Union Cabinet: ದೇಶಾದ್ಯಂತ 2 ಲಕ್ಷ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಕೇಂದ್ರ ಅಸ್ತು, ಗ್ರಾಮೀಣ ರೈತರಿಗೆ ಬಲ - Vistara News

ದೇಶ

Union Cabinet: ದೇಶಾದ್ಯಂತ 2 ಲಕ್ಷ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಕೇಂದ್ರ ಅಸ್ತು, ಗ್ರಾಮೀಣ ರೈತರಿಗೆ ಬಲ

Union Cabinet: ದೇಶದ ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ದಿಸೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಮುಂದಿನ 5 ವರ್ಷದಲ್ಲಿ ಸಹಕಾರಿ ಕ್ಷೇತ್ರಕ್ಕೆ 4,800 ಕೋಟಿ ರೂ. ವ್ಯಯಿಸಲು ಕೇಂದ್ರ ನಿರ್ಧರಿಸಿದೆ.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದಲ್ಲಿ ಸಹಕಾರಿ ವಲಯವನ್ನು ಸದೃಢಗೊಳಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ದೇಶಾದ್ಯಂತ ೫ ವರ್ಷದಲ್ಲಿ ೨ ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (PACS)ಗಳು, ಡೇರಿ ಹಾಗೂ ಮೀನುಗಾರಿಕೆ ಸಹಕಾರಿಗಳನ್ನು ಸ್ಥಾಪಿಸಲು ಕೇಂದ್ರ ಸಂಪುಟ ಸಭೆ (Union Cabinet) ಬುಧವಾರ ಅನುಮೋದನೆ ನೀಡಿದೆ. ಇದರಿಂದ ಗ್ರಾಮೀಣ ರೈತರು ಹೆಚ್ಚಿನ ಅನುಕೂಲ ಪಡೆಯಲಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವು ೪,೮೦೦ ಕೋಟಿ ರೂ. ವ್ಯಯಿಸಲಿದೆ.

ದೇಶದ ಪ್ರತಿಯೊಂದು ಗ್ರಾಮ ಪಂಚಾಯಿತಿ, ಗ್ರಾಮಗಳಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸದ್ಯ, ದೇಶಾದ್ಯಂತ ೬೩ ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, ಮುಂದಿನ ಐದು ವರ್ಷದಲ್ಲಿ ಇವುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಸಣ್ಣ ಸಾಲ ಸೌಲಭ್ಯ, ಕೃಷಿ ಉತ್ಪನ್ನ ಮಾರಾಟ ಸೇರಿ ಹಲವು ದಿಸೆಯಲ್ಲಿ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಲಿವೆ.

ಇದನ್ನೂ ಓದಿ: Union Cabinet | ರಾಷ್ಟ್ರ ಮಟ್ಟದ 3 ಸಹಕಾರ ಸಂಘಗಳ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆ ಅಸ್ತು, ಬಿತ್ತನೆ ಬೀಜ ರಫ್ತಿಗೆ ಉತ್ತೇಜನ

ಹಾಗೆಯೇ, ದೇಶದಲ್ಲಿ ಸುಮಾರು 1,99,182 ಪ್ರಾಥಮಿಕ ಡೈರಿ ಸಹಕಾರಿ ಸಂಘಗಳಿದ್ದು, 1.5 ಕೋಟಿ ಸದಸ್ಯರನ್ನು ಹೊಂದಿವೆ. ರೈತರಿಂದ ಹಾಲು ಸಂಗ್ರಹಣೆ, ಹಾಲಿನ ಪರೀಕ್ಷಾ ಸೌಲಭ್ಯಗಳು, ಜಾನುವಾರು ಆಹಾರ ಮಾರಾಟ, ವಿಸ್ತರಣೆ ಇತ್ಯಾದಿ ಸೇವೆಗಳನ್ನು ಸದಸ್ಯರಿಗೆ ಒದಗಿಸುತ್ತಿವೆ. ಅಲ್ಲದೆ, 25,297 ಪ್ರಾಥಮಿಕ ಮೀನುಗಾರಿಕಾ ಸಹಕಾರ ಸಂಘಗಳಿದ್ದು, ಸುಮಾರು 38 ಲಕ್ಷ ಸದಸ್ಯರನ್ನು ಹೊಂದಿವೆ. ಸರ್ಕಾರದ ನಿರ್ಧಾರದಿಂದ ಇವುಗಳ ಸಂಖ್ಯೆಯೂ ಹೆಚ್ಚಾಗಲಿದೆ.

ಲಡಾಕ್‌ನಲ್ಲಿ ಭದ್ರತೆ ಹೆಚ್ಚಿಸಲು ಮಹತ್ವದ ನಿರ್ಧಾರ

ಚೀನಾ ಉಪಟಳ ಮಾಡುವ ಲಡಾಕ್‌ನಲ್ಲಿ ಭದ್ರತೆ ಹೆಚ್ಚಿಸುವ ದಿಸೆಯಲ್ಲೂ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಲಡಾಕ್‌ನಲ್ಲಿ ಏಳು ಹೊಸ ಬೆಟಾಲಿಯನ್‌ ನಿಯೋಜನೆ ಹಾಗೂ ೯,೪೦೦ ಐಟಿಬಿಪಿ ಪೊಲೀಸರ ನೆಲೆ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದರಿಂದ ಲಡಾಕ್‌ ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

Pakistani Army: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ ತಮ್ಮ ಪ್ರಮಾಣಿತ ಮಿಲಿಟರಿ ಸಮವಸ್ತ್ರದ ಬದಲು ಸ್ಥಳೀಯ ಉಡುಪಾದ ಪಠಾಣಿ ಸೂಟ್ ಧರಿಸಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ ಪಿಒಕೆಯಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಸೇನಾ ಸಿಬ್ಬಂದಿ ತಮ್ಮ ಮಿಲಿಟರಿ ಸಮವಸ್ತ್ರದ ಬದಲು ಸಾಂಪ್ರದಾಯಿಕ ಸ್ಥಳೀಯ ಉಡುಗೆಯಾದ ಪಠಾಣಿ ಸೂಟ್‌ಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಗುರುತುಗಳನ್ನು ಮರೆ ಮಾಚುವ ಮತ್ತು ಸ್ಥಳೀಯರೊಂದಿಗೆ ಬೆರೆಯುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಿದೆ.

VISTARANEWS.COM


on

Pakistani Army
Koo

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಪಾಕಿಸ್ತಾನ ಸೇನಾ ಸಿಬ್ಬಂದಿ (Pakistani Army) ತಮ್ಮ ಪ್ರಮಾಣಿತ ಮಿಲಿಟರಿ ಸಮವಸ್ತ್ರದ ಬದಲು ಸ್ಥಳೀಯ ಉಡುಪಾದ ಪಠಾಣಿ ಸೂಟ್ ಧರಿಸಿರುವುದು ಕಂಡುಬಂದಿದೆ. ನಿಯಂತ್ರಣ ರೇಖೆಯಲ್ಲಿ (Line of Control) ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಚಟುವಟಿಕೆ ಹೆಚ್ಚಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿರುವುದು ಸಂದೇಹಕ್ಕೆ ಎಡೆಮಾಡಿ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೇನೆ (Indian Army) ಇನ್ನಷ್ಟು ಮುನ್ನೆಚ್ಚರಿಕೆ ವಹಿಸಿದೆ.

ಈ ಹಿಂದೆ ಪಾಕಿಸ್ತಾನ ಸೇನೆಯು ಪಠಾಣಿ ಸೂಟ್ ಧರಿಸಿದ ಭಯೋತ್ಪಾದಕರಿಗೆ ಫಾರ್ವರ್ಡ್ ಪೋಸ್ಟ್‌ಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಮತ್ತು ಒಳನುಸುಳುವಿಕೆ ಮಾರ್ಗಗಳನ್ನು ತೋರಿಸುತ್ತಿರುವುದು ಕಂಡುಬಂದಿತ್ತು. ಪಿಒಕೆಯ ಕೋಟ್ಲಿ ಮತ್ತು ಸಮೀಪದ ಪ್ರದೇಶಗಳಲ್ಲಿನ ದೃಶ್ಯ ಸೆರೆಯಾಗಿದ್ದವು.

ಪಠಾಣಿ ಸೂಟ್‌ನಲ್ಲಿ ಪಾಕಿಸ್ತಾನ ಸೇನೆ

ಮೂಲಗಳ ಪ್ರಕಾರ ಪಿಒಕೆಯಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಸೇನಾ ಸಿಬ್ಬಂದಿ ತಮ್ಮ ಮಿಲಿಟರಿ ಸಮವಸ್ತ್ರದ ಬದಲು ಸಾಂಪ್ರದಾಯಿಕ ಸ್ಥಳೀಯ ಉಡುಗೆಯಾದ ಪಠಾಣಿ ಸೂಟ್‌ಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಗುರುತುಗಳನ್ನು ಮರೆ ಮಾಚುವ ಮತ್ತು ಸ್ಥಳೀಯರೊಂದಿಗೆ ಬೆರೆಯುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ. ಉಡುಪುಗಳಲ್ಲಿನ ಬದಲಾವಣೆಯು ಈ ಪ್ರದೇಶದಲ್ಲಿನ ಬೇಹುಗಾರಿಕೆಯನ್ನು ಸುಲಭಗೊಳಿಸುತ್ತದೆ ಎನ್ನಲಾಗಿದೆ. ಸಾಮಾನ್ಯರಂತೆ ಬೆರೆತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲು ಪಾಕಿಸ್ತಾನ ಸೇನೆ ಈ ಕುತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ಎಚ್ಚರಿಸಿವೆ.

ಈ ಪ್ರದೇಶದಲ್ಲಿ ಬೇಹುಗಾರಿಕೆ ನಡೆಸಲು ಪಾಕಿಸ್ತಾನದ ಸೇನೆ ಪಠಾಣಿ ಸೂಟ್ ಧರಿಸಿದ ತನ್ನ ಸಿಬ್ಬಂದಿಯ ನಾಲ್ಕರಿಂದ ಐದು ಗುಂಪುಗಳನ್ನು ನಿಯೋಜಿಸುತ್ತಿದೆ. ಅವರು ನಿರಂತರವಾಗಿ ವಿಶ್ವಸಂಸ್ಥೆಯ ನಿಯೋಗಗಳನ್ನು ಈ ಪ್ರದೇಶಕ್ಕೆ ಕರೆತರುತ್ತಿದ್ದಾರೆ. ಮುಂದೆ ಸಂಭವಿಸಬಹುದಾದ ಘಟನೆಗಳ ಮೂಲಕ ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಗುರಿಯನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.

ಕುತಂತ್ರ ಬಯಲು

ʼʼಗೊಂದಲವನ್ನು ಸೃಷ್ಟಿಸುವುದು ಈ ಕಾರ್ಯತಂತ್ರದ ಉದ್ದೇಶ. ಗಡಿ ದಾಟಿ ಒಳ ನುಸುಳಿದ ಪಠಾಣ್‌ ಸೂಟ್‌ ಉಡುಪು ಧರಿಸಿದ ಪಾಕ್‌ ಸೇನೆಯನ್ನು ಭಾರತೀಯ ಸೈನಿಕರು ಕೊಂದರೆ, ಭಾರತೀಯ ಸೇನೆಯು ನಾಗರಿಕರನ್ನು ಕೊಲ್ಲುತ್ತಿದೆ ಎಂದು ಆರೋಪಿಸಬಹುದು ಎನ್ನುವುದು ಪಾಕಿಸ್ತಾನದ ಯೋಜನೆ. ಈ ಮೂಲಕ ಹೇಡಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಸಿಲುಕಿಸಲು ಪ್ರಯತ್ನಿಸುತ್ತದೆ. ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ನಾಗರಿಕರ ವಿರುದ್ಧ ಅನ್ಯಾಯದ ಎಸಗಲಾಗುತ್ತಿದೆ ಎನ್ನುವುದನ್ನು ಈ ಮೂಲಕ ರೂಪಿಸಲು ಪಾಕ್‌ ಮುಂದಾಗಿದೆʼʼ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಪಡೆಗಳು ಜಾನುವಾರುಗಳನ್ನು ಗಡಿಗೆ ಹತ್ತಿರ ತರುತ್ತಿವೆ ಎಂಬ ಬಗ್ಗೆಯೂ ವರದಿಗಳು ಬರುತ್ತಿದೆ. ಇದು ಕೂಡ ಅವರ ನಿಜವಾದ ಚಟುವಟಿಕೆಗಳನ್ನು ಮರೆಮಾಚುವ ಉದ್ದೇಶ ಹೊಂದಿದೆ. ಈ ಮೂಲಕ ಸ್ಥಳೀಯರೊಂದಿಗೆ ಬೆರೆಯಲು ಮುಂದಾಗುತ್ತಿದೆ. ಹೀಗಾಗಿ ಭಾರತೀಯ ಸೇನೆಯೂ ಈ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ಪರಿಸ್ಥಿತಿಯಿಂದ ಉದ್ಭವಿಸುವ ಸಂಭಾವ್ಯ ರಾಜತಾಂತ್ರಿಕ ಸವಾಲುಗಳಿಗೆ ಎದುರಿಸಲು ಸಿದ್ಧರಾಗುವಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

ಭಾರತವು ಪಾಕಿಸ್ತಾನದೊಂದಿಗೆ 772 ಕಿ.ಮೀ. ಉದ್ದದ ನಿಯಂತ್ರಣ ರೇಖೆ (ಎಲ್ಒಸಿ) ಗಡಿಯನ್ನು ಹಂಚಿಕೊಂಡಿದೆ. ಭಾರತವನ್ನು ದುರ್ಬಲಗೊಳಿಸಲು ಪಾಕಿಸ್ತಾನ ಸೇನೆಯು ಇಂತಹ ಕುತಂತ್ರಗಳಲ್ಲಿ ತೊಡಗಿರುವುದು ಇದೇ ಮೊದಲಲ್ಲ. ಆದಾಗ್ಯೂ ಅದರ ಹಿಂದಿನ ಕಾರ್ಯತಂತ್ರಗಳು ವಿಫಲವಾದ ಕಾರಣ ಇದೀಗ ವಿಶ್ವಸಂಸ್ಥೆಯಲ್ಲಿ ತಾನು ಬಲಿಪಶು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ.

Continue Reading

ವಾಣಿಜ್ಯ

LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

LPG Price Hike: ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 6.50 ರೂ. ಹೆಚ್ಚಿಸಿವೆ. ಇದರೊಂದಿಗೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 1,732.5 ರೂ.ಗೆ ತಲುಪಿದೆ.

VISTARANEWS.COM


on

LPG Price Hike
Koo

ನವದೆಹಲಿ: ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 6.5 ರೂ.-8.5 ರೂ. ಹೆಚ್ಚಿಸಿವೆ (LPG Price Hike). ಇದರೊಂದಿಗೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 1,732.5 ರೂ.ಗೆ ತಲುಪಿದೆ.

ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1652.50 ಆಗಿದೆ. ಹಿಂದೆ 1,646 ರೂ. ರೂ. ಆಗಿತ್ತು. ಮುಂಬೈಯಲ್ಲಿಯೂ ಏರಿಕೆಯಾಗಿದ್ದು ಹೊಸ ಬೆಲೆಯನ್ನು  1,605 ರೂ.ಗೆ ನಿಗದಿಪಡಿಸಲಾಗಿದೆ. ಕೋಲ್ಕತ್ತಾದಲ್ಲಿ ದರ ಪರಿಷ್ಕರಣೆಯ ಬಳಿಕ 1,764.50 ರೂ. ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ರೀತಿಯ ಏರಿಳಿತಗಳು ಸಾಮಾನ್ಯವಾಗಿ ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತವೆ.

ಸತತ ಇಳಿಕೆಯ ಬಳಿಕ ಏರಿಕೆ

ಕಳೆದ ಕೆಲವು ತಿಂಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಆದರೆ ಈ ಬಾರಿ ಬೆಲೆ ಏರಿಕೆಯ ಶಾಕ್‌ ತಗುಲಿದೆ. ಜುಲೈಯಲ್ಲಿ 30 ರೂ. ಕಡಿತಗೊಂಡಿದ್ದರೆ, ಜೂನ್‌ 1ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ 69.50 ರೂ. ಕಡಿಮೆ ಆಗಿತ್ತು. ಮೇ 1ರಂದು ದರ ಪರಿಷ್ಕರಿಸಿ 19 ರೂ. ಇಳಿಕೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿಯೂ 19 ಕೆಜಿಯ ಸಿಲಿಂಡರ್‌ ಬೆಲೆಯನ್ನು 30.50 ರೂ. ಇಳಿಸಲಾಗಿತ್ತು.

ತೈಲ ಮಾರುಕಟ್ಟೆ ಕಂಪನಿಗಳು ಕೊನೆಯ ಬಾರಿ ಮಾರ್ಚ್ 1ರಂದು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ದರಗಳನ್ನು ಹೆಚ್ಚಿಸಿದ್ದವು. ಆ ಸಮಯದಲ್ಲಿ, ಒಎಂಸಿಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು 25 ರೂ. ಹೆಚ್ಚಿಸಿದ್ದವು.

ಗೃಹಬಳಕೆಯ ಸಿಲಿಂಡರ್‌ ಬೆಲೆ ಯಥಾಸ್ಥಿತಿ

ಈ ಮಧ್ಯೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ 805.50 ರೂ. ಇದೆ. ಇನ್ನು ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ., ಚೆನ್ನೈನಲ್ಲಿ 818.50 ರೂ. ಇದೆ. ವಿಶೇಷವೆಂದರೆ ಕಳೆದ ವರ್ಷ ಜೂನ್‌ನಲ್ಲಿ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,103 ರೂ. ಇತ್ತು. ಆಗಸ್ಟ್‌ನಲ್ಲಿ ತೈಲ ಕಂಪನಿಗಳು 200 ರೂ.ಗಳ ಕಡಿತವನ್ನು ಘೋಷಿಸಿ 903 ರೂ.ಗೆ ಇಳಿಸಿದವು. ಬಳಿಕ 2024ರ ಮಾರ್ಚ್‌ನಲ್ಲಿ ಬೆಲೆಯನ್ನು ಮತ್ತೂ 100 ರೂ. ಕಡಿತಗೊಳಿಸಲಾಯಿತು.

ಇದನ್ನೂ ಓದಿ: Narayana Murthy: ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ: ನಾರಾಯಣಮೂರ್ತಿ ಹೊಸ ವಾದ!

Continue Reading

ಪ್ರಮುಖ ಸುದ್ದಿ

Wayanad Landslide: ಮೇಪ್ಪಾಡಿಯಲ್ಲಿ ಸಾಲು ಶವಗಳಿಗೆ ಪುಷ್ಪಾರ್ಚನೆಯ ಭಾವನಮನ

Wayanad Landslide: ಮೇಪ್ಪಾಡಿಯಲ್ಲಿ ನಾಶವಾಗಿಹೋದ ಭೂಕುಸಿತದ ಸ್ಥಳದಿಂದ ಎತ್ತಿ ತೆಗೆಯಲಾದವರ ದೇಹಗಳನ್ನು ಅಂತಿಮ ಸಂಸ್ಕಾರಕ್ಕೆ ಸಾಲಾಗಿ ಕೊಂಡೊಯ್ಯಲಾಗುತ್ತಿದ್ದು, ಮೃತಪಟ್ಟವರ ಶವಗಳಿಗೆ ಸ್ಥಳೀಯರು ರಸ್ತೆಯಲ್ಲಿ ಸಾಲಾಗಿ ನಿಂತು ಪುಷ್ಪಾರ್ಚನೆ ಮಾಡಿದರು.

VISTARANEWS.COM


on

wayanad landslide pushpa
Koo

ಚಾಮರಾಜನಗರ: ವೈನಾಡ್‌ ಭೂಕುಸಿತದ (Wayanad Landslide, Kerala Landslide) ದಾರುಣ ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಪುಷ್ಪಾರ್ಚನೆಯ ಮೂಲಕ ಮೇಪ್ಪಾಡಿಯ ಗ್ರಾಮಸ್ಥರು ಕಳಿಸಿಕೊಟ್ಟಿದ್ದಾರೆ. ತಮ್ಮ ಊರಿನಲ್ಲಿ ನಡೆದ ಈ ದುರಂತಕ್ಕೆ ಸ್ಥಳೀಯರು ಮನಮಿಡಿಯುವ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಮೇಪ್ಪಾಡಿಯಲ್ಲಿ ನಾಶವಾಗಿಹೋದ ಭೂಕುಸಿತದ ಸ್ಥಳದಿಂದ ಎತ್ತಿ ತೆಗೆಯಲಾದವರ ದೇಹಗಳನ್ನು ಅಂತಿಮ ಸಂಸ್ಕಾರಕ್ಕೆ ಸಾಲಾಗಿ ಕೊಂಡೊಯ್ಯಲಾಗುತ್ತಿದ್ದು, ಮೃತಪಟ್ಟವರ ಶವಗಳಿಗೆ ಸ್ಥಳೀಯರು ರಸ್ತೆಯಲ್ಲಿ ಸಾಲಾಗಿ ನಿಂತು ಪುಷ್ಪಾರ್ಚನೆ ಮಾಡಿದರು. ಸಾಲು ಸಾಲು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿ ಬಂದ ಶವಗಳಿಗೆ ನೂರಾರು ಮಂದಿ ಮೇಪ್ಪಾಡಿ ವೃತ್ತದಲ್ಲಿ ಸಾಲಾಗಿ ನಿಂತು ಪುಷ್ಪಾರ್ಚನೆಗೈದು ನಮಿಸಿದರು. ಕಳೆದೆರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳಲ್ಲೂ ರಕ್ಷಣಾ ಪಡೆಗಳ ಜೊತೆಗೆ ಸ್ಥಳೀಯರು ಕೈಜೋಡಿಸಿದ್ದಾರೆ.

ಮೆಪ್ಪಾಡಿಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮೃತರ ಸಾಮೂಹಿಕ ಅಂತ್ಯಕ್ರಿಯೆ ನಿನ್ನೆ ನಡೆಯಿತು. ಇನ್ನೂ ಕೆಲವರ ಹೆಣಗಳ ಸಿಗುತ್ತಿದ್ದು, ಇಂದು ಕೂಡ ಅದು ಮುಂದುವರಿದಿದೆ. ಗ್ಯಾಸ್ ಬರ್ನರ್, ಸೌದೆಗಳನ್ನು ಬಳಸಿಕೊಂಡು ಅಂತ್ಯ ಸಂಸ್ಕಾರ ನಡೆಯುತ್ತಿದ್ದು, ಈವರೆಗೂ ಸುಮಾರು 26 ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿ ಚಿತಾ ಭಸ್ಮ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇದೇ ಮಾದರಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮೃತ ದೇಹಗಳ ಅಂತ್ಯಕ್ರಿಯೆಗೂ ವಯನಾಡು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಹಲವರ ಶವಗಳ ಗುರುತು ಸಿಗುತ್ತಿಲ್ಲ. ಮುಖ ಮೈಕೈಗಳು ಬಂಡೆಗಳು ಮಣ್ಣಿನಡಿ ಸಿಲುಕಿ ಜಜ್ಜಿಹೋಗಿ ವಿರೂಪಗೊಂಡಿವೆ. ಹೀಗಾಗಿ ಅವುಗಳ ಫೋಟೋ ದಾಖಲೆ ತೆಗೆದಿಟ್ಟುಕೊಂಡು ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.

5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ (Wayanad Landslide) ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Continue Reading

ದೇಶ

Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 254ಕ್ಕೆ ಏರಿಕೆ; ಸೇನೆಯ ತಾತ್ಕಾಲಿಕ ಸೇತುವೆ ಬಹುತೇಕ ಪೂರ್ಣ

Wayanad Landslide: ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದ ಹಲವು ಗ್ರಾಮಗಳಲ್ಲಿ ಜುಲೈ 30ರಂದು ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 254ಕ್ಕೆ ತಲುಪಿದೆ. ದುರಂತ ಪೀಡಿತ ಚುರಲ್‌ಮಲದಲ್ಲಿ ಸೇನೆ ನಿರ್ಮಿಸುತ್ತಿರುವ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದು ಪೂರ್ಣಗೊಂಡ ಬಳಿಕ ಕಾರ್ಯಾಚರಣೆಗೆ ಇನ್ನಷ್ಟು ವೇಗ ದೊರೆಯಲಿದೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ಕೇರಳದ (Kerala) ವಯನಾಡು ಜಿಲ್ಲೆಯ ಮೆಪ್ಪಾಡಿ ಪ್ರದೇಶದ ಹಲವು ಗ್ರಾಮಗಳಲ್ಲಿ ಜುಲೈ 30ರಂದು ಸಂಭವಿಸಿದ ಭೀಕರ ಭೂಕುಸಿತದಿಂದಾಗಿ (Wayanad Landslide) ಮೃತಪಟ್ಟವರ ಸಂಖ್ಯೆ 254ಕ್ಕೆ ತಲುಪಿದೆ. ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದು, ಮೂರನೇ ದಿನದ ಕಾರ್ಯಾಚರಣೆ ಆರಂಭವಾಗಿದೆ. ದುರಂತ ಪೀಡಿತ ಚುರಲ್‌ಮಲದಲ್ಲಿ ಸೇನೆ ನಿರ್ಮಿಸುತ್ತಿರುವ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದು ಪೂರ್ಣಗೊಂಡ ಬಳಿಕ ಕಾರ್ಯಾಚರಣೆಗೆ ಇನ್ನಷ್ಟು ವೇಗ ದೊರೆಯಲಿದೆ.

ಸೇನಾ ಸಿಬ್ಬಂದಿ ಜತೆಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸ್ಥಳೀಯರು ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ಅವಶೇಷಗಳಡಿ ಸಿಲುಕಿರುವ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಜತೆಗೆ ಕಲ್ಲು, ಮಣ್ಣು, ಕೆಸರಿನಡಿ ಹುಡುಗಿರುವ ಶವಗಳನ್ನು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯುತ್ತಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಆಹೋರಾತ್ರಿ ಕಾರ್ಯಾಚರಣೆ

ಪ್ರವಾಹದ ತೀವ್ರತೆಗೆ ಚುರಲ್‌ಮಲದಲ್ಲಿನ ಸೇತುವೆ ಕೊಚ್ಚಿ ಹೋಗಿದ್ದು, ಅತೀ ಹೆಚ್ಚು ದುರಂತಕ್ಕೊಳಗಾದ ಮುಂಡಕೈ ಭಾಗದೊಂಡಿಗೆ ಸಂಪರ್ಕ ಕಡಿತಗೊಂಡಿದೆ. ಇದು ಕೂಡ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಹೀಗಾಗಿ ಸೇನಾ ಪಡೆ ಎರಡೂ ಗ್ರಾಮಗಳನ್ನು ಸಂಪರ್ಕಿಸಲು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸುತ್ತಿದೆ. ಸೇತುವೆಗೆ ಅಗತ್ಯವಾದ ಸಾಮಗ್ರಿಗಳನ್ನು ಬುಧವಾರ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ 18 ಲಾರಿಗಳ ಮೂಲಕ ಸ್ಥಳಕ್ಕೆ ತಲುಪಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಸೇನಾ ಸಿಬ್ಬಂದಿ ನಿನ್ನೆಯಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾತ್ರಿ ಇಡೀ ಇದರ ಕಾರ್ಯಾಚರಣೆ ನಡೆದಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ.

ಮುಂಡಕೈ ಗ್ರಾಮದ ಬೃಹತ್‌ ಸಿಮೆಂಟ್‌, ಗೋಡೆ, ಮಣ್ಣಿನ ರಾಶಿ, ಕಲ್ಲಿನ ಬಂಡೆಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಸರಿಸಲು ಮನುಷ್ಯರಿಂದ ಸಾಧ್ಯವಿಲ್ಲ. ಇದಕ್ಕೆ ಬೃಹತ್‌ ಯಂತ್ರಗಳ ಸಹಾಯ ಬೇಕೇ ಬೇಕು. ಈ ಬೈಲಿ ಸೇತುವೆ ಮೂಲಕ ಜೆಸಿಬಿಯಂತಹ ಯಂತ್ರಗಳನ್ನು ಮುಂಡಕೈಗೆ ಸಾಗಿಸಬಹುದು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಸಿಗಲಿದೆ.

ಭಾರಿ ತೂಕದ ಕಬ್ಬಿಣದ ಬೀಮ್ ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ನದಿಯಲ್ಲಿ ಫ್ಲಾಟ್‌ಫಾರ್ಮ್‌ ನಿರ್ಮಿಸಿ ಸೇತುವೆಯನ್ನು ಇನ್ನಷ್ಟು ದೃಢವಾಗಿಸಲು ಸೇನೆ ಶ್ರಮಿಸುತ್ತಿದೆ. ಮಧ್ಯಾಹ್ನದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಾಮಾನ್ಯವಾಗಿ 5-6 ಗಂಟೆಗಳಲ್ಲಿ ಈ ರೀತಿಯ ಸೇತುವೆ ಸಿದ್ಧವಾಗುತ್ತದೆ. ಇದರೆ ಇಲ್ಲಿನ ಪ್ರತಿಕೂಲ ಹವಾಮಾನ, ಸಡಿಲ ಮಣ್ಣಿನ ಕಾರಣ ಕಾಮಗಾರಿ ಇಷ್ಟೊಂದು ದೀರ್ಘವಾಗುತ್ತಿದೆ ಎಂದು ಸೇನೆ ತಿಳಿಸಿದೆ. ಇದರ ಜತೆಗೆ ಈ ಸೇತುವೆ ಕೆಳ ಭಾಗದಲ್ಲಿ ನಡೆದು ಹೋಗಲು ಅನುಕೂಲವಾಗುವಂತೆ ಫುಟ್‌ ಬ್ರಿಡ್ಜ್‌ ನಿರ್ಮಿಸಲೂ ಸೇನೆ ಮುಂದಾಗಿದೆ.

ಕಾರ್ಯಾಚರಣೆ ಆರಂಭಿಸಿದ ಸೇನೆ

ಮೂರನೆ ದಿನ ಕಾರ್ಯಾಚರಣೆಯನ್ನು ಸೇನೆ ಇಂದು ಬೆಳಿಗ್ಗೆ ಆರಂಭಿಸಿದೆ. ಮುಂಡಕೈ ಗ್ರಾಮಕ್ಕೆ ಸೇನಾ ಸಿಬ್ಬಂದಿ ತೆರಳಿದ್ದು ಇವರ ಜತೆಗೆ ತರಬೇತಿ ಪಡೆದ ಶ್ವಾನ ದಳವೂ ಇದೆ. ರಕ್ಷಣಾ ಕಾರ್ಯಾಚರಣೆಗೆ ಸುಮಾರು 1,167 ಮಂದಿಯನ್ನು ನಿಯೋಜಿಸಲಾಗಿದೆ. ಸುಮಾರು 240 ಮಂದಿ ನಾಪತ್ತೆಯಾಗಿದ್ದು, ಅವರ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Wayanad Landslide: ವಯನಾಡು ಈಗ ಸಾವಿನ ಮನೆ: ಮೃತರ ಸಂಖ್ಯೆ 240, 160 ಶವ ಪತ್ತೆ, 220 ಜನ ಮಿಸ್ಸಿಂಗ್; ಭೀಕರ ಚಿತ್ರಣ ಇಲ್ಲಿದೆ

Continue Reading
Advertisement
Pakistani Army
ದೇಶ8 mins ago

ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

shiradi landslide
ಹಾಸನ21 mins ago

Shiradi Landslide: ಶಿರಾಡಿ ಘಾಟಿ ಸಂಚಾರ ಮುಕ್ತ, ನಿಮ್ಮದೇ ರಿಸ್ಕ್‌ನಲ್ಲಿ ಸಂಚರಿಸಿ!

Actor Darshan siddharudha life journey book sent to Darshan
ಸ್ಯಾಂಡಲ್ ವುಡ್23 mins ago

Actor Darshan: ನಟ ದರ್ಶನ್‌ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ರವಾನೆ

Paris Olympics Boxing
ಕ್ರೀಡೆ32 mins ago

Paris Olympics Boxing: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಬಾಕ್ಸರ್‌ ನಿಶಾಂತ್‌ ದೇವ್‌; ಟಿಟಿಯಲ್ಲಿ ಶ್ರೀಜಾ ಅಕುಲಾ ಪರಾಭವ

sri reddy me too fame telugu actress post goes viral
ಟಾಲಿವುಡ್43 mins ago

Sri Reddy: ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ; ಅರೆಬೆತ್ತಲೆ ಪ್ರತಿಭಟನೆ ಮೂಲಕ ಸದ್ದು ಮಾಡಿದ ನಟಿ ಶ್ರೀರೆಡ್ಡಿ ಪೋಸ್ಟ್‌ ವೈರಲ್‌!

soldier death mandya
ಮಂಡ್ಯ58 mins ago

Soldier Death: ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಯೋಧ ಮೃತ್ಯು

Khaled Meshaal
ವಿದೇಶ1 hour ago

Ismail Haniyeh Killing: ಹಮಾಸ್‌ನ ಹೊಸ ಮುಖ್ಯಸ್ಥನಾಗಿ ಖಲೀದ್‌ ಮೆಶಾಕ್‌? ಈತನ ಹಿನ್ನೆಲೆ ಏನು?

Anshuman Gaekwad
ಕ್ರೀಡೆ1 hour ago

Anshuman Gaekwad: ಮಾಜಿ ಕ್ರಿಕೆಟಿಗ ಅಂಶುಮಾನ್‌ ಗಾಯಕ್ವಾಡ್‌ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Actor Jaggesh tears after seeing the current state of Kannada film industry
ಸಿನಿಮಾ1 hour ago

Actor Jaggesh: ಕನ್ನಡ ಚಿತ್ರರಂಗದ ಈಗಿನ ಸ್ಥಿತಿಗತಿ ಕಂಡು ಕಣ್ಣೀರಿಟ್ಟ ನವರಸ ನಾಯಕ ಜಗ್ಗೇಶ್‌!

LPG Price Hike
ವಾಣಿಜ್ಯ1 hour ago

LPG Price Hike: ತಿಂಗಳ ಆರಂಭದಲ್ಲೇ ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್‌; ಬೆಂಗಳೂರಿನಲ್ಲಿ ಇಷ್ಟಾಗಿದೆ ದರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ4 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ4 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌