IND VS AUS: ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​ - Vistara News

ಕ್ರಿಕೆಟ್

IND VS AUS: ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ.

VISTARANEWS.COM


on

IND VS AUS: Pitch report of India-Australia first ODI match
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ(ಮಾರ್ಚ್​ 17) ಆರಂಭಗೊಳ್ಳಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಹೆಚ್ಚು ಬ್ಯಾಟಿಂಗ್​ ಸ್ನೇಹಿಯಾಗಿದೆ. ಇದು ಹೊಡಿ ಬಡಿ ಆಟಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 438 ರನ್​ ದಾಖಲಾಗಿದೆ ಇದು ಕೂಡ ಕೇವಲ 4 ವಿಕೆಟ್​ ನಷ್ಟಕ್ಕೆ. ಹೀಗಾಗಿ ಈ ಪಿಚ್​ ಬ್ಯಾಟಿಂಗ್​ಗೆ ಹೆಚ್ಚು ಸೂಕ್ತವಾಗಿದೆ ಎನ್ನಲಡ್ಡಿಯಿಲ್ಲ. ಭಾರತ ಇಲ್ಲಿ ಇದುವರೆಗೆ 19 ಏಕದಿನ ಪಂದ್ಯಗಳನ್ನು ಆಡಿದೆ ಇದರಲ್ಲಿ 10 ಪಂದ್ಯಗಳಲ್ಲಿ ಗೆಲುವು ಮತ್ತು 9 ರನ್​ ಸೋಲು ಕಂಡಿದೆ.

ಸಂಭಾವ್ಯ ತಂಡ

ಭಾರತ: ಹಾರ್ದಿಕ್​ ಪಾಂಡ್ಯ(ನಾಯಕ) ಇಶಾನ್ ಕಿಶನ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ, ಕುಲ್​ದೀಪ್ ಯಾದವ್/ಯಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್

ಇದನ್ನೂ ಓದಿ IND VS AUS: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಸ್ಟೀವನ್​ ಸ್ಮಿತ್ (ನಾಯಕ), ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೈ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಜಾಂಪ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Bismah Maroof : ಹೆಣ್ಣು ಮಗುವಿನ ಸಮೇತ ಆಡಲು ಹೋಗುತ್ತಿದ್ದ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿವೃತ್ತಿ

Bismah Maroof : ಬಿಸ್ಮಾ 136 ಏಕದಿನ ಪಂದ್ಯಗಳಲ್ಲಿ 29.55 ಸರಾಸರಿಯಲ್ಲಿ 3369 ರನ್ ಗಳಿಸಿದ್ದಾರೆ, 21 ಅರ್ಧಶತಕಗಳು ಮತ್ತು 99 ಗರಿಷ್ಠ ಸ್ಕೋರ್. 140 ಟಿ20 ಪಂದ್ಯಗಳಲ್ಲಿ 27.55ರ ಸರಾಸರಿಯಲ್ಲಿ 12 ಅರ್ಧಶತಕಗಳು ಸೇರಿದಂತೆ 2893 ರನ್ ಗಳಿಸಿದ್ದಾರೆ. ಅವರು 96 ಪಂದ್ಯಗಳು, 62 ಟಿ 20 ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 32 ಏಕದಿನ ಪಂದ್ಯಗಳಲ್ಲಿ 16 ಗೆಲುವು ಮತ್ತು 27 ಟಿ 20 ಐ ಗೆಲುವುಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ.

VISTARANEWS.COM


on

Bismah Maroof
Koo

ಇಸ್ಲಾಮಾಬಾದ್​​: ಪಾಕಿಸ್ತಾನ ಮಹಿಳಾ ಕ್ರಿಕೆಟ್​​ ತಂಡದ ಅತ್ಯಂತ ಪ್ರತಿಭಾವಂತರಲ್ಲಿ ಒಬ್ಬರಾಗಿದ್ದ ಬಿಸ್ಮಾ ಮರೂಫ್ 17 ವರ್ಷಗಳ ವೃತ್ತಿಜೀವನದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಪಾಕಿಸ್ತಾನದ ಪ್ರಮುಖ ರನ್ ಸ್ಕೋರರ್ ಆಗಿ ಮರೂಫ್ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಮದುವೆಯಾಗಿ ಪುಟಾಣಿ ಮಗು ಇದ್ದ ಹೊರತಾಗಿಯೂ ಕ್ರಿಕೆಟ್​ ಆಟವನ್ನು ಮುಂದುವರಿಸಿದ್ದ ಅವರು ಪ್ರಶಂಸೆಗೆ ಪಾತ್ರರಾಗಿದ್ದರು. ಮಗುವಿನ ಸಮೇತವೇ ಅವರು ವಿದೇಶಗಳಿಗೆ ಆಡಲು ಹೋಗುವ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದರು.

ಮರೂಫ್ ಅವರ ಕ್ರಿಕೆಟ್ ಪ್ರಯಾಣವು 2006ರಲ್ಲಿ ಪ್ರಾರಂಭವಾಗಿದೆ. ಜೈಪುರದಲ್ಲಿ ಅವರು ಭಾರತ ತಂಡದ ವಿರುದ್ಧ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು ಕ್ರಿಕೆಟ್​ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಬಿಸ್ಮಾ 136 ಏಕದಿನ ಪಂದ್ಯಗಳಲ್ಲಿ 29.55 ಸರಾಸರಿಯಲ್ಲಿ 3369 ರನ್ ಗಳಿಸಿದ್ದಾರೆ, 21 ಅರ್ಧಶತಕಗಳು ಮತ್ತು 99 ಗರಿಷ್ಠ ಸ್ಕೋರ್. 140 ಟಿ20 ಪಂದ್ಯಗಳಲ್ಲಿ 27.55ರ ಸರಾಸರಿಯಲ್ಲಿ 12 ಅರ್ಧಶತಕಗಳು ಸೇರಿದಂತೆ 2893 ರನ್ ಗಳಿಸಿದ್ದಾರೆ. ಅವರು 96 ಪಂದ್ಯಗಳು, 62 ಟಿ 20 ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 32 ಏಕದಿನ ಪಂದ್ಯಗಳಲ್ಲಿ 16 ಗೆಲುವು ಮತ್ತು 27 ಟಿ 20 ಐ ಗೆಲುವುಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ.

“ನಾನು ಹೆಚ್ಚು ಪ್ರೀತಿಸುವ ಆಟದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಸವಾಲುಗಳು, ಗೆಲುವುಗಳು ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿದ ನಂಬಲಾಗದ ಪ್ರಯಾಣವಾಗಿದೆ. ಆರಂಭದಿಂದ ಇಂದಿನವರೆಗೆ ನನ್ನ ಕ್ರಿಕೆಟ್ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ, “ಎಂದು ಅವರು ಏಪ್ರಿಲ್ 26 ರಂದು ಪಿಸಿಬಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಪಿಸಿಬಿಗೆ ಧನ್ಯವಾದ ಅರ್ಪಿಸಿದ್ದಾರೆ. “ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಪಿಸಿಬಿಯ ಬೆಂಬಲವು ಅಮೂಲ್ಯವಾಗಿದೆ, ವಿಶೇಷವಾಗಿ ನನಗಾಗಿ ಮೊದಲ ಪೋಷಕರ ನೀತಿಯನ್ನು ಜಾರಿಗೆ ತರುವಲ್ಲಿ, ಇದು ತಾಯಿಯಾಗಿರುವಾಗ ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ನನಗೆ ಅನುವು ಮಾಡಿಕೊಟ್ಟಿತು.

“ಕೊನೆಯದಾಗಿ, ನನಗೆ ಕುಟುಂಬದಂತೆ ಆಗಿರುವ ನನ್ನ ಸಹ ಆಟಗಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾವು ಹಂಚಿಕೊಂಡ ಸ್ನೇಹವನ್ನು ನಾನು ಎಂದೆಂದಿಗೂ ನೆನಪಿಸಿಕೊಳ್ಳುತ್ತೇನೆ, “ಎಂದು ಅವರು ಹೇಳಿದರು.

ತವರಿನಲ್ಲಿ ವೆಸ್ಟ್ ಇಂಡೀಸ್ ಮಹಿಳಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು. ಆತಿಥೇಯ ಪಾಕಿಸ್ತಾನವು ಸರಣಿಯನ್ನು 0-3 ರಿಂದ ಕಳೆದುಕೊಂಡಿತು ಮತ್ತು ಮರೂಫ್ 91 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಏಪ್ರಿಲ್ 26 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಸರಣಿಗಾಗಿ ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧದ ಟಿ 20 ಐ ತಂಡದ ಭಾಗವಾಗಿದ್ದಾರೆ. ಆದರೆ ಅವರ ಇತ್ತೀಚಿನ ಪ್ರಕಟಣೆಯೊಂದಿಗೆ, ಅವರ ಲಭ್ಯತೆ ಪ್ರಶ್ನಾರ್ಹವಾಗಿದೆ.

Continue Reading

ಕ್ರೀಡೆ

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

KKR vs PBKS: ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಪಂಜಾಬ್​ಗೆ ಪ್ಲೇ ಆಫ್​ ರೇಸ್​ ಪ್ರವೇಶಿಸಬೇಕಾದರೆ ಕೆಕೆಆರ್​ ವಿರುದ್ಧದ ಪಂದ್ಯ ಮಸ್ಟ್​ ವಿನ್​ ಗೇಮ್ ಆಗಿದೆ.

VISTARANEWS.COM


on

KKR vs PBKS
Koo

ಕೋಲ್ಕತ್ತಾ: ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಬೇಕಾದರೆ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(KKR vs PBKS)​ ತಂಡ ಕೆಕೆಆರ್​ ತಂಡದ ಸವಾಲು ಎದುರಿಸಲಿದೆ. ಇತ್ತಂಡಗಳ ಈ ಮುಖಾಮುಖಿ ಶುಕ್ರವಾರ ಐತಿಹಾಸಿಕ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಸಾಗಲಿದೆ.

ಈಗಾಗಲೇ ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಪಂಜಾಬ್​ಗೆ ಪ್ಲೇ ಆಫ್​ ರೇಸ್​ ಪ್ರವೇಶಿಸಬೇಕಾದರೆ ಇದು ಮಸ್ಟ್​ ವಿನ್​ ಗೇಮ್​. ಸೋತರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಕೆಕೆಆರ್​ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 10 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಪಂದ್ಯ ಸೋತರೂ ಕೂಡ ಯಾವುದೇ ಹಿನ್ನಡೆಯಾಗದು. ಗೆದ್ದರೆ 12 ಅಂಕ ಗಳಿಸಿ ಪ್ಲೇ ಆಫ್​ ಸನಿಹಕ್ಕೆ ಬಂದು ನಿಲ್ಲಲಿದೆ.

ಪಂಜಾಬ್​ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸ್ಟಾರ್ ಆಟಗಾರರ ಪಡೆಯೇ ಇದ್ದರೂ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ಗೆಲ್ಲುವ ಹಂತದವರೆಗೆ ಬಂದರೂ ಕೂಡ ಗೆಲುವು ಒಲಿಯುತ್ತಿಲ್ಲ. ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಪಂಜಾಬ್​ ತಂಡದ್ದು ಇದೇ ಕಥೆ. ಹೀಗಾಗಿ ಪಂಜಾಬ್​ಗೆ ಈ ಪಂದ್ಯದಲ್ಲಿ ಅದೃಷ್ಟ ಕೈ ಹಿಡಿದರೆ ಮಾತ್ರ ಗೆಲುವು ಸಾಧ್ಯ ಎನ್ನಲಡ್ಡಿಯಿಲ್ಲ.

ಸ್ಟಾರ್ಕ್​ ಬಗ್ಗೆ ಚಿಂತೆ

​ಕೆಕೆಆರ್​ ತಂಡಕ್ಕೆ ಇರುವ ದೊಡ್ಡ ಚಿಂತೆಯೆಂದರೆ 24 ಕೋಟಿ ಒಡೆಯ ಮಿಚೆಲ್​ ಸ್ಟಾರ್​ ಅವರು ಈ ಮೊತ್ತಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗುತ್ತಿದ್ದಾರೆ. ಅನಾನುಭವಿ ಬ್ಯಾಟರ್​ಗಳು ಕೂಡ ಇವರ ಎಸೆತಗಳಿಗೆ ಸಿಕ್ಸರ್​, ಬೌಂಡರಿ ಬಾರಿಸುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಕಳೆದ ಆರ್​ಸಿಬಿ ವಿರುದ್ಧದ ಪಂದ್ಯ. ಸ್ಪಿನ್​ ಬೌಲರ್​ ಕರ್ಣ್​ ಶರ್ಮ ಅವರು ಸತತವಾಗಿ ಸಿಕ್ಸರ್ ಮತ್ತು ಬೌಂಡರಿ ಚಚ್ಚಿದ್ದರು. ಸ್ಟಾಕ್​ ಬೌಲಿಂಗ್​ ಲಯಕ್ಕೆ ಮರಳಿದರೆ ತಂಡಕ್ಕೆ ಯಾವುದೇ ಚಿಂತೆಯಿಲ್ಲ.

ಇದನ್ನೂ ಓದಿ IPL Streaming Case: ಏನಿದು ಐಪಿಎಲ್​ ಲೈವ್ ಸ್ಟ್ರೀಮಿಂಗ್ ಕೇಸ್​; ತಮನ್ನಾ,ಜಾಕ್ವೆಲಿನ್, ಸಂಜಯ್​ ದತ್​ಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದೇಕೆ?

ಕೆಕೆಆರ್​ ಬ್ಯಾಟಿಂಗ್​ ಬಲಿಷ್ಠ

ಬ್ಯಾಟಿಂಗ್​ ವಿಭಾಗದಲ್ಲಿ ಯಾವುದೇ ಕೊರತೆಯಿಲ್ಲ. ಫಿಲ್ ಸಾಲ್ಟ್​, ಸುನೀಲ್​ ನರೈನ್​, ರಿಂಕು ಸಿಂಗ್​, ಆ್ಯಂಡ್ರೆ ರೆಸಲ್, ನಾಯಕ ಶ್ರೇಯಸ್​ ಅಯ್ಯರ್​ ಮತ್ತು ಆಂಗ್ಕ್ರಿಶ್ ರಘುವಂಶಿ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಯಾವುದೇ ಹಂತದಲ್ಲಿಯೂ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಇವರಲ್ಲಿದೆ. ಗಾಯದಿಂದ ಚೇತರಿಕೆ ಕಂಡು ತಂಡ ಸೇರಿರುವ ನಿತೇಶ್​ ರಾಣಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದಾರೆ.

ಪಂಜಾಬ್​: ಸ್ಯಾಮ್ ಕರನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೋಸೊವ್, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

ಕೆಕೆಆರ್​: ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

Continue Reading

ಕ್ರೀಡೆ

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

IPL 2024: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್ ಗಳ ಜಯ ಸಾಧಿಸುವಲ್ಲಿ ರಸಿಕ್ ಸಲಾಮ್ ದಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಲಗೈ ವೇಗಿ ನಾಲ್ಕು ಓವರ್ ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಅವರು ಬೌಲಿಂಗ್​ ಸ್ಪೆಲ್​ ಅವಧಿಯಲ್ಲಿ ಔಟ್ ಮಾಡಿದರು.

VISTARANEWS.COM


on

IPL 2024
Koo

ನವದೆಹಲಿ: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಬೌಲರ್ ರಸಿಕ್ ಸಲಾಮ್ ದಾರ್ ಗೆ ದಂಡ ವಿಧಿಸಲಾಗಿದೆ. ಇತ್ತೀಚೆಗೆ ನಡೆದ ಐಪಿಎಲ್ 2024 ಪಂದ್ಯದಲ್ಲಿ ವಿಕೆಟ್ ಪಡೆದ ನಂತರ ಆಕ್ರಮಣಕಾರಿ ಸಂಭ್ರಮಾಚರಣೆಗಾಗಿ ರಸಿಕ್ ಸಲಾಮ್ ದಾರ್ ಅವರಿಗೆ ದಂಡ ವಿಧಿಸಲಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 24) ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್ ಗಳ ಜಯ ಸಾಧಿಸುವಲ್ಲಿ ರಸಿಕ್ ಸಲಾಮ್ ದಾರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಲಗೈ ವೇಗಿ ನಾಲ್ಕು ಓವರ್ ಗಳಲ್ಲಿ 44 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಅವರು ಬೌಲಿಂಗ್​ ಸ್ಪೆಲ್​ ಅವಧಿಯಲ್ಲಿ ಔಟ್ ಮಾಡಿದರು.

ರಸಿಕ್ ಸಲಾಮ್ ದಾರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ. 24 ವರ್ಷದ ಆಟಗಾರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಶಿಕ್ಷೆ ಒಪ್ಪಿಕೊಂಡಿದ್ದಾರೆ. “ಐಪಿಎಲ್​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ದಾರ್ ಲೆವೆಲ್ 1 ಅಪರಾಧ ಮಾಡಿದ್ದಾರೆ. ಅವರು ಅಪರಾಧ ಒಪ್ಪಿಕೊಂಡಿದ್ದಾರೆ ಮ್ಯಾಚ್ ರೆಫರಿಯ ಅನುಮತಿ ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಮ್ಯಾಚ್ ರೆಫರಿ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಐಪಿಎಲ್​​ನ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಪ್ರಕಾರ ಇನ್ನೊಬ್ಬ ಆಟಗಾರನಿಂದ ಆಕ್ರಮಣಕಾರಿ ಪ್ರತಿಕ್ರಿಯೆ ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಾಗಿದೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ನಿರ್ಣಾಯಕ ಬೌಲಿಂಗ್​

ಗುಜರಾತ್ ಟೈಟಾನ್ಸ್ ಗೆಲುವಿಗೆ 12 ಎಸೆತಗಳಲ್ಲಿ 37 ರನ್​ಗಳ ಅಗತ್ಯವಿದ್ದಾಗ ಜಮ್ಮು ಮತ್ತು ಕಾಶ್ಮೀರ ಮೂಲದ ಕ್ರಿಕೆಟಿಗನಿಗೆ 19 ನೇ ಓವರ್ ಎಸೆಯುವ ನಿರ್ಣಾಯಕ ಜವಾಬ್ದಾರಿ ನೀಡಲಾಗಿತ್ತು. ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸಾಯಿ ಕಿಶೋರ್ ಅವರನ್ನು ತಮ್ಮ ಯಾರ್ಕರ್​ ಬೌಲಿಂಗ್​ ಮೂಲಕ ಔಟ್ ಮಾಡಿದ್ದರು. ಅದಕ್ಕಿಂತ ಮೊದಲು ಯುವ ವೇಗಿ ಎರಡು ಸಿಕ್ಸರ್​ಗಳನ್ನು ಬಿಟ್ಟುಕೊಟ್ಟರು.

ಡೆಲ್ಲಿ ಪರ ಕುಲ್ದೀಪ್ ಯಾದವ್ 29 ರನ್ ನೀಡಿ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಡಿಸಿ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಏತನ್ಮಧ್ಯೆ, ಶುಭ್​ಮನ್​ ಗಿಲ್ ನೇತೃತ್ವದ ತಂಡವು ಕಡಿಮೆ ನೆಟ್ ರನ್ ರೇಟ್ ( ನೊಂದಿಗೆ ಏಳನೇ ಸ್ಥಾನದಲ್ಲಿದೆ.

ನೋರ್ಜೆಗೆ ಕಠಿಣ ಸಮಯ: ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ನಿರ್ಣಾಯಕ 19 ನೇ ಓವರ್​​ಗೆ ಅನ್ನು ನೋರ್ಜೆ ಬದಲಿಗೆ ರಸಿಕ್​ಗೆ ಬೌಲಿಂಗ್ ನೀಡುವ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಫಾರ್ಮ್ ನಲ್ಲಿರುವ ಬೌಲರ್ ಅನ್ನು ಅವಲಂಬಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ನೋರ್ಜೆ ಕಠಿಣ ಸಮಯ ಎದುರಿಸುತ್ತಿದ್ದರು. ಟಿ20 ಒಂದು ತಮಾಷೆಯ ಆಟ, 14-15 ಓವರ್​ಗಳ ನಂತರ ಚೆಂಡು ಚೆನ್ನಾಗಿ ಬ್ಯಾಟರ್​ಗಳಿಗೆ ಸಿಗುತ್ತದೆ. ಆದ್ದರಿಂದ ನಾವು ರಸಿಕ್ ಅವರನ್ನು ನಂಬಲು ಬಯಸಿದೆವು. ಆಟದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವ ಯಾರನ್ನಾದರೂ ಯಾವಾಗಲೂ ನಂಬಲೇಬೇಕು. ಇದು ನಾಯಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಅದು ಕೆಲವೊಮ್ಮೆ ಫಲಿತಾಂಶ ಕೊಡುತ್ತದೆ,”ಎಂದು ರಿಷಭ್ ಪಂತ್ ಹೇಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕ್ಯಾಪಿಟಲ್ಸ್ ಪವರ್ ಪ್ಲೇನಲ್ಲಿ 44 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ರಿಷಭ್ ಪಂತ್ ಹಾಗೂ ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್​ಗೆ 113 ರನ್​ಗಳ ಜೊತೆಯಾಟ ನೀಡಿದರು. ಅಕ್ಷರ್ 43 ಎಸೆತಗಳಲ್ಲಿ 66 ರನ್ ಗಳಿಸಿದರೆ, ಪಂತ್ 43 ಎಸೆತಗಳಲ್ಲಿ 88 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು.

ರಿಷಭ್ ಪಂತ್ ನೇತೃತ್ವದ ಭಾರತ ತಂಡ ಏಪ್ರಿಲ್ 27 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ (ಎಂಐ) ತಂಡವನ್ನು ಎದುರಿಸಲಿದೆ.

Continue Reading

ಕ್ರೀಡೆ

IPL Streaming Case: ಏನಿದು ಐಪಿಎಲ್​ ಲೈವ್ ಸ್ಟ್ರೀಮಿಂಗ್ ಕೇಸ್​; ತಮನ್ನಾ,ಜಾಕ್ವೆಲಿನ್, ಸಂಜಯ್​ ದತ್​ಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದೇಕೆ?

IPL Streaming Case: 2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಪಡೆದಿತ್ತು. ಆದರೆ ಯಾವುದೇ ಬ್ರಾಡ್​ಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್​​ನ ಫೇರ್​ಪ್ಲೇ ಆ್ಯಪ್​​ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಹೀಗಾಗಿ, ಫೇರ್​ಪ್ಲೇ ಆ್ಯಪ್​ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

VISTARANEWS.COM


on

Tamannaah Bhatia and Sanjay Dutt
Koo

ಮುಂಬೈ: ಬಹುಭಾಷಾ ನಟಿ ತಮನ್ನಾ ಭಾಟಿಯಾ, ಸಂಜಯ್​ ದತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಿಂಗರ್​ ಬಾದ್​ಶಾ ಅವರಿಗೆ ಮುಂಬೈನ ಸೈಬರ್ ಕ್ರೈಂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಅಲ್ಲದೆ ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಇವರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ನಟ ಸಂಜಯ್ ದತ್ ತಾನು ವಿದೇಶದಲ್ಲಿರುವ ಕಾರಣ ವಿಚಾರಣೆಗೆ ಬೇರೊಂದು ಸಮಯ ಮತ್ತು ದಿನಾಂಕ ನಿಗದಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ತಮನ್ನಾ ಮತ್ತು ಸಂಜಯ್ ದತ್ ಅವರು ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಅಂಗಸಂಸ್ತೆ ಫೇರ್‌ಪ್ಲೆ (FairPlay) ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ ಮತ್ತು ಪ್ರತಿನಿಧಿಸಿದ ಆರೋಪ ಎದುರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಹಲವು ಪ್ರಾಡಕ್ಟ್​ಗಳ ಪ್ರಚಾರ ಮಾಡುತ್ತಾರೆ. ಅನೇಕ ಬಾರಿ ತಾವು ಪ್ರಮೋಷನ್ ಮಾಡುತ್ತಿರುವ ಸಂಸ್ಥೆ ಎಂಥದ್ದು, ಅದರ ಹಿನ್ನೆಲೆ ಏನು ಎಂಬುದನ್ನು ತಿಳಿಯದೇ ದುಡ್ಡಿದಾಗಿ ಜಾಹೀರಾತು ಮಾಡಿಕೊಡುತ್ತಾರೆ. ಸಂಸ್ಥೆಗಳು ಈ ರೀತಿ ತೊಂದರೆಗೆ ಸಿಲುಕಿದಾಗ ಅದರ ಪ್ರಚಾರ ಮಾಡಿದವರೂ ವಿಚಾರಣೆ ಎದುರಿಸಬೇಕಾಗುತ್ತದೆ. ಇದೇ ರೀತಿ ಈ ನಟ ಮತ್ತು ನಟಿಯರಿಗೂ ಈಗ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

ವಯಾಕಾಮ್‌ಗೆ ಅಪಾರ ನಷ್ಟ


2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಪಡೆದಿತ್ತು. ಆದರೆ ಯಾವುದೇ ಬ್ರಾಡ್​ಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್​​ನ ಫೇರ್​ಪ್ಲೇ ಆ್ಯಪ್​​ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಹೀಗಾಗಿ, ಫೇರ್​ಪ್ಲೇ ಆ್ಯಪ್​ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ನೊಟೀಸ್ ಜಾರಿಯಾದ ಹಿನ್ನೆಲೆಯಲ್ಲಿ ನಟಿ ತಮನ್ನಾ ಏಪ್ರಿಲ್ 29 ರಂದು ಮಹಾರಾಷ್ಟ್ರದ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ ತನಿಖೆಗೆ ನೋಡಲ್ ಏಜೆನ್ಸಿಯ ಮುಂದೆ ಹಾಜರಾಗಬೇಕಾಗಿದೆ.

Continue Reading
Advertisement
Fire Tragedy
ದೇಶ3 mins ago

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

World Malaria Day April 25
ಆರೋಗ್ಯ7 mins ago

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

Bismah Maroof
ಕ್ರೀಡೆ10 mins ago

Bismah Maroof : ಹೆಣ್ಣು ಮಗುವಿನ ಸಮೇತ ಆಡಲು ಹೋಗುತ್ತಿದ್ದ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿವೃತ್ತಿ

Modi in Karnataka Pm Modi to visit Karnataka on April 28 and 29 Raichur conference maybe cancelled
Lok Sabha Election 202418 mins ago

Modi in Karnataka: ಏಪ್ರಿಲ್‌ 28 – 29ರಂದು ರಾಜ್ಯಕ್ಕೆ ಮೋದಿ; ರಾಯಚೂರು ಸಮಾವೇಶ ರದ್ದು?

Lok Sabha Election
ಕರ್ನಾಟಕ20 mins ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ30 mins ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

IPL 2024
ಕ್ರೀಡೆ33 mins ago

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

Haji Akbar Afridi
ವಿದೇಶ36 mins ago

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Tata Motors gets approval for 333 patents
ದೇಶ41 mins ago

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Neha Murder Case in hubblli
ಹುಬ್ಬಳ್ಳಿ54 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ54 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 hour ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ4 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20246 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌