IPL 2023: ಚಾಂಪಿಯನ್​ ಪಟ್ಟ ಉಳಿಸಿಕೊಳ್ಳುವುದೇ ಗುಜರಾತ್​; ತಂಡದ ಏಳು-ಬೀಳಿನ ಸಂಪೂರ್ಣ ಮಾಹಿತಿ ಇಲ್ಲಿದೆ - Vistara News

ಕ್ರಿಕೆಟ್

IPL 2023: ಚಾಂಪಿಯನ್​ ಪಟ್ಟ ಉಳಿಸಿಕೊಳ್ಳುವುದೇ ಗುಜರಾತ್​; ತಂಡದ ಏಳು-ಬೀಳಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಗುಜರಾತ್​ ಟೈಟನ್ಸ್​ ತಂಡದ ಆಟವನ್ನು ನೋಡುವಾಗ ಈ ಬಾರಿಯು ತಂಡ ಕಪ್​ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲದಂತೆ ಕಾಣುತ್ತಿದೆ.

VISTARANEWS.COM


on

gujarat titans
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡದ ಆಟವನ್ನು ನೋಡುವಾಗ ಈ ಬಾರಿಯು ತಂಡ ಕಪ್​ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲದಂತೆ ಕಾಣುತ್ತಿದೆ. ಇದಕ್ಕೆ ತಂಡದ ಸಂಘಟಿತ ಪ್ರದರ್ಶನೇ ಸಾಕ್ಷಿ. ಸದ್ಯ ಗುಜರಾತ್​ ತಂಡ ಕಳೆದ ಆವೃತ್ತಿಯಲ್ಲಿ ಯಾವ ರೀತಿ ಪ್ರದರ್ಶನ ತೋರಿತ್ತು, ಈ ಬಾರಿ ತಂಡದ ಪ್ರದರ್ಶನ ಹೇಗಿದೆ, ತಂಡದ ಬಲಾಬಲ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಲೆಕ್ಕ ಭರ್ತಿಯ ತಂಡ ಎಂಬ ಅವಮಾನ

15ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಯಿತು. ತಂಡಗಳ ಸಂಖ್ಯೆಯನ್ನು 8 ರಿಂದ 10ಕ್ಕೆ ಏರಿಸಲಾಯಿತು. ಹೀಗಾಗಿ ಲಕ್ನೋ ಸೂಪರ್​ಜೈಂಟ್ಸ್​ ಮತ್ತು ಗುಜರಾತ್​ ಟೈಟನ್ಸ್​ ತಂಡಗಳು ಹೊಸದಾಗಿ ಐಪಿಎಲ್​ಗೆ ಕಾಲಿರಿಸಿತು. ಗುಜರಾತ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಅವರಿಗೆ ತಂಡ ನಾಯಕನ ಪಟ್ಟವನ್ನು ನೀಡಲಾಯಿತು. ತಂಡದಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಅನ್​ಕ್ಯಾಪ್ಡ್​ ಮತ್ತು ತೀರಾ ಕಳಪೆ ಪ್ರದರ್ಶನ ತೋರಿ ಇತರ ತಂಡಗಳಿಂದ ಕೈ ಬಿಟ್ಟ ಆಟಗಾರರಾಗಿದ್ದರು. ಈ ತಂಡವನ್ನು ಕಂಡ ಕ್ರಿಕೆಟ್​ ಅಭಿಮಾನಿಗಳು ಇದೊಂದು ಲೆಕ್ಕ ಭರ್ತಿಗೆ ಮಾಡಿದ ತಂಡದಂತಿದೆ. ಇದು ಒಂದು ಪಂದ್ಯ ಗೆದ್ದರೆ ಅಚ್ಚರಿ ಎಂಬಂತೆ ಈ ತಂಡವನ್ನು ಅಪಹಾಸ್ಯ ಮಾಡಲಾಗಿತ್ತು. ಆದರೆ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಕಪ್​ ಎತ್ತಿದಾಗ ಈ ತಂಡದ ಸಾಮರ್ಥ್ಯವೇನು ಎಂಬುವುದು ಜಗಜ್ಜಾಹೀರಾಗಿತ್ತು.

ಚಾಣಕ್ಯ ಆಶಿಶ್ ನೆಹ್ರಾ

ಟೀಮ್​ ಇಂಡಿಯಾ ಕಂಡ ಶ್ರೇಷ್ಠ ಬೌಲರ್​ಗಳಲ್ಲಿ ಒಂದಾಗಿರುವ ಆಶಿಶ್ ನೆಹ್ರಾ ಅವರು ಈ ತಂಡದ ಬೆನ್ನೆಲುಬು. ತಂಡದ ಮುಖ್ಯ ಕೋಚ್​ ಆಗಿರುವ ಅವರು ಪಂದ್ಯ ಆರಂಭಗೊಂಡ ಕ್ಷಣದಿಂದ ಅಂತ್ಯದ ವರೆಗೂ ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂರದೆ ಬೌಂಡರಿ ಲೈನ್​ ಸುತ್ತಲೂ ಓಡಾಡುತ್ತ ಆಟಗಾರರಿಗೆ ಆತ್ಮ ವಿಶ್ವಾಸ ಮತ್ತು ಆಟದ ತಂತ್ರಗಾರಿಕೆಯನ್ನು ಹೇಳಿಕೊಡುತ್ತಲೇ ಇರುತ್ತಾರೆ. ಇದನ್ನೂ ಪ್ರತಿ ಪಂದ್ಯದಲ್ಲಿಯೂ ಕಾಣಬಹುದಾಗಿದೆ. ಚಾಣಕ್ಯನಂತೆ ಅವರು ತಂಡದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದು ಕೂಡ ತಂಡದ ಶ್ರೇಷ್ಠ ಪ್ರದರ್ಶನಕ್ಕೆ ಕಾರಣ. ಇದರ ಜತೆಗೆ 28 ವರ್ಷಗಳ ಬಳಿಕ ಭಾರತ ತಂಡ ಏಕದಿನ ವಿಶ್ವ ಕಪ್​ ಗೆಲ್ಲುವಲ್ಲಿ ಪ್ರಮುಖ ಕಾರಣಕರ್ತರಾದ ಕೋಚ್​ ಗ್ಯಾರಿ ಕರ್ಸ್ಟನ್‌ ಅವರ ಬ್ಯಾಟಿಂಗ್​ ಮಾರ್ಗದರ್ಶನ ತಂಡಕ್ಕೆ ಪ್ಲಸ್​ ಪಾಯಿಂಟ್.

​ಒಂದೇ ಆಟಗಾರನನ್ನು ನಂಬಿ ಕುಳಿತಿಲ್ಲ

ಗುಜರಾತ್​ ತಂಡದ ವಿಶೇಷತೆ ಎಂದರೆ ಈ ತಂಡ ಒಂದೇ ಆಟಗಾರನ ಪ್ರದರ್ಶನವನ್ನು ನಂಬಿ ಕುಳಿತಿಲ್ಲ. ಪ್ರತಿಯೊಬ್ಬ ಆಟಗಾರನು ಶ್ರೇಷ್ಠ ಪ್ರದರ್ಶನವನ್ನು ತೋರುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಶುಭಮನ್​ ಗಿಲ್​ ಅವರು ಪಂದ್ಯದಿಂದ ಪಂದ್ಯಕ್ಕೆ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಈ ಬಾರಿ ಆಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಕಳೆದ ಆವೃತ್ತಿಯಲ್ಲಿಯೂ 10 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು. ಜತೆಗೆ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಬಾರಿಯೂ ತಂಡ ಕಪ್​ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IPL 2023 : ರೋಹಿತ್ ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ 2ನೇ ಭಾರತೀಯ; ಏನಿದು ಸಾಧನೆ?

ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್​

ಕಳೆದ ವರ್ಷ ನಡೆದ ಫೈನಲ್​ ಪಂದ್ಯದಲ್ಲಿ ಗುಜರಾತ್​ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​ ರಾಯಲ್ಸ್​ ತೀರಾ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶಿಸಿ 9 ವಿಕೆಟ್​ಗೆ 130 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್​ ಕೇವಲ ಮೂರು ವಿಕೆಟ್​ ಕಳೆದುಕೊಂಡು 133 ರನ್​ ಬಾರಿಸಿ ಕಪ್​ ಎತ್ತಿ ಮೆರೆದಾಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sunil Chhetri: ಮೈ ಬ್ರದರ್, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಚೆಟ್ರಿಗೆ ಶುಭ ಹಾರೈಸಿದ ಗೆಳೆಯ ವಿರಾಟ್​ ಕೊಹ್ಲಿ

Sunil Chhetri: ವಿರಾಟ್ ಕೊಹ್ಲಿ ಹಾಗೂ ಸುನಿಲ್ ಚೆಟ್ರಿ ಉತ್ತಮ ಸ್ನೇಹಿತರು. ವಿರಾಟ್​ ಕೊಹ್ಲಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್​ನೆಸ್​ಗೆ ಸುನಿಲ್ ಚೆಟ್ರಿಯೇ ನಿಜವಾದ ಸ್ಫೂರ್ತಿ ಎಂದು ಹೇಳಿದ್ದರು.

VISTARANEWS.COM


on

sunil chhetri
Koo

ಬೆಂಗಳೂರು: ಭಾರತ ಕಂಡ ಶ್ರೇಷ್ಠ ಫುಟ್ಬಾಲ್(Indian football icon)​ ಆಟಗಾರ ಸುನೀಲ್​ ಚೆಟ್ರಿ(Sunil Chhetri) ಅವರು ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್​ ವೃತ್ತಿ ಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ಜೂನ್​ 6 ರಂದು ಕುವೈತ್​(Kuwait) ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ(FIFA World Cup 2026 qualifier) ಪಂದ್ಯ ಅವರಿಗೆ ಕೊನೆಯ ಪಂದ್ಯವಾಗಿರಲಿದೆ. ಚೆಟ್ರಿ ತಮ್ಮ ನಿವೃತ್ತಿಯನ್ನು ಘೋಷಿಸುತ್ತಿದ್ದಂತೆ, ಅನೇಕ ಭಾರತೀಯ ದಿಗ್ಗಜ ಕ್ರೀಡಾಪಟುಗಳು ಚೆಟ್ರಿಗೆ ಹಾರೈಸಿದ್ದಾರೆ ಜತೆಗೆ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಚೆಟ್ರಿ ಅವರ ಆಪ್ತ ಗೆಳೆಯ ಟೀಮ್​ ಇಂಡಿಯಾದ ಕ್ರಿಕೆಟಿಗ ವಿರಾಟ್​ ಕೊಹ್ಲಿ(virat kohli) ನಿಮ್ಮ ಬಗ್ಗೆ ಹೆಮ್ಮೆಯಿದೆ, ಮೈ ಬದ್ರರ್ ಎಂದು ಕಮೆಂಟ್​ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಸುನಿಲ್ ಚೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು. ಚೆಟ್ರಿ ಇಂಡಿಯನ್​ ಸೂಪರ್​ ಲೀಗ್​ನಲ್ಲಿ ಬೆಂಗಳೂರು ತಂಡದ ಪರ ಆಡುತ್ತಿದ್ದು, ವಿರಾಟ್​ ಕೊಹ್ಲಿ ಆರ್​ಸಿಬಿ ಪರ ಆಡುತ್ತಿದ್ದಾರೆ. ಹಲವು ಬಾರಿ ಚೆಟ್ರಿ ಆರ್​ಸಿಬಿ ಕ್ಯಾಂಪ್​ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆರ್​ಸಿಬಿ ಕೂಡ ಚೆಟ್ರಿಗೆ ಶುಭ ಹಾರೈಸಿದೆ. ವಿರಾಟ್​ ಕೊಹ್ಲಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಫಿಟ್​ನೆಸ್​ಗೆ ಸುನಿಲ್ ಚೆಟ್ರಿಯೇ ನಿಜವಾದ ಸ್ಫೂರ್ತಿ ಎಂದು ಹೇಳಿದ್ದರು.

ಸೈನಿಕನ ಮಗ

1984 ಆಗಸ್ಟ್ 3ರಂದು ಸಿಕಂದರಾಬಾದನಲ್ಲಿ ಹುಟ್ಟಿದ ಸುನೀಲ್ ತಂದೆ ಒಬ್ಬ ಸೈನಿಕ ಆಗಿದ್ದರು ಮತ್ತು ಭಾರತದ ಆರ್ಮಿ ಫುಟ್ಬಾಲ್ ಟೀಮ್‌ನಲ್ಲಿ ಆಡಿದ್ದರು. ಅದರಿಂದಾಗಿ ಫುಟ್ಬಾಲ್ ಆಸಕ್ತಿ ಹುಡುಗನಿಗೆ ರಕ್ತದಲ್ಲಿಯೇ ಬಂದಿತ್ತು ಎನ್ನಬಹುದು. ತನ್ನ 18ನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಬುಗಳ ಪರವಾಗಿ ಆಡಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಬಂಗಾಳ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾರೆ. 2015ರಿಂದ ಇಂದಿನವರೆಗೆ ಬೆಂಗಳೂರು ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಎಂದರೆ ಅದು ಸುನೀಲ್ ಅನ್ನೋದು ನಿಜಕ್ಕೂ ಗ್ರೇಟ್.

ಒಬ್ಬ ಕ್ರೀಡಾಪಟುವಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿ, ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, 2011ರ ಅರ್ಜುನ ಪ್ರಶಸ್ತಿ ಅವರಿಗೆ ಈಗಾಗಲೇ ದೊರೆತಿವೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಸುರು ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ! ಸದ್ಯಕ್ಕೆ ನಿವೃತ್ತಿ ಆಗುವ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಸುನೀಲ್ ಚೆಟ್ರಿ ಭಾರತೀಯ ಫುಟ್ಬಾಲ್ ಲೋಕದ ಲೆಜೆಂಡ್ ಆಟಗಾರ ಎಂದು ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ಅಲ್ಲವೇ?

ಇದನ್ನೂ ಓದಿ IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪದಾರ್ಪಣೆ ಮಾಡಿದ ಸುನೀಲ್‌ ಚೆಟ್ರಿ 93 ಗೋಲು ದಾಖಲಿಸಿ ಅತ್ಯಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್‌ ಮೆಸ್ಸಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್​ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.

Continue Reading

ಕ್ರೀಡೆ

Sanju Samson: ಸತತ 4 ಸೋಲು; ಬೇಸರ ಹೊರಹಾಕಿದ ನಾಯಕ ಸಂಜು ಸ್ಯಾಮ್ಸನ್

Sanju Samson: ಕಳೆದ ನಾಲ್ಕು ಪಂದ್ಯಗಳಿಂದ ನಾವು ವೈಫಲ್ಯಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸಂಘಟಿತ ಪ್ರದರ್ಶನ ತೋರದೇ ಇರುವುದು. ನಮ್ಮಲ್ಲಿ ಹಲವು ಮ್ಯಾಚ್​ ವಿನ್ನರ್​ಗಳಿದ್ದಾರೆ. ಆದರೆ ಯಾರೂ ಕೂಡ ಪಂದ್ಯ ಗೆಲ್ಲಿಸಿಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ಸಂಜು ಸ್ಯಾಮ್ಸನ್ ಹೇಳಿದರು.

VISTARANEWS.COM


on

Sanju Samson
Koo

ಗುವಾಹಟಿ: ಪಂಜಾಬ್​ ಕಿಂಗ್ಸ್(​Punjab Kings) ವಿರುದ್ಧದ ಪಂದ್ಯದಲ್ಲಿ 5 ವಿಕೆಟ್​ಗಳ ಸೋಲು ಕಾಣುವ ಮೂಲಕ ರಾಜಸ್ಥಾನ್​ ರಾಯಲ್ಸ್​(Rajasthan Royals) ಸತತ 4ನೇ ಸೋಲಿಗೆ ತುತ್ತಾಯಿತು. ತಂಡದ ಈ ಕಳಪೆ ಪ್ರದರ್ಶನದ ಬಗ್ಗೆ ನಾಯಕ ಸಂಜು ಸ್ಯಾಮ್ಸನ್(sanju samson)​ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ.

ಸೋಲಿನ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ಕಳೆದ ನಾಲ್ಕು ಪಂದ್ಯಗಳಿಂದ ನಾವು ವೈಫಲ್ಯಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸಂಘಟಿತ ಪ್ರದರ್ಶನ ತೋರದೇ ಇರುವುದು. ನಮ್ಮಲ್ಲಿ ಹಲವು ಮ್ಯಾಚ್​ ವಿನ್ನರ್​ಗಳಿದ್ದಾರೆ. ಆದರೆ ಯಾರೂ ಕೂಡ ಪಂದ್ಯ ಗೆಲ್ಲಿಸಿಕೊಡುವಂತಹ ಪ್ರದರ್ಶನ ನೀಡುತ್ತಿಲ್ಲ ಎಂದು ಹೇಳಿದರು.

ಈ ಹಿಂದೆ ನಾವು 200 ಪ್ಲಸ್​ ರನ್​ಗಳನ್ನು ಸುಲಭವಾಗಿ ಕಲೆಹಾಕಿದ್ದೇವೆ ಮತ್ತು ಚೇಸಿಂಗ್​ ಕೂಡ ಮಾಡಿದ್ದೇವೆ. ಆದರೆ ಈಗ ಕನಿಷ್ಠ 150ರ ಗಡಿ ದಾಡಲೂ ಕೂಡ ಪರದಾಡುವ ಸ್ಥಿತಿಯಲ್ಲಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ತೋರುವ ತುರ್ತು ಅಗತ್ಯವಿದೆ. ಪ್ಲೇ ಆಫ್​ಗೆ ಪ್ರವೇಶ ಪಡೆದಿದ್ದರೂ ಕೂಡ ಮುಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕು. ಈ ಮೂಲಕ ಹಿಂದಿನ ಫಾರ್ಮ್​ ಕಂಡುಕೊಳ್ಳಬೇಕಿದೆ ಎಂದು ಸಂಜು ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಬೌಲಿಂಗ್​ ವಿಭಾಗದಲ್ಲಿಯೂ ಸುಧಾರಣೆ ಕಂಡುಕೊಳ್ಳುವ ಅನಿವಾರ್ಯತೆಯೂ ಇದೆ ಎಂದು ಇದೇ ಸಂದರ್ಭದಲ್ಲಿ ಸಂಜು ಹೇಳಿದರು.

ಇದನ್ನೂ ಓದಿ IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

ರಾಜಸ್ಥಾನ್​ ತಂಡಕ್ಕೆ​ 2ನೇ ತವರಾದ ಗುವಾಹಟಿಯ ಬರ್ಸಾಪರಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್ ಬ್ಯಾಟಿಂಗ್​ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 144 ರನ್​ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್(Punjab Kings)​ ಕೂಡ ಒಂದು ಹಂತದಲ್ಲಿ ಆಘಾತ ಎದುರಿಸಿ ಬಳಿಕ ಚೇತರಿಕೆ ಹಾದಿ ಹಿಡಿದು 18.5 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 145 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ರಾಜಸ್ಥಾನ್​ ಪರ ಯಶಸ್ವಿ ಜೈಸ್ವಾಲ್​(4) ಜಾಸ್​ ಬಟ್ಲರ್​ ಅನುಪಸ್ಥಿತಿಯಲ್ಲಿ ಆಡಲಿಳಿದ ಕೊಹ್ಲರ್-ಕಾಡ್ಮೋರ್(18), ನಾಯಕ ಸಂಜು ಸ್ಯಾಮ್ಸನ್​(18), ಧೃವ್​ ಜುರೇಲ್​(0), ರೋಮನ್​ ಪೋವೆಲ್(4) ಬ್ಯಾಟಿಂಗ್​ ವೈಫಲ್ಯ ಕಂಡು ಪೆವಿಲಿಯನ್​ ಪರೇಡ್​ ನಡೆಸಿದರು. ರಿಯಾನ್​ ಪರಾಗ್​(48) ಮತ್ತು ಆರ್​.ಅಶ್ವಿನ್​(28) ಅವರ ಅಸಾಮಾನ್ಯ ಬ್ಯಾಟಿಂಗ್​ನಿಂದಾಗಿ ತಂಡ 100 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಯಶಸ್ಸು ಕಂಡಿತು.

Continue Reading

ಕ್ರೀಡೆ

GT vs SRH: ಇಂದು ಲ್ಯಾವೆಂಡರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಗುಜರಾತ್​ ತಂಡ; ಇದರ ಉದ್ದೇಶವೇನು?

GT vs SRH:”ಲ್ಯಾವೆಂಡರ್ ಜರ್ಸಿಗಳನ್ನು ಧರಿಸುವುದರಿಂದ ಕ್ಯಾನ್ಸರ್ ಹೋರಾಟಗಾರರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ ಮತ್ತು ಅವರ ಧೈರ್ಯವನ್ನು ಗೌರವಿಸುತ್ತದೆ. ತಮ್ಮ ಈ ಅಭಿಯಾನದಿಂದ ಪ್ರತಿಯೊಬ್ಬರಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಗುಜರಾತ್​ ಫ್ರಾಂಚೈಸಿ ತಿಳಿಸಿದೆ.

VISTARANEWS.COM


on

GT vs SRH
Koo

ಹೈದರಾಬಾದ್​: ಇಂದು ನಡೆಯುವ ಸನ್​ರೈಸರ್ಸ್​ ಹೈದರಾಬಾದ್(GT vs SRH)​ ವಿರುದ್ಧದ ಪಂದ್ಯದಲ್ಲಿ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ಟೈಟಾನ್ಸ್(Gujarat Titans)​ ತಂಡ ಕ್ಯಾನ್ಸರ್ ಜಾಗೃತಿಗಾಗಿ ಲ್ಯಾವೆಂಡರ್ ಜೆರ್ಸಿ(gujarat titans lavender jersey) ಧರಿಸಿ ಕಣಕ್ಕಿಳಿಯಲಿದೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿಯೇ ಗುಜರಾತ್​ ಈ ಜೆರ್ಸಿಯಲ್ಲಿ ಆಡಬೇಕಿತ್ತು. ಆದರೆ ಈ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಇದು ಸಾಧ್ಯವಾಗಿರಲಿಲ್ಲ. ಕಳೆದ ವರ್ಷವೂ ಕೂಡ ಗುಜರಾತ್​ ಈ ಜೆರ್ಸಿಯಲ್ಲಿ ಆಡಿತ್ತು. ಕ್ಯಾನ್ಸರ್ ರೋಗಿಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಮತ್ತು ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

“ಲ್ಯಾವೆಂಡರ್ ಜರ್ಸಿಗಳನ್ನು ಧರಿಸುವುದರಿಂದ ಕ್ಯಾನ್ಸರ್ ಹೋರಾಟಗಾರರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ ಮತ್ತು ಅವರ ಧೈರ್ಯವನ್ನು ಗೌರವಿಸುತ್ತದೆ. ತಮ್ಮ ಈ ಅಭಿಯಾನದಿಂದ ಪ್ರತಿಯೊಬ್ಬರಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ಗುಜರಾತ್​ ಫ್ರಾಂಚೈಸಿ ತಿಳಿಸಿದೆ.

2040ರ ವೇಳೆಗೆ ಭಾರತದಲ್ಲಿನ ಕ್ಯಾನ್ಸರ್‌ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ನೋಯ್ಡಾದ ರಾಷ್ಟ್ರೀಯ ಕ್ಯಾನ್ಸರ್‌ ತಡೆ ಮತ್ತು ಸಂಶೋಧನ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ 2.25 ದಶಲಕ್ಷ ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು 2040ರ ವೇಳೆಗೆ ಇದು ದ್ವಿಗುಣಗೊಳ್ಳಲಿದೆ ಎಂದಿದೆ. ಪ್ರತೀ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆೆ ಎಂದು ಕ್ಯಾನ್ಸರ್‌ ಇಂಡಿಯಾ.ಆರ್ಗ್‌ ವರದಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ. 30-50ರಷ್ಟು ಕ್ಯಾನ್ಸರ್‌ ರೋಗಗಳನ್ನು ತಡೆಯಬಹುದಾಗಿದೆ. ಇದ ಕ್ಕಾಗಿ ತಂಬಾಕು ಮತ್ತು ಯುವಿ ಕಿರಣಗಳಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಒಂದು ಸಿಗರೇಟ್‌ನಲ್ಲಿ ಸುಮಾರು 7,000 ರಾಸಾಯನಿಕಗಳಿವೆ ಎನ್ನಲಾಗುತ್ತಿದ್ದು, ಅವುಗಳಲ್ಲಿ 50 ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದೂ ಅದು ಹೇಳಿದೆ.

ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಗುಜರಾತ್​ ತಂಡದ ಪ್ಲೇ ಆಫ್ ಗೇರುವ ಆಸೆ ಕಮರಿ ಹೋಗಿತ್ತು. ಟೂರ್ನಿಯಿಂದ ಹೊರಬಿದ್ದಿರುವ ಗಿಲ್​ ಪಡೆಗೆ ಇಂದಿನ ಪಂದ್ಯ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಮೊದಲೆರಡು ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್‌ ಟೈಟಾನ್ಸ್‌ ಈ ಬಾರಿ ತೀರಾ ನಿರಾಶಾದಾಯಕ ಪ್ರದರ್ಶನ ತೋರಿದೆ. ಮೊಹಮ್ಮದ್‌ ಶಮಿ ಗೈರು ಮತ್ತು ಪಾಂಡ್ಯ ಮುಂಬೈ ತಂಡಕ್ಕೆ ಹೋದದ್ದು ತಂಡಕ್ಕೆ ಭಾರೀ ಹೊಡೆತ ನೀಡಿತ್ತು.​

ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ಗೆ ಇದು ಮಹತ್ವದ ಪಂದ್ಯ. ಸದ್ಯ 14 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿದ್ದರೂ ಪ್ಲೇ ಆಫ್​ ಟಿಕೆಟ್​ ಇನ್ನೂ ಅಧಿಕೃತಗೊಂಡಿಲ್ಲ. ಇಂದು ಗೆದ್ದರೆ ಅಧಿಕೃತವಾಗಲಿದೆ. 25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

Continue Reading

ಕ್ರೀಡೆ

KMF Nandini Logo: ನಂದಿನಿ ಲೋಗೋ ಇರುವ ಜೆರ್ಸಿ ಅನಾವರಣಗೊಳಿಸಿದ ಸ್ಕಾಟ್ಲೆಂಡ್

KMF Nandini Logo: ಸ್ಕಾಟ್ಲೆಂಡ್ ತಂಡದ ಉಪನಾಯಕ ಮ್ಯಾಥ್ಯೂ ಕ್ರಾಸ್ ಮತ್ತು ಬಲಗೈ ಮಧ್ಯಮ ವೇಗಿ ಕ್ರಿಸ್ ಸೋಲ್ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಅನಾವರಣಗೊಳಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್​ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

VISTARANEWS.COM


on

T20 World Cup 2024
Koo

ಬೆಂಗಳೂರು: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಕರ್ನಾಟಕ ಹಾಲು ಮಹಾ ಮಂಡಳಿ(KMF) ಈಗಾಗಲೇ 2 ತಂಡಗಳಾದ ಸ್ಕಾಟ್ಲೆಂಡ್(Scotland) ಮತ್ತು ಐರ್ಲೆಂಡ್(Ireland) ತಂಡಗಳ ಪ್ರಾಯೋಜಕತ್ವ ಪಡೆದಿದೆ. ಈ ಮೂಲಕ ಕೆಎಂಎಫ್‌ ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟು ನಂದಿನಿ(nandini milk) ಲೋಗೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದೆ. ಜತೆಗೆ ಅಮೂಲ್‌ಗೆ ತೀವ್ರ ಪೈಪೋಟಿ ನೀಡಲಿದೆ. ಇದೀಗ ನಂದಿನಿ ಲೋಗೋ(KMF Nandini Logo) ಇರುವ ಜೆರ್ಸಿಯನ್ನು ‘ಕ್ರಿಕೆಟ್ ಸ್ಕಾಟ್ಲೆಂಡ್’ ಅನಾವರಣಗೊಳಿಸಿದೆ.

ಸ್ಕಾಟ್ಲೆಂಡ್ ತಂಡದ ಉಪನಾಯಕ ಮ್ಯಾಥ್ಯೂ ಕ್ರಾಸ್ ಮತ್ತು ಬಲಗೈ ಮಧ್ಯಮ ವೇಗಿ ಕ್ರಿಸ್ ಸೋಲ್ ನಂದಿನಿ ಲೋಗೋ ಇರುವ ಜೆರ್ಸಿಯನ್ನು ಅನಾವರಣಗೊಳಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ನಮ್ಮ ಬ್ರಾಂಡ್​ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಐರ್ಲೆಂಡ್ ತಂಡ ಜೆರ್ಸಿ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಮಿನಿ ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಇದನ್ನೂ ಓದಿ T20 World Cup 2024: ಭಾರತ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ; ಕಾರಣ ಏನು?

ಮೋಹನ್‌ದಾಸ್‌ ಪೈ ವಿರೋಧ


ಉದ್ಯಮಿ ಮೋಹನ್‌ದಾಸ್‌ ಪೈ (Mohandas Pai) ಅವರು ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ ಪಡೆದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕೆಎಂಎಫ್‌ಗೆ ಕರ್ನಾಟಕ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು ಕಾಣುವುದಿಲ್ಲವೇ? ಇವುಗಳಿಗೇಕೆ ಪ್ರಾಯೋಜಕತ್ವ ನೀಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಕೆಎಂಎಫ್‌ನಿಂದ ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೊಜಕತ್ವ ಪಡೆದ ವಿಚಾರದ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋಹನ್‌ ದಾಸ್‌ ಪೈ, ಕರ್ನಾಟಕದ ರಣಜಿ ತಂಡ, ರಾಜ್ಯದ ಕ್ರೀಡಾಪಟುಗಳು, ಕಲಾವಿದರು, ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿ ವೇತನಗಳಿಗೆ ಏಕೆ ಕೆಎಂಎಫ್‌ ಪ್ರಾಯೋಜಕತ್ವವನ್ನು ನೀಡಬಾರದು? ಕೆಎಂಎಫ್ ಕನ್ನಡಿಗ ತೆರಿಗೆದಾರರ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಧನಸಹಾಯವನ್ನು ಪಡೆದುಕೊಳ್ಳುತ್ತದೆ. ಆದರೆ, ಯಾರಿಗೂ ಗೊತ್ತಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಹೊರಟಿದೆ” ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಈ ಬಗ್ಗೆ ಟ್ಯಾಗ್‌ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದರು.

Continue Reading
Advertisement
Startup Investment
ವಾಣಿಜ್ಯ18 seconds ago

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Virat Kohli
ಕ್ರೀಡೆ5 mins ago

Virat Kohli: ನಿವೃತ್ತಿಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಿರಾಟ್​ ಕೊಹ್ಲಿ; ಅಭಿಮಾನಿಗಳಿಗೆ ಆತಂಕ

Bhavani Singh pankaj shivanna couple expecting-their first child
ಕಿರುತೆರೆ15 mins ago

Bhavani Singh: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಸುಬ್ಬಲಕ್ಷ್ಮಿ ಸಂಸಾರʼ ಧಾರಾವಾಹಿ ನಟ!

ರಾಜಕೀಯ29 mins ago

HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

Bomb threat
ದೇಶ40 mins ago

Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

sunil chhetri
ಕ್ರೀಡೆ50 mins ago

Sunil Chhetri: ಮೈ ಬ್ರದರ್, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಚೆಟ್ರಿಗೆ ಶುಭ ಹಾರೈಸಿದ ಗೆಳೆಯ ವಿರಾಟ್​ ಕೊಹ್ಲಿ

Success Story
ದೇಶ56 mins ago

Success Story: ರಾಧಾಮಣಿ ಅಮ್ಮಂಗೆ ವಯಸ್ಸು ಕೇವಲ ನಂಬರ್‌ ಅಷ್ಟೇ; 73 ವರ್ಷದ ಇವರ ಬಳಿ ಇದೆ ಬರೋಬ್ಬರಿ 11 ವಾಹನಗಳ ಲೈಸನ್ಸ್‌

Kiccha Sudeep Max Cinema shooting completed
ಸ್ಯಾಂಡಲ್ ವುಡ್59 mins ago

Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

gold rate today priyamani
ಚಿನ್ನದ ದರ1 hour ago

Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

Swati maliwal
ದೇಶ1 hour ago

Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌