Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​ ತೆಂಡೂಲ್ಕರ್​ - Vistara News

ಕ್ರಿಕೆಟ್

Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​ ತೆಂಡೂಲ್ಕರ್​

ವಿರಾಟ್​ ಕೊಹ್ಲಿಗೆ ಸಚಿನ್​ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

VISTARANEWS.COM


on

virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್: ಟೀಮ್​ ಇಂಡಿಯಾದ ದಿಗ್ಗಜ ಸಚಿನ್​ ತೆಂಡೂಲ್ಕರ್(sachin tendulkar)​ ಅವರು ವಿರಾಟ್​ ಕೊಹ್ಲಿಗೆ(Virat Kohli) ಸ್ಮರಣೀಯ ಉಡುಗೊರೆಯೊಂದನ್ನು ನೀಡಿದ್ದಾರೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಸಚಿನ್​ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಧರಿಸಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಷ್ಟೇ ಅಲ್ಲದೆ ಈ ಜೆರ್ಸಿಯಲ್ಲಿ ವಿರಾಟ್‌ ಕೊಹ್ಲಿಗೆ ಸಚಿನ್​ ಭಾವನಾತ್ಮಕ ಸಂದೇಶವೊಂದನ್ನು ಬರೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ತಮ್ಮ ಜೆರ್ಸಿಯೊಂದಿಗೆ ಕೊಹ್ಲಿಗೆ ಪತ್ರವೊಂದನ್ನು ನೀಡಿದ್ದಾರೆ. ‘ವಿರಾಟ್, ನೀವು ನಮಗೆ ಹೆಮ್ಮೆ ತಂದಿದ್ದೀರಿ’ ಎಂದು ಸಚಿನ್‌ ಈ ಪತ್ರದಲ್ಲಿ ಬರೆದಿದ್ದಾರೆ. ಕೊಹ್ಲಿ ಆಸೀಸ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ 54 ರನ್​ ಬಾರಿಸಿ ಕಮಿನ್ಸ್​ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊಹ್ಲಿ ಶತಕ ಬಾರಿಸುವ ಮೂಲಕ ಸಚಿನ್​ ಅವರ ಏಕದಿನ ಕ್ರಿಕೆಟ್​ನ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ವಳೆಯೂ ಸಚಿನ್​ ಅವರು ಭಾವನಾತ್ಮ ಸಂದೇಶದ ಮೂಲಕ ಕೊಹ್ಲಿಯ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದರು.

ತಲೆಬಾಗಿ ನಮಿಸಿದ್ದ ಕೊಹ್ಲಿ

ವಿರಾಟ್​ ಕೊಹ್ಲಿ ಅವರು ತಮ್ಮ ರೋಲ್​ ಮಾಡೆಲ್​ ಸಚಿನ್​ ಅವರ ದಾಖಲೆ ಮುರಿಯುತ್ತಿದ್ದಂತೆ ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕುಳಿತಿದ್ದ ಸಚಿನ್​ಗೆ ತಲೆಬಾಗಿ ನಮಿಸಿದ್ದರು. ತೆಂಡೂಲ್ಕರ್ ಕೂಡ ಕೊಹ್ಲಿಯ ಸನ್ನೆಯನ್ನು ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಪಂದ್ಯದ ಬಳಿಕ ಸಚಿನ್​ ಅವರು ಕೊಹ್ಲಿಯನ್ನು ಭೇಟಿಯಾಗಿ ತಬ್ಬಿಕೊಂಡು ಹಾರೈಸಿದ್ದರು.

ಇದನ್ನೂ ಓದಿ IND vs AUS Final: ಮೋದಿ ಸ್ಟೇಡಿಯಂನಲ್ಲಿ ಜನಸಾಗರ; ಎಲ್ಲೆಲ್ಲೂ ಕಂಗೊಳಿಸಿದ ನೀಲ ವರ್ಣ

ಮೆಚ್ಚುಗೆ ಸೂಚಿಸಿದ್ದ ಸಚಿನ್​

ಕೊಹ್ಲಿ ಅವರು ಶತಕದ ಅರ್ಧಶತಕ ಪೂರ್ತಿಗೊಳಿಸಿದ ವೇಳೆ ಸಚಿನ್​ ಅವರು ಟ್ವೀಟ್​ ಮೂಲಕ ಮೆಚ್ಚುಗೆ ಸೂಚಿಸಿದ್ದರು. “ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್​ನಲ್ಲಿ ಭೇಟಿಯಾದಾಗ ಇತರ ಸಹ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸುವಂತೆ ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ನಿಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ, ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದಾಗಿ ನನ್ನ ಹೃದಯವನ್ನು ಸ್ಪರ್ಶಿಸಿದಿರಿ. ಆ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಾನೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಒಬ್ಬ ಭಾರತೀಯ ಕ್ರಿಕೆಟಿಗ ನನ್ನ ದಾಖಲೆಯನ್ನು ಮುರಿದಿದ್ದಾನೆ ಎಂಬುದೇ ನನಗೆ ಸಂತೋಷದ ವಿಷಯ. ಅದೂ ದೊಡ್ಡ ಪಂದ್ಯವೊದರಲ್ಲಿ ಎಂಬುದು ಇನ್ನೂ ಖುಷಿಯ ಸಂಗತಿ. ಅದೂ ನನ್ನ ತವರು ಮೈದಾನವಾಗಿರುವ ವಾಂಖೆಡೆಯಲ್ಲಿ ಸಾಧನೆ ಮಾಡಿರುವುದಕ್ಕೆ ಖುಷಿಯಿದೆ” ಎಂದು ಸಚಿನ್ ಬರೆದುಕೊಂಡಿದ್ದರು.

ಈ ಬಾರಿಯ ವಿಶ್ವಕಪ್​ನಲ್ಲಿ ಕೊಹ್ಲಿ ಸಾಧನೆ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ವಿರಾಟ ದರ್ಶನ ತೋರಿದ ಕೊಹ್ಲಿ ಟೂರ್ನಿಯ ಟಾಪ್‌ ಸ್ಕೋರರ್‌ ಆಗಿ ಹೊರಮೊಮ್ಮಿದ್ದಾರೆ. ಅಲ್ಲದೆ ತಮ್ಮ ಹೆಸರಿಗೆ ನಾನಾ ದಾಖಲೆಗಳನ್ನೂ ಬರೆಸಿಕೊಂಡಿದ್ದಾರೆ. ಆಸೀಸ್​ ವಿರುದ್ಧದ ಮೊದಲ ಲೀಗ್​ ಪಂದ್ಯದಲ್ಲಿ ಕುಸಿದಿದ್ದ ಭಾರತ ತಂಡಕ್ಕೆ ಆಸರೆಯಾದ ಕೊಹ್ಲಿ 85 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಅಫಘಾನಿಸ್ತಾನ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೊಹ್ಲಿ 55 ರನ್‌ ಬಾರಿಸಿದ್ದರು. ಬಾಂಗ್ಲಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಕೊಹ್ಲಿ 97 ಎಸೆತಗಳಲ್ಲಿ 103 ರನ್‌ ಗಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧ 95 ರನ್‌ ಗಳಿಸಿ ಐದು ರನ್‌ನಿಂದ ಶತಕ ವಂಚಿತರಾದರು. ಶ್ರೀಲಂಕಾ ವಿರುದ್ಧ 88, ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ ಗಳಿಸಿ ಸಚಿನ್​ ಅವರ 49ನೇ ಶತಕವನ್ನು ಸರಿಗಟ್ಟಿದ್ದರು. ನೆದರ್ಲೆಂಡ್ಸ್‌ ವಿರುದ್ಧ 51 ರನ್‌ ಗಳಿಸಿದರು. ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 117 ರನ್‌ ಗಳಿಸಿದ ಕೊಹ್ಲಿ, ಸಚಿನ್​ ಅವರ ದಾಖಲೆ ಮುರಿದು 50ನೇ ಸೆಂಚುರಿ ಬಾರಿಸಿ ದಾಖಲೆ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 54 ರನ್​ ಬಾರಿಸಿದರು. ಈ ಬಾರಿ ಆಡಿದ 11 ಪಂದ್ಯಗಳಲ್ಲಿ 765 ರನ್​ ಬಾರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

WPL 2024: ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ; ಅಸಮಾಧಾನ ಹೊರಹಾಕಿದ ಯುಪಿ ತಂಡ

ಚಾಮರಿ ಅಟಪಟ್ಟು(Chamari Athapaththu) ಅವರಿಗೆ ಮೂರನೇ ಅಂಪೈರ್​ ನೀಡಿದ ಡಿಆರ್​ಎಸ್​ ಎಲ್​ಬಿಡಬ್ಲ್ಯು ತೀರ್ಪಿನ ಬಗ್ಗೆ ತಂಡದ ನಾಯಕಿ, ಕೋಚ್​ ಸೇರಿ ಹಲವು ಕ್ರಿಕೆಟ್​ ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

WPL 2024
Koo

ಬೆಂಗಳೂರು: ಎಷ್ಟೇ ತಂತ್ರಜ್ಞಾನ ಬಂದರೂ ಕ್ರಿಕೆಟ್​ನಲ್ಲಿ ಅಂಪೈರ್​ಗಳ ಕೆಲ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಅಲ್ಲದೆ ಇದನ್ನು ಮಾನ್ಯ ಮಾಡುವ ರೀತಿಯೂ ಕೆಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಈ ರೀತಿಯ ತೀರ್ಪಿನಿಂದ ಪಂದ್ಯವನ್ನು ಸೋತ ಮತ್ತು ಆಟಗಾರರು ಅಂಪೈರ್​ ತೀರ್ಪಿಗೆ(DRS Controversy) ಆಕ್ರೋಶ ವ್ಯಕ್ತಪಡಿಸಿದ ಹಲವು ನಿದರ್ಶನವೂ ಇದೆ. ಇದೀಗ ಮಹಿಳಾ ಪ್ರೀಮಿಯರ್​ ಲೀಗ್​(ಡಬ್ಲ್ಯುಪಿಎಲ್​)ನಲ್ಲಿಯೂ(WPL 2024) ಮೂರನೇ ಅಂಪೈರ್​ ತೀರ್ಪಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಆರ್​ಸಿಬಿ(Royal Challengers Bangalore) ಮತ್ತು ಯುಪಿ ವಾರಿಯರ್ಸ್(UP Warriorz)​ ನಡುವಣ ಪಂದ್ಯದಲ್ಲಿ ಯುಪಿ ತಂಡದ ಆಟಗಾರ್ತಿ ಚಾಮರಿ ಅಟಪಟ್ಟು(Chamari Athapaththu) ಅವರಿಗೆ ಮೂರನೇ ಅಂಪೈರ್​ ನೀಡಿದ ಡಿಆರ್​ಎಸ್​ ಎಲ್​ಬಿಡಬ್ಲ್ಯು ತೀರ್ಪಿನ ಬಗ್ಗೆ ತಂಡದ ನಾಯಕಿ, ಕೋಚ್​ ಸೇರಿ ಹಲವು ಕ್ರಿಕೆಟ್​ ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಯುಪಿ ವಾರಿಯರ್ಸ್ ಈ ಬೃಹತ್​ ಮೊತ್ತವನ್ನು​ ಬೆನ್ನಟ್ಟಲಾರಂಭಿಸಿತು. ಈ ವೇಳೆ ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ ವಿಕೆಟ್​ ಪತನಗೊಂಡಿದು. ದ್ವಿತೀಯ ವಿಕೆಟ್​ಗೆ ಆಡಲಿಳಿದ ಲಂಕಾದ ಹಾರ್ಟ್ ಹಿಟ್ಟರ್​ ಚಾಮರಿ ಅಟಪಟ್ಟು 8 ರನ್​ ಗಳಸಿದ್ದ ವೇಳೆ ಜಾರ್ಜಿಯಾ ವೇರ್ಹ್ಯಾಮ್ ಅವರ ಎಸೆತವನ್ನು ಲೆಗ್​ಸೈಡ್​ ಕಡೆ ಬಾರಿಸಲು ಮುಂದಾದರು. ಆದರೆ ಚೆಂಡು ನೇರವಾಗಿ ಪ್ಯಾಟ್​ಗೆ ಬಡಿಯಿತು. ಆರ್​ಸಿಬಿ ಆಟಗಾರ್ತಿಯರು ಔಟ್​ಗೆ ಮನವಿ ಮಾಡಿದರು. ಫೀಲ್ಡ್​ ಅಂಪೈರ್​ ಇದನ್ನು ಮಾನ್ಯ ಮಾಡದೆ ನಾಟೌಟ್​ ತೀರ್ಪು ನೀಡಿದರು.

ಇದನ್ನೂ ಓದಿ WPL 2024 Points Table: ಡಬ್ಲ್ಯುಪಿಎಲ್​ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?

ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಸಹ ಆಟಗಾರ್ತಿಯರಲ್ಲಿ ಚರ್ಚಿಸಿ ಡಿಆರ್​ಎಸ್​ ಮೊರೆ ಹೋದರು. ಮೂರನೇ ಅಂಪೈರ್ ಟಿವಿ ರೀಪ್ಲೆಯಲ್ಲಿ​ ಇದನ್ನು ಪರೀಕ್ಷಿಸುವಾಗ ಚೆಂಡು ಪ್ಯಾಡ್​ಗೆ ಬಡಿದು ಲೆಗ್ ಸೈಡ್​ನತ್ತ ಹೋಗುವುದು ಸ್ಪಷ್ಟವಾಗಿ ಕಂಡುಬಂತು. ಆದರೆ, ಪಿಚಿಂಗ್​ ಇನ್​ಸೈಡ್​ ಮಾರ್ಕ್ ಮತ್ತು ಬಾಲ್​ ಟ್ರ್ಯಾಕಿಂಗ್​ನಲ್ಲಿ ಲೆಗ್​ ಸೈಡ್​ಗೆ ಹೋಗಬೇಕಿದ್ದ ಚೆಂಡು ನೇರವಾಗಿ ಚಲಿಸಿ ವಿಕೆಟ್​ಗೆ ಬಡಿಯುತ್ತಿರುವಂತೆ ಕಂಡುಬಂತು. ಹೀಗಾಗಿ ಮೂರನೇ ಅಂಪೈರ್​ ಇದನ್ನು ಔಟ್​ ನೀಡಿದರು.

ಅಂಪೈರ್​ ಅವರ ಈ ನಿರ್ಧಾರ ಕಂಡು ಮೈದಾನದಲ್ಲಿದ್ದ ಯುಪಿ ನಾಯಕಿ ಅಲಿಸ್ಸಾ ಹೀಲಿ ಅರೆ ಇದು ಹೇಗೆ ಸಾಧ್ಯ, ಲೆಗ್​ಸೈಡ್​ ಹೋಗಬೇಕಿದ್ದ ಚೆಂಡು ವಿಕೆಟ್​ಗೆ ಹೇಗೆ ಬಡಿಯಿತು ಎಂದು ವಾಗ್ವಾದ ನಡೆಸಿದರು. ಚಾಮರಿ ಅಟಪಟ್ಟು ಕೂಡ ಈ ತೀರ್ಪಿಗೆ ಬೇಸರಗೊಂಡ ಪೆವಿಲಿಯನ್​ ಕಡೆ ಹೆಜ್ಜೆಹಾಕಿದರು. ಪಂದ್ಯ ಮುಕ್ತಾಯದ ಬಳಿಕ ಯುಪಿ ತಂಡದ ಕೋಚ್​ ಕೂಡ ಈ ತೀರ್ಪಿನ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ಪಂದ್ಯದವನ್ನು ಯುಪಿ 23ರನ್​ ಅಂತರದಿಂದ ಕಳೆದುಕೊಂಡಿತ್ತು. ಈ ತೀರ್ಪು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಒಂದೊಮ್ಮೆ ಈ ತೀರ್ಪು ಸರಿಯಾಗುತ್ತಿದ್ದರೆ, ಚಾಮರಿ ಅಟಪಟ್ಟು ಇನಷ್ಟು ರನ್​ ಬಾರಿಸಿ ತಂಡದ ಗೆಲುವಿಗೆ ಕಾರಣವಾಗುವ ಸಾಧ್ಯತೆಯೂ ಇರುತ್ತಿತ್ತು.

Continue Reading

ಕ್ರೀಡೆ

IND Vs ENG 5th Test: 100ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಬೇರ್‌ ಸ್ಟೊ, ಅಶ್ವಿನ್

ಜಾನಿ ಬೇರ್​ಸ್ಟೊ(Jonny Bairstow) ಮತ್ತು ರವಿಚಂದ್ರನ್​ ಅಶ್ವಿನ್(Ravichandran Ashwin)​ ಅವರಿಗೆ ಧರ್ಮಶಾಲಾದಲ್ಲಿ(Dharamshala) ನಡೆಯುವ 5ನೇ ಟೆಸ್ಟ್​ ಪಂದ್ಯ 100ನೇ ಟೆಸ್ಟ್​ ಪಂದ್ಯವಾಗಿದೆ.

VISTARANEWS.COM


on

Ravichandran Ashwin, Jonny Bairstow
Koo

ಧರ್ಮಶಾಲಾ: ಇಂಗ್ಲೆಂಡ್‌ ಮತ್ತು ಭಾರತ ನಡುವೆ(IND Vs ENG 5th Test) ಧರ್ಮಶಾಲಾದಲ್ಲಿ(Dharamshala) ನಡೆಯುವ 5ನೇ ಟೆಸ್ಟ್​ ಪಂದ್ಯ ಜಾನಿ ಬೇರ್​ಸ್ಟೊ(Jonny Bairstow) ಮತ್ತು ರವಿಚಂದ್ರನ್​ ಅಶ್ವಿನ್(Ravichandran Ashwin)​ ಅವರಿಗೆ ವಿಶೇಷ ಪಂದ್ಯವಾಗಲಿದೆ. ಉಭಯ ಆಟಗಾರರಿಗೂ ಇದು 100ನೇ ಟೆಸ್ಟ್​ ಪಂದ್ಯವಾಗಿದೆ.

ಅಶ್ವಿನ್​ ಅವರು 5ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವ ಮೂಲಕ 100ನೇ ಟೆಸ್ಟ್‌ ಪಂದ್ಯವಾಡಿದ 13ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ. ಧರ್ಮಾಶಾಲಾ ಟೆಸ್ಟ್​ನಲ್ಲಿ ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ. ಬೌಲಿಂಗ್​ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅಶ್ವಿನ್​ 3 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಕೂಡ ಒಳಗೊಂಡಿದೆ. 14 ಅರ್ಧಶತಕ ಸೇರಿದೆ.

ಇದನ್ನೂ ಓದಿ IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

ಭಾರತ ಪರ 100 ಟೆಸ್ಟ್​ ಪಂದ್ಯ ಆಡಿದ ಆಟಗಾರರು

ಆಟಗಾರಪಂದ್ಯ
ಸಚಿನ್‌ ತೆಂಡೂಲ್ಕರ್‌200
ರಾಹುಲ್‌ ದ್ರಾವಿಡ್‌163
ವಿವಿಎಸ್‌ ಲಕ್ಷ್ಮಣ್‌134
ಅನಿಲ್‌ ಕುಂಬ್ಳೆ132
ಕಪಿಲ್‌ದೇವ್‌131
ಸುನೀಲ್‌ ಗಾವಸ್ಕರ್‌125
ಸೌರವ್‌ ಗಂಗೂಲಿ113
ವಿರಾಟ್‌ ಕೊಹ್ಲಿ113*
ಇಶಾಂತ್‌ ಶರ್ಮ103*
ಹರ್ಭಜನ್‌ ಸಿಂಗ್‌103
ವೀರೇಂದ್ರ ಸೆಹವಾಗ್‌103
ಚೇತೇಶ್ವರ್‌ ಪೂಜಾರ103*
ಆರ್​.ಅಶ್ವಿನ್​99*

ಬೇರ್​ಸ್ಟೊಗೂ 100ನೇ ಪಂದ್ಯ

ಮತ್ತೊಂದೆಡೆ, ಬೈರ್‌ಸ್ಟೋ ಅವರಿಗೂ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ಹೊಡಿಬಡಿ ಆಟಕ್ಕೆ ಖ್ಯಾತಿ ಪಡೆದಿರುವ ಬೇರ್​ಸ್ಟೊ ಈ ಬಾರಿ ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ. ಭಾರತ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಕೇವಲ 21 ಸರಾಸರಿಯಲ್ಲಿ 170 ರನ್ ಮಾತ್ರ ಗಳಿಸಿದ್ದಾರೆ. ಅವರು ಇಂಗ್ಲೆಂಡ್​​ ವಿರುದ್ಧ 100ನೇ ಟೆಸ್ಟ್​ ಆಡಿದ 17ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಸ್ಮರಣೀಯ ಪಂದ್ಯದಲ್ಲಾದರೂ ಬೇರ್​ಸ್ಟೊ ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋರುತ್ತಾರೋ ಎಂದು ಕಾದು ನೋಡಬೇಕಿದೆ. 99 ಟೆಸ್ಟ್‌ಗಳಲ್ಲಿ, ಬೈರ್‌ಸ್ಟೋ 36.42 ಸರಾಸರಿಯಲ್ಲಿ 12 ಶತಕ ಮತ್ತು 26 ಅರ್ಧಶತಕಗಳನ್ನು ಒಳಗೊಂಡಂತೆ 5974 ರನ್ ಗಳಿಸಿದ್ದಾರೆ.

Continue Reading

ಕ್ರೀಡೆ

IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

ಧರ್ಮಶಾಲಾದಲ್ಲಿ ಮಾಚ್​​ 7ರಿಂದ ಆರಂಭಗೊಳ್ಳಲಿರುವ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಅವರು ಒಂದು ಸಿಕ್ಸರ್​ ಬಾರಿಸಿದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 50 ಸಿಕ್ಸರ್​ ಪೂರ್ತಿಗೊಳಿಸಲಿದ್ದಾರೆ.

VISTARANEWS.COM


on

Rohit Sharma
Koo

ಧರ್ಮಶಾಲಾ: ಈಗಾಗಲೇ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿರುವ ರೋಹಿತ್​ ಶರ್ಮ(Rohit Sharma), ಇಂಗ್ಲೆಂಡ್​ ಎದುರಿನ ಅಂತಿಮ ಟೆಸ್ಟ್​ನಲ್ಲಿ(IND vs ENG 5th Test) ಕೇವಲ ಒಂದು ಸಿಕ್ಸರ್​ ಬಾರಿಸಿದರೆ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.

ಹೌದು, ಧರ್ಮಶಾಲಾದಲ್ಲಿ ಮಾಚ್​​ 7ರಿಂದ ಆರಂಭಗೊಳ್ಳಲಿರುವ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಅವರು ಒಂದು ಸಿಕ್ಸರ್​ ಬಾರಿಸಿದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 50 ಸಿಕ್ಸರ್​ ಪೂರ್ತಿಗೊಳಿಸಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ರೋಹಿತ್​ ಇದುವರೆಗೆ 31 ಪಂದ್ಯಗಳ 53 ಇನಿಂಗ್ಸ್​ನಿಂದ 49* ಸಿಕ್ಸರ್​ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​ ತಂಡದ ನಾಯಕ ಬೆನ್​ ಸ್ಟೋಕ್ಸ್​ ಅವರು 78 ಸಿಕ್ಸರ್​ ಬಾರಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿಯೂ ಅತ್ಯಧಿಕ ಸಿಕ್ಸರ್​ ಬಾರಿಸಿದ ದಾಖಲೆಯೂ ಸ್ಟೋಕ್ಸ್​ ಹೆಸರಿನಲ್ಲಿದೆ. 128* ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ 14ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ WPL 2024 Points Table: ಡಬ್ಲ್ಯುಪಿಎಲ್​ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?

ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಭಾರತೀಯ ದಾಖಲೆ ಮಾಜಿ ಆಟಗಾರ ವೀರೇಂದ್ರ ಸೆಹವಾಗ್​ ಹೆಸರಿನಲ್ಲಿದೆ. ಡ್ಯಾಶಿಂಗ್​ ಆಟಗಾರ ಸೆಹವಾಗ್ 104 ಟೆಸ್ಟ್​ ಪಂದ್ಯ ಆಡಿ 91 ಸಿಕ್ಸರ್​ ಬಾರಿಸಿದ್ದಾರೆ. ಸೆಹವಾಗ್​ ದಾಖಲೆ ಮುರಿಯಲು ರೋಹಿತ್​ಗೆ ಇನ್ನು 11 ಸಿಕ್ಸರ್​ಗಳ ಅಗತ್ಯವಿದೆ.

ಟೆಸ್ಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್​-5 ಭಾರತೀಯ ಆಟಗಾರರು

ಆಟಗಾರಸಿಕ್ಸರ್​
ವಿರೇಂದ್ರ ಸೆಹವಾಗ್​91
ರೋಹಿತ್​ ಶರ್ಮ81*
ಮಹೇಂದ್ರ ಸಿಂಗ್​ ಧೋನಿ78
ಸಚಿನ್​ ತೆಂಡೂಲ್ಕರ್69
ಕಪಿಲ್​ ದೇವ್61

ಟೆಸ್ಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್-5 ಬ್ಯಾಟರ್​ಗಳು

ಆಟಗಾರಸಿಕ್ಸರ್​
ಬೆನ್​ ಸ್ಟೋಕ್ಸ್​128*
ಬ್ರೆಂಡನ್​ ಮೆಕಲಮ್107
ಆ್ಯಡಂ ಗಿಲ್​ಕ್ರಿಸ್ಟ್​100
ಕ್ರಿಸ್​ ಗೇಲ್98
ಜಾಕ್‌ ಕ್ಯಾಲಿಸ್‌97

ಹೆಲಿಕಾಪ್ಟರ್​ನಲ್ಲಿ ಧರ್ಮಶಾಲಾಕ್ಕೆ ಬಂದಿಳಿದ ರೋಹಿತ್

ಕೆಜಿಎಫ್ ಶೈಲಿಯಲ್ಲಿ ಯಶ್​ ಬಂದಂತೆ ರೋಹಿತ್ ಶರ್ಮ​ ಅವರು ಖಾಸಗಿ ಹೆಲಿಕಾಪ್ಟರ್‌ ಮೂಲಕ ಮಂಗಳವಾರ ಧರ್ಮಶಾಲಾಕ್ಕೆ ಬಂದಿಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ರೋಹಿತ್​ ಶರ್ಮ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ತಡವಾಗಿ ತಂಡ ಸೇರಿದ್ದಾರೆ. ತಂಡದ ಉಳಿದ ಆಟಗಾರರು 2 ದಿನಗಳ ಮುಂದೆಯೇ ಧರ್ಮಶಾಲಾ ತಲುಪಿದ್ದರು.

Continue Reading

ಕ್ರೀಡೆ

WPL 2024 Points Table: ಡಬ್ಲ್ಯುಪಿಎಲ್​ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?

ಸದ್ಯ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಆಡಿದ 4 ಪಂದ್ಯಗಳಲ್ಲಿ ಒಂದು ಸೋಲು ಮೂರು ಗೆಲುವು ದಾಖಲಿಸಿ 6 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ಜತೆಗೆ ತಂಡದ ರನ್​ ರೇಟ್​ ಕೂಡ ಉತ್ತಮವಾಗಿದೆ

VISTARANEWS.COM


on

Royal Challengers Bangalore Women
Koo

ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ 11 ಲೀಗ್​(WPL 2024) ಪಂದ್ಯಗಳು ಮುಕ್ತಾಯಕಂಡಿದ್ದು ಇನ್ನು ಕೇವಲ 9 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. 5 ಪಂದ್ಯಗಳ ಪೈಕಿ ನಾಲ್ಕು ತಂಡಗಳು ಅಂಕಪಟ್ಟಿಯಲ್ಲಿ(WPL 2024 Points Table) ಹಾವು ಏಣಿ ಆಟದಂತೆ ಪೈಪೋಟಿ ನಡೆಸುತ್ತಿದೆ. ಕನ್ನಡಿಗರ ನೆಚ್ಚಿನ ತಂಡದವಾದ ಆರ್​ಸಿಬಿ(Royal Challengers Bangalore) ನಿನ್ನೆ ನಡೆದ ತವರಿನ ಅಂತಿಮ ಪಂದ್ಯದಲ್ಲಿ ಯುಪಿ ವಾರಿಯರ್ಸ್​(UP Warriorz) ವಿರುದ್ಧ ಗೆದ್ದು ಒಂದು ಸ್ಥಾನದ ಏರಿಕೆ ಕಂಡಿದೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ಆಡಿದ 4 ಪಂದ್ಯಗಳಲ್ಲಿ ಒಂದು ಸೋಲು ಮೂರು ಗೆಲುವು ದಾಖಲಿಸಿ 6 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ಜತೆಗೆ ತಂಡದ ರನ್​ ರೇಟ್​ ಕೂಡ ಉತ್ತಮವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​​(Mumbai Indians Women) ಕೂಡ 6 ಅಂಕ ಸಂಪಾದಿಸಿ ದ್ವಿತೀಯ ಸ್ಥಾನಿಯಾಗಿದೆ. ಆರ್​ಸಿಬಿ ತಂಡ ಯುಪಿ ವಿರುದ್ಧ ಗೆದ್ದ ಕಾರಣ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿದೆ. ಯುಪಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಗೆಲುವು ದಾಖಲಿಸಿದ ಗುಜರಾತ್​ ಕೊನೆಯ ಸ್ಥಾನಿಯಾಗಿದೆ. ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದರೆ ಎಲಿಮಿನೇಟರ್​ಗೇರುವ ಅವಕಾಶವೂ ಈ ತಂಡಕ್ಕಿದೆ. ಸೋತರೆ ಹೊರಬಿಳುವುದು ಖಚಿತ.

ಇದನ್ನೂ ಓದಿ WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

ಮುಂಬೈ ಸೋತರೆ ಆರ್​ಸಿಬಿಗೆ ಲಾಭ


ಮುಂಬೈ ಮತ್ತು ಡೆಲ್ಲಿ ತಂಡಗಳು ಇಂದು ನಡೆಯುವ 12ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಮುಂಬೈ ತಂಡ ಸೋತರೆ ಆರ್​ಸಿಬಿಗೆ ಲಾಭವಾಗಲಿದೆ. ಸೋಲಿನಿಂದಾಗಿ ಸಹಜವಾಗಿಯೇ ಮುಂಬೈ ತಂಡದ ರನ್​ ರೇಟ್​ ಕುಸಿತ ಕಾಣುತ್ತದೆ. ಆಗ ಮೂರನೇ ಸ್ಥಾನಿಯಾದ ಆರ್​ಸಿಬಿ ದ್ವಿತೀಯ ಸ್ಥಾನಕ್ಕೇರಲಿದೆ. ಡೆಲ್ಲಿ ಸೋತರೆ ಆರ್​ಸಿಬಿಗೆ ಲಾಭವಾಗದು ಏಕೆಂದರೆ ಅದರ ರನ್ ರೇಟ್​ +1 ಇರುವುದರಿಂದ ಭಾರಿ ಬದಲಾವಣೆ ಸಂಭವಿಸುವುದು ಕಷ್ಟ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​​4316 (+1.251)
ಮುಂಬೈ ಇಂಡಿಯನ್ಸ್4316 (+0.402)
ಆರ್​ಸಿಬಿ​​5326 (+0.242)
ಯುಪಿ ವಾರಿಯರ್ಸ್​5234 (-0.073)
ಗುಜರಾತ್​ ಜೈಂಟ್ಸ್​4040 (-1.804)

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ  ಸ್ಮೃತಿ ಮಂಧಾನ(80) ಮತ್ತು ಎಲ್ಲಿಸ್​ ಪೆರ್ರಿ(58) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ತಂಡ(Royal Challengers Bangalore) ಯುಪಿ ವಾರಿಯರ್ಸ್(UP Warriorz) ಎದುರು 23 ರನ್​ಗಳ ಗೆಲುವು ಸಾಧಿಸಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಸಂಪೂರ್ಣ ಜೋಶ್​ನಿಂದ ಬ್ಯಾಟಿಂಗ್​ ನಡೆಸುವ ಮೂಲಕ ಕೇವಲ 3 ವಿಕೆಟ್​ ನಷ್ಟಕ್ಕೆ 198 ರನ್​ ಬಾರಿಸಿತು. ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಒಂದು ಹಂತದವರೆಗೆ ದಿಟ್ಟ ಹೋರಾಟ ನಡೆಸಿ ಆ ಬಳಿಕ ಕುಸಿತ ಕಂಡು ನಿಗದಿತ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 175 ರನ್​ ಗಳಿಸಲಷ್ಟೇ ಶಕ್ತವಾಯಿತು.

Continue Reading
Advertisement
Residential School
ಕರ್ನಾಟಕ13 mins ago

Chikkamagaluru News: ವಸತಿ ಶಾಲೆ ಶಿಕ್ಷಕಿಯಿಂದ ವಿದ್ಯಾರ್ಥಿನಿಯರಿಗೆ ಚಿತ್ರಹಿಂಸೆ; ಕ್ರಮಕ್ಕೆ ಪೋಷಕರ ಆಗ್ರಹ

HD Deve Gowda lashes out at CM Siddaramaiah and Nikhil Kumaraswamy with him
ರಾಜಕೀಯ19 mins ago

HD Devegowda: ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿಎಂ ಸಿದ್ದರಾಮಯ್ಯಗೆ ಎಚ್‌.ಡಿ. ದೇವೇಗೌಡ ಪ್ರಶ್ನೆ

Expensive Celebrity Saree Draper
ಫ್ಯಾಷನ್20 mins ago

Expensive Celebrity Saree Draper: ಸ್ಟಾರ್‌ಗಳಿಗೆ ಸೀರೆ ಉಡಿಸಿದರೆ ಇವರ ಚಾರ್ಜ್ 2 ಲಕ್ಷ ರೂ.! ಯಾರಿವರು ಡಾಲಿ ಜೈನ್‌?

Weather
ಮಳೆ22 mins ago

karnataka Weather : ರಾಯಚೂರಲ್ಲಿ ತಾಪಮಾನದ ಬಿಸಿ; ಉಳಿದೆಡೆ ಹೇಗೆ?

WPL 2024
ಕ್ರಿಕೆಟ್29 mins ago

WPL 2024: ಡಬ್ಲ್ಯುಪಿಎಲ್​ಗೂ ತಟ್ಟಿದ ಡಿಆರ್​ಎಸ್ ವಿವಾದ; ಅಸಮಾಧಾನ ಹೊರಹಾಕಿದ ಯುಪಿ ತಂಡ

Narendra Modi
ದೇಶ44 mins ago

Narendra Modi: ಕಾಜಿರಂಗ ಅಭಯಾರಣ್ಯದಲ್ಲಿ ರಾತ್ರಿ ಕಳೆಯಲಿರುವ ಮೋದಿ; ಇದರಲ್ಲೂ ಇದೆ ಒಂದು ದಾಖಲೆ!

Road Accident Mangalore Jeep
ದಕ್ಷಿಣ ಕನ್ನಡ48 mins ago

Road Accident : ಗಾಂಜಾ ನಶೆಯಲ್ಲಿ ಎರ‍್ರಾಬಿರ‍್ರಿ ಓಡಿದ ಥಾರ್ ಜೀಪ್; ಬೈಕ್‌ ಸವಾರ ಸಾವು

aadujeevitham
South Cinema48 mins ago

ಮಾ. 28ರಂದು ತೆರೆಗೆ ಬರಲಿದೆ ʼಆಡು ಜೀವಿತಂʼ; ʼಲಾರೆನ್ಸ್ ಆಫ್ ಅರೇಬಿಯಾ’ ಚಿತ್ರಕ್ಕೆ ಹೋಲಿಸಿದ ಎ.ಆರ್.ರೆಹಮಾನ್

Tips To Calm The Mind
ಲೈಫ್‌ಸ್ಟೈಲ್53 mins ago

Tips To Calm The Mind: ಮನಸ್ಸನ್ನು ಪ್ರಶಾಂತಗೊಳಿಸುವುದು ಹೇಗೆ? ಇಲ್ಲಿವೆ ಸುಲಭೋಪಾಯಗಳು!

Attempt to Murder Stabbed again in Shivamogga Two miscreants attack and flee
ಕರ್ನಾಟಕ55 mins ago

Attempt to Murder: ಶಿವಮೊಗ್ಗದಲ್ಲಿ ಮತ್ತೆ ಚಾಕು ಇರಿತ; ಇಬ್ಬರು ದುಷ್ಕರ್ಮಿಗಳಿಂದ ದಾಳಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌