ಕ್ರೀಡೆ
Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ಗಳಾದ ನೀತು ಗಂಗಾಸ್ ಮತ್ತು ಸ್ವೀಟಿ ಬೂರಾ ಚಿನ್ನದ ಪದಕಕ್ಕೆ ಪಂಚ್ ನೀಡಿದ್ದಾರೆ.
ನವದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(World Women’s Boxing) ಭಾರತದ ಬಾಕ್ಸರ್ಗಳು ಪ್ರಾಬಲ್ಯ ಮರೆದಿದ್ದಾರೆ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 2 ಚಿನ್ನದ ಪದಕ ಗೆದ್ದಿದೆ. ಆರಂಭದಲ್ಲಿ ನೀತು ಗಂಗಾಸ್ ಚಿನ್ನ ಗೆದ್ದು ಭಾರತದ ಖಾತೆ ತೆರೆದರೆ ಇದರ ಬೆನ್ನಲ್ಲೇ ಸ್ವೀಟಿ ಬೂರಾ(Saweety Boora) ಕೂಡ ಚಿನ್ನದ ಪದಕ ಗೆದ್ದು ಸಿಹಿ ಸುದ್ದಿ ನೀಡಿದರು.
ಶನಿವಾರ ಇಲ್ಲಿ ನಡೆದ 81 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸ್ವೀಟಿ ಬೂರಾ ಅವರು 4-3 ಅಂಕಗಳ ಅಂತರದಿಂದ ಚೀನಾದ ವಾಂಗ್ ಲೀನಾ ಅವರನ್ನು ಪ್ರಬಲ ಪಂಚ್ಗಳ ಮೂಲಕ ಹಿಮ್ಮೆಟ್ಟಿಸಿದರು. ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಆರಂಭಿಕ ಬೌಟ್ನಲ್ಲಿ ಸ್ವೀಟಿ ಬೂರಾ ಹಿನ್ನಡೆ ಅನುಭವಿಸಿದರೂ ಆ ಬಳಿಕದ ಬೌಟ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟು ಅಂತಿಮವಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.
ಇದಕ್ಕೂ ಮುನ್ನ ನಡೆದ ದಿನದ ಮತ್ತೊಂದು ಪಂದ್ಯದಲ್ಲಿ 48 ಕೆಜಿ ವಿಭಾಗದದ ಫೈನಲ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀತು ಗಂಗಾಸ್ ಚಿನ್ನ ಗೆದ್ದಿದ್ದರು. ಅವರು ಪ್ರಬಲ ಪಂಚ್ಗಳ ಮೂಲಕ ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ದಾಖಲಿಸಿದ್ದರು.
ಇದನ್ನೂ ಓದಿ World Women’s Boxing; ಚಿನ್ನದ ಪದಕಕ್ಕೆ ಪಂಚ್ ನೀಡಿದ ನೀತು ಗಂಗಾಸ್
ಇನ್ನೂ ಎರಡು ಚಿನ್ನ ನಿರೀಕ್ಷೆ
ಭಾನುವಾರ ನಡೆಯುವ 52 ಕೆಜಿ ವಿಭಾಗದಲ್ಲಿ ನಿಖತ್ ಮತ್ತು 75 ಕೆಜಿ ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್ ಫೈನಲ್ ಪಂದ್ಯ ಆಡಿಲಿದ್ದಾರೆ. ಉಭಯ ಬಾಕ್ಸರ್ಗಳ ಮೇಲು ಪದಕ ನಿರೀಕ್ಷೆ ಇರಿಸಲಾಗಿದೆ. ಒಂದೊಮ್ಮೆ ಈ ಇಬ್ಬರು ಫೈನಲ್ನಲ್ಲಿ ಗೆದ್ದರೆ ಭಾರತ ನಾಲ್ಕು ಚಿನ್ನದ ಪದಕ ಗೆದ್ದಂತಾಗುತ್ತದೆ.
ಕ್ರೀಡೆ
Heart Attack: ಬ್ಯಾಡ್ಮಿಂಟನ್ ಆಡುತ್ತಿದ್ದವನ ಬಾಳಲ್ಲಿ ಆಟವಾಡಿದ ವಿಧಿ; ಹೃದಯಾಘಾತದಿಂದ ವ್ಯಕ್ತಿ ಸಾವು
Heart Attack: ನೊಯ್ಡಾ 11ನೇ ಸೆಕ್ಟರ್ ನಿವಾಸಿ ಮಹೇಂದ್ರ ಶರ್ಮಾ ಅವರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಕಳೆದ ಐದು ವರ್ಷದಿಂದ ಅವರು ನಿತ್ಯ ಬ್ಯಾಡ್ಮಿಂಟನ್ ಆಡುತ್ತಿದ್ದರು. ಆದರೆ, ಅವರಿಗೆ ಶನಿವಾರ ಬೆಳಗ್ಗೆ ಹೃದಯಾಘಾತವಾಗಿದೆ. ಇದಾದ ಕೆಲವೇ ನಿಮಿಷದಲ್ಲಿ ಅವರು ಮೃತಪಟ್ಟಿದ್ದಾರೆ.
ನೊಯ್ಡಾ: ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ, ಮೃತಪಡುತ್ತಿರುವವರ ಸಂಖ್ಯೆ ಜಾಸ್ತಿಯಾದ ಕಾರಣ ಜನರ ಬದುಕು ಮತ್ತಷ್ಟು ಅನಿಶ್ಚಿತತೆಯಿಂದ ಕೂಡಿದೆ. ನಮ್ಮೆದುರು ಚೆನ್ನಾಗಿ ಇರುವವರು ಕೆಲವೇ ಗಂಟೆಯಲ್ಲಿ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಭೀತಿ ಹುಟ್ಟಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ನೊಯ್ಡಾದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸೆಕ್ಟರ್ 21 ಎನಲ್ಲಿರುವ ನೊಯ್ಡಾ ಸ್ಟೇಡಿಯಂನಲ್ಲಿ 52 ವರ್ಷದ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಅವರು ಕುಸಿದುಬಿದ್ದಿದ್ದಾರೆ. ಅವರು ಕುಸಿದು ಬೀಳುತ್ತಲೇ ಸ್ಟೇಡಿಯಂನಲ್ಲಿದ್ದ ತುರ್ತು ವೈದ್ಯಕೀಯ ತಂಡ ಆಗಮಿಸಿ ತಪಾಸಣೆ ಮಾಡಿದೆ. ವೈದ್ಯರು ಮಹೇಂದ್ರ ಶರ್ಮಾ ಅವರ ಎದೆ ಒತ್ತಿ, ತಿಕ್ಕಿದ್ದಾರೆ. ಆದರೂ, ಮಹೇಂದ್ರ ಶರ್ಮಾ ಅವರು ಸುಧಾರಿಸಿಕೊಳ್ಳದ ಕಾರಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹೇಂದ್ರ ಶರ್ಮಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. “ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Heart attack: 16,000 ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹೃದಯಾಘಾತಕ್ಕೆ ಬಲಿ
ಸೆಕ್ಟರ್ 11ನೇ ನಿವಾಸಿಯಾಗಿರುವ ಮಹೇಂದ್ರ ಶರ್ಮಾ ಅವರು ಕಳೆದ ಐದು ವರ್ಷದಿಂದ ಬ್ಯಾಡ್ಮಿಂಟನ್ ಆಡುತ್ತಿದ್ದರು. ಅಷ್ಟರಮಟ್ಟಿಗೆ ಅವರು ಆರೋಗ್ಯದ ಕಡೆ ಗಮನ ಹರಿಸುತ್ತಿದ್ದರು. ಆದರೆ, ಏಕಾಏಕಿ ಹಾರ್ಟ್ ಅಟಾಕ್ ಆಗಿ ಅವರು ಮೃತಪಟ್ಟಿರುವುದು ದುಃಖದ ವಿಚಾರ ಎಂದು ಮಹೇಂದ್ರ ಶರ್ಮಾ ಗೆಳೆಯರು ವಿಷಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ, ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.
ಕ್ರಿಕೆಟ್
WTC Final : ಭಾರತದ ಗೆಲುವಿಗೆ ಇನ್ನೂ ಬೇಕು 280 ರನ್, ಕೌತುಕದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್
ಭಾರತ ತಂಡದ ಬಳಿ ಏಳು ವಿಕೆಟ್ಗಳು ಉಳಿದಿದ್ದು, ಕೊನೇ ದಿನದ 90 ಓವರ್ಗಳಲ್ಲಿ ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಬೇಕಾಗಿದೆ.
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುತ್ತಿರುವ ಭಾರತ ತಂಡ 3 ವಿಕೆಟ್ ಕಳೆದಕೊಂಡು 164 ರನ್ ಬಾರಿಸಿದೆ. ಸ್ಪೆಷಲಿಸ್ಟ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (44) ಹಾಗೂ ಅಜಿಂಕ್ಯ ರಹಾನೆ (20 ರನ್) ಕ್ರೀಸ್ನಲ್ಲಿ ಉಳಿದುಕೊಂಡಿದ್ದಾರೆ. ಭಾರತ ತಂಡದ ಗೆಲುವಿಗೆ 280 ರನ್ ಬೇಕಾಗಿದ್ದು ಕೊನೇ ದಿನ 90 ಓವರ್ಗಳು ಬಾಕಿ ಉಳಿದಿವೆ. ಅತ್ತ ಆಸ್ಟ್ರೇಲಿಯಾ ತಂಡವು ಭಾರತದ ಇನ್ನುಳಿದ ಏಳು ವಿಕೆಟ್ಗಳನ್ನು ಉರುಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ.
Stumps called with Kohli, Rahane keeping India in the hunt! 👊
— ICC (@ICC) June 10, 2023
Follow the #WTC23 Final 👉 https://t.co/wJHUyVnX0r pic.twitter.com/Z9yMlvCLYA
ಇಲ್ಲಿನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್ ನಷ್ಟಕ್ಕೆ 270 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. 444 ರನ್ಗಳ ಗುರಿಯೊಂದಿಗೆ ಬ್ಯಾಟ್ ಮಾಡಿದ ಭಾರತ ತಂಡ ಮೊದಲ ವಿಕೆಟ್ಗೆ 41 ರನ್ ಬಾರಿಸಿತು. ರೋಹಿತ್ ಶರ್ಮಾ (43) ಹಾಗೂ ಶುಭಮನ್ ಗಿಲ್ (18) ಭರವಸೆ ಮೂಡಿಸಿದರು. ಆದರೆ, ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿನ ಬಳಿಕ ಶುಭ್ಮನ್ ಗಿಲ್ ನಿರಾಸೆಯಿಂದ ಪೆವಿಲಿಯನ್ಗೆ ಮರಳಬೇಕಾಯಿತು. ಬೋಲ್ಯಾಂಡ್ ಅವರ ಎಸೆತಕ್ಕೆ ಗ್ರೀನ್ಗೆ ಕ್ಯಾಚ್ ನೀಡಿದ ಅವರು ಬೇಸರದಿಂದ ಹೊರಕ್ಕೆ ನಡೆದರು.
That's Stumps on Day 4 of #WTC23 Final!
— BCCI (@BCCI) June 10, 2023
We have an action-packed Day 5 in store tomorrow! #TeamIndia reach 164/3 and need 280 more runs to win, with @imVkohli & @ajinkyarahane88 at the crease 👌🏻👌🏻
Scorecard ▶️ https://t.co/0nYl21oYkY pic.twitter.com/0frfkWrEp0
ನಂತರ ರೋಹಿತ್ ಮತ್ತು ಚೇತೇಶ್ವರ್ ಪೂಜಾರ (27) 77 ಎಸೆತಗಳಲ್ಲಿ 51 ರನ್ ಗಳಿಸಿದರು. ನಂತರ ಇಬ್ಬರೂ ಬ್ಯಾಟ್ಸಮನ್ಗಳು ಕೆಲವೇ ನಿಮಿಷಗಳಲ್ಲಿ ಔಟಾಗಿದ್ದಿಂದ ಭಾರತದ ಪ್ರಗತಿಗೆ ಅಡ್ಡಿಯಾಯಿತು. ರೋಹಿತ್ ಸ್ವೀಪ್ ಮಾಡಲು ಹೋಗಿ ನೇಥನ್ ಲಯಾನ್ ಎಸೆತಕ್ಕೆ ಎಲ್ಬಿಡಬ್ಲ್ಯು ಆಡದರೆ, ಕಮಿನ್ಸ್ ಎಸೆತಕ್ಕೆ ಅನಗತ್ಯ ರನ್ ಬಾರಿಸಲು ಮುಂದಾದ ಪೂಜಾರ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಗಿರುವ ಉಂಟಾದ ಹಾನಿಯನ್ನು ಸರಿಪಡಿಸಿದ್ದಾರೆ. ಜೊತೆಯಾಟವು 50 ರನ್ಗಳ ಗಡಿ ದಾಟಿದೆ. ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಗೆಲ್ಲಲು ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಮಾಡಿದ ದಾಖಲೆಯನ್ನು ಮುರಿಯಬೇಕಾಗಿದೆ.
50-run partnership comes up between @imVkohli and @ajinkyarahane88.
— BCCI (@BCCI) June 10, 2023
Live – https://t.co/0nYl21oYkY… #WTC23 pic.twitter.com/ZWzhAsIeGj
ಇದನ್ನೂ ಓದಿ: WTC Final 2023 : ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ
ಅಲೆಕ್ಸ್ ಕ್ಯೇರಿ ಅರ್ಧ ಶತಕ
ಮೂರನೇ ದಿನದಾಟದ ಅಂತ್ಯಕ್ಕೆ 123 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನದ ಮೊದಲ ಸೆಶನ್ನಲ್ಲಿ ವಿಕೆಟ್ಗಳನ್ನು ಕಳೆದುಕೊಂಡಿತು. ಮರ್ನಸ್ ಲಾಬುಶೇನ್ ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿದರು. ಆದರೆ ಏಳನೆ ವಿಕೆಟ್ಗೆ ಅಲೆಕ್ಸ್ ಕ್ಯೇರಿ (ಅಜೇಯ 66) ಹಾಗೂ ಮಿಚೆಲ್ ಸ್ಟಾರ್ಕ್ (41) 93 ರನ್ ಜತೆಯಾಟ ನೀಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಗುರಿಯನ್ನು ಒಡ್ಡಲು ನೆರವಾದರು. ಅದಕ್ಕಿಂತ ಮೊದಲು ಸ್ಮಿತ್ (34) ಹಾಗೂ ಟ್ರಾವಿಡ್ ಹೆಡ್ (18) ಆಸ್ಟ್ರೇಲಿಯಾ ತಂಡಕ್ಕೆ ಸಣ್ಣ ಕೊಡುಗೆ ಕೊಟ್ಟರು.
ಕ್ರೀಡೆ
ಡೈಮಂಡ್ ಲೀಗ್ನಲ್ಲಿ ಪದಕ ಗೆದ್ದ ಮುರಳಿ, ಲಾಂಗ್ ಜಂಪ್ನಲ್ಲಿ ಭಾರತ ಪರ ನೂತನ ದಾಖಲೆ
ಭಾರತದ ಪರ ಡೈಮಂಡ್ ಲೀಗ್ ಸ್ಪರ್ಧೆಯ ಲಾಂಗ್ ಜಂಪ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎನಿಸಕೊಂಡಿದ್ದಾರೆ ಮುರಳಿ ಶ್ರೀಶಂಕರ್.
ನವ ದೆಹಲಿ: ಭಾರತದ ಅಗ್ರಮಾನ್ಯ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಪ್ಯಾರೀಸ್ನಲ್ಲಿ ನಡೆಯುತ್ತಿರುವ ಡೈಮಂಡ್ ಲೀಗ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 8.09 ಮೀಟರ್ ಜಿಗಿದ ಅವರು ಮೂರನೇ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಡೈಮಂಡ್ ಲೀಗ್ನಲ್ಲಿ ಭಾರತದ ಪರ ಪದಕದ ಗೆದ್ದ ಮೊದಲ ಲಾಂಗ್ ಜಂಪರ್ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಮಾಜಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಭಾರತ ಪರ ಡೈಮಂಡ್ ಲೀಗ್ನಲ್ಲಿ ಪದಕ ಗೆದ್ದ ಭಾರತೀಯರಾಗಿದ್ದರು. ಇದೀಗ ಮೂರನೆಯವರಾಗಿ ಸಾಧನೆ ಮಾಡಿದ್ದಾರೆ ಮುರಳಿ ಶ್ರೀಶಂಕರ್. ಕಾಮನ್ವೆಲ್ತ್ ಗೇಮ್ಸ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀಶಂಕರ್ ಶುಕ್ರವಾರ ರಾತ್ರಿ ತಮ್ಮ ಮೂರನೇ ಪ್ರಯತ್ನದಲ್ಲಿ ದಿನದ ಅತ್ಯುತ್ತಮ ಜಿಗಿತವನ್ನು ಸಾಧಿಸಿ ಪದಕ ಗೆದ್ದರು.
Congrats Murali sreeshankar !He Won the first ever silver medal🥈 for India in the long jump at #CWG2022 pic.twitter.com/zEcN42Fz56
— karthik gopinath (@karthikgnath) August 5, 2022
ಕಳೆದ ತಿಂಗಳು ಗ್ರೀಸ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಾಗ ಮರಳಿ ಅತ್ಯುತ್ತಮ 8.18 ಮೀಟರ್ ದೂರ ಜಿಗಿದಿದ್ದರು. ಡೈಮಂಡ್ ಲೀಗ್ನ ಅವ 8.09 ಮೀಟರ್ ಪ್ರಯತ್ನ ಅದಕ್ಕೆ ಹತ್ತಿರವಾಗಿಲ್ಲ. ಅಂತೆಯೇ 24ರ ಹರೆಯದ ಈ ಲಾಂಗ್ ಜಂಪರ್ ಪ್ರತಿಭೆ ಕಳೆದ ವರ್ಷ 8.36 ಮೀಟರ್ ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದರು.
ಒಲಿಂಪಿಕ್ ಚಾಂಪಿಯನ್ ಮತ್ತು ವಿಶ್ವದ ನಂ.1 ಲಾಂಗ್ ಜಂಪ್ ಪಟು ಗ್ರೀಸ್ನ ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಐದನೇ ಸುತ್ತಿನಲ್ಲಿ 8.13 ಮೀಟರ್ ಜಿಗಿತದೊಂದಿಗೆ ಅಗ್ರ ಸ್ಥಾನ ಪಡೆದರು. ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ಸ್ವಿಟ್ಜರ್ಲೆಂಡ್ನ ಸೈಮನ್ ಎಹಮ್ಮರ್ ನಾಲ್ಕನೇ ಸುತ್ತಿನಲ್ಲಿ 8.11 ಮೀಟರ್ ಜಿಗಿತದೊಂದಿಗೆ ಎರಡನೇ ಸ್ಥಾನ ಪಡೆದರು.
ಇಲ್ಲಿನ ಚಾರ್ಲೆಟಿ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀಶಂಕರ್ ಮೊದಲೆರಡು ಜಿಗಿತದಲ್ಲಿ 7.79 ಮೀ, 7.94 ಮೀ ದಾಖಲೆ ಮಾಡಿದರು. ಕ್ಯೂಬಾದ ಒಲಿಂಪಿಕ್ ಕಂಚಿನ ಪದಕ ವಿಜೇತ ಮೇಕೆಲ್ ಮಾಸೊ (7.83 ಮೀಟರ್) ಮತ್ತು ಸ್ವೀಡನ್ನ ವಿಶ್ವ 4ನೇ ಶ್ರೇಯಾಂಕದ ಸ್ಪರ್ಧಿ ಥೋಬಿಯಾಸ್ ಮಾಂಟ್ಲರ್ (7.82 ಮೀಟರ್) ಅವರನ್ನು ಮುರಳಿ ಹಿಂದಕ್ಕಿದರು.
ನೀರಜ್ ಚೋಪ್ರಾ ಸಾಧನೆ
ಕಳೆದ ಸೆಪ್ಟೆಂಬರ್ನಲ್ಲಿ ಜ್ಯೂರಿಚ್ನಲ್ಲಿ ನಡೆದ ಫೈನಲ್ಸ್ ಗೆದ್ದ ನಂತರ ಒಲಿಂಪಿಕ್ ಚಾಂಪಿಯನ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಹಾಲಿ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದರು ಕಳೆದ ತಿಂಗಳು ದೋಹಾದಲ್ಲಿ ನಡೆದ ಋತುವಿನ ಆರಂಭಿಕ ಹಂತವನ್ನು ಗೆಲ್ಲುವ ಮೊದಲು ಅವರು ಲೌಸೆನ್ನಲ್ಲಿ ಅಗ್ರಸ್ಥಾನದಲ್ಲಿದ್ದರು.2012ರಲ್ಲಿ ನ್ಯೂಯಾರ್ಕ್ ಹಾಗೂ 2014ರಲ್ಲಿ ದೋಹಾದಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, 2015ರಲ್ಲಿ ಶಾಂಘೈ ಮತ್ತು ಯೂಜೀನ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.
ಇದನ್ನೂ ಓದಿ : WTC Final 2023 : ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ
ವೈಯಕ್ತಿಕ ಡೈಮಂಡ್ ಲೀಗ್ ಸ್ಪರ್ಧೆಗಳಿಗೆ ಪದಕಗಳನ್ನು ನೀಡಲಾಗುವುದಿಲ್ಲ. ಆದಾಗ್ಯೂ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಶ್ರೀಶಂಕರ್ ಅವರ ಎರಡನೇ ಪ್ರವೇಶ ಇದಾಗಿದೆ. ಕಳೆದ ವರ್ಷ ಮೊನಾಕೊ ಚರಣದಲ್ಲಿ ಆರನೇ ಸ್ಥಾನ ಪಡೆದಿದ್ದರು. ಸೆಪ್ಟೆಂಬರ್ನಲ್ಲಿ ಅಮೆರಿಕದ ಯೂಜಿನ್ನಲ್ಲಿ ನಡೆಯಲಿರುವ ಋತುವಿನ ಡೈಮಂಡ್ ಲೀಗ್ಗೆ ಮುರಳಿ ಆರು ಅರ್ಹತಾ ಅಂಕಗಳನ್ನು ಗಿಟ್ಟಿಸಿಕೊಂಡಿದ್ದಾರೆ. .
ಈ ಗೆಲುವಿನ ಮೂಲಕ ಅವರು ಆಗಸ್ಟ್ನಲ್ಲಿ ಹಂಗರಿಯ ಬುಡಾಪೆಸ್ಟ್ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ ಅರ್ಹತೆ ಪಡೆಯುವ ಪ್ರಯತ್ನದಲ್ಲಿ ಅವರು ಮೌಲ್ಯಯುತ ಶ್ರೇಯಾಂಕ ಅಂಕಗಳನ್ನು ಪಡೆಯಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಗ್ರೀಸ್ನಲ್ಲಿ ತರಬೇತಿ ಪಡೆಯುತ್ತಿರುವ ಶ್ರೀಶಂಕರ್ ವಿಶ್ವ ಚಾಂಪಿಯನ್ ಶಿಪ್ನ ನೇರ ಅರ್ಹತೆಯ ಮಾನದಂಡವಾದ 8.25 ಮೀ ಅನ್ನು ಇನ್ನೂ ಸಾಧಿಸಿಲ್ಲ. ಜುಲೈ 30ರ ಈ ಅರ್ಹತೆಗೆ ಗಡುವಾಗಿದೆ.
ಬುಡಾಪೆಸ್ಟ್ ಟೂರ್ನಿಯ ಶ್ರೇಯಾಂಕದಲ್ಲಿ ಅವರು 20ನೇ ಸ್ಥಾನದಲ್ಲಿರುವುದರಿಂದ ಅವರು ಇನ್ನೂ ವಿಶ್ವ ಶ್ರೇಯಾಂಕದ ಮೂಲಕ ಅರ್ಹತೆ ಪಡೆಯಬಹುದು. ವಿಶ್ವ ಅಥ್ಲೆಟಿಕ್ಸ್ ಸಿದ್ಧಪಡಿಸಿದ ಋತುವಿನ ಅಗ್ರ ಪಟ್ಟಿಯಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಜೆಸ್ವಿನ್ ಆಲ್ಡ್ರಿನ್, ಮಾರ್ಚ್ನಲ್ಲಿ ಬಳ್ಳಾರಿಯಲ್ಲಿ ನಡೆದ ಇಂಡಿಯನ್ ಓಪನ್ ಜಂಪ್ಸ್ ಸ್ಪರ್ಧೆಯಲ್ಲಿ 8.42 ಮೀಟರ್ ರಾಷ್ಟ್ರೀಯ ದಾಖಲೆ ಮುರಿಯುವ ಪ್ರಯತ್ನದೊಂದಿಗೆ ಈಗಾಗಲೇ ವಿಶ್ವ ಚಾಂಪಿಯಶಿಪ್ಗೆ ಅರ್ಹತೆ ಪಡೆದಿದ್ದಾರೆ. ಜೂನ್ 15 ರಿಂದ 19ರವರೆಗೆ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಶ್ರೀಶಂಕರ್ ಸ್ಪರ್ಧಿಸಲಿದ್ದಾರೆ.
ಕ್ರಿಕೆಟ್
WTC FInal : ಚೀಟರ್, ಚೀಟರ್… ಗಿಲ್ಗೆ ಔಟ್ ನೀಡಿದ ಅಂಪೈರ್ ವಿರುದ್ಧ ಅಭಿಮಾನಿಗಳ ಕಿಡಿ
ಶುಭ್ಮನ್ ಗಿಲ್ಗೆ ಔಟ್ ನೀಡಿರುವ ಮೂರನೇ ಅಂಪೈರ್ ನಿರ್ಧಾರ ಸರಿಯಿಲ್ಲ ಎಂದು ರೋಹಿತ್ ಶರ್ಮಾ ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು
ಲಂಡನ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಂದ್ಯ ಅಂತಿಮ ಘಟಕ್ಕೆ ತಲುಪಿದೆ. ಪಂದ್ಯ ಬಹುತೇಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡದ ಬಿಗಿ ಹಿಡಿತದಲ್ಲಿದೆ. ಆದಾಗ್ಯೂ ಪಂದ್ಯದ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ. ಇವೆಲ್ಲದರ ನಡುವೆ ಭಾರತ ತಂಡದ ಎರಡನೇ ಇನಿಂಗ್ಸ್ ಬ್ಯಾಟಿಂಗ್ ವೇಳೆ ಥರ್ಡ್ ಅಂಪೈರ್ ನೀಡಿದ ತೀರ್ಪೊಂದು ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳಂತೂ ಇದು ಮೋಸದಾಟ ಎಂಬುದಾಗಿ ದೂರಿದ್ದಾರೆ.
Third umpire while making that decision of Shubman Gill.
— Virender Sehwag (@virendersehwag) June 10, 2023
Inconclusive evidence. When in doubt, it’s Not Out #WTC23Final pic.twitter.com/t567cvGjub
444 ರನ್ಗಳ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಉತ್ತಮವಾಗಿ ಆರಂಭಿಸಿತು. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಇಬ್ಬರೂ ಉತ್ತಮ ಆರಂಭ ತಂದುಕೊಟ್ಟರು. ಆದಾಗ್ಯೂ ಸ್ಕಾಟ್ ಬೋಲ್ಯಾಂಡ್ ಮತ್ತೊಮ್ಮೆ ಯಶ್ಸಸ್ಸು ಸಾಧಿಸುವ ಮೂಲಕ ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿದರು.19 ಎಸೆತಕ್ಕೆ 18 ರನ್ ಬಾರಿಸಿದ್ದ ಅವರು ಕ್ಯಾಮೆರಾನ್ ಗ್ರೀನ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
Poor Poor 3rd Umpire In #WTCFinal
— Rahul kumawat (@Rahul_kmwt) June 10, 2023
Shubman Gill Was Not Out….What do you think..?#WTC23Final #INDvsAUS pic.twitter.com/4NmCZkFRqU
ಇನಿಂಗ್ಸ್ನ ಎಂಟನೇ ಓವರ್ನ ಮೊದಲ ಎಸೆತದಲ್ಲಿ ಚೆಂಡನ್ನು ನೇರವಾಗಿ ಕ್ಯಾಮರೂನ್ ಗ್ರೀನ್ ಅವರ ಕೈಗೆ ಸೇರಿತು. ಆದರೆ ಡೈವ್ ಮಾಡಿ ಅವರು ಹಿಡಿದ ಕ್ಯಾಚ್ ಅನುಮಾನಾಸ್ಪಾದವಾಗಿತ್ತು. ಹೀಗಾಗಿ ಫೀಲ್ಡ್ ಅಂಪೈರ್ಗಳು ಟಿವಿ ಅಂಪೈರ್ಗಳಿಗೆ ನಿರ್ಧಾರ ಪ್ರಕಟಿಸುವಂತೆ ಕೋರಿದರು. ಮೊದಲೆರಡು ಕೋನಗಳಲ್ಲಿ ಪರೀಕ್ಷಿಸಿದಾಗ ಚೆಂಡು ನೆಲಕ್ಕೆ ತಗುಲಿದಂತೆ ಕಂಡಿತು. ಹೀಗಾಗಿ ಭಾರತೀಯ ಪ್ರೇಮಿಗಳು ಸಂಭ್ರಮ ಪಟ್ಟರು. ಆದರೆ, ಇನ್ನೊಂದು ಕೋನದಲ್ಲಿ ನೋಡುವಾಗ ಚೆಂಡಿನ ಕೆಳಗೆ ಬೆರಳಿದ್ದಂತೆ ಕಂಡಿತು. ಆದರೆ, ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು.
ಮೂರನೇ ಅಂಪೈರ್ ತೀರ್ಮಾನಕ್ಕೆ ನಾಯಕ ರೋಹಿತ್ ಶರ್ಮಾ ಅವರು ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ಇದು ಮುಂದುವರಿದರು ಸಾಮಾಜಿಕ ಜಾಲ ತಾಣಗಳಲ್ಲಿ ಇದರ ಕುರಿತು ಭರ್ಜರಿ ಚರ್ಚೆಗಳು ಆರಂಭಗೊಂಡವು. ಭಾರತೀಯ ಪ್ರೇಮಿಗಳಂತೂ ಇದು ಮೋಸದಾಟ ಎಂಬುದಾಗಿ ಜರೆದರು. ಅಂಪೈರ್ಗಳು ಆಸ್ಟ್ರೇಲಿಯಾ ಪರವಾಗಿ ಅನವಶ್ಯಕ ತೀರ್ಪು ನೀಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದರು.
ಇದನ್ನೂ ಓದಿ : WTC Final 2023 : ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ
ಇಬ್ಬರೂ ಆರಂಭಿಕ ಆಟಗಾರರು ಇನ್ನಿಂಗ್ಸ್ಗೆ ಸಕಾರಾತ್ಮಕ ಆರಂಭ ನೀಡಿದ್ದರಿಂದ ಈ ಔಟ್ ಭಾರತಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿತು ದಿ ಓವಲ್ನಲ್ಲಿ ಎದುರಾದ 444 ರನ್ಗಳ ಚೇಸಿಂಗ್ನಲ್ಲಿ ರೋಹಿತ್ ಅಜೇಯ 22 ರನ್ ಗಳಿಸಿದರು .
ಕುತೂಹಲಕಾರಿ ಸಂಗತಿಯೆಂದರೆ, ಬೋಲ್ಯಾಂಡ್ ಮೊದಲ ಇನ್ನಿಂಗ್ಸ್ನಲ್ಲಿ ಗಿಲ್ ಅವರನ್ನು ಔಟ್ ಮಾಡಿದ್ದರು. ಆಫ್-ಸ್ಟಂಪ್ನ ಹೊರಗೆ ಎಸೆದ ಚೆಂಡನ್ನು ಮುಟ್ಟಲು ಹೋಗಿ ಗಿಲ್ ವಿಕೆಟ್ ಒಪ್ಪಿಸಬೇಕಾಯಿತು.
-
ಸುವಚನ24 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ22 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ಕ್ರಿಕೆಟ್19 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್19 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ15 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್17 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ15 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema16 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ