Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ! - Vistara News

ಕಿರುತೆರೆ/ಒಟಿಟಿ

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

Kapil Sharma: ಆರು ವರ್ಷಗಳ ಹಿಂದೆ ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಜಗಳವಾಡಿಕೊಂಡಿದ್ದರು. ಇದಾದ ಬಳಿಕ ಸುನಿಲ್‌ ಗ್ರೋವರ್‌ ಅವರು ಕಪಿಲ್‌ ಶರ್ಮಾ ಶೋನಿಂದ ದೂರ ಉಳಿದಿದ್ದರು. ಈಗ ಜೋಡಿ ಒಂದಾಗಿದೆ.

VISTARANEWS.COM


on

Kapil Sharma And Sunil Grover
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಹಾಸ್ಯ, ಮನರಂಜನೆಯ ರಸದೌತಣ ನೀಡುವ ದಿ ಕಪಿಲ್‌ ಶರ್ಮಾ ಶೋ (The Kapil Sharma Show) ಮೂಲಕ ದೇಶದ ಮನೆಮಾತಾಗಿರುವ ಕಪಿಲ್‌ ಶರ್ಮಾ (Kapil Sharma) ಹಾಗೂ ಸುನಿಲ್‌ ಗ್ರೋವರ್‌ (Sunil Grover) ಮತ್ತೆ ಒಂದಾಗಿದ್ದಾರೆ. ಹೌದು, ಆರು ವರ್ಷದ ಮುನಿಸು, ವದಂತಿ, ಸ್ಪಷ್ಟನೆ ಬಳಿಕ ಇಬ್ಬರೂ ಒಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ ಕಾಮಿಡಿ ಶೋ (Netflix Show) ಪ್ರೋಮೊ ಬಿಡುಗಡೆ ಮಾಡಿರುವ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್‌ ಜತೆ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಆರು ವರ್ಷದ ಬಳಿಕ ಇಬ್ಬರು ಹಾಸ್ಯ ಕಲಾವಿದರು ಮುನಿಸು ಮರೆತು ಒಂದಾದಂತಾಗಿದೆ.

ಪ್ರೋಮೊದಲ್ಲಿ ಮೊದಲು ಕಪಿಲ್‌ ಶರ್ಮಾ ಕಾಣಿಸಿಕೊಂಡಿದ್ದಾರೆ. “ಹಾಯ್‌ ಗೆಳೆಯರೆ, ನಾನು ಕಪಿಲ್‌ ಶರ್ಮಾ. ಶೀಘ್ರದಲ್ಲೇ ಹೊಸ ಶೋ ಹೊತ್ತು ನಿಮ್ಮೆದುರು ಬರುತ್ತೇನೆ” ಎಂದು ಕಪಿಲ್‌ ಶರ್ಮಾ ಹೇಳುತ್ತಾರೆ. ಆಗ ಸುನಿಲ್‌ ಗ್ರೋವರ್‌, “ನಾನು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ. ಆಗ ಕಪಿಲ್‌ ಶರ್ಮಾ, “ಸರಿ ಹಾಗಾದರೆ, ಇಬ್ಬರೂ ಬರೋಣ, 190ಕ್ಕೂ ಅಧಿಕ ದೇಶಗಳಿಗೆ ಬರೋಣ” ಎಂದಿದ್ದಾರೆ. ಹಾಗೆಯೇ ಇಬ್ಬರ ನಡುವಿನ ಸಂಭಾಷಣೆ ಮುಂದುವರಿಯುತ್ತದೆ.

ಇದೇ ವೇಳೆ ವಿಡಿಯೊ ಫ್ರೇಮ್‌ನಲ್ಲಿ ಹಾಸ್ಯ ಕಲಾವಿದರಾದ ರಾಜೀವ್‌, ಕಿಕು, ಕೃಷ್ಣಾ ಹಾಗೂ ನಟಿ ಅರ್ಚನಾ ಪೂರನ್‌ ಸಿಂಗ್‌ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ, ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌, ದಿ ಕಪಿಲ್‌ ಶರ್ಮಾ ಶೋ ಮೂಲಕವೇ ದೇಶದ ಮನೆಮಾತಾಗಿರುವ ಕಲಾವಿದರು ನೆಟ್‌ಫ್ಲಿಕ್ಸ್‌ ಶೋನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ, ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರು ಒಂದಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ದಿ ಕಪಿಲ್‌ ಶರ್ಮಾ ಶೋನಲ್ಲಿ ಸುನೀಲ್‌ ಗ್ರೋವರ್‌ ಅವರು ಮಾಡುತ್ತಿದ್ದ “ಡಾ ಮಶೂರ್‌ ಗುಲಾಟಿ” ಪಾತ್ರವು ಮನೆಮಾತಾಗಿತ್ತು.

ಇದನ್ನೂ ಓದಿ: ನಾರಾಯಣಮೂರ್ತಿ ಬಸ್‌ ಕಂಡಕ್ಟರ್ ಹೈ ಕ್ಯಾ?‌ ಭೇಟಿ ಕುರಿತು ಕಪಿಲ್‌ ಶರ್ಮಾ ಶೋನಲ್ಲಿ ಸುಧಾಮೂರ್ತಿ ಹೇಳಿದ್ದೇನು?

ಇಬ್ಬರ ಮಧ್ಯೆ ಏಕೆ ಜಗಳ?

ಕಪಿಲ್‌ ಶರ್ಮಾ ಹಾಗೂ ಸುನಿಲ್‌ ಗ್ರೋವರ್‌ ಅವರ ಮಧ್ಯೆ 2017ರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಆಸ್ಟ್ರೇಲಿಯಾದಲ್ಲಿ ಶೋ ಮುಗಿಸಿ, ಮುಂಬೈಗೆ ಆಗಮಿಸುವಾಗ ವಿಮಾನದಲ್ಲಿಯೇ ಕಪಿಲ್‌ ಶರ್ಮಾ ಅವರು ಸುನಿಲ್‌ ಗ್ರೋವರ್‌ ಅವರಿಗೆ ಬೈದಿದ್ದರು. ಇದಾದ ಬಳಿಕ ಇಬ್ಬರೂ ವಾಗ್ವಾದ ನಡೆಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ನಂತರ ಸುನಿಲ್‌ ಗ್ರೋವರ್‌ ಅವರು ದಿ ಕಪಿಲ್‌ ಶರ್ಮಾ ಶೋ ತೊರೆದಿದ್ದರು. ಜಗಳದ ಕುರಿತು ಸ್ಪಷ್ಟನೆ ನೀಡಿದ್ದ ಕಪಿಲ್‌ ಶರ್ಮಾ, “ನಾನು ಎಂದಿಗೂ ಸುನಿಲ್‌ ಗ್ರೋವರ್‌ ಜತೆ ಜಗಳ ಆಡಿಲ್ಲ, ಬೈದಿಲ್ಲ. ನಾನು ಅದ್ಭುತ ವ್ಯಕ್ತಿಗಳ ಜತೆ ಕೆಲಸ ಮಾಡಲು ಬಯಸುತ್ತೇನೆ. ಅವರಲ್ಲಿ ಸುನಿಲ್‌ ಗ್ರೋವರ್‌ ಕೂಡ ಒಬ್ಬರು” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಿಗ್ ಬಾಸ್

Bigg Boss Contestant : ಸುಳ್ಳು ದೂರು ಕೊಟ್ಟು ತಗಲಾಕೊಂಡ ಬಿಗ್‌ಬಾಸ್‌ ಸ್ಪರ್ಧಿ; ಜೈಲೇ ಗತಿನಾ!

Fake Complaint : ಚಾಲಕನೊಬ್ಬ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಎಂದು ಬಿಗ್‌ಬಾಸ್‌ (Bigg Boss contestant ) ಸ್ಪರ್ಧಿ ಆ್ಯಡಂ ಪಾಷ (Adam Pasha) ನೀಡಿದ ದೂರು ಇದೀಗ ಅವರಿಗೆ ತಿರುಗು ಬಾಣವಾಗಿದೆ.

VISTARANEWS.COM


on

By

Bigg Boss contestant Adam Pasha files false complaint
Koo

ಬೆಂಗಳೂರು: ಅತಿವೇಗ ಚಾಲನೆಯನ್ನು (Rash Driving) ಪ್ರಶ್ನಿಸಿದ್ದಕ್ಕೆ ಲಾರಿ ಚಾಲಕನೊರ್ವ ಅವಾಚ್ಯ ಶಬ್ಧಗಳಿಂದ ಬೈಯ್ದಿದ್ದ ಎಂದು ಬಿಗ್‌ಬಾಸ್‌ ಸ್ಪರ್ಧಿ (Bigg Boss contestant) ಆ್ಯಡಂ ಪಾಷ (Adam Pasha) ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಇದೀಗ ಅವರು ನೀಡಿದ ದೂರೇ ಅವರಿಗೆ ಮುಳುವುದಾಗಿದೆ.

ಕಳೆದ ಫೆ.10ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆ್ಯಡಂ ಪಾಷ ತಮ್ಮ ಕಾರಿನಲ್ಲಿ ದೊಡ್ಡತೋಗೂರು ಮಾರ್ಗವಾಗಿ ವೆಲಾಂಕಣಿ ಜಂಕ್ಷನ್‌ ಕಡೆ ಹೋಗುತ್ತಿದ್ದರು. ಈ ವೇಳೆ ದೊಡ್ಡತೋಗೂರು ರಸ್ತೆಯ ತಿರುವಿನಲ್ಲಿ ವಾಟರ್‌ ಟ್ಯಾಂಕ್‌ ಚಾಲಕನೊಬ್ಬ ವಾಹವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದ. ಇದನ್ನೂ ಪ್ರಶ್ನಿಸಿದ್ದಕ್ಕೆ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಎಂದು ಆರೋಪಿಸಿ ಬಿಗ್ ಬಾಸ್ ಸ್ಪರ್ಧಿ ಆ್ಯಡಂ ಪಾಷ ಎಫ್‌ಐಆರ್ ದಾಖಲು ಮಾಡಿದ್ದರು.

ಇದನ್ನೂ ಓದಿ:Crematorium Problem : ಬೆಳಗಾವಿಯಲ್ಲಿ ಮಹಿಳೆಯರಿಂದಲೇ ನಡೀತು ಅಂತ್ಯ ಸಂಸ್ಕಾರ!

Bigg Boss contestant Adam Pasha files false complaint

ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ವ್ಯಾಲಂಕೇಣಿ ಬ್ರಿಡ್ಜ್ ಬಳಿ ಘಟನೆ ನಡೆದಿದೆ ಎಂದು ದೂರು ನೀಡಿದ್ದರು. ಆ್ಯಡಂ ಪಾಷ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಗಿಳಿದಿದ್ದರು. ಈ ವೇಳೆ ಆ್ಯಡಂಪಾಷ ಎಫ್‌ಐಆರ್ ದಾಖಲಿಸುವ ವೇಳೆ ರಾಂಗ್ ನಂಬರ್ ಕೊಟ್ಟಿದ್ದಾರೆ. ಮಾತ್ರವಲ್ಲ ಹಲ್ಲೆ ಮಾಡದೇ ಇದ್ದರೂ, ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡಿದ್ದಾರೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಆ್ಯಡಂ ಪಾಷ ಕಳ್ಳಾಟ ಬಯಲಾಗಿದ್ದು, ಲಾರಿ ಚಾಲಕನ ವಿರುದ್ಧ ನೀಡಿದ ದೂರೇ ತಿರುಗುಬಾಣವಾಗಿದೆ.

ಆ್ಯಡಂ ಪಾಷ ಸುಳ್ಳು ದೂರು ಕೊಟ್ಟಿರುವುದು ಸಾಬೀತಾಗಿದೆ. ಇದೀಗ ಸಿಸಿಟಿವಿಯ ಒರಿಜಿನಾಲಿಟಿ ರಿಪೋರ್ಟ್‌ಗೆ ಕಳಿಸಿದ್ದಾರೆ. ಸುಳ್ಳು ದೂರು ಕೊಟ್ಟ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Child Artists : ಸೀರಿಯಲ್‌, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್‌

Child artists: ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಬಳಕೆ ಮಾಡುವ ವಿಚಾರದಲ್ಲಿ ಕಾರ್ಮಿಕ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಶೂಟಿಂಗ್ ನಲ್ಲಿ 5 ಗಂಟೆಗಿಂತ ಹೆಚ್ಚು ಅವಧಿ ಮಕ್ಕಳನ್ನು ಬಳಸುವಂತಿಲ್ಲ. ಶಿಕ್ಷಣಕ್ಕೆ ತೊಂದರೆಯಾಗದಂತೆ ಮಕ್ಕಳನ್ನು ನಿರಂತರವಾಗಿ 27 ದಿನಕ್ಕಿಂತ ಹೆಚ್ಚು ದಿನಗಳನ್ನು ಈ ಕೆಲಸಗಳಲ್ಲಿ ತೊಡಗಿಸಬಾರದು ಎಂದು ಸೂಚಿಸಲಾಗಿದೆ.

VISTARANEWS.COM


on

Child Artists labour rules
Koo

ಬೆಂಗಳೂರು: ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋ ಸೇರಿದಂತೆ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ (Child Artists) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇದರ ಮೂಲಕ ಮಕ್ಕಳು ಮತ್ತು ಪೋಷಕರು ಆದಾಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಮಕ್ಕಳ ಬಳಕೆಗೆ ಕೆಲವೊಂದು ಷರತ್ತುಗಳನ್ನು ಕಾರ್ಮಿಕ ಇಲಾಖೆ (Labour Department) ವಿಧಿಸಲು ಮುಂದಾಗಿದೆ. 14 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಸೇರಿದಂತೆ ಯಾವುದೇ ಉದ್ಯೋಗದಲ್ಲಿ ಬಳಸಬಾರದು ಎಂಬ ಬಾಲ ಕಾರ್ಮಿಕ ವಿರೋಧಿ ನಿಯಮಗಳನ್ನು (Child labour rules) ಮನರಂಜನಾ ಕ್ಷೇತ್ರಕ್ಕೂ (Entertainment field) ಅನ್ವಯವಾಗಿಸಲು ಸಿದ್ಧತೆ ನಡೆದಿದೆ. ಇದರ ನಿಯಮಗಳಲ್ಲಿ ಅತ್ಯಂತ ಪ್ರಮುಖವಾದುದು ಎಂದರೆ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ನಟಿಸುವ ಮುನ್ನ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಮತ್ತು ಈ ರೀತಿಯ ನಟನೆಗೆ ಸಮಯದ ಮಿತಿ ವಿಧಿಸಬೇಕು ಹಾಗೂ ನಟನೆಯಿಂದ ಗಳಿಸಿದ ಹಣದಲ್ಲಿ ಒಂದಂಶವನ್ನು ಅವರ ಹೆಸರಿನಲ್ಲೇ ಠೇವಣಿಯಾಗಿ ಇಡಬೇಕು ಎನ್ನುವುದು.

ಮಕ್ಕಳ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾಯೋಜಕರು ದಂಡಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಶೂಟಿಂಗ್ ನಲ್ಲಿ 5 ಗಂಟೆಗಿಂತ ಹೆಚ್ಚು ಅವಧಿ ಮಕ್ಕಳನ್ನು ಬಳಸುವಂತಿಲ್ಲ. ಶಿಕ್ಷಣಕ್ಕೆ ತೊಂದರೆಯಾಗದಂತೆ ನಿರಂತರವಾಗಿ 27 ದಿನಕ್ಕಿಂತ ಹೆಚ್ಚು ದಿನಗಳನ್ನು ಈ ಕೆಲಸಗಳಲ್ಲಿ ತೊಡಗಿಸಬಾರದು ಎನ್ನುವುದು ಪ್ರಮುಖ ಸೂಚನೆಗಳಾಗಿವೆ.

ಸದ್ಯ ಈ ಸುತ್ತೋಲೆ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ಅಕಾಡೆಮಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದೆ. ಮುಂದಿನ ದಿನಗಳಲ್ಲಿ ನಿಯಮಾವಳಿ ಹೇಗೆಲ್ಲ ಬಾಲ ಕಾರ್ಮಿಕರ ಅಭಿನಯಕ್ಕೆ ಅನ್ವಯ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಹಾಗಿದ್ದರೆ ಸುತ್ತೋಲೆಯಲ್ಲಿ ಏನೆಲ್ಲ ಅಂಶಗಳನ್ನು ತಿಳಿಸಲಾಗಿದೆ.?

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳನ್ವಯ ಮಕ್ಕಳು ಬಾಲ ನಟ/ನಟಿಯಾಗಿ ನಟನಾ ಕೆಲಸ ಮಾಡಲು ಇರುವ ಕಾನೂನಾತ್ಮಕ ಅಂಶಗಳು ಹಾಗೂ ಅನುಷ್ಠಾನ ಮಾಡುವ ಕುರಿತ ಸುತ್ತೋಲೆ ಇದಾಗಿದೆ. ಇದರ ಪ್ರಕಾರ, ಈಗಿರುವ ಕಾಯಿದೆ ಪ್ರಕಾರ ನಟನಾ ಕ್ಷೇತ್ರದಲ್ಲಿ ಮಕ್ಕಳು ತೊಡಗಿಸಿಕೊಳ್ಳಬಹುದು. ಆದರೆ, ಅದಕ್ಕೂ ಕೆಲವೊಂದು ನಿಯಮಗಳಿವೆ ಎಂದು ತಿಳಿಸಲಾಗಿದೆ.

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ,2016 ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟ/ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯು ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಹಾಗೂ ಕಾಯ್ದೆಯು 14- 18ರ ವಯಸ್ಸಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ತಪ್ಪಿತಸ್ಥ ಮಾಲಿಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, ರೂ.20,000/- ರಿಂದ ರೂ.50.000/- ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ಸುತ್ತೋಲೆಯಲ್ಲಿ ನೆನಪಿಸಲಾಗಿದೆ.

ಇದನ್ನೂ ಓದಿ : Jio Cinema : ಜಿಯೋಸಿನಿಮಾದ ‘ಜೀತೋ ಧನ್ ಧನಾ ಧನ್‌’ ಸ್ಪರ್ಧೆಗೆ ಟಿವಿಎಸ್​ ಯೂರೋಗ್ರಿಪ್​ ಪ್ರಾಯೋಜಕತ್ವ

ಹಾಗಿದ್ದರೆ ಬಾಲ ಕಲಾವಿದರಿಗೆ ಅನ್ವಯವಾಗುವ ನಿಯಮಗಳೇನು?

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳು ‘2ಸಿ’ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು(1) ಕಲಂ 3ರ ತಡೆಗಳನ್ವಯ ಕೆಳಗಿನ ಪರಿಸ್ಥಿತಿಗಳಿಗೆ ನಿಯಮಗಳಿಗೆ ಒಳಪಟ್ಟಂತೆ ಮಗು ಕಲಾವಿದನಾಗಿ ಕೆಲಸ ಮಾಡಬಹುದು ಎಂದು ಹೇಳಿದೆ.

 1. ಮಕ್ಕಳನ್ನು ಬಳಸಿ ಚಿತ್ರ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅವರ ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಕ್ರಮ ಕೈಗೊಂಡಿರಬೇಕು. ಇಲ್ಲವಾದಲ್ಲಿ ಚಲನಚಿತ್ರಗಳ ಅಥವಾ ದೂರದರ್ಶನದ ಪ್ರದರ್ಶನದ ಹಕ್ಕು ನಿರಾಕರಣೆಯ ಅವಕಾಶಗಳಿಗೆ
  ಒಳಪಟ್ಟಿದೆ ಎಂಬುದನ್ನು ನಿರ್ಮಾಪಕರಿಗೆ ಖಚಿತಪಡಿಸುವುದು.
 2. ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಖಾತ್ರಿಪಡಿಸುವುದು.
 3. ಮಗುವಿಗೆ ಸಕಾಲಿಕ ಪೌಷ್ಠಿಕ ಆಹಾರ ಒದಗಿಸುವುದು.
 4. ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳು, ಸ್ವಚ್ಚ ಮತ್ತು ಸುರಕ್ಷಿತವಾ ಆಶ್ರಯ ಒದಗಿಸುವುದು.
 5. ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಮಾಡುವುದು.
 6. ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತದ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದನ್ನು ಖಾತರಿಪಡಿಸಬೇಕು ಮತ್ತು ಯಾವುದೇ ಮಗು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ಕೆಲಸದಲ್ಲಿ ತೂಡಗಲು ಅವಕಾಶ ನೀಡಬಾರದು.
 7. ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಆ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಬ್ದಾರಿ ವ್ಯಕ್ತಿ ನೇಮಿಸುವುದು.
 8. ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಕನಿಷ್ಠ ಭಾಗವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡಬೇಕು. ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.
 9. ಯಾವುದೇ ಮಗುವಿನ ಒಪ್ಪಿಗೆ ಮತ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಕ್ರೀಡಾ ಚಟುವಟಿಕೆ ಅನೌಪಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಭಾಗವಹಿಸುವಂತೆ ಮಾಡಬಾರದು.
Continue Reading

ಕರ್ನಾಟಕ

Drone Prathap: ಅಪ್ಪನ ಜತೆ ಸೇರಿ ಮುದ್ದೆ ಮಾಡಿದ ಡ್ರೋನ್ ಪ್ರತಾಪ್

Drone Prathap: ಬಿಗ್‌ಬಾಸ್‌ ಶೋನಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿ ಗಮನ ಸೆಳೆದಿದ್ದ ಪ್ರತಾಪ್‌ ಇದೀಗ, ತಂದೆ ಜತೆ ಮನೆಯಲ್ಲಿ ರಾಗಿ ಮುದ್ದೆ ಮಾಡಿದ್ದಾರೆ.

VISTARANEWS.COM


on

Drone Prathap
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಮೊದಲನೇ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್‌, ಸದ್ಯ ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕುಟುಂಬದಿಂದ ಹಲವು ವರ್ಷಗಳು ದೂರವಿದ್ದ ಪ್ರತಾಪ್‌, ಬಿಗ್‌ ಬಾಸ್‌ ಶೋನಿಂದ ತಂದೆ-ತಾಯಿಯನ್ನು ಭೇಟಿಯಾಗುವಂತಾಯಿತು. ಈ ಹಿಂದೆ ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿಟ್ಟು ಗಮನ ಸೆಳೆದಿದ್ದ ಪ್ರತಾಪ್‌ ಇದೀಗ, ಅಪ್ಪನ ಜತೆ ಮುದ್ದೆ ಮಾಡಿ ಮನೆ ಮಂದಿಗೆ ಬಡಿಸಿರುವುದು ಕಂಡುಬಂದಿದೆ.

ಪ್ರತಾಪ್‌, ತಂದೆ ಜತೆ ಮುದ್ದೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಿಗ್ ಬಾಸ್ ನಂತರ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯಲ್ಲಿ ಬ್ಯುಸಿಯಾಗಿರುವ ಪ್ರತಾಪ್, ಕುಟುಂಬಸ್ಥರ ಜತೆ ಕೂತು ಊಟ ಮಾಡಿದ್ದಾರೆ. ಡ್ರೋನ್ ಪ್ರತಾಪ್‌ಗೆ ಮುದ್ದೆ ಅಂದ್ರೆ ಬಹಳ ಇಷ್ಟ, ಹೀಗಾಗಿ ಅಪ್ಪನ ಜತೆ ಸೇರಿ ಮುದ್ದೆ ಮಾಡಿ, ಮನೆಯವರಿಗೆಲ್ಲ ಬಡಿಸಿದ್ದಾರೆ.

ರಿಯಾಲಿಟಿ ಶೋಗೆ ಕಂಟೆಸ್ಟೆಂಟ್ ಆಗಿ ಆಯ್ಕೆಯಾದ ಡ್ರೋನ್‌ ಪ್ರತಾಪ್‌!

ಬಿಗ್‌ ಬಾಸ್‌ ಶೋದಲ್ಲಿ ರನ್ನರ್‌ ಅಪ್‌ ಆಗಿ ಪ್ರೇಕ್ಷಕರ ಮನಗೆದ್ದಿರುವ ಪ್ರತಾಪ್‌ ಇದೀಗ, ಕಲರ್ಸ್‌ ಕನ್ನಡದ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ.

Gicchi Gili Gili season 3

ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Gicchi Gili Gili season 3

ಕಾಮಿಡಿ ಟಿವಿ ಶೋ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್‌ (Gicchi Gili Gili season 3) ಆರಂಭವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಮೂರನೇ ಸೀಸನ್ ಫೆಬ್ರವರಿ 3ರಿಂದ ಆರಂಭವಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ವೀಕ್ಷಕರು ಕಾರ್ಯಕ್ರಮವನ್ನು ನೋಡಿ ಆನಂದಿಸಬಹುದು.

Gicchi Gili Gili season 3

ಮೊದಲನೆ ಸೀಸನ್‌ನ ಮೂಲಕ ಇದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ʻಗಿಚ್ಚಿ ಗಿಲಿಗಿಲಿ’ಯ ಮೊದಲ ಸೀಸನ್‌ನಲ್ಲಿ ನಿವೇದಿತಾ ಗೌಡ, ಜಗ್ಗಪ್ಪ, ಪ್ರಶಾಂತ್, ಚಂದ್ರಪ್ರಭಾ ಮುಂತಾದವರು ಇದ್ದರು. ಮೊದಲನೇ ಸೀಸನ್‌ನಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ಈ ಶೋನ ವಿಜೇತರಾಗಿ ಹೊರಹೊಮ್ಮಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ಗೌಡ ಈ ಶೋನ ರನ್ನರ್ ಅಪ್ ಆಗಿದ್ದರು. ಗಿಚ್ಚಿ ಗಿಲಿಗಿಲಿ ಸೀಸನ್ 2 ವಿನ್ನರ್ ಪಟ್ಟವನ್ನು ಚಂದ್ರಪ್ರಭಾ ಅಲಂಕರಿಸಿದ್ದರು.

Gicchi Gili Gili season 3
Continue Reading

ಪ್ರಮುಖ ಸುದ್ದಿ

Drone Prathap: ಎಚ್‌ಡಿಕೆ ಹೆಸರೇಳಿ ವಂಚನೆ; ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು

Drone Prathap: ಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪದಲ್ಲಿ ಡ್ರೋನ್‌ ಪ್ರತಾಪ್‌ ವಿರುದ್ಧ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

VISTARANEWS.COM


on

drone prathap
Koo

ಬೆಂಗಳೂರು: ಬಿಗ್‌ಬಾಸ್‌ ಸೀಸನ್‌ 10ರ (BBK SEASON 10) ರನ್ನರ್ ಅಪ್‌ ಡ್ರೋನ್‌ ಪ್ರತಾಪ್‌ (Drone Prathap) ವಿರುದ್ಧ ಸಾಲು ಸಾಲು ವಂಚನೆ ದೂರುಗಳು ದಾಖಲಾಗುತ್ತಿವೆ. ಲೈಸೆನ್ಸ್‌ ಪಡೆಯದೆ ಡ್ರೋನ್‌ ಹಾರಾಟ-ಮಾರಾಟದ ಹಿನ್ನೆಲೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಇದೀಗ ಮತ್ತೊಂದು ವಂಚನೆ ಕೇಸ್‌ ದಾಖಲಾಗಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪದಲ್ಲಿ ಡ್ರೋನ್‌ ಪ್ರತಾಪ್‌ ವಿರುದ್ಧ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಚಂದನ್ ಕುಮಾರ್ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ಹಣ ಪಡೆದು ಪ್ರತಾಪ್ ವಂಚಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪರಿಚಯವಿದೆ, ನಾನು ಆಗಾಗ ಕುಮಾರಸ್ವಾಮಿಯವರ ಫಾರ್ಮ್ ಹೌಸ್‌ಗೆ ಹೋಗಿ ಭೇಟಿಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ದೂರುದಾರ ಚಂದನ್ ಕುಮಾರ್ ಗೌಡ ಜತೆ ಡ್ರೋನ್ ಪ್ರತಾಪ್‌

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್ ವಂಚಿಸಿರುವ ಆರೋಪ‌ ಕೇಳಿಬಂದಿದೆ. ಬಿಗ್ ಬಾಸ್‌ನಿಂದ ಹೊರಬಂದ ನಂತರ ಕರೆ ಸ್ವೀಕರಿಸದೇ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಚಂದನ್ ಕುಮಾರ್ ಗೌಡ ಮನವಿ ಮಾಡಿದ್ದಾರೆ.

ಪ್ರತಾಪ್‌ ಮಾತನಾಡಿರುವ ಆಡಿಯೊ ವೈರಲ್‌

ಡ್ರೋನ್ ಪ್ರತಾಪ್, ಚಂದನ್ ಕುಮಾರ್ ಗೌಡ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲಭ್ಯವಾಗಿದೆ. ನನ್ನನ್ನು ಕಾಂಗ್ರೆಸ್‌ಗೆ ಬನ್ನಿ, ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡುತ್ತೇವೆ ಎಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆ. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ.

ಇದನ್ನೂ ಓದಿ | Assault Case : ನಿಮ್ಮನ್ನ ಸುಮ್ನೆ ಬಿಡಲ್ಲ ಎಂದು ಹಿಂದೂ ರೈತನ ಥಳಿಸಿದ ಮುಸ್ಲಿಂ ವ್ಯಾಪಾರಸ್ಥರು!

ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ. ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದರೂ ದುಡ್ಡು ಕೊಡುತ್ತಾರೆ ಎಂದು ಪ್ರತಾಪ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್‌ ಆಗಿದೆ.

ಲೈಸೆನ್ಸ್‌ ಪಡೆಯದೆ ಡ್ರೋನ್‌ ಹಾರಾಟ-ಮಾರಾಟ

flying selling drones without obtaining a license Another complaint against Drone Pratap

ಪ್ರತಾಪ್‌ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಅವರು ಈ ಹಿಂದೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು. ಹಾಗೆಯೇ ಇತ್ತೀಚೆಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರತಾಪ್‌ ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು.

ಬನಶಂಕರಿಯ ಪರಮೇಶ್‌ ಎಂಬುವವರು ಡ್ರೋನ್‌ ಪ್ರತಾಪ್‌ ವಿರುದ್ಧ ದೂರು ದಾಖಲಿಸಿದ್ದರು. ಪ್ರತಾಪ್ ಅವರ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಡಿಜಿಸಿಎ (ನಾಗರೀಕ ವಿಮಾನಯಾನ ಇಲಾಖೆ) ಅಧಿಕೃತವಾಗಿ ಪರವಾನಗಿ ಹೊಂದಿಲ್ಲ ಜತೆಗೆ ಹೆಸರು ಸಹ ಇಲ್ಲ. ಇದು ಡಿಜಿಸಿಎ ಅಧಿಕೃತ ವೆಬ್‌ಸೈಟ್‌ನಿಂದ ಸ್ಪಷ್ಟವಾಗಿದೆ. ಲೈಸೆನ್ಸ್‌ ಪಡೆಯದೇ ಡ್ರೋನ್‌ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್‌ ಪ್ರತಾಪ್‌ ವಂಚಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪರಮೇಶ್ವರ್‌ ದೂರಿನಲ್ಲಿ ಉಲ್ಲೇಖಸಿದ್ದರು. ವಾರದ ಅಂತರದಲ್ಲಿ ಒಂದೇ ಠಾಣೆಯಲ್ಲಿ ಎರಡು ದೂರು ದಾಖಲಾಗಿದ್ದರಿಂದ, ಪೊಲೀಸರು ಡ್ರೋನ್ ಪ್ರತಾಪ್‌ರನ್ನು ಕರೆಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಡ್ರೋನ್‌ ನೀಡುವುದಾಗಿ ಒಪ್ಪಂದ; ಅಡ್ವಾನ್ಸ್‌ ಪಡೆದು ನಾಪತ್ತೆ

ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್​ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು.  ಪ್ರತಾಪ್ ಅವರ ಕಂಪನಿ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ʼ ಜತೆ ಬ್ಯುಸಿನೆಸ್‌ ಪಾರ್ಟನರ್ ಆಗಿದ್ದರು ಸಾರಂಗ್. ಎಂಟು ತಿಂಗಳ ಹಿಂದೆ ಡ್ರೋನ್‌ ಪ್ರತಾಪ್‌ ಅವರು ಬ್ಯೂಸಿನೆಸ್ ಪಾರ್ಟನರ್ ಸಾರಂಗ್ ಅವರನ್ನು ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ದರು.

ಪ್ರತಾಪ್‌ ಅವರು ಸಾರಂಗ್‌ ಅವರಿಗೆ ಒಂಬತ್ತು ಡ್ರೋನ್‌ ನೀಡಬೇಕಿತ್ತು. ಹೀಗಾಗಿ ಸಾರಂಗ್‌ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು. ಆದರೆ ಡ್ರೋನ್ ನೀಡಲು ಪ್ರತಾಪ್‌ ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದರು. ಇದಾದ ಬಳಿಕ ಎರಡು ಡ್ರೋನ್ ಅನ್ನು ಸಾರಂಗ್‌ ಅವರಿಗೆ ಪ್ರತಾಪ್‌ ನೀಡಿದ್ದರು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು. ಆದರೀಗ ಸಾರಂಗ್‌ ಈ ಬಗ್ಗೆ ಧ್ವನಿ ಎತ್ತಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಬ್ಯಾಟರಿಗಳ ಕ್ಯಾಲಿಟಿ ಸರಿಯಿಲ್ಲ. ಮತ್ತೊಂದು ಹಾರಬೇಕಾದರೆ, ಕೆಳಗಡೆ ಬಿದ್ದು ಹೋಯಿತು. ನಾವೀಗ ತುಂಬಾ ಲಾಸ್ ನಲ್ಲಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: BBK SEASON 10: ಹೆದರೋ ಕಾಲ ಹೋಯ್ತು; ʻವಿನಯ್‌ʼ ಏಟಿಗೆ ತಿರುಗೇಟು ಕೊಟ್ಟ ಪ್ರತಾಪ್!⁠⁠

ಈ ಬಗ್ಗೆ ವಿಸ್ತಾರ ಜತೆ ಸಾರಂಗ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಸಾರಂಗ್‌ ಮಾತನಾಡಿ ʻʻನಾನು ಇ-ಮೇಲ್‌ ಮೂಲಕ ವಾರ್ನಿಂಗ್ ನೀಡಿದ್ದೇನೆ ಲೋನ್ ಮೂಲಕ ದುಡ್ಡು ತಂದು, ರೈತರ ಬಳಿ ದುಡ್ಡು ಪಡೆದು ಪ್ರತಾಪ್‌ಗೆ ಕೊಟ್ಟಿದ್ದೆ. ಆದರೆ ಇಲ್ಲಿಯವರೆಗೆ ಆತ ಹಣ ಕೊಟ್ಟಿಲ್ಲ. ಅವರ ಪಿಎ ಸಾಗರ್ ನನಗೆ ಹೇಳಿದ್ದಾರೆ. ಪ್ರತಾಪ್‌ ಕಾರ್ ಸೇಲ್ ಮಾಡಿದ್ದಾನೆ ಅವನ ಬಳಿ ಹಣವಿಲ್ಲ ಎಂದು. ಕಾರ್ ಇರೋದು ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ. ಅವರ ಜತೆ ನನಗೆ ಸಂಪರ್ಕ ಇಲ್ಲ. ಪ್ರತಾಪ್ ಬಿಗ್ ಬಾಸ್‌ ಮನೆಯಲ್ಲಿ ಇದ್ದಾರೆ ಬಂದು ಕೊಡ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಸುಮ್ಮನ್ನಿದ್ದೇ. ಪ್ರತಾಪ್‌ಗೆ ಕಿರಣ್ ಮಾಧವ್ ಬೆಂಬಲ ನೀಡುತ್ತಿದ್ದರು. ನನಗೆ ಅವರಿಬ್ಬರು ಸೇರಿ ಬೆಂಗಳೂರಿನಲ್ಲಿ 20 ಸಾವಿರದ ಹೋಟೆಲ್ ಫೆಸಿಲಿಟಿ ನೀಡಿ ಬ್ಯುಸಿನೆಸ್‌ ಮಾಡಿದ್ದರು. ಈಗ ನೋಡಿದ್ರೆ ಈ ರೀತಿ ಮಾಡ್ತಿದ್ದಾರೆ. ನನಗೀಗ ಬಡ್ಡಿ ಎಲ್ಲವೂ ಸೇರಿ 83 ಲಕ್ಷ ರೂ. ಖರ್ಚಾಗಿದೆ. ನಮ್ಮದು ಸ್ಟಾರ್ಟ್ ಅಪ್ ಕಂಪನಿ. ನಮಗೆ ತುಂಬ ಕಷ್ಟ ಆಗಿದೆ ಡ್ರೋನ್ ಪ್ರತಾಪ್ ನಿಂದʼʼ ಎಂದು ಸಾರಂಗ್‌ ಹೇಳಿಕೆ ನೀಡಿದ್ದರು.

ಮತ್ತೊಂದೆಡೆ ಪ್ರತಾಪ್‌ ವಿರುದ್ಧ ಪ್ರಯಾಗ್ ರಾಜ್ (Prayag Raj) 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Nitasha Kaul
ದೇಶ14 mins ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ35 mins ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Rowdy sheeter kidnaps cricket bookie
ಕ್ರಿಕೆಟ್49 mins ago

WPL 2024 : ಮಹಿಳಾ ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಟ್ಟಿದ ಬುಕ್ಕಿಯೇ ಕಿಡ್ನ್ಯಾಪ್‌!

GDP Growth
ಪ್ರಮುಖ ಸುದ್ದಿ50 mins ago

GDP Growth : ನಿರೀಕ್ಷೆಗೂ ಮೀರಿ ಭಾರತದ ಜಿಡಿಪಿ ಬೆಳವಣಿಗೆ; ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ

film festival
ಸಿನಿಮಾ56 mins ago

Bengaluru Film Festival: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

BJP protest demanding action against those who shouted pro Pak slogan
ಉತ್ತರ ಕನ್ನಡ1 hour ago

Uttara Kannada News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ

KPCC member Beguru Narayan pressmeet at kunigal
ತುಮಕೂರು1 hour ago

Tumkur News: ಮಾ.1ರಂದು ಕುಣಿಗಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ, ಡಿಸಿಎಂ ಚಾಲನೆ

Uttara Kannada DC Gungubai manakar spoke in Election Nodal Officers Meeting at Karwar
ಉತ್ತರ ಕನ್ನಡ1 hour ago

Uttara Kannada News: ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಚುನಾವಣಾ ನೋಡಲ್ ಅಧಿಕಾರಿಗಳಿಗೆ ಸೂಚನೆ

Krushi mela inauguration at Koduru village
ಶಿವಮೊಗ್ಗ1 hour ago

Shivamogga News: ಕೃಷಿ ಪದ್ಧತಿಯ ಜ್ಞಾನ ಹಂಚುವ ಕೆಲಸ ವಿವಿ ಮಾಡುತ್ತಿದೆ: ಡಾ. ಶಶಿಧರ

Congress Vinay Kulkarni and Lakshmi Hebbalkar disagrees with caste census report
ರಾಜಕೀಯ1 hour ago

Caste Census report: ಜಾತಿ ಗಣತಿ ವರದಿಗೆ ಕಾಂಗ್ರೆಸ್‌ನಲ್ಲಿ ಅಪಸ್ವರ; ಒಪ್ಪಲ್ಲವೆಂದ ಕುಲಕರ್ಣಿ, ದೋಷವಿದೆ ಅಂದ್ರು ಲಕ್ಷ್ಮಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ15 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌