ಕ್ರಿಕೆಟ್
IPL 2023: ಮೈದಾನ ಸಿಬ್ಬಂದಿಗೆ ನೆರವು ನೀಡಿದ ಧೋನಿ; ವಿಡಿಯೊ ವೈರಲ್
ಚೆಪಾಕ್ ಕ್ರೀಡಾಂಗಣದ ಸಿಬ್ಬಂದಿಗಳಿಗೆ ನಗದು ಮತ್ತು ಆಟೋಗ್ರಾಫ್ ನೀಡಿ ಮಹೇಂದ್ರ ಸಿಂಗ್ ಧೋನಿ ಅವರು ಔದಾರ್ಯ ಮೆರೆದಿದ್ದಾರೆ.
ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈಯ ಚೆಪಾಕ್ ಕ್ರೀಡಾಂಗಣದ ಸಿಬ್ಬಂದಿಗಳಿಗೆ ನಗದು ಮತ್ತು ಆಟೋಗ್ರಾಫ್ ನೀಡಿ ಔದಾರ್ಯ ಮೆರೆದಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಧೋನಿ ಅಹಮದಾಬಾದ್ನಲ್ಲಿ ಮೇ 28ಕ್ಕೆ ನಡೆಯುವ ಫೈನಲ್ ಪಂದ್ಯಕ್ಕೆ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
2019ರ ಬಳಿಕ ಈ ಬಾರಿಯ ಐಪಿಎಲ್(IPL 2023) ಆವೃತ್ತಿಯಲ್ಲಿ ಚೆನ್ನೈ ತಂಡ ಮೊದಲ ಬಾರಿ ಚೆಪಾಕ್ನಲ್ಲಿ ಪಂದ್ಯಗಳನ್ನು ಆಡಿತ್ತು. ಒಟ್ಟು ಲೀಗ್ನಲ್ಲಿ 7 ಪಂದ್ಯ ಮತ್ತು ಕ್ವಾಲಿಫೈಯರ್ ಸೇರಿ 8 ಪಂದ್ಯಗಳಲ್ಲಿ ಚೆನ್ನೈ ತಂಡ ಇಲ್ಲಿ ಕಣಕ್ಕಿಳಿದಿತ್ತು. ಧೋನಿಯ ನೆಚ್ಚಿನ ಮೈದಾನ ಕೂಡ ಇದಾಗಿದೆ. ಕಳೆದ ಗುಜರಾತ್ ವಿರುದ್ಧದ ಕ್ವಾಲಿಫೈಯರ್ ಪಂದ್ಯ ಗೆದ್ದು ಚೆನ್ನೈ ಫೈನಲ್ ತಲುಪಿದೆ. ಈ ಪಂದ್ಯ ಮುಗಿದ ಬಳಿಕ ತಂಡದ ನಾಯಕ ಧೋನಿ ಅವರು ಇಲ್ಲಿನ ಕ್ರೀಡಾಂಗಣದ ಒಟ್ಟು 20 ಮಂದಿ ಸಿಬ್ಬಂದಿಗೆ ಆಟೋಗ್ರಾಫ್ ನೀಡುವ ಜತೆಗೆ ನಗದು ನೀಡಿದ್ದಾರೆ. ಬಳಿಕ ಇವರೊಂದಿಗೆ ಗ್ರೂಪ್ ಫೋಟೊ ಕೂಡ ತೆಗೆಸಿಕೊಂಡಿದ್ದಾರೆ. ಈ ವಿಡಿಯೊ ಕಂಡ ಧೋನಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಅವರು ಈ ಹಿಂದೆಯೂ ಇದೇ ರೀತಿ ಮೈದಾನ ಸಿಬ್ಬಂದಿಗಳಿಗೆ ನೆರವು ನೀಡಿದ್ದರು. ಭಾರತ ತಂಡದ ಪರ ಆಡುವ ವೇಳೆಯೂ ಧೋನಿ ಅವರು ಈ ರೀತಿಯ ಸಹಾಯ ಮಾಡಿದ್ದರು.
ಇದನ್ನೂ ಓದಿ IPL 2023 : ಧೋನಿ ಬಗ್ಗೆ ಹೊಗಳಿ ಬರೆದ ಲಂಕಾ ಬೌಲರ್ ಮತೀಶ್ ಪತಿರಾನಾ ಸಹೋದರಿ ವಿಶುಕಾ; ಕಾರಣವೇನು?
Anbuden Thala – A mark of respect for the markers and the ground staff who toil hard to make us game ready! 💛📹#WhistlePodu #Yellove 🦁💛 @msdhoni pic.twitter.com/MTyFpvEWud
— Chennai Super Kings (@ChennaiIPL) May 25, 2023
ಸದ್ಯಕ್ಕಿಲ್ಲ ನಿವೃತ್ತಿ
ಈ ಬಾರಿಯ ಐಪಿಎಲ್ ಬಳಿಕ ಧೋನಿ ಅವರು ನಿವೃತ್ತಿ ನೀಡಲಿದ್ದಾರೆ ಎಂಬ ಟಾಕ್ಗೆ ಧೋನಿಯೇ ಕಳೆದ ಪಂದ್ಯದಲ್ಲಿ ಉತ್ತರ ನೀಡಿದ್ದರು. “ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಈಗ ಚಿಂತಿಸುವುದಿಲ್ಲ. ಸದ್ಯ ನನ್ನ ಮುಂದಿರುವ ಗುರಿ ಫೈನಲ್ಗೆ ಬೇಕಾದ ತಯಾರಿ ಮತ್ತು ಕಪ್ ಗೆಲ್ಲುವುದು. ನಿವೃತ್ತಿ ಬಗ್ಗೆ ಯೋಚಿಸಲು ನನಗೆ ಇನ್ನೂ 8 ರಿಂದ 9 ತಿಂಗಳು ಅವಕಾಶವಿದೆ. ಹೀಗಾಗಿ ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆಗಿನ ನಂಟು ಯವಾಗಲೂ ಇದ್ದೇ ಇರುತ್ತದೆ” ಎಂದು ಧೋನಿ ಹೇಳಿದ್ದರು.
ಕ್ರಿಕೆಟ್
WTC Final 2023: ಭಾರತ ವಿರುದ್ಧ ವಿಶ್ವ ದಾಖಲೆ ಬರೆದ ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ
ಲಂಡನ್: ಭಾರತ ವಿರುದ್ಧ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಟ್ರಾವಿಸ್ ಹೆಡ್ ಅವರು ನೂತನ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿ ಮೂಡಿಬಂದಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ 3 ವಿಕೆಟ್ಗೆ 300 ರನ್ಗಳ ಗಡಿ ದಾಟಿ ಬೃಹತ್ ಮೊತ್ತ ದಾಖಲಿಸುವ ಸೂಚನೆ ನೀಡಿದೆ.
ಮಾರ್ನಸ್ ಲಬುಶೇನ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಇಳಿದ ಹೆಡ್ ಏಕದಿನ ಕ್ರಿಕೆಟ್ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದರು. ಪ್ರತಿ ಎಸೆತವೊಂದಕ್ಕೆ ರನ್ ಗಳಿಸಿದ ಅವರು 101 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. ಈ ಮೂಲಕ ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆ ಬರೆದರು. ಸದ್ಯ ಅವರು 1 ಸಿಕ್ಸರ್ ಮತ್ತು 19 ಬೌಂಡರಿ ಬಾರಿಸಿ 129 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
The first centurion in World Test Championship Final history 🥇
— ICC (@ICC) June 7, 2023
Take a bow, Travis Head 👏
Follow the #WTC23 Final 👉 https://t.co/wJHUyVnX0r pic.twitter.com/PFyd7UzcZX
ಇದನ್ನೂ ಓದಿ WTC Final 2023: ಲಂಡನ್ನಲ್ಲೇ ವಿಶ್ವ ಟೆಸ್ಟ್ ಫೈನಲ್ ನಡೆಯಲು ಕಾರಣವೇನು
ಇವರ ಜತೆಗಾರ ಸ್ಟೀವನ್ ಸ್ಮಿತ್ ಕೂಡ ಶತಕ ಬಾರಿಸಿವ ಸನಿಹದಲ್ಲಿದ್ದಾರೆ. ಒಂದೊಮ್ಮೆ ಅವರು ಕೂಡ ಶತಕ ಬಾರಿಸಿದರೆ ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದಾಖಲಾದ 2ನೇ ಶತಕವಾಗಲಿದೆ. ಹಾಗೇಯೇ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹಿರಿಮೆಗೆ ಸ್ಮಿತ್ ಪಾತ್ರರಾಗಲಿದ್ದಾರೆ. ಹೆಡ್ ಮೊದಲಿಗ.
ಕ್ರಿಕೆಟ್
WTC Final 2023: ಲಂಡನ್ನಲ್ಲೇ ವಿಶ್ವ ಟೆಸ್ಟ್ ಫೈನಲ್ ನಡೆಯಲು ಕಾರಣವೇನು
ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್‌ನ ಜನತೆಗೆ ಟೆಸ್ಟ್ ಎಂದರೆ ಅಚ್ಚುಮೆಚ್ಚು ಇದೇ ಕಾರಣಕ್ಕೆ ಐಸಿಸಿ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಲಂಡನ್ನಲ್ಲಿ ನಡೆಸುತ್ತಿದೆ.
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಲಂಡನ್ನಲ್ಲಿಯೇ ನಡೆಯುತ್ತಿರುವುದು ಏಕೆ ಎಂಬ ಕುತೂಹಲವೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಎರಡನೇ ಆವೃತ್ತಿಯ ಫೈನಲ್ ಪಂದ್ಯ ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಇಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. 2025ರಲ್ಲಿ ನಡೆಯುವ ಫೈನಲ್ ಪಂದ್ಯವೂ ಲಂಡನ್ನಲ್ಲೇ ನಡೆಯಲಿದೆ. ಇದಕ್ಕೆ ಪ್ರಮುಖ ಕಾರಣ ಏನೆಂಬುದನ್ನು ಇಲ್ಲಿ ವಿವರಿಸಲಾಗಿದೆ.
ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್‌ನ ಜನತೆಗೆ ಟೆಸ್ಟ್ ಎಂದರೆ ಅಚ್ಚುಮೆಚ್ಚು. ಲಂಡನ್ನಲ್ಲಿ ನಡೆಯುವ ಯಾವುದೇ ಟೆಸ್ಟ್ ಪಂದ್ಯವಾದರೂ ಅಲ್ಲಿ ಕಿಕ್ಕಿರಿದು ಜನ ಸೇರುತ್ತಾರೆ. ಅದರಲ್ಲೂ ಇಂಗ್ಲೆಂಡ್ ಕ್ರಿಕೆಟ್ ಪ್ರಿಯರು ಈ ಆಟವನ್ನು ಬಹಳ ಶಿಸ್ತಿನಿಂದ ವೀಕ್ಷಣ ಮಾಡುತ್ತಾರೆ ಯಾವುದೇ ಬೊಬ್ಬೆ ಗದ್ದಲಗಳಿಲ್ಲದೆ ಸಿಕ್ಸರ್, ಬೌಂಡರಿ ಸಿಡಿಸಿದಾಗ ಕೇವಲ ಚಪ್ಪಾಳೆಯ ಸದ್ದು ಮಾತ್ರ ಕೇಳಿಬರುತ್ತದೆ. ತಲೆಗೊಂದು ಹ್ಯಾಟ್, ಕೈಯಲ್ಲೊಂದು ಬಿಯರ್ ಹಿಡಿದು ಪಂದ್ಯ ವೀಕ್ಷಿಸುತ್ತಿರುತ್ತಾರೆ. ಆದ್ದರಿಂದ ಇಲ್ಲಿ ನಡೆಯುವ ಪಂದ್ಯಗಳಿಗೆ ವೀಕ್ಷಕರ ಕೊರತೆ ಎಂದಿಗೂ ಕಾಡಲಾರದು. ಹೀಗಾಗಿ ಐಸಿಸಿ ಮಹತ್ವದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಲಂಡನ್ ತಾಣವನ್ನೇ ಆಯ್ಕೆ ಮಾಡಿದೆ.
ಬೇರೆ ದೇಶದಲ್ಲಾದರೆ ಟೆಸ್ಟ್ ಪಂದ್ಯದಕ್ಕೆ ಹೆಚ್ಚು ಜನ ಪ್ರಾಶಸ್ತ್ಯ ನೀಡುವುದಿಲ್ಲ. ಆದರೆ ಇಂಗ್ಲೆಂಡಿನ ಕ್ರಿಕೆಟ್ ಪ್ರೇಮಿಗಳು ಟೆಸ್ಟ್ ಕ್ರಿಕೆಟ್ ಬಹಳ ಆನಂದಿಸುತ್ತಾರೆ. ಇದಕ್ಕೆ ಕಾರಣವೂ ಇದೆ ಏಕೆಂದರೆ ಇಂಗ್ಲೆಂಡ್ನಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದದ್ದು ಟೆಸ್ಟ್ ಕ್ರಿಕೆಟ್ ಸರಣಿಯೇ ಆಗಿತ್ತು.
ಇದನ್ನೂ ಓದಿ WTC Final 2023 : ವಿಕೆಟ್ ಕೀಪರ್ ಕೆಎಸ್ ಭರತ್ ಹಿಡಿದ ರೋಮಾಂಚಕಾರಿ ಕ್ಯಾಚ್ ಹೀಗಿತ್ತು
ಅದರಲ್ಲೂ ಈಗಿನ ಜಾಯಮಾನದ ಜನತೆಗೆ ತಾಳ್ಮೆ ಎಂಬುದು ಇಲ್ಲವೇ ಎಲ್ಲದಂತಾಗಿದೆ. ಟಿ20 ಮತ್ತು ಟಿ10 ಕ್ರಿಕೆಟ್ ಪಂದ್ಯಗಳು ಆರಂಭವಾದ ಬಳಿಕ ಇದೀಗ ಏಕದಿನ ಕ್ರಿಕೆಟ್ನಲ್ಲಿಯೂ ಕ್ರೇಜ್ ಕಡಿಮೆಯಾಗಿದೆ. ಆದರೆ ಇಂಗ್ಲೆಂಡ್ನಲ್ಲಿ ಮಾತ್ರ ಟೆಸ್ಟ್ ಕ್ರಿಕೆಟ್ ಕ್ರೇಜ್ ಈಗಲೂ ಜೀವಂತವಾಗಿದೆ.
ಕ್ರಿಕೆಟ್
INDvsWI: ಭಾರತ-ವಿಂಡೀಸ್ ಕ್ರಿಕೆಟ್ ಸರಣಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯುವ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯ ತಾತ್ಕಾಲಿಕ ವೇಳಾಪಟ್ಟಿಯೊಂದು ಪ್ರಕಟಗೊಂಡಿದೆ.
ಪೋರ್ಟ್ ಆಫ್ ಸ್ಪೇನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯುವ ಉಭಯ ತಂಡಗಳ ಸರಣಿಯ ತಾತ್ಕಾಲಿಕ ವೇಳಾಪಟ್ಟಿಯೊಂದು ಪ್ರಕಟಗೊಂಡಿದೆ. ಸದ್ಯ ಬಿಸಿಸಿಐಯಿಂದ ಒಪ್ಪಿಗೆ ಸಿಗುವುದೊಂದೆ ಬಾಕಿ ಉಳಿದಿದೆ. ಅನಂತರ ವೇಳಾಪಟ್ಟಿ ಅಧಿಕೃತಗೊಳ್ಳಲಿದೆ.
ಇತ್ತಂಡಗಳ ಕ್ರಿಕೆಟ್ ಸರಣಿಯಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಹೆಚ್ಚುರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದ ಫ್ಲೋರಿಡಾದಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಇದು ಅಧಿಕೃತಗೊಂಡಿಲ್ಲ. ಪ್ರಸಕ್ತ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ವೇಳೆ ಬಿಸಿಸಿಐ ಮತ್ತು “ಕ್ರಿಕೆಟ್ ವೆಸ್ಟ್ ಇಂಡೀಸ್’ನ ವರಿಷ್ಠರು ಮಾತುಕತೆ ನಡೆಸಿ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಇದೇ ಕಾರಣಕ್ಕೆ ವಿಂಡೀಸ್ ಕ್ರಿಕೆಟ್ ಮಂಡಳಿಯ ಸದಸ್ಯರು ಲಂಡನ್ನ ಓವಲ್ಗೆ ಆಗಮಿಸಿದ್ದಾರೆ.
ಸದ್ಯದ ವೇಳಾಪಟ್ಟಿಯ ಪ್ರಕಾರ ಟೆಸ್ಟ್ ಪಂದ್ಯಗಳು ಡೊಮಿನಿಕಾ (ಜು. 12-16) ಮತ್ತು ಟ್ರಿನಿಡಾಡ್‌ನಲ್ಲಿ (ಜು. 20-24) ನಡೆಯಲಿವೆ. ಏಕದಿನ ಪಂದ್ಯಗಳು ಬಾರ್ಬಡಾಸ್ (ಜು. 27, 29) ಮತ್ತು ಟ್ರಿನಿಡಾಡ್ (ಆ. 1). ಟಿ20 ಪಂದ್ಯಗಳನ್ನು ಟ್ರಿನಿಡಾಡ್ (ಆ. 4) ಮತ್ತು ಗಯಾನಾದಲ್ಲಿ (ಆ. 6, ಆ. 8) ಆಡಲಾಗುವುದು ಎಂದು ಹೇಳಲಾಗಿದೆ. ಆದರೆ ಅಂತಿಮ ವೇಳಾಪಟ್ಟಿ ಬಿಡುಗಡೆಗೊಂಡ ಬಳಿಕ ಇದರಲ್ಲಿ ಸಣ್ಣ ಪುಟ್ಟ ಬದಲಾವಣೆ ಕಂಡುಬರುವ ಸಾಧ್ಯೆತೆ ಇದೆ.
ಇದನ್ನೂ ಓದಿ WTC Final 2023 : ಶಮಿ ಎಸೆತಕ್ಕೆ ಮರ್ನಸ್ ಲಾಬುಶೇನ್ ಬೌಲ್ಡ್ ಆದ ರೀತಿ ಹೀಗಿದೆ
ಏಷ್ಯಾ ಕಪ್ ಮತ್ತು ಏಕದಿನ ವಿಶ್ವ ಕಪ್ ದೃಷ್ಟಿಯಲ್ಲಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಏಕೆಂದರೆ ತಂಡ ಸಂಯೋಜನೆಗೆ ಇದು ಉತ್ತಮ ಅವಕಾಶವಾಗಿದೆ.
ಕ್ರಿಕೆಟ್
WTC Final 2023 : ಶಮಿ ಎಸೆತಕ್ಕೆ ಮರ್ನಸ್ ಲಾಬುಶೇನ್ ಬೌಲ್ಡ್ ಆದ ರೀತಿ ಹೀಗಿದೆ
ಶಮಿಯ ಎಸೆತವನ್ನು ಗುರುತಿಸಲು ಸಾಧ್ಯವಾಗದೇ ಮರ್ನಸ್ ಲಾಬುಶೇನ್ ಕ್ಲೀನ್ ಬೌಲ್ಡ್ ಆದರು.
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ (WTC Final 2023) ಆಸ್ಟ್ರೇಲಿಯಾ ತಂಡದ ಪಾರಮ್ಯ ಮುಂದುವರಿದಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ಬಳಗ ಟಿ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಭಾರತ ತಂಡ ಆರಂಭದಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದರೂ ಬಳಿಕ ಜತೆಯಾದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಸ್ಥಿರ ಪ್ರದರ್ಶನ ನೀಡಿದರು. ಆದರೆ, ಭಾರತ ತಂಡಕ್ಕೆ ಮೂರನೇ ವಿಕೆಟ್ ರೂಪದಲ್ಲಿ ದೊರಕಿದ ಮರ್ನಸ್ ಲಾಬುಶೇನ್ ವಿಕೆಟ್ ಹೆಚ್ಚು ಆಕರ್ಷಕವಾಗಿತ್ತು. ಶಮಿ ಎಸೆತಕ್ಕೆ ಅವರು ಬೌಲ್ಡ್ ಆದ ರೀತಿಯೂ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಿತು.
ಡಬ್ಲ್ಯುಟಿಸಿ ಫೈನಲ್ ಪಂದ್ಯದ ಮೊದಲ ಸೆಷನ್ನಲ್ಲಿ ಶಮಿ ತುಂಬಾ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಕ್ರಿಕೆಟ್ ಅಭಿಮಾನಿಗಳಿಂದ ಹಾಗೂ ವೀಕ್ಷಕ ವಿವರಣೆಗಾರರಿಂದ ಟೀಕೆಗೆ ಒಳಗಾದರು. ಆದಾಗ್ಯೂ, ಭೋಜನ ವಿರಾಮದಿಂದ ಹಿಂದಿರುಗಿದ ಕೂಡಲೇ ಶಮಿ ಎಲ್ಲರಿಗೂ ಉತ್ತರ ಕೊಟ್ಟರು. ತಾವು ಭಾರತದ ಮೊದಲ ಆಯ್ಕೆಯ ವೇಗಿ ಎಂಬುದನ್ನು ಸಾಬೀತುಪಡಿಸಿದರು.
ಭೋಜನ ವಿರಾಮದ ನಂತರದ ಎರಡನೇ ಓವರ್ನಲ್ಲಿ ಮತ್ತು ತಮ್ಮ ಎರಡನೇ ಸ್ಪೆಲ್ನ ಮೊದಲ ಎಸೆತದಲ್ಲಿ ಮೊಹಮ್ಮದ್ ಶಮಿ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಲಾಬುಶೇನ್ ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ಅದಕ್ಕಿಂತ ಮೊದಲು ದಿನದಾಟದ ಮೊದಲ ಅವಧಿಯ ಯಶಸ್ಸನ್ನು ಎರಡೂ ತಂಡಗಳು ಹಂಚಿಕೊಂಡವು, ಭಾರತವು ಆಸೀಸ್ ಆರಂಭಿಕರನ್ನು ಪೆವಿಲಿಯನ್ಗೆ ಕಳುಹಿಸಿದರೆ ಆಸ್ಟ್ರೇಲಿಯಾ 73 ರನ್ ಗಳಿಸುವ ಮೂಲಕ ಪ್ರತ್ಯುತ್ತರ ನೀಡಿತು. ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿ ಎಂಟು ಬೌಂಡರಿಗಳನ್ನು ಗಳಿಸಿದರು. ಆದರೆ 7 ರನ್ಗಳಿಂದ ಅರ್ಧ ಶತಕ ವಂಚಿತರಾದರು.
ವಾರ್ನರ್ ವಿಕೆಟ್ ಪಡೆಯುವ ಹಿಂದಿನ ದೊಡ್ಡ ಕಾರಣ ಕೆ.ಎಸ್.ಭರತ್ ಅವರ ಉತ್ತಮ ಕೀಪಿಂಗ್. ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ಈ ಕ್ಯಾಚ್ ಮೂಲಕ ಆಯ್ಕೆಯನ್ನು ಸಮರ್ಧಿಸಿಕೊಂಡರು. ಭರತ್ ಇದಕ್ಕಿಂತ ಹಿಂದೆ ಎರಡು ಬಾರಿ ಇಂಗ್ಲೆಂಡ್ ಪಿಚ್ನಲ್ಲಿ ಆಡಿದ್ದಾರೆ. ಒಂದು ಅಭ್ಯಾಸ ಪಂದ್ಯ, ಮತ್ತೊಂದು ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಎ ಪಂದ್ಯ.
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?