IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ - Vistara News

Latest

IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ

ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಂದ್ಯ ಟೈನಲ್ಲಿ ಅಂತ್ಯಕಂಡಿದೆ.

VISTARANEWS.COM


on

Match tied (Teams score level on DLS method)
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೇಪಿಯರ್​: ಮಳೆ ಪೀಡಿತ ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ಡಕ್​ವರ್ತ್ ಲೂಯಿಸ್​ ನಿಯಮದ ಪ್ರಕಾರ ಟೈ ಗೊಂಡಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದ ಕಾರಣ ಹಾರ್ದಿಕ್​ ಪಡೆ ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯವೂ ಮಳೆಯಿಂದ ರದ್ದುಗೊಂಡಿತ್ತು.

ನೇಪಿಯರ್​ನ ಮೆಕ್‌ಲೀನ್‌ ಪಾರ್ಕ್ ಸ್ಟೇಡಿಯಮ್‌ನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ತಂಡ 19.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 160 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 9 ಓವರ್​ಗೆ 4 ವಿಕೆಟ್​ ಕಳೆದುಕೊಂಡು 75 ರನ್​ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. ಇದೇ ವೇಳೆ ಮಳೆ ಸುರಿದು ಪಂದ್ಯ ಅರ್ಧಕ್ಕೆ ನಿಂತಿತು. ಬಳಿಕ ಅಂಪೈರ್​ಗಳು ಪಂದ್ಯವನ್ನು ಡಕ್​ ವರ್ತ್​ ಲೂಯಿಸ್​ ನಿಯಮದನ್ವಯ ಪಂದ್ಯವನ್ನು ಟೈ ಎಂದು ಘೋಷಣೆ ಮಾಡಿದರು.

ಸೋಲಿನಿಂದ ಪಾರಾದ ಭಾರತ

ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಂದ್ಯದ ಫಲಿತಾಂಶ ನಿರ್ಧರಿಸುವ ಮೊತ್ತ 75 ಆಗಿತ್ತು. ಮಳೆ ಬಂದು ಪಂದ್ಯ ನಿಂತಾಗ ಭಾರತದ ಮೊತ್ತವೂ 75 ರನ್​ ಆಗಿತ್ತು. ಆದ್ದರಿಂದ ಪಂದ್ಯವನ್ನು ಅಂಪೈರ್​ಗಳು ಟೈ ಮಾಡಲು ನಿರ್ಧರಿಸಿದರು. ಮಿಚೆಲ್​ ಸ್ಯಾಂಟ್ನರ್​ ಮಿಸ್ ಫೀಲ್ಡ್ ಮಾಡಿದ್ದು ಭಾರತದ ಪಾಲಿಗೆ ವರದಾನವಾಯಿತು. ಒಂದೊಮ್ಮೆ ಸ್ಯಾಂಟ್ನರ್​ ಮಿಸ್​ ಫೀಲ್ಡ್​ ಮಾಡದೇ ಇದ್ದರೆ ಅಥವಾ ಪಾಂಡ್ಯ ಮತ್ತು ದೀಪಕ್​ ಹೂಡಾ ಈ ರನ್​ ಗಳಿಸದೇ ಇದ್ದರೆ ಭಾರತದ ರನ್ 74 ಆಗಿರುತ್ತಿತ್ತು. ನ್ಯೂಜಿಲ್ಯಾಂಡ್ ಪಂದ್ಯ ಜಯಿಸುತ್ತಿತ್ತು. ಆದರೆ ಅರಿಯದೇ ಆದ ತಪ್ಪಿಗೆ ಕಿವೀಸ್ ಅವಕಾಶ ಕಳೆದುಕೊಂಡಿತು. ಅತ್ತ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಭಾರತ ಸೋಲಿನಿಂದ ಪಾರಾಯಿತು.

ಭಾರತಕ್ಕೆ ಆರಂಭಿಕ ಆಘಾತ

ಸಾದಾರಣ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ರಿಷಭ್​​ ಪಂತ್ (11), ಇಶಾನ್ ಕಿಶನ್ (10) ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (0) ಮತ್ತು ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಸೂರ್ಯಕುಮಾರ್ ಯಾದವ್​ ಈ ಪಂದ್ಯದಲ್ಲಿ 13 ರನ್​ಗೆ ಆಟ ಮುಗಿಸಿದರು. 21 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ನಾಯಕ ಪಾಂಡ್ಯ ಆಧರಿಸಿದರು. 18 ಎಸೆತಗಳಿಂದ ಪಾಂಡ್ಯ ಅಜೇಯ 30 ರನ್ ಗಳಿಸಿದರು. ಹೂಡಾ ಅಜೇಯ 9 ರನ್ ಕಾಣಿಕೆ ನೀಡಿದರು. ಈ ವೇಳೆ ಮಳೆ ಬಂದು ಪಂದ್ಯ ಅರ್ಧಕ್ಕೆ ನಿಂತಿತು. ಭಾರತ ಪರ ಬೌಲರ್​ಗಳಾದ ಮೊಹಮ್ಮದ್​ ಸಿರಾಜ್​ ಮತ್ತು ಅರ್ಶ್​ದೀಪ್​ ಸಿಂಗ್​ ತಲಾ ನಾಲ್ಕು ವಿಕೆಟ್​ ಕಿತ್ತು ಮಿಂಚಿದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ಮಾಡಿದ ನ್ಯೂಜಿಲ್ಯಾಂಡ್​ ತಂಡವೂ ಆರಂಭಿಕ ಆಘಾತ ಕಂಡಿತು. ಬಳಿಕ ಡೆವೋನ್​ ಕಾನ್ವೆ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೇನ್​ ಫಿಲಿಪ್ಸ್​ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ರಕ್ಷಣಾತ್ಮ ಆಟಕ್ಕೆ ಮುಂದಾದ ಉಭಯ ಆಟಗಾರರು ಬಳಿಕ ಭಾರತದ ಬೌಲರ್​ಗಳ ಮೇಲೆರಗಿ ರನ್​ ಗಳಿಕೆಗೆ ವೇಗ ನೀಡುವ ಜತೆಗೆ ಅರ್ಧಶತಕವನ್ನು ಪೂರೈಸಿದರು. ಆದರೆ 54 ರನ್​ ಗಳಿಸದ ವೇಳೆ ಸಿರಾಜ್​ ಅವರ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟುವ ಯತ್ನದಲ್ಲಿ ಭುವನೇಶ್ವರ್​ ಕುಮಾರ್​ಗೆ ಕ್ಯಾಚಿತ್ತು ವಿಕೆಟ್​ ಒಪ್ಟಿಸಿದರು. ಈ ಜೋಡಿ 3ನೇ ವಿಕೆಟ್​ಗೆ 86ರನ್​ ಜತೆಯಾಟ ನಡೆಸಿತು. ಫಿಲಿಪ್ಸ್​ ತನ್ನ ಅರ್ಧಶತಕದ ಆಟದಲ್ಲಿ 3 ಸಿಕ್ಸರ್​ ಮತ್ತು 5 ಫೋರ್​ ಬಾರಿಸಿದರು. ಡೆವೋನ್​ ಕಾನ್ವೆ 49 ಎಸೆತಗಳಿಂದ 59 ರನ್​ ಸಿಡಿಸಿದರು.

ಸ್ಕೋರ್​

ನ್ಯೂಜಿಲ್ಯಾಂಡ್​: 19.4 ಓವರ್​ಗಳಲ್ಲಿ 160ಕ್ಕೆ ಆಲೌಟ್​ (ಡೆವೋನ್​ ಕಾನ್ವೆ 59, ಗ್ಲೆನ್​ ಫಿಲಿಪ್ಸ್​ 54, ಮೊಹಮ್ಮದ್​ ಸಿರಾಜ್​ 17ಕ್ಕೆ 4)

ಭಾರತ: 9 ಓವರ್​ಳಲ್ಲಿ 4 ವಿಕೆಟ್​ಗೆ 75(ಡಕ್​ವರ್ತ್​ ನಿಯಮದ ಪ್ರಕಾರ ಪಂದ್ಯ ಟೈ) ಹಾರ್ದಿಕ್​ ಪಾಂಡ್ಯ ಅಜೇಯ 30, ದೀಪಕ್​ ಹೂಡಾ ಅಜೇಯ 9, ಟಿಮ್​ ಸೌಥಿ 27ಕ್ಕೆ 2.

ಪಂದ್ಯಶ್ರೇಷ್ಠ: ಮೊಹಮ್ಮದ್​ ಸಿರಾಜ್​. ಸರಣಿಶ್ರೇಷ್ಠ: ಸೂರ್ಯಕುಮಾರ್​ ಯಾದವ್​

ಇದನ್ನೂ ಓದಿ | IND VS NZ | ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲ್ಯಾಂಡ್​ ಬ್ಯಾಟಿಂಗ್​ ಆಯ್ಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Healthy Diet: ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ? ಈ ಸಂಗತಿ ತಿಳಿದುಕೊಂಡಿರಿ

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ (Healthy Diet) ಭಾಗವಾಗುವುದು ನಿಜ. ಈ ಕುರಿತು ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

Healthy Diet
Koo

ಹಾಲು (milk), ಮೊಸರು (curd), ತುಪ್ಪ (ghee), ಬೆಣ್ಣೆ (butter) ಇಲ್ಲದೇ ಇದ್ದರೆ ಭಾರತೀಯರ ಮನೆಗಳಲ್ಲಿ ಅಡುಗೆ ಕೆಲಸ ಕಾರ್ಯಗಳು ಒಂದೂ ನಡೆಯುವುದಿಲ್ಲ. ಆರೋಗ್ಯದ ವಿಚಾರದಲ್ಲಿ (Healthy Diet) ಹಾಲು, ತುಪ್ಪ, ಮೊಸರಿನ ಬಗ್ಗೆ ಅಷ್ಟೇನು ಸಂದೇಹವಿಲ್ಲ. ಆದರೆ ಬೆಣ್ಣೆಯ ವಿಚಾರ ಬಂದಾಗ ಇದು ಆರೋಗ್ಯಕರ ಹೌದೋ ಅಲ್ಲವೋ ಎನ್ನುವ ಗೊಂದಲ ಕಾಡುತ್ತದೆ.

ಭಾರತೀಯ ಮನೆಗಳ ಪಾಕ ಶಾಲೆಯಲ್ಲಿ ಬಹುವಿಧವಾಗಿ ಬಳಸುವ ಬೆಣ್ಣೆಯು ಅದರ ಪೋಷಕಾಂಶದಿಂದಲೂ ಹೆಚ್ಚು ಮೌಲ್ಯಯುತ ಎಂದೆನಿಸಿದೆ. ಇದು ಹಲವಾರು ಪೋಷಕಾಂಶಗಳ ಕೇಂದ್ರೀಕೃತ ಮೂಲವಾಗಿದೆ. ಇದರಲ್ಲಿ ಕೊಬ್ಬು ಕರಗಬಲ್ಲ ವಿಟಮಿನ್‌ಗಳಾದ ಎ, ಇ ಮತ್ತು ಕೆ2 ವಿವಿಧ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ದೃಷ್ಟಿ, ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ದೇಹದ ಪ್ರತಿರಕ್ಷೆಯನ್ನು ಬೆಂಬಲಿಸಲು ಇವುಗಳು ಅತ್ಯಗತ್ಯ.

ಬೆಣ್ಣೆ ಆರೋಗ್ಯಕ್ಕೆ ಕೆಟ್ಟದು ಎಂದು ಕೆಲವರು ಭಾವಿಸುತ್ತಾರೆ. ಆದರೆ ನೀವು ಅದನ್ನು ಮಿತವಾಗಿ ಸೇವಿಸಿದರೆ ಅದು ಕೆಟ್ಟದ್ದಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೌದು ಬೆಣ್ಣೆಯನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕರ ಆಹಾರದ ಭಾಗವಾಗುವುದು ನಿಜ. ಅಲ್ಲದೇ ಉತ್ತಮ ಗುಣಮಟ್ಟದ ಬೆಣ್ಣೆಯನ್ನು ಆಯ್ಕೆ ಮಾಡಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ದೇಹಕ್ಕೆ ಅಗತ್ಯವಾದ ಉತ್ತಮ ಕೊಬ್ಬಿನಾಂಶಗಳು ಬೆಣ್ಣೆ, ಆಲಿವ್ ಎಣ್ಣೆ, ಆವಕಾಡೊಗಳಿಂದಲೂ ಸಿಗುತ್ತದೆ.


ಹೆಚ್ಚುವರಿ ಬೆಣ್ಣೆಯನ್ನು ಸೇವಿಸಿದರೆ ಏನಾಗುತ್ತದೆ?

ಬೆಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದನ್ನು ಅಧಿಕವಾಗಿ ಸೇವಿಸಿದಾಗ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಬೆಣ್ಣೆಯು ಕ್ಯಾಲೋರಿ ದಟ್ಟವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಬೆಣ್ಣೆಯನ್ನು ಮಿತವಾಗಿ ಸೇವಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ಬೆಣ್ಣೆಯು ರಕ್ತದ ಲಿಪಿಡ್ ಮಟ್ಟವನ್ನು ಹಾನಿಗೊಳಿಸುತ್ತದೆ. ಹೃದಯದ ಪರಿಸ್ಥಿತಿಗಳು ಅಥವಾ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರಿಗೆ, ಮಿತವಾಗಿರುವುದು ಮುಖ್ಯವಾಗಿದೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ಬೆಣ್ಣೆಯು ಲ್ಯಾಕ್ಟೋಸ್ ಮತ್ತು ಡೇರಿ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಇದು ಡೇರಿ ಅಲರ್ಜಿಯಿಂದ ಬಳಲುತ್ತಿರುವವರಿಗೆ ಸಮಸ್ಯೆಯಾಗಬಹುದು. ಬೆಣ್ಣೆಯನ್ನು ಸೇವಿಸಿದ ಅನಂತರ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರದಂತಹ ಜೀರ್ಣಕಾರಿ ತೊಂದರೆಗಳನ್ನು ಅವರು ಅನುಭವಿಸಬಹುದು.

ಬೆಣ್ಣೆಯನ್ನು ಮಿತವಾಗಿ ಸೇವಿಸಿದಾಗ ಆರೋಗ್ಯಕರ ಆಹಾರದ ಭಾಗವಾಗಬಹುದು. ಅದರ ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಮತ್ತು ಸಾಧ್ಯವಾದಾಗ ಉತ್ತಮ ಗುಣಮಟ್ಟದ ಆಯ್ಕೆಗಳನ್ನು ಆರಿಸುವುದು ಅತ್ಯಗತ್ಯ. ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಭಾಗವಾಗಿ ಬೆಣ್ಣೆಯನ್ನು ಆನಂದಿಸುವುದು ಉತ್ತಮ.

Continue Reading

ಆರೋಗ್ಯ

FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಇದರ ವಿರುದ್ಧ ವರ್ತಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ( FSSAI Warning) ನೀಡಲಾಗಿದೆ.

VISTARANEWS.COM


on

By

FSSAI alert
Koo

ಮಾರುಕಟ್ಟೆಯಲ್ಲಿ (market) ಮಾವಿನ (mango) ಹಣ್ಣುಗಳ ರಾಶಿ ಕಂಡಾಗ ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ಆದರೆ ನಾವು ಹಣ ಕೊಟ್ಟು ಖರೀದಿ ಮಾಡಿ ತಂದ ಮಾವಿನ ಹಣ್ಣುಗಳು ಸುರಕ್ಷಿತವಾಗಿ ಇದೆಯೇ? ಯಾಕೆಂದರೆ ಮಾವಿನ ಹಣ್ಣುಗಳಲ್ಲಿರುವ ಕ್ಯಾಲ್ಸಿಯಂ ಕಾರ್ಬೈಡ್ (calcium carbide) ಅಪಾಯಗಳ ವಿರುದ್ಧ ಕೇಂದ್ರ ಆಹಾರ ನಿಯಂತ್ರಣ ಸಂಸ್ಥೆಯಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI Warning) ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.

ಮಾವಿನ ಹಣ್ಣಿನ ಋತುವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದರ ಬಗ್ಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಪನಿಂಗ್ ಚೇಂಬರ್‌ಗಳನ್ನು ನಿರ್ವಹಿಸುವ ವ್ಯಾಪಾರಿಗಳಿಗೆ ಎಫ್‌ಎಸ್‌ಎಸ್‌ಎಐ ಎಚ್ಚರಿಕೆ ನೀಡಿದೆ.
ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಇದರ ವಿರುದ್ಧ ವರ್ತಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ನೀಡಲಾಗಿದೆ.

ಮಾವಿನ ಹಣ್ಣಿನ ಋತುವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಫ್‌ಎಸ್‌ಎಸ್‌ಎಐ ಹಣ್ಣಿನ ವ್ಯಾಪಾರಿಗಳು, ಹ್ಯಾಂಡ್ಲರ್‌ಗಳು ಮತ್ತು ಫುಡ್ ಬ್ಯುಸಿನೆಸ್ ಆಪರೇಟರ್‌ಗಳು (ಎಫ್‌ಬಿಒಗಳು) ಪಕ್ವಗೊಳಿಸುವ ಕೋಣೆಗಳನ್ನು ನಿರ್ವಹಿಸುವ ಎಚ್ಚರಿಕೆ ನೀಡಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ನ ಪರಿಣಾಮ?

ಮಾವಿನಹಣ್ಣಿನಂತಹ ಹಣ್ಣುಗಳನ್ನು ಹಣ್ಣಾಗಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್, ಆರ್ಸೆನಿಕ್ ಮತ್ತು ಫಾಸ್ಪರಸ್‌ನ ಹಾನಿಕಾರಕ ಕುರುಹುಗಳನ್ನು ಹೊಂದಿರುವ ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ‘ಮಸಾಲಾ’ ಎಂದು ಕರೆಯಲ್ಪಡುವ ಈ ಪದಾರ್ಥಗಳು ತಲೆತಿರುಗುವಿಕೆ, ಆಗಾಗ್ಗೆ ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳನ್ನು ಉಂಟುಮಾಡಬಹುದು. ಅಸಿಟಿಲೀನ್ ಅನಿಲವು ಹ್ಯಾಂಡ್ಲರ್‌ಗಳಿಗೆ ಅಪಾಯಕಾರಿಯಾಗಿದೆ ಮತ್ತು ಆರ್ಸೆನಿಕ್ ಮತ್ತು ರಂಜಕದ ಅವಶೇಷಗಳು ಹಣ್ಣುಗಳ ಮೇಲೆ ಉಳಿಯಬಹುದು.

ಸಾಮಾನ್ಯವಾಗಿ ಕಾರ್ಬೈಡ್ ಗ್ಯಾಸ್ ಎಂದು ಕರೆಯಲ್ಪಡುವ ಅಸಿಟಿಲೀನ್ ಅನಿಲದ ಬಳಕೆಯಿಂದ ಕೃತಕವಾಗಿ ಮಾಗಿದ ಹಣ್ಣುಗಳನ್ನು ಯಾವುದೇ ವ್ಯಕ್ತಿಯು ಮಾರಾಟ ಮಾಡಬಾರದು ಎಂದು ಆಹಾರ ಸುರಕ್ಷತೆ ಮತ್ತು ಮಾನದಂಡಗಳು ನಿಷೇಧ ಮತ್ತು ಮಾರಾಟದ ಮೇಲಿನ ನಿರ್ಬಂಧಗಳ ನಿಯಮಗಳು-2011 ಹೇಳುತ್ತವೆ.


ಯಾವುದಕ್ಕೆ ಅನುಮತಿ ಇದೆ?

ಎಫ್‌ಎಸ್‌ಎಸ್‌ಎಐ ಪ್ರಕಾರ ಹಣ್ಣು ಹಣ್ಣಾಗಿಸಲು ಸುರಕ್ಷಿತ ಪರ್ಯಾಯವಾಗಿ ಎಥಿಲೀನ್ ಅನಿಲವನ್ನು ಬಳಸಲು ಅನುಮತಿ ನೀಡುತ್ತದೆ. ಎಥಿಲೀನ್ ಅನಿಲ, 100ಪಿಪಿಎಂವರೆಗಿನ ಸಾಂದ್ರತೆಗಳಲ್ಲಿ ಹಣ್ಣಾಗುವುದನ್ನು ನಿಯಂತ್ರಿಸುವ ನೈಸರ್ಗಿಕ ಹಾರ್ಮೋನ್ ಆಗಿದೆ. ಹಣ್ಣು ಎಥಿಲೀನ್ ಅನ್ನು ಗಣನೀಯ ಪ್ರಮಾಣದಲ್ಲಿ ಉತ್ಪಾದಿಸುವವರೆಗೆ ಇದು ನೈಸರ್ಗಿಕ ಮಾಗಿದ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಹೆಚ್ಚುವರಿಯಾಗಿ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ (CIB & RC) ಮಾವು ಮತ್ತು ಇತರ ಹಣ್ಣುಗಳ ಏಕರೂಪದ ಪಕ್ವತೆಗಾಗಿ ಎಥೆಫೋನ್ 39 ಪ್ರತಿಶತ ಎಸ್ ಎಲ್ ಅನ್ನು ಅನುಮೋದಿಸಿದೆ.

ಗುರುತಿಸುವುದು ಹೇಗೆ?

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಹಣ್ಣಾದ ಮಾವಿನ ಹಣ್ಣನ್ನು ಗುರುತಿಸುವುದು ಸುಲಭ.

ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ

ಹಣ್ಣುಗಳು ಮತ್ತು ತರಕಾರಿಗಳನ್ನು ತಿಳಿದಿರುವ ಮಾರಾಟಗಾರರು, ಪ್ರತಿಷ್ಠಿತ ಅಂಗಡಿಗಳು ಅಥವಾ ವಿತರಕರು ತಮ್ಮ ಉತ್ಪನ್ನಗಳನ್ನು ಹಾನಿಕಾರಕ ಅಥವಾ ನಿಷೇಧಿತ ರಾಸಾಯನಿಕಗಳಿಂದ ಹಣ್ಣಾಗಿಲ್ಲ ಎಂದು ಹೇಳಿಕೊಳ್ಳುತ್ತಾರೆ.

ಸಂಪೂರ್ಣವಾಗಿ ತೊಳೆಯುವುದು

ಯಾವುದೇ ಸಂಭಾವ್ಯ ಮೇಲ್ಮೈ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ತಿನ್ನುವ ಮೊದಲು ಕುಡಿಯುವ ನೀರಿನಲ್ಲಿ ಹಣ್ಣುಗಳನ್ನು ಚೆನ್ನಾಗಿ ತೊಳೆಯಿರಿ.

ಕಪ್ಪು ಕಲೆಗಳನ್ನು ತಪ್ಪಿಸಿ

ಮಾವಿನ ಹಣ್ಣುಗಳ ಚರ್ಮದ ಮೇಲೆ ಕಪ್ಪು ಮಚ್ಚೆಗಳಿರುವ ಹಣ್ಣುಗಳಿಂದ ದೂರವಿರಿ. ಏಕೆಂದರೆ ಇವುಗಳು ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಅಸಿಟಿಲೀನ್ ಅನಿಲದಿಂದ ಹಣ್ಣಾಗುತ್ತವೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ವಿನ್ಯಾಸವನ್ನು ಪರಿಶೀಲಿಸಿ

ಏಕರೂಪದ ಬಣ್ಣದ ವಿನ್ಯಾಸದೊಂದಿಗೆ ಮಾವಿನಹಣ್ಣು ಮತ್ತು ಇತರ ಹಣ್ಣುಗಳ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಇದು ಸಂಭವನೀಯ ರಾಸಾಯನಿಕ ಪಕ್ವತೆಯ ಸಂಕೇತವಾಗಿದೆ.

ವಾಸನೆ ಮತ್ತು ಶೆಲ್ಫ್ ಲೈಫ್

ಕಲಬೆರಕೆ ಹಣ್ಣುಗಳು ಸ್ವಲ್ಪ ಕಟುವಾದ ವಾಸನೆ ಮತ್ತು ಕಡಿಮೆ ಶೆಲ್ಫ್ ಜೀವಿತಾವಧಿಯನ್ನು ಹೊಂದಿರುತ್ತದೆ ಎಂಬುದು ತಿಳಿದಿರಲಿ. ಸಾಮಾನ್ಯವಾಗಿ ಮಾಗಿದ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯನ್ನು ಸೂಚಿಸುತ್ತದೆ.

Continue Reading

ದೇಶ

New Criminal Laws: ಜುಲೈ 1ರಿಂದ ಜಾರಿಗೆ ಬರಲಿವೆ ಮೂರು ಹೊಸ ಕ್ರಿಮಿನಲ್ ಕಾನೂನುಗಳು; ಏನಿದರ ಹೈಲೈಟ್ಸ್?

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದ್ದು, ಈ ಮೂರು ಹೊಸ ಕಾನೂನುಗಳು (New Criminal Laws) ಜುಲೈ 1 ರಿಂದ ಜಾರಿಗೆ ಬರಲಿವೆ.

VISTARANEWS.COM


on

By

New Criminal Laws
Koo

ನವದೆಹಲಿ: ಸಂಸತ್ತಿನ (Parliament) ಚಳಿಗಾಲದ ಅಧಿವೇಶನದಲ್ಲಿ (Winter session) ಅಂಗೀಕರಿಸಲಾದ ಮೂರು ಹೊಸ ಕ್ರಿಮಿನಲ್ ಕಾನೂನುಗಳು (New Criminal Laws) ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಮತ್ತು ಭಾರತೀಯ ಸಾಕ್ಷಿ ಕಾಯಿದೆಯು (Indian Evidence Act) ಸೇರಿದೆ.

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872ರ ಭಾರತೀಯ ಸಾಕ್ಷಿ ಕಾಯಿದೆಗೆ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಎಂದು ಬದಲಿಸಲಾಗಿದೆ. ಈ ಕಾನೂನುಗಳಲ್ಲಿ ಪರಿಚಯಿಸಲಾದ ಪ್ರಮುಖ ಬದಲಾವಣೆಗಳು ಇಂತಿವೆ.

ಭಯೋತ್ಪಾದಕರ ಆಸ್ತಿ ಮುಟ್ಟುಗೋಲು

ಭಯೋತ್ಪಾದನೆಯನ್ನು ಮೊದಲ ಬಾರಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 113 (1) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಅಥವಾ ಯಾವುದೇ ವಿದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ಕೃತ್ಯವನ್ನು ಎಸಗುವ ವ್ಯಕ್ತಿಯನ್ನು ಈ ಕಾನೂನಿನಲ್ಲಿ ಭಯೋತ್ಪಾದಕ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯ ಸಾರ್ವಜನಿಕರನ್ನು ಅಥವಾ ಅದರ ಒಂದು ಭಾಗವನ್ನು ಬೆದರಿಸಲು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ಕಾನೂನಿನ ಅಡಿಯಲ್ಲಿ ಇದೆ.

ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳನ್ನು ಮರಣದಂಡನೆ ಅಥವಾ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿದೆ. ‘ಆಸ್ತಿಗೆ ಹಾನಿ, ಅಥವಾ ಕರೆನ್ಸಿಯ ತಯಾರಿಕೆ ಅಥವಾ ಕಳ್ಳಸಾಗಣೆಯನ್ನು ಇದು ಒಳಗೊಂಡಿದೆ.

ದೇಶದ್ರೋಹ ಎಂಬುದು ರದ್ದು

ಭಾರತೀಯ ದಂಡ ಸಂಹಿತೆ1860ರ ದೇಶದ್ರೋಹದ ನಿಬಂಧನೆಗಳನ್ನು ರದ್ದುಗೊಳಿಸಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ಕ್ಕೆ ಬದಲಾಯಿಸಲಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ವಿಭಾಗಗಳನ್ನು ಪರಿಚಯಿಸಲಾಗಿದೆ.

ಅತ್ಯಾಚಾರ ಮಾಡಿದರೆ ಮರಣ ದಂಡನೆ

ಭಾರತೀಯ ನ್ಯಾಯ ಸಂಹಿತೆ ಲೈಂಗಿಕ ಅಪರಾಧಗಳನ್ನು ಪರಿಹರಿಸಲು ‘ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧಗಳು’ ಎಂಬ ಅಧ್ಯಾಯವನ್ನು ಪರಿಚಯಿಸಿದೆ. ಇದಲ್ಲದೆ, ಸಂಹಿತೆ 18 ವರ್ಷದೊಳಗಿನ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಗಳಿಗೆ ಮಾರ್ಪಾಡುಗಳನ್ನು ಶಿಫಾರಸು ಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಮಹಿಳೆಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ)ಗೆ ಅನುಗುಣವಾಗಿ ಮಾಡಲಾಗಿದೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಅವಕಾಶ ಕಲ್ಪಿಸಲಾಗಿದೆ.

ಕಾನೂನಿನ ಪ್ರಕಾರ, ಅತ್ಯಾಚಾರ ಎಸಗುವವರಿಗೆ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೆ ಸಹ ಹೊಣೆಗಾರರಾಗಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದಲ್ಲದೆ, ಮದುವೆ, ಉದ್ಯೋಗ, ಬಡ್ತಿಯ ನೆಪದಲ್ಲಿ ಅಥವಾ ಗುರುತನ್ನು ಮರೆಮಾಚುವ ಮೂಲಕ ಮಹಿಳೆಯರ ಲೈಂಗಿಕ ಶೋಷಣೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

ಮೊದಲ ಬಾರಿಗೆ ಸಂಘಟಿತ ಅಪರಾಧದ ವ್ಯಾಖ್ಯಾನ

ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸಲಾಗಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ 111 (1) ಅಡಿಯಲ್ಲಿ ಪದವನ್ನು ಮೊದಲ ಬಾರಿಗೆ ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನವು ಸಶಸ್ತ್ರ ದಂಗೆ, ವಿಧ್ವಂಸಕ ಕಾರ್ಯಾಚರಣೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಒಳಗೊಂಡಿದೆ. ಶಿಕ್ಷೆಯು ವಿವಿಧ ಅಪರಾಧಗಳಿಗೆ ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡ ಅಥವಾ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒಳಗೊಂಡಿರುತ್ತದೆ.

ಗುಂಪು ಹತ್ಯೆಗೆ ಶಿಕ್ಷೆಯ ಹೆಚ್ಚಳ

ಮೊದಲ ಬಾರಿಗೆ ಮೂಲ ಮಸೂದೆಯು ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಕೊಲೆಗಳೆಂದು ವರ್ಗೀಕರಿಸಿದೆ. ಈ ಕಾಯಿದೆಯು ಗುಂಪು ಹತ್ಯೆಯಂತಹ ಅಪರಾಧಗಳಿಗೆ ಗರಿಷ್ಠ ಮರಣದಂಡನೆಯನ್ನು ನೀಡಲು ಬಯಸುತ್ತದೆ.

ದೇಶ ವಿರೋಧಿ ಕೃತ್ಯಗಳಿಗೆ ಜೀವಾವಧಿ ಶಿಕ್ಷೆ

“ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳಿಗೆ” ಸಂಬಂಧಿಸಿದ ಕೃತ್ಯಗಳ ಸಂದರ್ಭದಲ್ಲಿ ಕಾನೂನುಗಳು ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ.

ಯಾರಾದರೂ ಉದ್ದೇಶಪೂರ್ವಕವಾಗಿ ಪದಗಳಲ್ಲಿ ಮಾತನಾಡುವ ಅಥವಾ ಬರೆಯುವ =ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸಿನ ಅರ್ಥದ ಬಳಕೆಯಿಂದ ಅಥವಾ ಬೇರೆ ಬೇರೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕವನ್ನು ಪ್ರಚೋದಿಸಲು ಅಥವಾ ಪ್ರಚೋದಿಸಲು ಪ್ರಯತ್ನಿಸಿದರೆ ಕಠಿಣ ಶಿಕ್ಷೆ ಕಾದಿದೆ. ಅಕ್ರಮ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.

ತ್ವರಿತ ವಿಚಾರಣೆ ಮತ್ತು ನ್ಯಾಯ

ಹೊಸ ಕಾನೂನುಗಳ ಪ್ರಕಾರ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಮತ್ತು ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯವು ಇನ್ನೂ 90 ದಿನಗಳವರೆಗೆ ಅನುಮತಿ ನೀಡಬಹುದು. ತನಿಖೆಯನ್ನು 180 ದಿನಗಳಲ್ಲಿ ಮುಗಿಸಿ ವಿಚಾರಣೆಗೆ ಕಳುಹಿಸಬೇಕು.

ಇದಲ್ಲದೆ, ಪೊಲೀಸರು 90 ದಿನಗಳಲ್ಲಿ ಪ್ರಕರಣದ ಸ್ಥಿತಿಯನ್ನು ನವೀಕರಿಸಬೇಕಾಗುತ್ತದೆ. ವಿಚಾರಣೆಯ ಅನಂತರ 30 ದಿನಗಳಲ್ಲಿ ತೀರ್ಪು ನೀಡಬೇಕಾಗುತ್ತದೆ. ಒಂದು ವಾರದೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಮೂರು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಗೆ ಒಳಪಡುವ ಪ್ರಕರಣಗಳಿಗೆ ಸಾರಾಂಶ ವಿಚಾರಣೆ ಸಾಕಾಗುತ್ತದೆ. ಇದರಿಂದ ಸೆಷನ್ ಕೋರ್ಟ್‌ಗಳಲ್ಲಿನ ಪ್ರಕರಣಗಳು ಶೇ 40ರಷ್ಟು ಕಡಿಮೆಯಾಗಲಿವೆ. ಶೂನ್ಯ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಸಾಂಸ್ಥಿಕಗೊಳಿಸಲಾಗಿದೆ. ಘಟನೆ ನಡೆದರೂ ಎಲ್ಲಿ ಬೇಕಾದರೂ ಎಫ್‌ಐಆರ್‌ ದಾಖಲಿಸಬಹುದು.

ಸಂತ್ರಸ್ತರ ಮಾಹಿತಿ ಹಕ್ಕನ್ನು ಬಲಪಡಿಸಲಾಗಿದೆ. ಎಫ್‌ಐಆರ್‌ನ ಉಚಿತ ಪ್ರತಿಯನ್ನು ಪಡೆಯುವ ಹಕ್ಕು ಬಲಿಪಶುವಿಗೆ ಇದೆ. 90 ದಿನಗಳಲ್ಲಿ ತನಿಖೆಯ ಸ್ಥಿತಿಯನ್ನು ಸಂತ್ರಸ್ತರಿಗೆ ತಿಳಿಸಲು ಅವಕಾಶವಿದೆ. ಹೊಸ ಸಂಹಿತೆಯು ಕ್ರಿಮಿನಲ್ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ.

ಇದನ್ನೂ ಓದಿ: Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

ಇತರ ನಿಬಂಧನೆಗಳು

ಹೊಸ ಕಾನೂನಿನ ಪ್ರಕಾರ ‘ಆರ್ಥಿಕ ಅಪರಾಧಗಳನ್ನು’ ಹೊರತುಪಡಿಸಿ ಘೋರ ಅಪರಾಧಿಗಳಿಗೆ ಮಾತ್ರ ಕೈಕೋಳವನ್ನು ಬಳಸಲಾಗುವುದು. ಅಂಗವೈಕಲ್ಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಕಾರ್ಯಗಳಿಗೆ ಕಠಿಣ ದಂಡವನ್ನು ಪರಿಚಯಿಸಲಾಗಿದೆ.

ಶಿಕ್ಷೆ ಮನ್ನಾಗೊಳಿಸಲು ಕಾನೂನುಗಳಲ್ಲಿ ಹೊಸ ನಿಬಂಧನೆಯನ್ನು ಮಾಡಲಾಗಿದೆ. ಮರಣದಂಡನೆಗಳನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬಹುದು. ಏಳು ವರ್ಷಗಳ ಒಳಗಿನ ಸೆರೆವಾಸ ಮತ್ತು ಜೀವಾವಧಿ ಶಿಕ್ಷೆಯನ್ನು ಮಾತ್ರ ಕ್ಷಮಿಸಬಹುದು

Continue Reading

ಕ್ರೀಡೆ

IPL 2024 : ಗೆಲುವೊಂದೇ ಗುರಿ; ಅಂಪೈರ್​ಗಳ ಜತೆ ಮತ್ತೆ ವಾಗ್ವಾದ ನಡೆಸಿದ ಕೊಹ್ಲಿ

IPL 2024 : ಈ ಜಗಳಕ್ಕೂ ಕಾರಣವಿದೆ. 12ನೇ ಓವರ್​ನ ಎರಡನೇ ಎಸೆತದಲ್ಲಿ ಲಾಕಿ ಫರ್ಗುಸನ್ ಅವರ ಕೈಯಿಂದ ಚೆಂಡು ಜಾರಿ ಹೋಯಿತು. ಬ್ಯಾಟರ್​ ರಚಿನ್ ರವೀಂದ್ರಗೆ ಸುಲಭವಾಗಿ ಹೊಡೆಯಲು ಸಾಧ್ಯವಾಯಿತು. ಇದು ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್​ಗೆ ಉತ್ತಮವಾಗಿ ಕಾಣಲಿಲ್ಲ. ಇವರಿಬ್ಬರು ಅಂಪೈರ್ ಅಕ್ಷಯ್ ಟೋಟ್ರೆ ಅವರೊಂದಿಗೆ ಮಾತುಕತೆ ನಡೆಸಿದರು.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟ್ಸ್​ಮನ್​ಗಳಾದ ವಿರಾಟ್ ಕೊಹ್ಲಿ (Virat kohli) ಮತ್ತು ಫಾಫ್ ಡು ಪ್ಲೆಸಿಸ್ ಮೈದಾನದಲ್ಲಿ ತಮ್ಮ ಸರ್ವಸ್ವವನ್ನೂ ನೀಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ 68ನೇ ಪಂದ್ಯಕ್ಕೆ ಆತಿಥ್ಯ ವಹಿಸಿದ ವೇಳೆಯೂ ಅವರು ಇದೇ ರೀತಿಯ ವರ್ತನೆ ತೋರಿದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ವೇಳೆ ಅವರು ಅಂಪೈರ್​ಗಳ ಜತೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.

ವಿರಾಟ್ ಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಇಬ್ಬರೂ ಅಂಪೈರ್ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದರು. ನೆಲದ ಮೇಲಿನ ಇಬ್ಬನಿಯಿಂದಾಗಿ ಚೆಂಡು ತುಂಬಾ ಒದ್ದೆಯಾದ ನಂತರ ಇದು ಘಟಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಇಬ್ಬರು ಆಟಗಾರರು ಚೆಂಡನ್ನು ಬದಲಾಯಿಸುವಂತೆ ಅಂಪೈರ್​ಗೆ ಪದೇ ಪದೆ ವಿನಂತಿಸುತ್ತಿದ್ದರು. ಅದಕ್ಕೆ ಅವರು ಒಪ್ಪಲಿಲ್ಲ. ಸಿಟ್ಟಿಗೆದ್ದ ಕೊಹ್ಲಿ ಅದೇ ಚೆಂಡಿನಲ್ಲಿ ಬೌಲಿಂಗ್ ನಡೆಸುವುದು ಹೇಗೆ ಎಂದು ವಾಗ್ವಾದ ನಡೆಸಿದರು.

ಇದನ್ನೂ ಓದಿ: IPL 2024 : ಕ್ಯಾಚ್​ ಆಫ್​​ ದಿ ಸೀಸನ್​, ಫಾಫ್​ ಡು ಪ್ಲೆಸಿಸ್​ ಹಿಡಿದ ಅದ್ಭುತ್​ ಕ್ಯಾಚ್​​ನ ವಿಡಿಯೊ ಇಲ್ಲಿದೆ

ಈ ಜಗಳಕ್ಕೂ ಕಾರಣವಿದೆ. 12ನೇ ಓವರ್​ನ ಎರಡನೇ ಎಸೆತದಲ್ಲಿ ಲಾಕಿ ಫರ್ಗುಸನ್ ಅವರ ಕೈಯಿಂದ ಚೆಂಡು ಜಾರಿ ಹೋಯಿತು. ಬ್ಯಾಟರ್​ ರಚಿನ್ ರವೀಂದ್ರಗೆ ಸುಲಭವಾಗಿ ಹೊಡೆಯಲು ಸಾಧ್ಯವಾಯಿತು. ಇದು ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್​ಗೆ ಉತ್ತಮವಾಗಿ ಕಾಣಲಿಲ್ಲ. ಇವರಿಬ್ಬರು ಅಂಪೈರ್ ಅಕ್ಷಯ್ ಟೋಟ್ರೆ ಅವರೊಂದಿಗೆ ಮಾತುಕತೆ ನಡೆಸಿದರು. ಜಾರುವ ಚೆಂಡನ್ನು ಬದಲಾಯಿಸದಿರುವ ಅವರ ನಿರ್ಧಾರದ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. ಎಷ್ಟೇ ಹೇಳಿದರೂ ಅವರು ಚೆಂಡು ಬದಲಾಯಿಸಲಿಲ್ಲ.

ಡ್ಯಾರಿಲ್​ ಮಿಚೆಲ್ ಕ್ಯಾಚ್ ಹಿಡಿದ ಬಳಿಕ ಕೊಹ್ಲಿಯ ಆಕ್ರಮಣಕಾರಿ ಸಂಭ್ರಮ ಹೀಗಿತ್ತು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024)ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉಭಯ ತಂಡಗಳ ನಡುವಿನ 69ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (Virat kohli) ತಮ್ಮ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಂತೆಯೇ ಸಿಎಸ್​ಕೆ ಬ್ಯಾಟರ್​ಗಳು ಔಟಾಗುತ್ತಿದ್ದಂತೆ ಅವರ ಅಬ್ಬರವೂ ಜೋರಾಗಿತ್ತು.

ಡ್ಯಾರಿಲ್ ಮಿಚೆಲ್ ಕ್ಯಾಚ್ ಪಡೆದ ನಂತರ ವಿರಾಟ್ ಕೊಹ್ಲಿ ಆಕ್ರಮಣಕಾರಿ ಸಂಭ್ರಮವನ್ನು ಆಚರಿಸಿದರು. ಮೂರನೇ ಯಶ್ ದಯಾಳ್ ಎಸೆತದ ತಮ್ಮ ಓವರ್​ನ ಎರಡನೇ ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ದೊಡ್ಡ ಹೊಡೆತ ಹೊಡೆದರು. ಚೆಂಡು ಗಾಳಿಯಲ್ಲಿ ಹಾರಿತು. ಅಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ವೇಗವಾಗಿ ಓಡಿ ಸುರಕ್ಷಿತ ಕ್ಯಾಚ್ ಪಡೆದರು. ಬಳಿಕ ಜೋರಾಗಿ ಕಿರುಚಿದರು. ಆದರೆ, ಅನೇಕರ ಗಮನ ಸೆಳೆದದ್ದು ಕೊಹ್ಲಿಯ ಸಂಭ್ರಮಾಚರಣೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್​ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ವಿಕೆಟ್ ಪಡೆದಾಗ ಬಾಲಿವುಡ್ ನಟಿ ತನ್ನ ಸೀಟಿನಲ್ಲಿ ಎದ್ದು ನಿಂತು ಸಂತೋಷ ವ್ಯಕ್ತಪಡಿಸಿದ್ದು ಕೂಡ ಕ್ಯಾಮೆರಾ ಕಣ್ಣಿಗೆ ಬಿತ್ತು. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ವಿಕೆಟ್ ಪಡೆದಾಗ ಬಾಲಿವುಡ್ ನಟಿ ತನ್ನ ಸೀಟಿನಲ್ಲಿ ಎದ್ದು ನಿಂತು ಸಂತೋಷ ವ್ಯಕ್ತಪಡಿಸಿದರು.

Continue Reading
Advertisement
Kannada New Movie Hondisi Bareyiri in youtube
ಸಿನಿಮಾ4 mins ago

Kannada New Movie: ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದು ʻಹೊಂದಿಸಿ ಬರೆಯಿರಿʼ; ಆದರೆ ಇರಲಿದೆ ಬ್ಯಾಂಕ್ ಡಿಟೇಲ್ಸ್‌!

Prajwal should appear before SIT and face probe says Nikhil Kumaraswamy
ಕರ್ನಾಟಕ12 mins ago

Nikhil Kumaraswamy: ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್‌ ಕುಮಾರಸ್ವಾಮಿ

Karnataka Rain
ಮಳೆ14 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Survival Story
ವಿದೇಶ25 mins ago

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Lok Sabha Election 2024
ದೇಶ26 mins ago

Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ49 mins ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Prajwal Revanna Case Shivarame Gowdas Deve Gowda suicide statement says Nikhil Kumaraswamy
ರಾಜಕೀಯ52 mins ago

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

murder case in Belgavi
ಬೆಳಗಾವಿ1 hour ago

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

rave party telugu actress hema
ಕ್ರೈಂ1 hour ago

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

Payal Rajput Accuses Rakshana Producers Of Not Clearing Her Dues
ಟಾಲಿವುಡ್1 hour ago

Payal Rajput: ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ14 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ22 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ23 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌