ವಿಸ್ತಾರ ಸಂಪಾದಕೀಯ: ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಹಣ ಆತಂಕಕಾರಿ - Vistara News

ದೇಶ

ವಿಸ್ತಾರ ಸಂಪಾದಕೀಯ: ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಹಣ ಆತಂಕಕಾರಿ

Vistara editorial: ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು, ಆಯೋಗದ ಅಧಿಕಾರಿಗಳು ಕೋಟ್ಯಂತರ ರೂ. ವಶಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಚುನಾವಣಾ ಸುಧಾರಣೆ, ಮತದಾರರ ಸಾಕ್ಷರತೆ ಹೆಚ್ಚಿದಂತೆ ಈ ಪ್ರಮಾಣ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು; ಅದು ಹುಸಿಯಾಗಿದೆ.

VISTARANEWS.COM


on

Vistara editorial ವಿಸ್ತಾರ ಸಂಪಾದಕೀಯ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ಸಲದ ಲೋಕಸಭೆ ಚುನಾವಣೆ (Lok Sabha Election 2024) ಘೋಷಣೆಯಾದಾಗಿನಿಂದ ಈವರೆಗೆ ಚುನಾವಣಾ ಆಯೋಗದ ಅಧಿಕಾರಿಗಳು ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಹಣವನ್ನು ಜಪ್ತಿ ಮಾಡಿದ್ದಾರೆ. ಚುನಾವಣಾ ಆಯೋಗದ (Election Commission) ಅಧಿಕಾರಿಗಳು ಇದುವರೆಗೆ ದಾಖಲೆ ಇಲ್ಲದೆ 4,650 ಕೋಟಿ ರೂ. ಜಪ್ತಿ ಮಾಡಿರುವ ಕುರಿತು ಆಯೋಗ ಮಾಹಿತಿ ನೀಡಿದೆ. “ಇದು ದೇಶದ ಲೋಕಸಭೆ ಚುನಾವಣೆಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತದ ಹಣದ ದಾಖಲೆ. ಅದರಲ್ಲೂ, ಮಾರ್ಚ್‌ 1ರಿಂದ ಇದುವರೆಗೆ ಅಧಿಕಾರಿಗಳು ನಿತ್ಯ ಸರಾಸರಿ 100 ಕೋಟಿ ರೂ. ಜಪ್ತಿ ಮಾಡಿದಂತಾಗಿದೆ” ಎಂದು ಆಯೋಗ ಹೇಳಿದೆ.

2019ರಲ್ಲಿ ಚುನಾವಣೆ ಆಯೋಗವು ಹೀಗೆ ದಾಖಲೆಯಿಲ್ಲದ 3,475 ಕೋಟಿ ರೂ. ವಶಪಡಿಸಿಕೊಂಡಿತ್ತು. ನಗದು, ಉಚಿತ ಕೊಡುಗೆಗಳು, ಉಪಕರಣಗಳು, ಡ್ರಗ್ಸ್‌, ಚಿನ್ನಾಭರಣ ಸೇರಿ ಇಷ್ಟೊಂದು ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 1,279 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ವಶಪಡಿಸಿಕೊಂಡಿದ್ದರೆ, ಈ ಬಾರಿ 2,068 ಕೋಟಿ ರೂ. ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು, ಆಯೋಗದ ಅಧಿಕಾರಿಗಳು ಕೋಟ್ಯಂತರ ರೂ. ವಶಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಚುನಾವಣಾ ಸುಧಾರಣೆ, ಮತದಾರರ ಸಾಕ್ಷರತೆ ಹೆಚ್ಚಿದಂತೆ ಈ ಪ್ರಮಾಣ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು; ಅದು ಹುಸಿಯಾಗಿದೆ. ಹೆಚ್ಚಿನ ಕಡೆ ಹಾಕಲಾದ ಚೆಕ್‌ಪೋಸ್ಟ್‌ಗಳು, ಮಾಹಿತಿದಾರರು ಹಾಗೂ ಅಧಿಕಾರಿಗಳ ಹದ್ದಿನ ಕಣ್ಣಿನಿಂದಾಗಿ ಹಲವು ಪ್ರಕರಣಗಳು ಸಿಕ್ಕಿಬಿದ್ದಿವೆ. ಆದರೂ ಸಿಗದೇ ತಪ್ಪಿಸಿಕೊಳ್ಳುತ್ತಿರುವುದು ಇದರ ಹತ್ತು ಪಟ್ಟು, ನೂರು ಪಟ್ಟು ಇರಬಹುದು. ಚುನಾವಣೆಗೆ ನಿಲ್ಲುವ ಒಬ್ಬ ಅಭ್ಯರ್ಥಿ ಪ್ರಚಾರಕ್ಕೆ ಎಷ್ಟು ಹಣ ವೆಚ್ಚ ಮಾಡಬಹುದು? ಇದಕ್ಕೆ ಮಿತಿಯನ್ನೂ ಚುನಾವಣಾ ಆಯೋಗವೇ ವಿಧಿಸಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ 95 ಲಕ್ಷ ರೂ., ವಿಧಾನಸಭೆ ಚುನಾವಣೆ ಅಭ್ಯರ್ಥಿ 40 ಲಕ್ಷ ರೂ. ವೆಚ್ಚ ಮಾಡಬಹುದು. ಇದು ಚುನಾವಣಾ ಅಭ್ಯರ್ಥಿ ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಜಾಹೀರಾತುಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು, ವಾಹನಗಳು ಮತ್ತು ಜಾಹೀರಾತುಗಳ ಮೇಲಿನ ವೆಚ್ಚಗಳನ್ನಲ್ಲೆ ಒಳಗೊಂಡು ಮಾಡಬಹುದಾದ ಖರ್ಚು.

ಪ್ರಜಾಪ್ರತಿನಿಧಿ ಕಾಯ್ದೆ (RPA)- 1951ರ ಸೆಕ್ಷನ್ 77ರ ಅಡಿಯಲ್ಲಿ, ಪ್ರತಿಯೊಬ್ಬ ಅಭ್ಯರ್ಥಿಯೂ ತಾವು ನಾಮನಿರ್ದೇಶನಗೊಂಡ ದಿನಾಂಕ ಮತ್ತು ಫಲಿತಾಂಶದ ಘೋಷಣೆಯ ದಿನಾಂಕದ ನಡುವೆ ಮಾಡಿದ ಎಲ್ಲಾ ವೆಚ್ಚಗಳ ಸರಿಯಾದ ಲೆಕ್ಕ ಇಟ್ಟುಕೊಂಡು, ಚುನಾವಣೆ ಮುಗಿದ 30 ದಿನಗಳ ಒಳಗೆ ಇದರ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕು. ತಪ್ಪಾಗಿ ವಿವರ ನೀಡಿದರೆ ಅಥವಾ ಮಿತಿ ಮೀರಿ ಖರ್ಚು ಮಾಡಿದರೆ RPA 1951ರ ಸೆಕ್ಷನ್ 10A ಅಡಿಯಲ್ಲಿ ಮೂರು ವರ್ಷಗಳವರೆಗೆ ಅಭ್ಯರ್ಥಿಯನ್ನು ಆಯೋಗ ಅನರ್ಹಗೊಳಿಸಬಹುದಾಗಿದೆ.

ಆದರೆ ಎಂದಾದರೂ ಈ ಮಿತಿ ಪಾಲನೆಯಾದದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾದದ್ದು ಇದೆಯೇ? ಇಲ್ಲವೇ ಇಲ್ಲ ಎನ್ನಬಹುದು. ಅಭ್ಯರ್ಥಿಗಳೇನೋ ಖರ್ಚುವೆಚ್ಚದ ವಿವರಗಳನ್ನು ಕೊಡುತ್ತಾರೆ. ಪ್ರಾಮಾಣಿಕವಾಗಿ ನೀಡುವವರು ಬೆರಳೆಣಿಕೆಯಷ್ಟು ಇರಬಹುದು. ಲೆಕ್ಕ ನೀಡದ ವೆಚ್ಚವೇ ಬಹಳ. ಶಿಕ್ಷೆ ನೀಡಬಹುದಾದ ಆಯೋಗ ಆ ಬಗ್ಗೆ ಕ್ರಮ ತೆಗೆದುಕೊಂಡ ದಾಖಲೆಯಿಲ್ಲ. ಇಲ್ಲಿ ಇನ್ನೂ ಒಂದು ದೋಷವಿದೆ. ರಾಜಕೀಯ ಪಕ್ಷಗಳು ಮಾಡಬಹುದಾದ ಖರ್ಚಿಗೆ ಯಾವುದೇ ಮಿತಿಯಿಲ್ಲ. ಇದನ್ನು ಪಕ್ಷದ ಅಭ್ಯರ್ಥಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಮುಗಿದ 90 ದಿನಗಳ ಒಳಗೆ ಚುನಾವಣಾ ವೆಚ್ಚದ ಹೇಳಿಕೆಯನ್ನು ಆಯೋಗಕ್ಕೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಬಹುದಾದ ಯಾವುದೇ ವಿಧಾನವಿಲ್ಲ. ಹೀಗಾಗಿ ವೆಚ್ಚಗಳು ಕಾನೂನು ಕ್ರಮದಡಿ ಬಾರದೆ ತೂರಿಹೋಗುತ್ತಿವೆ. ಇದುವರೆಗೂ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯಿತ್ತು. ಇದೀಗ ಅದನ್ನೂ ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಇದರಲ್ಲಿರುವ ಅನಾಮಿಕತೆಯ ಸೌಲಭ್ಯವೇ ಅದಕ್ಕೆ ಮುಳುವಾಗಿದೆ. ರದ್ದುಪಡಿಸಿದ ನ್ಯಾಯಾಲಯ ಅದಕ್ಕೆ ಪರ್ಯಾಯವನ್ನು ಸೂಚಿಸಿಲ್ಲ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಬಾಂಬರ್‌ಗಳನ್ನು ಸೆರೆ ಹಿಡಿದ ಎನ್‌ಐಎ ಸಾಹಸ ಶ್ಲಾಘನೀಯ

ಇದು ಹೀಗೇ ಮುಂದುವರಿದರೆ ಚುನಾವಣೆ ವ್ಯವಸ್ಥೆಯೇ ನೆಲಕಚ್ಚಲಿದೆ. ಚುನಾವಣೆ ಎಂದರೇ ಹಣ ಹಂಚಿಕೆ, ಅಕ್ರಮ ಎಂಬ ಚಿತ್ರಣ ಕಾಯಂ ಆಗಲಿದೆ. ಚುನಾವಣೆ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ.

ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು. ಮತದಾರರು ಕೂಡ ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮವಾಗದು. ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ನಾವೇನು ಫ್ರಿಡ್ಜ್‌ನಲ್ಲಿ ಇಡಲು ಅಣುಬಾಂಬ್‌ ತಯಾರಿಸಿಲ್ಲ; ಅಯ್ಯರ್‌ ‘ಪಾಕ್‌’ ಹೇಳಿಕೆಗೆ ಯೋಗಿ ಖಡಕ್‌ ಉತ್ತರ

ಪಾಕಿಸ್ತಾನದ ಬಳಿ ಅಣುಬಾಂಬ್‌ ಇವೆ ಎಂದು ಎಚ್ಚರಿಸಿದ್ದ ಕಾಂಗ್ರೆಸ್‌ ನಾಯಕರ ಮಣಿಶಂಕರ್‌ ಅಯ್ಯರ್‌ ಅವರಿಗೆ ಯೋಗಿ ಆದಿತ್ಯನಾಥ್‌ ತಿರುಗೇಟು ನೀಡಿದರು. “ನಾವೇನೂ ಅಣುಬಾಂಬ್‌ಗಳನ್ನು ಫ್ರಿಡ್ಜ್‌ನಲ್ಲಿ ಇರಿಸಲು ತಯಾರಿಸಿಲ್ಲ. ಇದು ಹೊಸ ಭಾರತ. ನಮ್ಮ ತಂಟೆಗೆ ಬಂದರೆ ಯಾರನ್ನೂ ನಾವು ಬಿಡುವುದಿಲ್ಲ. ಮನೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ಭಾರತ ಕಳೆದ 10 ವರ್ಷಗಳಲ್ಲಿ ಕಂಡುಕೊಂಡಿದೆ” ಎಂದು ಹೇಳಿದರು.

VISTARANEWS.COM


on

Yogi Adityanath
Koo

ನವದೆಹಲಿ: ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ಅವರು ಪಾಕಿಸ್ತಾನದ ಕುರಿತು ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಪಾಕಿಸ್ತಾನದ ಬಳಿ ಅಣುಬಾಂಬ್‌ಗಳು ಇವೆ, ನಾವು ಆ ರಾಷ್ಟ್ರವನ್ನು ಗೌರವಿಸಬೇಕು” ಎಂದು ಮಣಿಶಂಕರ್‌ ಅಯ್ಯರ್‌ ನೀಡಿದ ಹೇಳಿಕೆಯಿಂದ ಖುದ್ದು ಕಾಂಗ್ರೆಸ್‌ ಪಕ್ಷವೇ ಅಂತರ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ, ಮಣಿಶಂಕರ್‌ ಅಯ್ಯರ್‌ ಅವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಅವರು ತಿರುಗೇಟು ನೀಡಿದ್ದು, “ನಮ್ಮ ಬಳಿಯ ಅಣುಬಾಂಬ್‌ಗಳು ಫ್ರಿಡ್ಜ್‌ನಲ್ಲಿ ಇಡಲು ತಯಾರಿಸಿದ್ದೇವೆಯೇ” ಎಂದಿದ್ದಾರೆ.

ಇಂಡಿಯಾ ಟಿವಿ ಚಾನೆಲ್‌ನ ಆಪ್‌ ಕಿ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಿ ಆದಿತ್ಯನಾಥ್‌, ಮಣಿಶಂಕರ್‌ ಅಯ್ಯರ್‌ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದರು. “ನಾವೇನೂ ಫ್ರಿಡ್ಜ್‌ನಲ್ಲಿ ಇರಿಸಲು ಅಣುಬಾಂಬ್‌ ತಯಾರಿಸಿಲ್ಲ. ಇದು ನವ ಭಾರತ. ಹೊಸ ಭಾರತವು ಯಾರ ತಂಟೆಗೂ ಹೋಗುವುದಿಲ್ಲ. ಹಾಗಂತ, ನಮ್ಮ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ. ನಮ್ಮ ತಂಟೆಗೆ ಬಂದವರ ಮನೆಗೆ ನುಗ್ಗಿ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಹೊಂದಿದ್ದೇವೆ” ಎಂದು ಹೇಳಿದರು.

“ಮನೆಗೆ ನುಗ್ಗಿ ಪ್ರತ್ಯುತ್ತರ ನೀಡುವುದನ್ನು ಭಾರತ ಸಾಬೀತುಪಡಿಸಿದೆ. ಇದಕ್ಕೂ ಮೊದಲು ದೇಶದ ಹಲವೆಡೆ ಸ್ಫೋಟಗಳು ಸಂಭವಿಸಿದವು. ಮುಂಬೈ, ಅಯೋಧ್ಯೆ, ದೆಹಲಿ, ಕಾಶಿ, ಲಖನೌ, ವಾರಾಣಸಿ, ಗೋರಖ್‌ಪುರ ಸೇರಿ ಹಲವೆಡೆ ದಾಳಿಗಳು ನಡೆದವು. ದೇಶದ ಸಂಸತ್‌ ಮೇಲೆಯೇ ದಾಳಿ ನಡೆಯಿತು. ವಿವಿಧ ಸಂದರ್ಭಗಳಲ್ಲಿ ಹಲವು ರೀತಿಯ ದಾಳಿ ನಡೆದವು. ಆದರೆ, ಕಳೆದ 10 ವರ್ಷಗಳಲ್ಲಿ ಉಗ್ರವಾದ, ನಕ್ಸಲ್‌ವಾದವನ್ನು ನಿಗ್ರಹಿಸಲಾಗಿದೆ. ಭಾರತದಲ್ಲಿ ಜೋರಾಗಿ ಪಟಾಕಿ ಸಿಡಿದರೂ, ಇದರ ಹಿಂದೆ ನಮ್ಮ ಕೈವಾಡವಿಲ್ಲ ಎಂದು ಪಾಕಿಸ್ತಾನ ಹೇಳುತ್ತದೆ. ಇದು ಭಾರತದ ತಾಕತ್ತು. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಅಂತಹ ಸಾಮರ್ಥ್ಯ ಬೆಳೆಸಿಕೊಂಡಿದೆ” ಎಂದು ತಿಳಿಸಿದರು.

ಮಣಿಶಂಕರ್‌ ಅಯ್ಯರ್‌ ಹೇಳಿದ್ದೇನು?

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದರು.

ಇದನ್ನೂ ಓದಿ: ಪಿತ್ರೋಡಾ ‘ಸಂಪತ್ತು ಹಂಚಿಕೆ’ ಹೇಳಿಕೆ, ಮಣಿಶಂಕರ್‌ ಅಯ್ಯರ್‌ ಪಾಕ್‌ ಪ್ರೇಮ; ಕಾಂಗ್ರೆಸ್‌ಗೆ ಈಗ ತೀವ್ರ ಫಜೀತಿ!

Continue Reading

ದೇಶ

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Maggi Tragedy: ಡೆಹ್ರಾಡೂನ್‌ನ ಸೀಮಾ ಎಂಬುವರು ಪತಿ, ಮೂವರು ಮಕ್ಕಳ ಜತೆ ತಮ್ಮ ತವರು ಮನೆ ಇರುವ ರಾಹುಲ್‌ ನಗರಕ್ಕೆ ಆಗಮಿಸಿದರು. ಕಳೆದ ಗುರುವಾರ (ಮೇ 9) ರಾತ್ರಿ ಮೂವರು ಮಕ್ಕಳು ಸೇರಿ ಎಲ್ಲರೂ ಮ್ಯಾಗಿ ಹಾಗೂ ಅನ್ನ ಊಟ ಮಾಡಿದ್ದಾರೆ. ರಾತ್ರಿ ಮಲಗಿದವರೇ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ.

VISTARANEWS.COM


on

Maggi Tragedy
Koo

ಲಖನೌ: ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ (Pilibhit) ಮ್ಯಾಗಿ ಸೇವಿಸಿ 10 ವರ್ಷದ ಬಾಲಕನೊಬ್ಬ (Maggi Tragedy) ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಜಾರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಹುಲ್‌ ನಗರದಲ್ಲಿ (Rahul Nagar) ಘಟನೆ ನಡೆದಿದೆ. ಪುರಾನ್‌ಪುರದ ಸಿಎಚ್‌ಸಿಯಲ್ಲಿ ಐವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಡೆಹ್ರಾಡೂನ್‌ನ ಸೀಮಾ ಎಂಬುವರು ಪತಿ, ಮೂವರು ಮಕ್ಕಳ ಜತೆ ತಮ್ಮ ತವರು ಮನೆ ಇರುವ ರಾಹುಲ್‌ ನಗರಕ್ಕೆ ಆಗಮಿಸಿದರು. ಕಳೆದ ಗುರುವಾರ (ಮೇ 9) ರಾತ್ರಿ ಮೂವರು ಮಕ್ಕಳು ಸೇರಿ ಎಲ್ಲರೂ ಮ್ಯಾಗಿ ಹಾಗೂ ಅನ್ನ ಊಟ ಮಾಡಿದ್ದಾರೆ. ರಾತ್ರಿ ಮಲಗಿದವರೇ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗೆ ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕನು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಚಿಕನ್‌ ಶವರ್ಮಾ ತಿಂದು ಯುವಕ ಸಾವು

ಮಹಾರಾಷ್ಟ್ರದಲ್ಲಿ ಕೆಲ ದಿನಗಳ ಹಿಂದಷ್ಟೇ ಚಿಕನ್‌ ಶವರ್ಮಾ ಸೇವಿಸಿ 19 ವರ್ಷದ ಯುವಕ ಮೃತಪಟ್ಟಿದ್ದ. ಮೃತ ಯುವಕನನ್ನು ಪ್ರಥಮೇಶ್‌ ಭೋಕ್ಸೆ ಎಂದು ಗುರುತಿಸಲಾಗಿತ್ತು. ಮೇ 3ರಂದು ಸಾಯಂಕಾಲ ಮುಂಬೈನ ಮಾಂಖುರ್ದ್‌ ಪ್ರದೇಶದಲ್ಲಿರುವ ಬೀದಿ ಬದಿಯ ಅಂಗಡಿಯೊಂದಕ್ಕೆ ತೆರಳಿದ ಯುವಕನು ಚಿಕನ್‌ ಶವರ್ಮಾ ತಿಂದಿದ್ದಾನೆ. ಇದಾದ ಬಳಿಕ ಆತನು ಎಂದಿನಂತೆ ಮನೆಗೆ ತೆರಳಿದ್ದಾನೆ. ಮನೆಗೆ ತೆರಳಿದ ಮರುದಿನವೇ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪದೇಪದೆ ವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನು ಮಂಗಳವಾರ (ಮೇ 7) ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಬೀದಿ ಬದಿ ಅಂಗಡಿ ಮಾಲೀಕರು ಚಿಕನ್‌ ಶವರ್ಮಾ ತಯಾರಿಸುವಾಗ ಅದಕ್ಕೆ ಕೊಳೆತ ಮಾಂಸವನ್ನು ಬೆರೆಸಿದ್ದೇ ಯುವಕ ಮೃತಪಟ್ಟು, ಐವರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿತ್ತು. ಐವರು ಅಸ್ವಸ್ಥರು ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರಥಮೇಶ್‌ ಭೋಕ್ಸೆ ಸಾವಿನ ಬಳಿಕ ಅಂಗಡಿ ಮಾಲೀಕರ ವಿರುದ್ಧ ಆತನ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಇಬ್ಬರು ಅಂಗಡಿ ಮಾಲೀಕರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Food Poisoning: ಮದುವೆ ಮನೆ ಊಟ ತಿಂದವರಿಗೆ ವಾಂತಿ, ಭೇದಿ; ನೂರಾರು ಮಂದಿ ಅಸ್ವಸ್ಥ

Continue Reading

ವೈರಲ್ ನ್ಯೂಸ್

Viral News: ಲಾರಿಗೆ ಡಿಕ್ಕಿ ಹೊಡೆಯಿತು ಕಂತೆ ಕಂತೆ ನಗದು ಸಾಗಿಸುತ್ತಿದ್ದ ವ್ಯಾನ್‌; ನೋಟಿನ ರಾಶಿ ಹೇಗಿದೆ ನೋಡಿ

Viral News: ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರ ಪ್ರದೇಶ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ 7 ಕೋಟಿ ರೂ. ನಗದು ಪತ್ತೆ ಹಚ್ಚಿದ್ದಾರೆ. ಹಣ ಸಾಗಿಸುತ್ತಿದ್ದ ವ್ಯಾನ್‌ ಲಾರಿಗೆ ಡಿಕ್ಕಿ ಹೊಡೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕಂತೆ ಕಂತೆ ನೋಟನ್ನು ತೋರಿಸುವ ವಿಡಿಯೊ ವೈರಲ್‌ ಆಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

VISTARANEWS.COM


on

Viral News
Koo

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಜತೆಗೆ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಈ ಮಧ್ಯೆ ಲೆಕ್ಕವಿಲ್ಲದ ಸುಮಾರು 7 ಕೋಟಿ ರೂ. ನಗದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸರು ಈ ಬೃಹತ್‌ ಮೊತ್ತದ ನಗದನ್ನು ವಶ ಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಈ ನಗದನ್ನು ಸಾಗಿಸುತ್ತಿದ್ದ ವ್ಯಾನ್‌ ಅಪಘಾತಕ್ಕೀಡಾದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕಂತೆ ಕಂತೆ ನೋಟನ್ನು ತೋರಿಸುವ ವಿಡಿಯೊ ವೈರಲ್‌ ಆಗಿದೆ (Viral News).

ಪತ್ತೆಯಾಗಿದ್ದು ಹೇಗೆ?

ವಿಶೇಷ ಎಂದರೆ ಈ ವ್ಯಾನ್‌ ಅಪಘಾತಕ್ಕೀಡಾಗದಿದ್ದರೆ ಈ ಕೃತ್ಯ ಬೆಳಕಿಗೆ ಬರುತ್ತಿರಲಿಲ್ಲ. ಲೆಕ್ಕವಿಲ್ಲದ ರಾಶಿ ರಾಶಿ ಹಣವನ್ನು ಒಳಗೊಂಡಿದ್ದ ವ್ಯಾನ್‌ ವಿಜಯವಾಡದಿಂದ ವಿಶಾಖಪಟ್ಟಣಂಗೆ ತೆರಳುತ್ತಿತ್ತು. ಅಲ್ಲಿಯವರೆಗೆ ಕ್ರಿಮಿನಲ್‌ಗಳು ಅಂದುಕೊಂಡಂತೆಯೇ ಎಲ್ಲವೂ ನಡೆದಿತ್ತು. ಕಾನೂನು ಕಣ್ತಪ್ಪಿಸಿ ಬಚಾವಾಗಬಹುದು ಎಂದುಕೊಳ್ಳುವಷ್ಟರಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಅನಂತಪಲ್ಲಿ ಟೋಲ್‌ ಪ್ಲಾಜಾದ ಬಳಿ ವ್ಯಾನ್‌ ಲಾರಿಯೊಂದಕ್ಕೆ ಡಿಕ್ಕಿ ಹೊಡೆಯುವ ಮೂಲಕ ಇವರ ಬಂಡವಾಳ ಬಯಲಾಗಿತ್ತು, ಕೃತ್ಯ ಬೆಳಕಿಗೆ ಬಂದಿತ್ತು. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ಗೋಪಾಲಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದ್ದ ಹಣದ ಕಂತೆ

ವಿಶೇಷ ಎಂದರೆ ವ್ಯಾನ್‌ನಲ್ಲಿದ್ದ ಈ ಅಕ್ರಮ ದುಡ್ಡನ್ನು ಮೊದಲು ಗಮನಿಸಿದ್ದು ಸಾರ್ವಜನಿಕರು. ಲಾರಿ ಮತ್ತು ವ್ಯಾನ್‌ ಪರಸ್ಪರ ಡಿಕ್ಕಿ ಹೊಡೆದಾಗ ಸ್ಥಳೀಯರು ನೆರವಿಗೆ ಧಾವಿಸಿದ್ದರು. ಈ ವೇಳೆ ವ್ಯಾನ್‌ನ ಏಳು ಕಾಟನ್‌ ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ ನೋಟಿನ ಕಂತೆ ಕಂಡು ಬಂದಿದೆ. ಇದುವರೆಗೆ ಒಂದೇ ಬಾರಿ ಅಷ್ಟೊಂದು ನೋಟನ್ನು ನೋಡಿರದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. 500 ರೂ., 200 ರೂ., 100 ರೂ.ಗಳ ರಾಶಿಯೇ ಅಲ್ಲಿತ್ತು. ಕೂಡಲೇ ಅವರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರು.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಈ ನಗದನ್ನು ವಶಪಡಿಸಿಕೊಂಡಿದ್ದು, ಇದರ ಮೂಲವನ್ನು ಶೋಧಿಸಲು ತನಿಖೆ ನಡೆಸುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಾಳೆ (ಮೇ 13) ಮತದಾನ ನಡೆಯಲಿರುವುದರಿಂದ ಆ ನಿಟ್ಟಿನಲ್ಲಿಯೂ ತನಿಖೆ ಆರಂಭಿಸಲಾಗಿದೆ. ಸದ್ಯ ವ್ಯಾನ್‌ನಲ್ಲಿ ಪೇರಿಸಿಟ್ಟ ನೋಟುಗಳ ಕಂತೆಯನ್ನು ತೋರಿಸುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Viral News: ಕುಡಿದ ಮತ್ತಿನಲ್ಲಿ ಪೊಲೀಸ್‌ ಪೇದೆಯ ಕೈ ಕಚ್ಚಿ, ಬಟ್ಟೆ ಹರಿದು ಹಲ್ಲೆ ಮಾಡಿದ ಮಹಿಳೆಯರು

ಕೆಲವು ದಿನಗಳ ಹಿಂದೆಯಷ್ಟೇ ಆಂಧ್ರ ಪ್ರದೇಶದ ಎನ್‌ಟಿಆರ್‌ ಜಿಲ್ಲೆಯ ಚೆಕ್‌ಪೋಸ್ಟ್‌ ಒಂದರ ಬಳಿ ಸುಮಾರು 8 ಕೋಟಿ ರೂ. ನಗದನ್ನು ಒಳಗೊಂಡ ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಪೈಪ್‌ ತುಂಬಿದ್ದ ಲಾರಿಯೊಂದರಲ್ಲಿ ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ಈ ಘಟನೆ ನಡೆದಿರುವುದು ಕಳವಳ ಹುಟ್ಟು ಹಾಕಿದೆ.

ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ (ಮೇ 6) ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಸರಣಿ ದಾಳಿ ನಡೆಸಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಮುಖಂಡ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮನೆಯಲ್ಲಿ ಲೆಕ್ಕವಿಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು.

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಸಾಧನೆ ಶ್ಲಾಘನೀಯ

ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಅನುಕೂಲಗಳವಾಗಿವೆ. ಇದು ಹವಾಮಾನ ಬದಲಾವಣೆ ನಿಯಂತ್ರಣಕ್ಕೂ ಕಾರಣವಾಗಲಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಸಾಧನೆಯಾಗಿದೆ.

VISTARANEWS.COM


on

Solar
Koo

ಹವಾಮಾನ ಬದಲಾವಣೆ (Climate Change), ಜಾಗತಿಕ ತಾಪಮಾನ ಏರಿಕೆ ಕುರಿತು ಜಗತ್ತಿನಾದ್ಯಂತ ಚರ್ಚೆಗಳು, ಪರಿಹಾರಕ್ಕಾಗಿ ಯೋಜನೆ ರೂಪಿಸುವುದು ಸೇರಿ ಹತ್ತಾರು ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಚಳಿಗಾಲದಲ್ಲೂ ಬಿರುಬಿಸಿಲು, ಬೇಸಿಗೆಯಲ್ಲಿ ಅಕಾಲಿಕ ಮಳೆ, ಕಾಡುಗಳು ಇರುವ ಪ್ರದೇಶದಲ್ಲೂ ಹೆಚ್ಚಿದ ತಾಪ ಸೇರಿ ಹಲವು ಪರಿಣಾಮಗಳು ಹವಾಮಾನ ಬದಲಾವಣೆಗೆ ಹಿಡಿದ ಕನ್ನಡಿಯೇ ಆಗಿದೆ. ಇದರ ಬೆನ್ನಲ್ಲೇ, ಭಾರತವು ಸೌರ ವಿದ್ಯುತ್‌ ಉತ್ಪಾದನೆಯಲ್ಲಿ (Solar Power Generation) ಐತಿಹಾಸಿಕ ಸಾಧನೆಯೊಂದನ್ನು ಮಾಡಿದೆ. ಜಪಾನ್‌ಅನ್ನೂ ಹಿಂದಿಕ್ಕಿ, ಜಗತ್ತಿನಲ್ಲೇ ಹೆಚ್ಚು ಸೌರ ವಿದ್ಯುತ್‌ ಉತ್ಪಾದನೆ ಮಾಡುವ ಮೂರನೇ ರಾಷ್ಟ್ರ ಎಂಬ ಖ್ಯಾತಿಯನ್ನು ಭಾರತ ಗಳಿಸಿದೆ. ಹಾಗಾಗಿ, ಇದು ಮರುಮಾತೇ ಇಲ್ಲದೆ ಶ್ಲಾಘನೀಯ ಸಾಧನೆ ಎಂದು ಹೇಳಬಹುದಾಗಿದೆ.

2015ರಲ್ಲಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು 9ನೇ ಸ್ಥಾನದಲ್ಲಿತ್ತು. ಆದರೆ, 2015ರಿಂದ 2023ರ ಅವಧಿಯಲ್ಲಿ ಭಾರತವು ಆರು ಪಟ್ಟು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದೇ ಮೂರನೇ ಸ್ಥಾನಕ್ಕೇರಲು ಕಾರಣವಾಗಿದೆ. 2023ರಲ್ಲಿ ಜಾಗತಿಕ ವಿದ್ಯುತ್‌ ವಲಯದಲ್ಲಿ ದಾಖಲೆಯ ಶೇ. 5.5ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ. ಆದರೆ, ಭಾರತದಲ್ಲಿ ಸೌರ ಶಕ್ತಿಯಿಂದ ಶೇ. 5.8ರಷ್ಟು ವಿದ್ಯುತ್‌ ಉತ್ಪಾದಿಸಲಾಗಿದೆ ಎಂದು ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‌ (Ember) ತಿಳಿಸಿದೆ. ಇದು ಭಾರತವು ಸೌರ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸುವಲ್ಲಿ ಕಂಡುಕೊಂಡರುವ ವೇಗಕ್ಕೆ ಸಾಕ್ಷಿಯಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯು 2015ರಲ್ಲಿದ್ದ ಶೇ. 0.5ರಿಂದ 2023ಕ್ಕೆ ಶೇ. 5.8ಕ್ಕೆ ಏರಿಕೆಯಾಗಿದೆ ಎಂದು ಎಂಬರ್‌ ತನ್ನ ವರದಿಯಲ್ಲಿ ಕಂಡುಕೊಂಡಿದೆ. ಇಂಟರ್‌ ನ್ಯಾಷನಲ್‌ ಎನರ್ಜಿ ಏಜೆನ್ಸಿಯ(IEA) ಪ್ರಕಾರ, 2030ರ ವೇಳೆಗೆ ಸೌರ ವಿದ್ಯುತ್ ಉತ್ಪಾದನೆಯು ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ. 22ಕ್ಕೆ ಏರಿಕೆಯಾಗಲಿದೆ. ಭಾರತದ ವಾರ್ಷಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಅರ್ಧದಷ್ಟು (2023ರಲ್ಲಿ 1.18 ಗಿಗಾಟನ್) ವಿದ್ಯುತ್ ಉತ್ಪಾದನೆ ಕಾರಣವಾಗುತ್ತಿರುವುದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿಕೊಂಡಿದೆ. ಆದರೆ, ಭಾರತವು ಗಣನೀಯವಾಗಿ ಸೌರ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವುದರಿಂದ ಪರಿಸರದ ಮೇಲಿನ ಪರಿಣಾಮಕ್ಕೂ ಭಾರತ ಪರಿಹಾರ ಕಂಡುಕೊಳ್ಳುವಂತಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಈಗ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಭಾರತವು ಇನ್ನಷ್ಟು ಸಾಧನೆ ಮಾಡಿದರೂ ಅಚ್ಚರಿ ಇಲ್ಲ. ಶುದ್ಧ ವಿದ್ಯುತ್‌ ಉತ್ಪಾದನೆ ಹೆಚ್ಚಳ, ವಿದ್ಯುತ್‌ ವಲಯದಲ್ಲಿ ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಮಾಡುವುದು ಸೌರ ವಿದ್ಯುತ್‌ ಉತ್ಪಾದನೆಯ ಪ್ರಮುಖ ಮುನ್ನಡೆಯಾಗಿವೆ. ಅದರಲ್ಲೂ, ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಪೂರೈಸುವುದು ಕಷ್ಟವಾಗುವ ಜತೆಗೆ ಖಜಾನೆಗೂ ಹೊರೆಯಾಗುತ್ತದೆ. ಇದಕ್ಕೆ ಸೌರ ವಿದ್ಯುತ್‌ ಉತ್ಪಾದನೆಯೇ ರಾಜಮಾರ್ಗವಾಗಿದೆ.

ಹವಾಮಾನ ಬದಲಾವಣೆ ಕುರಿತು ಭಾರತ ಜಾಗತಿಕ ವೇದಿಕೆಗಳಲ್ಲಿ ಭಾರತವು ಪ್ರಬಲವಾಗಿ ಪ್ರತಿಪಾದನೆ ಮಾಡುತ್ತದೆ. ಹವಾಮಾನ ನಿಯಂತ್ರಣದ ಕುರಿತು ನರೇಂದ್ರ ಮೋದಿ ಅವರು ಮಾತನಾಡುತ್ತಾರೆ. ಹವಾಮಾನ ಬದಲಾವಣೆ ವಿರುದ್ಧದ ಸಮರದ ತಂಡದಲ್ಲಿ ಭಾರತವೂ ಪ್ರಮುಖ ಸದಸ್ಯವಾಗಿದೆ. ಇದೇ ಕಾರಣಕ್ಕಾಗಿ, ಸೌರ ವಿದ್ಯುತ್‌ ಉತ್ಪಾದನೆಯ ಸಾಧನೆಯು ಜಗತ್ತಿಗೇ ಮಾದರಿಯಾಗಿದೆ. ಇನ್ನು ನರೇಂದ್ರ ಮೋದಿ ಅವರು 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ವಿಕಸಿತ ಭಾರತದ ನಿರ್ಮಾಣಕ್ಕಿರುವ ಮಾನದಂಡಗಳಲ್ಲಿ ಸೌರ ವಿದ್ಯುತ್‌ ಕ್ಷೇತ್ರದ ಸಾಧನೆಯು ಪ್ರಮುಖವಾಗಿದೆ. ಹಾಗಾಗಿ, ಜಪಾನ್‌ಗಿಂತ ಭಾರತ ಮುಂದೆ ಹೋಗಿರುವುದು ವಿಕಸಿತ ಭಾರತದತ್ತ ದಾಪುಗಾಲು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Continue Reading
Advertisement
Tumkur Accident
ಕರ್ನಾಟಕ18 mins ago

Tumkur: ತುಮಕೂರಿನಲ್ಲಿ ಕಾರು ಪಲ್ಟಿ; ಮದುವೆಗೆ ಹೋಗಿದ್ದ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು

Engineering Student
ಬೆಂಗಳೂರು ಗ್ರಾಮಾಂತರ20 mins ago

Engineering Student : ಎಕ್ಸಾಂನಲ್ಲಿ ಫೇಲ್‌; ಕೆರೆಗೆ ಹಾರಿ ಆರ್‌ವಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Abdu Rozik Bigg Boss 16 gets engaged
ಸಿನಿಮಾ33 mins ago

Abdu Rozik: ಎಂಗೇಜ್‌ ಆದ ಬಿಗ್‌ ಬಾಸ್‌ ಖ್ಯಾತಿಯ ಅಬ್ದು ರೋಜಿಕ್!

Viral News
ವೈರಲ್ ನ್ಯೂಸ್1 hour ago

Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

Yogi Adityanath
ದೇಶ1 hour ago

ನಾವೇನು ಫ್ರಿಡ್ಜ್‌ನಲ್ಲಿ ಇಡಲು ಅಣುಬಾಂಬ್‌ ತಯಾರಿಸಿಲ್ಲ; ಅಯ್ಯರ್‌ ‘ಪಾಕ್‌’ ಹೇಳಿಕೆಗೆ ಯೋಗಿ ಖಡಕ್‌ ಉತ್ತರ

Dolly Dhananjay Koti Movie Kannada First song will out
ಸ್ಯಾಂಡಲ್ ವುಡ್1 hour ago

Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

esim cyber safety column
ಅಂಕಣ2 hours ago

ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Nijjar Killing Case
ವಿದೇಶ2 hours ago

Nijjar Killing Case: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ; ನಾಲ್ಕನೇ ಆರೋಪಿ ಅರೆಸ್ಟ್‌

HD Revanna
ಪ್ರಮುಖ ಸುದ್ದಿ2 hours ago

HD Revanna: 3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

Maggi Tragedy
ದೇಶ3 hours ago

Maggi Tragedy: ಮ್ಯಾಗಿ ತಿಂದ ಬಳಿಕ 10 ವರ್ಷದ ಬಾಲಕ ಸಾವು, ಒಂದೇ ಕುಟುಂಬದ ಐವರು ಅಸ್ವಸ್ಥ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು20 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

ಟ್ರೆಂಡಿಂಗ್‌