ದೇಶ
Prajwal Revanna : ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ರಿಲೀಫ್; ಸಂಸದ ಸ್ಥಾನಕ್ಕೆ ಚ್ಯುತಿಯಿಲ್ಲ, ಚುನಾವಣೆ ಸ್ಪರ್ಧೆಗೂ ಅಡ್ಡಿಇಲ್ಲ
prajwal Revanna : ತಮ್ಮನ್ನು ಸಂಸತ್ ಸ್ಥಾನದಿಂದಲೇ ಅನರ್ಹಗೊಳಿಸಿದ ರಾಜ್ಯ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಬೆಂಗಳೂರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ (Parlimament Elections 2019) ಕಣಕ್ಕಿಳಿಯುವ ವೇಳೆ ಚುನಾವಣಾ ಆಯೋಗಕ್ಕೆ (Election Commission) ಸುಳ್ಳು ಮಾಹಿತಿ (False Information) ನೀಡಿದ್ದಾರೆಂಬ ಆರೋಪ ಹೊತ್ತು ಸಂಸತ್ ಸ್ಥಾನದಿಂದ ಅನರ್ಹರಾಗಿದ್ದ (Disqaulification from parliament Membership) ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassana MP Prajwal Revanna) ಅವರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ (Supreme Court big relief) ನೀಡಿದೆ.
ಅವರನ್ನು ಅನರ್ಹಗೊಳಿಸಿದ ರಾಜ್ಯ ಹೈಕೋರ್ಟ್ ಆದೇಶಕ್ಕೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್ ಅದೇ ವೇಳೆಗೆ ಅವರಿಗೆ ಇರುವ ಕೆಲವೊಂದು ಹಕ್ಕುಗಳನ್ನು ಕಿತ್ತುಕೊಂಡಿದೆ. ಆದರೆ, ಅವರ ಸಂಸತ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಿದೆ.
ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ದಾವೆಯ ವಿಚಾರಣೆ ಕಳೆದು ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು, ಕೆಲವು ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿತ್ತು. ಪ್ರಜ್ವಲ್ ರೇವಣ್ಣ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಹೈಕೋರ್ಟ್ ಮುಂದಿನ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು. ಅದರ ಪ್ರಕಾರ 2024 ಮಾತ್ರವಲ್ಲ, 2029ರ ಚುನಾವಣೆಯಲ್ಲೂ ಅವರು ಸ್ಪರ್ಧೆ ಮಾಡುವಂತಿರಲಿಲ್ಲ.
ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್, ಪರಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಮುಂದಿನ ನಾಲ್ಕು ವಾರಗಳ ಅವಧಿಗೆ ಈ ತಡೆಯಾಜ್ಞೆ ಜಾರಿಯಲ್ಲಿರುತ್ತದೆ. ಬಳಿಕ ಮುಂದಿನ ವಿಚಾರಣೆ ನಡೆದು ಅಂತಿಮ ತೀರ್ಮಾನ ಪ್ರಕಟವಾಗಲಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?
ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಬದುಕಿಗೇ ಪ್ರಶ್ನಾರ್ಥಕ ಚಿಹ್ನೆಯಾಗಿದ್ದ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅವರಿಗೆ ದೊಡ್ಡ ರಿಲೀಫ್ ನೀಡಿದೆ.
- ಸಂಸತ್ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್ ಆದೇಶಕ್ಕೆ ನಾಲ್ಕು ತಿಂಗಳ ತಡೆಯಾಜ್ಞೆ.
- ಪ್ರಜ್ವಲ್ ರೇವಣ್ಣ ಅವರ ಲೋಕಸಭಾ ಸದಸ್ಯತ್ವಕ್ಕೆ ಚ್ಯುತಿ ಇಲ್ಲ.
- ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ.
- ಆದರೆ, ಸಂಸದರಿಗೆ ಸಿಗುವ ಯಾವುದೇ ಭತ್ಯೆಗಳು ಸಿಗುವುದಿಲ್ಲ.
- ಅಧಿವೇಶನದಲ್ಲಿ ಮತ ಹಾಕಲು ಇರುವ ಅಧಿಕಾರ ಮೊಟಕು.
ಏನಿದು ಪ್ರಜ್ವಲ್ ರೇವಣ್ಣ ಸುಳ್ಳು ಮಾಹಿತಿ ಪ್ರಕರಣ?
ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಗೆ ಸ್ಪರ್ಧಿಸುವ ವೇಳೆ ಪ್ರಜ್ವಲ್ ರೇವಣ್ಣ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಗಳನ್ನು ನೀಡಿ ಸ್ಪರ್ಧೆ ಮಾಡಿದ್ದಾರೆ ಎನ್ನುವುದು ಆರೋಪ. ಹೀಗಾಗಿ ಅವರ ಸಂಸದ ಸ್ಥಾನವನ್ನು ಅಸಿಂಧುಗೊಳಿಸಿ ತಮ್ಮನ್ನು ಸಂಸದನಾಗಿ ಘೋಷಣೆ ಮಾಡಬೇಕು ಎಂದು ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡ ಅಭ್ಯರ್ಥಿ ಎ.ಮಂಜು ಹಾಗೂ ಬಿಜೆಪಿ ಮುಖಂಡ ದೇವರಾಜಗೌಡ ಅವರು 2019ಲ್ಲೇ ದೂರು ದಾಖಲಿಸಿದ್ದರು.
ಈ ದೂರನ್ನು ಆಧರಿಸಿ ಚುನಾವಣಾ ಆಯೋಗವು ತನ್ನ ಪಾಲಿನ ವರದಿ ಸಲ್ಲಿಸಿತ್ತು. ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣವು ಹೈಕೋರ್ಟ್‌ನಲ್ಲಿ ಹಲವು ವಿಚಾರಣೆಗಳು ನಡೆದಿದ್ದವು.
ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ದಾಖಲೆ ಕೊಟ್ಟಿದ್ದಾರೆಂಬ ಆರೋಪ ಸಾಬೀತಾಗಿದ್ದರಿಂದ ಸೆ.1ರಂದು ಹೈಕೋರ್ಟ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಮಾತ್ರವಲ್ಲ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶ ನೀಡಿತ್ತು.
ಅನರ್ಹತೆ ಆದೇಶ ಅಮಾನತಿನಲ್ಲಿಡಲೂ ಅವಕಾಶ ನೀಡಲಿಲ್ಲ
ಹೈಕೋರ್ಟ್ ಆದೇಶದ ಮೂಲಕ ಲೋಕಸಭಾ ಸ್ಥಾನ ಕಳೆದುಕೊಂಡ ಪ್ರಜ್ವಲ್ ರೇವಣ್ಣ ತಾವು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದು, ಅಲ್ಲಿಯವರೆಗೆ ಆದೇಶವನ್ನು ಅಮಾನತಿನಲ್ಲಿಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಈ ಅರ್ಜಿಯನ್ನು ಮಾನ್ಯ ಮಾಡದ ಹೈಕೋರ್ಟ್ ಅಸಿಂಧು ಆದೇಶಕ್ಕೆ ತಡೆಯನ್ನು ನೀಡದೆ ಪ್ರಜ್ವಲ್ ಅರ್ಜಿಯನ್ನೇ ವಜಾಗೊಳಿಸಿತ್ತು. ಇದರಿಂದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೆ ಹಿನ್ನಡೆಯಾಗಿತ್ತು.
ಈ ನಡುವೆ, ಮಾಜಿ ಪ್ರಧಾನಿ ದೇವೇಗೌಡರ ಸಲಹೆಯೊಂದಿಗೆ ರೇವಣ್ಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ಅನರ್ಹತೆಗೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿಯ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೊಹಟಗಿ ಮತ್ತು ವೇಣುಗೋಪಾಲ ವಾದ ಮಂಡನೆ ಮಾಡಿದ್ದರು.
ದೇಶ
Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್; ಮಣಿಪುರ ಮತ್ತೆ ಉದ್ವಿಗ್ನ?
Manipur Horror: ಮಣಿಪುರದಲ್ಲಿ(Manipur )ಜುಲೈಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ಹೊರ ಬಿದ್ದು ಸಂಚಲನ ಮೂಡಿಸಿದೆ. ದುಷ್ಕರ್ಮಿಗಳ ಪತ್ತೆಗೆ ಸಿಬಿಐ(CBI) ಬಲೆ ಬೀಸಿದೆ.
ಇಂಫಾಲ: ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಶವಗಳ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಣಿಪುರದಲ್ಲಿ ಮತ್ತೆ ಜನಾಕ್ರೋಶ ಭುಗಿಲೇಳುವ ಸಂಭವ ಕಂಡುಬರುತ್ತಿದೆ. ಬಂದೂಕು ಹಿಡಿದಿರುವ ಇಬ್ಬರು ದುಷ್ಕರ್ಮಿಗಳು ಕೂಡ ಈ ಫೋಟೋದಲ್ಲಿದ್ದಾರೆ. ಇವರು ಕುಕಿ ಸಮುದಾಯದವರು ಎಂದು ಹೇಳಲಾಗಿದೆ.
ಈ ಬಗ್ಗೆ ಜನಾಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಣಿಪುರ ಸರ್ಕಾರ(Manipur government) “ತ್ವರಿತ ಮತ್ತು ನಿರ್ಣಾಯಕ” ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕೇಂದ್ರ ತನಿಖಾ ದಳ (CBI) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ವಿದ್ಯಾರ್ಥಿಗಳ ಶವಗಳು ಇನ್ನೂ ಪತ್ತೆಯಾಗದಿರುವುದು ಸವಾಲಾಗಿ ಪರಿಣಮಿಸಿದೆ.
ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ಕುಳಿತಿರುವುದು ಫೋಟೋದಲ್ಲಿ ಕಂಡುಬರುತ್ತಿದೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್ ಶರ್ಟ್ ಧರಿಸಿರುವುದು ಕಂಡುಬಂದಿದೆ. ಅವರ ಹಿಂದೆ ಬಂದೂಕುಗಳನ್ನು ಹೊಂದಿರುವ ಇಬ್ಬರು ಪುರುಷರು ಸ್ಪಷ್ಟವಾಗಿ ಗೋಚರಿಸುತ್ತಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬರುತ್ತಿದೆ.
ಭಾರಿ ಆಕ್ರೋಶ
ಈ ಪ್ರಕರಣವು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಭಾರಿ ಆಕ್ರೋಶವನ್ನು ಹುಟ್ಟು ಹಾಕಿದೆ. ಪ್ರಕರಣವನ್ನು ಭೇದಿಸಲು ಪೊಲೀಸರು ಯಾಕೆ ತಡ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಯೂ ಎದ್ದಿದೆ. ಜುಲೈನಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಅಂದು ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಕಾಣಿಸಿಕೊಂಡ ಬಳಿಕ ಇವರ ಪತ್ತೆಯಾಗಿರಲಿಲ್ಲ.
ಆಧುನಿಕ ತಂತ್ರಜ್ಞಾನ ಬಳಕೆ
ಈ ಪ್ರಕರಣವನ್ನು ಕೂಡಲೇ ಭೇದಿಸಲು ತನಿಖಾಧಿಕಾರಿಗಳು ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ. ಫೋಟೊದ ಹಿನ್ನೆಲೆಯಲ್ಲಿ ಗೋಚರಿಸುವ ಇಬ್ಬರು ಪುರುಷರ ಗುರುತನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಸುಧಾರಿತ ಸೈಬರ್ ವಿಧಿವಿಜ್ಞಾನದ ಸಹಾಯ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼʼಎರಡು ವಿದ್ಯಾರ್ಥಿಗಳ ಫೋಟೊ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಅವರು ಜುಲೈಯಲ್ಲಿ ನಾಪತ್ತೆಯಾಗಿದ್ದರು. ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ಹಸ್ತಾಂತರಿಸಲಾಗಿದೆʼʼ ಎಂದು ಮಣಿಪುರ ಸರ್ಕಾರ ತಿಳಿಸಿದೆ.
“ಇಬ್ಬರು ವಿದ್ಯಾರ್ಥಿಗಳನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಗುರುತಿಸಲು ರಾಜ್ಯ ಪೊಲೀಸರು, ಕೇಂದ್ರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಲು ಭದ್ರತಾ ಪಡೆಗಳೂ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ” ಎಂದು ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ತನಿಖೆ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.
ಪರಸ್ಪರ ಆರೋಪ
ಮಣಿಪುರದ ಬೆಟ್ಟಗಳಲ್ಲಿ ಸುಮಾರು 25 ಕುಕಿ ದಂಗೆಕೋರ ಗುಂಪುಗಳ ಹಲವಾರು ಶಿಬಿರಗಳಿವೆ. ಅವು ಕೇಂದ್ರ, ರಾಜ್ಯ ಮತ್ತು ಮಿಲಿಟರಿಯೊಂದಿಗೆ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ(SOO) ಒಪ್ಪಂದಕ್ಕೆ ಸಹಿ ಹಾಕಿವೆ. ಕಣಿವೆ ಮೂಲದ ಸೇನಾಪಡೆಗಳು ತಮ್ಮ ಮೇಲೆ ದಾಳಿ ನಡೆಸುತ್ತಿವೆ ಎಂದು ಕುಕಿಗಳು ಆರೋಪಿಸಿದ್ದರೆ, ಕುಕಿ ದಂಗೆಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಹಿರಂಗವಾಗಿ ಹೋರಾಡುವ ಮೂಲಕ ಎಸ್ಒಒ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಸೈನ್ಯ ದೂರಿದೆ.
ಇದನ್ನೂ ಓದಿ: India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ
ಕುಕಿ ಮತ್ತು ಮೈತಿ ಸಮುದಾಯಗಳ ನಡುವೆ ಮೇ 3ರಂದು ಸಂಘರ್ಷ ಆರಂಭವಾಯಿತು. ಈ ಹಿಂಸಾಚಾರದಲ್ಲಿ ಇದುವರೆಗೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದಾರೆ.
ದೇಶ
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
Lawyer Sara Sunny: ಕಿವುಡ ನ್ಯಾಯವಾದಿ ಸಾರಾ ಸನ್ನಿ ಅವರು ಸಂಜ್ಞೆ ಭಾಷೆಯ ಮೂಲಕ ವಾದ ಮಂಡಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದರು.
ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court of India) ಸೋಮವಾರ ವಿಶಿಷ್ಟ ವಕೀಲರ ಕಲಾಪಕ್ಕೆ ಸಾಕ್ಷಿಯಾಯಿತು. ಕಿವುಡ ವಕೀಲೆ ಸಾರಾ ಸನ್ನಿ (Lawyer Sara Sunny) ಇಂಟರ್‌ರ್ಪ್ರಿಟರ್ ಮೂಲಕ ಸಂಜ್ಞೆ ಭಾಷೆ ಬಳಸಿ ವಾದಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಆಲಿಸಿತು.
ವರ್ಚುವಲ್ ಪ್ರೊಸೀಡಿಂಗ್ಸ್ ನಿರ್ವಹಿಸುತ್ತಿದ್ದ ಕಂಟ್ರೋಲ್ ರೂಂ, ಮೊದಲಿಗೆ ಕಿವುಡ ನ್ಯಾಯವಾದಿ ಸಾರಾ ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡಲು ನಿರಾಕರಿಸಿತ್ತು. ಆದರೆ, ಶೀಘ್ರದಲ್ಲೇ ಅವರ ವಿಚಾರಣೆಯ ಸರದಿ ಬಂದಾಗ ಆಕೆಯ ಇಂಟರ್‌ರ್ಪ್ರಿಟರ್ ಸೌರಭ್ ರಾಯ್ ಚೌಧರಿ ಪರದೆಯ ಮೇಲೆ ಕಾಣಿಸಿಕೊಂಡರು. ಚೌಧರಿ ಅವರು, ಸಾರಾ ಸನ್ನಿ ಅವರ ಸಂಕೇತ ಭಾಷೆಯನ್ನು ಅನುವಾದಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಿದರು.
ನಂತರ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡುವಂತೆ ನಿಯಂತ್ರಣ ಕೊಠಡಿ ಮತ್ತು ಇಂಟರ್ಪ್ರಿಟರ್‌ಗೆ ಸೂಚನೆ ನೀಡಿದರು. ಇದಾದ ಬಳಿಕ ಇಬ್ಬರೂ ತೆರೆ ಮೇಲೆ ಕಾಣಿಸಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದರು. ಸನ್ನಿ ಅವರು ಕಲಾಪದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಸಂಚಿತ್ ಐನ್ ಅವರು ಅರೆಂಜ್ ಮಾಡಿದ್ದರು.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಎಲ್ಲರಿಗೂ ಸಮಾನ ನ್ಯಾಯ ದೊರೆಯಬೇಕು ಎಂದು ಪ್ರತಿಪಾದಿಸುತ್ತಾರೆ. ಕಳೆದ ವರ್ಷ, ದೈಹಿಕವಾಗಿ ಅಸಮರ್ಥರಾದವರು ಸುಪ್ರೀಂ ಕೋರ್ಟ್ ಸಂಕೀರ್ಣಕ್ಕೆ ಬಂದಾಗ ಎದುರಿಸುವ ಸಮಸ್ಯೆಗಳು ಹಾಗೂ ಎಲ್ಲರಿಗೂ ನ್ಯಾಯ ವ್ಯವಸ್ಥೆ ದೊರೆಯುವಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಚಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಶೇಷ ಎಂದರೆ, ಸಿಜೆಐ ಚಂದ್ರಚೂಡ್ ಅವರೂ ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Supreme Court : ಪಿಎಂ ಕೇರ್ಸ್ ಎಲ್ಲ ಅನಾಥ ಮಕ್ಕಳಿಗೂ ಮೀಸಲಾಗಲಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಹೇಳಿದ್ಯಾಕೆ?
ಸಂಜ್ಞೆ ಭಾಷೆಯ ಮೂಲಕ ವಾದ ಮಾಡಿದ ಸಂಚಿತಾ ಐನ್ ಅವರು, ಈ ಕ್ಷಣದ ಮಹತ್ವವು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ನಿಜವಾದ ಒಳಗೊಳ್ಳುವಿಕೆ ಮತ್ತು ನ್ಯಾಯ ಪ್ರವೇಶದ ಹಾದಿಯಲ್ಲಿ ಉಳಿದಿರುವ ಸವಾಲುಗಳೊಂದಿಗೆ ಸಂಬಂಧ ಹೊಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಸಂಜ್ಞೆ ಭಾಷೆಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಆಡಳಿತ ವ್ಯವಸ್ಥೆಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಭಾನುವಾರ, ಸುಪ್ರೀಂ ಕೋರ್ಟ್ ಸಹ ಮೊದಲ ಬಾರಿಗೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ತನ್ನ ಎರಡು ದಿನಗಳ ರಾಷ್ಟ್ರೀಯ ಮಧ್ಯಸ್ಥಗಾರರ ಸಮಾಲೋಚನೆಯಲ್ಲಿ ಸಂಜ್ಞೆ ಭಾಷಾ ವ್ಯಾಖ್ಯಾನಕಾರರನ್ನು ಬಳಸಿತು.
ದೇಶ
MP Assembly Election: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಮೂವರು ಕೇಂದ್ರ ಸಚಿವರು, ಹಲವು ಸಂಸದರು ಕಣಕ್ಕೆ!
MP Assembly Election: ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಆಗಿದೆ. ಕಳೆದ ಆಗಸ್ಟ್‌ನಲ್ಲಿ ಮೊದಲನೇ ಪಟ್ಟಿ ಬಿಡುಗಡೆಯಾಗಿತ್ತು.
ನವದೆಹಲಿ: ಈ ವರ್ಷಾಂತ್ಯಕ್ಕೆ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ(MP Assembly Election) ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿಯು (BJP) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (Candidates List) ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಕೇಂದ್ರ ಸಚಿವರು (Union Ministers) ಹಾಗೂ ಹಲವು ಸಂಸದರಿಗೆ (Members of Parliament) ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಚುನಾವಣಾ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಹಾಗಿದ್ದರೂ ಬಿಜೆಪಿಯು, ಕಳೆದ ಆಗಸ್ಟ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ, ಎಲ್ಲ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿತ್ತು. ಇದೀಗ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಆಹಾರ ಸಂಸ್ಕರಣೆ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಸೇರಿ ಮೂವರು ಸಚಿವರಿಗೆ ಟಿಕೆಟ್ ನೀಡಿದೆ. ಜತೆಗೆ ಹಲವು ಸಂಸದರಿಗೂ ಸ್ಪರ್ಧಿಸಲು ಸೂಚಿಸಲಾಗಿದೆ. ಸಚಿವ ತೋಮರ್ ಅವರು ದಿಮಾನಿ ಹಾಗೂ ಪಟೇಲ್ ಅವರು ನರಸಿಂಗಪುರ ವಿಧಾನಸಭೆ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ.
ಕೇಂದ್ರದ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ನಾಯಕರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಂಡಿದ್ದು, ಇದರಿಂದ ಗೆಲ್ಲುವ ಅವಕಾಶ ಪಕ್ಷಕ್ಕೆ ಹೆಚ್ಚಾಗುತ್ತದೆ ಎಂದು ಪಕ್ಷದ ಪದಾಧಿಕಾರಿಗಳು ಭಾವಿಸಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಫಗ್ಗನ್ ಸಿಂಕ್ ಕುಲಸ್ತೆ ಅವರು ನಿವಾಸ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದು ಎಸ್‌ಟಿ ಮೀಸಲು ಕ್ಷೇತ್ರವಾಗಿದೆ.
ಸಂಸದರಾದ ಗಣೇಸ್ ಸಿಂಗ್, ರಾಕೇಶ್ ಸಿಂಗ್, ರಿತಿ ಪಾಠಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರಿಗೂ ಟಿಕೆಟ್ ನೀಡಲಾಗಿದೆ. ಹಾಗೆಯೇ, ಹೋಶಂಗಾಬಾದ್ ಸಂಸದ ಉದಯ ಪ್ರತಾಪ್ ಸಿಂಗ್ ಅವರು ಗದರವಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ: MP Election 2023: ಮಧ್ಯಪ್ರದೇಶದಲ್ಲಿ ಸಿಲಿಂಡರ್ ಬೆಲೆ 450 ರೂ.! ಎಲೆಕ್ಷನ್ ಗೆಲ್ಲಲು ಉಚಿತ ಕೊಡುಗೆ
ಎರಡನೇ ಪಟ್ಟಿಯಲ್ಲಿ ಒಟ್ಟು 39 ಅಭ್ಯರ್ಥಿಗಳಿದ್ದು, ಈ ಪೈಕಿ 6 ಮಹಿಳೆಯರಿದ್ದಾರೆ. ಜತೆಗೆ 5 ಕ್ಷೇತ್ರಗಳು ಎಸ್ ಸಿ ಮತ್ತು 10 ಕ್ಷೇತ್ರಗಳು ಎಸ್‌ಟಿ ಮೀಸಲಾಗಿವೆ. ಬಿಜೆಪಿಯು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಘೋಷಣೆ ಮಾಡಿತ್ತು. ಮಧ್ಯ ಪ್ರದೇಶ ಮಾತ್ರವಲ್ಲದೇ, ರಾಜಸ್ಥಾನ, ತೇಲಂಗಾಣ, ಛತ್ತೀಸ್‌ಗಢ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
VISTARA TOP 10 NEWS: ನಾಳೆ ಬೆಂಗಳೂರು ಬಂದ್, ಶುಕ್ರವಾರ ಕರ್ನಾಟಕ ಬಂದ್, ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ಬಂದ್
VISTARA TOP 10 NEWS : ನಾಳೆ ಬೆಂಗಳೂರು ಬಂದ್, ಶುಕ್ರವಾರ ಕರ್ನಾಟಕ ಬಂದ್, ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಬಂದ್! ಇನ್ನು ಪ್ರಧಾನಿ ಮೋದಿ ಅವರು ಅ. 1ರಂದು ಎಲ್ಲರೂ ಸೇರಿ ಕಸ ಗುಡಿಸೋಣ ಅಂದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್ 10 ನ್ಯೂಸ್.
1. ಕಾವೇರಿ ಕಿಚ್ಚು: ರಾಜ್ಯಕ್ಕೆ ಡಬಲ್ ಬಂದ್ ಶಾಕ್; ನಾಳೆ ಬೆಂಗಳೂರು, ಸೆ. 29 ಕರ್ನಾಟಕ ಬಂದ್
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿರುವ ಸೆ. 26ರ ಬೆಂಗಳೂರು ಬಂದ್ ಬೆನ್ನಿಗೇ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸೆ. 29ರಂದು ಅಖಿಲ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹೀಗಾಗಿ ವಾರದಲ್ಲಿ ಎರಡು ಬಂದ್ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
2. ನಾಳೆ ಬೆಂಗಳೂರು ಬಂದ್: ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ; ಏನಿರುತ್ತೆ? ಏನಿರಲ್ಲ?
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಹಾಗಿದ್ದರೆ ಏನಿರುತ್ತೆ? ಏನಿರಲ್ಲ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ1: ಬಲವಂತದಿಂದ ಬಂದ್ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ ಎಂದ ಕಮಿಷನರ್
ಪೂರಕ ಸುದ್ದಿ2: ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಪೂರಕ ಸುದ್ದಿ3: ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ
3 .ಜಲಶಕ್ತಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಲಿ, ಮೋದಿ ಮಧ್ಯಪ್ರವೇಶಿಸಲಿ: ದೇವೇಗೌಡ
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಸಂಬಂಧ ಜಲ ಶಕ್ತಿ ಇಲಾಖೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ-ಜೆಡಿಎಸ್‌ನಿಂದ ರಾಜಕೀಯ: ಸಿದ್ದರಾಮಯ್ಯ ಆರೋಪ
4. ಏಕಕಾಲಕ್ಕೆ ರಾಜ್ಯಾದ್ಯಂತ ದಾಖಲೆ ಬರೆದ ಜನತಾ ದರ್ಶನ: ಸಿದ್ದರಾಮಯ್ಯ ಚಿಂತನೆ ಕ್ಲಿಕ್
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಸೂಚನೆಯಂತೆ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ (Janata Darshana) ಕಾರ್ಯಕ್ರಮ ನಡೆದಿದ್ದು, ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಏಷ್ಯನ್ ಗೇಮ್ಸ್: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ; ಲಂಕಾ ವಿರುದ್ಧ ರೋಚಕ ಜಯ
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತದ ಪಂದ್ಯದಲ್ಲಿ ಲಂಕಾ ವಿರುದ್ಧ ರೋಚಕ 19 ರನ್ಗಳ ಗೆಲುವು ಸಾಧಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ದೇಶಾದ್ಯಂತ ಅ.1ರಂದು 1 ಗಂಟೆ ಸ್ವಚ್ಛತಾ ಅಭಿಯಾನ: ಎಲ್ಲರೂ ಬನ್ನಿ ಎಂದು ಆಹ್ವಾನಿಸಿದ ಪ್ರಧಾನಿ ಮೋದಿ
ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 1ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂದು ಒಂದು ಗಂಟೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಎಲ್ಲ ಗ್ಯಾರಂಟಿಗಳಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ
7. ಭಾರತ ವಿಭಜಿಸಿ ಹಲವು ದೇಶ ಸೃಷ್ಟಿಸುವುದು ಖಲಿಸ್ತಾನಿ ಉಗ್ರ ಪನ್ನುನ್ ಗುರಿ; ಷಡ್ಯಂತ್ರ ಬಯಲು
ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಆಸ್ತಿಗಳನ್ನು ಎನ್‌ಐಎ ಜಪ್ತಿ ಮಾಡಿದ ಬೆನ್ನಲ್ಲೇ ಉಗ್ರನ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನಾಗಿ ಸೃಷ್ಟಿಸುವುದು ಗುರುಪತ್ವಂತ್ ಸಿಂಗ್ ಪನ್ನುನ್ ಗುರಿಯಾಗಿದೆ” ಎನ್ನುವುದೇ ಆ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಬಿಜೆಪಿ ಜತೆ ಮೈತ್ರಿ ಇಲ್ಲ; ಎಐಎಡಿಎಂಕೆ ಅಧಿಕೃತ ಘೋಷಣೆ! ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ
ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. 9 ತಿಂಗಳೊಳಗೆ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್; ಜವಾನ್ ಹೊಸ ದಾಖಲೆ
ಶಾರುಖ್ ಖಾನ್ ಪ್ರಧಾನ ಪಾತ್ರದಲ್ಲಿರುವ ಜವಾನ್, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸಿದೆ (Jawan box office collection).ಪಠಾಣ್ ಸಿನಿಮಾವೂ 1000 ಕೋಟಿ ದಾಟಿತ್ತು. ಹೀಗಾಗಿ ಒಂಬತ್ತು ತಿಂಗಳ ಅವಧಿಯಲ್ಲಿ ಶಾರುಖ್ 2000 ಕೋಟಿ ಕೊಳ್ಳೆ ಹೊಡೆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್ ಕಂಪನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
-
Live News4 hours ago
Bangalore Bandh Live: ಬೆಂಗಳೂರು ಬಂದ್ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?
-
ವಿದೇಶ21 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ19 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ14 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ದೇಶ11 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ
-
ಕರ್ನಾಟಕ15 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema18 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ21 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?