Comet to Earth: ಭೂಮಿಯತ್ತ ಧಾವಿಸಿ ಬರುತ್ತಿದೆ ಮೌಂಟ್‌ ಎವರೆಸ್ಟ್‌ಗಿಂತ 3 ಪಟ್ಟು ದೊಡ್ಡ ಧೂಮಕೇತು! - Vistara News

ವಿಜ್ಞಾನ

Comet to Earth: ಭೂಮಿಯತ್ತ ಧಾವಿಸಿ ಬರುತ್ತಿದೆ ಮೌಂಟ್‌ ಎವರೆಸ್ಟ್‌ಗಿಂತ 3 ಪಟ್ಟು ದೊಡ್ಡ ಧೂಮಕೇತು!

12P/Pons-Brooks ಎಂದು ಹೆಸರಿಸಲಾದ ಈ ಧೂಮಕೇತು ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಸ್ಫೋಟಗೊಂಡಿದೆ ಮತ್ತು ಈಗ ಭೂಮಿಯ ಕಡೆಗೆ ನುಗ್ಗುತ್ತಿದೆ.

VISTARANEWS.COM


on

comet 12P/Pons-Brooks
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್‌: ಮೌಂಟ್ ಎವರೆಸ್ಟ್‌ಗಿಂತ (Mount Everest) ಮೂರು ಪಟ್ಟು ದೊಡ್ಡದಾದ ಧೂಮಕೇತುವೊಂದು (12P/Pons-Brooks) ಭೂಮಿಯ ಕಡೆಗೆ ಧಾವಿಸಿ ಬರುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

12P/Pons-Brooks ಎಂದು ಹೆಸರಿಸಲಾದ ಈ ಧೂಮಕೇತು ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಸ್ಫೋಟಗೊಂಡಿದೆ ಮತ್ತು ಈಗ ಭೂಮಿಯ ಕಡೆಗೆ ನುಗ್ಗುತ್ತಿದೆ. ಇದೊಂದು ಕ್ರಯೋವೋಲ್ಕಾನಿಕ್- ಅಥವಾ ಶೀತ ಜ್ವಾಲಾಮುಖಿ- ಧೂಮಕೇತು. ಇದರ ಸುತ್ತಳತೆ ಸುಮಾರು 30 ಕಿಲೋಮೀಟರ್‌ಗಳಷ್ಟಿದೆ. ಅಕ್ಟೋಬರ್ 5ರಂದು ಸ್ಫೋಟಿಸಿತು.

ಕಳೆದ ನಾಲ್ಕು ತಿಂಗಳಲ್ಲಿ ಈ ಧೂಮಕೇತು ಎರಡನೇ ಬಾರಿಗೆ ಸ್ಫೋಟಿಸಿತು. ಮೊದಲ ಸ್ಫೋಟ ಜುಲೈನಲ್ಲಿ ಸಂಭವಿಸಿದೆ. 12Pಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬ್ರಿಟಿಷ್ ಖಗೋಳ ಸಂಘವು (BAA), ಅದರ ʼಕೋಮಾʼದಿಂದ ಪ್ರತಿಫಲಿಸುವ ಬೆಳಕು ಹತ್ತಾರು ಬಾರಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ನಂತರ ಸ್ಫೋಟವನ್ನು ಪತ್ತೆಹಚ್ಚಿದೆ. ಕೋಮಾ ಎಂದರೆ ಅದರ ಕೇಂದ್ರವನ್ನು ಸುತ್ತುವರಿದಿರುವ ಅನಿಲದ ಮೋಡ.

ಸ್ಫಟದ ಬಳಿಕ ಈ ಧೂಮಕೇತುವಿನ ಕೋಮಾ ಮತ್ತಷ್ಟು ವಿಸ್ತರಿಸಿದೆ. ಮತ್ತು “ವಿಚಿತ್ರವಾದ ಕೊಂಬುಗಳನ್ನು” ಸೃಷ್ಟಿಸಿಕೊಂಡಿದೆ. ಕೋಮಾದ ಅನಿಯಮಿತ ಆಕಾರ ಈ ಧೂಮಕೇತುವನ್ನು ಕಾಲ್ಪನಿಕ ಬಾಹ್ಯಾಕಾಶ ನೌಕೆಯಂತೆ ಕಾಣಿಸುತ್ತಿದೆ. ಉದಾಹರಣೆಗೆ ʻಸ್ಟಾರ್ ವಾರ್ಸ್’ ಫಿಲಂನ ಮಿಲೇನಿಯಮ್ ಫಾಲ್ಕನ್‌ನಂತೆ ಕಾಣಿಸುತ್ತಿದೆ ಎಂದು ಕೆಲವು ತಜ್ಞರು ತಮಾಷೆ ಮಾಡಿದ್ದಾರೆ.

ಕೊಂಬುಗಳ ಕಾರಣ ಅಸ್ಪಷ್ಟವಾಗಿದೆ. ತಜ್ಞರು ಇದು 12Pಯ ನ್ಯೂಕ್ಲಿಯಸ್‌ನ ಆಕಾರದಿಂದ ಉಂಟಾಗಿರಬಹುದು ಎಂದು ನಂಬುತ್ತಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಎರಡು ಕೊಂಬುಗಳು ವಿಚಿತ್ರವಾದ ಆಕಾರದ ಕ್ರಯೋವೊಲ್ಕಾನಿಕ್ ತೆರಪಿನಿಂದ ಉಂಟಾಗಿರಬಹುದು. ಇದು ಒಳಗಿನ ಅನಿಲವನ್ನು ಹೊರ ಚಿಮ್ಮಿಸಲು ಕಾರಣವಾಗಿದೆ ಎಂದಿದ್ದಾರೆ.

12Pಯ ಪಥ ಭೂಮಿಯತ್ತ ಇದ್ದರೂ, ಹೆಚ್ಚಿನ ಚಿಂತೆ ಅಗತ್ಯವಿಲ್ಲ. 2024ರವರೆಗೂ ಧೂಮಕೇತು ಭೂಮಿಗೆ ಸಮೀಪದ ಬಿಂದುವನ್ನು ತಲುಪುವುದಿಲ್ಲ. ಮತ್ತು ಅದು ಬರಿಗಣ್ಣಿಗೆ ಗೋಚರಿಸಲಿದೆ. ಈ ಧೂಮಕೇತುವನ್ನು ನಂತರ ಸೌರವ್ಯೂಹಕ್ಕೆ ಮರಳಿ ತಿರುಗುವಂತೆ ಘಾತಿಸಲಾಗುತ್ತದೆ. ಮತ್ತು 2095ರವರೆಗೂ ಅದು ಮರಳಿ ಬರುವುದಿಲ್ಲ.

ಇದು ಜುಲೈ 20ರಿಂದ 12Pಯ ಎರಡನೇ ಸ್ಫೋಟವಾಗಿದೆ. 69 ವರ್ಷಗಳಲ್ಲಿ ಮೊದಲ ಬಾರಿಗೆ ಇದು ಸ್ಫೋಟಿಸಿದೆ. ಸ್ಫೋಟದ ಸಮಯದಲ್ಲಿ ಹಾರ್ನ್ ತರಹದ ಹೊರಸೂಸುವಿಕೆಗಳು ಧೂಮಕೇತಿಗಿಂತ 7,000 ಪಟ್ಟು ಹೆಚ್ಚು ವಿಸ್ತಾರಸಿವೆ. ಈ ಧೂಮಕೇತು ಸ್ಫೋಟಗೊಳ್ಳುವುದನ್ನು ಮುಂದುವರೆಸಿದರೆ ಮುಂದಿನ ವರ್ಷ ಹೆಚ್ಚಿನ ಆಸಕ್ತಿ ಕೆರಳಿಸಲಿದೆ. ಇದನ್ನು ಮೊದಲು ಜುಲೈ 12, 1812ರಂದು ಜೀನ್-ಲೂಯಿಸ್ ಪೊನ್ಸ್ ಎಂಬ ವಿಜ್ಞಾನಿ ಕಂಡುಹಿಡಿದರು. ಇದು ಸಕ್ರಿಯ ಐಸ್ ಜ್ವಾಲಾಮುಖಿಗಳನ್ನು ಹೊಂದಿರುವ 20 ಧೂಮಕೇತುಗಳಲ್ಲಿ ಒಂದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Samsung: ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ 2ನೇ ಆವೃತ್ತಿ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ

Samsung: ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಜನತೆಯ ಕೌಶಲ್ಯ ಹೆಚ್ಚಿಸಲು ವಿನ್ಯಾಸ ಮಾಡಲಾದ ರಾಷ್ಟ್ರೀಯ ಕೌಶಲ ಕಾರ್ಯಕ್ರಮ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ನ ಎರಡನೇ ಆವೃತ್ತಿಯನ್ನು ಸ್ಯಾಮ್‌ಸಂಗ್ ಇಂಡಿಯಾ ಪ್ರಾರಂಭಿಸಿದೆ.

VISTARANEWS.COM


on

Samsung India launched the 2nd edition of Samsung Innovation Campus
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ಸ್ಯಾಮ್‌ಸಂಗ್ (Samsung) ಎಐ, ಐಒಟಿ, ಬಿಗ್ ಡೇಟಾ, ಮತ್ತು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಮುಂತಾದ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಜನತೆಯ ಕೌಶಲ ಹೆಚ್ಚಿಸಲು ವಿನ್ಯಾಸ ಮಾಡಲಾದ ತನ್ನ ರಾಷ್ಟ್ರೀಯ ಕೌಶಲ್ಯ ಕಾರ್ಯಕ್ರಮ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ಎರಡನೇ ಆವೃತ್ತಿಯನ್ನು ಪ್ರಾರಂಭಿಸಿದೆ.

ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮವು 18-25 ವರ್ಷ ವಯಸ್ಸಿನ ಯುವಜನತೆಗೆ ಭವಿಷ್ಯದ ತಂತ್ರಜ್ಞಾನಗಳ ಕೌಶಲ ಒದಗಿಸುವ ಮತ್ತು ಆ ಮೂಲಕ ಅವರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಯುವಜನತೆಗೆ ಸರಿಯಾದ ಅವಕಾಶಗಳನ್ನು ಸೃಷ್ಟಿ ಮಾಡಲು ರೂಪಿಸಲಾಗಿರುವ ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

ಭಾರತದಾದ್ಯಂತ ಇರುವ 3,500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ತಿಳುವಳಿಕೆ ಒಪ್ಪಂದಕ್ಕೆ ಈ ವಾರದ ಆರಂಭದಲ್ಲಿ ಸ್ಯಾಮ್‌ಸಂಗ್ ಮತ್ತು ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ಇಎಸ್‌ಎಸ್‌ಸಿಐ) ನಡುವೆ ಸಹಿ ಮಾಡಲಾಗಿದೆ.

ಈ ವರ್ಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ಒದಗಿಸುವುದರ ಜತೆಗೆ ಇನ್ನೂ ಹೆಚ್ಚಿನ ಆಸಕ್ತಿಕರ ಅಂಶಗಳು ಸೇರ್ಪಡೆಗೊಂಡಿವೆ. ಪ್ರತಿ ಕ್ಷೇತ್ರದಲ್ಲಿ ರಾಷ್ಟ್ರೀಯ ಟಾಪರ್‌ ಸ್ಥಾನ ಪಡೆಯುವವರು ದೆಹಲಿ/ಎನ್‌ಸಿಆರ್‌ನಲ್ಲಿರುವ ಸ್ಯಾಮ್‌ಸಂಗ್ ಘಟಕಗಳಿಗೆ ಭೇಟಿ ನೀಡುವ ಅವಕಾಶ ಪಡೆಯುತ್ತಾರೆ. ಜತೆಗೆ ರೂ. 1 ಲಕ್ಷದ ನಗದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಘಟಕಗಳಿಗೆ ಭೇಟಿ ನೀಡುವ ವಿದ್ಯಾರ್ಥಿಗಳು ಸ್ಯಾಮ್‌ಸಂಗ್‌ನ ನಾಯಕತ್ವದ ತಂಡಗಳೊಂದಿಗೆ ಸಂವಹನ ನಡೆಸುವ ಮತ್ತು ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶ ಹೊಂದಲಿದ್ದಾರೆ. ರಾಷ್ಟ್ರ ಮಟ್ಟದ ಕೋರ್ಸ್ ಟಾಪರ್‌ಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ವಾಚ್‌ಗಳಂತಹ ಅತ್ಯಾಕರ್ಷಕ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಸಹ ಪಡೆಯಲಿದ್ದಾರೆ.

ಈ ಕುರಿತು ಮಾತನಾಡಿದ ಸ್ಯಾಮ್‌ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್, ಸ್ಯಾಮ್‌ಸಂಗ್ ಭಾರತದಲ್ಲಿ ಕಳೆದ 28 ವರ್ಷಗಳಿಂದ ತನ್ನ ಅಸ್ತಿತ್ವ ಹೊಂದಿದ್ದು, ಈ ಎಲ್ಲಾ ವರ್ಷಗಳಲ್ಲಿ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದೆ. ನಮ್ಮ ದೃಷ್ಟಿಕೋನವು ಯುವಜನರಿಗೆ ಕೌಶಲ್ಯ ಒದಗಿಸುವ ಮತ್ತು ಅವರಿಗೆ ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನು ಒದಗಿಸಿ ಅವರನ್ನು ಸಬಲೀಕರಣಗೊಳಿಸುವ ಭಾರತ ಸರ್ಕಾರದ ಉದ್ದೇಶಗಳೊಂದಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ ಮೂಲಕ, ನಾವು ಯುವಜನತೆಯ ಕೌಶಲ್ಯವನ್ನು ವೃದ್ಧಿಸುವ ಕೌಶಲ್ಯ ಆಧಾರಿತ ಕಲಿಕೆಯ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ. ಅದರಿಂದ ಯುವಕರು ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಮತ್ತು ಅರ್ಥಪೂರ್ಣ ಬದಲಾವಣೆ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 2nd PUC Exam: ಏ.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2; ಪ್ರವೇಶ ಪತ್ರ ಬಿಡುಗಡೆ

ಇಎಸ್‌ಎಸ್‌ಸಿಐ ಸಂಸ್ಥೆಯು ಕೌಶಲಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಉದ್ಯಮ ಸಂಘಗಳಿಂದ ಉತ್ತೇಜಿಸಲ್ಪಟ್ಟ ರಾಷ್ಟ್ರೀಯ ಮಟ್ಟದ ಕೌಶಲ ಒದಗಿಸುವ ಸಂಸ್ಥೆಯಾಗಿದೆ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಅಡಿಯಲ್ಲಿ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ವಲಯ ಕೌಶಲ್ಯ ಮಂಡಳಿ) ಆಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನ ರಾಷ್ಟ್ರವ್ಯಾಪಿ ಇರುವ ಅನುಮೋದಿತ ತರಬೇತಿ ಮತ್ತು ಶಿಕ್ಷಣ ಪಾಲುದಾರರ ನೆಟ್‌ವರ್ಕ್ ಮೂಲಕ ಸ್ಥಳೀಯ ಮಟ್ಟದಲ್ಲಿ ತರಬೇತಿಯನ್ನು ನೀಡುತ್ತದೆ. ಇಎಸ್‌ಎಸ್‌ಸಿಐ ಸಂಸ್ಥೆಯು ಭಾರತದ ಸಣ್ಣ ಪಟ್ಟಣಗಳಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನ ಶಿಕ್ಷಣದ ಲಭ್ಯತೆ ಇಲ್ಲವೋ ಅಲ್ಲೆಲ್ಲಾ ಯುವಜನತೆಗೆ ಕೋರ್ಸ್‌ಗಳನ್ನು ಒದಗಿಸುವ ಅವಕಾಶಗಳನ್ನು ಕೂಡ ಎದುರು ನೋಡುತ್ತದೆ.

ಈ ಕುರಿತು ಇಎಸ್‌ಎಸ್‌ಸಿಐ ಚೀಫ್ ಆಫರೇಟಿಂಗ್ ಆಫೀಸರ್ (Officiating CEO) ಡಾ. ಅಭಿಲಾಷಾ ಗೌರ್ ಮಾತನಾಡಿ, ದೇಶದಲ್ಲಿ ಕೌಶಲ ಒದಗಿಸುವ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸಿಎಸ್‌ಆರ್‌ ಉಪಕ್ರಮಕ್ಕಾಗಿ ಸ್ಯಾಮ್‌ಸಂಗ್ ಜತೆಗೆ ಪಾಲುದಾರಿಕೆ ಹೊಂದಲು ಇಎಸ್‌ಎಸ್‌ಸಿಐ ಸಂತೋಷ ಪಡುತ್ತದೆ. ನಮ್ಮ ಉದ್ದೇಶಕ್ಕೆ ಅನುಗುಣವಾಗಿ ರಾಷ್ಟ್ರದ ಯುವಜನರಿಗೆ ಅದರಲ್ಲೂ ವಿಶೇಷವಾಗಿ ಕಡಿಮೆ ಸವಲತ್ತು ಹೊಂದಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಕೌಶಲ ಮತ್ತು ಅಗತ್ಯ ಜ್ಞಾನವನ್ನು ಒದಗಿಸಲು ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಒದಗಿಸುತ್ತದೆ ಮತ್ತು ಅವರನ್ನು ಉದ್ಯೋಗಕ್ಕೆ ಸಿದ್ಧಗೊಳಿಸುತ್ತದೆ ಎಂಬ ಭರವಸೆ ನಮಗಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ದಾಖಲಾದ ಯುವಜನತೆ ತರಗತಿ ಮೂಲಕ ಮತ್ತು ಆನ್‌ಲೈನ್ ತರಬೇತಿ ಪಡೆಯುತ್ತಾರೆ ಹಾಗೂ ಎಐ, ಐಒಟಿ, ಬಿಗ್ ಡೇಟಾ ಮತ್ತು ಕೋಡಿಂಗ್ ಆಂಡ್ ಪ್ರೋಗ್ರಾಮಿಂಗ್‌ನಲ್ಲಿ ತಮ್ಮ ಆಯ್ದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸುತ್ತಾರೆ.

ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಸಾಫ್ಟ್ ಸ್ಕಿಲ್ಸ್ ತರಬೇತಿಯನ್ನೂ ನೀಡಲಾಗುವುದು. ಭಾಗವಹಿಸುವವರು ಭಾರತದಾದ್ಯಂತ ಇರುವ ಇಎಸ್‌ಎಸ್‌ಸಿಐಯ ತರಬೇತಿದಾರರು ಮತ್ತು ಶಿಕ್ಷಣ ಪಾಲುದಾರರ ಮೂಲಕ ಸಿದ್ಧಗೊಳಿಸಲಾಗುತ್ತದೆ. ಈ ಕಾರ್ಯಕ್ರಮವು ಆಫ್‌ಲೈನ್ ಮತ್ತು ಆನ್‌ಲೈನ್ ಕಲಿಕೆ, ಹ್ಯಾಕಥಾನ್‌ಗಳು ಮತ್ತು ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್‌ಗಳು ಮತ್ತು ಸ್ಯಾಮ್‌ಸಂಗ್ ಉದ್ಯೋಗಿಗಳು ಒದಗಿಸುವ ಪರಿಣಿತ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮವು ನಾಲ್ಕು ರಾಜ್ಯಗಳಲ್ಲಿ ಎಂಟು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತದೆ. ದೇಶದ ಉತ್ತರ ಭಾಗದಲ್ಲಿ, ದೆಹಲಿ ಎನ್‌ಸಿಆರ್‌ನಲ್ಲಿರುವ ಎರಡು ಕೇಂದ್ರಗಳ ಜತೆಗೆ ಲಕ್ನೋ ಮತ್ತು ಗೋರಖ್‌ಪುರದಲ್ಲಿ ಎರಡು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ದಕ್ಷಿಣ ಭಾರತದಲ್ಲಿ, ತಮಿಳುನಾಡಿನ ಚೆನ್ನೈ ಮತ್ತು ಶ್ರೀಪೆರಂಬದೂರಿನಲ್ಲಿ 2 ಕೇಂದ್ರಗಳು ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಎರಡು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ಗೆ ಉಸೇನ್‌ ಬೋಲ್ಟ್ ಬ್ರ್ಯಾಂಡ್‌ ಅಂಬಾಸಿಡರ್

ಕಾರ್ಯಕ್ರಮವು ಏಪ್ರಿಲ್ 2024 ರಲ್ಲಿ ಪ್ರಾರಂಭವಾಗಲಿದೆ ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆರು ತಿಂಗಳ ಕೋರ್ಸ್ ಅಕ್ಟೋಬರ್ 2024ರಲ್ಲಿ ಕೊನೆಗೊಳ್ಳುತ್ತದೆ. ನವೆಂಬರ್ 2024ರಲ್ಲಿ ಕೋರ್ಸ್ ಟಾಪರ್‌ಗಳ ಹೆಸರನ್ನು ಘೋಷಿಸಲಾಗುತ್ತದೆ ಎಂದು ತಿಳಿಸಿದೆ.

Continue Reading

ದೇಶ

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Sunita Williams: ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

VISTARANEWS.COM


on

Sunita Williams
Koo

ನ್ಯೂಯಾರ್ಕ್‌: ಭಾರತೀಯ ಮೂಲದ ವಿಖ್ಯಾತ ಗಗನಯಾತ್ರಿ (Astronaut) ಸುನೀತಾ ಎಲ್. ವಿಲಿಯಮ್ಸ್ (Sunita Williams), ತಮ್ಮ ಮೂರನೇ ಬಾಹ್ಯಾಕಾಶ ಯಾತ್ರೆಯನ್ನು (Space mission) ನಡೆಸಲು ಸಜ್ಜಾಗಿದ್ದಾರೆ. ಅಮೆರಿಕದ ನಾಸಾ (NASA) ಸಂಸ್ಥೆಯ ಗಗನಯಾತ್ರಿಯಾದ ಸುನೀತಾ, ಪ್ರಸ್ತುತ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ. ಇದು ಆ ವಾಹನದ ಮೊದಲ ಸಿಬ್ಬಂದಿ ವಿಮಾನ. ಮತ್ತು ಸುನೀತಾಗೆ ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೂರನೇ ಕಾರ್ಯಾಚರಣೆಯಾಗಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏಜೆನ್ಸಿಯ ಬೋಯಿಂಗ್ ಕ್ರೂ ಫ್ಲೈಟ್ ಪರೀಕ್ಷೆಯ ತಯಾರಿಗಾಗಿ NASA ಎರಡು ಉಡಾವಣೆಗಳನ್ನು ಆಯೋಜಿಸಿದೆ. ಏಪ್ರಿಲ್ 25ರಂದು EDTನಲ್ಲಿ ಹಾಗೂ ಮೇ 6ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಲ್ಲಿ ಬಾಹ್ಯಾಕಾಶ ಉಡಾವಣಾ ಸಂಕೀರ್ಣ-41ರಿಂದ.”

ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ಭಾಗವಾಗಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ವಿಮಾನದ ಉಡಾವಣೆ, ಡಾಕಿಂಗ್ ಮತ್ತು ಭೂಮಿಗೆ ಹಿಂತಿರುಗುವುದು ಸೇರಿದಂತೆ ಸ್ಟಾರ್‌ಲೈನರ್ ಸಿಸ್ಟಮ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗಿದೆ.

ಸುನಿತಾ ವಿಲಿಯಮ್ಸ್ ಅವರ ಪರಿಣತಿ

ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಹಾರಾಟದ ಮೊದಲ ಅನುಭವವು ಡಿಸೆಂಬರ್ 9, 2006ರಿಂದ ಜೂನ್ 22, 2007ರವರೆಗೆ ನಡೆಯಿತು. ʼಎಕ್ಸ್‌ಪೆಡಿಶನ್ 14/15ʼನೊಂದಿಗೆ ಪ್ರಾರಂಭವಾಯಿತು. ಅವರು STS-116ನ ಸಿಬ್ಬಂದಿಯೊಂದಿಗೆ ಸಾಗಿ ಫ್ಲೈಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಅವರು ಒಟ್ಟು 29 ಗಂಟೆ 17 ನಿಮಿಷಗಳ ನಾಲ್ಕು ಬಾಹ್ಯಾಕಾಶ ನಡಿಗೆಯೊಂದಿಗೆ ಮಹಿಳೆಯರ ದಾಖಲೆಯನ್ನು ಸ್ಥಾಪಿಸಿದರು. ಜೂನ್ 2007ರಲ್ಲಿ ಯಾನ ಮುಗಿಸಿ STS-117 ಸಿಬ್ಬಂದಿಯೊಂದಿಗೆ ಭೂಮಿಗೆ ಮರಳಿದರು.

ಜುಲೈ 14ರಿಂದ ನವೆಂಬರ್ 18, 2012ರವರೆಗೆ ಅವರ ಎರಡನೇ ಬಾಹ್ಯಾಕಾಶ ಯಾನ, ಎಕ್ಸ್‌ಪೆಡಿಶನ್ 32/33. ಅವರು ರಷ್ಯಾದ ಸೋಯುಜ್ ಕಮಾಂಡರ್ ಯೂರಿ ಮಾಲೆನ್‌ಚೆಂಕೊ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಫ್ಲೈಟ್ ಇಂಜಿನಿಯರ್ ಅಕಿಹಿಕೊ ಹೊಶೈಡ್ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಜುಲೈ 2012ರಂದು ಹೋದರು. ಕಕ್ಷೆಯ ಪ್ರಯೋಗಾಲಯದಲ್ಲಿ ಸಂಶೋಧನೆ ಮತ್ತು ಪರಿಶೋಧನೆ ನಡೆಸುತ್ತ ನಾಲ್ಕು ತಿಂಗಳು ಕಳೆದಳು.

ಈ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಹಲವು ಸಂಶೋಧನೆ ನಡೆಸಿದರು. ಬಾಹ್ಯಾಕಾಶ ನಡಿಗೆಗಳನ್ನು ನಡೆಸಿದರು ಮತ್ತು ಬಾಹ್ಯಾಕಾಶದ ಪರಿಶೋಧನೆಗೆ ಗಮನಾರ್ಹವಾಗಿ ಕೊಡುಗೆ ನೀಡಿದರು. ಸುನೀತಾ ವಿಲಿಯಮ್ಸ್ 50 ಗಂಟೆಗಳು ಮತ್ತು 40 ನಿಮಿಷಗಳ ಸಮಯದೊಂದಿಗೆ ದಾಖಲೆ ಸಮಯದ ಬಾಹ್ಯಾಕಾಶ ನಡಿಗೆ ದಾಖಲೆ ಮಾಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವ ಸಂದಿವೆ. ಅವರು US ನೌಕಾಪಡೆಯ ನಿವೃತ್ತ ಕ್ಯಾಪ್ಟನ್. ಅವರಿಗೆ ಎರಡು ಬಾರಿ ರಕ್ಷಣಾ ಉನ್ನತ ಸೇವಾ ಪದಕ, ಲೀಜನ್ ಆಫ್ ಮೆರಿಟ್, ನೌಕಾಪಡೆಯ ಪ್ರಶಂಸಾ ಪದಕ ಎರಡು ಬಾರಿ, ನೌಕಾಪಡೆ ಮತ್ತು ಮೆರೈನ್ ಕಾರ್ಪ್ಸ್ ಸಾಧನೆ ಪದಕ ಮತ್ತು ಮಾನವೀಯ ಸೇವಾ ಪದಕ ನೀಡಲಾಗಿದೆ. ಪ್ರಸ್ತುತ ವಿಲಿಯಮ್ಸ್ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಭಾರತೀಯನನ್ನು ಇಳಿಸುವ ತನಕ ಬಿಡಲ್ಲ; ಇಸ್ರೋ ಅಧ್ಯಕ್ಷ ಮಹತ್ವದ ಘೋಷಣೆ

Continue Reading

ಪ್ರಮುಖ ಸುದ್ದಿ

Female Doctors: ವೈದ್ಯೆಯರಿಂದ ಚಿಕಿತ್ಸೆ ಪಡೆದ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಂತೆ! ಅಧ್ಯಯನ ವರದಿ

Female Doctors: 2016ರಿಂದ 2019ರವರೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ 4,58,100 ಮಹಿಳಾ ರೋಗಿಗಳು ಮತ್ತು 3,18,800 ಪುರುಷ ರೋಗಿಗಳು ಸೇರಿದಂತೆ 7,76,000 ಮಂದಿಯನ್ನು ಇದರಲ್ಲಿ ಅಧ್ಯಯನ ಮಾಡಲಾಗಿದೆ. “ಮಹಿಳಾ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಗಳಲ್ಲಿ ಕಡಿಮೆ ಮರಣ ಮತ್ತು ರಿಅಡ್ಮಿಶನ್‌ ಕಂಡುಬಂದಿದೆ” ಎಂದು ಅಧ್ಯಯನವು ಹೇಳಿದೆ.

VISTARANEWS.COM


on

female doctors
Koo

ಹೊಸದಿಲ್ಲಿ: ಮಹಿಳಾ ವೈದ್ಯರಿಂದ (female Doctors) ಚಿಕಿತ್ಸೆ ಪಡೆದ ರೋಗಿಗಳು (Patients) ಸಾಯುವ (death) ಅಥವಾ ಪುನಃ ಅಡ್ಮಿಟ್‌ ಆಗುವ ಸಾಧ್ಯತೆ ಕಡಿಮೆ ಎಂದು ಹೊಸ ಅಧ್ಯಯನವೊಂದು (study) ಹೇಳಿದೆ. ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪುರುಷ ವೈದ್ಯರಿಂದ (Male doctors) ಚಿಕಿತ್ಸೆ ಪಡೆದ ರೋಗಿಗಳಿಗಿಂತ, ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳ ಮರಣದ ಸಂಖ್ಯೆ ಕಡಿಮೆ ಮತ್ತು ಹೆಚ್ಚು ಉಪಶಮನ ಹೊಂದಿದ್ದಾರೆ.

2016ರಿಂದ 2019ರವರೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ 4,58,100 ಮಹಿಳಾ ರೋಗಿಗಳು ಮತ್ತು 3,18,800 ಪುರುಷ ರೋಗಿಗಳು ಸೇರಿದಂತೆ 7,76,000 ಮಂದಿಯನ್ನು ಇದರಲ್ಲಿ ಅಧ್ಯಯನ ಮಾಡಲಾಗಿದೆ. “ಮಹಿಳಾ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಗಳಲ್ಲಿ ಕಡಿಮೆ ಮರಣ ಮತ್ತು ರಿಅಡ್ಮಿಶನ್‌ ಕಂಡುಬಂದಿದೆ” ಎಂದು ಅಧ್ಯಯನವು ಹೇಳಿದೆ. ಮಹಿಳಾ ರೋಗಿಗಳ ಮರಣ ಪ್ರಮಾಣವು ವೈದ್ಯೆಯರಿಂದ ಚಿಕಿತ್ಸೆ ಪಡೆದಾಗ 8.15%ರಷ್ಟಿದ್ದರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದಾಗ 8.38%ರಷ್ಟಿತ್ತು. ಪುರುಷರ ಮರಣ ಪ್ರಮಾಣವು ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದಾಗ 10.15%ರಷ್ಟು ಹಾಗೂ ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದಾಗ 10.23%ರಷ್ಟಿತ್ತು.

ಈ ಶೇಕಡಾವಾರು ವ್ಯತ್ಯಾಸವನ್ನು ವೈದ್ಯಕೀಯವಾಗಿ ಅರ್ಥಪೂರ್ಣ ಎಂದು ಪರಿಗಣಿಸಲಾಗುತ್ತದೆ. “ಮಹಿಳಾ ವೈದ್ಯರು ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ ಹೆಚ್ಚಿನ ಮಹಿಳಾ ವೈದ್ಯರು ರೋಗಿಗಳ ಸಾಮಾಜಿಕ ದೃಷ್ಟಿಕೋನದಿಂದ ಪ್ರಯೋಜನ ಪಡೆಯುತ್ತಾರೆ” ಎಂದು ಸಮೀಕ್ಷೆಯ ನಾಯಕಿ ಯುಸುಕೆ ತ್ಸುಗಾವಾ ತಿಳಿಸಿದ್ದಾರೆ.

ಮಹಿಳಾ ವೈದ್ಯರು ತಮ್ಮ ರೋಗಿಗಳೊಂದಿಗೆ ಹೆಚ್ಚು ಸಮಯ ಮಾತನಾಡುತ್ತಾರೆ. ಅವರ ದಾಖಲೆಗಳನ್ನು ನೋಡುತ್ತಾರೆ ಮತ್ತು ಡಯಾಗ್ನೋಸಿಸ್‌ ಮಾಡುತ್ತಾರೆ ಎಂದು ತಜ್ಞರು ಹೇಳಿದ್ದಾರೆ. ಮಹಿಳಾ ವೈದ್ಯರು ಬಹುಶಃ ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುತ್ತಾರೆ ಮತ್ತು ಮಹಿಳಾ ರೋಗಿಗಳಿಗೆ ಬಂದಾಗ ಹೆಚ್ಚು ರೋಗಿಕೇಂದ್ರಿತ ವಿಧಾನವನ್ನು ಹೊಂದಿರುತ್ತಾರೆ. ವೈದ್ಯೆಯರಿಂದ ಚಿಕಿತ್ಸೆ ಪಡೆಯುವುದರಿಂದ ಸೂಕ್ಷ್ಮ ಪರೀಕ್ಷೆಗಳ ಸಮಯದಲ್ಲಿ ಮಹಿಳಾ ರೋಗಿಗಳಿಗೆ ಉಂಟಾಗಬಹುದಾದ ಮುಜುಗರ ತಪ್ಪುತ್ತದೆ; ಸಾಮಾಜಿಕ ಮತ್ತು ಸಾಂಸ್ಕೃತಿಕ ನಿಷೇಧಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

“ವೈದ್ಯಕೀಯ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳಾ ವೈದ್ಯರ ಆರೈಕೆ ಮಾದರಿಯಲ್ಲಿ ವ್ಯತ್ಯಾಸಗಳಿವೆ. ವೈದ್ಯೆಯರು ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಪುರುಷರಿಗಿಂತ ವೈದ್ಯಕೀಯ ನಿರ್ಧಾರ ಮತ್ತು ಪಾಲುದಾರಿಕೆ ಚರ್ಚೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ” ಎಂದು ಅಧ್ಯಯನದ ಸಹ-ಲೇಖಕಿ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ಸ್ಯಾನ್ ಫ್ರಾನ್ಸಿಸ್ಕೋ ತಿಳಿಸಿದರು.

“ಇದರಲ್ಲಿ ಆಶ್ಚರ್ಯವೇನಿಲ್ಲ. ಮಹಿಳೆಯರು ಮತ್ತು ಪುರುಷರು ವಿಭಿನ್ನವಾಗಿ ವೈದ್ಯಕೀಯ ಅಭ್ಯಾಸ ಮಾಡುತ್ತಾರೆ. ಸಂವಹನ ಶೈಲಿಗಳು ಮತ್ತು ಮಾರ್ಗಸೂಚಿಗಳ ಅನುಸರಣೆಯಲ್ಲಿ ನಿರ್ದಿಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ರೋಗಿಗಳ ಫಲಿತಾಂಶದಲ್ಲಿ ಕಾಣಿಸುತ್ತದೆ. ಎರಡನೆಯದಾಗಿ, ಸಮಾಜದಲ್ಲಿ, ನಿಸ್ಸಂಶಯವಾಗಿ ವೈದ್ಯಕೀಯದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಗುಣಮಟ್ಟವನ್ನು ಹೊಂದಿದ್ದಾರೆ. ಇದು ಶಸ್ತ್ರಚಿಕಿತ್ಸೆಯಲ್ಲಿಯೂ ಕಾಣುವ ವಿದ್ಯಮಾನವಾಗಿದೆ,” ಎಂದು ಟೊರೊಂಟೊ ವಿಶ್ವವಿದ್ಯಾಲಯದ ಮೂತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕ್ರಿಸ್ಟೋಫರ್ ವಾಲಿಸ್ ಹೇಳಿದ್ದಾರೆ.

ಮಹಿಳೆಯರು ಪುರುಷರಿಗಿಂತ ಹಾಗೂ ಅಲ್ಪಸಂಖ್ಯಾತರು ಶ್ವೇತವರ್ಣೀಯರಿಗಿಂತ ಕೆಟ್ಟ ವೈದ್ಯಕೀಯ ಆರೈಕೆಯನ್ನು ಏಕೆ ಪಡೆಯುತ್ತಾರೆ ಎಂಬುದನ್ನು ಪರಿಶೀಲಿಸುವ ಉದ್ದೇಶವನ್ನು ಹೊಸ ಸಂಶೋಧನೆಯು ಹೊಂದಿದೆ. ಜನವರಿ 2024ರಲ್ಲಿ JAMA ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, “ಮಹಿಳೆಯರು ಮತ್ತು ಅಲ್ಪಸಂಖ್ಯಾತ ರೋಗಿಗಳು ಬಿಳಿ ಪುರುಷರಿಗಿಂತ 30%ರಷ್ಟು ತಪ್ಪಾದ ರೋಗನಿರ್ಣಯ ಪಡೆಯುವ ಸಾಧ್ಯತೆಯಿದೆ.” 2002ರ ಇನ್ನೊಂದು ಅಧ್ಯಯನದಲ್ಲಿ, ವೈದ್ಯರಿಗೆ ಹೋಲಿಸಿದರೆ ವೈದ್ಯೆಯರು ರೋಗಿಗಳೊಂದಿಗೆ ಸರಾಸರಿ 23 ನಿಮಿಷ ಕಳೆಯುತ್ತಾರೆ ಎಂದು ಕಂಡುಬಂದಿದೆ.

ಇದನ್ನೂ ಓದಿ: Money Guide: ವೈದ್ಯಕೀಯ ತುರ್ತು ಪರಿಸ್ಥಿತಿ ವೇಳೆ ಸಾಲದ ಸುಳಿಗೆ ಸಿಲುಕದಿರಲು ಹೀಗೆ ಮಾಡಿ…

Continue Reading

ವಿಜ್ಞಾನ

Zero Shadow Day: ಇಂದು ಬೆಂಗಳೂರಿನಲ್ಲಿ ನೆರಳೇ ಮೂಡುವುದಿಲ್ಲ; ಅದ್ಯಾಕೆ? ಏನಿದು ʼಶೂನ್ಯ ನೆರಳಿನ ದಿನʼ ?

Zero Shadow Day: ಎಲ್ಲರೂ ನಮ್ಮನ್ನು ತೊರೆದರೂ ನೆರಳು ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತು ಇಂದು ಕೆಲವು ನಿಮಿಷಗಳ ಮಟ್ಟಿಗೆ ಬೆಂಗಳೂರಿಗರ ಪಾಲಿಗೆ ಸುಳ್ಳಾಗಲಿದೆ. ಅಂದರೆ ಮಧ್ಯಾಹ್ನ ನೆರಳೇ ಮೂಡುವುದಿಲ್ಲ. ಇದನ್ನು ʼಶೂನ್ಯ ನೆರಳಿನ ದಿನʼ ಎನ್ನುತ್ತಾರೆ. ಇದು ಯಾಕೆ ಸಂಭವಿಸುತ್ತದೆ? ಏನಿದರ ವೈಶಿಷ್ಟ್ಯ? ಮುಂತಾದ ವಿವರ ಇಲ್ಲಿದೆ.

VISTARANEWS.COM


on

Zero Shadow Day
Koo

ಬೆಂಗಳೂರು: ಇಂದು (ಏಪ್ರಿಲ್‌ 24) ಬೆಂಗಳೂರಿಗರು ವಿಶಿಷ್ಟ ವಿದ್ಯಾಮಾನವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರತಿ ಕ್ಷಣವೂ ನಿಮ್ಮೊಂದಿಗೆ ಇರುವ ನೆರಳು ಕೆಲ ಹೊತ್ತು ನಿಮ್ಮನ್ನು ಬಿಟ್ಟು ದೂರ ಹೋಗಲಿದೆ. ಅಂದರೆ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ! ಇದನ್ನೇ ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ. ಇದು ಹೇಗೆ ರೂಪುಗೊಳ್ಳುತ್ತದೆ? ಏನಿದರ ವೈಶಿಷ್ಟ್ಯ ? ಮುಂತಾದ ನಿಮ್ಮ ಕುತೂಹಲಗಳಿಗೆ ಇಲ್ಲಿದೆ ಉತ್ತರ.

ಮಧ್ಯಾಹ್ನ 12.17ರಿಂದ 12.23ರ ನಡುವೆ ಈ ವಿದ್ಯಾಮಾನ ಸಂಭವಿಸಲಿದ್ದು, ಈ ವೇಳೆ ಸೂರ್ಯನ ಸ್ಥಾನವು ನಿಖರವಾಗಿ ಉತ್ತುಂಗದಲ್ಲಿರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ನೆರಳು ಕಣ್ಮರೆಯಾಗುತ್ತದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಏನಿದು ʼಶೂನ್ಯ ನೆರಳಿನ ದಿನʼ ?

ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪ ಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ನಾಳೆ ಅಂಥ ಯಾವುದೇ ನೆರಳು ಇರುವುದಿಲ್ಲ. ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.

ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಈ ಪರಿಭ್ರಮಣ ಚಲನೆಯಿಂದಾಗಿ, ಒಂದು ಶೂನ್ಯ ನೆರಳು ದಿನವು ಉತ್ತರಾಯಣದಲ್ಲಿ (ಸೂರ್ಯ ಉತ್ತರದ ಕಡೆಗೆ ಚಲಿಸುವಾಗ) ಬರುತ್ತದೆ ಮತ್ತು ಇನ್ನೊಂದು ದಕ್ಷಿಣಾಯನದಲ್ಲಿ (ಸೂರ್ಯನು ದಕ್ಷಿಣಕ್ಕೆ ಚಲಿಸುವಾಗ) ಬರುತ್ತದೆ. 23.5 ಡಿಗ್ರಿ ಉತ್ತರ ಮತ್ತು 23.5 ಡಿಗ್ರಿ ದಕ್ಷಿಣ ಅಕ್ಷಾಂಶಗಳ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ.

ಮಹತ್ವ

ಇದು ಸೂರ್ಯನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜತೆಗೆ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಬೆಳಕಿನ ನಡವಳಿಕೆ ಮತ್ತು ಭೂಮಿಯ ವಾತಾವರಣದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಅವಕಾಶವನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ ಶೂನ್ಯ ನೆರಳು ಸುಮಾರು ಒಂದೂವರೆ ನಿಮಿಷ ಕಾಲ ಅನುಭವಕ್ಕೆ ಬರುತ್ತದೆ.

ಎಲ್ಲೆಲ್ಲಿ , ಯಾವಾಗ?

ಶೂನ್ಯ ನೆರಳಿನ ದಿನ ದೇಶದ ವಿವಿಧ ನಗರಗಳಲ್ಲಿ ವರ್ಷದಲ್ಲಿ ಎರಡು ಬಾರಿ ಅನುಭವಕ್ಕೆ ಬರುತ್ತದೆ. ಅದು ಯಾವಾಗ ಎನ್ನುವ ವಿವರ ಇಲ್ಲಿದೆ.

  • ಕನ್ಯಾಕುಮಾರಿ: ಏಪ್ರಿಲ್ 10 ಮತ್ತು ಸೆಪ್ಟೆಂಬರ್ 1 (ಮಧ್ಯಾಹ್ನ: 12.21, 12.22)
  • ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 (ಮಧ್ಯಾಹ್ನ: 12.17, 12.25)
  • ಹೈದರಾಬಾದ್: ಮೇ 9 ಮತ್ತು ಆಗಸ್ಟ್ 5 (ಮಧ್ಯಾಹ್ನ: 12.12, 12.19)
  • ಮುಂಬೈ: ಮೇ 15 ಮತ್ತು ಜೂನ್ 27 (ಮಧ್ಯಾಹ್ನ: 12.34, 12.45)
  • ಭೋಪಾಲ್: ಜೂನ್ 13 ಮತ್ತು ಜೂನ್ 28 (ಮಧ್ಯಾಹ್ನ: 12.20, 12.23)

ಇದನ್ನೂ ಓದಿ: Water From Air: ಗಾಳಿಯಿಂದಲೇ ನೀರು ಉತ್ಪಾದನೆ! ಬೆಂಗಳೂರು ಸ್ಟಾರ್ಟಪ್‌ನ ಕ್ರಾಂತಿಕಾರಿ ಹೆಜ್ಜೆ!

Continue Reading
Advertisement
Virat Kohli
ಕ್ರಿಕೆಟ್2 mins ago

Virat Kohli: ಟೀಕೆಗಳಿಗೆ ಬಹಿರಂಗವಾಗಿಯೇ ತಿರುಗೇಟು ನೀಡಿದ ಕಿಂಗ್​ ಕೊಹ್ಲಿ​

Jatra Rathotsava Two killed and one serious after being hit by wheel of a chariot at Indi Kamarimath
ಕರ್ನಾಟಕ21 mins ago

Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ

Karnataka Weather
ಕರ್ನಾಟಕ26 mins ago

Karnataka Weather: ರಾಜ್ಯದಲ್ಲಿ ಮೇ 2ರವರೆಗೆ ಬಿಸಿಗಾಳಿ ತೀವ್ರತೆ ಹೆಚ್ಚಳ; ಆರೆಂಜ್‌ ಅಲರ್ಟ್‌ ಘೋಷಣೆ

Amrita Pandey
ಸಿನಿಮಾ36 mins ago

Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?

PM Narendra Modi
ಕರ್ನಾಟಕ40 mins ago

PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

Narendra Modi
Lok Sabha Election 202460 mins ago

Narendra Modi: ನಿಮ್ಮ ಸೇವೆಗೆಂದೇ ಭಗವಂತ ನನ್ನನ್ನು ಈ ಭೂಮಿಗೆ ಕಳುಹಿಸಿದ್ದಾನೆ, ಈ ಜೀವ ದೇಶಕ್ಕಾಗಿ ಎಂದ ಮೋದಿ

RCB vs GT
ಕ್ರೀಡೆ1 hour ago

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

PM Narendra Modi
ಕರ್ನಾಟಕ1 hour ago

PM Narendra Modi: ನೇಹಾ ಹಿರೇಮಠ ಹತ್ಯೆ ಆತಂಕಕಾರಿ; ಹೊಸಪೇಟೆಯಲ್ಲಿ ಕಾಂಗ್ರೆಸ್‌ಗೆ ಮೋದಿ ಚಾಟಿ!

Hassan Pen Drive Case
ಕರ್ನಾಟಕ2 hours ago

Hassan Pen Drive Case: ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾದ ಸೆಕ್ಷನ್‌ಗಳು ಏನು ಹೇಳುತ್ತವೆ? ಆರೋಪ ಸಾಬೀತಾದ್ರೆ ಶಿಕ್ಷೆ ಏನು?

KKR vs DC
ಕ್ರಿಕೆಟ್2 hours ago

KKR vs DC: ಮೊದಲ ಸೋಲಿಗೆ ಸೇಡು ತೀರಿಸಿಕೊಂಡೀತೇ ಡೆಲ್ಲಿ?; ಕೆಕೆಆರ್​ ಎದುರಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20243 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20246 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20248 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20248 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ11 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ15 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ1 day ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌