Vinesh Phogat: ಸಹೋದರಿಯ ವಿರುದ್ಧವೇ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ವಿನೇಶ್​ ಫೋಗಟ್​? - Vistara News

ದೇಶ

Vinesh Phogat: ಸಹೋದರಿಯ ವಿರುದ್ಧವೇ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ವಿನೇಶ್​ ಫೋಗಟ್​?

Vinesh Phogat: ಮೂಲಗಳ ಪ್ರಕಾರ ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ವಿರುದ್ಧ ವಿನೇಶ್​ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Vinesh Phogat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಬೇಸರದಲ್ಲಿ ಕುಸ್ತಿಗೆ ವಿದಾಯ ಹೇಳಿದ್ದ ವಿನೇಶ್‌ ಪೋಗಟ್‌(Vinesh Phogat) ಇದೀಗ ರಾಜಕೀಯಕ್ಕೆ ಎಂಟ್ರಿ(Vinesh Phogat Join Politics) ಕೊಡಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ವಿನೇಶ್ ಫೋಗಟ್ ಮುಂಬರುವ ಹರಿಯಾಣ(Haryana Polls) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಅವರ ನಿಕಟ ಮೂಲಗಳು ಮಂಗಳವಾರ ಐಎಎನ್‌ಎಸ್‌ಗೆ ತಿಳಿಸಿವೆ. ಆದರೆ, ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎಂದು ವಿನೇಶ್ ಈ ಹಿಂದೆಯೇ ಹೇಳಿದ್ದರು. ಆದರೆ, ಇತ್ತೀಚಿನ ವರದಿಯ ಪ್ರಕಾರ, ಕೆಲವು ರಾಜಕೀಯ ಪಕ್ಷಗಳು ವಿನೇಶ್​ ಅವರನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.

ವಿನೇಶ್ ಯಾವ ಪಕ್ಷ ಸೇರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ಮೂಲಗಳ ಪ್ರಕಾರ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ. ವಿನೇಶ್​ ಪ್ಯಾರಿಸ್​ನಿಂದ ಭಾರತಕ್ಕೆ ಬಂದ ವೇಳೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರು ಭರ್ಜರಿ ಸ್ವಾಗತ ಕೋರಿದ್ದರು. ಬಳಿಕ ತವರಿನಲ್ಲಿಯೂ ವಿನೇಶ್​ಗೆ ಹಲವು ಕಾಂಗ್ರೆಸ್​ ನಾಯಕರು ಮತ್ತು ರೈತ ನಾಯಕರು ಸನ್ಮಾನ ಮಾಡಿದ್ದರು.

ಮೂಲಗಳ ಪ್ರಕಾರ ಮಾಜಿ ಕಾಮನ್​ವೆಲ್ತ್​ ಗೇಮ್​ ಚಿನ್ನದ ಪದಕ ವಿಜೇತೆ, ಬಿಜೆಪಿ ಪಕ್ಷದ ಕಾರ್ಯಕರ್ತೆ ಬಬಿತಾ ಫೋಗಟ್(Babita Phogat) ವಿರುದ್ಧ ವಿನೇಶ್​ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ವಿನೇಶ್​ ಮತ್ತು ಬಬಿತಾ ಸಹೋದರಿಗಳಾಗಿದ್ದಾರೆ. ವಿನೇಶ್​ ಮಾತ್ರವಲ್ಲದೆ ಬಜರಂಗ್​ ಪೂನಿಯಾ ಕೂಡ ಕಾಂಗ್ರೆಸ್​ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ ಎನ್ನಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣಾ ಆಯೋಗವು ಕಳೆದ ಶುಕ್ರವಾರ ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ Vinesh Phogat: ಸನ್ಮಾನ ಸಮಾರಂಭದಲ್ಲಿ ದಿಢೀರ್​ ಪ್ರಜ್ಞೆ ತಪ್ಪಿ ಬಿದ್ದ ವಿನೇಶ್​ ಪೋಗಟ್​

ಬ್ರಿಜ್​ ಭೂಷಣ್​ ವಿರುದ್ಧದ ಪ್ರತಿಭಟನೆ ವೇಳೆ ವಿನೇಶ್​ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ತಮಗೆ ನೀಡಿದ್ದ ಖೇಲ್​ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ತ್ಯಜಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜತೆ ಕಾಣಿಸಿಕೊಂಡಿದ್ದರು. ಇದನೆಲ್ಲ ನೋಡುವಾಗ ಅವರು ಈ ಬಾರಿ ಕಾಂಗ್ರೆಸ್​ ಪಕ್ಷದಿಂದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಬ್ರಿಜ್​ ಭೂಷಣ್​ ವಿರುದ್ಧದ ಪ್ರತಿಭಟನೆ ವೇಳೆ ಟ್ವೀಟ್​ ಮಾಡಿದ್ದ ಬಬಿತಾ “ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಸತ್ಯ ಹೊರಬರುತ್ತದೆ. ಒಬ್ಬ ಮಹಿಳಾ ಆಟಗಾರ್ತಿಯಾಗಿ ನಾನು ದೇಶದ ಎಲ್ಲ ಆಟಗಾರ್ತಿಯರ ಜತೆಗಿರುತ್ತೇನೆ, ಮುಂದೆಯೂ ಕೂಡ ಇರುತ್ತೇನೆ. ಆದರೆ ಸಾಕ್ಷಿ ಮತ್ತು ವಿನೇಶ್​ ಈ ಪ್ರಕರಣದಲ್ಲಿ ಕಾಂಗ್ರೆಸ್​ನ ಕೈಗೊಂಬೆಯಾಗಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಹೇಳಿದ್ದರು.

“ನೀವು ಬಾದಾಮಿ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬಹುದು, ಆದರೆ ನಾವು ನನ್ನ ದೇಶದ ಜನರು ಗೋಧಿಯಿಂದ ತಯಾರಿಸಿದ ಬ್ರೆಡ್ ಕೂಡ ತಿನ್ನುತ್ತೇವೆ. ನೀವು ಕಾಂಗ್ರೆಸ್ ಕೈಗೊಂಬೆಯಾಗಿದ್ದೀರಿ ಎಂದು ದೇಶದ ಜನರಿಗೆ ಅರ್ಥವಾಗಿದೆ. ನಿಮ್ಮ ನಿಜವಾದ ಉದ್ದೇಶವನ್ನು ಹೇಳಬೇಕಾದ ಸಮಯ ಬಂದಿದೆ” ಬಬಿತಾ ಫೋಗಟ್ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

Vistara Explainer: ಪುಟ್ಟ ಹೆಣ್ಣುಮಕ್ಕಳ ಮೇಲೆ ಕಾಮುಕ ಅಟೆಂಡರ್‌ನಿಂದ ಅತ್ಯಾಚಾರದ ಬಳಿಕ ಬದ್ಲಾಪುರ ಉದ್ವಿಗ್ನ; ಏನಾಗ್ತಿದೆ ಅಲ್ಲಿ?

Vistara Explainer: ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುರುಷ ಅಟೆಂಡರ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಮಂಗಳವಾರ, ಕ್ರೋಧತಪ್ತರಾದ ಪೋಷಕರು ಮತ್ತು ನಾಗರಿಕರು ಶಾಲೆಗೆ ನುಗ್ಗಿ ಶಾಲೆಯನ್ನು ಧ್ವಂಸಗೊಳಿಸಿದ್ದರು.

VISTARANEWS.COM


on

badlapur tension vistara explainer
Koo

ಥಾಣೆ: ಮಹಾರಾಷ್ಟ್ರದ ಥಾಣೆಯ ಬದ್ಲಾಪುರ ಎಂಬಲ್ಲಿನ ಕಿಂಡರ್‌ ಗಾರ್ಟನ್‌ ಶಾಲೆಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ (Physical Abuse) ಕೃತ್ಯ ನಡೆದ ನಂತರ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಶಾಲೆಯ ಶೌಚಾಲಯದಲ್ಲಿ ಕಾಮುಕ ಅಟೆಂಡರನೊಬ್ಬ ಈ ಮಕ್ಕಳ ಮೇಲೆ ಅಮಾನುಷ ಕೃತ್ಯ ಎಸಗಿದ್ದಾನೆ. ಇದರ ಬಳಿಕ ಉದ್ವಿಗ್ನ ಪರಿಸ್ಥಿತಿ (Badlapur tension) ಉಂಟಾಗಿದ್ದು, ಹಲವೆಡೆ ಗಲಭೆ ತಲೆದೋರಿದೆ. ಈ ಕುರಿತ ವಿವರ (Vistara Explainer) ಇಲ್ಲಿದೆ.

ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಬಂಧಿತ ಆರೋಪಿಯ ವಿರುದ್ಧ ಅತ್ಯಾಚಾರ ಆರೋಪ ದಾಖಲಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಪೊಲೀಸರಿಗೆ ಆದೇಶಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿ ಪ್ರಕರಣವನ್ನು ಫಾಸ್ಟ್‌ ಟ್ರ್ಯಾಕ್‌ನಲ್ಲಿ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ. “ನಾನು ಥಾಣೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ತ್ವರಿತವಾಗಿ ತನಿಖೆ ಮಾಡಿ ಆರೋಪಿ ಮೇಲೆ ಅತ್ಯಾಚಾರ ಯತ್ನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆರೋಪ ದಾಖಲಿಸುವಂತೆ ಸೂಚಿಸಿದ್ದೇನೆ” ಎಂದು ಅವರು ಹೇಳಿದರು.

ಬದ್ಲಾಪುರದಲ್ಲಿ ಏನಾಯ್ತು?

ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುರುಷ ಅಟೆಂಡರ್‌ನಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಆರೋಪಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಮಂಗಳವಾರ, ಕ್ರೋಧತಪ್ತರಾದ ಪೋಷಕರು ಮತ್ತು ನಾಗರಿಕರು ಶಾಲೆಗೆ ನುಗ್ಗಿ ಶಾಲೆಯನ್ನು ಧ್ವಂಸಗೊಳಿಸಿದ್ದರು. ಬೆಳಗ್ಗೆ 8.30ರಿಂದ ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲ್‌ ರೋಕೋ ನಡೆಸಿ ರೈಲುಗಳನ್ನು ತಡೆದರು. ಪ್ರತಿಭಟನೆಯ ವೇಳೆ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.

ಕಾಮುಕನ ಕೈಗೆ ಸಿಕ್ಕಿದ ಸಂತ್ರಸ್ತರು ಮೂರು ಮತ್ತು ನಾಲ್ಕು ವರ್ಷ ವಯಸ್ಸಿನವರು. ಈತ ಶಾಲೆಯ ಶೌಚಾಲಯದಲ್ಲಿ ದೌರ್ಜನ್ಯ ಎಸಗಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿ ಪ್ರಾಂಶುಪಾಲರು, ತರಗತಿ ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನನ್ನು ಶಾಲೆಯ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ಆರೋಪಿ 23 ವರ್ಷದ ಪುರುಷ ಸ್ವಚ್ಛತಾ ಸಿಬ್ಬಂದಿ. ಬಾಲಕಿಯರು ಶೌಚಾಲಯ ಬಳಸಲು ಹೋದಾಗ ಹಲ್ಲೆ ನಡೆದಿದೆ. ಬಾಲಕಿಯರ ಶೌಚಾಲಯಕ್ಕೆ ಶಾಲೆಯಿಂದ ಮಹಿಳಾ ಸಿಬ್ಬಂದಿಯನ್ನು ನೇಮಿಸಿಲ್ಲ. ಆರೋಪಿ ಅಕ್ಷಯ್ ಶಿಂಧೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಹಲ್ಲೆಗೊಳಗಾದ ಬಾಲಕಿ ತನ್ನ ಖಾಸಗಿ ಅಂಗದಲ್ಲಿ ನೋವಿನ ಕುರಿತು ದೂರು ನೀಡಿದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಶೌಚಾಲಯಕ್ಕೆ ತೆರಳಿದ್ದ ವೇಳೆ ಆರೋಪಿ ತನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾನೆ ಎಂದು ಪೋಷಕರಿಗೆ ಆಕೆ ತಿಳಿಸಿದ್ದಾಳೆ. ಪೋಷಕರು ಹುಡುಗಿಯ ಸ್ನೇಹಿತೆಯ ಪೋಷಕರನ್ನು ಸಂಪರ್ಕಿಸಿದ್ದು, ಅವರೂ ತಮ್ಮ ಮಗಳಿಗೆ ಶಾಲೆಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ನಂತರ ಪೋಷಕರು ಬಾಲಕಿಯರನ್ನು ಸ್ಥಳೀಯ ವೈದ್ಯರ ಬಳಿ ಪರೀಕ್ಷಿಸಿದಾಗ, ಇಬ್ಬರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಬೆಳಕಿಗೆ ಬಂದಿದೆ.

ಸಿಎಂಒ ಕ್ರಮದ ಭರವಸೆ

ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಕರಣವನ್ನು ಅತ್ಯಂತ ತುರ್ತು ಮತ್ತು ದಕ್ಷತೆಯಿಂದ ನಿಭಾಯಿಸುವಂತೆ ಖಚಿತಪಡಿಸಿಕೊಳ್ಳಲು ಅವರು ಥಾಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ವಿನ್ಯಾಸಗೊಳಿಸಲಾದ ಸಖಿ ಸಾವಿತ್ರಿ ಸಮಿತಿಗಳನ್ನು ಶಾಲೆಗಳಲ್ಲಿ ಸ್ಥಾಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಪರಿಶೀಲನೆಗೆ ಕರೆ ನೀಡಿದ್ದಾರೆ.

ಶಾಲಾ ಸುರಕ್ಷತೆಯನ್ನು ಸುಧಾರಿಸುವ ಮತ್ತು ಭವಿಷ್ಯದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ, ಪ್ರತಿ ಶಾಲೆಯಲ್ಲೂ ದೂರು ಪೆಟ್ಟಿಗೆಗಳನ್ನು ಅಳವಡಿಸುವುದು, ವಿದ್ಯಾರ್ಥಿಗಳೊಂದಿಗೆ ಆಗಾಗ ಸಂವಹನ ನಡೆಸುವ, ಶಾಲಾ ಸಿಬ್ಬಂದಿಗಳ ಪರಿಶೀಲನೆ ಹೆಚ್ಚಿಸುವ ಮತ್ತಿತರ ಕ್ರಮಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Stabbing Case: ಮುಸ್ಲಿಂ ಸಹಪಾಠಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿ, ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಅಸುನೀಗಿದ

Continue Reading

ದೇಶ

Stabbing Case: ಮುಸ್ಲಿಂ ಸಹಪಾಠಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿ, ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಅಸುನೀಗಿದ

Stabbing Case: ಆಗಸ್ಟ್​ 16ರಂದು ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಬಾಲಕರಿಬ್ಬರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಮುಸ್ಲಿಂ ವಿದ್ಯಾರ್ಥಿ ತನ್ನ ಸಹಪಾಠಿಗೆ ಚಾಕುವಿನಿಂದ ತೊಡೆ ಭಾಗಕ್ಕೆ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

VISTARANEWS.COM


on

Stabbing Case
Koo

ಉದಯ್​ಪುರ: ಮುಸ್ಲಿಂ ಸಹಪಾಠಿಯಿಂದ ಇರಿತಕ್ಕೊಳಗಾಗಿ (Stabbing Case) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೊಬ್ಬ (Student Death) ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ದೇವರಾಜ್ (15)​ ಮೃತ ಬಾಲಕನಾಗಿದ್ದು, ಆತ ಕೊನೆಯುಸಿರೆಳೆಯುವ ಮೊದಲು ಸಹೋದರಿ ಆತನಿಗೆ ರಾಖಿ (Rakhi) ಕಟ್ಟಿದ್ದಳು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಅರವಿಂದ್ ಪೋಸ್ವಾಲ್, ಸೋಮವಾರ ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಭಾರಿ ಪೊಲೀಸ್ ನಿಯೋಜನೆ ಹಾಗೂ ನಗರದ ವಿವಿಧ ಭಾಗಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್​ 16ರಂದು ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಬಾಲಕರಿಬ್ಬರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಮುಸ್ಲಿಂ ವಿದ್ಯಾರ್ಥಿ ತನ್ನ ಸಹಪಾಠಿಗೆ ಚಾಕುವಿನಿಂದ ತೊಡೆ ಭಾಗಕ್ಕೆ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟಾಗಿತ್ತು. ಅದನ್ನು ಇದೀಗ ಹತೋಟಿಗೆ ತಂದಿರುವ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದು, ಗಾಳಿಸುದ್ದಿಗಳನ್ನು ತಡೆಯಲು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

ʼಯುವತಿಯರು ಕಾಮಾಸಕ್ತಿ ನಿಯಂತ್ರಿಸಿಕೊಳ್ಳಿʼ ಎಂದ ನ್ಯಾಯಾಧೀಶರ ಸಲಹೆಗೆ ಕನಲಿದ ಸುಪ್ರೀಂ ಕೋರ್ಟ್!‌

ನವದೆಹಲಿ: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ (Kolkata high court) ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಇಂದು ರದ್ದುಗೊಳಿಸಿದೆ. ಇದೇ ಪ್ರಕರಣದಲ್ಲಿ. “ಹದಿಹರೆಯದ ಹುಡುಗಿಯರು ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು” ಎಂದು ನ್ಯಾಯಾಧೀಶರು ನೀಡಿದ ʼಸಲಹೆʼಯ ಬಗ್ಗೆ ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಧೀಶರಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರು ಇದ್ದ ನ್ಯಾಯಪೀಠ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣಗಳನ್ನು ವ್ಯವಹರಿಸುವ ಕುರಿತು ನ್ಯಾಯಾಂಗ ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದರು. ಪೀಠದ ಪರವಾಗಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಓಕಾ, ನ್ಯಾಯಾಲಯಗಳು ತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆಯೂ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್ 8ರಂದು ಸುಪ್ರೀಂ ಕೋರ್ಟ್ ಈ ತೀರ್ಪನ್ನು ಟೀಕಿಸಿತ್ತು. ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಕೆಲವು ಅವಲೋಕನಗಳನ್ನು “ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣವಾಗಿ ಅನಗತ್ಯ” ಎಂದು ಬಣ್ಣಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠವು ಮಾಡಿದ ಕೆಲವು ಅವಲೋಕನಗಳನ್ನು ಗಮನಕ್ಕೆ ತೆಗೆದುಕೊಂಡ ಪೀಠ, ತೀರ್ಪುಗಳನ್ನು ಬರೆಯುವಾಗ ನ್ಯಾಯಾಧೀಶರು “ಬೋಧನೆ” ಮಾಡಬಾರದು ಎಂದು ಹೇಳಿತು.

ಇದನ್ನೂ ಓದಿ: Viral Video: ನೆರೆಹೊರೆಯವರೊಂದಿಗೆ ಜಗಳವಾಡುತ್ತಲೇ ಹೃದಯಾಘಾತದಿಂದ ಸತ್ತ ಮಹಿಳೆ!

Continue Reading

ಕ್ರೀಡೆ

Paralympic 2024: ಒತ್ತಡಕ್ಕೆ ಒಳಗಾಗಬೇಡಿ; ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸಲಹೆ

Paralympic 2024: ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 19 ಪದಕ ಗೆದ್ದ ಭಾರತ, ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದೆ. ಈ ಬಾರಿ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

Paralympic 2024
Koo

ನವದೆಹಲಿ: ಇದೇ ತಿಂಗಳು ಆಗಸ್ಟ್​ 28ರಿಂದ ಪ್ಯಾರಿಸ್​ನಲ್ಲಿ(Paralympic 2024) ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್(Paris Paralympics)​ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ಶುಕ್ರವಾರ ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಎಲ್ಲ ಕ್ರೀಡಾಪಟುಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.

ಸೋಮವಾರ ರಾತ್ರಿ ನಡೆದಿದ್ದ ವರ್ಚುವಲ್‌ ಸಂವಾದದಲ್ಲಿ ಮೋದಿ ಅವರು ಅಥ್ಲೀಟ್​ಗಳ ಜತೆ ಸಂವಾದ ನಡೆಸಿದ್ದರು. ಇದೇ ವೇಳೆ ಹಲವು ಕ್ರೀಡಾಪಟುಗಳು ತಮ್ಮ ತಯಾರಿಯ ಬಗ್ಗೆ ಮತ್ತು ಈ ಬಾರಿ ಪದಕ ಗೆಲ್ಲುವ ವಿಶ್ವಾಸವನ್ನು ಮೋದಿ ಜತೆ ಹಂಚಿಕೊಂಡರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ತ್ರೋವರ್‌ ಸುಮಿತ್‌ ಅಂಟಿಲ್‌ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದರು. ಸುಮಿತ್‌ ಅಂಟಿಲ್‌ ಪ್ಯಾರಾಲಿಂಪಿಕ್ಸ್‌ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್‌ ಭಾಗ್ಯಶ್ರೀ ಜಾಧವ್‌ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಒತ್ತಡಕ್ಕೆ ಒಳಗಾಗಬೇಡಿ


ಅಥ್ಲೀಟ್‌ಗಳ ಜತೆ ಮುಕ್ತವಾಗಿ ಮಾತನಾಡಿದ ಮೋದಿ, ಯಾವುದೇ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ‘ನಿಮ್ಮ ಪಯಣ ನಿಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮುಖ್ಯವಾದದ್ದು. ನೀವು ಮಾಡಿದ ಸಾಧನೆಯಿಂದ ಭಾರತೀಯರು ಹೆಮ್ಮೆ ಪಡುತ್ತಾರೆ. ಇಡೀ ದೇಶವೇ ನಿಮ್ಮ ಬೆಂಬಲಕ್ಕಿದೆ. 140 ಕೋಟಿ ಭಾರತೀಯರ ಆಶೀರ್ವಾದ ನಿಮ್ಮ ಮೇಲಿದೆ. ನಿಮ್ಮ ಇಷ್ಟು ವರ್ಷದ ಪರಿಶ್ರಮಕ್ಕೆ ಪ್ಯಾರಿಸ್​ನಲ್ಲಿ ಉತ್ತಮ ಪ್ರತಿಫಲ ಸಿಗುವಂತಾಗಲಿ” ಎಂದು ಮೋದಿ ಹಾರೈಸಿದ್ದಾರೆ.

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 19 ಪದಕ ಗೆದ್ದ ಭಾರತ, ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದೆ. ಈ ಬಾರಿ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 24 ಮಂದಿ ಸ್ಪರ್ಧಿಸಿದ್ದರು.

ಇದನ್ನೂ ಓದಿ Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕೆನೊಯಿಂಗ್‌, ಸೈಕ್ಲಿಂಗ್‌, ಅಂಧರ ಜುಡೊ, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ದೇಶದ ಅಥ್ಲೀಟ್​ಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ವಿಶ್ವಾಸ ನನಗಿದೆ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತದ ಪ್ಯಾರಾಲಿಂಪಿಕ್ಸ್‌ ತಂಡ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

Continue Reading

ಸಿನಿಮಾ

Celina Jaitley: ಮರ್ಮಾಂಗ ತೋರಿಸಿದ ದುಷ್ಟ; ಟೀಕೆಗೆ ಒಳಗಾದದ್ದು ನಾನು: ಕರಾಳ ನೆನಪು ಬಿಚ್ಚಿಟ್ಟ ನಟಿ

Celina Jaitley: ಬಾಲ್ಯದಲ್ಲಿ ತಮಗಾದ ಕೆಟ್ಟ ಅನುಭವವನ್ನು ಜೇಟ್ಲಿ ತೆರೆದಿಟ್ಟಿದ್ದಾರೆ. ತಮ್ಮ ಆರನೇ ತರಗತಿ ಫೋಟೋ ಒಂದನ್ನು ಪೋಸ್ಟ್‌ ಮಾಡಿದ ಸೆಲಿನಾ, ಇಂಥ ಪ್ರಕರಣಗಳಲ್ಲಿ ಯಾವಾಗಲೂ ಬಲಿಪಶುವನ್ನೇ ತಪ್ಪು ಮಾಡಿದವಳು ಎಂದು ಹೇಳಲಾಗುತ್ತದೆ ಎಂದಿದ್ದಾರೆ.

VISTARANEWS.COM


on

Celina Jaitley
Koo

ಮುಂಬಯಿ: ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ (Physical Abuse) ಪ್ರಕರಣ, ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು (Bollywood celebrity) ಕೂಡ ತಮಗಾದ ಲೈಂಗಿಕ ಕಿರುಕುಳ, ಯಾತನೆ, ನೋವುಗಳ ಬಗ್ಗೆ ಮಾತನಾಡುವಂತೆ ಮಾಡಿದೆ. ಅದೇ ಸರಣಿಯಲ್ಲಿ ನಟಿ ಸೆಲಿನಾ ಜೇಟ್ಲಿ (Celina Jaitley) ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ.

ಬಾಲ್ಯದಲ್ಲಿ ತಮಗಾದ ಕೆಟ್ಟ ಅನುಭವವನ್ನು ಜೇಟ್ಲಿ ತೆರೆದಿಟ್ಟಿದ್ದಾರೆ. ತಮ್ಮ ಆರನೇ ತರಗತಿ ಫೋಟೋ ಒಂದನ್ನು ಪೋಸ್ಟ್‌ ಮಾಡಿದ ಸೆಲಿನಾ, ಇಂಥ ಪ್ರಕರಣಗಳಲ್ಲಿ ಯಾವಾಗಲೂ ಬಲಿಪಶುವನ್ನೇ ತಪ್ಪು ಮಾಡಿದವಳು ಎಂದು ಹೇಳಲಾಗುತ್ತದೆ. ಈ ಫೋಟೋ ನಾನು ಆರನೇ ತರಗತಿಯಲ್ಲಿದ್ದಾಗಿನದು. ಹತ್ತಿರದ ಕಾಲೇಜಿನ ಹುಡುಗನೊಬ್ಬ ನಾನು ಶಾಲೆಯಿಂದ ಹೊರಬರುವುದನ್ನು ಕಾಯುತ್ತಿದ್ದ. ಅವನು ಪ್ರತಿದಿನ ನನ್ನ ಶಾಲೆಯ ರಿಕ್ಷಾವನ್ನು ಹಿಂಬಾಲಿಸಿ ಮನೆಯವರೆಗೆ ಬರುತ್ತಿದ್ದ. ಕೆಲವು ದಿನಗಳ ನಂತರ, ನನ್ನ ಗಮನವನ್ನು ಸೆಳೆಯಲು, ಅವನು ರಸ್ತೆಯ ಮಧ್ಯದಲ್ಲಿ ನನ್ನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದ. ಅಲ್ಲಿದ್ದವರು ಯಾರೂ ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ.

ಇದರ ಮಧ್ಯೆ ನನ್ನ ಟೀಚರ್‌ ನನ್ನ ಮೇಲೆಯೇ ಆರೋಪ ಮಾಡಿದ್ರು. ನಾನು ಬಿಗಿಯಾದ ಬಟ್ಟೆ ಧರಿಸುತ್ತೇನೆ, ಕೂದಲಿಗೆ ಎಣ್ಣೆ ಹಚ್ಚಿ, ಕೂದಲು ಕಟ್ಟೋದಿಲ್ಲ. ಹಾಗಾಗಿ ಹುಡುಗ ನನ್ನ ಹಿಂದೆ ಬಿದ್ದಿದ್ದಾನೆ ಎಂದು ಟೀಚರ್ಸ್‌ ನನಗೆ ಹೇಳುತ್ತಿದ್ದರು. ಶಿಕ್ಷಕರ ಈ ಮಾತಿನ ನಂತರ ನಾನು ತುಂಬಾ ದಿನ ನನ್ನನ್ನೇ ದೂಷಿಸಿಕೊಳ್ಳುತ್ತಿದ್ದೆ. ಒಂದು ದಿನ ಬೆಳಿಗ್ಗೆ ಶಾಲೆಗೆ ಹೋಗಲು ರಿಕ್ಷಾಕ್ಕೆ ಕಾಯುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ತೋರಿಸಿದ. ತೀವ್ರ ಮುಜುಗರವಾಯಿತು. ಆದರೆ ಟೀಚರ್‌ ಮಾತನ್ನು ನೆನೆದುಕೊಂಡು ಆಗ್ಲೂ ನಾನು ನನ್ನನ್ನು ದೂಷಿಸಿಕೊಂಡಿದ್ದೆ ಎಂದು ಸೆಲಿನಾ ಹೇಳಿದ್ದಾರೆ.

ನಾನು 11ನೇ ತರಗತಿಯಲ್ಲಿದ್ದಾಗ, ಹುಡುಗರು ನನ್ನ ಸ್ಕೂಟಿ ಬ್ರೇಕ್‌ ಕಟ್‌ ಮಾಡಿದ್ದರು. ಅವರು ಅಶ್ಲೀಲವಾಗಿ ನಿಂದಿಸಿದ್ದರು. ನೀನು ಜೀನ್ಸ್‌ ಧರಿಸಿ, ಮಾಡರ್ನ್‌ ಆಗಿ ಕಾಣುವ ಕಾರಣ ಯುವಕರು ನಿನ್ನನ್ನು ತಪ್ಪು ತಿಳಿದಿದ್ದಾರೆಂದು ಶಿಕ್ಷಕಿ ಆಗ್ಲೂ ಹೇಳಿದ್ದರಂತೆ. ಇದ್ರಿಂದ ನಾನು ತುಂಬಾ ನೋವು ತಿಂದಿದ್ದೆ ಎಂದು ಸೆಲಿನಾ ಸುದೀರ್ಘ ಪೋಸ್ಟ್‌ ಹಾಕಿದ್ದಾರೆ.

ʼಯುವತಿಯರು ಕಾಮಾಸಕ್ತಿ ನಿಯಂತ್ರಿಸಿಕೊಳ್ಳಿʼ ಎಂದ ನ್ಯಾಯಾಧೀಶರ ಸಲಹೆಗೆ ಕನಲಿದ ಸುಪ್ರೀಂ ಕೋರ್ಟ್!‌

ನವದೆಹಲಿ: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ (Kolkata high court) ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಇಂದು ರದ್ದುಗೊಳಿಸಿದೆ. ಇದೇ ಪ್ರಕರಣದಲ್ಲಿ. “ಹದಿಹರೆಯದ ಹುಡುಗಿಯರು ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು” ಎಂದು ನ್ಯಾಯಾಧೀಶರು ನೀಡಿದ ʼಸಲಹೆʼಯ ಬಗ್ಗೆ ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಧೀಶರಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರು ಇದ್ದ ನ್ಯಾಯಪೀಠ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣಗಳನ್ನು ವ್ಯವಹರಿಸುವ ಕುರಿತು ನ್ಯಾಯಾಂಗ ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದರು. ಪೀಠದ ಪರವಾಗಿ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಓಕಾ, ನ್ಯಾಯಾಲಯಗಳು ತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆಯೂ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ಡಿಸೆಂಬರ್ 8ರಂದು ಸುಪ್ರೀಂ ಕೋರ್ಟ್ ಈ ತೀರ್ಪನ್ನು ಟೀಕಿಸಿತ್ತು. ಕೋಲ್ಕತ್ತಾ ಉಚ್ಚ ನ್ಯಾಯಾಲಯದ ಕೆಲವು ಅವಲೋಕನಗಳನ್ನು “ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣವಾಗಿ ಅನಗತ್ಯ” ಎಂದು ಬಣ್ಣಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠವು ಮಾಡಿದ ಕೆಲವು ಅವಲೋಕನಗಳನ್ನು ಗಮನಕ್ಕೆ ತೆಗೆದುಕೊಂಡ ಪೀಠ, ತೀರ್ಪುಗಳನ್ನು ಬರೆಯುವಾಗ ನ್ಯಾಯಾಧೀಶರು “ಬೋಧನೆ” ಮಾಡಬಾರದು ಎಂದು ಹೇಳಿತು.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

Continue Reading
Advertisement
ವೈರಲ್ ನ್ಯೂಸ್1 min ago

Road Rage Incident: ಒಳಗೆ ಮಗು ಇದೆ ಅಂದ್ರೂ ಬಿಡದ ಕಿಡಿಗೇಡಿ; ಕಾರಿನ ಗ್ಲಾಸ್‌ ಒಡೆದು ದಾಂಧಲೆ!

Fashion Show news
ಫ್ಯಾಷನ್14 mins ago

Fashion Show news: ವೈವಿಧ್ಯಮಯ ವಜ್ರಾಭರಣ ಧರಿಸಿ ಫ್ಯಾಷನ್‌ ಶೋನಲ್ಲಿ ಮಿಂಚಿದ ರೂಪದರ್ಶಿಯರು

Manu Bhaker Dance
ಕ್ರೀಡೆ20 mins ago

Manu Bhaker Dance: ‘ಕಾಲಾ ಚಷ್ಮಾ’ ಹಾಡಿಗೆ ವಿದ್ಯಾರ್ಥಿಗಳ ಜತೆ ಹೆಜ್ಜೆ ಹಾಕಿದ ಒಲಿಂಪಿಯನ್​ ಮನು ಭಾಕರ್​

KEA
ಕರ್ನಾಟಕ35 mins ago

KEA: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ; ಅರ್ಜಿ ಅಂಗೀಕೃತವಾಗಿರದಿದ್ದರೆ ದಾಖಲೆ ಸಲ್ಲಿಸಲು ಆ.26 ಕೊನೆಯ ದಿನ

badlapur tension vistara explainer
EXPLAINER57 mins ago

Vistara Explainer: ಪುಟ್ಟ ಹೆಣ್ಣುಮಕ್ಕಳ ಮೇಲೆ ಕಾಮುಕ ಅಟೆಂಡರ್‌ನಿಂದ ಅತ್ಯಾಚಾರದ ಬಳಿಕ ಬದ್ಲಾಪುರ ಉದ್ವಿಗ್ನ; ಏನಾಗ್ತಿದೆ ಅಲ್ಲಿ?

DK Shivakumar
ಕಲಬುರಗಿ1 hour ago

DK Shivakumar: ಆರ್ಟಿಕಲ್ 371 ಜೆ ಜಾರಿಗೆ 10 ವರ್ಷ; ಸಂಭ್ರಮಾಚರಣೆಗೆ ಸರ್ಕಾರದ ಸಿದ್ಧತೆ

DK Shivakumar
ಕಲಬುರಗಿ1 hour ago

DK Shivakumar: ಸಿದ್ದರಾಮಯ್ಯ ಅವರದು ಹೆದರುವ ರಕ್ತವಲ್ಲ ಎಂದ ಡಿ.ಕೆ.ಶಿವಕುಮಾರ್!

Congress Protest
ಕರ್ನಾಟಕ1 hour ago

Congress Protest: ಪ್ರಧಾನಿ, ಗವರ್ನರ್‌ಗೆ ಬೆದರಿಕೆ; ಐವನ್ ಡಿಸೋಜಾ, ಜಮೀರ್‌, ರಕ್ಷಿತ್ ಶಿವರಾಮ್ ವಿರುದ್ಧ ದೂರು

Mosquitoes Bite
ಆರೋಗ್ಯ1 hour ago

World Mosquito Day: ಸೊಳ್ಳೆಗಳಿಗೂ ಒಂದು ದಿನ! ಇವುಗಳ ಕುರಿತ 7 ಸುಳ್ಳುಗಳಿಗೆ ಇಲ್ಲಿದೆ ಉತ್ತರ!

Naga Chaitanya Sobhita Dhulipala
ಸಿನಿಮಾ1 hour ago

Naga Chaitanya Sobhita Dhulipala: ನಾಗ ಚೈತನ್ಯ, ಶೋಭಿತಾ ಧೂಳಿಪಾಲ ನಿಶ್ಚಿತಾರ್ಥದಿಂದ ಅಕ್ಕಿನೇನಿ- ದಗ್ಗುಬಾಟಿ ಕುಟುಂಬದಲ್ಲಿ ಬಿರುಕು?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌