Viral Video : ತಪ್ಪು ಟರ್ಮಿನಲ್ ತಲುಪಿ, ಇದಕ್ಕೂ ಮೋದಿ ಕಾರಣ ಎಂದ ನೆಟ್ಟಿಗ! ವೈರಲ್ ಆಯ್ತು ವಿಡಿಯೊ - Vistara News

Latest

Viral Video : ತಪ್ಪು ಟರ್ಮಿನಲ್ ತಲುಪಿ, ಇದಕ್ಕೂ ಮೋದಿ ಕಾರಣ ಎಂದ ನೆಟ್ಟಿಗ! ವೈರಲ್ ಆಯ್ತು ವಿಡಿಯೊ

ತಮ್ಮ ವಿಮಾನ ಪ್ರಯಾಣದ ಇ-ಟಿಕೆಟ್ ನೋಡದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ ಈ ವಿಚಾರದಲ್ಲಿಯೂ ಪ್ರಧಾನಿ ಅವರು ಗಮನಹರಿಸಬೇಕು ಎಂದು ವಿಡಿಯೊ ಹರಿಬಿಟ್ಟಿದ್ದಾರೆ. ಆ ವಿಡಿಯೊ ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ವಿಮಾನ ಪ್ರಯಾಣ ಮಾಡುವವರು ತಮ್ಮ ವಿಮಾನದ ಟರ್ಮಿನಲ್ ಸಂಖ್ಯೆ ತಿಳಿದುಕೊಳ್ಳುವುದು ಅತಿಮುಖ್ಯ. ಆದರೆ ಅದನ್ನೇ ತಿಳಿದುಕೊಳ್ಳದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ, ಇದಕ್ಕೂ ಪ್ರಧಾನಿ ಮೋದಿ ಕಾರಣ ಎಂದು ದೂಷಿಸಿದ್ದಾರೆ! ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ
ಉಜ್ವಲ್ ತ್ರಿವೇದಿ ಅವರು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಕಾಶ ಏರ್‌ಲೈನ್‌ ವಿಮಾನದಲ್ಲಿ ಹೊರಟಿದ್ದರು. ತಾವು ವಿಮಾನದ ಟಿಕೆಟ್ ಬುಕ್ ಮಾಡಿದಾಗ ಟಿಕೆಟ್‌ನಲ್ಲಿ, ವಿಮಾನವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ತೋರಿಸಿತ್ತು. ಆದರೆ ಬುಧವಾರ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ವಿಮಾನವು ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಬರುತ್ತದೆ ಎಂದು ತಿಳಿಸಲಾಯಿತು ಎನ್ನುವುದು ತ್ರಿವೇದಿ ಅವರ ದೂರು.

ಈ ವಿಚಾರದಲ್ಲಿ ಉಜ್ವಲ್ ಅವರು ವಿಡಿಯೊ ಮಾಡಿದ್ದು, “ಈ ಸಮಸ್ಯೆಗಳನ್ನು ಯಾರು ಪರಿಹರಿಸುತ್ತಾರೆ? ನಮ್ಮ ಪ್ರಧಾನಿ ಸಣ್ಣ ಸಣ್ಣ ವಿಷಯಗಳ ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕು. ನಾನು ಆಕಾಶ ಏರ್ ಹೆಲ್ಪ್‌ಡೆಸ್ಕ್‌ಗೆ ಹೋದೆ. ಅಲ್ಲಿ ಟರ್ಮಿನಲ್ ಅನ್ನು ಏಕೆ ಬರೆಯಲಾಗಿಲ್ಲ ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಟಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೇಳಿದ ಮೇಲೆ ಒಬ್ಬ ವ್ಯಕ್ತಿಯು ದೇಶೀಯ ವಿಮಾನ ನಿಲ್ದಾಣಕ್ಕೆ ಏಕಾಗಿ ಹೋಗುತ್ತಾನೆ? ಬೆಳಗ್ಗೆ ವಿಮಾನವನ್ನು ಹತ್ತಲೆಂದು ಧಾವಿಸಿ ತಪ್ಪು ಟರ್ಮಿನಲ್ ತಲುಪುತ್ತಾನೆ ಅಂತಾದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ.” ಎಂದು ಹೇಳಿದ್ದಾರೆ. ವಿಡಿಯೊದಲ್ಲಿ ಜಿ20 ಬಗ್ಗೆಯೂ ಅವರು ಮಾತನಾಡಿದ್ದಾರೆ.


ಉಜ್ವಲ್ ಅವರು ಟಿಕೆಟ್ ಅನ್ನೂ ವಿಡಿಯೊದಲ್ಲಿ ತೋರಿಸಿದ್ದು, ನೆಟ್ಟಿಗರು ಆ ಟಿಕೆಟ್‌ನಲ್ಲಿದ್ದ ವಿಮಾನದ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಿ ಟರ್ಮಿನಲ್ ಮಾಹಿತಿ ತೆಗೆದಿದ್ದಾರೆ. ಉಜ್ವಲ್ ಅವರ ಇ-ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್‌ನಲ್ಲಿ ಟಿ1 ಟರ್ಮಿನಲ್ ಎಂದೇ ಬರೆದಿದೆ. ಅದನ್ನು ಸರಿಯಾಗಿ ನೋಡದೆಯೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಿ ಎಂದು ಜನರು ಉಜ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಇದಾದ ಕೆಲ ಸಮಯದ ನಂತರ ಉಜ್ವಲ್ ಅವರು ಮತ್ತೊಂದು ವಿಡಿಯೊ ಹಾಕಿದ್ದು, ಆಕಾಶ ಏರ್‌ಲೈನ್‌ ಹಾಗೂ ಅವರು ಟಿಕೆಟ್ ಬುಕ್ ಮಾಡಿದ್ದ GoIbibo ವೆಬ್ ಸೈಟ್ ತಮ್ಮ ಕ್ಷಮೆ ಯಾಚಿಸಿವೆ ಎಂದು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Anant- Radhika  wedding: 1,500 ಕೋಟಿ ರೂ. ದಾಟಲಿದೆ ಅಂಬಾನಿ ಮಗನ ಮದುವೆ ಖರ್ಚು!

Anant- Radhika  wedding: ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಇತ್ತೀಚೆಗೆ ಅದ್ದೂರಿಯಾಗಿ ನಡೆದಿದೆ. ಇದಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿರುವ ಅಂಬಾನಿ ಮಗನ ಮದುವೆ ಕಾರ್ಯಕ್ರಮವನ್ನು ಎಲ್ಲಿ , ಹೇಗೆ, ಎಷ್ಟು ಬಜೆಟ್ ನಲ್ಲಿ ನಡೆಸಲಿದ್ದಾರೆ ಗೊತ್ತೇ? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

Anant-Radhika wedding
Koo

ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant- Radhika  wedding) ಪೂರ್ವ ಕಾರ್ಯಕ್ರಮಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (social media) ಹೆಚ್ಚು ಸದ್ದು ಮಾಡಿತ್ತು. ಈ ವರ್ಷ ಜುಲೈನಲ್ಲಿ ಇವರ ವಿವಾಹ ಲಂಡನ್‌ನಲ್ಲಿರುವ (London) ಅಂಬಾನಿ ಕುಟುಂಬದ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ನಡೆಯಲಿದೆ.

ಮಾರ್ಚ್ ತಿಂಗಳ 1ರಿಂದ 3ರವರೆಗೆ ಗುಜರಾತ್‌ನ (gujart) ಜಾಮ್‌ನಗರದಲ್ಲಿ (jamnagar) ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ವಿವಾಹಪೂರ್ವ ಸಮಾರಂಭವನ್ನು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಿದ್ದರು. ಇದರಲ್ಲಿ ಜಾಗತಿಕ ಟೆಕ್ ಸಿಇಒಗಳು, ಬಾಲಿವುಡ್ ತಾರೆಗಳು, ಪಾಪ್ ಐಕಾನ್‌ಗಳು ಮತ್ತು ರಾಜಕಾರಣಿಗಳು ಭಾಗವಹಿಸಿದ್ದರು.

ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆನಂದ್ ಪಿರಾಮಲ್ ಮತ್ತು ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ವಂಶಸ್ಥರು ಮದುವೆಯ ಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!


ಒಟ್ಟು ಖರ್ಚು

ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಪಾಪ್ ಐಕಾನ್ ರಿಹಾನ್ನಾ ಅವರು ಸತ್ಕರಿಸಿದರು. ಎರಡು ಗಂಟೆಗಳ ಕಾರ್ಯಕ್ರಮಕ್ಕಾಗಿ ಅವರು 6 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 52 ಕೋಟಿ ರೂ. ಗೂ ಹೆಚ್ಚು ಸಂಭಾವನೆ ಪಡೆದದ್ದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ 3 ದಿನಗಳ ಸಮಾರಂಭಕ್ಕೆ ಸುಮಾರು 1,260 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಡುಗೆ ಗುತ್ತಿಗೆಯವರಿಗೆ 200 ಕೋಟಿ ರೂ. ನೀಡಲಾಗಿದೆ ಎನ್ನಲಾಗಿದೆ.

ಫೋರ್ಬ್ಸ್ ಪ್ರಕಾರ 116 ಶತಕೋಟಿ ಡಾಲರ್ ಅಂದರೆ ಸುಮಾರು 9 ಲಕ್ಷ ಕೋಟಿ ರೂ. ಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅಂಬಾನಿ ಕುಟುಂಬವು ತಮ್ಮ ಕಿರಿಯ ಮಗನ ಮದುವೆಯ ಪೂರ್ವ ಸಂಭ್ರಮಕ್ಕಾಗಿ 1,200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಧಾರಾಳವಾಗಿ ಹಣ ಖರ್ಚು ಮಾಡಿದ್ದಾರೆ.


ಮದುವೆ ಖರ್ಚು ಎಷ್ಟಿರಬಹುದು?

ವರದಿಗಳ ಪ್ರಕಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ 1200- 1500 ಕೋಟಿ ರೂಪಾಯಿ ವೆಚ್ಚವಾಗಲಿದೆ. ದಂಪತಿಗಳು ಲಂಡನ್‌ನಲ್ಲಿ ವಿವಾಹವಾಗಲು ಸಿದ್ಧರಾಗಿದ್ದಾರೆ ಮತ್ತು ಅಬುಧಾಬಿಯಲ್ಲಿ ಸಂಗೀತ/ ಕಾಕ್‌ಟೈಲ್ ಕಾರ್ಯಕ್ರಮವನ್ನು ಸಹ ನಡೆಸಲು ಸಿದ್ಧರಾಗಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪೂರ್ವದಲ್ಲಿ ಹೂವಿನ ಅಲಂಕಾರವನ್ನು ಕಿಮ್ ಕಾರ್ಡಶಿಯಾನ್ ಮತ್ತು ಅವರ ಕುಟುಂಬ ನಡೆಸಿತ್ತು. ಕಾರ್ಯಕ್ರಮದ ಕೆಲಸಗಳನ್ನು ಹೆಸರುವಾಸಿಯಾದ ಜೆಫ್ ಲೀಥಮ್ ಅವರು ಮಾಡಿದ್ದಾರೆ. ಅವರು ಅಂಬಾನಿ ಮದುವೆಯಲ್ಲೂ ಅಲಂಕಾರವನ್ನು ಇವರಿಗೆ ನೀಡುವ ಸಾಧ್ಯತೆ ಇದೆ.


ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷ ಜುಲೈನಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಇದು ಈ ವರ್ಷದ ಅತಿ ದೊಡ್ಡ, ಅತ್ಯಂತ ಐಷಾರಾಮಿ ಮತ್ತು ಅತಿರಂಜಿತ ವಿವಾಹಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ.

Continue Reading

ಆಟೋಮೊಬೈಲ್

Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

Xiaomi EV: ಟೆಕ್ ದೈತ್ಯ ಕಂಪೆನಿ ಚೀನಾದ ಕ್ಸಿಯೋಮಿ (Xiaomi) ಆಟೋ ಉದ್ಯಮವನ್ನು ಪ್ರವೇಶಿಸಿದ್ದು, ಕೇವಲ ಒಂದು ತಿಂಗಳಲ್ಲಿ 75 ಸಾವಿರಕ್ಕೂ ಹೆಚ್ಚು ಆರ್ಡರ್ ಸ್ವೀಕರಿಸಿದೆ. ಕ್ಸಿಯೋಮಿ ಇವಿ ಎಸ್ ಯು7 ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಾಹನ ಮಾರಾಟ ಗುರಿಯನ್ನು ಹೊಂದಿದೆ.

VISTARANEWS.COM


on

By

Xiaomi EV
Koo

ಸ್ಮಾರ್ಟ್‌ಫೋನ್ (smart phone) ತಯಾರಿಕ ಟೆಕ್ ದೈತ್ಯ ಕಂಪನಿ ಚೀನಾದ (china) ಕ್ಸಿಯೋಮಿ (Xiaomi) ಇದೀಗ ಆಟೋ (auto) ಉದ್ಯಮವನ್ನು ಪ್ರವೇಶಿಸಲು ಸಜ್ಜಾಗಿದ್ದು, ಕ್ಸಿಯೋಮಿ ಈ ತಿಂಗಳಲ್ಲಿ ತನ್ನ ಹೊಸ ಎಸ್ ಯು 7 (Xiaomi EV) ಎಲೆಕ್ಟ್ರಿಕ್ ಸೆಡಾನ್‌ಗಾಗಿ 75,723 ಆರ್ಡರ್‌ಗಳನ್ನು ಪಡೆದುಕೊಂಡಿದೆ ಮತ್ತು ಜೂನ್ ವೇಳೆಗೆ 10,000 ಯೂನಿಟ್‌ಗಳನ್ನು ತಲುಪಿಸಲು ಯೋಜನೆ ರೂಪಿಸಿದೆ ಎಂದು ಕ್ಸಿಯೋಮಿ ಸಂಸ್ಥಾಪಕ ಲೀ ಜುನ್ ತಿಳಿಸಿದ್ದಾರೆ.

ಬೀಜಿಂಗ್ (Beijing) ಆಟೋ ಶೋನ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿತರಣೆ ಗುರಿಯು ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟ್‌ಅಪ್‌ಗಾಗಿ ಹೊಸ ದಾಖಲೆಯನ್ನು ಸ್ಥಾಪಿಸುತ್ತದೆ ಎಂದು ಹೇಳಿದರು.

ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಲಾಗಿದ್ದು, ಮರುಪಾವತಿಸಲಾಗದ ಠೇವಣಿಗಳೊಂದಿಗೆ 75,೦೦೦ಕ್ಕೂ ಹೆಚ್ಚು SU7 ನ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಆರ್ಡರ್ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?


ವರ್ಷದಲ್ಲಿ 1 ಲಕ್ಷ ಮಾರಾಟ ಗುರಿ

ಕ್ಸಿಯೋಮಿ ಈ ವರ್ಷ ಎಸ್ ಯು7ಗಾಗಿ 1,00,000ಕ್ಕೂ ಹೆಚ್ಚು ವಿತರಣೆ ಗುರಿಯನ್ನು ಹೊಂದಿದೆ. ಮುಂದಿನ ಮೂರು ವರ್ಷಗಳವರೆಗೆ ಚೀನೀ ಮಾರುಕಟ್ಟೆಯ ಮೇಲೆ ಸ್ಥಿರವಾದ ಬೇಡಿಕೆಯನ್ನು ಉಳಿಸಿಕೊಳ್ಳಲು ಕಂಪನಿ ಉದ್ದೇಶಿಸಿದೆ ಎಂದು ಲೀ ತಿಳಿಸಿದರು.

ಮೇ ಅಂತ್ಯಕ್ಕೆ ಪ್ರೊ ಮಾದರಿ ಪರಿಚಯ

ಬೇಡಿಕೆಯನ್ನು ಪೂರೈಸಲು ಕ್ಸಿಯಾವೋಮಿ SU7ನ ಪ್ರಮಾಣಿತ ಮತ್ತು ಮ್ಯಾಕ್ಸ್ ಆವೃತ್ತಿಗಳ ವಿತರಣೆಯನ್ನು ನಿಗದಿತ ಸಮಯಕ್ಕಿಂತ ಹನ್ನೆರಡು ದಿನಗಳ ಮುಂಚಿತವಾಗಿ ಪೂರ್ಣಗೊಳಿಸಿದೆ. ಮೇ ಅಂತ್ಯದ ವೇಳೆಗೆ ಪ್ರೊ ಮಾದರಿಗಳನ್ನು ಪರಿಚಯಿಸಲು ಕಂಪೆನಿಯು ಯೋಜನೆ ಹಾಕಿಕೊಂಡಿದೆ.

ಬೆಲೆ ಕಡಿತ, ಸಬ್ಸಿಡಿ ಘೋಷಣೆ

ಟೆಸ್ಲಾದ ಮಾಡೆಲ್ 3 ಗೆ ಪೈಪೋಟಿ ನೀಡುವ SU7ನ ಚೀನಾದ ಬೃಹತ್ ವಾಹನ ಮಾರುಕಟ್ಟೆಯಲ್ಲಿ EV ಬೆಲೆಗೆ ಪೈಪೋಟಿ ನೀಡಲಿದೆ. Xiaomi ಮಾರುಕಟ್ಟೆ ಪ್ರವೇಶಕ್ಕೆ ಮುಂಚಿತವಾಗಿಯೇ ವಾಹನ ತಯಾರಕರು ಬೆಲೆ ಕಡಿತ ಮತ್ತು ಸಬ್ಸಿಡಿಗಳನ್ನು ಘೋಷಿಸಿದ್ದಾರೆ.


Xiaomiಯ ತಯಾರಿಕೆಯಲ್ಲಿ 6,000 ಆಟೋ ತಂಡವು ಕಾರ್ಯ ನಿರ್ವಹಿಸುತ್ತಿದ್ದು, ಇದು ಸಾಕಾಗುವುದಿಲ್ಲ. ಕಂಪೆನಿಯ ಶೀಘ್ರದಲ್ಲೇ ಹೊಸ ಪ್ರತಿಭೆಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳಲಿದೆ. ಆಟೋಮೋಟಿವ್ ಕ್ಷೇತ್ರದಲ್ಲಿ ಆಸಕ್ತರಿರುವವರು ಕಂಪೆನಿ ಸೇರಲು ಈ ಸಂದರ್ಭದಲ್ಲಿ ಜಾಗತಿಕ ಪ್ರತಿಭೆಗಳಿಗೆ ಕರೆ ನೀಡಿದರು.

ಟೆಸ್ಲಾಗಿಂತ ಅಗ್ಗ

ಎಸ್ ಯು7 ಅನ್ನು ಸ್ಪೀಡ್ ಅಲ್ಟ್ರಾ 7 ಎಂದೂ ಕರೆಯುತ್ತಾರೆ. ಇದು ಸ್ಪರ್ಧಾತ್ಮಕ ಚೈನೀಸ್ ಇವಿ ಮಾರುಕಟ್ಟೆಯನ್ನು 30,000 ಡಾಲರ್ ಗಿಂತ ಕಡಿಮೆ ಬೆಲೆಯ ಮೂಲ ಮಾದರಿಯೊಂದಿಗೆ ಪ್ರವೇಶಿಸಲಿದೆ. ಇದು ಚೀನಾದಲ್ಲಿ ಟೆಸ್ಲಾ ಮಾದರಿ 3ಕ್ಕಿಂತ ಅಗ್ಗವಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.


5,000 ಉತ್ಪಾದನೆ

Xiaomi ಈಗಾಗಲೇ 5,000 SU7 ವಾಹನಗಳನ್ನು ಉತ್ಪಾದಿಸಿದೆ. ಇದನ್ನು “ಸ್ಥಾಪಕರ ಆವೃತ್ತಿ” ಎಂದು ಕರೆಯಲಾಗುತ್ತದೆ. ವಿಶೇಷ ಆವೃತ್ತಿ, EV ಯ ಸೀಮಿತ ಉತ್ಪಾದನಾ ಆವೃತ್ತಿಯು ಆರಂಭಿಕ ಖರೀದಿದಾರರಿಗೆ ಹೆಚ್ಚುವರಿ ಬಿಡಿಭಾಗಗಳೊಂದಿಗೆ ಬರಲಿದೆ.

SU7 ವಾಹನಗಳ ಆರಂಭಿಕ ಬ್ಯಾಚ್‌ನ ವಿತರಣೆಗಳು ಶೀಘ್ರದಲ್ಲೇ 28 ಚೀನೀ ನಗರಗಳಲ್ಲಿ ಪ್ರಾರಂಭವಾಗಲಿದೆ ಎಂದು ಲೀ ಜುನ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.

Xiaomi SU7 ಆಟೋ ವ್ಯವಹಾರದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡಲಾಗಿದೆ. ಪ್ರಾರಂಭದಲ್ಲಿ ಕಂಪೆನಿ ಸಲ್ಪ ನಷ್ಟ ಅನುಭವಿಸಬೇಕಾಗುತ್ತದೆ. ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. Xiaomi ಗಮನಾರ್ಹ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಾರೆ. ಯೋಜಿತ ಮಾರಾಟದ ಪರಿಮಾಣದ ಆಧಾರದ ಮೇಲೆ 4.1 ಶತಕೋಟಿ ಯುವಾನ್ ಅಥವಾ ಸುಮಾರು 566.82 ಮಿಲಿಯನ್ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Continue Reading

Lok Sabha Election 2024

Kompella Madhavi Latha: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಆಸ್ತಿ ಎಷ್ಟಿದೆ ನೋಡಿ!

Madhavi Latha: ಬಿಜೆಪಿಯ ಹೈದರಾಬಾದ್ ಅಭ್ಯರ್ಥಿ 221 ಕೋಟಿ ಆಸ್ತಿ ಹೊಂದಿದ್ದು, ತೆಲಂಗಾಣದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ವ್ಯಾಪಾರಿ ದಂಪತಿ ಮೂವರು ಮಕ್ಕಳನ್ನು ಹೊಂದಿದ್ದು, ಹೆಚ್ಚಿನ ಹಣವನ್ನು ಹೂಡಿಕೆ ಮಾಡಿರುವುದಾಗಿ ಅಫಿಡವಿಟ್ ನಲ್ಲಿ ಘೋಷಿಸಿದ್ದಾರೆ.

VISTARANEWS.COM


on

By

Madhavi Latha
Koo

ಹೈದರಾಬಾದ್: ತೆಲಂಗಾಣದ (Telangana) ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಹೈದರಾಬಾದ್ (Hyderabad) ಲೋಕಸಭಾ (lok sabha) ಕ್ಷೇತ್ರದ ಬಿಜೆಪಿ (bjp) ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ (Kompella Madhavi Latha) ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 221.37 ಕೋಟಿ ರೂ. ಎಂಬುದಾಗಿ ಬುಧವಾರ ನಾಮಪತ್ರ (nomination) ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ( Election Commission) ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಮಾಧವಿ ಲತಾ ಮತ್ತು ಅವರ ಪತಿ ಕೊಂಪೆಲ್ಲಾ ವಿಶ್ವನಾಥ್ ಇಬ್ಬರೂ ವ್ಯಾಪಾರಿಗಳು. ಅವರ ಮೂವರು ಅವಲಂಬಿತ ಮಕ್ಕಳು, 165.46 ಕೋಟಿ ರೂಪಾಯಿಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಮಾಧವಿ ಲತಾ ದಂಪತಿ 55.91 ಕೋಟಿ ರೂಪಾಯಿಗಳ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ತೆಲಂಗಾಣದ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿರುವ 49 ವರ್ಷದ ಮಾಧವಿ ಲತಾ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡರು. ಮೊದಲ ಬಾರಿಗೆ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

ಮಾಧವಿ ಲತಾ ಅವರು ಲಿಸ್ಟೆಡ್ ಮತ್ತು ಅನ್ ಲಿಸ್ಟೆಡ್ ಕಂಪನಿಗಳಲ್ಲಿ 25.20 ಕೋಟಿ ಹೂಡಿಕೆ ಸೇರಿದಂತೆ 31.31 ಕೋಟಿ ರೂ.ಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಎಂದು ಅವರು ಘೋಷಿಸಿದರು.


ವಿರಿಂಚಿ ಲಿಮಿಟೆಡ್‌ನಲ್ಲಿ 7.80 ಕೋಟಿ ರೂಪಾಯಿ ಹೂಡಿಕೆಯನ್ನು ಹೊಂದಿರುವ ಅವರು 3.78 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ.

ಮಾಧವಿ ಲತಾ ಅವರ ಪತಿ ವಿರಿಂಚಿ ಲಿಮಿಟೆಡ್‌ನಲ್ಲಿ 52.36 ಕೋಟಿ ರೂ. ಮೌಲ್ಯದ ಷೇರುಗಳನ್ನು ಒಳಗೊಂಡಂತೆ 88.31 ಕೋಟಿ ರೂ. ಚರ ಆಸ್ತಿಯನ್ನು ಹೊಂದಿದ್ದಾರೆ. ಅವರ ಮೂವರು ಅವಲಂಬಿತ ಮಕ್ಕಳು ಸಹ 45 ಕೋಟಿ ರೂ. ಗೂ ಹೆಚ್ಚು ಒಟ್ಟು ಚರ ಆಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು 6.32 ಕೋಟಿ ಸ್ಥಿರಾಸ್ತಿ ಹೊಂದಿದ್ದು, ಪತಿಯ ಸ್ಥಿರಾಸ್ತಿ ಮೌಲ್ಯ 49.59 ಕೋಟಿ ರೂ. ಗಳಾಗಿದೆ.

ಆಸ್ತಿಗಳಲ್ಲಿ ಕೃಷಿಯೇತರ ಭೂಮಿ, ಹೈದರಾಬಾದ್ ಮತ್ತು ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿವೆ.
ಮಾಧವಿ ಲತಾ ಅವರು 90 ಲಕ್ಷ ರೂ., ಅವರ ಪತಿಯು 26.13 ಕೋಟಿ ರೂ. ಇಕ್ವಿಟಿ ಹೊಂದಿದ್ದಾರೆ. 2022-23ರಲ್ಲಿ ಅವರ ಆದಾಯ 3.76 ಲಕ್ಷ ರೂ.ಗಳಾಗಿದ್ದರೆ, 2021-22ರಲ್ಲಿ 1.22 ಕೋಟಿ ರೂ. ಗಳಾಗಿತ್ತು. 2022-23ರಲ್ಲಿ ವಿಶ್ವನಾಥ್ ಅವರ ಆದಾಯ 2.82 ಕೋಟಿ ರೂ. ಗಳಾಗಿದ್ದರೆ, 2021- 22ರಲ್ಲಿ 6.86 ಕೋಟಿ ರೂ.

ಒಂದು ಕ್ರಿಮಿನಲ್ ಕೇಸ್

ಬಿಜೆಪಿ ಅಭ್ಯರ್ಥಿ ಒಂದು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಕಳೆದ ವಾರ ಆಕೆಯ ವಿರುದ್ಧ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಿ ಅಂಬರ್ ಬಜಾರ್ ವೃತ್ತದಲ್ಲಿರುವ ಮಸೀದಿಯಲ್ಲಿ ಕಾಲ್ಪನಿಕ ಬಾಣದ ಚಿತ್ರ ಬಿಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Continue Reading

Lok Sabha Election 2024

Voter ID: ವೋಟರ್‌ ಐಡಿ ಕಾರ್ಡ್‌ ಸಿಕ್ಕಿಲ್ಲವೆ? ಡೋಂಟ್‌ ವರಿ. ಈ 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!

Voter ID: ಕರ್ನಾಟಕ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಶುಕ್ರವಾರ ಮತದಾನ ನಡೆಯಲಿದೆ. ಮತದಾನಕ್ಕೆ ಹೊರಡುವಾಗ ಯಾವುದಾದರೊಂದು ಗುರುತು ಪತ್ರವನ್ನು ಜೊತೆಗೆ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ. ವೋಟರ್ ಐಡಿ ಇಲ್ಲದೇ ಇದ್ದರೆ ಚುನಾವಣಾ ಆಯೋಗ ನಿರ್ದೇಶಿಸಿರುವ ಯಾವುದಾದರೊಂದು ಗುರುತು ಪತ್ರವನ್ನು ತೋರಿಸಿ ಮತದಾನ ಮಾಡಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

By

Voter ID
Koo

ಬೆಂಗಳೂರು: ಲೋಕಸಭಾ ಚುನಾವಣೆ 2024ರ (Lok Sabha election 2024) ಅಂಗವಾಗಿ ರಾಜ್ಯದಲ್ಲಿ (karnataka) ಏಪ್ರಿಲ್ 26ರಂದು ಮೊದಲ ಹಂತದ ಮತದಾನ (voting) ನಡೆಯಲಿದೆ. ಈ ಸಂದರ್ಭದಲ್ಲಿ ಮತದಾರರ ಗುರುತು ಚೀಟಿ (voter id) ಇಲ್ಲದಿದ್ದರೂ ಚಿಂತಿಸಬೇಡಿ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು. ಆದರೆ ಯಾವುದಾರು ಒಂದು ಗುರುತಿನ ಚೀಟಿ ಹೊಂದಿರಲೇಬೇಕು. ಮತದಾರರ ಗುರುತು, ವಾಸಸ್ಥಳ, ಜನನ ಮತ್ತು ಇತರ ವಿವರಗಳನ್ನು ದೃಢೀಕರಿಸುವ ಗುರುತು ಚೀಟಿ ಇದ್ದರೆ ಸಾಕು.

ಮತದಾನವು ನಮ್ಮ ಮೂಲಭೂತ ಹಕ್ಕು ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಜವಾಬ್ದಾರಿಯಾಗಿದೆ. ಇದಕ್ಕಾಗಿ ಅಧಿಕೃತ ಗುರುತಿನ ಚೀಟಿ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾಕೆಂದರೆ ಅದನ್ನು ಹೊಂದಿರುವವರ ಗುರುತು ಮತ್ತು ವಿವರಗಳನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 26ಕ್ಕೆ ಮೊದಲ ಹಂತದ ಮತದಾನ; ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ


ಯಾರು ಅರ್ಹರು?

ಭಾರತದ ಚುನಾವಣಾ ಆಯೋಗದ ಪ್ರಕಾರ ನಾಗರಿಕರು ಈ ಕೆಳಗಿನ ಷರತ್ತುಗಳ ಅಡಿಯಲ್ಲಿ ಮತದಾರರಾಗಲು ಅರ್ಹರಾಗಿರುತ್ತಾರೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬ ನಾಗರಿಕರು ಯಾವುದಾದರೂ ನಿರ್ಧಿಷ್ಟ ಕಾರಣದಿಂದ ಅನರ್ಹಗೊಳಿಸದ ಹೊರತು ಮತದಾರರ ಗುರುತು ಚೀಟಿ ಪಡೆಯಲು ದಾಖಲಾತಿ ನಡೆಸಲು ಅರ್ಹರಾಗಿರುತ್ತಾರೆ.
ಅರ್ಹ ಮತದಾರನ ಸಾಮಾನ್ಯ ನಿವಾಸದ ಸ್ಥಳದಲ್ಲಿ ಮಾತ್ರ ನೋಂದಣಿ ಮಾಡಿಸಬಹುದು ಹಾಗೂ ಒಂದೇ ಸ್ಥಳದಲ್ಲಿ ಮಾತ್ರ ನೋಂದಣಿ ಸಾಧ್ಯ.

ಸಾಗರೋತ್ತರ ಭಾರತೀಯರ ಪಾಸ್‌ಪೋರ್ಟ್‌ನಲ್ಲಿನೀಡಿರುವ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮತದಾರರು ತಮ್ಮ ಮನೆಯ ವಿಳಾಸದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಲಾಗುವುದು.


ವೋಟರ್ ಐಡಿ ಇಲ್ಲದೆ ಮತ ಚಲಾಯಿಸಬಹುದೇ?

ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಅಗತ್ಯವಿದೆ. ಮತ ಚಲಾಯಿಸಲು ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಯಾವುದೇ ಒಂದು ದಾಖಲೆಯನ್ನು ಒದಗಿಸಬೇಕು.

ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ ಸೂಚನೆಗಳ ಪ್ರಕಾರ ಮತದಾರರ ಗುರುತಿನ ಚೀಟಿ ಇಲ್ಲದೆಯೂ ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರೆಗೆ ಮತ ಚಲಾಯಿಸಲು ಮತದಾರರು ಅರ್ಹನಾಗಿರುತ್ತಾರೆ.

ಹೆಸರಿದೆಯೇ ಪರಿಶೀಲಿಸಿ

ಮತದಾನ ಪ್ರಕ್ರಿಯೆಯಲ್ಲಿ (ಇಸಿಐ) ಪಾಲ್ಗೊಳ್ಳುವ ಮೊದಲು ಭಾರತದ ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂದು ಪರಿಶೀಲಿಸಬೇಕು. ಮತಪತ್ರವನ್ನು ಚಲಾಯಿಸುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸುವುದು ನಿರ್ಣಾಯಕವಾಗಿದೆ ಏಕೆಂದರೆ ಅದರಲ್ಲಿ ನೀವು ಮತ ಚಲಾಯಿಸುವ ಅರ್ಹತೆಯನ್ನು ದೃಢೀಕರಿಸುತ್ತದೆ.

ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೆ ಚುನಾವಣಾ ಆಯೋಗವು ಗೊತ್ತುಪಡಿಸಿದ ಪರ್ಯಾಯ ದಾಖಲೆಗಳನ್ನು ಮತದಾರರು ಬಳಸಬಹುದು.

ವೋಟರ್‌ ಐಡಿ ಇಲ್ಲದಿದ್ದರೆ ಈ ದಾಖಲೆ ಸಾಕು

ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಗುರುತಿಗಾಗಿ ಎಪಿಕ್ ಅಥವಾ ಮತದಾರರ ಐಡಿ ಹೊಂದಿಲ್ಲದಿದ್ದರೆ ಸಾರ್ವತ್ರಿಕ ಚುನಾವಣೆಯ ವೇಳೆ ವೋಟರ್ ಐಡಿ ಇಲ್ಲದೆಯೇ ಮತವನ್ನು ಚಲಾಯಿಸಲು ಬಳಸಬಹುದಾದ ದಾಖಲೆಗಳು ಇಂತಿವೆ. ಈ ದಾಖಲೆಗಳನ್ನು ಮತದಾನದ ವೇಳೆ ಗುರುತು ಚೀಟಿಯಾಗಿ ಮತದಾನ ಕೇಂದ್ರದಲ್ಲಿ ತೋರಿಸಬಹುದಾಗಿದೆ.

  1. 1. ಆಧಾರ್ ಕಾರ್ಡ್
  2. 2. MNREGA ಜಾಬ್ ಕಾರ್ಡ್
  3. 3. ಬ್ಯಾಂಕ್/ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು
  4. 4. ಕಾರ್ಮಿಕ ಸಚಿವಾಲಯದ ಯೋಜನೆಯಡಿ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
  5. 5. ಚಾಲನಾ ಪರವಾನಗಿ
  6. 6. ಪ್ಯಾನ್ ಕಾರ್ಡ್
  7. 7. NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್
  8. 8. ಭಾರತೀಯ ಪಾಸ್ ಪೋರ್ಟ್
  9. 9. ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
  10. 10. ಕೇಂದ್ರ/ ರಾಜ್ಯ ಸರ್ಕಾರ/ ಪಿಎಸ್‌ಯು/ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
  11. 11. ಎಂಪಿಗಳು/ ಎಂಎಲ್‌ಎಗಳು/ ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು
  12. 12. ವಿಶಿಷ್ಟ ಅಂಗವೈಕಲ್ಯ ಐಡಿ (UDID) ಕಾರ್ಡ್

ನೋಂದಣಿ ಸ್ಥಿತಿ ಪರಿಶೀಲನೆ ಹೇಗೆ?

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ಮಾತ್ರ ಮತ ಚಲಾಯಿಸಬಹುದು. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ ಸೈಟ್‌ನಲ್ಲಿ https://electoralsearch.eci.gov.in ಗೆ ಲಾಗಿನ್ ಆಗಿ ನೋಡಬಹುದು. ಅಲ್ಲದೇ ಮತದಾರರ ಸಹಾಯವಾಣಿ 1950ಕ್ಕೆ ಕರೆಯೂ ಪರಿಶೀಲನೆ ನಡೆಸಬಹುದಾಗಿದೆ.

Continue Reading
Advertisement
Lok Sabha Election
ಕರ್ನಾಟಕ1 min ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ11 mins ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

IPL 2024
ಕ್ರೀಡೆ14 mins ago

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

Haji Akbar Afridi
ವಿದೇಶ17 mins ago

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Tata Motors gets approval for 333 patents
ದೇಶ22 mins ago

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Neha Murder Case in hubblli
ಹುಬ್ಬಳ್ಳಿ35 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ41 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ICICI Bank
ದೇಶ42 mins ago

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

Kannada Serials TRP Lakshmi Nivasa In Top Amruthadhaare in Top 5
ಕಿರುತೆರೆ49 mins ago

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Lok Sabha Election 2024 No names of election officials in voter list Protest in front of the polling booth
Lok Sabha Election 202453 mins ago

Lok Sabha Election 2024: ವೋಟರ್‌ ಲಿಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳ ಹೆಸರೇ ಇಲ್ಲ; ಮತಗಟ್ಟೆ ಮುಂದೆಯೇ ಪ್ರೊಟೆಸ್ಟ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ35 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ41 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ4 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20246 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌