LK Advani: ಎಲ್‌ ಕೆ ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು; ಆಸ್ಪತ್ರೆಗೆ ದಾಖಲು - Vistara News

ದೇಶ

LK Advani: ಎಲ್‌ ಕೆ ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು; ಆಸ್ಪತ್ರೆಗೆ ದಾಖಲು

LK Advani: ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 96 ವರ್ಷದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೂನ್‌ 27ರಂದು ಕೂಡ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಸದ್ಯದ ಮಟ್ಟಿಗೆ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

VISTARANEWS.COM


on

LK Advani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (L K Advani) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಗೆ (Apollo Hospital) ದಾಖಲಿಸಲಾಗಿದೆ. ಅಪೋಲೊ ಆಸ್ಪತ್ರೆಯ ವೈದ್ಯರು ಎಲ್‌.ಕೆ.ಅಡ್ವಾಣಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ನಿಗಾ ವಹಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಮಾಜಿ ಉಪ ಪ್ರಧಾನಿಯ ಆರೋಗ್ಯವು ಸ್ಥಿರವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ.

ಬುಧವಾರ (ಜುಲೈ 3) ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 96 ವರ್ಷದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೂನ್‌ 27ರಂದು ಕೂಡ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಹಾಗಾಗಿ ಅವರನ್ನು ಅದೇ ರಾತ್ರಿ ದೆಹಲಿಯಲ್ಲಿರುವ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು.

ಕಳೆದ ತಿಂಗಳ ಆರಂಭದಲ್ಲಿ, ಸರ್ಕಾರ ರಚನೆಗೆ ಹಕ್ಕು ಸಾಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಡ್ವಾಣಿಯವರನ್ನು ಭೇಟಿ ಮಾಡಿದ್ದರು. ಗಾಂಧಿನಗರದ ಮಾಜಿ ಸಂಸದರಾದ ಅಡ್ವಾಣಿ, ಮೋದಿಯವರ ರಾಜಕೀಯ ಮಾರ್ಗದರ್ಶಕರಾಗಿದ್ದಾರೆ.

ಅಡ್ವಾಣಿ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರ ನಿವಾಸದಲ್ಲಿಯೇ ಈ ಅತ್ಯುನ್ನತ ನಾಗರಿಕ ಗೌರವವನ್ನು ಸಲ್ಲಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಇದನ್ನು ಕೊಡಮಾಡಿದ್ದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಎಲ್‌ಕೆ ಅಡ್ವಾಣಿ ಅವರು ಜೂನ್ 2002ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: Narendra Modi: ಪ್ರಮಾಣವಚನಕ್ಕೂ ಮೊದಲು ಅಡ್ವಾಣಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hathras Stampede: ಹತ್ರಾಸ್‌ ಕಾಲ್ತುಳಿತದಿಂದ ತೀವ್ರ ದುಃಖವಾಗಿದೆ ಎಂದ ಭೋಲೆ ಬಾಬಾ; Video ಇಲ್ಲಿದೆ

Hathras Stampede: ಹತ್ರಾಸ್‌ ಕಾಲ್ತುಳಿತದಿಂದ ತೀವ್ರ ದುಃಖವಾಗಿದೆ ಎಂದು ಸ್ವಯಂಘೋಷಿತ ದೇವ ಮಾನವ ಭೋಲೆ ತಿಳಿಸಿದ್ದಾರೆ. ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಎಂದು ಗುರುತಿಸಿಕೊಂಡಿರುವ ಸೂರಜ್‌ಪಾಲ್‌ ಅವರು ಕಾಲ್ತುಳಿತದ ಪ್ರಮುಖ ಆರೋಪಿ ದೇವ್‌ಪ್ರಕಾಶ್ ಮಧುಕರ್ ನವದೆಹಲಿಯಲ್ಲಿ ಪೊಲೀಸರ ಮುಂದೆ ಶರಣಾದ ಕೆಲವೇ ಗಂಟೆಗಳ ನಂತರ ಶನಿವಾರ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದರು. ನಂತರ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಲ್ತುಳಿತದಲ್ಲಿ ಸುಮಾರು 121 ಮಂದಿ ಮೃತಪಟ್ಟಿದ್ದಾರೆ.

VISTARANEWS.COM


on

Hathras Stampede
Koo

ಲಖನೌ: ಜುಲೈ 2ರಂದು ನಡೆದ, ಸುಮಾರು 121 ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಹತ್ರಾಸ್‌ ಕಾಲ್ತುಳಿತ (Hathras Stampede) ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ, ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಇದೀಗ ಮಾಧ್ಯಮದ ಜತೆ ಮಾತನಾಡಿ, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಸತ್ಸಂಗ ಕಾರ್ಯಕ್ರಮ ಬಳಿಕ ನಡೆದ ಈ ಘಟನೆಯಿಂದ ತೀವ್ರ ದುಃಖಿತನಾಗಿ ಖಿನ್ನತೆಗೆ ಜಾರಿರುವುದಾಗಿ ಅವರು ತಿಳಿಸಿದ್ದಾರೆ.

ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಎಂದು ಗುರುತಿಸಿಕೊಂಡಿರುವ ಸೂರಜ್‌ಪಾಲ್‌ ಅವರು ಕಾಲ್ತುಳಿತದ ಪ್ರಮುಖ ಆರೋಪಿ ದೇವ್‌ಪ್ರಕಾಶ್ ಮಧುಕರ್ ನವದೆಹಲಿಯಲ್ಲಿ ಪೊಲೀಸರ ಮುಂದೆ ಶರಣಾದ ಕೆಲವೇ ಗಂಟೆಗಳ ನಂತರ ಶನಿವಾರ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದರು. ನಂತರ ಅವರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭೋಲೆ ಬಾಬಾ ಹೇಳಿದ್ದೇನು?

ʼʼಜುಲೈ 2ರಂದು ನಡೆದ ಕಾಲ್ತುಳಿತದ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಆ ದೇವರು ನಮಗೆಲ್ಲ ಈ ದುಃಖದಿಂದ ಹೊರ ಬರುವ ಶಕ್ತಿ ನೀಡಲಿ. ಸರ್ಕಾರ ಮತ್ತು ಆಡಳಿತ ಮೇಲೆ ನಂಬಿಕೆ ಇಡಿ. ಗೊಂದಲ, ಕಾಲ್ತುಳಿತಕ್ಕೆ ಕಾರಣರಾದವರನ್ನು ಕಾನೂನು ಸುಮ್ಮನೆ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನನ್ನ ವಕೀಲ ಎ.ಪಿ.ಸಿಂಗ್ ಅವರ ಮೂಲಕ, ದುಃಖಿತ ಕುಟುಂಬಗಳು ಮತ್ತು ಗಾಯಗೊಂಡವರ ಜತೆ ನಿಲ್ಲಲು ಮತ್ತು ಅವರಿಗೆ ಸಹಾಯ ಮಾಡಲು ನಾನು ಸಮಿತಿಯ ಸದಸ್ಯರಲ್ಲಿ ಮನವಿ ಮಾಡುತ್ತಿದ್ದೇನೆ” ಎಂದು ಭೋಲೆ ಬಾಬಾ ಹೇಳಿದ್ದಾರೆ.

ಮುಖ್ಯ ಆರೋಪಿಯ ಬಂಧನ

ಹತ್ರಾಸ್‌ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ (Devprakash Madhukar)ನನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ʼʼದೆಹಲಿಯಲ್ಲಿದ್ದ ದೇವಪ್ರಕಾಶ್‌ ಮಧುಕರ್‌ ಶರಣಾಗಿದ್ದು, ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆʼʼ ಎಂದು ಅವರ ವಕೀಲ ಎ.ಪಿ.ಸಿಂಗ್ ತಿಳಿಸಿದ್ದಾರೆ. ಕಾಲ್ತುಳಿತಕ್ಕೆ ಕಾರಣವಾದ ಭೋಲೆ ಬಾಬಾ (Bhole Baba) ಅವರ ಸತ್ಯಂಗದ ಮುಖ್ಯ ಸೇವಾದಾರ ಮಧುಕರ್‌ ವಿರುದ್ಧ ಹತ್ರಾಸ್‌ನ ಸಿಕಂದ್ರ ರಾವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಮಧುಕರ್‌ನ ವಕೀಲ ಎ.ಪಿ.ಸಿಂಗ್ ವಿಡಿಯೊ ಸಂದೇಶದಲ್ಲಿ, ʼʼತಮ್ಮ ಕಕ್ಷಿದಾರ (ದೇವಪ್ರಕಾಶ್‌ ಮಧುಕರ್‌) ದೆಹಲಿಯಲ್ಲಿ ಶರಣಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರುʼʼ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ವಕೀಲರೂ ಆದ ಎ.ಪಿ.ಸಿಂಗ್ ತಾನು ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರ ಪರವಾಗಿ ವಾದಿಸುತ್ತೇನೆ ಎಂದು ಹೇಳಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್‌ ಮಧುಕರ್‌ನ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ 2 ದಿನಗಳ ಹಿಂದೆ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ಹತ್ರಾಸ್‌ ಕಾಲ್ತುಳಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದು, ಈಗಾಗಲೇ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂ., ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Continue Reading

ಪ್ರಮುಖ ಸುದ್ದಿ

SpiceJet News: ಬೆಂಗಳೂರಿನ ಪ್ರಯಾಣಿಕರನ್ನು ದಿಲ್ಲಿಯಲ್ಲಿ ವಿಮಾನದೊಳಗೇ 12 ಗಂಟೆ ಕೊಳೆಹಾಕಿದ ಸ್ಪೈಸ್‌ಜೆಟ್!

SpiceJet News: ಸತತ 12 ಗಂಟೆಗಳ ಬಳಿಕ ಟೇಕ್ ಆಫ್ ಆದ ವಿಮಾನ‌ ಇಂದು ಬೆಳಗ್ಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ದೆಹಲಿಯಿಂದ ಅಂತೂ ಬೆಂಗಳೂರಿಗೆ ತಲುಪಿಕೊಂಡ ಪ್ರಯಾಣಿಕರು ಸ್ಪೈಸ್ ಜೆಟ್ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಸ್ಪೈಸ್ ಜೆಟ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

VISTARANEWS.COM


on

spicejet news
Koo

ಹೊಸದಿಲ್ಲಿ: ಸ್ಪೈಸ್ ಜೆಟ್ (SpiceJet) ವಿಮಾನ (Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ 12 ಗಂಟೆಗಳ ಕಾಲ ವಿಮಾನ ಟೇಕ್ ಆಫ್ (Delhi Bangalore Flight) ಆಗದೆ, ಬೆಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ದಿಲ್ಲಿಯಲ್ಲಿಯೇ ವಿಮಾನದೊಳಗೇ ಕೊಳೆಯುವಂತಾಯಿತು. ನಿನ್ನೆ ಸಂಜೆ ಬೆಂಗಳೂರಿಗೆ ಬರಬೇಕಿದ್ದ ವಿಮಾನ, ಕಡೆಗೂ ಬೆಳಿಗ್ಗೆ ಟೇಕ್ ಆಫ್ (Take Off) ಆಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Devanahalli International Airport) ಬಂದಿದೆ.

ದೆಹಲಿ- ಬೆಂಗಳೂರು SG8151 ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕರು ಈ ಘೋರ ಅನುಭವಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಫ್ಲೈಟ್‌ನಲ್ಲೇ ಪ್ರಯಾಣಿಕರು ಅನ್ನ ನೀರು ಇಲ್ಲದೇ ಕಾಲ ಕಳೆದರು. ಟರ್ಮಿನಲ್ 3ರಿಂದ ನಿನ್ನೆ ರಾತ್ರಿ 7.40ಕ್ಕೆ ವಿಮಾನ ಟೇಕಾಫ್ ಆಗಬೇಕಿತ್ತು. ಆದರೆ ವಿಮಾನ ಟೇಕಾಫ್ ಆಗದೇ ಟರ್ಮಿನಲ್‌ನಲ್ಲಿಯೇ ನಿಲ್ಲಿಸಿಕೊಳ್ಳಲಾಗಿತ್ತು. ತಾಂತ್ರಿಕ ದೋಷದಿಂದ ವಿಮಾನ ನಿಂತಿರುವುದಾಗಿ ಮಾಹಿತಿ ಲಭ್ಯವಾಗಿತ್ತು.

ಸತತ 12 ಗಂಟೆಗಳ ಬಳಿಕ ಟೇಕ್ ಆಫ್ ಆದ ವಿಮಾನ‌ ಇಂದು ಬೆಳಗ್ಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ದೆಹಲಿಯಿಂದ ಅಂತೂ ಬೆಂಗಳೂರಿಗೆ ತಲುಪಿಕೊಂಡ ಪ್ರಯಾಣಿಕರು ಸ್ಪೈಸ್ ಜೆಟ್ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಸ್ಪೈಸ್ ಜೆಟ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಮಾನದ ಸಿಬ್ಬಂದಿ ಊಟ ತಿಂಡಿ ಕೊಡದೆ ನಮ್ಮನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಏರ್‌ಲೈನ್ಸ್ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಬಿಪಿ ಶುಗರ್ ಮಾತ್ರೆ ತೆಗೆದುಕೊಳ್ಳಲೂ ಆಗಿಲ್ಲ ಎಂದು ಕೆಲವರು ಆಕ್ರೋಶಿಸಿದ್ದಾರೆ. ವಿಮಾನಕ್ಕೆ ಏನು ಆಗಿದೆ, ಪರ್ಯಾಯ ವ್ಯವಸ್ಥೆ ಏನು, ಇತ್ಯಾದಿಗಳ ಬಗೆಗೆ ಯಾವ ಮಾಹಿತಿಯನ್ನೂ ನೀಡದೆ ನಮ್ಮನ್ನು ಕತ್ತಲಲ್ಲಿಡಲಾಗಿತ್ತು ಎಂದು ಸಂತ್ರಸ್ತ ಪ್ರಯಾಣಿಕ ತಿಳಿಸಿದ್ದು, ತಮಗೆ ಆಗಿರುವ ಮಾನಸಿಕ ಹಿಂಸೆಗಾಗಿ ಕಾನೂನು ಮೊರೆ ಹೋಗುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ಟೀಮ್​ ಇಂಡಿಯಾ ಆಟಗಾರರನ್ನು ಕರೆ ತಂದ ಏರ್‌ ಇಂಡಿಯಾಗೆ ವರದಿ ಕೇಳಿದ ಡಿಜಿಸಿಎ; ಕಾರಣವೇನು?

ಮುಂಬಯಿ: ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಟೀಮ್​ ಇಂಡಿಯಾ(Team India) ಆಟಗಾರರನ್ನು ನವದೆಹಲಿಗೆ ಕರೆ ತಂದ ಏರ್ ಇಂಡಿಯಾಗೆ(Chartered flight for Team India) ಸಂಕಷ್ಟವೊಂದು ಎದುರಾಗಿದೆ. ನೆವಾರ್ಕ್‌ನಿಂದ ದೆಹಲಿ ನಡುವೆ ಹಾರಾಟ ನಡೆಸಬೇಕಿದ್ದ ಏರ್‌ ಇಂಡಿಯಾದ(Air India) ಸಾಮಾನ್ಯ ಪ್ಯಾಸೆಂಜರ್‌ ವಿಮಾನವನ್ನು ಜುಲೈ 2ರಂದು ರದ್ದುಗೊಳಿಸಿ, ಭಾರತದ ಕ್ರಿಕೆಟ್‌ ತಂಡವನ್ನು ಸ್ವದೇಶಕ್ಕೆ ಕರೆತರುವ ಉದ್ದೇಶದಿಂದ ಬಾರ್ಬಡೋಸ್‌ಗೆ ಡೈವರ್ಟ್‌ ಮಾಡಿದ ಕ್ರಮಕ್ಕೆ ಭಾರತೀಯ ವಿಮಾನಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(DGCA)ವು ಏರ್‌ ಇಂಡಿಯಾದಿಂದ ವರದಿ ಕೇಳಿದೆ.

ಟಿ20 ವಿಶ್ವಕಪ್​ ಟೂರ್ನಿ ಮುಗಿದ ಮರು ದಿನವೇ​ ವೆಸ್ಟ್ ​ಇಂಡೀಸ್​ನಲ್ಲಿ ಉಂಟಾದ ಬೆರಿಲ್ ಚಂಡಮಾರುತದಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಹೀಗಾಗಿ ಟೀಮ್​ ಇಂಡಿಯಾ ಆಟಗಾರರು ಬಾರ್ಬಡೋಸ್‌ನಲ್ಲೇ ನಾಲ್ಕು ದಿನಗಳ ಕಾಲ ಸಿಲುಕಿಕೊಂಡಿದ್ದರು. ಹವಾಮಾನವು ಸುಧಾರಿಸಿದ ನಂತರ, ವಿಶ್ವ ಚಾಂಪಿಯನ್‌ಗಳನ್ನು ಮರಳಿ ಮನೆಗೆ ಕರೆತರಲು ಬಿಸಿಸಿಐ ವಿಶೇಷ ಏರ್ ಇಂಡಿಯಾ ಚಾರ್ಟರ್ಡ್ ವಿಮಾನವನ್ನು ಬಾರ್ಬಡೋಸ್‌ಗೆ ಕಳುಹಿಸಲಾಗಿತ್ತು. ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಇಂದು(ಗುರುವಾರ) ಬೆಳಗ್ಗೆ ಭಾರತಕ್ಕೆ ಬಂದಿಳಿದೆ. ಇದೀಗ ಪ್ಯಾಸೆಂಜರ್‌ ವಿಮಾನವನ್ನು ರದ್ದುಗೊಳಿಸಿದ ಕ್ರಮಕ್ಕೆ ಉತ್ತರ ನೀಡುವಂತೆ ಏರ್‌ ಇಂಡಿಯಾಗೆ ಡಿಜಿಸಿಎ ಆದೇಶಿಸಿದೆ.

ಇದನ್ನೂ ಓದಿ: Namma Metro : ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆಗೆ ನಮ್ಮ ಮೆಟ್ರೋ ವಿಸ್ತರಣೆ?

Continue Reading

ದೇಶ

SpiceJet Flight: ಸ್ಪೈಸ್‌ಜೆಟ್‌ ವಿಮಾನ 12 ಗಂಟೆ ವಿಳಂಬ; ಪ್ರಯಾಣಿಕರ ಪರದಾಟ

SpiceJet Flight: ನವದೆಹಲಿಯಿಂದ ಬೆಂಗಳೂರಿಗೆ ಶುಕ್ರವಾರ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನ ಸುಮಾರು 12 ಗಂಟೆಗಳ ಕಾಲ ತಡವಾಗಿ ಶನಿವಾರ ಪ್ರಯಾಣ ಬೆಳೆಸಿದೆ. ಶುಕ್ರವಾರ ಸುಮಾರು 7 ಗಂಟೆಗೆ ಹೊರಡಬೇಕಿದ್ದ ಈ Sಜಿ 8151 ವಿಮಾನ ಇಂದು ಬೆಳಗ್ಗೆ 6.30ಕ್ಕೆ ಟೇಕಾಫ್‌ ಆಗಿದೆ.

VISTARANEWS.COM


on

SpiceJet Flight
Koo

ನವದೆಹಲಿ: ನವದೆಹಲಿಯಿಂದ ಬೆಂಗಳೂರಿಗೆ ಶುಕ್ರವಾರ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನ (SpiceJet Flight) ಸುಮಾರು 12 ಗಂಟೆಗಳ ಕಾಲ ತಡವಾಗಿ ಶನಿವಾರ ಪ್ರಯಾಣ ಬೆಳೆಸಿತು. ಶುಕ್ರವಾರ ಸುಮಾರು 7 ಗಂಟೆಗೆ ಹೊರಡಬೇಕಿದ್ದ ಈ Sಜಿ 8151 (SG 8151) ವಿಮಾನ ಇಂದು ಬೆಳಗ್ಗೆ 6.30ಕ್ಕೆ ಟೇಕಾಫ್‌ ಆಗಿದೆ. ವಿಮಾನ ವಿಳಂಬಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

7 ಗಂಟೆಗೆ ಹೊರಡಬೇಕಾಗಿದ್ದ ವಿಮಾನದಲ್ಲಿ ಪ್ರಯಾಣಿಸಲು ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರು ಕಾದು ಕುಳಿತಿದ್ದರು. ಕೊನೆಗೆ ತಡರಾತ್ರಿ 1 ಗಂಟೆ ಸುಮಾರಿಗೆ ಅವರನ್ನು ವಿಮಾನಕ್ಕೆ ಹತ್ತಿಸಲಾಯಿತು. ಆದರೆ ವಿಮಾನ ಬೆಳಿಗ್ಗೆ 6.30ರ ತನಕ ಟೇಕಾಫ್‌ ಆಗಿರಲೇ ಇಲ್ಲ. ಹೀಗಾಗಿ ಪ್ರಯಾಣಿಕರು ವಿಮಾನದಲ್ಲೇ ಅಕ್ಷರಶಃ ಬಂಧಿಗಳಾಗಿದ್ದರು. ಕೊನೆಗೆ 6.30ಕ್ಕೆ ಬೆಂಗಳೂರಿನತ್ತ ಹೊರಟಿತು ಎಂದು ಮೂಲಗಳು ತಿಳಿಸಿವೆ.

ಸ್ಪೈಸ್‌ಜೆಟ್‌ ಮೂಲಗಳು ಹೇಳಿದ್ದೇನು?

ದೆಹಲಿ-ಬೆಂಗಳೂರು ವಿಮಾನ ಟೇಕ್ ಆಫ್ ವಿಳಂಬಕ್ಕೆ ಪ್ರತಿಕ್ರಿಯಿಸಿದ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು ಪ್ರಯಾಣಿಕರನ್ನು ಕೆರಳಿಸಿತ್ತು. ಪೈಲಟ್ ಇಲ್ಲದ ಕಾರಣ ಟೇಕಾಫ್‌ ವಿಳಂಬವಾಗಿದೆ ಎಂದು ಅಧಿಕಾರಿಗಳು ಬೇಜಾವಬ್ದಾರಿಯುತ ಹೇಳಿಕೆ ನೀಡಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ವಿಡಿಯೊ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿಕೊಂಡು ಒದ್ದಾಡುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಯಾಣಿಕರು ಹೇಗೆ ಸಿಲುಕಿಕೊಂಡಿದ್ದಾರೆ ಎನ್ನುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಮಾನ ನಿಲ್ದಾಣವನ್ನು ಮತ್ತು ವಿಮಾನಕ್ಕೆ ಸಂಪರ್ಕಿಸುವ ಗ್ಯಾಂಗ್ ವೇ (Aerobridge) ಪ್ರಯಾಣಿಕರಿಂದ ತುಂಬಿರುವುದನ್ನು ಕಾಣಬಹುದು.

ವಿಮಾನದಲ್ಲೇ 100ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದರು. ಹೀಗಾಗಿ ಅವರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ಜತೆಗೆ ದೆಹಲಿ-ಗೋವಾಕ್ಕೆ ತೆರಳುವ ಸ್ಲೈಸ್‌ಜೆಟ್‌ ವಿಮಾನವೂ ಸುಮಾರು 16 ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಸೋಷಿಯಲ್‌ ಮೀಡಿಯಾದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಜತೆಗೆ ಸಿಬ್ಬಂದಿ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸ್ಪೈಸ್‌ಜೆಟ್‌ ಫ್ಲೈಟ್‌ನಲ್ಲಿ ಮತ್ತೆ ದೋಷ; ದುಬೈನಿಂದ ಆಗಮಿಸಬೇಕಿದ್ದ ವಿಮಾನ ವಿಳಂಬ

ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಯಾಣಿಕರು

ಕೆಲವು ದಿನಗಳ ಹಿಂದೆಯೂ ಇಂತಹದ್ದೇ ಘಟನೆ ನಡೆದಿತ್ತು. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ (Air India Flight) 20 ಗಂಟೆಗಳ ಕಾಲ ವಿಳಂಬವಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿತ್ತು. ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದೆ ವಿಮಾನದೊಳಗೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಏರ್‌ ಇಂಡಿಯಾ, ʼʼಈ ಘಟನೆಗಾಗಿ ವಿಷಾಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ತಂಡದವರು ಸೂಕ್ತವಾಗಿ ಸ್ಪಂದಿಸಲಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆʼʼ ಎಂದು ತಿಳಿಸಿತ್ತು.

Continue Reading

ವಿದೇಶ

UK Election: ಇಂಗ್ಲೆಂಡ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್‌ ಪಕ್ಷ; ಭಾರತದ ಮೇಲೇನು ಪರಿಣಾಮ?

UK Election: ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ.

VISTARANEWS.COM


on

UK Election
Koo

ಲಂಡನ್‌: ಜಗತ್ತಿನ ಗಮನ ಸೆಳೆದಿದ್ದ ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆ(UK Election)ಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷೆಯಂತೆಯೇ ಈ ಬಾರಿ ಕನ್ಸರ್ವೇಟಿವ್‌ ಪಕ್ಷದ, ಭಾರತದ ಮೂಲದ ರಿಷಿ ಸುನಕ್‌ (Rishi Sunak) ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಲೇಬರ್‌ ಪಕ್ಷ (Labour Party) ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಇದೀಗ ಕೀರ್‌ ಸ್ಟಾರ್ಮರ್‌ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ಲೇಬರ್ ಪಕ್ಷವು ಎಡಪಂಥೀಯ ನಿಲುವು ಹೊಂದಿದ್ದು ಸಹಜವಾಗಿಯೇ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಸುಮಾರು 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷವು ಭಾರತದ ಜತೆ ಬ್ರಿಟನ್‌ನ ಸಂಬಂಧ ವೃದ್ಧಿಸುವತ್ತ ಪ್ರಯತ್ನ ನಡೆಸಿತ್ತು.

ಕೀರ್‌ ಸ್ಟಾರ್ಮರ್‌ ನಿಲುವೇನು?

ಬ್ರೆಕ್ಸಿಟ್ ಅನ್ನು ಕಾರ್ಯರೂಪಕ್ಕೆ ತರುವುದಾಗಿ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಹತ್ವಾಕಾಂಕ್ಷೆಯ ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಈಗಾಗಲೇ ಪಕ್ಷ ತಿಳಿಸಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದ (FTA), ತಂತ್ರಜ್ಞಾನ, ಭದ್ರತೆ, ಶಿಕ್ಷಣ ಮತ್ತು ಹವಾಮಾನ ಬದಲಾವಣೆ ಮುಂತಾದ ಅಂಶಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಅವರು ಆಸಕ್ತಿ ಹೊಂದಿದ್ದಾರೆ.

ಲೇಬರ್‌ ಪಕ್ಷದ ಪ್ರಣಾಳಿಕೆಯು ವ್ಯಾಪಾರ ಒಪ್ಪಂದಕ್ಕೆ ಒತ್ತು ನೀಡುವ ಮೂಲಕ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸುವ ವಿಚಾರವನ್ನು ಒಳಗೊಂಡಿತ್ತು. ಇಂಗ್ಲೆಂಡ್‌ನಲ್ಲಿರುವ ಭಾರತೀಯ ವಲಸಿಗರೊಂದಿಗಿನ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದ ಭಾಗವಾಗಿ ಸ್ಟಾರ್ಮರ್ ಪ್ರಚಾರದ ಸಮಯದಲ್ಲಿ ಹಿಂದೂಫೋಬಿಯಾವನ್ನು ಖಂಡಿಸಿದ್ದರು. ಜತೆಗೆ ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಮನವೊಲಿಕೆಗೆ ಮುಂದಾಗಿದ್ದರು.

ಆದಾಗ್ಯೂ ಸ್ಟಾರ್ಮರ್‌ ಅವರ ಮಹತ್ವಾಕಾಂಕ್ಷೆಯ ವಿದೇಶಾಂಗ ನೀತಿಯ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಸವಾಲುಗಳಿವೆ. ವಿಶೇಷವಾಗಿ ವಲಸೆ ನೀತಿಗಳು ಮತ್ತು ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

ಕಾಶ್ಮೀರದ ಬಗ್ಗೆ ನಿಲುವು

ಈ ಹಿಂದೆ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತದ ಪ್ರತಿಪಾದನೆಗೆ ವಿರುದ್ಧವಾದ ನಿಲುವನ್ನು ಲೇಬರ್ ಪಕ್ಷ ಹೊಂದಿತ್ತು. ಕಾಶ್ಮೀರ ವಿಷಯದಲ್ಲಿನ ಅದರ ಧೋರಣೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ 2020ರಲ್ಲಿ ಲೇಬರ್ ಪಕ್ಷದ ನಾಯಕತ್ವ ವಹಿಸಿದ ಸ್ಟಾರ್ಮರ್, ಭಾರತದ ವಿಚಾರದಲ್ಲಿ ತಮ್ಮ ಪಕ್ಷ ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದ್ದರು. ಭಾರತೀಯ ಸಮುದಾಯದ ಜತೆಗಿನ ಸಭೆಗಳಲ್ಲಿ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಸ್ಟಾರ್ಮರ್ ಅವರು ‘ಕಾಶ್ಮೀರವು ಒಂದು ಆಂತರಿಕ ವಿಚಾರ’ ಮತ್ತು ಭಾರತ ಹಾಗೂ ಪಾಕಿಸ್ತಾನಗಳು ಅದನ್ನು ಬಗೆಹರಿಸಿಕೊಳ್ಳಲಿವೆ ಎಂದು ಹೇಳಿ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಸುಮಾರು ಒಂದೂವರೆ ದಶಕಗಳ ಕನ್ಸರ್ವೇಟಿವ್‌ ಪಕ್ಷದ ಅಧಿಕಾರ ಕೊನೆಗೊಳಿಸಿ ಲೇಬರ್‌ ಪಕ್ಷ ಸರ್ಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಯಾವ ರೀತಿ ಸಂಬಂಭ ಕಾಯ್ದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Continue Reading
Advertisement
assault case in Jigani
ಬೆಂಗಳೂರು ಗ್ರಾಮಾಂತರ7 mins ago

Assault Case : ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ತಲೆಬುರುಡೆ ತೂತು ಮಾಡಿದ ಸಪ್ಲೇಯರ್‌

Rohit Sharma
ಕ್ರೀಡೆ16 mins ago

Rohit Sharma: ಮರಾಠಿಯಲ್ಲೇ ಮಾತನಾಡಿದ ರೋಹಿತ್​, ಸೂರ್ಯಕುಮಾರ್​; ವಿಡಿಯೊ ವೈರಲ್​

Anant Ambani -Radhika Salman Khan dances
ಬಾಲಿವುಡ್17 mins ago

Anant Ambani -Radhika:  ಸಂಗೀತ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಜತೆ ಡ್ಯಾನ್ಸ್‌ ಮಾಡಿದ ಸಲ್ಮಾನ್ ಖಾನ್!

Viral Video
Latest29 mins ago

Viral Video : ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Hathras Stampede
ದೇಶ32 mins ago

Hathras Stampede: ಹತ್ರಾಸ್‌ ಕಾಲ್ತುಳಿತದಿಂದ ತೀವ್ರ ದುಃಖವಾಗಿದೆ ಎಂದ ಭೋಲೆ ಬಾಬಾ; Video ಇಲ್ಲಿದೆ

Zika Virus
ಶಿವಮೊಗ್ಗ34 mins ago

Zika Virus : ಡೆಂಗ್ಯೂ ಬೆನ್ನಲ್ಲೇ ಶಿವಮೊಗ್ಗದಲ್ಲಿ ಝಿಕಾ ವೈರಸ್‌ಗೆ ವೃದ್ಧ ಬಲಿ

spicejet news
ಪ್ರಮುಖ ಸುದ್ದಿ49 mins ago

SpiceJet News: ಬೆಂಗಳೂರಿನ ಪ್ರಯಾಣಿಕರನ್ನು ದಿಲ್ಲಿಯಲ್ಲಿ ವಿಮಾನದೊಳಗೇ 12 ಗಂಟೆ ಕೊಳೆಹಾಕಿದ ಸ್ಪೈಸ್‌ಜೆಟ್!

Kiran Raj celebrate Family day on his birthday
ಸ್ಯಾಂಡಲ್ ವುಡ್50 mins ago

Kiran Raj: ಜನುಮದಿನ ʻಫ್ಯಾಮಿಲಿ ಡೇʼ ಎಂದು ಆಚರಿಸಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡ ʻಕನ್ನಡತಿʼ ಸೀರಿಯಲ್‌ ನಟ!

Wild Animal Attack Elephant attack
ರಾಮನಗರ53 mins ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

gold rate today
ವಾಣಿಜ್ಯ58 mins ago

Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ; ಸ್ವರ್ಣ ಪ್ರಿಯರಿಗೆ ಶಾಕ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ6 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ18 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ20 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ20 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ22 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ24 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು1 day ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು1 day ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

ಟ್ರೆಂಡಿಂಗ್‌