IPL 2023: Ravi Shastri named this time's champion team of IPL IPL 2023: ಈ ಬಾರಿಯ ಐಪಿಎಲ್​ನ ಚಾಂಪಿಯನ್​ ತಂಡವನ್ನು ಹೆಸರಿಸಿದ ರವಿಶಾಸ್ತ್ರಿ - Vistara News IPL 2023: ಈ ಬಾರಿಯ ಐಪಿಎಲ್​ನ ಚಾಂಪಿಯನ್​ ತಂಡವನ್ನು ಹೆಸರಿಸಿದ ರವಿಶಾಸ್ತ್ರಿ

ಕ್ರಿಕೆಟ್

IPL 2023: ಈ ಬಾರಿಯ ಐಪಿಎಲ್​ನ ಚಾಂಪಿಯನ್​ ತಂಡವನ್ನು ಹೆಸರಿಸಿದ ರವಿಶಾಸ್ತ್ರಿ

ಟೀಮ್​ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಈ ಬಾರಿಯೂ ಗುಜರಾತ್​ ಟೈಟನ್ಸ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

VISTARANEWS.COM


on

IPL 2023: Ravi Shastri named this time's champion team of IPL
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023)​ ಟೂರ್ನಿ ಅಂತಿಮ ಹಂತದೆಡೆಗೆ ಸಾಗುತ್ತಿದ್ದು ಈಗಾಗಲೇ ಎಲ್ಲ ತಂಡಗಳ ಪ್ಲೇ ಆಪ್​ ಲೆಕ್ಕಾಚಾರ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಟೀಮ್​ ಇಂಡಿಯಾದ ಮಾಜಿ ಕೋಚ್​ ಹಾಗೂ ಆಟಗಾರ ರವಿಶಾಸ್ತ್ರಿ ಅವರು ಈ ಬಾರಿಯ ಚಾಂಪಿಯನ್​ ತಂಡವನ್ನು ಹೆಸರಿಸಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ರವಿಶಾಸ್ತ್ರಿ ಅವರು “ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡ ಈ ಬಾರಿಯೂ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ” ಎಂದು ಭವಿಷ್ಯ ನುಡಿದಿದ್ದಾರೆ. “ಹಾರ್ದಿಕ್​ ಪಾಂಡ್ಯ ಸಾರಥ್ಯದ ಗುಜರಾತ್​ ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠ ಮತ್ತು ಸಮರ್ಥವಾಗಿದೆ. ಈ ತಂಡ ಕೇವಲ ಒಂದೆರಡು ಆಟಗಾರರ ಪ್ರದರ್ಶನದ ಮೇಲೆ ನಿಂತಿಲ್ಲ. ಪ್ಲೇಯಿಂಗ್​ ಇಲೆವೆನ್​ನಲ್ಲಿರುವ ಎಲ್ಲರೂ ತಂಡಕ್ಕೆ ಸೂಕ್ತ ಸಮಯದಲ್ಲಿ ಆಸರೆಯಾಗಿ ನಿಂತು ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹೀಗಾಗಿ ಈ ಬಾರಿಯೂ ಗುಜರಾತ್​ ಚಾಂಪಿಯನ್​ ಆಗಲಿದೆ” ಎಂದು ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2023: ಆರ್​ಸಿಬಿ ಸೇರಿದ್ದೇ ಅಚ್ಚರಿ ಎಂದ ಕೇದಾರ್​ ಜಾಧವ್

ಗುಜರಾತ್​ ಕಪ್​ ಗೆಲ್ಲಲಿದೆ; ಭವಿಷ್ಯ ನುಡಿದ ಎಬಿಡಿ ವಿಲಿಯರ್ಸ್

ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್​ ಕೂಡ ಈ ಬಾರಿ ಪಾಂಡ್ಯ ಸಾರಥ್ಯದ ಗುಜರಾತ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ ಎಂದು ಹೇಳಿದ್ದಾರೆ. “ನಾನು ಕಳೆದ ಬಾರಿ ಹೇಳಿದಂತೆ ಈ ಬಾರಿಯೂ ಗುಜರಾತ್​ ಟೈಟಾನ್ಸ್​(gujarat titans) ತಂಡ ಈ ಬಾರಿಯೂ ಕಪ್​ ಗೆಲ್ಲಲಿದೆ. ಏಕೆಂದರೆ ಈ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಪಾಂಡ್ಯ ಸಾರಥ್ಯದ ಈ ತಂಡ ನಿಜವಾಗಿಯೂ ಉತ್ತಮ ತಂಡವಾಗಿದೆ. ಹೆಚ್ಚಾಗಿ ಈ ತಂಡದಲ್ಲಿ ಕಿರಿಯ ಆಟಗಾರರೆ ತುಂಬಿಕೊಂಡಿದ್ದಾರೆ. ಅವರ ಪ್ರದರ್ಶನ ಮಾತ್ರ ಹಿರಿಯ ಆಟಗಾರರನ್ನು ಮೀರಿಸುವಂತಿದೆ. ಈಗಾಗಲೇ ಅವರು ಆಡಿದ 9 ಪಂದ್ಯಗಳಲ್ಲಿ 6 ಜಯ ಸಾಧಿಸಿ 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಪ್ ಗೆಲ್ಲಲು ಅರ್ಹರಾಗಿದ್ದಾರೆ’ ಎಂದು ಎಬಿಡಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Shakib Al Hasan: ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಥಳಿಸಲು ಮುಂದಾದ ಶಕಿಬ್; ವಿಡಿಯೊ ವೈರಲ್​

Shakib Al Hasan: ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿರುವ ಶಕೀಬ್​ ಪಂದ್ಯಕ್ಕೂ ಮುನ್ನ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ಅಭಿಮಾನಿಯನ್ನು ಕಂಡ ಕೂಡಲೇ ಕೆರಳಿದ ಶಕೀಬ್ ಕುತ್ತಿಗೆಗೆ ಕೈಹಾಕಿ ಹೊಡೆಯಲು ಮುಂದಾಗಿದ್ದಾರೆ. ಈ ವಿಡಿಯೊ ಇದೀಗ ವೈರಲ್​ ಆಗುತ್ತಿದೆ.

VISTARANEWS.COM


on

Shakib Al Hasan
Koo

ಢಾಕಾ: ಬಾಂಗ್ಲಾದೇಶದ ಕ್ರಿಕೆಟ್​ ತಂಡದ ಹಿರಿಯ ಆಲ್​ರೌಂಡರ್​ ಶಕಿಬ್ ಅಲ್ ಹಸನ್‌(Shakib Al Hasan) ತಾಳ್ಮೆ ಕಳೆದುಕೊಂಡು, ಅಂಪೈರ್​ಗಳ ಜತೆ ಮತ್ತು ಅಭಿಮಾನಿಗಳ ನಡುವೆ ಈಗಾಗಲೇ ಹಲವು ಬಾರಿ ಕಿರಿಕ್​ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಶಕಿಬ್​ ಥಳಿಸಲು ಮುಂದಾಗಿದ್ದಾರೆ. ಈ ವಿಡಿಯೊ ವೈರಲ್(Video Viral)​ ಆಗಿದ್ದು ಶಕಿಬ್​​ ವರ್ತನೆ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಆಡಲಿಳಿದಿದ್ದಾರೆ.

ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿರುವ ಶಕೀಬ್​ ಪಂದ್ಯಕ್ಕೂ ಮುನ್ನ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ಅಭಿಮಾನಿಯನ್ನು ಕಂಡ ಕೂಡಲೇ ಕೆರಳಿದ ಶಕೀಬ್, ಇಲ್ಲ ಫೋಟೊ ತೆಗೆಸಿಕೊಳ್ಳಲ್ಲ ಇಲ್ಲಿಂದ ಹೋಗು ಎಂದು ​ಸೂಚನೆ ನೀಡಿದ್ದಾರೆ. ಆದರೂ ಕೂಡ ಅಭಿಮಾನಿ ಮತ್ತೆ ಮತ್ತೆ ಫೋಟೊ ತೆಗೆಯಲು ಒತ್ತಾಯಿಸಿದಾಗ, ಅವರ ಕುತ್ತಿಗೆಗೆ ಕೈಹಾಕಿದ ಶಾಕಿಬ್ ಹೊಡೆಯಲು ಮುಂದಾದರು. ಈ ವಿಡಿಯೊ ಇದೀಗ ವೈರಲ್​ ಆಗುತ್ತಿದೆ.

ಶಕಿಬ್‌ ಅವರು ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲೇನಲ್ಲ ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್‌ ಅವರೊಂದಿಗೆ ಶಕಿಬ್‌ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್​ ಲೀಗ್​ನಲ್ಲಿ ಅಂಪೈರ್​ ಅವರು ಔಟ್​ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್​ ವಿಕೆಟ್​ಗೆ ಕಾಲಿನಿಂದ ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ Shakib Al Hasan : ರಾಜಕೀಯ ಆಟದಲ್ಲಿ ಗೆಲುವು ಕಂಡ ಶಕಿಬ್ ಅಲ್ ಹಸನ್​

ಹಿಂದೊಮ್ಮೆ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಶಕಿಬ್‌ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಗುಂಪಿನ ಮಧ್ಯೆಯಿಂದ ಫೋಟೊ ತೆಗೆಯಲು ಮುಂದಾಗಿದ್ದ ಇದರಿಂದ ಸಿಟ್ಟಿಗೆದ್ದ ಶಕೀಬ್​ತಲೆಯಿಂದ ಕ್ಯಾಪ್​ ಎಳೆದಿದ್ದರು. ಅಲ್ಲದೆ ಕ್ಯಾಪ್‌ ನಿಂದಲೇ ಒಂದೆರಡು ಬಾರಿ ಥಳಿಸಿದ್ದರು. 

Continue Reading

ಕ್ರೀಡೆ

IPL 2024: ಅಂಪೈರ್​ ಜತೆ ವಾಗ್ವಾದ; ಸಂಜುಗೆ ಬಿತ್ತು ಭಾರೀ ದಂಡ

IPL 2024: ಐಪಿಎಲ್​ನಲ್ಲಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಸಂಜು ಸ್ಯಾಮ್ಸನ್ ಶೇ.30ರ ಅನ್ವಯದಲ್ಲಿ 30 ಲಕ್ಷ ರೂ. ದಂಡ ಪಾವತಿಸಬೇಕಿದೆ. ಜತೆಗೆ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಮತ್ತೆ ಸಂಜು ಈ ರೀತಿಯ ತಪ್ಪು ಮಾಡಿದರೆ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.

VISTARANEWS.COM


on

IPL 2024
Koo

ನವದೆಹಲಿ: ಮಂಗಳವಾರ ರಾತ್ರಿ ನಡೆದ ಐಪಿಎಲ್​ನ 56ನೇ ಪಂದ್ಯದಲ್ಲಿ(IPL 2024) ರಾಜಸ್ಥಾನ್​ ರಾಯಲ್ಸ್​(Rajasthan Royals) ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್​ ನಾಯಕ ಸಂಜು ಸ್ಯಾಮ್ಸನ್(Sanju Samson)​ ತಮ್ಮ ವಿವಾದಾತ್ಮಕ ಕ್ಯಾಚ್​ಗೆ ಔಟ್​ ನೀಡಿದ್ದಕ್ಕಾಗಿ ಅಂಪೈರ್​ ಜತೆ ವಾಗ್ವಾದ ನಡೆಸಿದ್ದರು. ಈ ತಪ್ಪಿಗಾಗಿ ಸಂಜುಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ.

ಐಪಿಎಲ್​ನಲ್ಲಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಸಂಜು ಸ್ಯಾಮ್ಸನ್ ಶೇ.30ರ ಅನ್ವಯದಲ್ಲಿ 30 ಲಕ್ಷ ರೂ. ದಂಡ ಪಾವತಿಸಬೇಕಿದೆ. ಜತೆಗೆ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಮತ್ತೆ ಸಂಜು ಈ ರೀತಿಯ ತಪ್ಪು ಮಾಡಿದರೆ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.

ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಯಾಮ್ಸನ್ 16ನೇ ಓವರ್​ನ 4ನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ್ದರು. ಬೌಂಡರಿ ಲೈನ್​ನಲ್ಲಿದ್ದ ಶಾಯ್ ಹೋಪ್ ಅವರು ಈ ಕ್ಯಾಚ್​ ಪಡೆದರು. ಹೋಪ್​ ಕಾಲು ಬೌಂಡರಿ ಲೈನ್​ಗೆ ತಗುಲಿದಂತೆ ಕಂಡು ಬಂದ ಕಾರಣ ಮೂರನೇ ಅಂಪೈರ್​ ಇದನ್ನು ಪರೀಕ್ಷಿಸಿದ ಬಳಿಕ ಔಟ್​ ಎಂದು ತೀರ್ಪು ನೀಡಿದರು. ಈ ವೇಳೆ ಸಂಜು ಮರು ತೀರ್ಪನ್ನು ಮರು ಪರಿಶೀಲಿಸುವಂತೆ ಫೀಲ್ಡ್ ಅಂಪೈರ್ ಜತೆ ವಾಗ್ವಾದ ನಡೆಸಿದರು. ಅಂಪೈರ್​ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರೂ ಕೂಡ ಸಂಜು ಇದಕ್ಕೆ ಒಪ್ಪದೆ ಅಂಪೈರ್​ ಜತೆ ವಾಗ್ವಾದ ನಡೆಸಿದರು. ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಹಂತದ ಅಪರಾಧವಾಗಿದೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

ಸಂಜು ಸ್ಯಾಮ್ಸನ್​ ಕ್ರೀಸ್​ನಲ್ಲಿರುವ ತನಕ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನದ ಬಳಿಕ ಏಕಾಏಕಿ ಕುಸಿತ ಕಂಡ ರಾಜಸ್ತಾನ್​ ಸೋಲಿಗೆ ಸಿಲುಕಿತು. ಕುಲ್​ದೀಪ್​​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಸಂಜು 46 ಎಸೆತಕ್ಕೆ 86 ರನ್ ಬಾರಿಸಿ ಹೋಪ್​ ಹಿಡಿದ ಸೂಪರ್​ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು.

ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

Continue Reading

ಕ್ರಿಕೆಟ್

IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ 4ನೇ ಸ್ಥಾನಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಮುಖಾಮುಖಿಯಅಗಲಿವೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಯಾರೇ ಗೆದ್ದರೂ 14 ಅಂಕದೊಂದಿಗೆ 3ನೇ ಸ್ಥಾನಕ್ಕೇರಲಿದ್ದಾರೆ. ಈ ತಂಡ ಯಾವುದು ಎನ್ನುವುದು ಈ ಪಂದ್ಯದ ಕುತೂಹಲ.

VISTARANEWS.COM


on

IPL 2024 Points Table
Koo

ನವದೆಹಲಿ: ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಬೃಹತ್​ ಮೊತ್ತದ ಪಂದ್ಯದಲ್ಲಿ(IPL 2024) ಆತಿಥೇಯ ಡೆಲ್ಲಿ ಕ್ಯಾಪಿಲಟ್ಸ್​ ತಂಡ 20 ರನ್​ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್​ ರೇಸ್​ ಹಾದಿಯನ್ನು ಜೀವಂತವಿರಿಸಿದೆ. ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2024 Points Table) 5ನೇ ಸ್ಥಾನಕ್ಕೇರಿದೆ. ಈ ಹಿಂದೆ 5 ನೇ ಸ್ಥಾನಿಯಾಗಿದ್ದ ಲಕ್ನೋ ಸೂಪರ್​ ಜೈಂಟ್ಸ್​ ತಂಡ 6ನೇ ಸ್ಥಾನಕ್ಕೆ ಕುಸಿದಿದೆ. ಸೋಲು ಕಂಡರೂ ರಾಜಸ್ಥಾನ್​ 2ನೇ ಸ್ಥಾನದಲ್ಲೇ ಉಳಿದಿದೆ.

ಇಂದು ನಡೆಯುವ ಪಂದ್ಯದಲ್ಲಿ 4ನೇ ಸ್ಥಾನಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಮುಖಾಮುಖಿಯಅಗಲಿವೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಯಾರೇ ಗೆದ್ದರೂ 14 ಅಂಕದೊಂದಿಗೆ 3ನೇ ಸ್ಥಾನಕ್ಕೇರಲಿದ್ದಾರೆ. ಈ ತಂಡ ಯಾವುದು ಎನ್ನುವುದು ಈ ಪಂದ್ಯದ ಕುತೂಹಲ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​118316 (+0.476)
ಚೆನ್ನೈ​​116514 (+0.700)
ಹೈದರಾಬಾದ್​116512 (-0.065)
ಡೆಲ್ಲಿ126612 (-0.316)
ಲಕ್ನೋ116512 (-0.371)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಮುಂಬೈ12488 (-0.212)
ಗುಜರಾತ್​11478 (-1.320)

ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

ಸಂಜು ಸ್ಯಾಮ್ಸನ್​ ಕ್ರೀಸ್​ನಲ್ಲಿರುವ ತನಕ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನದ ಬಳಿಕ ಏಕಾಏಕಿ ಕುಸಿತ ಕಂಡ ರಾಜಸ್ತಾನ್​ ಸೋಲಿಗೆ ಸಿಲುಕಿತು. ಕುಲ್​ದೀಪ್​​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಸಂಜು 46 ಎಸೆತಕ್ಕೆ 86 ರನ್ ಬಾರಿಸಿ ಹೋಪ್​ ಹಿಡಿದ ಸೂಪರ್​ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು.

Continue Reading

ಪ್ರಮುಖ ಸುದ್ದಿ

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

IPL 2024: ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ನವ ದೆಹಲಿ : ಜಿದ್ದಾಜಿದ್ದಿನಿಂದ ಕೂಡಿದ್ದ ಐಪಿಎಲ್​ 17ನೇ ಆವೃತ್ತಿಯ (IPL 2024) 56ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ 20 ರನ್​ಗಳಿಂದ ಗೆಲುವು ಸಾಧಿಸಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಆಟಗಾರರು ಗೆಲುವು ತಮ್ಮದಾಗಿಸಿಕೊಂಡು. ಇದು ಡೆಲ್ಲಿ ತಂಡದಕ್ಕೆ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 6ನೇ ಗೆಲುವಾಗಿದೆ. 12 ಅಂಕಗಳನ್ನು ಸಂಪಾದಿಸಿರುವ ರಿಷಭ್​ ಪಂತ್ ಬಳಗ ಲಕ್ನೊ ಸೂಪರ್ ಜೈಂಟ್ಸ್​ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿತು. ಅತ್ತ ರಾಜಸ್ಥಾನ್ ತಂಡ ಆಡಿರುವ 11 ಪಂದ್ಯಗಳಲ್ಲಿ 3ನೇ ಸೋಲಿಗೆ ಒಳಗಾಯಿತು. ಆದಾಗ್ಯೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಬಿಟ್ಟುಕೊಟ್ಟಿಲ್ಲ.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 221 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್​ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 201 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಸಂಜು ಹೋರಾಟ ವ್ಯರ್ಥ

ಸಂಜು ಸ್ಯಾಮ್ಸನ್​ 46 ಎಸೆತಕ್ಕೆ 86 ರನ್ ಬಾರಿಸಿದ್ದ ತನಕ ಪಂದ್ಯ ರಾಜಸ್ಥಾನ್ ತಂಡದ ಪರವಾಗಿತ್ತು. ಆದರೆ, ಸಂಜು ವಿಕೆಟ್​ ಪತನಗೊಳ್ಳುತ್ತಿದ್ದಂತೆ ಏಕಾಏಕಿ ಕುಸಿತ ಕಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸೋಲಿಗೆ ಸಿಲುಕಿತು. ಕುಲ್ದೀಪ್​ ಯಾದವ್​ 25 ರನ್​ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಏತನ್ಮಧ್ಯೆ ಸಂಜು ಸ್ಯಾಮ್ಸನ್​ ವಿಕೆಟ್ ವಿವಾದಾತ್ಮಕ ವಿಕೆಟ್ ಆಗಿ ಪರಿವರ್ತನೆಗೊಂಡಿತು. ಮುಖೇಶ್ ಕುಮಾರ್​ ಎಸೆತವನ್ನು ಸಂಜು ಬೌಂಡರಿ ಲೈನ್ ಮೇಲೆ ಹೊಡೆಯಲು ಯತ್ನಿಸಿದ್ದರು. ಆದರೆ, ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಶಾಯ್​ ಹೋಪ್ ಕ್ಯಾಚ್ ನೀಡಿದರು. ಥರ್ಡ್​ ಅಂಪೈರ್ ಅದನ್ನು ಮರುಪರಿಶೀಲಿಸಿ ಔಟ್​ ನೀಡಿದರು. ಆದರೆ, ಸಂಜು ಸ್ಯಾಮ್ಸನ್​ ಫೀಲ್ಡರ್ ಕಾಲು ಬೌಂಡರಿ ಲೈನ್​ಗೆ ತಾಗಿದೆ ಎಂದು ಅಂಪೈರ್​ಗಳ ಜತೆ ವಾದ ಮಾಡಿದರು.

ರಾಜಸ್ಥಾನ್ ರಾಯಲ್ಸ್​ ಗುರಿ ಬೆನ್ನಟ್ಟುವ ಹಾದಿಯಲ್ಲಿ ಆರಂಭಿಕ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್​ 4 ರನ್​ಗೆ ಔಟಾದರೆ ಜೋಸ್ ಬಟ್ಲರ್​ 19 ರನ್ ಬಾರಿಸಿದರು. ರಿಯಾನ್ ಪರಾಗ್​ 27 ಹಾಗೂ ಶುಭಂ ದುಬೆ 25 ರನ್ ಬಾರಿಸಿ ಗೆಲುವಿನ ಕನಸು ಬಿತ್ತಿದರು. ಆದರೆ, ಕೊನೇ ಹಂತದಲ್ಲಿ ಡೆಲ್ಲಿ ಬೌಲರ್​ಗಳು ಗೆಲುವಿನ ಅವಕಾಶವನ್ನು ತಮ್ಮದಾಗಿಸಿಕೊಂಡರು.

ಉತ್ತಮ ಆರಂಭ

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರಕಿತು. ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದರೆ ಅಭಿಷೇಕ್ ಪೊರೆಲ್​ 65 ರನ್​ ಬಾರಿಸಿದರು. ಶಾಯ್​ ಹೋಪ್​ ವಿಫಲರಾಗಿ 1 ರನ್​ಗೆ ಔಟಾದಾಗ ಡೆಲ್ಲಿ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಕ್ಷರ್ ಪಟೇಲ್​ ಹಾಗೂ ರಿಷಭ್​ ಪಂತ್​ ತಲಾ 15 ರನ್ ಬಾರಿಸಿದರು. ಆದರೆ, ಕೊನೇ ಹಂತದಲ್ಲಿ ಟ್ರಿಸ್ಟಾನ್​ ಸ್ಟಬ್ಸ್​​ 20 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಆರ್​ ಅಶ್ವಿನ್​ 24 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಉರುಳಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.

Continue Reading
Advertisement
Akshaya Tritiya Jewellery
ಫ್ಯಾಷನ್2 mins ago

Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

Narendra Modi
ದೇಶ6 mins ago

Narendra Modi: ಅಂಬಾನಿ, ಅದಾನಿಯಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ; ಮೋದಿ ತಿರುಗುಬಾಣ!

Apple New Products
ಗ್ಯಾಜೆಟ್ಸ್11 mins ago

Apple New Products: ಐಪ್ಯಾಡ್ ಪ್ರೊನಿಂದ ಪೆನ್ಸಿಲ್ ಪ್ರೊವರೆಗೆ; 2024ರ ಆಪಲ್‌ ಹೊಸ ಉತ್ಪನ್ನಗಳಿವು

State Education Policy
ಕರ್ನಾಟಕ14 mins ago

State Education Policy: 3 ವರ್ಷದ ಪದವಿಗೆ ರಾಜ್ಯ ಸರ್ಕಾರ ಅಸ್ತು; ಎಸ್‌ಇಪಿ ಆಯೋಗದ ಶಿಫಾರುಸುಗಳ ಅನ್ವಯ ಆದೇಶ

Actor Ravichandran female lead in ravichandrans premaloka 2
ಸ್ಯಾಂಡಲ್ ವುಡ್17 mins ago

Actor Ravichandran: ಕನಸುಗಾರನ ʻಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌!

Prajwal Revanna Case Two additional SPPs appointed for SIT cases
ಕ್ರೈಂ20 mins ago

Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇಬ್ಬರು ಹೆಚ್ಚುವರಿ ಎಸ್‌ಪಿಪಿ ನೇಮಕ; ರಾಜ್ಯ ಸರ್ಕಾರದ ಮಹತ್ವದ ಆದೇಶ

Paris Olympics 2024
ಕ್ರೀಡೆ42 mins ago

Paris Olympics 2024: 19ನೇ ಶತಮಾನದ ಹಡಗಿನಲ್ಲಿ ಇಂದು ಫ್ರಾನ್ಸ್‌ಗೆ ಬರಲಿದೆ ಒಲಿಂಪಿಕ್‌ ಜ್ಯೋತಿ

Chicken Shawarma
ಪ್ರಮುಖ ಸುದ್ದಿ54 mins ago

Chicken Shawarma: ಬೀದಿ ಬದಿ ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು; ಚಿಕನ್‌ ಪ್ರಿಯರೇ ಎಚ್ಚರ!

Thug Life Simbu is the new gun wielding gangster in town
South Cinema57 mins ago

Thug Life Movie: ಕಮಲ್‌ ಹಾಸನ್‌ ಸಿನಿಮಾಗೆ ಕಾಲಿವುಡ್‌ ನಟ ಸಿಂಬು ಎಂಟ್ರಿ!

Viral video
ವೈರಲ್ ನ್ಯೂಸ್1 hour ago

Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ20 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ23 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌