IND VS NZ | ಸೂರ್ಯಕುಮಾರ್​ ಸೂಪರ್​ ಶತಕ; ನ್ಯೂಜಿಲ್ಯಾಂಡ್​ ಗೆಲುವಿಗೆ 192 ರನ್​ ಸವಾಲು - Vistara News

Latest

IND VS NZ | ಸೂರ್ಯಕುಮಾರ್​ ಸೂಪರ್​ ಶತಕ; ನ್ಯೂಜಿಲ್ಯಾಂಡ್​ ಗೆಲುವಿಗೆ 192 ರನ್​ ಸವಾಲು

ನ್ಯೂಜಿಲ್ಯಾಂಡ್​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ಗೆ 191 ರನ್​ ಗಳಿಸಿದೆ. ಕಿವೀಸ್​ ಗೆಲುವಿಗೆ 192 ರನ್​ ಬಾರಿಸಬೇಕಿದೆ.

VISTARANEWS.COM


on

New Zealand vs India, 2nd T20I
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೌಂಟ್ ಮೌಂಗನಿ: ಸೂರ್ಯಕುಮಾರ್​ ಯಾದವ್​ (111 *) ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್​ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ 191 ರನ್​ ಗಳಿಸಿದೆ. ನ್ಯೂಜಿಲ್ಯಾಂಡ್​ ತಂಡ ಗೆಲುವಿಗೆ 192 ರನ್ ಬಾರಿಸಬೇಕಿದೆ.

​ಮೌಂಟ್​ ಮೌಂಗನಿ ಬೇ ಓವಲ್ ಸ್ಟೇಡಿಯಂನಲ್ಲಿ ಭಾನುವಾರದ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 191 ರನ್​ ಗಳಿಸಿದೆ. ಭಾರತ ಪರ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್​ ಯಾದವ್​ ಕಿವೀಸ್​ ಬೌಲರ್​ಗಳ ಮೇಲೆರಗಿ ಸಿಕ್ಸರ್​, ಫೋರ್​ಗಳ ಸುರಿಮಳೆಗೈದ ಕಾರಣ ತಂಡ ಬೃಹತ್​ ಮೊತ್ತ ಕಲೆಹಾಕಿತು. ಸೂರ್ಯಕುಮಾರ್​ 51 ಎಸೆತಗಳಿಂದ ಅಜೇಯ 111 ರನ್​ ಬಾರಿಸಿ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಈ ಮನಮೋಹಕ ಇನಿಂಗ್ಸ್​ ವೇಳೆ 7 ಸಿಕ್ಸರ್​ ಮತ್ತು 11 ಬೌಂಡರಿ ದಾಖಲಾಯಿತು. ಉಳಿದಂತೆ ಆರಂಭಿಕ ಆಟಗಾರ ಇಶಾನ್​ ಕಿಶಾನ್ 36 ರನ್​ ಗಳಿಸಿದರು.

ಮತ್ತೆ ಎಡವಿದ ರಿಷಭ್​ ಪಂತ್​

ಯುವ ಆಟಗಾರ ರಿಷಭ್​ ಪಂತ್​ ಈ ಪಂದ್ಯದಲ್ಲಿ ಬ್ಯಾಟಿಂಗ್​ ಕ್ರಮಾಂಕದಲ್ಲಿ ಭಡ್ತಿ ಪಡೆದು ಆರಂಭಿಕನಾಗಿ ಆಡಲಿಳಿದರು. ಆದರೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿ ಮತ್ತೆ ನಿರಾಸೆ ಮೂಡಿಸಿದರು. 13 ಎಸೆತ ಎದುರಿಸಿದ ಅವರು ಕೇವಲ 6 ರನ್​ ಗಳಿಸಿ ಲಾಕಿ ಫರ್ಗ್ಯುಸನ್​ಗೆ ವಿಕೆಟ್​ ಒಪ್ಪಿಸಿದರು. ಕಳೆದ ವಿಶ್ವ ಕಪ್​ ಪಂದ್ಯದ ವೇಳೆಯೂ ಇದೇ ರೀತಿಯ ವೈಫಲ್ಯ ಕಂಡಿದ್ದರು. ವಿಶ್ವ ಕಪ್​ನಲ್ಲಿ ಮೀಸಲು ಆಟಗಾರನಾಗಿದ್ದ ಶ್ರೇಯಸ್​ ಅಯ್ಯರ್ ಕೂಡ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಉಳಿದಂತೆ ಹಾರ್ದಿಕ್​ ಪಾಂಡ್ಯ ಕೂಡ ನಾಯಕನ ಆಟವಾಡುವಲ್ಲಿ ಯಶಸ್ಸು ಗಳಿಸಲಿಲ್ಲ. ಉಭಯ ಆಟಗಾರರ ಗಳಿಕೆ 13ರನ್​ಗೆ ಅಂತ್ಯ ಕಂಡಿತು.

ಸೌಥಿ ಹ್ಯಾಟ್ರಿಕ್​ ಸಾಧನೆ

ನ್ಯೂಜಿಲೆಂಡ್​ ತಂಡದ ಹಿರಿಯ ಅನುಭವಿ ಬೌಲರ್​ ಟಿಮ್​ ಸೌಥಿ ಪಂದ್ಯದ ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಿತ್ತು ಮಿಂಚಿದರು. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದು ಟಿ20 ಕ್ರಿಕೆಟ್​ನಲ್ಲಿ ಎರಡನೇ ಹ್ಯಾಟ್ರಿಕ್ ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಮತ್ತೊಬ್ಬ ಆಟಗಾರನೆಂದರೆ ಶ್ರೀಲಂಕಾದ ಲಸಿತ್ ಮಾಲಿಂಗ.

ಸಂಕ್ಷಿಪ್ತ ಸ್ಕೋರ್​: ಭಾರತ 20 ಓವರ್​ಗಳಲ್ಲಿ 6 ವಿಕೆಟ್​ಗೆ 191 (ಸೂರ್ಯಕುಮಾರ್​ ಯಾದವ್​ ಅಜೇಯ 111, ಇಶಾನ್​ ಕಿಶಾನ್​ 36, ಟಿಮ್​ ಸೌಥಿ 34ಕ್ಕೆ 3).

ಇದನ್ನೂ ಓದಿ | IND VS NZ | ಟಾಸ್​ ಗೆದ್ದ ನ್ಯೂಜಿಲ್ಯಾಂಡ್​; ಭಾರತಕ್ಕೆ ಬ್ಯಾಟಿಂಗ್​ ಆಹ್ವಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

IPL 2024 : ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು.

VISTARANEWS.COM


on

IPL 2024
Koo

ಬೆಂಗಳೂರು: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) 53 ನೇ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಸ್ಯಾಮ್ ಕರ್ರನ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 28 ರನ್​ಗಳ ಗೆಲವು ಸಾಧಿಸಿದೆ. ಅದರ ಹೊರತಾಗಿಯೂ ಸಿಎಸ್​ಕೆ ತಂಡದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಿವೆ ಎಂಬುದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.

ಗಾಯಕ್ವಾಡ್ ಟಾಸ್ ಸೋತರು. ಸಿಎಸ್​​ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡದ ಕಾರಣ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ರವೀಂದ್ರ ಜಡೇಜಾ (43) ಗರಿಷ್ಠ ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ ಮತ್ತು ಡ್ಯಾರಿಲ್ ಮಿಚೆಲ್ 30 ರನ್ ಗಳಿಸಿದರು. ರವೀಂದ್ರ ಜಡೇಜಾ 20 ರನ್ ನೀಡಿ 3 ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಸ್ಯಾಂಟ್ನರ್​ ತಲಾ ಒಂದು ವಿಕೆಟ್ ಪಡೆದರು.

ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್​ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು. ಸಿಮರ್ಜೀತ್ ಸಿಂಗ್ ಬಗ್ಗೆ ಮಾತನಾಡಿದ ಋತುರಾಜ್ ಗಾಯಕ್ವಾಡ್, ವೇಗಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರನ್ನು ಪರಿಚಯಿಸಲು ತಡ ಮಾಡಿಲ್ಲ ಎಂದ ಹೇಳಿದರ.

ತಂಡದಲ್ಲಿದೆ ಸಮಸ್ಯೆ

ನಮ್ಮ ತಂಡದಲ್ಲಿ ಸಮಸ್ಯೆಯಿದೆ. ಆಟಗಾರರು ಜ್ವರದಿಂದ ಬಳಲುತ್ತಿದ್ದಾರೆ. ಯಾರು ಆಡುತ್ತಿದ್ದಾರೆ ಅಥವಾ ಇಲ್ಲ ಎಂದು ಬೆಳಿಗ್ಗೆಯವರೆಗೆ ಖಚಿತವಾಗಿರಲಿಲ್ಲ. ಹೀಗಾಗಿ ಗೆಲುವು ನಿಜವಾಗಿಯೂ ಸಂತೋಷ ಕೊಟ್ಟಿದೆ ಎಂದು ಹೇಳದಿರು.

ಐದು ಸೋಲುಗಳನ್ನು ಕಂಡಿದ್ದ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ದಾಖಲೆಯನ್ನು ಹೊಂದಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿರುವ ಸಿಎಸ್​ಕೆ ತಂಡ ಪಿಬಿಕೆಎಸ್ ವಿರುದ್ಧ 15-14 ಗೆಲುವಿನ ಅಂತರದ ಮುನ್ನಡೆ ಹೊಂದಿದೆ. ಆದಾಗ್ಯೂ, ಹಿಂದಿನ ಐದು ಪಂದ್ಯಗಳಲ್ಲಿ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಏಕೆಂದರೆ ಅವರು ಆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

ಐಪಿಎಲ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸತತ ಐದು ಪಂದ್ಯಗಳಲ್ಲಿ ಸೋಲಿಸಿವೆ, ಮೊದಲ ತಂಡ ಮುಂಬೈ ಇಂಡಿಯನ್ಸ್ ಮತ್ತು ಇನ್ನೊಂದು ತಂಡ ಪಂಜಾಬ್ ಕಿಂಗ್ಸ್, ಇದು 2021 ರಲ್ಲಿ ತಮ್ಮ ಗೆಲುವಿನ ಸರಣಿಯನ್ನು ಪ್ರಾರಂಭಿಸಿತು ಮತ್ತು ಮೇ 1 ರ ಬುಧವಾರ ಚೆಪಾಕ್​​ನಲ್ಲಿ ಸಿಎಸ್ಕೆ ವಿರುದ್ಧ ಏಳು ವಿಕೆಟ್​​ಗಳಿಂದ ಸೋಲಿಸುವ ಮೂಲಕ ಮುಂಬೈ ದಾಖಲೆ ಸರಿಗಟ್ಟಿತು.

ಅಕ್ಟೋಬರ್ 7, 2021 ರಂದು, ಪಿಬಿಕೆಎಸ್ 42 ಎಸೆತಗಳು ಬಾಕಿ ಇರುವಾಗ 6 ವಿಕೆಟ್​​ಗಳಿಂದ ಗೆದ್ದಿತು ಮತ್ತು ಐಪಿಎಲ್ 2022ರಲ್ಲಿ ಕ್ರಮವಾಗಿ 54 ಮತ್ತು 11 ರನ್​ಗಳಿಂದ ಸತತ ಗೆಲುವುಗಳನ್ನು ದಾಖಲಿಸಿತು. ಐಪಿಎಲ್ 2023 ರಲ್ಲಿ, ಅವರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು ಏಪ್ರಿಲ್ 30 ರಂದು ನಡೆದ ಪಂದ್ಯವನ್ನು ಪಿಬಿಕೆಎಸ್ 4 ವಿಕೆಟ್​​ಗಳಿಂದ ಗೆದ್ದಿತು.

ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಂದ್ಯದ ಮುಕ್ತಾಯದ ನಂತರ, ಸಿಎಸ್​ಕೆ ಪರವಾಗಿ 16-14 ಅಂತರದ ದಾಖಲೆ ಹೊಂದಿದೆ.

Continue Reading

ದೇಶ

Air India: ವಿಮಾನ ಪ್ರಯಾಣಿಕರೇ ಗಮನಿಸಿ, ಚೆಕ್-ಇನ್ ಬ್ಯಾಗೇಜ್ ಭಾರದ ಮಿತಿ ಇಳಿಕೆ!

ಏರ್ ಇಂಡಿಯಾವು ದೇಶೀಯ ವಿಮಾನಗಳಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ (Air India) ಮಾಡಲಾಗಿದೆ. ಮೇ 2ರಿಂದಲೇ ಈ ಹೊಸ ನೀತಿ ಜಾರಿಯಾಗಿದೆ.

VISTARANEWS.COM


on

By

Air India
Koo

ವಿಮಾನ ಪ್ರಯಾಣದ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಗಮನಿಸಿ. ಏರ್ ಇಂಡಿಯಾವು (Air India) ದೇಶೀಯ ವಿಮಾನಗಳಲ್ಲಿ (domestic flights) ಲಗೇಜ್ ಭಾರವನ್ನು (check-in baggage) 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಿದೆ. ಇನ್ನು ಮುಂದೆ 15 ಕೆ.ಜಿ.ಗಿಂತ ಹೆಚ್ಚು ಸಾಮಗ್ರಿ ಒಯ್ಯುವುದಾದರೆ ಅದಕ್ಕೆ ಶುಲ್ಕ ಪಾವತಿ ಮಾಡಲೇಬೇಕು.


ದೇಶೀಯ ವಿಮಾನಗಳಲ್ಲಿ ಕಡಿಮೆ ಆರ್ಥಿಕ ದರದ ವಿಭಾಗದಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಟಾಟಾ ಗ್ರೂಪ್ (Tata Group) ಮಾಲೀಕತ್ವದ ಏರ್ ಇಂಡಿಯಾ ಪರಿಚಯಿಸಿದ ಮೆನು-ಆಧಾರಿತ ಬೆಲೆ ಮಾದರಿಯ ದರದ ಭಾಗವಾಗಿ ಈ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಈ ಮೊದಲು ಏರ್ ಇಂಡಿಯಾದ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 25 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ಸಾಗಿಸಲು ಅನುಮತಿಸಲಾಗಿತ್ತು. ಆದರೆ ಇತರ ದೇಶೀಯ ವಾಹಕಗಳಾದ ಇಂಡಿಗೊ, ವಿಸ್ತಾರಾ ಮತ್ತು ಸ್ಪೈಸ್ ಜೆಟ್ 15 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ನೀಡುತ್ತವೆ. ಬಳಿಕ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ.

ಹೇಗಿದೆ?

ಚೆಕ್-ಇನ್ ಬ್ಯಾಗೇಜ್ ನಲ್ಲಿ ಮೂರು ದರದ ಗುಂಪುಗಳಿವೆ. ಒಂದು ಕಂಫರ್ಟ್, ಎರಡನೆದ್ದು ಕಂಫರ್ಟ್ ಪ್ಲಸ್ ಮತ್ತು ಮೂರನೆಯದ್ದು ಫ್ಲೆಕ್ಸ್ . ಈ ಮೂರು ವಿಭಾಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವುದಾಗಿ ಏರ್ ಇಂಡಿಯಾ ವಕ್ತಾರರು ಶನಿವಾರ ತಿಳಿಸಿದ್ದಾರೆ. ವಿವಿಧ ಬೆಲೆಗಳಲ್ಲಿ ವಿಭಿನ್ನ ಮಟ್ಟದ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಈಗಾಗಲೇ ಜಾರಿ

ಚೆಕ್-ಇನ್ ಬ್ಯಾಗೇಜ್ ಮಿತಿಯನ್ನು ಮೇ 2ರಿಂದ ಈ ಜಾರಿಗೆ ಬರುವಂತೆ ಕ್ರಮಕೈಗೊಳ್ಳಲಾಗಿದೆ. ಏರ್‌ಲೈನ್ಸ್ ಹೇಳಿಕೆಯ ಪ್ರಕಾರ, ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ವರ್ಗಗಳಿಗೆ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು ಕ್ರಮವಾಗಿ 20 ಮತ್ತು 25 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಸಲಾಗಿದೆ.

ಬದಲಾವಣೆ

ಎಕಾನಮಿ ಕ್ಲಾಸ್‌ನಲ್ಲಿ ದೇಶೀಯ ಮಾರ್ಗಗಳಲ್ಲಿ ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ದರಗಳು ಈಗ 15 ಕೆ.ಜಿ. ಲಗೇಜ್ ಭತ್ಯೆಯನ್ನು ನೀಡುತ್ತವೆ. ಆದರೆ ಫ್ಲೆಕ್ಸ್ 25 ಕೆ.ಜಿ.ವರೆಗೆ ಭತ್ಯೆಯನ್ನು ಒದಗಿಸುತ್ತದೆ. ದೇಶೀಯ ಮಾರ್ಗಗಳಲ್ಲಿ ವ್ಯಾಪಾರ ವರ್ಗದ ಬ್ಯಾಗೇಜ್ ಭತ್ಯೆ 25 ಕೆ.ಜಿ.ಯಿಂದ 35 ಕೆ.ಜಿ. ವರೆಗೆ ಇರುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಉಚಿತ ಲಗೇಜ್ ಭತ್ಯೆಯು ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ವೈವಿಧ್ಯಮಯ ಆದ್ಯತೆಗಳನ್ನು ಪರಿಗಣಿಸಿ,ಅವಶ್ಯಕತೆಗಳಿಗೆ ಸೂಕ್ತವಾದ ದರ ಮತ್ತು ಸೇವೆಗಳನ್ನು ಆಯ್ಕೆ ಮಾಡಲು ಪ್ರಯಾಣಿಕರಿಗೆ ಅವಕಾಶ ನೀಡಲು ಶುಲ್ಕದಲ್ಲಿ ವ್ಯತ್ಯಾಸಗಳನ್ನು ಮಾಡಲಾಗಿದೆ ಎಂದು ಏರ್ ಲೈನ್ಸ್ ತಿಳಿಸಿದೆ.

ಇದನ್ನೂ ಓದಿ: Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

ಹೇಗಿದೆ ದರ?

ಕಂಫರ್ಟ್ ಪ್ಲಸ್ ಮತ್ತು ಫ್ಲೆಕ್ಸ್ ದರಗಳ ನಡುವಿನ ಬೆಲೆ ವ್ಯತ್ಯಾಸವು ದೆಹಲಿ- ಮುಂಬಯಿನಂತಹ ದೇಶೀಯ ವಲಯದಲ್ಲಿ ಸಾಮಾನ್ಯವಾಗಿ 1,000 ರೂ. ಆಗಿರುತ್ತದೆ. 10 ಕೆ.ಜಿ. ಹೆಚ್ಚುವರಿ ಬ್ಯಾಗೇಜ್ ಮತ್ತು ಶೂನ್ಯ ಬದಲಾವಣೆ ಅಥವಾ ರದ್ದತಿ ಶುಲ್ಕ ಸೇರಿದಂತೆ 9,000 ರೂ.ವರೆಗೆ ಇರುತ್ತದೆ. ಗ್ರಾಹಕರ ಅಭಿಪ್ರಾಯವನ್ನು ಪಡೆದೇ ಈ ದರವನ್ನು ನಿಗದಿ ಪಡಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

Continue Reading

ಕ್ರೈಂ

Viral News: ವಿಮಾನ ಪ್ರಯಾಣಿಕನ ಜೇಬಿನಲ್ಲಿತ್ತು ಎರಡು ಹಾವು!

ಪ್ರಯಾಣಿಕನೊಬ್ಬನ ಪ್ಯಾಂಟ್ ಕಿಸೆಯಲ್ಲಿದ್ದ ಎರಡು ಹಾವುಗಳನ್ನು ಫ್ಲೋರಿಡಾದ ಮಿಯಾಮಿಯ ವಿಮಾನ ನಿಲ್ದಾಣದಲ್ಲಿ (Viral News) ಭದ್ರತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

VISTARANEWS.COM


on

By

Viral News
Koo

ಮಿಯಾಮಿ: ಪ್ರಯಾಣಿಕನೊಬ್ಬ ಪ್ಯಾಂಟ್‌ ಜೇಬಿನಲ್ಲಿ (Viral News) ಹಾವುಗಳನ್ನು (Snakes In Pant) ಸಾಗಿಸುತ್ತಿದ್ದ ಘಟನೆ ಫ್ಲೋರಿಡಾದ (Florida ) ಮಿಯಾಮಿಯ ವಿಮಾನ ನಿಲ್ದಾಣದಲ್ಲಿ (Miami Airport) ಬೆಳಕಿಗೆ ಬಂದಿದೆ. ಭದ್ರತಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ಪ್ಯಾಂಟ್‌ನ ಜೇಬಿನಲ್ಲಿ ಹಾವುಗಳನ್ನು ಇಟ್ಟಿರುವುದನ್ನು ಪತ್ತೆ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭದ್ರತಾ ಅಧಿಕಾರಿಗಳು, ಏಪ್ರಿಲ್ 26ರಂದು ಚೆಕ್‌ಪಾಯಿಂಟ್‌ನಲ್ಲಿ ಪ್ರಯಾಣಿಕನೊಬ್ಬ ಪ್ಯಾಂಟ್‌ನಲ್ಲಿ ಹಾವುಗಳನ್ನು ಸಣ್ಣ ಚೀಲದಲ್ಲಿ ಇಟ್ಟು ಸಾಗಿಸುತ್ತಿರುವುದನ್ನು ಪತ್ತೆ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಸನ್‌ಗ್ಲಾಸ್ ಬ್ಯಾಗ್‌ನಲ್ಲಿ ಎರಡು ಸಣ್ಣ ಹಾವುಗಳನ್ನು ಪತ್ತೆ ಹಚ್ಚಿರುವ ಸಾರಿಗೆ ಭದ್ರತಾ ಆಡಳಿತದ (ಟಿಎಸ್‌ಎ) ವಕ್ತಾರರು ಹಾವುಗಳನ್ನು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗಕ್ಕೆ ಒಪ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಯಾಣಿಕನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ನಿಂತಿದ್ದಾಗ ಎಚ್ಚರಿಕೆ ಸದ್ದು ಕೇಳಿದಾಗ ಆತನೇ ತನ್ನ ಪ್ಯಾಂಟ್‌ನಲ್ಲಿ ಹಾವುಗಳಿವೆ ಎಂದು ಒಪ್ಪಿಕೊಂಡಿದ್ದಾನೆ. ಆತ ತನ್ನ ಚೀಲದಲ್ಲಿ ಈ ಹಾವುಗಳನ್ನು ಏಕೆ ಸಾಗಿಸುತ್ತಿದ್ದ ಎಂಬುದು ತಿಳಿದು ಬಂದಿಲ್ಲ. ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ.



ಬೇಬಿ ಡೈಪರ್ ನಲ್ಲಿತ್ತು ಗುಂಡು

ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಲಕ್ಷಣ ಘಟನೆ ನಡೆದಿದೆ. ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಬಿಸಾಡಬಹುದಾದ ಬೇಬಿ ಡೈಪರ್‌ನಲ್ಲಿ 17 ಗುಂಡುಗಳನ್ನು ಬಚ್ಚಿಟ್ಟಿರುವುದನ್ನು ಭದ್ರತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ವಿಮಾನ ನಿಲ್ದಾಣದ ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಎಕ್ಸ್-ರೇ ಯಂತ್ರದಲ್ಲಿ ಎಚ್ಚರಿಕೆ ಬಂದಿದ್ದರಿಂದ ಅಧಿಕಾರಿಗಳು ಪ್ರಯಾಣಿಕರ ಕ್ಯಾರಿ-ಆನ್ ಬ್ಯಾಗ್‌ನಿಂದ ಕ್ಲೀನ್ ಡೈಪರ್ ಅನ್ನು ತೆಗೆದು ನೋಡಿದಾಗ ಅದರಲ್ಲಿ ಬುಲೆಟ್ ತುಂಬಿದ ಡಯಾಪರ್ ಕಂಡು ಬಂದಿತ್ತು.

ಈ ಬಗ್ಗೆ ಪ್ರಯಾಣಿಕನನ್ನು ವಿಚಾರಿಸಿದಾಗ ತನಗೆ ಇದು ಗೊತ್ತೇ ಇಲ್ಲ ಎಂದು ಹೇಳಿದ್ದ. ತನ್ನ ಗೆಳತಿ ಅದನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದಳು ಎಂದು ತಿಳಿಸಿದ್ದ ಎನ್ನಲಾಗಿದೆ.

ಬೆಂಗಳೂರಿನಲ್ಲೂ ಪತ್ತೆಯಾಗಿತ್ತು

ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಥಾಯ್ಲೆಂಡ್‌ನಿಂದ ಬಂದ ವ್ಯಕ್ತಿಯ ಬ್ಯಾಗ್‌ನಲ್ಲಿ 17 ಅತಿ ವಿಷಕಾರಿ ಕಾಳಿಂಗ ಸರ್ಪ , 55 ಚೆಂಡು ಹೆಬ್ಬಾವು ಮತ್ತು ಆರು ಕಾಪುಚಿನ್‌ ಕೋತಿ ಮರಿಗಳನ್ನು ಪತ್ತೆಯಾಗಿತ್ತು.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಏರ್ ಏಷಿಯಾ ವಿಮಾನದಲ್ಲಿ ಟರ್ಮಿನಲ್ 1ರಲ್ಲಿ ಬಂದಿಳಿದಿದ್ದ ವಿಮಾನದಿಂದ ಇಳಿದ ಪ್ರಯಾಣಿಕರ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾಗ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದು ಕಂಡುಬಂದಿತ್ತು.

ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

ಕೂಡಲೇ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನ ಚೆಕ್‌ ಇನ್‌ ಲಗೇಜನ್ನು ಸ್ಕ್ಯಾನ್‌ ಮಾಡಿದರು. ಅದರಲ್ಲಿ ಹಾವು, ಕೋತಿಗಳು ಇರುವುದು ಕಂಡುಬಂತು. ಬಳಿಕ ಅವನನ್ನು ತಡೆ ಹಿಡಿದು ಹೆಚ್ಚಿನ ತಪಾಸಣೆ ನಡೆಸಿದಾಗ ಆತನ ಬಳಿ ವಿಷಕಾರಿ ಕಾಳಿಂಗ ಸರ್ಪ, ಹೆಬ್ಬಾವು ಮತ್ತು ಕೋತಿ ಮರಿಗಳನ್ನು ತಂದಿರುವುದು ಪತ್ತೆಯಾಗಿತ್ತು.

ಹಾವು ಮತ್ತು ಕೋತಿಯನ್ನು ತಂದಿರುವ ವ್ಯಕ್ತಿ ತಮಿಳುನಾಡಿನವನು ಎಂದು ತಿಳಿದು ಬಂದಿತ್ತು. ವನ್ಯ ಜೀವಿ ಕಳ್ಳಸಾಗಣೆದಾರ ಎಂದು ಗುರುತಿಸಿ ಆತನನ್ನು ಬಂಧಿಸಿ 1962ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110ರ ಅಡಿಯಲ್ಲಿಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Continue Reading

ತಂತ್ರಜ್ಞಾನ

Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಸ್ತೆಗಳನ್ನು ಸರಿಪಡಿಸಲು ಮತ್ತು ಗುಂಡಿಮುಚ್ಚಲು ಗಳಿಂದ ರಸ್ತೆಗೆ ಮುಕ್ತಿ ಕೊಡಲು ಹೊಸ ತಂತ್ರಜ್ಞಾನವನ್ನು (Self-Healing Roads) ಅಳವಡಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸಿದೆ. ಇದು ಯಶಸ್ವಿಯಾದರೆ ಭಾರತದ ರಸ್ತೆ ಪ್ರಯಾಣದಲ್ಲಿ ಕ್ರಾಂತಿ ಉಂಟಾಗಲಿದೆ.

VISTARANEWS.COM


on

By

Self-Healing Roads
Koo

ಭಾರತದಲ್ಲಿ (india) ಕೆಲವು ರಸ್ತೆ (road) ಪ್ರವಾಸ ಸಾಮಾನ್ಯವಾಗಿ ಪ್ರಯಾಸಕರ ಎಂಬುದು ಎಲ್ಲರ ಅಭಿಪ್ರಾಯ. ಇದಕ್ಕೆ ಮುಖ್ಯ ಕಾರಣ ರಸ್ತೆಯಲ್ಲಿರುವ ಹೊಂಡ ಗುಂಡಿಗಳು, ಉಬ್ಬು ತಗ್ಗುಗಳು. ಭಾರತದ ರಸ್ತೆಗಳಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ, (social media) ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಅಲ್ಲದೇ ಅವುಗಳ ಕುರಿತು ಸಾವಿರಾರು ಜೋಕ್‌ಗಳು ಹರಿದಾಡುತ್ತಿರುತ್ತದೆ. ಆದರೆ ಇದಕ್ಕೆ ಈಗ ಪರಿಹಾರ (SSelf-Healing Roads) ಸಿಕ್ಕಿದೆ.


ಈವರೆಗೆ ರಸ್ತೆಯ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ನಿಟ್ಟಿನಲ್ಲಿ ಒಂದು ಭರವಸೆ ಹುಟ್ಟಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಸ್ತೆಗಳನ್ನು ಸರಿಪಡಿಸಲು ಮತ್ತು ಗುಂಡಿಮುಚ್ಚಲು ಗಳಿಂದ ರಸ್ತೆಗೆ ಮುಕ್ತಿ ಕೊಡಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸಿದೆ. ಇದು ಯಶಸ್ವಿಯಾದರೆ ಭಾರತದ ರಸ್ತೆ ಪ್ರಯಾಣದಲ್ಲಿ ಕ್ರಾಂತಿ ಉಂಟಾಗಲಿದೆ.

ರಸ್ತೆಗಳ ಸ್ವಯಂ ರಕ್ಷಣೆ

ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಜಾಲದ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶದಲ್ಲಿ ನಿರಂತರವಾದ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಸ್ವಯಂ-ಗುಣಪಡಿಸುವ ಡಾಂಬರು ಅಳವಡಿಸಿಕೊಳ್ಳಲು ಮುಂದಾಗಿದೆ.

ಯಾವ ರೀತಿ?

ರಸ್ತೆಗಳ ಬಾಳಿಕೆಯನ್ನು ಸುಧಾರಿಸಲು ಮತ್ತು ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಅತ್ಯಧುನಿಕ ತಂತ್ರಜ್ಞಾನ ವಿಧಾನಗಳನ್ನು ಪರಿಗಣಿಸುತ್ತಿದ್ದೇವೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವೆಚ್ಚ ಪ್ರಯೋಜನ ವಿಶ್ಲೇಷಣೆ ನಡೆಸಿದ ಬಳಿಕವೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಇದು ರಸ್ತೆಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ರಸ್ತೆ ನಿರ್ವಹಣೆಯ ಅಗತ್ಯವನ್ನು ಪ್ರಾಯೋಗಿಕವಾಗಿ ನಿವಾರಿಸುತ್ತದೆ. ಸಂಚಾರ ಅಡಚಣೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೇಗೆ?

ರಸ್ತೆಗಳ ಗುಂಡಿ ನಿರ್ವಹಣೆಗೆ ಹಾಕುವ ಸ್ವಯಂ ರಕ್ಷಣೆ ಕಾರ್ಯವನ್ನು ಆಸ್ಫಾಲ್ಟ್ ಮಾಡುತ್ತದೆ. ಇದು ಡಾಂಬರು ರಸ್ತೆಯನ್ನು ರೂಪಿಸುವ ಪ್ರಮುಖ ಸಂಯುಕ್ತಗಳಲ್ಲಿ ಒಂದಾಗಿದೆ. ಇದು ನೈಸರ್ಗಿಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಸ್ಮಾರ್ಟ್ ಆಸ್ಫಾಲ್ಟ್ ಎಂದೂ ಕರೆಯಲಾಗುತ್ತದೆ ಮತ್ತು ಇದು ರಸ್ತೆ ದುರಸ್ತಿ ಜಗತ್ತಿನಲ್ಲಿ ಹೆಚ್ಚು ಖ್ಯಾತಿ ಪಡೆಯುತ್ತಿದೆ.

ಯಾವ ರೀತಿ?

ಸ್ಮಾರ್ಟ್ ಆಸ್ಫಾಲ್ಟ್ ಉಕ್ಕಿನ ಫೈಬರ್ ಗಳು ಮತ್ತು ಎಪಾಕ್ಸಿ ಕ್ಯಾಪ್ಸುಲ್ ಗಳಿಂದ ತುಂಬಿದೆ. ಇದು ಸಣ್ಣ ಬಿರುಕುಗಳನ್ನು ಸರಿಪಡಿಸುತ್ತದೆ ಮತ್ತು ನೀರಿನ ಒಳನುಸುಳುವಿಕೆಯನ್ನು ತಡೆಯುತ್ತದೆ. ಇಂಡಕ್ಷನ್ ಯಂತ್ರವನ್ನು ಬಳಸಿಕೊಂಡು ರಸ್ತೆಯಲ್ಲಿ ಅಳವಡಿಸುವ ಉಕ್ಕಿಗೆ ಶಾಖವನ್ನು ಸೆಳೆಯುವಂತೆ ಮಾಡಿ ಇದನ್ನು ಮಾಡಲಾಗುತ್ತದೆ. ಇದರಿಂದ ಆಸ್ಫಾಲ್ಟ್ ನೊಂದಿಗೆ ಮಾರ್ಟರ್ ಕರಗಲು ಮತ್ತು ಸ್ವತಃ ದುರಸ್ತಿ ಮಾಡಲು ಪ್ರಾರಂಭಿಸುತ್ತದೆ.

ಯಾರು ಕಂಡು ಹಿಡಿದಿರುವುದು?

ಈ ತಂತ್ರಜ್ಞಾನವನ್ನು ನೆದರ್‌ಲ್ಯಾಂಡ್‌ನ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಎರಿಕ್ ಶ್ಲಾಂಗೆನ್ ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ನೆದರ್ಲ್ಯಾಂಡ್ ನ ಸಂಶೋಧಕರು ಕೆಲವು ಸ್ವಯಂ ರಕ್ಷಣೆ ಹೊಂದಿರುವ ರಸ್ತೆಗಳನ್ನು ನಿರ್ಮಿಸಿದ್ದಾರೆ. ಇದು ಬಾಹ್ಯ ಸಹಾಯವಿಲ್ಲದೆ ಬಿರುಕುಗಳನ್ನು ಮುಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಈ ರಸ್ತೆಗಳನ್ನು ತಯಾರಿಸುವುದು ಹೆಚ್ಚು ದುಬಾರಿಯಾಗಿದ್ದರೂ ನಿರ್ವಹಣಾ ವೆಚ್ಚವನ್ನು ತೆಗೆದುಹಾಕುವುದರಿಂದ ದೀರ್ಘಾವಧಿಯಲ್ಲಿ ಅಗ್ಗವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ತಂತ್ರಜ್ಞಾನ ಬಳಕೆಯಿಂದ ರಸ್ತೆಗಳು ಸುಮಾರು 80 ವರ್ಷಗಳವರೆಗೆ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇದು ರಸ್ತೆಗಳನ್ನು ಸುಧಾರಿಸುವುದರ ಜೊತೆಗೆ ಇತರ ಪ್ರಯೋಜನಗಳನ್ನು ಹೊಂದಿದೆ ಎಂದು ಶ್ಲಾಂಗೆನ್ ಹೇಳುತ್ತಾರೆ. ಈ ರಸ್ತೆಗಳಲ್ಲಿ ಆಸ್ಫಾಲ್ಟ್‌ನಲ್ಲಿ ಸ್ಟೀಲ್ ಫೈಬರ್‌ಗಳನ್ನು ಹಾಕುವುದರಿಂದ ರಸ್ತೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಲು ಬಳಸಬಹುದು. ಮುಂದೆ ಇದು ಟ್ರಾಫಿಕ್ ದೀಪಗಳನ್ನು ಉರಿಸಲು ಪ್ರಯೋಗಗಳನ್ನು ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಭಾರತದ ರಸ್ತೆ ಸಮಸ್ಯೆಗೆ ಪರಿಹಾರ

ಹೊಂಡ ಗುಂಡಿಗಳೊಂದಿಗೆ ತುಂಬಿರುವ ಭಾರತದಲ್ಲಿ ಇದನ್ನು ಅಳವಡಿಸಿದರೆ ಸಾಕಷ್ಟು ಲಾಭವಿದೆ. ದೇಶದಾದ್ಯಂತ ಹುಂಡ ಗುಂಡಿಗಳಿಂದ ಕೂಡಿದ ರಸ್ತೆಗಳು ಹಲವಾರು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ. 2022 ರಲ್ಲಿ ಸರ್ಕಾರಿ ಅಂಕಿಅಂಶಗಳು ರಸ್ತೆಗುಂಡಿಗಳಿಂದಾಗಿ 4,446 ಅಪಘಾತಗಳು ಸಂಭವಿಸಿವೆ, ಇದು 1,856 ಜನರ ಸಾವಿಗೆ ಕಾರಣವಾಯಿತು ಮತ್ತು 3,734 ಜನರಿಗೆ ಗಾಯಗಳಾಗಿವೆ.

2021ರಲ್ಲಿ ಗುಂಡಿಗಳಿಂದಾಗಿ 3,625 ಅಪಘಾತಗಳು ಸಂಭವಿಸಿ, 1,483 ಜನರು ಸಾವನ್ನಪ್ಪಿದರು ಮತ್ತು 3,103 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

ನೆದರ್‌ಲ್ಯಾಂಡ್‌ನಲ್ಲಿ ಯಶಸ್ವಿ

ನೆದರ್‌ಲ್ಯಾಂಡ್ಸ್‌ನ 12 ರಸ್ತೆಗಳಿಗೆ ಸ್ವಯಂ ರಕ್ಷಕ ಆಸ್ಫಾಲ್ಟ್ ಅನ್ನು ಅಳವಡಿಸಿ ಪರೀಕ್ಷಿಸಲಾಗಿದೆ. ಇವುಗಳಲ್ಲಿ ಒಂದು ಕಾರ್ಯನಿರ್ವಹಿಸುತ್ತಿದ್ದು, 2010 ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಈ ತಂತ್ರಜ್ಞಾನವನ್ನು ಯುನೈಟೆಡ್ ಕಿಂಗ್‌ಡಮ್ ಪರಿಶೀಲನೆ ನಡೆಸುತ್ತಿದೆ. ಭಾರತದಲ್ಲಿ ಇದನ್ನು ಅಳವಡಿಸಿಕೊಂಡರೆ ವಿಶ್ವದಲ್ಲೇ ನಾವು ರಸ್ತೆ ಸ್ವಯಂ ರಕ್ಷಣಾ ತಂತ್ರಜ್ಞಾನ ಅಳವಡಿಸಿಕೊಂಡವರಲ್ಲಿ ಎರಡನೇಯವರಾಗುತ್ತೇವೆ.

Continue Reading
Advertisement
IPL 2024
Latest4 mins ago

IPL 2024 : ಸಿಎಸ್​ಕೆ ತಂಡದ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಾಯಕ ಋತುರಾಜ್​

Air India
ದೇಶ6 mins ago

Air India: ವಿಮಾನ ಪ್ರಯಾಣಿಕರೇ ಗಮನಿಸಿ, ಚೆಕ್-ಇನ್ ಬ್ಯಾಗೇಜ್ ಭಾರದ ಮಿತಿ ಇಳಿಕೆ!

Lok Sabha Election 2024 Narendra Modi cant become PM again says CM Siddaramaiah
Lok Sabha Election 202411 mins ago

Lok Sabha Election 2024: ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದು ಏಕೆ?

Radhika Khera
ದೇಶ13 mins ago

Radhika Khera: ಅಯೋಧ್ಯೆಗೆ ಭೇಟಿ ನೀಡಿದ್ದಕ್ಕೆ ಪಕ್ಷದಲ್ಲಿ ವಿರೋಧ; ಕಾಂಗ್ರೆಸ್‌ ತೊರೆದ ನಾಯಕಿ!

Viral News
ಕ್ರೈಂ13 mins ago

Viral News: ವಿಮಾನ ಪ್ರಯಾಣಿಕನ ಜೇಬಿನಲ್ಲಿತ್ತು ಎರಡು ಹಾವು!

Self-Healing Roads
ತಂತ್ರಜ್ಞಾನ15 mins ago

Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

IPL 2024
ಪ್ರಮುಖ ಸುದ್ದಿ23 mins ago

IPL 2024 : 28 ರನ್​ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ

Narendra Modi
ದೇಶ25 mins ago

Narendra Modi: ಪ್ರಚಾರದ ಮಧ್ಯೆಯೇ ರಾಮಮಂದಿರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮೋದಿ

Viral News
ವೈರಲ್ ನ್ಯೂಸ್27 mins ago

Viral News: ಕಾಳಿಂಗ ಸರ್ಪವನ್ನು ಈ ಕುಟುಂಬ ಹೇಗೆ ಪೂಜಿಸುತ್ತಿದೆ ನೋಡಿ!

Narendra Modi
ದೇಶ36 mins ago

Narendra Modi: ಅಯೋಧ್ಯೆಯಲ್ಲಿ ಮೋದಿ ಬೃಹತ್‌ ರೋಡ್ ಶೋ;‌ ಎಲ್ಲೆಡೆ ಜೈ ಶ್ರೀರಾಮ್‌ ಘೋಷಣೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ52 mins ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ3 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ16 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ6 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

ಟ್ರೆಂಡಿಂಗ್‌