WTC Final 2023: ಆಡುವ ಬಳಗದಿಂದ ಅಶ್ವಿನ್​ ಕೈ ಬಿಡಲು ಕಾರಣ ಇದಂತೆ - Vistara News

ಕ್ರಿಕೆಟ್

WTC Final 2023: ಆಡುವ ಬಳಗದಿಂದ ಅಶ್ವಿನ್​ ಕೈ ಬಿಡಲು ಕಾರಣ ಇದಂತೆ

ಅಶ್ವಿನ್​ ಬದಲು ಮಧ್ಯಮ ವೇಗಿ ಹಾಗೂ ಆಲ್​ರೌಂಡರ್​ ಆಗಿರುವ ಶಾರ್ದೂಲ್​ ಠಾಕೂರ್​ಗೆ ಆಡುವ ಬಳಗದಲ್ಲಿ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

VISTARANEWS.COM


on

ICC World Test Championship Final 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಆರ್​. ಅಶ್ವಿನ್​ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್​ ಶರ್ಮ ಅವರು ಅಶ್ವಿನ್​ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಲಂಡನ್​ನ ಓವಲ್​ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್​ ಮ್ಯಾನೆಜ್​ಮೆಂಟ್​ ವಿರುದ್ಧ ಟ್ವಿಟರ್​ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಅಶ್ವಿನ್​ ಬದಲು ಮಧ್ಯಮ ವೇಗಿ ಹಾಗೂ ಆಲ್​ರೌಂಡರ್​ ಆಗಿರುವ ಶಾರ್ದೂಲ್​ ಠಾಕೂರ್​ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್​ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್‌ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್​ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್‌ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.

ಇದನ್ನೂ ಓದಿ WTC Final 2023: ಭಾರತ, ಆಸ್ಟ್ರೇಲಿಯಾ​ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ

ಸದ್ಯ ಬ್ಯಾಟಿಂಗ್​ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡ ಮೂರು ವಿಕೆಟ್​ ಕಳೆದುಕೊಂಡು 85 ರನ್​ ಗಳಿಸಿದೆ. ಉತ್ತಮ ರನ್​ ಕಲೆ ಹಾಕುತ್ತಿದ್ದ ಡೇವಿಡ್​ ವಾರ್ನರ್​ ಅವರನ್ನು ಔಟ್​ ಮಾಡುವ ಮೂಲಕ ಶಾರ್ದೂಲ್​ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Karun Nair: ತ್ರಿಶತಕ ಬಾರಿಸಿದರೂ ಭಾರತ ತಂಡದಲ್ಲಿ ಕಡೆಗಣನೆ; ಕೌಂಟಿಯಲ್ಲಿ ದ್ವಿಶತಕ ಬಾರಿಸಿದ ಕರುಣ್ ನಾಯರ್

Karun Nair: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

VISTARANEWS.COM


on

Karun Nair
Koo

ಲಂಡನ್​: ಇಂಗ್ಲೆಂಡ್​ ವಿರುದ್ಧ 2016ರಲ್ಲಿ ಚೆನ್ನೈನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಭರವಸೆ ಮೂಡಿಸಿದ್ದ ಕರುಣ್​ ನಾಯರ್​ ಬಳಿಕ ರಾಷ್ಟ್ರೀಯ ತಂಡದಲ್ಲಿ ಸರಿಯಾದ ಅವಕಾಶ ಸಿಗದೆ ಸುಮಾರು ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ಅವರನ್ನು ಟೀಮ್​ ಇಂಡಿಯಾ ಕಡೆಗಣಿಸುತ್ತಲೇ ಬಂದಿತ್ತು. ಇದೀಗ ಕರುಣ್​ ನಾಯರ್(Karun Nair)​ ಕೌಂಟಿ ಕ್ರಿಕೆಟ್​ನಲ್ಲಿ(County Championship) ದ್ವಿಶತಕ ಬಾರಿಸಿ ಮಿಂಚಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಕಳೆದ ವರ್ಷ ಪ್ರೀತಿಯ ಕ್ರಿಕೆಟ್, ನನಗೆ ಇನ್ನೂ ಒಂದು ಅವಕಾಶ ನೀಡಿ.” ಎಂದು ಕರುಣ್​ ಟ್ವೀಟ್​ ಮೂಲಕ ಕೇಳಿಕೊಂಡಿದ್ದರು. ಆದರೂ ಕೂಡ ಅವರಿಗೆ ಅವಕಾಶ ಸಿಗಲಿಲ್ಲ. ದೇಶೀಯ ಕ್ರಿಕೆಟ್​ನಲ್ಲಿಯೂ ಕರ್ನಾಟಕ ತಂಡದ ಪರ ಸರಿಯಾದ ಅವಕಾಶ ಸಿಗದೇ ಇದ್ದ ಹಿನ್ನೆಲೆ ಅವರು ರಾಜ್ಯ ತಂಡ ತೊರೆದು ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2023-24ನೇ ಸಾಲಿನ ರಣಜಿಯಲ್ಲಿ ವಿದರ್ಭ ಪರ ಉತ್ತಮ ಬ್ಯಾಟಿಂಗ್​ ಪ್ರದರ್ಶನವನ್ನೂ ತೋರಿದ್ದರು.

ಕೌಂಟಿ ಚಾಂಪಿಯನ್‌ಶಿಪ್​ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಕರುಣ್, ಗ್ಲಾಮೋರ್ಗನ್ ತಂಡದ ವಿರುದ್ಧ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 253 ಎಸೆತಗಳನ್ನು ಎದುರಿಸಿ ಅಜೇಯ 202 ರನ್ ಗಳಿಸಿದರು. ನಾಯರ್ ಅವರ ಈ ಅಮೋಘ ಆಟದಿಂದಾಗಿ ನಾರ್ಥಾಂಪ್ಟನ್‌ಶೈರ್ ತಂಡ 334 ರನ್‌ಗಳಿಸಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 6 ವಿಕೆಟ್‌ಗೆ 605 ರನ್ ಗಳಿಸಿದೆ.

32 ವರ್ಷದ ಕರುಣ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 6 ಟೆಸ್ಟ್ ಮತ್ತು 2 ಏಕ ದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ತ್ರಿಶತಕ ಸೇರಿದಂತೆ ಒಟ್ಟು 374 ರನ್ ಗಳಿಸಿದ್ದಾರೆ. ಇದರ ಜತೆಗೆ ಏಕ ದಿನ ಕ್ರಿಕೆಟ್‌ನಲ್ಲಿ 2 ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ. ಜೂನ್ 2016 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಇದಾಗ ಬಳಿಕ ಅವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್​

ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ

ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 49.75 ಸರಾಸರಿಯಲ್ಲಿ 19 ಶತಕ ಮತ್ತು 32 ಅರ್ಧ ಶತಕಗಳೊಂದಿಗೆ 7164 ರನ್ ಗಳಿಸಿದ್ದಾರೆ. 101 ಲಿಸ್ಟ್ ‘ಎ’ ಪಂದ್ಯಗಳಲ್ಲಿ 3 ಶತಕ ಮತ್ತು 13 ಅರ್ಧಶತಕಗಳೊಂದಿಗೆ 2349 ರನ್ ಗಳಿಸಿದ್ದಾರೆ. 157 ಟಿ20 ಪಂದ್ಯಗಳಲ್ಲಿ ಅವರು 2 ಶತಕ ಮತ್ತು 18 ಅರ್ಧ ಶತಕಗಳ ಜತೆಗೆ 132.41 ಸ್ಟ್ರೈಕ್ ರೇಟ್‌ನಲ್ಲಿ 3207 ರನ್ ಗಳಿಸಿದ್ದಾರೆ.

Continue Reading

ಕ್ರೀಡೆ

CSK vs LSG: ಇಂದಿನ ಲಕ್ನೋ-ಚೆನ್ನೈ ಪಂದ್ಯಕ್ಕೆ ಮಳೆ ಭೀತಿ

CSK vs LSG: ಚೆನ್ನೈಯ ಕರಾವಳಿ ಭಾಗದಲ್ಲಿಯೂ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿದಂಬರಂ ಸ್ಟೇಡಿಯಂ ಕೂಡ ಸಮುದ್ರ ತಟದಲ್ಲಿರುವ ಕಾರಣ ರಾತ್ರಿ ಮೇಳೆ ಮಳೆಯಾಗುವ ಸಾಧ್ಯತೆ ಇದೆ.

VISTARANEWS.COM


on

CSK vs LSG
Koo

ಚೆನ್ನೈ: ಶುಕ್ರವಾರವಷ್ಟೇ ಚೆನ್ನೈ ಸೂಪರ್​ ಕಿಂಗ್ಸ್(CSK vs LSG)​ ವಿರುದ್ಧ ತವರಿನಲ್ಲಿ ಅಮೋಘ ಗೆಲುವು ಸಾಧಿಸಿದ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ಮತ್ತೆ ಚೆನ್ನೈ ವಿರುದ್ಧ ಇಂದು ಪಂದ್ಯವನ್ನಾಡಲು ಸಜ್ಜಾಗಿದೆ. ಈ ಬಾರಿ ಚೆನ್ನೈಯಲ್ಲಿ ಪಂದ್ಯ ಸಾಗಲಿದೆ. ಈ ಪಂದ್ಯಕ್ಕೆ ಮಳೆಯ ಭೀತಿ ಕೂಡ ಎದುರಾಗಿದೆ.

ಈವರೆಗೆ ತವರಿನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡು ಬಂದಿರುವ ಚೆನ್ನೈಗೆ ಲಕ್ನೋ ಮೊದಲ ಸೋಲುಣಿಸಿತೇ ಎನ್ನುವುವುದು ಇಂದಿನ ಪಂದ್ಯದ ಕೌತುಕ. ಕೆ.ಎಲ್​ ರಾಹುಲ್​ ಅವರು ಚೆಪಾಕ್​ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇಲ್ಲಿ ಹಲವು ಶತಕ ಕೂಡ ಬಾರಿಸಿದ್ದಾರೆ. ಹೀಗಾಗಿ ಅವರಿಗೆ ಇದು ನೆಚ್ಚಿನ ಮೈದಾನವಾಗಿದೆ.

ಮಳೆ ಸಾಧ್ಯತೆ


ಕರ್ನಾಟಕದ ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು. ಚೆನ್ನೈಯ ಕರಾವಳಿ ಭಾಗದಲ್ಲಿಯೂ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿದಂಬರಂ ಸ್ಟೇಡಿಯಂ ಕೂಡ ಸಮುದ್ರ ತಟದಲ್ಲಿರುವ ಕಾರಣ ರಾತ್ರಿ ಮೇಳೆ ಮಳೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಇಂದಿನ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾದರೆ ಉಭಯ ತಂಡಗಳ ಪ್ಲೇ ಆಫ್​ ಹಾದಿಗೆ ಹಿನ್ನಡೆಯಾಗಲಿದೆ. ಸದ್ಯ ಅಂಕಪಟ್ಟಿಯಲ್ಲಿ ಚೆನ್ನೈ ಮತ್ತು ಲಕ್ನೋ ಕ್ರಮವಾಗಿ 4 ಮತ್ತು 5ನೇ ಸ್ಥಾನಿಯಾಗಿದೆ.

ಈ ಪಂದ್ಯಕ್ಕೂ ಮಾಯಾಂಕ್‌ ಗೈರು


ಈ ಬಾರಿಯ ಐಪಿಎಲ್​ನಲ್ಲಿ ಶರವೇಗದ ಸೆತಗಳನ್ನು ಎಸೆದು ಭಾರೀ ಸಂಚಲನ ಮೂಡಿಸಿದ ಮಾಯಾಂಕ್‌ ಯಾದವ್‌ ಅವರು ಈ ಪಂದ್ಯಕ್ಕು ಗೈರಾಗಲಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಅವರಿಗೆ ಈ ಪಂದ್ಯಕ್ಕೂ ವಿಶ್ರಾಂತಿ ನೀಡಲಾಗಿದೆ. ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

ಚೆನ್ನೈ ತಂಡದ ಪರ ಆರಂಭಿಕ ಹಂತದಲ್ಲಿ ಮಿಂಚಿದ್ದ ನ್ಯೂಜಿಲ್ಯಾಂಡ್​ನ ಆಟಗಾರರಾದ ರಚಿನ್​ ರವೀಂದ್ರ ಮತ್ತು ಡೇರಿಯಲ್ ಮಿಚೆಲ್​ ಈಗ ಮಂಕಾಗಿದ್ದಾರೆ. ಕಳೆದ 3 ಮೂರುಗಳನ್ನು ಗಮನಿಸುವಾಗ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ. ಇಂಪ್ಯಾಕ್ಟ್​ ಆಟಗಾರನಾಗಿ ಆಡುತ್ತಿರುವ ಶಿವಂ ದುಬೆ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಾಜಿ ನಾಯಕ ಧೋನಿ ಕೂಡ ಕೆಳ ಕ್ರಮಾಂಕದಲ್ಲಿ ಆಡಲಿಳಿದು ದೊಡ್ಡ ಹೊಡೆತಗಳ ಮೂಲಕ ರನ್​ ಗಳಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ.​

ಸಂಭಾವ್ಯ ತಂಡ


ಲಕ್ನೋ
: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.

ಚೆನ್ನೈ: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್, ಮತೀಶ ಪತಿರಾಣ.

Continue Reading

ಕ್ರೀಡೆ

Rohit Sharma: ರೋಹಿತ್​ ಕೆನ್ನೆಗೆ ಕಿಸ್​ ಕೊಡಲು ಬಂದ ರಾಜಸ್ಥಾನ್​ ಕೋಚ್​; ವಿಡಿಯೊ ವೈರಲ್

Rohit Sharma: ರೋಹಿತ್​ ಶರ್ಮ ಅವರು ಅಶ್ವಿನ್​ ಜತೆ ಮಾತುಕತೆಯಲ್ಲಿ ನಿರತರಾಗಿದ್ದರು. ಈ ವೇಳೆ ಹಿಂದಿನಿಂದ ಬಂದ ಶೇನ್​ ಬಾಂಡ್ ಅವರು ರೋಹಿತ್​ ಕೆನ್ನೆಗೆ ಕಿಸ್​ ಕೊಡಲು ಮುಂದಾದರು. ಇದನ್ನು ಕಂಡ ರೋಹಿತ್​ ಒಂದು ಕ್ಷಣ ಗಾಬರಿಯಾದರು. ಬಳಿಕ ನಗುತ್ತಾ ಕುಶಲೋಪರಿ ನಡೆಸಿದರು.

VISTARANEWS.COM


on

Rohit Sharma
Koo

ಜೈಪುರ: ಮುಂಬೈ ಇಂಡಿಯನ್ಸ್(Mumbai Indians) ಮತ್ತು ರಾಜಸ್ಥಾನ್ ರಾಯಲ್ಸ್(Rajasthan Royals)​ ನಡುವಣ ಪಂದ್ಯಕ್ಕೂ ಮುನ್ನ ರೋಹಿತ್​ ಶರ್ಮ(Rohit Sharma) ಅವರಿಗೆ ರಾಜಸ್ಥಾನ್ ರಾಯಲ್ಸ್​ ತಂಡದ ಬೌಲಿಂಗ್​ ಕೋಚ್​ ಶೇನ್​ ಬಾಂಡ್(Shane Bond)​ ಕಿಸ್​ ಕೊಡಲು ಬಂದ ಘಟನೆಯೊಂದು ನಡೆದಿದೆ. ಕಿಸ್​ ಕೊಡಲು ಬಂದ ಬಾಂಡ್​ ಕಂಡು ರೋಹಿತ್​ ಒಂದು ಕ್ಷಣ ತಬ್ಬಿಬ್ಬಾದರು. ಈ ವಿಡಿಯೊವನ್ನು ಮುಂಬೈ ಇಂಡಿಯನ್ಸ್​ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ಉಭಯ ತಂಡಗಳ ಪಂದ್ಯಕ್ಕೂ ಮುನ್ನ ಆಟಗಾರರು ಅಭ್ಯಾಸ ನಡೆಸುತ್ತಿದ್ದರು. ರೋಹಿತ್​ ಶರ್ಮ ಅವರು ಅಶ್ವಿನ್​ ಜತೆ ಮಾತುಕತೆಯಲ್ಲಿ ನಿರತರಾಗಿದ್ದರು. ಈ ವೇಳೆ ಹಿಂದಿನಿಂದ ಬಂದ ಶೇನ್​ ಬಾಂಡ್ ಅವರು ರೋಹಿತ್​ ಕೆನ್ನೆಗೆ ಕಿಸ್​ ಕೊಡಲು ಮುಂದಾದರು. ಇದನ್ನು ಕಂಡ ರೋಹಿತ್​ ಒಂದು ಕ್ಷಣ ಗಾಬರಿಯಾದರು. ಬಳಿಕ ನಗುತ್ತಾ ಕುಶಲೋಪರಿ ನಡೆಸಿದರು. ಶೇನ್​ ಬಾಂಡ್ ಅವರು ಈ ಹಿಂದೆ ಮುಂಬೈ ತಂಡದ ಬೌಲಿಂಗ್​ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ರೋಹಿತ್​ ಜತೆ ಆತ್ಮೀಯತೆ ಇದೆ. ಇದೇ ಕಾರಣದಿಂದ ಅವರು ಫನ್​ ಮಾಡುವ ನಿಟ್ಟಿನಲ್ಲಿ ಕಿಸ್​ ಕೊಟ್ಟಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್​

ರೋಹಿತ್​ ಶರ್ಮ ಅವರು ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಕೇವಲ 6 ರನ್​ ಗಳಿಸಿ ನಿರಾಸೆ ಮೂಡಿಸಿದರು. ಮುಂಬೈ ತಂಡ 9 ವಿಕೆಟ್​ಗಳ ಅಂತರದ ಹೀನಾಯ ಸೋಲು ಕಂಡಿತು. ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು. ಬೌಲಿಂಗ್​ನಲ್ಲಿ 4 ಓವರ್​​ ದಾಳಿ ನಡೆಸಿದ ಸಂದೀಪ್​ 18 ರನ್​ಗೆ 5 ವಿಕೆಟ್​ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Continue Reading

ಕ್ರೀಡೆ

Yashasvi Jaiswal: ಶತಕ ಬಾರಿಸಿ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

Yashasvi Jaiswal: ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದ​ ಸಂದೀಪ್​ ಶರ್ಮಾ ಮಾರಕ ಬೌಲಿಂಗ್ ದಾಳಿ ಸಂಘಟಿಸಿದರು. ಈ ದಾಳಿಗೆ ಬೆಚ್ಚಿ ಬಿದ್ದ ಮುಂಬೈ ತಂಡ ಆರಂಭದಲ್ಲಿಯೇ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಒಟ್ಟು 4 ಓವರ್​ ಬೌಲಿಂಗ್​ ದಾಳಿ ನಡೆಸಿದ ಸಂದೀಪ್​ 18 ರನ್​ಗೆ 5 ವಿಕೆಟ್​ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

VISTARANEWS.COM


on

Yashasvi Jaiswal
Koo

ಜೈಪುರ: ಈ ಬಾರಿಯ ಐಪಿಎಲ್(IPL 2024)​ ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ ಸತತ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ರಾಜಸ್ಥಾನ್(Rajasthan Royals)​ ತಂಡದ ಯುವ ಎಡಗೈ ಬ್ಯಾಟರ್ ಯಶಸಸ್ವಿ ಜೈಸ್ವಾಲ್(Yashasvi Jaiswal)​ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭರ್ಜರಿ ಶತ ಬಾರಿಸುವ ಮೂಲಕ ಹಿಂದಿನ ಬ್ಯಾಟಿಂಗ್ ಫಾರ್ಮ್​ಗೆ ಮರಳಿದ್ದಾರೆ. ಜತೆಗೆ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಕೂಡ ಬರೆದಿದ್ದಾರೆ.

ಜೈಸ್ವಾಲ್ ಅವರು ಮುಂಬೈ ವಿರುದ್ಧ ಶತಕ ಬಾರಿಸುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಐಪಿಎಲ್​ನಲ್ಲಿ 2 ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಅಚ್ಚರಿ ಎಂದರೆ ಜೈಸ್ವಾಲ್​ ಬಾರಿಸಿದ ಎರಡೂ ಶತಕಗಳು ಕೂಡ ಮುಂಬೈ ಇಂಡಿಯನ್ಸ್​ ವಿರುದ್ಧವೇ. ಮೊದಲ ಶತಕ ಕಳೆದ ವರ್ಷ ವಾಂಖಡೆಯಲ್ಲಿ ನಡೆದಿದ್ದ ಪಂದ್ಯದಲ್ಲಿ 124 ರನ್​ ಬಾರಿಸಿದ್ದರು. ಆಗ ಅವರಿಗೆ 21 ವರ್ಷ 123 ದಿನಗಳು. ಇದೀಗ 2024ರಲ್ಲಿ ಜೈಪುರದಲ್ಲಿ ಅಜೇಯ 104 ರನ್​ ಬಾರಿಸಿದರು (22 ವರ್ಷ, 116 ದಿನಗಳು).

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್​

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು.

ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದ​ ಸಂದೀಪ್​ ಶರ್ಮಾ ಮಾರಕ ಬೌಲಿಂಗ್ ದಾಳಿ ಸಂಘಟಿಸಿದರು. ಈ ದಾಳಿಗೆ ಬೆಚ್ಚಿ ಬಿದ್ದ ಮುಂಬೈ ತಂಡ ಆರಂಭದಲ್ಲಿಯೇ ಸತತವಾಗಿ ವಿಕೆಟ್​ ಕಳೆದುಕೊಂಡಿತು. ರೋಹಿತ್ ಶರ್ಮಾ 6 ರನ್ ಬಾರಿಸಿದರೆ, ಇಶಾನ್ ಕಿಶನ್​ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್​ 10 ರನ್​ಗೆ ಔಟಾಗಿ ನಿರ್ಗಮಿಸಿದರು. ಒಟ್ಟು 4 ಓವರ್​ ಬೌಲಿಂಗ್​ ದಾಳಿ ನಡೆಸಿದ ಸಂದೀಪ್​ 18 ರನ್​ಗೆ 5 ವಿಕೆಟ್​ ಕೆಡವಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

Continue Reading
Advertisement
Drought In Karnataka
ಬೆಳಗಾವಿ25 mins ago

Drought In Karnataka : ಭೀಕರ ಬರ; ಆಹಾರ ಸಿಗದೆ ಪ್ಲಾಸ್ಟಿಕ್, ನಟ್ಟು ಬೋಲ್ಟು ತಿನ್ನುತ್ತಿರುವ ಹಸುಗಳು!

Vastu Tips
ಲೈಫ್‌ಸ್ಟೈಲ್30 mins ago

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Karun Nair
ಕ್ರೀಡೆ35 mins ago

Karun Nair: ತ್ರಿಶತಕ ಬಾರಿಸಿದರೂ ಭಾರತ ತಂಡದಲ್ಲಿ ಕಡೆಗಣನೆ; ಕೌಂಟಿಯಲ್ಲಿ ದ್ವಿಶತಕ ಬಾರಿಸಿದ ಕರುಣ್ ನಾಯರ್

OM Puri
ಬಾಲಿವುಡ್56 mins ago

OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

malasia helicopter crash viral video
ವೈರಲ್ ನ್ಯೂಸ್1 hour ago

Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

CSK vs LSG
ಕ್ರೀಡೆ2 hours ago

CSK vs LSG: ಇಂದಿನ ಲಕ್ನೋ-ಚೆನ್ನೈ ಪಂದ್ಯಕ್ಕೆ ಮಳೆ ಭೀತಿ

Bengaluru Karaga
ಬೆಂಗಳೂರು2 hours ago

Bengaluru Karaga: ಇಂದು ರಾತ್ರಿ ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

Rohit Sharma
ಕ್ರೀಡೆ2 hours ago

Rohit Sharma: ರೋಹಿತ್​ ಕೆನ್ನೆಗೆ ಕಿಸ್​ ಕೊಡಲು ಬಂದ ರಾಜಸ್ಥಾನ್​ ಕೋಚ್​; ವಿಡಿಯೊ ವೈರಲ್

Amit Shah
ಕರ್ನಾಟಕ3 hours ago

Amit Shah: ಕರ್ನಾಟಕದಲ್ಲಿ ಇಂದು ಅಮಿತ್‌ ಶಾ, ಪ್ರಿಯಾಂಕಾ ವಾದ್ರಾ ಪ್ರಚಾರ; ಒಂದೇ ಕ್ಷೇತ್ರದಲ್ಲಿ ಕ್ಯಾಂಪೇನ್!‌

bolero hit 3 death road accident raichur
ರಾಯಚೂರು3 hours ago

Road Accident: ನೀರು ತರುತ್ತಿದ್ದ ಹನುಮ ಮಾಲಾಧಾರಿಗಳಿಗೆ ಬೊಲೆರೋ ಡಿಕ್ಕಿ, 3 ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು18 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ19 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು22 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು24 hours ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌