಷಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿಲಾಯಿತಾದರೂ ಆತ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಇನ್ನು ವಿದ್ಯಾರ್ಥಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಶಿಕ್ಷಕ ವಿದ್ಯಾರ್ಥಿಗೆ ಈ ಹಿಂದೆ ಬೈದಿದ್ದರು ಎಂಬುದು ಬಯಲಾಗಿದೆ.

ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಹೇಳಿದ್ದರು ಎನ್ನಲಾಗಿದೆ. ಇನ್ನು ಆರೋಪಿ ವಿದ್ಯಾರ್ಥಿ ತರಗತಿ ಮುಗಿಸಿ ಮನೆಗೆ ತೆರಳಿದ್ದ. ಇದಾದ ಕೆಲವೇ ಹೊತ್ತಲ್ಲಿ ಮತ್ತೆ ತರಗತಿಗೆ ಬಂದಿದ್ದಾನೆ. ಅವನು ತರಗತಿಗೆ ಪ್ರವೇಶಿಸಿದಾಗ, ಶಿಕ್ಷಕನು ಅವನನ್ನು ಮತ್ತೆ ಬೈಯಲು ಶುರು ಮಾಡಿದ್ದ. ಇದರಿಂದ ಕೋಪಗೊಂಡ ವಿದ್ಯಾರ್ಥಿ ಶಿಕ್ಷಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಹಪಾಠಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

Continue Reading

ದೇಶ

Mumbai Hit And Run: ಮುಂಬೈನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಮಹಿಳೆ ಬಲಿ; ಶಿವಸೇನೆ ನಾಯಕನ ಬಂಧನ!

Mumbai Hit And Run: ಮುಂಬೈನ ಕೋಳಿವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದು ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ.

VISTARANEWS.COM


on

Mumbai Hit And Run
Koo

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಹಿಟ್‌ ಆ್ಯಂಡ್‌ ರನ್‌ (Mumbai Hit And Run) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ (ಏಕನಾಥ್‌ ಶಿಂಧೆ ಬಣ) ನಾಯಕ ರಾಜೇಶ್‌ ಶಾ (Rajesh Shah) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ವೊರ್ಲಿಯಲ್ಲಿ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್‌ ಶಾ ಪರಾರಿಯಾಗಿದ್ದು, ಈಗ ಪೊಲೀಸರು ಅವರ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.

ಶಿವಸೇನೆ ನಾಯಕ ನಾಯಕ ರಾಜೇಶ್‌ ಶಾ ಅವರನ್ನು ಪಾಲ್ಘರ್‌ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ರಾಜೇಶ್‌ ಶಾ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಣ ಅವರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಕಾರು ಚಾಲಕ ರಾಜಋಷಿ ಬಿದಾವತ್‌ ಎಂಬುವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದಿದ್ದು, ಕೂಡಲೇ ಮಿಹಿರ್‌ ಶಾ ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್‌ ಶಾ ನಾಪತ್ತೆಯಾಗಿದ್ದಾನೆ. ಮಿಹಿರ್‌ ಶಾ ತನ್ನ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್‌ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾತ್‌ ಶಿಂಧೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ದುರಾದೃಷ್ಟಕರವಾದುದು. ಕಾನೂನಿನ ಎದುರು ಎಲ್ಲರೂ ಸಮಾನ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಪೊಲೀಸರು ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hit and Run Case: ಶಿವಸೇನೆ ಮುಖಂಡನ ಪುತ್ರನಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌; ಸ್ಕೂಟರ್‌ಗೆ BMW ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

Continue Reading

ದೇಶ

Union Budget 2024: ಆಯುಷ್ಮಾನ್‌ ಭಾರತ್‌ ಫಲಾನುಭವಿಗಳು ಡಬಲ್, ವಿಮೆ ಮೊತ್ತ 10 ಲಕ್ಷ ರೂ.ಗೆ ಏರಿಕೆ?

Union Budget 2024: ಬಜೆಟ್‌ಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ನೌಕರರಿಗೆ ತೆರಿಗೆ ವಿನಾಯಿತಿ, ಬಡವರು, ಮಧ್ಯಮ ವರ್ಗದವರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗೆಯೇ, ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗಳ ಸಂಖ್ಯೆ ಹಾಗೂ ವಿಮಾ ಮೊತ್ತವನ್ನು 10 ಲಕ್ಷ ರೂ.ಗೆ ಏರಿಸುವ ಕುರಿತು ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Union Budget 2024
Koo

ನವದೆಹಲಿ: ದೇಶದ ಜನ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿರುವ ಕೇಂದ್ರ ಬಜೆಟ್‌ಗೆ (Union Budget 2024) ದಿನಾಂಕ ನಿಗದಿಯಾಗಿದೆ. ಜುಲೈ 22ರಿಂದ ಆಗಸ್ಟ್‌ 12ರವರೆಗೆ ಬಜೆಟ್‌ ಅಧಿವೇಶನ (Union Budget Session) ನಡೆಯಲಿದ್ದು, ಜುಲೈ 23ರಂದು ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ದಾಖಲೆಯ ಏಳನೇ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಇದರ ಬೆನ್ನಲ್ಲೇ, ನೌಕರರಿಗೆ ತೆರಿಗೆ ವಿನಾಯಿತಿ, ಬಡವರು, ಮಧ್ಯಮ ವರ್ಗದವರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗೆಯೇ, ಆಯುಷ್ಮಾನ್‌ ಭಾರತ್‌ (Ayushman Bharat) ಯೋಜನೆಯ ಫಲಾನುಭವಿಗಳ ಸಂಖ್ಯೆ ಹಾಗೂ ವಿಮಾ ಮೊತ್ತವನ್ನು 10 ಲಕ್ಷ ರೂ.ಗೆ ಏರಿಸುವ ಕುರಿತು ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ಸುಮಾರು 50 ಕೋಟಿ ಬಡವರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು, 70 ವರ್ಷ ದಾಟಿದ ಎಲ್ಲರಿಗೂ ಆಯುಷ್ಮಾನ್‌ ಭಾರತ್‌ ಯೋಜನೆಯ ಸೌಲಭ್ಯವನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಜತೆಗೆ, ವಿಮಾ ಮೊತ್ತವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಏರಿಕೆ ಮಾಡುವ ಕುರಿತು ಕೂಡ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 12,076 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಲಿದೆ ಎಂದು ತಿಳಿದುಬಂದಿದೆ.

Ayushman Bharat Yojana

ಬೇರೆ ನಿರೀಕ್ಷೆಗಳೂ ಇವೆ

ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: Union Budget 2024: ಜುಲೈ 23ರಂದು ಕೇಂದ್ರ ಬಜೆಟ್‌ ಮಂಡನೆ; ಸಾಮಾನ್ಯ ಜನರಿಗೆ ಏನಿದೆ ನಿರೀಕ್ಷೆ?

Continue Reading
Advertisement
Viral Video
ವೈರಲ್ ನ್ಯೂಸ್5 mins ago

Viral Video: ದುಬೈ ಮಾಲ್‌ನಲ್ಲಿ ಬೊಂಬೆಗಳೊಂದಿಗೆ ಬೊಂಬೆಯಾದ ಮಾಡೆಲ್‌! ಗ್ರಾಹಕರು ಕಕ್ಕಾಬಿಕ್ಕಿ

bomb threat
ಕರ್ನಾಟಕ5 mins ago

Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

Puri Jagannath Yatra
ಧಾರ್ಮಿಕ15 mins ago

Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

Riyan Parag
ಪ್ರಮುಖ ಸುದ್ದಿ19 mins ago

Riyan Parag : ರಿಯಾನ್ ಪರಾಗ್​​ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಆಟಗಾರ

Davanagere news
ಮಳೆ31 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Viral News
ದೇಶ48 mins ago

Viral News: ಶಾಕಿಂಗ್‌ ಘಟನೆ! ಬುದ್ದಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ

ಪ್ರಮುಖ ಸುದ್ದಿ56 mins ago

Ravi Bishnoi : ಭಾರತ ಪರ ಸ್ಪಿನ್​ ಬೌಲಿಂಗ್​​ನಲ್ಲಿ ವಿಶೇಷ ಸಾಧನೆ ಮಾಡಿದ ರವಿ ಬಿಷ್ಣೋಯ್​​

Shashi Tharoor
ಕ್ರೀಡೆ1 hour ago

Shashi Tharoor: ಜಿಂಬಾಬ್ವೆ ಎದುರು ಭಾರತಕ್ಕೆ ಸೋಲು: ಲೇವಡಿ ಮಾಡಿದ ಶಶಿ ತರೂರ್

Karnataka Rain
ಮಳೆ1 hour ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

Money Guide
ಮನಿ-ಗೈಡ್1 hour ago

Money Guide: ನಿಮ್ಮ ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ನವೀಕರಿಸಲು ಹೀಗೆ ಮಾಡಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Davanagere news
ಮಳೆ31 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 hour ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ11 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ23 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌