ಡಾಲಿಯ Hoysala Movie ಸೆಟ್‌ಗೆ ಭೇಟಿ ನೀಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ - Vistara News

ಕ್ರೀಡೆ

ಡಾಲಿಯ Hoysala Movie ಸೆಟ್‌ಗೆ ಭೇಟಿ ನೀಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ

ಡಾಲಿ ಧನಂಜಯ್‌ ಅಭಿನಯದ ಹೊಯ್ಸಳ ಸಿನಿಮಾ ಸೆಟ್‌ಗೆ ಖ್ಯಾತ ಕ್ರಿಕೆಟ್‌ ಆಟಗಾರ್ತಿ ಚಿತ್ರೀಕರಣದ ವೇಳೆ ಭೇಟಿ ನೀಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

VISTARANEWS.COM


on

Haysala Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಡಾಲಿ ಧನಂಜಯ್‌ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗುತ್ತಿದ್ದಾರೆ. ಇತ್ತೀಚಿನ ಅವರ ಬೈರಾಗಿ ಸಿನಿಮಾದ ಅಭಿನಯಕ್ಕೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ಅವರೀಗ ಹೊಯ್ಸಳ (Hoysala Movie) ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದು, ಆ ಸೆಟ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

ಕರುನಾಡ ಕುವರಿ ವೇದಾ ಕೃಷ್ಣಮೂರ್ತಿ ಭಾರತ ಮಹಿಳೆಯರ ತಂಡದ ಹಿರಿಯ ಸದಸ್ಯೆ. ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ ಹಾಗೂ ಉತ್ತಮ ಫೀಲ್ಡರ್‌. ಅವರೀಗ ಸ್ವಲ್ಪ ಬಿಡುವು ಪಡೆದುಕೊಂಡಿದ್ದು, ಹೊಯ್ಸಳ ಸಿನಿಮಾದ ಸೆಟ್‌ಗೆ ಭೇಟಿ ಕೊಟ್ಟು ಚಿತ್ರ ತಂಡದ ಸದಸ್ಯರಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನಿಂದ ಚಾಮರಾಜನಗರಕ್ಕೆ ಹೊರಟಿತು ʻಬೈರಾಗಿʼ ಯಾತ್ರೆ, ಅಭಿಮಾನಿಗಳ ಸಂಭ್ರಮದಲ್ಲಿ ಮುಳುಗೆದ್ದ ಚಿತ್ರತಂಡ

ಮಹಿಳೆಯರ ಕ್ರಿಕೆಟ್‌ ಕ್ಷೇತ್ರದಲ್ಲಿ ವೇದಾ ಕೃಷ್ಣಮೂರ್ತಿ ಹಲವು ಸಾಧನೆಗಳನ್ನು ಮಾಡಿದ್ದಾರೆ. 2017ರ ವಿಶ್ವ ಕಪ್‌ನಲ್ಲಿ ಫೈನಲ್‌ ತಲುಪಿದ್ದ ಭಾರತ ತಂಡದ ಸದಸ್ಯರಾಗಿದ್ದರು ವೇದಾ.

ವೇದಾ ಅವರು ಭೇಟಿ ನೀಡಿದ ಸಂದರ್ಭದಲ್ಲಿ ನಾಯಕ ಡಾಲಿ ಧನಂಜಯ್‌ ಮತ್ತು ನಾಯಕಿ ಅಮೃತಾ ಅಯ್ಯಂಗಾರ್‌ ಹಾಗೂ ನಿರ್ಮಾಪಕರಾದ ಕಾರ್ತಿಕ್‌ ಗೌಡ, ಯೋಗಿ ಜಿ. ರಾಜ್‌ ಮತ್ತು ನಿರ್ದೇಶಕ ವಿಜಯ್‌ ನಾಗೇಂದ್ರ ಮುಂತಾದವರು ಇದ್ದರು.

ನಿರ್ದೇಶಕ ವಿಜಯ್‌ ನಾಗೇಂದ್ರ ಈ ಹಿಂದೆ ಗಣೇಶ್‌ ಅಭಿನಯದ ಗೀತಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಜನೀಶ್‌ ಲೋಕನಾಥ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ | Bairagee Movie | ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಹ್ಯಾಟ್ರಿಕ್‌ ಹೀರೋ: ರಾರಾಜಿಸುತ್ತಿದೆ ಶಿವಣ್ಣನ ಕಟೌಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

IPL 2024: ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

VISTARANEWS.COM


on

IPL 2024
Koo

ಚೆನ್ನೈ: ರಾಷ್ಟ್ರೀಯ ಬದ್ಧತೆಯ ಕಾರಣಕ್ಕೆ ಬಾಂಗ್ಲಾದೇಶದ ಬೌಲರ್​ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ತೊರೆದಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಶಿಬಿರ ಬಿಟ್ಟಿದ್ದಾರೆ. ಹೀಗೆ ಐಪಿಎಲ್ 2024 ಗೆ (IPL 2024 ) ವಿದಾಯ ಹೇಳುವ ಮೊದಲು ಮುಸ್ತಾಫಿಜುರ್ ರೆಹಮಾನ್ (Mustafizur Rahman) ಲೆಜೆಂಡ್​ ಕ್ರಿಕೆಟಿಗ ಎಂಎಸ್ ಧೋನಿಯಿಂದ ಸಹಿ ಮಾಡಿದ ಜೆರ್ಸಿ ಸ್ವೀಕರಿಸಿದರು. ಬಾಂಗ್ಲಾದೇಶ (Bangladesh Cricket Team) ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಕಾಣಿಸಿಕೊಳ್ಳಬೇಕಾಗಿರುವ ಕಾರಣ ವೇಗಿ ಮೇ 1, 2024 ರ ನಂತರ ಸಿಎಸ್ಕೆಗೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ತಿಳಿಸಲಾಗಿತ್ತು.

ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

“ಎಲ್ಲದಕ್ಕೂ ಧನ್ಯವಾದಗಳು ಮಹಿ ಭಾಯ್. ನಿಮ್ಮಂತಹ ದಂತಕಥೆಯೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುವುದು ವಿಶೇಷ ಭಾವನೆ. ಪ್ರತಿ ಬಾರಿಯೂ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅಮೂಲ್ಯ ಸಲಹೆಗಳನ್ನು ಸ್ಮರಿಸುತ್ತೇನೆ. ನಾನು ಹೇಳಿದ ವಿಷಯಗಳನ್ನು ನೆನಪಿಸಿಕೊಳ್ಳುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಭೇಟಿಯಾಗಲು ಮತ್ತು ಆಡಲು ಎದುರು ನೋಡುತ್ತಿದ್ದೇನೆ, “ಎಂದು ಮುಸ್ತಾಫಿಜುರ್ ಬರೆದುಕೊಂಡಿದ್ದಾರೆ.

ಟಿ 20 ಐ ಸರಣಿಗಾಗಿ ಮುಸ್ತಾಫಿಜುರ್ ತಮ್ಮ ದೇಶಕ್ಕೆ ಮರಳಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಏಪ್ರಿಲ್ 30 ರ ಗಡುವು ನಿಗದಿಪಡಿಸಿತ್ತು. ಆದರೆ, ಮೇ 1 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಪಿಬಿಕೆಎಸ್ ವಿರುದ್ಧ ಸಿಎಸ್ಕೆ ಪಂದ್ಯದ ಕಾರಣ ಗಡುವನ್ನು ವಿಸ್ತರಿಸಲಾಯಿತು. ಚೆನ್ನೈ ತಂಡ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ಮಂಡಳಿಯು ಗಡುವನ್ನು ವಿಸ್ತರಿಸಿತು.

“ನಾವು ಮುಸ್ತಾಫಿಜುರ್​ಗೆ ಏಪ್ರಿಲ್ 30 ರವರೆಗೆ ಐಪಿಎಲ್​ನಲ್ಲಿ ಆಡಲು ರಜೆ ನೀಡಿದ್ದೆವು, ಆದರೆ ಮೇ 1 ರಂದು ಚೆನ್ನೈನಲ್ಲಿ ಪಂದ್ಯ ಇರುವುದರಿಂದ, ಚೆನ್ನೈ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ನಾವು ಅವರ ರಜೆಯನ್ನು ಒಂದು ದಿನ ವಿಸ್ತರಿಸಿದ್ದೇವೆ” ಎಂದು ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೇಯ ಕ್ರಿಕೆಟ್ ಕಾರ್ಯಾಚರಣೆಗಳ ಉಪ ವ್ಯವಸ್ಥಾಪಕ ಶಹರಿಯಾರ್ ನಫೀಸ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ಪರ್ಪಲ್ ಕ್ಯಾಪ್ ಗೆಲ್ಲುವ ಸ್ಪರ್ಧೆಯಲ್ಲಿದ್ದ ಮುಸ್ತಾಫಿಜುರ್ ಐಪಿಎಲ್ 2024 ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನ ಪಡೆದರು. 9 ಪಂದ್ಯಗಳನ್ನಾಡಿರುವ ವೇಗಿ 9.26ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ.

ಪಿಬಿಕೆಎಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಸೋತಿದ್ದ ಸಿಎಸ್ಕೆಗೆ ರೆಹಮಾನ್ ಅಲಭ್ಯತೆ ಕಾಡಲಿದೆ. ಯಾಕೆಂದರೆ ಸ್ಟ್ರೈಕ್ ಬೌಲರ್​ , ದೀಪಕ್ ಚಹರ್ ಗಾಯಗೊಂಡ ನಂತರ ಮೈದಾನ ತೊರೆದಿದ್ದರು.

Continue Reading

ಪ್ರಮುಖ ಸುದ್ದಿ

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Rohit Sharma : ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Rohit Sharma
Koo

ಬೆಂಗಳೂರು: ಹಾಲಿ ಆವೃತ್ತಿಯಲ್ಲಿ ಐಪಿಎಲ್​ನಲ್ಲಿ (IPL 2024) ಮುಂಬೈ ಇಂಡಿಯನ್ಸ್ (Mumbai Indian’s) ತಂಡದ ಆರಂಭಿಕ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಮಿಂಚುತ್ತಿಲ್ಲ. ಅವರು ಕನಿಷ್ಠ ಮೊತ್ತಗಳಿಗೆ ಔಟ್​ ಆಗುತ್ತಿದ್ದಾರೆ. ಬಲಗೈ ಬ್ಯಾಟರ್​​ ಕಳೆದ ತಿಂಗಳು ಸಿಎಸ್ಕೆ (CSK) ವಿರುದ್ಧ ಶತಕ ಬಾರಿಸಿದರೂ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಿಲ್ಲ. ಅಂತೆಯೇ ಕಳೆದ ಮೂರು ಇನಿಂಗ್ಸ್​ಗಳಲ್ಲಿ ರೋಹಿತ್ ಎರಡಂಕಿ ಮೊತ್ತವನ್ನು ಮುಟ್ಟಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ, ಅವರು ಈ ಋತುವಿನಲ್ಲಿ ಇಲ್ಲಿಯವರೆಗೆ 10 ಇನಿಂಗ್ಸ್​​ಗಳಲ್ಲಿ 35 ಸರಾಸರಿ ಮತ್ತು 158.29 ಸ್ಟ್ರೈಕ್ ರೇಟ್​ನೊಂದಿಗೆ 315 ರನ್ ಗಳಿಸಿದ್ದಾರೆ.

ಟಿ 20 ವಿಶ್ವಕಪ್ 2024 ಸಮೀಪಿಸುತ್ತಿರುವುದರಿಂದ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಅವರು ಔಟಾಗುತ್ತಿರುವ ವಿಧಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನುಭವಿ ಆರಂಭಿಕ ಆಟಗಾರ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಎಡಗೈ ವೇಗಿಗಳಿಂದ ಆಗಾಗ್ಗೆ ತೊಂದರೆಗೀಡಾಗಿದ್ದಾರೆ. ಟ್ರೆಂಟ್ ಬೌಲ್ಟ್ ಎರಡು ಬಾರಿ ವಿಕೆಟ್ ಪಡೆದರೆ, ರೋಹಿತ್ ಶರ್ಮಾ ಅವರನ್ನು ಸ್ಯಾಮ್ ಕರ್ರನ್, ಖಲೀಲ್ ಅಹ್ಮದ್ ಮತ್ತು ಮೊಹ್ಸಿನ್ ಖಾನ್ ತಲಾ ಒಂದು ಬಾರಿ ಔಟ್ ಮಾಡಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಕೆಕೆಆರ್ ವಿರುದ್ಧದ ಮುಂಬೈ ಇಂಡಿಯನ್ಸ್ನ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ಬ್ಯಾಟ್ಸ್ಮನ್ ವಾಸಿಮ್ ಜಾಫರ್ ಎಡಗೈ ವೇಗದ ಬೌಲರ್​ಗಳ ವಿರುದ್ಧ ರೋಹಿತ್ ಶರ್ಮಾ ಯಾಕೆ ವೈಫಲ್ಯ ಹೊಂದುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಎಡಗೈ ವೇಗಿಗಳ ವಿರುದ್ಧ ಅವರು ಸಾಖಷ್ಟು ಸಮಸ್ಯೆ ಹೊಂದಿದ್ದಾರೆ. ಅವರು ತನ್ನ ಮುಂಭಾಗದ ಕಾಲನ್ನು ಇಡುವ ರೀತಿಯಿಂದಲೇ ತೊಂದರೆಯಾಗುತ್ತಿದೆ. ಎಲ್ಲರಿಗೂ ಅದು ಅರ್ಥವಾಗಿದೆ. ಬಲಗೈ ಬೌಲರ್​ಗಳ ಸಹ ಅವರನ್ನು ಔಟ್ ಮಾಡಲು ಒಂದು ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಎಡಗೈ ಆಟಗಾರರು ಕೋನವನ್ನು ಸೃಷ್ಟಿಸಿ ಬೌಲಿಂಗ್ ಮಾಡುತ್ತಾರೆ. ಅದು ಅವರಿಗೆ ಕಷ್ಟಕರವಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅವರು ಅವರ ಹಿಂದಕ್ಕೆ ಹೋಗಿ ಚೆಂಡನ್ನು ಎದುರಿಸುತ್ತಾರೆ. ಕೆಲವೊಮ್ಮೆ ಸ್ವಿಂಗ್ ಆಗುವುದನ್ನು ತಪ್ಪಿಸಲು ಮುಂದಕ್ಕೆ ನಡೆಯುತ್ತಾರೆ,” ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: Rohit Sharm : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

ರೋಹಿತ್​ಗೆ ತನ್ನದೇ ಆದ ಸಮಸ್ಯೆಗಳಿದ್ದವು. ಟ್ರೆಂಟ್ ಬೌಲ್ಟ್ ಅವರನ್ನು ಲಾಂಗ್ ಸ್ವಿಂಗ್​ನೊಂದಿಗೆ ಔಟ್ ಮಾಡುತ್ತಾರೆ. ಖಲೀಲ್ ವಿರುದ್ಧವೂ ತನ್ನ ಚಲನೆಯನ್ನು ತಪ್ಪಾಗಿ ಮಾಡಿದರು. ನಾನು ಇದನ್ನು ಯೋಜಿತ ವಿಕೆಟ್​ ಎಂದು ಕರೆಯುವುದಿಲ್ಲ. ಆದರೂ ಅವರ ಆಟದಲ್ಲಿ ಒಂದು ಲೋಪದೋಷವಿದೆ. ಅದು ರೋಹಿತ್​ಗೆ ತಿಳಿದಿದೆ. ಅವರು ಪ್ರತಿದಾಳಿ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಆಕ್ರಮಣಕಾರಿ ಕೌಶಲ್ಯದ ಮೂಲಕ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ, “ಎಂದು ಜಾಫರ್ ಹೇಳಿದ್ದಾರೆ.

ಸಲಹೆ ನೀಡಿದ ಜಾಫರ್​

ಇದೇ ವೇಳೆ ಜಾಫರ್​ ಬ್ಯಾಟಿಂಗ್ ಸಲಹೆಯನ್ನೂ ನೀಡಿದ್ದಾರೆ. ಆಕ್ರಮಣಕಾರಿ ಮಾರ್ಗವನ್ನು ತೆಗೆದುಕೊಳ್ಳಬಾರದು. ಬದಲಿಗೆ ಮೊದಲ ಎರಡು ಓವರ್​ಗಳಲ್ಲಿ ಚೆಂಡನ್ನು ಟೈಮಿಂಗ್ ಮಾಡುವತ್ತ ಗಮನ ಹರಿಸಬೇಕು ಎಂದು ಜಾಫರ್ ರೋಹಿತ್ಗೆ ಸಲಹೆ ನೀಡಿದರು.

ರೋಹಿತ್ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿಯೇ ಚೆಂಡನ್ನು ಬಾರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಚೆಂಡನ್ನು ತುಂಬಾ ಜೋರಾಇ ಹೊಡೆಯಲು ಪ್ರಯತ್ನಿಸುವ ಬದಲು ಒಂದೆರಡು ಓವರ್​ಗಳನ್ನು ತೆಗೆದುಕೊಳ್ಳಬಹುದು ಮತ್ತು ಸಮಯವನ್ನು ನೋಡಬಹುದು. “ಎಂದು ಅವರು ಹೇಳಿದರು.

Continue Reading

ಪ್ರಮುಖ ಸುದ್ದಿ

T20 World Cup : ವಿಶ್ವ ಕಪ್​​ ಟೂರ್ನಿಗೆ ಭಾರತದ ಇಬ್ಬರು ಅಂಪೈರ್​ಗಳು ಆಯ್ಕೆ; ಯಾರೆಲ್ಲ ಅವರು?

T20 World Cup: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪುರುಷರ ಟಿ 20 ವಿಶ್ವಕಪ್ 2022 ಫೈನಲ್​​ನಲ್ಲಿ ಕಾಣಿಸಿಕೊಂಡ ಕುಮಾರ್ ಧರ್ಮಸೇನಾ, ಕ್ರಿಸ್ ಗಫಾನೆ ಮತ್ತು ಪಾಲ್ ರೀಫೆಲ್ ಅವರೊಂದಿಗೆ ಕಳೆದ ವರ್ಷ ಐಸಿಸಿ ವರ್ಷದ ಡೇವಿಡ್ ಶೆಫರ್ಡ್ ಟ್ರೋಫಿ ವಿಜೇತ ರಿಚರ್ಡ್ ಇಲ್ಲಿಂಗ್​ವರ್ತ್​​ ಎಲೈಟ್ ಅಂಪೈರ್​ಗಳ ಪಟ್ಟಿಯಲ್ಲಿ ಸೇರಿದ್ದಾರೆ.

VISTARANEWS.COM


on

T20 World Cup
Koo

ನವದೆಹಲಿ: ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ರ (T20 World Cup) ಮೊದಲ ಸುತ್ತಿನ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 26 ಮ್ಯಾಚ್ ಅಧಿಕಾರಿಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ 20 ಅಂಪೈರ್​ಗಳು ಮತ್ತು ಆರು ಮ್ಯಾಚ್ ರೆಫರಿಗಳು ಇದ್ದಾರೆ. ಭಾರತದಿಂದ ಅಂಪೈರ್​ಗಳಾಗಿ ನಿತಿನ್ ಮೆನನ್​ ಹಾಗೂ ಜಯರಾಮ್​ ಮದನ್​ಗೋಪಾಲ್ ಮತ್ತು ರೆಫರಿಯಾಗಿ ಜಾವಗಲ್ ಶ್ರೀನಾಥ್​ ಆಯ್ಕೆಯಾಗಿದ್ದಾರೆ.

ಅವರು ಒಂಬತ್ತನೇ ಪುರುಷರ ಟಿ 20 ವಿಶ್ವಕಪ್​​ ಟೂರ್ನಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 28 ದಿನಗಳ ಕಾಲ 9 ಸ್ಥಳಗಳಲ್ಲಿ 55 ಪಂದ್ಯಗಳನ್ನು ಆಡಲಾಗಿದ್ದು, ಇದುವರೆಗಿನ ಅತಿದೊಡ್ಡ ಐಸಿಸಿ ಟಿ 20 ವಿಶ್ವಕಪ್ ಇದಾಗಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪುರುಷರ ಟಿ 20 ವಿಶ್ವಕಪ್ 2022 ಫೈನಲ್​​ನಲ್ಲಿ ಕಾಣಿಸಿಕೊಂಡ ಕುಮಾರ್ ಧರ್ಮಸೇನಾ, ಕ್ರಿಸ್ ಗಫಾನೆ ಮತ್ತು ಪಾಲ್ ರೀಫೆಲ್ ಅವರೊಂದಿಗೆ ಕಳೆದ ವರ್ಷ ಐಸಿಸಿ ವರ್ಷದ ಡೇವಿಡ್ ಶೆಫರ್ಡ್ ಟ್ರೋಫಿ ವಿಜೇತ ರಿಚರ್ಡ್ ಇಲ್ಲಿಂಗ್​ವರ್ತ್​​ ಎಲೈಟ್ ಅಂಪೈರ್​ಗಳ ಪಟ್ಟಿಯಲ್ಲಿ ಸೇರಿದ್ದಾರೆ.

ಇದನ್ನೂ ಓದಿ: RCB vs GT: ಮಳೆ ಭೀತಿಯ ಮಧ್ಯೆ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

ಮ್ಯಾಚ್ ರೆಫರಿಗಳ ತಂಡದಲ್ಲಿ 2022 ರ ಫೈನಲ್​​ನ ಅಂಪೈರ್ ಆಗಿದ್ದ ರಂಜನ್ ಮದುಗಲೆ ಮತ್ತು ಸ್ವರೂಪದ ಅತ್ಯಂತ ಅನುಭವಿ ರೆಫರಿ ಜೆಫ್ ಕ್ರೋವ್ ಇದ್ದಾರೆ.

ಆಯ್ದ ಗುಂಪಿನಲ್ಲಿ ನಾವು ಅನುಭವಿ ಪಂದ್ಯದ ಅಧಿಕಾರಿಗಳು ಮತ್ತು ಇತರ ಉನ್ನತ ಕಾರ್ಯಕ್ಷಮತೆಯ ಸದಸ್ಯರನ್ನು ಹೊಂದಿದ್ದೇವೆ. ಅವರು ತಮ್ಮ ಬಲವಾದ ಮತ್ತು ಸ್ಥಿರ ಪ್ರದರ್ಶನಕ್ಕೆ ಖ್ಯಾತಿ ಪಡೆದವರು. ಉತ್ತಮ-ಗುಣಮಟ್ಟದ ಪಂದ್ಯದ ಅಧಿಕಾರಿಗಳ ಅಭಿವೃದ್ಧಿ ಮತ್ತು ಫಲಿತಾಂಶ ನಿರೀಕ್ಷೆ ಮಾಡಬಹುದು ಎಂದು ಐಸಿಸಿ ಹೇಳಿದೆ.

28 ದಿನಗಳಲ್ಲಿ 20 ತಂಡಗಳು ಮತ್ತು 55 ಪಂದ್ಯಗಳನ್ನು ಆಡಲಿವೆ. ಇದು ಇದುವರೆಗಿನ ಅತಿದೊಡ್ಡ ಟಿ 20 ವಿಶ್ವಕಪ್ ಆಗಿದೆ ಮತ್ತು ನಾವು ಒಟ್ಟುಗೂಡಿಸಿದ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಅತ್ಯಂತ ರೋಮಾಂಚಕಾರಿ ಪಂದ್ಯಾವಳಿ ಎಂದು ಭರವಸೆ ನೀಡಿದ್ದಕ್ಕಾಗಿ ನಾವು ಅವರಿಗೆ ಶುಭ ಹಾರೈಸುತ್ತೇವೆ, “ಎಂದು ಹೇಳಿದರು.

ಅಂಪೈರ್​​ಗಳು:

ಕ್ರಿಸ್ ಬ್ರೌನ್, ಕುಮಾರ್ ಧರ್ಮಸೇನಾ, ಕ್ರಿಸ್ ಗಫಾನಿ, ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್ಸ್ಟಾಕ್, ರಿಚರ್ಡ್ ಇಲ್ಲಿಂಗ್ವರ್ತ್, ಅಲ್ಲಾಹುದ್ದೀನ್ ಪಾಲೇಕರ್, ರಿಚರ್ಡ್ ಕೆಟಲ್ಬರೋ, ಜಯರಾಮನ್ ಮದನಗೋಪಾಲ್, ನಿತಿನ್ ಮೆನನ್, ಸ್ಯಾಮ್ ನೊಗಾಜ್ಸ್ಕಿ, ಅಹ್ಸಾನ್ ರಾಜಾ, ರಶೀದ್ ರಿಯಾಜ್, ಪಾಲ್ ರೀಫೆಲ್, ಲ್ಯಾಂಗ್ಟನ್ ರುಸೆರೆ, ಶಾಹಿದ್ ಸೈಕತ್, ರಾಡ್ನಿ ಟಕರ್, ಅಲೆಕ್ಸ್ ವಾರ್ಫ್, ಜೋಯಲ್ ವಿಲ್ಸನ್ ಮತ್ತು ಆಸಿಫ್ ಯಾಕೂಬ್.

ಮ್ಯಾಚ್ ರೆಫರಿಗಳು:

ಡೇವಿಡ್ ಬೂನ್, ಜೆಫ್ ಕ್ರೋವ್, ರಂಜನ್ ಮದುಗಲೆ, ಆಂಡ್ರ್ಯೂ ಪೈಕ್ರಾಫ್ಟ್, ರಿಚಿ ರಿಚರ್ಡ್ಸನ್ ಮತ್ತು ಜಾವಗಲ್ ಶ್ರೀನಾಥ್.

Continue Reading

ಕ್ರೀಡೆ

RCB vs GT: ಬೆಂಗಳೂರಿನಲ್ಲಿ ನಾಳೆ ಐಪಿಎಲ್‌ ಹಬ್ಬ: ತಡರಾತ್ರಿಯೂ ಇದೆ ಮೆಟ್ರೋ ಸೇವೆ, ಪಾರ್ಕಿಂಗ್‌ ಎಲ್ಲೆಲ್ಲಿ?

RCB vs GT: ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bangalore)ಮತ್ತು ಗುಜರಾತ್​ ಟೈಟಾನ್ಸ್​ (Gujarat Titans) ನಡುವಣ ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

VISTARANEWS.COM


on

RCB vs GT
Koo

ಬೆಂಗಳೂರು: ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bangalore) ಮತ್ತು ಗುಜರಾತ್​ ಟೈಟಾನ್ಸ್​ (Gujarat Titans) ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ತವರಿನ ಅಭಿಮಾನಿಗಳು ಕಾತದಿಂದ ಕಾದು ಕುಳಿತಿದ್ದಾರೆ. ಕ್ರಿಕೆಟ್​ ಅಭಿಮಾನಿಗಳಿಗಾಗಿಯೇ ನಮ್ಮ ಮೆಟ್ರೋ(namma metro) ಕೂಡ ವಿಶೇಷ ರೈಲು ಸೇವೆಯನ್ನು ನೀಡಲಿದೆ.

ಕ್ರಿಕೆಟ್‌ ಪಂದ್ಯ ನೋಡಲು ಬರುವ ಕ್ರಿಕೆಟ್‌ ಪ್ರೇಮಿಗಳಿಗಾಗಿ ಮೆಟ್ರೋ ರೈಲು ಮತ್ತು ಬಿಎಂಟಿಸಿ ವಿಶೇಷ ಓಡಾಟಕ್ಕೆ ಅನುಮತಿ ನೀಡಿವೆ. ಹೀಗಾಗಿ ಕ್ರಿಕೆಟ್‌ ನೋಡಲು ಬರುವವರು, ಕ್ರೀಡಾಂಗಣ ತಲುಪುವ ವಿಚಾರದಲ್ಲಿ ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

ಪೇಪರ್‌ ಟಿಕೆಟ್‌ ಮಾರಾಟ

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

ಎಂದಿನಂತೆ, ಕ್ಯೂಆರ್‌ (QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.

ಮಳೆ ಸಾಧ್ಯತೆ


ಬೆಂಗಳೂರಿನಲ್ಲಿ ಮೇ 4ರ ಸಂಜೆವರೆಗೆ ಮಳೆ ಬರುವ ಮುನ್ಸೂಚನೆ ಇದೆಯಾದರೂ ಆಟವನ್ನೇ ನಿಲ್ಲಿಸುವಷ್ಟು ಜೋರಾಗಿ ಬರುವ ಸಾಧ್ಯತೆ ಇಲ್ಲ. ಸಣ್ಣಗೆ ತುಂತುರು ಮಳೆ ಬರಲೂಬಹುದು. ಹೀಗೆ ಸ್ವಲ್ಪ ಹೊತ್ತು ಮಳೆ ಬಂದರೂ ಬೇಗನೆ ಅದರ ಪರಿಣಾಮಗಳನ್ನು ನಿವಾರಿಸಿ ಆಟಕ್ಕೆ ಅಣಿ ಮಾಡುವ ತಂತ್ರಜ್ಞಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ.

ಇದನ್ನೂ ಓದಿ RCB vs GT: ಮಳೆ ಭೀತಿಯ ಮಧ್ಯೆ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆರ್​ಸಿಬಿ

ಪಾರ್ಕಿಂಗ್​ ವ್ಯವಸ್ಥೆ

ಚಿನ್ನಸ್ವಾಮಿ ಕ್ರೀಡಾಂಗಣದತ್ತ ವಾಹನಗಳ ದಂಡೇ ಬರುವುದರಿಂದ ಕೆಲವು ಕಡೆ ಪಾರ್ಕಿಂಗ್‌ ನಿಷೇಧಿಸಲಾಗಿದೆ. ಇನ್ನು ಕೆಲವು ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮೇ 4ರಂದು ಸಂಜೆ ನಾಲ್ಕರಿಂದ ರಾತ್ರಿ 11ರವರೆಗಿನ ಮಾರ್ಗಸೂಚಿ ಇಲ್ಲಿದೆ.

ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿರ್ಬಂಧ

ಕ್ವೀನ್ಸ್‌ ರೋಡ್‌, ಎಂಜಿ ರೋಡ್‌ನಿಂದ ಕಬ್ಬನ್‌ ಪಾರ್ಕ್‌ ರಸ್ತೆ, ರಾಜಭವನ್‌ ರೋಡ್‌-ಸೆಂಟ್ರಲ್‌ ಸ್ಟ್ರೀಟ್‌ ರೋಡ್‌, ಕಬ್ಬನ್‌ ರಸ್ತೆ, ಸೈಂಟ್‌ ಮಾರ್ಕ್‌ ರಸ್ತೆ, ಮ್ಯೂಸಿಯಂ ರೋಡ್‌, ಕಸ್ತೂರ್ಬಾ ರೋಡ್‌, ಅಂಬೇಡ್ಕರ್‌ ವೀದಿ, ಟ್ರಿನಿಟಿ, ಲಾವೆಲ್ಲೆ ರೋಡ್‌, ವಿಠಲ್‌ ಮಲ್ಯ ರೋಡ್‌, ನೃಪತುಂಗ ರಸ್ತೆ

ಪಾರ್ಕಿಂಗ್‌ಗೆ ಎಲ್ಲೆಲ್ಲಿ ವ್ಯವಸ್ಥೆ

ಕಿಂಗ್ಸ್‌ ರೋಡ್‌, ಯುಬಿ ಸಿಟಿ ಪಾರ್ಕಿಂಗ್‌, ಬಿಎಂಟಿಸಿ ಟಿಟಿಎಂಸಿ ಶಿವಾಜಿ ನಗರ್‌ ಫಸ್ಟ್‌ ಫ್ಲೋರ್‌, ಹಳೆ ಕೆಜಿಐಡಿ ಬಿಲ್ಡಿಂಗ್‌, ಮೆಟ್ರೋ ಲೇನ್‌ ಕೆಳಗಿನ ಬಿಆರ್‌ವಿ ಗ್ರೌಂಡ್‌

Continue Reading
Advertisement
Summer Fashion
ಫ್ಯಾಷನ್3 mins ago

Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

Summer Tour
ಪ್ರವಾಸ22 mins ago

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

IPL 2024
ಕ್ರೀಡೆ25 mins ago

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

Tips for bedroom corner
ಲೈಫ್‌ಸ್ಟೈಲ್27 mins ago

Tips for Bedroom Corner: ಮಲಗುವ ಕೋಣೆಯ ಮೂಲೆಗಳನ್ನು ಆಕರ್ಷಕವಾಗಿಸಲು ಕೆಲವು ಟಿಪ್ಸ್

Viral Video
ವೈರಲ್ ನ್ಯೂಸ್30 mins ago

Viral Video: ಪ್ರಿನ್ಸಿಪಾಲ್ ಆದರೇನು, ಟೀಚರ್ ಆದರೇನು? ಹೆಂಗಸರ ಬಡಿದಾಟ ಇರೋದೇ ಹೀಗೆ! ವಿಡಿಯೊ ನೋಡಿ

Rohit Sharma
ಪ್ರಮುಖ ಸುದ್ದಿ40 mins ago

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Prajwal Revanna Case face not visible in videos says HD Kumaraswamy
ಕ್ರೈಂ45 mins ago

Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

Covishield Vaccine
ಪ್ರಮುಖ ಸುದ್ದಿ56 mins ago

Covishield Vaccine: ಕೋವಿಶೀಲ್ಡ್ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ, ಕೂಲ್‌ ಡ್ರಿಂಕ್ಸ್‌ ಸೇವಿಸಬಾರದು: ತಪ್ಪು ಮಾಹಿತಿ ಕೊಟ್ಟ ಕಾಲೇಜುಗಳಿಗೆ ನೋಟಿಸ್

T20 World Cup
ಪ್ರಮುಖ ಸುದ್ದಿ1 hour ago

T20 World Cup : ವಿಶ್ವ ಕಪ್​​ ಟೂರ್ನಿಗೆ ಭಾರತದ ಇಬ್ಬರು ಅಂಪೈರ್​ಗಳು ಆಯ್ಕೆ; ಯಾರೆಲ್ಲ ಅವರು?

Namesakes
ದೇಶ1 hour ago

Namesake: ರಾಹುಲ್‌ಗಳು, ಲಾಲುಗಳು; ಒಂದೇ ಹೆಸರಿನವರ ಸ್ಪರ್ಧೆ ಕುರಿತು ಕೋರ್ಟ್‌ ಮಹತ್ವದ ಹೇಳಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ2 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ13 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ23 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌