IPL 2023: ಧೋನಿ ಪಡೆಗೆ ಶರಣಾದ ಕೆಕೆಆರ್​; ಅಗ್ರಸ್ಥಾನಕ್ಕೆ ಜಿಗಿದ ಚೆನ್ನೈ - Vistara News

ಕ್ರಿಕೆಟ್

IPL 2023: ಧೋನಿ ಪಡೆಗೆ ಶರಣಾದ ಕೆಕೆಆರ್​; ಅಗ್ರಸ್ಥಾನಕ್ಕೆ ಜಿಗಿದ ಚೆನ್ನೈ

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ 49 ರನ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ.​

VISTARANEWS.COM


on

Kolkata Knight Riders vs Chennai Super Kings
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕೊತಾ: ಭಾನುವಾರ ರಾತ್ರಿ ಕೋಲ್ಕೊತಾದಲ್ಲಿ ನಡೆದ ಬೃಹತ್‌ ಮೊತ್ತದ ಐಪಿಎಲ್‌ ಮೇಲಾಟದಲ್ಲಿ ಚೆನ್ನೈ 49 ರನ್ನುಗಳಿಂದ ಕೆಕೆಆರ್​ಗೆ ಆಘಾತವಿಕ್ಕಿದೆ. ಧೋನಿ ಪಡೆ ಈ ಗೆಲುವಿನೊಂದಿಗೆ 10 ಅಂಕ ಗಳಿಸಿ ಅಗ್ರಸ್ಥಾನಕ್ಕೆ ಜಿಗಿದಿದೆ. ಇದಕ್ಕೂ ಮುನ್ನ ಮೂರನೇ ಸ್ಥಾನದಲ್ಲಿತ್ತು. ಚೆನ್ನೈ ಪರ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಅಜಿಂಕ್ಯ ರಹಾನೆ ಕೇವಲ 29 ಎಸೆತಗಳ ಮುಂದೆ 71 ರನ್​ ಬಾರಿಸಿ ಮಿಂಚಿದರು.

ಕೋಲ್ಕೊತಾದ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 234 ರನ್​ ಗಳಿಸಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿ ಹೋದ ಕೆಕೆಆರ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು 186 ರನ್​ ಗಳಿಸಲಷ್ಟೇ ಶಕ್ತವಾಯಿತು. ​

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್​ ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಸುನೀಲ್​ ನಾರಾಯಣ್​(0), ಎನ್​. ಜಗದೀಶನ್​(1), ವೆಂಕಟೇಶ್​ ಅಯ್ಯರ್​(20) ರನ್​ಗೆ ಆಟ ಮುಗಿಸಿದರು. ತಂಡದ ಮೊತ್ತ 50 ಆಗುವ ಮೊದಲೇ ಮೂರು ವಿಕೆಟ್​ ಬಿತ್ತು. ಇನ್ನೇನು ತಂಡ ನೂರು ಮೊತ್ತವನ್ನು ದಾಟುವುದಿಲ್ಲ ಎನ್ನುವಷ್ಟರಲ್ಲಿ ಕ್ರೀಸ್​ಗೆ ಬಂದ ಇಂಗ್ಲೆಂಡ್​ ತಂಡದ ಹಾರ್ಡ್​ ಹಿಟ್ಟರ್​ ಜಾಸನ್​ ರಾಯ್​ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಕೆಕೆಆರ್​ಗೆ ಗೆಲುವಿನ ವಿಶ್ವಾಸ ಮೂಡಿಸಿದರು.

ಕೇವಲ 19 ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯಲ್ಲಿ ದಾಖಲಾದ ಮೂರನೇ ಅತಿ ವೇಗದ ಅರ್ಧಶತಕವಾಗಿದೆ. ಅಜಿಂಕ್ಯ ರಹಾನೆ ಕೂಡ 19 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು. ಅಗ್ರ ಸ್ಥಾನದಲ್ಲಿ ಲಕ್ನೋ ತಂಡದ ನಿಕೋಲಸ್​ ಪೂರನ್​ ಇದ್ದಾರೆ. ಅವರು ಆರ್​ಸಿಬಿ ವಿರುದ್ಧ 15 ಎಸೆತದಲ್ಲಿ ಈ ಸಾಧನೆ ಮಾಡಿದ್ದರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸುತ್ತಿದ್ದ ರಾಯ್​ ಅವರನ್ನು ಮಹೀಶ್‌ ತೀಕ್ಷಣ ಕ್ಲೀನ್​ ಬೌಲ್ಟ್​ ಮಾಡಿದರು. ರಾಯ್​ 26 ಎಸೆತದಲ್ಲಿ 61 ರನ್​ ಬಾರಿಸಿದರು. ಇದರಲ್ಲಿ 50 ರನ್​ ಕೇವಲ ಸಿಕ್ಸರ್​ ಮತ್ತು ಬೌಂಡರಿಯಲ್ಲೇ ದಾಖಲಾಯಿತು. ತಲಾ 5 ಸಿಕ್ಸರ್​ ಮತ್ತು ಬೌಂಡರಿ ಸಿಡಿಯಿತು. ರಾಯ್​ ಅವರ ವಿಕೆಟ್​ ಪತನದ ಬಳಿಕ ಕೆಕೆಆರ್​ ಸೋಲು ಕೂಡ ಖಚಿತಗೊಂಡಿತು.

ರಿಂಕು ಸಿಂಗ್​ ಅವರು ಕೆಳ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಅವರಿಗೆ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗದ ಕಾರಣ ತಂಡ ಸೋಲು ಕಂಡಿತು. ಅವರ ಅರ್ಧಶತಕ ಇನಿಂಗ್ಸ್​ ವ್ಯರ್ಥವಾಯಿತು. ಆದರೆ ದೊಡ್ಡ ಅಂತರದಿಂದ ಸೋಲುವ ಅವಮಾನದಿಂದ ತಂಡ ಪಾರಾಯಿತು. ರಿಂಕು ಅವರು 53 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಇನಿಂಗ್ಸ್​ ಆರಂಭಿಸಿದ ಚೆನ್ನೈಗೆ ಆರಂಭಿಕಾರಾದ ಋತುರಾಜ್​ ಗಾಯಕ್ವಾಡ್​ ಮತ್ತು ಡೆವೋನ್​ ಕಾನ್ವೆ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿ 10 ಸರಾಸರಿಯಲ್ಲಿ ಬ್ಯಾಟ್​ ಬೀಸಿ ಪವರ್​ ಪ್ಲೇಯಲ್ಲಿ 59 ರನ್​ ಒಟ್ಟುಗೂಡಿಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಜೋಡಿಯನ್ನು 19 ವರ್ಷದ ನೀಳ ಕೇಶದ ಮಿಸ್ಟ್ರಿ ಸ್ಪಿನ್ನರ್ ಸುಯೇಶ್ ಶರ್ಮಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಗಾಯಕ್ವಾಡ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದರು. ಅವರ ಗಳಿಕೆ 20 ಎಸೆತಗಳಲ್ಲಿ 35. ಈ ವಿಕೆಟ್​ ಬಿದ್ದರೂ ಚೆನ್ನೈಗೆ ಯಾವುದೇ ತೊಂದರೆ ಆಗಲಿಲ್ಲ. ಬಳಿಕ ಆಡಲಿಳಿದ ಅಜಿಂಕ್ಯ ರಹಾನೆ ಕೂಡ ಬಿರುಸಿನಿಂದಲೇ ಬ್ಯಾಟಿಂಗ್​ ನಡೆಸಿದರು. ಮತ್ತೊಂದು ಬದಿಯಲ್ಲಿ ಸಿಡಿಯುತ್ತಿದ್ದ ಎಡಗೈ ಬ್ಯಾಟರ್​ ಡೆವೋನ್​ ಕಾನ್ವೆ 34 ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು.

ಇದನ್ನೂ ಓದಿ IPL 2023: ಫೀಲ್ಡಿಂಗ್​ನಲ್ಲಿ ದಾಖಲೆ; ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ಕೊಹ್ಲಿ; ಇಲ್ಲಿದೆ ವಿಡಿಯೊ

ರಹಾನೆ-ದುಬೆ ಬೊಂಬಾಟ್​ ಬ್ಯಾಟಿಂಗ್​

12 ಓವರ್​ಗಳ ತನಕ ಬ್ಯಾಟಿಂಗ್​ ವಿಸ್ತರಿಸಿದ ಕಾನ್ವೆ ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಬಾರಿಸಿ 56 ರನ್​ ಗಳಿಸಿದರು. ಈ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ಶಿವಂ ದುಬೆ ಆರಂಭದಿಂದಲೇ ಕೆಕೆಆರ್​ ಬೌಲರ್​ಗಳ ಮೇಲೆರಗಿ ಈಡನ್‌ ಗಾರ್ಡನ್ಸ್​ನಲ್ಲಿ ಸಿಕ್ಸರ್​ ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ಅಜಿಂಕ್ಯ ರಹಾನೆ ಕೂಡ ಸಿಡಿಯುತ್ತಿದ್ದರು.

ಉಭಯ ಆಟಗಾರರ ಬ್ಯಾಟಿಂಗ್​ ಪ್ರತಾಪದ ಮುಂದೆ ಕೆಕೆಆರ್​ ಬೌಲರ್​ಗಳು ಸರಿಯಾಗಿ ದಂಡಿಸಿಕೊಂಡರು. ಪ್ರತಿ ಓವರ್​ಗೂ ಕನಿಷ್ಠ 2 ಬೌಂಡರಿ ಅಥವಾ ಸಿಕ್ಸರ್​ ಸಿಡಿಯುತ್ತಲ್ಲೇ ಇತ್ತು. ರಹಾನೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರ ಬೆನ್ನಿಗೆ ದುಬೆ ಕೂಡ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಔಟಾದರು. ಅವರು 5 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ ಭರ್ತಿ 50 ರನ್​ ಬಾರಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ 85 ರನ್​ಗಳನ್ನು ರಾಶಿ ಹಾಕಿತು.

ಅಜೇಯರಾಗಿ ಉಳಿದ ರಹಾನೆ ಕೇವಲ 29 ಎಸೆತಗಳ ಮುಂದೆ 71 ರನ್​ ಬಾರಿಸಿದರು. ಈ ಇನಿಂಗ್ಸ್​ ವೇಳೆ ಬರೋಬ್ಬರಿ 5 ಸಿಕ್ಸರ್​ ಮತ್ತು 6 ಬೌಂಡರಿ ಸಿಡಿಯಿತು. ಅಂತಿಮ ಹಂತದಲ್ಲಿ ಜಡೇಜಾ ಕೂಡ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಪರಿಣಾಮ ತಂಡ ಬೃಹತ್​ ಮೊತ್ತ ಕಲೆಹಾಕಿತು. ಜಡೇಜಾ 8 ಎಸೆತದಲ್ಲಿ 18 ರನ್​ ಗಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

T20 World Cup 2024: ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್) ಮಾಧ್ಯಮ ಮೂಲಗಳು ಕ್ರೀಡಾಕೂಟಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಅಭಿಯಾನಗಳನ್ನು ಪ್ರಾರಂಭಿಸಿದ್ದು ವೆಸ್ಟ್​ ಇಂಡೀಸ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಪಂದ್ಯಗಳಿಗೆ ಭಯೋತ್ಪಾದಕ ದಾಳಿಯ ಎಚ್ಚರಿಕೆ ಬಂದಿರುವುದಾಗಿ ವರದಿಯಾಗಿದೆ.

VISTARANEWS.COM


on

T20 World Cup 2024
Koo

ಬಾರ್ಬಡಾಸ್​: ಇದೇ ಜೂನ್​ 1ರಿಂದ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್​ ಪಂದ್ಯಾವಳಿಗೆ(T20 World Cup 2024) ಪಾಕಿಸ್ತಾನದ ಉಗ್ರರಿಂದ ದಾಳಿಯ ಬೆದರಿಕೆಯೊಂದು(Terror Threat to T20 World Cup) ಬಂದಿರುವುದಾಗಿ ವರದಿಯಾಗಿದೆ. ಕೆರಿಬಿಯನ್ ದ್ವೀಪಗಳ ಮಾಧ್ಯಮ ವರದಿಗಳ ಪ್ರಕಾರ ಟೂರ್ನಿಯ ಮೊದಲ ಪಂದ್ಯ ನಡೆಯುವ ಪ್ರದೇಶದಲ್ಲಿ ಭಯೋತ್ಪಾದಕ ಎಚ್ಚರಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ ಬೆದರಿಕೆ ಉತ್ತರ ಪಾಕಿಸ್ತಾನದಿಂದ ಬಂದಿದೆ ಎಂದು ತಿಳಿಸಿದೆ.

ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್) ಮಾಧ್ಯಮ ಮೂಲಗಳು ಕ್ರೀಡಾಕೂಟಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಅಭಿಯಾನಗಳನ್ನು ಪ್ರಾರಂಭಿಸಿವೆ, ಇದರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಉಗ್ರರ ಅಡಗು ತಾಣಗಳಿಂದ ವೀಡಿಯೊ ಸಂದೇಶಗಳ ಮೂಲಕ ಹಲವಾರು ದೇಶಗಳಲ್ಲಿ ದಾಳಿ ನಡೆಸುವ ಮತ್ತು ಈ ಉಗ್ರ ಸಂಚಿನಲ್ಲಿ ಬೆಂಬಲ ನೀಡಲು ಒತ್ತಾಯಿಸಿರುವುದಾಗಿ ಕ್ರಿಕ್‌ಬಜ್‌ ತನ್ನ​ ವರದಿಯಲ್ಲಿ ತಿಳಿಸಿದೆ.

“ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪ್ರತಿಯೊಬ್ಬರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ನಾವು ಸಮಗ್ರ ಮತ್ತು ದೃಢವಾದ ಭದ್ರತಾ ಯೋಜನೆಯನ್ನು ಹೊಂದಿದ್ದೇವೆ ಎಂದು ನಾವು ಎಲ್ಲ ಪಾಲುದಾರರಿಗೆ ಭರವಸೆ ನೀಡಲು ಬಯಸುತ್ತೇವೆ” ಎಂದು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಬೋರ್ಡ್​ ಅಧ್ಯಕ್ಷ ಜಾನಿ ಗ್ರೇವ್ಸ್ ಹೇಳಿದರು.

“ನಾವು ಆತಿಥೇಯ ದೇಶಗಳು ಮತ್ತು ನಗರಗಳಲ್ಲಿನ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಮತ್ತು ನಮ್ಮ ದೇಶದಲ್ಲಿ ನಿಗದಿಯಾದ ಪಂದ್ಯಾವಳಿಗೆ ಯಾವುದೇ ಅಪಾಯವಾಗದಂತೆ ಸೂಕ್ತವಾದ ಯೋಜನೆಗಳು ಜಾರಿಯಲ್ಲಿವೆ” ಎಂದು ಗ್ರೇವ್ಸ್ ಹೇಳಿರುವುದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ. ವೆಸ್ಟ್ ಇಂಡೀಸ್‌ನಲ್ಲಿ ಆಂಟಿಗುವಾ ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ ಸೇರಿದಂತೆ ಆರು ಸ್ಥಳಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ ICC Women’s T20 World Cup: ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್​

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ತಲಾ 2 ಅಭ್ಯಾಸ ಪಂದ್ಯ


ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Continue Reading

ಕ್ರೀಡೆ

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Sunil Narine: ಬಿರುಸಿನ ಬ್ಯಾಟಿಂಗ್​ ನಡೆಸಿದ ನರೈನ್​ ಕೇವಲ 39 ಎಸೆತಗಳಿಂದ 6 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್ ಸಿಡಿಸಿ 81 ರನ್​ ಚಚ್ಚಿದರು. ಈ 7 ಸಿಕ್ಸರ್​ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

VISTARANEWS.COM


on

Sunil Narine
Koo

ಲಕ್ನೋ: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಕೆಕೆಆರ್(Kolkata Knight Riders)​ ತಂಡದ ಎಡಗೈ ಆಟಗಾರ ಸುನೀಲ್​ ನರೈನ್(Sunil Narine)​ ಲಕ್ನೋ(Lucknow Super Giants) ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 7 ಸಿಕ್ಸರ್​ ಬಾರಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದ ಐಪಿಎಲ್​ನ 54ನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ನರೈನ್​ ಕೇವಲ 39 ಎಸೆತಗಳಿಂದ 6 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್ ಸಿಡಿಸಿ 81 ರನ್​ ಚಚ್ಚಿದರು. ಈ 7 ಸಿಕ್ಸರ್​ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಇದಕ್ಕೂ ಮುನ್ನ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಹೆನ್ರಿಚ್​ ಕ್ಲಾಸೆನ್​(31 ಸಿಕ್ಸರ್​) ಅಗ್ರಸ್ಥಾನದಲ್ಲಿದ್ದರು. ಇದೀಗ ನರೈನ್​ 32 ಸಿಕ್ಸರ್​ಗಳೊಂದಿಗೆ ಕ್ಲಾಸೆನ್​ ಅವರನ್ನು ಹಿಂದಿಕ್ಕಿದ್ದಾರೆ.

​ಇಂದು ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಕ್ಲಾಸೆನ್​ 2 ಸಿಕ್ಸರ್​ ಸಿಡಿಸಿದರೆ ಮತ್ತೆ ತಮ್ಮ ಅಗ್ರಸ್ಥಾನವನ್ನು ವಶಪಡಿಸಿಕೊಳ್ಳಲಿದ್ದಾರೆ. ಸದ್ಯ ನರೈನ್​ ಮತ್ತು ಕ್ಲಾಸೆನ್​ ಮಧ್ಯೆ ಸಿಕ್ಸರ್​ ಪೈಪೋಟಿ ಏರ್ಪಟ್ಟಿದೆ. 28 ಸಿಕ್ಸರ್​ ಬಾರಿಸಿರುವ ಅಭಿಷೇಕ್​ ಶರ್ಮ ಮೂರನೇ ಸ್ಥಾನದಲ್ಲಿದ್ದಾರೆ. ಶಿವಂ ದುಬೆ(26 ಸಿಕ್ಸರ್​) ನಾಲ್ಕನೇ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

ಅಗ್ರಸ್ಥಾನಕ್ಕೆ ಜಿಗಿದ ಕೆಕೆಆರ್​


ಇದೇ ಮೊದಲ ಬಾರಿಗೆ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ದಾಖಲಾದ ಬೃಹತ್​ ಮೊತ್ತದ ಮೇಲಾಟದಲ್ಲಿ ಕೆಕೆಆರ್​ ತಂಡ ಲಕ್ನೋ ವಿರುದ್ಧ 98 ರನ್​ಗಳ ಬೃಹತ್​ ಜಯ ಸಾಧಿಸಿತು. ಜತೆಗೆ ಅಂಕಪಟ್ಟಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ತುತ್ತಾಯಿತು.

Continue Reading

ಕ್ರೀಡೆ

IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

IPL 2024 Points Table: ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಗೆಲುವು ಸಾಧಿಸಿದ ಕೆಕೆಆರ್​ 16 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನಿಯಾಗಿದ್ದ ರಾಜಸ್ಥಾನ್​ 2ನೇ ಸ್ಥಾನಕ್ಕೆ ಕುಸಿದಿದೆ.

VISTARANEWS.COM


on

IPL 2024 Points Table
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಪ್ಲೇ ಆಫ್​ ಟಿಕೆಟ್​ ಪಡೆಯಲು ಎಲ್ಲ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಭಾನುವಾರ ನಡೆದ ಡಬಲ್​ ಹೆಡರ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಕೆಕೆಆರ್​ ಭರ್ಜರಿ ಗೆಲುವು ಸಾಧಿಸಿವೆ. ಉಭಯ ತಂಡಗಳ ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಭಾರೀ ಬದಲಾವಣೆ ಸಂಭವಿಸಿದೆ.

ನಂ.1 ಸ್ಥಾನಕ್ಕೇರಿದ ಕೆಕೆಆರ್​


ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಗೆಲುವು ಸಾಧಿಸಿದ ಕೆಕೆಆರ್​ 16 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದೆ. ಅಗ್ರಸ್ಥಾನಿಯಾಗಿದ್ದ ರಾಜಸ್ಥಾನ್​ 2ನೇ ಸ್ಥಾನಕ್ಕೆ ಕುಸಿದಿದೆ. ಉಭಯ ತಂಡಗಳಿಗೂ 16 ಅಂಕ ಇದ್ದರೂ ಕೆಕೆಆರ್​ ರನ್​ ರೇಟ್​ ಉತ್ತಮವಾಗಿದೆ. ಹೀಗಾಗಿ ಮೊದಲ ಸ್ಥಾನ ಪಡೆದಿದೆ. ಸೋಲು ಕಂಡ ಲಕ್ನೋ 5ನೇ ಸ್ಥಾನಕ್ಕೆ ಜಾರಿದೆ. ಪಂಜಾಬ್​ ವಿರುದ್ಧ 28 ರನ್​​ ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್​ ಚೆನ್ನೈ 5ರಿಂದ 3ನೇ ಸ್ಥಾನಕ್ಕೇರಿದೆ. ಪಂಜಾಬ್​ 8ನೇ ಸ್ಥಾನದಲ್ಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​108216 (+0.622)
ಚೆನ್ನೈ​​116514 (+0.700)
ಹೈದರಾಬಾದ್​106512 (+0.072)
ಲಕ್ನೋ​116512 (-0.371)
ಡೆಲ್ಲಿ115610 (-0.442)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಗುಜರಾತ್​11478 (-1.320)
ಮುಂಬೈ11386 (-0.356)

ಪಂಜಾಬ್​ಗೆ ಸೋಲು


ದಿನದ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಚೆನ್ನೈ ವಿರುದ್ಧ ಸೋಲು ಕಂಡಿತು. ಸಾಧಾರಣ ಮೊತ್ತವನ್ನು ಕೂಡ ಬೆನ್ನಟ್ಟಲಾಗದೆ 28 ರನ್​ಗಳ ಸೋಲಿಗೆ ತುತ್ತಾಯಿತು. ಈ ಸೋಲಿನಿಂದ ತಂಡದ ಪ್ಲೇ ಆಫ್​ ಹಾದಿ ಮತ್ತಷ್ಟು ಕಠಿಣವಾಗಿದೆ. ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯಲ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌, ಸತತವಾಗಿ ವಿಕೆಟ್‌ ಕಳೆದುಕೊಂಡು ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ


ರಾತ್ರಿಯ ಪಂದ್ಯದಲ್ಲಿ ಕೆಕೆಆರ್​ ತಂಡ ಲಕ್ನೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿತು.  ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

Continue Reading

ಪ್ರಮುಖ ಸುದ್ದಿ

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

IPL 2024: ಐಪಿಎಲ್​​ನ ಕನ್ಕಷನ್ ಬದಲಿ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಯುಧ್ವೀರ್ ಎರಡನೇ ಆಟಗಾರರಾದರು. ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ವಿಷ್ಣು ವಿನೋದ್ ಈ ಪಟ್ಟಿಯಲ್ಲಿ ಮೊದಲಿಗರು. ಐಪಿಎಲ್ 2023 ರ ಎರಡನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಬದಲಿಗೆ ವಿನೋದ್ ಆಡಿದ್ದರು.

VISTARANEWS.COM


on

IPL 2024
Koo

ಲಖನೌ : ಐಪಿಎಲ್​ 2024ನೇ (IPL 2024) ಆವೃತ್ತಿಯ ಮೊದಲ ಕನ್​ಕಷನ್​​ (ಗಾಯಗೊಂಡ ಆಟಗಾರನಿಗೆ ಬದಲಿ) ಆಟಗಾರ ಎಂಬ ಖ್ಯಾತಿಗೆ ಯದ್ವೀರ್​ ಸಿಂಗ್ (Yudhvir Singh) ಪಾತ್ರರಾಗಿದ್ದಾರೆ. ಎಲ್ಎಸ್​ಜಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯದಲ್ಲಿ, ಲಕ್ನೊ ಪರ ಅವರು ಆಡಲು ಇಳಿದರು. ಲಕ್ನೊ ವೇಗಿ ಮೊಹ್ಸಿನ್ ಖಾನ್ ಥರ್ಡ್​ ಮ್ಯಾನ್​ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುವಾಗ ತಲೆಗೆ ಗಾಯವಾಗಿತ್ತು. ಚಿಕಿತ್ಸೆಗಾಗಿ ಮೈದಾನವನ್ನು ತೊರೆಯಬೇಕಾಯಿತು. ಹೀಗಾಗಿ ಯಧ್ವೀರ್ ಸಿಂಗ್​ ಆಡಲು ಬರಬೇಕಾಯಿತು.

ಮೊಹ್ಸಿನ್ ಖಾನ್ ತಲೆಗೆ ಪೆಟ್ಟು ಬಿದ್ದ ನಂತರ ನೆಲದ ಮೇಲೆ ಮಲಗಿ ಹೆಣಗಾಡುತ್ತಿರುವುದು ಕಂಡುಬಂತು. ನರೈನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೊಹ್ಸಿನ್​ ಖಾನ್ ಚೆಂಡನ್ನು ಹಿಡಿಯಲು ಓಡಿದ್ದರು. ಆದರೆ ದುರದೃಷ್ಟವಶಾತ್ ಅವರ ತಲೆ ಮೊದಲು ನೆಲಕ್ಕೆ ಅಪ್ಪಳಿಸಿತ್ತು. ಪರಿಣಾಮವಾಗಿ 16 ನೇ ಓವರ್ ಪ್ರಾರಂಭವಾಗುವ ಮೊದಲು ಮೊಹ್ಸಿನ್ ಖಾನ್ ಬದಲಿಗೆ ಯುಧ್ವೀರ್ ಸಿಂಗ್ ಅವರನ್ನು ಕನ್ಕಷನ್ ಬದಲಿಯಾಗಿ ಕಳುಹಿಸಲಾಯಿತು.

ಯುಧ್ವೀರ್ ಸಿಂಗ್ ಚರಕ್ ಐಪಿಎಲ್ 2024 ರ ಮೊದಲ ಕನ್ಕಷನ್ ಬದಲಿ ಆಟಗಾರರಾದರು. ಇದು ಮಾತ್ರವಲ್ಲ, ಅವರು ತಮ್ಮ ಮೊದಲ ಓವರ್​​ನಲ್ಲಿ ಕೆಕೆಆರ್​​ನ ಆಂಗ್ರಿಶ್ ರಘುವಂಶಿ ಅವರನ್ನು ತಮ್ಮ ಮೊದಲ ಓವರ್​ನಲ್ಲಿ ಔಟ್ ಮಾಡಿದರು.

ಐಪಿಎಲ್​​ನ ಕನ್ಕಷನ್ ಬದಲಿ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಯುಧ್ವೀರ್ ಎರಡನೇ ಆಟಗಾರರಾದರು. ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ವಿಷ್ಣು ವಿನೋದ್ ಈ ಪಟ್ಟಿಯಲ್ಲಿ ಮೊದಲಿಗರು. ಐಪಿಎಲ್ 2023 ರ ಎರಡನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಬದಲಿಗೆ ವಿನೋದ್ ಆಡಿದ್ದರು.

ಕಂಕಷನ್ ಬದಲಿ ಆಟಗಾರರ ವಿವರ

ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ವಿಷ್ಣು ವಿನೋದ್
ಮೊಹ್ಸಿನ್ ಖಾನ್ ಲಕ್ನೋ ಸೂಪರ್ ಜೈಂಟ್ಸ್: ಯುಧ್ವೀರ್ ಸಿಂಗ್

ಪಂದ್ಯದಲ್ಲಿ ಏನಾಯಿತು?

ಲಖನೌ: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 54ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಬೃಹತ್​ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕಗಳನ್ನು ಸಂಪಾದಿಸಿರುವ ಶ್ರೇಯಸ್​ ಅಯ್ಯರ್ ನೇತೃತ್ವದ ಕೋಲ್ಕೊತಾ ಬಳಗ ಪ್ಲೇಆಫ್​ ಹಂತಕ್ಕೆ ಬಹುತೇಕ ತೇರ್ಗಡೆ ಗೊಂಡಿದೆ. ಇದೇ ವೇಳೆ 11 ಪಂದ್ಯಗಳಲ್ಲಿ 5ನೇ ಸೋಲಿಗೆ ಒಳಗಾಗಿದ್ದು 12 ಅಂಕಗಳ ಸಮೇತ ಐದನೇ ಸ್ಥಾನದಲ್ಲಿ ಉಳಿದಿದೆ.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಇಲ್ಲಿನ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

Continue Reading
Advertisement
Paris Olympics
ಕ್ರೀಡೆ10 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ12 mins ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್30 mins ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ39 mins ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ47 mins ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ1 hour ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ1 hour ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Ranjani Raghavan Starrer Sathyam Kannada Movie Gets UA Certificate
ಸ್ಯಾಂಡಲ್ ವುಡ್1 hour ago

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Terrorist Attack
ದೇಶ1 hour ago

Terrorist attack: ʼಮಗನ ಬರ್ತ್‌ ಡೇ ಪಾರ್ಟಿಗೆ ಪ್ಲ್ಯಾನ್‌ ಮಾಡಿದ್ದ, ಆದರೆ ಈಗ…ʼ ಕಣ್ಣೀರಿಟ್ಟ ಹುತಾತ್ಮ ಯೋಧನ ಕುಟುಂಬ

Samantha Ruth Prabhu Fake Viral Nude Pic
ಟಾಲಿವುಡ್2 hours ago

Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ14 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ16 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ16 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌