ವಿಸ್ತಾರ ಸಂಪಾದಕೀಯ: ವಿಶ್ವಕಪ್ ನಲ್ಲಿ ಹೊಸ ದಾಖಲೆಗಳು ಹುಟ್ಟಲಿ, ಅಂತಿಮವಾಗಿ ಕ್ರಿಕೆಟ್ ಗೆಲ್ಲಲಿ - Vistara News

ಕ್ರೀಡೆ

ವಿಸ್ತಾರ ಸಂಪಾದಕೀಯ: ವಿಶ್ವಕಪ್ ನಲ್ಲಿ ಹೊಸ ದಾಖಲೆಗಳು ಹುಟ್ಟಲಿ, ಅಂತಿಮವಾಗಿ ಕ್ರಿಕೆಟ್ ಗೆಲ್ಲಲಿ

12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್‌ಗಾಗಿ ಹಸಿದಿದೆ. ಭಾರತ ಕಪ್‌ ಗೆಲ್ಲಲಿ ಎಂಬ ಆಶಯ ಶತಕೋಟಿ ಭಾರತೀಯರದು. ಆ ಆಶಯ ಈಡೇರಲಿ.

VISTARANEWS.COM


on

Team India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಗತ್ತಿನ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುವ ಇವೆಂಟ್‌ ಆಗಿರುವ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ (ICC World Cup 2023) ಇಂದು ಆರಂಭವಾಗುತ್ತಿದೆ. ಭಾರತವು ಆತಿಥ್ಯ ವಹಿಸಿರುವ 13ನೇ ವಿಶ್ವಕಪ್ ಕ್ರಿಕೆಟ್ ಕೂಟ ತೆರೆದುಕೊಳ್ಳುತ್ತಿದ್ದು, ಇದು ಭಾರತಕ್ಕೂ ಮಹತ್ವದ್ದು. ಅಕ್ಟೋಬರ್‌ ಐದರಿಂದ ಮುಂದಿನ ಒಂದೂವರೆ ತಿಂಗಳು ಭಾರತದ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಕಣ್ಣು ರೆಪ್ಪೆ ಮುಚ್ಚದೆ ಪಂದ್ಯಗಳನ್ನು ಆಸ್ವಾದಿಸುತ್ತಾರೆ. ಭಾರತ ಈ ಬಾರಿ ಟ್ರೋಫಿ ಎತ್ತಿಕೊಳ್ಳಬೇಕು ಎಂಬುದು ಭಾರತೀಯರ ಹೆಬ್ಬಯಕೆ. ಇದುವರೆಗೂ ಭಾರತ ಎರಡು ಏಕದಿನ ಕ್ರಿಕೆಟ್‌ ವಿಶ್ವಕಪ್‌ಗಳನ್ನು ಗೆದ್ದಿದೆ. ಕಪಿಲ್‌ ದೇವ್‌ ನಾಯಕತ್ವದಲ್ಲಿ 1983ರಲ್ಲಿ ಹಾಗೂ ಎಂ.ಎಸ್‌ ಧೋನಿ ನೇತೃತ್ವದಲ್ಲಿ 2011ರಲ್ಲಿ. 12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್‌ಗಾಗಿ ಹಸಿದಿದೆ. ಹೀಗಾಗಿ ಭಾರತ ಕಪ್‌ ಗೆಲ್ಲಲಿ ಎಂಬ ಆಶಯ ನಮ್ಮ ಮನದಲ್ಲಿರಲಿ; ಜತೆಗೆ ಆಟವನ್ನು ಆಸ್ವಾದಿಸುವ ಮನವೂ ಇರಲಿ. ಭಾರತ ತಂಡ ಸಾಕಷ್ಟು ಬಲಿಷ್ಠವಾಗಿದೆ; ಆದರೆ ಇತರ ಕೆಲವು ತಂಡಗಳೂ ಅಷ್ಟೇ ಬಲಿಷ್ಠವಾಗಿವೆ ಮಾತ್ರವಲ್ಲ; ಕ್ರಿಕೆಟ್‌ ಆಟ ಎನ್ನುವುದು ಪರಿಶ್ರಮ- ಪ್ರತಿಭೆಯ ಜತೆಗೆ ಸ್ವಲ್ಪ ಅದೃಷ್ಟವನ್ನೂ ಹೊಂದಿಕೊಂಡಿದೆ.

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿ ಏಕದಿನ ಕ್ರಿಕೆಟ್‌ನ ಸಂಪೂರ್ಣ ಬೆರಗನ್ನೂ ಅದ್ಭುತವನ್ನೂ ಸಾದರಪಡಿಸುತ್ತದೆ. ಅನೇಕ ಪ್ರತಿಭೆಗಳ ಆಗಮನ ನಿರ್ಗಮನಗಳು, ಹಳೆಯ ದಾಖಲೆಗಳ ಭಂಗ, ಹೊಸ ದಾಖಲೆಗಳ ಸೃಷ್ಟಿಗಳಿಗೆ ಕಾರಣವಾಗುತ್ತದೆ. ವಿಶ್ವ ಕಪ್‌ನಲ್ಲಿ ಆಡಲಿರುವ ಭಾರತ ಕ್ರಿಕೆಟ್‌ ತಂಡ ಸಾಕಷ್ಟು ಮುಂದಾಲೋಚನೆಯಿಂದ ರಚಿತವಾಗಿದೆ. ಹಿರಿಯ ಬ್ಯಾಟರ್​ಗಳು ಹಾಗೂ ಅನುಭವಿ ಹಾಗೂ ಅತ್ಯುತ್ತಮ ಫಾರ್ಮ್​ನಲ್ಲಿರುವ ಬೌಲರ್​ಗಳಿಂದ ತುಂಬಿರುವ 15 ಸದಸ್ಯರ ಭಾರತ ತಂಡ ವಿಶ್ವ ಕಪ್ ಗೆಲ್ಲುವ ಎಲ್ಲ ಸಾಮರ್ಥ್ಯ ಹೊಂದಿದೆ. ಭಾರತ ತಂಡದ ಆಟಗಾರರ ಆಯ್ಕೆ ಅತ್ಯಂತ ಸಮತೋಲಿತವಾಗಿದೆ. ಆರಂಭಿಕ ಜೋಡಿಯಾಗಿ ಶುಬ್ಮನ್​ ಗಿಲ್​, ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್​ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಕ್ಅಪ್ ಆಟಗಾರನಾಗಿ ಸೂರ್ಯಕುಮಾರ್ ಯಾದವ್​ ಇದ್ದಾರೆ. ಇವರು ಸ್ಫೋಟಕ ಬ್ಯಾಟರ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್​ ವೇಗದ ಬೌಲಿಂಗ್ ಆಲ್ರೌಂಡರ್​ಗಳಾದರೆ, ರವೀಂದ್ರ ಜಡೇಜಾ ಮತ್ತು ಆರ್​. ಅಶ್ವಿನ್​ ಸ್ಪಿನ್ ಬೌಲಿಂಗ್ ಆಲ್​ರೌಂಡರ್​ಗಳು. ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಪರಿಸ್ಥಿತಿಯಲ್ಲಿ ಚೆನ್ನಾಗಿ ನಿಭಾಯಿಸಬಲ್ಲರು.

ಭಾರತ ಉಪಖಂಡ ಸ್ಪಿನ್ ಬೌಲಿಂಗ್​ಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಆಯ್ಕೆಯಾಗಿರುವ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯ ಈ ಸ್ಥಿತಿಗೆ ಪೂರಕವಾಗಿದೆ. ಹಿರಿಯ ಆಟಗಾರರಾದ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಭಾರತ ತಂಡದ ಪಾಲಿಗೆ ಪ್ಲಸ್ ಪಾಯಿಂಟ್​. ಇವರಿಬ್ಬರು ಅನುಭವಿಗಳು ಹಾಗೂ ವಿಶ್ವ ಕಪ್​ಗೆ ಪಾತ್ರರಾಗಲೇಬೇಕಾದ ಆಟಗಾರರು. ರಾಹುಲ್ ಉತ್ತಮ ಬ್ಯಾಟರ್ ಹಾಗೂ ವಿಕೆಟ್​ ಕೀಪಿಂಗ್ ಜವಾಬ್ದಾರಿ ನಿರ್ವಹಿಸುವುದು ಭಾರತ ತಂಡದ ಪಾಲಿಗೆ ಪೂರಕ ಅಂಶ. ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್​ ಸಿರಾಜ್ ಹಾಗೂ ಮೊಹಮ್ಮದ್​ ಶಮಿ ವೇಗದ ಬೌಲರ್​ಗಳು. ಇವರಲ್ಲಿ ಎಲ್ಲರಿಗೂ ಸಿಡಿದೇಳುವ ಹವ್ಯಾಸವಿದೆ. ಎದುರಾಳಿ ತಂಡದ ಬ್ಯಾಟರ್​ಗಳ ಬೆನ್ನೆಲುಬು ಮುರಿಯುವ ತಾಕತ್ತಿದೆ. ಅಶ್ವಿನ್ ಕ್ರಿಕೆಟ್​ ತಂತ್ರಗಾರಿಕೆಯಲ್ಲಿ ನಿಸ್ಸೀಮ. ಒಟ್ಟಾರೆ ಭಾರತದ ಪಿಚ್ ಹಾಗೂ ಇನ್ನಿತರ ಕಂಡೀಷನ್​ಗಳನ್ನು ಪರಿಗಣಿಸಿದರೆ ಭಾರತ ಪ್ರಶಸ್ತಿ ಗಳಿಸುವ ಫೇವರಿಟ್​.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

ಈಗಾಗಲೇ ಐದು ಬಾರಿ ವಿಶ್ವಕಪ್ ಗೆದ್ದು ಬೀಗಿರುವ ಆಸ್ಟ್ರೇಲಿಯಾ, ಒಮ್ಮೆ ಗೆದ್ದಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ, ಕಳೆದ ಬಾರಿಯ ವಿನ್ನರ್ ಇಂಗ್ಲೆಂಡ್‌ ಈ ಬಾರಿಯೂ ಗೆಲ್ಲಲು ತುದಿಗಾಲಲ್ಲಿ ನಿಂತಿವೆ. ಒಮ್ಮೆಯೂ ವಿಶ್ವಕಪ್ ಗೆಲ್ಲದ ಸ್ಟ್ರಾಂಗ್ ಟೀಮ್ ನ್ಯೂಜಿಲ್ಯಾಂಡ್, ಅದೃಷ್ಟವೇ ಇಲ್ಲದ ದಕ್ಷಿಣ ಆಫ್ರಿಕ, ಅಚ್ಚರಿಯ ಫಲಿತಾಂಶವನ್ನು ತಂದುಕೊಡುವ ಶಕ್ತಿ ಇರುವ ಬಾಂಗ್ಲಾ ದೇಶ, ನೆದರ್ಲ್ಯಾಂಡ್, ಅಫ್ಘಾನಿಸ್ತಾನ್ ಇವುಗಳು ಇತರ ತಂಡಗಳು. ಎರಡು ಬಾರಿಯ ವಿನ್ನರ್ ವಿಂಡೀಸ್ ಈ ಬಾರಿ ಕೂಟದಲ್ಲಿ ಸ್ಥಾನ ಪಡೆದಿಲ್ಲ ಎಂಬ ಸಣ್ಣ ಒಂದು ಕೊರಗು ಕ್ರಿಕೆಟ್ ಪ್ರೇಮಿಗಳದ್ದು. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಕ್ರಿಕೆಟ್ ಲೆಕ್ಕಾಚಾರಗಳಂತೆ ಯಾವುದೂ ನಡೆದಿಲ್ಲ. ಭಾರತವೇ ಬಲಿಷ್ಠ ಎಂದು ಬುಕ್ಕಿಗಳು ಅಂದುಕೊಂಡಿದ್ದಾರೆ. ಈ ವಿಶ್ವಕಪ್‌ನ ನಿಮಿತ್ತದಲ್ಲಿ ಕೋಟ್ಯಂತರ ಹಣದ ವಹಿವಾಟು ನಡೆಯುತ್ತದೆ. ನೇರ ಪ್ರಸಾರ, ಜಾಹಿರಾತುಗಳು, ಆಟಗಾರರ ಬ್ರಾಂಡ್‌ಗಳು, ಮಾಧ್ಯಮ ಕವರೇಜ್‌, ಬೆಟ್ಟಿಂಗ್‌ ಹೀಗೆ ಹಣ ನೀರಿನಂತೆ ಹರಿಯುತ್ತದೆ. ಎಲ್ಲವೂ ಎರಡು ತಿಂಗಳ ಕಾಲದ ಹಬ್ಬ.

ಈ ಕೂಟದಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು ಮೊದಲ ಹಂತದಲ್ಲಿ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪ್ರತೀ ತಂಡವೂ ಪ್ರತೀ ತಂಡವನ್ನು ಎದುರಿಸಬೇಕು. ನವೆಂಬರ್ 19ರತನಕ ನಡೆಯುವ ಒಟ್ಟು ಪಂದ್ಯಗಳು 48. ಒಟ್ಟು ಹತ್ತು ಕ್ರಿಕೆಟ್ ತಾಣಗಳು ಈ ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿ ಆಗಲಿವೆ. ಅದರಲ್ಲಿಯೂ ಅಹಮದಾಬಾದಿನ ಅತ್ಯಂತ ವೈಭವದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭದ ಪಂದ್ಯ, ಫೈನಲ್ ಪಂದ್ಯ ಮತ್ತು ಭಾರತ, ಪಾಕ್ ನಡುವೆ ಸ್ಫೋಟಕ ಆಗಬಹುದಾದ ಪಂದ್ಯಗಳು ಜರುಗಲಿವೆ. 1,35,000 ಪ್ರೇಕ್ಷಕರು ತುಂಬಿ ತುಳುಕುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ ಇದು. ಜಗತ್ತಿನಲ್ಲಿ ಅತೀ ಹೆಚ್ಚು ಕ್ರಿಕೆಟ್ ಅಭಿಮಾನಿಗಳು ಇರುವ ದೇಶ ಅದು ಭಾರತ. ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್, ಜಗತ್ತಿನಾದ್ಯಂತದ ಕ್ರಿಕೆಟ್‌ ಆಟಗಾರರನ್ನು ಐಪಿಎಲ್‌ ಹೆಸರಿನಲ್ಲಿ ಸಾಕುತ್ತಿರುವ ದೇಶ ಎಂದರೆ ಭಾರತ. ಇಲ್ಲಿ ಕ್ರಿಕೆಟ್‌ಗಾಗಿ ಹುಟ್ಟುವ ಹಣ ಅಷ್ಟಿಷ್ಟಲ್ಲ. ದೊಡ್ಡ ಮೊತ್ತದ ಹಣ ಇದ್ದಾಗ ವೈಭವ, ಅದ್ಧೂರಿತನ, ನಿರೀಕ್ಷೆಗಳು ಸಾಕಷ್ಟು ಇರುತ್ತವೆ. ಅದೆಲ್ಲವೂ ಇರಲಿ. ಅದರ ಜತೆಗೆ ಎಲ್ಲ ಕ್ರಿಕೆಟ್‌ ಆಟಗಾರರ ಪ್ರತಿಭೆ ಹಾಗೂ ಆಟವನ್ನು ಸವಿಯುವ ಗುಣವೂ ನಮ್ಮಲ್ಲಿರಲಿ. ಆಗ ವಿಶ್ವಕಪ್‌ ಸಾರ್ಥಕವಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Yashasvi Jaiswal : ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

Yashasvi Jaiswal: ಯಶಸ್ವಿ ಜೈಸ್ವಾಲ್ ಉತ್ತಮ ಫಾರ್ಮ್​ನಲ್ಲಿದ್ದು ಇಂಗ್ಲೆಂಡ್ ವಿರುದ್ದ ರನ್ ಮಳೆ ಸುರಿಸುತ್ತಿದ್ದೆ.

VISTARANEWS.COM


on

icc test batting rankings
Koo

ನವದೆಹಲಿ: ಭಾರತದ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ (Eng vs Ind) ಮಿಂಚುವುದನ್ನು ಮುಂದುವರಿಸಿದ್ದಾರೆ. ಇದೇ ವೇಳೆ ಅವರು ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ಭಾರತೀಯ ಬ್ಯಾಟರ್​ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಜೈಸ್ವಾಲ್ ಈಗಾಗಲೇ 2024 ರಲ್ಲಿ 23 ಸಿಕ್ಸರ್​ಗಳನ್ನು ಬಾರಿಸಿದ್ದಾರೆ . ಈ ಈ ದಾಖಲೆಯನ್ನು ಹೊಂದಿದ್ದ ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದಾರೆ. ಸೆಹ್ವಾಗ್ 2008 ರಲ್ಲಿ 22 ಸಿಕ್ಸರ್​ಗಲನ್ನು ಬಾರಿಸಿದರೆ, ರಿಷಭ್ ಪಂತ್ 2022 ರಲ್ಲಿ 21 ಸಿಕ್ಸರ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್ 23 ಸಿಕ್ಸರ್​​ಗಳನ್ನು ಬಾರಿಸುವ ಮೂಲಕ ತಮ್ಮ ಪ್ರಭಾವ ತೋರಿದ್ದಾರೆ. ಆದಾಗ್ಯೂ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಕಿವೀಸ್ ದಂತಕಥೆ ಬ್ರೆಂಡನ್ ಮೆಕಲಮ್ ಅವರನ್ನು ಹಿಂದಿಕ್ಕಲು ಜೈಸ್ವಾಲ್​ಗೆ 11 ಸಿಕ್ಸರ್​ಗಳು ಬೇಕಾಗಿವೆ.

ಇದನ್ನೂ ಓದಿ : Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

ಮೆಕಲಮ್ ಪ್ರಸ್ತುತ 2014 ರಲ್ಲಿ 33 ಸಿಕ್ಸರ್​ಗಳನ್ನು ಬಾರಿಸಿ ಅತಿ ಹೆಚ್ಚು ಬಾರಿಸಿದ ದಾಖಲೆ ಹೊಂದಿದ್ದಾರೆ. ಆದರೆ ಇಂಗ್ಲೆಂಡ್​ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ 26 ಸಿಕ್ಸರ್​ಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ. ಜೈಸ್ವಾಲ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್​​ ಆಡಮ್ ಗಿಲ್​ಕ್ರಿಸ್ಟ್​​ ಅವರನ್ನು ಹಿಂದಿಕ್ಕಿದ್ದಾರೆ ಮತ್ತು ಪ್ರಸ್ತುತ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ವಿಶ್ವದ ಮೂರನೇ ಬ್ಯಾಟರ್​ ಆಗಿದ್ದಾರೆ.

ಭಾರತದ ಪರ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಕ್ರಿಕೆಟ್ ಸಿಕ್ಸರ್ ಬಾರಿಸಿದವರು

  • 23- ಯಶಸ್ವಿ ಜೈಸ್ವಾಲ್ – 2024
  • 22- ವೀರೇಂದ್ರ ಸೆಹ್ವಾಗ್ (2008)
  • 21- ರಿಷಭ್ ಪಂತ್ (2022)

ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಜೈಸ್ವಾಲ್ ಈಗಾಗಲೇ ಎರಡು ದ್ವಿಶತಕಗಳನ್ನು ಬಾರಿಸಿದ್ದಾರೆ. 6 ಇನಿಂಗ್ಸ್​ಗಳಿಂದ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಜೈಸ್ವಾಲ್ ನಾಲ್ಕನೇ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಅದೇ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

Shah rukh Khan : ಮಹಿಳೆಯರ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯ ಡೆಲ್ಲಿ ಕ್ಯಾಪಿಲಟ್ಸ್​ ಹಾಗೂ ಮುಂಬಯಿ ಇಂಡಿಯನ್ಸ್ ನಡುವೆ ನಡೆಯಿತು.

VISTARANEWS.COM


on

Shah Rukh Kahan
Koo

ಬೆಂಗಳೂರು : ಮಹಿಳೆಯರ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಶುಕ್ರವಾರ (ಫೆಬ್ರುವರಿ 23) ನಡೆಯಿತು. ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಬಾಲಿವುಡ್​ ಸೂಪರ್​​ಸ್ಟಾರ್​ ಶಾರುಖ್​ ಖಾನ್​ (Shah rukh Khan). ಅದಕ್ಕಿಂತಲೂ ಹೆಚ್ಚಾಗಿ ಉದ್ಘಾಟನಾ ಕಾರ್ಯಕ್ರಮದ ವೇಳೆ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಶಾರುಖ್​ ಖಾನ್​ ವೇದಿಕಗೆ ಆಗಮಿಸುತ್ತಲೇ ನಮಸ್ಕಾರ, ಸ್ವಾಗತ ಬೆಂಗಳೂರು ಎಂದು ಹೇಳಿದರು. ಈ ಮೂಲಕ ಅವರು ಕ್ರಿಕೆಟ್​ ಅಭಿಮಾನಿಗಳು ಹಾಗೂ ಸ್ಥಳದಲ್ಲಿದ್ದ ಕನ್ನಡಿಗರ ಮೆಚ್ಚುಗೆ ಗಳಿಸಿದರು. ಶಾರುಖ್​ ಖಾನ್​ ವೇದಿಕೆಗೆ ಆಗಮಿಸುತ್ತಿದ್ದಂತೆ ಕನ್ನಡದಲ್ಲಿಯೇ ಮಾತನಾಡಿ ಅಚ್ಚರಿ ಮೂಡಿಸಿದರು.

ಶಾರುಖ್​ ಖಾನ್ ತಮ್ಮ ವಿಭಿನ್ನ ಶೈಲಿ ಹಾಗೂ ಡಾನ್ಸ್​ ಮೂಲಕ ನೆರೆದ ಜನರನ್ನು ರಂಜಿಸಿದರೆ, ನಂತರ 5 ತಂಡಗಳ ನಾಯಕಿಯರನ್ನು ಸ್ವಾಗತಿಸಿ, ಮಹಿಳಾ ಪ್ರೀಮಿಯರ್​ ಲೀಗ್​ 2024ರ 2ನೇ ಸೀಸನ್​ಗೆ ಅದ್ಧೂರಿಯಾಗಿ ಚಾಲನೆ ಕೊಟ್ಟರು.

ಇದನ್ನೂ ಓದಿ : WPL 2024 : ಲಾಸ್ಟ್​ ಬಾಲ್​​ ಸಿಕ್ಸರ್​; ಚಾಂಪಿಯನ್ ಮುಂಬೈ ತಂಡಕ್ಕೆ ರೋಚಕ ಜಯ

ಪಂದ್ಯಕ್ಕೂ ಮುನ್ನ ಹಲವಾರು ಬಾಲಿವುಡ್​ ಸ್ಟಾರ್​ ಗಳು ಭರ್ಜರಿಯಾಗಿ ಕಾರ್ಯಕ್ರಮ ನೀಡಿದರು. ಈ ಪಂದ್ಯಾವಳಿಯ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ನಟರಾದ ಶಾಹಿದ್ ಕಪೂರ್, ಟೈಗರ್ ಶ್ರಾಫ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಉಪಸ್ಥಿತರಿದ್ದರು. ಅಲ್ಲದೇ ವಿಶೆಷ ಅತಿಥಿಯಾಗಿ ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​ ಸಹ ಉಪಸ್ಥಿತರಿದ್ದರು. ಮಹಿಳಾ ಪ್ರೀಮಿಯರ್ ಲೀಗ್ (WPL 2024) ಫೆಬ್ರವರಿ 23ರಿಂದ ಅಂದರೆ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬಯಿ ರೋಚಕ ಗೆಲುವು ಸಾಧಿಸಿದೆ.

Continue Reading

ಪ್ರಮುಖ ಸುದ್ದಿ

Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

Sachin Tendulkar: ಸಚಿನ್​ ತೆಂಡೂಲ್ಕರ್​ ಅವರು 2010 ನೇ ವರ್ಷದಲ್ಲಿ ದ್ವಿಶತಕ ಬಾರಿಸಿದ್ದರು. ಅಲ್ಲಿಂದ

VISTARANEWS.COM


on

Sachin Tendulkar
Koo

ಬೆಂಗಳೂರು: ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ (Sachin Tenulkar) ಕ್ರಿಕೆಟ್​​ ಇತಿಹಾಸದಲ್ಲಿ ಸೃಷ್ಟಿಸದ ದಾಖಲೆಗಳೇ ಇಲ್ಲ. ಆಧುನಿಕ ಕ್ರಿಕೆಟ್​ನ ಅಬ್ಬರದಲ್ಲಿ ಕೆಲವೊಂದು ದಾಖಲೆಗಳ ಬೇರೆ ಆಟಗಾರರ ಹೆಸರಿಗೆ ಹೋಗಿದ್ದರು ಇಂಥ ಅಮೋಘ ಸಾಧನೆ ಮಾಡಿದ ಪ್ರಮುಖ ಕ್ರಿಕೆಟರ್​ ಎಂಬ ಹೆಗ್ಗಳಿಕೆ ಸಚಿನ್ ಅವರಿಗೆ ಸಲ್ಲುತ್ತದೆ. ಈ ರೀತಿಯಾಗಿ ಅವರು ಏಕದಿನ ಕ್ರಿಕೆಟ್​ ಮಾದರಿಯಲ್ಲಿ ದ್ವಿಶತಕ ಬಾರಿಸಿದ (Double Century) ಮೊದಲ ಪುರುಷ ಕ್ರಿಕೆಟಿಗ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಸಚಿನ್​ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗರಲ್ಲ. ಆದರೆ ಮೊದಲ ಪುರುಷರ ಕ್ರಿಕೆಟಿಗ. ಆದಾಗ್ಯೂ ಅವರು ಸಾಧನೆ ಅಸಾಮಾನ್ಯ. ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್​ ಬೆಲಿಂಡಾ ಕ್ಲಾರ್ಕ್ ಬಳಿಕ ಸಚಿನ್​ ಈ ಸಾಧನೆ ಮಾಡಿದವರು. ಮುಂಬೈನ ಬಾಂದ್ರಾದ ಮಿಡಲ್ ಇನ್ಕಮ್ ಗ್ರೂಪ್ ಮೈದಾನದಲ್ಲಿ ನಡೆದ 1997 ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ಕ್ಲಾರ್ಕ್ ಈ ಮೈಲಿಗಲ್ಲು ಸಾಧಿಸಿದ್ದರು. ಆದಾಗ್ಯೂ ಸಚಿನ್​ ದ್ವಿಶತಕ ಬಾರಿಸಿದ ಬಳಿಕ ಈ ಸಾಧನೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ.

ಬೆಲಿಂಡಾ ಸಾಧನೆ ಮಾಡಿದ 13 ವರ್ಷಗಳ ನಂತರ, ಗ್ವಾಲಿಯರ್​ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಜಾಕ್ ಕಾಲಿಸ್ ನೇತೃತ್ವದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ಪುರುಷರ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದರು. ಭಾರತ ತಂಡ 400ರ ಗಡಿ ದಾಟುತ್ತಿದ್ದಂತೆಯೇ ಸಚಿನ್ ತೆಂಡೂಲ್ಕರ್ ಅವರು ಚಾರ್ಲ್ ಲ್ಯಾಂಗೆಡ್ವೆಲ್ಟ್ ಅವರ ಯಾರ್ಕರ್ ಎಸೆತದಲ್ಲಿ ಒಂದು ರನ್​​ ಗಳಿಸಿ ಸಂತೋಷದಿಂದ ಕೈ ಎತ್ತಿದರು. ಈ ವೇಳೆ ದಾಖಲೆ ಸೃಷ್ಟಿಯಾಯಿತು.

ಇದನ್ನೂ ಓದಿ : Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

“ವೀಕ್ಷಕವಿವರಣೆ ಬಾಕ್ಸ್​ನಲ್ಲಿದ್ದ ರವಿ ಶಾಸ್ತ್ರಿ ಈ ಕ್ಷಣದಲ್ಲಿ ಜೋರಾಗಿ ಅಬ್ಬರಿಸಿದ್ದರು “ಈ ಭೂಮಂಡಲದಲ್ಲಿ 200 ರನ್ ತಲುಪಿದ ಮೊದಲ ವ್ಯಕ್ತಿ ಸಚಿನ್​. ಅವರೇ ಭಾರತದ ಸೂಪರ್ ಮ್ಯಾನ್, ಸಚಿನ್ ತೆಂಡೂಲ್ಕರ್. ಎಲ್ಲರೂ ಎದ್ದು ಗೌರವಿಸಿ ಎಂದು ಬರೆದುಕೊಂಡಿದ್ದರು. ಐತಿಹಾಸಿಕ ಕ್ಷಣ ಕಳೆದು 14 ವರ್ಷಗಳಾಗಿವೆ. ಇಂದಿಗೂ ಅದು ಅಭಿಮಾನಿಗಳ ಮನದಲ್ಲಿ ಹಾಗೆಯೇ ಉಳಿದಿದೆ.

ಸಚಿನ್ ತೆಂಡೂಲ್ಕರ್ ಇತಿಹಾಸ ನಿರ್ಮಿಸಿದ್ದು ಹೇಗೆ?

ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಭಾರತ ತಂಡವು ವೀರೇಂದ್ರ ಸೆಹ್ವಾಗ್ ಅವರ ವಿಕೆಟ್ ಪತನದ ಬಳಿಕ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ, ಸಚಿನ್ ತೆಂಡೂಲ್ಕರ್ ಮತ್ತು ದಿನೇಶ್ ಕಾರ್ತಿಕ್ ಎರಡನೇ ವಿಕೆಟ್ ಗೆ 194 ರನ್ ಗಳ ಜೊತೆಯಾಟವಾಡುವ ಮೂಲಕ ವಿಶ್ವಾಸ ಮೂಡಿಸಿದರು.

ಸಚಿನ್ ತೆಂಡೂಲ್ಕರ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ನಂತರ 90 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಲ್ಲಿಂದ ಅವರು ಅಬ್ಬರಿಸಿದರು.

ಅವರು 147 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್​ಗೆ 3 ವಿಕೆಟ್ ಕಳೆದುಕೊಂಡು 401 ರನ್ ಕಲೆಹಾಕಿತು. ಮೆನ್ ಇನ್ ಬ್ಲೂ ಪಂದ್ಯವನ್ನು 153 ರನ್ ಗಳಿಂದ ಗೆದ್ದ ನಂತರ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಫಖರ್ ಜಮಾನ್, ಪಥುಮ್ ನಿಸ್ಸಾಂಕಾ, ಇಶಾನ್ ಕಿಶನ್, ಶುಭ್ಮನ್ ಗಿಲ್ ಮತ್ತು ಅಮೆಲಿಯಾ ಕೆರ್ ಏಕದಿನ ದ್ವಿಶತಕ ಬಾರಿಸಿದ ಇತರ ಆಟಗಾರರು.

Continue Reading

ಕ್ರೀಡೆ

Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

ಸಚಿನ್ ತೆಂಡೂಲ್ಕರ್ (Sachin Tendulkar) ಅವರು ತಮ್ಮ ಅಭಿಮಾನಿ ಅಮೀರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆದರು.

VISTARANEWS.COM


on

Sachin Tendulkar
Koo

ನವ ದೆಹಲಿ: ಕಳೆದ ತಿಂಗಳು, ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಜಮ್ಮು ಮತ್ತು ಕಾಶ್ಮೀರದ ವಿಕಲಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 200 ಟೆಸ್ಟ್, 463 ಏಕದಿನ ಮತ್ತು 1 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಚಿನ್, ಕ್ರಿಕೆಟಿಗನನ್ನು ಭೇಟಿಯಾಗಿ ಅವರ ಹೆಸರಿನ ಜರ್ಸಿಯನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು. ಅಂತೆಯೇ ಅವರು ಇದೀಗ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ.

ತಮ್ಮ ಮಾತುಗಳಿಗೆ ಬದ್ಧರಾಗಿರುವ ತೆಂಡೂಲ್ಕರ್, ಕಾಶ್ಮೀರ ಪ್ರವಾಸದಲ್ಲಿ ಅಮೀರ್ ಅವರನ್ನು ಭೇಟಿಯಾದರು. ಕ್ರಿಕೆಟ್ ಐಕಾನ್ ಅಮೀರ್ ಅವರೊಂದಿಗಿನ ಸಂವಾದದ ವೀಡಿಯೊವನ್ನು ಇನ್ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ, “ಅಮೀರ್, ನಿಜವಾದ ಹೀರೋ. ಸ್ಫೂರ್ತಿದಾಯಕವಾಗಿರಿ! ನಿಮ್ಮನ್ನು ಭೇಟಿಯಾಗಿದ್ದರಿಂದ ಸಂತೋಷವಾಯಿತು.” ಎಂದು ಬರೆದುಕೊಂಡಿದ್ದಾರೆ.

ವಿಡಿಯೊಕ್ಲಿಪ್​ನಲ್ಲಿ ಸಚಿನ್ ತೆಂಡೂಲ್ಕರ್, ಅಮೀರ್ ಹುಸೇನ್ ಲೋನ್ ಜತೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಕಾಶ್ಮೀರದ ವಾಘಮಾ ಗ್ರಾಮದವರಾದ ಅಮೀರ್ ಹುಸೇನ್ ಲೋನ್ ತನ್ನ ತಂದೆಯ ಗಿರಣಿಯಲ್ಲಿ ಕೆಲಸ ಮಾಡುವಾಗ ಎಂಟನೇ ವಯಸ್ಸಿನಲ್ಲಿ ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಅದು ಕ್ರಿಕೆಟ್ ಮೇಲಿನ ಅವರ ಪ್ರೀತಿಯನ್ನು ಕುಗ್ಗಿಸಲಿಲ್ಲ . ಅಂತಿಮವಾಗಿ, ಶಿಕ್ಷಕರೊಬ್ಬರು ಅವರ ಪ್ರತಿಭೆಯನ್ನು ಕಂಡುಹಿಡಿದರು. ಅವರನ್ನು ವೃತ್ತಿಪರ ಕ್ರೀಡೆಗೆ ಪರಿಚಯಿಸಿದ್ದರು,

ಕಳೆದ ತಿಂಗಳು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುವ ವೇಳೆ ಅಮೀರ್ ತಮ್ಮ ಜೀವನದ ಕಷ್ಟದ ಕಥನವನ್ನು ತೆರೆದಿಟ್ಟದ್ದರು.

“ಅಪಘಾತದ ನಂತರ, ನಾನು ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದೆ. ನಾನು ಎಲ್ಲವನ್ನೂ ನಾನೇ ಮಾಡಬಲ್ಲೆ ಮತ್ತು ನಾನು ಯಾರ ಮೇಲೂ ಅವಲಂಬಿತವಾಗಿಲ್ಲ. ನನ್ನ ಅಪಘಾತದ ನಂತರ ಯಾರೂ ನನಗೆ ಸಹಾಯ ಮಾಡಲಿಲ್ಲ. ಸರ್ಕಾರ ಕೂಡ ನನ್ನನ್ನು ಬೆಂಬಲಿಸಲಿಲ್ಲ ಆದರೆ ನನ್ನ ಕುಟುಂಬವು ಯಾವಾಗಲೂ ನನ್ನೊಂದಿಗೆ ಇತ್ತು” ಎಂದು ಅಮೀರ್ ಹೇಳಿಕೊಂಡಿದ್ದರು.

ಇದನ್ನೂ ಓದಿ : Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

“ನಾನು 2013 ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. 2018 ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದೇನೆ. ನಂತರ ನೇಪಾಳ, ಶಾರ್ಜಾ ಮತ್ತು ದುಬೈನಲ್ಲಿ ಕ್ರಿಕೆಟ್ ಆಡಿದೆ. ನಾನು ನನ್ನ ಕಾಲುಗಳೊಂದಿಗೆ (ಬೌಲಿಂಗ್) ಮಾಡುವುದನ್ನು ಮತ್ತು ನನ್ನ ಭುಜ ಮತ್ತು ಕುತ್ತಿಗೆಯಿಂದ ಬ್ಯಾಟಿಂಗ್ ಮಾಡುವುದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಕ್ರಿಕೆಟ್ ಆಡಲು ನನಗೆ ಶಕ್ತಿ ನೀಡಿದ ದೇವರಿಗೆ ಧನ್ಯವಾದಗಳು, “ಎಂದು ಅವರು ಹೇಳಿಕೊಂಡಿದ್ದರು.

Continue Reading
Advertisement
CM Siddaramaiah slams HD Deve Gowda
ರಾಜಕೀಯ6 mins ago

CM Siddaramaiah: ಜೆಡಿಎಸ್‌ ಕೋಟೆಯಲ್ಲಿ ದೇವೇಗೌಡರ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ

Google Pay
ದೇಶ13 mins ago

Google Pay: ಇಲ್ಲಿದೆ ಬ್ಯಾಡ್‌ನ್ಯೂಸ್; ಈ ದಿನದಿಂದ ಗೂಗಲ್‌ ಪೇ ಆ್ಯಪ್ ಸ್ಥಗಿತ!

icc test batting rankings
ಕ್ರೀಡೆ18 mins ago

Yashasvi Jaiswal : ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

Star travel Fashion mokshith pai
ಫ್ಯಾಷನ್21 mins ago

Star travel Fashion: ಪಾರು ಖ್ಯಾತಿಯ ಮೋಕ್ಷಿತಾ ಪೈ ದುಬೈ ಟ್ರಾವೆಲ್‌ ಫ್ಯಾಷನ್‌ ವಿಶೇಷ ಇದು!

Girish Kasaravalli first film Ghatashraddha is another feather
ಸ್ಯಾಂಡಲ್ ವುಡ್22 mins ago

Ghatashraddha Movie: ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ‘ಘಟಶ್ರಾದ್ಧ ಚಿತ್ರಕ್ಕೆ ಇನ್ನೊಂದು ಪ್ರಶಸ್ತಿ!

Boy dies after being hit by a roll while playing jokali in Davangere
ಕರ್ನಾಟಕ29 mins ago

Davanagere News : ಕುತ್ತಿಗೆಗೆ ಬಿಗಿದ ಜೋಕಾಲಿ ಹಗ್ಗ; 4ನೇ ಕ್ಲಾಸ್‌ ಹುಡುಗ ದುರ್ಮರಣ

Drunk husband assaults wife
ಬೆಂಗಳೂರು1 hour ago

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

indian penal code
ದೇಶ1 hour ago

New Laws: ಐಪಿಸಿ ಮೂಲೆಗೆ; ಜುಲೈ 1ರಿಂದಲೇ ಹೊಸ ಕಾನೂನು ಜಾರಿ, ಏನೆಲ್ಲ ಬದಲು?

bankok
ವೈರಲ್ ನ್ಯೂಸ್1 hour ago

Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

Amazon Sweets
ವಾಣಿಜ್ಯ1 hour ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ4 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ11 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ24 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌