Nikhil Kumaraswamy filed his nomination on the day of his wedding anniversary Karnataka Election 2023 : ವಿವಾಹ ವಾರ್ಷಿಕೋತ್ಸವದ ದಿನದಂದೇ ನಾಮಪತ್ರ ಸಲ್ಲಿಸಿದ ನಿಖಿಲ್‌ ಕುಮಾರಸ್ವಾಮಿ Vistara News

ಕರ್ನಾಟಕ ಎಲೆಕ್ಷನ್

Karnataka Election 2023 : ವಿವಾಹ ವಾರ್ಷಿಕೋತ್ಸವದ ದಿನದಂದೇ ನಾಮಪತ್ರ ಸಲ್ಲಿಸಿದ ನಿಖಿಲ್‌ ಕುಮಾರಸ್ವಾಮಿ

ರಾಮನಗರ ವಿಧಾನಸಭಾ (Karnataka Election 2023) ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ಉಪಸ್ಥಿತರಿದ್ದರು.

VISTARANEWS.COM


on

Nikhil Kumaraswamy filed his nomination on the day of his wedding anniversary
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನಗರ : ರಾಮನಗರ ವಿಧಾನಸಭಾ ಕ್ಷೇತ್ರದಿಂದ (Karnataka Election 2023) ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ರಾಜ್ಯ ಯುವ ಜಾತ್ಯತೀತ ಜನತಾದಳದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನದಂದೇ ನಾಮಪತ್ರ ಸಲ್ಲಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಏಪ್ರಿಲ್‌ 17 ರಂದು ನಿಖಿಲ್‌ ಕುಮಾರಸ್ವಾಮಿ ಮದುವೆಯಾಗಿದ್ದರು. ಇಂದು ತಾತ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಂದಲೇ ʻಬಿʼ ಫಾರಂ ಪಡೆದು, ಅವರ ಆಶೀರ್ವಾದದೊಂದಿಗೆ ಆಗಮಿಸಿದ ಅವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಯಿ ಅನಿತಾ ಕುಮಾರಸ್ವಾಮಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, 1952 ರಲ್ಲಿ ಕೆಂಗಲ್ ಹನುಮಂತಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1994ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿಂದಲೇ ಶಾಸಕರಾಗಿ‌ ಮುಖ್ಯಮಂತ್ರಿಯಾಗಿದ್ದರು. 2004ರಲ್ಲಿ ಕುಮಾರಸ್ವಾಮಿ ಕೂಡ ಈ ಕ್ಷೇತ್ರದಿಂದಲೇ ಆಯ್ಕೆಯಾಗಿ ಮುಖ್ಯಮಂತ್ರಿ ಯಾಗಿದ್ದರು. ಈ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸುವ ಅದೃಷ್ಟ ನನ್ನದಾಗಿದೆ ಎಂದು ಹೇಳಿದರು.

ಎಲ್ಲಾ ಸಮುದಾಯದ ಜನರು ವಾಸ ಮಾಡುತ್ತಿರುವ ಶಾಂತಿಯುತವಾದ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಯಾವುದೇ ಸಂಘರ್ಷ ಆಗದ ರೀತಿಯಲ್ಲಿ ಕುಮಾರಸ್ವಾಮಿ ನೋಡಿಕೊಂಡಿದ್ದಾರೆ. ಅದೇ ರೀತಿ ಯುವಕನಾಗಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ನಾನೂ ಹೋಗುತ್ತೇನೆ ಎಂದು ಹೇಳಿದ ನಿಖಿಲ್‌ ಕುಮಾರಸ್ವಾಮಿ, ರಾಮನಗರ ಕ್ಷೇತ್ರ ಎಂದ ಕೂಡಲೇ ಭಾವುಕನಾಗುತ್ತೇನೆ. ಇಂದು ದೇವೇಗೌಡರಿಂದ ಬಿ ಫಾರಂ ಪಡೆಯುವಾಗಲೂ ಇದೇ ರೀತಿಯಾಗಿ ಭಾವುಕನಾಗಿದ್ದೆ ಎಂದು ನಿಖಿಲ್‌ ಹೇಳಿದರು.

ಡಿಕೆ…ಡಿಕೆ… ಘೋಷಣೆ! : ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ತಾಯಿ ಅನಿತಾ ಕುಮಾರಸ್ವಾಮಿಯವರೊಂದಿಗೆ ರಾಮನಗರ ತಾಲ್ಲೂಕು ಕಚೇರಿಗೆ ಆಗಮಿಸಿದ ವೇಳೆ ಅಲ್ಲಿ ನೆರದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ʻʻಡಿಕೆ….ಡಿಕೆ… ʼʼ ಎಂದು ಘೋಷಣೆ ಕೂಗಿದರು. ಇದರಿಂದ ಇವರಿಬ್ಬರೂ ಕೆಲ ಹೊತ್ತು ಮುಜುಗರಪಡುವಂತಾಯಿತು.

ಬೃಹತ್‌ ರೋಡ್‌ ಶೋ

ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಮನಗರದ ಬೀದಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿ, ಮಗ ನಿಖಿಲ್‌ ಕುಮಾರಸ್ವಾಮಿಯವರ ಪರವಾಗಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.

Nikhil Kumaraswamy filed his nomination on the day of his wedding anniversary

ರೋಡ್‌ ಶೋ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಪಾನ್‌ಕಾರ್ಡ್‌, ಆಧಾರ್‌ ಕಾಡ್ಡ್‌ ಲಿಂಕ್‌ನ ಸಮಸ್ಯೆಯನ್ನು ಪ್ರಸ್ತಾಪಿಸಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ತೊಂದರೆ ನಿವಾರಿಸುವುದಾಗಿ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಿದ್ದಾರೆ. ಆದರೆ ಅದು ಡೂಪ್ಲಿಕೇಟ್ ಕಾರ್ಡ್. ಅವರ 2ಸಾವಿರದ ಭರವಸೆಗೆ ಮರುಳಾಗಬೇಡಿ. ಕೇವಲ ಇನ್ನೂ ಕೆಲವೇ ದಿನಗಳಷ್ಟೇ ಇವರ ಆಟ. ಮುಂದೆ ಜೆಡಿಎಸ್ ಸುಭದ್ರ ಸರ್ಕಾರ ಬರಲಿದೆ ಎಂದರು.

ಕಣ್ಣೀರಿಟ್ಟ ನಿಖಿಲ್‌ ಕುಮಾರಸ್ವಾಮಿ

ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮನೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ನಿಖಿಲ್‌ ಕುಮಾರಸ್ವಾಮಿ ತಾತಾ ಎಚ್‌.ಡಿ. ದೇವೇಗೌಡರಿಂದಲೇ ʻಬಿ ಫಾರಂʼ ಪಡೆದುಕೊಂಡರು. ದೇವೇಗೌಡರು ಬಿ ಫಾರ್‌ ನೀಡುವಾಗ ನಿಖಿಲ್‌ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟರು.

Nikhil Kumaraswamy filed his nomination on the day of his wedding anniversary

ನಂತರ ಸುಧಾರಿಸಿಕೊಂಡು ಬಿ ಫಾರಂ ಪಡೆದುಕೊಂಡರಲ್ಲದೆ, ದೇವೇಗೌಡರ ಮತ್ತು ಅವರ ಪತ್ನಿ ಚನ್ನಮ್ಮರ (ಅಜ್ಜಿ) ಕಾಲಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಿಖಿಲ್‌ ಕುಮಾರಸ್ವಾಮಿಯವರ ಪತ್ನಿ ರೇವತಿ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಕೂಡ ಇದ್ದರು.

ಬಿ ಫಾರಂ ಪಡೆಯುವ ವೇಳೆ ನಿಖಿಲ್ ಭಾವುಕ ವಿಚಾರದ ಕುರಿತು ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಭಾವುಕರಾಗುವುದು ನಮ್ಮ ಕುಟುಂಬಕ್ಕೆ ರಕ್ತಗತವಾಗಿ ಬಂದಿದೆ. ನಮ್ಮ ಕುಟುಂಬದ ಎಲ್ಲರಿಗೂ ತಾಯಿ ಹೃದಯ ಇದೆ. ಇದು ಎಲ್ಲರಿಗೂ ಬರಲ್ಲ, ನಾಟಕೀಯವಾಗಿಯೂ ಬರಲ್ಲ. ನಮ್ಮ ಕುಟುಂಬದಲ್ಲಿ ನನ್ನ ನಡವಳಿಕೆಯನ್ನ ನಿಖಿಲ್ ನೋಡಿದ್ದಾನೆ. ಜನರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಂಡಿದ್ದಾನೆ ಎಂದರು.

ಇದನ್ನೂ ಓದಿ: Karnataka Elections : ಬಸವಣ್ಣರ ಮಾತು ಮೀರಿ ದುರ್ಜನರ ಸಂಗ ಮಾಡಿದ ಶೆಟ್ಟರ್‌; ರಾಜೀನಾಮೆಯಿಂದ ಸಮಸ್ಯೆ ಇಲ್ಲ ಎಂದ ಸಿಎಂ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Shadow CM: ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್

ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ (Shadow CM) ಎಂದು ಬಿಜೆಪಿ ಆರೋಪಿಸಿದೆ.

VISTARANEWS.COM


on

Shadow CM Posters
Koo

ಬೆಂಗಳೂರು: ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್‌ ರೂಪಿಸಿತ್ತು. ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಮಾಡಿದ್ದ 40% ಕಮಿಷನ್‌ ಆರೋಪವನ್ನೇ ಆಧಾರವಾಗಿಸಿಕೊಂಡು ಪೆಸಿಎಂ ಪೋಸ್ಟರ್‌ಗಳನ್ನು ಬಹಿರಂಗವಾಗಿ ಅಂಟಿಸಿತ್ತು. (Shadow CM)

ಈ ಪೋಸ್ಟರ್‌ಗಳು ಸರ್ಕಾರಕ್ಕೆ ಸಾಕಷ್ಟ ಮುಜುಗರ ಉಂಟುಮಾಡಿದ್ದವು. ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಜನರಿಗೆ ಮನವರಿಕೆ ಮಾಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದವು. ಇದೀಗ ಕಾಂಗ್ರೆಸ್‌ ಸರ್ಕಾರ ರಚನೆಯಾಗಿದ್ದು, ಶ್ಯಾಡೊ ಸಿಎಂ ಅಭಿಯಾನವನ್ನು ಬಿಜೆಪಿ ಕೈಗೆತ್ತಿಕೊಂಡಿದೆ.

ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೇ ಆರೋಪಕ್ಕೆ ಅನಗುಣವಾಗಿ ಶ್ಯಾಡೊ ಸಿಎಂ ಪೋಸ್ಟರ್‌ಗಳನ್ನು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದೆ.

1. ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ ಸಿದ್ದರಾಮಯ್ಯ, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ. ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ. 2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ.

2. ಸರಕಾರದ ಎಲ್ಲಾ ಬಗೆಯ ಡೀಲ್‌ಗಳಿಗೆ ನೇರವಾಗಿ ಸಂಪರ್ಕಿಸಿ…

3. ಹುದ್ದೆಗಳು ಮಾರಾಟಕ್ಕಿವೆ… #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.

4. ಹುದ್ದೆಗಳು ಮಾರಾಟಕ್ಕಿವೆ.. #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.

5. CM ನೆರಳಿನಲ್ಲಿ #ShadowCM ಅವ್ಯವಹಾರ. ಅಂಕೆ ಮೀರಿದೆ ಇವರಿಬ್ಬರ ಭ್ರಷ್ಟಾಚಾರ.

6. Commission Master in the shadows of Chief Minister!

Continue Reading

ಕರ್ನಾಟಕ

Evm Machine : ಡೆಮಾಲಿಷನ್‌ ವೇಳೆ ಎಂಜಿನಿಯರ್ ಮನೆಯಲ್ಲಿ ಇವಿಎಂ ಯೂನಿಟ್‌ಗಳು ಪತ್ತೆ!

Evm Control Units : ಮನೆ ಡೆಮಾಲಿಷನ್‌ ಸಮಯದಲ್ಲಿ ಎಂಜಿನಿಯರ್‌ವೊಬ್ಬರ ಮನೆಯಲ್ಲಿ ಇವಿಎಂ ಕಂಟ್ರೋಲ್‌ ಯೂನಿಟ್‌ಗಳು ಪತ್ತೆಯಾಗಿವೆ. ಇವಿಎಂ ಕಂಟ್ರೋಲ್‌ ಯೂನಿಟ್‌ಗಳನ್ನು ತಹಸೀಲ್ದಾರ್‌ ವಶಕ್ಕೆ ಪಡೆದುಕೊಂಡಿದ್ದಾರೆ.

VISTARANEWS.COM


on

By

EVM units
Koo

ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದಲ್ಲಿ ಮನೆ ಡೆಮಾಲಿಷನ್ ವೇಳೆ ಇವಿಎಂ ಕಂಟ್ರೋಲ್‌ ಯೂನಿಟ್‌ಗಳು (Evm Control Units ) ಪತ್ತೆ ಆಗಿವೆ. ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಎಂಜಿನಿಯರ್ ಶಿವಕುಮಾರ್ ಎಂಬುವವರ ಮನೆಯಲ್ಲಿ (Evm Machine) ಪತ್ತೆ ಆಗಿದೆ.

2018ರ ಚುನಾವಣೆಯಲ್ಲಿ ಬಳಸಿ ರಿಜೆಕ್ಟ್‌ ಆಗಿದ್ದ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳು ಎನ್ನಲಾಗಿದೆ. ಅಂದಹಾಗೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ಡೆಮಾಲಿಷನ್ ಮಾಡಲಾಗುತ್ತಿತ್ತು. ಈ ವೇಳೆ ಮನೆಯ ಅವಶೇಷಗಳಲ್ಲಿ ಇವಿಎಂ ಕಂಟ್ರೋಲ್‌ ಯೂನಿಟ್‌ ಪತ್ತೆ ಆಗಿವೆ. ಯೂನಿಟ್‌ಗಳು ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ತಹಸೀಲ್ದಾರ್‌ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

EVM units found in demolition
ಎಂಜಿನಿಯರ್‌ ಮನೆ ಡೆಮಾಲಿಷನ್‌ ವೇಳೆ ಇವಿಎಂ ಯೂನಿಟ್‌ಗಳು ಪತ್ತೆ

ಮನೆಯ ಅವಶೇಷದಡಿ 7 ಯೂನಿಟ್‌ಗಳು ಪತ್ತೆ ಆಗಿದ್ದು, ತಹಸೀಲ್ದಾರ್‌ ಎಲ್ಲವನ್ನೂ ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ತಹಸೀಲ್ದಾರ್‌ ಮೋಹನ ಕುಮಾರಿ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ವರದಿಯನ್ನು ನೀಡಿದ್ದಾರೆ. ಸದ್ಯ, ರಿಜೆಕ್ಟ್‌ ಆಗಿರುವ ಇವಿಎಂ ಕಂಟ್ರೋಲ್‌ ಯೂನಿಟ್‌ ಮಿಷನ್‌ಗಳನ್ನು ಯಾಕಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು ಎಂಬ ಪ್ರಶ್ನೆ ಕಾಡುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

MLC Election: ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನ ಮೂವರು ಅವಿರೋಧ ಆಯ್ಕೆ; ಶೆಟ್ಟರ್‌ ಕಮ್‌ ಬ್ಯಾಕ್‌

MLC Election: ಕಾಂಗ್ರೆಸ್‌ನ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರು ಎಂಎಲ್‌ಸಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

VISTARANEWS.COM


on

New MLC Jagadish Shettar NS Boseraju and Tippanna Kamakanoor
ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಎನ್.ಎಸ್. ಬೋಸರಾಜು
Koo

ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ (MLC Election) ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಅಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರ ಅವಿರೋಧ ಆಯ್ಕೆ ಘೋಷಿಸಲಾಗಿದೆ.

ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿ ಡಾ.ಕೆ ಪದ್ಮರಾಜನ್‌ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಹೀಗಾಗಿ ಉಳಿದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭಾ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.

ಶೆಟ್ಟರ್‌ 5 ವರ್ಷ, ಬೋಸರಾಜು 1 ವರ್ಷ, ಕಮಕನೂರು 3 ವರ್ಷ ಎಂಎಲ್‌ಸಿ

ರಾಜ್ಯದಲ್ಲಿ ಖಾಲಿಯಾಗಿರುವ ವಿಧಾನ ಪರಿಷತ್‌ನ (MLC Election) ಮೂರು ಸ್ಥಾನಗಳಿಗೆ ಜೂನ್‌ 30ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಇವರ ಅಧಿಕಾರಾವಧಿ ನೋಡುವುದಾದರೆ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ 5 ವರ್ಷ, ಹಾಲಿ ಸಚಿವ ಎನ್.ಎನ್‌. ಬೋಸ್‌ ರಾಜು 1 ವರ್ಷ ಮತ್ತು ತಿಪ್ಪಣ್ಣ ಕಮಕನೂರು 3 ವರ್ಷ ಎಂಎಲ್‌ಸಿಯಾಗಿ ಇರಲಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ ನಡೆಯುವ ಚುನಾವಣೆ ಇದಾಗಿದೆ. 135 ಶಾಸಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ | ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ? ಸುಳಿವು ಬಿಚ್ಚಿಟ್ಟ ಸಿ.ಪಿ.ಯೋಗೇಶ್ವರ್

ಶೆಟ್ಟರ್‌ಗೆ ದೊಡ್ಡ ಗೌರವ

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಟಿಕೆಟ್‌ ನಿರಾಕರಿಸಲ್ಪಟ್ಟು ಕಾಂಗ್ರೆಸ್‌ ಸೇರಿದ್ದ ಜಗದೀಶ್‌ ಶೆಟ್ಟರ್‌ ಅವರು ಚುನಾವಣೆಯಲ್ಲಿ ಸೋಲು ಕಂಡರೂ ಅವರಿಗೆ ಪಕ್ಷ ದೊಡ್ಡ ಗೌರವವನ್ನೇ ನೀಡಿದೆ. ಬಾಬುರಾವ್‌ ಚಿಂಚನಸೂರು ಅವರಿಂದ ತೆರವಾಗಿರುವ ಸ್ಥಾನಕ್ಕೆ ಜಗದೀಶ್‌ ಶೆಟ್ಟರ್‌ ಅವರು ಆಯ್ಕೆಯಾಗಿದ್ದು, ಐದು ವರ್ಷ ಸದಸ್ಯರಾಗಿರಲಿದ್ದಾರೆ.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಈ ಬಾರಿ ಕಾಂಗ್ರೆಸ್ ಗೆ ಲಾಭವಾಗಿತ್ತು. 39 ಲಿಂಗಾಯತ ಸಮುದಾಯದ ಶಾಸಕರು ಗೆಲ್ಲುವುದರಲ್ಲಿ ಶೆಟ್ಟರ್‌ ಅವರ ವರ್ಚಸ್ಸಿನ ಪ್ರಭಾವವೂ ಇದೆ ಎಂದು ಕಾಂಗ್ರೆಸ್‌ ಕಂಡುಕೊಂಡಿದೆ. ಇದರ ಲಾಭವನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಡೆಯಲು ಶೆಟ್ಟರ್‌ಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಗೆ ಐದು ವರ್ಷಗಳ ಅವಧಿ ಇರೋ ಎಂಎಲ್ಸಿ ಸ್ಥಾನವನ್ನು ಕಾಂಗ್ರೆಸ್‌ ಕೊಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ | Congress Guarantee: ರಾಜ್ಯ ಬಿಜೆಪಿ ಅಧ್ಯಕ್ಷ ಮನೆಗೆ ಮಾರಿ ಪರರಿಗೆ ಉಪಕಾರಿ: ಸಚಿವ ದಿನೇಶ್‌ ಗುಂಡೂರಾವ್‌ ವಾಗ್ದಾಳಿ

ಎನ್.ಎಸ್‌. ಬೋಸರಾಜು ಅವರಿಗೆ 1 ವರ್ಷ ಅವಕಾಶವಿರುವ ಪರಿಷತ್‌ ಸದಸ್ಯತ್ವವನ್ನು ನೀಡಲಾಗಿದೆ. ಬೋಸರಾಜು ಅವರನ್ನು ಈಗಾಗಲೇ ಸಣ್ಣ ನೀರಾವರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇವರು ಆರ್‌.ಶಂಕರ್‌ ಅವರಿಂದ ತೆರವಾಗಿರುವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಇತ್ತ ತಿಪ್ಪಣ್ಣ ಕಮಕನೂರು ಅವರಿಗೆ ಲಕ್ಷ್ಮಣ ಸವದಿ ಅವರಿಂದ ತೆರವಾದ ಮೂರು ವರ್ಷಗಳ ಅವಧಿಯ ಮೇಲ್ಮನೆ ಸ್ಥಾನವನ್ನು ನೀಡಲಾಗಿದೆ.

Continue Reading

ಕರ್ನಾಟಕ

‌Brand Bengaluru: ವಿದ್ಯುತ್‌ ಜತೆಗೆ ಕಸದ ಶುಲ್ಕವೂ ಸೇರ್ಪಡೆಗೆ ಸಲಹೆ: ಖಚಿತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌

ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್‌ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

VISTARANEWS.COM


on

DK Shivakumar Thushar girinath
Koo

ಬೆಂಗಳೂರು: ಅನೇಕ ನಗರಗಳಲ್ಲಿ ಕಸ ಸಂಗ್ರಹಣೆಗೆ ಶುಲ್ಕ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಶುಲ್ಕ ವಿಧಿಸಿ ವಿದ್ಯುತ್‌ ಬಿಲ್‌ ಜತೆಗೆ ಸೇರಿಸಬೇಕು ಎಂಬ ಸಲಹೆ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರು ಹಾಗೂ ತಜ್ಞರಿಂದ ಸಲಹೆ ಕೇಳುವ BrandBengaluru.karnataka.gov.in ಪೋರ್ಟಲ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದರು.

1 ಕೋಟಿ 60 ಲಕ್ಷ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. 1 ಕೋಟಿ 30 ಲಕ್ಷ ಅಧಿಕೃತ ಜನಸಂಖ್ಯೆ. ಆದರೆ ಪ್ರತಿದಿನ ಬಂದು ಹೋಗವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಪ್ರಕೃತಿ ಗಮನದಲ್ಲಿಟ್ಟುಕೊಂಡು ಇಲ್ಲಿ ಬಂದು ನೆಲೆಸಲು ಇಚ್ಚೆ ಪಡುತ್ತಾರೆ. ಬೆಂಗಳೂರಿಗೆ ಬಂದವರು ಯಾರು ವಾಪಸು ಹೋಗಲ್ಲ.

ನಾನು ಸಹ ಬೆಂಗಳೂರಿನ ನಿವಾಸಿ. ಜನ ಸಮಾನ್ಯರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇನೆ. ಬಿಲ್ಡರ್ಸ್, ಉದ್ಯಮಿಗಳು ಸಹ ಕರೆಸಿದ್ದೆ ಅವರ ಅಭಿಪ್ರಾಯ ಪಡೆದಿದ್ದೇನೆ. ಹಿರಿಯ ನಾಯಕರ ಅಭಿಪ್ರಾಯ ಸಹ ಸಂಗ್ರಹ ಮಾಡಿದ್ದೇನೆ. ಮಾಜಿ ಸಿಎಂಗಳನ್ನ ಭೇಟಿ ಮಾಡ್ತೀನಿ. ಬೊಮ್ಮಾಯಿ ಸಮಯ ಕೇಳಿದ್ದೆ. ಕಸಕ್ಕೆ ಕೆಲ ನಗರಗಳಲ್ಲಿ ತೆರಿಗೆ ಹಾಕುತ್ತಿದ್ದಾರೆ. ಇಲ್ಲೂ ಹಾಕಿ ಅಂತ ಸಲಹೆ ನೀಡಿದ್ದಾರೆ. ವಿದ್ಯುತ್ ಬಿಲ್ ಜತೆಗಿನ ಇದನ್ನ ಹಾಕಲು ಸಲಹೆ ಬಂದಿದೆ. ಆದರೆ ಈಗ ವಿದ್ಯುತ್ ಬಿಲ್ ಜತೆ ಹಾಕಲು ಸಾಧ್ಯವಿಲ್ಲ ಎಂದರು.

ಬೆಂಗಳೂರನ್ನು ಉತ್ತಮಪಡಿಸಲು ಪೋರ್ಟಲ್‌ ಲಾಂಚ್ ಮಾಡ್ತಿದ್ದೇನೆ. ಪ್ರಮುಖ ನಗರಗಳಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಮಲ್ಲೇಶ್ವರ, ಬಸವನಗುಡಿಯಲ್ಲಿ ಪುಟ್ ಪಾತ್ ಸಮಸ್ಯೆ ಇದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡ್ತೀನಿ. ಟ್ರೈನ್ ಮತ್ತು ಬಸ್ಸು ಹೋಗುವ ರೀತಿ ಟನಲ್‌ ಮಾಡಬೇಕು ಅನ್ನೋ ಅಭಿಪ್ರಾಯ ಇದೆ. ಜಯದೇವ ಬಳಿ ಪೈಲಟ್ ಯೋಜನೆ ಅಂತ ಪರಿಗಣಿಸುತ್ತಿದ್ದೇವೆ. ಬೆಂಗಳೂರು ಪ್ಲಾನ್ಡ್‌ ಸಿಟಿ ಅಲ್ಲ. ಮುಂಬಯಿ, ದೆಹಲಿ ರೀತಿಯಲ್ಲಿ ಪ್ಲಾನ್ ಸಿಟಿ ಅಲ್ಲ. ಆದರೆ ಮುಂಬಯಿ ಮತ್ತು ದೆಹಲಿಯಲ್ಲಿ ಟ್ರಾಫಿಕ್ ಜಾಸ್ತಿ ಇದೆ. ನಮಗಿಂತಲೂ ಹೆಚ್ಚಿಜ ಟ್ರಾಫಿಕ್ ಇದೆ. ಇಲ್ಲಿ ನೀರು ನುಗ್ಗಿದರೂ ಸಮಸ್ಯೆ ಆಗುತ್ತೆ, ಅದನ್ನೇ ದೊಡ್ಡದಾಗಿ ಬರೆಯುತ್ತೀರಿ ಎಂದರು.

ಹಿಂದಿನ ಕಾಮಗಾರಿಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಭ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಇನ್ನಷ್ಟು ದೊಡ್ಡಮಟ್ಟದಲ್ಲಿ ಮಾತನಾಡಲಿ. ಎಲ್ಲ ಬಿಚ್ಚಿಸ್ತೀನಿ. ಟೆಂಡರ್ ಡಬಲ್ ಆಗ್ತಿದೆ, ನಾವು ಅಧಿಕಾರಕ್ಕೆ ಬಂದ್ರೆ ಇದಕ್ಕೆ ಅವಕಾಶ ಕೊಡಲ್ಲ ಎಂದು ನಾವು ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆವು. ನಾವು ಅದಕ್ಕೆ ಬದ್ಧರಾಗಿದ್ದೇವೆ. ಯಾವ ಗುತ್ತಿಗೆದಾರ ಏನು ಬೇಕಾದರೂ ಮಾಡಿಕೊಳ್ಳಲಿ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡುವವರೆಗೂ ನಾವು ವರ್ಕ್ ಆರ್ಡರ್ ಕೊಡಲ್ಲ. ತನಿಖೆ ಬಳಿಕವೇ ಕಾಮಗಾರಿ ಬಿಲ್ ಬಿಡುಗಡೆ ಮಾಡ್ತೀವಿ ಎಂದರು.

ನಗರದಲ್ಲಿ ಇರೋ ಸ್ಲಮ್ ಶಿಫ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತಹ ಸಲಹೆಗಳು ಬಂದಿವೆ. ಕೆಲವರು ಸರ್ಕಾರಿ ಜಾಗದಲ್ಲಿ ಇದ್ದಾರೆ. ಕೆಲ ಸ್ಲಮ್ ನಗರದ ಒಳಗೆ ಇವೆ. ಅದನ್ನ ಶಿಫ್ಟ್ ಮಾಡಲು ಸಮಯ ಬೇಕಾಗುತ್ತದೆ ಎಂದರು.

ಇದನ್ನೂ ಓದಿ: Rice Politics: ನಾಳೆ ಅಮಿತ್‌ ಶಾ ಭೇಟಿಗೆ ಸಿದ್ದರಾಮಯ್ಯ ದೆಹಲಿ ಪ್ರವಾಸ; ನಾನೂ ಹೋಗುವೆ ಎಂದ ಡಿಕೆಶಿ

Continue Reading
Advertisement
Madhu Bangarappa in Belagavi Winter Session
ಕರ್ನಾಟಕ9 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ14 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ16 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ16 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ33 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ34 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ43 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್49 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್58 mins ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ59 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ9 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ59 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌