LeT terrorist killed: ಉಧಮ್‌ಪುರ ದಾಳಿಯ ಮಾಸ್ಟರ್‌ಮೈಂಡ್‌ ಲಷ್ಕರೆ ಉಗ್ರ ಕರಾಚಿಯಲ್ಲಿ ಫಿನಿಷ್‌! - Vistara News

ದೇಶ

LeT terrorist killed: ಉಧಮ್‌ಪುರ ದಾಳಿಯ ಮಾಸ್ಟರ್‌ಮೈಂಡ್‌ ಲಷ್ಕರೆ ಉಗ್ರ ಕರಾಚಿಯಲ್ಲಿ ಫಿನಿಷ್‌!

LeT terrorist killed: ಗುಂಡೇಟಿನಿಂದ ಬಳಲುತ್ತಿದ್ದ ಎಲ್ಇಟಿ ಉಗ್ರನಿಗೆ ಸ್ವತಃ ಪಾಕಿಸ್ತಾನದ ಸೇನೆಯು ರಹಸ್ಯವಾಗಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡುವ ಪ್ರಯತ್ನ ಮಾಡಿತು.

VISTARANEWS.COM


on

Udhampur Attack plotter LeT terrorist killed in Karachi, Pakistan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: 2015ರ ಉಧಮ್‌ಪುರ ಉಗ್ರ ದಾಳಿಯ (Udhampur attack) ಮಾಸ್ಟರ್‌ಮೈಂಡ್, ಲಷ್ಕರೆ ತಯ್ಬಾದ ಭಯೋತ್ಪಾದಕ ಹಂಜ್ಲಾಲ್ ಅದ್ನಾನ್‌ನನ್ನು(Hanzla Adnan) ಪಾಕಿಸ್ತಾನದ ಕರಾಚಿಯಲ್ಲಿ(Karachi Pakistan) ಅಪರಿಚಿತ ಬಂದೂಕುಧಾರಿಗಳು ಕೊಲೆಗೈದಿದ್ದಾರೆ(LeT terrorist killed). 2015 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಈಗ ಹತ್ಯೆಗೀಡಾಗಿರುವ ಅದ್ನಾನ್‌ ಈ ದಾಳಿಯನ್ನು ರೂಪಿಸಿದ್ದ ಎಂದು ಭದ್ರತಾ ಪಡೆಗಳು ಹೇಳಿದ್ದವು. ಆಶ್ಚರ್ಯ ಎಂದರೆ, ಸ್ವತಃ ಪಾಕಿಸ್ತಾನ ಸೇನೆಯು (Pakistan Army) ಗುಂಡೇಟು ತಿಂದಿದ್ದ ಈ ಉಗ್ರನನ್ನು ರಹಸ್ಯವಾಗಿ ಆಸ್ಪತ್ರೆಗೆ ದಾಖಲಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಈಗ ಹತ್ಯೆಗೀಡಾಗಿರುವ ಅದ್ನಾನ್, 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಲ್ಇಟಿ ನಾಯಕ ಹಫೀಜ್ ಸಯೀದ್‌ನ ನಿಕಟವರ್ತಿಯಾಗಿದ್ದ. ಡಿಸೆಂಬರ್ 2 ಮತ್ತು 3 ರ ಮಧ್ಯರಾತ್ರಿಯ ರಾತ್ರಿ ಹಂಝ್ಲಾ ಅದ್ನಾನ್‌ನನ್ನು ಆತನ ಮನೆಯ ಹೊರಗೆ ಗುಂಡು ಹೊಡೆದು ಹತ್ಯೆ ಮಾಡಲಾಗಿದೆ. ಆತನ ದೇಹದಲ್ಲಿ ನಾಲ್ಕು ಗುಂಡುಗಳು ಪತ್ತೆಯಾಗಿವೆ.

ಎಲ್‌ಇಟಿ ಭಯೋತ್ಪಾದಕನನ್ನು ಪಾಕಿಸ್ತಾನಿ ಸೇನೆಯು ಕರಾಚಿಯ ಆಸ್ಪತ್ರೆಗೆ ರಹಸ್ಯವಾಗಿ ಕರೆದೊಯ್ದಿದೆ. ತೀವ್ರವಾಗಿ ಗುಂಡೇಟಿನಿಂದ ಬಳಲುತ್ತಿದ್ದ ಅದ್ನಾನ್ ಡಿಸೆಂಬರ್ 5 ರಂದು ಅಸು ನೀಗಿದ್ದಾನೆ. ಇತ್ತೀಚೆಗೆ, ಹಂಝ್ಲಾ ಅದ್ನಾನ್ ರಾವಲ್ಪಿಂಡಿಯಿಂದ ಕರಾಚಿಗೆ ತನ್ನ ಕಾರ್ಯಾಚರಣೆಯ ನೆಲೆಯನ್ನು ಬದಲಾಯಿಸಿದ್ದ.

2015ರ ಉಧಮ್‌ಪುರ ದಾಳಿಯಲ್ಲಿ ಬಿಎಸ್‌ಎಫ್‌ನ ಇಬ್ಬರು ಸೈನಿಕರು ಮೃತಪಟ್ಟಿದ್ದರು ಮತ್ತು 13 ಯೋಧರಿಗೆ ಗಾಯವಾಗಿತ್ತು. ಬಿಎಸ್‌ಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಪ್ರಕರಣವನ್ನು ತನಿಖೆ ನಡೆಸಿದ ಭಾರತೀಯ ತನಿಖಾ ಏಜೆನ್ಸಿ(ಎನ್ಐಎ) ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿತ್ತು.

2016 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ಪ್ರದೇಶದಲ್ಲಿ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಬೆಂಗಾವಲು ಪಡೆ ಮೇಲೆ ಭಯೋತ್ಪಾದಕ ದಾಳಿಯನ್ನು ಲಷ್ಕರೆ ಸಂಘಟಿಸಿತ್ತು. ಈ ದಾಳಿಯಲ್ಲಿ 8 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದರು ಮತ್ತು 22 ಮಂದಿ ಗಾಯಗೊಂಡಿದ್ದರು.

ಮೂಲಗಳ ಪ್ರಕಾರ, ಹೊಸದಾಗಿ ನೇಮಕಗೊಂಡಿರುವ ಭಯೋತ್ಪಾದಕರನ್ನು ಪ್ರೇರೇಪಿಸಲು ಹಂಝ್ಲಾ ಅದ್ನಾನ್‌ನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಎಲ್‌ಇಟಿ ಶಿಬಿರಕ್ಕೆ ಕಳುಹಿಸಲಾಗಿತ್ತು. ಭಾರತಕ್ಕೆ ನುಸುಳಲು ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಪಾಕಿಸ್ತಾನದ ಸೈನ್ಯವು ಆತನಿಗೆ ಬೆಂಬಲ ನೀಡಿತ್ತು.

ಈ ಸುದ್ದಿಯನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಐವರು ಲಷ್ಕರ್ ಉಗ್ರರ ಹತ್ಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

NEET UG result 2024: ಜೂನ್‌ 4ರಂದು ನೀಟ್‌ ಯುಜಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌ ಆಗಿದ್ದಾರೆ.

VISTARANEWS.COM


on

By

NEET UG Result 2024
Koo

ಬೆಂಗಳೂರು/ನವದೆಹಲಿ: ಮೇ 5ರಂದು ನಡೆದಿದ್ದ ನೀಟ್‌ ಪರೀಕ್ಷೆಯ (NEET UG 2024) ಫಲಿತಾಂಶ ಜೂ.4ರಂದು ಪ್ರಕಟಗೊಂಡಿದೆ. ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕದ ಆರು ವಿದ್ಯಾರ್ಥಿಗಳು ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ದೇಶದಲ್ಲಿ ಮೊದಲ ರ‍್ಯಾಂಕ್‌ ಪಡೆದ ಟಾಪ್ 100 ವಿದ್ಯಾರ್ಥಿಗಳ ಪಟ್ಟಿಯಲ್ಲಿ 6 ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕರ್ನಾಟಕದ ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್‌, ಅರ್ಜುನ್ ಕಿಶೋರ್, ಪದ್ಮನಾಭ್ ಮೆನನ್, ಪ್ರಜ್ಞಾ ಪಿ.ಶೆಟ್ಟಿ, ಖುಷಿ ಮಗನೂರ್ ಎಂಬ ವಿದ್ಯಾರ್ಥಿಗಳು ಶೇ.99.98 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಸ್ಥಾನದಲ್ಲಿದ್ದಾರೆ.

NEET UG Result 2024 Out of the 100 students who secured the first rank six from Karnataka are NEET toppers
NEET UG Result 2024 Out of the 100 students who secured the first rank six from Karnataka are NEET toppers
NEET UG Result 2024 Out of the 100 students who secured the first rank six from Karnataka are NEET toppers

ಅಂದಹಾಗೇ, ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ಇದನ್ನೂ ಓದಿ: NEET UG Results 2024: ನೀಟ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಹೀಗೆ ಮಾಡಿ

ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದಿದ್ದ ನೀಟ್ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಉತ್ತರ ಪತ್ರಿಕೆಗಳ ಮರುಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕೆ ಅವಕಾಶವಿಲ್ಲ ಎನ್ನಲಾಗಿದೆ. ಇನ್ನೂ ನೀಟ್‌ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮೇ 29 ರಂದು ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಬಳಿಕ ಅಂತಿಮ ಕೀ ಉತ್ತರಗಳನ್ನು ಜೂನ್ 3 ರಂದು ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಬಿಡುಗಡೆಯಾಗಿರುವ ಅಂತಿಮ ಕೀ ಉತ್ತರಗಳ ಆಧಾರದ ಮೇಲೆ ನೀಟ್ ಯುಜಿ 2024ರ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Election Results 2024: ಶಶಿ ತರೂರ್‌ ವಿರುದ್ಧ ವೀರೋಚಿತ ಸೋಲು ಕಂಡ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌

Election Results 2024: ಕೇರಳದಲ್ಲಿ ಇದೇ ಮೊದಲ ಬಾಗಿ ಬಿಜೆಪಿ ಜಯಗಳಿಸಿದ್ದು, ತ್ರಿಶೂರ್‌ನಲ್ಲಿ ನಟ ಸುರೇಶ್‌ ಗೋಪಿ (Suresh Gopi) ಕಮಲ ಅರಳಿಸಿದ್ದಾರೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪಾರಮ್ಯದ ನಡುವೆಯೂ ಕೇಸರಿ ಪಡೆ ಮತದಾರರ ಮನ ಗೆದ್ದಿದೆ. ಇನ್ನೊಂದೆಡೆ ತಿರುವನಂತಪುರಂನಲ್ಲಿ ಯುಡಿಎಫ್‌ (ಕಾಂಗ್ರೆಸ್‌) ಅಭ್ಯರ್ಥಿ ಶಶಿ ತರೂರ್‌ (Shashi Tharoor) ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ವೀರೋಚಿತವಾಗಿ ಸೋಲು ಕಂಡಿದ್ದಾರೆ.

VISTARANEWS.COM


on

Election Results 2024
Koo

ತಿರುವನಂತಪುರಂ: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ (Election Results 2024) ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಕೇರಳದಲ್ಲಿ ಇದೇ ಮೊದಲ ಬಾಗಿ ಬಿಜೆಪಿ ಜಯಗಳಿಸಿದ್ದು, ತ್ರಿಶೂರ್‌ನಲ್ಲಿ ನಟ ಸುರೇಶ್‌ ಗೋಪಿ (Suresh Gopi) ಕಮಲ ಅರಳಿಸಿದ್ದಾರೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪಾರಮ್ಯದ ನಡುವೆಯೂ ಕೇಸರಿ ಪಡೆ ಮತದಾರರ ಮನ ಗೆದ್ದಿದೆ. ಇನ್ನೊಂದೆಡೆ ತಿರುವನಂತಪುರಂನಲ್ಲಿ ಯುಡಿಎಫ್‌ (ಕಾಂಗ್ರೆಸ್‌) ಅಭ್ಯರ್ಥಿ ಶಶಿ ತರೂರ್‌ (Shashi Tharoor) ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ವೀರೋಚಿತವಾಗಿ ಸೋಲು ಕಂಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಗಳು ಕಣಕ್ಕಿಳಿದ ಕಾರಣ ತಿರುವನಂತಪುರಂ ಲೋಕಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಲೋಕಸಭೆಯಲ್ಲಿ ತಿರುವನಂತಪುರಂ ಕ್ಷೇತ್ರವನ್ನು ಪ್ರತಿನಿಧಿಸಿದ ಶಶಿ ತರೂರ್ ಸತತ ನಾಲ್ಕನೇ ಬಾರಿಗೆ ಗೆದ್ದಿದ್ದಾರೆ. ಆದರೆ ಈ ಬಾರಿ 16,077 ಮತಗಳ ಅಲ್ಪ ಅಂತರದಿಂದ ಜಯ ಗಳಿಸಿದ್ದಾರೆ. ಹೈ ವೋಲ್ಟೇಜ್ ಸ್ಪರ್ಧೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪನ್ನಿಯನ್ ರವೀಂದ್ರನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಮುನ್ನಡೆ ಸಾಧಿಸಿದ್ದ ರಾಜೀವ್‌ ಚಂದ್ರಶೇಖರ್‌

ಆರಂಭದಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುನ್ನಡೆ ಸಾಧಿಸಿದ್ದರು. ಒಂದು ಹಂತದಲ್ಲಿ ಅವರು ಜಯ ಗಳಿಸುತ್ತಾರೆ ಎಂದೂ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದ ಶಶಿ ತರೂರು ಅಂತಿಮವಾಗಿ ಜಯ ತಮ್ಮದಾಗಿಸಿಕೊಂಡರು.

ಬೆಳಿಗ್ಗೆ ಒಂದು ಹಂತದಲ್ಲಿ ರಾಜೀವ್‌ ಚಂದ್ರಶೇಖರ್ ಅವರು ತರೂರ್ ಅವರಿಗಿಂತ 20,000ಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಹೊಂದಿದ್ದರು. ಅಂತಿಮವಾಗಿ ತರೂರ್ 3,58,155 ಮತಗಳನ್ನು ಪಡೆದರೆ, ರಾಜೀವ್‌ ಚಂದ್ರಶೇಖರ್ 34,2078 ಮತಗಳನ್ನು ಗಳಿಸಿದರು. ಪನ್ನಿಯನ್ ರವೀಂದ್ರನ್ 24,7648 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಹಿಂದೆಯೂ ಕಠಿಣ ಸ್ಪರ್ಧೆ ಎದುರಾಗಿತ್ತು

ಶಶಿ ತರೂರ್‌ ಅವರಿಗೆ ಕಠಿಣ ಸ್ಪರ್ಧೆ ಎದುರಾಗುತ್ತಿರುವುದು ಇದು ಮೊದಲ ಸಲವೇನಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿಯ ಒ.ರಾಜಗೋಪಾಲ್ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಕೊನೆಗೆ ತರೂರ್ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿದ್ದರು. ಈ ಬಾರಿಯಾದರೂ ಕೇರಳದಲ್ಲಿ ಖಾತೆ ತೆರೆಯಬೇಕೆಂದು ಬಿಜೆಪಿ ಶತಾಯ ಗತಾಯ ಶ್ರಮಿಸಿದ್ದರು. ಪ್ರಧಾನ ಮಂತ್ರಿ ನರೆಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಹಲವು ಪ್ರಚಾರ ನಡೆಸಿದ್ದರು.

ಗೆಲುವಿನ ಖಾತೆ ತೆರೆದ ಬಿಜೆಪಿ

ತ್ರಿಶೂರ್‌ನಲ್ಲಿ ಸುರೇಶ್‌ ಗೋಪಿ ಜಯ ಗಳಿಸಿದ್ದಾರೆ. ಇವರು ಕಾಂಗ್ರೆಸ್‌ನ ಕೆ. ಮುರಳೀಧರನ್‌ ಮತ್ತು ಸಿಪಿಐಯ ವಿ.ಎಸ್‌. ಸುನೀಲ್‌ ಕುಮಾರ್‌ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಹಿಂದಿನ ಲೋಕಸಭೆ ಚುನಾವಣೆ (2019)ಯಲ್ಲಿಯೂ ಸುರೇಶ್‌ ಗೋಪಿ ಉತ್ತಮ ಪ್ರದರ್ಶನ ತೋರಿದ್ದರು. ಶೇ. 28.19ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದ್ದರು. ಆ ಸಮಯದಲ್ಲಿ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಶೇ. 30.85 ಮತ ಪಡೆದಿದ್ದರು. ಕಾಂಗ್ರೆಸ್‌ನ ಟಿ.ಎಸ್.ಪಾರ್ಥಪನ್ ಶೇ. 39.83ರಷ್ಟು ಮತ ಪಡೆದು ಜಯ ಗಳಿಸಿದ್ದರು. ಅವರು 4,15,089 ಮತಗಳನ್ನು ಗಳಿಸಿ 3,21,456 ಮತಗಳನ್ನು ಪಡೆದ ಸಿಪಿಐಯ ರಾಜಾಜಿ ಮ್ಯಾಥ್ಯೂ ಥಾಮಸ್ ಅವರನ್ನು ಸೋಲಿಸಿದ್ದರು.

ಇದನ್ನೂ ಓದಿ: Election Results 2024: ಕೇರಳದಲ್ಲಿ ಕೊನೆಗೂ ಅರಳಿದ ಕಮಲ; ತ್ರಿಶೂರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಭರ್ಜರಿ ಜಯ

Continue Reading

ದೇಶ

Election results 2024: ʼಎಲ್ಲಾ ಪಕ್ಷಗಳೂ ಹ್ಯಾಪಿ ಆಗಿವೆ..ಕಾರಣ ಇಲ್ಲಿದೆ ನೋಡಿʼ- ಫನ್ನಿ ಮೀಮ್ಸ್‌ಗೆ ನೆಟ್ಟಿಗರು ಫಿದಾ!

Election results 2024: ಎಲ್ಲಾ ಪಕ್ಷಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂಬ ವಿಚಾರಗಳನ್ನು ಇಟ್ಟುಕೊಂಡು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಶೇರ್‌ ಮಾಡಿದ್ದು, ನೆಟ್ಟಿಗರಿಗೆ ಬಹಳ ಮಜಾ ನೀಡುತ್ತಿವೆ. ಅತಿಹೆಚ್ಚು ಮೀಮ್ಸ್‌ ನಿತೀಶ್‌ ಕುಮಾರ್‌ ಮೇಲೆಯೇ ಇರುವುದು ಬಹಳ ವಿಶೇಷವಾಗಿದೆ. ಮೀಮ್ಸ್‌ ಮಾತ್ರವಲ್ಲದೇ ಕೆಲವೊಂದು ಫನ್ನಿ ಮೆಸೇಜ್‌ಗಳೂ ವಾಟ್ಸಾಪ್‌ನಲ್ಲಿ ಶೇರ್‌ ಆಗುತ್ತಿವೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ.

VISTARANEWS.COM


on

Election Results 2024
Koo

ನವದೆಹಲಿ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ(Election results 2024) ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಹೊರಬಿದ್ದಿದೆ. ಸ್ಪಷ್ಟ ಬಹುಮತ ಪಡೆದರೂ ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬರಬೇಕಿದ್ದರೆ ನಿತೀಶ್‌ ಕುಮಾರ್‌(Nithish Kumar) ಮತ್ತು ಚಂದ್ರಬಾಬು ನಾಯ್ಡು(Chandrababu Naidu ಕಿಂಗ್‌ ಮೇಕರ್‌ಗಳಾಗಿ ಹೊರ ಹೊಮ್ಮಿದ್ದಾರೆ. ಇನ್ನು ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಮೀಮ್ಸ್‌ಗಳು ಜನರನ್ನು ರಂಜಿಸುತ್ತಿವೆ.

ಎಲ್ಲಾ ಪಕ್ಷಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂಬ ವಿಚಾರಗಳನ್ನು ಇಟ್ಟುಕೊಂಡು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಶೇರ್‌ ಮಾಡಿದ್ದು, ನೆಟ್ಟಿಗರಿಗೆ ಬಹಳ ಮಜಾ ನೀಡುತ್ತಿವೆ. ಅತಿಹೆಚ್ಚು ಮೀಮ್ಸ್‌ ನಿತೀಶ್‌ ಕುಮಾರ್‌ ಮೇಲೆಯೇ ಇರುವುದು ಬಹಳ ವಿಶೇಷವಾಗಿದೆ. ಮೀಮ್ಸ್‌ ಮಾತ್ರವಲ್ಲದೇ ಕೆಲವೊಂದು ಫನ್ನಿ ಮೆಸೇಜ್‌ಗಳೂ ವಾಟ್ಸಾಪ್‌ನಲ್ಲಿ ಶೇರ್‌ ಆಗುತ್ತಿವೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ.

ಈ ಎಲೆಕ್ಷನ್‌ ಬಹಳ ಫನ್ನಿ ಆಗಿದೆ ಯಾಕಂದ್ರೆ…

  1. ಎಲ್ಲಾ ಪಕ್ಷಗಳು ಖುಷಿಯಲ್ಲಿ ಸಂಭ್ರಮಿಸುತ್ತಿವೆ.
  2. ಬಿಜೆಪಿ ಸರ್ಕಾರ ನಾವೇ ರಚಿಸುತ್ತೇವೆಂದು ಸಂಭ್ರಮಿಸುತ್ತಿದ್ದಾರೆ
  3. 100ಕ್ಕೂ ಹೆಚ್ಚು ಸೀಟ್‌ ಗೆದ್ದ ಖುಷಿಯಲ್ಲಿ ಕಾಂಗ್ರೆಸ್‌ ಕೂಡ ಸಂಭ್ರಮಿಸುತ್ತಿದೆ
  4. ಎಸ್‌ಪಿ, ಆರ್‌ಜೆಡಿ ತಮ್ಮ ಸ್ಥಾನಮಾನ ವಾಪಸ್‌ ಪಡೆದ ಖುಷಿಯಲ್ಲಿವೆ
  5. ಎನ್‌ಸಿಒಪಿ(ಎಸ್‌ಪಿ), ಶಿವಸೇನಾ(ಯುಬಿಟಿ) ತಮ್ಮನ್ನು ತಾವು ಬಾಸ್‌ ಎಂದು ಮತ್ತೊಮ್ಮೆ ಸಾಬೀತು ಪಡಿಸಿಕೊಂಡಿದೆ. ಹೀಗಾಗಿ ಅವುಗಳು ಖುಷಿಯಾಗಿವೆ
  6. ಟಿಎಂಸಿಯೂ ಖುಷಿಯಾಗಿದೆ. ಏಕೆಂದರೆ ಭಾರೀ ಸೋಲಿನಿಂದ ಅದು ತಮ್ಮ ಪಕ್ಷವನ್ನು ಕಾಪಾಡಿಕೊಂಡಿದೆ.
  7. ಇನ್ನು ಕೊನೆಯದಾಗಿ ಮತದಾರರ ಪ್ರಭು ಬಹಳ ಖುಷಿಯಲ್ಲಿದ್ದಾನೆ ಏಕೆಂದರೆ ತಾವು ಯಾರಿಗೆ ವೋಟ್‌ ಮಾಡಿದ್ದರೋ ಆ ಎಲ್ಲಾ ಪಕ್ಷಗಳು ಗೆದ್ದಿವೆ.
  8. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ತಮ್ಮ ತಮ್ಮ ಪಕ್ಷದ ಕಚೇರಿಯಲ್ಲಿ ಒಟ್ಟಾಗಿ ಸಂಭ್ರಮಾಚರಣೆ ನಡೆಸಿರುವುದು ಇದೇ ಮೊದಲು

ಹೀಗೆ ಹತ್ತು ಹಲವು ಕಾಮೆಡಿ ಫನ್ನಿ ಮೆಸೇಜ್‌ಗಳು, ಮೀಮ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: Narendra Modi Election: 3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ; ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್

Continue Reading

ದೇಶ

Narendra Modi Election Live: ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮೋದಿ ಭಾಷಣ; ಲೈವ್‌ ಇಲ್ಲಿ ವೀಕ್ಷಿಸಿ

Narendra Modi Election Live: ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿದ್ದಾರೆ. ದೇಶದ ಜನರನ್ನುದ್ದೇಶಿಸಿ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದು, ಅವರ ಭಾಷಣದ ಲೈವ್‌ ಅನ್ನು ಇಲ್ಲಿ ವೀಕ್ಷಿಸಿ.

VISTARANEWS.COM


on

Narendra Modi Election Live
Koo

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎನ್‌ಡಿಎ (NDA) ಮೈತ್ರಿಕೂಟವು 290 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿದೆ. ಕಳೆದ ಬಾರಿಗಿಂತ ಕಡಿಮೆ ಕ್ಷೇತ್ರಗಳು ಲಭಿಸಿದರೂ ಮ್ಯಾಜಿಕ್‌ ನಂಬರ್‌ (272) ದಾಟಿರುವ ಕಾರಣ ಸರ್ಕಾರ ರಚನೆಯು ಸುಲಭವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ್ದು, ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಮೋದಿ ಭಾಷಣದ ಲೈವ್‌ಅನ್ನು (Narendra Modi Election Live) ಇಲ್ಲಿ ವೀಕ್ಷಿಸಿ.

ಜನರೇ ಜನಾರ್ದನರು ಎಂದ ಮೋದಿ

“ದೇಶದ ಜನರೇ ಜನಾರ್ದನರು. ಅವರ ತೀರ್ಪನ್ನು ಸ್ವಾಗತಿಸುತ್ತ ಉತ್ತಮ ಆಡಳಿತ ನೀಡುವತ್ತ ಮುಂದೆ ಸಾಗೋಣ” ಎಂದು ನರೇಂದ್ರ ಮೋದಿ ಹೇಳಿದರು. “ದೇಶದ ನಾಗರಿಕರು ಬಿಜೆಪಿ ಹಾಗೂ ಎನ್‌ಡಿಎ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವದ ಗೆಲುವಾಗಿದೆ. ಇದು ಭಾರತದ ಸಂವಿಧಾನಕ್ಕೆ ಸಿಕ್ಕ ಗೆಲುವಾಗಿದೆ. ಇದು ವಿಕಸಿತ ಭಾರತದ ಉದ್ದೇಶದ ವಿಜಯವಾಗಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಮಂತ್ರದ ಜಯವಾಗಿದೆ. ದೇಶದ 140 ಕೋಟಿ ಜನರ ಗೆಲುವಾಗಿದೆ” ಎಂದು ತಿಳಿಸಿದರು.

ಮೋದಿ ಭಾವುಕ ಪೋಸ್ಟ್

‌ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ. “ದೇಶದ ಜನರು ಎನ್‌ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇರಿಸಿದ್ದಾರೆ. ಇದೇ ಕಾರಣಕ್ಕಾಗಿ, ಸತತವಾಗಿ ಮೂರನೇ ಬಾರಿ ಸರ್ಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲೂ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ನಾವು ಉತ್ತಮ ಆಡಳಿತ ನೀಡುತ್ತೇವೆ. ಹಾಗೆಯೇ, ಚುನಾವಣೆಯಲ್ಲಿ ಸತತವಾಗಿ ಶ್ರಮ ವಹಿಸಿದ ಕಾರ್ಯಕರ್ತರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಕಾರ್ಯಕರ್ತರ ಶ್ರಮವನ್ನು ಬಣ್ಣಿಸಲು ನನ್ನ ಬಳಿ ಪದಗಳೇ ಇಲ್ಲ” ಎಂಬುದಾಗಿ ನರೇಂದ್ರ ಮೋದಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎನ್‌ಡಿಎ ಮೈತ್ರಿಕೂಟವು 290 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮ್ಯಾಜಿಕ್‌ ನಂಬರ್‌ ಆದ 272ರ ಗಡಿಯನ್ನು ದಾಟಿದೆ. ಆದರೆ, ಎನ್‌ಡಿಎ ಮೈತ್ರಿಕೂಟದಲ್ಲಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಇಂಡಿಯಾ ಮೈತ್ರಿಕೂಟದ ನಾಯಕರು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಇದರಿಂದಾಗಿ, ಎನ್‌ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಸರ್ಕಾರ ರಚಿಸಲು ಇನ್ನಿಲ್ಲದ ಕಸರತ್ತು ಮಾಡುವಂತಾಗಿದೆ.

ಚುನಾವಣೆಯಲ್ಲಿ ಬಿಜೆಪಿಗೆ ಏಕೈಕ ಪಕ್ಷವಾಗಿ ಗರಿಷ್ಠ ಸೀಟುಗಳು (239) ಪ್ರಾಪ್ತಿಯಾಗಿರುವ (BJP Vote Share) ಹೊರತಾಗಿಯೂ ಆ ಪಕ್ಷಕ್ಕೆ ಸಣ್ಣ ಮುಖಭಂಗವಾಗಿದೆ. ಯಾಕೆಂದರೆ ಈ ಪಕ್ಷವು ಈ ಹಿಂದಿನ ಎರಡು ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳನ್ನು ಹೋಲಿಸಿದರೆ ಇದು ದೊಡ್ಡ ಹಿನ್ನಡೆ. 2014ರಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ 2019ರಲ್ಲಿ 303 ಸ್ಥಾನ ತನ್ನದಾಗಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಸರಳ ಬಹುಮತಕ್ಕೆ ಬೇಕಾದ 272 ಸೀಟ್​ಗಳನ್ನೂ ಪಡೆಯಲಾಗದ ಸ್ಥಿತಿ ತಲುಪಿರುವುದು ಅಚ್ಚರಿ. ಬಿಜೆಪಿಗೆ ಇದು ಪರ್ವಕಾಲದಂತೆ ಕಂಡು ಬಂದಿದ್ದ ಹೊರತಾಗಿಯೂ ವಿಶ್ವದ ಬಲಿಷ್ಠ ರಾಜಕೀಯ ಪಕ್ಷಕ್ಕೆ ಈ ರೀತಿಯ ಹಿನ್ನಡೆಯಾಗಿರುವುದು ಅಚ್ಚರಿ ಹಾಗೂ ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಕೂಡ. ಆದಾಗ್ಯೂ ಎನ್​​ಡಿಎ ಒಕ್ಕೂಟದ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Narendra Modi Election: 3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ; ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್

Continue Reading
Advertisement
Hanuma Vihari
ಕ್ರಿಕೆಟ್6 mins ago

Hanuma Vihari: 2 ತಿಂಗಳ ಬಳಿಕ ನಿರಾಕ್ಷೇಪಣಾ ಪತ್ರ ಪಡೆದ ಹನುಮ ವಿಹಾರಿ

NEET UG Result 2024
ಕರ್ನಾಟಕ26 mins ago

NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

Mysore election results 2024
ಕರ್ನಾಟಕ27 mins ago

Mysore Election Result 2024: ಮೈಸೂರು-ಕೊಡಗು ಲೋಕಸಭಾ ಚುನಾವಣೆ; ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

Election Results 2024
Lok Sabha Election 202432 mins ago

Election Results 2024: ಶಶಿ ತರೂರ್‌ ವಿರುದ್ಧ ವೀರೋಚಿತ ಸೋಲು ಕಂಡ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌

Election Results 2024
ಕ್ರಿಕೆಟ್46 mins ago

Election Results 2024: ಪಶ್ಚಿಮ ಬಂಗಾಳದಲ್ಲಿ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್​ಗೂ ಜಯಭೇರಿ

Election Results 2024
ದೇಶ47 mins ago

Election results 2024: ʼಎಲ್ಲಾ ಪಕ್ಷಗಳೂ ಹ್ಯಾಪಿ ಆಗಿವೆ..ಕಾರಣ ಇಲ್ಲಿದೆ ನೋಡಿʼ- ಫನ್ನಿ ಮೀಮ್ಸ್‌ಗೆ ನೆಟ್ಟಿಗರು ಫಿದಾ!

Narendra Modi Election Live
ದೇಶ53 mins ago

Narendra Modi Election Live: ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮೋದಿ ಭಾಷಣ; ಲೈವ್‌ ಇಲ್ಲಿ ವೀಕ್ಷಿಸಿ

Karnataka weather Forecast
ಮಳೆ58 mins ago

Karnataka Weather : ಕಾರವಾರ, ಯಾದಗಿರಿಯಲ್ಲಿ ಅಬ್ಬರಿಸಿದ ವರುಣ; ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ

Narendra Modi Election
ದೇಶ1 hour ago

Narendra Modi Election: 3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ; ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್

AP Election Results 2024
ದೇಶ1 hour ago

AP Election Results 2024: ಆಂಧ್ರದಲ್ಲಿ ಮತ್ತೊಮ್ಮೆ ಟಿಡಿಪಿ ಮ್ಯಾಜಿಕ್‌; ಆಡಳಿತ ವಿರೋಧಿ ಅಲೆಗೆ ಕೊಚ್ಚಿಹೋದ ಜಗನ್ ಮೋಹನ್ ರೆಡ್ಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ14 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌