Team India: ಟಿ-20 ವಿಶ್ವಕಪ್‌ ಗೆದ್ದು ಭಾರತದತ್ತ ಟೀಮ್‌ ಇಂಡಿಯಾ; ಫ್ಲೈಟ್‌ ಟ್ರ್ಯಾಕರ್‌ನಲ್ಲಿ ಹೊಸ ದಾಖಲೆ - Vistara News

ಕ್ರಿಕೆಟ್

Team India: ಟಿ-20 ವಿಶ್ವಕಪ್‌ ಗೆದ್ದು ಭಾರತದತ್ತ ಟೀಮ್‌ ಇಂಡಿಯಾ; ಫ್ಲೈಟ್‌ ಟ್ರ್ಯಾಕರ್‌ನಲ್ಲಿ ಹೊಸ ದಾಖಲೆ

Team India: ಟಿ-20 ವಿಶ್ವಕಪ್‌ನಲ್ಲಿ ಪರಾಕ್ರಮ ಮೆರೆದು, ಚಾಂಪಿಯನ್‌ ಎನಿಸಿರುವ ಭಾರತ ತಂಡದ ಆಟಗಾರರು ಗುರುವಾರ ಬೆಳಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಆನ್‌ಲೈನ್‌ ಮೂಲಕ ಈ ಫ್ಲೈಟ್‌ಅನ್ನು ಅಂದರೆ, ಫ್ಲೈಟ್‌ರೆಡಾರ್‌24. ಮೂಲಕ ಟ್ರ್ಯಾಕ್‌ ಮಾಡಲಾಗುತ್ತಿದೆ. ಇದು ಕೂಡ ಈಗ ದಾಖಲೆ ಎನಿಸಿದೆ.

VISTARANEWS.COM


on

Team India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ (Rohit Sharma) ನೇತೃತ್ವದ ಭಾರತ ತಂಡವು ಭಾರತಕ್ಕೆ ಆಗಮಿಸುತ್ತಿದೆ. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ (Team India) ಆಟಗಾರರು ದೆಹಲಿಗೆ ಆಗಮಿಸುತ್ತಿದ್ದು, ಈ ಫ್ಲೈಟ್‌ಅನ್ನು ಹೆಚ್ಚಿನ ಜನ ಟ್ರ್ಯಾಕ್‌ ಮಾಡುತ್ತಿರುವುದು ಕೂಡ ಒಂದು ದಾಖಲೆಯಾಗಿದೆ. ಸದ್ಯದ ಮಟ್ಟಿಗೆ ಅತಿ ಹೆಚ್ಚು ಜನ ಫ್ಲೈಟ್‌ರೆಡಾರ್‌24.ನಲ್ಲಿ (Flightradar24.) ಏರ್‌ ಇಂಡಿಯಾ ವಿಶೇಷ ವಿಮಾನವನ್ನೇ ಟ್ರ್ಯಾಕ್‌ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟಿ-20 ವಿಶ್ವಕಪ್‌ನಲ್ಲಿ ಪರಾಕ್ರಮ ಮೆರೆದು, ಚಾಂಪಿಯನ್‌ ಎನಿಸಿರುವ ಭಾರತ ತಂಡದ ಆಟಗಾರರು ಗುರುವಾರ ಬೆಳಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಆನ್‌ಲೈನ್‌ ಮೂಲಕ ಈ ಫ್ಲೈಟ್‌ಅನ್ನು ಅಂದರೆ, ಫ್ಲೈಟ್‌ರೆಡಾರ್‌24. ಮೂಲಕ ಟ್ರ್ಯಾಕ್‌ ಮಾಡಲಾಗುತ್ತಿದೆ. ಫ್ಲೈಟ್‌ರೆಡಾರ್‌24. ವರದಿ ಪ್ರಕಾರ, ಸರಿ ಸುಮಾರು 5,252 ಜನರು ಫ್ಲೈಟ್‌ರೆಡಾರ್‌24.ನಲ್ಲಿ ಏರ್‌ ಇಂಡಿಯಾ ವಿಶೇಷ ವಿಮಾನವನ್ನು ಟ್ರ್ಯಾಕ್‌ ಮಾಡುತ್ತಿದ್ದಾರೆ. ಇದು ಅತಿ ಹೆಚ್ಚು ಜನ ಟ್ರ್ಯಾಕ್‌ ಮಾಡುತ್ತಿರುವ ಫ್ಲೈಟ್‌ ಆಗಿದೆ ಫ್ಲೈಟ್‌ರೆಡಾರ್‌24. ತಿಳಿಸಿದೆ.

ರಾಜಮಾರ್ಗ ಅಂಕಣ virat kohli rohit sharma

ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳುತ್ತಿದೆ. ದೆಹಲಿಗೆ ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಬರಲಿರುವ ಭಾರತ ತಂಡದ ಆಟಗಾರರು 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೆಳಗ್ಗಿನ ತಿಂಡಿ ಸವಿಯಲಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿಯೇ ಭಾರತ ಕ್ರಿಕೆಟ್‌ ತಂಡದ ಆಟಗಾರರನ್ನು ಭೇಟಿಯಾಗಿ, ಅವರ ಜತೆ ತಿಂಡಿ ತಿನ್ನಲಿದ್ದಾರೆ. ಇದೇ ವೇಳೆ ಆಟಗಾರರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ವಿಜಯಯಾತ್ರೆಗೆ ಸಕಲ ಸಿದ್ಧತೆ

ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಿಗೆ ಮುಂಬೈನಲ್ಲಿ ಗುರುವಾರ ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರೂ ಬನ್ನಿ ಎಂಬುದಾಗಿ ರೋಹಿತ್‌ ಶರ್ಮಾ ಅವರು ಈಗಾಗಲೇ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ: Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್​ ಶರ್ಮಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Fans chant Pakistan: ಟೀಮ್ ಇಂಡಿಯಾ ವಿಕ್ಟರಿ ಪೆರೇಡ್​ನಲ್ಲಿ ಅಭಿಮಾನಿಗಳು ಪಾಕಿಸ್ತಾನ್ ಘೋಷಣೆ ಕೂಗಿದ್ದು ಏಕೆ? ವಿಡಿಯೊ ವೈರಲ್​

Fans chant Pakistan: ವಿಜಯಯಾತ್ರೆಯ ದಾರಿಯಲ್ಲಿ ಕಸದ ಗಾಡಿಯೊಂದು ಹಾದು ಹೋಯಿತು. ಇದನ್ನು ಗಮನಿಸಿದ ಅಭಿಮಾನಿಗಳು ಪಾಕಿಸ್ತಾನವನ್ನು ಕಸಕ್ಕೆ ಹೋಲಿಕೆ ಮಾಡಿ ಅಪಹಾಸ್ಯ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಪಾಕಿಸ್ತಾನದ ಹೆಸರು ಕೂಗಿದ್ದಾರೆ.

VISTARANEWS.COM


on

Fans chant Pakistan
Koo

ಮುಂಬಯಿ: ಟಿ20 ವಿಶ್ವಕಪ್(T20 World Cup) ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಜುಲೈ 2, ಗುರುವಾರದಂದು ಮುಂಬೈಯಲ್ಲಿ ಭರ್ಜರಿಯಾಗಿ ಅಭಿನಂದಿಸಲಾಗಿತ್ತು. ತಂಡದ ಈ ವಿಜಯೋತ್ಸವದ(Team India’s Victory Parade) ವೇಳೆ ಸೇರಿದ್ದ ಭಾರಿ ಸಂಖ್ಯೆಯ ಅಭಿಮಾನಿಗಳ ಪೈಕಿ ಕೆಲವರು ಪಾಕಿಸ್ತಾನ(Fans chant Pakistan) ಹೆಸರು ಘೋಷಣೆ ಕೂಗಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಗುಂಪಿನಲ್ಲಿ ಕೆಲವರು ಜೋರಾಗಿ ಪಾಕಿಸ್ತಾನದ ಹೆಸರು ಕೋಗಿದ್ದಾರೆ. ಅಭಿಮಾನಿಗಳು ಪಾಕ್​ ಹೆಸರು ಕೂಗಲೂ ಕೂಡ ಒಂದು ಕಾರಣವಿದೆ. ಹೌದು, ವಿಶ್ವಕಪ್​ ವೇಳೆ ಭಾರತ ತಂಡದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದರು. ವಿಜಯಯಾತ್ರೆಯ ದಾರಿಯಲ್ಲಿ ಕಸದ ಗಾಡಿಯೊಂದು ಹಾದು ಹೋಯಿತು. ಇದನ್ನು ಗಮನಿಸಿದ ಅಭಿಮಾನಿಗಳು ಪಾಕಿಸ್ತಾನವನ್ನು ಕಸಕ್ಕೆ ಹೋಲಿಕೆ ಮಾಡಿ ಅಪಹಾಸ್ಯ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಪಾಕಿಸ್ತಾನದ ಹೆಸರು ಕೂಗಿದ್ದಾರೆ.

17 ವರ್ಷಗಳ ಬಳಿಕ 2ನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ವಿಜಯೋತ್ಸವವನ್ನು ಗುರುವಾರ ಮುಂಬೈನಲ್ಲಿ ಏರ್ಪಡಿಸಲಾಗಿತ್ತು. ದಕ್ಷಿಣ ಮುಂಬೈನ ಮರೀನ್ ಡ್ರೈವ್‌ ಪ್ರದೇಶ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ಬಾರ್ಬಡೋಸ್‌ನಿಂದ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ಭಾರತ ತಂಡವು ಗುರುವಾರ ಬೆಳಗ್ಗೆ ನವದೆಹಲಿಗೆ ಬಂದಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿದ ನಂತರ ಮಧ್ಯಾಹ್ನ 3.42ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತ್ತು. ಸಂಜೆ ಐದು ಗಂಟೆಯ ನಂತರ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆಟಗಾರರು ಬಂದೊಡನೆಯೇ ಕ್ರಿಕೆಟ್‌ ಪ್ರೇಮಿಗಳ ಜಯಘೋಷ ಮೊಳಗಿತ್ತು.

ಇದನ್ನೂ ಓದಿ Team India Fan: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರ ಹೆಸರನ್ನು ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

ಅಭಿಮಾನಿಗಳ ಅಬ್ಬರಕ್ಕೆ ಅರಬ್ಬಿ ಸಮುದ್ರ ಕೂಡ ಒಂದು ಕ್ಷಣ ಸ್ಥಬ್ಧವಾಗಿತ್ತು. ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್‌ ಟ್ರೋಫಿ ಹಿಡಿದು ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್‌ ರಾಹುಲ್‌ ದ್ರಾವಿಡ್‌ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್‌ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜಯ್‌ ಶಾ ಹಸ್ತಾಂತರಿಸಿದ್ದರು.

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್​ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.

Continue Reading

ಕ್ರೀಡೆ

Team India Fan: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರ ಹೆಸರನ್ನು ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

Team India Fan: 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರ ಹೆಸರುಗಳು ಕೂಡ ಮನೋಜ್ ಬೆನ್ನ ಮೇಲೆ ಇದೆ. ಇಷ್ಟೇ ಅಲ್ಲದೆ ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​, ಮಹೇಂದ್ರ ಸಿಂಗ್​ ಧೋನಿ ಅವರ ಫೋಟೊವನ್ನು ಕೂಡ ಟ್ಯಾಟು ಹಾಕಿಸಿಕೊಂಡಿದ್ದಾರೆ.

VISTARANEWS.COM


on

Team India Fan
Koo

ಭುವನೇಶ್ವರ: ಟೀಮ್​ ಇಂಡಿಯಾದ(Team India) ಅಪ್ಪಟ ಅಭಿಮಾನಿಯಾಗಿರುವ(Team India Fan) ಒಡಿಶಾದ ಭುವನೇಶ್ವರ ನಿವಾಸಿ ಮನೋಜ್ ನಾಯಕ್(Manoj nayak) ಅವರು ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದ ಆಟಗಾರರ ಹೆಸರನ್ನು ತನ್ನ ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಮನೋಜ್(Manoj nayak team india fan)​ ತನ್ನ ಅಧಿಕೃತ ಟ್ವೀಟರ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಟ್ಯಾಟು ಹಾಕಿಸಿಕೊಂಡ ವಿಡಿಯೊ ಹಂಚಿಕೊಂಡಿರುವ ಮನೋಜ್​, ‘ಕೊಟ್ಯಂತರ ಕ್ರಿಕೆಟ್​ ಅಭಿಮಾನಿಗಳು ಕಳೆದ 13 ವರ್ಷಗಳಿಂದ ಕಾಯುತ್ತಿದ್ದ ಐಸಿಸಿ ಟ್ರೋಫಿ ಕೊನೆಗೂ ಟಿ20 ವಿಶ್ವಕಪ್​ ಗೆಲ್ಲುವ ಮೂಲಕ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆ ಮಾಡಿದ ಕ್ಷಣ ಮತ್ತು ಆಟಗಾರರನ್ನು ಸದಾ ನೆನೆಪಿನಲ್ಲಿ ಇರುವ ಸಲುವಾಗಿ ತಂಡಕ್ಕೆ ನನ್ನ ಕಡೆಯಿಂದ ಸಣ್ಣದೊಂದು ಉಡುಗೊರೆ. ಭಾರತಕ್ಕೆ ಕೀರ್ತಿ ತಂದ ಭಾರತ ತಂಡಕ್ಕೆ ದೊಡ್ಡ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರ ಹೆಸರುಗಳು ಕೂಡ ಮನೋಜ್ ಬೆನ್ನ ಮೇಲೆ ಇದೆ. ಇಷ್ಟೇ ಅಲ್ಲದೆ ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​, ಮಹೇಂದ್ರ ಸಿಂಗ್​ ಧೋನಿ ಅವರ ಫೋಟೊವನ್ನು ಕೂಡ ಟ್ಯಾಟು ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಇವರ ದೇಹ ಒಂದು ರೀತಿಯ ಕ್ರಿಕೆಟ್​ ಮ್ಯೂಸಿಯಂನಂತಿದೆ. ಭಾರತೀಯ ಕ್ರಿಕೆಟ್​ ಆಟಗಾರರು ಏನೇ ಸಾಧನೆ ಮಾಡಲಿ ತಕ್ಷಣ ಮನೋಜ್​ ಇದನ್ನು ತಮ್ಮ ದೇಹದ ಯಾವುದಾದರೊಂದು ಭಾಗದಲ್ಲಿ ಟ್ಯಾಟು ಹಾಕಿ ಅಭಿಮಾನ ಮೆರೆಯುತ್ತಾರೆ. ಇದೇ ವರ್ಷ ನಡೆದಿದ್ದ ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಚಾಂಪಿಯನ್​ ಆದಾಗಲು ಕೂಡ ತಂಡದ ಆಟಗಾರ್ತಿಯರ ಹೆಸರನ್ನು ತನ್ನ ಕೈಯಲ್ಲಿ ಅಚ್ಚೆ ಹಾಕಿಸಿದ್ದರು. ಸ್ವಾರಸ್ಯವೆಂದರೆ ಇವರಿಗೆ ಟ್ಯಾಟು ಹಾಕುತ್ತಿರುವ ವ್ಯಕ್ತಿ ಕೂಡ ಟೀಮ್​ ಇಂಡಿಯಾದ ಅಪ್ಪಟ ಅಭಿಮಾನಿಯಾಗಿದ್ದಾರೆ. ಪ್ರತಿ ಬಾರಿ ಮನೋಜ್​ಗೆ ಟ್ಯಾಟು ಹಾಕುವಾಗ ಟೀಮ್​ ಇಂಡಿಯಾ ಜೆರ್ಸಿ ಧರಿಸಿಯೇ ಟ್ಯಾಟು ಹಾಕುತ್ತಾರೆ.

ಇದನ್ನೂ ಓದಿ Team India: ರೋಹಿತ್​, ಸೂರ್ಯಕುಮಾರ್​, ದುಬೆ, ಜೈಸ್ವಾಲ್​ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್​ ಶಿಂಧೆ

ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್​ 29ರಂದು ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(​T20 World Cup 2024) ಪಂದ್ಯದಲ್ಲಿ ಭಾರತ ತಂಡ(Team India) ದಕ್ಷಿಣ ಆಫ್ರಿಕಾ(South Africa vs India) ವಿರುದ್ಧ 7 ರನ್​ಗಳ ಸಾಧಿಸುವ ಮೂಲಕ 13 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರವೊಂದನ್ನು ನೀಗಿಸಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

Continue Reading

ಕ್ರೀಡೆ

Rohit Sharma: ಮರಾಠಿಯಲ್ಲೇ ಮಾತನಾಡಿದ ರೋಹಿತ್​, ಸೂರ್ಯಕುಮಾರ್​; ವಿಡಿಯೊ ವೈರಲ್​

Rohit Sharma: ಸನ್ಮಾನ ಸ್ವೀಕರಿಸಿದ ಬಳಿಕ ಮರಾಠಿಯಲ್ಲೇ ಮಾತನಾಡಿದ ರೋಹಿತ್ ‘ಚೆಂಡು ಸೂರ್ಯಕುಮಾರ್​ ಕೈಯಲ್ಲಿ ಕುಳಿತದ್ದು ಒಳ್ಳೆಯದಾಯಿತು. ಕ್ಯಾಚ್​ ಹಿಡಿಯದೇ ಇದಿದ್ದರೆ ನಾನು ಅವನನ್ನು ತಂಡದಿಂದ ಹೊರಗೆ ಕೂರಿಸುತ್ತಿದ್ದೆ’ ಎಂದು ಹೇಳಿದರು. ರೋಹಿತ್​ ಮಾತು ಕೇಳಿ ಸಂಪೂರ್ಣ ಸದನ ನಗೆಗಡಲಲ್ಲಿ ತೇಲಿತು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Rohit Sharma
Koo

ಮುಂಬಯಿ: ಟಿ20 ವಿಶ್ವಕಪ್(T20 World Cup) ವಿಜೇತ ತಂಡದ ಮುಂಬೈಯ ನಾಲ್ವರು ಆಟಗಾರರಾದ ಕಪ್ತಾನ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಶುಕ್ರವಾರ ಮಾಹಾರಾಷ್ಟ್ರ ವಿಧಾನ ಭವನದಲ್ಲಿ ಅಭಿನಂದಿಸಲಾಗಿತ್ತು. ಈ ವೇಳೆ ಸೂರ್ಯಕುಮಾರ್(Suryakumar Yadav)​ ಮತ್ತು ರೋಹಿತ್(Rohit Sharma)​ ಮರಾಠಿಯಲ್ಲಿ ಮಾತನಾಡಿದ ವಿಡಿಯೊ ವೈರಲ್​ ಆಗಿದೆ. ಅದರಲ್ಲೂ ರೋಹಿತ್​ ಅವರು ಸೂರ್ಯ ಹಿಡಿದ ಕ್ಯಾಚ್​ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra CM Eknath Shinde) ಸೇರಿ ವಿಧಾನ ಭವನದಲ್ಲಿ ಸೇರಿದ ಸದ್ಯಸ್ಯರೆಲ್ಲ ಜೋರಾಗಿ ನಕ್ಕ ಪ್ರಸಂಗ ಕೂಡ ನಡೆಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಮರಾಠಿಯಲ್ಲೇ ಮಾತನಾಡಿದ ರೋಹಿತ್​, 13 ವರ್ಷಗಳ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿಯೊಂದನ್ನು ಗೆದ್ದು ತಂದಿರುವುದು ನಮಗೆಲ್ಲ ಸಂತಸದ ವಿಚಾರ. 2013ರಲ್ಲಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆವು. ನನ್ನ ಸಹ ಆಟಗಾರರಾದ ಶಿವಂ ದುಬೆ, ಸೂರ್ಯ ಮತ್ತು ಯಶಸ್ವಿ ಜೈಸ್ವಾಲ್ ಮಾತ್ರವಲ್ಲದೆ ಭಾರತದ ಯಶಸ್ಸಿಗೆ ಕೊಡುಗೆ ನೀಡಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂತಹ ತಂಡ ಸಿಕ್ಕಿದ್ದು ನನ್ನ ಅದೃಷ್ಟ ಎಂದರು. ಇದಾದ ಬಳಿಕ ಸೂರ್ಯಕುಮಾರ್​ ಕ್ಯಾಚ್​ ಬಗ್ಗೆ ಮಾತನಾಡಿ, ‘ಚೆಂಡು ಸೂರ್ಯಕುಮಾರ್​ ಕೈಯಲ್ಲಿ ಕುಳಿತದ್ದು ಒಳ್ಳೆಯದಾಯಿತು. ಕ್ಯಾಚ್​ ಹಿಡಿಯದೇ ಇದಿದ್ದರೆ ನಾನು ಅವನನ್ನು ತಂಡದಿಂದ ಹೊರಗೆ ಕೂರಿಸುತ್ತಿದ್ದೆ’ ಎಂದು ಹೇಳಿದಾಗ ಸಂಪೂರ್ಣ ಸದನ ನಗೆಗಡಲಲ್ಲಿ ತೇಲಿತು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

ರೋಹಿತ್​ ಬಳಿಕ ಸೂರ್ಯಕುಮಾರ್​ ಯಾದವ್ ಕೂಡ ಮರಾಠಿಯಲ್ಲೇ ಮಾತನಾಡಿದರು. ಮಾತು ಶುರು ಮಾಡುವ ಮೊದಲೇ ಸಚಿವರು, ಶಾಸಕರು ಸೇರಿದಂತೆ ಸೆಂಟ್ರಲ್ ಹಾಲ್‌ನಲ್ಲಿದ್ದವರು ಕ್ಯಾಚ್​ ಬಗ್ಗೆ ಹೇಳಿ ಎಂದು ಜೋರಾಗಿ ಕೂಗಿದರು. ಈ ವೇಳೆ ಕ್ಯಾಚ್ ಬಸ್ಲಾ ಹತಾತ್ (ಕ್ಯಾಚ್ ನನ್ನ ಕೈಗೆ ಬಂದು ಕೂತಿತು) ಎಂದು ನಗುತ್ತಲೇ ತಾವು ಯಾವ ರೀತಿ ಕ್ಯಾಚ್​ ಹಿಡಿದೆ ಎನ್ನುವುದನ್ನು ನಟನೆಯ ಮೂಲಕ ತೋರಿಸಿದರು. ಬಳಿಕ ತಮ್ಮ ವಿಶ್ವಕಪ್​ ಅನುಭವ ಹಂಚಿಕೊಂಡು ಸನ್ಮಾನ ಮಾಡಿದ ಮುಖ್ಯಮಂತ್ರಿಗಳಿಗೆ ಹಾಗೂ ನೆರದಿದ್ದ ಎಲ್ಲ ಸಚಿವರಿಗೂ ಧನ್ಯವಾದ ತಿಳಿಸಿದರು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಸೂರ್ಯ ಈ ಕ್ಯಾಚ್​ ಪಡೆಯದೇ ಹೋಗಿದ್ದರೆ ಭಾರತ ಪಂದ್ಯ ಸೋಲುವ ಸಾಧ್ಯತೆ ಇತ್ತು.

Continue Reading

ಕ್ರೀಡೆ

Anant Ambani wedding: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರದಲ್ಲಿ ಪಾಲ್ಗೊಂಡ ಧೋನಿ, ಪಾಂಡ್ಯ ಬ್ರದರ್ಸ್​, ಇಶಾನ್​ ಕಿಶನ್​

Anant Ambani wedding: ಮಾರ್ಚ್​ನಲ್ಲಿ ಗುಜರಾತ್​ನ ಜಾಮ್‌ನಗರದಲ್ಲಿ ನಡೆದಿದ್ದ ಅದ್ಧೂರಿ ವಿವಾಹಪೂರ್ವ ಸಮಾರಂಭದಲ್ಲಿಯೂ ಧೋನಿ ಮತ್ತು ಅವರ ಪತ್ನಿ ಭಾಗಿಯಾಗಿದ್ದರು. ಈ ವೇಳೆ ಧೋನಿ ವಿಂಡೀಸ್​ನ ಮಾಜಿ ಆಟಗಾರ ಡ್ವೇನ್‌ ಬ್ರಾವೊ(Dwayne Bravo) ಜತೆ ದಾಂಡಿಯಾ(Dandiya) ನೃತ್ಯವಾಡಿದ್ದರು. ಈ ವಿಡಿಯೊ ವೈರಲ್​ ಆಗಿತ್ತು.

VISTARANEWS.COM


on

Anant Ambani wedding
Koo

ಮುಂಬಯಿ: ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹಪೂರ್ವವಾಗಿ(Anant Ambani wedding) ನಡೆಯುತ್ತಿರುವ ಸಂಗೀತ ಕಾರ್ಯಕ್ರಮದಲ್ಲಿ(Anant-Radhika sangeet ceremony) ಟೀಮ್ ಇಂಡಿಯಾದ ಹಲವು ಆಟಗಾರರು ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್​ ಧೋನಿ(MS Dhoni), ಹಾರ್ದಿಕ್​ ಪಾಂಡ್ಯ(Hardik Pandya), ಇಶಾನ್​ ಕಿಶನ್(ishan kishan) ಮತ್ತು ​ಕೃಣಾಲ್​ ಪಾಂಡ್ಯ(krunal pandya) ಸಮಾರಂಭದಲ್ಲಿ ಭಾಗಿಯಾಗಿರುವ ವಿಡಿಯೊ ವೈರಲ್​ ಆಗಿದೆ.

ಮಾರ್ಚ್​ನಲ್ಲಿ ಗುಜರಾತ್​ನ ಜಾಮ್‌ನಗರದಲ್ಲಿ ನಡೆದಿದ್ದ ಅದ್ಧೂರಿ ವಿವಾಹಪೂರ್ವ ಸಮಾರಂಭದಲ್ಲಿಯೂ ಧೋನಿ ಮತ್ತು ಅವರ ಪತ್ನಿ ಭಾಗಿಯಾಗಿದ್ದರು. ಈ ವೇಳೆ ಧೋನಿ ವಿಂಡೀಸ್​ನ ಮಾಜಿ ಆಟಗಾರ ಡ್ವೇನ್‌ ಬ್ರಾವೊ(Dwayne Bravo) ಜತೆ ದಾಂಡಿಯಾ(Dandiya) ನೃತ್ಯವಾಡಿದ್ದರು. ಈ ವಿಡಿಯೊ ವೈರಲ್​ ಆಗಿತ್ತು.

ಅಂದು ನಡೆದಿದ್ದ ಅನಂತ್‌ ಅಂಬಾನಿ ವಿವಾಹಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್​, ರೋಹಿತ್ ಶರ್ಮ, ಜಹೀರ್ ಖಾನ್​, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್​ ಯಾದವ್​, ಕೈರಾನ್​ ಪೊಲಾರ್ಡ್​, ಕೃನಾಲ್ ಪಾಂಡ್ಯ , ಸುನೀಲ್​ ಗವಾಸ್ಕರ್​, ರಶೀದ್ ಖಾನ್​, ಸ್ಯಾಮ್ ಕರನ್​, ಗ್ರೇಮ್ ಸ್ಮಿತ್ ಸೇರಿ ಇನ್ನೂ ಅನೇಕ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಒಟ್ಟು ಮೂರು ದಿನ ಗುಜರಾತ್​ನ ಜಾಮ್‌ನಗರದಲ್ಲಿ ಸಂಭ್ರಮ ಮನೆ ಮಾಡಿತ್ತು.

ಸದ್ಯ ನಡೆಯುತ್ತಿರುವ ‘ಸಂಗೀತ’ ಸಮಾರಂಭದಲ್ಲಿ ದೀಪಿಕ ಪಡುಕೋಣೆ, ಜಾಹ್ನವಿ ಕಪೂರ್, ಮಾಧುರಿ ದೀಕ್ಷಿತ್, ಖುಷಿ ಕಪೂರ್, ಅನನ್ಯಾ ಪಾಂಡೆ, ಸಲ್ಮಾನ್ ಖಾನ್, ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿ ಹಲವು ಬಾಲಿವುಡ್​ ನಟ-ನಟಿಯರು ಪಾಲ್ಗೊಂಡಿದ್ದಾರೆ.

ಇದನ್ನು ಓದಿ Deepika Padukone: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ಸೀರೆಯಲ್ಲಿ ಮಿಂಚಿದ್ದು ಹೀಗೆ!

ಜುಲೈ 12ರಂದು ಮದುವೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್‌ ಆಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

Continue Reading
Advertisement
NEET-UG 2024
ಶಿಕ್ಷಣ3 mins ago

NEET-UG 2024: ನೀಟ್ ಯುಜಿ 2024 ಕೌನ್ಸೆಲಿಂಗ್ ಮುಂದೂಡಿಕೆ

Fans chant Pakistan
ಕ್ರೀಡೆ6 mins ago

Fans chant Pakistan: ಟೀಮ್ ಇಂಡಿಯಾ ವಿಕ್ಟರಿ ಪೆರೇಡ್​ನಲ್ಲಿ ಅಭಿಮಾನಿಗಳು ಪಾಕಿಸ್ತಾನ್ ಘೋಷಣೆ ಕೂಗಿದ್ದು ಏಕೆ? ವಿಡಿಯೊ ವೈರಲ್​

Closure of Madrassas
ದೇಶ21 mins ago

Closure of Madrasas: ಮದರಸಾಗಳನ್ನು ಮುಚ್ಚಲು ನಿರ್ಣಯ ಮಂಡನೆ; ಕಾಂಗ್ರೆಸ್‌ ಕಿಡಿ

Food Poisoning
ರಾಯಚೂರು31 mins ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Team India Fan
ಕ್ರೀಡೆ42 mins ago

Team India Fan: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರ ಹೆಸರನ್ನು ಬೆನ್ನ ಮೇಲೆ ಟ್ಯಾಟು ಹಾಕಿಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

Shruti Haasan responds to netizens’ marriage questions in style
ಟಾಲಿವುಡ್43 mins ago

Shruti Haasan: ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡ ಶ್ರುತಿ ಹಾಸನ್‌!

Channapatna By Election
ಕರ್ನಾಟಕ44 mins ago

Channapatna By Election: ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

Job Alert
ಉದ್ಯೋಗ46 mins ago

Job Alert: ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ; 10, 12ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

DR CN Manjunath dengue fever
ಪ್ರಮುಖ ಸುದ್ದಿ60 mins ago

Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

Road Accident
ಶಿವಮೊಗ್ಗ60 mins ago

Road Accident : ಶಿವಮೊಗ್ಗದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸಾವು, ಮತ್ತಿಬ್ಬರು ಗಂಭೀರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Food Poisoning
ರಾಯಚೂರು31 mins ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

karnataka Weather Forecast
ಮಳೆ7 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ19 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ21 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ22 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ24 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ1 day ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು1 day ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು1 day ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

ಟ್ರೆಂಡಿಂಗ್‌